Category Archives: Blog

Your blog category

ಹೀಗಾದಲ್ಲಿ ಆಸ್ಟ್ರೇಲಿಯಾ ವಿಶ್ವಕಪ್​ನಿಂದ ಔಟ್..! – Kannada News | Australia’s Super 8 Qualification Scenario

T20 World Cup 2026: ಟಿ20 ವಿಶ್ವಕಪ್​ನ 19ನೇ ಪಂದ್ಯದಲ್ಲಿ ಝಿಂಬಾಬ್ವೆ ತಂಡ ಭರ್ಜರಿ ಜಯ ಸಾಧಿಸಿದೆ. ಅದು ಸಹ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ. ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಝಿಂಬಾಬ್ವೆ ತಂಡವು 20 ಓವರ್​ಗಳಲ್ಲಿ ಕಲೆಹಾಕಿದ್ದು 169 ರನ್​ಗಳು ಮಾತ್ರ.

ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಪರ ಮ್ಯಾಟ್​ ರೆನ್​ಶಾ 65 ರನ್ ಸಿಡಿಸಿದ್ದರು. ಇದಾಗ್ಯೂ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಆಸೀಸ್ ಪಡೆ 19.3 ಓವರ್​ಗಳಲ್ಲಿ 146 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ 23 ರನ್​ಗಳಿಂದ ಆಸ್ಟ್ರೇಲಿಯಾ ಸೋಲೊಪ್ಪಿಕೊಂಡಿದೆ.

ಈ ಸೋಲಿನೊಂದಿಗೆ ಆಸ್ಟ್ರೇಲಿಯಾಗೆ ಸೂಪರ್-8 ಹಂತದ ಹಾದಿಯು ತುಸು ಕಷ್ಟಕರವಾಗಿ ಪರಿಣಮಿಸಿದೆ. ಏಕೆಂದರೆ ಆಸೀಸ್ ಪಡೆಯುವ ಮುಂದಿನ ಹಂತಕ್ಕೇರಲು ಮುಂದಿನ ಎರಡು ಮ್ಯಾಚ್​ಗಳಲ್ಲೂ ಜಯ ಸಾಧಿಸಬೇಕು. ಒಂದು ವೇಳೆ ಇನ್ನೊಂದು ಪಂದ್ಯದಲ್ಲಿ ಸೋತರೆ ಆಸ್ಟ್ರೇಲಿಯಾದ ಲೆಕ್ಕಾಚಾರಗಳೇ ತಲೆ ಕೆಳಗಾಗಲಿದೆ.

  • ಫೆಬ್ರವರಿ 16 ರಂದು ನಡೆಯಲಿರುವ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಿದರೆ ಆಸ್ಟ್ರೇಲಿಯಾ ತಂಡದ ಅಂಕ 4 ಕ್ಕೇರಲಿದೆ.
  • ಫೆಬ್ರವರಿ 20 ರಂದು ನಡೆಯಲಿರುವ ಒಮಾನ್ ವಿರುದ್ಧದ ಪಂದ್ಯದಲ್ಲಿ ಗೆಲುವು ದಾಖಲಿಸಿದರೆ 6 ಅಂಕಗಳನ್ನು ಪಡೆಯಲಿದೆ.

ಈ ಎರಡು ಗೆಲುವುಗಳ ಹೊರತಾಗಿಯೂ ಆಸ್ಟ್ರೇಲಿಯಾ ನೇರವಾಗಿ ಸೂಪರ್-8 ಹಂತಕ್ಕೇರುವುದಿಲ್ಲ. ಏಕೆಂದರೆ ಅತ್ತ ಶ್ರೀಲಂಕಾ ಹಾಗೂ ಝಿಂಬಾಬ್ವೆ ತಂಡಗಳು ತಲಾ 4 ಅಂಕಗಳನ್ನು ಹೊಂದಿದೆ. ಈ ಎರಡೂ ತಂಡಗಳಿಗೂ ಇನ್ನೂ 2 ಪಂದ್ಯಗಳಿವೆ. ಹೀಗಾಗಿ ಈ ಟೀಮ್​ಗಳು ಕೂಡ 6 ಅಂಕಗಳನ್ನು ಪಡೆಯಲು ಉತ್ತಮ ಅವಕಾಶವಿದೆ.

