Category Archives: Blog

Your blog category

Horoscope Today 12 January : ಇಂದು ಈ ರಾಶಿಯವರು ಇಷ್ಟಪಟ್ಟವರನ್ನು ದೂರ ಮಾಡಿಕೊಳ್ಳುವರು – Kannada News | Horoscope Today: January 12, 2026 Daily Zodiac Predictions and Lucky Signs

ಮೇಷ ರಾಶಿ:

ಯಾವುದೇ ನಿರ್ಬಂಧಗಳು ಇಲ್ಲದೇ ಆಲಸ್ಯದಿಂದ ಕಛೇರಿಯ ಕೆಲಸಗಳು ವಿಳಂಬವಾಗುವುದು. ನಿಮ್ಮ ಬಗ್ಗೆ ಪ್ರಶಂಸೆಯ ನುಡಿಗಳು ಕೇಳಿಬರಬಹುದು. ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣದ ಕೊರತೆ ಇರುವುದು. ನಿಮ್ಮ ದ್ವೇಷವು ಬಲವುಳ್ಳವರಲ್ಲಿ ಬೇಡ. ಸುಮ್ಮನೇ ಆಪ್ತರ ಮೇಲೆ‌ ಸಂಶಯವನ್ನು ಇಟ್ಟುಕೊಳ್ಳುವುದು ಬೇಡ. ಹೂಡಿಕೆಯನ್ನು ಹಿಂಪಡೆಯುವ ಸಲಹೆಯು ನಿಮಗೆ ಬರಬಹುದು. ಉದ್ವೇಗದಲ್ಲಿ ಇದ್ದರೂ ಸಮಾಧಾನಿಗಳಂತೆ ತೋರುವಿರಿ.‌ ಸತ್ಕರ್ಮದಿಂದ ಬರುವ ಪುಣ್ಯದ ಫಲವು ಇಂದು ಸಿಗುವುದು. ಸಹೋದ್ಯೋಗಿಗಳ ವರ್ತನೆಯು ನಿಮಗೆ ಆಚ್ಚರಿಗೊಳಿಸೀತು. ಸಿಟ್ಟು ಮಾಡಿಕೊಂಡು ಆಗಬೇಕಾದ ಕೆಲಸವನ್ನು ಮಾಡಿ ಮುಗಿಸುವಿರಿ.

ವೃಷಭ ರಾಶಿ:

ಆಸ್ತಿಯ ವಿಚಾರ ಬಂದಾಗ ಮೌನ ತಾಳುವಿರಿ. ಬಹಳ ದಿನಗಳ ಅನಂತರ ಸಾರ್ವಜನಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಎಲ್ಲರ ಜೊತೆ ಸೇರಿ ಉತ್ಸಾಹದಿಂದ ಪಾಲ್ಗೊಳ್ಳುವಿರಿ. ನಿಮ್ಮ ನಿರುದ್ಯೋಗದ ಸ್ಥಿತಿಯು ದಾಯಾದಿಗಳಿಗೆ ಸಂತಸವಗುವುದು. ಸಕಾರಾತ್ಮಕ ಆಲೋಚನೆಗಳನ್ನು ನೀವು ಆಪ್ತರ ಜೊತೆ ಹಂಚಿಕೊಳ್ಳುವಿರಿ. ದೇಹದ ಬಗ್ಗೆ ಅತಿಯಾದ ಮೋಹವಿರುವುದು. ನಿಮ್ಮ ಯೋಜನೆಗೆ ಬೆನ್ನೆಲುಬಾಗಿ ನಿಲ್ಲುವವರು ಬೇಕಾಗಿದ್ದರೆ. ಅಧಿಕ ಖರ್ಚನ್ನು ಇಂದು ಮಾಡಬೇಕಾಗುವುದು. ಸಾಲಬಾಧೆಯು ನಿಮ್ಮನ್ನು ತೀವ್ರವಾಗಿ ಕಾಡುವುದು.‌ ನಿಮ್ಮ ದುರಭ್ಯಾಸವನ್ನು ಇನ್ನೊಬ್ಬರಿಗೂ ಹಿಡಿಸುವ ಸಾಧ್ಯತೆ ಇದೆ. ಸುಮ್ಮನೇ ಇರುವುದು ನಿಮಗೆ ಇಂದು ಪ್ರಿಯವಾದೀತು. ಹೂಡಿಕೆಯಿಂದ ಹಣವನ್ನು ಪಡೆಯುವಿರಿ.

ಮಿಥುನ ರಾಶಿ:

ಮಕ್ಕಳಿಗೆ ನಿರಾಸೆಯಾಗದಂತೆ ನಡೆದುಕೊಳ್ಳಿ. ಶತ್ರುವಿನ ಮೇಲೆ ಸೇಡು ತೀರಿಸಿಕೊಳ್ಳಲು ಅಧಿಕ ಖರ್ಚನ್ನು ಮಾಡಬೇಕಾಗುವುದು. ಉದ್ಯಮಿಗಳಿಗೆ ನೌಕರರ ಕಲಹವನ್ನು ಸರಿ ಮಾಡುವುದೇ ಹೆಚ್ಚಾಗುವುದು. ಸ್ನೇಹಿತರ ಸಹಕಾರದಿಂದ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಪ್ರೀತಿಯಲ್ಲಿ ನಿಮಗೆ ಮೋಸವಾಗುವುದು. ಉದ್ಯಮಕ್ಕೆ ಬೇಕಾದ ವಿವರಗಳನ್ನು ಅನುಭವಿಗಳಿಂದ ಪಡೆಯಿರಿ. ಸ್ನೇಹಿತನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವಿರಿ. ಅಪರಿಚಿತರು ಬೇರೆ ಊರಿನಲ್ಲಿ ಸ್ನೇಹಿತರಾಗಬಹುದು. ಅಸಂಬದ್ಧ ಮಾತುಗಳ ನಿಮ್ಮನ್ನು ವ್ಯಕ್ತಿತ್ವವನ್ನು ತಿಳಿಸುವುದು. ಪ್ರಭಾವೀ ವ್ಯಕ್ತಿಗಳ ಭೇಟಿಯು ನಿಮ್ಮ ಜೀವನೋತ್ಸಾಹವನ್ನು ಹೆಚ್ಚಿಸುವುದು.

ಕರ್ಕಾಟಕ ರಾಶಿ:

ಹಣಕಾಸಿನಲ್ಲಿ ವಂಚನೆಯಾಗಿರುವುದು ಬಹಳ ದಿನಗಳ ಅನಂತರ ಗೊತ್ತಾಗಿ ಬೇಸರವಾಗುವುದು. ಯಾರ ವಿಚಾರವನ್ನೂ ಒಪ್ಪಿಕೊಳ್ಳಲಾರಿರಿ. ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮನ್ನು ದುರುಪಯೋಗ ಮಾಡಿಕೊಳ್ಳುವ ಸಂಭವಿದೆ.‌ ನೀವು ಆಯ್ಕೆ ಆಗಿದ್ದು ಯಾವುದಕ್ಕೋ ಕೆಲಸವು ಮತ್ಯಾವುದೋ ಆಗಲಿದೆ. ಅನಾರೋಗ್ಯವು ಚಿಕಿತ್ಸೆಯಾಗಿ ಪರಿಣಮಿಸಬಹುದು. ಉತ್ತಮ ಭೂಮಿಯ ಲಾಭವನ್ನು ಪಡೆಯುವಿರಿ. ಅಪಾಯಯಕ್ಕೆ ಸಿಕ್ಕಿಕೊಳ್ಳುವ ಸಂಭವವಿತ್ತು. ಧನವ್ಯಯವನ್ನು ನಿಮ್ಮ ಜಾಣ್ಮೆಯಿಂದ ತಪ್ಪಿಸಿಕೊಳ್ಳುವಿರಿ‌. ಸ್ತ್ರೀಯರಿಂದ‌ ಕೆಲವು ಸಮಸ್ಯೆಯು ಬರಲಿದೆ. ಅಪರಿಚಿತರಿಗೆ ಇಂದು ಅಲ್ಪ ಧನಸಹಾಯವನ್ನು ಮಾಡಬೇಕಾಗುವುದು. ಕೋಪದ ನಿಯಂತ್ರಣವು ಕಷ್ಟವಾದೀತು. ತಪ್ಪಿನ ಕಾರಣಕ್ಕೆ ನಿಮ್ಮ ಬಳಿ ಕ್ಷಮೆಯನ್ನು ಕೇಳಬಹುದು.

