Category Archives: Blog

Your blog category

ನಾಯಕತ್ವ ಬದಲಾವಣೆ ಜಟಾಪಟಿ ಸಂಕ್ರಾಂತಿ ಬಳಿಕ ಮತ್ತಷ್ಟು ಚುರುಕು? ಸಿಕ್ತು ಮಹತ್ವದ ಸುಳಿವು – Kannada News | Leadership Change Buzz in Karnataka Congress to Intensify After Sankranti? Key Clues Emerge

ಕಲಬುರಗಿ ಜಿಲ್ಲೆ ಯಡ್ರಾಮಿಯಲ್ಲಿ ಸೋಮವಾರ ನಡೆದ ವಿವಿಧ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ ಇತರರು

ಬೆಂಗಳೂರು, ಜನವರಿ 13: ಸಂಕ್ರಾಂತಿ (Sankranti) ಸಮೀಪಿಸುತ್ತಿದ್ದಂತೆಯೇ ಕರ್ನಾಟಕ ಕಾಂಗ್ರೆಸ್​ನಲ್ಲಿ (Congress) ಸಣ್ಣ ತರಂಗ ಶುರುವಾದಂತೆ ಕಾಣಿಸುತ್ತಿದೆ. ಇದಕ್ಕೆ ಉದಾಹರಣೆ ಎಂದರೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರು ಕೂಡ ಆಡುತ್ತಿರುವ ವಿಶ್ವಾಸದ ಮಾತು. ಸದ್ಯ ರಾಜ್ಯದ ನಾಯಕತ್ವ ಬದಲಾವಣೆ ತೀರ್ಮಾನದ ಚೆಂಡು ದೆಹಲಿಗೆ ಅಂಗಳದಲ್ಲಿದೆ. ಆದರೆ ಈವರೆಗೆ ವರಿಷ್ಠರು ಗೊಂದಲಕ್ಕೆ ತೆರೆ ಎಳೆಯುವ ಕೆಲಸ ಮಾಡಿಲ್ಲ. ಬದಲಿಗೆ ನಮಗೆ ಬಿಡಿ ಎನ್ನುತ್ತಾ ಸಣ್ಣ ಗೆರೆಯನ್ನಷ್ಟೇ ಎಳೆದಿದ್ದಾರೆ. ಈ ಮಧ್ಯೆ ಚಟುವಟಿಕೆಗಳು ಗರಿಗೆದರುತ್ತಿವೆ.

ಹೈಕಮಾಂಡ್ ಮೇಲೆ ಡಿಕೆ ಶಿವಕುಮಾರ್ ಆತ್ಮವಿಶ್ವಾಸದ ಮಾತುಗಳನ್ನಾಡಿದ ಬೆನ್ನಲ್ಲೇ ಕಾಂಗ್ರೆಸ್ ಪಡಸಾಲೆಯಲ್ಲಿ ಚಟುವಟಿಕೆಗಳು ಗರಿಗೆದರಿವೆ. ಸೋಮವಾರ ಬೆಳಗ್ಗೆಯೇ ಡಿಸಿಎಂ ಡಿಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಆಗಿ ಸರಿಸುಮಾರು 45 ನಿಮಿಷಗಳ ಕಾಲ ಚರ್ಚೆ ನಡೆಸಿದ್ದರು. ಇದು ಪವರ್ ಪಾಲಿಟಿಕ್ಸ್ ಎಂಬುದರಲ್ಲಿ ಎರಡು ಮಾತಿಲ್ಲ. ಮುಖ್ಯಮಂತ್ರಿ ಕುರ್ಚಿ ಬಗ್ಗೆ ಯಾವುದೇ ಚರ್ಚೆ ನಡೆಯದೇ ಇದ್ದರೂ ಕೂಡ ಈ ಬೆಳವಣಿಗೆ ನಡೆದಿರುವುದು ಸಹಜವಾಗಿ ಕುತೂಹಲ ಕೆರಳುವಂತೆ ಮಾಡಿದೆ.

ಇನ್ನು ರಾಜ್ಯಕ್ಕೆ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕೂಡ ಭೇಟಿ ಕೊಡಲಿದ್ದಾರೆ ಎನ್ನಲಾಗಿದೆ. ಇಂತಹ ಹೊತ್ತಲ್ಲೇ ಡಿಕೆಶಿ, ಖರ್ಗೆಯನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ. ಮನೆಯೊಳಗಿನ ಚರ್ಚೆ ಅಷ್ಟೆ ಅಲ್ಲದೆ, ಉಭಯ ನಾಯಕರು ಒಂದೇ ಕಾರಿನಲ್ಲಿ ಹೆಚ್​ಎಎಲ್​ಗೆ ತೆರಳಿದ್ದಾರೆ. ಇನ್ನು ಖರ್ಗೆಯನ್ನು ಡಿಕೆಶಿ ಭೇಟಿ ಆಗುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಒಂದೂವರೆ ತಿಂಗಳ ಅಂತರದಲ್ಲಿ ಮೂರು ಬಾರಿಗೆ ಎಐಸಿಸಿ ಅಧ್ಯಕ್ಷರ ಜೊತೆಗೆ ಚರ್ಚಿಸಿದ್ದಾರೆ. ಅದರಲ್ಲೂ ಎರಡು ಬಾರಿ ಅಂತೂ ಇನ್ನೇನು ಖರ್ಗೆ ದೆಹಲಿಗೆ ಹೋಗ್ತಾರೆಂಬ ಹೊತ್ತಲ್ಲೇ ಮುಖತಃ ಭೇಟಿ ಆಗಿರುವುದು ಯಾವುದರ ಸಂಕೇತ ಎಂಬ ಚರ್ಚೆ ಕಾಂಗ್ರೆಸ್ ಮನೆಯಲ್ಲಿ ಶುರುವಾಗಿದೆ.

ಸಂಕ್ರಾಂತಿ ಬಳಿಕ ದೆಹಲಿಗೆ ಡಿಕೆ ಶಿವಕುಮಾರ್

ಸದ್ಯ ಡಿಕೆ ಶಿವಕುಮಾರ್​ರನ್ನು ಅಸ್ಸಾಂ ವಿಧಾನಸಭೆ ಚುನಾವಣೆ ವೀಕ್ಷಕರಾಗಿ ನೇಮಿಸಲಾಗಿದೆ. ಈ ಸಂಬಂಧ ಸಂಕ್ರಾಂತಿ ಬಳಿಕ, ಅಂದರೆ ಜನವರಿ 16 ರಂದು ಅವರು ದೆಹಲಿಗೆ ತೆರಳಲಿದ್ದಾರೆ. ಬೆಂಗಳೂರಿಗೆ ವಾಪಸ್ ಬಂದು 22 ರಂದು ಮತ್ತೆ ದೆಹಲಿಯ ವಿಮಾನ ಹತ್ತಲಿದ್ದಾರೆ. ಹೇಳಿಕೇಳಿ ಅಸ್ಸಾಂನ ಚುನಾವಣೆ ಉಸ್ತುವಾರಿ ವಹಿಸಿಕೊಂಡಿರುವುದು ಪ್ರಿಯಾಂಕಾ ಗಾಂಧಿ. ಹೀಗಾಗಿ ದೆಹಲಿ ಭೇಟಿ ವೇಳೆ ಅಥವಾ ಭೇಟಿ ನಂತರ ಡಿಕೆ ಶಿವಕುಮಾರ್ ರಾಜ್ಯ ರಾಜಕೀಯ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಬಹುದು ಎಂದು ಹೇಳಲಾಗುತ್ತಿದೆ.

ಇದರ ಪೂರ್ವಭಾವಿಯಾಗಿ ಬೆಂಗಳೂರಿನಲ್ಲಿಯೇ ಖರ್ಗೆಯನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರನ್ನ ದೆಹಲಿಗೆ ಕರೆಯುವ ಬಗ್ಗೆ ಎಐಸಿಸಿ ಅಧ್ಯಕ್ಷ ಖರ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅವಶ್ಯತೆ ಇದ್ದಾಗ ಕರೆಯುತ್ತೇವೆ ಎಂದಿದ್ದಾರೆ.

ಈ ಬೆಳವಣಿಗೆ ನಡುವೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು ಮೈಸೂರಿಗೆ ಆಗಮಿಸುತ್ತಿದ್ದಾರೆ. ಊಟಿಯಲ್ಲಿ ಖಾಸಗಿ ಕಾರ್ಯಕ್ರಮ ಇರುವ ಕಾರಣ ಅವರು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ರಾಹುಲ್ ಗಾಂಧಿಯನ್ನ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಇಬ್ಬರೂ ಜತೆಯಾಗಿ ಬರಮಾಡಿಕೊಳ್ಳಲಿದ್ದಾರೆ.

ಸಂಕ್ರಾಂತಿ ಬಳಿಕ ಬಜೆಟ್ ಸಿದ್ಧತೆ ಆರಂಭಿಸಲು ಸಿಎಂ ಸಜ್ಜು!

