Category Archives: Blog

Your blog category

Video: ಕೇಂದ್ರ ಸಚಿವ ಮುರುಗನ್ ನಿವಾಸದಲ್ಲಿ ಪೊಂಗಲ್ ಆಚರಿಸಿದ ಪ್ರಧಾನಿ ಮೋದಿ – Kannada News | PM Modi Joins Pongal Celebrations at Minister L Murugan’s Delhi Home

ನವದೆಹಲಿ, ಜನವರಿ 14: ಪ್ರಧಾನಿ ನರೇಂದ್ರ ಮೋದಿ ಇಂದು ಕೇಂದ್ರ ಸಚಿವ ಎಲ್ ಮುರುಗನ್ ನಿವಾಸದಲ್ಲಿ ಪೊಂಗಲ್ ಹಬ್ಬವನ್ನು ಆಚರಿಸಿದ್ದಾರೆ. ಪ್ರಧಾನಿ ಸಾಂಪ್ರದಾಯಿಕ ಪೂಜೆ ಮತ್ತು ಆರತಿಯನ್ನು ನೆರವೇರಿಸಿದ್ದಾರೆ. ಅಷ್ಟೇ ಅಲ್ಲದೆ ಗೋಸೇವೆ ಕೂಡ ಮಾಡಿದ್ದಾರೆ.ಪ್ರಕೃತಿಯ ಬಗ್ಗೆ ಕೃತಜ್ಞತೆಯನ್ನು ಪದಗಳಿಗೆ ಸೀಮಿತಗೊಳಿಸಬಾರದು, ಅದನ್ನು ನಮ್ಮ ದೈನಂದಿನ ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದು ಪೊಂಗಲ್ ಜನರಿಗೆ ಕಲಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಭೂಮಿಯು ನಮಗೆ ಇಷ್ಟೊಂದು ನೀಡಿದಾಗ, ಅದನ್ನು ಪಾಲಿಸುವುದು ನಮ್ಮ ಜವಾಬ್ದಾರಿಯಾಗಿದೆ. ಮಣ್ಣನ್ನು ಆರೋಗ್ಯಕರವಾಗಿಡುವುದು, ನೀರನ್ನು ಸಂರಕ್ಷಿಸುವುದು ಮತ್ತು ಸಂಪನ್ಮೂಲಗಳನ್ನು ವಿವೇಚನೆಯಿಂದ ಬಳಸುವುದು ಮುಂದಿನ ಪೀಳಿಗೆಗೆ ಅತ್ಯಂತ ಮುಖ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸ್ಥಳೀಯ ಸಂಸ್ಥೆ ಚುನಾವಣೆಗೆ ಬಿಜೆಪಿ-JDS ಮೈತ್ರಿಯಲ್ಲಿ ಭಿನ್ನರಾಗ: ಹೆಚ್​​ಡಿಕೆ ಮುಂದಿನ ನಡೆ ಏನು? – Kannada News | Rift Emerges in BJP JDS Alliance Over Karnataka Local Body Polls

ಬಿಜೆಪಿ-ಜೆಡಿಎಸ್​​ ಮೈತ್ರಿಯಲ್ಲಿ ಭಿನ್ನರಾಗ

ಬೆಂಗಳೂರು, ಜನವರಿ 14: ಸ್ಥಳೀಯ ಸಂಸ್ಥೆ ಚುನಾವಣೆ ಮೈತ್ರಿ ವಿಚಾರವೀಗ ಬಿಜೆಪಿ, ಜೆಡಿಎಸ್​​ಗೆ ಕಗ್ಗಂಟಾಗಿ ಮಾರ್ಪಟ್ಟಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್​​ ಜೊತೆ ಮೈತ್ರಿಗೆ ಬಿಜೆಪಿಯ ಕೆಲವರು ವಿರೋಧ ವ್ಯಕ್ತಪಡಿಸಿದ ಕಾರಣ,  ಬಿಜೆಪಿ ಹೈಕಮಾಂಡ್ ಜೊತೆ ಕೇಂದ್ರ ಸಚಿವ ಮತ್ತು ಜೆಡಿಎಸ್​​ ನಾಯಕ ಕುಮಾರಸ್ವಾಮಿ ಶೀಘ್ರದಲ್ಲೇ ಸಭೆ ನಡೆಸಲಿದ್ದಾರೆ. ಆ ಮೂಲಕ  ಸಂಕ್ರಾಂತಿ ಬಳಿಕ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು  ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಎಲ್ಲ ಚುನಾವಣೆಯಲ್ಲೂ ಮೈತ್ರಿಗೆ ಜೆಡಿಎಸ್​​ ಒಲವು

