NEET Exam 2026: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ – Kannada News | NEET UG 2026 Paper Leak: Minister Madhu Bangarappa Slams Central Govt Over ‘Failed Administration’; Challenges R Ashoka
ಬೆಂಗಳೂರು, ಮೇ 12: ನೀಟ್ ಯುಜಿ 2026 ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೇಂದ್ರ ಸರ್ಕಾರದ ಆಡಳಿತದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು ರಾಜ್ಯ ಸರ್ಕಾರದಲ್ಲಿ ಆಗಿದೆಯೇ ಎಂದು ಪ್ರಶ್ನಿಸಿದ ಅವರು, ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರಿಗೆ ಈ ಪ್ರಶ್ನೆ ಕೇಳಿ ಎಂದು ಸವಾಲು ಹಾಕಿದರು. ಸತತ ಎರಡನೇ ವರ್ಷವೂ ಇಂತಹ ಅವ್ಯವಸ್ಥೆ ನಡೆದಿರುವುದು ಮಕ್ಕಳ ಭವಿಷ್ಯಕ್ಕೆ ದೊಡ್ಡ ಅನ್ಯಾಯವಾಗಿದೆ ಎಂದು ಮಧು ಬಂಗಾರಪ್ಪ…