Category Archives: Blog

Your blog category

ಪಶ್ಚಿಮ ಬಂಗಾಳದಿಂದ ಬರೋ ರೈಲುಗಳಲ್ಲೇ ಬರ್ತಾರಾ ಬಾಂಗ್ಲಾ ಅಕ್ರಮ ವಲಸಿಗರು? ಬೆಂಗಳೂರಿನ ಭದ್ರತೆಗೆ ಭಾರಿ ಆತಂಕ – Kannada News | Illegal Bangladeshi Immigrants Entering Bengaluru via West Bengal Trains? Chalavadi Narayanaswamy Flags Security Concerns

ಬೆಂಗಳೂರು, ಜನವರಿ 17: ಪಶ್ಚಿಮ ಬಂಗಾಳ–ಬೆಂಗಳೂರು ನಡುವಣ ರೈಲು ಸಂಚಾರ ರಾಷ್ಟ್ರೀಯ ಭದ್ರತೆಗೆ ಭಾರೀ ಸವಾಲಾಗುತ್ತಿದೆ ಎಂದು ಕರ್ನಾಟಕ (Karnataka) ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ಗೆ ಪತ್ರವನ್ನೂ ಬರೆದಿರುವ ಅವರು, ಅಕ್ರಮ ವಲಸಿಗರು ರೈಲುಗಳ ಮೂಲಕ ದಕ್ಷಿಣ ಭಾರತ ಪ್ರವೇಶಿಸುವುದನ್ನು ತಡೆಯುವುದಕ್ಕಾಗಿ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಪಶ್ಚಿಮ ಬಂಗಾಳ ಮತ್ತು ಬೆಂಗಳೂರು ನಡುವೆ ಪ್ರಸ್ತುತ 15ರಿಂದ 17ರಷ್ಟು ವೀಕ್ಲಿ ಮತ್ತು ಡೈಲಿ ರೈಲುಗಳು ಸಂಚರಿಸುತ್ತಿದ್ದು, ಈ ಮಾರ್ಗಗಳನ್ನು ಅಕ್ರಮ ವಲಸಿಗರು ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿವೆ. ಅಲ್ಲದೆ, ಸಾರ್ವಜನಿಕರಿಂದ ಆಕ್ಷೇಪಗಳೂ ವ್ಯಕ್ತವಾಗಿವೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ವಿಶೇಷವಾಗಿ ಅಂತರರಾಷ್ಟ್ರೀಯ ಗಡಿಗಳಲ್ಲಿ ಅಕ್ರಮವಾಗಿ ಪ್ರವೇಶಿಸಿರುವವರು ಈ ಮಾರ್ಗದ ಮೂಲಕ ದಕ್ಷಿಣ ಭಾರತಕ್ಕೆ ನುಸುಳುತ್ತಿದ್ದಾರೆ ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

ನಕಲಿ ದಾಖಲೆಗಳನ್ನು ಬಳಸಿ ವಂಚಿಸುವ ಅಕ್ರಮ ವಲಸಿಗರು

ಈ ಮಾರ್ಗಗಳಲ್ಲಿ ಪ್ರಯಾಣಿಸುವ ಹಲವರು ನಕಲಿ ಅಥವಾ ಅಕ್ರಮಗಳ ಮೂಲಕ ಪಡೆದ ಆಧಾರ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿಗಳನ್ನು ಬಳಸುತ್ತಿರುವುದು ಮತ್ತೊಂದು ಆತಂಕಕಾರಿ ಅಂಶವಾಗಿದೆ. ಇಂತಹ ದಾಖಲೆಗಳು ನಾಗರಿಕತ್ವದ ಸಾಬೀತು ಅಲ್ಲ ಎಂದು ಬಾಂಬೆ ಹೈಕೋರ್ಟ್ ನೀಡಿರುವ ಇತ್ತೀಚಿನ ತೀರ್ಪನ್ನೂ ಛಲವಾದಿ ನಾರಾಯಣಸ್ವಾಮಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕೋರ್ಟ್ ಆದೇಶವಿದ್ದ ಹೊರತಾಗ್ಯೂ ಇಂಥ ನಕಲಿ ದಾಖಲೆಗಳನ್ನು ಬಳಸಿಕೊಂಡು ಸ್ಥಳೀಯ ಭದ್ರತಾ ತಪಾಸಣೆಗಳನ್ನು ತಪ್ಪಿಸಿಕೊಂಡು ಸಂಚರಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಬೆಂಗಳೂರು ನಗರವು ಕಾರ್ಮಿಕ ವಸತಿಗಳ ಪ್ರಮುಖ ಕೇಂದ್ರವಾಗಿದ್ದು, ಪಶ್ಚಿಮ ಬಂಗಾಳ ಹಾಗೂ ಉತ್ತರ ಭಾರತದಿಂದ ಬಂದ ಅಕ್ರಮ ವಲಸಿಗರು ಇಲ್ಲಿ ನೆಲೆಸುತ್ತಿರುವ ಬಗ್ಗೆ ವರದಿಗಳಿವೆ. ಇದರಿಂದ ನಗರ ಹಾಗೂ ರಾಜ್ಯದ ಆಂತರಿಕ ಭದ್ರತೆಗೆ ಗಂಭೀರ ಅಪಾಯ ಎದುರಾಗುತ್ತಿದೆ ಎಂದು ನಾರಾಯಣಸ್ವಾಮಿ ಎಚ್ಚರಿಸಿದ್ದಾರೆ.

ನಾರಾಯಣಸ್ವಾಮಿ ಸೂಚಿಸಿದ ಭದ್ರತಾ ಕ್ರಮಗಳೇನು?

ತಕ್ಷಣ ಕೈಗೊಳ್ಳಬೇಕಾದ ಕೆಲವು ಕ್ರಮಗಳ ಬಗ್ಗೆಯೂ ನಾರಾಯಣಸ್ವಾಮಿ ಸಲಹೆ ನೀಡಿದ್ದಾರೆ. ಅವುಗಳು ಹೀಗಿವೆ;

  • ಪ್ರಮುಖ ರೈಲು ನಿಲ್ದಾಣಗಳಲ್ಲಿ ಬಯೋಮೆಟ್ರಿಕ್ ಆಧಾರಿತ ಕಟ್ಟುನಿಟ್ಟಿನ ಗುರುತು ಪರಿಶೀಲನೆ ನಡೆಸುವುದು.
  • ಈ ಮಾರ್ಗದ ರೈಲುಗಳ ಸಂಖ್ಯೆಯ ಪುನರ್‌ಪರಿಶೀಲನೆ, ಆರ್‌ಪಿಎಫ್ ಹಾಗೂ ಗುಪ್ತಚರ ದಳದ ಸಿಬ್ಬಂದಿಯನ್ನು ಗುಪ್ತವಾಗಿ ನಿಯೋಜಿಸಿ ಅನುಮಾನಾಸ್ಪದ ಚಟುವಟಿಕೆಗಳ ನಿಗಾ ಇರಿಸುವುದು.
  • ರೈಲ್ವೆ ಬುಕಿಂಗ್ ವ್ಯವಸ್ಥೆಯನ್ನು ಎಸ್‌ಐಆರ್/ಎನ್‌ಆರ್‌ಸಿ ಸೇರಿದಂತೆ ರಾಷ್ಟ್ರೀಯ ಡೇಟಾಬೇಸ್‌ಗಳಿಗೆ ಜೋಡಿಸುವುದು.