ಇನ್ನು ತಾವೇ ಮುಂದುವರೆಯಬೇಕು ಎನ್ನುತ್ತಿರುವ ಸಿಎಂ ಸಿದ್ದರಾಮಯ್ಯ ಸಂಕ್ರಾಂತಿ ಬಳಿಕ ಬಜೆಟ್​ ಮೀಟಿಂಗ್​ ಆರಂಭಿಸಲಿದ್ದಾರೆ. ಸಂಪುಟ ಪುನಾರಚನೆ ಬಗ್ಗೆಯೂ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ. ಈ ಎರಡು ದಾಳ ಮೂಲಕ ನಾಯಕತ್ವ ಬದಲಾವಣೆ ವಿಷಯ ಅಂತ್ಯವಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆದರೆ ಡಿಕೆ ಟೀಮ್ ಮಾತ್ರ ಪೂರ್ವಭಾವಿ ಸಭೆಗೂ ಮುನ್ನವೇ ಗೊಂದಲ ಬಗೆಹರಿಸಲು ಪಟ್ಟು ಹಿಡಿದಿದೆ ಎನ್ನಲಾಗ್ತಿದೆ.

ಒಂದೆಡೆ, ನಾಯಕತ್ವದ ಬದಲಾವಣೆಯ ಕುಲುಮೆ ನಿಧಾನಕ್ಕೆ ಕಾವೇರ ತೊಡಗಿದೆ. ಇಂಥಾ ಹೊತ್ತಿನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ ಮತ್ತು ಡಿಸಿಎಂ ಬಗ್ಗೆ ಆಡಿರುವ ಮಾತು ಕುತೂಹಲವಾಗಿದೆ. ಕಲಬುರಗಿ ಜಿಲ್ಲೆ ಯಡ್ರಾಮಿಯಲ್ಲಿ ಸೋಮವಾರ ನಡೆದ ವಿವಿಧ ಕಾಮಗಾರಿ ಉದ್ಘಾಟನೆ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಸರ್ಕಾರಿ ಶಾಲೆಯಲ್ಲಿ ಓದಿ ಸಿದ್ದರಾಮಯ್ಯ 2 ಬಾರಿ ಸಿಎಂ ಆದರು. ಆದರೆ, ಡಿಕೆ ಶಿವಕುಮಾರ್​​​ಗೆ ಕಾನ್ವೆಂಟ್ ಲಿಂಕ್ ಇದೆ ಎಂದಿದ್ದಾರೆ.

ಅದೇ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ, ನಾನು ಈ ಭಾಗದಲ್ಲೇ ಹುಟ್ಟಬೇಕಿತ್ತು ಅನ್ನಿಸುತ್ತಿದೆ. ಚುನಾವಣೆ ವೇಳೆ ಮಾತು ಕೊಟ್ಟಂತೆ ಋಣ ತೀರಿಸಲು ಬಂದಿದ್ದೇವೆ ಎಂದಿದ್ದಾರೆ. ಡಿಕೆ ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಈ ಭಾಗದಲ್ಲಿ ಹುಟ್ಟಬೇಕಿತ್ತು ಎಂದು ಡಿಸಿಎಂ ಹೇಳ್ತಾರೆ. ಆದರೆ ನೀವು ಇಲ್ಲಿ ಹುಟ್ಟೋದು ಬೇಡ, ನಾವು ಅಲ್ಲಿ ಹುಟ್ಟೋದು ಬೇಡ. ಮೈಸೂರು, ಬೆಂಗಳೂರಿನ ರೀತಿ ಅಭಿವೃದ್ಧಿ ಮಾಡಿ ಸಾಕು ಎಂದಿದ್ದಾರೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ- ಡಿಸಿಎಂ ಡಿ.ಕೆ. ಶಿವಕುಮಾರ್​​ ಬಣದ ನಡುವೆ ಹೊಸ ವಾರ್​​: ಗೆಲ್ಲೋದ್ಯಾರು?

ಹೀಗೆ ಮಲ್ಲಿಕಾರ್ಜುನ ಖರ್ಗೆ ಸ್ಥಳೀಯ ನಾಯಕರಾಗಿ ತಮ್ಮ ಕ್ಷೇತ್ರಗಳಿಗೆ ಅಭಿವೃದ್ಧಿ ಕೆಲಸ ಆಗಬೇಕು ಎಂದರೆ, ಎಐಸಿಸಿ ಅಧ್ಯಕ್ಷರಾಗಿ ಆಡಳಿತಕ್ಕೆ ಚುರುಕು ಮುಟ್ಟಿಸಿ ಎಂಬ ಸಂದೇಶವನ್ನೂ ರವಾನಿಸಿದ್ದಾರೆ. ಆದರೆ ಬದಲಾವಣೆ ಕ್ರಾಂತಿಯಲ್ಲೇ ನಾಯಕರು ಮುಳುಗಿರುವಾಗ, ಆಡಳಿತವನ್ನು ರಹದಾರಿಗೆ ತರಬೇಕಾದವರೇ ಗೊಂದಲದಲ್ಲಿರುವಾಗ, ಅದ್ಹೇಗೆ ತಾನೇ ಅಭಿವೃದ್ಧಿ ಸಾಧ್ಯ ಎಂಬ ಪ್ರಶ್ನೆಯೂ ಮೂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಕಡಿಮೆಯಾಯ್ತು ಚಳಿ, ಮೋಡಕವಿದ ವಾತಾವರಣ, 7 ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ – Kannada News | Karnataka Weather: Cold Eases, Rain Forecast in 7 Districts and Bengaluru

ಬೆಂಗಳೂರು, ಜನವರಿ 13: ತಮಿಳುನಾಡಿನ ಕರಾವಳಿಯಲ್ಲಿ ಚಂಡಮಾರುತ(Cyclone) ರೂಪುಗೊಳ್ಳುತ್ತಿದ್ದು ಕರ್ನಾಟಕದ ಅಲ್ಲಲ್ಲಿ ಮಳೆಯಾಗುತ್ತಿದೆ. ಹೀಗಾಗಿ ಚಳಿಯೂ ಕಡಿಮೆಯಾಗಿ ಮೋಡಕವಿದ ವಾತಾವರಣ ನಿರ್ಮಾಣವಾಗಿದೆ. ಉಡುಪಿ, ಉತ್ತರ ಕನ್ನಡ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರಿನಲ್ಲಿ ಮಳೆಯಾಗಲಿದೆ.

ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗದಲ್ಲಿ ಒಣಹವೆ ಇರಲಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.
ಬೀದರ್​ನಲ್ಲಿ 12.5 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಬೆಂಗಳೂರಿನ ಎಚ್​ಎಎಲ್​ನಲ್ಲಿ 23.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 23.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 23.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 24.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 13.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಹೊನ್ನಾವರದಲ್ಲಿ 35.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕಾರವಾರದಲ್ಲಿ 33.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ,24.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಮಂಗಳೂರು ಏರ್​ಪೋರ್ಟ್​​ನಲ್ಲಿ 32.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಶಕ್ತಿನಗರದಲ್ಲಿ 34.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 24.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಮತ್ತಷ್ಟು ಓದಿ: ಕರ್ನಾಟಕ ಹವಾಮಾನ ವರದಿ: ಶೀತದಲೆಯ ಪರಿಣಾಮ ರಾಜ್ಯದ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​; ಬೆಂಗಳೂರು ಸೇರಿ ಹಲವೆಡೆ ಇಂದು ತುಂತುರು ಮಳೆ

ಬೆಳಗಾವಿ ಏರ್​ಪೋರ್ಟ್​ನಲ್ಲಿ 25.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ,ಬೀದರ್​ನಲ್ಲಿ 27.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 12.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ವಿಜಯಪುರದಲ್ಲಿ 27.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 15.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಧಾರವಾಡದಲ್ಲಿ 26.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 15.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಗದಗದಲ್ಲಿ 27.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಕಲಬುರಗಿಯಲ್ಲಿ 30.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಹಾವೇರಿಯಲ್ಲಿ 28.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೊಪ್ಪಳದಲ್ಲಿ 25.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ರಾಯಚೂರಿನಲ್ಲಿ 27.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಮಧ್ಯಪ್ರದೇಶ ಮತ್ತು ನಾಸಿಕ್ ವರೆಗೆ ಹಾಗೂ ರಾಯಗಢ, ರತ್ನಗಿರಿ, ಸಿಂಧುದುರ್ಗ, ಸತಾರಾ, ಸಾಂಗ್ಲಿ, ಕೊಲ್ಹಾಪುರ ಮತ್ತು ಸೋಲಾಪುರ ಸೇರಿದಂತೆ ಮುಂಬೈನ ದಕ್ಷಿಣ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಮರಾಠವಾಡ ಪ್ರದೇಶದ ಜಲ್ನಾ, ಹಿಂಗೋಲಿ ಮತ್ತು ಬೀಡ್‌ನಲ್ಲಿಯೂ ಮೋಡ ಕವಿದ ವಾತಾವರಣವಿದ್ದು, ಮಹಾರಾಷ್ಟ್ರದ ಕೆಲವು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.

