Category Archives: Blog

Your blog category

ದಳಪತಿ ವಿಜಯ್ ರಾಜಕೀಯ ಯಶಸ್ಸಿನಿಂದ ಪವನ್ ಕಲ್ಯಾಣ್​ಗೆ ಅಸೂಯೆ; ಸತ್ಯ ಒಪ್ಪಿಕೊಂಡ ಡಿಸಿಎಂ – Kannada News | Pawan Kalyan Feels ‘Jealous’ Of Vijay’s Political Success, Addresses Comparison With TVK Chief

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಇತ್ತೀಚೆಗೆ ತಮಿಳು ನಟ, ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ, ತಮಿಳುನಾಡು ಸಿಎಂ ವಿಜಯ್ ಅವರ ರಾಜಕೀಯ ಯಶಸ್ಸಿನ ಬಗ್ಗೆ ಆಸಕ್ತಿದಾಯಕ ಮಾತುಗಳನ್ನಾಡಿದ್ದಾರೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ವಿಜಯ್ ಅವರ ಗೆಲುವನ್ನು ನೋಡಿ ತಮಗೆ ಕೊಂಚ “ಅಸೂಯೆ” ಆಯಿತು ಎಂದು ತಮಾಷೆಯಾಗಿ ಹೇಳಿದ್ದಾರೆ.

‘ನಾನು ಇತ್ತೀಚೆಗೆ ತಮಿಳುನಾಡು ರಾಜಕೀಯವನ್ನು ಗಮನಿಸುತ್ತಿದ್ದೇನೆ. ಅವರು ಎಷ್ಟು ಆರಾಮವಾಗಿ ಚುನಾವಣೆ ಎದುರಿಸಿದರು ಎಂದರೆ ನನಗೆ ಸ್ವಲ್ಪ ಅಸೂಯೆ ಆಯಿತು. ಕಟೌಟ್‌ಗಳು ಮತ್ತು ಹೊಲೊಗ್ರಾಮ್‌ಗಳನ್ನು ಬಳಸಿಕೊಂಡು ಆರಾಮವಾಗಿ ಗೆದ್ದು ಮುಖ್ಯಮಂತ್ರಿಯಾದರು. ಆದರೆ ನಾನು ಕಳೆದ 15 ವರ್ಷಗಳಿಂದ ಬೀದಿಗಿಳಿದು ಹೋರಾಟ ಮಾಡುತ್ತಿದ್ದೇನೆ.. ಆದರೆ’ ಎಂದು ಪವನ್ ಕಲ್ಯಾಣ್ ನಕ್ಕರು. 15 ವರ್ಷ ಹೋರಾಟ ಮಾಡಿದರೂ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ಈ ಮಾತಿನ ಅರ್ಥ. ಪಕ್ಷವನ್ನು ಮುನ್ನಡೆಸಲು ಮತ್ತು ಜನರ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಆಳವಾದ ಜ್ಞಾನ ಹಾಗೂ ತಳಮಟ್ಟದ ಶ್ರಮ ಬೇಕು ಎಂಬುದನ್ನು ಅವರು ಇದೇ ವೇಳೆ ನೆನಪಿಸಿಕೊಂಡಿದ್ದಾರೆ.

ವಿಜಯ್ ಅವರ ಯಶಸ್ಸನ್ನು ತಮಗೆ ಹೋಲಿಸುತ್ತಿರುವ ಜನರಿಗೆ ಪವನ್ ಕಲ್ಯಾಣ್ ತಿರುಗೇಟು ನೀಡಿದ್ದಾರೆ. ‘ಪಕ್ಕದ ರಾಜ್ಯದಲ್ಲಿ ನಟರೊಬ್ಬರು ಪಕ್ಷ ಕಟ್ಟಿ ಸಿಎಂ ಆದರು, ನೀವೂ ಆಂಧ್ರದಲ್ಲಿ ಹಾಗೆಯೇ ಮಾಡಬೇಕಿತ್ತು ಎಂದು ಹಲವರು ನನಗೆ ಸಂದೇಶ ಕಳುಹಿಸುತ್ತಿದ್ದಾರೆ. ಆದರೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ರಾಜಕೀಯ ಪರಿಸ್ಥಿತಿಗಳು ತೀರಾ ಭಿನ್ನವಾಗಿವೆ. ಈ ಹೋಲಿಕೆ ಸರಿಯಲ್ಲ’ ಎಂದಿದ್ದಾರೆ.

2019ರ ಚುನಾವಣೆಯಲ್ಲಿ ತಮಗೆ ಎದುರಾದ ಕಠಿಣ ಸವಾಲುಗಳು ಮತ್ತು ಸ್ವಂತ ಸಚಿವರೇ ಸಾಥ್ ನೀಡದ ದಿನಗಳನ್ನು ನೆನಪಿಸಿಕೊಂಡ ಪವನ್, ‘ನಮ್ಮ ಹೋರಾಟದ ಹಾದಿಯೇ ಬೇರೆ, ದಯವಿಟ್ಟು ಯಾರೊಂದಿಗೂ ಹೋಲಿಸಬೇಡಿ’ ಎಂದು ತಮ್ಮ ಅಭಿಮಾನಿಗಳಿಗೆ ಹಾಗೂ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: ರಾಮ್ ಚರಣ್-ಪವನ್ ಕಲ್ಯಾಣ್ ಬಾಂಡಿಂಗ್ ನೋಡಿ ಹೊಗಳಿದ ಶಿವಣ್ಣ 

ರಾಜಕೀಯದಲ್ಲಿ ದಶಕಕ್ಕೂ ಹೆಚ್ಚು ಕಾಲ ಸೈಕಲ್ ಹೊಡೆದು, ಹಂತಹಂತವಾಗಿ ಬೆಳೆದು ಇಂದು ಡಿಸಿಎಂ ಆಗಿರುವ ಪವನ್ ಕಲ್ಯಾಣ್ ಅವರ ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:01 am, Wed, 27 May 26

