Category Archives: Blog

Your blog category

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ – Kannada News | AAP MP Raghav Chadha Turns Blinkit delivery agent Amid Row Over Gig Workers Demands

ನವದೆಹಲಿ, ಜನವರಿ 12: ಪಂಜಾಬ್‌ನ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ರಾಘವ್ ಚಡ್ಡಾ (Raghav Chadha) ಇಂದು ಒಂದು ದಿನದ ಮಟ್ಟಿಗೆ ಡೆಲಿವರಿ ಬಾಯ್ ಆಗಿ ಬದಲಾಗಿದ್ದರು. ಡೆಲಿವರಿ ಬಾಯ್​​ಗಳು ಎದುರಿಸುತ್ತಿರುವ ತೊಂದರೆಗಳನ್ನು ಅರ್ಥಮಾಡಿಕೊಳ್ಳಲು ಅವರು ವೈಯಕ್ತಿಕವಾಗಿ ಜನರ ಮನೆಗಳಿಗೆ ದಿನಸಿ ಮತ್ತಿತರ ಪದಾರ್ಥಗಳನ್ನು ತಲುಪಿಸಿದರು. ಅವರು ಇದರ ವೀಡಿಯೊವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಬಾರಿಯ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ರಾಘವ್ ಚಡ್ಡಾ ಅವರು ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರ ವಿಷಯವನ್ನು ಎತ್ತಿದ್ದರು. ಈ ಕಾರ್ಮಿಕರ ಪರಿಸ್ಥಿತಿ ದಿನಗೂಲಿ ಕಾರ್ಮಿಕರಿಗಿಂತ ಕೆಟ್ಟದಾಗಿದೆ ಎಂದು ಅವರು ಹೇಳಿದ್ದರು. 10 ನಿಮಿಷದಲ್ಲಿ ಡೆಲಿವರಿ ಎಂಬ ಆಯ್ಕೆಯನ್ನು ತೆಗೆದುಹಾಕಬೇಕೆಂದು ಅವರು ಒತ್ತಾಯಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

WPL 2026: ಹ್ಯಾರಿಸ್ ಆರ್ಭಟ; ಏಕಪಕ್ಷೀಯ ಗೆಲುವು ಸಾಧಿಸಿದ ಆರ್​ಸಿಬಿ

ಮಹಿಳಾ ಪ್ರೀಮಿಯರ್ ಲೀಗ್​ನ 4ನೇ ಆವೃತ್ತಿಯಲ್ಲಿ ಆರ್​ಸಿಬಿ ಅದ್ಭುತ ಆರಂಭ ಪಡೆದುಕೊಂಡಿದೆ. ಆಡಿದ ಎರಡೂ ಪಂದ್ಯಗಳನ್ನು ಗೆದ್ದಿರುವ ಸ್ಮೃತಿ ಮಂಧಾನ ಪಡೆ 4 ಪಾಯಿಂಟ್​ಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ತನ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಕೊನೆಯ ಓವರ್​ನ ಕೊನೆಯ ಎಸೆತದಲ್ಲಿ ಸೋಲಿಸಿದ್ದ ಆರ್​ಸಿಬಿ, ಇದೀಗ ತನ್ನ ಎರಡನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್​ ತಂಡವನ್ನು 9 ವಿಕೆಟ್​ಗಳಿಂದ ಮಣಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಪಿ ತಂಡ 144 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ 12.1 ಓವರ್​ಗಳಲ್ಲಿ ಕೇವಲ 1 ವಿಕೆಟ್​ ಕಳೆದುಕೊಂಡು ಜಯದ ನಗೆ ಬೀರಿತು.

Source link

ಮತ್ತೆ ಬಿಗ್ ಬಾಸ್ ಮನೆಗೆ ಬಂದು ಉರುಳು ಸೇವೆ ಮಾಡಿದ ಮಲ್ಲಮ್ಮ: ಕಾರಣ ಏನು? – Kannada News | Mallamma performs Urulu Seve in Bigg Boss Kannada Season 12 house

ಸೋಶಿಯಲ್ ಮೀಡಿಯಾ ಮೂಲಕ ಫೇಮಸ್ ಆಗಿ, ನಂತರ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋಗೆ ಬಂದಿದ್ದ ಮಲ್ಲಮ್ಮ ಅವರು ಜನಪ್ರಿಯತೆ ಹೆಚ್ಚಿಸಿಕೊಂಡರು. ಒಂದಷ್ಟು ವಾರಗಳ ಬಳಿಕ ಅವರು ಎಲಿಮಿನೇಟ್ ಆದರು. ಆದರೆ ಕೊನೆಯ ವಾರದಲ್ಲಿ ಮಲ್ಲಮ್ಮ (Mallamma) ಅವರು ಮತ್ತೆ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅವರು ಬಂದಿದ್ದು ಎಲ್ಲರಿಗೂ ಖುಷಿ ಆಗಿದೆ. ಆದರೆ ಮಲ್ಲಮ್ಮ ಅವರು ಏಕಾಏಕಿ ಬಿಗ್ ಬಾಸ್ ಮನೆಗೆ ಬಂದು ಉರುಳು ಸೇವೆ (Urulu Seve) ಮಾಡಿದ್ದಾರೆ! ಯಾಕೆ ಎಂದು ಎಲ್ಲರಿಗೂ ಅಚ್ಚರಿ ಆಗಿದೆ. ಬಳಿಕ ಸ್ವತಃ ಮಲ್ಲಮ್ಮ ಅವರು ಕಾರಣ ತಿಳಿಸಿದರು.

