Category Archives: Blog

Your blog category

ನಿಧಿ ಅಗರ್​​ವಾಲ್ ಜೊತೆ ಅನುಚಿತ ವರ್ತನೆ: ಮಾಲ್ ವಿರುದ್ಧ ಕೇಸ್ ದಾಖಲು – Kannada News | Case filed after Nidhi Agarwal mobbed during the Raja Saab song release event

ನಟಿ ನಟಿ ನಿಧಿ ಅಗರ್​​ವಾಲ್ (Nidhi Agarwal) ಅವರಿಗೆ ಕಿರುಕುಳ ನೀಡಲಾಗಿದೆ. ಹೈದರಾಬಾದ್​​ನಲ್ಲಿ ನಡೆದ ‘ದಿ ರಾಜಾ ಸಾಬ್’ (The Raja Saab) ಸಿನಿಮಾದ ಸಾಂಗ್ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಖಾಸಗಿ ಮಾಲ್​​ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಲ್ಲಿ ನಿಧಿ ಅಗರ್​ವಾಲ್ ಅವರು ಪಾಲ್ಗೊಂಡಿದ್ದರು. ಆ ವೇಳೆ ಸಿಕ್ಕಾಪಟ್ಟೆ ಜನ ಸೇರಿದ್ದರು. ನಿಧಿ ಅಗರ್​ವಾಲ್ ಜೊತೆ ಫೋಟೋ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಆಗ ಕೆಲವರು ಅವರ ಜೊತೆ ಅನುಚಿತವಾಗಿ ವರ್ತಿಸಿದರು. ಈ ಘಟನೆಗೆ ಸಂಬಂಧಿಸಿದಂತೆ ಕೇಸ್ ದಾಖಲಾಗಿದೆ.

ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾದ ‘ಸಹನಾ ಸಹನಾ..’ ಹಾಡು ಬಿಡುಗಡೆ ಆಗಿದೆ. ಈ ಹಾಡಿನಲ್ಲಿ ಪ್ರಭಾಸ್ ಮತ್ತು ನಿಧಿ ಅಗರ್​ವಾಲ್ ಅವರು ಕಾಣಿಸಿಕೊಂಡಿದ್ದಾರೆ. ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕೆ ಖುಷಿಯಿಂದ ನಿಧಿ ಅಗರ್​ವಾಲ್ ಅವರಿಗೆ ಕಹಿ ಅನುಭವ ಆಗಿದೆ. ಜನಸಂದಣಿಯಲ್ಲಿ ಅವರ ಜೊತೆ ಕೆಲವರು ಕೆಟ್ಟದಾಗಿ ನಡೆದುಕೊಂಡಿದ್ದಾರೆ.

ನಿಧಿ ಅಗರ್​ವಾಲ್ ಅವರನ್ನು ಜನರು ಮುತ್ತಿಗೆ ಹಾಕಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಜನರಿಂದ ಕಿರಿಕಿರಿ ಅನುಭವಿಸಿದ ನಿಧಿ ಅವರನ್ನು ಬಾಡಿಗಾರ್ಡ್​​ಗಳು ರಕ್ಷಿಸಿದ್ದಾರೆ. ಅವರನ್ನು ಕರೆದುಕೊಂಡು ಬಂದು ಕಾರಿನಲ್ಲಿ ಕೂರಿಸುವ ವೇಳೆಗೆ ಬಾಡಿಗಾರ್ಡ್​​ಗಳು ಸುಸ್ತಾಗಿದ್ದಾರೆ. ಕಾರಿನೊಳಗೆ ಬಂದು ಕುಳಿತ ನಿಧಿ ಅಗರ್​ವಾಲ್ ಅವರು ವಿಪರೀತ ಕೋಪ ಮಾಡಿಕೊಂಡಿರುವುದು ಕಾಣಿಸಿದೆ.

ಈ ವಿಡಿಯೋ ವೈರಲ್ ಆದ ನಂತರ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಸೂಕ್ತ ಅನುಮತಿ ಪಡೆಯದೆಯೇ ಕಾರ್ಯಕ್ರಮ ನಡೆಸಿದ ಆಯೋಜಕರ ಮೇಲೆ ಕೇಸ್ ದಾಖಲಾಗಿದೆ. ಬುಧವಾರ (ಡಿಸೆಂಬರ್ 17) ಸಂಜೆ 5 ಗಂಟೆಗೆ ಸಾಂಗ್ ರಿಲೀಸ್ ಆಗಬೇಕಿತ್ತು. ಆದರೆ ಕೆಲವು ಗಂಟೆಗಳ ಕಾಲ ತಡವಾಯಿತು. ಅಷ್ಟು ಹೊತ್ತಿಗಾಗಲೇ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು.

ಇದನ್ನೂ ಓದಿ: ಸಿಕ್ಕಿದ್ದೇ ಚಾನ್ಸ್ ಅಂತ ಕಂಡ ಕಂಡಲ್ಲಿ ಮುಟ್ಟಿದ್ರು; ಮಾಲ್​​ನಲ್ಲಿ ನಟಿಗೆ ಕಿರುಕುಳ

ನಿಧಿ ಅಗರ್​ವಾಲ್ ಅವರಿಗೆ ಈ ಘಟನೆಯಿಂದ ತುಂಬ ಬೇಸರ ಆಗಿದೆ. ಅವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಘಟನೆ ಬಗ್ಗೆ ನಿಧಿ ಅಗರ್​ವಾಲ್ ಅವರು ಇನ್ನೂ ಹೇಳಿಕೆ ನೀಡಿಲ್ಲ. ಜನರು ನಡೆದುಕೊಂಡ ರೀತಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಖಂಡನೆ ವ್ಯಕ್ತವಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹುರೂನ್ ವೆಲ್ತ್ ರಿಪೋರ್ಟ್: ಮುಂಬೈಯನ್ನು ಹಿಂದಿಕ್ಕಿದ ಬೆಂಗಳೂರು ನಂ. 1 – Kannada News | Hurun India Report 2025, Bengaluru edges past Mumbai as new wealth capital

ಐಡಿಎಫ್​ಸಿ ಫಸ್ಟ್ ಪ್ರೈವೇಟ್ ಅಂಡ್ ಹುರೂನ್ ಇಂಡಿಯಾ ವೆಲ್ತ್ ರಿಪೋರ್ಟ್

ನವದೆಹಲಿ, ಡಿಸೆಂಬರ್ 18: ಟ್ರಾಫಿಕ್ ಜಂಜಾಟದ ಸಮಸ್ಯೆ ಏನೇ ಇದ್ದರೂ ಬ್ಯುಸಿನೆಸ್ ಮತ್ತು ಹಣದಲ್ಲಿ ಬೆಂಗಳೂರಿಗೆ ಸಾಟಿಯೇ ಇಲ್ಲದಂತಾಗಿದೆ. ಭಾರತೀಯ ನಗರಗಳ ಪೈಕಿ ಅತಿಹೆಚ್ಚು ಸಂಪತ್ತು ಹೊಂದಿರುವುದು ಬೆಂಗಳೂರೇ. ಹುರೂನ್ ಇಂಡಿಯಾದಿಂದ ಬಿಡುಗಡೆಯಾದ ವೆಲ್ತ್ ರಿಪೋರ್ಟ್ 2025 ವರದಿ (IDFC First Private and Hurun Indias Top-100 self-made entrepreneurs of Millenia 2025) ಪ್ರಕಾರ, ಬೆಂಗಳೂರಿನಲ್ಲೇ ಅತಿಹೆಚ್ಚು ಆಂಟ್ರಪ್ರನ್ಯೂರ್​ಗಳು ಇರುವುದು. ಹಾಗೆಯೇ, ಅತಿಹೆಚ್ಚು ಬಿಲಿಯನ್ ಡಾಲರ್ ಕಂಪನಿಗಳಿಗೆ ಜನ್ಮ ನೀಡಿರುವ ನಗರವೆಂದರೆ ಅದು ಬೆಂಗಳೂರೇ.