Source link

Horoscope Today: ಇಂದು ಈ ರಾಶಿಯವರಿಗೆ ಅನಾರೋಗ್ಯ ಚಿಂತೆ ಕಾಡಬಹುದು

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 27, ಬುಧವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಈ ದಿನವು ಪರಾಭವನಾ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠ ಮಾಸ, ಗ್ರೀಷ್ಮ ಋರು, ಶುಕ್ಲ ಪಕ್ಷದ ಏಕಾದಶಿ, ಹಸ್ತ ನಕ್ಷತ್ರ, ವ್ಯತಿಪಾತ ಯೋಗ ಮತ್ತು ಭದ್ರಕರಣದಿಂದ ಕೂಡಿದೆ. ಬುಧವಾರದ ಏಕಾದಶಿಯು ವಿಷ್ಣುವಿನ ಕೃಪೆಗೆ ಪಾತ್ರವಾಗಲು ಉತ್ತಮ ದಿನವಾಗಿದೆ.

 

Source link

ಪಟ್ಟದಾಟಕ್ಕೆ ಕೊನೆಗೂ ತೆರೆ: ನಾಳೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ, ಈವರೆಗೆ ಏನೇನಾಯ್ತು? ಇಲ್ಲಿದೆ ವಿವರ – Kannada News | Karnataka CM Power Shift: Siddaramaiah Likely to Resign Tomorrow After Marathon 7 Hour Delhi Meeting with Rahul Gandhi

ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯImage Credit source: tv9

ಬೆಂಗಳೂರು, ಮೇ 27: ಕರ್ನಾಟಕ ಕಾಂಗ್ರೆಸ್‌ನಲ್ಲಿ (Congress) ಕಳೆದ ಕೆಲವು ದಿನಗಳಿಂದ ತಾರಕಕ್ಕೇರಿದ್ದ ಮುಖ್ಯಮಂತ್ರಿ ಕುರ್ಚಿ ಬದಲಾವಣೆಯ ಕದನಕ್ಕೆ ಕೊನೆಗೂ ದೆಹಲಿ ದರ್ಬಾರ್‌ನಲ್ಲಿ ತೆರೆ ಬಿದ್ದಿದೆ. ರಾಷ್ಟ್ರ ರಾಜಧಾನಿಯಲ್ಲಿ ಎಐಸಿಸಿ ಕಚೇರಿಯಲ್ಲಿ ನಡೆದ ಸತತ 7 ಗಂಟೆಗಳ ಮ್ಯಾರಥಾನ್ ಸಭೆ ಹಾಗೂ ರಾಹುಲ್ ಗಾಂಧಿ (Rahul Gandhi) ಅವರೊಂದಿಗಿನ ಮಹತ್ವದ ‘ಒನ್-ಟು-ಒನ್’ ರಹಸ್ಯ ಚರ್ಚೆಯ ಬಳಿಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ತ್ಯಾಗ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಈ ಮೊದಲು ಮಾಡಿಕೊಳ್ಳಲಾಗಿದ್ದ ಆಂತರಿಕ ‘ಅಧಿಕಾರ ಹಂಚಿಕೆ ಸೂತ್ರ’ದ (Power Sharing Formula) ಪ್ರಕಾರವೇ ಸಿಎಂ ಸಿದ್ದರಾಮಯ್ಯ ಅವರು ನಾಳೆ (ಗುರುವಾರ) ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ. ಇದರೊಂದಿಗೆ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಹೊಸ ನಾಯಕತ್ವದ ಅಧ್ಯಾಯ ಆರಂಭವಾಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

ಮುಖ್ಯಾಂಶಗಳು

  • ದೆಹಲಿಯಲ್ಲಿ ನಡೆದ 7 ಗಂಟೆಗಳ ಮ್ಯಾರಥಾನ್ ಸಭೆ ಹಾಗೂ ರಾಹುಲ್ ಗಾಂಧಿ ಸಂಧಾನದ ಬಳಿಕ ಪಟ್ಟ ಬಿಡಲು ಸಮ್ಮತಿಸಿದ ಸಿದ್ದರಾಮಯ್ಯ.
  • ಯಾವುದೇ ಕಾರಣಕ್ಕೂ ರಾಜೀನಾಮೆ ನೀಡದಂತೆ ಆಪ್ತ ಸಚಿವರಿಂದ ತೀವ್ರ ಒತ್ತಡವಿದ್ದರೂ ಹೈಕಮಾಂಡ್ ಆದೇಶಕ್ಕೆ ತಲೆಬಾಗಿದ ಸಿಎಂ.
  • ನಾಳೆ ಸಚಿವರ ವಿದಾಯದ ಉಪಾಹಾರ ಕೂಟದ ಬಳಿಕ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ನಿರ್ಧಾರ ಪ್ರಕಟಿಸುವ ಸಾಧ್ಯತೆ.

ಹೈಕಮಾಂಡ್ ಸಭೆಯಲ್ಲಿ ಏನೇನು ಚರ್ಚೆ ಆಯ್ತು? ಸಿದ್ದರಾಮಯ್ಯಗೆ ಕೊಟ್ಟ ಆಫರ್​ಗಳು ಏನೇನು?

