Category Archives: Blog

Your blog category

ವೈಭವ್​ರನ್ನು ಕಣಕ್ಕಿಳಿಸಬಾರದಿತ್ತು… ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗನ ಆಕ್ರೋಶ – Kannada News | Should’ve Dropped Vaibhav Sooryavanshi: Former India Cricketer Lashes Out

ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆಯುತ್ತಿರುವ ತ್ರಿಕೋನ ‘ಎ’ ಸರಣಿಯು ಈಗ ಕೇವಲ ಕ್ರಿಕೆಟ್ ಕಾರಣಗಳಿಗಾಗಿ ಮಾತ್ರವಲ್ಲದೆ ಮೈದಾನದ ವಿವಾದಗಳಿಂದಲೂ ಭಾರಿ ಸದ್ದು ಮಾಡುತ್ತಿದೆ. ಭಾರತ ಎ ಹಾಗೂ ಶ್ರೀಲಂಕಾ ಎ ತಂಡಗಳ ನಡುವಿನ ಪಂದ್ಯದ ನಂತರ ನಡೆದ ಹೈ-ಡ್ರಾಮಾ ಈಗ ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಭಾರತ ಎ ತಂಡದ 15 ವರ್ಷದ ಯುವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರ ಆನ್-ಫೀಲ್ಡ್ ವರ್ತನೆಗೆ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ವಿವಾದಕ್ಕೆ ಕಾರಣವಾದ ಆ ಒಂದು ಘಟನೆ!

ಭಾರತ ಎ ಮತ್ತು ಶ್ರೀಲಂಕಾ ಎ ನಡುವಿನ ಪಂದ್ಯವು ಅತ್ಯಂತ ರೋಚಕವಾಗಿ ‘ಸೂಪರ್ ಓವರ್’ ಹಂತಕ್ಕೆ ತಲುಪಿತ್ತು. ಸೂಪರ್ ಓವರ್‌ನ ಕೊನೆಯ ಎಸೆತದಲ್ಲಿ ಶ್ರೀಲಂಕಾ ಎ ತಂಡ ಜಯಭೇರಿ ಬಾರಿಸಿತು. ಪಂದ್ಯ ಮುಗಿದ ತಕ್ಷಣ, ತೀವ್ರ ಆಕ್ರೋಶಗೊಂಡಂತೆ ಕಂಡ ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ, ನೇರವಾಗಿ ಶ್ರೀಲಂಕಾದ ಆಟಗಾರ ವಿಶೇನ್ ಹಲಂಬಾಗೆ ಕಡೆಗೆ ಧಾವಿಸಿ ಅವರನ್ನು ದೈಹಿಕವಾಗಿ ತಳ್ಳಿದರು. ಈ ದೃಶ್ಯಗಳು ನೇರ ಪ್ರಸಾರದಲ್ಲಿ ಸೆರೆಯಾಗಿದ್ದು, ಕ್ರಿಕೆಟ್ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿತು.

ಪ್ರಚೋದನೆಗೆ ಕಾರಣವೇನು?

ವರದಿಗಳ ಪ್ರಕಾರ, ಪಂದ್ಯದ ಉದ್ದಕ್ಕೂ ವಿಶೇನ್ ಹಲಂಬಾಗೆ ವೈಭವ್​ ಸೂರ್ಯವಂಶಿಯನ್ನು ನಿರಂತರವಾಗಿ ಸ್ಲೆಡ್ಜಿಂಗ್ ಮಾಡುತ್ತಿದ್ದರು. ಸೂಪರ್ ಓವರ್ ಗೆಲುವಿನ ಸಂಭ್ರಮದಲ್ಲಿದ್ದ ಹಲಂಬಾ, ವೈಭವ್ ಅವರನ್ನು ಕೆಣಕುವ ಉದ್ದೇಶದಿಂದ, “ಮನೆಗೆ ಹೋಗು, ಇದು ಐಪಿಎಲ್ ಅಲ್ಲ!” ಎಂದು ಲೇವಡಿ ಮಾಡಿದ್ದರು. ಈ ಪ್ರಚೋದನೆಯಿಂದ ನಿಯಂತ್ರಣ ಕಳೆದುಕೊಂಡ ವೈಭವ್ ಸೂರ್ಯವಂಶಿ ಮೈದಾನದಲ್ಲೇ ದೈಹಿಕ ಸಂಘರ್ಷಕ್ಕೆ ಇಳಿದಿದ್ದರು.

ಸಂಜಯ್ ಮಂಜ್ರೇಕರ್ ಆಕ್ರೋಶ:

ವೈಭವ್ ಸೂರ್ಯವಂಶಿಯ ಈ ವರ್ತನೆಯನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಖಂಡಿಸಿದ್ದಾರೆ.  “ನಾನೇನಾದರೂ ಭಾರತ ಎ ತಂಡದ ಕೋಚ್ ಅಥವಾ ಮ್ಯಾನೇಜರ್ ಆಗಿರುತ್ತಿದ್ದರೆ, ಅಫ್ಘಾನಿಸ್ತಾನ್ ಎ ವಿರುದ್ಧದ ಪಂದ್ಯದಿಂದ ವೈಭವ್ ಸೂರ್ಯವಂಶಿ ಅವರನ್ನು ಖಂಡಿತವಾಗಿಯೂ ಹೊರಗಿಡುತ್ತಿದ್ದೆ. ಮೈದಾನದಲ್ಲಿ ಎಂತಹದ್ದೇ ಪ್ರಚೋದನೆ ಸಿಕ್ಕರೂ ಸಹ, ದೈಹಿಕವಾಗಿ ಜಗಳವಾಡುವುದು ಸರಿಯಲ್ಲ ಎಂಬುದನ್ನು ಅವರಿಗೆ ಅರ್ಥ ಮಾಡಿಸಲು ಈ ಕಠಿಣ ನಿರ್ಧಾರ ಅಗತ್ಯವಾಗಿತ್ತು.” ಎಂದು ಮಂಜ್ರೇಕರ್ ಹೇಳಿದ್ದಾರೆ.

15 ವರ್ಷದ ವೈಭವ್ ಸೂರ್ಯವಂಶಿ ಶ್ರೀಘ್ರದಲ್ಲೇ ಭಾರತದ ಹಿರಿಯರ ತಂಡದ ಕಣಕ್ಕಿಳಿಯಲಿದ್ದಾರೆ. ಇಂತಹ ಯುವ ಆಟಗಾರನಿಗೆ ಮೈದಾನದ ಶಿಸ್ತು ಎಷ್ಟು ಮುಖ್ಯ ಎಂಬುದನ್ನು ಮನವರಿಕೆ ಮಾಡಿಕೊಡಲು ಅಫ್ಘಾನಿಸ್ತಾನ್ ಎ ವಿರುದ್ಧದ ಪಂದ್ಯದಿಂದ ಅವರನ್ನು ಹೊರಗಿಟ್ಟು ಒಂದು ಪಂದ್ಯದ ನಿಷೇಧದಂತಹ ಕಠಿಣ ಸಂದೇಶವನ್ನು ಮ್ಯಾನೇಜ್‌ಮೆಂಟ್ ನೀಡಬೇಕಿತ್ತು ಎಂಬುದು ಮಂಜ್ರೇಕರ್ ಅವರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: ಕೊನೆಯ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಫೈನಲ್​ಗೇರಿದ್ದು ಹೇಗೆ?