ಸಿಂಹ ರಾಶಿ:

ಬಂದ ಹಣವನ್ನು ಖರ್ಚಾಗದಂತೆ ಸಂಗ್ರಹಿಸಲು ಪ್ರಯತ್ನಿಸಿ. ಆರ್ಥಿಕ ವಿಚಾರದಲ್ಲಿ ನಿಮಗೆ ಯಾವಾಗಲೂ ಅಸಮಾಧನ. ಇಲ್ಲವಾದರೆ ಸಂಪತ್ತನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಅಸಾಧ್ಯವನ್ನು ಸಾಧಿಸುವ ಹಠವು ಬೇಡವಾದೀತು. ಸಾಹೋದರ್ಯದಲ್ಲಿ ಅನಗತ್ಯ ಮಾತುಗಳು ಬರಬಹುದು. ಉದ್ಯಮದಲ್ಲಿ ಹಿನ್ನಡೆಯಾಗುವುದು ನಿಮಗೆ ಮೊದಲೇ ಗೊತ್ತಿದ್ದೂ ಪ್ರಯತ್ನಿಸುವಿರಿ. ಸಂಸ್ಥೆಯ ಮುಖಗಯಸ್ಥರಾಗಲು ಆಹ್ವಾನವು ಬರಬಹುದು. ಭೂಮಿಯಿಂದ ಸಂಪತ್ತನ್ನು ಕಳೆದುಕೊಳ್ಳುವಿರಿ. ಅನಪೇಕ್ಷಿಯ ವಿಚಾರವನ್ನು ಪ್ರಸ್ತಾಪಿಸಿಕೊಂಡು ಕಾಲಹರಣ ಮಾಡುವಿರಿ. ತಾಯಿಯ ವಿಚಾರದಲ್ಲಿ ನೀವು ಇಂದು ಕೋಪಗೊಳ್ಳುವ ಸಾಧ್ಯತೆ ಇದೆ.

ಕನ್ಯಾ ರಾಶಿ:

ಆತ್ಮಗೌರವವನ್ನು ಕೆಡಿಸಿಕೊಳ್ಳುವ ಸಂದರ್ಭ ಬರಬಹುದು. ಮಕ್ಕಳ‌ ಕಾರ್ಯದಿಂದ ನಿಮಗೆ ಅಪ್ರಶಂಸೆಯು ಬರಬಹುದು. ಸ್ತ್ರೀಯರ ಉಪಸ್ಥಿತಿಯು ನಿಮಗೆ ಬಲವನ್ನು ತಂದುಕೊಡುವುದು. ವಿದೇಶದ ಮಿತ್ರರ ಸಹಾಯದಿಂದ ನೀವು ಉದ್ಯಮವು ವಿಸ್ತಾರವಾಗಬಹುದು. ಅಧಿಕ ಓಡಾಟದಿಂದ ನೀವು ಆಯಾಸಗೊಳ್ಳುವಿರಿ. ಇಂದು ಹಣದ ಹರಿವು ಅಲ್ಪವಾಗಿ ಇರುವುದು. ಆಪ್ತರನ್ನು ಕಳೆದುಕೊಂಡು ಬೇಸರಿಸುವಿರಿ. ವ್ಯಾಪಾರದ ನಷ್ಟವನ್ನು ನಿಮಗೆ ಅರಗಿಸಿಕೊಳ್ಳಲಾಗದು. ಆಯಾಸ ಹೆಚ್ಚಾದ ಕಾರಣ ಕಾರ್ಯದಲ್ಲಿ ಉತ್ಸಾಹ ಕಡಿಮೆ ಇರಲಿದೆ‌. ಪ್ರೇಮಿಯ ಜೊತೆ ಹರಟೆ ಹೊಡೆಯುತ್ತ ದಿನವನ್ನು ಕಳೆಯುವಿರಿ. ಸಂಪತ್ತು ಮತ್ತಾವುದೋ ರೂಪದಲ್ಲಿ ಬಂದು ಸೇರುತ್ತದೆ ಎಂಬ ನಂಬಿಕೆ ಇರಲಿದೆ.

ತುಲಾ ರಾಶಿ:

ಶತ್ರುಗಳ ಕಾರಣದಿಂದ ಖರ್ಚುನ್ನು ಮಾಡಬೇಕಾದ ಸ್ಥಿತಿಯು ಬರಲಿದೆ. ಮನಶ್ಶಾಂತಿಗಾಗಿ ಧಾರ್ಮಿಕ ಕಾರ್ಯಗಳನ್ನು ಮಾಡಿಸುವಿರಿ. ಅಕಾಲದಲ್ಲಿ ಸೇವಿಸಿದ ಆಹಾರದಿಂದ ಆರೋಗ್ಯದಲ್ಲಿ ಅಸ್ತವ್ಯಸ್ತ. ವಚನ ಭ್ರಷ್ಟರಾಗುವ ಸಾಧ್ಯತೆ ಇದೆ. ಹೊಸ ಸಂಬಂಧದ ಕಡೆ ನಿಮ್ಮ ಚಿತ್ತವು ಇರಲಿದೆ. ನಿರಂತರ ಕೆಲಸವನ್ನು ಮಾಡುವುದು ಇಷ್ಟವಾಗಲಿದೆ. ಸಂಗಾತಿಯ ಭಾವನೆಗೆ ಬೆಲೆ ಕೊಟ್ಟು ಸಂತೋಷಪಡಿಸುವಿರಿ. ವೈವಾಹಿಕ ಸಂಬಂಧವನ್ನು ಸರಿಯಾಗಿ ಇಟ್ಟುಕೊಳ್ಳಿ. ಗೃಹನಿರ್ಮಾಣವು ಧನಾಭಾವದಿಂದ ಮುಂದೆ ಹೋಗುವುದು. ಹಳೆಯ ಘಟನೆಗಳು ನಿಮ್ಮನ್ನು ಕಾಡಬಹುದು. ಆತಂಕದಿಂದ ನಿಮಗೆ ಮುಕ್ತಿ ಸಿಗಲಿದೆ. ಸಂಗಾತಿಯ ಮಾತಿಗೆ ಸಕಾರಾತ್ಮಕವಾಗಿರಿ.

ವೃಶ್ಚಿಕ ರಾಶಿ:

ಅನಿರೀಕ್ಷಿತ ಮಾತುಗಳನ್ನು ಕೇಳಬೇಕಾದ ಸ್ಥಿತಿ‌ಯು ಬರಬಹುದು. ಸಣ್ಣ ಆರೋಗ್ಯದ ತೊಂದರೆಯೂ ನಿಮ್ಮ‌ ಮನಸ್ಸಿಗೆ ಕಿರಿಕಿರಿಯನ್ನು ಉಂಟುಮಾಡುವುದು. ಕಾರ್ಯದಲ್ಲಿ ವೇಗವು ಕುಂಠಿತವಾಗುವುದು. ಸರ್ಕಾರದಿಂದ ನಿಮಗೆ ಸಹಾಯ ಸಿಗದೇ ಹೋಗಬಹುದು. ನಿಮ್ಮ ಕೆಲಸವು ಸಂದೇಹಕ್ಕೆ ಆಸ್ಪದ ಕೊಡುವುದು ಬೇಡ. ಯಶಸ್ಸನ್ನು ಪಡೆಯುವ ಹಂಬಲವಿರಲಿದೆ. ನೀವು ನೋಡಿದ್ದು ಮಾತ್ರವೇ ಸತ್ಯ ಎಂದು ತಿಳಿದುಕೊಳ್ಳುವುದು ಬೇಡ. ಇಂದು ಯಾರಿಗೂ ನಿಮ್ಮ ಅವಶ್ಯಕತೆ ಇಲ್ಲದೇ ಹೋಗಬಹುದು. ಸ್ನೇಹಿತರಿಗೆ ಸಾಲವಾಗಿ ಹಣವನ್ನು ಪುನಃ ಬರುವ ನಿರೀಕ್ಷೆ ಇಲ್ಲದೇ ಕೊಡುವಿರಿ. ಸಾಮಾಜಿಕ ತಾಣದಿಂದ ಪ್ರೇಮವು ಉಂಟಾಗಬಹುದು.

ಧನು ರಾಶಿ:

ಉದ್ಯಮದಿಂದ ಉತ್ತಮ ಆದಾಯ ಸಿಗಬಹುದು.‌ ಯಾರ ಬಳಿಯೂ ಸಹಾಯ ಹಸ್ತವನ್ನು ಚಾಚದೇ ಸ್ವಂತ ಬಲದ ಮೇಲೆ ಬರುವ ಆಸೆ ಇರಲಿದೆ. ನಿಮ್ಮ ನಿಷ್ಕಾಳಜಿಯಿಂದ ಅನಾಯಾಸವಾಗಿ ಬರುವ ಆದಾಯವು ಸಿಗದೇ ಹೋಗುವುದು. ಸಂಗಾತಿಯಿಂದ ಅವಮಾನವಾಗುವುದು. ಆರ್ಥಿಕಸ್ಥಿತಿಯು ನಿಮಗೆ ಖುಷಿಯನ್ನು ಕೊಟ್ಟರೂ ನೆಮ್ಮದಿ‌ ಮಾತ್ರ ಇರದು. ದ್ವೇಷವನ್ನು ತೀರಿಸಿಕೊಳ್ಳಲು ಸಮಯವನ್ನು ಕಾಯುವಿರಿ. ಚಂಚಲ ಸ್ವಭಾವವು ತಾನಾಗಿಯೇ ಕಡಿಮೆಯಾಗಿದ್ದು ಅಚ್ಚರಿ ಆಗಬಹುದು. ವೃತ್ತಿಯಲ್ಲಿ ಬಂದ ಮಾತಿನಿಂದ ನೀವು ಉದ್ವೇಗಗೊಳ್ಳುವ ಅವಶ್ಯಕತೆ ಇರುವುದಿಲ್ಲ. ಕೆಲವರ ವಿಚಾರದಲ್ಲಿ ನಿಮ್ಮ ದೃಷ್ಟಿಯನ್ನು ಬದಲಿಸಿಕೊಳ್ಳುವುದೇ ಯೋಗ್ಯವಾದುದು.

