Category Archives: Blog

Your blog category

ಹೈಕಮಾಂಡ್​ನಿಂದ ಸಿಎಂಗೆ ಬುಲಾವ್ ಬಗ್ಗೆ ಜಾರಕಿಹೊಳಿ ಶಾಕಿಂಗ್ ಮಾತು

ಬೆಂಗಳೂರು, (ಮೇ 25): ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ನಡುವಿನ ಕುರ್ಚಿ ಕಾಳಗ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಶೀತಲ ಸಮರ ಕೇವಲ ರಾಜ್ಯ ರಾಜಕಾರಣಕ್ಕೆ ಸೀಮಿತವಾಗಿಲ್ಲ. ಇದರ ಪ್ರತಿಧ್ವನಿ ರಾಷ್ಟ್ರ ರಾಜಧಾನಿ ದಿಲ್ಲಿಯವರೆಗೂ ತಲುಪಿದೆ. ರಾಜ್ಯ ಕಾಂಗ್ರೆಸ್‌ನ ಈ ಪವರ್ ಶೇರಿಂಗ್ ಗೊಂದಲದ ನಡುವೆ ಸಿಎಂಗೆ ಹೈಕಮಾಂಡ್ ಬುಲಾವ್‌ ನೀಡಿದೆ. ಹೀಗಾಗಿ ಕಾಂಗ್ರೆಸ್​​ನಲ್ಲಿನ ಕುರ್ಚಿ ಗುದ್ದಾಟಕ್ಕೆ ತೆರೆ ಬೀಳುತ್ತಾ ಎನ್ನುವ ಚರ್ಚೆ ಶುರುವಾಗಿದೆ. ಇನ್ನು ಈ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ನಾಳೆ 11 ಗಂಟೆಗೆ ಹೈಕಮಾಂಡ್ ಪ್ರಶ್ನೆ ಪತ್ರಿಕೆ ಕೊಡುತ್ತೆ. ಆ ಬಳಿಕ ಪ್ರಶ್ನೆಗೆ ಉತ್ತರ ಟಿಕ್ ಮಾಡ್ತಾರೆ. ಮೊದಲೇ ಪ್ರಶ್ನೆ ಪತ್ರಿಕೆ ಲೀಕ್ ಮಾಡಲ್ಲ ಬಿಡಿ ಎಂದು ಪರೋಕ್ಷವಾಗಿ ಅಧಿಕಾರ ಹಂಚಿಕೆ ಚರ್ಚೆಗೆ ಬ್ರೇಕ್ ಬೀಳಲಿದೆ ಎನ್ನುವ ಅರ್ಥದಲ್ಲಿ ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದಲ್ಲಿ ಆದ ಪೆಟ್ರೋಲ್ ಬೆಲೆ ಏರಿಕೆ ಬಹಳ ದೊಡ್ಡ ಹೆಚ್ಚಳವಾ? ಇಲ್ಲಿದೆ ವಾಸ್ತವ ಸ್ಥಿತಿ – Kannada News | Despite oil crisis, India’s petrol, diesel price hike is the smallest globally

ನವದೆಹಲಿ, ಮೇ 25: ಸರ್ಕಾರ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆ (Petrol and Diesel rates) ಮಾಡಿರುವ ಕ್ರಮಕ್ಕೆ ಬಹಳಷ್ಟು ವಿರೋಧಗಳು ವ್ಯಕ್ತವಾಗುತ್ತಿವೆ. ಆದರೆ, ಈ ವಿರೋಧಗಳಲ್ಲಿ ಸತ್ಯವೆಷ್ಟು ಮಿಥ್ಯವೆಷ್ಟು? ಅಂಕಿ ಅಂಶಗಳು ಬೇರೆಯೇ ಕಥೆ ಹೇಳುತ್ತವೆ. ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಂತರ ತೈಲ ಬೆಲೆ ಏರಿಕೆಯಾದರೂ ಭಾರತದಲ್ಲಿ ತಿಂಗಳುಗಟ್ಟಲೆ ಪೆಟ್ರೋಲ್, ಡೀಸಲ್ ಬೆಲೆ ಏರಿಸದೇ ತಡೆಯಲಾಗಿತ್ತು. ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿಮೆ ಕೂಡ ಮಾಡಿತು. ತೈಲ ಕಂಪನಿಗಳು ದಿನಕ್ಕೆ ಸಾವಿರಾರು ಕೋಟಿ ರೂ ನಷ್ಟ ಕಾಣುತ್ತಿದ್ದಾಗ್ಯೂ ಸರ್ಕಾರ ಇತ್ತೀಚೆಗಷ್ಟೇ ಅಲ್ಪ ಹೆಚ್ಚಳಕ್ಕೆ ಅನುವು ಮಾಡಿತ್ತು. 2026ರ ಫೆಬ್ರವರಿಯಲ್ಲಿ ‘ಸ್ಟೇಟ್ ಆಫ್ ಹಾರ್ಮುಜ್’ (Strait of Hormuz) ಮುಚ್ಚಲ್ಪಟ್ಟ ನಂತರ ಜಗತ್ತಿನಾದ್ಯಂತ ತೈಲ ಬೆಲೆಗಳು (crude oil prices) ಗಗನಕ್ಕೇರಿದರೂ, ಭಾರತವು ಸತತ 78 ದಿನಗಳ ಕಾಲ ಬೆಲೆಯನ್ನು ಹೆಚ್ಚಿಸದೆ ಸ್ಥಿರವಾಗಿಟ್ಟಿತ್ತು. ತದನಂತರ ಮೇ ತಿಂಗಳಲ್ಲಿ 4 ಹಂತಗಳಲ್ಲಿ ಮಾಡಿದ ಒಟ್ಟು ₹7 ರವರೆಗಿನ ಪರಿಷ್ಕರಣೆಯು ಜಗತ್ತಿನಲ್ಲೇ ಅತ್ಯಂತ ಕಡಿಮೆ ಬೆಲೆ ಏರಿಕೆಯಾಗಿದೆ.

ಜಾಗತಿಕ ಹೋಲಿಕೆ: ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆ ಏರಿಕೆ

ತೈಲ ಬಿಕ್ಕಟ್ಟಿನ ಸಮಯದಲ್ಲಿ ಇಡೀ ಜಗತ್ತು ಶೇ. 10 ರಿಂದ ಶೇ. 90 ರಷ್ಟು ಬೆಲೆ ಹೆಚ್ಚಳ ಮಾಡಿದರೆ, ಭಾರತವು ತನ್ನ ಇಂಧನ ಬೆಲೆಗಳನ್ನು ಬಹುತೇಕ ಬದಲಾಯಿಸದೆ ಗ್ರಾಹಕರಿಗೆ ನೆರವಾಯಿತು.

ಮೇ 15, 19, 23 ಮತ್ತು 25 ರಂದು ಒಟ್ಟು ನಾಲ್ಕು ಬಾರಿ ತೈಲ ಕಂಪನಿಗಳು ಬೆಲೆ ಪರಿಷ್ಕರಣೆ ಮಾಡಿದವು. ಇದರಿಂದಾಗಿ ಪೆಟ್ರೋಲ್ ಮೇಲೆ ಪ್ರತಿ ಲೀಟರ್‌ಗೆ ₹7.35 ಮತ್ತು ಡೀಸೆಲ್ ಮೇಲೆ ₹7.53 ರಷ್ಟು ಮಾತ್ರ ಹೆಚ್ಚಳವಾಗಿದೆ.

ಈ ಪರಿಷ್ಕರಣೆಯ ನಂತರ ದೆಹಲಿಯಲ್ಲಿ ಪೆಟ್ರೋಲ್ ದರ ₹94.77 ರಿಂದ ₹102.12 ಕ್ಕೆ ಹಾಗೂ ಡೀಸೆಲ್ ದರ ₹87.67 ರಿಂದ ₹95.20 ಕ್ಕೆ ತಲುಪಿದೆ.

ಯೂರೋಪ್‌ನ ಪ್ರಮುಖ ದೇಶಗಳಲ್ಲಿ ಪೆಟ್ರೋಲ್ ದರ ಲೀಟರ್‌ಗೆ ₹180 ಕ್ಕಿಂತ ಹೆಚ್ಚಿದ್ದರೆ, ಭಾರತವು ಅಭಿವೃದ್ಧಿ ಹೊಂದುತ್ತಿರುವ ಬಹುತೇಕ ದೇಶಗಳಿಗಿಂತ ಕಡಿಮೆ ದರದಲ್ಲಿ ಇಂಧನವನ್ನು ನೀಡುತ್ತಿದೆ. ನೆರೆರಾಷ್ಟ್ರಗಳಾದ ಪಾಕಿಸ್ತಾನ ಮತ್ತು ನೇಪಾಳಗಳಲ್ಲೂ ಪೆಟ್ರೋಲ್ ದರ ಲೀಟರ್‌ಗೆ ₹135 ಕ್ಕಿಂತ ಹೆಚ್ಚಿದೆ.

