Category Archives: Blog

Your blog category

Daily Devotional: ಸಾವಿನ ಮನೆಯಲ್ಲಿ ಬಿಳಿ ವಸ್ತ್ರವನ್ನು ಯಾಕೆ ಧರಿಸುವದು? – Kannada News | Understanding the Symbolism of White Clothes in Mourning Rituals

ಮರಣದ ಹೊಂದಿದ ನಂತರ ಹಿಂದೂ ಸಂಪ್ರದಾಯ ಬಿಳಿ ವಸ್ತ್ರ ಧರಿಸುವುದು ರೂಢಿ ಇಂದಿಗೂ ಇದೆ. ಬಿಳಿಯ ಬಣ್ಣವು ಶಾಂತಿ, ಶುದ್ಧತೆ, ಮೌನ ಹಾಗೂ ಸಮೃದ್ಧಿಯ ಸಂಕೇತವಾಗಿದೆ. ಭಗವದ್ಗೀತೆಯ ಪ್ರಕಾರ ಜನನ-ಮರಣಗಳು ಜೀವನದ ಸಹಜ ಭಾಗ. ಅಂತಹ ಸಂದರ್ಭಗಳಲ್ಲಿ ಬಿಳಿ ವಸ್ತ್ರಗಳನ್ನು ಧರಿಸಿ, ಒಡವೆಗಳನ್ನು ತ್ಯಜಿಸಿ, ಮೌನ ಪಾಲಿಸುವುದು ಆತ್ಮಕ್ಕೆ ಶಾಂತಿ ನೀಡುತ್ತದೆ. ಇದು ಮೃತರ ಆತ್ಮಕ್ಕೆ ಮೋಕ್ಷವನ್ನು ಕರುಣಿಸಲು ಹಾಗೂ ಕುಟುಂಬದಲ್ಲಿ ಶಾಂತಿಯನ್ನು ನೆಲೆಸಲು ಸಹಾಯ ಮಾಡುತ್ತದೆ. ಬಿಳಿ ವಸ್ತ್ರವು ವಾತಾವರಣವನ್ನು ಶುದ್ಧವಾಗಿರಿಸಲು ಸಹಕಾರಿಯಾಗುತ್ತದೆ ಎಂದು ನಂಬಲಾಗಿದೆ. ಪ್ರತಿಯೊಬ್ಬರೂ ಸಾವಿನ ಮನೆಗೆ ಹೋಗುವಾಗ ಸಾಧ್ಯವಾದಷ್ಟು ಬಿಳಿ ವಸ್ತ್ರ, ಇಲ್ಲವಾದರೆ ಕನಿಷ್ಠ ಬಿಳಿ ಟವಲ್ ಧರಿಸುವುದರಿಂದ ಮೃತರ ಆತ್ಮಕ್ಕೆ ಶಾಂತಿ ಹಾಗೂ ಬದುಕಿರುವವರಿಗೆ ಶುಭವಾಗುತ್ತದೆ. ಒಡವೆಗಳನ್ನು ಹಾಕಿಕೊಂಡು, ವಿಚಿತ್ರವಾದ ಅಥವಾ ಆಡಂಬರದ ಬಟ್ಟೆಗಳನ್ನು ಧರಿಸಿಕೊಂಡು ಹೋಗುವುದಕ್ಕಿಂತ ಬಿಳಿಯ ವಸ್ತ್ರವನ್ನು ಧರಿಸಿ ಸ್ವಲ್ಪ ಹೊತ್ತು ಮೌನವನ್ನು ಪಾಲಿಸಿದಾಗ ಮೃತರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಇದು ಮೃತರ ಆತ್ಮಕ್ಕೆ ಮೋಕ್ಷವನ್ನು ಕರುಣಿಸಲು ಸಹಾಯಕವಾಗುತ್ತದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲದೆ, ಇದು ಕುಟುಂಬದಲ್ಲಿ ಶಾಂತಿಯನ್ನು ನೆಲೆಸಲು ಸಹಕಾರಿಯಾಗುತ್ತದೆ. ಹಿಂದೂ ಸಮಾಜದಲ್ಲಿ ಮತ್ತು ಹಿಂದೂ ಧರ್ಮದಲ್ಲಿ ಜ್ಞಾನ ಮತ್ತು ಸದ್ಭಾವನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಬಿಳಿ ಬಣ್ಣವು ಇದೇ ಜ್ಞಾನ ಮತ್ತು ಸದ್ಭಾವನೆಗೆ ಪ್ರತೀಕವಾಗಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today 21 January: ಇಂದು ಈ ರಾಶಿಯವರಿಗೂ ಶುಭಫಲ ಹೆಚ್ಚು

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 22, 2026ರ ದಿನ ಭವಿಷ್ಯದ ಬಗ್ಗೆ ತಿಳಿಸಿದ್ದಾರೆ. ಈ ದಿನವು ಗುರುವಾರವಾಗಿದ್ದು, ವಿಶ್ವಾಸುನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಶುಕ್ಲ ಪಕ್ಷದ ಚೌತಿ ತಿಥಿಯಾಗಿದೆ. ಶತಭಿಷಾ ನಕ್ಷತ್ರ, ವರಿಯನ್ ಯೋಗ ಮತ್ತು ವಣಿಕ ಕರಣಗಳು ಇಂದಿನ ಪ್ರಮುಖ ಗ್ರಹಗಳ ಸಂಯೋಜನೆಗಳಾಗಿವೆ. ಇಂದು ರವಿ ಮಕರ ರಾಶಿಯಲ್ಲಿದ್ದು, ಚಂದ್ರ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಶುಕ್ಲ ಪಕ್ಷದ ಚೌತಿ ಇರುವುದರಿಂದ ಇದನ್ನು ವಿನಾಯಕಿ ಚತುರ್ಥಿ ಎಂದೂ ಆಚರಿಸಲಾಗುತ್ತದೆ. ಇಡಗುಂಜಿ, ಸೌತಡ್ಕ ಮತ್ತು ಉಗಿನಿಯಂತಹ ಸ್ಥಳಗಳಲ್ಲಿ ವಿನಾಯಕ ರಥೋತ್ಸವಗಳು ನಡೆಯಲಿವೆ. ಪ್ರತಿಯೊಂದು ರಾಶಿಯವರಿಗೂ ಗ್ರಹಗಳ ಶುಭ ಫಲ, ವೃತ್ತಿ, ಆರೋಗ್ಯ, ಹಣಕಾಸು, ಕುಟುಂಬ ಮತ್ತು ವಿದ್ಯಾರ್ಥಿ ಜೀವನದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಯಿತು. ಅಲ್ಲದೆ, ಪ್ರತೀ ರಾಶಿಯವರಿಗೂ ನಿರ್ದಿಷ್ಟ ಪ್ರಯಾಣದ ದಿಕ್ಕು, ಶುಭ ಬಣ್ಣ, ಅದೃಷ್ಟ ಸಂಖ್ಯೆ ಮತ್ತು ಪಠಿಸಬೇಕಾದ ಮಂತ್ರವನ್ನೂ ಸಹ ತಿಳಿಸಲಾಯಿತು. ಈ ಭವಿಷ್ಯವು ದಿನದ ಶುಭ-ಅಶುಭಗಳನ್ನು ತಿಳಿಸಿ, ಸೂಕ್ತ ಮಾರ್ಗದರ್ಶನ ನೀಡುತ್ತದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today 22 January : ಇಂದು ಈ ರಾಶಿಯವರು ಮಾತನ್ನು ಉಳಿಸಿಕೊಳ್ಳುವರು

ಮೇಷ ರಾಶಿ:

ಬೆಂಕಿಯ ಸಹವಾಸ ಮಾಡಿಯೂ ಅವಘಡ ಆಗುವುದಿಲ್ಲ ಎನ್ನಲಾಗದು. ಹೂಡಿಕೆಯನ್ನು ಇತರರ ಒತ್ತಾಯದ ಮೇಲೆ ಮಾಡಬೇಕಾದೀತು. ಮನೆಯ ಖರೀದಿಯ ಬಗ್ಗೆ ಆಲೋಚನೆಗಳು ಬರಲಿವೆ. ಇಂದು ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿದ್ದು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ನಿರ್ಧಾರವನ್ನು ಮಾಡಲು ಸರಿಯಾದ ವ್ಯಕ್ತಿಗಳು ಸಿಗುವರು. ನಿಮ್ಮಿಂದ ಉಪಕಾರವನ್ನು ಪಡೆದವರೇ ನಿಮ್ಮ ಶತ್ರಗಳಾದಾರು. ಸಂಗಾತಿಯು ನಿಮ್ಮನ್ನು ನಿರ್ಲಕ್ಷಿಸಬಹುದು. ನಿಮ್ಮ ಬಗ್ಗೆ ನಿಮಗೇ ನಂಬಿಕೆ ಕಡಿಮೆ ಆಗಬಹುದು. ಮೃದುವಾದ ಮಾತು ನಿಮ್ಮ ಕೃತಕತೆಯಂತೆ ತೋರಿಸಬಹುದು. ನೀವೊಬ್ಬ ಸುಳ್ಳುಗಾರರೆನ್ನುವಂತೆ ಇತರರು ಬಿಂಬಿಸುವರು.

ವೃಷಭ ರಾಶಿ:

ಇಂದು ನಿಮ್ಮ ಕೆಲಸವು ನೀವಂದುಕೊಂಡಷ್ಟು ಸುಲಭವಾಗಿ ಇರದು. ಸಾಮಾನ್ಯರಂತೆ ಕಾಣುವ ನಿಮಗೆ ಯಾವುದೇ ಆಡಂಬ ಇಷ್ಡವಾಗದು. ಯಾರೊಂದಿಗೂ ಮುಕ್ತವಾಗಿ ಮಾತನಾಡಲು ಅವಕಾಶ ಸಿಗದು. ಕುಟುಂಬದ ಕೆಲವು ಸನ್ನಿವೇಶಗಳು ನಿಮಗೆ ಇಷ್ಟವಾಗದು. ನಕಾರಾತ್ಮಕ ಸೂಚನೆ ನಿಮಗೆ ಸಿಗಲಿದ್ದು, ಅದನ್ನು ನಿರ್ಲಕ್ಷ್ಯ ಮಾಡುವಿರಿ. ಹೃದಯ ಕಲ್ಲಾದಷ್ಟೂ ವ್ಯಕ್ಯಿತ್ವಗಳು ದೂರಾಗುವರು. ನಿಮ್ಮ ಮನೋಬಲದ ಪ್ರದರ್ಶನವನ್ನು ತೋರಿಸಬೇಕಾದೀತು. ಸುಮ್ಮನೇ ವಾಗ್ವಾದವನ್ನು ಮಾಡಲು ಹೋಗಿ ಸಮಯವನ್ನು ಹಾಗೂ ಇತರರ ಸಮಯವನ್ನೂ ಹಾಳು ಮಾಡುವಿರಿ.