ಮಕರ ರಾಶಿ:

ಒಳ್ಳೆಯ ವ್ಯವಸ್ಥೆಯನ್ನು ಇಟ್ಟುಕೊಂಡು ಸರಿಯಾದ ಸೇವೆ ಕೊಡಲು ಕಷ್ಟವಾಗಬಹುದು. ಬಂಧುಗಳ ವಿಚಾರದಲ್ಲಿ‌ ತೃಪ್ತಿ‌ ಇರದು. ಉದ್ಯೋಗದಲ್ಲಿ ಭಡ್ತಿಗಾಗಿ ಕಾಯುತ್ತಿದ್ದು ಇಂದು ಸಿಗಬಹುದು. ಸ್ನೇಹಿರಿಂದ ನಿಮಗೆ ಬಹುಮಾನ ಸಿಗಬಹುದು. ದೂರದ ಊರಿಗೆ‌ ಒಬ್ಬರೇ ವಾಹನ ಚಾಲಾಯಿಸುವಿರಿ. ವ್ಯಾಪರದಲ್ಲಿ‌ ಮಧ್ಯವರ್ತಿಗಳಿಂದ ನಿಮ್ಮ ವ್ಯಾಪಾರವು ಕುಂಠಿತವಾಗುವುದು. ನೀವು ಮಾಡುವ ಸಣ್ಣ ಕೆಲಸಕ್ಕೂ ಪ್ರಶಂಸೆಯನ್ನು ಅಪೇಕ್ಷಿಸುವಿರಿ. ಅನ್ಯ ಕರೆಗಳಿಂದ ಮೋಸದ ಜಾಲಕ್ಕೆ ಸಿಕ್ಕಬಹುದಾದ ಸಾಧ್ಯತೆ ಇದೆ. ಆಭರಣ ಖರೀದಿಯಿಂದ ಮುಂದಕ್ಕೆ ಬಳಕೆಯಾಗಬಹುದು. ಉತ್ತಮ‌ ಆಹಾರವನ್ನು ಪಡೆಯಲು ಯತ್ನಿಸಿ.‌ ಸ್ನೇಹಿತರ ಸಹಕಾರದಿಂದ ಸ್ಥಿರಾಸ್ತಿಯನ್ನು ಖರೀದಿಸುವಿರಿ.

ಕುಂಭ ರಾಶಿ:

ಚಾಂಚಲ್ಯದ ಮನಸ್ಸಿನಿಂದ ಕೆಲವು ನಿರ್ಧಾರಗಳನ್ನು ಗಟ್ಟಿಯಾಗಿಸಲು ಕಷ್ಟವಾದೀತು. ನಿಮ್ಮ ಪುಟ್ಟ ಪ್ರಪಂಚದಿಂದ ಹೊರಬರಲು ತಯಾರಾಗುವಿರಿ‌. ಬಂಧುಗಳ ನಕಾರಾತ್ಮಕ ಮಾತುಗಳಿಂದ ನಿಮಗೆ ಬೇಸರವಾದೀತು. ಆಡಿದ ಮಾತಿಗೆ ಕ್ಷಮೆ ಕೇಳುವಿರಿ. ನಿಮ್ಮ‌ ಸುರಕ್ಷತೆಯಲ್ಲಿ ನೀವಿರುವುದು ಉತ್ತಮ. ಸಂಗಾತಿಯ ಬಗ್ಗೆ ಧನಾತ್ಮಕ‌ ಅಂಶಗಳು ಕೇಳಿಬರಬಹುದು. ಬೇರೆ ವಿದೇಶದ ಸಂಪರ್ಕದಿಂದ ನಿಮಗೆ ಅನನುಕೂಲವಾಗಲಿದೆ. ನಿಮ್ಮ ಗೌಪ್ಯ ವಿಚಾರವನ್ನು ಮುಚ್ಚಿಡಲು ಪ್ರಯತ್ನಿಸುವಿರಿ. ನಿಮ್ಮ ನಿಲುವು ಕೆಲವರಿಗೆ ಇಷ್ಟವಾಗುವುದು. ಅತಿಥಿಗಳ ಆಗಮನವಾಗಲಿದೆ. ನಿರುದ್ಯೋಗದ ಸ್ಥಿತಿಯು ದಾಯಾದಿಗಳಿಗೆ ಸಂತಸವಗುವುದು. ಕಛೇರಿಯ ವಾಸ್ತವವನ್ನು ಅರ್ಥಮಾಡಿಕೊಂಡು ವ್ಯವಹರಿಸಿ.

ಮೀನ ರಾಶಿ:

ಸಂದರ್ಭೋಚಿತ ಮಾತುಗಳಿಂದ ಗೆಲುವುದು ಸಿಗಬಹುದು. ನಂಬಿಕೆ ದ್ರೋಹಹವು ನಿಮಗಾಗಲಿದೆ. ಇಷ್ಟಪಟ್ಟವರನ್ನು ದೂರ ಮಾಡಿಕೊಳ್ಳುವಿರಿ. ಅನ್ಯರ ವಿಚಾರದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗುವುದು. ಸರ್ಕಾರದ ಕೆಲಸಕ್ಕಾಗಿ ಅಧಿಕ ಓಡಾಟವಾಗುವುದು. ಆರ್ಥಿಕ ನೆರವನ್ನು ಯಾರಿಂದಲಾದರೂ ನೀವು ಬಯಸುವಿರಿ. ಸಮಾಧನ ಚಿತ್ತದಿಂದ ಇರುವಿರಿ. ವ್ಯವಹಾರದ ವಿಷಯದಲ್ಲಿ ನಿಮಗೆ ಯಾವುದೇ ಔದಾರ್ಯ ಬೇಡ. ನಿಮ್ಮ ಸ್ವಭಾವದಿಂದ ದಾಂಪತ್ಯದಲ್ಲಿ ಕೆಲವು ಮಾತುಗಳು ಕೇಳಿಬರಬಹುದು. ಅನ್ಯರಿಗೆ ಅಸಾಧ್ಯವಾದ ಕೆಲಸವು ನಿಮ್ಮಿಂದ ಸಾಧ್ಯವಾಗಬಹುದು. ಜನಮನ್ನಣೆಯ ಆಸೆಯು ಒಂದಿಲ್ಲೊಂದು ಕೆಲಸವನ್ನು ಮಾಡಿಸುವುದು.

ಜನವರಿ 12,​​ 2026ರ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಪೂರ್ವಾಷಾಢ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ನವಮೀ, ನಿತ್ಯನಕ್ಷತ್ರ : ಸ್ವಾತಿ ಯೋಗ : ಧೃತಿ, ಕರಣ : ಗರಜ, ಸೂರ್ಯೋದಯ – 06 – 52 am, ಸೂರ್ಯಾಸ್ತ – 06 – 11 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 08-18 – 09:43, ಯಮಗಂಡ ಕಾಲ 11:08 – 12:33, ಗುಳಿಕ ಕಾಲ 13:58 – 15:23

-ಲೋಹಿತ ಹೆಬ್ಬಾರ್ – 8762924271 (what’s app only)

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯವರು ಇಂದು ದೊಡ್ಡ ಮೊತ್ತದ ಸಾಲ ನೀಡದಿರಿ – Kannada News | January 12 Sunday Horoscope: Daily Predictions for Birth Numbers 1, 2, 3