ಮಲ್ಲಮ್ಮ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಒಂದು ಹರಕೆ ಮಾಡಿಕೊಂಡಿದ್ದರು. ‘ಸೊಸೆಗೆ ನಾರ್ಮಲ್ ಹೆರಿಗೆ ಆಗಬೇಕು’ ಎಂದು ಅವರು ಬೇಡಿಕೊಂಡಿದ್ದರು. ಮಲ್ಲಮ್ಮ ಅವರ ಕೋರಿಕೆ ಈಡೇರಿದೆ. ಅವರ ಪ್ರಾರ್ಥನೆಯಂತೆಯೇ ಸೊಸೆಗೆ ನಾರ್ಮಲ್ ಡೆಲಿವರಿ ಆಗಿದೆ. ಅದಕ್ಕಾಗಿ ಅವರು ಬಿಗ್ ಬಾಸ್ ಮನೆಗೆ ಮರಳಿಬಂದು ಹರಕೆ ತೀರಿಸಿದ್ದಾರೆ.

‘ನಾವು ಬಡವರು. ಕೆಲಸ ಮಾಡಬೇಕಲ್ಲವಾ? ಹಾಗಾಗಿ ನಾರ್ಮಲ್ ಡೆಲಿವರಿ ಆಗಲಿ ಅಂತ ಬೇಡಿಕೊಂಡಿದ್ದೆ. ದೇವರು ನಮ್ಮ ಆಸೆ ಈಡೇರಿಸಿದ ಮೇಲೆ ನಾವು ಹರಕೆ ತೀರಿಸಬೇಕಲ್ಲವೇ’ ಎಂದು ಮಲ್ಲಮ್ಮ ಅವರು ಹೇಳಿದ್ದಾರೆ. ಈ ಕ್ಷಣದಲ್ಲಿ ಎಲ್ಲರೂ ಮಲ್ಲಮ್ಮ ಅವರಿಗೆ ವಿಶ್ ಮಾಡಿದರು. ಆದರೆ ಮಲ್ಲಮ್ಮ ಯಾಕೋ ಮೊದಲಿನ ರೀತಿ ಮಾತನಾಡುತ್ತಿಲ್ಲ ಎಂದು ಧ್ರುವಂತ್ ಹೇಳಿದರು.

ಮೊಮ್ಮಗನಿಗೆ ಯಾವ ಹೆಸರು ಇಡಬೇಕು ಎಂಬುದನ್ನು ಬಿಗ್ ಬಾಸ್ ಮನೆಯಲ್ಲೇ ನಿರ್ಧರಿಸಲಾಯಿತು. ಗಣೇಶ ಎಂದು ಮೊಮ್ಮಗನಿಗೆ ಬಿಗ್ ಬಾಸ್ ಮನೆಯಲ್ಲಿ ನಾಮಕರಣ ಮಾಡಲಾಯಿತು. ಇದರಿಂದ ಮಲ್ಲಮ್ಮ ಖುಷಿಪಟ್ಟರು. ತಾವು ಎಂದೆಂದಿಗೂ ಬಿಗ್ ಬಾಸ್ ಮನೆಗೆ ಚಿರಋಣಿ ಆಗಿರುವುದಾಗಿ ಮಲ್ಲಮ್ಮ ಅವರು ಹೇಳಿದರು. ಸ್ವಲ್ಪ ಹೊತ್ತು ಬಿಗ್ ಬಾಸ್ ಮನೆಯಲ್ಲಿ ಇದ್ದ ಅವರು ನಂತರ ಹೊರಬಂದರು.

ಇದನ್ನೂ ಓದಿ: ಈ ಬಾರಿ ಬಿಗ್​​ಬಾಸ್ ಯಾರು ಗೆಲ್ಲಬೇಕು? ಮಲ್ಲಮ್ಮನ ಫೇವರೇಟ್ ಸ್ಪರ್ಧಿ ಯಾರು?

ಕೊನೆಯ ವಾರದಲ್ಲಿ ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಕಾವ್ಯ ಶೈವ, ಗಿಲ್ಲಿ ನಟ, ಧ್ರುವಂತ್, ಮ್ಯೂಟೆಂಟ್ ರಘು ಅವರು ಪೈಪೋಟಿ ನೀಡುತ್ತಿದ್ದಾರೆ. ಈ ವಾರ ಒಬ್ಬರು ಮಿಡ್ ವೀಕ್ ಎಲಿಮಿನೇಷನ್ ಮೂಲಕ ಔಟ್ ಆಗಲಿದ್ದಾರೆ. ಧನುಷ್ ಅವರು ನೇರವಾಗಿ ಫಿನಾಲೆ ತಲುಪಿದ್ದಾರೆ. ಅಂತಿಮವಾಗಿ ಯಾರು ವಿನ್ ಆಗುತ್ತಾರೆ ಎಂಬುದನ್ನು ನೋಡುವ ಕೌತುಕ ನಿರ್ಮಾಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಒರಿಜಿನಲ್ ಅಂತ ನಕಲಿ 2nd PU ಪ್ರಶ್ನೆಪತ್ರಿಕೆ ಹರಿಬಿಟ್ಟಿದ್ದ ಕಿಡಿಗೇಡಿಗಳು: ಯೂಟ್ಯೂಬ್ ಖಾತೆ ವಿರುದ್ಧ ದೂರು – Kannada News | Complaint Filed Against YouTube Over Miscreants Who Leaked Fake 2nd PUC Question Paper Claiming It Was Original