ಸ್ಥಳೀಯ ಸಂಸ್ಥೆ ಚುನಾವಣೆಗೆ ಬಿಜೆಪಿ ಜೊತೆ ಮೈತ್ರಿ ವಿಚಾರವಾಗಿ ಈಗಾಗಲೇ ಜೆಡಿಎಸ್ ಶಾಸಕರು, ಮುಖಂಡರಿಂದ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಸ್ಥಳೀಯ ಸಂಸ್ಥೆ, ಜಿಬಿಎ ಚುನಾವಣೆಯಲ್ಲಿ ಮೈತ್ರಿಗೆ ಒಲವು ವ್ಯಕ್ತವಾಗಿದ್ದು, ಬಿಜೆಪಿ ಜೊತೆಗೇ ಚುನಾವಣೆ ಎದುರಿಸೋಣ ಎಂದು ಮುಖಂಡರು ತಿಳಿಸಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮೈತ್ರಿಯಾಗದಿದ್ದರೆ, ಮುಂಬರುವ ವಿಧಾನಸಭೆ ಚುನಾವಣೆಗೆ ಒಟ್ಟಾಗಿ ಹೋಗೋದು ಕಷ್ಟ. ಕಾರ್ಯಕರ್ತರು, ಮುಖಂಡರ ನಡುವೆ ಗೊಂದಲವಾದ್ರೆ ಅದು ಕಾಂಗ್ರೆಸ್​ಗೆ ಲಾಭ ಆಗಲಿದೆ. ಹೀಗಾಗಿ ಎಲ್ಲಾ ಚುನಾವಣೆಗೂ ಮೈತ್ರಿಯಲ್ಲೇ ಹೋಗೋಣ ಎಂಬ ನಿಲುವು ಜೆಡಿಎಸ್ ಮುಖಂಡರದ್ದು ಎನ್ನಲಾಗಿದೆ.

ಇದನ್ನೂ ಓದಿ: ಸ್ಥಳೀಯ ಸಂಸ್ಥೆ ಚುನಾವಣೆ; JDS ಜೊತೆ ಮೈತ್ರಿಗೆ ಮಂಡ್ಯದಲ್ಲಿ ಬಿಜೆಪಿಗರ ಅಪಸ್ವರ

ಸ್ಥಳೀಯ ಮಟ್ಟದಲ್ಲಿ ಮೈತ್ರಿಗೆ ಕೆಲ ಬಿಜೆಪಿಗರ ವಿರೋಧ

ನಾವು ಲೋಕಸಭೆ, ವಿಧಾನಸಭೆ ಮತ್ತು ಪರಿಷತ್ತಿನ ಚುನಾವಣೆಗಳಲ್ಲಿ ಬಿಜೆಪಿ ಮೈತ್ರಿಯೊಂದಿಗೆ ಸ್ಪರ್ಧಿಸಲಿದ್ದೇವೆ. ಆದರೆ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿಯೂ ಜೆಡಿಎಸ್ ಸ್ವಂತ ಬಲದ ಮೇಲೆ ಸ್ಪರ್ಧಿಸಲಿದೆ ಎಂದು ಜೆಡಿಎಸ್​​ ವರಿಷ್ಠ ಹೆಚ್​.ಡಿ. ದೇವೇಗೌಡ ಈ ಹಿಂದೆ ಹೇಳಿದ್ದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ  ಬಿ.ವೈ. ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ್ದರು. ಆ ಬೆನ್ನಲ್ಲೇ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿಗೆ ಮಂಡ್ಯ ಬಿಜೆಪಿಯಿಂದಲೂ ವಿರೋಧ ಕೇಳಿಬಂದಿತ್ತು. ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಕೋರ್ ಕಮಿಟಿ ಸದಸ್ಯರ ಮುಂದೆ ಈ ಕುರಿತು ನಾಯಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಮಾಜಿ ಸಂಸದೆ ಸುಮಲತಾ ಅಂಬರೀಷ್ ಮತ್ತು ಮಾಜಿ ಸಚಿವ ಕೆ.ಸಿ. ನಾರಾಯಣ ಗೌಡ ಹಾಗೂ ಜಿಲ್ಲೆಯ ಇತರ ಪರಾಜಿತ ಅಭ್ಯರ್ಥಿಗಳು ಇದಕ್ಕೆ ದನಿಗೂಡಿಸಿದ್ದರು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಇದ್ದರೂ ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರ ಹಿತಾಸಕ್ತಿ ಕಾಪಾಡಲು ಮೈತ್ರಿ ಸಾಧ್ಯವಿಲ್ಲ ಎಂದು ವಾದಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

SBI ATM Charges: ಎಟಿಎಂ ಶುಲ್ಕದ ನಂತರ ಐಎಂಪಿಎಸ್ ಶುಲ್ಕವನ್ನೂ ಹೆಚ್ಚಿಸಿದ ಎಸ್​ಬಿಐ; ಇಲ್ಲಿದೆ ವಿವರ – Kannada News | SBI revises charges on IMPS and ATM transactions, details of the new rules here

ನವದೆಹಲಿ, ಜನವರಿ 14: ಕಳೆದ ತಿಂಗಳು ಎಟಿಎಂ ಟ್ರಾನ್ಸಾಕ್ಷನ್ ಶುಲ್ಕ ಪರಿಷ್ಕರಿಸಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮುಂದಿನ ತಿಂಗಳು ಐಎಂಪಿಎಸ್ ಟ್ರಾನ್ಸಾಕ್ಷನ್​ನಲ್ಲೂ (IMPS charges) ಏರಿಕೆ ಮಾಡುತ್ತಿದೆ. ದೊಡ್ಡ ಮೊತ್ತದ ಹಣವನ್ನು ಐಎಂಪಿಎಸ್ ಮೂಲಕ ಕಳುಹಿಸುತ್ತಿದ್ದರೆ ಹೆಚ್ಚಿನ ಶುಲ್ಕ ತೆರಬೇಕಾಗಬಹುದು. ಎಟಿಎಂ ಟ್ರಾನ್ಸಾಕ್ಷನ್​ನ (ATM transaction charges) ಹೊಸ ಶುಲ್ಕಗಳು 2025ರ ಡಿಸೆಂಬರ್ 1ರಿಂದ ಜಾರಿಗೆ ಬಂದಿವೆ. ಆದರೆ, ಐಎಂಪಿಎಸ್ ಶುಲ್ಕ ಏರಿಕೆಯು 2026ರ ಫೆಬ್ರುವರಿ 15ರಿಂದ ಜಾರಿಗೆ ಬರಬಹುದು.