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನೀವು ಹಳೆಯ ಯೋಜನೆಗಳನ್ನು ಬಿಟ್ಟು ಹೊಸ ಆಲೋಚನೆಗಳಿಗೆ ಒತ್ತು ನೀಡುವ ದಿನ. ವೃತ್ತಿ ಬದುಕಿನಲ್ಲಿ ಸದಾ ಕಾಲ ನಾನೇ ಮುಂದಿರಬೇಕು ಎಂಬ ಹಠಕ್ಕಿಂತ, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ‘ಸಹಬಾಳ್ವೆ’ಯ ಗುಣ ಇಂದು ನಿಮಗೆ ಹೆಚ್ಚು ಲಾಭ ತಂದುಕೊಡಲಿದೆ. ಇಂದು ನೀವು ತೆಗೆದುಕೊಳ್ಳುವ ಒಂದು ಸಣ್ಣ ಆರ್ಥಿಕ ನಿರ್ಧಾರವು ಮುಂದಿನ ಆರು ತಿಂಗಳ ನಿಮ್ಮ ಆರ್ಥಿಕ ಸ್ಥಿತಿಯನ್ನು ನಿರ್ಧರಿಸಲಿದೆ. ಕಚೇರಿಯಲ್ಲಿ ಮೇಲಧಿಕಾರಿಗಳ ಒತ್ತಡವಿದ್ದರೂ ನಿಮ್ಮ ಮಿತಭಾಷಿತ ಸ್ವಭಾವವು ಸಂಕಷ್ಟದಿಂದ ಪಾರು ಮಾಡಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಮಾನಸಿಕ ಸ್ಥಿರತೆ ಬಹಳ ಮುಖ್ಯ. ಸಣ್ಣ ಪುಟ್ಟ ವಿಚಾರಗಳಿಗೂ ಅತಿಯಾಗಿ ಸ್ಪಂದಿಸುವ ಗುಣವನ್ನು ನಿಯಂತ್ರಿಸಿ. ನಿಮ್ಮ ಮನೆಯಲ್ಲಿ ಹಳೆಯ ನೆನಪುಗಳು ಮರುಕಳಿಸಲಿವೆ, ಅದು ಸಂತಸವೋ ಅಥವಾ ನೋವೋ ಎನ್ನುವುದು ನಿಮ್ಮ ಸ್ವೀಕಾರದ ಮೇಲೆ ಅವಲಂಬಿಸಿದೆ. ವ್ಯಾಪಾರಸ್ಥರು ದೊಡ್ಡ ಮೊತ್ತದ ಸಾಲ ನೀಡುವುದನ್ನು ತಪ್ಪಿಸಿ. ಕೌಟುಂಬಿಕವಾಗಿ ಸಂಗಾತಿಯ ಸಹಕಾರವು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಕಲಾವಿದರಿಗೆ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಇರುವವರಿಗೆ ಅನಿರೀಕ್ಷಿತ ಅವಕಾಶಗಳು ಬರಲಿವೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಜ್ಞಾನಾರ್ಜನೆಯ ದಿನವಿದು. ನೀವು ತಿಳಿಯದ ವಿಷಯಗಳ ಬಗ್ಗೆ ಇತರರೊಂದಿಗೆ ಚರ್ಚಿಸುವಾಗ ನಮ್ರತೆ ಇರಲಿ. ಶಿಕ್ಷಣ ಅಥವಾ ಸಲಹಾ ಕೇಂದ್ರಗಳನ್ನು ನಡೆಸುವವರಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಖರ್ಚು ಹೆಚ್ಚಾಗುವ ಸಂಭವವಿದೆ, ಆದರೆ ಅದು ಸದುದ್ದೇಶದ ಹೂಡಿಕೆಯಾಗಿರಲಿದೆ. ಮನೆಯಲ್ಲಿನ ಹಿರಿಯರ ಆರೋಗ್ಯ ಸುಧಾರಿಸುವುದರಿಂದ ಭಾರ ಇಳಿಯಲಿದೆ. ಧಾರ್ಮಿಕ ಚಿಂತನೆಗಳು ನಿಮ್ಮನ್ನು ಆವರಿಸಲಿವೆ. ನೀವು ಮಾಡುವ ಸಣ್ಣ ಸಹಾಯವು ಭವಿಷ್ಯದಲ್ಲಿ ದೊಡ್ಡ ಮಟ್ಟದ ಪ್ರತಿಫಲ ನೀಡಲಿದೆ.

ಲೇಖನ- ಎನ್‌.ಕೆ.ಸ್ವಾತಿ

Source link

WPL 2026: ರಣರೋಚಕ ಪಂದ್ಯದಲ್ಲಿ ವೀರೋಚಿತ ಸೋಲು ಕಂಡ ಡೆಲ್ಲಿ – Kannada News | WPL 2026: Sophie Devine’s Heroics Seal Thrilling Win for Gujarat Giants over DC

2026 ರ ಮಹಿಳಾ ಪ್ರೀಮಿಯರ್ ಲೀಗ್‌ನ ನಾಲ್ಕನೇ ಪಂದ್ಯ ಗುಜರಾತ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ 210 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಓವರ್​ನಲ್ಲಿ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿತು. ಇತ್ತ ಬೃಹತ್ ಗುರಿ ನೀಡಿಯೂ ಸೋಲುವ ಆತಂಕದಲ್ಲಿದ್ದ ಗುಜರಾತ್ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಅನುಭವಿ ಸೋಫಿ ಡಿವೈನ್ ಯಶಸ್ವಿಯಾದರು. ವಾಸ್ತವವಾಗಿ ಈ ಪಂದ್ಯದಲ್ಲಿ ಡೆಲ್ಲಿ ತಂಡದ ಗೆಲುವಿಗೆ 6 ಎಸೆತಗಳಲ್ಲಿ 7 ರನ್ ಬೇಕಿತ್ತು. ಆದರೆ ಈ ವೇಳೆ ದಾಳಿಗಿಳಿದ ಸೋಫಿ, ಕೊನೆಯ ಓವರ್​ನಲ್ಲಿ 2 ವಿಕೆಟ್ ಉರುಳಿಸಿ ತಂಡಕ್ಕೆ 4 ರನ್​ಗಳ ಜಯ ತಂದುಕೊಟ್ಟರು.

Source link

ಕ್ಷಮೆ ಕೇಳಿ ಉಡುಗೊರೆ ಕೊಟ್ಟ ಗಿಲ್ಲಿ, ಶಿಕ್ಷೆ ಕೊಟ್ಟ ಕಾವ್ಯಾ – Kannada News | Bigg Boss Kannada 12: Gilli gave gift to Kavya in front of Sudeep

ಬಿಗ್​​ಬಾಸ್ (Bigg Boss) ಮನೆಯಲ್ಲಿ ಗಿಲ್ಲಿ ಮತ್ತು ಕಾವ್ಯಾ ಅವರದ್ದು ಒಳ್ಳೆಯ ಜೋಡಿ. ಒಮ್ಮೊಮ್ಮೆ ಬಹಳ ಆತ್ಮೀಯರಾಗಿರುವ ಇವರು ಇನ್ನು ಕೆಲವೊಮ್ಮೆ ಕಿತ್ತಾಡುತ್ತಾರೆ. ಒಳ್ಳೆಯ ಗೆಳೆತನವನ್ನು ಈ ಜೋಡಿ ಕಾಪಾಡಿಕೊಂಡು ಬಂದಿದೆ. ಗಿಲ್ಲಿ, ಪ್ರೀತಿ-ಪ್ರೇಮ ಎಂದು ಕಾವ್ಯಾರ ಕಾಲೆಳೆಯುತ್ತಾರಾದರೂ ಕಾವ್ಯಾ ಅದಕ್ಕೆಲ್ಲ ಅವಕಾಶ ಕೊಟ್ಟಿದ್ದೇ ಇಲ್ಲ. ಹಾಗೆಂದು ಗೆಳೆತನವನ್ನು ದೂರ ತಳ್ಳಿಲ್ಲ. ಇದೀಗ ಫಿನಾಲೆ ವಾರಕ್ಕೆ ಮುಂಚೆ ಬಿಗ್​​ಬಾಸ್ ಮನೆಯಲ್ಲಿ ಕೆಲವು ಅದ್ಭುತಗಳು ನಡೆದಿವೆ. ಗಿಲ್ಲಿ, ಕಾವ್ಯಾ ಬಳಿ ಕ್ಷಮೆ ಕೇಳಿ ಉಡುಗೊರೆ ಕೊಟ್ಟಿದ್ದಾರೆ. ಆದರೆ ಕಾವ್ಯಾ ಮಾತ್ರ, ಗಿಲ್ಲಿಗೆ ಕಠಿಣ ಶಿಕ್ಷೆ ಕೊಟ್ಟಿದ್ದಾರೆ.

ಈ ಪಯಣದಲ್ಲಿ ನಿಮ್ಮ ಜೊತೆಗೆ ನಿಂತ ವ್ಯಕ್ತಿಗೆ ನಿಮ್ಮ ವಸ್ತುವೊಂದನ್ನು ಉಡುಗೊರೆಯಾಗಿ ಕೊಟ್ಟು ಧನ್ಯವಾದ ಹೇಳಿ ಎಂದು ಸುದೀಪ್ ಹೇಳಿದರು. ಕೂಡಲೇ ಗಿಲ್ಲಿ, ಕಾವ್ಯಾಗೆ ಕೈಗೆ ಬೆಳ್ಳಿಯ ಬ್ರೇಸ್​​ಲೆಟ್ ಒಂದನ್ನು ನೀಡಿದರು. ಅಸಲಿಗೆ ಕಾವ್ಯಾರ ಮನೆಯವರು ಗಿಲ್ಲಿಗೆ ಬ್ರೇಸ್​ಲೆಟ್ ಒಂದನ್ನು ನೀಡಿದ್ದರು. ಅದನ್ನೇ ಮರಳಿ ಕೊಡುತ್ತಿದ್ದೀಯ ಎಂದು ಕಾವ್ಯಾ ಕೇಳಿದರು. ಅದಕ್ಕೆ ಗಿಲ್ಲಿ, ಇಲ್ಲ ಅದು ನನ್ನ ಬಳಿಯೇ ಇದೆ. ಇದು ನಿನಗೆ ಕೊಡಲೆಂದೇ ಹೊಸದು ತರಿಸಿಕೊಂಡಿದ್ದೆ ಎಂದು ಹೇಳಿ ಉಡುಗೊರೆಯನ್ನು ಕೊಟ್ಟರು. ಇನ್ನು ಕಾವ್ಯಾ, ಗಿಲ್ಲಿ ಇಷ್ಟು ದಿನ ತಮ್ಮ ಪರವಾಗಿ ನಿಂತಿದ್ದಕ್ಕೆ ಅವರ ಬಾಚಣಿಗೆಯನ್ನು ಗಿಲ್ಲಿಗೆ ನೀಡಿದರು. ಅಂದಹಾಗೆ ಗಿಲ್ಲಿ, ಕಾವ್ಯಾಗೆ ಉಡುಗೊರೆ ಕೊಡುವ ಮೊದಲು, ಇತ್ತೀಚೆಗೆ ಕಾವ್ಯಾ ಬಗ್ಗೆ ತಾವು ಆಡಿದ ಮಾತು ಸರಿ ಇರಲಿಲ್ಲ. ಏನೋ ತಮಾಷೆ ಮಾಡಲು ಹೋಗಿ ಏನೋ ಹೇಳಿಬಿಟ್ಟೆ ಹಾಗೆ ಹೇಳಬಾರದಿತ್ತು ಎಂದು ಹೇಳಿ ಕ್ಷಮೆ ಸಹ ಕೇಳಿದರು.