ಜಾಗತಿಕ ಸರಾಸರಿ ಪೆಟ್ರೋಲ್ ಬೆಲೆ ಏರಿಕೆ ಶೇ. 22ಕ್ಕೂ ಹೆಚ್ಚಿದೆ. 27 ದೇಶಗಳಿರುವ ಯೂರೋಪಿಯನ್ ಯೂನಿಯನ್​ನಲ್ಲಿ ಶೇ. 18ರಷ್ಟು ಏರಿದೆ. ತೈಲ ಉತ್ಪಾದನೆ ನಡೆಯುವ ಅಮೆರಿಕದಲ್ಲೇ ಗ್ಯಾಸೊಲಿನ್ ಬೆಲೆ ಶೇ. 44ರಷ್ಟು ಹೆಚ್ಚಿದೆ. ಪ್ರಮುಖ ತೈಲ ರಫ್ತು ದೇಶವಾದ ಯುಎಇ ಕೂಡ ಶೇ. 52ರಷ್ಟು ಬೆಲೆ ಹೆಚ್ಚಳ ಮಾಡಿದೆ.

ಮಯನ್ಮಾರ್, ಮಲೇಷ್ಯಾ, ಪಾಕಿಸ್ತಾನ, ಯುಎಇ ದೇಶಗಳಲ್ಲಿ ಪೆಟ್ರೋಲ್ ಬೆಲೆ ಶೇ. 50ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಆಗಿದೆ.

ಇದನ್ನೂ ಓದಿ: ಭರವಸೆ ಮೂಡಿಸಿದ ಅಮೆರಿಕ-ಇರಾನ್ ಡೀಲ್; ಗರಿಗೆದರಿದ ಷೇರುಬಜಾರು

ಕರ್ನಾಟಕ ಮೊದಲಾದ ಕೆಲ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಸರಾಸರಿಗಿಂತ ಹೆಚ್ಚಿರುವುದು ಹೇಗೆ?

ದೇಶದ ಎಲ್ಲಾ ರಾಜ್ಯಗಳಲ್ಲೂ ಕೇಂದ್ರ ಸರ್ಕಾರ ವಿಧಿಸುವ ಅಬಕಾರಿ ಸುಂಕ ಒಂದೇ ಆಗಿರುತ್ತದೆ. ಆದರೆ, ವಿವಿಧ ರಾಜ್ಯಗಳು ವಿಧಿಸುವ ಮೌಲ್ಯವರ್ಧಿತ ತೆರಿಗೆ (VAT) ಮತ್ತು ಸೆಸ್ (Cess) ಪ್ರಮಾಣದಲ್ಲಿನ ವ್ಯತ್ಯಾಸದಿಂದಾಗಿ ವಿವಿಧ ನಗರಗಳಲ್ಲಿ ಇಂಧನ ಬೆಲೆಗಳು ಬೇರೆಯಾಗಿರುತ್ತವೆ.

ವರದಿಯ ಪ್ರಕಾರ, ಪ್ರತಿಪಕ್ಷಗಳು (ಕಾಂಗ್ರೆಸ್ / ಇಂಡಿಯಾ ಕೂಟ / TVK / AAP) ಆಳುವ ರಾಜ್ಯಗಳಲ್ಲಿ ಇಂಧನ ದರಗಳು, ಎನ್‌ಡಿಎ (NDA/BJP) ಆಡಳಿತವಿರುವ ರಾಜ್ಯಗಳಿಗಿಂತ ಹೆಚ್ಚಿವೆ.

ಹೆಚ್ಚು ದರವಿರುವ ರಾಜ್ಯಗಳು: ತೆಲಂಗಾಣ (ಕಾಂಗ್ರೆಸ್) ಮತ್ತು ಕೇರಳ (ಇಂಡಿಯಾ ಕೂಟ) ರಾಜ್ಯಗಳಲ್ಲಿ ವ್ಯಾಟ್ ಅತ್ಯಂತ ಹೆಚ್ಚಾಗಿದ್ದು, ಅಲ್ಲಿ ಪೆಟ್ರೋಲ್ ದರ ₹112 ಕ್ಕಿಂತ ಹೆಚ್ಚಿದೆ. ಕರ್ನಾಟಕದಲ್ಲೂ ಪೆಟ್ರೋಲ್ ದರ ₹110.3 ರಷ್ಟಿದೆ.

ಕಡಿಮೆ ದರವಿರುವ ರಾಜ್ಯಗಳು: ಗುಜರಾತ್, ಉತ್ತರ ಪ್ರದೇಶ, ದೆಹಲಿ, ಹರಿಯಾಣ, ಗೋವಾ ಮತ್ತು ಅಸ್ಸಾಂನಂತಹ ಬಿಜೆಪಿ ಆಡಳಿತವಿರುವ ಆರು ರಾಜ್ಯಗಳಲ್ಲಿ ಪೆಟ್ರೋಲ್ ದರ ₹102 ಅಥವಾ ಅದಕ್ಕಿಂತ ಕಡಿಮೆಯಿದೆ.

ಡೀಸೆಲ್ ಮೇಲಿನ ತೆರಿಗೆ

ಸರಕು ಸಾಗಣೆ, ಕೃಷಿ ಮತ್ತು ಸಾರ್ವಜನಿಕ ಸಾರಿಗೆಗೆ ಬಳಕೆಯಾಗುವ ಡೀಸೆಲ್ ಮೇಲಿನ ವ್ಯಾಟ್ ಅನ್ನು ಬಿಜೆಪಿ ಆಡಳಿತದ ರಾಜ್ಯಗಳು ಕಡಿಮೆ ಇಟ್ಟಿವೆ. ಆದರೆ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಡೀಸೆಲ್ ದರ ಪ್ರತಿ ಲೀಟರ್‌ಗೆ ₹15 ರಿಂದ ₹16 ರಷ್ಟು ಹೆಚ್ಚಾಗಿದೆ. ಇದು ಶ್ರಮಿಕ ವರ್ಗದ ಮೇಲೆ ಹೆಚ್ಚಿನ ಹೊರೆ ಉಂಟುಮಾಡುತ್ತಿದೆ ಎಂದು ವರದಿ ಹೇಳುತ್ತದೆ.

ಇದನ್ನೂ ಓದಿ: ಮೊದಲ ಬಾರಿ ಇನ್ವೆಸ್ಟ್​ಮೆಂಟ್​ಗೆ ಪ್ರಯತ್ನಿಸುತ್ತಿದ್ದೀರಾ? ಹೇಗೆ ಆರಂಭಿಸೋದು, ಎಲ್ಲಿ ಹೂಡಿಕೆ ಮಾಡೋದು? ಇಲ್ಲಿದೆ ಟಿಪ್ಸ್

ಇಂಧನ ಬಿಕ್ಕಟ್ಟುಗಳ ನಿರ್ವಹಣೆ ಮತ್ತು ಸುಂಕ ಕಡಿತ

2022 ರ ರಷ್ಯಾ-ಉಕ್ರೇನ್ ಯುದ್ಧ ಮತ್ತು 2026 ರ ಹಾರ್ಮುಜ್ ಬಿಕ್ಕಟ್ಟಿನ ಸಂದರ್ಭದಲ್ಲಿ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 120 ಡಾಲರ್ ದಾಟಿದ್ದರೂ, ಭಾರತ ಸರ್ಕಾರವು ಕಳೆದ ನಾಲ್ಕು ವರ್ಷಗಳಲ್ಲಿ ನಾಲ್ಕು ಬಾರಿ ಚಿಲ್ಲರೆ ಇಂಧನ ಬೆಲೆಯನ್ನು ಕಡಿತಗೊಳಿಸಿದೆ.

ಕೇಂದ್ರ ಸುಂಕ ಕಡಿತದ ಇತಿಹಾಸ

  • 4 ನವೆಂಬರ್ 2021: ಪೆಟ್ರೋಲ್ ₹5, ಡೀಸೆಲ್ ₹10 ಕಡಿತ.
  • 21 ಮೇ 2022: ಪೆಟ್ರೋಲ್ ₹8, ಡೀಸೆಲ್ ₹6 ಕಡಿತ.
  • 14 ಮಾರ್ಚ್ 2024: ತೈಲ ಕಂಪನಿಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ತಲಾ ₹2 ಕಡಿತ.
  • 27 ಮಾರ್ಚ್ 2026: ಹಾರ್ಮುಜ್ ಬಿಕ್ಕಟ್ಟಿನ ಮುನ್ನ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತಲಾ ₹10 ರಷ್ಟು ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (SAED) ಕಡಿತಗೊಳಿಸಲಾಯಿತು. ಇದರಿಂದಾಗಿ ಡೀಸೆಲ್ ಮೇಲಿನ ಕೇಂದ್ರ ಸುಂಕ ಶೂನ್ಯಕ್ಕಿಳಿಯಿತು. ಈ ಹೊರೆಯನ್ನು ಸರ್ಕಾರವೇ ಭರಿಸಿದೆ.