ಕ್ರಿಕೆಟ್ ನಿಯಮಗಳು ಮತ್ತು ಕ್ರೀಡಾ ನೀತಿಯ ಪ್ರಕಾರ ಸಂಜಯ್ ಮಂಜ್ರೇಕರ್ ಅವರ ನಿಲುವು ತತ್ವಬದ್ಧವಾಗಿದೆ. ಆದರೆ ಆಟಗಾರನ ವಯಸ್ಸು ಮತ್ತು ಎದುರಾಳಿಯ ತೀವ್ರ ಪ್ರಚೋದನೆಯನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ, ಅವರನ್ನು ನೇರವಾಗಿ ತಂಡದಿಂದ ಕೈಬಿಡುವ ಮಂಜ್ರೇಕರ್ ಅವರ ಸಲಹೆ ಸ್ವಲ್ಪ ಕಠಿಣ ಎಂಬ ಅಭಿಪ್ರಾಯಗಳು ಕೂಡ ಕೇಳಿ ಬರುತ್ತಿವೆ. ಇದಾಗ್ಯೂ ಮುಂಬರುವ ಪಂದ್ಯಗಳಲ್ಲಿ ವೈಭವ್ ಸೂರ್ಯವಂಶಿ ತಮ್ಮ ಕೋಪ-ತಾಪಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ತಮ್ಮ ಕೆರಿಯರ್​ಗೆ ಉತ್ತಮ.

Source link

ಹಸೆಮಣೆ ಏರಲು ಸಜ್ಜಾದ ನಟಿ ರೂಪಿಕಾ; ಹಿರಿಯರ ಸಮ್ಮುಖದಲ್ಲಿ ನಡೆಯಿತು ನಿಶ್ಚಿತಾರ್ಥ – Kannada News | Kannada Actress Roopika Weds Ankith: Engagement Details and Wedding Plans Revealed

ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ ಮತ್ತು ಭರತನಾಟ್ಯ ನೃತ್ಯಗಾರ್ತಿ ರೂಪಿಕಾ ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಅಂಕಿತ್ ಅವರೊಂದಿಗೆ ನಟಿ ರೂಪಿಕಾ ಹಸೆಮಣೆ ಏರುತ್ತಿದ್ದು, ಇತ್ತೀಚೆಗಷ್ಟೇ ಹಿರಿಯರು ಹಾಗೂ ಆಪ್ತರ ಸಮ್ಮುಖದಲ್ಲಿ ಇವರ ನಿಶ್ಚಿತಾರ್ಥ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಮದುವೆ ಸುದ್ದಿ ಹೊರಬೀಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಈ ಹೊಸ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.

ಯಾರು ಈ ಅಂಕಿತ್?

ರೂಪಿಕಾ ಕೈಹಿಡಿಯಲಿರುವ ಅಂಕಿತ್ ಅವರು ಮೂಲತಃ ಬೆಂಗಳೂರಿನವರಾಗಿದ್ದು, ಕಳೆದ 5 ವರ್ಷಗಳಿಂದ ಕೆನಡಾದಲ್ಲಿ ನೆಲೆಸಿದ್ದಾರೆ. ಸದ್ಯ ಕೆನಡಾದ ‘ಇನ್ವೆಸ್ಕೋ’ (Invesco) ಸಂಸ್ಥೆಯಲ್ಲಿ ಟ್ಯಾಕ್ಸ್ ಸ್ಪೆಷಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಮ್ಯೂಸಿಕಲ್ ಕಂಪೋಸರ್ ಕೂಡ ಆಗಿರುವ ಅಂಕಿತ್ ಅವರಿಗೆ ಚಿತ್ರರಂಗದ ಬಗ್ಗೆ ಅಪಾರ ಆಸಕ್ತಿಯಿದೆ.

ಆಗಸ್ಟ್‌ನಲ್ಲಿ ಮದುವೆ

ಮುಂಬರುವ ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನಲ್ಲೇ ಇವರ ವಿವಾಹ ನಡೆಯಲಿದೆ. ಈ ಮದುವೆ ಸಮಾರಂಭಕ್ಕೆ ರೂಪಿಕಾ ಅವರ ಆಪ್ತರು, ಚಿತ್ರರಂಗದ ಸ್ನೇಹಿತರು ಹಾಗೂ ರಾಜಕೀಯ ರಂಗದ ಪ್ರಮುಖ ಗಣ್ಯರು ಸಾಕ್ಷಿಯಾಗಲಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ತಮಿಳುನಾಡು ಸಿಎಂ ದಳಪತಿ ವಿಜಯ್ ಭೇಟಿಯಾದ ನಟಿ ಸಮಂತಾ ರುತ್ ಪ್ರಭು

ಬಾಲನಟಿಯಿಂದ ಹಿಡಿದು ‘ಲಕ್ಷ್ಮಿ ನಿವಾಸ’ದವರೆಗೆ ರೂಪಿಕಾ ಜರ್ನಿ:

ರೂಪಿಕಾ ಅವರ ನಟನಾ ಪಯಣ ಆರಂಭವಾಗಿದ್ದು ಕಿರುತೆರೆಯಲ್ಲಿ ಬಾಲನಟಿಯಾಗಿ. ಅವರು ‘ಬೆಳ್ಳಿಚುಕ್ಕಿ’, ‘ಬದುಕು’, ‘ಅವಳ ಮನೆ’ ಹಾಗೂ ‘ತ್ರಿವೇಣಿ ಸಂಗಮ’ದಂತಹ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಬಾಲನಟಿಯಾಗಿ ಪ್ರೇಕ್ಷಕರ ಮನ ಗೆದ್ದರು. 2009ರಲ್ಲಿ ತೆರೆಕಂಡ ಎಸ್. ನಾರಾಯಣ್ ನಿರ್ದೇಶನದ ‘ಚೆಲುವಿನ ಚಿಲಿಪಿಲಿ’ ಸಿನಿಮಾ ಮೂಲಕ ರೂಪಿಕಾ ಚಂದನವನಕ್ಕೆ ನಾಯಕಿಯಾಗಿ ಪದಾರ್ಪಣೆ ಮಾಡಿದರು. ನಂತರ ‘ತೀರ್ಥರೂಪ’, ‘ಮಾಯದಂಥ ಮಳೆ’, ‘ಬೀರ’, ‘ಥರ್ಡ್‌ಕ್ಲಾಸ್’, ‘ರುದ್ರಾಕ್ಷಿಪುರ’, ‘ಮಂಜರಿ’, ‘ನವರಂಗಿ’, ‘ಡೈಮಂಡ್ ಕ್ರಾಸ್’ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ಅಷ್ಟೇ ಅಲ್ಲದೆ, ‘ಚಿಲ್ ಬ್ರೋ’ ಎಂಬ ತೆಲುಗು ಚಿತ್ರದಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಲಕ್ಷ್ಮಿ ನಿವಾಸ’ದಲ್ಲಿ ಸಿಂಚನಾ ಹೆಸರಿನ ಪಾತ್ರದ ಮೂಲಕ ರೂಪಿಕಾ ಪ್ರೇಕ್ಷಕರ ಮನೆಮಾತಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕುಸಿದ ವಾಯು ಮಾಲಿನ್ಯ, ಅತ್ಯಂತ ಶುದ್ಧ ಗಾಳಿ! – Kannada News | Karnataka AQI Update: Bengaluru and Other Cities Record Clean Air Quality

ಬೆಂಗಳೂರು, ಜೂನ್ 18: ಇಂದಿನ ಕರ್ನಾಟಕದ ಹವಾಮಾನ ಮತ್ತು ಗಾಳಿಯ ಗುಣಮಟ್ಟ ಸೂಚ್ಯಂಕ (AQI) ವಿವರಗಳು ಇಲ್ಲಿವೆ. ಇತ್ತೀಚಿನ ಮಳೆ ಮತ್ತು ಗಾಳಿಯ ಪ್ರಭಾವದಿಂದಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ವಾಯು ಮಾಲಿನ್ಯದ ಮಟ್ಟ ಗಣನೀಯವಾಗಿ ಕಡಿಮೆಯಾಗಿದ್ದು, ಜನಸಾಮಾನ್ಯರು ನಿರಾಳವಾಗಿ ಉಸಿರಾಡುವಂತಾಗಿದೆ.