ಐಎಂಪಿಎಸ್ ಶುಲ್ಕದಲ್ಲಿ ಎಷ್ಟು ಏರಿಕೆ?

ಎಸ್​ಬಿಐನ ಹೊಸ ನಿಯಮಗಳ ಪ್ರಕಾರ 25,000 ರೂಗಿಂತ ಹೆಚ್ಚಿನ ಮೊತ್ತವನ್ನು ಐಎಂಪಿಎಸ್ ಮೂಲಕ ಕಳುಹಿಸಿದಾಗ ತುಸು ಹೆಚ್ಚಿನ ಶುಲ್ಕ ತೆರಬೇಕಾಗುತ್ತದೆ. 25,000 ರೂವರೆಗಿನ ಟ್ರಾನ್ಸಾಕ್ಷನ್​ಗೆ ಈ ಹಿಂದಿನಂತೆ ಯಾವುದೇ ಶುಲ್ಕ ಇರುವುದಿಲ್ಲ.

ಐಎಂಪಿಎಸ್ ಮೂಲಕ ಕಳುಹಿಸಲಾಗುವ 25,000 ರೂನಿಂದ 1 ಲಕ್ಷ ರೂವರೆಗಿನ ಮೊತ್ತಕ್ಕೆ 2 ರೂ ಶುಲ್ಕ, ಜೊತೆಗೆ ಆ ಶುಲ್ಕದ ಮೇಲೆ ಜಿಎಸ್​ಟಿ ಅನ್ವಯ ಆಗುತ್ತದೆ.

ಇದನ್ನೂ ಓದಿ: ಕೆಲಸ ಬಿಟ್ಟು 3 ವರ್ಷಕ್ಕೆ ಇಪಿಎಫ್ ಅಕೌಂಟ್​ಗೆ ಬಡ್ಡಿ ಸಿಗಲ್ಲ ಅನ್ನೋದು ನಿಜ ಅಲ್ಲ; ಇಲ್ಲಿದೆ ಸತ್ಯಾಂಶ

1 ಲಕ್ಷ ರೂನಿಂದ 2 ಲಕ್ಷ ರೂವರೆಗಿನ ಐಎಂಪಿಎಸ್ ವಹಿವಾಟಿಗೆ ಶುಲ್ಕವು 6 ರೂ ಹಾಗೂ ಜಿಎಸ್​ಟಿ ಇರುತ್ತದೆ.

2 ಲಕ್ಷ ರೂನಿಂದ 5 ಲಕ್ಷ ರೂವರೆಗಿನ ಟ್ರಾನ್ಸಾಕ್ಷನ್ ಆದರೆ 10 ರೂ ಶುಲ್ಕ, ಜೊತೆಗೆ ಜಿಎಸ್​ಟಿ ಇರುತ್ತದೆ.

ಎಸ್​ಬಿಐನ ಮೊಬೈಲ್ ಆ್ಯಪ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್​ನಲ್ಲಿ ಐಎಂಪಿಎಸ್ ಅನ್ನು ಬಳಸಲಾಗುತ್ತದೆ. ಗ್ರಾಹಕರು ಅಗತ್ಯ ಬಿದ್ದರೆ ನೆಫ್ಟ್ ಅಥವಾ ಆರ್​ಟಿಜಿಎಸ್ ಅನ್ನು ಬಳಸಬಹುದು. ಐಎಂಪಿಎಸ್​ನಲ್ಲಿ ಹಣವು ತತ್​ಕ್ಷಣವೇ ವರ್ಗಾವಣೆ ಆಗುತ್ತದೆ.

ಎಟಿಎಂ ಟ್ರಾನ್ಸಾಕ್ಷನ್ ಶುಲ್ಕದಲ್ಲಿ ಹೆಚ್ಚಳ

ಎಸ್​ಬಿಐ ಗ್ರಾಹಕರು ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ಒಂದು ತಿಂಗಳಲ್ಲಿ 5 ಟ್ರಾನ್ಸಾಕ್ಷನ್​ಗಳನ್ನು ಉಚಿತವಾಗಿ ಮಾಡಬಹುದು. ಅದಕ್ಕಿಂತ ಹೆಚ್ಚು ಬಾರಿ ಟ್ರಾನ್ಸಾಕ್ಷನ್ ಮಾಡಿದರೆ ಪ್ರತೀ ಟ್ರಾನ್ಸಾಕ್ಷನ್​ನಲ್ಲೂ ಶುಲ್ಕ ವಿಧಿಸಲಾಗುತ್ತದೆ. ಈ ಶುಲ್ಕವನ್ನು ಎಸ್​ಬಿಐ ಪರಿಷ್ಕರಿಸಿದೆ.