ಮಿಥುನ ರಾಶಿ:

ನೀವು ಇಂದು ಯಾವುದನ್ನೂ ತಕ್ಷಣ ಒಪ್ಪಿಕೊಳ್ಳುವುದಿಲ್ಲ. ಎಲ್ಲ ಕಾರ್ಯಗಳನ್ನು ಸಲೀಸಾಗಿ ಮಾಡುವ ಅನುಭವ ನಿಮ್ಮದಾಗಲಿದೆ. ಯಶಸ್ಸಿನ ಗುಟ್ಟನ್ನು ನೀವು ಯಾರಿಗೂ ಹೇಳಲಾರಿರಿ. ಮನೆಯಲ್ಲಿ ಹರ್ಷದ ವಾತಾವರಣ ಇದ್ದು ಬಂಧುಗಳು ನಿಮ್ಮ ಜೊತೆಗಿರುವರು. ಕರ್ತವ್ಯವನ್ನು ನಿಷ್ಠೆಯಿಂದ ಮಾಡುವಿರಿ. ಗೆಳೆಯನನ್ನು ಆಪ್ತನನ್ನಾಗಿ ಮಾಡಿಕೊಳ್ಳುವಿರಿ. ಅಪೇಕ್ಷಿಸದಿದ್ದರೂ ನಿಮ್ಮ ಪರಿಶ್ರಮಕ್ಕೆ ಯೋಗ್ಯವಾದ ಗೌರವವು ಸಿಗುವುದು. ಕೆಟ್ಟ ಕೆಲಸಕ್ಕೆ ಯಾರಾದರೂ ಪ್ರೇರಣೆ ಕೊಡಬಹುದು. ಯಾವುದನ್ನೇ ಆದರೂ ಉದ್ವೇಗದಿಂದ ನಿರಾಕರಿಸುವುದು ಬೇಡ.

ಕರ್ಕಾಟಕ ರಾಶಿ:

ಕೊಡಬೇಕಾದವರ ಹಣವನ್ನು ಹಾಗೆಯೇ ಇಟ್ಟುಕೊಳ್ಳುವಿರಿ. ನಿಮ್ಮ ತಪ್ಪನ್ನು ಒಪ್ಪಿಕೊಳ್ಳಲು ನಿಮಗೆ ಸಂಕೋಚವಾಗಬಹುದು. ನಿರಂತರ ಕೆಲಸದಿಂದ ಸಮಾಧಾನವು ಬೇಕಾಗುವುದು. ನಿಮ್ಮ ಕೆಲಸವನ್ನು ಪ್ರಸ್ತುತಿ ಮಾಡುವಲ್ಲಿ ಸೋಲುವ ಸಾಧ್ಯತೆ ಇದೆ. ಉದ್ವೇಗಕ್ಕೆ ಒಳಗಾಗಿ ಏನನ್ನಾದರೂ ಎಡವಟ್ಟು ಮಾಡಿಕೊಳ್ಳುವಿರಿ. ನಿಮ್ಮ ಸೌಂದರ್ಯಕ್ಕೆ ಆಕರ್ಷಿತರಾಗಿ ಮನಸೋಲಬಹುದು. ಕೃತಜ್ಞತೆಯಿಂದ ನಿಮ್ಮವರನ್ನು ಸ್ಮರಿಸುವಿರಿ, ಗೌರವಿಸುವಿರಿ. ವರ್ತನೆಯಲ್ಲಿ ಆಗುವ ಬದಲಾವಣೆಯನ್ನು ಯಾರೂ ಊಹಿಸಲಾರರು. ಎಲ್ಲದರ ಮೇಲೂ ನಂಬಿಕೆಯನ್ನು ಕಳೆದುಕೊಳ್ಳುವಿರಿ.

ಸಿಂಹ ರಾಶಿ:

ನಿಮ್ಮ ಗಮನಾಗಮನವನ್ನು ಯಾರಾದರೂ ತಿಳಿದುಕೊಳ್ಳುತ್ತಿರಬಹುದು. ಕುಟುಂಬದ ಚಿಂತೆಯಿಂದ ಆರೋಗ್ಯವನ್ನು ಹಾಳುಮಾಡಿಕೊಳ್ಳುವಿರಿ. ಅನವಶ್ಯಕವಾಗಿ ಹಣವನ್ನು ವ್ಯರ್ಥ ಮಾಡಿಕೊಳ್ಳುವಿರಿ. ಎಲ್ಲ ಒಳ್ಳೆಯದಕ್ಕೂ ನೀವೇ ತಂದೆ ಎನ್ನುವ ಭಾವ ನಿಮ್ಮಲ್ಲಿ ಮೂಡಬಹುದು. ಅನಿಶ್ಚಿತತೆಯು ನಿಮ್ಮ ಮೇಲೆ ದಟ್ಟವಾದ ಪ್ರಭಾವವನ್ನು ಬೀರಬಹುದು. ಕುಟುಂಬದಲ್ಲಿ ಪರಸ್ಪರ ಪ್ರೀತಿಯು ತೋರುವುದು. ಪ್ರಯಾಣದಿಂದ ಪ್ರಯಾಸವಾಗಲಿದೆ. ಹೊಸ ವ್ಯವಹಾರದ ಬಗ್ಗೆ ನಿಮಗೆ ಆಪ್ತರ ಸಲಹೆಯು ಸಿಗಲಿದೆ. ಮಕ್ಕಳ ಸ್ವಭಾವವು ಇಷ್ಟವಾಗದೇ ಹೋಗುವುದು.

ಕನ್ಯಾ ರಾಶಿ:

ಹೊಸ ಉದ್ಯೋಗವನ್ನು ಆರಂಭಿಸಲು ತೀವ್ರತೆಯು ಇರಲಿದೆ. ಮಕ್ಕಳನ್ನು ದೂರ ಮಾಡಿಕೊಂಡು ಬೇಸರಗೊಳ್ಳುವಿರಿ. ನಿಮ್ಮ ಮಕ್ಕಳ ಬಾಂಧವ್ಯದಿಂದೆ ನಿಮಗೆ ಅಗಲಿಕೆ ಕಷ್ಟವಾದೀತು. ಸಹೋದ್ಯೋಗಿಗಳನ್ನು ಅನೌಪಚಾರಿಕವಾಗಿ ಭೇಟಿಯಾಗುವಿರಿ. ಸಾಲವನ್ನು ಪಡೆಯದೇ ಇದ್ದರೂ ಕೆಲವು ಋಣದಿಂದ ಮುಕ್ತರಾಗಲು ಕೆಲಸ ಮಾಡಬೇಕು. ಸ್ಥಾನಮಾನವನ್ನು ಕಳೆದುಕೊಳ್ಳುವ ಸನ್ನಿವೇಶವು ಬರಬಹುದು. ಹೊಸ ಮನೆಗೆ ಸ್ಥಳಾಂತರ ಮಾಡಿಕೊಳ್ಳುವಿರಿ. ತಾಯಿಯ ಪ್ರೀತಿಯನ್ನು ಅನುಭವಿಸುವಿರಿ. ಸಂಪತ್ತಿನ ಬಗ್ಗೆ ನಿಮಗೆ ಆಸಕ್ತಿಯು ಇರದು. ಸಂಗಾತಿಯು ನಿಮ್ಮಿಂದ ಏನನ್ನೋ ಮುಚ್ಚಿಡುತ್ತಾರೆ ಎಂದು ಅನ್ನಿಸಬಹುದು.

ತುಲಾ ರಾಶಿ:

ಇಂದು ವ್ಯಾಪಾರದ ವಿಸ್ತರಣೆಯನ್ನು ಮಾಡಲು ನಿರ್ಧಾರ ಮಾಡುವಿರಾದರೂ ಕೆಲವರ ಅಭಿಪ್ರಾಯ ಹಾಗೂ ಸಲಹೆಯನ್ನು ಮುಕ್ತವಾಗಿ ಪಡೆಯಿರಿ. ದ್ವಿಚಕ್ರ ವಾಹನವನ್ನು ಚಲಾಯಿಸುವಾಗ ಎಚ್ಚರಿಕೆ ಇರಲಿ. ಹಳೆಯ ಘಟನೆಯನ್ನು ನೆನಪಿಸಿಕೊಂಡು ಸಂಕಟಪಡುವುದು ಬೇಡ. ಸಂಗಾತಿಯ ಮನವೊಲಿಸುವುದು ನಿಮ್ಮ ಚಾಣಾಕ್ಷತೆಗೆ ಬಿಟ್ಟಿದ್ದು. ನಿಮ್ಮ ಲಾಭದ ಉದ್ಯಮದ ಮೇಲೆ ಕೆಟ್ಟ ದೃಷ್ಟಿ ಬೀಳಬಹುದು. ಸಮಾಜಮುಖೀ ಕಾರ್ಯಗಳನ್ನು ನಿರಪೇಕ್ಷೆಯಿಂದ ಮಾಡುವಿರಿ. ಕಾನೂನು ವ್ಯವಹಾರದಲ್ಲಿ ಗಲಿಬಿಲಿಯಾಗಲಿದೆ. ತಾಳ್ಮೆ ಕಡಿಮೆ ಆದಂತೆ ತೋರುವುದು.

ವೃಶ್ಚಿಕ ರಾಶಿ:

ಆರೋಗ್ಯದ ಬಗ್ಗೆ ಕಾಳಜಿ ಮುಖ್ಯವಾಗಿರಲಿ. ಸ್ನೇಹಿತರ ಮಾತಿನಿಂದ ನಿಮಗೆ ನೋವಾಗಬಹುದು. ಹಣಕಾಸಿನ ವಿಚಾರಕ್ಕೆ ತಂದೆಯ ನಡುವೆ ವಾಗ್ವಾದವು ಆಗಬಹುದು. ಯಾವ ಕ್ಷೇತ್ರದಲ್ಲೇ ಇದ್ದರೂ ಶತ್ರುಗಳ ಪಾತ್ರವನ್ನು ಇಲ್ಲಗಳೆಯುವಂತಿಲ್ಲ. ಚರಾಸ್ತಿಗಳನ್ನು ನಷ್ಟ ಮಾಡಿಕೊಳ್ಳಬೇಕಾಗುವುದು. ಆರ್ಥಿಕ ಒಪ್ಪಂದಕ್ಕೆ ಒಪ್ಪಿಗೆ ಕೊಡುವಿರಿ. ನಿರ್ಲಕ್ಷ್ಯ ಮಾಡದೇ ಒಂದು ಗಮನ ಬೇಕು. ನಿಮಗೆ ಯಾರಾದರೂ ದಾನಕ್ಕೆ ಯೋಗ್ಯರಾದವರು ಅನ್ನಿಸಿದವರಿಗೆ ದಾನವನ್ನು ಮಾಡಿ. ಸಾಲವಾಗಿ ನೀಡಿದ ಹಣವನ್ನು ಮತ್ತೆ ಬರುವುದು ಕಷ್ಟವಾದೀತು.

