Category Archives: Blog

Your blog category

Chanakya Niti: ಪುರುಷರೇ… ಇಂತಹ ಹೆಣ್ಣನ್ನು ಯಾವ ಕಾರಣಕ್ಕೂ ಮದುವೆಯಾಗಬೇಡಿ – Kannada News | Chanakya Niti: Men should not marry a woman with these qualities

ಮದುವೆ ಎನ್ನುವಂತಹದ್ದು ಜೀವನದ ಪ್ರಮುಖ ಘಟ್ಟ ಮಾತ್ರವಲ್ಲ ಜೀವನದ ಬಹುದೊಡ್ಡ ತಿರುವು ಕೂಡ ಹೌದು. ಆದ್ದರಿಂದ ಸರಿಯಾದ ಜೀವನ ಸಂಗಾತಿಯನ್ನು (Life Partner) ಆಯ್ಕೆ ಮಾಡುವುದು ತುಂಬಾನೇ ಮುಖ್ಯವಾಗಿದೆ. ಜೀವನ ಪಯಣದಲ್ಲಿ ನಿಮ್ಮ ಜೊತೆಗಿರುವ ಸಂಗಾತಿ ಸದ್ಗುಣಶೀಲರಾಗಿದ್ದರೆ, ಆ ಮನೆ ಸ್ವರ್ಗವಾಗುತ್ತದೆ. ಅದೇ ಕೆಲವು ನಕಾರಾತ್ಮಕ ಗುಣಗಳನ್ನು ಹೊಂದಿರುವ ಯಾರಾದರೂ ನಿಮ್ಮ ಜೀವನದಲ್ಲಿ ಪ್ರವೇಶಿಸಿದರೆ, ನಿಮಗೆ ಮನಸ್ಸಿನ ಶಾಂತಿ ಇರುವುದಿಲ್ಲ ಎಂದು ಚಾಣಕ್ಯ ಎಚ್ಚರಿಸಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ಪುರುಷನೂ ಮದುವೆಯಾಗುವ ಮುನ್ನ ಈ ಕೆಲವು ವಿಷಯಗಳತ್ತ ಗಮನ ಹರಿಸಬೇಕು, ಅದರಲ್ಲೂ ಈ ಕೆಲವು ಗುಣಗಳಿರುವ ಹೆಣ್ಣನ್ನು ಮದುವೆಯಾಗಲೇಬಾರದು ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ. ಹಾಗಿದ್ರೆ ಪುರುಷರು ಎಂತಹ ಹೆಣ್ಣನ್ನು ಮದುವೆಯಾಗಬಾರದು ಎಂಬುದನ್ನು ನೋಡೋಣ ಬನ್ನಿ,

ಪುರುಷರು ಇಂತಹ ಹೆಣ್ಣನ್ನು ಮದುವೆಯಾಗಬಾರದಂತೆ:

ಸೌಂದರ್ಯದ ಹೆಮ್ಮೆ ಪಡುವ ಹೆಣ್ಣು: ಚಾಣಕ್ಯನ ಪ್ರಕಾರ, ಒಬ್ಬ ಹುಡುಗಿ ತನ್ನ ಬಾಹ್ಯ ಸೌಂದರ್ಯದ ಬಗ್ಗೆ ಅತಿಯಾಗಿ ಹೆಮ್ಮೆಪಡುತ್ತಿದ್ದರೆ ಅಂತಹ ಹೆಣ್ಣನ್ನು ಮದುವೆಯಾಗಬಾರದಂತೆ. ಆಕೆ ತನ್ನ ಸ್ವಾರ್ಥದ ಬಗ್ಗೆ ಮಾತ್ರ ಯೋಚಿಸುತ್ತಾಳೆ.  ಅವಳು ಇತತರನ್ನು ಖುಷಿಯಾಗಿ ನೋಡಿಕೊಳ್ಳಲು ಸಾಧ್ಯವೇ ಇಲ್ಲ.

ಇತರರ ಬಗ್ಗೆ ಕೆಟ್ಟ ಮಾತುಗಳನ್ನಾಡುವ ಮಹಿಳೆ: ಯಾವಾಗಲೂ ಇತರರ ಬಗ್ಗೆ ಕೆಟ್ಟದಾಗಿ ಮಾತನಾಡುವ ಅಥವಾ ಇತರರ ಬಗ್ಗೆ ಕೆಟ್ಟ ಆಲೋಚನೆಗಳನ್ನು ಹೊಂದಿರುವ , ಚಾಡಿ ಹೇಳುವ ಮಹಿಳೆಯರಿಂದ ದೂರವಿರಬೇಕು. ಅಂತಹ ಮಹಿಳೆಯರು ಕುಟುಂಬದಲ್ಲಿ ಅಶಾಂತಿಯನ್ನು ಉಂಟುಮಾಡುತ್ತಾರೆ. ಹಾಗಾಗಿ ಅಂತಹ ಹೆಣ್ಣಿನಿಂದ ದೂರವಿದ್ದಷ್ಟು ಒಳ್ಳೆಯದು.

ಭೌತಿಕ ಸೌಕರ್ಯಗಳ ಬಗ್ಗೆ ಯೋಚಿಸುವುದು: ಮನೆ, ಕಾರು, ಆಭರಣ, ಹಣ ಅಂತೆಲ್ಲಾ ಭೌತಿಕ ಸೌಕರ್ಯಗಳಿಗೆ ಆದ್ಯತೆ ನೀಡುವ ಹುಡುಗಿಯರು ಅಥವಾ ಹೆಂಡತಿಯರು ತಮ್ಮ ಗಂಡನ ಭಾವನೆಗಳಿಗೆ ಎಂದಿಗೂ ಬೆಲೆ ಕೊಡಲಾರರು. ಇಂತಹ ಸ್ವಾರ್ಥಿ ಹೆಣ್ಣನ್ನು ಮದುವೆಯಾದರೆ ಜೀವನಪರ್ಯಂತ ನರಕಯಾತನೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ ಆಚಾರ್ಯ ಚಾಣಕ್ಯ.

ಯಾವಾಗಲೂ ಇತರರನ್ನು ಅವಮಾನಿಸುವುದು: ಆಚಾರ್ಯ ಚಾಣಕ್ಯರ ಪ್ರಕಾರ, ಇತರರನ್ನು ನಿರಂತರವಾಗಿ ಅವಮಾನಿಸುವ ಮಹಿಳೆಯನ್ನು ಎಂದಿಗೂ ಮದುವೆಯಾಗಬಾರದು. ಅಂತಹ ಹುಡುಗಿಯರು ಎಂದಿಗೂ ತಮ್ಮ ಕುಟುಂಬಕ್ಕೆ ಗೌರವವನ್ನು ನೀಡಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: ಅತಿಯಾದ ನಿರೀಕ್ಷೆ ಒಳ್ಳೆಯದಲ್ಲ ಅನ್ನೋದು ಇದೇ ಕಾರಣಕ್ಕೆ ನೋಡಿ

ಸುಳ್ಳಿನ ಹಾದಿಯಲ್ಲಿ ನಡೆಯುವ ಹೆಣ್ಣು: ಚಾಣಕ್ಯನ ಪ್ರಕಾರ, ನಿರಂತರವಾಗಿ ಸುಳ್ಳು ಹೇಳುವ ಮತ್ತು ಕೆಟ್ಟ ಮಾರ್ಗವನ್ನು ಅನುಸರಿಸುವ ಅಭ್ಯಾಸ ಹೊಂದಿರುವ ಹೆಣ್ಣನ್ನು ಮದುವೆಯಾಗಬಾರದು. ಆಕೆ ಗಂಡನಿಗೆ ಮಾತ್ರವಲ್ಲ ಕುಟುಂಬಕ್ಕೂ ಹಾನಿಕಾರಕ ಎಂದಿದ್ದಾರೆ ಚಾಣಕ್ಯ. ಅಲ್ಲದೆ ಅಂತಹ ಹೆಣ್ಣು ಸಂಬಂಧದಲ್ಲಿ ಪ್ರಾಮಾಣಿಕಳಾಗಿ ಇರಲೂ ಸಾಧ್ಯವಿಲ್ಲ.

