ಜಿ7 ಸಭೆಯಲ್ಲಿ ನಾವಿಕರ ರಕ್ಷಣೆ ಬಗ್ಗೆ ಮೋದಿ ಮಾತನಾಡಿದ್ದು ಸುಮ್ಮನೆ ಅಲ್ಲ; ಜೀವದ ಹಂಗು ತೊರೆದು ದುಡಿಯುತ್ತಿದ್ದಾರೆ ಭಾರತೀಯ ನಾವಿಕರು – Kannada News | Indian Sailors at Risk: West Asia Conflict & Global Shipping Impact
ನವದೆಹಲಿ, ಜೂನ್ 17: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಜ್ವಾಲೆ ಈಗ ಜಾಗತಿಕ ಹಡಗು ಸಂಚಾರ ಮಾರ್ಗಗಳಿಗೆ ವ್ಯಾಪಿಸಿದೆ. ಈ ಯುದ್ಧದಲ್ಲಿ ಯಾವುದೇ ಸಂಬಂಧವಿಲ್ಲದ ಭಾರತೀಯ ವಾಣಿಜ್ಯ ಹಡುಗಳ (Merchant Navy) ನಾವಿಕರು ಸಿಲುಕಿಕೊಂಡು ಬಲಿಯಾಗುತ್ತಿದ್ದಾರೆ. ಇತ್ತೀಚೆಗೆ ಓಮನ್ ಕರಾವಳಿಯ ಹಾರ್ಮುಜ್ ಜಲಸಂಧಿ (Strait of Hormuz) ಬಳಿ ನಡೆದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಲ್ಲಿ ಹಲವು ಭಾರತೀಯ ನಾವಿಕರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ನೂರಾರು ಜನರು ಸಿಲುಕಿಕೊಂಡಿದ್ದಾರೆ. ಜಿ7 ಸಭೆಯಲ್ಲಿ ಖುದ್ದು ಪ್ರಧಾನಿ ಅವರೇ ಭಾರತೀಯ…