ಭಾರತದ ಗಡಿಗಳ ಭದ್ರತೆ ಹಾಗೂ ನಗರಗಳ ಸುರಕ್ಷತೆ ಭಾರತೀಯ ರೈಲ್ವೆಯ ಜಾಗೃತಿಯ ಮೇಲೆಯೇ ಅವಲಂಬಿತವಾಗಿದೆ ಎಂದು ಹೇಳಿರುವ ನಾರಾಯಣಸ್ವಾಮಿ, ಈ ವಿಷಯವನ್ನು ಆದ್ಯತೆಯ ರಾಷ್ಟ್ರೀಯ ಭದ್ರತಾ ವಿಚಾರವಾಗಿ ಪರಿಗಣಿಸಿ ತ್ವರಿತ ಹಾಗೂ ದೃಢ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:19 pm, Sat, 17 January 26

Source link

Vasthu Shastra: ತಪ್ಪಿಯೂ ಕೂಡ ಈ ವಸ್ತುಗಳನ್ನು ಕಪಾಟಿನಲ್ಲಿ ಇಡಬೇಡಿ; ಸಮಸ್ಯೆ ತಪ್ಪಿದ್ದಲ್ಲ! – Kannada News | Wardrobe Vastu: Avoid These Items for Financial Stability and Positive Home Energy

ಪ್ರತಿ ಮನೆಯಲ್ಲೂ ಬೀರು ಅಥವಾ ಕಪಾಟು ಇದ್ದೇ ಇರುತ್ತದೆ. ದಿನನಿತ್ಯ ಬಳಸುವ ಬಟ್ಟೆ, ಹಣ, ದಾಖಲೆಗಳು ಸೇರಿದಂತೆ ಅನೇಕ ವಸ್ತುಗಳನ್ನು ಅದರಲ್ಲಿ ಇಡಲಾಗುತ್ತದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಬೀರುವಿನಲ್ಲಿ ಯಾವ ವಸ್ತುಗಳನ್ನು ಇಡಬೇಕು ಮತ್ತು ಯಾವುವನ್ನು ಇಡಬಾರದು ಎಂಬುದು ಮನೆಯ ಸಕಾರಾತ್ಮಕತೆ ಮತ್ತು ಆರ್ಥಿಕ ಸ್ಥಿತಿಗೆ ನೇರವಾಗಿ ಸಂಬಂಧಿಸಿದೆ. ಕೆಲವು ವಸ್ತುಗಳು ಶುಭ ಶಕ್ತಿಯನ್ನು ಆಕರ್ಷಿಸುತ್ತವೆ ಎಂದರೆ, ಇನ್ನೂ ಕೆಲವು ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಹರಡಬಹುದು. ಅದಕ್ಕಾಗಿ ಬೀರುವಿನ ಬಳಕೆಯಲ್ಲಿ ಎಚ್ಚರಿಕೆ ಅಗತ್ಯವೆಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.

ಸುಗಂಧ ದ್ರವ್ಯಗಳು:

ವಾಸ್ತು ಪ್ರಕಾರ, ಸುಗಂಧ ದ್ರವ್ಯಗಳು ಅಥವಾ ಪರಿಮಳಯುಕ್ತ ವಸ್ತುಗಳನ್ನು ಬೀರು ಅಥವಾ ಕಪಾಟಿನಲ್ಲಿ ಇಡುವುದು ಒಳ್ಳೆಯದಲ್ಲ. ಇವುಗಳನ್ನು ತಪ್ಪಾಗಿ ಇಡುವುದರಿಂದ ವಾಸ್ತು ದೋಷ ಉಂಟಾಗಬಹುದು ಎಂದು ನಂಬಲಾಗಿದೆ. ಕಪಾಟಿನಲ್ಲಿ ಸುಗಂಧ ದ್ರವ್ಯಗಳನ್ನು ಹೆಚ್ಚು ದಿನ ಇಡುವುದರಿಂದ ಹಣಕಾಸಿನ ನಷ್ಟ, ಅನಗತ್ಯ ಖರ್ಚು ಮತ್ತು ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.

ಕನ್ನಡಿ:

ಅದೇ ರೀತಿ, ಬೀರು ಅಥವಾ ವಾರ್ಡ್ರೋಬ್ ಮೇಲೆ ಕನ್ನಡಿ ಇರುವುದೂ ಶುಭವಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ವಿಶೇಷವಾಗಿ ಮಲಗುವ ಕೋಣೆಯಲ್ಲಿರುವ ಬೀರುವಿನ ಮೇಲೆ ಕನ್ನಡಿ ಇದ್ದರೆ ಅದು ನಕಾರಾತ್ಮಕ ಶಕ್ತಿಯನ್ನು ಪ್ರತಿಬಿಂಬಿಸಿ ಆರ್ಥಿಕ ಅಸ್ಥಿರತೆ, ಮನಸ್ಸಿನ ಅಶಾಂತಿ ಮತ್ತು ಕುಟುಂಬದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ನಂಬಲಾಗಿದೆ.

ಹರಿದ ಕಾಗದ:

ಬೀರುವಿನಲ್ಲಿ ಹರಿದ, ಹಳೆಯ ಅಥವಾ ವ್ಯರ್ಥವಾದ ಕಾಗದಗಳನ್ನು ಸಂಗ್ರಹಿಸುವ ಅಭ್ಯಾಸವನ್ನೂ ಬಿಟ್ಟುಬಿಡುವುದು ಉತ್ತಮ. ವಾಸ್ತು ನಂಬಿಕೆಯ ಪ್ರಕಾರ, ಲಕ್ಷ್ಮಿ ದೇವಿಯು ಬೀರು ಅಥವಾ ತಿಜೋರಿಯಲ್ಲಿ ವಾಸಿಸುತ್ತಾಳೆ ಎನ್ನಲಾಗುತ್ತದೆ. ಅಲ್ಲಿ ಅಶುದ್ಧತೆ ಅಥವಾ ವ್ಯರ್ಥ ವಸ್ತುಗಳಿದ್ದರೆ ಲಕ್ಷ್ಮಿ ದೇವಿಯ ಕೃಪೆ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. ಇದರ ಪರಿಣಾಮವಾಗಿ ಹಣಕಾಸಿನ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಮನೆಯ ಈ 5 ಸ್ಥಳಗಳಲ್ಲಿ ನವಿಲು ಗರಿ ಇರಿಸಿ; ಹಣಕ್ಕೆಂದೂ ಕೊರತೆಯಾಗದು!