ಮುಖ್ಯಾಂಶಗಳು

  • ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕವು ಇಂದು ಅತ್ಯಂತ ಉತ್ತಮ ಮಟ್ಟದಲ್ಲಿದೆ.
  • ವಿಜಯಪುರ ಮತ್ತು ಚನ್ನರಾಯಪಟ್ಟಣದಲ್ಲಿ ದೇಶದಲ್ಲೇ ಅತ್ಯಂತ ಕಡಿಮೆ ಮಾಲಿನ್ಯ ದಾಖಲಾಗಿದೆ.
  • ರಾಜ್ಯದ ಇತರೆ ಪ್ರಮುಖ ನಗರಗಳಲ್ಲಿ ಶುದ್ಧವಾದ ಆರೋಗ್ಯಕರ ಗಾಳಿ ಇದೆ.

ಬೆಂಗಳೂರಿನ ಇಂದಿನ ವಾಯು ಗುಣಮಟ್ಟ

ರಾಜಧಾನಿ ಬೆಂಗಳೂರಿನಲ್ಲಿ ಇಂದು ಜೂನ್ 18 ರಂದು ವಾಯು ಗುಣಮಟ್ಟ ಸೂಚ್ಯಂಕವು ಅತ್ಯಂತ ಉತ್ತಮ ಮಟ್ಟದಲ್ಲಿದೆ. ನಗರದ ಸರಾಸರಿ ಎಕ್ಯೂಐ 35 ರಿಂದ 50 ರ ಆಸುಪಾಸಿನಲ್ಲಿ ದಾಖಲಾಗಿದ್ದು, ಇದನ್ನು ಉತ್ತಮ (Good) ವಲಯ ಎಂದು ಪರಿಗಣಿಸಲಾಗುತ್ತದೆ. ಇತ್ತೀಚೆಗೆ ನಗರದಾದ್ಯಂತ ಬೀಸಿದ ಬಲವಾದ ಬಿರುಗಾಳಿ ಮತ್ತು ಅಲ್ಲಲ್ಲಿ ಸುರಿದ ಸಾಧಾರಣ ಮಳೆಯು ವಾತಾವರಣದಲ್ಲಿದ್ದ ಧೂಳಿನ ಕಣಗಳನ್ನು (PM2.5 ಮತ್ತು PM10) ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದಿದೆ.

ನಗರದ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್ ಮತ್ತು ಜಯನಗರದಂತಹ ಪ್ರಮುಖ ವಾಹನ ದಟ್ಟಣೆಯ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟವು ಸಾಧಾರಣ (Moderate) ಮಟ್ಟದಲ್ಲಿದ್ದರೆ, ಹೆಬ್ಬಾಳ ಮತ್ತು ಯಲಹಂಕ ಭಾಗಗಳಲ್ಲಿ ಅತ್ಯಂತ ಶುದ್ಧವಾದ ಗಾಳಿ ದಾಖಲಾಗಿದೆ. ಇದರಿಂದಾಗಿ ಯಾವುದೇ ಆರೋಗ್ಯದ ಮುನ್ನೆಚ್ಚರಿಕೆ ಇಲ್ಲದೆ ಸಾರ್ವಜನಿಕರು ಮತ್ತು ಮಕ್ಕಳು ತಮ್ಮ ದಿನನಿತ್ಯದ ಹೊರಾಂಗಣ ಚಟುವಟಿಕೆಗಳನ್ನು ಮುಂದುವರಿಸಬಹುದಾಗಿದೆ.

ಕರ್ನಾಟಕದ ಇತರೆ ಪ್ರಮುಖ ನಗರಗಳ ಪರಿಸ್ಥಿತಿ

ರಾಜ್ಯದ ಇತರೆ ಪ್ರಮುಖ ನಗರಗಳಲ್ಲೂ ವಾಯು ಮಾಲಿನ್ಯದ ಮಟ್ಟ ಆಶಾದಾಯಕವಾಗಿದೆ. ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ವರದಿಯಾಗಿರುವ ಹವಾಮಾನ ಬದಲಾವಣೆಯಿಂದಾಗಿ ವಾಯು ಗುಣಮಟ್ಟ ಸುಧಾರಿಸಿದೆ.

ಕರಾವಳಿಯ ಮಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ವಾಯು ಗುಣಮಟ್ಟ ಅತ್ಯುತ್ತಮವಾಗಿದ್ದು, ಸೂಚ್ಯಂಕವು 30 ರಿಂದ 40 ರ ಒಳಗಿದೆ. ದೇಶದಲ್ಲೇ ಅತ್ಯಂತ ಕಡಿಮೆ ಮಾಲಿನ್ಯವಿರುವ ಪ್ರದೇಶಗಳ ಪಟ್ಟಿಯಲ್ಲಿ ಕರ್ನಾಟಕದ ವಿಜಯಪುರ (AQI 16) ಹಾಗೂ ಚನ್ನರಾಯಪಟ್ಟಣ (AQI 17) ಮುಂಚೂಣಿಯಲ್ಲಿವೆ. ಉತ್ತರ ಒಳನಾಡಿನ ಈ ಕೈಗಾರಿಕಾ ಮತ್ತು ವಾಣಿಜ್ಯ ನಗರಗಳಲ್ಲಿ ಬಿರುಗಾಳಿಯ ತೀವ್ರತೆ ಹೆಚ್ಚಾಗಿರುವುದರಿಂದ ಮಾಲಿನ್ಯಕಾರಕ ಕಣಗಳು ಚದುರಿಹೋಗಿದ್ದು, ಸೂಚ್ಯಂಕ 45 ರ ಆಸುಪಾಸಿನಲ್ಲಿ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಟವಾಡುವಾಗ ಗೇಟ್ ಸಮೇತ ಕುಸಿದುಬಿದ್ದ ಕಾಂಪೌಂಡ್ ಗೋಡೆ; 5 ವರ್ಷದ ಮಗು ಸಾವು – Kannada News | Tragedy in Bagalur: Unscientific Wall Collapse Kills 5 Year Old, Injures Another

ಬಾಗಲೂರು ಗೋಡೆ ಕುಸಿತImage Credit source: Tv9 kannada

ಬೆಂಗಳೂರು, ಜೂ.18: ರಾಜಧಾನಿಯ ಉತ್ತರ ತಾಲೂಕಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ನೆರೆಮನೆಯ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಮನೆಯೊಂದರ ಕಾಂಪೌಂಡ್ ಗೋಡೆ ಮತ್ತು ಗೇಟ್ ಬಿದ್ದ ಪರಿಣಾಮ 5 ವರ್ಷದ ಪುಟಾಣಿ ಮಗು ಮೃತಪಟ್ಟಿದ್ದು, ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿದೆ. ಮೃತಪಟ್ಟ ದುರ್ದೈವಿ ಮಗುವನ್ನು ಯಾದಗಿರಿ ಮೂಲದ ದಾವಲ್ ಸಾಬ್ ಅವರ ಪುತ್ರ ಅಫೀನ್ (5) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಕ್ಯಾಬ್ ಚಾಲಕರಾಗಿರುವ ದಾವಲ್ ಸಾಬ್ ಅವರು ಬೆಂಗಳೂರಿನಲ್ಲಿ ಹೊಸ ಕೆಲಸದ ಹುಡುಕಾಟದಲ್ಲಿದ್ದರು. ಅವರ ಪತ್ನಿ ಹಾಗೂ ಮಗು ಅಫೀನ್ ಕೇವಲ ಐದು ದಿನಗಳ ಹಿಂದಷ್ಟೇ ಬಾಗಲೂರು ವ್ಯಾಪ್ತಿಯ ಬಂಡಿಕೊಡಿಗೇಹಳ್ಳಿಯಲ್ಲಿರುವ ತಮ್ಮ ತಂಗಿಯ ಮನೆಗೆ ಬಂದಿದ್ದರು.