ಕರಾವಳಿ ಕರ್ನಾಟಕದ ಕೆಲವು ಸ್ಥಳಗಳಲ್ಲಿ ಹಾಗೂ ಕೇರಳ, ತಮಿಳುನಾಡು, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಒಣಹವೆ ಇರಲಿದೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಿಚ್ಚ ಸುದೀಪ್ ಮಾತಿಗೂ ಬೆಲೆ ಕೊಡದ ಗಿಲ್ಲಿ; ಅಸಮಾಧಾನ ಹೊರಹಾಕಿದ ಬಿಗ್ ಬಾಸ್ – Kannada News | Bigg Boss Kannada 12: Gilli Ignores Sudeep’s Hair Advice, Housemates Fume

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (BBK 12) ಗಿಲ್ಲಿ ನಟ ಅವರ ಆಟ ಬೇರೆಯದೇ ರೀತಿ ಇದೆ. ಅವರು ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಆದರೆ, ಕೆಲ ವಿಷಯಗಳನ್ನು ಅವರು ಗಂಭೀರವಾಗಿ ಸ್ವೀಕರಿಸುವುದಿಲ್ಲ ಎಂಬ ಆರೋಪ ಇದೆ. ಇದಕ್ಕೆ ಹೊಸ ಉದಾಹರಣೆ ಸಿಕ್ಕಿದೆ. ಕಿಚ್ಚ ಸುದೀಪ್ ಹೇಳಿದ ಮಾತನ್ನು ಅವರು ನಡೆಸಿಕೊಡಲಿಲ್ಲ. ಇದಕ್ಕೆ ಮನೆಯ ಇತರ ಸ್ಪರ್ಧಿಗಳು ಬೇಸರ ಹೊರಹಾಕಿದ್ದಾರೆ.

ಗಿಲ್ಲಿ ನಟ ಮೇಲೆ ಒಂದು ದೊಡ್ಡ ಕಂಪ್ಲೇಂಟ್ ಇದೆ. ಅವರು ಯಾವಾಗಲೂ ತಲೆ ಕೂದಲನ್ನು ಬಾಚಿಕೊಳ್ಳೋದಿಲ್ಲ. ಅವರ ಕೂದಲು ಸದಾ ಕೆದರಿಕೊಂಡೇ ಇರುತ್ತದೆ. ಈ ಬಗ್ಗೆ ಇತರರಿಗೆ ಅಸಮಾಧಾನ ಇದೆ. ಕೂದಲನ್ನು ಬಾಚಿಕೊಂಡರೆ ಅವರು ಉತ್ತಮವಾಗಿ ಕಾಣುತ್ತಾರೆ ಎಂಬುದು ಮನೆ ಮಂದಿಯ ಅಭಿಪ್ರಾಯ. ಆದರೆ, ಈ ಅಭಿಪ್ರಾಯಗಳಿಗೆಲ್ಲ ಗಿಲ್ಲಿ ಬೆಲೆ ಕೊಡುವವರಲ್ಲ.

ಕಳೆದ ವೀಕೆಂಡ್​​ನಲ್ಲಿ ಒಂದು ಪ್ರೀತಿಯ ವಸ್ತುವನ್ನು ಇತರ ಸ್ಪರ್ಧಿಗಳಿಗೆ ನೀಡಬೇಕಾದ ಚಟುವಟಿಕೆ ಬಂತು. ಈ ವೇಳೆ ಗಿಲ್ಲಿ ನಟ ಅವರಿಗೆ ಕಾವ್ಯಾ ತಮ್ಮಿಷ್ಟದ ಬಾಚಣಿಗೆ ನೀಡಿದರು. ಅವರು ಅದರಿಂದ ಕೂದಲು ಬಾಚಿಕೊಂಡರು. ಈ ವೇಳೆ ಸುದೀಪ್ ಅವರು ಒಂದು ನಿರ್ದೇಶನ ಕೊಟ್ಟರು. ‘ದಿನವೂ ಆ ಬಾಚಣಿಗೆಯಿಂದ ಕೂದಲು ಬಾಚಿಕೊಳ್ಳಬೇಕು’ ಎಂದು ಸುದೀಪ್ ಸೂಚನೆ ನೀಡಿದರು.

ಆದರೆ, ಈ ಸೂಚನೆಯನ್ನು ಗಿಲ್ಲಿ ಅಷ್ಟು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಸುದೀಪ್ ಬಂದು ಹೋದ ಮರುದಿನದ ಎಪಿಸೋಡ್​​ನಲ್ಲಿ ಅವರು ಎಂದಿನಂತೆ ಕೂದಲು ಬಾಚಿಕೊಳ್ಳದೆ ಕುಳಿತಿದ್ದರು. ಆಗ ಬಿಗ್ ಬಾಸ್ ಕಡೆಯಿಂದ ಆದೇಶ ಒಂದು ಬಂತು. ‘ಸುದೀಪ್ ಅವರು ಹೇಳಿದಂತೆ ಗಿಲ್ಲಿ ತಲೆಕೂದಲು ಬಾಚಿಕೊಳ್ಳಬೇಕು ಹಾಗೂ ಒಂದು ಹೊತ್ತು ಅಡುಗೆ ಮಾಡಬೇಕು’ ಎಂದು ಆದೇಶದಲ್ಲಿ ಇತ್ತು. ಬಿಗ್ ಬಾಸ್ ಕೂಡ ಗಿಲ್ಲಿ ಮೇಲೆ ಅಸಮಾಧಾನಗೊಂಡಂತೆ ಕಂಡಿತು.

ಇದನ್ನೂ ಓದಿ: ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ: ವಿಡಿಯೋ

ಆಗ ರಘು ಹಾಗೂ ಕಾವ್ಯಾ ಗಿಲ್ಲಿ ವಿರುದ್ಧ ನೇರ ಅಸಮಾಧಾನ ಹೊರಹಾಕಿದರು. ‘ಸುದೀಪ್ ಸರ್ ಮಾತಿಗೂ ಬೆಲೆ ಕೊಡ್ತಾ ಇಲ್ವಲ್ಲ ಗಿಲ್ಲಿ’ ಎಂದು ಹೇಳಿದರು. ಆಗ ಗಿಲ್ಲಿ ತಲೆಕೂದಲು ಬಾಚಿಕೊಂಡರು. ಇನ್ನು, ಅವರು ಮಾಡಿದ ಅಡುಗೆ ತಿನ್ನೋಕೆ ಯಾರ ಬಳಿಯೂ ಸಾಧ್ಯವಾಗಿಲ್ಲ. ಉಪ್ಪು ಹಾಗೂ ಖಾರ ಇಲ್ಲದ ಕಾರಣ ಅದನ್ನು ತಿನ್ನೋದು ಅವರಿಗೆ ಕಷ್ಟ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಎಚ್ಚರ, ದಕ್ಷಿಣ ದಿಕ್ಕಿಗೆ ತಿರುಗಿ ನಮಸ್ಕಾರ ಮಾಡಲೇಬಾರದು! ಕಾರಣ ಇಲ್ಲಿದೆ ನೋಡಿ – Kannada News | Warning: Why You Should Never Face South While Offering Prayers, Spiritual Reason Explained

ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಮಸ್ಕಾರ ಮಾಡುವುದರಿಂದ ಅಶುಭ ಫಲಗಳು ಎದುರಾಗಬಹುದು ಎಂದು ಧರ್ಮಗ್ರಂಥಗಳು ಸೂಚಿಸುತ್ತವೆ ಎಂಬುದಾಗಿ ಟಿವಿ9 ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ವಿವರಣೆ ನೀಡಿದ್ದಾರೆ. ದಕ್ಷಿಣ ದಿಕ್ಕಿನ ಅಧಿಪತಿ ಯಮಧರ್ಮರಾಜ ಆಗಿದ್ದು, ಈ ದಿಕ್ಕಿಗೆ ಮಾಡುವ ನಮಸ್ಕಾರವು ಅವರಿಗೆ ಸೇರುತ್ತದೆ. ಸಾಮಾನ್ಯವಾಗಿ ಹಿರಿಯರು ಅಥವಾ ಗುರುಗಳಿಗೆ ನಮಸ್ಕರಿಸಿದಾಗ ಆಶೀರ್ವಾದಗಳು ದೊರೆಯುತ್ತವೆ. ಆದರೆ ಯಮಧರ್ಮರಾಜನು ನಮಸ್ಕರಿಸಿದವರಿಗೆ ಪಾಪಕರ್ಮಗಳನ್ನು ಅನಾರೋಗ್ಯದ ರೂಪದಲ್ಲಿ ಅನುಭವಿಸಲು ‘ಆಶೀರ್ವದಿಸುತ್ತಾನೆ’ ಎಂದು ಗರುಡಪುರಾಣ ಮತ್ತು ಇತರ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. ಇದರರ್ಥ, ದಕ್ಷಿಣಕ್ಕೆ ನಮಸ್ಕರಿಸುವುದರಿಂದ ಪ್ರಾಣಕ್ಕೆ ಸಂಕಟ ಅಥವಾ ಅನಾರೋಗ್ಯಗಳು ಬರಬಹುದು ಎಂದು ಗುರೂಜಿ ವಿವರಿಸಿದ್ದಾರೆ.

ಆದರೆ, ಸಂಧ್ಯಾವಂದನೆಯಂತಹ ಸಂದರ್ಭಗಳಲ್ಲಿ ನಾಲ್ಕು ದಿಕ್ಕುಗಳಿಗೂ ನಮಸ್ಕರಿಸುವ ಪದ್ಧತಿಯು ಶುಭಕರವಾಗಿದೆ. ಅಪ್ಪಿತಪ್ಪಿಯೂ ದಕ್ಷಿಣ ದಿಕ್ಕಿಗೆ ನೇರವಾಗಿ ನಮಸ್ಕಾರ ಮಾಡಬಾರದು. ಹಿರಿಯರು ದಕ್ಷಿಣ ದಿಕ್ಕಿನಲ್ಲಿದ್ದರೆ ಅವರನ್ನು ಬೇರೆ ಕಡೆ ತಿರುಗಿ ನಿಲ್ಲಿಸಿ ನಮಸ್ಕರಿಸುವುದು ಶುಭ ಎಂದು ತಿಳಿಸಲಾಗಿದೆ.