ಮಂಗಳವಾರ ದೆಹಲಿಯಲ್ಲಿ ನಡೆದ ಹೈಕಮಾಂಡ್ ಸಭೆಯು ತೀವ್ರ ಕುತೂಹಲ ಮೂಡಿಸಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸುದೀರ್ಘ ಸಭೆ ನಡೆಸಿದರು. ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರೊಂದಿಗೆ ನಡೆಸಿದ ಪ್ರತ್ಯೇಕ ಸಭೆಯಲ್ಲಿ ಪಕ್ಷದ ಹಿತದೃಷ್ಟಿಯಿಂದ ಹಾಗೂ ಮುಂಬರುವ ಚುನಾವಣೆಗಳನ್ನು ಎದುರಿಸಲು ನಾಯಕತ್ವ ಬದಲಾವಣೆ ಅನಿವಾರ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರಿಗೆ ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ರಾಜ್ಯಸಭಾ ಸ್ಥಾನದ ಆಫರ್ ಹಾಗೂ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಹೊಸದಾಗಿ ರಚನೆಯಾಗಲಿರುವ ಸಂಪುಟದಲ್ಲಿ ಉಪಮುಖ್ಯಮಂತ್ರಿ ಪಟ್ಟ ನೀಡುವ ಆಫರ್ ಅನ್ನು ಹೈಕಮಾಂಡ್ ಮುಂದಿಟ್ಟಿದೆ ಎನ್ನಲಾಗಿದೆ.

ಆಪ್ತರ ಒತ್ತಡ ಹಾಗೂ ಸಿಎಂ ನಿಲುವು

ದೆಹಲಿ ಸಭೆ ಮುಗಿದ ತಕ್ಷಣವೇ ಸಿಎಂ ಸಿದ್ದರಾಮಯ್ಯ ದೆಹಲಿಯ ಖಾಸಗಿ ಸ್ಥಳದಲ್ಲಿ ಆಪ್ತ ಸಚಿವರಾದ ಡಾ. ಜಿ. ಪರಮೇಶ್ವರ್, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್ ಹಾಗೂ ಭೈರತಿ ಸುರೇಶ್ ಅವರೊಂದಿಗೆ ತುರ್ತು ಸಭೆ ನಡೆಸಿ ಹೈಕಮಾಂಡ್ ನಿರ್ಧಾರವನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಆಪ್ತ ಸಚಿವರು, ‘ಯಾವುದೇ ಕಾರಣಕ್ಕೂ ನೀವು ರಾಜೀನಾಮೆ ಕೊಡಬೇಡಿ, ನಿಮ್ಮ ಪರವಾಗಿ ನಾವೇ ಹೈಕಮಾಂಡ್ ಜೊತೆ ಮತ್ತೊಮ್ಮೆ ಮಾತನಾಡುತ್ತೇವೆ’ ಎಂದು ಭಾವುಕರಾಗಿ ಒತ್ತಡ ಹೇರಿದ್ದಾರೆ. ಆದರೆ ಸಚಿವರ ಮನವಿಗೆ ಉತ್ತರಿಸಿದ ಸಿದ್ದರಾಮಯ್ಯ, ‘ರಾಹುಲ್ ಗಾಂಧಿ ಅವರ ಮಾತನ್ನು ನಿರಾಕರಿಸಲು ನನ್ನಿಂದ ಸಾಧ್ಯವಿಲ್ಲ. ಕೊಟ್ಟ ಮಾತಿನಂತೆ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಾಗಿದ್ದೇನೆ’ ಎಂದು ಹೇಳುವ ಮೂಲಕ ಆಪ್ತರ ಒತ್ತಡಕ್ಕೆ ಬ್ರೇಕ್ ಹಾಕಿದ್ದಾರೆ.

ಬೆಂಗಳೂರಿನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ

ಮಂಗಳವಾರ ತಡರಾತ್ರಿಯೇ ಸಿಎಂ ಸಿದ್ದರಾಮಯ್ಯ ಸಚಿವರಾದ ಜಮೀರ್ ಅಹ್ಮದ್ ಖಾನ್, ಹೆಚ್.ಸಿ. ಮಹದೇವಪ್ಪ, ಕೃಷ್ಣಬೈರೇಗೌಡ ಹಾಗೂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರೊಂದಿಗೆ ಬೆಂಗಳೂರಿನ ಹೆಚ್‌ಎಎಲ್ (HAL) ವಿಮಾನ ನಿಲ್ದಾಣಕ್ಕೆ ಬಂದು ತಲುಪಿದ್ದಾರೆ. ಇಂದು ಮುಖ್ಯಮಂತ್ರಿಗಳು ಮಹಾತ್ಮಾ ಗಾಂಧಿ ಹಾಗೂ ಜವಾಹರಲಾಲ್ ನೆಹರೂ ಅವರ ಪುಣ್ಯಸ್ಮರಣೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, ತದನಂತರ ಮಹತ್ವದ ಸುದ್ದಿಗೋಷ್ಠಿ ನಡೆಸಿ ತಮ್ಮ ರಾಜೀನಾಮೆಯ ಅಧಿಕೃತ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ನಾಯಕತ್ವ ಬದಲಾವಣೆ: ಸಿದ್ದರಾಮಯ್ಯಗೆ ಆಫರ್ ಮೇಲೆ ಆಫರ್ ಕೊಟ್ರಾ ರಾಹುಲ್ ಗಾಂಧಿ?