ಬುಧವಾರ (ಜೂನ್ 17, 2026) ಸಂಜೆ ಸುಮಾರು 6:30ರ ವೇಳೆಗೆ, ಅಫೀನ್ ಪಕ್ಕದ ಮನೆಯ ಮಕ್ಕಳಾದ ಸಮನ್ವಿ ಹಾಗೂ ಮತ್ತೊಂದು ಮಗುವಿನೊಂದಿಗೆ ಬಿ.ಸಿ. ನರಸಪ್ಪ ಎಂಬುವರ ಮನೆಯ ಕಾಂಪೌಂಡ್ ಗೇಟ್ ಬಳಿ ಆಟವಾಡುತ್ತಿದ್ದನು. ಮಕ್ಕಳು ಆಟದ ಭರದಲ್ಲಿ ಕಬ್ಬಿಣದ ಗೇಟ್ ಹಿಡಿದು ಜೀಕಾಡುತ್ತಿದ್ದಾಗ, ಗೇಟ್‌ನ ಭಾರ ತಾಳಲಾರದೆ ಕಾಂಪೌಂಡ್ ಗೋಡೆಯು ಗೇಟ್ ಸಮೇತ ಒಮ್ಮೆಲೇ ಮಕ್ಕಳ ಮೇಲೆ ಕುಸಿದು ಬಿದ್ದಿದೆ.

ಇದನ್ನೂ ಓದಿ: ಪರಿಷತ್ ಕದನದ ಅಂತಿಮ ಪರೀಕ್ಷೆ: ಅಡ್ಡಮತದಾನದ ಭೀತಿ, ರೆಸಾರ್ಟ್‌ನಿಂದ ನೇರವಾಗಿ ವಿಧಾನಸೌಧಕ್ಕೆ ಶಾಸಕರು

ಈ ಘಟನೆಯನ್ನು ನೋಡಿ ಸ್ಥಳೀಯರು ತಕ್ಷಣವೇ ಓಡಿ ಬಂದು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮಕ್ಕಳಿಬ್ಬರನ್ನು ಹೊರತೆಗೆದು ಖಾಸಗಿ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದರು. ಆದರೆ, ತಲೆ ಹಾಗೂ ಎದೆಯ ಭಾಗಕ್ಕೆ ತೀವ್ರವಾಗಿ ಪೆಟ್ಟಾಗಿದ್ದ ಅಫೀನ್ ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಮತ್ತೊಂದು ಮಗು ಸಮನ್ವಿಗೆ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಬಾಗಲೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಂಪೌಂಡ್ ಗೋಡೆಯ ಅವೈಜ್ಞಾನಿಕ ನಿರ್ಮಾಣದ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊನೆಯ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಫೈನಲ್​ಗೇರಿದ್ದು ಹೇಗೆ? – Kannada News | How India A Qualified for the Final Before the Last League Match

ಭಾರತ ಎ, ಶ್ರೀಲಂಕಾ ಎ ಮತ್ತು ಅಫ್ಘಾನಿಸ್ತಾನ್ ಎ ತಂಡಗಳ ನಡುವಣ ತ್ರಿಕೋನ ಸರಣಿಯಲ್ಲಿ ಟೀಮ್ ಇಂಡಿಯಾ ಫೈನಲ್​ಗೇರಿದೆ. ದಂಬುಲ್ಲಾದಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಎ ತಂಡದ ವಿರುದ್ಧ ಭಾರತ ಎ ತಂಡ ಅಮೋಘ ಗೆಲುವು ದಾಖಲಿಸಿ ಫೈನಲ್​ಗೆ ಲಗ್ಗೆಯಿಟ್ಟಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಎ ಪರ ನಾಯಕ ತಿಲಕ್ ವರ್ಮಾ (59), ಪ್ರಿಯಾಂಶ್ ಆರ್ಯ (58) ಮತ್ತು ಕುಮಾರ್ ಕುಶಾಗ್ರ (58) ಅರ್ಧಶತಕಗಳನ್ನು ಬಾರಿಸಿದ್ದರು. ಈ ಅರ್ಧಶತಕಗಳ ನೆರವಿನೊಂದಿಗೆ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 319 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಅಫ್ಘಾನಿಸ್ತಾನ್ ಎ ತಂಡವು 36.5 ಓವರ್​ಗಳಲ್ಲಿ ಕೇವಲ 218 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ಎ ತಂಡವು 101 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಭರ್ಜರಿ ಗೆಲುವಿನೊಂದಿಗೆ ಟೀಮ್ ಇಂಡಿಯಾದ ನೆಟ್ ರನ್ ರೇಟ್ +0.797 ಕ್ಕೇರಿದೆ.

ಫೈನಲ್​ಗೆ ಲಗ್ಗೆ:

ಭಾರತ ತಂಡವು 101 ರನ್​ಗಳ ಭರ್ಜರಿ ಜಯ ಸಾಧಿಸಿದ ಪರಿಣಾಮ +0.797 ನೆಟ್ ರನ್ ರೇಟ್ ಪಡೆದುಕೊಂಡಿದೆ. ಈ ನೆಟ್​ ರನ್ ರೇಟ್​ನೊಂದಿಗೆ 4 ಅಂಕಗಳನ್ನು ಪಡೆದಿರುವ ಟೀಮ್ ಇಂಡಿಯಾ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಇನ್ನು  ಶ್ರೀಲಂಕಾ ಎ ಮತ್ತು ಅಫ್ಘಾನಿಸ್ತಾನ್ ಎ ನಡುವೆ ಒಂದು ಕೊನೆಯ ಲೀಗ್ ಪಂದ್ಯ ನಡೆಯಲಿದ್ದು, ಆ ಪಂದ್ಯದ ಫಲಿತಾಂಶ ಏನೇ ಆದರೂ ಭಾರತದ ಫೈನಲ್ ಸ್ಥಾನಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ.

ಏಕೆಂದರೆ ಉಭಯ ತಂಡಗಳ ಮುಖಾಮುಖಿಯಲ್ಲಿ ಗೆಲ್ಲುವ ತಂಡ ಮೊದಲ ಅಥವಾ ಎರಡನೇ ಸ್ಥಾನ ಪಡೆಯಲಿದೆ. ಅತ್ತ ಅತ್ಯುತ್ತಮ ನೆಟ್ ರನ್ ರೇಟ್ ಹೊಂದಿರುವ ಕಾರಣ ಟೀಮ್ ಇಂಡಿಯಾ ದ್ವಿತೀಯ ಸ್ಥಾನಕ್ಕೆ ಕುಸಿಯಬಹುದೇ ಹೊರತು, ಮೂರನೇ ಸ್ಥಾನಕ್ಕೆ ತಳ್ಳಲ್ಪಡುವ ಸಾಧ್ಯತೆ ತುಂಬಾ ಕಡಿಮೆ.

  • ಶ್ರೀಲಂಕಾ ಎ ಗೆದ್ದರೆ: ಶ್ರೀಲಂಕಾ ತಂಡವು ಅಫ್ಘಾನಿಸ್ತಾನ್ ಎ ವಿರುದ್ಧ  ಗೆದ್ದರೆ, ಒಟ್ಟು 6 ಅಂಕಗಳೊಂದಿಗೆ ಫೈನಲ್​ಗೆ ಎಂಟ್ರಿ ಕೊಡಲಿದ್ದಾರೆ. ಅತ್ತ ಅಫ್ಘಾನಿಸ್ತಾನ್ ಕೇವಲ 2 ಅಂಕಗಳೊಂದಿಗೆ ಸರಣಿಯಿಂದ ಹೊರಬೀಳಲಿದೆ.
  • ಅಫ್ಘಾನಿಸ್ತಾನ್ ಎ ಗೆದ್ದರೆ: ಒಂದು ವೇಳೆ ಅಫ್ಘಾನಿಸ್ತಾನ್ ತಂಡವು ಶ್ರೀಲಂಕಾವನ್ನು ಸೋಲಿಸಿದರೆ, ಆಗ ಅಫ್ಘಾನಿಸ್ತಾನ್ ಕೂಡ ಭಾರತದಂತೆ 4 ಅಂಕಗಳನ್ನು ಪಡೆಯಲಿದೆ. ಈ ವೇಳೆ ಫೈನಲ್ ತಲುಪುವ ತಂಡವನ್ನು ನಿರ್ಧರಿಸಲು ನೆಟ್ ರನ್ ರೇಟ್ ನೋಡಬೇಕಾಗುತ್ತದೆ.