ಅಹಂಕಾರ ಮನೋಭಾವ: ಇತರರಿಗಿಂತ ತಾವು ಶ್ರೇಷ್ಠರೆಂದು ಭಾವಿಸುವ, ಅಹಂಕಾರ  ಭಾವವನ್ನು ಹೊಂದುರುವ ಹೆಣ್ಣನ್ನು ಮದುವೆಯಾಗಬಾರದು. ಏಕೆಂದರೆ ಆಕೆ ಸಂಬಂಧಗಳಿಗೆ ಗೌರವಿಸಲು ಸಾಧ್ಯವಿಲ್ಲ. ಇದು ಮನೆಯಲ್ಲಿ ಘರ್ಷಣೆಗಳಿಗೆ ಕಾರಣವಾಗಬಹುದು. ಹಾಗಾಗಿ ಇಂತಹ ಹೆಣ್ಣಿನಿಂದ ದೂರವಿರುವುದು ಉತ್ತಮ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿತ್ರದುರ್ಗದಲ್ಲಿ ಅದ್ಧೂರಿ ಬಿಎಸ್​ವೈ ಅಭಿಮಾನೋತ್ಸವ: ಯಡಿಯೂರಪ್ಪರ 50 ವರ್ಷಗಳ ರಾಜಕೀಯ ಪಯಣ ಕೊಂಡಾಡಿದ ಅಮಿತ್​ ಶಾ – Kannada News | BSY Abhimanotsava: BS Yediyurappa’s 50 Year Political Legacy; Amit Shah Praises His Contribution to Karnataka BJP

ಯಡಿಯೂರಪ್ಪ, ಅಮಿತ್ ಶಾImage Credit source: tv9 kannada

ಚಿತ್ರದುರ್ಗ, ಮೇ 09: ರಾಜಕಾರಣದಲ್ಲಿ ಕೆಲವರು ನಿರ್ಮಿತ‌ ರಸ್ತೆಯಲ್ಲಿ ನಡೆಯುತ್ತಾರೆ. ಇನ್ನು ಕೆಲವರು ಖುದ್ದಾಗಿ ರಸ್ತೆ ನಿರ್ಮಾಣ‌ ಮಾಡಿ ಇತಿಹಾಸ ಸೃಷ್ಟಿಸುತ್ತಾರೆ. ದಕ್ಷಿಣ ಭಾರತದಲ್ಲಿ ಬಿಎಸ್​​ ಯಡಿಯೂರಪ್ಪ (BS Yediyurappa) ಹೆಸರು ಸುವರ್ಣಾಕ್ಷರದಲ್ಲಿ ಉಳಿಯಲಿದೆ. ರಾಜಕೀಯಕ್ಕೆ ಬರುವ ಯುವಕರು ಬಿಎಸ್​​ ಯಡಿಯೂರಪ್ಪ ಸಂಘರ್ಷ ಅರಿಯಿರಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ.

ಮುಖ್ಯಾಂಶಗಳು

  • ಚಿತ್ರದುರ್ಗದಲ್ಲಿಂದು ನಡೆದ ಅದ್ಧೂರಿ ಬಿಎಸ್​ವೈ ಅಭಿಮಾನೋತ್ಸವ
  • ಕೇಂದ್ರ ಗೃಹ ಸಚಿವ ಅಮಿತ್​ ಶಾ ಸೇರಿದಂತೆ ರಾಜ್ಯ ರಾಜಕೀಯ ನಾಯಕರು ಭಾಗಿ
  • ಬಿಎಸ್​​ ಯಡಿಯೂರಪ್ಪರನ್ನ ಕೊಂಡಾಡಿದ ಅಮಿತ್​ ಶಾ

ಬಿಎಸ್​ ಯಡಿಯೂರಪ್ಪರಿಂದ ಕಲಿಯುವುದು ಬಹಳಷ್ಟಿದೆ: ಅಮಿತ್​ ಶಾ

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ 50 ವರ್ಷಗಳ ರಾಜಕೀಯ ಜೀವನ ಪೂರ್ಣ ಹಿನ್ನೆಲೆ ಇಂದು ಚಿತ್ರದುರ್ಗದ ಮಾದಾರ ಚನ್ನಯ್ಯ ಮಠದ ಸಮೀಪ ಬಿಎಸ್​ವೈ ಅಭಿಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಇಚ್ಛಾಶಕ್ತಿ ಮತ್ತು ಸಂಘದ ಸಂಸ್ಕಾರ ಯಡಿಯೂರಪ್ಪ ಅವರ ವ್ಯಕ್ತಿತ್ವ ಎಂದರು.

ಇದನ್ನೂ ಓದಿ: ಬಿಎಸ್​​ವೈ ಅಭಿಮಾನೋತ್ಸವ: ಯಡಿಯೂರಪ್ಪ ಬರ್ತಿದ್ದಂತೆ ಕಾರ್ಯಕರ್ತರಿಂದ ಜೈಕಾರ; ಹೇಗಿದೆ ನೋಡಿ ರಾಜಾಹುಲಿ ಎಂಟ್ರಿ

ಶಿಕಾರಿಪುರದಿಂದ ಶಾಸಕರಾಗಿ ಸೇವೆ ಸಲ್ಲಿಸಿದ ಯಡಿಯೂರಪ್ಪ, ಬಸ್ ಸಿಗದಿದ್ದರೆ ಸೈಕಲ್ ಏರಿ ಇಡೀ ರಾಜ್ಯ ಸುತ್ತಿ ಪಕ್ಷ ಕಟ್ಟಿದ್ದಾರೆ. ರೈತರ ಮನದಲ್ಲಿ ಅವರು ಆಳವಾಗಿ ಬೇರೂರಿದ್ದಾರೆ. ಜನ ತಮ್ಮನ್ನು ಭೇಟಿಯಾದವರ ಬಗ್ಗೆ ಡೈರಿಯಲ್ಲಿ ಬರೆದುಕೊಳ್ಳುತ್ತಾರೆ. ಅವರಿಂದ ಕಲಿಯುವುದು ಬಹಳಷ್ಟಿದೆ ಎಂದು ಅಮಿತ್ ಶಾ ಶ್ಲಾಘಿಸಿದರು.