ಜೂನ್ 2026 ರ ಹೊತ್ತಿಗೆ ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಸುಗಮವಾಗಿ ಮುಗಿಸಲು ಎಐಸಿಸಿ ನಾಯಕರಾದ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರೂ ಸಹ ಇಂದು (ಮೇ 27) ಬೆಂಗಳೂರಿಗೆ ಆಗಮಿಸುತ್ತಿದ್ದು, ಶಾಸಕಾಂಗ ಪಕ್ಷದ (CLP) ಸಭೆ ನಡೆಸಿ ಮುಂದಿನ ಸಿಎಂ ಆಯ್ಕೆಯ ಪ್ರಕ್ರಿಯೆಯನ್ನು ಅಂತಿಮಗೊಳಿಸಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:46 am, Wed, 27 May 26

Source link

ದಿನ ಭವಿಷ್ಯ: ಇಂದು ಈ ರಾಶಿಯವರ ಆಸ್ತಿಗೆ ಅನ್ಯರು ಕೈ ಹಾಕುವ ಸಾಧ್ಯತೆ ಇದೆ – Kannada News | Horoscope May 27 Wednesday 2026; Dina Rashi Bhavishya Today, Checkout the details here

ಮೇಷ ರಾಶಿ :

ನಿಮಗೂ ಕೆಲವರಿಗೂ ಬೆಳಕಾದೀತು. ಹಣದ ಹೊಸ ಮಾರ್ಗಗಳು ಕಣ್ಮುಂದೆ ಬರುತ್ತವೆ, ಆದರೆ ನಿರ್ಧಾರಗಳ ಕಡೆ ಯತ್ನಪೂರ್ವಕವಾಗಿ ಸಾಗಬೇಕು. ಪೋಷಕರ ಆರೋಗ್ಯದ ಬಗ್ಗೆ ಹೆಚ್ಚು ಗಮನವಿರಲಿ. ದೂರ ಬಂಧುಗಳ ಅನಿರೀಕ್ಷಿತ ಭೇಟಿಯು ಆಗಲಿದೆ. ವಿವಾಹ ಸಮಾರಂಭದಲ್ಲಿ ನಿಮ್ಮ ಉಪಸ್ಥಿತಿಯು ಇರಲಿದೆ. ಅತ್ಯಾಪ್ತರ ಜೊತೆ ಕಾಲವನ್ನು ಕಳೆಯುವಿರಿ. ಯಾರಿಗಾದರೂ ಹಣವನ್ನು ನೀಡಲು ಸಂಗಾತಿಯಿಂದ ಒತ್ತಡ ಬರಬಹುದು. ನಿಮ್ಮ ಚರ ಸ್ವತ್ತನ್ನು ರಕ್ಷಣೆ ಮಾಡಿಕೊಳ್ಳುವ ಅನಿವಾರ್ಯತೆ ಬರಬಹುದು.

ವೃಷಭ ರಾಶಿ :

ನಿಮ್ಮ ಬಗ್ಗೆ ಕುಖ್ಯಾತಿ ಬರಬಹುದು. ಒಮ್ಮೆಲೆ ಹತ್ತಾರು ವಿಚಾರಗಳಲ್ಲಿ ಆಸಕ್ತಿಯನ್ನು ಹೊಂದುವಿರಿ. ಮಹಿಳೆಯರಿಂದ ನಿಮಗೆ ವಿರೋಧವು ಬರಬಹುದು. ತುಂಬಾ ಭಾವುಕವಾಗಿ ಇರುವ ಕಾರಣದಿಂದ ನಿಮಗೆ ಕೆಲ ಸಂದರ್ಭಗಳಲ್ಲಿ ಕೋಪ ವಶವಾಗುವ ಸಾಧ್ಯತೆ ಇದೆ. ಹಣದ ವಿಚಾರದಲ್ಲಿ ನಿಮ್ಮ ನಿರ್ಧಾರಗಳು ನಿಖರವಾಗಿರಬೇಕಾಗಿದೆ. ಕುಟುಂಬದವರ ಜೊತೆ ಸಮಯವನ್ನು ಕಳೆಯುವಿರಿ. ಹಣದಿಂದ ಕೆಲವು ತೊಂದರೆಗಳನ್ನು ದೂರಮಾಡಿಕೊಳ್ಳುವಿರಿ.

ಮಿಥುನ ರಾಶಿ :

ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಇಂದು ವಾಹನದ ಸಮಯವು ವ್ಯತ್ಯಾಸವಾದ್ದರಿಂದ ನಡೆಯಬೇಕಾಗ ಸ್ಥಿತಿ ಬರಬಹುದು. ಹಣಕಾಸು ವ್ಯವಹಾರದಲ್ಲಿ ಸುಧಾರಣೆಯಾಗಲಿದೆ. ಹೆತ್ತವರ ಜೊತೆ ಬಾಂಧವ್ಯ ಗಟ್ಟಿ ಮಾಡಿಕೊಳ್ಳಿ. ಪ್ರೀತಿಯ ಪ್ರಭಾತವು ನಿಮ್ಮ ಜೀವನವನ್ನು ಬೆಳಗಿಸುತ್ತದೆ. ಹೊಸ ಉದ್ಯಮವನ್ನು ಆರಂಭಿಸಲು ನಿಮಗೆ ಧೈರ್ಯವು ಸಾಲದು. ಅಪರಿಚಿತರ ಜೊತೆ ಸಲುಗೆ ಅನವಶ್ಯಕ.

ಕರ್ಕಾಟಕ ರಾಶಿ :

ಮಾತನ್ನು ಆಡುವಾಗ ಪದಗಳ ಮೇಲೆ ಗಮನವಿರಲಿ. ಕೆಲವು ಪದಗಳೂ ನಿಮ್ಮ ಜೊತೆ ವೈಮನಸ್ಯವನ್ನು ತರುವುದು. ಹಣದ ವ್ಯವಹಾರಗಳಲ್ಲಿ ನೆಮ್ಮದಿ ಅನುಭವಿಸಲಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಮಾತುಕತೆ ಸಂತೋಷ ನೀಡಲಿದೆ. ನಿಮ್ಮ ಹೊಸ ಕರ್ತವ್ಯವನ್ನು ಮರೆಯಬಹುದು. ಅಲ್ಪದರಲ್ಲಿ ನೀವು ಪಾರಾಗಿ ನೆಮ್ಮದಿ ಪಡೆಯುವಿರಿ. ದುರಭ್ಯಾಸವನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇದೆ. ಮನೆಗೆ ಬೇಕಾದ ವಸ್ತುಗಳ ಖರೀದಿ ನಡೆಸುವಿರಿ. ಆಗಬೇಕಾದ ಕೆಲಸಗಳ ಬಗ್ಗೆ ನಿಮಗೆ ಆತಂಕ ಇರುವುದು.

ಸಿಂಹ ರಾಶಿ :

ಸಿಕ್ಕ ಉದ್ಯೋಗವು ಮುಂದೆ ಅನೇಕ ಲಾಭವನ್ನು ಮಾಡಿ ಕೊಡಲಿದೆ. ಶಿಷ್ಟ ನಡವಳಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಕಟುವಚನದಿಂದ ಅವಾಂತರ ಸೃಷ್ಟಿಯಾದೀತು. ಹಣದ ವ್ಯಯದಲ್ಲಿ ಮಿತಿಮೀರಬೇಡಿ, ಸಣ್ಣ ಉಡುಗೊರೆಗೂ ಸಂಯಮ ಬೇಕಾಗುತ್ತದೆ. ಕುಟುಂಬ ಸದಸ್ಯರ ಭಾವನೆಗಳಿಗೆ ಗೌರವ ನೀಡಿ, ಬೇಜವಾಬ್ದಾರಿಯ ಮಾತುಗಳಿಂದ ದೂರವಿರಿ. ಕುಟುಂಬದವರ ಜೊತೆ ನಿಮ್ಮ ಸಮಯವನ್ನು ನೀಡಿ. ಉದ್ಯೋಗದ ಸ್ಥಳವು ಇಂದು ನಿಮಗೆ ಖುಷಿಯ ಸ್ಥಳ.

ಕನ್ಯಾ ರಾಶಿ :

ಇಂದು ಹಲವಾರು ದಿನಗಳಿಂದ ವಾಹನ ಖರೀದಿಯ ಆಸೆಯನ್ನು ಪೂರ್ಣಮಾಡಿಕೊಳ್ಳುವಿರಿ. ವಿನಾಕಾರಣ ವಾಗ್ವಾದಗಳು ನಡೆಯಬಹುದು. ನ್ಯಾಯಾಲಯದಲ್ಲಿ ನಿಮಗೆ ಜಯವು ಸಿಗಲಿದೆ. ಕೋಪವನ್ನು ನಿಯಂತ್ರಿಸುವುದು ಅತ್ಯಗತ್ಯ, ಇಲ್ಲದಿದ್ದರೆ ಸಂಬಂಧಗಳು ಹಾಳಾಗಬಹುದು. ಕೈಯ್ಯಲ್ಲಿರುವ ಹಣವನ್ನು ಪೂರ್ತಿಯಾಗಿ ಖಾಲಿ ಮಾಡಿಕೊಳ್ಳುವಿರಿ. ಹೊರದೇಶದಲ್ಲಿ ಇರುವವರಿಗೆ ಕಷ್ಟವಾಗುವ ಸಾಧ್ಯತೆ ಇದೆ. ನಿಮ್ಮ ಬಗ್ಗೆ ಪ್ರಚಾರದ ಗೀಳು ಇರಬಹುದು.

ತುಲಾ ರಾಶಿ :

ನೀವು ಇಂದು ಉದ್ಯೋಗದ ಸ್ಥಳದಲ್ಲಿ ಏನನ್ನಾದರೂ ಹೇಳಿಬಿಡಬೇಡಿ. ಹೊಸ ಹೂಡಿಕೆ ಯೋಜನೆಗಳ ಕುರಿತು ಅಧ್ಯಯನ ಮಾಡಿ ನಂತರ ನಿರ್ಧಾರ ಕೈಗೊಳ್ಳಿ. ಕುಟುಂಬದೊಂದಿಗೆ ಸಮಯ ಕಳೆಯುವುದು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಸಂತಾನದಿಂದ ಒಳ್ಳೆಯ ಸುದ್ದಿಯನ್ನು ಪಡೆಯುವಿರಿ. ನಿಮ್ಮನ್ನು ನಿರ್ಲಕ್ಷಿಸುವ ಸಹೋದ್ಯೋಗಿಗಳ ಜೊತೆ ಬೆರೆಯಲು ಪ್ರಯತ್ನಿಸಿ. ವೃತ್ತಿಯಲ್ಲಿ ನಿಮಗೆ ಅನನುಕೂಲತೆಯು ಸೃಷ್ಟಿಯಾಗಬಹುದು. ಹೊರಗಿನಿಂದ ಆಮದು ಮಾಡಿಕೊಳ್ಳುವ ವ್ಯವಹಾರದಲ್ಲಿ ತೊಡಕಾಗಬಹುದು.

ವೃಶ್ಚಿಕ ರಾಶಿ :

ನಿಮಗಿಷ್ಟವಾದವರ ಜೊತೆ ನಿಮ್ಮ ವಿಹಾರ ಇರುವುದು. ಇಂದು ಬಾಯಿ ಚಪಲಕ್ಕೆ ಅಹಿತಕರಚಮವಾದ ಆಹಾರವನ್ನು ಸೇವಿಸುವಿರಿ. ಹಣದ ಕುರಿತು ಸಕಾಲಿಕ ನಿರ್ಧಾರ ಅಗತ್ಯ. ಒಗ್ಗಟ್ಟನ್ನು ಪ್ರದರ್ಶಿಸಲು ಹೋಗಿ ಎಡವಟ್ಟು ಮಾಡಿಕೊಳ್ಳುವಿರಿ. ಕುಟುಂಬದ ಒಗ್ಗಟ್ಟಿಗೆ ಬಲ ನೀಡುವ ಯತ್ನ ಮಾಡಿ. ಪೂರ್ವಾಗ್ರಹ ಪೀಡಿತರಾಗಿ ಮಾತನಾಡುವುದು ಬೇಡ. ಆರೋಗ್ಯದ ಸುಧಾರಣೆಗೆ ಖರ್ಚಾಗುವುದು. ಇನ್ಮೊಬ್ಬರನ್ನು ದೂರುವುದರಿಂದ ನೀವು ಸಜ್ಜನರಾಗಲಾರಿರಿ. ಅಸಭ್ಯ ಮಾತುಗಳು ನಿಮಗೆ ಸರಿಯಾಗದು.