ನೆಟ್ ರನ್ ರೇಟ್ ಲೆಕ್ಕಾಚಾರ:

ಭಾರತ ಎ ತಂಡವು ಅಫ್ಘಾನಿಸ್ತಾನ್ ಎ ವಿರುದ್ಧ 101 ರನ್‌ಗಳ ಬೃಹತ್ ಆಂತರದಿಂದ ಗೆದ್ದಿರುವುದರಿಂದ, ಟೀಮ್ ಇಂಡಿಯಾ ರನ್ ರೇಟ್ (+0.797) ಅತ್ಯಂತ ಬಲಿಷ್ಠವಾಗಿದೆ. ಅಫ್ಘಾನಿಸ್ತಾನ್ ಎ ತಂಡವು ಕೊನೆಯ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿದರೂ, ಕಳಪೆ ರನ್ ರೇಟ್ (-1.983) ಹೊಂದಿರುವ ಕಾರಣ ಅವರು  ಭಾರತದ ನೆಟ್ ರನ್ ರೇಟ್ ಮಟ್ಟಕ್ಕೆ ತರುವುದು ಕಷ್ಟಸಾಧ್ಯ. ಹೀಗಾಗಿ ಶ್ರೀಲಂಕಾ ತಂಡವನ್ನು ರನ್ ರೇಟ್ ಆಧಾರದಲ್ಲಿ ಹಿಂದಿಕ್ಕಬಹುದೇ ಹೊರತು, ಭಾರತದ ನೆಟ್​ ರನ್ ರೇಟ್ ಮೀರಿಸಲು ಪವಾಡವೇ ನಡೆಯಬೇಕು.

ಭಾರತವನ್ನು ಹೇಗೆ ಹಿಂದಿಕ್ಕಬಹುದು?

ಒಂದು ವೇಳೆ ಅಫ್ಘಾನಿಸ್ತಾನ್ ಎ ತಂಡವು ಭಾರತವನ್ನು ರನ್ ರೇಟ್‌ನಲ್ಲಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಬೇಕಾದರೆ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಈ ರೀತಿಯಾಗಿ ಅಸಾಧ್ಯವಾದ ಗೆಲುವು ಸಾಧಿಸಬೇಕಾಗುತ್ತದೆ.

  • ಮೊದಲು ಬ್ಯಾಟಿಂಗ್ ಮಾಡಿದರೆ: ಅಫ್ಘಾನಿಸ್ತಾನ್ ಎ ಮೊದಲು ಬ್ಯಾಟಿಂಗ್ ಮಾಡಿ 300 ರನ್ ಗಳಿಸಿದರೆ, ಶ್ರೀಲಂಕಾ ತಂಡವನ್ನು ಕೇವಲ 15-20 ರನ್‌ಗಳ ಒಳಗೆ ಆಲೌಟ್ ಮಾಡಬೇಕಾಗುತ್ತದೆ. ಅಂದರೆ ಸುಮಾರು 280+ ರನ್‌ಗಳ ಬೃಹತ್ ಜಯ ಗಳಿಸಬೇಕು.
  • ಚೇಸಿಂಗ್ ಮಾಡಿದರೆ: ಶ್ರೀಲಂಕಾ ನೀಡುವ ಯಾವುದೇ ಗುರಿಯನ್ನು (ಉದಾಹರಣೆಗೆ 200 ರನ್) ಅಫ್ಘಾನಿಸ್ತಾನ್ ತಂಡವು ಕೇವಲ 2 ರಿಂದ 3 ಓವರ್‌ಗಳ ಒಳಗೆ ಬೆನ್ನಟ್ಟಿ ಪಂದ್ಯವನ್ನು ಮುಗಿಸಬೇಕಾಗುತ್ತದೆ.

ಅಂದರೆ ಟೀಮ್ ಇಂಡಿಯಾದ ನೆಟ್ ರನ್ ರೇಟ್​ ಅನ್ನು ಹಿಂದಿಕ್ಕಲು ಅಫ್ಘಾನಿಸ್ತಾನ್ ಎ ತಂಡವು ಕನಿಷ್ಠ 200 ರನ್​ಗಳ ಗುರಿಯನ್ನು 3 ಓವರ್​ಗಳೊಗೆ ಚೇಸ್ ಮಾಡಬೇಕು. ಇನ್ನು ಅಫ್ಘಾನ್ ಪಡೆ 300 ರನ್​ಗಳ ಗುರಿ ನೀಡಿದರೆ ಶ್ರೀಲಂಕಾ ತಂಡವನ್ನು 20-30 ರನ್​ಗಳಿಗೆ ಆಲೌಟ್ ಮಾಡಬೇಕು.

ಈ ಎರಡೂ ಫಲಿತಾಂಶಗಳು ಮೂಡಿಬರಬೇಕಿದ್ದರೆ ಪವಾಡವೇ ಸಂಭವಿಸಬೇಕು. ಒಂದು ವೇಳೆ ಪವಾಡ ನಡೆದು ಅಂತಹದೊಂದು ಫಲಿತಾಂಶ ಮೂಡಿಬಂದರೂ ಭಾರತ ತಂಡವು ಅಗ್ರಸ್ಥಾನದಿಂದ ದ್ವಿತೀಯ ಸ್ಥಾನಕ್ಕೆ ಕುಸಿಯಬಹುದೇ ಹೊರತು ಮೂರನೇ ಸ್ಥಾನಕ್ಕಿಳಿಯಲ್ಲ.

ಇದನ್ನೂ ಓದಿ: ಕಾಂಗೋ ಮುಂದೆ ಕಂಗೆಟ್ಟ ಕ್ರಿಸ್ಟಿಯಾನೊ ರೊನಾಲ್ಡೊ!

ಹೀಗಾಗಿಯೇ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ್ ನಡುವಣ ಕೊನೆಯ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾವನ್ನು ಫೈನಲಿಸ್ಟ್ ಎಂದು ಪರಿಗಣಿಸಲಾಗಿದೆ. ಅದರಂತೆ ಭಾನುವಾರ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿಯುವುದು ಖಚತವಾಗಿದೆ.

Source link

Breaking News Today Live: ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ಇಂದು ಮತದಾನ: ಇಲ್ಲಿವೆ ಈ ಹೊತ್ತಿನ ಪ್ರಮುಖ ಸುದ್ದಿಗಳು