ಯುಪಿಎ ಅವಧಿಯ ‘ತೈಲ ಬಾಂಡ್‌ಗಳು’ ಮತ್ತು ಪ್ರಸ್ತುತ ನೀತಿ

2014 ರಲ್ಲಿ ಪೆಟ್ರೋಲ್ ಬೆಲೆ ₹71 ಇತ್ತು ಎಂದು ಕಾಂಗ್ರೆಸ್ ವಾದಿಸುತ್ತದೆ. ಆದರೆ ಆ ಬೆಲೆಯು ಅಂದಿನ ಯುಪಿಎ ಸರ್ಕಾರವು (2005-2010ರ ನಡುವೆ) ತೈಲ ಕಂಪನಿಗಳಿಗೆ ನೀಡಿದ್ದ ₹1.34 ಲಕ್ಷ ಕೋಟಿ ಮೌಲ್ಯದ ‘ಆಯಿಲ್ ಬಾಂಡ್‌ಗಳ’ ಪರಿಣಾಮವಾಗಿತ್ತು. ಇದು ಮುಂದಿನ ಪೀಳಿಗೆಯ ಮೇಲೆ ಹೊರಿಸಲಾದ ಸಾಲವಾಗಿತ್ತು.

ಪ್ರಸ್ತುತ ಮೋದಿ ಸರ್ಕಾರವು ಆ ಹಳೆಯ ತೈಲ ಬಾಂಡ್‌ಗಳ ಅಸಲು ಮತ್ತು ಬಡ್ಡಿಯನ್ನು ತೀರಿಸುತ್ತಿದೆ. 2021 ರಿಂದ ಈವರೆಗೆ 1.30 ಲಕ್ಷ ಕೋಟಿಗೂ ಅಧಿಕ ಅಸಲು ಹಣವನ್ನು ಸರ್ಕಾರ ಮರುಪಾವತಿಸಿದೆ.

ಈಗಿನ ಸರ್ಕಾರವು ಯಾವುದೇ ಹೊಸ ಸಾಲದ ಬಾಂಡ್‌ಗಳನ್ನು ಸೃಷ್ಟಿಸದೆ, ನೇರವಾಗಿ ಕೇಂದ್ರ ಅಬಕಾರಿ ಸುಂಕವನ್ನು ಕಡಿತಗೊಳಿಸುವ ಮೂಲಕ ತೈಲ ಬೆಲೆಯ ಹೊರೆಯನ್ನು ಬಜೆಟ್‌ನಲ್ಲೇ ಹೀರಿಕೊಳ್ಳುತ್ತಿದೆ. 27 ಮಾರ್ಚ್ 2026 ರ ಒಂದೇ ಒಂದು ಸುಂಕ ಕಡಿತದಿಂದ ಕೇಂದ್ರ ಸರ್ಕಾರಕ್ಕೆ ಸುಮಾರು ₹30,000 ಕೋಟಿ ರಾಜಸ್ವದ ನಷ್ಟವಾಗಿದೆ.

ಜಾಗತಿಕ ಯುದ್ಧ ಮತ್ತು ಬಿಕ್ಕಟ್ಟುಗಳ ನಡುವೆಯೂ ಭಾರತವು ತನ್ನ ಗ್ರಾಹಕರನ್ನು ರಕ್ಷಿಸಲು ಗರಿಷ್ಠ ಪ್ರಯತ್ನ ಮಾಡಿದೆ. ಕೇಂದ್ರ ಸರ್ಕಾರವು ತನ್ನ ತೆರಿಗೆಯನ್ನು ಕಡಿತಗೊಳಿಸಿ ಹಳೆಯ ತೈಲ ಬಾಂಡ್‌ಗಳ ಸಾಲವನ್ನೂ ತೀರಿಸುತ್ತಿದ್ದರೆ, ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳು ತಮ್ಮ ವ್ಯಾಟ್ (VAT) ದರವನ್ನು ಕಡಿಮೆ ಮಾಡದೆ ಇರುವುದರಿಂದ ಅಲ್ಲಿನ ಗ್ರಾಹಕರು ಹೆಚ್ಚಿನ ಹಣ ನೀಡಬೇಕಾಗಿ ಬಂದಿದೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

2+3+6 ಸಂಯೋಜನೆಯಲ್ಲಿ ಕಣಕ್ಕಿಳಿಯಲಿದೆ RCB – Kannada News | IPL 2026: RCB Playing XI For GT Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ನಾಳೆ (ಮೇ 26) ಧರ್ಮಶಾಲಾದ ಹೆಚ್​ಪಿಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಮ್ಯಾಚ್​ನಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್​ಗೆ ಎಂಟ್ರಿ ಕೊಡಲಿದೆ. ಹೀಗಾಗಿ ಆರ್​ಸಿಬಿ ತಂಡವು ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಅನ್ನೇ ಕಣಕ್ಕಿಳಿಸಲಿದೆ.

ಇಲ್ಲಿ ಆರ್​ಸಿಬಿ ತಂಡವು 6+2+3 ಸಂಯೋಜನೆಯಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಏಕೆಂದರೆ ಧರ್ಮಶಾಲಾ ಪಿಚ್ ಬ್ಯಾಟಿಂಗ್​ಗೆ ಪೂರಕ. ಹೀಗಾಗಿ ಆರ್​ಸಿಬಿ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿಯನ್ನು ಆರಂಭಿಕರಾಗಿ ಕಣಕ್ಕಿಳಿಸಲಿದ್ದಾರೆ.

ಇನ್ನು ಮೂರನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಕಾಣಿಸಿಕೊಳ್ಳಲಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ರಜತ್ ಪಾಟಿದಾರ್ ಬ್ಯಾಟ್ ಬೀಸಿದರೆ, ಐದನೇ ಕ್ರಮಾಂಕದಲ್ಲಿ ಟಿಮ್ ಡೇವಿಡ್ ಕಾಣಿಸಿಕೊಳ್ಳಲಿದ್ದಾರೆ. ಅದೇ ರೀತಿ ವಿಕೆಟ್ ಕೀಪರ್ ಆಗಿ ಜಿತೇಶ್ ಶರ್ಮಾ ಆಡುವ ಬಳಗದಲ್ಲಿ ಇರಲಿದ್ದಾರೆ.

ಹಾಗೆಯೇ ಆಲ್​ರೌಂಡರ್​ಗಳಾಗಿ ಕೃನಾಲ್ ಪಾಂಡ್ಯ ಹಾಗೂ ರೊಮಾರಿಯೊ ಶೆಫರ್ಡ್ ಅನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚು.  ಇನ್ನು ಬೌಲರ್​ಗಳಾಗಿ ಜೋಶ್ ಹೇಝಲ್​ವುಡ್, ಭುವನೇಶ್ವರ್ ಕುಮಾರ್ ಹಾಗೂ ರಾಸಿಖ್ ಸಲಾಂ ಕಣಕ್ಕಿಳಿಯಲಿದ್ದಾರೆ.

ಇವರೊಂದಿಗೆ ಇಂಪ್ಯಾಕ್ಟ್ ಪ್ಲೇಯರ್ ಪಟ್ಟಿಯಲ್ಲಿ ವೆಂಕಟೇಶ್ ಅಯ್ಯರ್ ಹಾಗೂ ಸುಯಶ್ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿ ಬ್ಯಾಟರ್​ನನ್ನು ಬಳಸಬೇಕಿದ್ದರೆ ವೆಂಕಟೇಶ್ ಅಯ್ಯರ್ ಅವರನ್ನು ಕಣಕ್ಕಿಳಿಸಬಹುದು. ಇಲ್ಲಾ ಬೌಲರ್​ನ ಅವಶ್ಯಕತೆ ಇದ್ದರೆ ದೇವದತ್ ಪಡಿಕ್ಕಲ್ ಬದಲಿಗೆ ಸುಯಶ್ ಶರ್ಮಾ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯಲಿದ್ದಾರೆ.

ಅಂದರೆ ಆರ್​ಸಿಬಿ ತಂಡವು 6 ಬ್ಯಾಟರ್​ಗಳು, 2 ಆಲ್​ರೌಂಡರ್​ಗಳು ಹಾಗೂ 3 ಬೌಲರ್​ಗಳನ್ನು ಒಳಗೊಂಡಂತೆ ಪ್ಲೇಯಿಂಗ್ ಇಲೆವೆನ್ ರೂಪಿಸಲಿದೆ. ಅದರಂತೆ ಆರ್​ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  1. ವಿರಾಟ್ ಕೊಹ್ಲಿ
  2. ಫಿಲ್ ಸಾಲ್ಟ್
  3. ದೇವದತ್ ಪಡಿಕ್ಕಲ್
  4. ರಜತ್ ಪಾಟಿದಾರ್ (ನಾಯಕ)
  5. ಟಿಮ್ ಡೇವಿಡ್
  6. ಜಿತೇಶ್ ಶರ್ಮಾ (ವಿಕೆಟ್ ಕೀಪರ್)
  7. ಕೃನಾಲ್ ಪಾಂಡ್ಯ
  8. ರೊಮಾರಿಯೊ ಶೆಫರ್ಡ್​
  9. ಜೋಶ್ ಹೇಝಲ್​ವುಡ್​
  10. ಭುವನೇಶ್ವರ್ ಕುಮಾರ್
  11. ರಾಸಿಖ್ ಸಲಾಂ
  12. ವೆಂಕಟೇಶ್ ಅಯ್ಯರ್ ಅಥವಾ ಸುಯಶ್ ಶರ್ಮಾ (ಇಂಪ್ಯಾಕ್ಟ್ ಪ್ಲೇಯರ್)

ಇದನ್ನೂ ಓದಿ: IPL 2026: ಐಪಿಎಲ್ ಇತಿಹಾಸದಲ್ಲೇ ಈ ರೀತಿಯ ಪ್ಲೇಆಫ್ ಇದೇ ಮೊದಲು..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್,  ಯಶ್ ದಯಾಳ್, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್, ರಿಚರ್ಡ್ ಗ್ಲೀಸನ್.