ಇದನ್ನೂ ಓದಿ: ಬರೀ 5,000 ರೂ ಎಸ್​ಐಪಿಗೆ ಸೀಮಿತವಾದರೆ ಸಂಪತ್ತು ಹೆಚ್ಚೋದಿಲ್ಲ; ಹೀಗೆ ಮಾಡಿ

ಡಿಸೆಂಬರ್ 1ರಿಂದ ಜಾರಿಗೆ ಬಂದಿರುವ ಪರಿಷ್ಕೃತ ದರಗಳ ಪ್ರಕಾರ, ಪ್ರತೀ ಕ್ಯಾಷ್ ವಿತ್​ಡ್ರಾಯಲ್​ಗೆ ಶುಲ್ಕವನ್ನು 21 ರೂನಿಂದ 23 ರೂಗೆ ಏರಿಸಲಾಗಿದೆ. ಜೊತೆಗೆ ಜಿಎಸ್​ಟಿಯೂ ಇರುತ್ತದೆ. ಬ್ಯಾಲನ್ಸ್ ಪರಿಶೀಲನೆ ಇತ್ಯಾದಿ ಹಣಕಾಸು ಅಲ್ಲದ ವಹಿವಾಟು ಆದರೆ 11 ರೂ ಹಾಗೂ ಜಿಎಸ್​ಟಿಯನ್ನು ಶುಲ್ಕವಾಗಿ ವಿಧಿಸಲಾಗುತ್ತದೆ.

ಗಮನಿಸಿ, ಎಸ್​ಬಿಐ ಗ್ರಾಹಕರು ಬೇರೆ ಬ್ಯಾಂಕುಗಳ ಎಟಿಎಂಗಳಲ್ಲಿ ಒಂದು ತಿಂಗಳಲ್ಲಿ ಐದು ಟ್ರಾನ್ಸಾಕ್ಷನ್​ಗಳನ್ನು ಉಚಿತವಾಗಿ ಮಾಡಬಹುದು. ಅದಾದ ಬಳಿಕ ಆ ತಿಂಗಳು ಮಾಡಲಾಗುವ ಪ್ರತೀ ವಹಿವಾಟಿಗೂ ಶುಲ್ಕ ಅನ್ವಯ ಆಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಚೊಚ್ಚಲ ಪಂದ್ಯ… ಅರ್ಧದಲ್ಲೇ ಬ್ಯಾಟಿಂಗ್ ನಿಲ್ಲಿಸಿ ವಾಪಸ್ ಕರೆಸಿದ ಕೋಚ್..! – Kannada News | Ayushi Soni becomes first player to be retired out in WPL 2026

ವುಮೆನ್ಸ್ ಪ್ರೀಮಿಯರ್ ಲೀಗ್​ನ 6ನೇ ಪಂದ್ಯವು ನಾಟಕೀಯ ಕ್ಷಣಗಳಿಗೆ ಸಾಕ್ಷಿಯಾಗಿದೆ. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್​ಪ್ರೀತ್ ಕೌರ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ತಂಡವು 4 ವಿಕೆಟ್ ಕಳೆದುಕೊಂಡು 10 ಓವರ್​ಗಳಲ್ಲಿ 99 ರನ್ ಕಲೆಹಾಕಿತ್ತು. ಅತ್ತ ಕನಿಕಾ ಅಹುಜಾ ಔಟಾಗುತ್ತಿದ್ದಂತೆ ಆಯುಷಿ ಸೋನಿ ಕ್ರೀಸ್​ಗೆ ಆಗಮಿಸಿದರು. ವಿಶೇಷ ಎಂದರೆ ಇದು ಸೋನಿಗೆ ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ ಪಂದ್ಯ.

ಮೊದಲ ಪಂದ್ಯದಲ್ಲೇ ರನ್​ಗಳಿಸಲು ಪರದಾಡಿದ ಆಯುಷಿ ಸೋನಿ 14 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 11 ರನ್​ಗಳು. ಈ ಹನ್ನೊಂದು ರನ್​ಗಳಲ್ಲಿ ಒಂದೇ ಒಂದು ಬೌಂಡರಿ ಇರಲಿಲ್ಲ. ಅಷ್ಟರಲ್ಲಾಗಲೇ 16 ಓವರ್​ಗಳು ಮುಗಿದಿದ್ದವು.

ಮೊದಲ 10 ಓವರ್​ಗಳಲ್ಲಿ 99 ರನ್​ಗಳಿಸಿದ್ದ ಗುಜರಾತ್ ಜೈಂಟ್ಸ್ ಆ ಬಳಿಕ 6 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 37 ರನ್​ಗಳು. ಇದರಲ್ಲಿ ಆಯುಷಿಯ ಕೊಡುಗೆ ಕೇವಲ 11 ರನ್​ಗಳು ಮಾತ್ರ. ಹೀಗಾಗಿಯೇ ಗುಜರಾತ್ ಜೈಂಟ್ಸ್ ತಂಡದ ಕೋಚ್ ಆಯುಷಿಯನ್ನು ವಾಪಸ್ ಕರೆಸಿದ್ದಾರೆ.

ಇದರೊಂದಿಗೆ ಆಯುಷಿ ಸೋನಿ ವುಮೆನ್ಸ್ ಪ್ರೀಮಿಯರ್ ಲೀಗ್​ ಇತಿಹಾಸದಲ್ಲೇ ರಿಟೈರ್ಡ್​ ಔಟ್ ಆದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ.