ಇಲ್ಲಿ ಆಸ್ಟ್ರೇಲಿಯಾ, ಝಿಂಬಾಬ್ವೆ ಮತ್ತು ಶ್ರೀಲಂಕಾ ತಂಡಗಳು ತಲಾ 6 ಅಂಕಗಳನ್ನು ಪಡೆದರೆ ನೆಟ್​ ರನ್​ ರೇಟ್ ಪರಿಗಣನೆಗೆ ಬರಲಿದೆ. ಹೀಗಾಗಿ ಆಸ್ಟ್ರೇಲಿಯಾ ತಂಡವು ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿ ನೆಟ್ ರನ್ ರೇಟ್ ಅನ್ನು ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಕೂಡ ಇದೆ.

ಹೀಗಾದಲ್ಲಿ ಆಸ್ಟ್ರೇಲಿಯಾ ಔಟ್:

ಮುಂದಿನ ಎರಡು ಮ್ಯಾಚ್​ಗಳಲ್ಲಿ ಆಸ್ಟ್ರೇಲಿಯಾ ಪಾಲಿಗೆ ಗೆಲುವು ಅನಿವಾರ್ಯ. ಒಂದು ವೇಳೆ ಶ್ರೀಲಂಕಾ ವಿರುದ್ಧ ಸೋತರೆ ಆಸೀಸ್ ಪಡೆ ಟಿ20 ವಿಶ್ವಕಪ್​ನಿಂದ ಹೊರಬೀಳುವುದು ಬಹುತೇಕ ಖಚಿತ. ಏಕೆಂದರೆ ಆಸೀಸ್ ವಿರುದ್ಧ ಗೆದ್ದರೆ ಶ್ರೀಲಂಕಾ 6 ಅಂಕಗಳನ್ನು ಪಡೆಯುವುದಲ್ಲದೇ ತನ್ನ ನೆಟ್ ರನ್ ರೇಟ್​ ಅನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲಿದೆ.

ಅತ್ತ ಸೋಲುವ ಆಸ್ಟ್ರೇಲಿಯಾ ತಂಡದ ನೆಟ್ ರನ್ ರೇಟ್ ಕುಸಿಯಲಿದೆ. ಇದರ ನಡುವೆ ಝಿಂಬಾಬ್ವೆ ತಂಡವು ಐರ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದರೆ 6 ಅಂಕಗಳೊಂದಿಗೆ ನೆಟ್ ರನ್​ ರೇಟ್​ ಅನ್ನು ವೃದ್ಧಿಸಿಕೊಳ್ಳಲಿದೆ. ಇದರಿಂದ ಕೊನೆಯ ಮ್ಯಾಚ್​ನಲ್ಲಿ ಆಸ್ಟ್ರೇಲಿಯಾ ತಂಡ ಗೆದ್ದರೂ ನೆಟ್ ರನ್​ ರೇಟ್​ನಲ್ಲಿ ಹಿಂದೆ ಉಳಿಯುವ ಸಾಧ್ಯತೆ ಹೆಚ್ಚು.

  • ಶ್ರೀಲಂಕಾ ತಂಡವು ಆಸ್ಟ್ರೇಲಿಯಾವನ್ನು ಸೋಲಿಸಿದರೆ ಟಿ20 ವಿಶ್ವಕಪ್​ನಿಂದ ಹೊರಬೀಳುವುದು ಬಹುತೇಕ ಖಚಿತ.
  • ಝಿಂಬಾಬ್ವೆ ಐರ್ಲೆಂಡ್ ಮತ್ತು ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದರೆ ಆಸ್ಟ್ರೇಲಿಯಾ ತಂಡ ಹೊರಬೀಳುವ ಸಾಧ್ಯತೆ ಹೆಚ್ಚು.
  • ಶ್ರೀಲಂಕಾ ತಂಡ ಆಸ್ಟ್ರೇಲಿಯಾ ವಿರುದ್ಧ ಸೋತು, ಝಿಂಬಾಬ್ವೆ ವಿರುದ್ಧ ಗೆದ್ದರೂ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಲಿದೆ.
  • ಝಿಂಬಾಬ್ವೆ ತಂಡವು ಶ್ರೀಲಂಕಾ ವಿರುದ್ಧ ಸೋತು, ಐರ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದರೆ ಉತ್ತಮ ನೆಟ್​ ರನ್ ರೇಟ್​ನೊಂದಿಗೆ ದ್ವಿತೀಯ ಸ್ಥಾನವನ್ನು ಕಾಯ್ದುಕೊಳ್ಳಲಿದೆ.