ಧನು ರಾಶಿ :

ಇಂದು ವಿದ್ಯಾರ್ಥಿಗಳಿಗೆ ತಂದೆಯಿಂದ ಅಗತ್ಯವಿರುವ ಧನವು ಲಭ್ಯವಾಗಬಹುದು. ಅಧರ್ಮ ಮಾರ್ಗದಲ್ಲಿ ಹೋಗಲು ಯಾರದರೂ ಪ್ರೇರಣೆ ಕೊಡಬಹುದು. ಖರ್ಚು ಹೆಚ್ಚಾಗಬಹುದು. ಮಿತ್ರನ ಸಲಹೆಯಿಂದ ಹಣಕಾಸಿನ ಲಾಭ ಸಂಭವಿಸುತ್ತದೆ. ದೂರದ ಬಂಧುಗಳ ಸಮಾಗಮವಾಗಬಹುದು. ಜನರ ಜೊತೆ ಬೆರೆಯುವುದು ನಿಮಗೆ ಇಷ್ಟವಾಗದು. ಉನ್ನತ ವಿದ್ಯಾಭ್ಯಾಸಕ್ಕೆ ನಿಮ್ಮವರು ಸಲಹೆ ಕೊಡಬಹುದು. ನಿಮ್ಮ ಹಣವನ್ನು ಪರಿಚಿತರು ಕೇಳಬಹುದು. ಅಧಿಕಾರವು ಅಹಂಕಾರವಾಗಿ ಬದಲಾಗುವುದು ಬೇಡ.

ಮಕರ ರಾಶಿ :

ಅನ್ಯರ ಮಾತಿನಿಂದ ಒತ್ತಡದಲ್ಲಿ ಸಿಲುಕಿಕೊಳ್ಳಬೇಡಿ. ನಡವಳಿಕೆಯಿಂದ ತೊಂದರೆ ಆಗಬಹುದು, ತಾಳ್ಮೆಯಿಂದ ಮುಂದುವರಿಯಿರಿ. ಹಣಕಾಸಿನ ವಿಚಾರದಲ್ಲಿ ಲಾಭದಾಯಕ ದಿನ. ಸಂಗಾತಿಯ ಸಾಧನೆಗೆ ಬೆನ್ನೆಲುಬಾಗಿ ನಿಲ್ಲಿ. ನಿಮ್ಮ ಪ್ರತಿಭೆ ಗುರುತಿಸಲ್ಪಡುವ ದಿನವಾಗಬಹುದು. ಹೊಸ ವ್ಯವಹಾರಕ್ಕೆ ಹಿಂದೇಟು ಮನಸ್ಸು ಹಾಕುವುದು. ಸಂಗಾತಿಯ ಮಾತು ಸಂಕಟವನ್ನು ತರಬಹುದು. ತುರ್ತು ಪ್ರಯಾಣವನ್ನು ನೀವು ಮಾಡಬೇಕಾಗಬಹುದು.

ಕುಂಭ ರಾಶಿ :

ಎಂದೋ ಹೂಡಿದ ಹಣವು ಇಂದು ಉಪಯೋಗಕ್ಕೆ ಬರಲಿದೆ. ಹಣಕಾಸು ಸಮಸ್ಯೆಗಳು ನಿಧಾನವಾಗಿ ಪರಿಹಾರವಾಗುತ್ತವೆ. ಧರ್ಮಾರ್ಥ ಕಾರ್ಯಗಳಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಪಡೆದ ಹಣವನ್ನು ಹಿಂದಿರುಗಿ ಪ್ರೀತಿಯ ವಿಷಯದಲ್ಲಿ ಹೊಸ ತಿರುವು ಸಾಧ್ಯ. ಎಲ್ಲಿಗಾದರೂ ದೂರದ ಊರಿಗೆ ಪ್ರಯಾಣದ ಯೋಜನೆಗಳನ್ನು ಮಾಡಿಕೊಳ್ಳುವಿರಿ. ದಾನದಿಂದ ನಿಮಗೆ ಸಂತೋಷವಾಗಲಿದೆ. ನೀವು ಹಣಕಾಸಿನ ವ್ಯವಹಾರಗಳಿಗೆ ಹೆಚ್ಚು ಗಮನ ಹರಿಸಬಹುದು.

ಮೀನ ರಾಶಿ :

ಯಾರ ಜೊತೆಗೂ ವಿವಾದವನ್ನು ಮಾಡಲು ಹೋಗಬೇಡಿ. ನಿಮ್ಮನ್ನು ಬಿಟ್ಟುಕೊಡಲು ಆಗದು. ಸೋಲನ್ನು ಒಪ್ಪಿಕೊಳ್ಳಲು ನಿಮಗೆ ಇಂದು ಆಗದು. ಹಣಕಾಸು ಸಂಬಂಧಿತ ನ್ಯಾಯಾಲಯದ ವಿಚಾರದಲ್ಲಿ ನೀವು ಲಾಭ ಗಳಿಸಬಹುದು. ಮಕ್ಕಳ ಸಾಧನೆ ನಿಮ್ಮಲ್ಲಿ ಹೆಮ್ಮೆ ಹುಟ್ಟಿಸುತ್ತದೆ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆದಷ್ಟು ಚರಾಸ್ತಿಯ ಬಗ್ಗೆ ಚರ್ಚೆ ಮಾಡುವುದನ್ನು ತಪ್ಪಿಸಿ. ಆಪ್ತರ ಸಹಕಾರವನ್ನು ನೀವು ಅಲ್ಲಗಳೆಯುವಿರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಕೃತ್ತಿಕಾ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಚಿತ್ರಾ, ಯೋಗ : ವಜ್ರ, ಕರಣ : ಬವ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 46 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:34 – 17:10, ಯಮಗಂಡ ಕಾಲ 09:09 – 10:45, ಗುಳಿಕ ಕಾಲ 12:22 – 13:58