ರಾಜ್ಯ ವಿಧಾನಪರಿಷತ್​ನ 7 ಸ್ಥಾನಗಳಿಗೆ ಇಂದು ಮತದಾನ ನಡೆಯಲಿದ್ದು, ರಾಜಕೀಯ ಚಟುವಟಿಕೆ ತೀವ್ರಗೊಂಡಿದೆ. ಬಿಜೆಪಿಯ ಇಬ್ಬರು ಅಭ್ಯರ್ಥಿಗಳಿಗೆ ತಲಾ 29 ಮತ ನಿಗದಿಯಾಗಿದೆ. ಶಾಸಕರು ಬೆಳಗ್ಗೆ 8.30ಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಕಚೇರಿಗೆ ಆಗಮಿಸಿ ಮತದಾನಕ್ಕೆ ತೆರಳಲಿದ್ದು, ಎನ್.ರವಿಕುಮಾರ್ ಚುನಾವಣಾ ಏಜೆಂಟ್ ಆಗಿದ್ದಾರೆ. ಜಾಗತಿಕವಾಗಿ, 110 ದಿನಗಳ ಸಂಘರ್ಷಕ್ಕೆ ಅಂತ್ಯ ಹಾಡಿ ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ. ಹಾರ್ಮುಜ್ ಜಲಸಂಧಿ ಮುಕ್ತವಾಗಿ ತೈಲ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದ್ದು, ಅನುಷ್ಠಾನ ಪರೀಕ್ಷಿಸುವ ಸಮಯ ಎಂದು ಇರಾನ್ ಹೇಳಿದೆ. ಇತ್ತ ‘ದೃಶ್ಯಂ 3’ ತೆಲುಗು ಆವೃತ್ತಿಯ ಒಟಿಟಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ನಿರ್ದೇಶಕಿ ಶ್ರೀಪ್ರಿಯಾ ಸಂಸ್ಥೆಯ ರಿಮೇಕ್ ಹಕ್ಕುಗಳ ವಿವಾದದ ಹಿನ್ನೆಲೆಯಲ್ಲಿ ಜೂನ್ 18ರ ಸ್ಟ್ರೀಮಿಂಗ್‌ಗೆ ಕೋರ್ಟ್ ಬ್ರೇಕ್ ಹಾಕಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

 

Source link

‘ಬಾಸ್’ ಸಿನಿಮಾ ರಿಲೀಸ್​​ಗೆ ವಿರೋಧ; ಬೇಸರ ಹೊರಹಾಕಿದ ನಿರ್ದೇಶಕ – Kannada News | Boss Movie Update Director Lava in Shock after Vijayalakshmi File case against Movie

‘ಬಾಸ್’ ಸಿನಿಮಾ ರಿಲೀಸ್​​ಗೆ ವಿರೋಧ ವ್ಯಕ್ತವಾಗಿದೆ. ಸಿನಿಮಾ ರಿಲೀಸ್ ಆಗಬಾರದು ಎಂದು ವಿಜಯಲಕ್ಷ್ಮೀ ದರ್ಶನ್ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸಿನಿಮಾದ ಕಥೆ ರೇಣುಕಾಸ್ವಾಮಿ ಕೊಲೆ ಕೇಸ್ ಆಧರಿಸಿದೆ ಎಂಬ ಅನುಮಾನ ಇದೆ. ಈ ಕಾರಣಕ್ಕೆ ರಿಲೀಸ್​​ಗೆ ವಿರೋಧ ಇದೆ. ಈ ವಿಷಯವಾಗಿ ಸಿನಿಮಾದ ನಿರ್ದೇಶಕ ಲವ ಬೇಸರ ಹೊರಹಾಕಿದ್ದಾರೆ. ಈ ಮೊದಲು ಸೆಷನ್ಸ್ ಕೋರ್ಟ್​​ನಲ್ಲಿ ‘ಬಾಸ್’ ಸಿನಿಮಾಗೆ ತಡೆ ಕೋರಿ ವಿಜಯಲಕ್ಷ್ಮಿ ದರ್ಶನ್ ಸಲ್ಲಿಸಿದ ಅರ್ಜಿ ವಜಾಗೊಂಡಿತ್ತು. ಅದರಿಂದ ಚಿತ್ರತಂಡಕ್ಕೆ ಬಲ ಸಿಕ್ಕಂತೆ ಆಗಿತ್ತು.ಈಗ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದರಿಂದ ತಂಡ ಚಿಂತೆಗೆ ಒಳಗಾಗಿದೆ. ಈ ಬಗ್ಗೆ ಅವು ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ 

Source link

ಪರಿಷತ್ ಕದನದ ಅಂತಿಮ ಪರೀಕ್ಷೆ: ಅಡ್ಡಮತದಾನದ ಭೀತಿ, ರೆಸಾರ್ಟ್‌ನಿಂದ ನೇರವಾಗಿ ವಿಧಾನಸೌಧಕ್ಕೆ ಶಾಸಕರು – Kannada News | Karnataka MLC Polls 2026: Congress Fights for 5th Seat, CM Trains MLAs to Prevent Invalid Votes

ಬೆಂಗಳೂರು, ಜೂ.18 : ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ಇಂದು (ಜೂನ್ 18, 2026) ಹೈವೋಲ್ಟೇಜ್ ವೋಟಿಂಗ್ ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿಧಾನಸೌಧದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಇಡೀ ರಾಜ್ಯ ರಾಜಕಾರಣದ ಚಿತ್ತ ಈಗ ಈ ಚುನಾವಣೆಯತ್ತ ನೆಟ್ಟಿದೆ. ಚುನಾವಣೆಯಲ್ಲಿ ಒಳಜಗಳ ಹಾಗೂ ಅಡ್ಡಮತದಾನ (Cross Voting) ಆಗುವ ಭೀತಿ ಎದುರಾಗಿರುವುದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಶಾಸಕರನ್ನು ರಕ್ಷಿಸಿಕೊಳ್ಳಲು ರೆಸಾರ್ಟ್ ರಾಜಕೀಯದ ಮೊರೆ ಹೋಗಿವೆ. ರಾಮನಗರದ ವಂಡರ್‌ಲಾ ಹಾಗೂ ಬಿಡದಿ ರೆಸಾರ್ಟ್‌ನಲ್ಲಿ ತಂಗಿದ್ದ ಕಾಂಗ್ರೆಸ್ ಶಾಸಕರು ಇಂದು ಬೆಳಗ್ಗೆಯೇ ಐದು ವಿಶೇಷ ಬಸ್‌ಗಳ ಮೂಲಕ ನೇರವಾಗಿ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ದೇವನಹಳ್ಳಿಯ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿರುವ ಜೆಡಿಎಸ್ ಶಾಸಕರು ಬೆಳಗ್ಗೆ 9 ಗಂಟೆಯ ಸುಮಾರಿಗೆ ಒಗ್ಗಟ್ಟು ಪ್ರದರ್ಶಿಸುತ್ತಾ ವಿಧಾನಸೌಧದತ್ತ ಪ್ರಯಾಣ ಬೆಳೆಸಲಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ತನ್ನ 5ನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದು ಅತ್ಯಂತ ಪ್ರತಿಷ್ಠೆಯ ಸವಾಲಾಗಿದೆ. ಹೀಗಾಗಿ, ಯಾವುದೇ ಒಂದು ಮತವೂ ಅಸಿಂಧು (Invalid) ಆಗದಂತೆ ತಡೆಯಲು ನಿನ್ನೆ ರಾತ್ರಿ ರೆಸಾರ್ಟ್‌ನಲ್ಲಿ ಸಿಎಂ ಡಿಕೆ ಶಿವಕುಮಾರ್​​​ ಶಾಸಕರಿಗೆ ವಿಶೇಷ ತರಬೇತಿ ಹಾಗೂ ಪ್ರಾತ್ಯಕ್ಷಿಕೆಯನ್ನು ನೀಡಿದ್ದಾರೆ. “ಇಂತಹ ಅಭ್ಯರ್ಥಿಗಳಿಗೆ ಇಂತಹ ಶಾಸಕರೇ ಮೊದಲ ಪ್ರಾಶಸ್ತ್ಯದ ಮತವನ್ನು ಹಾಕಬೇಕು” ಎಂದು ಸಿಎಂ ಕೋಟಾ ನಿಗದಿಪಡಿಸಿದ್ದು, ಹಿರಿಯ ನಾಯಕರು ಕೊನೆಯ ಕ್ಷಣದವರೆಗೂ ಸಂಖ್ಯಾಬಲದ ಕಸರತ್ತು ನಡೆಸುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಮತಾ,ಉದ್ಧವ್ ಬಳಿಕ ಈಗ ಅಖಿಲೇಶ್ ಯಾದವ್ ಸರದಿ: ಸಮಾಜವಾದಿ ಪಕ್ಷದಲ್ಲೂ ಒಡಕು? – Kannada News | SP Split Fears: Akhilesh Yadav’s Samajwadi Party Faces Rebellion After TMC and Shiv Sena