ಅಂದರೆ ಆಸ್ಟ್ರೇಲಿಯಾ ತಂಡವು ಸೂಪರ್-8 ಹಂತಕ್ಕೇರಬೇಕಿದ್ದರೆ ಮುಂದಿನ ಎರಡು ಮ್ಯಾಚ್​ಗಳಲ್ಲಿ ಗೆಲ್ಲುವುದರ ಜೊತೆಗೆ ನೆಟ್ ರನ್ ರೇಟ್​ ಅನ್ನು ಹೆಚ್ಚಿಸಿಕೊಳ್ಳಬೇಕಿರುವುದು ಅನಿವಾರ್ಯ. ಇದರಲ್ಲಿ ಒಂದು ಪಂದ್ಯ ಸೋತರೂ ಆಸೀಸ್ ಪಡೆ ಟಿ20 ವಿಶ್ವಕಪ್​ನಿಂದ ಹೊರಬೀಳುವುದು ಬಹುತೇಕ ಖಚಿತವಾಗಲಿದೆ.

ಇದನ್ನೂ ಓದಿ: IND vs PAK: ಮಳೆಯಿಂದ ಪಂದ್ಯ ರದ್ದಾದ್ರೆ ಯಾರಿಗೆ ಲಾಭ?

ಗ್ರೂಪ್-ಬಿ ಪಾಯಿಂಟ್ಸ್ ಟೇಬಲ್ಸ್ ನೆಟ್ ರನ್​ ರೇಟ್​:

  • ಶ್ರೀಲಂಕಾ: +3.125
  • ಝಿಂಬಾಬ್ವೆ: +1.984
  • ಆಸ್ಟ್ರೇಲಿಯಾ: +1.100

ಅಂದರೆ ಶ್ರೀಲಂಕಾ ಮತ್ತು ಝಿಂಬಾಬ್ವೆ ತಂಡಗಳು ಮುಂದಿನ ಪಂದ್ಯಗಳಲ್ಲಿ ಒಂದು ಗೆಲುವು ದಾಖಲಿಸಿದರೆ, ಆಸ್ಟ್ರೇಲಿಯಾ ತಂಡವು ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಲು ಎರಡೂ ಮ್ಯಾಚ್​ಗಳಲ್ಲೂ ಕನಿಷ್ಠ 50 ರನ್​ಗಳ ಅಂತರದಿಂದ ಗೆಲ್ಲಬೇಕಾಗುತ್ತದೆ. ಇಲ್ಲದಿದ್ದರೆ ಮೂರನೇ ಸ್ಥಾನದೊಂದಿಗೆ ಟಿ20 ವಿಶ್ವಕಪ್​ನಿಂದ ಹೊರಬೀಳುವುದು ಬಹುತೇಕ ಖಚಿತ.

Source link

ಶಹಾಪುರದಲ್ಲಿ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ! ಸ್ಥಳೀಯಾಡಳಿತ, ಪೊಲೀಸರೂ ಮೌನ – Kannada News | Social Boycott in Yadgir: 12 Families Ostracised for Questioning Community Funds in Shahapur

ಶಹಾಪುರದಲ್ಲಿ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ!Image Credit source: tv9

ಯಾದಗಿರಿ, ಫೆಬ್ರವರಿ 14: ಯಾದಗಿರಿ (Yadgir) ಜಿಲ್ಲೆಯ ಶಹಾಪುರ ನಗರದಲ್ಲಿ ಸಾಮಾಜಿಕ ಬಹಿಷ್ಕಾರದ ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿರುವುದು ಬೆಳಕಿಗೆ ಬಂದಿದೆ. ಸ್ವಕುಳಿಸಾಳಿ ಸಮುದಾಯದ 12 ಕುಟುಂಬಗಳಿಗೆ ತಮ್ಮದೇ ಸಮುದಾಯದಿಂದ ಬಹಿಷ್ಕಾರ ಹಾಕಲಾಗಿದ್ದು, ಕಳೆದ ಎಂಟು ವರ್ಷಗಳಿಂದ ಈ ಕುಟುಂಬಗಳು ಸಂಕಷ್ಟದ ಜೀವನ ನಡೆಸುತ್ತಿವೆ. ಸಮುದಾಯಕ್ಕೆ ಸೇರಿದ ಸಂಘದ ಆಸ್ತಿ ಹಾಗೂ ಆದಾಯದ ಲೆಕ್ಕ ಕೇಳಿದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಹಿಷ್ಕೃತ ಕುಟುಂಬಗಳು ಆರೋಪಿಸಿವೆ.