Source link

ಮಕರ ರಾಶಿಗೆ ಶುಕ್ರ ಪ್ರವೇಶ: ಈ ದಿನದ ರಾಶಿ ಭವಿಷ್ಯ ಹೇಗಿದೆ ನೋಡಿ – Kannada News | Venus Transit into Capricorn: What Today’s Horoscope Holds for all zodiac sign

ಇಂದಿನ ದಿನ ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಪುಷ್ಯ ಮಾಸದ ಕೃಷ್ಣಪಕ್ಷದ ದಶಮಿ ತಿಥಿಯಾಗಿದೆ. ಚಂದ್ರನು ವಿಶಾಖ ನಕ್ಷತ್ರದ ತುಲಾ ರಾಶಿಯಲ್ಲಿ ಸಂಚರಿಸುತ್ತಾನೆ. ಇಂದು ಬೆಳಗಿನ ಜಾವ 4:02ಕ್ಕೆ ಶುಕ್ರ ಗ್ರಹವು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸಿರುವುದು ವಿಶೇಷವಾಗಿದೆ. ಸಂಕ್ರಾಂತಿಯ ಪೂರ್ವಭಾವಿಯಾಗಿರುವ ಈ ದಿನವು ಸೂರ್ಯ ಭಗವಾನರು ಉತ್ತರಾಯಣಕ್ಕೆ ಪ್ರವೇಶಿಸುವ ಶುಭ ಕಾಲವನ್ನು ಸೂಚಿಸುತ್ತದೆ. ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಂದಿನ ದಿನ ಭವಿಷ್ಯವನ್ನು ಇಲ್ಲಿ ವಿವರಿಸಿದ್ದಾರೆ.

ಇಂದು ರಾಹುಕಾಲವು ಮಧ್ಯಾಹ್ನ 3:19 ರಿಂದ 4:45 ರವರೆಗೆ ಇರುತ್ತದೆ. ಸರ್ವ ಸಿದ್ಧಿ ಕಾಲ, ಸಂಕಲ್ಪಕಾಲ ಮತ್ತು ಶುಭಕಾಲವು ಮಧ್ಯಾಹ್ನ 12:28 ರಿಂದ 1:54 ರವರೆಗೆ ಇರುತ್ತದೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 13ರ ದಿನಭವಿಷ್ಯ – Kannada News | Birth Number 7, 8, 9: Jan 13 Numerology Forecast and Horoscope

ಜನ್ಮಸಂಖ್ಯೆಗೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 13ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಸಂಶೋಧನೆ ಮತ್ತು ಆಳವಾದ ಚಿಂತನೆಗೆಸೂಕ್ತ ದಿನ. ನೀವು ಇತರರಿಗೆ ಈ ಹಿಂದೆ ಮಾಡಿದ ಸಹಾಯದಿಂದ ನಿಮಗೆ ಪ್ರತಿಫಲ ದೊರೆಯಲಿದೆ. ಸರ್ಕಾರಿ ಉದ್ಯೋಗದಲ್ಲಿ ಇರುವವರಿಗೆ ವರ್ಗಾವಣೆಯ ಅಥವಾ ಬಡ್ತಿಯ ಸೂಚನೆಗಳು ಸಿಗಬಹುದು. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಇರುವವರಿಗೆ ದೂರ ಪ್ರಯಾಣದ ಯೋಗ ಇದೆ. ಧ್ಯಾನ ಮತ್ತು ಯೋಗಕ್ಕಾಗಿ ಸಮಯ ಮೀಸಲಿಡುವಿರಿ. ಸಾಲದ ಬಾಕಿ ವಸೂಲಿ ಮಾಡುವಲ್ಲಿ ಈ ದಿ ನೀವು ಯಶಸ್ವಿಯಾಗಲಿದ್ದೀರಿ. ನಿಮ್ಮ ಗುಪ್ತ ಪ್ರತಿಭೆಯು ಇಂದು ಹೊರಜಗತ್ತಿಗೆ ತಿಳಿಯುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸುವ ಕಾಲವಿದು. ನ್ಯಾಯಾಲಯದ ವ್ಯವಹಾರಗಳಲ್ಲಿ ಜಯ ಸಿಗಲಿದೆ. ಕೃಷಿ ಅಥವಾ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಇರುವವರಿಗೆ ದೊಡ್ಡ ಒಪ್ಪಂದಗಳು ಕೈಗೂಡಲಿವೆ. ಮನೆಯಲ್ಲಿ ಶುಭ ಸಮಾರಂಭಗಳ ಬಗ್ಗೆ ಚರ್ಚೆ ನಡೆಯಲಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ, ವಿಶೇಷವಾಗಿ ಮೂಳೆ ಸಂಬಂಧಿತ ಸಮಸ್ಯೆಗಳಿರುವವರು ಎಚ್ಚರದಿಂದಿರಿ. ಶತ್ರುಗಳು ನಿಮ್ಮ ಕೆಲಸಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿದರೂ, ನಿಮ್ಮ ದೃಢ ನಿರ್ಧಾರಗಳು ಅವರನ್ನು ವಿಫಲಗೊಳಿಸಲಿವೆ.

ಇದನ್ನೂ ಓದಿ: ನವಪಂಚಮ ಯೋಗ: ಯಾರಿಗೆಲ್ಲಾ ಅದೃಷ್ಟ? ಇಲ್ಲಿದೆ ನೋಡಿ

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಬಾಕಿ ಉಳಿದಿದ್ದ ಆಡಳಿತಾತ್ಮಕ ಕೆಲಸಗಳು ಸುಗಮವಾಗಿ ಪೂರ್ಣಗೊಳ್ಳಲಿವೆ. ದಾನ-ಧರ್ಮದ ಕಡೆಗೆ ನಿಮ್ಮ ಗಮನ ಹರಿಯಲಿದ್ದು, ಇದರಿಂದ ಮನಸ್ಸಿಗೆ ಅಪಾರ ತೃಪ್ತಿ ಸಿಗಲಿದೆ. ಕ್ರೀಡಾಪಟುಗಳಿಗೆ ಮತ್ತು ಸಾಹಸ ಪ್ರವೃತ್ತಿಯ ಜನರಿಗೆ ಅತ್ಯುತ್ತಮ ದಿನವಾಗಿರುತ್ತದೆ. ಉದ್ಯೋಗದಲ್ಲಿ ನಿಮ್ಮ ಮೇಲಧಿಕಾರಿಗಳ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗುವಿರಿ. ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವ ಮುನ್ನ ಅನುಭವಿಗಳ ಸಲಹೆ ಪಡೆಯಿರಿ. ಹಳೆಯ ಕಹಿ ಘಟನೆಗಳನ್ನು ಮರೆತು ಹೊಸ ಜೀವನದತ್ತ ಹೆಜ್ಜೆ ಇಡಲು ಪೂರಕವಾದ ವಾತಾವರಣ ಇರಲಿದೆ.

ಲೇಖನ- ಎನ್‌.ಕೆ.ಸ್ವಾತಿ

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 13ರ ದಿನಭವಿಷ್ಯ – Kannada News | Numerology Daily Horoscope: January 13, 2024 Predictions for 4, 5, 6

ಜನ್ಮಸಂಖ್ಯೆಗೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 13ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ವಿದೇಶಕ್ಕೆ ಸಂಬಂಧಿಸಿ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಈ ದಿನ ಶುಭ ಸುದ್ದಿ ಸಿಗಲಿದೆ. ಆಸ್ತಿ ವಿವಾದಗಳು ಸುದೀರ್ಘ ಕಾಲದಿಂದ ನಡೆಯುತ್ತಿದ್ದರೆ ಮಧ್ಯಸ್ಥಿಕೆಯ ಮೂಲಕ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ ಬಯಸುವವರಿಗೆ ಒಳ್ಳೆಯ ಅವಕಾಶಗಳು ಲಭ್ಯವಾಗಬಹುದು. ವಾಹನ ಚಾಲನೆ ಮಾಡುವಾಗ ಅತಿಯಾದ ವೇಗ ಬೇಡ, ಸಂಚಾರ ನಿಯಮಗಳನ್ನು ಪಾಲಿಸಿ. ಹಳೆಯ ಮಿತ್ರರ ಭೇಟಿಯಿಂದ ಬಾಕಿ ಉಳಿದಿದ್ದ ಕೆಲಸವೊಂದು ಪೂರ್ಣಗೊಳ್ಳಲು ದಾರಿ ಸುಗಮವಾಗಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಇದನ್ನೂ ಓದಿ: ನವಪಂಚಮ ಯೋಗ: ಯಾರಿಗೆಲ್ಲಾ ಅದೃಷ್ಟ? ಇಲ್ಲಿದೆ ನೋಡಿ