ಲಕ್ನೋ, ಜೂನ್ 18: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಮತ್ತು ಮಹಾರಾಷ್ಟ್ರದ ಶಿವಸೇನೆ (UBT) ಪಕ್ಷಗಳಲ್ಲಿ ಸಂಭವಿಸಿರುವ ಭಾರಿ ಬಂಡಾಯದ ಬೆನ್ನಲ್ಲೇ, ಈಗ ಉತ್ತರ ಪ್ರದೇಶದ ಪ್ರಮುಖ ವಿರೋಧ ಪಕ್ಷವಾದ ಸಮಾಜವಾದಿ ಪಕ್ಷದಲ್ಲೂ (SP) ಅಂತಹದ್ದೇ ದೊಡ್ಡ ವಿಭಜನೆ ಉಂಟಾಗಲಿದೆ ಎಂಬ ಆಘಾತಕಾರಿ ಮುನ್ಸೂಚನೆಯನ್ನು ಉತ್ತರ ಪ್ರದೇಶದ ಸಚಿವ ಒ.ಪಿ. ರಾಜ್‌ಭರ್ ನೀಡಿದ್ದಾರೆ.

ಅಮಿತ್ ಶಾಗೆ ರಾಮ್ ಗೋಪಾಲ್ ಯಾದವ್ ಪತ್ರ?
ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ (SBSP) ಮುಖ್ಯಸ್ಥ ಹಾಗೂ ಯುಪಿ ಸಚಿವ ಒ.ಪಿ. ರಾಜ್‌ಭರ್ ಅವರು ಸಮಾಜವಾದಿ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಎಸ್‌ಪಿಯ ಹಿರಿಯ ನಾಯಕ ರಾಮ್ ಗೋಪಾಲ್ ಯಾದವ್ ಅವರು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರಹಸ್ಯ ಪತ್ರವೊಂದನ್ನು ಬರೆದಿದ್ದಾರೆ ಎಂದು ರಾಜ್‌ಭರ್ ಹೇಳಿದ್ದಾರೆ.

ನಿಮ್ಮ ಗಮನವನ್ನು ಕೇವಲ ಮಹಾರಾಷ್ಟ್ರದ ಮೇಲಷ್ಟೇ ಇಡಬೇಡಿ, ಈಗ ಉತ್ತರ ಪ್ರದೇಶದ ಸರದಿ ಬಂದಿದೆ. ರಾಮ್ ಗೋಪಾಲ್ ಅವರು ಅಮಿತ್ ಶಾ ಅವರಿಗೆ ಪತ್ರ ನೀಡಿ, ತಮ್ಮ ಪಕ್ಷದ ಕೆಲವು ಸಂಸದರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಆ ಸಂಸದರನ್ನು ನಿಮ್ಮೊಂದಿಗೆ ಕರೆದುಕೊಂಡು ಹೋಗಿ, ಆದರೆ ನಮ್ಮನ್ನು ಸುರಕ್ಷಿತವಾಗಿರಿಸಿ ಎಂದು ಕೋರಿದ್ದಾರೆ ಎಂದು ರಾಜ್‌ಭರ್ ಪ್ರತಿಪಾದಿಸಿದ್ದಾರೆ.

ಮತ್ತಷ್ಟು ಓದಿ:

ತನಿಖಾ ಸಂಸ್ಥೆಗಳ ಭೀತಿಯೇ ಕಾರಣವೇ?
ಅಖಿಲೇಶ್ ಯಾದವ್ ಅವರ ವಿರುದ್ಧ ಇರುವ ಹಳೆಯ ಗಣಿಗಾರಿಕೆ ಹಗರಣ ಮತ್ತು ಗೋಮತಿ ನದಿ ದಂಡೆ ಅಭಿವೃದ್ಧಿ ಪ್ರಕರಣಗಳ ತನಿಖೆಯನ್ನು ಉಲ್ಲೇಖಿಸಿರುವ ರಾಜ್‌ಭರ್, ರಾಮ್ ಗೋಪಾಲ್ ಯಾದವ್ ಅವರು ಆ ಪತ್ರದಲ್ಲಿ ಏನಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದ್ದಾರೆ. ಸಿಬಿಐ ತನಿಖೆಯ ಭೀತಿಯಿಂದಾಗಿಯೇ ಎಸ್‌ಪಿ ಸಂಸದರು ಪಕ್ಷ ಬದಲಾಯಿಸಲು ಸಿದ್ಧರಾಗುತ್ತಿದ್ದಾರೆ ಎಂಬ ಮುನ್ಸೂಚನೆಯನ್ನು ಅವರು ನೀಡಿದ್ದಾರೆ.

ವಿಡಿಯೋ

ಆರೋಪವನ್ನು ಆಧಾರರಹಿತ ಎಂದ ಸಮಾಜವಾದಿ ಪಕ್ಷ
ವಿರೋಧ ಪಕ್ಷಗಳನ್ನು ಒಡೆಯಲಾಗುತ್ತಿದೆ ಎಂಬ ಊಹಾಪೋಹಗಳ ನಡುವೆ ಬಂದಿರುವ ಈ ಹೇಳಿಕೆಯನ್ನು ಸಮಾಜವಾದಿ ಪಕ್ಷವು ಕಟ್ಟುನಿಟ್ಟಾಗಿ ನಿರಾಕರಿಸಿದೆ. ಎಸ್‌ಪಿ ರಾಷ್ಟ್ರೀಯ ವಕ್ತಾರ ಡಾ. ಅನುರಾಗ್ ಭದೌರಿಯಾ ಪ್ರತಿಕ್ರಿಯಿಸಿ, ಸಚಿವ ರಾಜ್‌ಭರ್ ಅವರಿಗೆ ಏನಾಗಿದೆ ಎಂದು ನನಗೆ ತಿಳಿಯುತ್ತಿಲ್ಲ. ಅವರು ಸಮಾಜವಾದಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರಲು ಯಾವುದೇ ಆಧಾರವಿಲ್ಲದ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ತಳ್ಳಿಹಾಕಿದ್ದಾರೆ.

ಶಿವಸೇನೆ (UBT): ಸಂಸದರು ಶಿಂಧೆ ಬಣಕ್ಕೆ ವಲಸೆ ಹೋಗುವುದನ್ನು ತಡೆಯಲು ಉದ್ಧವ್ ಠಾಕ್ರೆ ಮುಂಬೈನಲ್ಲಿ ತುರ್ತು ಸಭೆ ಕರೆದಿದ್ದು, ಎಲ್ಲಾ ಸಂಸದರು ಕಡ್ಡಾಯವಾಗಿ ಹಾಜರಾಗುವಂತೆ ಕಟ್ಟುನಿಟ್ಟಿನ ‘ವಿಪ್’ ಜಾರಿ ಮಾಡಿದ್ದಾರೆ.