ಬೆಂಗಳೂರು, ಜನವರಿ 12: ದ್ವೀತಿಯ ಪಿಯುಸಿ (2nd PUC) ವಾರ್ಷಿಕ ಪರೀಕ್ಷೆಗೆ ದಿನಗಣನೆ ಶುರುವಾಗಿದೆ. ಹೀಗಾಗಿ ಕರ್ನಾಟಕದಾದ್ಯಂತ ಪ್ರಿಪರೇಟರಿ ಎಕ್ಸಾಂ ನಡೆಸಲಾಗುತ್ತಿದೆ. ಪರೀಕ್ಷೆ ಆರಂಭ ಬೆನ್ನಲ್ಲೇ ಪ್ರಶ್ನೆ ಪತ್ರಿಕೆ ಲೀಕ್​ ಹಾವಳಿ ಕೂಡ ಜೋರಾಗಿದೆ. ಶಿಕ್ಷಣ ಇಲಾಖೆ ವೈಫಲ್ಯವನ್ನೇ ಖದೀಮರು ಬಂಡವಾಳ ಮಾಡಿಕೊಂಡಿದ್ದಾರೆ. ಕೆಎಸ್​​ಇಎಬಿ (KSEAB) ತಯಾರು ಮಾಡಿದ ಪ್ರಶ್ನೆ ಪತ್ರಿಕೆ ರೀತಿಯೇ ಹೋಲುವಂತೆ ಪ್ರಶ್ನೆಪತ್ರಿಕೆ ತಯಾರಿಸಿದ್ದಾರೆ. ಆ ಮೂಲಕ ನಕಲಿ ಪ್ರಶ್ನೆಪತ್ರಿಕೆ ಹರಿಬಿಟ್ಟು ಇದೇ ಒರಿಜಿನಲ್ ಅಂತ ಬಿಂಬಿಸಿದ್ದಾರೆ. ಸದ್ಯ ಈ ಬಗ್ಗೆ ಬೆಂಗಳೂರು ನಾರ್ತ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಯೂಟ್ಯೂಬ್ ಖಾತೆ ವಿರುದ್ಧ ದೂರು

ಪಿಯು ಮಂಡಳಿಯ ಜಂಟಿ ನಿರ್ದೇಶಕರು NiranjanShetty@NiranjanShetty9581 ಯೂಟ್ಯೂಬ್ ಖಾತೆ ವಿರುದ್ಧ ಬೆಂಗಳೂರು ನಾರ್ತ್ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು ಎಫ್​ಐಆರ್​ ದಾಖಲಾಗಿದೆ. ನಕಲಿ ಪ್ರಶ್ನೆಪತ್ರಿಕೆ ಹರಿಬಿಟ್ಟು ಇದು ಒರಿಜಿನಲ್​​, ಇದರ ಪ್ರತಿ ಬೇಕಾದಲ್ಲಿ ಫಾಲೋ, ಸಬ್ಸ್ಕ್ರೈಬ್ ಮಾಡಿ ಅಂತ ಲಿಂಕ್ ಶೇರ್ ಮಾಡಿದ್ದಾರೆ. ಕೇವಲ ಯೂಟ್ಯೂಬ್ ಸಬ್ಸ್ಕ್ರೈಬ್ ಗೋಸ್ಕರ ಪಿಯು ಪ್ರಶ್ನೆಪತ್ರಿಕೆ ಸೋರಿಕೆ ಆಗಿದೆ ಅಂತ ಬಿಂಬಿಸಿದ್ದಾರೆ. ಈ ರೀತಿ ಸುಳ್ಳು ಸುದ್ದಿ ಹರಡಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಲಾಗಿದೆ.

ಪೋಷಕರಿಗೆ ಆತಂಕ ಬೇಡ, ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ: ಭರತ್. ಎಸ್

ದ್ವಿತೀಯ ಪಿಯು ಪ್ರಿಪರೇಟರಿ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕ ಭರತ್. ಎಸ್​ ಪ್ರತಿಕ್ರಿಯಿಸಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆಯಲ್ಲಿ ಯಾರು ಲೀಕ್ ಮಾಡಿದ್ದಾರೆಂದು ಗೊತ್ತಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: SSLC ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್: ಮುಖ್ಯೋಪಾಧ್ಯಾಯರು ಸೇರಿ 8 ಮಂದಿ ಅರೆಸ್ಟ್

ಕೆಲವೊಂದು ಹಳೆಯ ಪ್ರಶ್ನೆ ಪತ್ರಿಕೆಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಫೇಕಾಗಿ ಲೀಕ್‌ ಮಾಡುತ್ತಿದ್ದಾರೆ. ಅವರ ಬಗ್ಗೆಯೂ ಹದ್ದಿನ ಕಣ್ಣಿಟ್ಟಿದ್ದೇವೆ. ಪೋಷಕರಿಗೆ ಆತಂಕ ಬೇಡ, ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ. ತನಿಖೆ ನಡೆಯುತ್ತಿರುವ ಹಿನ್ನೆಲೆ ನಾವು ಏನೂ ಮಾತನಾಡಲ್ಲ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸರ್ಕಾರಿ ಆಸ್ಪತ್ರೆಗೆ ಹೆಂಡತಿಯನ್ನು ನೋಡಲು ಬಂದಿದ್ದ ರೌಡಿಯ ಕೊಲೆ – Kannada News | Gangster killed in Chennai government hospital shocking news in kannada

ಚೆನ್ನೈ, ಜನವರಿ 12: ತಮಿಳುನಾಡಿನ ಚೆನ್ನೈನ ಕಿಲ್ಪಾಕ್ ಆಸ್ಪತ್ರೆಯಲ್ಲಿ ರೌಡಿಯನ್ನು ಕೊಲೆ ಮಾಡಲಾಗಿದೆ. ಚೆನ್ನೈನ (Chennai) ರಾಜಧಾನಿ ಕಿಲ್ಪಾಕ್‌ನಲ್ಲಿ ಸರ್ಕಾರಿ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಈ ಆಸ್ಪತ್ರೆ ಯಾವಾಗಲೂ ಜನದಟ್ಟಣೆಯಿಂದ ಕೂಡಿರುತ್ತದೆ. ಪ್ರತಿದಿನ ನೂರಾರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೆ, ಹೊರರೋಗಿಗಳು ಸಹ ಆಗಾಗ ಕಿಲ್ಪಾಕ್ ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಇಂದು (ಜನವರಿ 12) ಕಿಲ್ಪಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ರೌಡಿಗಳ ಗುಂಪೊಂದು ಕಿಲ್ಪಾಕ್ ಸರ್ಕಾರಿ ಆಸ್ಪತ್ರೆಗೆ ನುಗ್ಗಿ ಆತನನ್ನು ಕೊಲೆ ಮಾಡಿದೆ.