ಸಂವಹನ ಮತ್ತು ತಾಂತ್ರಿಕ ವಲಯದಲ್ಲಿ ಇರುವವರಿಗೆ ಅತ್ಯಂತ ಯಶಸ್ವಿ ದಿನ ಇದಾಗಿರುತ್ತದೆ. ನೀವು ನೀಡುವ ಸಲಹೆಗಳು ಕಚೇರಿಯಲ್ಲಿ ಮೆಚ್ಚುಗೆಗೆ ಪಾತ್ರವಾಗಲಿವೆ. ಹಣಕಾಸಿನ ಹರಿವು ಉತ್ತಮವಾಗಿದ್ದರೂ ಅನವಶ್ಯಕ ಐಷಾರಾಮಿ ವಸ್ತುಗಳ ಖರೀದಿಗಾಗಿ ಖರ್ಚು ಮಾಡುವ ಸಾಧ್ಯತೆ ಇದೆ. ಸಂಜೆ ವೇಳೆ ಪ್ರೀತಿಪಾತ್ರರ ಜೊತೆ ಸುಂದರ ಸಮಯ ಕಳೆಯುವಿರಿ. ದೂರದ ಊರಿನಿಂದ ಬರಬೇಕಿದ್ದ ಶುಭ ವಾರ್ತೆಯು ನಿಮ್ಮನ್ನು ತಲುಪಲಿದೆ. ಹವಾಮಾನ ಬದಲಾವಣೆಯಿಂದಾಗಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದು, ಎಚ್ಚರಿಕೆ ಇರಲಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಕಲಾತ್ಮಕ ಮತ್ತು ಸೃಜನಶೀಲ ಕೆಲಸಗಳಲ್ಲಿ ತೊಡಗಿರುವವರಿಗೆ ಈ ದಿನ ಪ್ರಶಸ್ತಿ ಅಥವಾ ಪುರಸ್ಕಾರ ಸಿಗುವ ಸಾಧ್ಯತೆ ಇದೆ. ಆಭರಣ ಮತ್ತು ಜವಳಿ ವ್ಯಾಪಾರಿಗಳಿಗೆ ನಿರೀಕ್ಷೆಗೂ ಮೀರಿ ಲಾಭವಾಗಲಿದೆ. ಕುಟುಂಬದ ಸದಸ್ಯರೊಂದಿಗೆ ಪ್ರವಾಸದ ಯೋಜನೆ ರೂಪಿಸುವಿರಿ. ವಿವಾಹ ಆಕಾಂಕ್ಷಿಗಳಿಗೆ ಸಕಾರಾತ್ಮಕ ಸ್ಪಂದನೆ ದೊರೆಯಲಿದೆ. ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸುಂದರವಾಗಿಟ್ಟುಕೊಳ್ಳುವ ಆಸೆ ಮೂಡಲಿದೆ. ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹಾರ ಮಾಡುವಾಗ ಅವರ ಹಿನ್ನೆಲೆಯನ್ನು ಒಮ್ಮೆ ಪರಿಶೀಲಿಸುವುದು ಉತ್ತಮ.

ಲೇಖನ- ಎನ್‌.ಕೆ.ಸ್ವಾತಿ

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 13ರ ದಿನಭವಿಷ್ಯ – Kannada News | Janmasankhye 1 Predictions: Career Growth, Old Investments and Family Peace Today

ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 13ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನೀವು ಹಾಕಿದ ಯೋಜನೆಗಳಿಗಿಂತ ಅನಿರೀಕ್ಷಿತವಾಗಿ ಎದುರಾಗುವ ಸವಾಲುಗಳೇ ನಿಮಗೆ ಹೆಚ್ಚಿನ ಲಾಭ ತಂದುಕೊಡಲಿವೆ. ಕಚೇರಿಯಲ್ಲಿ ಕೇವಲ ನಿಮ್ಮ ಕೆಲಸದ ಮೇಲೆ ಗಮನಹರಿಸದೆ, ಸಹೋದ್ಯೋಗಿಗಳ ಸಮಸ್ಯೆಗಳಿಗೂ ಸ್ಪಂದಿಸುವುದು ನಿಮ್ಮ ವ್ಯಕ್ತಿತ್ವವನ್ನು ಎತ್ತಿ ಹಿಡಿಯಲಿದೆ. ಆರ್ಥಿಕವಾಗಿ ಈ ದಿನ ಸ್ಥಿರತೆ ಇರಲಿದ್ದರೂ, ಸಂಜೆ ವೇಳೆಗೆ ಹಳೆಯ ಹೂಡಿಕೆಗಳಿಂದ ಸಣ್ಣ ಮಟ್ಟದ ಲಾಭಾಂಶ ಹರಿದು ಬರಲಿದೆ. ಕುಟುಂಬದಲ್ಲಿ ಹಿರಿಯರ ಮಾತಿಗೆ ಬೆಲೆ ನೀಡುವುದು ಸಂಘರ್ಷಗಳನ್ನು ತಪ್ಪಿಸಲಿದೆ. ನಿಮ್ಮ ಮೌನವೇ ದೊಡ್ಡ ಶಸ್ತ್ರವಾಗಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಮ್ಮ ಮನಸ್ಸು ಹೊಸ ತಾಣಗಳತ್ತ ಅಥವಾ ಹೊಸ ಆಲೋಚನೆಗಳತ್ತ ಹರಿಯಲಿದೆ. ಯಾವುದೇ ಕೆಲಸವನ್ನು ಆರಂಭಿಸುವ ಮುನ್ನ ಅದರ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಿ. ವ್ಯಾಪಾರಸ್ಥರಿಗೆ ಹೊಸ ಪಾಲುದಾರಿಕೆ ಒಪ್ಪಂದಗಳು ಸಿಗುವ ಸಾಧ್ಯತೆ ಇದೆ, ಆದರೆ ಸಹಿ ಹಾಕುವ ಮುನ್ನ ಪಾರದರ್ಶಕತೆಗೆ ಒತ್ತು ನೀಡಿ. ಮನೆಯಲ್ಲಿ ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗಬಹುದು, ಆದರೆ ಅದನ್ನು ದೊಡ್ಡದು ಮಾಡದೆ ಸಮಾಧಾನದಿಂದ ವರ್ತಿಸಿ. ವಿದ್ಯಾರ್ಥಿಗಳಿಗೆ ಸಂಶೋಧನಾತ್ಮಕ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ.

ಇದನ್ನೂ ಓದಿ: ನವಪಂಚಮ ಯೋಗ: ಯಾರಿಗೆಲ್ಲಾ ಅದೃಷ್ಟ? ಇಲ್ಲಿದೆ ನೋಡಿ

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚುವ ದಿನವಿದು. ಸಾರ್ವಜನಿಕ ಕೆಲಸಗಳಲ್ಲಿ ತೊಡಗಿರುವವರಿಗೆ ದೊಡ್ಡ ಜವಾಬ್ದಾರಿಗಳು ಎದುರಾಗಲಿವೆ. ಹಣಕಾಸಿನ ವಿಚಾರದಲ್ಲಿ ಯಾರನ್ನೂ ಅಂಧವಾಗಿ ನಂಬಬೇಡಿ; ವ್ಯವಹಾರದಲ್ಲಿ ದಾಖಲೆಗಳು ಸರಿಯಾಗಿರುವಂತೆ ನೋಡಿಕೊಳ್ಳಿ. ಆರೋಗ್ಯದ ದೃಷ್ಟಿಯಿಂದ ಅತಿಯಾದ ಕೆಲಸದ ಒತ್ತಡವು ಆಯಾಸಕ್ಕೆ ಕಾರಣವಾಗಬಹುದು, ಹೀಗಾಗಿ ವಿಶ್ರಾಂತಿಗೆ ಸಮಯ ಮೀಸಲಿಡಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಶಾಂತಿ ಲಭಿಸಲಿದೆ. ಮಕ್ಕಳ ಪ್ರಗತಿಯಿಂದ ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ.

ಲೇಖನ- ಎನ್‌.ಕೆ.ಸ್ವಾತಿ

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today 13 January: ಇಂದು ಈ ರಾಶಿಯವರಿಗೆ ಆಸೆಗಳ ಅಪೂರ್ಣತೆಯಿಂದ ಬೇಸರ – Kannada News | Horoscope Today 13 January: Today, these zodiac signs will be bored with the unfulfilled desires

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಪೌಷ ಮಾಸ ಕೃಷ್ಣ ಪಕ್ಷದ ದಶಮೀ ತಿಥಿ ಮಂಗಳವಾರ ಹೋಲಿಕೆ, ಹೊಸ ಸಂಪರ್ಕ, ಮನೋರಂಜನೆ, ಆದಾಯ ಸ್ಥಿರ, ಗೆಲವು, ತಾಳ್ಮೆ, ನಿಂದನೆಗೆ ಕೋಪ ಇವೆಲ್ಲ ಇಂದಿನ ಭವಿಷ್ಯ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಪೂರ್ವಾಷಾಢ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ದಶಮೀ, ನಿತ್ಯನಕ್ಷತ್ರ : ವಿಶಾಖಾ ಯೋಗ : ಶೂಲಿ, ಕರಣ : ಭದ್ರ, ಸೂರ್ಯೋದಯ – 06 – 53 am, ಸೂರ್ಯಾಸ್ತ – 06 – 12 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16-23 – 16:48, ಯಮಗಂಡ ಕಾಲ 09:43 – 11:08, ಗುಳಿಕ ಕಾಲ 12:33 – 13:58