ಧನು ರಾಶಿ:

ಹಣಕಾಸಿನ ಭಯವು ನಿರೀಕ್ಷೆಗಿಂತ ಕಡಿಮೆಯಾಗಬಹುದು. ಇಂದು ಕೆಲವು ಪರಿಸ್ಥಿತಿಯನ್ನು ಎದುರಿಸಲು ಸಂಕೋಚವಾಗಬಹುದು. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುವುದು ಸೂಕ್ತ. ಪೂರ್ವಿಕರ ಆಸ್ತಿಗೆ ಸಂಬಂಧಿಸಿದಂತೆ ಮನಸ್ತಾಪವು ಬರಬಹುದು. ಮಹಿಳೆಯರಿಗೆ ಸಹಾಯ ಮಾಡಲು ಹೋಗಿ ಅಪವಾದಕ್ಕೆ ಸಿಕ್ಕುವಿರಿ. ನಿಮ್ಮ ನಿರುದ್ಯೋಗಕ್ಕೆ ಸೂಕ್ತ ಪರಿಹಾರ ಸಿಗಲಿದೆ. ಅನಿರೀಕ್ಷಿತವಾಗಿ ಇಂದು ಮನೆಯಲ್ಲಿಯೇ ಕಛೇರಿಯ ಕಾರ್ಯವನ್ನು ಮಾಡಬೇಕಾಗುವುದು. ದಿನವನ್ನು ದುಃಖಾಂತ್ಯ ಮಾಡಿಕೊಳ್ಳುವುದು ಬೇಡ. ಸ್ವತಂತ್ರ ಆಲೋಚನೆಯಿಂದ ಹೊಸ ದೃಷ್ಟಿ ಸಿಗಲಿದೆ.

ಮಕರ ರಾಶಿ:

ಶುಭಕರ್ಮವನ್ನು ಮಾಡುವ ಉತ್ಸಾಹವಗಬಹುದು. ಸಂಗಾತಿಯ ಜೊತೆಗಿನ ಕಲಹವು ನಿಮ್ಮ ಇಡೀ ದಿನವನ್ನು ಸರಿಯಾಗಿ ಕಳೆಯುವಂತೆ ಮಾಡದು. ನಿಮ್ಮ ಯೋಜನೆಗಳು ಕ್ರಮಶುದ್ಧವೂ ತರ್ಕಸಿದ್ಧವೂ ನಿಯಮಬದ್ಧವೂ ಆಗಿರಲಿದೆ. ಆ ದೂರಪ್ರಯಾಣವು ಆಯಾಸವನ್ನು ಕೊಡಬಹುದು. ಬಂಧುಗಳ ನಕಾರಾತ್ಮಕ ಮಾತುಗಳಿಂದ ನಿಮ್ಮ ಉತ್ಸಾಹಕ್ಕೆ ಭಂಗ ಬರುವುದು. ಎಲ್ಲವೂ ಹೇಳದೆಯೂ ಅರ್ಥ ಮಾಡಕೊಂಡು ಕಾರ್ಯವನ್ನು ಮಾಡುವಿರಿ. ಆಪತ್ಕಾಲಕ್ಕಾಗಿ ಕೂಡಿಟ್ಟ ಹಣವು ಇಂದು ಖರ್ಚು ಮಾಡಬೇಕಾಗುವುದು. ಭವಿಷ್ಯದ ಬಗ್ಗೆ ಅಸ್ಪಷ್ಟತೆ ಇರುವ ಕಾರಣ ಮನಸ್ಸಿಗೆ ಕಿರಿಕಿರಿ ಇರುವುದು.

ಕುಂಭ ರಾಶಿ:

ನೀವು ಉದ್ಯೋಗವನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ನಿಮ್ಮ ಜೀವನಶೈಲಿಯನ್ನು ಸುಧಾರಿಸಿಕೊಳ್ಳಿ. ಸ್ವಂತ ನೆಲೆಯ ಸ್ಥಾಪನೆಯ ಬಗ್ಗೆ ಹೆಚ್ಚು ಯೋಚನೆ ಯೋಜನೆ ಅಗತ್ಯ. ಶತ್ರುಬಾಧೆಯಿಂದ ನೀವು ಬಹಳ ಹಿಂಸೆಯನ್ನು ಅನುಭವಿಸಬೇಕಾಗುಬುದು. ಸಂಗಾತಿಯ ವಿಷಯದಲ್ಲಿ ನಿಮಗೆ ಸಮಾಧಾನ ಇರದು. ಮನೆಯಲ್ಲಿ ಇಂದು ಸ್ನೇಹ ಕೂಟವು ಏರ್ಪಡುವುದು. ಪರರ ಸಂತೋಷದಲ್ಲಿ ನೀವು ಭಾಗಿಯಾಗುವಿರಿ. ನಿಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳುವಿರಿ. ಕಛೇರಿಯ ವ್ಯವಹಾರವನ್ನು ಮನೆಯಲ್ಲಿ ಚರ್ಚಿಸುವುದು ಬೇಡ.

ಮೀನ ರಾಶಿ:

ಭೂಮಿಯ ವ್ಯವಹಾರವು ನಿಮಗೆ ಲಾಭದಾಯಕವೆಂದು ಸಾಬೀತುಪಡಿಸಬಹುದು. ವ್ಯಾಪಾರ ವಹಿವಾಟುಗಳಿಗೆ ಆಪ್ತರನ್ನೇ ಯೋಜಿಸಿಕೊಳ್ಳುವುದು ಉತ್ತಮ. ಸ್ತ್ರೀಯರು ಸಂತೋಷದಿಂದ ದಿನ ಕಳೆಯುವಿರಿ. ನಿಮಗೆ ಇಂದು ಧಾರ್ಮಿಕ ಕಾರ್ಯದಲ್ಲಿ ತೃಪ್ತಿಯು ಸಿಗಲಿದೆ. ನೌಕರರಿಗೆ ಇಂದು ಸಂತೋಷವನ್ನು ಕೊಡುವಿರಿ. ಸಂತೋಷದ ನಡುವೆ ಯಾರನ್ನೂ ಬೇಸರಿಸುವುದು ಬೇಡ. ನಿಮ್ಮ ಅಧ್ಯಾತ್ಮ ಜೀವನದಿಂದ ಪ್ರಭಾವಿತರಾಗುವರು. ಅತಿಯಾದ ಭೋಜನದಿಂದ ಕಷ್ಟವಾದೀತು. ತಾಯಿಯ ಬಂಧುಗಳು ನಿಮಗೆ ಸಹಕಾರವನ್ನು ನೀಡಬಹುದು.

ಜನವರಿ 22,​​ 2026ರ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರ ಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಉತ್ತರಾಷಾಢ, ವಾರ : ಗುರು, ಪಕ್ಷ : ಶುಕ್ಲ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಪೂರ್ವಾಭಾದ್ರ, ಯೋಗ : ವರಿಯಾನ್, ಕರಣ : ಭದ್ರ, ಸೂರ್ಯೋದಯ – 06 – 54 am, ಸೂರ್ಯಾಸ್ತ – 06 – 17 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 14-51 – 15:27, ಯಮಗಂಡ ಕಾಲ 06:54 – 08:20, ಗುಳಿಕ ಕಾಲ 09:45 – 11:11

-ಲೋಹಿತ ಹೆಬ್ಬಾರ್ – 8762924271 (what’s app only)

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 22ರ ದಿನಭವಿಷ್ಯ

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಡ್ರೈಫ್ರೂಟ್ಸ್, ಹೆಲ್ತಿ ಫುಡ್ ಇಂಥವುಗಳ ಖರೀದಿ ಮಾಡುವುದಕ್ಕೆ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ಕಿವಿಗೆ ಸಂಬಂಧಿಸಿದ ತೊಂದರೆಗಳು ಎದುರಾಗಲಿವೆ. ಅಂಥ ಸಂದರ್ಭ ಕೂಡಲೇ ವೈದ್ಯರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು. ಉದ್ಯೋಗಕ್ಕೆ ಸಂಬಂಧಿಸಿದ ವಿಚಾರಗಳನ್ನು ಮುಂದೂಡುವುದಕ್ಕೆ ಹೋಗಬೇಡಿ. ಇನ್ನು ಕಾರಣವೇ ಇಲ್ಲದೆ ನಿಮ್ಮ ಮೇಲೆ ಹಗೆ ಸಾಧಿಸುವುದಕ್ಕೆ ಪ್ರಯತ್ನ ಮಾಡುತ್ತಾ ಇರುವವರಿಗೆ ತಮ್ಮ ತಪ್ಪಿನ ಅರಿವಾಗಲಿದೆ. ತಮ್ಮ ತಪ್ಪಿಗೆ ಕ್ಷಮೆ ಕೂಡ ಕೇಳಲಿದ್ದಾರೆ