ತೃಣಮೂಲ ಕಾಂಗ್ರೆಸ್ (TMC): ಮಮತಾ ಬ್ಯಾನರ್ಜಿ ಅವರ ಪಕ್ಷದ 20 ಬಂಡಾಯ ಸಂಸದರು ಈಗಾಗಲೇ ಎನ್‌ಸಿಪಿಐ (NCPI) ಪಕ್ಷದೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದ್ದು, ತಮಗೆ ಸಂಸತ್ತಿನಲ್ಲಿ ಪ್ರತ್ಯೇಕ ಮಾನ್ಯತೆ ನೀಡುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಮುಂದೆ ಅರ್ಜಿ ಸಲ್ಲಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಒಂದೇ ಕಾರಿನಲ್ಲಿ ಇಬ್ಬರು ಮಾಜಿ ಪತ್ನಿಯರು, ಭಾವಿ ಪತ್ನಿ; ಆಮಿರ್ ಖಾನ್ ಜರ್ನಿ ಕಂಡು ನೆಟ್ಟಿಗರು ಶಾಕ್ – Kannada News | Aamir Khan’s Third Marriage and Gauri Spratt: Viral Video with Ex Wives Shocks Fans

ಬಾಲಿವುಡ್ ನಟ ಆಮಿರ್ ಖಾನ್ ನಿರಂತರವಾಗಿ ಸುದ್ದಿಯಲ್ಲಿರುತ್ತಾರೆ. ಆದರೆ ಕಳೆದ ಕೆಲವು ದಿನಗಳಿಂದ ಅವರು ಯಾವುದೇ ಹೊಸ ಚಿತ್ರದ ಕಾರಣದಿಂದಾಗಿ ಅಲ್ಲ, ಬದಲಾಗಿ ಅವರ ಮೂರನೇ ಮದುವೆಯ ಮಾತುಕತೆಯಿಂದಾಗಿ ಸುದ್ದಿಯಲ್ಲಿದ್ದಾರೆ. ರೀನಾ ದತ್ತಾ ಮತ್ತು ಕಿರಣ್ ರಾವ್ ಅವರಿಗೆ ವಿಚ್ಛೇದನ ನೀಡಿದ ನಂತರ, ಆಮಿರ್ ಮತ್ತೊಮ್ಮೆ ಹೊಸ ಜೀವನವನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ಕಳೆದ ವರ್ಷ, ಅವರ 60 ನೇ ಹುಟ್ಟುಹಬ್ಬದಂದು, ಅವರು ತಮ್ಮ ಗೆಳತಿ ಗೌರಿ ಸ್ಪ್ರಾಟ್ ಅವರನ್ನು ಎಲ್ಲರಿಗೂ ಪರಿಚಯಿಸಿದರು. ಈಗ ಅವರು ಗೌರಿಯನ್ನು ಮದುವೆಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಈ ಮಧ್ಯೆ, ಆಮಿರ್ ಖಾನ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಆಮಿರ್ ಖಾನ್ ತಮ್ಮ ಮಾಜಿ ಪತ್ನಿ ಮತ್ತು ಅವರ ಭಾವಿ ಪತ್ನಿಯೊಂದಿಗೆ ಒಂದೇ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ವಿಶಿಷ್ಟ ಘಟನೆ ಇತ್ತೀಚೆಗೆ ಆಮಿರ್ ಖಾನ್ ಅವರ ‘ಲಗಾನ್’ ಚಿತ್ರದ 25 ನೇ ವಾರ್ಷಿಕೋತ್ಸವದ ಅದ್ಧೂರಿ ಆಚರಣೆಯಲ್ಲಿ ಸಂಭವಿಸಿದೆ. ಈ ಕಾರ್ಯಕ್ರಮದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ, ಆಮಿರ್ ಖಾನ್ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದರೆ, ಹಿಂದಿನ ಸೀಟಿನಲ್ಲಿ ಅವರ ಮಾಜಿ ಪತ್ನಿ ರೀನಾ ದತ್ತಾ, ಕಿರಣ್ ರಾವ್ ಮತ್ತು ಅವರ ಭಾವಿ ಪತ್ನಿ ಗೌರಿ ಸ್ಪ್ರಾಟ್ ಒಟ್ಟಿಗೆ ಕುಳಿತು ನಗುತ್ತಾ ಮಾತನಾಡುತ್ತಿರುವುದು ಕಂಡುಬರುತ್ತದೆ. ಕಿರಣ್ ಮತ್ತು ಆಮಿರ್ ಅವರ ಮಗ ಆಜಾದ್ ಕೂಡ ಅವರೊಂದಿಗೆ ಇದ್ದರು. ಈ ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.

ಗೌರಿ ಸ್ಪ್ರಾಟ್ ಯಾರು?

ಗೌರಿ ಸ್ಪ್ರಾಟ್ ಮೂಲತಃ ಬೆಂಗಳೂರಿನವರು. ಅವರ ತಾಯಿ ರೀಟಾ ಸ್ಪ್ರಾಟ್ ದೊಡ್ಡ ಸಲೂನ್ ಹೊಂದಿದ್ದಾರೆ. ಗೌರಿ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು ಬ್ಲೂ ಮೌಂಟೇನ್ ಶಾಲೆಯಲ್ಲಿ ಅಧ್ಯಯನ ಮಾಡಿದರು ಮತ್ತು 2004 ರಲ್ಲಿ ಲಂಡನ್ ವಿಶ್ವವಿದ್ಯಾಲಯದಿಂದ ಫ್ಯಾಷನ್ ಸ್ಟೈಲಿಂಗ್ ಮತ್ತು ಛಾಯಾಗ್ರಹಣದಲ್ಲಿ ಕೋರ್ಸ್ ಪೂರ್ಣಗೊಳಿಸಿದರು. ಅವರು ಪ್ರಸ್ತುತ ಮುಂಬೈನಲ್ಲಿ ‘ಬಿ ಬ್ಲಂಟ್’ ಎಂಬ ಪ್ರಸಿದ್ಧ ಸಲೂನ್ ಅನ್ನು ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ, ಗೌರಿಗೆ 7 ವರ್ಷದ ಮಗನೂ ಇದ್ದಾನೆ. ಕಳೆದ ಕೆಲವು ತಿಂಗಳುಗಳಲ್ಲಿ, ಚೀನಾದಲ್ಲಿ ನಡೆದ ‘ಮಕಾವು ಅಂತರರಾಷ್ಟ್ರೀಯ ಹಾಸ್ಯ ಉತ್ಸವ’ ಸೇರಿದಂತೆ ಹಲವಾರು ದೊಡ್ಡ ಕಾರ್ಯಕ್ರಮಗಳಲ್ಲಿ ಆಮಿರ್ ಮತ್ತು ಗೌರಿ ಒಟ್ಟಿಗೆ ಕಾಣಿಸಿಕೊಂಡರು.

ಇದನ್ನೂ ಓದಿ: ರವಿವರ್ಮಾ ಅನ್ನು ಆತ್ಮೀಯವಾಗಿ ಆಲಿಂಗಿಸಿದ ಸಲ್ಮಾನ್ ಖಾನ್, ಆಮಿರ್ ಖಾನ್

ಆಮಿರ್ ಅವರ ವೈವಾಹಿಕ ಜೀವನ ಕಥೆ

ಆಮಿರ್ ಖಾನ್ ಅವರ ವೈಯಕ್ತಿಕ ಜೀವನವು ಯಾವಾಗಲೂ ಚರ್ಚೆಯ ವಿಷಯವಾಗಿದೆ. 1986 ರಲ್ಲಿ, ಅವರು ರೀನಾ ದತ್ತಾ ಅವರೊಂದಿಗೆ ಮದುವೆ ಆದರು. ಅವರಿಗೆ ಜುನೈದ್ ಮತ್ತು ಇರಾ ಎಂಬ ಇಬ್ಬರು ಮಕ್ಕಳಿದ್ದಾರೆ. 16 ವರ್ಷಗಳ ದಾಂಪತ್ಯದ ನಂತರ, ಅವರು 2002 ರಲ್ಲಿ ವಿಚ್ಛೇದನ ಪಡೆದರು. ನಂತರ 2005 ರಲ್ಲಿ, ಅವರು ಕಿರಣ್ ರಾವ್ ಅವರನ್ನು ಮತ್ತೆ ವಿವಾಹವಾದರು. ಆದಾಗ್ಯೂ, 2021 ರಲ್ಲಿ, ಇಬ್ಬರೂ ಬೇರೆಯಾಗಲು ನಿರ್ಧರಿಸಿದರು. ಎರಡೂ ವಿಚ್ಛೇದನಗಳ ನಂತರವೂ, ಆಮಿರ್ ತನ್ನ ಮಾಜಿ ಪತ್ನಿಯರೊಂದಿಗೆ ತನ್ನ ಸಂಬಂಧ ಉಳಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:05 am, Thu, 18 June 26

Source link