ಕಪ್ಪು ಬಟ್ಟೆಗಳು:

ಇನ್ನೊಂದು ಪ್ರಮುಖ ವಿಷಯವೆಂದರೆ ಕಪ್ಪು ಬಟ್ಟೆಗಳು ಮತ್ತು ಕಪ್ಪು ವಸ್ತುಗಳು. ವಾಸ್ತು ಪ್ರಕಾರ, ಕಪ್ಪು ಬಟ್ಟೆ, ಕಪ್ಪು ಪರ್ಸ್ ಅಥವಾ ಕಪ್ಪು ಚೀಲಗಳನ್ನು ಬೀರುವಿನಲ್ಲಿ ಇಡುವುದು ಶುಭವಲ್ಲ. ವಿಶೇಷವಾಗಿ ಹಣವನ್ನು ಕಪ್ಪು ಬಟ್ಟೆಯಲ್ಲಿ ಇಡುವುದರಿಂದ ಸಂಪತ್ತಿನ ನಷ್ಟ ಮತ್ತು ಸಂತೋಷದ ಹರಿವಿಗೆ ಅಡ್ಡಿ ಉಂಟಾಗುತ್ತದೆ ಎಂದು ನಂಬಲಾಗಿದೆ.

ಹೀಗಾಗಿ, ಬೀರುವಿನಲ್ಲಿ ಸದಾ ಸ್ವಚ್ಛತೆ, ಶಿಸ್ತು ಮತ್ತು ಶುಭ ವಸ್ತುಗಳನ್ನು ಮಾತ್ರ ಇಡುವ ಅಭ್ಯಾಸವನ್ನು ಬೆಳೆಸಿದರೆ, ಅದು ಮನೆಯಲ್ಲಿನ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ ಆರ್ಥಿಕ ಸ್ಥಿರತೆಗೆ ಸಹಕಾರಿಯಾಗುತ್ತದೆ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಸ್ಲಿಂ ಎಂಬ ಕಾರಣಕ್ಕೆ ಹಿಂದಿಯಲ್ಲಿ ನನಗೆ ಆಫರ್​​ಗಳು ಬರುತ್ತಿಲ್ಲ; ಎಆರ್ ರೆಹಮಾನ್ – Kannada News | AR Rahman: No Bollywood offers due to religion Unpacking the controversy

ಎಆರ್ ರೆಹಮಾನ್ ಅವರು ಖ್ಯಾತ ಸಂಗೀತ ಸಂಯೋಜಕ. ಅವರು ಆಸ್ಕರ್ ಕೂಡ ಗೆದ್ದಿದ್ದಾರೆ. ಅವರು ಪಡೆದ ಖ್ಯಾತಿ ತುಂಬಾನೇ ದೊಡ್ಡದು. ಈಗ ರೆಹಮಾನ್ ಅವರು ನೀಡಿದ ಹೇಳಿಕೆ ಚರ್ಚೆಗೆ ಕಾರಣ ಆಗಿದೆ. ‘ಹಿಂದಿ ಚಿತ್ರರಂಗದಲ್ಲಿ ಧರ್ಮದ ಕಾರಣಕ್ಕೆ ನನಗೆ ಆಫರ್ ಸಿಗುತ್ತಿಲ್ಲ’ ಎಂಬ ಆರೋಪವನ್ನು ಅವರು ಮಾಡಿದ್ದಾರೆ. ರೆಹಮಾನ್ ಹೇಳಿಕೆಯನ್ನು ಅನೇಕರು ಟೀಕೆ ಮಾಡಿದ್ದಾರೆ. ಅವರ ಹೇಳಿಕೆ ಸರಿ ಅಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬಿಬಿಸಿ ಏಷ್ಯನ್ ನೆಟ್ವರ್ಕ್​​ಗೆ ನೀಡಿದ ಸಂದರ್ಶನದಲ್ಲಿ ರೆಹಮಾನ್ ಮಾತನಾಡಿದರು. ‘ಕಳೆದ ಎಂಟು ವರ್ಷಗಳಿಂದ ನನಗೆ ಹಿಂದಿ ಸಿನಿಮಾ ರಂಗದಲ್ಲಿ ಆಫರ್​​ಗಳು ಬಂದಿಲ್ಲ. ಇದಕ್ಕೆ ಕಾರಣ ಏನು ಎಂಬ ವಿಷಯ ಹಿಂದಿನ ಬಾಗಿಲಿನಿಂದ ನನಗೆ ತಿಳಿಯುತ್ತದೆ. ನಾನು ಕೆಲಸ ಹುಡುಕುತ್ತಾ ಇಲ್ಲ. ಕೆಲಸ ನನ್ನ ಬಳಿಗೆ ಬರಬೇಕೆಂದು ನಾನು ಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ.

‘ರಾಜನಿಂದ ಅಥವಾ ಭಿಕ್ಷುಕನಿಂದ ಪಡೆದ ಜ್ಞಾನಕ್ಕೆ ಬೆಲೆ ಕಟ್ಟಲಾಗದು. ಒಳ್ಳೆಯದರಿಂದ ಅಥವಾ ಕೆಟ್ಟದರಿಂದ ಪಡೆದ ಜ್ಞಾನಕ್ಕೆ ಬೆಲೆ ಕಟ್ಟಲಾಗದು ಎಂದು ಪ್ರವಾದಿ ಹೇಳಿದ್ದರು. ನಾವು ಸಣ್ಣತನ ಮತ್ತು ಸ್ವಾರ್ಥವನ್ನು ಮೀರಿ ಹೋಗಬೇಕು’ ಎಂದು ರೆಹಮಾನ್ ಹೇಳಿದ್ದಾರೆ.