ಆದಾಯದ ಲೆಕ್ಕ ಕೇಳಿದ್ದೇ ಮುಳುವಾಯ್ತು

ಶಹಾಪುರದಲ್ಲಿರುವ ಜೀಹ್ವೆಶ್ವರ ಕಲ್ಯಾಣ ಮಂಟಪ ಹಾಗೂ 18 ವಾಣಿಜ್ಯ ಮಳಿಗೆಗಳಿಂದ ವಾರ್ಷಿಕ ಸುಮಾರು 25 ಲಕ್ಷ ರೂ. ಆದಾಯ ಬರುತ್ತಿದೆ ಎನ್ನಲಾಗಿದ್ದು, ಅದರ ಬಗ್ಗೆ ಪ್ರಶ್ನೆ ಮಾಡಿದ 20 ಕುಟುಂಬಗಳ ವಿರುದ್ಧ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಬಹಿಷ್ಕಾರ ಘೋಷಿಸಿದ್ದಾರೆ.

ದಂಡ ಪಾವತಿಸಿದ 8 ಕುಟುಂಬಗಳಿಗೆ ಬಹಿಷ್ಕಾರದಿಂದ ಮುಕ್ತಿ

20 ಕುಟುಂಬಗಳ ಪೈಕಿ ಎಂಟು ಕುಟುಂಬಗಳು ದಂಡ ಕಟ್ಟಿದ ಬಳಿಕ ಬಹಿಷ್ಕಾರದಿಂದ ಮುಕ್ತಿಗೊಂಡಿದ್ದರೆ, ಉಳಿದ 12 ಕುಟುಂಬಗಳು ದಂಡ ಕಟ್ಟಲು ನಿರಾಕರಿಸಿದ ಕಾರಣ ಇನ್ನೂ ಸಾಮಾಜಿಕ ಬಹಿಷ್ಕಾರ ಎದುರಿಸುತ್ತಿವೆ. ಈ ಕುಟುಂಬಗಳ ಸದಸ್ಯರಿಗೆ ಮದುವೆ ಸಂಬಂಧ ಕೊಡಬಾರದು, ಪಡೆಯಬಾರದು ಎಂಬ ಅಲಿಖಿತ ನಿಯಮ ಜಾರಿಯಲ್ಲಿದೆ. ಜೊತೆಗೆ ಜೀಹ್ವಶ್ವರ, ಹನುಮ ಹಾಗೂ ಕೃಷ್ಣ ಜಯಂತಿ ಸೇರಿದಂತೆ ಸಮುದಾಯದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತಿಲ್ಲ.

ಕ್ರೀಡಾಕೂಟದಲ್ಲಿ ಭಾಗವಹಿಸಿ ಬಾಲಕನಿಗೆ ನಿಂದನೆ

ಇತ್ತೀಚೆಗೆ ಜೀಹ್ವಶ್ವರ ಜಯಂತಿ ಹಿನ್ನೆಲೆ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಬಹಿಷ್ಕೃತ ಕುಟುಂಬದ ಬಾಲಕನನ್ನು ನಿಂದಿಸಿ ಕಳುಹಿಸಿದ ಘಟನೆ ಕೂಡ ನಡೆದಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಬಹಿಷ್ಕಾರ ಹಾಕಿದವರ ವಿರುದ್ಧ ಪೊಲೀಸ್ ಹಾಗೂ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಸಾಮಾಜಿಕ ಬಹಿಷ್ಕಾರ ಹಾಕುವ ಮುನ್ನ ಜೋಕೆ!: ಹೊಸ ಕಾನೂನು ತರಲು ಮುಂದಾಗಿದೆ ರಾಜ್ಯ ಸರ್ಕಾರ