Source link

ಅಭಿಮಾನವಲ್ಲ, ಇದು ಅಭಿಮಾನಿಗಳ ವಿಕೃತಿ: ಟ್ರಾವಿಸ್ ಹೆಡ್ ಪತ್ನಿಯ ಆಳಲು! – Kannada News | Travis Head’s wife exposes ugly fallout from Virat Kohli IPL spat

“ಕ್ರೀಡೆಯಲ್ಲಿ ಭಾವನೆ ಮತ್ತು ಉದ್ವೇಗ ಇರುವುದು ಸಹಜ. ಆದರೆ ಆಟದ ಹಿಂದೆ ನಿಜವಾದ ಮನುಷ್ಯರು ಮತ್ತು ಅವರ ಕುಟುಂಬಗಳು ಇರುತ್ತವೆ ಎಂಬುದನ್ನು ಮರೆಯಬಾರದು.” ಇದು ಐಪಿಎಲ್ 2026ರ ಆನ್‌ಲೈನ್ ಕಿರುಕುಳಕ್ಕೆ ಬೇಸತ್ತು ಆಸ್ಟ್ರೇಲಿಯಾದ ಕ್ರಿಕೆಟರ್ ಟ್ರಾವಿಸ್ ಹೆಡ್ ಅವರ ಪತ್ನಿ ಜೆಸ್ಸಿಕಾ ಹೆಡ್ (Jessica Head) ಆಸ್ಟ್ರೇಲಿಯಾದ ಮಾಧ್ಯಮವೊಂದಕ್ಕೆ ನೀಡಿರುವ ಹೃದಯವಿದ್ರಾವಕ ಹೇಳಿಕೆ.

ಘಟನೆಯ ಹಿನ್ನೆಲೆ ಏನು?

ಐಪಿಎಲ್ 2026ರ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಪಂದ್ಯದ ವೇಳೆ ಟ್ರಾವಿಸ್ ಹೆಡ್ ಮತ್ತು ವಿರಾಟ್ ಕೊಹ್ಲಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಪಂದ್ಯ ಮುಗಿದ ಬಳಿಕ ಕೊಹ್ಲಿ ಹಸ್ತಲಾಘವ ಮಾಡಲು ನಿರಾಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಆದರೆ, ಕ್ರೀಡಾಂಗಣದೊಳಗಿನ ಈ ಸ್ಲೆಡ್ಜಿಂಗ್ ಮತ್ತು ಪೈಪೋಟಿ ಪಂದ್ಯ ಮುಗಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹೊಸ  ರೂಪ ಪಡೆದುಕೊಂಡಿದೆ. ಕೆಲವು ಅತಿರೇಕದ ಅಭಿಮಾನಿಗಳು ಟ್ರಾವಿಸ್ ಹೆಡ್ ಮಾತ್ರವಲ್ಲದೆ ಅವರ ಪತ್ನಿ ಜೆಸ್ಸಿಕಾ, ಅವರ ಸ್ನೇಹಿತರು ಮತ್ತು ಕುಟುಂಬದವರ ಖಾತೆಗಳ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ.

ಜೆಸ್ಸಿಕಾ ಹೆಡ್ ಆಕ್ರೋಶ:

ಈ ಇಡೀ ಘಟನೆಯಿಂದ ತೀವ್ರ ಬೇಸರಗೊಂಡಿರುವ ಜೆಸ್ಸಿಕಾ ಹೆಡ್, “ವಿಶ್ವಕಪ್ ಮುಗಿದ ನಂತರ ನಡೆದ ದೌರ್ಜನ್ಯ ಮತ್ತೊಮ್ಮೆ ಮರುಕಳಿಸಿದಂತೆ ಭಾಸವಾಗುತ್ತಿದೆ. ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ನನ್ನ ಸೋಶಿಯಲ್ ಮೀಡಿಯಾ ಖಾತೆಗಳು ತುಂಬಿಹೋಗಿವೆ. ನನ್ನ ಸ್ನೇಹಿತರು ಮತ್ತು ಕುಟುಂಬದವರನ್ನು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ,” ಎಂದು ನೋವು ತೋಡಿಕೊಂಡಿದ್ದಾರೆ.

ಮುಂದುವರಿದು ಮಾತನಾಡಿದ ಅವರು, “ಈ ಘಟನೆಯಾದರೂ ಜನರ ಮನಸ್ಸಿನಲ್ಲಿ ಪರಸ್ಪರರ ಬಗ್ಗೆ ಸ್ವಲ್ಪ ದಯೆ ಮತ್ತು ಗೌರವವನ್ನು ಮೂಡಿಸಲಿ ಎಂದು ನಾನು ಭಾವಿಸುತ್ತೇನೆ,” ಎಂದು ಆಶಿಸಿದ್ದಾರೆ.

ಇದು ಮೊದಲ ಬಾರಿಯೇನಲ್ಲ!

ಜೆಸ್ಸಿಕಾ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿರುವಂತೆ, ಇದು ಅವರಿಗೆ ಮೊದಲ ಕಹಿ ಅನುಭವವೇನಲ್ಲ. 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಟ್ರಾವಿಸ್ ಹೆಡ್ ಶತಕ ಬಾರಿಸಿ ಭಾರತದ ವಿರುದ್ಧ ಆಸ್ಟ್ರೇಲಿಯಾವನ್ನು ಗೆಲ್ಲಿಸಿದ್ದರು. ಆ ಪಂದ್ಯ ಮುಗಿದ ತಕ್ಷಣವೂ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಒಂದು ಸಣ್ಣ ವರ್ಗ ಜೆಸ್ಸಿಕಾ ಮತ್ತು ಅವರ ಪುಟಾಣಿ ಮಗಳ ಇನ್‌ಸ್ಟಾಗ್ರಾಮ್ ಖಾತೆಗಳಿಗೆ ನುಗ್ಗಿ ಅತ್ಯಂತ ನಿಂದನಾತ್ಮಕ ಸಂದೇಶಗಳನ್ನು ಹಾಗೂ ಜೀವ ಬೆದರಿಕೆಗಳನ್ನು ಹಾಕಿದ್ದರು.

ಇದನ್ನೂ ಓದಿ: IPL 2026: ಐಪಿಎಲ್ ಇತಿಹಾಸದಲ್ಲೇ ಈ ರೀತಿಯ ಪ್ಲೇಆಫ್ ಇದೇ ಮೊದಲು..!

 ‘ಅಂಧಾಭಿಮಾನ’ವಾಗದಿರಲಿ!

“ಆಟಗಳು ಕೇವಲ ಗೆಲುವು-ಸೋಲುಗಳ ಪ್ರದರ್ಶನವಲ್ಲ. ಅವು ಮಾನವೀಯತೆ, ಶಿಸ್ತು ಮತ್ತು ಪರಸ್ಪರ ಗೌರವವನ್ನು ಕಲಿಸುವ ವೇದಿಕೆಗಳು. ಮೈದಾನದ ಪೈಪೋಟಿ ಮೈದಾನದಲ್ಲೇ ಕೊನೆಗೊಳ್ಳಬೇಕು. ಆಟಗಾರರ ಕುಟುಂಬಗಳನ್ನು, ಮಹಿಳೆಯರನ್ನು ಮತ್ತು ಮಕ್ಕಳನ್ನು ಗುರಿಯಾಗಿಸಿ ಆನ್‌ಲೈನ್‌ನಲ್ಲಿ ವಿಷ ಕಾರುವ ವಿಕೃತ ಮನಸ್ಥಿತಿಗೆ ಈಗಲೇ ಬ್ರೇಕ್ ಬೀಳಬೇಕಿದೆ. ಕ್ರೀಡೆಯ ಮೇಲಿರುವ ನಮ್ಮ ‘ಅಭಿಮಾನ’ ಇನ್ನೊಬ್ಬರ ನೆಮ್ಮದಿಯನ್ನು ಕದಡುವ ‘ಅಂಧಾಭಿಮಾನ’ವಾಗದಿರಲಿ. ಜೆಸ್ಸಿಕಾ ಹೆಡ್ ಅವರ ಮಾತುಗಳು ಕೇವಲ ಒಂದು ಅಳಲಲ್ಲ; ಅದು ಪ್ರತಿಯೊಬ್ಬ ಕ್ರೀಡಾಪ್ರೇಮಿಯೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಎಚ್ಚರಿಕೆಯ ಗಂಟೆ.”