ಇದನ್ನೂ ಓದಿ:ಗ್ಲಾಮರಸ್ ಅವತಾರದಲ್ಲಿ ಮಾಜಿ ಬಿಗ್​​ಬಾಸ್ ಸ್ಪರ್ಧಿ ರಿಶಾ ಗೌಡ: ವಿಡಿಯೋ

ಯಾರು ನಿಮ್ಮನ್ನು ಬಹಳ ಕಾಡಿಸಿದ್ದಾರೊ ಅವರಿಗೆ ಶಿಕ್ಷೆ ಕೊಡುವ ಅವಕಾಶವನ್ನು ಸುದೀಪ್ ಅವರು ಸ್ಪರ್ಧಿಗಳಿಗೆ ನೀಡಿದರು. ಮನೆಯ ಎಲ್ಲ ಸ್ಪರ್ಧಿಗಳು ಅತಿ ಹೆಚ್ಚು ಶಿಕ್ಷೆ ಕೊಟ್ಟಿದ್ದು ಗಿಲ್ಲಿಗೆ. ಕೈ ಮತ್ತು ಕಾಲಿನ ಕೂದಲಿಗೆ ವ್ಯಾಕ್ಸ್ ಹೇರ್ ರಿಮೂವರ್ ಹಾಕಿ ಕೀಳುವುದು, ಕಹಿಯಾದ ಕಶಾಯ ಕುಡಿಸುವುದು, ಲಿಂಬೆ ಮತ್ತು ಮೆಣಸಿನಕಾಯಿಯನ್ನು ಒಟ್ಟಿಗೆ ತಿನ್ನಿಸುವುದು ಮತ್ತು ದೊಡ್ಡದಾದ, ಅಗಲವಾದ ನಕಲಿ ಕೈ ಇಂದ ಹೊಡೆಯುವುದು. ಈ ನಾಲ್ಕು ಶಿಕ್ಷೆಗಳಲ್ಲಿ ಯಾವ ಶಿಕ್ಷೆಯನ್ನು ಬೇಕಾದರೂ ನೀಡಬಹುದಾಗಿತ್ತು.

ಅಂತೆಯೇ ಕಾವ್ಯಾ, ಗಿಲ್ಲಿಗೆ ವ್ಯಾಕ್ಸ್ ಹಾಕಿ ಹೇರ್ ರಿಮೂವ್ ಮಾಡಿದರು. ಅದಾದ ಬಳಿಕ ಅಶ್ವಿನಿ, ಗಿಲ್ಲಿಗೆ ಕಶಾಯ ಕುಡಿಸಿದರು. ರಘು ಬಂದು ಕೈಯಿಂದ ಹೊಡೆದರು. ರಾಶಿಕಾ ಬಂದು ಮೆಣಸಿನಕಾಯಿ-ನಿಂಬೆ ತಿನ್ನುವಂತೆ ಮಾಡಿದರು ಹೀಗೆ ಹೆಚ್ಚು ಮಂದಿ ಗಿಲ್ಲಿಗೆ ಶಿಕ್ಷೆ ನೀಡಿದರು. ಗಿಲ್ಲಿ ಮಾತ್ರ ರಘುಗೆ ಶಿಕ್ಷೆ ನೀಡಿದರು. ರಘುಗೆ ಹೇರ್ ರಿಮೂವರ್ ಹಾಕಿ ತೆಗೆದರು.

ಈ ವಾರ ರಾಶಿಕಾ, ಬಿಗ್​​ಬಾಸ್ ಮನೆಯಿಂದ ಎವಿಕ್ಟ್ ಆಗಿದ್ದಾರೆ. ಆ ಮೂಲಕ ಗಿಲ್ಲಿ, ಅಶ್ವಿನಿ, ಧ್ರುವಂತ್, ರಘು, ಧನುಶ್, ರಕ್ಷಿತಾ ಶೆಟ್ಟಿ ಮತ್ತು ಕಾವ್ಯಾ ಮಾತ್ರವೇ ಬಿಗ್​​ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದು, ಇವರೆಲ್ಲ ಫಿನಾಲೆ ಸ್ಪರ್ಧಿಗಳಾಗಿದ್ದಾರೆ. ಈ ವಾರ ಮಧ್ಯ ಭಾಗದಲ್ಲಿ ಒಬ್ಬರು ಮನೆಯಿಂದ ಹೊರಗೆ ಹೋಗಲಿದ್ದಾರೆ. ಅದು ಯಾರೆಂದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 11:12 pm, Sun, 11 January 26

Source link

ಫಿನಾಲೆ ಹೊಸ್ತಿಲಲ್ಲಿ ಕೈ ಕೊಟ್ಟ ಅದೃಷ್ಟ: ಹೊರಗೆ ಬಂದವರು ಯಾರು? – Kannada News | Bigg Boss Kannada 12: Rashika evicted from the house

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss) ಕೊನೆಯ ವೀಕೆಂಡ್ ಎಪಿಸೋಡ್ ಇಂದು (ಜನವರಿ 11) ನಡೆಯಿತು. ನಿಯಮದಂತೆ ಭಾನುವಾರದ ಎಪಿಸೋಡ್​ನಲ್ಲಿ ಒಬ್ಬರು ಮನೆಯಿಂದ ಹೊರಗೆ ಹೋಗಲೇ ಬೇಕಿತ್ತು. ಮನೆಯಲ್ಲಿ ಒಟ್ಟು ಎಂಟು ಮಂದಿ ಇದ್ದು, ಇಂದು ಒಬ್ಬರು ಮನೆಯಿಂದ ಹೊರಗೆ ಹೋಗಿದ್ದಾರೆ. ನಾಮಿನೇಟ್ ಆಗಿದ್ದ ಗಿಲ್ಲಿ, ಕಾವ್ಯಾ, ರಾಶಿಕಾ, ಧ್ರುವಂತ್, ರಘು, ರಕ್ಷಿತಾ, ಅವರುಗಳಲ್ಲಿ ಕೊನೆಯಲ್ಲಿ ಉಳಿದುಕೊಂಡಿದ್ದರು ರಘು ಮತ್ತು ರಾಶಿಕಾ.

ಈ ಇಬ್ಬರಲ್ಲಿ ರಾಶಿಕಾ ಅವರು ಮನೆಯಿಂದ ಹೊರಗೆ ಹೋಗಿದ್ದಾರೆ. ಆ ಮೂಲಕ ಫಿನಾಲೆ ಎಂಟ್ರಿಯ ಹೊಸ್ತಿಲಲ್ಲಿ ಮನೆಯಿಂದ ಹೊರಗೆ ಹೋದಂತಾಗಿದೆ. ಪ್ರಸ್ತುತ ಮನೆಯಲ್ಲಿ ಅಶ್ವಿನಿ, ಧನುಶ್, ಗಿಲ್ಲಿ, ಕಾವ್ಯಾ, ಧ್ರುವಂತ್, ರಕ್ಷಿತಾ, ರಘು ಅವರುಗಳು ಮಾತ್ರವೇ ಉಳಿದಿದ್ದು, ಈ ಎಲ್ಲರೂ ಫಿನಾಲೆ ಸ್ಪರ್ಧಿಗಳಾಗಿದ್ದಾರೆ. ರಾಶಿಕಾ ಕೊನೆಯ ಹಂತದಲ್ಲಿ ಮನೆಯಿಂದ ಹೊರಗೆ ಬಂದಿದ್ದಾರೆ. ಆ ಮೂಲಕ ಫಿನಾಲೆ ಸ್ಪರ್ಧಿ ಎನಿಸಿಕೊಳ್ಳುವ ಅವಕಾಶದಿಂದ ಸ್ವಲ್ಪದರಲ್ಲಿ ವಂಚಿತರಾಗಿದ್ದಾರೆ.

ರಾಶಿಕಾ ಚೆನ್ನಾಗಿಯೇ ಆಡಿದ್ದರು. ರಾಶಿಕಾ ಬಂದಾಗ ಇವರು ಆಟದಿಂದಲ್ಲ ಬದಲಿಗೆ ಅಂದದಿಂದ ಶೋನಲ್ಲಿ ಉಳಿದುಕೊಳ್ಳುವ ಸ್ಪರ್ಧಿ ಎಂದುಕೊಳ್ಳಲಾಗಿತ್ತು. ಆದರೆ ರಾಶಿಕಾ ಅಂದದಿಂದ ಮಾತ್ರವಲ್ಲ ಆಟದಿಂದಲೂ ಗಮನ ಸೆಳೆದರು. ಗೆಳೆಯರನ್ನು ಮಾಡಿಕೊಂಡರು, ಜಗಳ ಆಡಿದರು. ಯಾವುದೇ ಒಂದು ಪಕ್ಷ ಸೇರದೆ ಎಲ್ಲರೊಟ್ಟಿಗೆ ಬೆರೆತರು, ಎಲ್ಲರೊಟ್ಟಿಗೆ ಜಗಳ ಸಹ ಆಡಿದರು ಒಟ್ಟಾರೆಯಾಗಿ 360 ಡಿಗ್ರಿ ಆಟವಾಡಿದ ರಾಶಿಕಾ ಇದೀಗ ಬಿಗ್​​ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ.

ಇದನ್ನೂ ಓದಿ:ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್

ವೇದಿಕೆಯಲ್ಲಿ ಸುದೀಪ್ ಜೊತೆಗೆ ಮಾತನಾಡಿದ ರಾಶಿಕಾ, ‘ಬಿಗ್​​ಬಾಸ್ ಮನೆಗೆ ಬಂದಿದ್ದು ನನ್ನ ಜೀವನದಲ್ಲಿ ನಾನು ಮಾಡಿದ ಬಹಳ ಒಳ್ಳೆಯ ನಿರ್ಧಾರ. ನಾನು ಇಷ್ಟು ಧೈರ್ಯವಂತೆ ಎಂಬುದು ಇಲ್ಲಿಗೆ ಬರುವವರೆಗೆ ನನಗೆ ಸಹ ಗೊತ್ತಿರಲಿಲ್ಲ. ನಾನು ಸಹ ಬಹಳ ಸ್ಟ್ರಾಂಗ್ ಎನ್ನುವುದು ಗೊತ್ತಾಯಿತು. ಒಂದು ಹಂತದಲ್ಲಂತೂ ಬಿಗ್​​ಬಾಸ್ ಮನೆಯಲ್ಲೇ ಇದ್ದುಬಿಡೋಣ ಎನಿಸಿಬಿಟ್ಟಿತು, ಅಪ್ಪನ ಧ್ವನಿಯ ಬಳಿಕ ನಾನು ಹೆದರಿರುವುದು ಬಿಗ್​​ಬಾಸ್ ಧ್ವನಿಗೆ ಮಾತ್ರ’ ಎಂದರು ರಾಶಿಕಾ.

ರಾಶಿಕಾ ಅವರಿಗೆ ಹಲವು ಉಡುಗೊರೆಗಳನ್ನು ಕೊಟ್ಟ ಸುದೀಪ್ ಅವರು ಭವಿಷ್ಯಕ್ಕೆ ಶುಭ ಹಾರೈಸಿ, ಅವರ ಆಟವನ್ನು ಕೊಂಡಾಡಿ ಬೀಳ್ಕೊಟ್ಟರು. ಮನೆಯಲ್ಲಿ ಏಳು ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದು, ಅವರಲ್ಲಿ ಒಬ್ಬರು ವಾರದ ಮಧ್ಯ ಭಾಗದಲ್ಲಿಯೇ ಹೊರಗೆ ಹೋಗಲಿದ್ದಾರೆ. ಅದಾದ ಬಳಿಕ ಉಳಿದ ಆರರಲ್ಲಿ ಒಬ್ಬರು ವಿನ್ನರ್ ಆಗಿ ಘೋಷಿತಗೊಳ್ಳಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹತ್ತಾರು ಬೈಕ್ ಸುಟ್ಟು ಭಸ್ಮ, 15 ಮನೆಗಳಿಗೆ ಹಾನಿ: ಆಕಸ್ಮಿಕ ಬೆಂಕಿಯೋ, ದ್ವೇಷದ ಕಿಡಿಯೋ? – Kannada News | Several Bike And House Damage In nandini layout fire incident at Bengaluru

ಬೆಂಗಳೂರು, (ಜನವರಿ 11): ಅವರೆಲ್ಲಾ ದಿನಕೂಲಿ ನಂಬಿ ಬದುಕೋರು.. ಆದ್ರೆ ಅವರ ಬದುಕು ಇಂದು ದುಸ್ತರವಾಗಿದೆ. ಜೀವನಕ್ಕೆ ಆಧಾರವಾಗಿದ್ದ ಸ್ಪಂಜುಗಳು ಹೊತ್ತಿ ಉರಿದಿದ್ದು ಸಾಕಷ್ಟು ನಷ್ಟವಾಗಿದೆ. ಹೌದು… ನಿನ್ನೆ ತಡರಾತ್ರಿ 2:30ರ ಸುಮಾರಿಗೆ ಎಲ್ಲರೂ ಕೂಡ ಗಾಢ ನಿದ್ರೆಯಲ್ಲಿದ್ರು. ಆದ್ರೆ ಏಕಾಏಕಿ ಹೊತ್ತಿ ಉರಿದ ಬೆಂಕಿ ಕೂಲಿನಗರದ ನಿವಾಸಿಗಳ ನಿದ್ದೆಯನ್ನ ಹಾಳು ಮಾಡಿ ಬದುಕನ್ನ ಬೀದಿಗೆ ತಂದಿದೆ. ನಂದಿನಿ‌ಲೇಔಟ್‌‌ನ ಕೂಲಿನಗರದ ನಿವಾಸಿಗಳು ಸ್ಪಾಂಜ್‌ಗಳನ್ನ‌ ಮಾರಿ ಜೀವನ ಸಾಗಿಸೋರು. ಹೀಗಾಗಿ ತಮ್ಮ ಮನೆಗಳ ಮೇಲೆ ಸ್ಪಾಂಜ್‌ಗಳ ಮೂಟೆಯನ್ನ ಇರಿಸಿದ್ರು. ಆದ್ರೆ ತಡರಾತ್ರಿ ಏಕಾಏಕಿ ಸ್ಪಾಂಜು ಹೊತ್ತಿ ಉರಿದಿದೆ. ಸ್ಪಾಂಜ್ ಹೊತ್ತಿದ ಪರಿಣಾಮ ಬೆಂಕಿ ಮುಗಿಲೆತ್ತರಕ್ಕೆ ಹಬ್ಬಿದ್ದು, ಅಲ್ಲಿದ್ದ ಸುಮಾರು 10ರಿಂದ 15 ಮನೆಗಳಿಗೆ ಹಾನಿ ಹಾಗಿದೆ. ಇನ್ನು ಮನೆ ಮುಂದೆ ನಿಲ್ಲಿಸಿದ 7-8 ಬೈಕ್ ಹಾಗೂ ಟಾಟಾ ಏಸ್‌ಗಳು ಸುಟ್ಟು ಹೋಗಿದೆ. ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕದಳ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದು…, ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಇನ್ನು ಇದು ಆಕಸ್ಮಿಕ ಬೆಂಕಿಯೋ ಅಥವಾ ದ್ವೇಷದಿಂದ ಹೊತ್ತಿಸಿದ ಕಿಡಿಯೋ ಎನ್ನುವುದು ತನಿಖೆಯಿಂದ ತಿಳಿದುಬರಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ – Kannada News | Karnataka River Diversion: Sri Gangadharendra Saraswati Swamiji Explains Oppose to Bedthi Aghanashini Project

ಕಾರವಾರ, ಜನವರಿ 11: ಬೇಡ್ತಿ-ವರದಾ ಮತ್ತು ಅಘನಾಶಿನಿ-ವೇದಾವತಿ ನದಿ ಜೋಡಣೆಗೆ ವಿರೋಧಿಸಿ ಇಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣದಲ್ಲಿ ಬೃಹತ್ ಸಮಾವೇಶ ನಡೆಯಿತು. ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಶ್ರೀ ಸಮಾವೇಶದ ನೇತೃತ್ವವಹಿಸಿದ್ದರು. ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ ಅವರು, ಯೋಜನೆ ಜಾರಿಯಾದರೆ ನದಿಯ ಸಹಜ ನೀರಿನ ಹರಿವು ಕಡಿಮೆಯಾಗಿ ಅಂತರ್ಜಲ ಮಟ್ಟ ಕುಸಿಯುತ್ತದೆ. ಇಡೀ ಜಿಲ್ಲೆ ಬರಪೀಡಿತವಾಗುವ ಅಪಾಯವಿದೆ. ಈ ಯೋಜನೆಯು ವೈಜ್ಞಾನಿಕವಾಗಿ ಮಾರಕವಾಗಿದ್ದು, ಶಾಶ್ವತ ವಿನಾಶಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ವರದಾ-ಬೇಡ್ತಿ ನದಿ ಪ್ರಾಜೆಕ್ಟ್ ಖಂಡಿಸಿ ಬೃಹತ್ ಪ್ರತಿಭಟನೆ: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್ – Kannada News | Uttara Kannada All Political Party Leaders opposes to bedti varada river linking project at Sirsi rally