ರಾಜ್ಯದಲ್ಲಿ ಅನೇಕ ಕಡೆ ನಾನು ಹೋಗಿದ್ದೇನೆ. ಎಲ್ಲ ಕಡೆ ಯಡಿಯೂರಪ್ಪ ಅವರ ಕೆಲಸ-ಕಾರ್ಯಗಳು ದಾಖಲಾಗಿವೆ. ಸಂಗೊಳ್ಳಿ ರಾಯಣ್ಣ ಸಮಾಧಿ ಸ್ಥಳಕ್ಕೆ ನಾನು ಭೇಟಿ ನೀಡಿದ್ದೆ. ಆ ಸ್ಥಳದ ಬಗ್ಗೆ ಅಲ್ಲಿ ಸಂಪೂರ್ಣ ವಿವರಣೆ ದಾಖಲಾಗಿತ್ತು. ಅದನ್ನು ಬಿ.ಎಸ್​.ಯಡಿಯೂರಪ್ಪ ಮಾಡಿದ್ದಾರೆ. ಲಿಂಗಾಯತ, ದಲಿತ, ಒಬಿಸಿ ಸೇರಿದಂತೆ ಎಲ್ಲ ವರ್ಗಗಳ ಸೌಹಾರ್ದತೆಯೇ ಯಡಿಯೂರಪ್ಪ ಅವರ ಕೆಲಸ ಎಂದು ಅವರು ಬಣ್ಣಿಸಿದರು.

ಯಡಿಯೂರಪ್ಪರ ಜೀವನ ಸಂಘರ್ಷದಿಂದ ತುಂಬಿತ್ತು

ಯಡಿಯೂರಪ್ಪ ಅವರ 50 ವರ್ಷಗಳ ಸಾರ್ವಜನಿಕ ಜೀವನ ಸಂಘರ್ಷದಿಂದ ತುಂಬಿತ್ತು. ಅವರಷ್ಟು ಸಂಘರ್ಷದ ಜೀವನ ದಕ್ಷಿಣ ಭಾರತದಲ್ಲಿ ಯಾರೂ ಅನುಭವಿಸಿಲ್ಲ. ರೈತರ ಕಲ್ಯಾಣವೇ, ರಾಜ್ಯದ ಕಲ್ಯಾಣ ಎನ್ನುವ ಕೆಲಸ ಯಡಿಯೂರಪ್ಪ ಮಾಡಿದ್ದಾರೆ. ರೈತರ ಹೋರಾಟಕ್ಕೆ, ತುರ್ತು ಪರಿಸ್ಥಿತಿ ಸಂಧರ್ಭದಲ್ಲಿ ಜೈಲುವಾಸ ಅನುಭವಿಸಿದರು. ಯಡಿಯೂರಪ್ಪ ಅವರು ಇಲ್ಲದಿದ್ದರೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟವಾಗುತ್ತಿತ್ತು. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚನೆ ಮಾಡಿ ಡಿಸಿಎಂ ಮತ್ತು ಸಿಎಂ ಆದರು. ಇದೆಲ್ಲದರ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಹೀಗಾಗಿ ನಾನು ಅವರ ಭಾಷಣ ಸಂಪೂರ್ಣ ಕೇಳಿಸಿಕೊಂಡೇ ಹೋಗುತ್ತೇನೆ ಎಂದರು.

ವೀರ ಮದಕರಿ ನಾಯಕರ ಸ್ಮಾರಕ ಮಾಡೋಣ ಎಂದ ಅಮಿತ್​ ಶಾ 

ಇನ್ನು ಯಡಿಯೂರಪ್ಪ ಅವರ ಕಾರಣದಿಂದ ಇಂದು ಎಲ್ಲಾ ಮಠ ಮಂದಿರದ ಸ್ವಾಮೀಜಿಗಳು ಒಂದೇ ವೇದಿಕೆ ಮೇಲೆ ಯಾವುದೇ ಜಾತಿ ಭೇದ ಭಾವ ಇಲ್ಲದೇ ಸೇರಿದ್ದಾರೆ. ಎಲ್ಲರು ಕೂಡ ಶಿಕ್ಷಣ ಹಾಗೂ ಹಿಂದುತ್ವಕ್ಕೆ ಒತ್ತು ಕೊಟ್ಟಿದ್ದಾರೆ. ಇದು ಚಿತ್ರದುರ್ಗದ ವೀರ ಮದಕರಿ ನಾಯಕರು ಆಳಿದ ಜಾಗ, ಅವರ ಸ್ಮಾರಕ ನಾವು ಮಾಡೋಣ, ಪ್ರಧಾನಿ ಮೋದಿ ಇದ್ದಾರೆ. ಮದಕರಿ ನಾಯಕರು ಹೈದರ್ ಅಲಿಯನ್ನು ಯುದ್ಧದಲ್ಲಿ ಸೋಲಿಸಿದ್ದರು. ಇಲ್ಲಿ ಪ್ರತಿ ಮಹಿಳೆಗೂ ಓಬವ್ವ ಪ್ರೇರಣೆ. ನಾನು ಮನಸಾರೆ ಅವರಿಗೆ ಗೌರವ ಸಲ್ಲಿಸುತ್ತೇನೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:23 pm, Sat, 9 May 26

Source link

ಮೊದಲ ಬಾರಿಗೆ ಕಾನ್ಸರ್ಟ್ ನೀಡುತ್ತಿದ್ದಾರೆ ಅಜನೀಶ್: ಇಲ್ಲಿದೆ ಮಾಹಿತಿ

ಇದು ಲೈವ್ ಕಾನ್ಸರ್ಟ್​ಗಳ ಜಮಾನ. ಎಲ್ಲ ದೊಡ್ಡ ಗಾಯಕರು, ಸಂಗೀತ ನಿರ್ದೇಶಕರುಗಳು ಲೈವ್ ಕಾನ್ಸರ್ಟ್​ಗಳನ್ನು ನೀಡುತ್ತಿದ್ದಾರೆ. ಕನ್ನಡದಲ್ಲಿ ಸಹ ರಘು ದೀಕ್ಷಿತ್, ಸಂಚಿತ್ ಹೆಗ್ಡೆ ಇನ್ನೂ ಕೆಲವರು ಕಾನ್ಸರ್ಟ್​​ಗಳನ್ನು ನೀಡುತ್ತಾ ಬಂದಿದ್ದಾರೆ. ಇದೀಗ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಕಾನ್ಸರ್ಟ್ ನೀಡಲು ರೆಡಿ ಆಗಿದ್ದಾರೆ. ಅವರೇ ನಿರ್ದೇಶಿಸಿರುವ 40ಕ್ಕೂ ಹೆಚ್ಚು ಹಾಡುಗಳನ್ನು ಅವರು ಕಾನ್ಸರ್ಟ್​ನಲ್ಲಿ ಹಾಡಲಿದ್ದಾರೆ. ಹಲವಾರು ಗಾಯಕ-ಗಾಯಕಿಯರು ಸಹ ಭಾಗಿ ಆಗಲಿದ್ದಾರೆ. ತಮ್ಮ ಕಾನ್ಸರ್ಟ್​ ಬಗ್ಗೆ ಅಜನೀಶ್ ಮಾಹಿತಿ ನೀಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

RR vs GT IPL 2026 Live Score: ಟಾಸ್ ಗೆದ್ದ ರಾಜಸ್ಥಾನ್ ಬೌಲಿಂಗ್ ಆಯ್ಕೆ – Kannada News | Rajasthan Royals vs Gujarat Titans IPL 2026 Live Cricket Score RR vs GT Match on 9th May latest news in Kannada

ಐಪಿಎಲ್ 2026 ರ 52 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ಪರಸ್ಪರ ಮುಖಾಮುಖಿಯಾಗಿವೆ. ಈ ಆವೃತ್ತಿಯಲ್ಲಿ ಎರಡೂ ತಂಡಗಳಿಗೆ ಇದು 11 ನೇ ಪಂದ್ಯವಾಗಲಿದೆ. ಎರಡೂ ತಂಡಗಳು 10 ಪಂದ್ಯಗಳಲ್ಲಿ 6 ರಲ್ಲಿ ಗೆದ್ದಿವೆ. ಆದ್ದರಿಂದ, ಎರಡೂ ತಂಡಗಳು ಏಳನೇ ಪಂದ್ಯವನ್ನು ಗೆಲ್ಲಲು ಹೋರಾಟ ನಡೆಸಲಿವೆ.