ಇದನ್ನೂ ಓದಿ: ನಟನೆ ಆರಂಭಿಸಿದ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎಆರ್ ರೆಹಮಾನ್

‘ಸೃಜನಶೀಲರಲ್ಲದ ಜನರು ಬಾಲಿವುಡ್​​​ನಲ್ಲಿ ವಿಷಯಗಳನ್ನು ನಿರ್ಧರಿಸುವ ಶಕ್ತಿಯನ್ನು ಹೊಂದಿದ್ದಾರೆ. ಧರ್ಮದ ವಿಷಯದ ಕಾರಣಕ್ಕೂ ಆಫರ್ ಬರದೆ ಇರಬಹುದು. ಸಿನಿಮಾಗೆ ನಿಮ್ಮನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬ ಸುದ್ದಿ ಬರುತ್ತದೆ. ಆದರೆ, ನಂತರ ಮ್ಯೂಸಿಕ್ ಕಂಪನಿ ಅವರದ್ದೇ ಆದ ಐದು ಮ್ಯೂಸಿಕ್ ಕಂಪೋಸರ್​​​​ಗಳನ್ನು ಆಯ್ಕೆ ಮಾಡಿಕೊಂಡಿರುತ್ತದೆ. ಆಗ ನಾನು ಮನೆಯಲ್ಲಿ ಹಾಯಾಗಿ ವಿಶ್ರಾಂತಿ ಪಡೆಯಬಹುದು’ ಎಂದಿದ್ದಾರೆ ಅವರು.

‘ನಾನು ಮುಸ್ಲಿಂ, ನಾನು ಬ್ರಾಹ್ಮಣ ಶಾಲೆಯಲ್ಲಿ ಓದಿದೆ. ಅಲ್ಲಿ ನಾನು ರಾಮಾಯಣ ಹಾಗೂ ಮಹಾಭಾರತ ಕಲಿತೆ’ ಎಂದಿದ್ದಾರೆ ಅವರು. ಈಗ ಹಿಂದಿಯ ‘ರಾಮಾಯಣ’ ಚಿತ್ರಕ್ಕೆ ಅವರದ್ದೇ ಸಂಗೀತ ಸಂಯೋಜನೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 12:00 pm, Sat, 17 January 26

Source link

ಹೊಸ ಇತಿಹಾಸ… ಯಾರಿಗೂ ಸಾಧ್ಯವಾಗದ ದಾಖಲೆ ಬರೆದ ಶ್ರೇಯಾಂಕಾ ಪಾಟೀಲ್ – Kannada News | Shreyanka Patil Creates New History in WPL 2026

WPL 2026: ವುಮೆನ್ಸ್​ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಲ್​ರೌಂಡರ್ ಶ್ರೇಯಾಂಕಾ ಪಾಟೀಲ್ (Shreyanka Patil) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ 5 ವಿಕೆಟ್​ ಕಬಳಿಸುವ ಮೂಲಕ. ಈ ಐದು ವಿಕೆಟ್​ಗಳೊಂದಿಗೆ ಭರ್ಜರಿ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.

Source link

ಬೆಂಗಳೂರು: ಬೆಳ್ಳಂಬೆಳಗ್ಗೆ ಗುದ್ದಲಿ, ಪೊರಕೆ ಹಿಡಿದು ಬೀದಿಗಿಳಿದ ಟೆಕ್ಕಿಗಳು!

ಬೆಂಗಳೂರು, ಜನವರಿ 17: ನಗರದ ಮಹದೇವಪುರದ ಬಳಗೆರೆ ರಸ್ತೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚದಿರುವುದನ್ನು ಖಂಡಿಸಿ ಐಟಿ–ಬಿಟಿ ಉದ್ಯೋಗಿಗಳು ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿದ್ದಾರೆ. ಹಾಳಾಗಿರುವ ರಸ್ತೆಗಳಿಂದ ನಿತ್ಯ ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಟೆಕ್ಕಿಗಳು ಗುದ್ದಲಿ, ಬಾಂಡಲಿ, ಹಾರೆ ಮತ್ತು ಪೊರಕೆ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಟ್ರ್ಯಾಕ್ಟರ್ ತರಿಸಿ ರಸ್ತೆ ಮೇಲೆ ತುಂಬಿಕೊಂಡಿದ್ದ ಮಣ್ಣು ಹಾಗೂ ಧೂಳನ್ನು ಸ್ವಚ್ಛಗೊಳಿಸುವ ಮೂಲಕ ಆಡಳಿತದ ನಿರ್ಲಕ್ಷ್ಯವನ್ನು ಪ್ರಶ್ನಿಸಿದ್ದಾರೆ. ಬಳಗೆರೆ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಕೆಲ ದಿನಗಳ ಹಿಂದೆ ರಸ್ತೆ ಗುಂಡಿಗೆ ಬಿದ್ದು ಟೆಕ್ಕಿ ಶ್ರೀಧರ್ ಅವರಿಗೆ ಕೈ ಮುರಿದಿದ್ದ ಘಟನೆ ನಡೆದಿದ್ದು, ಈ ಹಿನ್ನೆಲೆ ಅಧಿಕಾರಿಗಳು ತಕ್ಷಣ ರಸ್ತೆ ದುರಸ್ತಿ ಕೈಗೊಳ್ಳಬೇಕು ಎಂದು ಟೆಕ್ಕಿಗಳು ಒತ್ತಾಯಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

Namma Metro: ಮತ್ತೆ ಮೆಟ್ರೋ ದರ ಹೈಕ್ ಶಾಕ್? ದರ ಏರಿಕೆ ತಡೆಗೆ ತೇಜಸ್ವಿ ಸೂರ್ಯ ಪತ್ರ – Kannada News | Tejasvi Surya Urges Halt to Bangalore Metro Fare Hike

ಮತ್ತೆ ಮೆಟ್ರೋ ದರ ಹೈಕ್ ಶಾಕ್? ದರ ಏರಿಕೆ ತಡೆಗೆ ತೇಜಸ್ವಿ ಸೂರ್ಯ ಪತ್ರ

ಬೆಂಗಳೂರು, ಜನವರಿ 17: ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರ ಮತ್ತೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಈಗಾಗಲೇ ಕಳೆದ ಫೆಬ್ರವರಿ 9ರಂದು ಬಿಎಂಆರ್ಸಿಎಲ್ (BMRCL) ಅಧಿಕಾರಿಗಳು ಶೇ 105.5 ರಷ್ಟು ಒನ್ ಟು ಡಬಲ್ ದರ ಏರಿಕೆ ಮಾಡಿದ್ದನ್ನು ವಿರೋಧಿಸಿ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ದರವನ್ನು ಶೇ 71.5 ಕ್ಕೆ ಇಳಿಸಲಾಗಿತ್ತು. ಈ ಗೊಂದಲದ ನಡುವೆಯೇ ವಾರ್ಷಿಕ ಸ್ವಯಂಚಾಲಿತ ದರ ಏರಿಕೆ ಮಾಡಲು ಬಿಎಂಆರ್ಸಿಎಲ್ ಅಣಿಯಾಗಿದ್ದು, ಇದನ್ನು ವಿರೋಧಿಸಿ ಸಂಸದ ತೇಜಸ್ವಿ ಸೂರ್ಯ ಪತ್ರ ಬರೆದಿದ್ದಾರೆ.

