SpaceXAIಗೆ ಜನ ಬೇಕಿದ್ದಾರೆ; ಎಐ ಪರಿಣತಿ ಬೇಕಿಲ್ಲವಂತೆ; ಇಲಾನ್ ಮಸ್ಕ್ ಬಯಸುತ್ತಿರೋದು ಎಂಥವರನ್ನು? – Kannada News | Elon Musk wants world class engineers and physicists for SpaceXAI

ವಾಷಿಂಗ್ಟನ್, ಮೇ 21: ಇಲಾನ್ ಮಸ್ಕ್ (Elon Musk) ಅವರು ತಮ್ಮ ಸ್ಪೇಸ್ ಎಕ್ಸ್ ಎಐ (SpaceXAI) ಸಂಸ್ಥೆಗೆ ಉದ್ಯೋಗಿಗಳ ಶೋಧ ನಡೆಸುತ್ತಿದ್ದಾರೆ. ತಮ್ಮ ಎಕ್ಸ್ ಅಕೌಂಟ್​ನಲ್ಲಿ ಹೈರಿಂಗ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತೆ ಇಮೇಲ್ ಐಡಿಯನ್ನೂ ಒದಗಿಸಿದ್ದಾರೆ. ಸ್ಪೇಸ್​ಎಕ್ಸ್ ಎಐ ಸಂಸ್ಥೆಗೆ ಸೇರಬಯಸುವವರು ಎಐನಲ್ಲಿ ಅನುಭವದ ಹಿನ್ನೆಲೆ ಇಲ್ಲದಿದ್ದರೂ ಆದೀತು, ಆದರೆ, ಸ್ಮಾರ್ಟ್ ಆಗಿರಬೇಕು. ವಿಶ್ವ ದರ್ಜೆಯ ಎಂಜಿನಿಯರುಗಳು, ವಿಜ್ಞಾನಿಗಳಾಗಿರಬೇಕಂತೆ.

‘ಸ್ಪೇಸ್​ಎಕ್ಸ್​ಎಐಗೆ ವಿಶ್ವದರ್ಜೆಯ ಎಂಜಿನಿಯರುಗಳು, ಫಿಸಿಸಿಸ್ಟ್​ಗಳನ್ನು (ಭೌತವಿಜ್ಞಾನಿಗಳು) ನೇಮಕಾತಿ ಮಾಡಲಾಗುತ್ತಿದೆ. ಅವರಿಗೆ ಎಐನಲ್ಲಿ ಯಾವುದೇ ಅನುಭವ ಇಲ್ಲದಿದ್ದರೂ ಆಗುತ್ತದೆ. ಸ್ಮಾರ್ಟ್ ವ್ಯಕ್ತಿಗಳು ಬೇಗ ಕಲಿತುಕೊಳ್ಳುತ್ತಾರೆ’ ಎಂದು ಇಲಾನ್ ಮಸ್ಕ್ ತಿಳಿಸಿದ್ದಾರೆ.

ಆಸಕ್ತ ಅಭ್ಯರ್ಥಿಗಳು ತಮ್ಮಲ್ಲಿ ಅಸಾಧಾರಣ ಸಾಮರ್ಥ್ಯವಿರುವುದನ್ನು ತೋರಿಸುವಂತಹ ಅಂಶಗಳನ್ನು 3 ಬುಲೆಟ್ ಪಾಯಿಂಟ್​ಗಳಲ್ಲಿ ಬರೆದು, ai_eng@spacex.com ಇಮೇಲ್ ವಿಳಾಸಕ್ಕೆ ಕಳುಹಿಸಬಹುದು. ಹಾಗೆಂದು ಮಸ್ಕ್ ತಿಳಿಸಿದ್ದಾರೆ.

ಇದನ್ನೂ ಓದಿ: ಫೋನ್ ಖರೀದಿಸಿ, ಇಎಂಐ ಕಟ್ಟೋಕಾಗ್ತಿಲ್ವಾ? ಸಾಲಗಾರರು ನಿಮ್ಮ ಫೋನ್ ಲಾಕ್ ಮಾಡಬಹುದಾ? ಆರ್​ಬಿಐ ಬಳಿ ಪ್ರಸ್ತಾಪ

ಎಲ್ಲಾ ಇಮೇಲ್​ಗಳನ್ನೂ ಮಸ್ಕ್ ನೋಡುತ್ತಾರಾ?