ಶಿರಸಿ, (ಜನವರಿ 11) : ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ಹರಿಯುವ ಅಘನಾಶಿನಿ-ಬೇಡ್ತಿ ನದಿ ತಿರುವು ಮಾಡಲು ಸರ್ಕಾರ ಮುಂದಾಗಿದೆ. ಈ ಯೋಜನೆಗಳು ಇಡೀ ಜಿಲ್ಲೆಗೆ ಮಾರಕ ಎಂದು ಜಿಲ್ಲೆಯ ಜನರು ಹೋರಾಟಕ್ಕೆ ಮುಂದಾಗಿದ್ದು, ಜಿಲ್ಲೆಯ ಶಿರಸಿಯಲ್ಲಿ ಜನ ಸಮಾವೇಶ ಮೂಲಕ ಸಾವಿರಾರು ಜನರು ಸೇರಿ ಸರ್ಕಾರದ ನಡೆ ವಿರೋಧಿಸಿದ್ದಾರೆ. ಇಂದು (ಜನವರಿ 11) ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ಹೋರಾಟ ನಡೆದಿದ್ದು, ಜಿಲ್ಲೆಯ ಎಲ್ಲಾ ಪಕ್ಷದ ಜನಪ್ರತಿನಿಧಿಗಳು, ಮಠಾಧೀಶರು ಸೇರಿದಂತೆ ಸಾವಿರಾರು ಜನರು ಒಂದೆಡೆ ಸೇರಿ ಒಕ್ಕೊರಲಿನಿಂದ ಯೋಜನೆಗೆ ವಿರೋಧ ವ್ಯಕ್ತಪಡಿಸಲಾಯಿತು.

ಇನ್ನು ಈ ಸಮಾವೇಶದಲ್ಲಿ ಸಮಾವೇಶದಲ್ಲಿ ಯೋಜನೆಯಿಂದ ಆಗುವ ಅಪಾಯದ ಬಗ್ಗೆ ಸಾರ್ವಜನಿಕರಿಗೆ ತಿಳಿಸಲಾಯಿತು. ಅಲ್ಲದೇ ಜಿಲ್ಲೆಯಲ್ಲಿ ಈ ಯೋಜನೆ ವಿರುದ್ದ ಯಾವುದೇ ರಾಜಕೀಯ ಬೆರಸದೇ ಒಕ್ಕೊರಲಿನ ಹೋರಾಟ ಮಾಡಲು ನಿರ್ಣಯ ತೆಗೆದುಕೊಳ್ಳಲಾಯಿತು.

ಇದನ್ನೂ ನೋಡಿ: ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಖಡಕ್ ಎಚ್ಚರಿಕೆ

ಇನ್ನು ಇದೇ ವೇಳೆ ರಾಜಕೀಯ ಆರೋಪ ಪ್ರತ್ಯಾರೋಪ ಸಹ ನಡೆಯಿತು. ಈ ಯೋಜನೆ‌ ಯಡಿಯೂರಪ್ಪ ಸಿಎಂ ಆಗಿದ್ದಾಗಲೇ ಬಜೆಟ್ ನಲ್ಲಿ ಮಂಡನೆ ಮಾಡಿದ್ದು ಆಗ ಈಗಿನ ಸಂಸದರು ಸ್ಪೀಕರ್ ಆಗಿದ್ದರು ವಿರೋಧಿಸಿಲ್ಲ ಎಂದು ಸಚಿವ ಮಂಕಾಳ ವೈದ್ಯ ಅವರು ಕಾಗೇರಿ ವಿರುದ್ಧ ಆರೋಪಿಸಿದರು. ಬಳಿಕ ಮಾತನಾಡಿದ ಕಾಗೇರಿ ಇದಕ್ಕೆ ಪರೋಕ್ಷವಾಗಿ ಟಾಂಗ್ ಕೊಟ್ಟು ತಮ್ಮ ನಿಲುವು ಸ್ಪಷ್ಟಪಡಿಸಿದರು. ಇನ್ನು ಇದೇ ವೇಳೆ ರಾಜಕೀಯ ನಾಯಕರು ಏನೆಲ್ಲಾ ಮಾತನಾಡಿದ್ದಾರೆ ಎನ್ನುವುದನ್ನು ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನವೀಕರಿಸಬಹುದಾದ ಇಂಧನ: 300 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಅಗತ್ಯ; ಪ್ರಲ್ಹಾದ್​ ಜೋಶಿ – Kannada News | Renewable energy: India needs 300 billion US dollars investment; Pralhad Joshi

ಬೆಂಗಳೂರು, ಜನವರಿ 11: ಭಾರತ (India) ನವೀಕರಿಸಬಹುದಾದ ಇಂಧನ ಸಾಮರ್ಥ್ಯ 266 ಗಿಗಾವ್ಯಾಟ್ ದಾಟಿದ್ದಲ್ಲದೆ, ದೇಶವನ್ನು ಜಾಗತಿಕ ನಾಯಕ ಸ್ಥಾನದಲ್ಲಿರಿಸಿದೆ. ಜಾಗತಿಕ ಇಂಧನ ಪರಿವರ್ತನೆಗೆ ಅಭೂತಪೂರ್ವ ಹೂಡಿಕೆ ಮತ್ತು ಸಹಕಾರದ ಅಗತ್ಯವಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದರು.

ಯುಎಇಯ ಅಬುಧಾಬಿಯಲ್ಲಿ ನಡೆದ 16ನೇ ಐಆರ್​ಇಎನ್​ಎ ಅಸೆಂಬ್ಲಿಯ ಪೂರ್ಣ ಅಧಿವೇಶನ ಉದ್ದೇಶಿಸಿ ಮಾತನಾಡಿದ ಸಚಿವರು, ಭಾರತಕ್ಕೆ 2030ರ ವೇಳೆಗೆ ಸುಮಾರು 300 ಬಿಲಿಯನ್ ಯುಎಸ್ ಡಾಲರ್ ಹೂಡಿಕೆಯ ಅಗತ್ಯವಿದೆ. ಇದು ನವೀಕರಿಸಬಹುದಾದ ಇಂಧನ ಉತ್ಪಾದನೆ, ಸಂಗ್ರಹಣೆ, ಹಸಿರು ಹೈಡ್ರೋಜನ್, ಗ್ರಿಡ್‌ಗಳು ಮತ್ತು ಉತ್ಪಾದನಾ ವಲಯಗಳಲ್ಲಿ ಬೃಹತ್ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಹೇಳಿದ್ದಾರೆ.

ಸೂರ್ಯಘರ್‌, ಪಿಎಂ-ಕುಸುಮ್ ಯೋಜನೆ ಲಕ್ಷಾಂತರ ಜನಕ್ಕೆ ಪ್ರಯೋಜನ

ದೇಶದಲ್ಲಿ ಪಿಎಂ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯಡಿ ಎರಡು ವರ್ಷದೊಳಗೆ ಸುಮಾರು 25 ಲಕ್ಷ ಮನೆಗಳು ರೂಫ್‌ಟಾಪ್ ಸೋಲಾರ್ ಅಳವಡಿಸಿಕೊಂಡಿವೆ ಮತ್ತು ಮಾರ್ಚ್ 2027ರ ವೇಳೆಗೆ 1 ಕೋಟಿ ಮನೆಗಳನ್ನು ತಲುಪುವ ಗುರಿ ಹೊಂದಲಾಗಿದೆ. ಅದರಂತೆ ಪಿಎಂ-ಕುಸುಮ್ ಯೋಜನೆಯಡಿ ಡೀಸೆಲ್ ಪಂಪ್‌ಗಳ ಬದಲಾವಣೆ ಮತ್ತು ಕೃಷಿ ಫೀಡರ್‌ಗಳ ಸೌರೀಕರಣ ಮೂಲಕ ಸುಮಾರು 21.7 ಲಕ್ಷ ರೈತರು ಪ್ರಯೋಜನ ಪಡೆದಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಸೋಮನಾಥಪುರದಲ್ಲಿ ಪ್ರಧಾನಿ ಮೋದಿ ಶೌರ್ಯಯಾತ್ರೆ; 13ನೇ ಶತಮಾನದ ಹುತಾತ್ಮಕರಿಗೆ ಗೌರವ; ಡೋಲು ಡಮರುಗ ಸದ್ದು

ಶುದ್ಧ ಇಂಧನ ಹೂಡಿಕೆಗೆ ಭಾರತ ಜಗತ್ತಿನ ಅತ್ಯಂತ ಆಕರ್ಷಕ ತಾಣಗಳಲ್ಲಿ ಒಂದಾಗಿ ಮುಂದುವರಿದಿದೆ. ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳು ಅಭಿವೃದ್ಧಿ ಆಕಾಂಕ್ಷೆಯೊಂದಿಗೆ ರಾಜಿ ಮಾಡಿಕೊಳ್ಳದೆ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ವಿಸ್ತರಿಸಲು ಬೆಂಬಲ ನೀಡುವ ನಿಟ್ಟಿನಲ್ಲಿ ತಂತ್ರಜ್ಞಾನ ವಿನಿಮಯ, ಹಣಕಾಸು ಸೌಲಭ್ಯ, ಸಾಮರ್ಥ್ಯ ವೃದ್ಧಿ ಮತ್ತು ಮಾನದಂಡಗಳ ಸಮನ್ವಯದ ಪ್ರಾಮುಖ್ಯತೆಯಿದೆ ಎಂದು ಅಭಿಪ್ರಾಯ ಪಟ್ಟರು.