ಐಡಿಎಫ್​ಸಿ ಫಸ್ಟ್ ಪ್ರೈವೇಟ್ ಅಂಡ್ ಹುರೂನ್ ಇಂಡಿಯಾ ವೆಲ್ತ್ ರಿಪೋರ್ಟ್​ನಲ್ಲಿ ಭಾರತದ ಟಾಪ್-200 ಕಂಪನಿಗಳು ಹಾಗೂ ಸೆಲ್ಫ್ ಮೇಡ್ ಆಂಟ್ರಪ್ರನ್ಯೂರ್​ಗಳ ಪಟ್ಟಿ ಇದೆ. 2000ರದ ವರ್ಷದಿಂದೀಚೆ ಭಾರತದಲ್ಲಿ ಸ್ಥಾಪನೆಯಾದ 200 ಅತಿ ಮೌಲ್ಯದ ಕಂಪನಿಗಳ ಪಟ್ಟಿ ಇದೆ.

ಅತಿದೊಡ್ಡ ನವ ಉದ್ದಿಮೆದಾರರ ಪಟ್ಟಿಯಲ್ಲಿ ಬೆಂಗಳೂರು ಟಾಪ್ ಇದೆ. ಸಿಲಿಕಾನ್ ಸಿಟಿಯ 88 ಆಂಟ್ರಪ್ರನ್ಯೂರ್ಗಳು ಈ ಪಟ್ಟಿಯಲ್ಲಿದ್ದಾರೆ. 83 ಉದ್ದಿಮೆದಾರರಿರುವ ಮುಂಬೈ ಅನ್ನು ಬೆಂಗಳೂರು ಎರಡನೇ ಸ್ಥಾನಕ್ಕೆ ತಳ್ಳಿದೆ. ದೆಹಲಿಯಲ್ಲಿ 52 ಹಾಗೂ ಗುರುಗ್ರಾಮ್​ನಲ್ಲಿ 32 ಆಂಟ್ರಪ್ರನ್ಯೂರ್​ಗಳು ಈ ಹುರೂನ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: ಅಮೆರಿಕ ಏನೇ ಮಾಡಿದರೂ ಛಲ ಬಿಡದ ಚೀನಾ; ಇಯುವಿ ಮೆಷೀನ್​ನ ಪ್ರೋಟೋಟೈಪ್ ತಯಾರು; ಮುಂದಿದೆ ಟೆಕ್ನಾಲಜಿ ಜಟಾಪಟಿ

ಭಾರತದ ನಗರವಾರು ಅಗ್ರಮಾನ್ಯ ಆಂಟ್ರಪ್ರನ್ಯೂರ್​ಗಳ ಪಟ್ಟಿ

  • ಬೆಂಗಳೂರು: 88
  • ಮುಂಬೈ: 83
  • ನವದೆಹಲಿ: 52
  • ಗುರುಗ್ರಾಮ್: 32
  • ಚೆನ್ನೈ: 15
  • ಪುಣೆ: 13
  • ಹೈದರಾಬಾದ್: 12
  • ಕೋಲ್ಕತಾ: 10
  • ಅಹ್ಮದಾಬಾದ್: 9
  • ಜೈಪುರ್: 7

ಅತಿ ಮೌಲ್ಯಯುತ ಕಂಪನಿಗಳ ಹುಟ್ಟು

  • ಬೆಂಗಳೂರು: 52
  • ಮುಂಬೈ: 51
  • ಗುರುಗ್ರಾಮ್: 36
  • ಚೆನ್ನೈ: 11
  • ನವದೆಹಲಿ: 10
  • ಪುಣೆ: 8
  • ಹೈದರಾಬಾದ್: 8
  • ನೋಯ್ಡಾ: 7
  • ಅಹ್ಮದಾಬಾದ್: 5
  • ಕೋಲ್ಕತಾ: 4
  • ಜೈಪುರ್: 4

ಇದನ್ನೂ ಓದಿ: ಮತ್ತೆ ವಿದೇಶದಲ್ಲಿ ಭಾರತದ ವಿರುದ್ಧ ರಾಹುಲ್ ಧ್ವನಿ; ಸತ್ಯ ಎಷ್ಟು, ಸುಳ್ಳೆಷ್ಟು?

ಮೇಲಿನ ಪಟ್ಟಿಗಳಿಗೆ ಕಂಪನಿಗಳನ್ನು ಮತ್ತು ಉದ್ಯಮಿಗಳನ್ನು ಆಯ್ಕೆ ಮಾಡಲು ಕೆಲ ಮಾನದಂಡಗಳನ್ನು ಇಡಲಾಗಿದೆ. 2000ದ ನಂತರ ಉದ್ಯಮ ಸ್ಥಾಪಿಸಿರಬೇಕು. ಸರ್ಕಾರಿ ಸ್ವಾಮ್ಯದ ಕಂಪನಿಗಳು ಮತ್ತು ವಿದೇಶೀ ಕಂಪನಿಗಳ ಅಂಗ ಸಂಸ್ಥೆಗಳಾಗಿರಬಾರದು. ಫ್ಯಾಮಿಲಿ ಬ್ಯುಸಿನೆಸ್ ಆಗಿರಬಾರದು. ಸ್ವಂತ ಬಲದಲ್ಲಿ ಆಂಟ್ರಪ್ರನ್ಯೂರ್​ಗಳಾಗಿರಬೇಕು. ಅಂದರೆ ಸೆಲ್ಫ್ ಮೇಡ್ ಉದ್ಯಮಿಗಳಾಗಿರಬೇಕು.

ಭಾರತದ 200 ಅಗ್ರಮಾನ್ಯ ಆಂಟ್ರಪ್ರನ್ಯೂರ್​ಗಳ ಒಟ್ಟು ಸಂಪತ್ತು 42 ಲಕ್ಷ ಕೋಟಿ ರೂ ಎಂದು ಅಂದಾಜಿಸಲಾಗಿದೆ. ಈ ಪಟ್ಟಿಯಲ್ಲಿ ಬೆಂಗಳೂರು ಸೇರಿ 51 ನಗರಗಳ ಆಂಟ್ರಪ್ರನ್ಯೂರ್​ಗಳು ಸ್ಥಾನ ಪಡೆದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೆನಡಾನಲ್ಲಿ ‘45’ ಅಬ್ಬರ, ಟಿಕೆಟ್ ಸೋಲ್ಡ್ ಔಟ್, ಮುಂಚಿತವಾಗಿ ರಿಲೀಸ್ – Kannada News | 45 Kannada movie releasing early in Canada

ಕನ್ನಡದಲ್ಲಿ ಮೂರು ದೊಡ್ಡ ಸಿನಿಮಾಗಳು ಡಿಸೆಂಬರ್​​ನಲ್ಲಿ ಬಿಡುಗಡೆ ಆಗಲಿದೆ. ಮೊದಲಿಗೆ ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟಿಸಲಿರುವ ‘45’ ಸಿನಿಮಾ ಡಿಸೆಂಬರ್ ನಲ್ಲಿ ತೆರೆಗೆ ಬರಲಿದೆ. ಈ ಸಿನಿಮಾವನ್ನು ಅರ್ಜುನ್ ಜನ್ಯ ನಿರ್ದೇಶನ ಮಾಡಿದ್ದಾರೆ.

ಶಿವರಾಜ್ ಕುಮಾರ್ (Shiva Rajkumar), ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟಿಸಿರುವ ‘45’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಭಾರಿ ಕುತೂಹಲ ಮೂಡಿಸಿದೆ. ಸಿನಿಮಾನಲ್ಲಿ ಮೂವರು ಸ್ಟಾರ್ ನಟರುಗಳು ಒಟ್ಟಿಗೆ ನಟಿಸಿರುವುದು ಪ್ರಮುಖ ವಿಶೇಷ ಮಾತ್ರವಲ್ಲದೆ, ಇದು ಅರ್ಜುನ್ ಜನ್ಯ ನಿರ್ದೇಶನ ಮಾಡುತ್ತಿರುವ ಮೊಟ್ಟ ಸಿನಿಮಾ ಆಗಿದೆ. ಸಿನಿಮಾದ ಬಗ್ಗೆ ರಾಜ್ಯದಲ್ಲಿ ಭರ್ಜರಿ ನಿರೀಕ್ಷೆಗಳಿವೆ. ರಾಜ್ಯದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಸಿನಿಮಾದ ಕ್ರೇಜ್ ಅದ್ಧೂರಿಯಾಗಿದೆ.

‘45’ ಸಿನಿಮಾವನ್ನು ಕನ್ನಡ ಮಾತ್ರವಲ್ಲದೆ ಇತರೆ ಕೆಲವು ಭಾಷೆಗಳಲ್ಲಿಯೂ ಬಿಡುಗಡೆ ಮಾಡಲು ಅರ್ಜುನ್ ಜನ್ಯ ಮತ್ತು ಚಿತ್ರತಂಡ ಮುಂದಾಗಿದೆ. ಅದರಂತೆ ದೇಶದಲ್ಲಿ ಮಾತ್ರವಲ್ಲದೆ ಹೊರ ದೇಶಗಳಲ್ಲಿಯೂ ಸಿನಿಮಾವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲಾಗುತ್ತಿದೆ. ವಿಶೇಷವಾಗಿ ಭಾರತೀಯರು ಹೆಚ್ಚು ಮಂದಿ ಇರುವ ದೇಶಗಳಲ್ಲಿ ಸಿನಿಮಾವನ್ನು ಹೆಚ್ಚಿನ ಸ್ಕ್ರೀನ್​​ಗಳನ್ನು ತೆರೆಗೆ ತರಲಾಗುತ್ತಿದ್ದು, ಅವುಗಳಲ್ಲಿ ಕೆನಡ ಸಹ ಒಂದಾಗಿದೆ.

ಕೆನಡಾನಲ್ಲಿ ‘45’ ಸಿನಿಮಾದ ಟಿಕೆಟ್ ಬುಕಿಂಗ್ ಈಗಾಗಲೇ ಆರಂಭವಾಗಿದ್ದು, ಮುಂಗಡ ಬುಕಿಂಗ್​​ನಲ್ಲಿಯೇ ಚಿತ್ರಮಂದಿರಗಳು ಹೌಸ್​​ಫುಲ್ ಆಗಿವೆ. ಕೆನಡಾದ ಕನ್ನಡ ಸಿನಿಮಾ ಪ್ರೇಮಿಗಳು ಮುಗಿಬಿದ್ದು ಟಿಕೆಟ್ ಖರೀದಿ ಮಾಡಿದ್ದು, ಸಿನಿಮಾ ಸೋಲ್ಡ್ ಔಟ್ ಆಗಿದೆ. ಅದು ಮಾತ್ರವೇ ಅಲ್ಲದೆ, ಕೆನಡಾನಲ್ಲಿ ಭಾರತಕ್ಕಿಂತಲೂ ಎರಡು ದಿನ ಮುಂಚಿತವಾಗಿ ‘45’ ಸಿನಿಮಾ ಬಿಡುಗಡೆ ಆಗಲಿರುವುದು ಮತ್ತೊಂದು ವಿಶೇಷ.

ಇದನ್ನೂ ಓದಿ:‘45’ ಸಿನಿಮಾದಲ್ಲಿ ಶಿವರಾಜ್​​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ..

ಭಾರತದಲ್ಲಿ ‘45’ ಸಿನಿಮಾ ಡಿಸೆಂಬರ್ 25 ರಂದು ಬಿಡುಗಡೆ ಆಗಲಿದೆ. ಆದರೆ ಕೆನಡಾನಲ್ಲಿ ಡಿಸೆಂಬರ್ 23 ರಂದೇ ‘45’ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ. ಅಲ್ಲಿ ಕ್ರಿಸ್​​ಮಸ್ ರಜೆಗಳು ಚಾಲ್ತಿಯಲ್ಲಿದ್ದು, ಇದು ‘45’ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆಯನ್ನು ನೀಡುವ ಸಾಧ್ಯತೆ ಇದೆ.

‘45’ ಸಿನಿಮಾನಲ್ಲಿ ಶಿವರಾಜ್ ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ಅರ್ಜುನ್ ಜನ್ಯಾ ನಿರ್ದೇಶನ ಮಾಡಿದ್ದಾರೆ. ಸಂಗೀತ ನಿರ್ದೇಶನವೂ ಅವರದ್ದೇ ಆಗಿದೆ. ಸಿನಿಮಾ, ಮಾನವ-ದಾನವ ಮತ್ತು ದೇವರು ಕುರಿತ ಕತೆಯನ್ನು ಒಳಗೊಂಡಿದೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು ಸಖತ್ ಗಮನ ಸೆಳೆಯುತ್ತಿದೆ. ಅದರಲ್ಲೂ ಶಿವಣ್ಣರ ಮೋಹಿನಿ ಅವತಾರವಂತೂ ವೈರಲ್ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಸ್ಕತ್​​ಗೆ ಪ್ರಧಾನಿ ಮೋದಿ ಭೇಟಿ; ಭಾರತ-ಓಮನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ – Kannada News | PM Modi Oman Visit India and Oman signed free trade agreement

ಮಸ್ಕತ್, ಡಿಸೆಂಬರ್ 18: ಭಾರತ ಮತ್ತು ಓಮನ್ (PM Modi Oman Visit) ಇಂದು ಪ್ರಮುಖ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಸಹಿ ಹಾಕಿವೆ. ಇಂದು (ಡಿ. 18) ಸಹಿ ಹಾಕಲಾದ ಈ ಒಪ್ಪಂದವು ಎರಡೂ ದೇಶಗಳ ನಡುವಿನ ಆರ್ಥಿಕ ಸಂಬಂಧಗಳನ್ನು ಬಲಪಡಿಸುವತ್ತ ಮಹತ್ವದ ಹೆಜ್ಜೆಯನ್ನು ಗುರುತಿಸುತ್ತದೆ. ಈ ಒಪ್ಪಂದದ ಭಾಗವಾಗಿ ಜವಳಿ, ಕೃಷಿ ಸರಕುಗಳು ಮತ್ತು ಚರ್ಮದ ವಸ್ತುಗಳು ಸೇರಿದಂತೆ ಭಾರತದ ರಫ್ತಿನ ಶೇ. 98ಕ್ಕಿಂತ ಹೆಚ್ಚಿನ ಸುಂಕಗಳನ್ನು ಓಮನ್ ತೆಗೆದುಹಾಕಲಿದೆ. ಹಾಗೇ, ಖರ್ಜೂರ, ಅಮೃತಶಿಲೆ ಮತ್ತು ಪೆಟ್ರೋಕೆಮಿಕಲ್‌ಗಳು ಸೇರಿದಂತೆ ಅಗತ್ಯ ಓಮಾನಿ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಲು ಭಾರತ ಒಪ್ಪಿಕೊಂಡಿದೆ.