ಇನ್ನು ಆಯುಷಿ ಸೋನಿ ಬದಲಿಗೆ ಕ್ರೀಸ್​ಗೆ ಆಗಮಿಸಿದ ಭಾರ್ತಿ ಫಲ್ಮಾಲಿ 15 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ ಅಜೇಯ 36 ರನ್ ಬಾರಿಸಿದರು. ಈ ಮೂಲಕ ಗುಜರಾತ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 192 ರನ್​ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 19.2 ಓವರ್​ಗಳಲ್ಲಿ 193 ರನ್​ಗಳಿಸಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

Source link

ಕಾರವಾರ: JDS ಮುಖಂಡೆ ಪುತ್ರನ ಕಿರುಕಳಕ್ಕೆ ಯುವತಿ ಆತ್ಮಹತ್ಯೆ ಕೇಸ್​​ಗೆ ಸ್ಫೋಟಕ ಟ್ವಿಸ್ಟ್​​ – Kannada News | Twist in Rishala D’Souza suicide: Mother alleges physical harassment by JDS leader’s son

ಕಾರವಾರ, ಜನವರಿ 14: ಜೆಡಿಎಸ್​​ ಮುಖಂಡೆ ಪುತ್ರನ ಕಿರುಕಳಕ್ಕೆ ಯುವತಿ ಆತ್ಮಹತ್ಯೆ ಕೇಸ್​​ಗೆ ಸ್ಫೋಟಕ ಟ್ವಿಸ್ಟ್​​ ಸಿಕ್ಕಿದೆ. ತನ್ನ ಮಗಳ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ ಕಿರುಕುಳವನ್ನೂ ಆರೋಪಿ ನೀಡಿದ ಕಾರಣ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರಿಶಾಲ ಡಿಸೋಜಾ ತಾಯಿ ಕ್ರಿಸ್ತೋದ ಡಿಸೋಜಾ ಗಂಭೀರ ಆರೋಪ ಮಾಡಿದ್ದಾರೆ. ಅಂತ್ಯ ಸಂಸ್ಕಾರಕ್ಕೂ ಮುನ್ನ ನಾವು ಮೃತದೇಹಕ್ಕೆ ಸ್ನಾನ ಮಾಡಿಸುತ್ತೇವೆ. ಈ ವೇಳೆ ಮಗಳ ಖಾಸಗಿ ಭಾಗ ಸೇರಿದಂತೆ ದೇಹದ ಬಹುತೇಕ ಕಡೆ ಕಚ್ಚಿದ ಮಾರ್ಕ್ ಕಂಡುಬಂದಿದೆ. ಖಾಸಗಿ ಭಾಗದಿಂದ ತಿವ್ರವಾದ ರಕ್ತಸ್ರಾವ ಕೂಡ ಆಗಿದೆ. ಅತ್ಯಾಚಾರದ ವಿಚಾರ ಮನೆಯಲ್ಲಿ ಹೇಳೋಕೆ ಆಗದೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಅವರು ಹೇಳಿದ್ದಾರೆ. ನ್ಯಾಯಕ್ಕೆ ಆಗ್ರಹಿಸಿ ಸಿಎಂ, ಗೃಹ ಸಚಿವ ಹಾಗೂ ಎಸ್ಪಿ ಮತ್ತು ಡಿಸಿಗೆ ಕ್ರಿಸ್ತೋದ ಡಿಸೋಜಾ ಪತ್ರ ಕೂಡ ಬರೆದಿದ್ದು, ಆರೋಪಿ ಬಂಧಿಸದಿದ್ರೆ ಕಾರವಾರ ಡಿಸಿ ಕಚೇರಿ ಮುಂದೆ ಧರಣಿಗೆ ಕದ್ರಾ ಗ್ರಾಮಸ್ಥರು ನಿರ್ಧರಿಸಿದ್ದಾರೆ. ಜೆಡಿಎಸ್ ಮುಖಂಡೆ ಚೈತ್ರಾ ಕೋಠಾರಕರ ಪುತ್ರ ಚಿರಾಗ್ ಕಿರುಕಳಕ್ಕೆ ರಿಶಾಲ ಡಿಸೋಜಾ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಈ ಹಿಂದೆ ಕೇಳಿಬಂದಿತ್ತು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ವೇಳೆ ಕ್ರೇನ್​​ ಪಲ್ಟಿ: ತಪ್ಪಿದ ಭಾರೀ ದುರಂತ – Kannada News | Bengaluru Metro Construction: Crane Topples on Silk Board Airport Route

ಬೆಂಗಳೂರು, ಜನವರಿ 14: ಅಗರ ಬಳಿ ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ವೇಳೆ ಭಾರಿ ದುರಂತವೊಂದು ತಪ್ಪಿದೆ. ಕಂಟ್ರೋಲ್ ತಪ್ಪಿ ಬೃಹತ್ ಕ್ರೇನ್ ವಾಹನ ಆಯತಪ್ಪಿ ಬಿದ್ದಿದ್ದು, ಅದೃಷ್ವಶಾತ್​​ ಯಾವುದೇ ಪ್ರಾಣಹಾನಿ ಈ ವೇಳೆ ಸಂಭವಿಸಿಲ್ಲ. ಕ್ರೇನ್​​ ಹಿಂದಕ್ಕೆ ತೂಕದ ವಸ್ತು ಹಾಕದೆ ಮುಂದೆಯಿಂದ ಗರ್ಡರ್‌ ಎತ್ತಲು ಮುಂದಾದಾಗ ಬ್ಯಾಲೆನ್ಸ್​​ ತಪ್ಪಿದೆ. ಈ ವೇಳೆ ಆಪರೇಟರ್​​ ಕ್ರೇನ್​​ ವಾಹನದಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಮುಂಜಾನೆ 3.45ರ ಸುಮಾರಿಗೆ ಘಟನೆ ನಡೆದಿದ್ದು, ಸ್ಥಳಕ್ಕೆ HSR ಸಂಚಾರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ದೆಹಲಿ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ನಿವಾಸದಲ್ಲಿ ಅಗ್ನಿ ಅವಘಡ – Kannada News | Fire Erupts at Union Minister Ravi Shankar Prasad’s Delhi Residence