Source link

ಪೆಟ್ರೋಲ್ ಡೀಸೆಲ್ ಬೆಲೆ ಇನ್ನೂ ಏರಿಕೆಯಾಗುತ್ತಾ? ಇಂಧನ ದರದಲ್ಲಿ ಕೇಂದ್ರ, ರಾಜ್ಯಕ್ಕೆಷ್ಟು ಪಾಲು ಎಂಬ ಮಾಹಿತಿ ಇಲ್ಲಿದೆ – Kannada News | Petrol Diesel Prices may Keep Rising! Understanding Central Excise Duty and State VAT Share in Total Fuel Tax

ಬೆಂಗಳೂರು, ಮೇ 25: ಕಳೆದ 11 ದಿನಗಳಲ್ಲಿ ನಾಲ್ಕನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 2.83 ರೂಪಾಯಿ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 2.82 ರೂಪಾಯಿ ಹೆಚ್ಚಳವಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಪೆಟ್ರೋಲ್ ದರ 110.44 ರೂಪಾಯಿ ಮತ್ತು ಡೀಸೆಲ್ ದರ 98.39 ರೂಪಾಯಿಗೆ ತಲುಪಿದೆ. ಭಾರತವು ತನ್ನ ಕಚ್ಚಾ ತೈಲದ ಶೇ 85ಕ್ಕೂ ಹೆಚ್ಚು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ಪಶ್ಚಿಮ ಏಷ್ಯಾದಲ್ಲಿ ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷ, ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಸಾಗಣೆಯ ಅಡಚಣೆ, ಹಾಗೂ ರೂಪಾಯಿ ಅಪಮೌಲ್ಯವು ಜಾಗತಿಕ ಕಚ್ಚಾ ತೈಲದ ಬೆಲೆ ಏರಿಕೆಗೆ ಕಾರಣವಾಗಿದೆ. ಅಲ್ಲದೆ, ತೈಲ ಕಂಪನಿಗಳು 76 ದಿನಗಳ ಕಾಲ ನಷ್ಟವನ್ನು ಭರಿಸಿದ್ದು, ಈಗ ಅದನ್ನು ಗ್ರಾಹಕರಿಗೆ ವರ್ಗಾಯಿಸುತ್ತಿವೆ.

ಪೆಟ್ರೋಲ್ ಡೀಸೆಲ್ ದರದಲ್ಲಿ ರಾಜ್ಯ, ಕೇಂದ್ರದ ಪಾಲು

ಪೆಟ್ರೋಲ್, ಡೀಸೆಲ್ ಬೆಲೆಯ ಅರ್ಧದಷ್ಟು ಭಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆ ಹಾಗೂ ಸೆಸ್ ರೂಪದಲ್ಲಿರುತ್ತದೆ. ಉದಾಹರಣೆಗೆ, 100 ರೂಪಾಯಿ ಪೆಟ್ರೋಲ್‌ನಲ್ಲಿ ತೈಲ ಕಂಪನಿಗಳು ಕಚ್ಚಾ ಮತ್ತು ಸಂಸ್ಕರಣಾ ವೆಚ್ಚ, ಲಾಜಿಸ್ಟಿಕ್ಸ್‌ಗಾಗಿ 50-55 ರೂಪಾಯಿ ಪಡೆಯುತ್ತವೆ. ಪಂಪ್ ಡೀಲರ್‌ಗಳಿಗೆ ಮಾರಾಟ ಕಮಿಷನ್ ರೂಪದಲ್ಲಿ 3-4 ರೂಪಾಯಿ ಸಿಗುತ್ತದೆ. ಕೇಂದ್ರ ಸರ್ಕಾರ ಅಬಕಾರಿ ಸುಂಕ ಮತ್ತು ಸೆಸ್ ರೂಪದಲ್ಲಿ 11-15 ರೂಪಾಯಿ ಸಂಗ್ರಹಿಸಿದರೆ, ರಾಜ್ಯ ಸರ್ಕಾರಗಳು ವ್ಯಾಟ್ ಮತ್ತು ಲೇವಿಗಳ ಮೂಲಕ 25-30 ರೂಪಾಯಿ ಪಡೆಯುತ್ತವೆ.

ಸದ್ಯದ ಪರಿಸ್ಥಿತಿಯಲ್ಲಿ ತಕ್ಷಣದ ಪರಿಹಾರ ಬೇಕಿದ್ದರೆ ಸರ್ಕಾರಗಳು ಅಬಕಾರಿ ಸುಂಕ ಮತ್ತು ವ್ಯಾಟ್ ಕಡಿತಗೊಳಿಸುವುದು ಅನಿವಾರ್ಯ. ಇಲ್ಲದಿದ್ದರೆ ಸಾರಿಗೆ ವೆಚ್ಚ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಮತ್ತಷ್ಟು ಆರ್ಥಿಕ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bangalore Rain: ಬೆಂಗಳೂರಿನಲ್ಲಿ ಶುಕ್ರವಾರದವರೆಗೆ ಗುಡುಗು ಸಹಿತ ಭಾರೀ ಮಳೆ – Kannada News | Bangalore Weather Update: Heavy Rain Expected, Temperature Drops, Yellow Alert Issued by IMD

ಬೆಂಗಳೂರು, ಮೇ.25: ತೀವ್ರ ಉಷ್ಣಾಂಶ ಮತ್ತು ಬಿಸಿಲಿನಿಂದ ಕಂಗಾಲಾಗಿದ್ದ ರಾಜಧಾನಿ ಬೆಂಗಳೂರಿನ ಜನತೆಗೆ ಹವಾಮಾನ ಇಲಾಖೆ ಕೂಲ್​ ಸುದ್ದಿ ನೀಡಿದೆ. ಭಾರತೀಯ ಹವಾಮಾನ ಇಲಾಖೆ (IMD) ಭಾನುವಾರ ಹೊರಡಿಸಿರುವ ಇತ್ತೀಚಿನ ಮುನ್ಸೂಚನೆಯ ಪ್ರಕಾರ, ಬೆಂಗಳೂರಿನಲ್ಲಿ ಮೇ 29 ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ಇಡೀ ವಾರ ನಗರದಾದ್ಯಂತ ಗುಡುಗು, ಸಿಡಿಲು ಸಹಿತ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆ (Cyclonic Circulation) ಉಂಟಾಗಿರುವುದರಿಂದ ಹವಾಮಾನ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಇದು ಬೆಂಗಳೂರಿನಾದ್ಯಂತ ವ್ಯಾಪಕ ಮತ್ತು ನಿರಂತರ ಮಳೆಗೆ ಅತ್ಯಂತ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಜೊತೆಗೆ, ಬಿಹಾರದ ದಕ್ಷಿಣ ಭಾಗದಿಂದ ಜಾರ್ಖಂಡ್ ಮತ್ತು ಒಡಿಶಾ ಮೂಲಕ ಆಂಧ್ರಪ್ರದೇಶದ ಉತ್ತರ ಕರಾವಳಿಯವರೆಗೆ ವಿಸ್ತರಿಸಿರುವ ಉತ್ತರ-ದಕ್ಷಿಣ ವಾಯುಭಾರ ಕುಸಿತವೂ ಪ್ರಸ್ತುತ ಹವಾಮಾನ ವೈಪರೀತ್ಯಕ್ಕೆ ಪ್ರಮುಖ ಕಾರಣವಾಗಿದೆ.

ಇನ್ನು ನಗರದಲ್ಲಿ ಸೋಮವಾರ ಮಧ್ಯಾಹ್ನ ಮತ್ತು ಸಂಜೆ ವೇಳೆಗೆ ದಟ್ಟವಾದ ಮೋಡ ಕವಿದ ವಾತಾವರಣವಿರಲಿದ್ದು, ಕೆಲವು ಭಾಗಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಲವಾದ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ನಗರದ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 32 ಡಿಗ್ರಿ ಸೆಲ್ಸಿಯಸ್ ಮತ್ತು 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮುನ್ನೆಚ್ಚರಿಕಾ ಕ್ರಮವಾಗಿ ವಾರದಾದ್ಯಂತ ಬೆಂಗಳೂರಿಗೆ ‘ಹಳದಿ ಎಚ್ಚರಿಕೆ’ ನೀಡಲಾಗಿದೆ.

ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವರುಣಾರ್ಭಟ! 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಕಳೆದ ವಾರಕ್ಕೆ ಹೋಲಿಸಿದರೆ ಬೆಂಗಳೂರಿನಾದ್ಯಂತ ತಾಪಮಾನದಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ. ಕರ್ನಾಟಕದ ಹಲವು ಭಾಗಗಳಲ್ಲಿ ಉಷ್ಣಾಂಶವು ಸಾಮಾನ್ಯಕ್ಕಿಂತ 2 ರಿಂದ 5 ಡಿಗ್ರಿ ಸೆಲ್ಸಿಯಸ್‌ವರೆಗೆ ಕಡಿಮೆಯಾಗಿದೆ. ಈ ಹಿಂದೆ ಸರಾಸರಿ 34 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದ್ದ ಗರಿಷ್ಠ ತಾಪಮಾನವು ಸದ್ಯ 30 ಡಿಗ್ರಿ ಸೆಲ್ಸಿಯಸ್‌ಗಿಂತ ಕೆಳಗೆ ಇಳಿದಿದೆ. ಇನ್ನು ಬೆಂಗಳೂರು ಮಾತ್ರವಲ್ಲದೆ, ಇಡೀ ಉತ್ತರ ಒಳನಾಡು ಕರ್ನಾಟಕ, ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡು ಕರ್ನಾಟಕದ ಬಹುತೇಕ ಜಿಲ್ಲೆಗಳಿಗೂ ಮೇ 29 ರವರೆಗೆ ಹಳದಿ ಅಲರ್ಟ್ ಘೋಷಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:59 am, Mon, 25 May 26

Source link

ಮಂಡ್ಯ: ನಾಗಮಂಗಲ ಕಂದಾಯ ಇಲಾಖೆಯಲ್ಲಿ ಭಾರಿ ಗೋಲ್ಮಾಲ್, 1000 ಎಕರೆ ಭೂ ಅಕ್ರಮ ಬಯಲಿಗೆ – Kannada News | Mandya Nagamangala Land Scam: Upa Lokayukta Justice B Veerappa Confirms Bagar Hukum Fraud Expanded to 1,000 Acres

ಮಂಡ್ಯ, ಮೇ 25: ಮಂಡ್ಯ (Mandya) ಜಿಲ್ಲೆಯ ನಾಗಮಂಗಲ ತಾಲೂಕು ಕಂದಾಯ ಇಲಾಖೆಯಲ್ಲಿ ನಡೆದಿರುವ ಬಗರ್‌ಹುಕುಂ ಭೂ ಮಂಜೂರಾತಿ ಹಗರಣದ ಲೋಕಾಯುಕ್ತ ತನಿಖೆ ವೇಳೆ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಮೀಲಾಗಿ ನಡೆಸಿದ್ದ ಭೂ ಮಾಫಿಯಾದ ಜಾಲವು ಬರೋಬ್ಬರಿ 1,000 ಎಕರೆ ಸರ್ಕಾರಿ ಜಮೀನನ್ನು ನುಂಗಿ ನೀರು ಕುಡಿದಿರುವುದು ತನಿಖೆಯಲ್ಲಿ ಬಯಲಾಗಿದೆ. ಅರ್ಹತೆ ಇಲ್ಲದ ಸ್ಥಳೀಯ ಪ್ರಭಾವಿಗಳಿಗೆ, ಹಣ ಕೊಟ್ಟ ಖದೀಮರಿಗೆ ಹಾಗೂ ಹೊರ ರಾಜ್ಯದ ವ್ಯಕ್ತಿಗಳಿಗೂ ಕಾನೂನು ಬಾಹಿರವಾಗಿ ನಕಲಿ ದಾಖಲೆ ಸೃಷ್ಟಿಸಿ ಮಂಜೂರಾತಿ ಖಾತೆ ಮಾಡಿಕೊಡಲಾಗಿತ್ತು ಎಂಬುದನ್ನು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಬಹಿರಂಗಪಡಿಸಿದ್ದಾರೆ.

ಮುಖ್ಯಾಂಶಗಳು

  • ಮೂರು ತಿಂಗಳ ಹಿಂದೆ ಲೋಕಾಯುಕ್ತರು ಪ್ರಾಥಮಿಕ ದಾಳಿ ನಡೆಸಿದಾಗ ಕೇವಲ 238 ಎಕರೆ ಭೂ ಅಕ್ರಮ ಪತ್ತೆಯಾಗಿತ್ತು.
  • ಮಂಡ್ಯ ಎಎಸ್‌ಪಿ ನೇತೃತ್ವದ ವಿಶೇಷ ತಂಡ ನಡೆಸಿದ ವಿಸ್ತೃತ ತನಿಖೆಯ ವೇಳೆ, 1,000 ಎಕರೆಯಷ್ಟು ಗೋಮಾಳ ಭೂಮಿ ಲೂಟಿಯಾಗಿರುವುದು ಸಾಬೀತಾಗಿದೆ.
  • ಕಂದಾಯ ಇಲಾಖೆಯ ಅಧಿಕಾರಿಗಳು ಮಂಜೂರಾತಿ ನಿಯಮಗಳನ್ನು ಗಾಳಿಗೆ ತೂರಿ, ಕೃಷಿ ಮಾಡದ ಹೊರ ರಾಜ್ಯದ ಶ್ರೀಮಂತ ವ್ಯಕ್ತಿಗಳ ಹೆಸರಿಗೂ ನಕಲಿ ಸಾಗುವಳಿ ಚೀಟಿ ನೀಡಿ ಕೋಟ್ಯಂತರ ರೂ. ಅವ್ಯವಹಾರ ನಡೆಸಿದ್ದಾರೆ.

ಯಾರನ್ನೂ ಬಿಡಲ್ಲ ಎಂದ ನ್ಯಾ.ವೀರಪ್ಪ

ಈ ಮಹಾ ವಂಚನೆಯಲ್ಲಿ ಭಾಗಿಯಾಗಿರುವ ಇಲಾಖೆಯ ಸಣ್ಣ ನೌಕರರಿಂದ ಹಿಡಿದು ಉನ್ನತ ಅಧಿಕಾರಿಗಳವರೆಗೂ ಯಾರನ್ನೂ ಬಿಡುವುದಿಲ್ಲ, ಎಲ್ಲರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಉಪಲೋಕಾಯುಕ್ತರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ದೇಶದ ಅತ್ಯಂತ ಭ್ರಷ್ಟ ರಾಜ್ಯಗಳ ಪೈಕಿ ಕರ್ನಾಟಕಕ್ಕೆ 5ನೇ ಸ್ಥಾನ: ಉಪಲೋಕಾಯುಕ್ತ ನ್ಯಾ. ಬಿ. ವೀರಪ್ಪ

ಈ ಹಿಂದೆ ಜನವರಿಯಲ್ಲಿ ಲೋಕಾಯುಕ್ತ ಪೊಲೀಸರು ನಾಗಮಂಗಲ ತಾಲೂಕು ಕಚೇರಿ ಸೇರಿದಂತೆ ಹಲವೆಡೆ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಿ ಐವರನ್ನು ಬಂಧಿಸಿದ್ದರು. ತದನಂತರ ಹಗರಣದ ತೀವ್ರತೆ ಹೆಚ್ಚಿರುವ ಅನುಮಾನ ಕಂಡುಬಂದುದರಿಂದ ವಿಸ್ತೃತ ತನಿಖೆಗೆ ಆದೇಶಿಸಲಾಗಿತ್ತು. ಅಧಿಕಾರಿಗಳು ಮೂಲ ದಾಖಲೆಗಳ ಪುಟಗಳನ್ನೇ ಹರಿದು, ತಿದ್ದುಪಡಿ ಮಾಡಿ ಈ ಗೋಲ್‌ಮಾಲ್ ಎಸಗಿದ್ದಾರೆ. ಸದ್ಯ ಎಎಸ್‌ಪಿ ನೇತೃತ್ವದ ತಂಡ ಸಂಪೂರ್ಣ ವರದಿಯನ್ನು ಸಿದ್ಧಪಡಿಸುತ್ತಿದ್ದು, ಮತ್ತಷ್ಟು ಭ್ರಷ್ಟ ಅಧಿಕಾರಿಗಳಿಗೆ ಜೈಲು ಫಿಕ್ಸ್ ಎನ್ನಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:31 am, Mon, 25 May 26

Source link

ಹೈಕಮಾಂಡ್‌ನಿಂದ ಸಿಎಂ ಸಿದ್ದರಾಮಯ್ಯಗೆ ದೆಹಲಿ ಬುಲಾವ್​​ ಯಾಕೆ?: ಇಲ್ಲಿದೆ ಅಸಲಿ ಕಾರಣ – Kannada News | High Command Summons: CM Siddaramaiah To Visit Delhi Tonight Amid Cabinet Reshuffle and Leadership Talks

ಬೆಂಗಳೂರು, ಮೇ 25: ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆ ಬಗ್ಗೆ ರಾಜ್ಯ ಕಾಂಗ್ರೆಸ್​​ನಲ್ಲಿ (Congress) ಬಿಸಿಬಿಸಿ ಚರ್ಚೆಯ ನಡುವೆಯೇ ಸಿಎಂ ಸಿದ್ದರಾಮಯ್ಯಗೆ (Siddaramaiah) ಹೈಕಮಾಂಡ್​​ನಿಂದ ಬುಲಾವ್​​ ಬಂದಿರೋದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ. ಸಂಜೆ 7 ಗಂಟೆಗೆ ಸಿದ್ದರಾಮಯ್ಯ ದೆಹಲಿಗೆ ಪ್ರಯಾಣ ಬೆಳೆಸಲಿದ್ದು, HALನಿಂದ ವಿಶೇಷ ವಿಮಾನದಲ್ಲಿ ತೆರಳಲಿದ್ದಾರೆ. ರಾತ್ರಿ 9.30ಕ್ಕೆ ಅವರು ದೆಹಲಿ ತಲುಪಲಿದ್ದು, ನಾಳೆ ಹೈಕಮಾಂಡ್ ನಾಯಕರೊಂದಿಗೆ ಸಿಎಂ ಮಾತುಕತೆ ನಡೆಸಲಿದ್ದಾರೆ.