ಮಸ್ಕತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಸಹಿ ಹಾಕಲಾದ ಒಪ್ಪಂದವು ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಿಂದ ಜಾರಿಗೆ ಬರುವ ನಿರೀಕ್ಷೆಯಿದೆ. ಈ ಒಪ್ಪಂದಕ್ಕೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ಓಮನ್​ನ ವಾಣಿಜ್ಯ, ಕೈಗಾರಿಕೆ ಮತ್ತು ಹೂಡಿಕೆ ಪ್ರಚಾರ ಸಚಿವ ಕೈಸ್ ಬಿನ್ ಮೊಹಮ್ಮದ್ ಅಲ್ ಯೂಸೆಫ್ ಸಹಿ ಹಾಕಿದ್ದಾರೆ.

ಇದನ್ನೂ ಓದಿ: 3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ

ಭಾರತವು ತನ್ನ ಅತಿದೊಡ್ಡ ರಫ್ತು ದೇಶವಾದ ಅಮೆರಿಕದಿಂದ ಶೇ. 50ರಷ್ಟು ಸುಂಕಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಒಪ್ಪಂದವು ಬಹಳ ಮಹತ್ವದ್ದಾಗಿದೆ. ಈ ಒಪ್ಪಂದದ ಅಡಿಯಲ್ಲಿ ರತ್ನಗಳು ಮತ್ತು ಆಭರಣಗಳು, ಜವಳಿ, ಚರ್ಮ, ಪಾದರಕ್ಷೆಗಳು, ಕ್ರೀಡಾ ಸಾಮಗ್ರಿಗಳು, ಪ್ಲಾಸ್ಟಿಕ್‌ಗಳು, ಪೀಠೋಪಕರಣಗಳು, ಕೃಷಿ ಉತ್ಪನ್ನಗಳು, ಎಂಜಿನಿಯರಿಂಗ್ ಉತ್ಪನ್ನಗಳು, ಔಷಧಗಳು, ವೈದ್ಯಕೀಯ ಸಾಧನಗಳು ಮತ್ತು ಆಟೋಮೊಬೈಲ್‌ಗಳು ಸೇರಿದಂತೆ ಎಲ್ಲಾ ಪ್ರಮುಖ ಕಾರ್ಮಿಕ-ತೀವ್ರ ವಲಯಗಳು ಸಂಪೂರ್ಣ ಸುಂಕ ಮುಕ್ತವಾಗಿದೆ. ಇವುಗಳಲ್ಲಿ, ಶೇ. 97.96ರಷ್ಟು ಉತ್ಪನ್ನ ವರ್ಗಗಳಿಗೆ ತಕ್ಷಣದ ಸುಂಕ ವಿನಾಯಿತಿ ನೀಡಲಾಗುತ್ತಿದೆ.

ಇದನ್ನೂ ಓದಿ: ಭಾರತದ ಪ್ರಧಾನಿಗೆ 29ನೇ ಜಾಗತಿಕ ಗೌರವ; ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಓಮನ್​ನಲ್ಲಿನ ಪ್ರಮುಖ ಸೇವಾ ವಲಯಗಳಲ್ಲಿ ಭಾರತೀಯ ಕಂಪನಿಗಳಿಂದ ವಾಣಿಜ್ಯ ಉಪಸ್ಥಿತಿಯ ಮೂಲಕ ಶೇ. 100ರಷ್ಟು ವಿದೇಶಿ ನೇರ ಹೂಡಿಕೆಯನ್ನು ಸಹ ಈ ಒಪ್ಪಂದವು ಒದಗಿಸುತ್ತದೆ. ಇದು ಈ ಪ್ರದೇಶದಲ್ಲಿ ಕಾರ್ಯಾಚರಣೆಗಳನ್ನು ವಿಸ್ತರಿಸಲು ಭಾರತದ ಸೇವಾ ಉದ್ಯಮಕ್ಕೆ ವಿಶಾಲ ಮಾರ್ಗವನ್ನು ತೆರೆಯುತ್ತದೆ. ಈ ಪ್ರದೇಶದಲ್ಲಿ ಓಮನ್ ಒಂದು ಪ್ರಮುಖ ಕಾರ್ಯತಂತ್ರದ ಪಾಲುದಾರ ರಾಷ್ಟ್ರವಾಗಿದ್ದು, ಮಧ್ಯಪ್ರಾಚ್ಯ ಮತ್ತು ಆಫ್ರಿಕಾಕ್ಕೆ ಭಾರತೀಯ ಸರಕು ಮತ್ತು ಸೇವೆಗಳಿಗೆ ಪ್ರಮುಖ ದ್ವಾರವಾಗಿದೆ.

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, “ಭಾರತ ಬೆಳೆದಾಗಲೆಲ್ಲಾ ಅದು ತನ್ನ ಸ್ನೇಹಿತರನ್ನೂ ಬೆಳೆಯಲು ಸಹಾಯ ಮಾಡುತ್ತದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ಸಾಗುತ್ತಿದೆ. ನಾವು ಆಪ್ತ ಸ್ನೇಹಿತರಾಗುವುದರ ಜೊತೆಗೆ, ಕಡಲ ನೆರೆಹೊರೆಯವರೂ ಆಗಿದ್ದೇವೆ. ನಮ್ಮ ಜನರು ಪರಸ್ಪರ ಚೆನ್ನಾಗಿ ತಿಳಿದಿದ್ದಾರೆ. ನಮ್ಮ ವ್ಯವಹಾರ ಸಂಬಂಧಗಳಲ್ಲಿ ನಮಗೆ ತಲೆಮಾರುಗಳ ಹಿಂದಿನಿಂದಲೂ ನಂಬಿಕೆ ಇದೆ. ನಾವು ಪರಸ್ಪರರ ಮಾರುಕಟ್ಟೆಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ – Kannada News | Bigg Boss season 10 contestant Snehit talks about life after Bigg Boss