ಮೇಷ ರಾಶಿ :

ಶತ್ರುಗಳು ಅನ್ಯ ಕಾರ್ಯದಲ್ಲಿ ತೊಡಗಿರುವ ಕಾರಣ ನಿಮಗೆ ಬಾಧೆ ಇರದು. ಕಲಾವಿದರು ಅವಕಾಶದ ಕದ ತಟ್ಟುವಿರಿ. ಎದುರಿಸಬಹುದಾದ ಸಮಸ್ಯೆಯನ್ನು ಧೈರ್ಯದಿಂದ ಮುನ್ನುಗ್ಗಿ. ಇಂದು ನಿಮಗೆ ಕೆಲಸವು ಆಗಬೇಕಾಗಿದ್ದು ಪ್ರಯಾಣವು ಅನಿವಾರ್ಯವಾಗುವುದು. ವಾಹನ ಸೌಕರ್ಯದಿಂದ ನಿಮಗೆ ಸಮಾಧನ. ಒಂದೇ ಸಾರಿ ಖರ್ಚಿನ ಎಲ್ಲ ಯೋಜನೆ ಇಟ್ಟುಕೊಳ್ಳಬೇಡಿ. ನಿಮ್ಮ ಮಾತು ಇನ್ನೊಬ್ಬರಿಗೆ ಸಿಟ್ಟು ಬರುವಂತೆ ಇರವುದು. ಮಕ್ಕಳ ವಿದ್ಯಾಭ್ಯಾಸದ ಖರ್ಚು ಸ್ವಲ್ಪ ಕಡಿಮೆ‌ ಆಗಿದ್ದು ಸಂತಸದ ಸಮಾಚಾರವಾಗಲಿದೆ. ‌ವಿವಾದಕ್ಕೆ ಹೋಗಿ ಮೂರ್ಖರಾಗುವುದು ಬೇಡ. ದೈವಾನುಕೂಲದಿಂದ ನಿಮಗೆ ಸಿಗಬೇಕಾದ ಸಂಪತ್ತು ಬರಲಿದೆ.

ವೃಷಭ ರಾಶಿ :

ಅಧಿಕ ಆದಾಯ ಕೆಲಸವನ್ನು ಇಂದು ಹುಡುಕುವಿರಿ. ಸಣ್ಣ ವಿಚಾರಕ್ಕೆ ಆದ ಅಪಮಾನವನ್ನು ಎಲ್ಲಿಯೂ ಹೇಳಲಾರಿರಿ. ಮನೆಯಲ್ಲಿ ನಡೆದು ಶುಭಕಾರ್ಯದ ತಯಾರಿಯಲ್ಲಿ ನೀವು ಇರುವಿರಿ. ಆಸ್ತಿಯ ವಿಚಾರದಲ್ಲಿ ನಿಮ್ಮ ನಿಲುವಿಗೆ ಅಪಜಯವಾಗಬಹುದು. ಇಂದು ನೀವು ಸಂಗಾತಿಯ ಮಾತನ್ನೇ ಹೆಚ್ಚು ಹೆಚ್ಚುಕೇಳಲಾರಿರಿ. ಎಲ್ಲೊ ಸಿಕ್ಕ ಬಂಧುಗಳ ಒಡನಾಟವು ಹಿತವೆನಿಸುವುದು. ಸ್ನೇಹಿತರಿಗೋಸ್ಕರ ನೀವು ಹಣವನ್ನು ಖರ್ಚು ಮಾಡಬೇಕಾದೀತು. ನಿಮ್ಮ‌ ವಸ್ತುಗಳನ್ನು ದುರುಪಯೋಗ ಮಾಡಿಕೊಳ್ಳುವಿರಿ. ನೀವು ಇನ್ನೊಬ್ಬರಿಗೆ ನಿಮ್ಮನ್ನು ಹೋಲಿಸಿಕೊಂಡು ನಿಮ್ಮೊಳಗೇ ಸಂಕಟಪಡುವಿರಿ. ನಿಮ್ಮ ಸಹನೆಯನ್ನು ಬಿಡದೇ ಅದನ್ನೇ ಅಸ್ತ್ರವನ್ನಾಗಿ ಮಾಡಿಕೊಳ್ಳಿ. ಧಾರ್ಮಿಕ ಕಾರ್ಯದಲ್ಲಿ ನಂಬಿಕೆ ಹೆಚ್ಚಾಗುವುದು.

ಮಿಥುನ ರಾಶಿ :

ಖಾಸಗಿ ಸಂಸ್ಥೆಯ ಹುದ್ದೆಯನ್ನು ನೀವು ಪಡೆಯಲಿದ್ದೀರಿ. ಧಾರ್ಮಿಕ‌ಚಿಂತನೆಗಳು ನಿಮ್ಮ ಮನಸ್ಸಿನಲ್ಲಿ ಓಡಬಹುದು. ನೀವು ಇಂದು ಹಳೆಯ ಸ್ನೇಹಿತನ ಜೊತೆ ಸೇರಿ ಹೊಸ ಉದ್ಯೋಗವನ್ನು ಆರಂಭಿಸುವ ಯೋಚನೆ ಮಾಡುವಿರಿ. ಆದಾಯವು ಕುಗ್ಗಬಹುದು. ತಂದೆ ಹಾಗೂ ತಾಯಿಯರ ಜೊತೆ ಬಹಳ ದಿನಗಳ ಅನಂತರ ಹರಟೆ ಹೊಡೆಯುವಿರಿ. ತೀರ್ಥಕ್ಷೇತ್ರಗಳ ದರ್ಶನವನ್ನು ಮಕ್ಕಳ ಜೊತೆ ಮಾಡುವಿರಿ. ಚಂಚಲವಾದ ಮನಸ್ಸನ್ನು ಏಕಾಗ್ರವಾಗಿ ಇಡಲು ಪ್ರಯತ್ನಿಸುವಿರಿ. ತಿಳಿದವರ ಜೊತೆ ಸಂದೇಹವನ್ನು ಪರಿಹರಿಸಿಕೊಳ್ಳುವಿರಿ. ಎಲ್ಲರಿಂದ ಗೌರವವನ್ನು ಪಡೆಯುವ ಬಯಕೆ ಇರಲಿದೆ. ನಿಮಗೆ ಕೊಟ್ಟ ಜವಾಬ್ದಾರಿಗಳನ್ನು ನೀವು ಇತರರಿಗೆ ಹಂಚಿ ನಿರಾಳರಾಗುವಿರಿ.

ಕರ್ಕಾಟಕ ರಾಶಿ :

ಸಾಕೆನಿಸುವಷ್ಟು ಯಾವ ಆಹಾರವನ್ನೂ ಸೇವಿಸುವುದು ಬೇಡ. ಮಕ್ಕಳ ಶ್ರಮದಿಂದ ಪಾಲಕರಿಗೆ ನೆಮ್ಮದಿ ಇರಲಿದೆ. ವಿದ್ಯಾರ್ಥಿಗಳಿಗೆ ಬೆಂಬಲದ ಕೊರತೆ ಇರುವುದು. ಹಿರಿಯರ ಆರೋಗ್ಯದಲ್ಲಿ ವ್ಯತ್ಯಸಾವಾಗಿದ್ದು ತುರ್ತು ಚಿಕಿತ್ಸೆಯ ಅವಶ್ಯಕತೆ ಇರಲಿದೆ. ಹಲವು ದಿನಗಳ ನಿಮ್ಮ ಋಣವು ಮುಕ್ತಾಯವಾಗಿದ್ದು ಸಂತಸದ ವಿಚಾರವಾಗಿದೆ. ಸಣ್ಣ ವ್ಯಾಪಾರದಲ್ಲಿ ಲಾಭವನ್ನು ಕಾಣುವಿರಿ. ಉನ್ನತ ಹುದ್ದೆಗೆ ಆಯ್ಕೆಯಾದವರ ಪಟ್ಟಿಯಲ್ಲಿ ನಿಮ್ಮ ಹೆಸರೂ ಇರಲಿದೆ. ಮಕ್ಕಳ ಭವಿಷ್ಯಕ್ಕೆ ಹಣವನ್ನು ಉಳಿತಾಯ ಮಾಡವಿರಿ. ಇಂದಿನ ಸಮಯ ಮಿತಿಯನ್ನು ಅರಿತು ಕಾರ್ಯವನ್ನು ಮಾಡುವಿರಿ. ನಂಬಿಕೆಯನ್ನು ಪ್ರಯತ್ನಪೂರ್ವಕವಾಗಿ ಇರಿಸಿಕೊಳ್ಳುಬಿರಿ.

ಸಿಂಹ ರಾಶಿ :

ಮಾತಿನಿಂದ ಜೊತೆಗಾರರೇ ನಿಮ್ಮನ್ನು ದ್ವೇಷಿಸುವರು. ಸಾಧಿಸುವ ವಿಧಾನವವನ್ನು ಹೇಳಿಕೊಳ್ಳುವುದು ಬೇಡ.‌ ವಾಹನ ಚಾಲನೆಗೆ ಅತ್ಯುತ್ಸಾಹವಿದ್ದರೂ ಎಚ್ಚರಿಕೆಯನ್ನು ಹೆಚ್ಚು ಇಟ್ಟುಕೊಳ್ಳುವುದು ಮುಖ್ಯ. ಖಾಸಗಿ ಉದ್ಯೋಗ ಸಾಕೆನಿಸಿ, ಮನೆಯಲ್ಲಿ ಇರುವ ಯೋಚನೆ ಬರುವುದು. ಬಹಳ ಪ್ರಯತ್ನದ ಫಲವಾಗಿ ಅವಿವಾಹಿತರಿಗೆ ಯೋಗ್ಯವಾದ ಸಂಬಂಧವು ಬರಲಿದೆ. ಅತಿಯಾದ ಉದ್ಯೋಗದ ಬದಲಾವಣೆಯನ್ನು ಮಾಡುವುದು ಬೇಡ. ಮಾತ್ಸರ್ಯದಿಂದ ಸುಖವನ್ನು ನಾಶಮಾಡಿಕೊಳ್ಳುವಿರಿ. ಸಂಗಾತಿಯ ಜೊತೆ ಕೆಲವು ಸಮಯವನ್ನು ಕಳೆಯುವ ಮನಸ್ಸಾಗುವುದು. ದೂರಪ್ರಯಾಣವನ್ನು ಇಂದು ರದ್ದು ಮಾಡಿರಿ.

ಕನ್ಯಾ ರಾಶಿ :

ನಿಮ್ಮ ತಪ್ಪಿಗೆ ಯಾರನ್ನೋ‌ ದೂರಿ ಕಲಹವಾಗುವುದು. ಬಾಲಿಶವಾಗಿ ವರ್ತಿಸುವುದರಿಂದ ನಿಮ್ಮ ಬಗ್ಗೆ ತಪ್ಪು ಕಲ್ಪನೆ ಬರಬಹುದು. ಅವಶ್ಯಕ ವಸ್ತುಗಳನ್ನು ನೀವು ಕಳೆದುಕೊಳ್ಳುವಿರಿ‌. ಸಾಲ ಪಡೆದವರ ಹುಡುಕಾಟವನ್ನು ಕಷ್ಟ. ಶ್ರಮವಹಿಸಿದಷ್ಟು ಫಲವು ಸಿಗಲಿಲ್ಲ ಎಂಬ ಬೇಸರವಿದ್ದರೂ ತಕ್ಕಮಟ್ಟಿನ ಖುಷಿಯು ಇರಲಿದೆ. ಇಂದು ದೈವಾನುಕೂಲವನ್ನು ನಿರೀಕ್ಷಿಸದೇ ಪುರುಷ ಪ್ರಯತ್ನವು ಹೆಚ್ಚಿರಬೇಕಾಗುವುದು. ಹೇಳಬೇಕಾದ್ದನ್ನು ಹೇಳದೇ ‌ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುವಿರಿ. ಪ್ರೇಮಿಯನ್ನು ನೀವು ಬಹಳ ಜೋಪಾನವಾಗಿ ನೋಡಿಕೊಳ್ಳಬೇಕಾಗುವುದು. ಆಪ್ತರಿಂದ ಸಣ್ಣ ನಿರ್ಲಕ್ಷ್ಯವನ್ನೂ ಸಹಿಸಲಾರಿರಿ. ಸ್ನೇಹಿತರು ನೆಚ್ಚುವ ಕಾರ್ಯವನ್ನು ಮಾಡುವಿರಿ.

ತುಲಾ ರಾಶಿ :

ಜವಾಬ್ದಾರಿಯ ಮಾತುಗಳಿಂದ ಅಚ್ಚರಿಯಾದೀತು. ಕೃಷಿಗೆ ಸಂಬಂಧಿಸಿದ ನೂತನ ಅನ್ವೇಷಣೆಯನ್ನು ಮಾಡುವ ಹೊಸ ಆಲೋಚನೆಯನ್ನು ಮಾಡುವಿರಿ. ಸಾಮಾಜಿಕ ಕಾರ್ಯದಿಂದ ಪ್ರೇರಣೆ ಪಡೆದು ಸಂಸ್ಥೆಯನ್ನು ಆರಂಭಿಸುವಿರಿ. ಹೇಳಿಕೊಟ್ಟ ಮಾತು ಎಲ್ಲಿಯವರೆಗೆ ಇದ್ದೀತು. ನಿಮ್ಮ ದುರಾಲೋಚನೆಗೆ ಸ್ನೇಹಿತರು ಅಡ್ಡಿ ಮಾಡುವರು. ಶತ್ರುವಿನ ಬಲವನ್ನು ನಿಯಂತ್ರಿಸಲು ಸಿದ್ಧತೆ ನಡೆಸುವಿರಿ. ನಿಮ್ಮ ದುಃಖಕ್ಕೆ ಬಂಧುಗಳಿಂದ ಸಾಂತ್ವನವು ಸಿಗುವುದು. ಸಿಕ್ಕಿದ್ದರಲ್ಲಿ ಸುಖ ಪಡುವುದನ್ನು ಬೆಳೆಸಿಕೊಳ್ಳುವಿರಿ. ಮಕ್ಕಳನ್ನು ಸ್ವತಂತ್ರವಾಗಿ ಬಿಡುವುದು ಬೇಡ. ಸಣ್ಣ ವಿರಸವೂ ದೂರಾಗಲು ಕಾರಣವಾಗಬಹುದು. ದುಃಸ್ವಪ್ನವು ನಿಮ್ಮನ್ನು ಕಾಡಬಹುದು.

ವೃಶ್ಚಿಕ ರಾಶಿ :

ಯಾವುದೋ ಆಲೋಚನೆಯಲ್ಲಿ ಮುಖ್ಯ ಕೆಲಸವನ್ನು ಮರೆಯಬಹುದು. ನಿಮ್ಮ ಉತ್ಪಾದನೆಯು ಆದಾಯಕ್ಕಿಂತ ನೆಮ್ಮದಿಯನ್ನು ಹೆಚ್ಚು ಕೊಡುವುದು. ಪ್ರಭಾವಿ ಜನರ ಸಂಸರ್ಗದಿಂದ ಹೊಸ ಆಯಾಮವು ತೆರೆದುಕೊಳ್ಳುವುದು. ಯಾವ ಮಾರ್ಗದಿಂದ ಹಣ ಬಂದರೂ ಸ್ವೀಕರಿಸುವಿರಿ. ನಿಮ್ಮದು ಉದ್ದೇಶಪೂರ್ವಕ ಆಡಿದ ಮಾತಾಗಿದ್ದು ಸಮಸ್ಯೆಗಳನ್ನು ಎದುರಿಸಬೇಕಾದೀತು. ರಕ್ಷಣಾ ವ್ಯವಸ್ಥೆಯಲ್ಲಿ ಇರುವವರಿಗೆ ಕಾರ್ಯದ ಒತ್ತಡ ಹೆಚ್ಚಿರುವುದು. ಕಾರ್ಯವನ್ನೇ ಸರಿಯಾಗಿ ಮಾಡಿ ಆದಾಯವು ಹೆಚ್ಚಾಗುವಂತೆ ಮಾಡಿಕೊಳ್ಳಿ. ಇಂದು ಕೋಪವು ಬಂದರೂ ವ್ಯಕ್ತಪಡಿಸದೇ ಸುಮ್ಮನಿದ್ದು ನುಂಗಿಕೊಳ್ಳುವಿರಿ.

ಧನು ರಾಶಿ :

ಅನಿರೀಕ್ಷಿತವಾಗಿ ಕುಟುಂಬದ ಜವಾಬ್ದಾರಿಯು ನಿಮ್ಮ ಮೇಲೇ ಬರಬಹುದು‌. ಇಂದು ನಿಮ್ಮ ಮಾತಿನ ಮಾರ್ಗಗಳು ಎಲ್ಲವೂ ಮುಚ್ಚಿದಂತೆ ಅನ್ನಿಸಬಹುದು. ವೇಗದ ನಡಿಗೆಯಿಂದ ಬೀಳುವಿರಿ. ನಿಮಗೆ ಆರ್ಥಿಕ ನೆರವನ್ನು ನೀಡಿದವರಿಗೆ ಕೃತಜ್ಞತೆಯನ್ನು ಸಲ್ಲಿಸುವಿರಿ. ಸ್ತ್ರೀಯರಿಂದ ನಿಮಗೆ ಬೈಗುಳವು ಬರಲಿದೆ. ಅವಿವಾಹಿತರು ವಿವಾಹದ ಬಗ್ಗೆ ಮಾಡಿ ಪ್ರಯೋಜನವಾಗದು, ಕಾರ್ಯದಲ್ಲು ಪ್ರವೃತ್ತರಾಗಿ.‌ ಉದ್ಯೋಗದಲ್ಲಿ ಪ್ರಾಮಾಣಿಕರಾಗಿದ್ದರೂ ಅಪವಾದವು ಬರಬಹುದು. ಸಾಮಾಜಿಕ ಕಾರ್ಯಕ್ಕೆ ಜನಬೆಂಬಲವು ಸಿಗಬಹುದು. ಸಂಗಾತಿಯಿಂದ ಸಿಗಬೇಕಾದ ಪ್ರೀತಿಯು ಕಡಿಮೆ ಆಗಲಿದೆ. ಇಂದಿನ ಸಮಯ ಮಿತಿಯನ್ನು ಅರಿತು ಕಾರ್ಯವನ್ನು ಮಾಡುವಿರಿ.