Source link

ನಾಳೆಯ ಹವಾಮಾನ: ಮೈಸೂರು ಸೇರಿ 9 ಜಿಲ್ಲೆಗಳಲ್ಲಿ ಮಳೆ, ಉತ್ತರದಲ್ಲಿ ಬಿಸಿಲಿಗೆ ಸುಡಲಿದೆ ಇಳೆ – Kannada News | Karnataka Weather Update: Rain Likely in 9 Districts; Heat Wave Continues in Parts of North Karnataka

ಬೆಂಗಳೂರು, ಮೇ 09: ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ನಾಳೆಯೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡು ಭಾಗದ ತಲಾ 2 ಜಿಲ್ಲೆಗಳು ಸೇರಿದಂತೆ, ದಕ್ಷಿಣ ಒಳನಾಡಿನ 5 ಜಿಲ್ಲೆಗಳಲ್ಲಿ ವರುಣನ ಆಗಮನದ ನಿರೀಕ್ಷೆ ಇದೆ. ಅದನ್ನು ಹೊರತುಪಡಿಸಿ ಉಳಿದಂತೆ ಬಹುತೇಕ ಜಿಲ್ಲೆಗಳಲ್ಲಿ ಒಳಹವೆ ಮುಂದುವರಿಯಲಿದೆ. ಉತ್ತರ ಕರ್ನಾಟಕದ ಹಲವೆಡೆ ತೀವ್ರ ಬಿಸಿಲಿನ ವಾತಾವರಣ ಇರಲಿದ್ದರೆ, ಬೆಂಗಳೂರು ನಗರದಲ್ಲಿ ಮಳೆಯ ಸಿಂಚನದ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಎಲ್ಲೆಲ್ಲಿ ಮಳೆ?

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಮತ್ತು ಉಡುಪಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಗದಗ ಮತ್ತು ಹಾವೇರಿಯಲ್ಲಿ ಸಣ್ಣ ಪ್ರಮಾಣದಲ್ಲಿ ವರುಣನ ಆಗಮನವನ್ನು ನಿರೀಕ್ಷಿಸಲಾಗಿದೆ. ಹಾಗೆಯೇ ದಕ್ಷಿಣ ಒಳನಾಡು ಭಾಗದ ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಮೈಸೂರು ಮತ್ತು ರಾಮನಗರದಲ್ಲಿಯೂ ಸಾಧಾರಣ ಮಳೆಯ ನಿರೀಕ್ಷೆ ಇದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಭಾರೀ ಮಳೆ! ಯೆಲ್ಲೋ ಅಲರ್ಟ್​ ಘೋಷಣೆ

ಹಲವು ಜಿಲ್ಲೆಗಳಲ್ಲಿ ಒಣ ಹವೆ

ಕರಾವಳಿ ಜಿಲ್ಲೆಗಳ ಪೈಕಿ ಉತ್ತರ ಕನ್ನಡ, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್​​, ಧಾರವಾಡ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಒಣ ಹವೆ ಕಂಡಬರಲಿದೆ. ಅದೇ ರೀತಿ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರದಲ್ಲಿಯೂ ಇದೇ ಮಾದರಿಯ ವಾತಾವರಣ ಇರಲಿದೆ.

ಬೆಂಗಳೂರಲ್ಲಿಯೂ ಮಳೆ ಸಾಧ್ಯತೆ

ರಾಜಧಾನಿ ಬೆಂಗಳೂರಿನಲ್ಲಿಯೂ ನಾಳೆ ಮಳೆಯ ಸಾಧ್ಯತೆ ಇದೆ. ಬೆಳಿಗ್ಗಿನಿಂದಲೇ ಮೋಡ ಕವಿದ ವಾತಾವರಣ ಇರುವ ಸಾಧ್ಯತೆ ಇದ್ದು, ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಸಾಧಾರಣ ಮಳೆಯಾಗಬಹುದು ಎನ್ನಲಾಗಿದೆ. ನಗರದ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್​​ ಮತ್ತು ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್​​ ಇರಲಿದೆ. ಗಾಳಿಯ ವೇಗ ಗಂಟೆಗೆ 16-18 ಕಿಲೋ ಮೀಟರ್​​ ಇರಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹಾಗಲಕಾಯಿ ಕಹಿ ತೆಗೆದು ಹಾಕಲು ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ – Kannada News | How to remove bitterness from bitter gourd? Here are some tips

ಹಾಗಲಕಾಯಿ (bitter gourd) ಅಂದ ತಕ್ಷಣ ಮೂಗು ಮುರಿಯುವವರೇ ಹೆಚ್ಚು. ಹೌದು ಹಾಗಲಕಾಯಿಯ ಕಹಿ ಅಂಶದ ಕಾರಣದಿಂದಾಗಿ ಇದನ್ನು ಯಾರು ತಿನ್ನು ಅಷ್ಟಾಇ ಇಷ್ಟಪಡುವುದಿಲ್ಲ. ಆದರೆ ಗುಣದಲ್ಲಿ ಕಹಿ ಇದ್ದರೂ ಈ ತರಕಾರಿ ಆರೋಗ್ಯಕ್ಕೆ ಸಖತ್‌ ಪ್ರಯೋಜನಕಾರಿ. ಇದರಲ್ಲಿ ವಿಟಮಿನ್‌ ಎ, ಸಿ, ಕಬ್ಬಿಣಾಂಶ, ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳು ಸಮೃದ್ಧವಾಗಿದ್ದು, ಇದು ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಹಾಗಲಕಾಯಿಯ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದಿದ್ದರೂ ಬಹುತೇಕರು  ಕಹಿ ಗುಣದ ಕಾರಣ ಇದನ್ನು ಇಷ್ಟಪಡುವುದಿಲ್ಲ. ಹೀಗಿರುವಾಗ ಈ ಕೆಲವೊಂದು ಸುಲಭ ಸಲಹೆಗಳನ್ನು ಪಾಲಿಸುವ ಮೂಲಕ ನೀವು ಹಾಗಲಕಾಯಿಯ ಪೌಷ್ಟಿಕಾಂಶದ ಮೌಲ್ಯಕ್ಕೆ ಧಕ್ಕೆಯಾಗದಂತೆ ಅದರ ಕಹಿಯನ್ನು  ತೊಡೆದುಹಾಕಬಹುದು ಮತ್ತು ಹಾಗಲಕಾಯಿಯ ರುಚಿಯಾದ ಭಕ್ಷ್ಯಗಳನ್ನು ತಯಾರಿಸಿ ತಿನ್ನುವ ಮೂಲಕ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

ಹಾಗಲಕಾಯಿ ಕಹಿ ತೆಗೆಯುವ ವಿಧಾನ:

ಉಪ್ಪು: ಹಾಗಲಕಾಯಿಯ ಕಹಿಯನ್ನು ತೆಗೆದುಹಾಕಲು, ನೀವು ಉಪ್ಪನ್ನು ಬಳಸಬಹುದು. ಹಾಗಲಕಾಯಿಯನ್ನು ಸಿಪ್ಪೆ ತೆಗೆದು ಕತ್ತರಿಸಿ, ಅದರ ಮೇಲೆ ಸ್ವಲ್ಪ ಉಪ್ಪು ಸಿಂಪಡಿಸಿ, ಒಂದು ಗಂಟೆ ಹಾಗೆಯೇ ಬಿಡಿ. ಉಪ್ಪು ಕಹಿ ರಸವನ್ನು ಹೊರಹಾಕುತ್ತದೆ. ನಂತರ, ಹಾಗಲಕಾಯಿಯನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಇದು ಕಹಿಯನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ.

ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿ: ಕತ್ತರಿಸಿದ ಹಾಗಲಕಾಯಿಯನ್ನು 15-20 ನಿಮಿಷಗಳ ಕಾಲ ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸುವುದರಿಂದ ಅದರ ಕಹಿ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಬೇಕಾದರೆ ನೀವು ಸ್ವಲ್ಪ ಉಪ್ಪನ್ನು ಕೂಡ ಸೇರಿಸಬಹುದು.

ನಿಂಬೆ ರಸ: ತುಂಡರಿಸಿದ ಹಾಗಲಕಾಯಿ ಮೇಲೆ ಸುರಿಯಿರಿ  ಮತ್ತು 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಿಂಬೆಯ ಹುಳಿಯು ಹಾಗಲಕಾಯಿಯ ಕಹಿಯನ್ನು ಸಮತೋಲನಗೊಳಿಸುತ್ತದೆ.

ವಿನೆಗರ್ ಮತ್ತು ಸಕ್ಕರೆಯ ಬಳಕೆ: ಹಾಗಲಕಾಯಿಯನ್ನು ವಿನೆಗರ್ ಮತ್ತು ಸ್ವಲ್ಪ ಸಕ್ಕರೆಯಲ್ಲಿ ಸ್ವಲ್ಪ ಹೊತ್ತು ಮ್ಯಾರಿನೇಟ್ ಮಾಡಿ. ವಿನೆಗರ್ ನ ಆಮ್ಲೀಯ ಗುಣ ಮತ್ತು ಸಕ್ಕರೆಯ ಸಿಹಿ ರುಚಿ ಹಾಗಲಕಾಯಿಯ ಕಹಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮೊಸರು ಬಳಸಿ: ಹಾಗಲಕಾಯಿಯ ಕಹಿಯನ್ನು ತೆಗೆದುಹಾಕಲು ನೀವು ಮೊಸರನ್ನು ಸಹ ಬಳಸಬಹುದು. ಮೊದಲು ಹಾಗಲಕಾಯಿಯನ್ನು ತೊಳೆದು ಕತ್ತರಿಸಿ. ನಂತರ, ಅದನ್ನು ಮೊಸರು ಅಥವಾ ಮಜ್ಜಿಗೆಯಲ್ಲಿ ಸ್ವಲ್ಪ ಸಮಯ ನೆನೆಸಿಡಿ. ಇದು ಹಾಗಲಕಾಯಿಯ ಕಹಿಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಅಡುಗೆ ಮಾಡುವ ಮೊದಲು ಕೋಳಿ ಮಾಂಸವನ್ನು ತೊಳೆಯಬಾರದಂತೆ? ಏಕೆ ಗೊತ್ತಾ?

ಎಣ್ಣೆ ಬಳಸಿ: ಹಾಗಲಕಾಯಿಯನ್ನು ಎಣ್ಣೆಯಲ್ಲಿ ಹುರಿಯುವುದರಿಂದ ಅದರ ಕಹಿ ನಿವಾರಣೆಯಾಗುತ್ತದೆ. ಇದನ್ನು ಮಾಡಲು, ಹಾಗಲಕಾಯಿಯನ್ನು ಕತ್ತರಿಸಿ, ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಅದರಲ್ಲಿ ಹಾಗಲಕಾಯಿಯನ್ನು ಹುರಿಯಿರಿ. ಇದು ಕಹಿಯನ್ನು ತೆಗೆದುಹಾಕುವುದಲ್ಲದೆ, ತರಕಾರಿಯ ರುಚಿಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.

ಬೆಲ್ಲ ಅಥವಾ ಸಕ್ಕರೆ ಸೇರಿಸಿ: ಹಾಗಲಕಾಯಿಯ ಕಹಿಯನ್ನು ನಿವಾರಿಸಲು, ನೀವು ಬೆಲ್ಲ ಅಥವಾ ಸಕ್ಕರೆಯನ್ನು ಬಳಸಬಹುದು. ಅಡುಗೆ ಮಾಡುವಾಗ ಸ್ವಲ್ಪ ಬೆಲ್ಲ ಅಥವಾ ಸಕ್ಕರೆಯನ್ನು ಸೇರಿಸಿ. ಇದು ಕಹಿಯನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ ಮತ್ತು ಅಡುಗೆಯ ರುಚಿಯನ್ನು ಸುಧಾರಿಸುತ್ತದೆ.

ಈ ಸುಲಭ ಟ್ರಿಕ್ಸ್‌ಗಳನ್ನು ಅಳವಡಿಸಿಕೊಳ್ಳುವ ಮೂಲಕ, ನೀವು ಹಾಗಲಕಾಯಿಯ ಕಹಿಯನ್ನು ಕಡಿಮೆ ಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CSK vs LSG: ಸಿಎಸ್​ಕೆಗೆ ಮಾಡು ಇಲ್ಲವೇ ಮಡಿ ಪಂದ್ಯ; ಗೆದ್ದರಷ್ಟೇ ಉಳಿಗಾಲ – Kannada News | IPL 2026: CSK vs LSG Playoff Decider – Do or Die Battle for Chennai Super Kings!

ಐಪಿಎಲ್ 2026 (IPL 2026) ರ ಮೇ 10 ರಂದು ಡಬಲ್ ಹೆಡರ್ ಪಂದ್ಯಗಳು ನಡೆಯಲಿವೆ. ಅಂದರೆ ಒಂದೇ ದಿನ ಎರಡು ಪಂದ್ಯಗಳು ನಡೆಯಲಿವೆ. ದಿನದ ಮೊದಲ ಪಂದ್ಯವು ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (CSK vs LSG) ನಡುವೆ ನಡೆಯಲಿದೆ. ಪ್ಲೇಆಫ್‌ ದೃಷ್ಟಿಯಿಂದ ಈ ಪಂದ್ಯ ಉಭಯ ತಂಡಗಳಿಗೆ ಬಹು ಮುಖ್ಯವಾಗಿದೆ. ಅದರಲ್ಲೂ ಸಿಎಸ್​ಕೆ ತಂಡಕ್ಕೆ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಸಿಎಸ್​ಕೆ ಗೆದ್ದರಷ್ಟೇ ಪ್ಲೇಆಫ್‌ ರೇಸ್​ನಲ್ಲಿ ಜೀವಂತವಾಗಿರಲಿದೆ. ಇಲ್ಲದಿದ್ದರೆ ತಂಡದ ಪ್ರಯಾಣ ಲೀಗ್ ಹಂತದಲ್ಲೇ ಅಂತ್ಯವಾಗಲಿದೆ.