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಏನು ಆಗುತ್ತಿದೆ ಎಂದು ಗೊತ್ತೇ ಇಲ್ಲದಂತೆ ನಿಮ್ಮ ಪರಿಸ್ಥಿತಿ ಆಗಲಿದೆ. ಯಾವುದೇ ತೀರ್ಮಾನ ಮಾಡಿದರೂ ಅದರಿಂದ ಸಮಾಧಾನ ತರುವಂಥದ್ದೇನೂ ಆಗಬಹುದು ಎಂಬ ವಿಶ್ವಾಸ ನಿಮ್ಮಲ್ಲಿ ಮೂಡುವುದಿಲ್ಲ. ನಿಮ್ಮ ಬಳಿ ಇರುವಂಥ ವಾಹನ ಒಂದನ್ನು ಮಾರಾಟ ಮಾಡುವುದಕ್ಕೆ ಮುಂದಾಗಲಿದ್ದೀರಿ. ಕುಟುಂಬ ಸದಸ್ಯರಿಗೆ ಈ ಬಗ್ಗೆ ಒಮ್ಮತ ಇಲ್ಲದಿದ್ದರೂ ನಿಮ್ಮ ನಿಲುವು ಬದಲಿಸುವ ಮನಸ್ಥಿತಿಯಲ್ಲಿ ಇರುವುದಿಲ್ಲ. ಹೋಟೆಲ್ ನಲ್ಲಿ ಕೆಲಸ ಮಾಡುವಂಥವರಿಗೆ ಒತ್ತಡದ ದಿನ ಇದಾಗಿರುತ್ತದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಭವಿಷ್ಯದಲ್ಲಿ ಆಗಬಹುದಾದ ಬೆಳವಣಿಗೆಗಳ ಬಗ್ಗೆ ಸ್ಪಷ್ಟತೆ ದೊರೆಯುತ್ತಾ ಸಾಗುತ್ತದೆ. ನಿಮಗೆ ದೊಡ್ಡ ಹುದ್ದೆಯೊಂದರ ಜವಾಬ್ದಾರಿ ನೀಡುವ ಕುರಿತು ಮೇಲಧಿಕಾರಿಗಳು ಸುಳಿವು ಕೊಡಲಿದ್ದಾರೆ. ಈ ಹಿಂದೆ ನಿಮ್ಮಿಂದ ಆದಂಥ ಸಹಾಯವನ್ನು ನೆನಪಿನಲ್ಲಿ ಇಟ್ಟುಕೊಂಡು, ಸ್ನೇಹಿತರು ಈಗ ನಿಮ್ಮ ಅಗತ್ಯಕ್ಕೆ ಸ್ಪಂದಿಸಲಿದ್ದಾರೆ. ಬ್ಯಾಂಕ್ ನಲ್ಲಿ ಲಾಕರ್ ಅನ್ನು ಪಡೆದುಕೊಳ್ಳುವುದಕ್ಕೆ ನಿಮ್ಮಲ್ಲಿ ಕೆಲವರು ಪ್ರಯತ್ನವನ್ನು ಮಾಡಲಿದ್ದೀರಿ. ಅಥವಾ ಮನೆಗೆ ಅಂಥ ಲಾಕರ್ ಅನ್ನು ಖರೀದಿಸಿ ತರುವಂಥ ಸಾಧ್ಯತೆ ಇದೆ.

ಲೇಖನ- ಸ್ವಾತಿ ಎನ್.ಕೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 22ರ ದಿನಭವಿಷ್ಯ

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ನನ್ನ ಕೆಲಸ ಎಷ್ಟೋ ಅಷ್ಟರ ಬಗ್ಗೆ ಮಾತ್ರ ಗಮನ ಹರಿಸುತ್ತೇನೆ ಎಂಬ ಮನಸ್ಥಿತಿಯಲ್ಲಿ ನೀವು ಇರುತ್ತೀರಿ. ಅರ್ಥಾತ್ ಎಷ್ಟು ಹಣ ಬರುತ್ತದೋ ಅದಕ್ಕೆ ತಕ್ಕಂತೆ ಕೆಲಸ ಎಂಬುದನ್ನು ಗಟ್ಟಿ ಮಾಡಿಕೊಂಡು, ಬದ್ಧರಾಗಿ ನಿಲ್ಲಲಿದ್ದೀರಿ. ದೇವಸ್ಥಾನಕ್ಕೆ ಅಥವಾ ನಿಮ್ಮ ಧಾರ್ಮಿಕ ನಂಬಿಕೆಗೆ ಅನುಸಾರವಾಗಿ ಸ್ವಲ್ಪ ಸಮಯ ಪ್ರಶಾಂತತೆ, ನೆಮ್ಮದಿ ನೀಡುವಂಥ ಸ್ಥಳಕ್ಕೆ ತೆರಳುವುದರಿಂದ ಸಮಾಧಾನದಿಂದ ಇರಲು ಸಾಧ್ಯವಾಗುತ್ತದೆ. ಅಡುಗೆ ಕಾಂಟ್ರಾಕ್ಟ್ ತೆಗೆದುಕೊಳ್ಳುವಂಥವರಿಗೆ ದೀರ್ಘಾವಧಿಗೆ ಆರ್ಡರ್ ದೊರೆಯಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಯಾರಿಗೋ ಬಯ್ಯುವುದಕ್ಕೆ ಹೋಗಿ ಇನ್ಯಾರ ಜತೆಗೋ ಮನಸ್ತಾಪ ಮಾಡಿಕೊಳ್ಳಲಿದ್ದೀರಿ. ಸಿಟ್ಟು- ಕೋಪ- ಆಕ್ಷೇಪವನ್ನು ಹೊರಹಾಕುವುದಕ್ಕೆ ಸರಿಯಾದ ಮಾರ್ಗವನ್ನು ಹುಡುಕಿಕೊಳ್ಳುವುದು ಬಹಳ ಮುಖ್ಯ. ವ್ಯಾಪಾರ- ವ್ಯವಹಾರಗಳಲ್ಲಿ ಇರುವವರು ಮುಖ ಹರಿದುಕೊಳ್ಳುವಂತೆ ನಿರ್ದಾಕ್ಷಿಣ್ಯವಾಗಿ ಮಾತನಾಡುವುದಕ್ಕೆ ಹೋಗಬೇಡಿ. ಹೀಗೆ ಮಾಡುವುದರಿಂದ ದೀರ್ಘ ಅವಧಿಗೆ ನಿಮಗೆ ಆಗಬಹುದಾದ ಲಾಭವನ್ನು ಕಳೆದುಕೊಳ್ಳುವಂತೆ ಆಗಲಿದೆ. ನೀವು ಹುಡುಕುತ್ತಿದ್ದ ಮುಖ್ಯ ದಾಖಲೆಗಳು ಸಿಗಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ನಿಮ್ಮ ಆಲೋಚನೆಗೆ ಹೊಂದುವಂಥ, ನಿಮ್ಮ ಉದ್ದೇಶಕ್ಕೆ ತಕ್ಕಂತೆ ಕೆಲಸ ಮಾಡುವಂಥ ಜನರು ಇಲ್ಲವಲ್ಲ ಎಂಬುದು ಚಿಂತೆಗೆ ಕಾರಣ ಆಗಲಿದೆ. ಒಂದು ವಿಷಯವನ್ನು ಹತ್ತು ಸಲ ಹೇಳಿದ ನಂತರವೂ ಅದೇ ತಪ್ಪು ಪುನರಾವರ್ತನೆ ಆಗುತ್ತಾ ಇದೆ ಎಂಬುದು ನಿಮ್ಮ ಸಿಟ್ಟಿನ ಮೂಲ ಆಗಲಿದೆ. ಸ್ನೇಹಿತರು ಕೂಡ ನಿಮ್ಮ ಜೊತೆಗೆ ಮಾತನಾಡುವಾಗ ಅನ್ಯಮನಸ್ಕರಾಗಿ ಇರಲಿದ್ದಾರೆ. ಮೊದಲಿನ ಆಸಕ್ತಿ- ಉತ್ಸಾಹದಿಂದ ನಿಮ್ಮನ್ನು ಕೇಳಿಸಿಕೊಳ್ಳುತ್ತಿಲ್ಲ ಎಂದು ಪದೇಪದೇ ಅನಿಸಲಿದೆ. ನೀವು ಬಂದೇ ಬರುತ್ತದೆ ಎಂದುಕೊಂಡಿದ್ದ ಹಣವೊಂದು ಬಾರದೆ ಗೊಂದಲಕ್ಕೆ ಕಾರಣ ಆಗಲಿದೆ.

ಲೇಖನ- ಸ್ವಾತಿ ಎನ್.ಕೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 22ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಯಾಕೆ ಒಪ್ಪಿಕೊಂಡೆ ಎಂದು ಹಲಬುವ ರೀತಿಯಲ್ಲಿ ಒಬ್ಬ ವ್ಯಕ್ತಿಯು ಕೆಲಸವೊಂದರ ಸಲುವಾಗಿ ನಿಮ್ಮ ಬೆನ್ನು ಹತ್ತಿ ಇನ್ನಿಲ್ಲದಂತೆ ಕಾಡಲಿದ್ದಾರೆ. ಕ್ರಿಯೇಟಿವ್ ಉದ್ಯೋಗ- ವೃತ್ತಿಯಲ್ಲಿ ಇರುವವರಿಗೆ ಡೆಡ್ ಲೈನ್ ಒಳಗಾಗಿ ಕೆಲಸ ಮುಗಿಸಲೇಬೇಕು ಎಂದು ಸೂಚನೆ ಬಂದು, ಬಹುತೇಕ ಇಡೀ ದಿನ ಕುಟುಂಬದ ವಿಚಾರಗಳಿಗೆ ಗಮನವೇ ನೀಡಲು ಸಾಧ್ಯವಿಲ್ಲದಂತೆ ಆಗಲಿದೆ. ಈ ಮಧ್ಯೆ ಕೆಲವರು ನಿಮಗೆ ಅಹಂಕಾರ ಎಂದು ಅಪಪ್ರಚಾರ ಮಾಡಿಕೊಂಡು ಬರಲಿದ್ದಾರೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಹಲವು ವಿಚಾರಗಳಲ್ಲಿ ಸಂತುಷ್ಟತೆ ಇರಲಿದೆ. ಈಗಾಗಲೇ ಸೈಟು ಇದೆ ಎಂದಾದಲ್ಲಿ ಅಲ್ಲಿ ಮನೆ ನಿರ್ಮಾಣ ಮಾಡುವುದಕ್ಕಾಗಿ ಸಂಬಂಧ ಪಟ್ಟ ವ್ಯಕ್ತಿಗಳ ಜತೆಗೆ ಮಾತುಕತೆ ನಡೆಸುವಂಥ ಸಾಧ್ಯತೆ ಇದೆ. ನೀವು ವಿವಾಹ ವಯಸ್ಕರಾಗಿದ್ದಲ್ಲಿ ಯಾರ ಬಗ್ಗೆ ನೀವು ಪ್ರೀತಿ ಇರಿಸಿಕೊಂಡಿದ್ದಿರೋ ಅವರೇ ನಿಮ್ಮ ಬಳಿ ಬಂದು ಪ್ರೇಮ ನಿವೇದನೆ ಮಾಡುವಂಥ ಯೋಗ ಇದೆ. ನಿಮಗೆ ಸ್ಪಷ್ಟವಾದ ವಿಷಯಗಳನ್ನು ಹೇಳುವುದಕ್ಕೆ ಹಿಂಜರಿಕೆ ಬೇಡ. ಯಾರು- ಏನೆಂದು ಕೊಳ್ತಾರೋ ಅಂತ ಅವಕಾಶಗಳನ್ನು ಕಳೆದುಕೊಳ್ಳುವಂತಾಗುತ್ತದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಹಣದ ಬಗ್ಗೆ ವಿಪರೀತ ಗಾಂಭೀರ್ಯ ಬರುವಂಥ ದಿನ ಇದಾಗಿರುತ್ತದೆ. ಇಷ್ಟು ಅವಧಿಯಲ್ಲಿ ಇಂಥಿಷ್ಟು ಮೊತ್ತವನ್ನು ಕೂಡಿಡಲೇ ಬೇಕು ಎಂದು ಸಂಕಲ್ಪ ಮಾಡಿಕೊಳ್ಳಲಿದ್ದೀರಿ. ಈಗ ಮಾಡುತ್ತಿರುವ ಉದ್ಯೋಗ, ವೃತ್ತಿ, ವ್ಯವಹಾರ- ವ್ಯಾಪಾರ ಜೊತೆಗೆ ಆದಾಯ ಮೂಲವನ್ನು ಜಾಸ್ತಿ ಮಾಡಿಕೊಳ್ಳುವುದಕ್ಕೆ ಬೇಕಾದ ಪ್ರಯತ್ನಗಳನ್ನು ಶುರು ಮಾಡಲಿದ್ದೀರಿ. ನಿಮಗೆ ಬಹಳ ಹತ್ತಿರವಾದ ಸ್ನೇಹಿತರು ಪರಿಚಯ ಮಾಡಿಸುವಂಥ ವ್ಯಕ್ತಿಗಳಿಂದ ಹಲವು ರೀತಿಯಲ್ಲಿ ಅನುಕೂಲಗಳು ಒದಗಲಿವೆ.