ಸಾಮಾಜಿಕ ಬಹಿಷ್ಕಾರದಿಂದ ಜೀವನೋಪಾಯ, ಸಂಬಂಧಗಳು ಮತ್ತು ಸಾಮಾಜಿಕ ಹಕ್ಕುಗಳು ಹಾನಿಗೊಳಗಾಗಿವೆ ಎಂದು ಬಹಿಷ್ಕೃತ ಕುಟುಂಬಗಳು ‘ಟಿವಿ9’ ಎದುರು ತಮ್ಮ ಅಳಲು ತೋಡಿಕೊಂಡಿವೆ. ತಕ್ಷಣ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿ20 ಕ್ರಿಕೆಟ್​ನಲ್ಲಿ ಹಿಂದೆಂದೂ ಕಂಡರಿಯದ ವಿಶ್ವ ದಾಖಲೆ ಬರೆದ ‘ಮೊಸ್ಕಾ’ ಬ್ರದರ್ಸ್

Source link

‘ಅದೆಲ್ಲ ಗೊತ್ತಿಲ್ಲ, 20 ಕೋಟಿ ರೂ. ಕೊಡಿ’; ಧನುಶ್ ಹಿಂದೆ ಬಿದ್ದ ನಿರ್ಮಾಪಕ – Kannada News | Dhanush Rs 20 Crore Legal Notice: Thendal Films Sues Actor for Delayed Film Project

ತಮಿಳು ನಟ ಧನುಶ್ (Dhanush) ಅವರು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಇಷ್ಟು ದಿನ ಅವರ ಎರಡನೇ ವಿವಾಹದ ಬಗ್ಗೆ ಚರ್ಚೆ ಆಗಿತ್ತು. ಈಗ ಅವರು ಲೀಗಲ್ ಸಮಸ್ಯೆ ಎದುರಿಸುವ ಪರಿಸ್ಥಿತಿ ಬಂದಿದೆ. ‘ಥೇಂಡಾಲ್’ ಫಿಲ್ಮ್ಸ್’ ಸಂಸ್ಥೆ ನಟನಿಗೆ ಲೀಗಲ್ ನೋಟಿಸ್ ಕಳುಹಿಸಿದೆ. ಅಷ್ಟೇ ಅಲ್ಲ, 20 ಕೋಟಿ ರೂಪಾಯಿ ಕೊಡಬೇಕು ಎಂದು ಬೇಡಿಕೆ ಇಟ್ಟಿದೆ. ಅಷ್ಟಕ್ಕೂ ಏನಿದು ಪ್ರಕರಣ? ಆ ಬಗ್ಗೆ ಇಲ್ಲಿದೆ ವಿವರ.

‘ಥೆಂಡಾಲ್ ಫಿಲ್ಮ್ಸ್’ ಹೆಸರಿನ ಸಂಸ್ಥೆ ಜೊತೆ ಧನುಶ್ ಸಿನಿಮಾ ಒಪ್ಪಿಕೊಂಡಿದ್ದರು. ಈ ಸಿನಿಮಾ ವಿಳಂಬ ಆಗುತ್ತಲೇ ಬರುತ್ತಿದೆ.ಈ ಚಿತ್ರದ ಶೂಟ್ ವಿಳಂಬ ಮಾಡುತ್ತಿರುವುದಕ್ಕೆ ಸಂಸ್ಥೆಗೆ ನಷ್ಟ ಆಗುತ್ತಿದೆ. ಹೀಗಾಗಿ, 20 ಕೋಟಿ ಪರಿಹಾರ ನೀಡಬೇಕು ಎಂಬುದು ತಂಡದ ಬೇಡಿಕೆ ಆಗಿದೆ.

2016ರಲ್ಲಿ ‘ನಾನ್ ರುದ್ರನ್’ ಎಂಬ ಚಿತ್ರಕ್ಕೆ ಧನುಶ್ ಸಹಿ ಹಾಕಿದ್ದರು. ಆದರೆ ಅದರ ಶೂಟಿಂಗ್ ಮಾಡಿಯೇ ಇಲ್ಲ ಎಂದು ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ. ಆರಂಭದಲ್ಲಿ ಧನುಶ್ ಈ ಯೋಜನೆಯಲ್ಲಿ ನಟಿಸಲು ಮತ್ತು ನಿರ್ದೇಶಿಸಲು ಒಪ್ಪಿಕೊಂಡಿದ್ದರು ಎಂದು ನೋಟಿಸ್​​ ಅಲ್ಲಿ ಆರೋಪಿಸಲಾಗಿದೆ.