ನವದೆಹಲಿ, ಜನವರಿ 14: ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರ ದೆಹಲಿ ನಿವಾಸದಲ್ಲಿ ಬುಧವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ. 8.05ರ ಸುಮಾರಿಗೆ ಅಗ್ನಿಶಾಮಕ ದಳ ಅಲ್ಲಿಗೆ ತಲುಪಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮನೆಯೊಳಗೆ, ಒಂದು ಕೋಣೆಯೊಳಗಿನ ಹಾಸಿಗೆಯಲ್ಲಿ ಬೆಂಕಿ ಹೊತ್ತಿಕೊಂಡಿತ್ತು.ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು, ಮತ್ತಷ್ಟು ಹರಡುವುದನ್ನು ತಡೆದಿದ್ದಾರೆ. ಯಾರಿಗೂ ಗಾಯಗಳಾಗಿಲ್ಲ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಹಾಸನ ಜಿಲ್ಲೆಯ ವಿವಿಧೆಡೆ ಭಾರಿ ಮಳೆ: ಒಣಗಲು ಹಾಕಿದ್ದ ಕಾಫಿ ಬೆಳೆಗೆ ಹಾನಿ – Kannada News | Heavy Rains Lash Hassan District, Dried Coffee Crop Damaged Across Several Areas

ಹಾಸನ, ಜನವರಿ 14: ಹಾಸನ ಜಿಲ್ಲೆಯ ವಿವಿಧೆಡೆ ಸುರಿದ ಭಾರಿ ಮಳೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಕಾಲಿಕ ಮಳೆ ಕಾಫಿ ಬೆಳೆಗಾರರನ್ನು ಕಂಗಾಲಾಗಿಸಿದೆ. ಕಟಾವು ಮಾಡಿ ಒಣಗಲು ಹಾಕಿದ್ದ ಕಾಫಿ ಬೆಳೆಗೆ ಮಳೆಯಿಂದಾಗಿ ಹಾನಿಯುಂಟಾಗಿದೆ. ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಅನಿರೀಕ್ಷಿತವಾಗಿ ಸುರಿದ ಮಳೆಯಿಂದಾಗಿ, ಕೊಯ್ಲು ಮಾಡಿ ಒಣಗಿಸಲು ಹಾಕಲಾಗಿದ್ದ ಕಾಫಿ ಬೀಜಗಳು ಮಳೆಯಲ್ಲಿ ನೆನೆದು ಸಂಪೂರ್ಣ ಹಾಳಾಗಿವೆ. ಇದರಿಂದ ಕಾಫಿ ಬೆಳೆಗಾರರು ಭಾರೀ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಮಳೆ ಹಾನಿಯಿಂದಾಗಿ ಕಾಫಿ ಹೂವುಗಳು, ಕಾಫಿ ಗಿಡಗಳು ಮತ್ತು ಒಟ್ಟಾರೆ ಕಾಫಿ ಕೃಷಿ ಮೇಲೂ ಪರಿಣಾಮ ಬೀರಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Makar Sankranti: ಮಕರ ಸಂಕ್ರಾಂತಿಗೆ ಈ ವಸ್ತು ಮನೆಗೆ ತನ್ನಿ; ನಿಮ್ಮ ಅದೃಷ್ಟವೇ ಬದಲಾಗಲಿದೆ – Kannada News | Makar sankranti attract wealth and positivity with these 5 auspicious vastu items

ಹಿಂದೂ ಸಂಪ್ರದಾಯದಲ್ಲಿ ಮಕರ ಸಂಕ್ರಾಂತಿಗೆ ಹೆಚ್ಚಿನ ಮಹತ್ವವಿದೆ. ಈ ದಿನ ಕೆಲವು ವಸ್ತುಗಳನ್ನು ಮನೆಗೆ ತರುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಆದ್ದರಿಂದ ಮನೆಯಲ್ಲಿರುವ ಆರ್ಥಿಕ ಸಮಸ್ಯೆಗಳನ್ನು ತೊಡೆದುಹಾಕಲು ಮತ್ತು ಲಕ್ಷ್ಮಿ ದೇವಿಯ ಅನುಗ್ರಹವನ್ನು ಆಕರ್ಷಿಸಲು ಈ ಹಬ್ಬದಂದು ಯಾವ ವಸ್ತುಗಳನ್ನು ಖರೀದಿಸಬೇಕು ಎಂಬುದನ್ನುಇಲ್ಲಿ ತಿಳಿದುಕೊಳ್ಳಿ.

ಗಾಳಿ ಗಂಟೆಗಳು(Wind Chimes):

ಸಂಕ್ರಾಂತಿಯಂದು ಗಾಳಿ ಗಂಟೆಗಳನ್ನು ತಂದು ಗಾಳಿ ಬೀಸುವ ಸ್ಥಳದಲ್ಲಿ ಇರಿಸಿ. ಇವುಗಳ ಶಬ್ದವು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಹೊರಹಾಕುತ್ತದೆ ಮತ್ತು ಶಾಂತಿಯುತ ವಾತಾವರಣವನ್ನು ಸೃಷ್ಟಿಸುತ್ತದೆ.