ಮತ್ತೊಂದು ಟ್ವೀಟ್​ನಲ್ಲಿ ಇಲಾನ್ ಮಸ್ಕ್ ಅವರು, ನೇಮಕಾತಿಗೆ ಕೋರಿ ಬರುವ ಎಲ್ಲಾ ಇಮೇಲ್​ಗಳನ್ನು ಖುದ್ದಾಗಿ ಪರಿಶೀಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಹಾಗೆಯೇ, ಸ್ಮಾರ್ಟ್ ಜನರು ಪ್ರಯೋಜನವೆನಿಸುವ ಬಹಳ ಸಂಕೀರ್ಣ ಇರುವ ಕೆಲಸವನ್ನು ಮಾಡಿದರೆ ಅವರಿಗೆ ಆದ್ಯತೆ ಸಿಗುವುದು ಎಂದೂ ಮಸ್ಕ್ ಹೇಳಿದ್ದಾರೆ.

ಇಲಾನ್ ಮಸ್ಕ್ ಅವರ ಟ್ವೀಟ್

ಎಕ್ಸ್​ಎಐ ಎಂಬುದು ಇಲಾನ್ ಮಸ್ಕ್ ಇತ್ತೀಚೆಗಷ್ಟೇ ಆರಂಭಿಸಿದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಂಪನಿ. ರಾಕೆಟ್, ಸ್ಪೇಸ್​ಶಿಪ್ ತಯಾರಿಸುವ ಸ್ಪೇಸ್​ಎಕ್ಸ್ ಜೊತೆಗೆ ಎಕ್ಸ್​ಎಐ ಅನ್ನು ಸೇರಿಸಲಾಗಿದೆ. ಇದು ಸ್ಪೇಸ್​ಎಕ್ಸ್​ನ ಎಐ ವಿಭಾಗವಾಗಿದ್ದು, ಸ್ಪೇಸ್​ಎಕ್ಸ್​ಎಐ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಬೆಂಗಳೂರಲ್ಲಿ ತರಕಾರಿ ಮಾರುವ ಹುಡುಗನ ತಲೆಯಲ್ಲಿ ಎಐ ಟೂಲ್; ಗಂಟೆಗೆ 350 ರೂ ಎಕ್ಸ್​ಟ್ರಾ ಇನ್ಕಮ್; ಬೆರಗಾದ ನೆಟ್ಟಿಗರು

ಸ್ಪೇಸ್​ಎಕ್ಸ್​ನ ಕೊಲೋಸಸ್ ಸೂಪರ್ ಕಂಪ್ಯೂಟರ್

ಸ್ಪೇಸ್ ಎಕ್ಸ್ ಸಂಸ್ಥೆ ಕೊಲೋಸಸ್ ಎನ್ನುವ ಬಹಳ ಶಕ್ತಿಶಾಲಿ ಸೂಪರ್ ಕಂಪ್ಯೂಟರ್ ನಿರ್ಮಿಸಿದೆ. ಇದು ವಿಶ್ವದ ಅತಿದೊಡ್ಡ ಎಐ ಸೂಪರ್ ಕಂಪ್ಯೂಟರ್​ಗಳ ಸಿಸ್ಟಂ ಆಗಿದೆ. ಎನ್​ವಿಡಿಯಾದ 2.2 ಲಕ್ಷಕ್ಕೂ ಅಧಿಕ ಜಿಪಿಯುಗಳನ್ನು ಬಳಸುತ್ತದೆ. ಎಐ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಆಂಥ್ರೋಪಿಕ್ ಸಂಸ್ಥೆಯು ಈ ಕೊಲೋಸಸ್ ಸಿಸ್ಟಂನ ಕಂಪ್ಯೂಟಿಂಗ್​ ಬಳಕೆಗಾಗಿ ಪ್ರತೀ ತಿಂಗಳು 1.25 ಬಿಲಿಯನ್ ಡಾಲರ್ (ಬರೋಬ್ಬರಿ 11,000 ಕೋಟಿ ರೂಗೂ ಅಧಿಕ) ಪಾವತಿ ಮಾಡುತ್ತದಂತೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *