ಐಪಿಎಲ್ ನಡುವೆ ನಿವೃತ್ತಿ ಘೋಷಿಸಿದ ಭಾರತದ ಸ್ಟಾರ್ ಆಲ್ರೌಂಡರ್ – Kannada News | Vijay Shankar Retires from IPL and Domestic Cricket: Indian All Rounder Ends Career
2026 ರ ಐಪಿಎಲ್ (IPL 2026) ಲೀಗ್ ಹಂತ ಮುಗಿದು ಪ್ಲೇಆಫ್ ಹಂತ ಆರಂಭವಾಗಲು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ಭಾರತದ ಸ್ಟಾರ್ ಆಲ್ರೌಂಡರ್ ವಿಜಯ್ ಶಂಕರ್ (Vijay Shankar) ಐಪಿಎಲ್ ಹಾಗೂ ದೇಶಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸಿದ್ದ ವಿಜಯ್ ಶಂಕರ್ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಡೇರ್ಡೆವಿಲ್ಸ್, ಗುಜರಾತ್ ಟೈಟಾನ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಿವೃತ್ತಿ ವಿಚಾರವನ್ನು ಪ್ರಕಟಿಸಿರುವ…