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಪ್ರಸ್ತುತ ಚಾಲ್ತಿಯಲ್ಲಿದೆ. ಗಿಲ್ಲಿ ಮತ್ತು ಇನ್ನೂ ಕೆಲ ಸ್ಪರ್ಧಿಗಳಿಂದಾಗಿ ಈ ಸೀಸನ್ ಕುತೂಹಲ ಉಳಿಸಿಕೊಂಡಿದೆ. ಆದರೆ ಸೀಸನ್ 10 ಬಿಗ್​​ಬಾಸ್ ಇತಿಹಾಸದ ಅತ್ಯಂತ ಆಸಕ್ತಿಕರ ಸೀಸನ್​​ಗಳಲ್ಲಿ ಒಂದಾಗಿತ್ತು. ಸಂಗೀತಾ, ಕಾರ್ತಿಕ್, ವಿನಯ್, ಸ್ನೇಹಿತ್, ಮೈಖಲ್, ನಮ್ರತಾ, ವರ್ತೂರು ಸಂತು, ತನಿಷಾ ಕುಪ್ಪಂಡ, ತುಕಾಲಿ ಸಂತು, ಡ್ರೋನ್ ಪ್ರತಾಪ್ ಹೀಗೆ ಒಬ್ಬರಿಗಿಂತಲೂ ಒಬ್ಬರು ಒಳ್ಳೆಯ ಸ್ಪರ್ಧಿಗಳಿದ್ದರು. ಇದೀಗ ಆ ಸೀಸನ್​​ನ ಭಾಗವಾಗಿದ್ದ ಸ್ನೇಹಿತ್ ಟಿವಿ9 ಜೊತೆಗೆ ಮಾತನಾಡಿದ್ದು, ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ ಎಂದು ವಿವರಿಸಿದ್ದಾರೆ. ಮಾತ್ರವಲ್ಲದೆ, ಆ ಸೀಸನ್​ನ ಇತರೆ ಸ್ಪರ್ಧಿಗಳೊಟ್ಟಿಗೆ ತಮ್ಮ ಸಂಪರ್ಕ ಹೇಗಿದೆ ಎಂದು ಸಹ ವಿವರಿಸಿದ್ದಾರೆ. ವಿಡಿಯೋ ಇಲ್ಲಿದೆ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Karnataka Weather: ನಾಲ್ಕು ಜಿಲ್ಲೆಗಳಲ್ಲಿ ನಾಳೆ ಚಳಿ ಅಬ್ಬರ, ಹೇಗಿರಲಿದೆ ಕರಾವಳಿ ವಾತಾವರಣ? – Kannada News | Tomorrow Weather: Severe cold wave expected in Four Districts

ಬೆಂಗಳೂರು, ಡಿಸೆಂಬರ್​​ 18: ಉತ್ತರ ಮತ್ತು ಕಲ್ಯಾಣ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ನಾಳೆಯೂ ಚಳಿ ಹೆಚ್ಚಿರುವ ಸಾಧ್ಯತೆ ಇದೆ. ಆ ಪೈಕಿ ಬೀದರ್​​, ಕಲಬುರಗಿ, ರಾಯಚೂರು ಮತ್ತು ಯಾದಗಿರಿಯಲ್ಲಿ ಹೆಚ್ಚಿನ ಪ್ರಮಾಣದ ಶೀತಗಾಳಿ ಇರಲಿದೆ. ಉಳಿದಂತೆ ದಕ್ಷಿಣ ಒಳನಾಡು ಮತ್ತು ಕರಾವಳಿಯ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಅಥವಾ ಸಾಧಾರಣ ಚಳಿಯ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡು ಜಿಲ್ಲೆಗಳಾದ ಮೈಸೂರು, ಮಂಡ್ಯ ಮತ್ತು ಹಾಸನದಲ್ಲಿ ನಾಳೆ ಒಣ ಹಾಗೂ ಚಳಿಯ ವಾತಾವರಣ ಎರಡೂ ಇರಲಿದೆ. ಬೆಳಗಿನ ಸಮಯದಲ್ಲಿ ತಂಪು ಹೆಚ್ಚಾಗುವ ಸಾಧ್ಯತೆ ಇದೆ. ಕೊಡಗು ಜಿಲ್ಲೆಯಲ್ಲಿ ನಾಳೆ ಸಾಮಾನ್ಯವಾಗಿ ಒಣ ಹವೆ ಕಂಡುಬರಲಿದ್ದು, ರಾತ್ರಿ ಹಾಗೂ ಮುಂಜಾನೆ ವೇಳೆ ಚಳಿ ಅನುಭವವಾಗಲಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ನಾಳೆ ಬಿಸಿಲಿನ ಜೊತೆಗೆ ಒಣ ಹವಾಮಾನ ಇರಲಿದೆ. ಮಳೆ ಬಗ್ಗೆ ಯಾವುದೇ ಎಚ್ಚರಿಕೆ ಇಲ್ಲ. ತುಮಕೂರು, ದಾವಣಗೆರೆ, ಚಿತ್ರದುರ್ಗದಲ್ಲಿಯೂ ಇದೇ ರೀತಿಯ ವಾತಾವರಣ ಕಂಡುಬರಲಿದ್ದು, ಧಾರವಾಡ, ಹಾವೇರಿ, ಗದಗದಲ್ಲಿ ಚಳಿ ಕೊಂಚ ಹೆಚ್ಚಾಗುವ ನಿರೀಕ್ಷೆ ಇದೆ. ವಿಜಯಪುರ, ಬಾಗಲಕೋಟೆಯಲ್ಲಿ ಒಣ ಹಾಗೂ ಚಳಿಯ ವಾತಾವರಣ ಮುಂದುವರಿಯಲಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನಾಳೆ ಒಣಹವೆ ಕಂಡುಬರಲಿದ್ದು, ಬೆಳಿಗ್ಗೆ ಹಾಗೂ ರಾತ್ರಿ ಸಮಯದಲ್ಲಿ ಮಾತ್ರ ಚಳಿ ಇರಲಿದೆ.

ಇದನ್ನೂ ಓದಿ: ವಿಜಯಪುರದಲ್ಲಿ ದಾಖಲಾಯ್ತು 7 ಡಿಗ್ರಿ ಸೆಲ್ಸಿಯಸ್‌ ತಾಪಮಾನ

ಚಳಿಗೆ ಬೀದರ್​​ ಗಢಗಢ

ಬಾಗಲಕೋಟೆ 12.8 ಡಿಗ್ರಿ ಸೆಲ್ಸಿಯಸ್​​, ಬಳ್ಳಾರಿ 13.7 ಡಿಗ್ರಿ ಸೆಲ್ಸಿಯಸ್, ಬೆಳಗಾವಿ 13.3 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಗ್ರಾಮಾಂತರ 12.7 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ನಗರ 14.9 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ದಕ್ಷಿಣ 12.7 ಡಿಗ್ರಿ ಸೆಲ್ಸಿಯಸ್, ಬೀದರ್ 10.4 ಡಿಗ್ರಿ ಸೆಲ್ಸಿಯಸ್, ಚಾಮರಾಜನಗರ 13.2 ಡಿಗ್ರಿ ಸೆಲ್ಸಿಯಸ್, ಚಿಕ್ಕಬಳ್ಳಾಪುರ 12.3 ಡಿಗ್ರಿ ಸೆಲ್ಸಿಯಸ್, ಚಿಕ್ಕಮಗಳೂರು 14 ಡಿಗ್ರಿ ಸೆಲ್ಸಿಯಸ್, ಚಿತ್ರದುರ್ಗ 14.1 ಡಿಗ್ರಿ ಸೆಲ್ಸಿಯಸ್, ದಕ್ಷಿಣ ಕನ್ನಡ 20.3 ಡಿಗ್ರಿ ಸೆಲ್ಸಿಯಸ್, ದಾವಣಗೆರೆ 13.9 ಡಿಗ್ರಿ ಸೆಲ್ಸಿಯಸ್, ಧಾರವಾಡ 13.6 ಡಿಗ್ರಿ ಸೆಲ್ಸಿಯಸ್, ಗದಗ 13.7 ಡಿಗ್ರಿ ಸೆಲ್ಸಿಯಸ್, ಹಾಸನ 13.8 ಡಿಗ್ರಿ ಸೆಲ್ಸಿಯಸ್, ಹಾವೇರಿ 12.9 ಡಿಗ್ರಿ ಸೆಲ್ಸಿಯಸ್, ಕಲಬುರಗಿ 11.2 ಡಿಗ್ರಿ ಸೆಲ್ಸಿಯಸ್, ಕೊಡಗು 17.2 ಡಿಗ್ರಿ ಸೆಲ್ಸಿಯಸ್, ಕೋಲಾರ 12.3 ಡಿಗ್ರಿ ಸೆಲ್ಸಿಯಸ್, ಕೊಪ್ಪಳ 13 ಡಿಗ್ರಿ ಸೆಲ್ಸಿಯಸ್, ಮಂಡ್ಯ 13.4 ಡಿಗ್ರಿ ಸೆಲ್ಸಿಯಸ್, ಮೈಸೂರು 14.6 ಡಿಗ್ರಿ ಸೆಲ್ಸಿಯಸ್, ರಾಯಚೂರು 12.9 ಡಿಗ್ರಿ ಸೆಲ್ಸಿಯಸ್, ಶಿವಮೊಗ್ಗ 14 ಡಿಗ್ರಿ ಸೆಲ್ಸಿಯಸ್, ತುಮಕೂರು 12.7 ಡಿಗ್ರಿ ಸೆಲ್ಸಿಯಸ್, ಉಡುಪಿ 19.6 ಡಿಗ್ರಿ ಸೆಲ್ಸಿಯಸ್, ಉತ್ತರ ಕನ್ನಡ 16.5 ಡಿಗ್ರಿ ಸೆಲ್ಸಿಯಸ್, ವಿಜಯಪುರ 12.2 ಡಿಗ್ರಿ ಸೆಲ್ಸಿಯಸ್, ವಿಜಯನಗರ 13.2 ಡಿಗ್ರಿ ಸೆಲ್ಸಿಯಸ್ ಮತ್ತು ಯಾದಗಿರಿಯಲ್ಲಿ 13.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ನಿನ್ನೆ ಬೆಳಿಗ್ಗೆ 8.30ರಿಂದ ಇಂದು ಬೆಳಿಗ್ಗೆ 8.30ರ ಅವಧಿಯಲ್ಲಿ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:29 pm, Thu, 18 December 25