ಲೋಹದ ಆಮೆ:

ಆಮೆಯನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗುತ್ತದೆ. ಹಿತ್ತಾಳೆ ಅಥವಾ ಚಿನ್ನದ ಬಣ್ಣದ ಆಮೆಯನ್ನು ತಂದು ಉತ್ತರ ದಿಕ್ಕಿನಲ್ಲಿ ಇಡುವುದರಿಂದ ಆರ್ಥಿಕ ಸ್ಥಿರತೆ ಮತ್ತು ವೃತ್ತಿ ಪ್ರಗತಿ ಬರುತ್ತದೆ.

ಸ್ಫಟಿಕ ವಸ್ತುಗಳು:

ವಾಸ್ತು ಪ್ರಕಾರ, ಸ್ಫಟಿಕ ಚೆಂಡುಗಳು ಸಂಪತ್ತಿನ ಸಂಕೇತಗಳಾಗಿವೆ. ಅವುಗಳನ್ನು ಮನೆಯಲ್ಲಿ ಇಡುವುದರಿಂದ ಕುಟುಂಬ ಸದಸ್ಯರಲ್ಲಿ ಸಮತೋಲನವನ್ನು ಸೃಷ್ಟಿಸಲು ಮತ್ತು ಅದೃಷ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಅದೃಷ್ಟದ ನಾಣ್ಯಗಳು:

ಮನೆಯ ಮುಖ್ಯ ದ್ವಾರದೊಳಗೆ ಕೆಂಪು ರಿಬ್ಬನ್‌ನಿಂದ ಕಟ್ಟುವ ಮೂರು ತಾಮ್ರದ ನಾಣ್ಯಗಳನ್ನು ಕಟ್ಟುವುದರಿಂದ ಆರ್ಥಿಕ ಅಡೆತಡೆಗಳು ನಿವಾರಣೆಯಾಗುತ್ತವೆ ಮತ್ತು ಆದಾಯದ ಮೂಲಗಳು ಸುಧಾರಿಸುತ್ತವೆ.

ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?

ಬಾತುಕೋಳಿಗಳ ಜೋಡಿ:

ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ಅಥವಾ ತಮ್ಮ ಪ್ರೇಮ ಸಂಬಂಧವನ್ನು ಬಲಪಡಿಸಲು ಬಯಸುವವರು ಒಂದು ಜೋಡಿ ಮ್ಯಾಂಡರಿನ್ ಬಾತುಕೋಳಿಗಳ ಪ್ರತಿಮೆಯನ್ನು ತಂದು ಮಲಗುವ ಕೋಣೆಯ ನೈಋತ್ಯ ದಿಕ್ಕಿನಲ್ಲಿ ಇಡುವುದು ಶುಭ.

ಈ ಮೇಲಿನ ವಸ್ತುಗಳನ್ನು ತಂದು ಇಡುವ ಮುಂಚೆ ಸರಿಯಾದ ದಿಕ್ಕುಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಅವುಗಳನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಡಿ. ಇದು ವಾಸ್ತು ದೋಷಗಳನ್ನು ನಿವಾರಿಸುತ್ತದೆ ಮತ್ತು ನಿಮ್ಮ ಕುಟುಂಬವನ್ನು ಸೂರ್ಯ ದೇವರ ಆಶೀರ್ವಾದದಿಂದ ತುಂಬುತ್ತದೆ, ಶಾಂತಿ ಮತ್ತು ಆರ್ಥಿಕ ಸ್ಥಿರತೆಯನ್ನು ತರುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬದಲಾಗಲ್ಲ ಬಾಲಿವುಡ್, ಮತ್ತೆ ‘ಕಾಂತಾರ’ಕ್ಕೆ ಅವಮಾನ ಮಾಡುವ ಯತ್ನ – Kannada News | CBFC removes Kantara movie reference from Bollywood movie Rahu Ketu

‘ಕಾಂತಾರ’ ಮತ್ತು ‘ಕಾಂತಾರ: ಚಾಪ್ಟರ್ 1’ (Kantara) ಸಿನಿಮಾನಲ್ಲಿ ಕರಾವಳಿಯ ದೈವ ಆರಾಧನೆ ಅದರ ಮಹಿಮೆ ಇನ್ನಿತರೆ ವಿಚಾರಗಳನ್ನು ತೋರಿಸಲಾಗಿದೆ. ಸಿನಿಮಾ ಮಾಡುವಾಗ ತಾವು ದೈವಗಳಿಗೆ ಅಪಚಾರ ಆಗದಂತೆ ಬಲು ನೇಮ-ನಿಷ್ಠೆಯಿಂದ ಸಿನಿಮಾ ಮಾಡಿರುವುದಾಗಿ ರಿಷಬ್ ಶೆಟ್ಟಿ ಹೇಳಿದ್ದರು. ಅಲ್ಲದೆ ಯಾರೂ ಸಹ ದೈವವನ್ನು ಅನುಕರಣೆ ಮಾಡುವುದು ಬೇಡ, ದೈವವನ್ನು ಹಾಸ್ಯಕ್ಕೆ ಬಳಸಿಕೊಳ್ಳುವುದು ಅಕ್ಷಮ್ಯ ಎಂದು ಸಹ ಹೇಳಿದ್ದರು. ಆದರೂ ಸಹ ಕೆಲವರು ಅದನ್ನು ಮಾಡುತ್ತಲೇ ಬಂದಿದ್ದಾರೆ. ಇತ್ತೀಚೆಗಷ್ಟೆ ಬಾಲಿವುಡ್​​ನ ಸ್ಟಾರ್ ನಟ ರಣ್ವೀರ್ ಸಿಂಗ್, ವೇದಿಕೆ ಮೇಲೆ ಕೆಟ್ಟದಾಗಿ ದೈವನ ಅನುಕರಣೆ ಮಾಡಿ ಕನ್ನಡಿಗರ ಸಿಟ್ಟಿಗೆ ಕಾರಣವಾಗಿದ್ದರು. ಆದರೆ ಇದೀಗ ಮತ್ತೊಂದು ಬಾಲಿವುಡ್ ತಂಡ ಇದೇ ಯತ್ನ ಮಾಡಿದೆ.