ಲೇಖನ- ಸ್ವಾತಿ ಎನ್.ಕೆ.

Source link

ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕ: ಜಾಗತಿಕ ಶಕ್ತಿಯ ಲೆಕ್ಕಾಚಾರವನ್ನೇ ಬದಲಿಸಿದ ಭಾರತ – Kannada News | Responsible Nations Index: How India Is Reframing Global Power

ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕ

ಜಾಗತಿಕವಾಗಿ ವಿವಿಧ ದೇಶಗಳನ್ನು ವಿವಿಧ ರೀತಿಯಲ್ಲಿ ಅಳೆಯಲು ಬೇರೆ ಬೇರೆ ಸೂಚ್ಯಂಕಗಳಿವೆ. ಇವೆಲ್ಲವನ್ನೂ ರಚಿಸುವ ಏಜೆನ್ಸಿಗಳೆಲ್ಲವೂ ಪಾಶ್ಚಿಮಾತ್ಯರದ್ದೇ ಆಗಿವೆ. ಬಡತನ, ಪ್ರಜಾತಂತ್ರ, ಸಾಮಾಜಿಕ ಭದ್ರತೆ, ಭ್ರೂಣಹತ್ಯೆ, ಅಲ್ಪಸಂಖ್ಯಾತ ರಕ್ಷಣೆ ಇತ್ಯಾದಿ ನಾನಾ ವಿಷಯಗಳಿಗೆ ಗ್ಲೋಬಲ್ ಇಂಡೆಕ್ಸ್​ಗಳಿವೆ. ಇವುಗಳಲ್ಲಿ ಭಾರತಕ್ಕೆ ಸಿಗುವ ಸ್ಥಾನಮಾನ ಅಷ್ಟಕಷ್ಟೇ. ಭಾರತದಲ್ಲಿ ಪ್ರಜಾತಂತ್ರಾತ್ಮಕ ವ್ಯವಸ್ಥೆ ಶಿಥಿಲವಾಗಿದೆ ಎಂದು ಕೆಲ ಏಜೆನ್ಸಿಗಳು ವರದಿ ಮಾಡುವುದಿದೆ. ಯಾವ ಮಾನದಂಡ ಅಥವಾ ಅಳತೆಗೋಲು ಇಟ್ಟುಕೊಂಡು ದೇಶಗಳ ಪರಿಸ್ಥಿತಿಯನ್ನು ಅಂದಾಜಿಸುತ್ತಾರೆ ಎಂಬುದು ಸಂಶಯಕ್ಕೆ ಎಡೆ ಮಾಡುವಂತಿರುತ್ತದೆ. ಭಾರತದಂತಹ ವಿಸ್ತಾರವಾದ, ವೈವಿಧ್ಯಮಯವಾದ ದೇಶದಲ್ಲಿ ಅಂಕಿ ಅಂಶಗಳನ್ನು ಪಡೆಯುವುದು ಸರಳವಲ್ಲ. ಹೀಗಾಗಿ, ಹೆಚ್ಚಿನ ಸೂಚ್ಯಂಕಗಳಲ್ಲಿ ಭಾರತದ ಬಗ್ಗೆ ಮಾಡುವ ಅಂದಾಜು ಸತ್ಯಕ್ಕೆ ದೂರವೇ ಇರುತ್ತದೆ.

ಇಷ್ಟು ವರ್ಷ ಈ ಗ್ಲೋಬಲ್ ಏಜೆನ್ಸಿಗಳ ಶ್ರೇಯಾಂಕ ಕ್ರಮವನ್ನು ಭಾರತ ಸಹಿಸಿಕೊಂಡಿದ್ದು ಹೌದು. ಈಗ ಅದನ್ನು ಪ್ರಶ್ನಿಸಲು ಆರಂಭಿಸಿದೆ. ಆಡಳಿತ, ಪ್ರಜಾಪ್ರಭುತ್ವ, ರಾಷ್ಟ್ರೀಯ ಜವಾಬ್ದಾರಿಗಳನ್ನು ಜಾಗತಿಕವಾಗಿ ಅಳೆಯುವಂತಹ ಮಾನದಂಡಗಳ ಬಗ್ಗೆಯೇ ಭಾರತ ಧ್ವನಿ ಎತ್ತತೊಡಗಿದೆ.

ಇದರ ಒಂದು ಪರಿಣಾಮವೇ ರೆಸ್ಪಾನ್ಸಿಬಲ್ ನೇಶನ್ಸ್ ಇಂಡೆಕ್ಸ್ ಅಥವಾ ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕ (RNI- Responsible Nations Index). ಪೂರ್ವಗ್ರಹದಿಂದ ಕೂಡಿದ, ಮತ್ತು ಬಾಹ್ಯ ಪ್ರಭಾವಿತ ಗ್ಲೋಬಲ್ ರ್ಯಾಂಕಿಂಗ್​ಗಳಿಗೆ ಪರ್ಯಾಯವಾಗಿ ರೆಸ್ಪಾನ್ಸಿಬಲ್ ನೇಶನ್ಸ್ ಇಂಡೆಕ್ಸ್ ಅಥವಾ ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕದಲ್ಲಿ ಪಾರದರ್ಶಕವಾದ ಮತ್ತು ದತ್ತಾಂಶ ಆಧಾರಿತವಾದ ವ್ಯವಸ್ಥೆ ಇದೆ.

ಈ ಬದಲಾವಣೆಗೆ ಬೌದ್ಧಿಕ ತಳಹದಿ ನಿರ್ಮಾಣವಾಗಿದ್ದು 2022ರಲ್ಲಿ. ಆರ್ಥಿಕ ತಜ್ಞರಾದ ಸಂಜೀವ್ ಸಾನ್ಯಾಲ್ ಅವರು ಭಾರತದಂತಹ ದೇಶಗಳ ಮೌಲ್ಯಮಾಪನ ಮಾಡುವ ಜಾಗತಿಕ ಸೂಚ್ಯಂಕಗಳ ವಿಶ್ವಾಸಾರ್ಹತೆ ಹಾಗೂ ಕ್ರಮಬದ್ಧತೆಯನ್ನು ಸಾರ್ವಜನಿಕವಾಗಿ ಪ್ರಶ್ನಿಸುವುದರೊಂದಿಗೆ ಪರ್ಯಾಯ ಸಿಸ್ಟಂ ರೂಪುಗೊಳ್ಳಲು ಆರಂಭಿಸಿತು.

ಈ ಹಲವು ಸೂಚ್ಯಂಕಗಳು ಅಸ್ಪಷ್ಟ ಪ್ರಶ್ನೆಗಳಿಂದ ಕೂಡಿದ, ಪೂರ್ವಗ್ರಹ ಪೀಡಿತ ಮಾಧ್ಯಮ ದೃಷ್ಟಿಕೋನಗಳನ್ನು ಹೊಂದಿರುವ ಮತ್ತು ಪಾರದರ್ಶಕವಲ್ಲದ ಸಣ್ಣ ಸಮೀಕ್ಷೆಗಳನ್ನು ಆಧರಿಸಿರುತ್ತವೆ. 2014ರ ನಂತರದ ಭಾರತದ ಬಗ್ಗೆ ಈ ಸೂಚ್ಯಂಕಗಳು ಕಳಪೆ ಸ್ಥಾನ ಕೊಡುತ್ತಲೇ ಬಂದಿವೆ. ಮತದಾನ ಪ್ರಮಾಣ, ಅಲ್ಪಸಂಖ್ಯಾತರ ರಾಜಕೀಯ ಪ್ರಾತಿನಿಧ್ಯ ಮತ್ತು ಕಲ್ಯಾಣ ಕಾರ್ಯಕ್ರಮಗಳಂತಹ ಸಾಕ್ಷ್ಯಗಳನ್ನು ಈ ಸಮೀಕ್ಷೆಗಳಲ್ಲಿ ಉಪೇಕ್ಷಿಸಲಾಗಿರುವುದು ಕಂಡು ಬರುತ್ತದೆ.

ಇದನ್ನೂ ಓದಿ: ಜವಾಬ್ದಾರಿಯುತ ದೇಶಗಳ ಸೂಚ್ಯಂಕ; ಅಮೆರಿಕ, ಚೀನಾಗಿಂತ ಭಾರತ ಮೇಲೆ; ಪಾಕಿಸ್ತಾನ ಮತ್ತಿತರ ದೇಶಗಳು ಹೇಗೆ?

ಸಂಜೀವ್ ಸಾನ್ಯಾಲ್ ಅವರು ಈ ವೈರುದ್ಧ್ಯವನ್ನು ಎತ್ತಿ ತೋರಿಸಲು ಆರಂಭಿಸಿದರು. ಈ ರ್ಯಾಂಕಿಂಗ್​ಗಳಲ್ಲಿ ಕಾಣುವ ಅತಾರ್ಕಿಕ ಹೋಲಿಕೆಗಳನ್ನು ಬೆತ್ತಲುಗೊಳಿಸತೊಡಗಿದರು. ಬಹಳ ದುರ್ಬಲ ಪ್ರಜಾತಂತ್ರ ವ್ಯವಸ್ಥೆ ಹೊಂದಿರುವ ಸಣ್ಣ ದೇಶಗಳಿಗಿಂತ ಕಳಪೆ ಸ್ಥಾನವನ್ನು ಭಾರತಕ್ಕೆ ನೀಡಲಾಗುತ್ತಿರುವುದನ್ನು ಪ್ರಶ್ನೆ ಮಾಡಿದರು.