Source link

ಮದ್ಯಪ್ರಿಯರೇ… ಬಿಯರ್ ಕುಡಿಯೋಕೆ ಈ ಟೈಮ್ ದಿ ಬೆಸ್ಟ್ ಅಂತೆ! – Kannada News | Nighttime Beer: How Drinking After Dark Affects Sleep and Recovery

ಇತ್ತೀಚಿನ ದಿನಗಳಲ್ಲಿ, ಜನರಲ್ಲಿ ಒತ್ತಡ, ಆಯಾಸದಂತಹ ಸಮಸ್ಯೆಗಳು ಹೆಚ್ಚಾಗುತ್ತಿದೆ. ಇದನ್ನು ನಿವಾರಿಸಲು, ಕೆಲವರು ಬಿಯರ್ (Beer) ಮೊರೆ ಹೋಗುತ್ತಾರೆ. ಕೋಲ್ಡ್ ಬಿಯರ್ ನಿಮಿಷಗಳಲ್ಲಿ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದು ಹಲವರ ನಂಬಿಕೆ. ಆದರೆ ಇದನ್ನು ಕುಡಿಯುವ ಸಮಯ ಕೂಡ ಮುಖ್ಯವಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ… ಹೌದು, ಇದರಿಂದ ಪ್ರಯೋಜನ ಪಡೆಯಲು ನೀವು ಯಾವ ಸಮಯದಲ್ಲಿ ಸೇವನೆ ಮಾಡುತ್ತೀರಿ ಎಂಬುದನ್ನು ತಿಳಿದುಕೊಂಡಿರಬೇಕಾಗುತ್ತದೆ. ಹಾಗಾದರೆ ಬಿಯರ್ ಕುಡಿಯಲು ಸರಿಯಾದ ಸಮಯ ಯಾವುದು, ಬೆಳಿಗ್ಗೆ ಅಥವಾ ರಾತ್ರಿ ಯಾವಾಗ ಕುಡಿಯಬೇಕು ಎಂಬುದನ್ನು ತಿಳಿದುಕೊಳ್ಳಿ.

ಬಿಯರ್ ಕುಡಿಯಲು ಸರಿಯಾದ ಸಮಯ ಯಾವುದು?

ಬೆಳಿಗ್ಗೆ ಬಿಯರ್ ಕುಡಿಯುವುದು ಸಾಮಾನ್ಯವಾಗಿ ಸೂಕ್ತವಲ್ಲ ಏಕೆಂದರೆ ಬೆಳಿಗ್ಗೆ ದೇಹವು ಡಿಟಾಕ್ಸ್ ಮೋಡ್‌ನಲ್ಲಿರುತ್ತದೆ. ಜೀರ್ಣಕ್ರಿಯೆ ಖಾಲಿ ಹೊಟ್ಟೆಯಲ್ಲಿ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಆಲ್ಕೋಹಾಲ್ ಸೇವಿಸುವುದರಿಂದ ಅದು ಬೇಗನೆ ಹೀರಲ್ಪಡುತ್ತದೆ. ಅಷ್ಟೇ ಅಲ್ಲ, ರಕ್ತದಲ್ಲಿನ ಸಕ್ಕರೆ ಮಟ್ಟಗಳು ಕಡಿಮೆಯಾಗಬಹುದು. ಕೆಲವರಲ್ಲಿ ಆಲಸ್ಯ, ತಲೆತಿರುಗುವಿಕೆ ಅಥವಾ ದಣಿದ ಅನುಭವವಾಗಬಹುದು ಇದಲ್ಲದೆ, ಈ ಅಭ್ಯಾಸವು ಕ್ರಮೇಣ ನಿಮ್ಮನ್ನು ವ್ಯಸನಿಯನ್ನಾಗಿ ಮಾಡಬಹುದು.

ರಾತ್ರಿ ಬಿಯರ್ ಕುಡಿಯುವುದು ಒಳ್ಳೆಯದೇ?

ಬೆಳಿಗ್ಗೆಗಿಂತ ರಾತ್ರಿ ಬಿಯರ್ ಕುಡಿಯುವುದು ಉತ್ತಮ. ಏಕೆಂದರೆ ದೇಹವು ದಿನವಿಡೀ ಸಕ್ರಿಯವಾಗಿದ್ದು ಸಂಜೆಯ ಹೊತ್ತಿಗೆ ಜೀರ್ಣಾಂಗ ವ್ಯವಸ್ಥೆ ಕೂಡ ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಆದರೆ, ರಾತ್ರಿ ಬಿಯರ್ ಕುಡಿಯುವಾಗ ಒಂದು ಮಿತಿಯಲ್ಲಿ ಕುಡಿಯಬೇಕು. ಮಲಗುವ ಮುನ್ನ ಬಿಯರ್ ಕುಡಿಯುವುದರಿಂದ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕು ಎಂದು ಅನಿಸುತ್ತದೆ ಇದರಿಂದ ನಿದ್ರೆಗೆ ತೊಂದರೆಯಾಗುತ್ತದೆ. ಅಷ್ಟೇಅಲ್ಲ, ಮರುದಿನದ ಹ್ಯಾಂಗೊವರ್‌ಗೆ ಕಾರಣವಾಗಬಹುದು. ಹಾಗಾಗಿ ರಾತ್ರಿಯಲ್ಲಿ ಬಿಯರ್ ಕುಡಿಯುವಾಗ, ಅದನ್ನು ಸೀಮಿತ ಪ್ರಮಾಣದಲ್ಲಿ ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ನಾಲಿಗೆಗೆ ರುಚಿಕರ ಮಾತ್ರವಲ್ಲ, ಹಾಟ್ ಚಾಕೊಲೇಟ್ ಕುಡಿಯುವುದರಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ!