ಕೇಂದ್ರ, ರಾಜ್ಯ ಸರ್ಕಾರಗಳಿಗೆ ತೇಜಸ್ವಿ ಸೂರ್ಯ ಪತ್ರ

ಪ್ರತಿವರ್ಷ ಫೆಬ್ರವರಿಯಲ್ಲಿ 5% ಸ್ವಯಂಚಾಲಿತ ದರ ಏರಿಕೆ ಮಾಡಲು ಬಿಎಂಆರ್ಸಿಎಲ್ ಸಿದ್ಧತೆ ಮಾಡಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಮೆಟ್ರೋಗೆ ದರ ನಿಗದಿ ಸಮಿತಿಯನ್ನು ಪುನರ್ ರಚಿಸಬೇಕು ಹಾಗೂ ಅಧಿಕಾರಿಗಳ ತಪ್ಪು ಲೆಕ್ಕ ಸರಿಪಡಿಸುವವರೆಗೆ ವಾರ್ಷಿಕ ದರ ಏರಿಕೆಯನ್ನು ತಡೆಹಿಡಿಯಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್​ಗೆ ಕಳುಹಿಸಲಾಗಿದೆ.

ಇದನ್ನೂ ಓದಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಯೆಲ್ಲೋ ಲೈನ್​ನಲ್ಲಿ ಇಂದಿನಿಂದ 7ನೇ ರೈಲು ಸಂಚಾರ

ಬಿಎಂಆರ್ಸಿಎಲ್ ವಿರುದ್ಧ ಹೋರಾಟದ ಎಚ್ಚರಿಕೆ

ಇತ್ತ, ಸೇವ್ ಬೆಂಗಳೂರು ಕಮಿಟಿ ಹಾಗೂ ಬೆಂಗಳೂರು ಮೆಟ್ರೋ ಪ್ರಯಾಣಿಕರ ವೇದಿಕೆ ಬಿಎಂಆರ್ಸಿಎಲ್ ವಿರುದ್ಧ ಹೋರಾಟದ ಎಚ್ಚರಿಕೆ ನೀಡಿದ್ದು, ಯಾವುದೇ ಕಾರಣಕ್ಕೂ ಮುಂದಿನ ತಿಂಗಳಿಂದ ದರ ಏರಿಕೆ ಮಾಡಬಾರದು ಎಂದು ಒತ್ತಾಯಿಸಿದೆ. ಪದೇಪದೇ ದರ ಏರಿಕೆ ಪ್ರಯಾಣಿಕರ ಮೇಲೆ ಭಾರೀ ಹೊರೆ ಆಗುತ್ತಿದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 10:26 am, Sat, 17 January 26

Source link

ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ ವಿರುದ್ಧ ಸೆಟೆದು ನಿಂತ ಕ್ರಿಕೆಟಿಗನಿಗೆ ಜೀವ ಬೆದರಿಕೆ..! – Kannada News | CWAB president Mohammad Mithun revealed that he received death threats

ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ ವಿರುದ್ಧ ಸೆಟೆದು ನಿಂತ ಬಾಂಗ್ಲಾದೇಶ್ ಕ್ರಿಕೆಟಿಗರ ಕಲ್ಯಾಣ ಸಂಘ (CWAB) ಅಧ್ಯಕ್ಷ ಮೊಹಮ್ಮದ್ ಮಿಥುನ್​ಗೆ ಜೀವ ಬೆದರಿಕೆಯೊಡ್ಡಲಾಗಿದೆ. ಮೊಹಮ್ಮದ್ ಮಿಥುನ್, ಬಿಸಿಬಿಯ ಹಣಕಾಸು ಸಮಿತಿಯ ಅಧ್ಯಕ್ಷ ನಜ್ಮುಲ್ ಇಸ್ಲಾಂ ಅವರ ರಾಜೀನಾಮೆ ಆಗ್ರಹಿಸಿದ್ದರು. ಆಟಗಾರರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನಲೆ ಬಾಂಗ್ಲಾದೇಶ್ ಕ್ರಿಕೆಟಿಗರ ಕಲ್ಯಾಣ ಸಂಘವು ಬಿಸಿಬಿಯ ಹಣಕಾಸು ಸಮಿತಿಯ ಅಧ್ಯಕ್ಷ ಸ್ಥಾನದಿಂದ ನಜ್ಮುಲ್ ಅವರನ್ನು ವಜಾ ಮಾಡಬೇಕೆಂದು ಆಗ್ರಹಿಸಿತ್ತು.

ಅಷ್ಟೇ ಅಲ್ಲದೆ ನಜ್ಮುಲ್ ಇಸ್ಲಾಂ ಅವರು ರಾಜೀನಾಮೆ ನೀಡುವವರೆಗೆ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ನಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಬಾಂಗ್ಲಾ ಆಟಗಾರರು ತಿಳಿಸಿದ್ದರು. ಅದರಂತೆ ಶುಕ್ರವಾರ ನಡೆಯಬೇಕಿದ್ದ ಪಂದ್ಯಗಳಿಂದ ಬಾಂಗ್ಲಾದೇಶ್ ಆಟಗಾರರು ಹಿಂದೆ ಸರಿದಿದ್ದರು. ಹೀಗಾಗಿ 2 ಪಂದ್ಯಗಳು ರದ್ದಾಗಿದ್ದವು.

ಈ ಬೆಳವಣಿಗೆಗಳ ಬೆನ್ನಲ್ಲೇ ತನಗೆ ಕರೆ ಮಾಡಿ ಜೀವ ಬೆದರಿಕೆಯೊಡ್ಡಲಾಗುತ್ತಿದೆ ಎಂದು ಬಾಂಗ್ಲಾದೇಶ್ ಕ್ರಿಕೆಟಿಗರ ಕಲ್ಯಾಣ ಸಂಘ (CWAB) ಅಧ್ಯಕ್ಷ ಮೊಹಮ್ಮದ್ ಮಿಥುನ್​ ಬಹಿರಂಗಪಡಿಸಿದ್ದಾರೆ. ನಾನು ಆಟಗಾರರ ಹಕ್ಕುಗಳು ಮತ್ತು ಸುರಕ್ಷತೆಯನ್ನು ಪ್ರತಿಪಾದಿಸುತ್ತಿದ್ದೇನೆ.