ಮಕರ ರಾಶಿ :

ಸರ್ಕಾರಿ ಉದ್ಯೋಗದ ಕಡೆ ನಿಮ್ಮ ಮನಸ್ಸು ಹೊರಳುವುದು. ನಿಶ್ಚಿತ ಕಾರ್ಯವು ನಿಮ್ಮಿಂದ ಆಗದೇ ಹೋಗಬಹುದು. ಪ್ರಯಾಣದ ಅನಿವಾರ್ಯತೆ ಇದ್ದರೆ ಸ್ವಂತ ವಾಹನದಲ್ಲಿ ಪ್ರಯಾಣ ಮಾಡಿ. ವಿದ್ಯಾಭ್ಯಾಸದ ಗೊಂದಲವನ್ನು ನೀವು ಸರಿಮಾಡಿಕೊಳ್ಳುವುದು ಕಷ್ಟವಾದೀತು. ಶತ್ರುಗಳನ್ನು ಹಿಮ್ಮೆಟ್ಟಿಸುವ ಕಾರ್ಯವು ನಿಮ್ಮ ಕಡೆಯಿಂದ ಆಗುವುದು. ಮತ್ತೆ ಮತ್ತೆ ನಿಮಗೆ ಆಗದ ವಿಚಾರಗಳೇ ಕಿವಿಗೆ ಬೀಳಬಹುದು. ಒತ್ತಡಗಳು ನಿಮ್ಮ ಕೆಲಸದ ವಿಧಾನವನ್ನು ಬದಲಿಸುವುದು. ಇಂದು ಹೊಂದಾಣಿಕೆಯ ಸ್ವಭಾವವನ್ನು ಬಿಡಬಹುದು. ಎಲ್ಲರಿಂದ ಗೌರವವನ್ನು ಪಡೆಯುವ ಬಯಕೆ ಇರಲಿದೆ. ಸಹೋದ್ಯೋಗಿಗಳ ಅನಾದರವನ್ನು ನೀವು ಲೆಕ್ಕಿಸದೇ ನಿಮ್ಮ ಕಾರ್ಯದಲ್ಲಿ ಮಗ್ನರಾಗುವಿರಿ.

ಇದನ್ನೂ ಓದಿ:ಶುಕ್ರ ಹಾಗೂ ರವಿಯ ಅಪರೂಪದ ಸಂಯೋಗ, ಗುರುದೃಷ್ಟಿಯ ಯೋಗ

ಕುಂಭ ರಾಶಿ :

ಆರ್ಥಿಕತೆಯು ದುರ್ಬಲವಾಗಗುತ್ತಿದ್ದು ಇದೇ ದೊಡ್ಡ ಚಿಂತೆಯಾಗಬಹುದು. ಏಕಕಾಲಕ್ಕೆ ಹತ್ತಾರು ಚಿಂತನೆಯನ್ನು ಮನಸ್ಸು ಮಾಡಲಿದೆ. ಯಾರ ಬೆಂಬಲವನ್ನು ಬಯಸದೇ ಸ್ವತಂತ್ರವಾಗಿ ಕೆಲಸವನ್ನು ಮಾಡುವಿರಿ. ಮನೆಯಲ್ಲಿ ನಿಮಗೆ ಪೂರಕವಾದ ವಾತಾವರಣವಿದ್ದರೂ ಸಂತೋಷವು ಇರದು. ಇಂದು ನಿಮ್ಮ ಬಗ್ಗೆಯೇ ನಿಮಗೆ ಅಸಮಾಧಾನವಿರಬಹುದು. ಬರಬೇಕಿದ್ದ ಹಣವು ಬಹಳ ದಿನವಾದರೂ ಬಾರದೇ ಇದ್ದುದು ಚಿಂತೆಯಾಗುವುದು. ಇಂದು ಎಲ್ಲರಿಂದ ದೂರವಿರುವುದು ನಿಮಗೆ ಇಷ್ಟವಾಗುವುದು. ಹೊಸ ಸ್ಥಳವು ನೀವು ಒಗ್ಗಿಕೊಳ್ಳುವುದು ಕಷ್ಟವಾದೀತು. ದೇವರಲ್ಲಿ ನಂಬಿಕೆ ಕಡಿಮೆಯಾಗುವುದು. ನೀವು ಇನ್ನೊಬ್ಬರಿಗೆ ನಿಮ್ಮನ್ನು ಹೋಲಿಸಿಕೊಂಡು ನಿಮ್ಮೊಳಗೇ ಸಂಕಟಪಡುವಿರಿ.

ಮೀನ ರಾಶಿ :

ನಂಬಿಕೆಯನ್ನು ಗಳಿಸುವುದು ನಿಮಗೆ ಸವಾಲಾಗಬಹುದು. ನಿರೀಕ್ಷಿತ ಉಡುಗೊರೆಯಿಂದ ಸಂತೋಷವಾಗಲಿದೆ. ಕಾರ್ಯದಲ್ಲಿ ಉಂಟಾದ ತೊಂದರೆಯನ್ನು ನೀವು ಲೆಕ್ಕಿಸದೇ ಮುನ್ನಡೆಯುವಿರಿ. ಆಭರಣ ಪ್ರಿಯರಿಗೆ ಸಂತೋಷವಾಗುವುದು. ಹಳೆಯ ವ್ಯವಹಾರವು ಪುನಃ ಮುನ್ನೆಲೆಗೆ ಬಂದು ಕಲಹದಲ್ಲಿ ಅಂತ್ಯವಾಗಬಹುದು. ನಿಮ್ಮ ಅಶಿಸ್ತಿನ ಕಾರ್ಯಕ್ಕೆ ಅಪಹಾಸ್ಯ ಮಾಡಬಹುದು. ಮಾತಿನಲ್ಲಿ ಮಿತಿ ಇರಲಿದ್ದು ಎಲ್ಲರಿಗೂ ಅಚ್ಚರಿಯಾದೀತು. ಆಲಸ್ಯದಿಂದ ದೂರವಿದ್ದರೂ ಸೋಮಾರಿ ಬಿರುದು ಬರಬಹುದು. ‌ವಿವಾದಕ್ಕೆ ಹೋಗಿ ಮೂರ್ಖರಾಗುವುದು ಬೇಡ. ಆಲಸ್ಯವನ್ನು ಬಿಡುವುದು ಅನಿವಾರ್ಯವಾದೀತು.

-ಲೋಹಿತ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

WPL 2026: ಒಂದೇ ಓವರ್​ನಲ್ಲಿ 32 ರನ್..! 22 ಎಸೆತಗಳಲ್ಲಿ 50 ರನ್ ಚಚ್ಚಿದ ಹ್ಯಾರಿಸ್; ವಿಡಿಯೋ

ಯುಪಿ ವಾರಿಯರ್ಸ್​ ತಂಡ ನೀಡಿರುವ 144 ರನ್​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ ಭರ್ಜರಿ ಆರಂಭ ಕಂಡಿತು. ಆರಂಭಿಕರಾದ ಸ್ಮೃತಿ ಮಂಧಾನ ಹಾಗೂ ಸ್ಫೋಟಕ ಬ್ಯಾಟರ್ ಗ್ರೇಸ್ ಹ್ಯಾರಿಸ್ ಅಜೇಯ ಶತಕದ ಜೊತೆಯಾಟ ಕಟ್ಟಿದ್ದಾರೆ. ಅದರಲ್ಲೂ ಕೇವಲ 8 ಓವರ್​ಗಳಲ್ಲಿ ತಂಡ ಶತಕದ ಗಡಿ ದಾಟಿತು. ಈ ವೇಳೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಗ್ರೇಸ್ ಹ್ಯಾರಿಸ್ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಅದರಲ್ಲೂ ವೆಸ್ಟ್ ಇಂಡೀಸ್​ನ ಸ್ಟಾರ್ ಆಲ್‌ರೌಂಡರ್ ಡಿಯಾಂಡ್ರಾ ಡಾಟಿನ್ ಬೌಲ್​ ಮಾಡಿದ ಪವರ್​ ಪ್ಲೇನ ಕೊನೆಯ ಓವರ್​ನಲ್ಲಿ ಅಂದರೆ 6ನೇ ಓವರ್​ನಲ್ಲಿ ಉಗ್ರರೂಪ ತಾಳಿದ ಹ್ಯಾರಿಸ್ ಬೌಂಡರಿ ಹಾಗೂ ಸಿಕ್ಸರ್​ಗಳ ಮಳೆಗರೆದು ಬರೋಬ್ಬರಿ 32 ರನ್ ಕಲೆಹಾಕಿದರು. ಈ ಮೂಲಕ ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಒಂದೇ ಓವರ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಜಂಟಿ ದಾಖಲೆ ನಿರ್ಮಿಸಿದರು. ನಿನ್ನೆಯಷ್ಟೇ ಮಾಜಿ ಆರ್​ಸಿಬಿ ಆಟಗಾರ್ತಿ ಸೋಫಿ ಡಿವೈನ್ ಒಂದೇ ಓವರ್​ನಲ್ಲಿ 32 ರನ್ ಕಲೆಹಾಕಿ ಈ ದಾಖಲೆ ನಿರ್ಮಿಸಿದ್ದರು.

Source link