-ಲೋಹಿತ ಹೆಬ್ಬಾರ್-8762924271 (what’s app only)

Source link

RCB vs GT: ಏಕಪಕ್ಷೀಯವಾಗಿ ಗುಜರಾತ್ ಮಣಿಸಿ ಸತತ 2ನೇ ಬಾರಿಗೆ ಫೈನಲ್​ಗೇರಿದ ಆರ್​ಸಿಬಿ – Kannada News | Defending Champions RCB Reach Second Consecutive IPL Final with Dominant Q1 Win vs gujarat titans

ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿಹಿಡಿಯುವ ತವಕದಲ್ಲಿರುವ ಹಾಲಿ ಚಾಂಪಿಯನ್ ಆರ್​ಸಿಬಿ, ತಾನು ಏಕೆ ಮತ್ತೊಮ್ಮೆ ಚಾಂಪಿಯನ್ ಆಗಬೇಕು ಎಂಬುದನ್ನು ಕ್ವಾಲಿಫೈಯರ್ 1 ಪಂದ್ಯದಲ್ಲಿಯೇ ಸಾಭೀತುಪಡಿಸಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ವಿರುದ್ಧದ ಈ ಪಂದ್ಯದಲ್ಲಿ ಕೆಚ್ಚೆದೆಯ ಆಟ ಪ್ರದರ್ಶಿಸಿದ ಆರ್​ಸಿಬಿ ದಾಖಲೆಯ ಗೆಲುವು ದಾಖಲಿಸಿ ಸತತ ಎರಡನೇ ಬಾರಿಗೆ ಐಪಿಎಲ್ ಫೈನಲ್​ಗೇರಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿ ನಾಯಕ ರಜತ್ ಪಾಟಿದರ್ ಅವರ ಸಿಡಿಲಬ್ಬರದ ಬ್ಯಾಟಿಂಗ್​ನಿಂದಾಗಿ ದಾಖಲೆಯ 255 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಗುಜರಾತ್, ಆರ್​ಸಿಬಿ ಬೌಲರ್​ಗಳಿಗೆ ದಾಳಿಗೆ ನಲುಗಿ ಅಲ್ಪ ಮೊತ್ತಕ್ಕೆ ಮಂಡಿಯೂರಿತು. ಆದಾಗ್ಯೂ ಗುಜರಾತ್​ಗೆ ಫೈನಲ್​ಗೇರಲು ಇನ್ನೊಂದು ಅವಕಾಶವಿದ್ದು, ಕ್ವಾಲಿಫೈಯರ್ 2 ಅನ್ನು ಆಡಲಿದೆ. ಆ ಪಂದ್ಯದಲ್ಲಿ ಗೆದ್ದರೆ ಮತ್ತೆ ಫೈನಲ್​ನಲ್ಲಿ ಆರ್​ಸಿಬಿಯನ್ನು ಎದುರಿಸಲಿದೆ.

Published On – 11:43 pm, Tue, 26 May 26

Source link

RCB vs GT: ಶತಕ ವಂಚಿತರಾದರೂ ವಿಶ್ವ ದಾಖಲೆ ಮುರಿದ ರಜತ್ ಪಾಟಿದರ್ – Kannada News | RCB Captain Rajat Patidar Breaks World Record for Most Sixes in A T20 Series

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ವಿರುದ್ಧದ ಐಪಿಎಲ್ 2026 ರ ಕ್ವಾಲಿಫೈಯರ್ 1 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದರ್, ಸಿಡಿಲಬ್ಬರದ ಇನ್ನಿಂಗ್ಸ್ ಆಡಿದರು. ನಿರ್ಣಾಯಕ ಪಂದ್ಯದಲ್ಲಿ ನಾಯಕನ ಇನ್ನಿಂಗ್ಸ್ ಆಡಿದ ರಜತ್ ಪಾಟಿದರ್, 33 ಎಸೆತಗಳಲ್ಲಿ 283.82 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ 9 ಸಿಕ್ಸರ್ ಮತ್ತು 5 ಬೌಂಡರಿಗಳೊಂದಿಗೆ ಅಜೇಯ 93 ರನ್ ಗಳಿಸಿದರು. ರಜತ್ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರೂ ಟಿ20 ಕ್ರಿಕೆಟ್​ನಲ್ಲಿ ವಿಶ್ವ ದಾಖಲೆಯೊಂದನ್ನು ಮುರಿದಿದ್ದಾರೆ.

ಗುಜರಾತ್ ವಿರುದ್ಧದ ಈ ಪಂದ್ಯದಲ್ಲಿ ಬರೋಬ್ಬರಿ 9 ಸಿಕ್ಸರ್​ಗಳನ್ನು ಬಾರಿಸಿದ ರಜತ್, ಟಿ20 ಟೂರ್ನಮೆಂಟ್‌ವೊಂದರನ್ನು ಅತಿ ಹೆಚ್ಚು ಸಿಕ್ಸರ್​ಗಳನ್ನು ಬಾರಿಸಿದ ನಾಯಕರ ಪಟ್ಟಿಯಲ್ಲಿ ರಿಯಾನ್ ಪರಾಗ್ ಅವರ ದಾಖಲೆ ಮುರಿದು ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಐಪಿಎಲ್‌ನಲ್ಲಿ ಇದುವರೆಗೆ 41 ಸಿಕ್ಸರ್​ಗಳನ್ನು ಬಾರಿಸಿರುವ ರಜತ್, 2023-24 ರ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಅಸ್ಸಾಂ ತಂಡದ ನಾಯಕನಾಗಿ 40 ಸಿಕ್ಸರ್​ಗಳನ್ನು ಬಾರಿಸಿದ್ದ ರಿಯಾನ್ ಪರಾಗ್ ಅವರ ದಾಖಲೆಯನ್ನು ಮುರಿದರು.