ಸರಿಯಾದ ಸಮಯ ಯಾವುದು?

ಆರೋಗ್ಯ ತಜ್ಞರ ಪ್ರಕಾರ, ಬಿಯರ್ ಸೇರಿದಂತೆ ಮದ್ಯಪಾನಕ್ಕೆ ಬೆಳಿಗ್ಗೆ ಒಳ್ಳೆಯ ಸಮಯವಲ್ಲ. ಪ್ರತಿದಿನ ಬಿಯರ್ ಕುಡಿಯಬಾರದು ವಾರಕ್ಕೆ ಒಮ್ಮೆ ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ಆಗಲೂ, ರಾತ್ರಿಯಲ್ಲಿ ಸರಿಯಾದ ಆಹಾರದೊಂದಿಗೆ ಕುಡಿಯುವುದು ಸುರಕ್ಷಿತವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಮಿತವಾಗಿ ಮಾತ್ರ ಮದ್ಯಪಾನ ಮಾಡಿ. ಅದನ್ನು ದೈನಂದಿನ ಅಭ್ಯಾಸವನ್ನಾಗಿ ಮಾಡಿಕೊಳ್ಳಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

NFSU Dharwad Recruitment 2025: ರಾಷ್ಟ್ರೀಯ ವಿಧಿವಿಜ್ಞಾನ ವಿವಿಯಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇಮಕಾತಿ – Kannada News | NFSU Dharwad Recruitment 2025: Asst Professor Vacancies, Apply Before Dec 28

ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ

ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ (NFSU), ಅಧಿಕೃತ ಅಧಿಸೂಚನೆಯ ಮೂಲಕ ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ ಅದರಲ್ಲೂ ವಿಶೇಷವಾಗಿ ಧಾರವಾಡದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 28ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

NFSU ಹುದ್ದೆಯ ಅಧಿಸೂಚನೆ:

  • ಸಂಸ್ಥೆಯ ಹೆಸರು : ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ (NFSU)
  • ಹುದ್ದೆಗಳ ಸಂಖ್ಯೆ: 5
  • ಉದ್ಯೋಗ ಸ್ಥಳ: ಧಾರವಾಡ
  • ಹುದ್ದೆಯ ಹೆಸರು: ಸಹಾಯಕ ಪ್ರಾಧ್ಯಾಪಕ
  • ವೇತನ: ತಿಂಗಳಿಗೆ 75,000 – 90,000 ರೂ.

ಶೈಕ್ಷಣಿಕ ಅರ್ಹತೆ:

NFSU ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ M.Sc , ME/ M.Tech, Ph.D ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ:

ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 01-12-2025 ರಂತೆ 45 ವರ್ಷ ಮೀರಬಾರದು.

ಅರ್ಜಿ ಶುಲ್ಕ:

  • ಸಾಮಾನ್ಯ, ಒಬಿಸಿ, ಇಡಬ್ಲ್ಯೂಎಸ್ ಅಭ್ಯರ್ಥಿಗಳು: 1,000 ರೂ.
  • ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು:500 ರೂ.

ಇದನ್ನೂ ಓದಿ: 946 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲನೆಯದಾಗಿ NFSU ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
  • NFSU ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಈ ಲಿಂಕ್​ ಕ್ಲಿಕ್​ ಮಾಡಿ.
  • ಅರ್ಜಿ ನಮೂನೆಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ (ಅನ್ವಯಿಸಿದರೆ) ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
    ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ.
  • ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೊನೆಯದಾಗಿ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
  • ಬಹು ಮುಖ್ಯವಾಗಿ ಅರ್ಜಿ ಸಂಖ್ಯೆಯನ್ನು ಕ್ಯಾಪ್ಚರ್​ ಮಾಡಿ ಇಟ್ಟುಕೊಳ್ಳಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:14 pm, Thu, 18 December 25

Source link

ಭಾರತದ ಪ್ರಧಾನಿಗೆ 29ನೇ ಜಾಗತಿಕ ಗೌರವ; ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ – Kannada News | PM Narendra Modi conferred Order of Oman award Omans Top National Honour In Muscat

ಮಸ್ಕತ್, ಡಿಸೆಂಬರ್ 18: ಭಾರತ-ಓಮನ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ನೀಡಿದ ಕೊಡುಗೆಗಳಿಗಾಗಿ ಪ್ರಧಾನಿ ನರೇಂದ್ರ ಮೋದಿಗೆ ಆರ್ಡರ್ ಆಫ್ ಓಮನ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಎರಡೂ ದೇಶಗಳ ನಡುವಿನ ಸಂಬಂಧಗಳನ್ನು ಬಲಪಡಿಸುವಲ್ಲಿ ಮೋದಿ ಅವರ ಪಾತ್ರವನ್ನು ಗುರುತಿಸಿ ಮಸ್ಕತ್ ಸುಲ್ತಾನ ಹೈಥಮ್ ಬಿನ್ ತಾರಿಕ್ ಅವರು ಇಂದು ಪ್ರಧಾನಿ ನರೇಂದ್ರ ಮೋದಿ (PM Modi in Oman) ಅವರಿಗೆ ಸುಲ್ತಾನರ ವಿಶಿಷ್ಟ ನಾಗರಿಕ ಗೌರವವಾದ ಆರ್ಡರ್ ಆಫ್ ಓಮನ್ ಅನ್ನು ಪ್ರದಾನ ಮಾಡಿದರು.

ಈ ಪ್ರಶಸ್ತಿಯನ್ನು ಈ ಮೊದಲು ರಾಣಿ ಎಲಿಜಬೆತ್ II, ನೆದರ್ಲ್ಯಾಂಡ್ಸ್‌ನ ರಾಣಿ ಮ್ಯಾಕ್ಸಿಮಾ, ಜಪಾನ್‌ನ ಚಕ್ರವರ್ತಿ ಅಕಿಹಿಟೊ, ನೆಲ್ಸನ್ ಮಂಡೇಲಾ ಮತ್ತು ಜೋರ್ಡಾನ್ ರಾಜ ಅಬ್ದುಲ್ಲಾ ಅವರಂತಹ ಗಣ್ಯರಿಗೆ ನೀಡಲಾಗಿತ್ತು. ಆ ಸಾಲಿಗೆ ಇದೀಗ ಪ್ರಧಾನಿ ಮೋದಿಯೂ ಸೇರಿದ್ದಾರೆ. ಮೋದಿಯವರಿಗೆ ಇದು 29ನೇ ಜಾಗತಿಕ ಗೌರವವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಬೆಳಗ್ಗೆ, ರಾತ್ರಿ; ಸ್ನಾನ ಮಾಡಲು ಸೂಕ್ತ ಸಮಯ ಯಾವುದು ಗೊತ್ತಾ? – Kannada News | What is the best time to take a bath?