ಪ್ರಲ್ಹಾದ್ ಜೋಶಿ ಟ್ವೀಟ್​​

ಭಾರತ ಇಂಧನ ಪರಿವರ್ತನೆಯಲ್ಲಿ ‘ವಸುಧೈವ ಕುಟುಂಬಕಂ’ ಎನ್ನುವಂತೆ ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ತತ್ವದಿಂದ ಮಾರ್ಗದರ್ಶಿಸಲ್ಪಟ್ಟಿದೆ ಮತ್ತು ದೀರ್ಘಕಾಲಿಕ ದೃಷ್ಟಿಕೋನ ಹೊಂದಿದೆ. 2030ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಆಧಾರಿತ ವಿದ್ಯುತ್ ಸಾಮರ್ಥ್ಯ ಸ್ಥಾಪಿಸುವ ಮತ್ತು 2070ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆ ಸಾಧಿಸುವತ್ತ ಹೆಜ್ಜೆ ಹಾಕಿದೆ ಎಂದರು.

ಪ್ಯಾರಿಸ್ ಒಪ್ಪಂದದಂತೆ ‘ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆ’ ಗುರಿಗಿಂತ 5 ವರ್ಷಗಳ ಮೊದಲೇ ಅಂದರೆ 2025ರಲ್ಲೇ ಭಾರತ ಶೇ.50ರಷ್ಟನ್ನು ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಸಾಧಿಸಿದೆ. ವಿಶ್ವದ ಪ್ರಮುಖ ಇಂಧನ ಮಾರುಕಟ್ಟೆಗಳಲ್ಲಿ ಒಂದಾಗಿರುವ ಭಾರತ, ಗ್ರಿಡ್ ಆಧುನೀಕರಣ, ಹಸಿರು ಇಂಧನ ಕಾರಿಡಾರ್‌ಗಳ ಅಭಿವೃದ್ಧಿ ಹಾಗೂ ದಿನದ 24 ಗಂಟೆಯೂ ಲಭ್ಯವಿರುವ ನವೀಕರಿಸಬಹುದಾದ ಇಂಧನ ಯೋಜನೆಗಳಂತಹ ಹೊಸ ಬಿಡ್ಡಿಂಗ್ ವಿಧಾನಗಳ ಮೂಲಕ ವಿಶ್ವಾಸಾರ್ಹ ಮತ್ತು ಸುಸ್ಥಿರ ವಿದ್ಯುತ್ ವ್ಯವಸ್ಥೆಗಳಿಗೆ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.

ಇಂಧನ ಪರಿವರ್ತನೆಗೊಳಿಸಲು ಭಾರತ ಸಿದ್ಧ

2025ರ ಒಂದೇ ವರ್ಷದಲ್ಲಿ ಭಾರತ ಸುಮಾರು 50 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸೇರ್ಪಡೆ ಮಾಡಿದೆ. ಇಂಧನ ಪರಿವರ್ತನೆ ಸಮಾನತೆ ಮತ್ತು ಒಳಗೊಳ್ಳುವಿಕೆಯಿಂದ ಪ್ರೇರಿತವಾದ ಜನ ಚಳವಳಿಯಾಗಬೇಕು. ಜಾಗತಿಕವಾಗಿ ನವೀಕರಿಸಬಹುದಾದ ಇಂಧನ ಪರಿವರ್ತನೆ ವೇಗಗೊಳಿಸಲು ಭಾರತ ತನ್ನ ಅನುಭವ, ಸಾಂಸ್ಥಿಕ ಬಲ ಮತ್ತು ತಾಂತ್ರಿಕ ಪರಿಣತಿಯನ್ನು ಹಂಚಿಕೊಳ್ಳಲು ಸಿದ್ಧವಿದೆ. ಎಲ್ಲಾ ಸದಸ್ಯ ರಾಷ್ಟ್ರಗಳೊಂದಿಗೆ ವಿಶೇಷವಾಗಿ ಅಲ್ಪ ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಜ್ಯಗಳ ಜತೆಗೆ ನಿಕಟವಾಗಿ ಕೆಲಸ ಮಾಡಲು ಸಿದ್ಧವಾಗಿದೆ ಎಂದರು.

ಪಾಲುದಾರಿಕೆ ಬಗ್ಗೆ ಪರಾಮರ್ಶೆ

ಇದಕ್ಕೂ ಮುನ್ನ ಸಚಿವ ಪ್ರಲ್ಹಾದ್​ ಜೋಶಿ, ಹವಾಮಾನ ಕ್ರಿಯೆ, ಶುದ್ಧ ಇಂಧನ ಮತ್ತು ಆಹಾರ ಭದ್ರತೆ ಕುರಿತು ಭಾರತ-ಯುಎಇ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಹವಾಮಾನ ಬದಲಾವಣೆ ಮತ್ತು ಪರಿಸರ ಸಚಿವ ಡಾ.ಅಮ್ನಾ ಬಿಂತ್ ಅಬ್ದುಲ್ಲಾ ಅಲ್ ದಹಕ್ ಅವರೊಂದಿಗೆ ಸಭೆ ಮಾಡಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಯ ರಾಮನ ದರ್ಶನಕ್ಕೆ 450 ಕಿ.ಮೀ ಸ್ಕೇಟಿಂಗ್ ಮಾಡಿದ 9 ವರ್ಷದ ಬಾಲಕಿ

ಸಂವಾದದ ವೇಳೆ, 2014 ಮತ್ತು 2024ರ ನಡುವೆ ಸಹಿ ಮಾಡಲಾದ ಹಲವಾರು ಒಪ್ಪಂದಗಳ ಆಧಾರದ ಮೇಲೆ ಮತ್ತು ಯುಎಇಯ ‘ನೆಟ್ ಝೀರೋ 2050’ ಗುರಿಗೆ ಅನುಗುಣವಾಗಿ ನವೀಕರಿಸಬಹುದಾದ ಇಂಧನ, ಹೂಡಿಕೆ ಹಾಗೂ ನಾವೀನ್ಯತೆಗಳಲ್ಲಿ ಪಾಲುದಾರಿಕೆ ಬಗ್ಗೆ ಪರಾಮರ್ಶೆ ನಡೆಸಲಾಯಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ – Kannada News | Bengaluru Thalapathy Vijay Fans decorated theater for Jana Nayagan release

ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ದಳಪತಿ ವಿಜಯ್ ಅಭಿಮಾನಿಗಳಿದ್ದಾರೆ. ಜನವರಿ 09 ರಂದು ‘ಜನ ನಾಯಗನ್’ (Jana Nayagan) ಸಿನಿಮಾ ಬಿಡುಗಡೆಗೆ ಎಲ್ಲರೂ ಕಾಯುತ್ತಿದ್ದರು. ಚಿತ್ರಮಂದಿರವನ್ನು ಅದ್ಧೂರಿಯಾಗಿ ಸಿಂಗರಿಸಿದ್ದರು. ವಿಜಯ್ ಅವರ ಹಲವು ಕಟೌಟ್​​ಗಳನ್ನು ಅಭಿಮಾನಿಗಳು ಕಟ್ಟಿದ್ದರು, ಹಲವು ಪೋಸ್ಟರ್​​ಗಳನ್ನು ಸಹ ಹಾಕಿದ್ದರು. ಜೊತೆಗೆ ಪುನೀತ್ ರಾಜ್​ಕುಮಾರ್ ಅವರ ಕಟೌಟ್ ಅನ್ನು ಸಹ ಹಾಕಿದ್ದು ವಿಶೇಷ. ಅಭಿಮಾನಿಗಳು ವಿಜಯ್ ಸಿನಿಮಾ ಸ್ವಾಗತಕ್ಕೆ ಚಿತ್ರಮಂದಿರವನ್ನು ಹೇಗೆ ಸಜ್ಜು ಮಾಡಿದ್ದರು ನೋಡಿ. ಆದರೆ ಅಭಿಮಾನಿಗಳ ಆಸೆಗೆ ಸೆನ್ಸಾರ್ ಮಂಡಳಿ ತಣ್ಣೀರು ಎರಚಿದೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link