ಸಭೆಯಲ್ಲಿ ಏನೆಲ್ಲ ಚರ್ಚೆ ಸಾಧ್ಯತೆ?

ನಾಳೆ ಬೆಳಗ್ಗೆ 11 ಗಂಟೆಗೆ ಹೈಕಮಾಂಡ್‌ ನಾಯಕರ ಜೊತೆ ಸಿದ್ದರಾಮಯ್ಯ ಮಾತುಕತೆ ನಡೆಸಲಿದ್ದು, ದೆಹಲಿಯಲ್ಲಿರುವ ಐಸಿಸಿಸಿ ಅಧ್ಯಕ್ಷ ಖರ್ಗೆ ನಿವಾಸದಲ್ಲಿ ಸಭೆ ನಡೆಯಲಿದೆ. ಈ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಭಾಗಿ ಸಾಧ್ಯತೆ ಇದ್ದು, ಸಭೆ ಬಳಿಕ ಸಿಎಂ ಸಿದ್ದರಾಮಯ್ಯರಿಂದ ರಾಹುಲ್ ಗಾಂಧಿ ಭೇಟಿ ಅಂದಾಜಿಸಲಾಗಿದೆ. ಸಭೆ ವೇಳೆ ಸಂಪುಟ ಪುನರ್ ರಚನೆ ಬಗ್ಗೆ ಸಿದ್ದರಾಮಯ್ಯ ಪ್ರಸ್ತಾಪ ಸಾಧ್ಯತೆ ಇದ್ದು, ದೆಹಲಿ ಪ್ರವಾಸದ ಬಗ್ಗೆ ಈಗಾಗಲೇ ಸಚಿವರ ಜೊತೆ ಸಿಎಂ ಮಾಹಿತಿ ಹಂಚಿಕೊಂಡಿದ್ದಾರೆ. ಆ ಮೂಲಕ ದೆಹಲಿ ಭೇಟಿಗೂ ಮುನ್ನ ಸಚಿವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಿದ್ದರಾಮಯ್ಯ ಮುಂದಾಗಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಏನಂದ್ರು?

ದೆಹಲಿಯಲ್ಲಿ ಎರಡು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ಸಾಧ್ಯತೆ ಇದ್ದು, ರಾಜ್ಯಸಭಾ ಸ್ಥಾನಗಳ ಹಂಚಿಕೆ ವಿಚಾರವಾಗಿ ಮೊದಲು ಮಾತುಕತೆ ನಡೆಯಲಿದೆ. ಸಂಪುಟ ಪುನಾರಚನೆ ಬಗ್ಗೆಯೂ ಸಿದ್ದರಾಮಯ್ಯ ಪ್ರಸ್ತಾಪ ಮಾಡಲಿದ್ದು, ಪುನಾರಚನೆ ಮಾಡದಿದ್ದರೆ ಏನೇನಾಗಬಹುದೆಂದು ಮನವರಿಕೆ ಮಾಡಿಕೊಡಲಿದ್ದಾರೆ. ಡಿ.ಕೆ.ಶಿವಕುಮಾರ್ ಸಭೆಗೆ ಹಾಜರಾದರೆ ಮಾತ್ರ ನಾಯಕತ್ವ ಬಗ್ಗೆ ಚರ್ಚೆ ನಡೆಯಬಹುದು ಎಂಬ ಮಾತುಗಳು ಕೇಳಿಬಂದಿವೆ.

ಸಿಎಂ ಜೊತೆ ಸಚಿವರು, ಶಾಸಕರ ಪ್ರಯಾಣ

ಈ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ಸಿಎಂ ಸಿದ್ದರಾಮಯ್ಯ ಹೌದು, ಇಂದು ಸಂಜೆ ದೆಹಲಿಗೆ ಹೋಗುತ್ತಿದ್ದೇನೆ ಎಂದಷ್ಟೇ ತಿಳಿಸಿದ್ದಾರೆ. ಇನ್ನು ಮುಖ್ಯಮಂತ್ರಿಗಳ ಜೊತೆಗೆ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಕೆಲ ಶಾಸಕರೂ ದೆಹಲಿಗೆ ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ. ಶಾಸಕರಾದ ಹಂಪನಗೌಡ ಬಾದರ್ಲಿ, ದದ್ದಲ್, ನರೇಂದ್ರಸ್ವಾಮಿ, MLCಗಳಾದ ಶರಣಗೌಡ ಬೈಯ್ಯಾಪುರ, ವಸಂತ್ ಕುಮಾರ್ ಕೂಡ ದೆಹಲಿ ಪ್ರವಾಸ ಕೈಗೊಳ್ಳುವ ಬಗ್ಗೆ ಮಾಹಿತಿ ಸಿಕ್ಕಿದೆ.

ಊಹಾಪೋಹ ಬೇಡ ಎಂದ ಸುರ್ಜೇವಾಲ

ಹೈಕಮಾಂಡ್‌ನಿಂದ ಸಿಎಂ ಸಿದ್ದರಾಮಯ್ಯಗೆ ದೆಹಲಿ ಬುಲಾವ್ ವಿಚಾರ ಸಂಬಂಧ ದಯಮಾಡಿ ಏನೂ ಊಹಾಪೋಹಗಳಿಗೆ ಹೆಚ್ಚು ಗಮನ ಕೊಡಬೇಡಿ. ಸುಳ್ಳು ಸುದ್ದಿ ಹರಡಬೇಡಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ. ಈಗಾಗಲೇ ರಾಜ್ಯಸಭೆ ಚುನಾವಣೆಗೆ ನೋಟಿಫಿಕೇಷನ್ ಆಗಿದೆ. ನಂತರ ವಿಧಾನಪರಿಷತ್ ಚುನಾವಣೆ ನಡೆಯಬೇಕಿದೆ. ಈ ಸಂಬಂಧ ಪಕ್ಷ ಅಭಿಪ್ರಾಯ ಕೇಳುತ್ತದೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:43 pm, Mon, 25 May 26

Source link

ಬಿಗ್ ಬಾಸ್ ಖ್ಯಾತಿಯ ಕಾವ್ಯಾ ಶೈವಾಗೆ ಅವಮಾನ; ವೇದಿಕೆಯಲ್ಲೇ ಮೈಕ್ ಕಿತ್ತುಕೊಂಡ ವ್ಯಕ್ತಿ – Kannada News | Kavya Shaiva Mic Snatched: Bigg Boss Star’s Kalaburagi Event Controversy Goes Viral

ನಟಿ ಕಾವ್ಯಾ ಶೈವ ಅವರಿಗೆ ಬಿಗ್ ಬಾಸ್ (Bigg Boss) ಮೂಲಕ ತುಂಬಾನೇ ಖ್ಯಾತಿ ಸಿಕ್ಕಿದೆ. ಅವರು ಅನೇಕ ಸಮಾರಂಭಗಳಿಗೆ ತೆರಳುತ್ತಿದ್ದಾರೆ. ಈಗ ಅವರು ವೇದಿಕೆ ಮೇಲೆ ಇದ್ದಾಗಲೇ ನಡೆದ ಒಂದು ಘಟನೆ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಕಾವ್ಯಾ ಅವರು ವೇದಿಕೆ ಮೇಲೆ ಮಾತನಾಡುವಾಗ ಮೈಕ್ ಕಸಿದುಕೊಳ್ಳಲಾಗಿದೆ. ಕಲಬುರಗಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಾ ಇದೆ.

ಕಾವ್ಯಾ ಶೈವ ಅವರು ಕಲಬುರಗಿಯ ಕಲಬುರಗಿಯ ಎಸ್.ಎಂ ಪಂಡಿತ ರಂಗಮಂದಿರದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಅವರು ವೇದಿಕೆ ಮೇಲೆ ಮಾತನಾಡುತ್ತಿದ್ದರು. ಆಗಲೇ ವೇದಿಕೆ ಪೂರ್ತಿ ಜನರಿಂದ ತುಂಬಿತ್ತು. ಅವರಿಗೆ ಸರಿಯಾಗಿ ನಿಲ್ಲಲೂ ಜಾಗ ಇರಲಿಲ್ಲ. ಆದಾಗ್ಯೂ ಕಾವ್ಯಾ ಮಾತನಾಡುತ್ತಿದ್ದರು. ಆಗ ಬಂದ ವ್ಯಕ್ತಿಯೋರ್ವ ಕಾವ್ಯಾ ಅವರಿಂದ ಮೈಕ್ ಕಸಿದುಕೊಂಡಿದ್ದಾರೆ. ಇದರಿಂದಾಗಿ ವೇದಿಕೆಯ ಮೇಲೆ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ವೇದಿಕೆ ಮೇಲೆ ಮಾತನಾಡುತ್ತಿದ್ದಾಗ ಏಕಾಏಕಿ ಮೈಕ್ ಕಿತ್ತುಕೊಂಡಿದ್ದನ್ನು ಕಂಡು ಕಾವ್ಯಾ ಶಾಕ್ ಆದರು. ಆದರೆ, ಎಲ್ಲಿಯೂ ಅವರು ಕೋಪ ಹೊರಹಾಕಿಲ್ಲ. ಕಾವ್ಯಾಗೆ ಆದ ಅವಮಾನವನ್ನು ಸಂಘಟಕರೊಬ್ಬರು ಪ್ರಶ್ನಿಸಿದ್ದಾರೆ. ಮೈಕ್ ಕಿತ್ತುಕೊಂಡ ವ್ಯಕ್ತಿ ಹಾಗೂ ವೇದಿಕೆಯ ಮೇಲೆಯೇ ಇದ್ದ ಸಂಘಟಕರ ನಡುವೆ ಮಾತಿನ ಚಕಮಕಿ ನಡೆದಿದೆ.