ಸಿಎಸ್​ಕೆಗೆ ಮಾಡು ಇಲ್ಲವೇ ಮಡಿ ಪಂದ್ಯ

ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ ಐದರಲ್ಲಿ ಗೆದ್ದು, ಐದು ಪಂದ್ಯಗಳಲ್ಲಿ ಸೋತಿದೆ. ಪ್ರಸ್ತುತ ಸಿಎಸ್‌ಕೆ ತಂಡವು ಅತ್ಯುತ್ತಮ ಫಾರ್ಮ್ ಹೊಂದಿದ್ದು, ಕಳೆದ ಎರಡು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತಲಾ ಎಂಟು ವಿಕೆಟ್‌ಗಳಿಂದ ಜಯಗಳಿಸಿದೆ. ಇತ್ತ ಲಕ್ನೋ ಸೂಪರ್ ಜೈಂಟ್ಸ್ ತಂಡವು ಆಡಿದ 10 ಪಂದ್ಯಗಳಲ್ಲಿ ಏಳರಲ್ಲಿ ಸೋತು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದಾಗ್ಯೂ, ಸತತ ಆರು ಸೋಲುಗಳ ನಂತರ, ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಹಿಂದಿನ ಪಂದ್ಯವನ್ನು ಒಂಬತ್ತು ರನ್‌ಗಳಿಂದ ಗೆದ್ದುಕೊಂಡಿತು.

ಲಕ್ನೋಗೂ ಅವಕಾಶವಿದೆ

ಐಪಿಎಲ್‌ನಲ್ಲಿ ಎರಡೂ ತಂಡಗಳು ಇದುವರೆಗೆ ಆರು ಪಂದ್ಯಗಳನ್ನು ಆಡಿದ್ದು, ಲಕ್ನೋ ಸೂಪರ್ ಜೈಂಟ್ಸ್ ಮೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಎರಡು ಪಂದ್ಯಗಳನ್ನು ಗೆದ್ದಿವೆ. ಒಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಮುಖಾಮುಖಿಯಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನೀಡಿದರೂ ಪ್ರಸ್ತುತ ಫಾರ್ಮ್​ ಗಮನಿಸಿದರೆ, ಲಕ್ನೋ ವಿರುದ್ಧ ಸಿಎಸ್​ಕೆ ಮೇಲುಗೈ ಸಾಧಿಸುವ ಸಾಧ್ಯತೆಗಳು ಹೆಚ್ಚಿವೆ. ಆದಾಗ್ಯೂ ಪಂದ್ಯದ ದಿನದಂದು ಯಾವ ತಂಡ ಉತ್ತಮ ಪ್ರದರ್ಶನ ನೀಡುತ್ತದೋ ಆ ತಂಡಕ್ಕೆ ಗೆಲುವು ಧಕ್ಕಲಿದೆ.

IPL 2026: ಐಪಿಎಲ್ ಮಧ್ಯದಲ್ಲಿ ಮುಂಬೈ ಆಲ್‌ರೌಂಡರ್​ನ ಟ್ರಯಲ್​ಗೆ ಕರೆದ ಸಿಎಸ್​ಕೆ

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11

ಸಿಎಸ್​ಕೆ ಸಂಭಾವ್ಯ ಪ್ಲೇಯಿಂಗ್ 11: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್ (ನಾಯಕ), ಉರ್ವಿಲ್ ಪಟೇಲ್, ಕಾರ್ತಿಕ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಜೇಮಿ ಓವರ್ಟನ್, ಅಕೇಲ್ ಹೊಸೈನ್, ನೂರ್ ಅಹ್ಮದ್, ಅನ್ಶುಲ್ ಕಾಂಬೋಜ್, ಮುಖೇಶ್ ಚೌಧರಿ. ಇಂಪ್ಯಾಕ್ಟ್ ಪ್ಲೇಯರ್: ಗುರ್ಜ್‌ಪನೀತ್ ಸಿಂಗ್.

ಲಕ್ನೋ ಸಂಭಾವ್ಯ ಪ್ಲೇಯಿಂಗ್ XI: ಮಿಚೆಲ್ ಮಾರ್ಷ್, ಐಡೆನ್ ಮರ್ಕ್ರಾಮ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ), ಅಕ್ಷತ್ ರಘುವಂಶಿ, ಹಿಮ್ಮತ್ ಸಿಂಗ್, ಶಹಬಾಜ್ ಅಹ್ಮದ್, ದಿಗ್ವೇಶ್ ರಾಠಿ, ಮೊಹಮ್ಮದ್ ಶಮಿ, ಪ್ರಿನ್ಸ್ ಯಾದವ್, ಮಯಾಂಕ್ ಯಾದವ್. ಇಂಪ್ಯಾಕ್ಟ್ ಪ್ಲೇಯರ್: ಅರ್ಶಿನ್ ಕುಲಕರ್ಣಿ/ಜೋಶ್ ಇಂಗ್ಲಿಸ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Surya Transit 2026: ಸೂರ್ಯ ಕೃತಿಕಾ ನಕ್ಷತ್ರದಲ್ಲಿ ಸಂಚಾರ; ಈ ಮೂರು ರಾಶಿಗೆ ಅದೃಷ್ಟದ ಸುರಿಮಳೆ – Kannada News | Surya Krittika Transit 2026: Astrological Predictions and Lucky Zodiac Signs

ಸೂರ್ಯ ಕೃತಿಕಾ ನಕ್ಷತ್ರದಲ್ಲಿ ಸಂಚಾರImage Credit source: Pinterest

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜನಾದ ಸೂರ್ಯನು ಒಂದು ನಕ್ಷತ್ರದಿಂದ ಮತ್ತೊಂದು ನಕ್ಷತ್ರಕ್ಕೆ ಚಲಿಸಿದಾಗ ಪ್ರತಿಯೊಂದ ವ್ಯಕ್ತಿಯ ಜಾತಕದಲ್ಲಿ ಮಹತ್ವದ ಬದಲಾವಣೆಗಳನ್ನು ತರುತ್ತಾನೆ. ಮೇ 11 ರಂದು ಸೂರ್ಯನು ಕೃತಿಕಾ ನಕ್ಷತ್ರಕ್ಕೆ ಪ್ರವೇಶಿಸಲಿದ್ದು, ಇದು ಕೆಲವು ರಾಶಿಚಕ್ರದ ವ್ಯಕ್ತಿಗಳಿಗೆ ಅದೃಷ್ಟ ಮತ್ತು ಯಶಸ್ಸನ್ನು ತರಲಿದೆ.

ಕೃತಿಕಾ ನಕ್ಷತ್ರ ಮತ್ತು ಸೂರ್ಯನ ಸಂಬಂಧ:

ಕೃತಿಕಾ ನಕ್ಷತ್ರದ ಅಧಿಪತಿ ಸೂರ್ಯನೇ ಆಗಿದ್ದು, ತನ್ನದೇ ನಕ್ಷತ್ರದಲ್ಲಿ ಸೂರ್ಯನ ಸಂಚಾರವು ಅತ್ಯಂತ ಶಕ್ತಿಶಾಲಿಯಾಗಿರುತ್ತದೆ. ಕೃತಿಕಾ ನಕ್ಷತ್ರವು ಅಗ್ನಿ ತತ್ವವನ್ನು ಪ್ರತಿನಿಧಿಸುವುದರಿಂದ, ಈ ಅವಧಿಯಲ್ಲಿ ಜನರ ಆತ್ಮವಿಶ್ವಾಸ, ನಾಯಕತ್ವ ಗುಣ ಮತ್ತು ಕಾರ್ಯಕ್ಷಮತೆ ಹೆಚ್ಚಾಗಲಿದೆ.