ಈ ರೀತಿಯ ಕಳಪೆ ಮೌಲ್ಯಮಾಪನದಿಂದ ಏನು ಸಮಸ್ಯೆ?

ಗ್ಲೋಬಲ್ ರ್ಯಾಂಕಿಂಗ್​ಗಳಲ್ಲಿ ದೇಶಗಳ ಬಗ್ಗೆ ಮಾಡಲಾಗುವ ಮೌಲ್ಯಮಾಪನದಿಂದ ಹಾನಿ ಆಗೋದಿಲ್ಲ ಎಂದು ಮೇಲ್ನೋಟಕ್ಕೆ ಅನಿಸಬಹುದು. ಆದರೆ, ಸಂಜೀವ್ ಸಾನ್ಯಾಲ್ ಅವರು ಈ ರೀತಿಯ ರ್ಯಾಂಕಿಂಗ್​ಗಳು ಹೇಗೆ ಬೇರೆ ಬೇರೆ ರೀತಿಯಲ್ಲಿ ದೇಶಕ್ಕೆ ಪರೋಕ್ಷವಾಗಿ ಹಾನಿ ಮಾಡುತ್ತದೆ ಎಂಬುದನ್ನು ವಿವರಿಸುತ್ತಾರೆ. ಭಾರತದ ಆರ್ಥಿಕತೆ ಹಾಗೂ ಘನತೆಗೆ ಹಾನಿ ಉಂಟು ಮಾಡಬಹುದಾದಂತಹ ವಿಶ್ವ ಬ್ಯಾಂಕ್ ಸೂಚಕಗಳು, ಸಾವರಿನ್ ಕ್ರೆಡಿಟ್ ರೇಟಿಂಗ್ಸ್, ಇಎಸ್​ಜಿ ಹೂಡಿಕೆ ನಿರ್ಧಾರಗಳು, ಜಾಗತಿಕ ಮಾಧ್ಯಮ ದೃಷ್ಟಿಕೋನ ಇತ್ಯಾದಿಯ ಮೇಲೆ ಇವುಗಳು ಪ್ರಭಾವ ಬೀರುವ ಸಾಧ್ಯತೆ ಇರುವುದನ್ನು ಸಾನ್ಯಾಲ್ ಗುರುತಿಸಿದರು.

ಅಸಮರ್ಪಕ ರ್ಯಾಂಕಿಂಗ್​ಗಳನ್ನು ಬಾರಿ ಬಾರಿ ಪ್ರಶ್ನಿಸುವುದರ ಬದಲು ಭಾರತ ತಾನೇ ಸ್ವಂತವಾಗಿ ರೂಪಿಸಿದ ಪಾರದರ್ಶಕವಾದ, ದತ್ತಾಂಶ ಆಧಾರಿತವಾದ ಸೂಚ್ಯಂಕಗಳನ್ನು ರೂಪಿಸಿ, ಆ ಮೂಲಕ ಜಾಗತಿಕ ಮೌಲ್ಯಮಾಪನದಲ್ಲಿ ಪಾಶ್ಚಿಮಾತ್ಯ ದೇಶಗಳ ಪ್ರಾಬಲ್ಯವನ್ನು ಮೆಟ್ಟಿ ನಿಲ್ಲುವುದು ಅವಶ್ಯ ಎನಿಸಿತು.

ಈ ಒಂದು ಐಡಿಯಾಗೆ ನಿರ್ದಿಷ್ಟ ಸ್ವರೂಪ ಸಿಕ್ಕಿದ್ದು 2026ರ ಜನವರಿ 19ರಂದು. ಅಂದು ಭಾರತದಿಂದ ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕ ಬಿಡುಗಡೆ ಆಯಿತು. ಭಾರತ ಹಾಗೂ ತೃತೀಯ ಜಗತ್ತಿನ ನೇತೃತ್ವದಲ್ಲಿ ರೂಪುಗೊಂಡ ಮೊದಲ ಗ್ಲೋಬಲ್ ಇಂಡೆಕ್ಸ್ ಇದೆನಿಸಿದೆ.

ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಉದ್ಘಾಟನೆ

ಜೆಎನ್​ಯು ಯೂನಿವರ್ಸಿಟಿ, ಐಐಎಂ ಮುಂಬೈ, ಡಾ. ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್ ಜೊತೆ ಸಹಯೋಗದಲ್ಲಿ ವರ್ಲ್ಡ್ ಇಂಟೆಲೆಕ್ಚುವಲ್ ಫೌಂಡೇಶನ್ ಈ ಸೂಚ್ಯಂಕ ರೂಪಿಸಲು ಶ್ರಮ ಹಾಕಿದೆ. 2026ರ ಜನವರಿ 19ರಂದು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ದೆಹಲಿಯಲ್ಲಿ ಇದನ್ನು ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: G-RAM-G: ಜಿ ರಾಮ್‌ ಜಿ ಕಾಯ್ದೆ- ಮತ್ತಷ್ಟು ಉದ್ಯೋಗ, ಮತ್ತಷ್ಟು ಭದ್ರತೆ

ಭಾರತದ ಶೈಕ್ಷಣಿಕ ಸಂಸ್ಥೆಗಳ ಆತ್ಮವಿಶ್ವಾಸ ಹೆಚ್ಚಳ

ರೆಸ್ಪಾನ್ಸಿಬಿಲಿಟಿ ನೇಶನ್ಸ್ ಇಂಡೆಕ್ಸ್ ಮೂಲಕ ಭಾರತವು ಪಾಶ್ಚಿಮಾತ್ಯ ನಿಯಂತ್ರಿತ ರ್ಯಾಂಕಿಂಗ್​ಗಳಿಗೆ ಸವಾಲೊಡ್ಡುವಂತಿದೆ. ಭಾರತದ ಶೈಕ್ಷಣಿಕ ಮತ್ತು ನೀತಿ ಸಂಸ್ಥೆಗಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತಿರುವುದು ಮತ್ತು ಅವು ಜಾಗತಿಕವಾಗಿ ಮಾದರಿ ನಿರ್ಮಿಸುತ್ತಿರುವುದು ಎದ್ದು ಕಾಣುತ್ತಿದೆ.

ಜಾಗತಿಕವಾಗಿ ಈ ಸೂಚ್ಯಂಕವು ಪ್ರಸ್ತುತ ಎನಿಸುತ್ತದೆ. ಆಫ್ರಿಕಾ, ಲ್ಯಾಟಿನ್ ಅಮೆರಿಕ, ಆಗ್ನೇಯ ಏಷ್ಯ ಮತ್ತು ಪಶ್ಚಿಮ ಏಷ್ಯಾದ ರಾಷ್ಟ್ರಗಳಿಗೆ ಈ ಸೂಚ್ಯಂಕವು ಪಾಶ್ಚಿಮಾತ್ಯ ದೃಷ್ಟಿಕೋನಕ್ಕೆ ಉತ್ತಮ ಪರ್ಯಾಯ ಎಂದನಿಸುತ್ತದೆ.

ಮುಖ್ಯವಾದ ಸಂಗತಿ ಎಂದರೆ, ಈ ಪರಿವರ್ತನೆಯು ಸಂಘರ್ಷದಿಂದ ಕೂಡಿಲ್ಲ. ಪರ್ಯಾಯಗಳನ್ನು ನೀಡುವ ಮೂಲಕ ಭಾರತವು ಪಾಶ್ಚಿಮಾತ್ಯ ವ್ಯವಸ್ಥೆಗಳ ಮೇಲಿನ ಅವಲಂಬನೆಯನ್ನು ಕ್ರಮೇಣವಾಗಿ ಕಡಿಮೆ ಮಾಡುತ್ತಾ ಬರುತ್ತಿದೆ. ಸಮತೋಲಿತವಾದ ಜಾಗತಿಕ ಕ್ರಮಾಂಕಕ್ಕೆ ಕೊಡುಗೆ ನೀಡುತ್ತಾ ಬರುತ್ತಿದೆ. ರಾಜತಾಂತ್ರಿಕವಾಗಿ ಹೇಳುವುದಾದರೆ, ಈ ಸೂಚ್ಯಂಕವು ತನ್ನ ಸ್ಟ್ರಕ್ಚರ್ಡ್ ಡಾಟಾ ಮೂಲಕ ಹೂಡಿಕೆ ಹರಿವು, ಕ್ರೆಡಿಟ್ ರೇಟಿಂಗ್, ಇಎಸ್​ಜಿ ಸ್ಕೋರ್, ಮೀಡಿಯಾ ದೃಷ್ಟಿಕೋನದ ಮೇಲೆ ಪ್ರಭಾವ ಬೀರಬಲ್ಲುದು.

ಜವಾಬ್ದಾರಿಯು ರಾಷ್ಟ್ರಗಳ ಸೂಚ್ಯಂಕ ರೂಪಿಸುವ ಮೂಲಕ ಭಾರತವು ಗ್ಲೋಬಲ್ ಸೌತ್ ಅಥವಾ ಅಭಿವೃದ್ಧಿಶೀಲ ದೇಶಗಳ ನಾಯಕತ್ವವನ್ನು ಸ್ವಾಭಾವಿಕವಾಗಿ ಪಡೆಯುವಂತೆ ಮಾಡುತ್ತದೆ. ನ್ಯಾಯಯುತ ಜವಾಬ್ದಾರಿ ಮತ್ತು ಸಮಗ್ರ ಅಭಿವೃದ್ಧಿ ಸೇರಿದಂತೆ ಜಿ20ಯಲ್ಲಿನ ಭಾರತದ ಆದ್ಯತೆಗಳೊಂದಿಗೆ ಈ ಸೂಚ್ಯಂಕ ತಾಳೆಯಾಗುತ್ತದೆ.

ಇದನ್ನೂ ಓದಿ: 2025ರಲ್ಲಿ ಸರ್ಕಾರ ತೆಗೆದುಕೊಂಡ ಪ್ರಮುಖ ಸುಧಾರಣೆಗಳಿವು…

ಇನ್ನೂ ಸೂಕ್ಷ್ಮವಾಗಿ ಗಮನಿಸಿದಾಗ, ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕವು ಏನು ಪರಿವರ್ತನೆ ತಂದಿದೆ ಎಂಬುದು ಕಾಣುತ್ತದೆ. ಈ ಮುಂಚೆ ಭಾರತವು ಇತರರಿಂದ ಮೌಲ್ಯಮಾಪನ ಪಡೆಯುತ್ತಿತ್ತು. ಈಗ ಜಾಗತಿಕ ಪ್ರಮಾಣಗಳು ಹೇಗಿರಬೇಕೆಂದು ವ್ಯಾಖ್ಯಾನ ಮಾಡಲು ಭಾರತ ಸಹಾಯ ಮಾಡುತ್ತಿದೆ. ಆ ಮಟ್ಟಿಗೆ ಪರಿವರ್ತನೆ ಕಾಣಬಹುದು. ಜ್ಞಾನ ಒಂದೇ ಗುಂಪಿಗೆ ಸೀಮಿತವಲ್ಲ ಎಂಬುದನ್ನು ಭಾರತ ತೋರಿಸಿದೆ.