ಮೃತ ವ್ಯಕ್ತಿಯ ಹೆಸರು ಆದಿ ಎಂದು ತಿಳಿದುಬಂದಿದೆ. ರೌಡಿ ಆದಿ ವಿರುದ್ಧ ಈಗಾಗಲೇ ಹಲವಾರು ಕ್ರಿಮಿನಲ್ ಪ್ರಕರಣಗಳು ಬಾಕಿ ಇದ್ದು, ಕೊಲೆ ಪ್ರಕರಣದಲ್ಲಿ ಪ್ರಮುಖ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಪೊಲೀಸರು ಆತನನ್ನು ತನಿಖೆ ನಡೆಸುತ್ತಿದ್ದರು. ಆತನ ಹೆಂಡತಿ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಳು. ಹೀಗಾಗಿ ರೌಡಿ ಆದಿ ನಿನ್ನೆ ರಾತ್ರಿ ಹೆಂಡತಿಯನ್ನು ನೋಡಲು ಕಿಲ್ಪಾಕ್ ಸರ್ಕಾರಿ ಆಸ್ಪತ್ರೆಗೆ ಬಂದಿದ್ದ. ಆ ಸಮಯದಲ್ಲಿ, ಆಸ್ಪತ್ರೆ ಕಚೇರಿಯ ಆವರಣದ ಬಳಿ ಅಡಗಿಕೊಂಡಿದ್ದ ಮೂವರು ನಿಗೂಢ ವ್ಯಕ್ತಿಗಳು ಆದಿಯನ್ನು ಸುತ್ತುವರೆದು ಹರಿತವಾದ ಆಯುಧಗಳಿಂದ ಆತನನ್ನು ಕಡಿದು ಕೊಲೆ ಮಾಡಿದ್ದಾರೆ.

ಇದನ್ನೂ ಓದಿ: ತಾಯಿ ಮೇಲಿನ ದ್ವೇಷಕ್ಕೆ ಮಗು ಬಲಿ; ಕೊಲೆಗೂ ಮುನ್ನ 6 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರವೆಸಗಿದ್ದ ಪಾಪಿ!

ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರೌಡಿ ಆದಿ ರಕ್ತದ ಮಡುವಿನಲ್ಲಿ ಆಸ್ಪತ್ರೆ ಆವರಣದ ಹೆರಿಗೆ ವಾರ್ಡ್‌ಗೆ ಓಡಿಹೋದನೆಂದು ಹೇಳಲಾಗಿದೆ. ಆದರೆ, ಆ ಸ್ಥಳದಲ್ಲೇ ದುರಂತವಾಗಿ ಸಾವನ್ನಪ್ಪಿದ್ದಾನೆ. ಸರ್ಕಾರಿ ಆಸ್ಪತ್ರೆಯಂತಹ ಸುರಕ್ಷಿತ ಸ್ಥಳದಲ್ಲಿ ರಾತ್ರಿ ವೇಳೆ ನಡೆದ ಈ ಭೀಕರ ಕೊಲೆ ಆಸ್ಪತ್ರೆ ಸಿಬ್ಬಂದಿ, ರೋಗಿಗಳು ಮತ್ತು ಸಾರ್ವಜನಿಕರಲ್ಲಿ ತೀವ್ರ ಭಯ ಹುಟ್ಟಿಸಿದೆ.

ಈ ಬಗ್ಗೆ ಮಾಹಿತಿ ಪಡೆದ ಕಿಲ್ಪಾಕ್ ಸರ್ಕಾರಿ ಆಸ್ಪತ್ರೆ ಆಡಳಿತ ಮಂಡಳಿಯು ತಕ್ಷಣ ಪೊಲೀಸರಿಗೆ ದೂರು ನೀಡಿತು. ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು. ಘಟನಾ ಸ್ಥಳದಲ್ಲಿ ಕಂಡುಬಂದ ರಕ್ತದ ಕಲೆಗಳು, ಶಸ್ತ್ರಾಸ್ತ್ರದ ಕುರುಹುಗಳು ಮತ್ತು ಹತ್ತಿರದ ಕಣ್ಗಾವಲು ಕ್ಯಾಮೆರಾ ದೃಶ್ಯಗಳನ್ನು ತೀವ್ರವಾಗಿ ಪರಿಶೀಲಿಸಲಾಗುತ್ತಿದೆ. ಆದರೆ, ಕೊಲೆಗಾರರು ಹೆಲ್ಮೆಟ್ ಧರಿಸಿದ್ದರಿಂದ ಮುಖದ ಸುಳಿವು ಸಿಕ್ಕಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

WPL 2026: ಸತತ 3 ಎಸೆತಗಳಲ್ಲಿ 3 ವಿಕೆಟ್‌ ಉರುಳಿಸಿದ ಆರ್​ಸಿಬಿ; ಆದರೂ ಹ್ಯಾಟ್ರಿಕ್ ಸಿಗಲಿಲ್ಲ

Source link

ಕಲಬುರಗಿ ಪೊಲೀಸ್ ಕಮಿಷನರ್ ಕಚೇರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ – Kannada News | Kalaburagi Police ISO 9001: Enhanced Public Service and Efficiency

ಪೊಲೀಸ್ ಕಮಿಷನರ್​​ಗೆ ಪ್ರಶಸ್ತಿ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ, ಜನವರಿ 12: ಜನಸ್ನೇಹಿ ವ್ಯವಸ್ಥೆ, ತ್ವರಿತ ನಾಗರಿಕ ಸೇವೆ, ವೃತ್ತಿಪರತೆ ಹಾಗೂ ಆಡಳಿತದಲ್ಲಿ ಗುಣಮಟ್ಟ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಕಲಬುರಗಿ (Kalaburagi) ನಗರ ಪೊಲೀಸ್ ಕಮಿಷನರೇಟ್ ಅಮೂಲಾಗ್ರ ಸುಧಾರಣೆ ಹೊಂದಿದೆ. ಎಲ್ಲಾ ಮಾನದಂಡಗಳನ್ನು ಪರಿಗಣಿಸಿ ಅಂತಾರಾಷ್ಟ್ರೀಯ ISO 9001: 2015 ಪ್ರಶಸ್ತಿ ಲಭಿಸಿದ್ದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಇದಕ್ಕೆ ಕಾರಣರಾಗಿರುವ ಪ್ರತಿಯೊಬ್ಬ ಸಿಬ್ಬಂದಿಗಳಿಗೆ ಅಭಿನಂದನೆಗಳು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