ರಾಶಿಗಳ ಮೇಲೆ ಉಂಟಾಗುವ ಪ್ರಭಾವ:

  • ಮೇಷ ರಾಶಿ: ಸೂರ್ಯನ ಈ ಸಂಚಾರವು ಮೇಷ ರಾಶಿಯವರಿಗೆ ವೃತ್ತಿಜೀವನದಲ್ಲಿ ಉತ್ತಮ ಪ್ರಗತಿಯನ್ನು ತರಲಿದೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿದ್ದು, ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆಯಿದೆ.
  • ಸಿಂಹ ರಾಶಿ: ಸಿಂಹ ರಾಶಿಯ ಅಧಿಪತಿ ಸೂರ್ಯನಾಗಿರುವುದರಿಂದ, ಈ ಅವಧಿಯು ಅತ್ಯಂತ ಶುಭದಾಯಕವಾಗಿದೆ. ಹೊಸ ಉದ್ಯೋಗಾವಕಾಶಗಳು ಹುಡುಕಿಕೊಂಡು ಬರಲಿವೆ. ಆರ್ಥಿಕವಾಗಿ ಲಾಭದಾಯಕವಾಗಿದ್ದು, ಹೂಡಿಕೆಯಿಂದ ಉತ್ತಮ ಆದಾಯ ನಿರೀಕ್ಷಿಸಬಹುದು.
  • ಧನು ರಾಶಿ: ಧನು ರಾಶಿಯವರಿಗೆ ಈ ಸಂಚಾರವು ಅದೃಷ್ಟವನ್ನು ತರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆಯಿದ್ದು, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲಿದ್ದಾರೆ.

ಇದನ್ನೂ ಓದಿ: ನಿಮ್ಮ ಜನ್ಮ ದಿನಾಂಕದಲ್ಲೇ ಅಡಗಿದೆ ಮದುವೆಯ ರಹಸ್ಯ; ನಿಮಗಾಗುವುದು ಪ್ರೇಮ ವಿವಾಹವೋ ಅಥವಾ ಅರೇಂಜ್ ಮ್ಯಾರೇಜ್?

ಜಾಗರೂಕತೆ ವಹಿಸಬೇಕಾದ ರಾಶಿಗಳು:

ಸೂರ್ಯನು ಕೃತಿಕಾ ನಕ್ಷತ್ರದಲ್ಲಿದ್ದಾಗ ವೃಶ್ಚಿಕ ಮತ್ತು ಕುಂಭ ರಾಶಿಯವರು ಸ್ವಲ್ಪ ಜಾಗರೂಕರಾಗಿರಬೇಕು. ಆರೋಗ್ಯದ ಕಡೆ ಗಮನಹರಿಸುವುದು ಮತ್ತು ಅನಗತ್ಯ ವಾದವಿವಾದಗಳಿಂದ ದೂರವಿರುವುದು ಉತ್ತಮ. ಈ ಅವಧಿಯಲ್ಲಿ ಕೋಪದ ಮೇಲೆ ನಿಯಂತ್ರಣವಿಟ್ಟುಕೊಳ್ಳುವುದು ಬಹಳ ಮುಖ್ಯ.

ಪರಿಹಾರಗಳು:

ಸೂರ್ಯನ ಶುಭ ಫಲಗಳನ್ನು ಪಡೆಯಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು:

  • ಪ್ರತಿದಿನ ಸೂರ್ಯೋದಯದ ಸಮಯದಲ್ಲಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ.
  • ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ.
  • ಭಾನುವಾರದಂದು ಗೋಧಿ ಅಥವಾ ಬೆಲ್ಲವನ್ನು ದಾನ ಮಾಡಿ.

ಗಮನಿಸಿ: ಇದು ಸಾಮಾನ್ಯ ಜ್ಯೋತಿಷ್ಯ ಮಾಹಿತಿಯಾಗಿದ್ದು, ವೈಯಕ್ತಿಕ ಜಾತಕದ ಆಧಾರದ ಮೇಲೆ ಫಲಿತಾಂಶಗಳು ಬದಲಾಗಬಹುದು. ಹೆಚ್ಚಿನ ವಿವರಗಳಿಗಾಗಿ ನುರಿತ ಜ್ಯೋತಿಷಿಯನ್ನು ಸಂಪರ್ಕಿಸಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:02 pm, Sat, 9 May 26

Source link

ವಿಜಯ್​ರ ಎಲ್ಲ ವಾಹನಗಳ ಸಂಖ್ಯೆ 0277 ಏಕೆ? ಹಿಂದಿದೆ ಭಾವುಕ ಕಾರಣ – Kannada News | Why Vijay’s all vehicle number is same why he only choose 0277 for his vehicles

ದಳಪತಿ ವಿಜಯ್ (Thalapathy Vijay) ತಮಿಳುನಾಡಿನ ಸಿಎಂ ಆಗಲಿದ್ದಾರೆ. ವಿಜಯ್ ರಾಜಕೀಯಕ್ಕೆ ಬರುವ ಮುಂಚೆಯೂ ಸಹ ತಮಿಳು ಚಿತ್ರರಂಗದ ಶ್ರೀಮಂತ ನಟ, ದುಬಾರಿ ನಟ ಎನಿಸಿಕೊಂಡಿದ್ದರು. ವಿಜಯ್ ಬಳಿ ಐಶಾರಾಮಿ ಬಂಗಲೆ, ಸಾಕಷ್ಟು ಆಸ್ತಿ, ಹಲವಾರು ಐಶಾರಾಮಿ ವಾಹನಗಳು ಇವೆ. ಆದರೆ ವಿಶೇಷವೆಂದರೆ ವಿಜಯ್ ಅವರ ಬಳಿ ಇರುವ ಬಹುತೇಕ ಎಲ್ಲ ವಾಹಗಳ ಸಂಖ್ಯೆ 0277. ವಿಜಯ್ ಅವರು ಪ್ರಚಾರಕ್ಕಾಗಿ ಖರೀದಿಸಿದ ಬಸ್ಸಿಗೂ ಇದೇ ಸಂಖ್ಯೆಯನ್ನೇ ಹಾಕಿಸಿದ್ದರು. ಇದರ ಹಿಂದೆ ಒಂದು ಭಾವುಕ ಕಾರಣ ಇದೆ, ಅಲ್ಲದೆ ವಿಜಯ್ ಎಂಥಹಾ ಭಾವುಕ ವ್ಯಕ್ತಿ, ಸಂಬಂಧಗಳಿಗೆ ಎಷ್ಟು ಬೆಲೆ ಕೊಡುವವರು ಎಂಬುದು ಇದರಿಂದ ತಿಳಿದು ಬರುತ್ತದೆ.