ಈ ಹಿನ್ನಲೆಯಲ್ಲಿ ನನಗೆ ಕೊಲೆ ಬೆದರಿಕೆಗಳು ಬರುತ್ತಿವೆ. ನಾನು ಎಂದಿಗೂ ದೇಶದ ವಿರುದ್ಧ ಮಾತನಾಡಿಲ್ಲ. ಯಾವುದೇ ವಿವಾದಾತ್ಮಕ ವಿಷಯಗಳಲ್ಲಿ ಭಾಗಿಯಾಗಿಲ್ಲ. ಇದಾಗ್ಯೂ ನಗಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ. ಇವೆಲ್ಲವೂ ನನಗೆ ಹೊಸ ಅನುಭವ.

ನಾನು ಕ್ರಿಕೆಟ್ ಮತ್ತು ಆಟಗಾರರ ಹಿತಾಸಕ್ತಿಗಾಗಿ ಮಾತ್ರ ಮಾತನಾಡಿದ್ದೇನೆ. ಇದರಲ್ಲಿ ಯಾವುದೇ ವೈಯಕ್ತಿಕ ಸಮಸ್ಯೆ ಇಲ್ಲ. ನಾನು ಒಂದು ಸಂಸ್ಥೆಯ ಅಧ್ಯಕ್ಷನಾಗಿರುವುದರಿಂದ, ನಾನು ಆಟಗಾರರ ಹಕ್ಕುಗಳ ಪರವಾಗಿ ಮಾತನಾಡದಿದ್ದರೆ, ಈ ಹುದ್ದೆಯನ್ನು ಅಲಂಕರಿಸುವುದರ ಅರ್ಥವೇನು? ಯಾರೂ ದೇಶಕ್ಕಿಂತ ಮೇಲಲ್ಲ ಎಂದು ಮೊಹಮ್ಮದ್ ಮಿಥುನ್ ಹೇಳಿದ್ದಾರೆ.

ಇದಾಗ್ಯೂ ಯಾರ ಕಡೆಯಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂಬುದನ್ನು ಮೊಹಮ್ಮದ್ ಮಿಥುನ್ ಬಹಿರಂಗಪಡಿಸಿಲ್ಲ. ಹೀಗಾಗಿಯೇ ಇದು ಮತ್ತೊಂದು ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ನೆಟ್ಟಿಗರು ಈ ಜೀವ ಬೆದರಿಕೆಗೆ ಬಿಸಿಬಿಯ ಹಣಕಾಸು ಸಮಿತಿಯ ಅಧ್ಯಕ್ಷ ನಜ್ಮುಲ್ ಇಸ್ಲಾಂ ಅವರತ್ತ ಬೊಟ್ಟು ಮಾಡುತ್ತಿದ್ದಾರೆ.

ಇದನ್ನೂ ಓದಿ: ಕೇವಲ 3 ಪಂದ್ಯಗಳಿಗೆ ಶ್ರೇಯಸ್ ಅಯ್ಯರ್: ತಿಲಕ್ ವರ್ಮಾ ಮೇಲೆ ನಿಗಾ..!

ಒಟ್ಟಿನಲ್ಲಿ ಐಪಿಎಲ್​ನಿಂದ ಮುಸ್ತಫಿಝುರ್ ರೆಹಮಾನ್ ಅವರನ್ನು ಕೈ ಬಿಟ್ಟ ಬೆನ್ನಲ್ಲೇ ಶುರುವಾದ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ನ ವಿವಾದ ಸದ್ಯಕ್ಕಂತು ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಅದರಲ್ಲೂ ಟಿ20 ವಿಶ್ವಕಪ್​​ ಪಂದ್ಯಗಳ ಸ್ಥಳಾಂತರಕ್ಕೆ ಆಗ್ರಹಿಸಿದ್ದ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ಗೆ ಇದೀಗ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ನಲ್ಲಿ ತನ್ನ ಆಟಗಾರರನ್ನು ಕಣಕ್ಕಿಳಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿರುವುದು ಮಾತ್ರ ವಿಪರ್ಯಾಸ.

Source link

ಪರೀಕ್ಷೆ ಬರೆದವರೇ ಬೇರೆ, ನೇಮಕಗೊಂಡವರೇ ಬೇರೆ! ಬೆಂಗಳೂರಿನ ಪ್ರತಿಷ್ಠಿತ ಇನ್ಸ್ಟಿಟ್ಯೂಟ್​ನ ಪರೀಕ್ಷೆಯಲ್ಲಿ ನಡೆದಿದ್ದೇನು? – Kannada News | Bengaluru Recruitment Scam: 7 Caught in IWST Exam Impersonation Fraud

ಪರೀಕ್ಷೆ ಬರೆದವರೇ ಬೇರೆ, ನೇಮಕಗೊಂಡವರೇ ಬೇರೆ! ಬೆಂಗಳೂರಿನ ಪ್ರತಿಷ್ಠಿತ ಇನ್ಸ್ಟಿಟ್ಯೂಟ್​ನ ಪರೀಕ್ಷೆಯಲ್ಲಿ ನಡೆದಿದ್ದೇನು?

ಬೆಂಗಳೂರು, ಜನವರಿ 17: ಬೆಂಗಳೂರು ನಗರದ ಪ್ರತಿಷ್ಠಿತ ಇನ್‌ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ನಡೆದ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಅಕ್ರಮ (Exam Fraud) ಬೆಳಕಿಗೆ ಬಂದಿದೆ. ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ (ICFRE) ಪರೀಕ್ಷೆಯನ್ನು ನಡೆಸಿತ್ತು. ಈ ವೇಳೆ ಸರ್ಕಾರಿ ಉದ್ಯೋಗ ಪಡೆಯುವ ಉದ್ದೇಶದಿಂದ ಪರೀಕ್ಷೆಗೆ ಬೇರೆ ವ್ಯಕ್ತಿಗಳನ್ನು ಹಾಜರುಪಡಿಸಿ ಪರೀಕ್ಷೆ ಬರೆಸಿದ್ದ 7 ಅಭ್ಯರ್ಥಿಗಳ ಕೃತ್ಯ ಬಹಿರಂಗವಾಗಿದೆ.