ಪೊಲೀಸರು ಮತ್ತಷ್ಟು ಜನಸ್ನೇಹಿಯಾಗಬೇಕು: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಪೊಲೀಸ್ ಕಮಿಷನರ್ ಅವರಿಗೆ ಸಾಂಕೇತಿಕವಾಗಿ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ಪೊಲೀಸ್ ಆಯುಕ್ತಾಲಯಕ್ಕೆ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಸಿಕ್ಕಿದೆ. ಆದರೆ ಜನರಿಂದ ಹೊಗಳಿಕೆಯ ಪ್ರಶಸ್ತಿ ಪಡೆಯುವಲ್ಲಿ ಪೊಲೀಸರು ಮತ್ತಷ್ಟು ಜನಸ್ನೇಹಿ ಆದಾಗ ಮಾತ್ರ ಪೊಲೀಸರಿಗೆ ಜನರ ಸರ್ಟಿಫಿಕೇಟ್ ಸಿಗಲಿದೆ. ಈ ನಿಟ್ಟಿನಲ್ಲಿ ಪೊಲೀಸ್ ಸಿಬ್ಬಂದಿ ಶ್ರಮಿಸಬೇಕು ಎಂದು ಪೊಲೀಸರಿಗೆ ಸಲಹೆ ನೀಡಿದರು.

ಇದನ್ನೂ ಓದಿ: ಜೈಲಿನಲ್ಲಿರುವ ಮಗನಿಗೆ ಖಾಸಗಿ ಭಾಗದಲ್ಲಿ ಮೊಬೈಲ್​ ಕೊಂಡೊಯ್ದು ಸಿಕ್ಕಿಬಿದ್ದ ತಾಯಿ

ಜಿಲ್ಲೆಯಲ್ಲಿ ಕ್ರೈಂನಲ್ಲಿ ಸಾಕಷ್ಟು ಇಳಿಮುಖವಾಗಿದೆ. ಎಸ್ಸಿ-ಎಸ್.ಟಿ ಸಂಬಂಧಿಸಿದ ಕೇಸ್, ಸಾಮಾನ್ಯ ಅಪರಾಧ ಪ್ರಕರಣಗಳು ಗಣನೀಯವಾಗಿ ಕಮ್ಮಿಯಾಗಿವೆ. ಚೈನ್ ಕಳ್ಳತನಗಳು ಕೂಡಾ ಕಡಿಮೆಯಾಗಿವೆ ಎಂದ ಸಚಿವರು ಡ್ರಗ್ಸ್​​ಗೆ ಸಂಬಂಧಿಸಿದಂತೆ ಕೇಸ್​ಗಳು ಏರಿಕೆ ಆಗಿವೆ. ಡ್ರಗ್ಸ್ ಹಾಗೂ ಮಾದಕ ಪದಾರ್ಥಗಳ ಮಾರಾಟ ಚಟುವಟಿಕೆಯ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದರಿಂದ ಡ್ರಗ್ಸ್​ಗೆ ಸಂಬಂಧಿಸಿದ ಕೇಸ್​ಗಳು ಹೆಚ್ಚಳವಾಗಿವೆ. ಡ್ರಗ್ಸ್ ವಿರುದ್ದದ‌ ಮತ್ತಷ್ಟು ಕಠಿಣ ಕ್ರಮವಹಿಸಬೇಕಾಗಿದೆ ಎಂದರು.

ಸಕಾಲ, ಅಟಲ್‌ ಜನಸ್ನೇಹಿ ಕೇಂದ್ರದಿಂದ ಸಾರ್ವಜನಿಕ ಸೇವೆ ವಿಲೇವಾರಿಯಲ್ಲಿ ರಾಜ್ಯಕ್ಕೆ ಕಲಬುರಗಿ ಮೊದಲ ಸ್ಥಾನ, ಜಿಲ್ಲಾ ಪಂಚಾಯತನಲ್ಲಿ ತೆರಿಗೆ ವಸೂಲಾತಿಯಲ್ಲಿ ಕಲಬುರಗಿ ಜಿಲ್ಲೆ 13ನೇ ಸ್ಥಾನ ಪಡೆದಿದೆ. ಈಗ ಪೊಲೀಸ್ ಕಮಿಷನರೇಟ್ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದಿರುವುದು ಅತ್ಯಂತ ಖಷಿಯ ವಿಚಾರವಾಗಿದೆ ಎಂದು ಹೇಳಿದ್ದಾರೆ.

ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದ್ದಿಷ್ಟು 

ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಲಶ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ. ಕಲಬುರಗಿ ಪೊಲೀಸ್ ಕಮಿಷನರೇಟ್ ತನ್ನ ಅಮೂಲಾಗ್ರ ಬದಲಾವಣೆ, ಸಾರ್ವಜನಿಕರ ಸೇವೆ ವಿಸ್ತರಣೆ ಹಾಗೂ ಇತರೆ ವಿಭಾಗಗಳಲ್ಲಿ ಸುಧಾರಣೆ ತಂದಿರುವುದಕ್ಕೆ ಈ ಪ್ರಶಸ್ತಿ ಲಭಿಸಿದೆ. ಇದಕ್ಕೆ ಕಾರಣಕರ್ತರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.