ವಿಜಯ್ ಬಳಿ ರೋಲ್ಸ್ ರಾಯ್ಸ್ ಘೋಸ್ಟ್‌, ರೇಂಜ್ ರೋವರ್, ಮಿನಿ ಕೂಪರ್, ಬಿಎಂಡಬ್ಲ್ಯು ಐ-7 ನಂತಹ ಹಲವು ಐಷಾರಾಮಿ ಕಾರುಗಳಿವೆ. ಅವರದ್ದೇ ಆದ ಸ್ವಂತ ಐಶಾರಾಮಿ ಕ್ಯಾರವ್ಯಾನ್ ಇನ್ನೂ ಹಲವು ವಾಹಗಳಿವೆ. ಎಲ್ಲ ವಾಹಗಳ ಸಂಖ್ಯೆ ಟಿಎನ್ 14 ಇಂದಲೇ ಆರಂಭವಾಗುತ್ತವೆ ಮತ್ತು ಕೊನೆಯ ನಾಲ್ಕು ಸಂಖ್ಯೆಗಳು 0277. ಮಧ್ಯದಲ್ಲಿ ಎರಡು ಇಂಗ್ಲೀಷ್ ಅಲ್ಫಾಬೆಟ್ ಮಾತ್ರ ಬದಲಾಗುತ್ತವೆ ಬಿಟ್ಟರೆ. ಎಲ್ಲ ವಾಹಗಳ ಸಂಖ್ಯೆಯೂ ‘ಟಿನ್ 14, 0277’ (TN14 ** 0277).

ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಜನ್ಮದಿನಾಂಕ ಅಥವಾ ಅದೃಷ್ಟದ ಸಂಖ್ಯೆಯನ್ನು ಕಾರಿಗೆ ಬಳಸುತ್ತಾರೆ. ಕೆಲವರು ‘ಬಾಸ್’ (8055) ಹಾಕಿಸಿಕೊಳ್ಳುತ್ತಾರೆ. ಕೆಲವರು ‘1’, ಕೆಲವರು ‘9’ ಸಂಖ್ಯೆ ಹಾಕಿಸಿಕೊಳ್ಳುತ್ತಾರೆ. ಆದರೆ ವಿಜಯ್ 0277 ಸಂಖ್ಯೆಯನ್ನು ಬಳಸಲು ಕಾರಣ ಅವರ ಬಾಲ್ಯದ ಒಂದು ಭಾವನಾತ್ಮಕ ನೆನಪು. ವಿಜಯ್ ಅವರ ಸಹೋದರಿ ವಿದ್ಯಾ ಚಂದ್ರಶೇಖರ್, ಸಣ್ಣ ವಯಸ್ಸಿನಲ್ಲಿಯೇ ಮೃತಪಟ್ಟರು. ಅವರ ನೆನಪಿಗಾಗಿ ವಿಜಯ್ ಅವರು 14, 0277 ಸಂಖ್ಯೆಯನ್ನು ಬಳಸುತ್ತಾರೆ. ಈ ಸಂಖ್ಯೆ, ವಿಜಯ್ ಅವರ ಸಹೋದರಿಯ ಹುಟ್ಟುಹಬ್ಬದ ದಿನಾಂಕ.

ಇದನ್ನೂ ಓದಿ:ವಿಜಯ್ ಜೊತೆ ನಟಿಸಿದ ಕಲಾವಿದ ಈಗ ಹೋಟೆಲ್ ಸಪ್ಲೈಯರ್? ಪ್ರತಿಕ್ರಿಯಿಸಿದ ನಟ

ವಿಜಯ್ ಅವರ ಸಹೋದರಿ ವಿದ್ಯಾ ಅವರು ಫೆಬ್ರವರಿ 14, 1977 ರಂದು ಜನಿಸಿದ್ದರು. ಅಂದರೆ 14-2-1977 ಅವರ ಜನ್ಮ ದಿನಾಂಕ. ಹಾಗಾಗಿ ವಿಜಯ್ 14, 0277 ಸಂಖ್ಯೆಯನ್ನು ತಮ್ಮ ಎಲ್ಲ ವಾಹನಗಳಿಗೂ ಹಾಕಿಸುತ್ತಾರೆ. ಇದಕ್ಕಾಗಿ ದೊಡ್ಡ ಮೊತ್ತದ ಹಣವನ್ನೇ ಹೆಚ್ಚುವರಿಯಾಗಿ ವಿಜಯ್ ಅವರು ಪ್ರತಿ ಹೊಸ ವಾಹನ ಖರೀದಿ ಸಂದರ್ಭದಲ್ಲಿ ನೀಡುತ್ತಾ ಬಂದಿದ್ದಾರೆ. ಚೆನ್ನೈ ಬಳಿಯ ಶೋಲಿಂಗನಲ್ಲೂರು ಆರ್​​ಟಿಓ ಕಚೇರಿಯಲ್ಲಿಯೇ ವಾಹನ ನೊಂದಣಿ ಮಾಡಿಸುತ್ತಾರೆ, ಮೊದಲ 14 ಸಂಖ್ಯೆ ಸಿಗಲೆಂದು ಅವರು ಇದೇ ಆರ್​​ಟಿಓ ಕಚೇರಿಯಲ್ಲಿ ನೊಂದಣಿ ಮಾಡಿಸುತ್ತಾರೆ.

ವಿಜಯ್ ಅವರ ಕಣ್ಣು ಮುಂದೆಯೇ ಅವರ ಸಹೋದರಿ ನಿಧನ ಹೊಂದಿದ್ದರು. ಇದು ಅವರಿಗೆ ದೊಡ್ಡ ಆಘಾತ ಉಂಟು ಮಾಡಿತ್ತು. ಸಹೋದರಿಯ ಸಾವಿನ ಬಳಿಕ ವಿಜಯ್ ವ್ಯಕ್ತಿತ್ವದಲ್ಲಿ ದೊಡ್ಡ ಬದಲಾವಣೆಗಳು ಆದವಂತೆ. ವಿಜಯ್​​ಗೆ ತಂಗಿಯ ಅಪಾರ ಪ್ರೇಮವಿತ್ತು, ತಂಗಿಯ ಸಾವನ್ನು ಅರಗಿಸಿಕೊಳ್ಳಲಾರದೆ ಆಕೆಯ ಹುಟ್ಟಿದ ದಿನವನ್ನು ತನ್ನ ಎಲ್ಲ ವಾಹನದ ಮೇಲೂ ವಿಜಯ್ ಹಾಕಿಸಿಕೊಳ್ಳುತ್ತಾ. ತಂಗಿಯ ನೆನಪನ್ನು ಜೀವಂತವಾಗಿಡುವ ಪ್ರಯತ್ನ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:11 pm, Sat, 9 May 26

Source link

IPL 2026: ಆರ್​ಸಿಬಿ ವಿರುದ್ಧ ಕಣಕ್ಕಿಳಿಯುತ್ತಾರಾ ಹಾರ್ದಿಕ್, ಸೂರ್ಯ? – Kannada News | IPL 2026: RCB vs MI – Hardik Pandya Injury Update, Suryakumar Yadav Captaincy News

ವರದಿಯ ಪ್ರಕಾರ, ಪಂದ್ಯಕ್ಕೆ ಒಂದು ದಿನ ಮೊದಲು, ಅಂದರೆ ಮೇ 9 ರ ಶನಿವಾರದಂದು ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಈ ಪರೀಕ್ಷೆಯಲ್ಲಿ ಹಾರ್ದಿಕ್ ಪಾಸ್ ಆದರೆ, ರಾಯ್ಪುರದಲ್ಲಿ ತಂಡವನ್ನು ಕೂಡಿಕೊಳ್ಳುವುದರ ಜೊತೆಗೆ ಮೇ 10 ರಂದು ಆರ್​ಸಿಬಿ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಇಲ್ಲದಿದ್ದರೆ ಹಾರ್ದಿಕ್ ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ (PC- IPL X).

Source link