ದಾಖಲೆ ಪರಿಶೀಲನೆ ವೇಳೆ ಸಿಕ್ಕಿ ಬಿದ್ದ ಅಬ್ಯರ್ಥಿಗಳು

ನೇಮಕಾತಿ ಪ್ರಕ್ರಿಯೆಯಲ್ಲಿ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಡಳಿಯು ಆಂತರಿಕ ತನಿಖೆ ನಡೆಸಿದೆ. ಪರೀಕ್ಷೆ ವೇಳೆ ಹಾಜರಾದ ಅಭ್ಯರ್ಥಿಗಳ ಫೋಟೋಗಳು, ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಗಳು ಹಾಗೂ ನೇಮಕಾತಿ ಸಂದರ್ಭದಲ್ಲಿ ಮತ್ತು ಕೆಲಸಕ್ಕೆ ಸೇರಿದ ಬಳಿಕ ಸಲ್ಲಿಸಿದ ದಾಖಲೆಗಳ ಪರಿಶೀಲನೆ ನಡೆಸಲಾಯಿತು. ಈ ವೇಳೆ ಅಭ್ಯರ್ಥಿಗಳ ಸಹಿಗಳಲ್ಲಿ ಸ್ಪಷ್ಟ ವ್ಯತ್ಯಾಸ ಕಂಡುಬಂದಿದೆ.

ಪರೀಕ್ಷೆ ವೇಳೆ ಹಾಜರಾದ ವ್ಯಕ್ತಿಗಳು ಮತ್ತು ನೇಮಕಾತಿ ಸಂದರ್ಭದಲ್ಲಿ ದಾಖಲೆ ಸಲ್ಲಿಸಿದ ವ್ಯಕ್ತಿಗಳು ಬೇರೆ ಬೇರೆ ಎಂಬ ಅನುಮಾನ ಬಲವಾದ ಹಿನ್ನೆಲೆಯಲ್ಲಿ, ಎಲ್ಲಾ ದಾಖಲೆಗಳನ್ನು ವೈಜ್ಞಾನಿಕ ಪರೀಕ್ಷೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಎಫ್‌ಎಸ್‌ಎಲ್ ವರದಿಯಲ್ಲಿ, ಏಳು ಅಭ್ಯರ್ಥಿಗಳ ಬದಲಾಗಿ ಬೇರೆ ವ್ಯಕ್ತಿಗಳು ಪರೀಕ್ಷೆ ಬರೆದಿರುವುದು ದೃಢಪಟ್ಟಿದೆ.

ಈ ಹಿನ್ನೆಲೆಯಲ್ಲಿ ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಅವರು ಪೊಲೀಸರಿಗೆ ದೂರು ನೀಡಿದ್ದು, ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಏಳು ಅಭ್ಯರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಈ ಫೋಟೋದಲ್ಲಿರೋ ಬಾಲಕ ಈಗ ಸ್ಟಾರ್ ಹೀರೋ; ಯಾರೆಂದು ಗುರುತಿಸಿ – Kannada News | Vijay Sethupathi’s Rags to Riches: From rs 250 Job to 170 Cr Superstar Journey

ಚಿತ್ರೋದ್ಯಮದಲ್ಲಿ ಸೂಪರ್‌ಸ್ಟಾರ್ ಆಗುವ ಪ್ರಯಾಣ ಸುಲಭವಲ್ಲ. ಅನೇಕ ನಟರು ಯಶಸ್ಸನ್ನು ಸಾಧಿಸುವ ಮೊದಲು ಬಹಳಷ್ಟು ಕಷ್ಟಪಟ್ಟಿದ್ದಾರೆ. ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ, ಕಮಲ್ ಹಾಸನ್, ಯಶ್, ದರ್ಶನ್ ಅವರಂತಹ ನಾಯಕರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಸಣ್ಣ ಕೆಲಸ ಮಾಡಿದ್ದಾರೆ. ನಂತರ ತಮ್ಮದೇ ಆದ ಪ್ರಯತ್ನದಿಂದ ಚಿತ್ರರಂಗದಲ್ಲಿ ದೊಡ್ಡ ಸ್ಥಾನವನ್ನು ಗಳಿಸಿದರು. ಮೇಲಿನ ಫೋಟೋದಲ್ಲಿರೋ ಹೀರೋ ಅನೇಕ ತೊಂದರೆಗಳನ್ನು ಎದುರಿಸಿದರು. ಅವರು ಕೇವಲ 250 ರೂ.ಗೆ ಸಿಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈಗ ಅವರು 170 ಕೋಟಿ ರೂ.ಗಳ ಒಡೆಯ. ಅವರು ಯಾರೆಂದು ನಿಮಗೆ ಗೊತ್ತೇ? ಅವರೇ ವಿಜಯ್ ಸೇತುಪತಿ.

ವಿಜಯ್ ದಕ್ಷಿಣ ಚಿತ್ರೋದ್ಯಮದಲ್ಲಿ ಮಾತ್ರವಲ್ಲದೆ ಬಾಲಿವುಡ್‌ನಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಎಲ್ಲಾ ಕಲಾವಿದರು ಅವರೊಂದಿಗೆ ನಟಿಸಲು ತುಂಬಾ ಆಸಕ್ತಿ ತೋರುತ್ತಾರೆ. ಅವರ ಅತ್ಯುತ್ತಮ ನಟನೆಗಾಗಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ. 6ನೇ ತರಗತಿಯವರೆಗೆ ಶಿಕ್ಷಣ ಪಡೆದು ವಿಜಯ್ ಚೆನ್ನೈಗೆ ಬಂದರು. ಅವರು ತಮ್ಮ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಲಿಲ್ಲ. ಅವರ ಎತ್ತರದ ಕಾರಣಕ್ಕೆ ಶಾಲೆಯಲ್ಲಿ ಕೀಟಲೆ ಮಾಡಲಾಗುತ್ತಿತ್ತು. 16 ನೇ ವಯಸ್ಸಿನಲ್ಲಿ, ಅವರು ಚಲನಚಿತ್ರವೊಂದರ ಆಡಿಷನ್‌ಗೆ ಹೋಗಿದ್ದರು. ಆದರೆ ಅವರ ಕಡಿಮೆ ಎತ್ತರದ ಕಾರಣ ಅವರನ್ನು ಆಯ್ಕೆ ಮಾಡಲಾಗಲಿಲ್ಲ.

ಕುಟುಂಬ ನಿರ್ವಹಣೆಗಾಗಿ ವಿಜಯ್ ಸಣ್ಣಪುಟ್ಟ ಕೆಲಸಗಳನ್ನು ಮಾಡಿದರು. ಚಿಲ್ಲರೆ ಅಂಗಡಿಯಲ್ಲಿ ಸೇಲ್ಸ್‌ಮ್ಯಾನ್ ಆಗಿ, ಕೆಲವೊಮ್ಮೆ ಫಾಸ್ಟ್ ಫುಡ್ ಜಾಯಿಂಟ್‌ನಲ್ಲಿ ಕ್ಯಾಷಿಯರ್ ಆಗಿ, ಕೆಲವೊಮ್ಮೆ ಫೋನ್ ಬೂತ್ ಆಪರೇಟರ್ ಆಗಿ ಕೆಲಸ ಮಾಡಿದರು. ಸಿಮೆಂಟ್ ವ್ಯವಹಾರದಲ್ಲಿ ಸಹಾಯಕರಾಗಿಯೂ ಕೆಲಸ ಮಾಡಿದರು.