ಮಾಹಿತಿ ಹಾಗೂ ತಂತ್ರಜ್ಞಾನ ವಿಭಾಗದಲ್ಲಿ ಗಣನೀಯ ಸುಧಾರಣೆ: ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ

ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಮಾತನಾಡಿ, ಸಾರ್ವಜನಿಕರ ಸೇವೆಗಳಲ್ಲಿ ಹಾಗೂ ಇತರೆ ವಿಭಾಗಗಳಲ್ಲಿ ಸುಧಾರಣೆ ತಂದ ಹಿನ್ನೆಲೆಯಲ್ಲಿ ಐ.ಎಸ್.ಓ-9001 2021 ಪ್ರಶಸ್ತಿಯನ್ನು ಕಲಬುರಗಿ ಪೊಲೀಸ್ ಕಮೀಷನರ್ ಕಚೇರಿಗೆ ನೀಡಲಾಗಿದೆ. ಸಾರ್ವಜನಿಕರ ಫೈಲ್​ಗಳು‌ ತ್ವರಿತವಾಗಿ ವಿಲೇವಾರಿಯಾಗುತ್ತಿವೆ. ಸಿಬ್ಬಂದಿಗಳ ರಜೆ,‌ ವೈದ್ಯಕೀಯ ಸೇವೆ, ವಿವಿಧ ವಿಭಾಗಗಳಲ್ಲಿ ಗಣನೀಯ ಬದಲಾವಣೆಯಾಗಿವೆ. ಕಮಿಷನರೇಟ್ ಅಡಿಯಲ್ಲಿನ ಪೊಲೀಸ್ ಠಾಣೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಲಾಗಿದೆ. ಮಾಹಿತಿ ಹಾಗೂ ತಂತ್ರಜ್ಞಾನ ವಿಭಾಗದಲ್ಲಿ ಗಣನೀಯ ಸುಧಾರಣೆ ಕಂಡಿದೆ. ಸಾರ್ವಜನಿಕ ಸೇವೆ ಮುಖ್ಯವಾಗಿ ಪಾಸ್ ಪೋರ್ಟ್ ವೆರಿಫಿಕೇಶನ್​ನಲ್ಲಿ ಸುಧಾರಣೆ ತರಲಾಗಿದೆ. ಒಂದು ವಾರದ ಒಳಗಾಗಿ ವಿಲೇವಾರಿ ಮಾಡಲು‌ ಕ್ರಮವಹಿಸಲಾಗಿದೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿದ್ರೆ ಎಲ್ಲ ಗೊತ್ತಾಗತ್ತೆ: ವಿನಯ್ ಗೌಡ – Kannada News | Bigg Boss Kannada Ex contestant Vinay Gowda talks about Toxic Teaser controversy

‘ಬಲರಾಮನ ದಿನಗಳು’ ಸಿನಿಮಾದಲ್ಲಿ ವಿನಯ್ ಗೌಡ ಅವರು ನಟಿಸಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರದ ಬಗ್ಗೆ ಮಾತನಾಡುವಾಗ ‘ಟಾಕ್ಸಿಕ್’ (Toxic Teaser) ಚಿತ್ರದ ಟೀಸರ್ ಬಗ್ಗೆಯೂ ಅವರು ಮಾತನಾಡಿದ್ದಾರೆ. ‘ಟಾಕ್ಸಿಕ್ ಟೀಸರ್ ಅಮೇಜಿಂಗ್ ಆಗಿದೆ. ಹಾಲಿವುಡ್ ಮಟ್ಟಕ್ಕೆ ನಮ್ಮ ಕನ್ನಡ ಸಿನಿಮಾ ಆಗುತ್ತಿದೆ. ಅದರ ಬಗ್ಗೆ ನಮಗೆ ಹೆಮ್ಮೆ ಇರಬೇಕು. ಅದನ್ನು ಗೇಲಿ ಮಾಡಬಾರದು. ಈಗ ಮಾತನಾಡೋರೆಲ್ಲ ಏನೂ ಮಾಡೇ ಇಲ್ಲವಾ? ಆ ರೀತಿಯದ್ದು ಏನೂ ನೋಡೇ ಇಲ್ಲವಾ? ಹೋಗಿ ಅವರ ಮೊಬೈಲ್​​ನಲ್ಲಿ ಗೂಗಲ್ ಸರ್ಚ್ ಹಿಸ್ಟರಿ ತೆಗೆದು ನೋಡಿದರೆ ಎಲ್ಲವೂ ಗೊತ್ತಾಗುತ್ತದೆ. ಟಾಕ್ಸಿಕ್ ಚಿತ್ರತಂಡಕ್ಕೆ ನಾವು ಸಪೋರ್ಟ್ ಮಾಡಬೇಕು. ನಮ್ಮ ಕನ್ನಡ ಚಿತ್ರರಂಗವನ್ನು ಅವರು ಹಾಲಿವುಡ್ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ನಮ್ಮವರೇ ಅದನ್ನು ಹಾಳು ಮಾಡಬಾರದು’ ಎಂದು ವಿನಯ್ ಗೌಡ (Vinay Gowda) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರತದ ಯುವಕರು ಅಪಾಯಗಳನ್ನು ಸ್ವೀಕರಿಸಲು ಹಿಂಜರಿಯಬೇಡಿ, ಸರ್ಕಾರ ನಿಮ್ಮೊಂದಿಗಿದೆ; ಪ್ರಧಾನಿ ಮೋದಿ – Kannada News | PM Narendra Modi addresses the concluding session of Viksit Bharat Young Leaders Dialogue 2026