ಬಾಲಿವುಡ್​ನ ಹಾಸ್ಯ ಪ್ರಧಾನ ಸಿನಿಮಾಗಳಲ್ಲಿ ಅತಿರೇಕಕ್ಕೆ ಹೋಗಿ ಹಾಸ್ಯ ಮಾಡುವುದು ಮಾಮೂಲು, ಬಾಲಿವುಡ್​​ನಲ್ಲಿ ನಡೆಯುವುದು ಮೈಂಡ್​ ಲೆಸ್ ಕಾಮಿಡಿ ಮತ್ತು ಬಾಡಿ ಶೇಮಿಂಗ್ ಕಾಮಿಡಿ. ಗೋಲ್​​ಮಾಲ್, ವೆಲ್​​ಹಮ್, ‘ಹೌಸ್​​ಫಯಲ್’ ಇಂಥಹುಗಳಿಗೆ ಉದಾಹರಣೆ. ಇದೀಗ ಬಾಲಿವುಡ್​ನ ಇಂಥಹುದೇ ಒಂದು ಹಾಸ್ಯ ಪ್ರಧಾನ ಸಿನಿಮಾನಲ್ಲಿ ‘ಕಾಂತಾರ’ ಸಿನಿಮಾವನ್ನು ಹಾಸ್ಯಕ್ಕೆ ಬಳಸಿಕೊಳ್ಳಲಾಗಿದೆ.

ಇದನ್ನೂ ಓದಿ:ಆಸ್ಕರ್ ರೇಸ್​​ನಲ್ಲಿ ಸ್ಥಾನ ಪಡೆದ ‘ಕಾಂತಾರ: ಚಾಪ್ಟರ್ 1’ ಸಿನಿಮಾ

‘ರಾಹು-ಕೇತು’ ಹೆಸರಿನ ಹಿಂದಿ ಹಾಸ್ಯ ಪ್ರಧಾನ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾನಲ್ಲಿ ‘ಕಾಂತಾರ’ ಸಿನಿಮಾದ ಕೂಗು ಮತ್ತು ಸಿನಿಮಾದ ರೆಫೆರೆನ್ಸ್​​ಗಳನ್ನು ಸಹ ಬಳಸಲಾಗಿತ್ತು. ಆದರೆ ಸೆನ್ಸಾರ್ ಮಂಡಳಿ ಆ ಎರಡಕ್ಕೂ ಕತ್ತರಿ ಹಾಕಿದೆ. ಇಬ್ಬರು ಪೆದ್ದ ಯುವಕರ ಕತೆ ‘ರಾಹು-ಕೇತು’ ಆಗಿದ್ದು, ಸಿನಿಮಾನಲ್ಲಿ ಹಾಸ್ಯಕ್ಕಾಗಿ ‘ಕಾಂತಾರ’ ಸಿನಿಮಾದ ರೆಫೆರನ್ಸ್ ಅನ್ನು ಹಾಗೂ ದೈವದ ಕೂಗನ್ನು ಬಳಸಲಾಗಿತ್ತಂತೆ. ಆದರೆ ಅದರಿಂದ ಭಕ್ತರ ಭಾವನೆಗೆ ಧಕ್ಕೆ ಉಂಟಾಗುತ್ತದೆ ಎಂದು ಆ ದೃಶ್ಯವನ್ನು ತೆಗೆದಿದೆ.

ರಿಷಬ್ ಶೆಟ್ಟಿ, ಹೊಂಬಾಳೆ ಫಿಲಮ್ಸ್ ಮತ್ತು ‘ಕಾಂತಾರ’ ಸಿನಿಮಾ ತಂಡಕ್ಕೆ ಸೇರಿದ ಹಲವರು ಹಲವು ಬಾರಿ ಈ ಬಗ್ಗೆ ಹೇಳಿದ್ದಾರೆ. ದೈವದ ಅನುಕರಣೆ ಮಾಡುವುದು, ದೈವವನ್ನು ಹಾಸ್ಯಕ್ಕೆ ಬಳಸಿಕೊಳ್ಳುವುದು ಬೇಡ ಎಂದು ಆದರೂ ಸಹ ಪದೇ ಪದೇ ಕೆಲವರು ಕಮರ್ಶಿಯಲ್ ಕಾರಣಗಳಿಗೆ, ಹಾಸ್ಯಕ್ಕೆ ದೈವದ ಅನುಕರಣೆ ಮಾಡುತ್ತಲೇ ಇದ್ದಾರೆ. ಇದೀಗ ಸೆನ್ಸಾರ್ ಮಂಡಳಿ ಸಮಯೋಚಿತವಾಗಿ ಬಾಲಿವುಡ್ ಸಿನಿಮಾದಿಂದ ‘ಕಾಂತಾರ’ ಸಿನಿಮಾದ ರೆಫೆರೆನ್ಸ್ ಅನ್ನು ತೆಗೆದು ಹಾಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link