ಈ ರೆಸ್ಪಾನ್ಸಿಬಲ್ ನೇಶನ್ಸ್ ಇಂಡೆಕ್ಸ್​ನಿಂದ ಪ್ರೇರಿತವಾಗಿ, ಭಾರತದ ನಾಯಕತ್ವದಲ್ಲಿ ಮತ್ತಷ್ಟು ಗ್ಲೋಬಲ್ ಇಂಡೆಕ್ಸ್​ಗಳು ಹೊರಹೊಮ್ಮಬಹುದು. ಡಿಜಿಟಲ್ ಗವರ್ನೆನ್ಸ್, ಇನ್​ಪ್ರಾಸ್ಟ್ರಕ್ಚರ್ ಸಸ್ಟೈನಬಿಲಿಟಿ, ಇನ್ನೋವೇಶನ್ ಇತ್ಯಾದಿ ಕ್ಷೇತ್ರಗಳಲ್ಲಿ ಪಾಶ್ಚಿಮಾತ್ಯರ ಕಣ್ಣಿಗೆ ನಿಲುಕದ ವೈವಿಧ್ಯ ಜಗತ್ತಿನ ಶಕ್ತಿಯನ್ನು ಬಿಂಬಿಸುವ ಬೇರೆ ಬೇರೆ ಗ್ಲೋಬಲ್ ಇಂಡೆಕ್ಸ್​ಗಳನ್ನು ಭಾರತದಿಂದ ಬರಬಹುದು.

ಕೊನೆಯದಾಗಿ ಹೇಳುವುದಾದರೆ ಈ ಸೂಚ್ಯಂಕವು ಸಾಂಕೇತಿಕಕ್ಕೆ ಸೀಮಿತವಾಗಿರುವುದಿಲ್ಲ. ದೀರ್ಘಕಾಲದ ವಿಮರ್ಶೆಯನ್ನು ಜಾಗತಿಕ ಚರ್ಚೆಗಳಿಗೆ ಅನುವು ಮಾಡಿಕೊಡಬಲ್ಲ ಸಾಂಸ್ಥಿಕ ರಚನೆಯಾಗಿ ಭಾರತ ಪರಿವರ್ತನೆ ಮಾಡಿರುವುದನ್ನು ಗಮನಿಸಬಹುದು. ಭಾರತವು ಸೂಚ್ಯಂಕಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವುದಕ್ಕಷ್ಟೇ ಸೀಮಿತವಾಗದೆ, ನಿಯಮಗಳ ರಚನೆಯ ಕೈಂಕರ್ಯ ಮಾಡಲು ಆರಂಭಿಸಿದೆ. ನೈತಿಕತೆ, ಸುಸ್ಥಿರತೆ ಮತ್ತು ಸಮಾನತೆಯ ತಳಹದಿಯಲ್ಲಿ ಜಾಗತಿಕ ಆಡಳಿತದಲ್ಲಿ ಭಾರತವು ಅಜೆಂಡಾ ರೂಪಿಸಲು ಆರಂಭಿಸಿದೆ. ಇದು ಭಾರತದ ಸಾಫ್ಟ್ ಪವರ್​ನ ಅನಾವರಣ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಮೊದಲ ಟಿ20 ಪಂದ್ಯವನ್ನು 48 ರನ್​ಗಳಿಂದ ಗೆದ್ದ ಟೀಂ ಇಂಡಿಯಾ – Kannada News | India vs New Zealand T20: India Wins First Match by 48 Runs in Nagpur

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿ ಆರಂಭವಾಗಿದೆ. ಸರಣಿಯ ಮೊದಲ ಪಂದ್ಯ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯವನ್ನು ಆತಿಥೇಯ ಟೀಂ ಇಂಡಿಯಾ 48 ರನ್​ಗಳಿಂದ ಗೆದ್ದುಕೊಳ್ಳುವ ಮೂಲಕ ಸರಣಿಯನ್ನು ಗೆಲುವಿನೊಂದಿಗೆ ಶುರು ಮಾಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ದಾಖಲೆಯ 239 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 20 ಓವರ್​ಗಳಲ್ಲಿ 190 ರನ್ ಕಲೆಹಾಕವಾಯಿತು.

Source link

ಟ್ರಾಫಿಕ್​​​ನಿಂದ ಬೇಸತ್ತಿರುವ ಬೆಂಗಳೂರಿಗರಿಗೆ ಗುಡ್​ನ್ಯೂಸ್, ಕೇಂದ್ರದತ್ತ ಎಲ್ಲರ ಚಿತ್ತ – Kannada News | Namma Metro Phase 3A: Hebbal To Sarjapur Red Line DPR Report Ready, here Is Full details

ಬೆಂಗಳೂರು, (ಜನವರಿ 21): ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್​​ಗೆ  (Bengaluru Traffic) ಜನ ಬೇಸತ್ತಿದ್ದಾರೆ. ಅದರಲ್ಲೂ ಕೆಲ ಏರಿಯಾಗಳಿಗೆ ಹೋಗಬೇಕಂದರೆ ಟ್ರಾಫಿಕ್ ಎಂಬ ಸಾಗರವನ್ನು ದಾಟಿಕೊಂಡು ಹೋಗಬೇಕು. ಹೌದು..ಹೆಬ್ಬಾಳ-ಸರ್ಜಾಪುರ (Hebbal To Sarjapur)ಮಾರ್ಗದ ರಸ್ತೆ ಯಾವಾಗಲೂ ವಾಹನಗಳಿಂದ ತುಂಬಿ ತುಳುಕುತ್ತಿರುತ್ತೆ. ಹೀಗಾಗಿ ಈ ಮಾರ್ಗದಲ್ಲಿ ವಾಹನ ಸವಾರರು ಟ್ರಾಫಿಕ್ ಕಿರಿಕಿರಿಗೆ ಬೇಸತ್ತು ಹೋಗಿದ್ದಾರೆ. ಇದರಿಂದ ಈ ಮಾರ್ಗದಲ್ಲಿ ಮೆಟ್ರೋ ಓಡಾಡಿಸಲು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ನಡೆಯುತ್ತಿರುವ ಚರ್ಚೆ ಅಂತಿಮ ಹಂತಕ್ಕೆ ಬಂದಿದೆ. ಆದ್ದರಿಂದ ಶೀಘ್ರದಲ್ಲೇ ಮೆಟ್ರೋ ಹಂತ 3A ಯೋಜನೆ ಆರಂಭಕ್ಕೆ ಸಿದ್ದತೆ ನಡೆಯುತ್ತಿದ್ದು, ಹೆಬ್ಬಾಳ-ಸರ್ಜಾಪುರವರೆಗೆ ವಿಸ್ತೃತ ಕೆಂಪು ಮಾರ್ಗ (Hebbal To Sarjapur Red Line Metro) ನಿರ್ಮಾಣವಾಗಲಿದೆ.

ಅಂತಿಮ ಡಿಪಿಆರ್ ವರದಿ ಸಿದ್ಧ

ಈ ಯೋಜನೆಗೆ ಈ ಹಿಂದೆ ರಾಜ್ಯ ಸರ್ಕಾರ 28,405 ಕೋಟಿ ರೂ. ಡಿಪಿಆರ್ ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ ಇದಕ್ಕೆ ಕೇಂದ್ರ ಸರ್ಕಾರ, ಯೋಜನಾ ವೆಚ್ಚ ಹೆಚ್ಚಾಗಿದೆ ವೆಚ್ಚ ಕಡಿಮೆ ಮಾಡಿ ಎಂದು ಸೂಚನೆ ನೀಡಿತ್ತು. ಈ ಹಿನ್ನೆಲೆ ರಾಜ್ಯ ಸರ್ಕಾರ ಥರ್ಡ್ ಪಾರ್ಟಿಯಿಂದ ಮತ್ತೊಮ್ಮೆ ಹೊಸ DPR ರೆಡಿ ಮಾಡಿಸಿದ್ದು, ಇದರಲ್ಲಿ 28,405 ಕೋಟಿಯಿಂದ 25,485 ಕೋಟಿ ರೂ. ವೆಚ್ಚವನ್ನು ಇಳಿಸಲಾಗಿದೆ. ಅಂದರೆ 2,920 ಕೋಟಿಯಷ್ಟು ಯೋಜನಾ ವೆಚ್ಚವನ್ನು ಕಡಿಮೆ ಮಾಡಲಾಗಿದೆ.

ಇದನ್ನೂ ಓದಿ: ವಿಮಾನ ಪ್ರಯಾಣಿಕರೇ ಗಮನಿಸಿ: ಬೆಂಗಳೂರು ಏರ್​​ಪೋರ್ಟ್​​ನಿಂದ ಮಹತ್ವದ ಸೂಚನೆ; ಮಾಹಿತಿ ಇಲ್ಲಿದೆ

ಈ ಹಿಂದೆ ಒಂದು ಕಿಮೀ 767 ಕೋಟಿ ರೂ. ವೆಚ್ಚವಾಗುತ್ತದೆ ಎಂದು ಡಿಪಿಆರ್ ಮಾಡಲಾಗಿತ್ತು. ಇದೀಗ ಒಂದು ಕಿಮೀಗೆ 688 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ವರದಿ ನೀಡಲಾಗಿದ್ದು, ಸದ್ಯದಲ್ಲೇ ಹೊಸ ಡಿಪಿಆರ್ ಅನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ. ಬಳಿಕ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ರವಾನೆ ಮಾಡಲಿದೆ.

ಸರ್ಜಾಪುರ ಟು ಹೆಬ್ಬಾಳ ಮೆಟ್ರೋ ಮಾರ್ಗದ ವಿವರ

ಇನ್ನೂ 37 ಕಿಮೀ ವಿಸ್ತೀರ್ಣದ ಸರ್ಜಾಪುರ ಟು ಹೆಬ್ಬಾಳ ಮಾರ್ಗದಲ್ಲಿ ಒಟ್ಟು 28 ಮೆಟ್ರೋ ಸ್ಟೇಷನ್ ಗಳು ಬರಲಿವೆ. 22.14 ಕಿಮೀ ಎಲಿವೇಟೆಡ್ ಮೆಟ್ರೋ ಸ್ಟೇಷನ್ ಗಳು, 14.45 ಕಿಮೀ ಅಂಡರ್ ಗ್ರೌಂಡ್ನಲ್ಲಿ ಮೆಟ್ರೋ ಸ್ಟೇಷನ್ ಗಳಿರುತ್ತವೆ. ಈ ಕೆಂಪು ಮೆಟ್ರೋ ಮಾರ್ಗವು ಹೆಬ್ಬಾಳದಲ್ಲಿ ಮೆಟ್ರೋ ‘ನೀಲಿ ಮಾರ್ಗ’, ಕೆಆರ್‌ ವೃತ್ತದಲ್ಲಿ ‘ನೇರಳೆ ಮಾರ್ಗ’ ಸಂಧಿಸಲಿದೆ. ಇನ್ನೂ ಡೈರಿ ವೃತ್ತದಲ್ಲಿ ‘ಗುಲಾಬಿ ಮಾರ್ಗ’ ಹಾಗೂ ಅಗರದಲ್ಲಿ ‘ನೀಲಿ ಮಾರ್ಗ’ ವನ್ನು ಸಂಧಿಸುತ್ತದೆ. ಹೀಗಾಗಿ ಇಲ್ಲಿ ನಾಲ್ಕು ಇಂಟರ್‌ಚೇಂಜ್ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ.

ಈ ಮಾರ್ಗದಲ್ಲಿ ಯಾವ್ಯಾವ ಏರಿಯಾದಲ್ಲಿ ಮೆಟ್ರೋ ಸ್ಟೇಷನ್ ಗಳು ಬರಲಿವೆ ಅಂತ ನೋಡುವುದಾದರೆ, ಹೆಬ್ಬಾಳ, ಗಂಗಾನಗರ,ಪಶುವೈದ್ಯಕೀಯ ಮಹಾವಿದ್ಯಾಲಯ, ಮೇಖ್ರಿ ಸರ್ಕಲ್, ಗಾಲ್ಫ್ ಕ್ಲಬ್, ಪ್ಯಾಲೇಸ್ ಗುಟ್ಟಹಳ್ಳಿ, ಬಸವೇಶ್ವರ ವೃತ್ತ, ಕೆಆರ್ ಸರ್ಕಲ್, ಟೌನ್ ಹಾಲ್, ಶಾಂತಿನಗರ, ನಿಮ್ಹಾನ್ಸ್, ಡೈರಿ ಸರ್ಕಲ್, ಕೋರಮಂಗಲ 2ನೇ ಬ್ಲಾಕ್, ಕೋರಮಂಗಲ 3ನೇ ಬ್ಲಾಕ್, ಜಕ್ಕಸಂದ್ರ, ಅಗರ, ಇಬ್ಬಲೂರು, ಬೆಳ್ಳಂದೂರು ಗೇಟ್, ಕೈಕೊಂಡೂರು, ದೊಡ್ಡಕನ್ನಳ್ಳಿ, ಕಾರ್ಮೆಲಾರಂ, ದೊಡ್ಡಕನ್ನಳ್ಳಿ, ಅಗ್ರಹಾರ ರಸ್ತೆ ಮತ್ತು ಸರ್ಜಾಪುರ.

ಒಟ್ನಲ್ಲಿ ನಗರದ ಮೂಲೆ ಮೂಲೆಗೂ ಮೆಟ್ರೋ ವಿಸ್ತರಣೆ ಆಗುತ್ತಿರುವುದರಿಂದ ಟ್ರಾಫಿಕ್ ಕಡಿಮೆಯಾಗುತ್ತಿರುವುದಕ್ಕೆ ಸಾರ್ವಜನಿಕರು ಸಂತೋಷಗೊಂಡಿದ್ದಾರೆ. ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಕೆಂಪು ಮಾರ್ಗಕ್ಕೆ ಯಾವಾಗ ಗ್ರೀನ್ ಸಿಗ್ನಲ್ ನೀಡುತ್ತೋ ಕಾದು ನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್’ ಬಳಿಕ ಹಾರರ್ ಸಿನಿಮಾಕ್ಕೆ ಕೈ ಹಾಕಿದ ರಣ್ವೀರ್ ಸಿಂಗ್ – Kannada News | Ranveer Singh to act in Vampire movie paring with Kalyani Priyadarshini

ಬಾಲಿವುಡ್​ನ ಸ್ಟಾರ್ ನಟ ರಣ್ವೀರ್ ಸಿಂಗ್ (Ranveer Singh), ‘ಧುರಂಧರ್’ ಸಿನಿಮಾ ಮೂಲಕ ಭಾರಿ ದೊಡ್ಡ ಯಶಸ್ಸು ಗಳಿಸಿದ್ದಾರೆ. ಈ ಹಿಂದಿನ ತಮ್ಮ ಸೋಲುಗಳಿಗೆಲ್ಲ ಮುಯ್ಯಿ ತೀರಿಸಿಕೊಂಡಿದ್ದಾರೆ ‘ಧುರಂಧರ್’ ಸಿನಿಮಾ ಮೂಲಕ. ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಬಿಡುಗಡೆ ಆಗಿ ಎರಡು ತಿಂಗಳಾಗುತ್ತಾ ಬರುತ್ತಿದ್ದರೂ ಸಿನಿಮಾದ ಕಲೆಕ್ಷನ್​ ಇಳಿಕೆ ಆಗಿಲ್ಲ. ‘ಧುರಂಧರ್’ ಸಿನಿಮಾದ ಎರಡನೇ ಭಾಗವೂ ಬಿಡುಗಡೆಯ ಘೋಷಣೆ ಈಗಾಗಲೇ ಮಾಡಲಾಗಿದ್ದು ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ ಎಂದಿದ್ದಾರೆ. ಆದರೆ ರಣ್ವೀರ್ ಸಿಂಗ್ ‘ಧುರಂಧರ್’ ಅಂಥಹಾ ದೊಡ್ಡ ಹಿಟ್ ಸಿನಿಮಾ ಕೊಟ್ಟ ಬಳಿಕ ಹಾರರ್ ಸಿನಿಮಾಕ್ಕೆ ಕೈಹಾಕಿದ್ದಾರೆ.

ರಣ್ವೀರ್ ಸಿಂಗ್, ವ್ಯಾಂಪೈರ್ ಸಿನಿಮಾನಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೆ ಮಲಯಾಳಂನಲ್ಲಿ ಹಿಟ್ ಆಗಿರುವ ‘ಲೋಕಃ’ ಸಿನಿಮಾ ಬ್ಲಾಕ್ ಬಸ್ಟರ್ ಆಗಿದ್ದು, ಇದು ವ್ಯಾಂಪೈರ್ ಸಿನಿಮಾವೇ ಆಗಿದೆ. ‘ಲೋಕಃ’ ಸಿನಿಮಾನಲ್ಲಿ ಕಲ್ಯಾಣಿ ಪ್ರಿಯದರ್ಶನ್ ನಟಿಸಿದ್ದರು. ಇದೀಗ ಅದೇ ಕಲ್ಯಾಣಿ ಪ್ರಿಯದರ್ಶನ್ ಅವರು ರಣ್ವೀರ್ ಸಿಂಗ್ ನಟಿಸಲಿರುವ ಹೊಸ ವ್ಯಾಂಪೈರ್ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಸಿನಿಮಾದ ನಿರ್ದೇಶನ ಮಾಡಲಿರುವುದು ಕಲ್ಯಾಣಿ ಪ್ರಿಯದರ್ಶನ್ ಅವರ ತಂದೆ, ಲಿಜೆಂಡರಿ ನಿರ್ದೇಶಕ ಪ್ರಿಯದರ್ಶನ್.

ಇದನ್ನೂ ಓದಿ:ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ಜೊತೆ ಶ್ರೀಲೀಲಾ, ಆದರೆ ಸಿನಿಮಾಕ್ಕಾಗಿ ಅಲ್ಲ

ಪ್ರಿಯದರ್ಶನ್ ಅವರು ‘ಪ್ರಲಯ್’ ಹೆಸರಿನ ಸಿನಿಮಾ ನಿರ್ದೇಶನ ಮಾಡಲಿದ್ದು, ಈ ಸಿನಿಮಾ ವ್ಯಾಂಪೈರ್​​ಗಳ ಕತೆಯನ್ನು ಒಳಗೊಂಡಿರಲಿದೆ. ಇದೇ ಸಿನಿಮಾನಲ್ಲಿ ರಣ್ವೀರ್ ಸಿಂಗ್ ಸಹ ನಟಿಸಲಿದ್ದಾರೆ. ಪ್ರಿಯದರ್ಶನ್ ಅವರ ಪುತ್ರಿ ಕಲ್ಯಾಣಿ ಪ್ರಿಯದರ್ಶಿನಿ ಸಿನಿಮಾದ ನಾಯಕಿ. ಕಲ್ಯಾಣಿ ಅವರು ಇಲ್ಲಿಯೂ ಸಹ ವ್ಯಾಂಪೈರ್ ಪಾತ್ರದಲ್ಲಿ ನಟಿಸಲಿದ್ದಾರೆ. ‘ಲೋಕಃ’ ಸಿನಿಮಾನಲ್ಲಿಯೂ ಅವರು ವ್ಯಾಂಪೈರ್ ಪಾತ್ರದಲ್ಲಿ ನಟಿಸಿದ್ದರು.

ರಣ್ವೀರ್ ಸಿಂಗ್ ಪಾಲಿಗೆ ಇದು ಮೊಟ್ಟ ಮೊದಲ ಹಾರರ್​ ಸಿನಿಮಾ ಆಗಲಿದೆ. ಬಾಲಿವುಡ್​ನಲ್ಲಿ ಇತ್ತೀಚೆಗೆ ಒಂದರ ಹಿಂದೆ ಒಂದರಂತೆ ಹಾರರ್ ಸಿನಿಮಾಗಳು ಬಿಡುಗಡೆ ಆಗುತ್ತಿದ್ದು ಹಿಟ್ ಸಹ ಆಗುತ್ತಿವೆ. ಇದೇ ಕಾರಣಕ್ಕೆ ಇದೀಗ ರಣ್ವೀರ್ ಸಿಂಗ್ ಅವರು ಹಾರರ್ ಸಿನಿಮಾ ಮೇಲೆ ಕಣ್ಣು ಹಾಕಿದ್ದಾರೆ. ‘ಧುರಂಧರ್ 2’ ಸಿನಿಮಾದ ಚಿತ್ರೀಕರಣ ಮುಗಿದ ಬಳಿಕ ‘ಪ್ರಳಯ್’ ಸಿನಿಮಾದ ಚಿತ್ರೀಕರಣದಲ್ಲಿ ರಣ್ವೀರ್ ಸಿಂಗ್ ತೊಡಗಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link