ಇದನ್ನೂ ಓದಿ: 

ವಿಜಯ್ ದುಬೈಗೆ ಹೋಗಿ ಅಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ದುಬೈನಲ್ಲಿ ಕೆಲಸ ಮಾಡುತ್ತಿದ್ದಾಗ, ಅವರು ತಮ್ಮ ಭಾವಿ ಪತ್ನಿ ಜೆಸ್ಸಿಯನ್ನು ಭೇಟಿಯಾದರು. ಅವರು 2003 ರಲ್ಲಿ ವಿವಾಹವಾದರು. ನಟನೆಯಲ್ಲಿ ಆಸಕ್ತಿ ಹೊಂದಿದ್ದ ಅವರು ಭಾರತಕ್ಕೆ ಬಂದು ಚಲನಚಿತ್ರ ಅವಕಾಶಗಳನ್ನು ಪ್ರಯತ್ನಿಸಿದರು. ತಮ್ಮ ವೃತ್ತಿಜೀವನದ ಆರಂಭದಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸಿದ ವಿಜಯ್ ಈಗ ಸ್ಟಾರ್ ಹೀರೋ. ಅವರು ತಮಿಳು, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ನಟಿಸುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಸತ್ತಮೇಲೆ ದೇವರಿಗೆ ಲೆಕ್ಕ ಕೊಟ್ಕೋತಿನಿ’; ಹರಾಮ್ ವಿಷಯದಲ್ಲಿ ಝೈದ್ ಖಾನ್ ಖಡಕ್ ತಿರುಗೇಟು – Kannada News | Zaid Khan on ‘Cult’ Movie, Haram Controversy and Religion: Actor’s Bold Stance Ahead of Jan 23 Release

ನಟ ಝೈದ್ ಖಾನ್ ಅವರು ‘ಕಲ್ಟ್’ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರಲು ರೆಡಿ ಆಗಿದ್ದಾರೆ. ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಟ್ರೇಲರ್​​​ನಲ್ಲಿ ಝೈದ್ ಖಾನ್ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ವಿವಿಧ ಶೇಡ್​​​ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈಗ ಝೈದ್ ಖಾನ್ ಅವರಿಗೆ ಹರಾಮ್ ವಿಷಯದ ಬಗ್ಗೆ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ.‘ಸತ್ತಮೇಲೆ ದೇವರಿಗೆ ಲೆಕ್ಕ ಕೊಟ್ಕೋತಿನಿ’ ಎಂದು ನೇರಮಾತುಗಳಲ್ಲಿ ಹೇಳಿದ್ದಾರೆ.

ಝೈದ್ ಖಾನ್ ಅವರು ಮುಸ್ಲಿಂ ಧರ್ಮದವರು. ಆದರೆ, ಅವರು ಎಲ್ಲಾ ಧರ್ಮಕ್ಕೂ ಸಮಾನ ಆದ್ಯತೆ ನೀಡುತ್ತಾರೆ. ಅವರ ಮೊದಲ ಸಿನಿಮಾ ‘ಬನಾರಸ್’ ಕಾಶಿ ಭಾಗದಲ್ಲಿ ಶೂಟ್ ಆಗಿದೆ. ಇತ್ತೀಚೆಗೆ ‘ಕಲ್ಟ್’ ಸಿನಿಮಾ ಪ್ರಚಾರದ ವೇಳೆ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದ್ದಾರೆ. ಇದನ್ನು ಅವರ ಧರ್ಮದವರು ಪ್ರಶ್ನೆ ಮಾಡುವುದಿಲ್ಲವೇ ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ಝೈದ್ ಖಾನ್, ‘ನಾನು ಎಲ್ಲಾ ಧರ್ಮವನ್ನು ಸಮಾನವಾಗಿ ಕಾಣುತ್ತೇನೆ’ ಎಂದಿದ್ದಾರೆ.

ಆ ಬಳಿಕ ಝೈದ್ ಖಾನ್ ಅವರಿಗೆ ಹರಾಮ್ ಬಗ್ಗೆ ಪ್ರಶ್ನೆ ಎದುರಾಯಿತು. ‘ಕುರಾನ್ ಅಲ್ಲಿ ಮದ್ಯ ಸೇವನೆ ಮಾಡಬಾರದು, ಹಿಂಸಾಚಾರ ಮಾಡಬಾರದು ಎಂದೆಲ್ಲ ಇದೆ. ಅದೆಲ್ಲ ಹರಾಮ್. ಆದರೆ, ಸಿನಿಮಾದಲ್ಲಿ ಅದನ್ನೇ ತೋರಿಸಿದ್ದೀರಿ’ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಝೈದ್ ಖಾನ್, ‘ನಟನೆಯನ್ನು ನಟನೆಯಾಗಿ ಮಾತ್ರ ನೋಡುತ್ತೇನೆ. ಅದಕ್ಕೂ ನಿಜ ಜೀವನಕ್ಕೂ ಕನೆಕ್ಟ್ ಮಾಡಬಾರದು’ ಎಂದರು.

ಇದನ್ನೂ ಓದಿ: ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ ಪ್ರಕರಣ; ಕ್ಷಮೆ ಕೇಳಿದ ನಟ ಝೈದ್ ಖಾನ್

ಆ ಬಳಿಕ ಮತ್ತೆ ಇದೇ ವಿಷಯವಾಗಿ ಪ್ರಶ್ನೆಗಳು ಎದುರಾದವು. ಇದಕ್ಕೆ ಉತ್ತರಿಸಿದ ಝೈದ್ ಖಾನ್, ‘ಸತ್ತ ಮೇಲೆ ನಾನು ದೇವರಿಕೆ ಲೆಕ್ಕ ಕೊಟ್ಟುಕೊಳ್ಳುತ್ತೇನೆ’ ಎಂದರು. ಅವರ ಉತ್ತರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ.
ಝೈದ್ ಖಾನ್ ಅವರ ಕಲ್ಟ್ ಸಿನಿಮಾ ಜನವರಿ 23ರಂದು ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಝೈದ್ ಜೊತೆ ರಂಗಾಯಣ ರಘು, ಮಲೈಕಾ ವಾಸುಪಾಲ್, ರಚಿತಾ ರಾಮ್, ಅಚ್ಯುತ್ ಕುಮಾರ್ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link