Source link

RCB vs GT: ಸತತ 4ನೇ ಆವೃತ್ತಿಯಲ್ಲಿ 600 ರನ್; ಇತಿಹಾಸ ನಿರ್ಮಿಸಿದ ಕಿಂಗ್ ಕೊಹ್ಲಿ

Source link

ಬೆಂಗಳೂರಿಗೆ ಹೈಕಮಾಂಡ್ ನಾಯಕರು: ಗ್ಯಾರಂಟಿ ಆಯ್ತು ಸಿದ್ದರಾಮಯ್ಯ ರಾಜೀನಾಮೆ!

ಬೆಂಗಳೂರು, (ಮೇ 26): ತೀವ್ರ ಕುತೂಹಲ ಕೆರಳಸಿದ್ದ ಕರ್ನಾಟಕ ನಾಯಕತ್ವ ಬದಲಾವಣೆ ಗೊಂದಲಕ್ಕೆ ತೆರೆ ಬಿದ್ದಿದೆ. ದೆಹಲಿಯಲ್ಲಿ ನಡೆದ ಸರಣಿ ಸಭೆಯಲ್ಲಿ ರಾಹುಲ್ ಗಾಂಧಿ ಅವರು ನಾಯಕತ್ವ ಬದಲಾವಣೆ ಪ್ರಸ್ತಾಪ ಮಾಡಿದ್ದು, ಎರಡ್ಮೂರು ಆಫರ್ ನೀಡುವ ಮೂಲಕ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ರಾಹುಲ್ ಗಾಂಧಿ ಮಾತನ್ನು ತಮ್ಮ ಆಪ್ತರೊಂದಿಗೆ ಸಿದ್ದರಾಮಯ್ಯ ಚರ್ಚಿಸಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಹೀಗಾಗಿ ಈ ವಾರದಲ್ಲೇ ಹೊಸ ಸಿಎಂ ಆಗಲಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ಕೆಸಿ ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೆವಾಲ ಅವರು ನಾಳೆ (ಮೇ 27) ಬೆಂಗಳೂರಿಗೆ ಆಗಮಿಸಲಿದ್ದು, ಹೊಸ ಮುಖ್ಯಮಂತ್ರಿ ಜೊತೆ ಉಪಮುಖ್ಯಮಂತ್ರಿ ನೇಮಕದ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಸಿದ್ದರಾಮಯ್ಯನವರು ನಾಡಿದ್ದು ಅಂದರೆ ಮೇ 28ಕ್ಕೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ.

ಇದನ್ನೂ ನೋದಿ: ಇದೀಗ ಬಂದ ಸುದ್ದಿ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ನಿರ್ಧಾರ

Source link

ಏಳು ಮಗುವೇ; ಸತ್ತ ಆನೆಮರಿಯನ್ನು ಸೊಂಡಿಲಿಂದ ಎಬ್ಬಿಸಲು ಪ್ರಯತ್ನಿಸಿದ ತಾಯಾನೆ

ನವದೆಹಲಿ, ಮೇ 26: ‘ಎದ್ದೇಳು ಮಗನೇ…’ ಎನ್ನುತ್ತಾ ಅಸಹಾಯಕ ತಾಯಾನೆ ತನ್ನ ಸತ್ತ ಮರಿಯಾನೆಯನ್ನು ಸೊಂಡಿಲಿನಿಂದ ಎಬ್ಬಿಸಲು ಪ್ರಯತ್ನಿಸುತ್ತಿರುವ ದೃಶ್ಯ ನೋಡಿದರೆ ಎಂಥವರ ಕಣ್ಣೂ ತುಂಬಿ ಬರುತ್ತದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ (Viral Video) ಆಗುತ್ತಿದ್ದು , ಜನರು ಭಾವುಕರಾಗುತ್ತಿದ್ದಾರೆ. ಛತ್ತೀಸ್​​ಗಢದಲ್ಲಿ ಈ ಘಟನೆ ನಡೆದಿದೆ. ಧರ್ಮಜೈಗಢ ಅರಣ್ಯ ವಿಭಾಗದ ಛಲ್ ಬೆಟ್ಟದಲ್ಲಿ 39 ಆನೆಗಳ ಹಿಂಡು ತಡರಾತ್ರಿ ಪುಸಲ್ಡಾ ಗ್ರಾಮದ ಬಳಿಯ ಕೊಳದಲ್ಲಿ ಸ್ನಾನ ಮಾಡಲು ಬಂದಿತ್ತು. ಈ ಘಟನೆಯಲ್ಲಿ, ಮರಿ ಆನೆಯೊಂದು ಆಳವಾದ ನೀರಿಗೆ ಹೋಗಿ ಮುಳುಗಿ ಸಾವನ್ನಪ್ಪಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೀದರ್: ಗಾಳಿ ಸಹಿತ ಆಲಿಕಲ್ಲು ಮಳೆ; ಮನೆ ಮೇಲ್ಚಾವಣಿ ಮೇಲಿನ ಕಲ್ಲುಬಿದ್ದು 6 ವರ್ಷದ ಮಗು ಸಾವು – Kannada News | Bidar Tragedy: 6 Year Old Child Dies After Roof Debris Falls During Hailstorm

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ…

Read More

Source link