ನವದೆಹಲಿ, ಜನವರಿ 12: ದೆಹಲಿಯಲ್ಲಿ “ಅಭಿವೃದ್ಧಿ ಹೊಂದಿದ ಭಾರತ- ಯುವ ನಾಯಕರ ಸಂವಾದ”ವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi), ಯುವಕರಿಗೆ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ಸಾಕಾರಗೊಳಿಸಲು ಮನವಿ ಮಾಡಿದರು. ಯುವಕರ ಯಶಸ್ಸು ದೇಶವನ್ನು ಉನ್ನತೀಕರಿಸುತ್ತದೆ. ಯುವಕರು ಮೊದಲು ರಾಷ್ಟ್ರದ ಪ್ರಜ್ಞೆಯನ್ನು ಹೊಂದಿರಬೇಕು. ಯುವಕರ ಶಕ್ತಿಯೇ ಭಾರತದ ಶಕ್ತಿಯಾಗುತ್ತದೆ. ಯುವಕರು ಎಂದಿಗೂ ಅಪಾಯಗಳನ್ನು ಅಥವಾ ಸವಾಲುಗಳನ್ನು ಸ್ವೀಕರಿಸಲು ಹಿಂಜರಿಯಬೇಡಿ, ಸರ್ಕಾರ ಸದಾ ನಿಮ್ಮೊಂದಿಗೆ ಇರುತ್ತದೆ ಎಂದು ಅವರು ಹೇಳಿದರು.

“ಇಂದು ನೀವು ವಿಕಸಿತ ಭಾರತವನ್ನು ಸಾಧಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೀರಿ. 2047ರಲ್ಲಿ ನಮ್ಮ ಸ್ವಾತಂತ್ರ್ಯದ 100 ವರ್ಷಗಳು ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಇದು ನಿಮಗೆ ಬಹಳ ಮುಖ್ಯವಾದ ಸಮಯ. ಇದು ನಿಮಗೆ ಒಂದು ಸುವರ್ಣಾವಕಾಶ, ನಿಮ್ಮ ಸಾಮರ್ಥ್ಯವು ಭಾರತದ ಸಾಮರ್ಥ್ಯವಾಗಿರುತ್ತದೆ, ನಿಮ್ಮ ಯಶಸ್ಸು ಭಾರತದ ಯಶಸ್ಸನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದು” ಎಂದು ಮೋದಿ ಯುವಕರಿಗೆ ಕಿವಿಮಾತು ಹೇಳಿದರು.

ಇದನ್ನೂ ಓದಿ: Somnath Temple: ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

ಜನವರಿ 12ರಂದು ಭಾರತವು ರಾಷ್ಟ್ರೀಯ ಯುವ ದಿನವನ್ನು ಆಚರಿಸುತ್ತದೆ. ಇಂದು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ. ಅವರ ಆಲೋಚನೆಗಳು ಪ್ರತಿಯೊಬ್ಬ ಯುವಕರಿಗೂ ಸ್ಫೂರ್ತಿ ಮತ್ತು ಮಾರ್ಗದರ್ಶಿಯಾಗಿದೆ. ಅದಕ್ಕಾಗಿಯೇ ಜನವರಿ 12 ಅನ್ನು ವಿಕಸಿತ ಭಾರತ ಯುವ ನಾಯಕರ ಸಂವಾದವಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಳಿಗಾಲದಲ್ಲಿ ನೀರು ಕಡಿಮೆ ಕುಡಿಯುತ್ತೀರಾ? ಹಾಗಿದ್ರೆ ಈ ಸಮಸ್ಯೆ ಕಟ್ಟಿಟ್ಟ ಬುತ್ತಿ – Kannada News | Kidney Stone Risk: Are You Drinking Enough Water?

ಕೆಲವರಿಗೆ ನೀರು (Water) ಕುಡಿಯುವುದು ಎಂದರೆ ಅಲರ್ಜಿ. ನೀರು ಎಂದರೆ ಸಾಕು ಮಾರು ದೂರ ಹೋಗುವವರು ನಮ್ಮ ಮಧ್ಯೆಯೇ ಇದ್ದಾರೆ. ಒತ್ತಡದ ಜೀವನ, ಕೆಲಸದ ಚಿಂತೆ ಮತ್ತು ಬಾಯಾರಿಕೆಯಾಗದಿರುವುದು ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಜನ ನೀರು ಕುಡಿಯುವ ಅಭ್ಯಾಸದ ಬಗ್ಗೆ ಹೆಚ್ಚಾಗಿ ಗಮನ ಕೊಡುವುದಿಲ್ಲ. ಆದರೆ ದೇಹಕ್ಕೆ ಬೇಕಾದಷ್ಟು ಅಂದರೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದಿದ್ದರೆ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಆಹ್ವಾನ ನೀಡಿದಂತಾಗಬಹುದು ಎಂಬುದು ನಿಮಗೆ ತಿಳಿದಿದೆಯೇ… ಹೌದು, ನೀರು ದೇಹದಿಂದ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ, ಆದರೆ ಅದರ ಪ್ರಮಾಣ ಕಡಿಮೆಯಾದಾಗ, ದೇಹದ ಸಮತೋಲನವು ತೊಂದರೆಗೊಳಗಾಗಲು ಪ್ರಾರಂಭಿಸುತ್ತದೆ. ಆರಂಭದಲ್ಲಿ, ಇದರ ಲಕ್ಷಣಗಳು ಸೌಮ್ಯವಾಗಿರಬಹುದು, ಜನರು ಇದನ್ನು ನಿರ್ಲಕ್ಷಿಸುತ್ತಾರೆ. ಕ್ರಮೇಣ, ಈ ಸಮಸ್ಯೆ ಹೆಚ್ಚಾಗುತ್ತದೆ ಬಳಿಕ ಇದು ಮೂತ್ರಪಿಂಡದ ಕಲ್ಲುಗಳಾಗಿ ಬೆಳೆಯಬಹುದು. ಹಾಗಾದರೆ ನೀರು ಕಡಿಮೆ ಕುಡಿಯುವ ಅಭ್ಯಾಸ ಕಿಡ್ನಿ ಸ್ಟೋನ್ ಗೆ ಹೇಗೆ ಕಾರಣವಾಗುತ್ತದೆ, ಅದರ ಲಕ್ಷಣಗಳು ಹೇಗಿರುತ್ತದೆ ಮತ್ತು ಅದನ್ನು ತಡೆಗಟ್ಟುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನೀರು ಕಡಿಮೆ ಕುಡಿಯುವ ಅಭ್ಯಾಸವು ಮೂತ್ರಪಿಂಡದ ಕಲ್ಲುಗಳಿಗೆ ಹೇಗೆ ಕಾರಣವಾಗುತ್ತದೆ?

ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಸಿಗದಿದ್ದಾಗ, ಮೂತ್ರದ ಪ್ರಮಾಣ ಕಡಿಮೆಯಾಗುತ್ತದೆ ಎಂದು ಸಫ್ದರ್ಜಂಗ್ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಡಾ. ಹಿಮಾಂಶು ವರ್ಮಾ ಹೇಳುತ್ತಾರೆ. ಇದು ಮೂತ್ರಪಿಂಡಗಳಲ್ಲಿನ ಖನಿಜಗಳು ಮತ್ತು ಲವಣಗಳು ಸರಿಯಾಗಿ ಹೊರಹಾಕುವುದನ್ನು ತಡೆಯುತ್ತದೆ. ಅಷ್ಟೇ ಅಲ್ಲ, ಅದು ಕ್ರಮೇಣ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ. ಈ ಸಂಗ್ರಹವಾದ ವಸ್ತುಗಳು ಅಂತಿಮವಾಗಿ ಮೂತ್ರಪಿಂಡದ ಕಲ್ಲುಗಳನ್ನು ರೂಪಿಸುತ್ತವೆ.ನಿರಂತರವಾಗಿ ಕಡಿಮೆ ನೀರು ಕುಡಿಯುವುದರಿಂದ ಮೂತ್ರವು ಕೇಂದ್ರೀಕೃತವಾಗುತ್ತದೆ, ಕಲ್ಲಿನ ರಚನೆಯ ಸಾಧ್ಯತೆ ಹೆಚ್ಚಾಗುತ್ತದೆ. ಬೆವರು ಕಡಿಮೆ ಬರುವವರಲ್ಲಿ, ಉಪ್ಪು ಮತ್ತು ಪ್ರೋಟೀನ್ ಅಧಿಕವಾಗಿರುವ ಆಹಾರವನ್ನು ಸೇವಿಸುವವರಲ್ಲಿ ಈ ರೀತಿಯ ಅಪಾಯ ಹೆಚ್ಚಾಗಿ ಕಂಡುಬರುತ್ತದೆ. ಹೆಚ್ಚುವರಿಯಾಗಿ, ದೀರ್ಘಕಾಲದವರೆಗೆ ಮೂತ್ರವನ್ನು ಹಿಡಿದಿಟ್ಟುಕೊಳ್ಳುವುದು ಮತ್ತು ಚಳಿಗಾಲದಲ್ಲಿ ನೀರು ಕಡಿಮೆ ಕುಡಿಯುವುದು ಸಹ ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗುವ ಅಪಾಯಕಾರಿ ಅಂಶಗಳಾಗಬಹುದು.

ದೇಹದಲ್ಲಿ ನೀರಿನ ಕೊರತೆಯಾದಾಗ ಕಂಡುಬರುವ ಲಕ್ಷಣಗಳು:

ನೀರಿನ ಕೊರತೆ ಇದ್ದಾಗ, ದೇಹವು ಅನೇಕ ಸಂಕೇತಗಳನ್ನು ನೀಡಲು ಪ್ರಾರಂಭಿಸುತ್ತದೆ. ಪದೇ ಪದೇ ದಣಿವು, ಒಣ ಬಾಯಿ ಮತ್ತು ತಲೆನೋವು ಸಾಮಾನ್ಯ ಲಕ್ಷಣಗಳಾಗಿವೆ. ಗಾಢ ಹಳದಿ ಮೂತ್ರ ಬರುವುದು ಕೂಡ ನಿರ್ಜಲೀಕರಣದ ಸಂಕೇತವೂ ಆಗಿರಬಹುದು. ಕೆಲವರಲ್ಲಿ ತಲೆತಿರುಗುವಿಕೆ, ಮಲಬದ್ಧತೆ ಮತ್ತು ಒಣ ಚರ್ಮದ ಸಮಸ್ಯೆಯೂ ಕಂಡುಬರಬಹುದು. ಈ ರೀತಿ ನೀರಿನ ಕೊರತೆಯು ದೀರ್ಘಕಾಲದವರೆಗೆ ಮುಂದುವರಿದರೆ, ಅದು ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳು ಮತ್ತು ಹೊಟ್ಟೆಯ ಕೆಳಭಾಗ ಅಥವಾ ಬೆನ್ನಿನ ಕೆಳಭಾಗದಲ್ಲಿ ಬರುವ ನೋವಿಗೆ ಕಾರಣವಾಗಬಹುದು.

ಇದನ್ನೂ ಓದಿ: ಊಟ ಮಾಡಿದ ತಕ್ಷಣ ನೀರು ಕುಡಿಯುವ ಅಭ್ಯಾಸ ಎಷ್ಟು ಡೇಂಜರ್‌ ನೋಡಿ

ತಡೆಯುವುದು ಹೇಗೆ?

  • ಪ್ರತಿನಿತ್ಯ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ.
  • ಬಾಯಾರಿಕೆಯಾಗುವ ಮೊದಲೇ ನೀರು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ.
  • ಚಳಿಗಾಲದಲ್ಲಿಯೂ ನೀರಿನ ಸೇವನೆಯನ್ನು ಕಡಿಮೆ ಮಾಡಬೇಡಿ.
  • ಅತಿಯಾದ ಉಪ್ಪು ಮತ್ತು ಜಂಕ್ ಫುಡ್ ಸೇವನೆ ಮಾಡುವುದನ್ನು ತಪ್ಪಿಸಿ.
  • ಮೂತ್ರವನ್ನು ಹಿಡಿದಿಟ್ಟುಕೊಳ್ಳುವ ಅಭ್ಯಾಸವನ್ನು ಬಿಟ್ಟುಬಿಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link