ಇದನ್ನೂ ಓದಿ: ‘ನಷ್ಟ ಪರಿಹಾರ ಕೊಡಿ’: ಬಿಗ್ ಬಾಸ್​​ಗೆ ನೊಟೀಸ್ ಕಳಿಸಿದ ಮಾಜಿ ಸ್ಪರ್ಧಿ

ಕಾವ್ಯಾ ಶೈವ ಅವರು ಕಿರುತೆರೆ ಮೂಲಕ ಸದ್ದು ಮಾಡಿದವರು. ‘ಕೆಂಡ ಸಂಪಿಗೆ’ ಸೀರಿಯಲ್ ಅಲ್ಲಿ ನಟಿಸಿದರು. ‘ಕೊತ್ತಲವಾಡಿ’ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭರವಸೆ ಮೂಡಿಸಿದ ಅಮೆರಿಕ-ಇರಾನ್ ಡೀಲ್; ಗರಿಗೆದರಿದ ಷೇರುಬಜಾರು – Kannada News | Stock Market rising today on May 25th, know the reasons behind this rise

ನವದೆಹಲಿ, ಮೇ 25: ಭಾರತದ ಷೇರು ಮಾರುಕಟ್ಟೆ (Stock Market) ಇವತ್ತು ಸೋಮವಾರ ಚೇತರಿಸಿಕೊಂಡಿದೆ. ಪ್ರಮುಖ ಸೂಚ್ಯಂಕಗಳಾದ ನಿಫ್ಟಿ50 ಮತ್ತು ಸೆನ್ಸೆಕ್ಸ್30 ಇದು ಶೇ. 1ರಿಂದ ಶೇ. 1.20ರಷ್ಟು ಹೆಚ್ಚಳ ಕಂಡಿವೆ. ಹೂಡಿಕೆದಾರರಿಗೆ 5 ಲಕ್ಷ ಕೋಟಿ ರೂ ಗಳಿಕೆ ಆಗಿದೆ. ನಿಫ್ಟಿ ಸೂಚ್ಯಂಕ 240 ಅಂಕಗಳ (ಶೇ. 1.02) ಹೆಚ್ಚಳದೊಂದಿಗೆ 23,959 ಮಟ್ಟಕ್ಕೆ ಏರಿದೆ. ಸೆನ್ಸೆಕ್ಸ್ 863 ಅಂಕಗಳ ಏರಿಕೆಯೊಂದಿಗೆ 76,279 ಮಟ್ಟ ಮುಟ್ಟಿದೆ. ಬಿಎಸ್​ಇ ಮತ್ತು ಎನ್​ಎಸ್​ಇಯಲ್ಲಿರುವ ಬಹುತೇಕ ಎಲ್ಲಾ ಸೂಚ್ಯಂಕಗಳೂ ಕೂಡ ಹಸಿರುಬಣ್ಣದಲ್ಲಿವೆ. ಷೇರು ಬಜಾರು ಇವತ್ತು ಸೋಮವಾರ ಗರಿಗೆದರಲು ಪ್ರಮುಖ ಕಾರಣಗಳೇನು?

ಅಮೆರಿಕ ಇರಾನ್ ಒಪ್ಪಂದ ಏರ್ಪಡುವ ನಿರೀಕ್ಷೆ

ಅಮೆರಿಕ ಮತ್ತು ಇರಾನ್ ದೇಶಗಳು ಒಂದು ಸರ್ವಸಮ್ಮತವಾದ ಒಪ್ಪಂದಕ್ಕೆ ಬರುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಮೂರು ತಿಂಗಳ ಸಂಘರ್ಷದಿಂದ ಇಡೀ ಜಗತ್ತು ನಲುಗಿ ಹೋಗಿದೆ. ಅದರಲ್ಲೂ ಭಾರತಕ್ಕೆ ದೊಡ್ಡ ಹೊಡೆತವನ್ನೇ ಕೊಟ್ಟಿದೆ. ಹೀಗಾಗಿ, ಸಂಘರ್ಷ ಕೊನೆಗೊಳ್ಳುವ ನಿರೀಕ್ಷೆಯು ಹೂಡಿಕೆದಾರರಿಗೆ ಸಮಾಧಾನ ಕೊಟ್ಟಿರಬಹುದು.

ಇದನ್ನೂ ಓದಿ: ಮೊದಲ ಬಾರಿ ಇನ್ವೆಸ್ಟ್​ಮೆಂಟ್​ಗೆ ಪ್ರಯತ್ನಿಸುತ್ತಿದ್ದೀರಾ? ಹೇಗೆ ಆರಂಭಿಸೋದು, ಎಲ್ಲಿ ಹೂಡಿಕೆ ಮಾಡೋದು? ಇಲ್ಲಿದೆ ಟಿಪ್ಸ್

ಕಚ್ಚಾ ತೈಲ ಬೆಲೆ 100 ಡಾಲರ್​ನೊಳಗೆ

ಅಮೆರಿಕ ಇರಾನ್ ಮಧ್ಯೆ ಒಪ್ಪಂದ ಏರ್ಪಡುವ ಸಾಧ್ಯತೆಯು ಕಚ್ಚಾ ತೈಲ ಬೆಲೆ ಇಳಿಕೆಗೆ ದಾರಿ ಮಾಡಿಕೊಟ್ಟಿದೆ. ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಶೇ. 4.6ರಷ್ಟು ತಗ್ಗಿ 98.8 ಡಾಲರ್​ಗೆ ಇಳಿದಿದೆ.

ಆರ್​ಬಿಐನಿಂದ ಭರ್ಜರಿ ಡಿವಿಡೆಂಡ್

ಭಾರತೀಯ ರಿಸರ್ವ್ ಬ್ಯಾಂಕ್ ಮೊನ್ನೆ ಸರ್ಕಾರಕ್ಕೆ ಭರ್ಜರಿ ಡಿವಿಡೆಂಡ್ ಪ್ರಕಟಿಸಿದೆ. 2025-26ರ ವರ್ಷದಲ್ಲಿ ಆರ್ಬಿಐನಿಂದ ಸರ್ಕಾರಕ್ಕೆ 2.87 ಲಕ್ಷ ಕೋಟಿ ರೂ ಲಾಭಾಂಶ ಸಂದಾಯವಾಗಲಿದೆ. ಇದು ಅದರ ಇತಿಹಾಸದಲ್ಲೇ ಯಾವುದೇ ವರ್ಷದಲ್ಲಿ ಸರ್ಕಾರಕ್ಕೆ ನೀಡಲಾಗಿರುವ ಅತಿದೊಡ್ಡ ಡಿವಿಡೆಂಡ್ ಮೊತ್ತ. ಆರ್ಥಿಕವಾಗಿ ಒತ್ತಡದಲ್ಲಿರುವ ಭಾರತಕ್ಕೆ ಈ ಡಿವಿಡೆಂಡ್ ಬಹಳ ಸಹಾಯಕ್ಕೆ ಬರುವ ನಿರೀಕ್ಷೆ ಇದೆ.

ಇದನ್ನೂ ಓದಿ: ಭಾರತದ ಸ್ಟುಡೆಂಟ್ ಸ್ಟಾರ್ಟ್‌ಅಪ್‌ಗಳಲ್ಲಿ ಡೀಪ್-ಟೆಕ್ ಕ್ರಾಂತಿ: ಕ್ಯಾಂಪಸ್ ಫಂಡ್ ವರದಿ

ಡಾಲರ್ ಎದುರು ರುಪಾಯಿ ಚೇತರಿಕೆ

ಅಮೆರಿಕದ ಡಾಲರ್ ಎದುರು ರುಪಾಯಿ ಚೇತರಿಸಿಕೊಳ್ಳುತ್ತಿರುವುದೂ ಕೂಡ ಷೇರು ಪೇಟೆ ಉಬ್ಬಲು ಒಂದು ಕಾರಣ. ಕಳೆದ ವಾರ 96 ದಾಟಿ 97 ರ ಸಮೀಪಕ್ಕೆ ಹೋಗಿದ್ದ ರುಪಾಯಿ ಇದೀಗ 95.20ಗೆ ಬಂದಿದೆ. ಹಾಗೆಯೇ, ಭಯದ ಸೂಚಿಯಾಗಿರುವ ವಿಐಎಕ್ಸ್ ಕೂಡ ಕಡಿಮೆ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link