ದಿನನಿತ್ಯ ಸ್ನಾನ (bath) ಮಾಡುವುದು ತುಂಬಾನೇ ಮುಖ್ಯವಾಗಿದೆ.  ಏಕೆಂದರೆ ಸ್ನಾನವು ದೇಹವನ್ನು ಹೊರಗಿನಿಂದ ಶುದ್ಧೀಕರಿಸುವುದಷ್ಟೇ ಅಲ್ಲ, ಮನಸ್ಸಿಗೆ ಶಾಂತಿ ನೀಡುತ್ತದೆ ಮತ್ತು ಆರೋಗ್ಯವನ್ನೂ ಕಾಪಾಡುತ್ತದೆ. ಹಾಗಾಗಿ ಬಹುತೇಕ ಹೆಚ್ಚಿನವರು ಪ್ರತಿನಿತ್ಯ ತಪ್ಪದೆ ಸ್ನಾನ ಮಾಡ್ತಾರೆ. ಕೆಲವರು ಬೆಳಗ್ಗೆ ಸ್ನಾನ ಮಾಡಿದ್ರೆ, ಇನ್ನೂ ಒಂದಷ್ಟು ಜನರಿಗೆ ಸಂಜೆ, ರಾತ್ರಿ ಸ್ನಾನ ಮಾಡುವ ಅಭ್ಯಾಸ ಇರುತ್ತದೆ. ರಾತ್ರಿ ಅಥವಾ ಬೆಳಗ್ಗೆ ಇವೆರಡರಲ್ಲಿ ಸ್ನಾನಕ್ಕೆ ಯಾವ ಟೈಮ್‌ ಬೆಸ್ಟ್‌? ಯಾವ ಸಮಯದಲ್ಲಿ ಸ್ನಾನ ಮಾಡಿದರೆ ಪ್ರಯೋಜಗಳು ಹೆಚ್ಚು ಎಂಬ ಇಂಟರೆಸ್ಟಿಂಗ್‌ ಸಂಗತಿಯನ್ನು ತಿಳಿಯಿರಿ.

ಸ್ನಾನ ಮಾಡಲು ಯಾವ ಸಮಯ ಉತ್ತಮ?

ಸ್ನಾನ ಮಾಡಲು ಸರಿಯಾದ ಸಮಯವು ನಿಮ್ಮ ವೈಯಕ್ತಿಕ ದಿನಚರಿ, ಕೆಲಸದ ದಿನಚರಿ ಮತ್ತು ಜೀವನಶೈಲಿಯನ್ನು ಅವಲಂಬಿಸಿರುತ್ತದೆ. ನಿಮ್ಮ ದಿನವನ್ನು ಶಕ್ತಿಯಿಂದ ಪ್ರಾರಂಭಿಸಲು ಬಯಸಿದರೆ, ಬೆಳಿಗ್ಗೆ ಸ್ನಾನ ಮಾಡುವುದು ಸೂಕ್ತ.ನೀವು  ಆಯಾಸವನ್ನು ತೊಡೆದುಹಾಕಲು ಒತ್ತಡ ನಿವಾರಿಸಲು ಮತ್ತು ಉತ್ತಮ ನಿದ್ರೆ ಪಡೆಯಲು ಬಯಸಿದರೆ, ರಾತ್ರಿಯ ಸಮಯವು ಸ್ನಾನ ಮಾಡಲು ಉತ್ತಮವಾಗಿದೆ. ಕೆಲವೊಮ್ಮೆ ಎರಡೂ ಸಮಯಗಳಲ್ಲಿ ಸ್ನಾನ ಮಾಡುವುದರಿಂದ ದೇಹ ಮತ್ತು ಮನಸ್ಸು ಸಮತೋಲನದಲ್ಲಿರುತ್ತವೆ.

ಬೆಳಿಗ್ಗೆ ಸ್ನಾನ ಮಾಡುವುದರಿಂದಾಗುವ ಪ್ರಯೋಜನಗಳೇನು?

ತಾಜಾತನ ಮತ್ತು ಚೈತನ್ಯ :ಬೆಳಿಗ್ಗೆ ಸ್ನಾನ ಮಾಡುವುದರಿಂದ ದೇಹ ಮತ್ತು ಮನಸ್ಸು ಎರಡೂ ಉಲ್ಲಾಸಗೊಳ್ಳುತ್ತವೆ. ಇದು ದಿನವನ್ನು ಪ್ರಾರಂಭಿಸಲು ನಿಮಗೆ ಶಕ್ತಿಯನ್ನು ನೀಡುತ್ತದೆ ಮತ್ತು ಸೋಮಾರಿತನವನ್ನು ದೂರ ಮಾಡುತ್ತದೆ. ತಣ್ಣೀರಿನ ಸ್ನಾನವು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ,  ದೇಹವನ್ನು ಹೆಚ್ಚು ಕ್ರಿಯಾಶೀಲವಾಗಿಸುತ್ತದೆ.

ಮನಸ್ಸನ್ನು ಶಾಂತಗೊಳಿಸುತ್ತದೆ: ಬೆಳಿಗ್ಗೆ ಸ್ನಾನ ಮಾಡುವುದರಿಂದ ಮೆದುಳು ಸಕ್ರಿಯಗೊಳ್ಳುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.

ಚರ್ಮಕ್ಕೆ ಪ್ರಯೋಜನಕಾರಿ:   ಚರ್ಮವನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡುತ್ತವೆ. ಇದು ಚರ್ಮದಲ್ಲಿ ಸಂಗ್ರಹವಾದ ಕೊಳಕು ಮತ್ತು ಎಣ್ಣೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಪ್ರತಿನಿತ್ಯ ಪುಸ್ತಕ ಓದುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಸಂಜೆ ಸ್ನಾನ ಮಾಡುವುದರಿಂದಾಗುವ ಪ್ರಯೋಜನಗಳೇನು?

ಒತ್ತಡವನ್ನು ನಿವಾರಣೆ: ಸಂಜೆ ಸ್ನಾನ ಮಾಡುವುದರಿಂದ ದಿನದ ಆಯಾಸ ಮತ್ತು ಒತ್ತಡ ನಿವಾರಣೆಯಾಗುತ್ತದೆ. ಬೆಚ್ಚಗಿನ ಸ್ನಾನವು ಸ್ನಾಯುಗಳ ನೋವನ್ನು ಶಮನಗೊಳಿಸುತ್ತದೆ ಮತ್ತು ದೇಹಕ್ಕೆ ವಿಶ್ರಾಂತಿ ನೀಡುತ್ತದೆ.

ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ: ಸಂಜೆ ಸ್ನಾನ ಮಾಡುವುದರಿಂದ ನಿದ್ರೆಯ ಗುಣಮಟ್ಟವನ್ನು ಸುಧಾರಿಸಬಹುದು. ಬೆಚ್ಚಗಿನ ಸ್ನಾನದ ನಂತರ, ನಿಮ್ಮ ದೇಹದ ಉಷ್ಣತೆಯು ಕ್ರಮೇಣ ಕಡಿಮೆಯಾಗುತ್ತದೆ, ಇದು ನಿದ್ರಿಸಲು ನಿಮಗೆ ಸಹಾಯ ಮಾಡುತ್ತದೆ.

ದೇಹ ಶುದ್ಧೀಕರಣ: ದೇಹದಲ್ಲಿ ಅಂಟಿಕೊಂಡ ಧೂಳು, ಬೆವರು ಮತ್ತು ಇತರ ಕಲ್ಮಶಗಳನ್ನು ಪರಿಣಾಮಕಾರಿಯಾಗಿ ತೆಹೆದು ಹಾಕಲು ಸಂಜೆ ಸ್ನಾನ ಮಾಡುವುದು ಉತ್ತಮ.

ಚರ್ಮಕ್ಕೆ ಪ್ರಯೋಜನಕಾರಿ:  ಸಂಜೆ ಸ್ನಾನ ಮಾಡುವುದರಿಂದ ಚರ್ಮದ ಮೇಲೆ ಸಂಗ್ರಹವಾಗಿರುವ ಮೇಕಪ್, ಧೂಳು ಮತ್ತು ಮಾಲಿನ್ಯದ ಕಣಗಳು ನಿವಾರಣೆಯಾಗುತ್ತವೆ, ಇದು ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link