ಕಥೆಯಲ್ಲಿ ಧನುಶ್ ಸೂಚಿಸಿದ ಬದಲಾವಣೆಗಳಿಗೆ ನಿರ್ಮಾಣ ಸಂಸ್ಥೆ ಒಪ್ಪಿಗೆ ನೀಡಿದ್ದರೂ, ನಟ ನಂತರ ಸಂಪೂರ್ಣ ಚಿತ್ರಕಥೆಯನ್ನು ಒದಗಿಸಲಿಲ್ಲ ಎಂದು ನೋಟಿಸ್​​ನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಯೋಜನೆ ಸೆಟ್ಟೇರಿಲ್ಲ.

ಈ ವಿಳಂಬದಿಂದಾಗಿ ನಿರ್ಮಾಪಕರಿಗೆ ಆರ್ಥಿಕ ನಷ್ಟ ಉಂಟು ಮಾಡಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. ಈ ಯೋಜನೆಯ ಆರಂಭಿಕ ಹಂತಗಳಲ್ಲಿ ಮಾಡಿದ ಹೂಡಿಕೆಗಳನ್ನು ಹಿಂಪಡೆಯಲು ಹಣಕಾಸಿನ ಪರಿಹಾರವನ್ನು ಕೋರಲಾಗಿದೆ. ನಿಗದಿತ ಸಮಯದೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಬ್ಯಾನರ್ ಎಚ್ಚರಿಸಿದೆ. ಈವರೆಗೆ ಪ್ರಕರಣದ ಬಗ್ಗೆ ಧನುಶ್ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ಧನುಶ್ ಹುಟ್ಟೂರಿನ ವಿಷಯ ಬರುತ್ತಿದ್ದಂತೆ ನಾಚಿ ನೀರಾದ ಮೃಣಾಲ್ ಠಾಕೂರ್

ಧನುಶ್ ತಮ್ಮ ಮುಂದಿನ ಚಿತ್ರಕ್ಕೆ ತಾತ್ಕಾಲಿಕವಾಗಿ ‘D55’ ಎಂದು ಹೆಸರು ಇಟ್ಟಿದ್ದಾರೆ. ಇದರ ಬಗ್ಗೆ ಅಧಿಕೃತವಾಗಿ ಘೋಷಣೆ ಕೂಡ ಮಾಡಿದ್ದಾರೆ. ಈ ಚಿತ್ರಕ್ಕೆ ‘ಅಮರನ್’ ಸಿನಿಮಾ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 9:06 am, Sat, 14 February 26

Source link

ಕನ್ನಡ ಸೆಲೆಬ್ರಿಟಿ ಜೋಡಿಗಳ ಕ್ಯೂಟ್ ಲವ್​ ಸ್ಟೋರಿ – Kannada News | Sandalwood Stars: Reel to Real Love Stories – Kannada Actors Who Fell in Love On Set

ತೆರೆಯ ಮೇಲೆ ನಟನೆ ಮಾಡುತ್ತಾ ನಂತರ ಸಂಬಂಧ ನಿಜವಾದ ಪ್ರೀತಿಗೆ ತಿರುಗಿದ ಅದೆಷ್ಟೋ ಉದಾಹರಣೆಗಳನ್ನು ನೀವು ನೋಡಬಹುದು. ನಟಿಸುತ್ತಲೇ ಪ್ರೀತಿಗೆ ಬಿದ್ದವರು ಅನೇಕರಿದ್ದಾರೆ. ಸೆಟ್​ನಲ್ಲಿ ಉಂಟಾಗುವ ಗೆಳೆತನ ನಂತರ ಮದುವೆವರೆಗೆ ಹೋದ ಉದಾಹರಣೆ ಇದೆ. ಸ್ಯಾಂಡಲ್​ವುಡ್​ನಲ್ಲೂ (Sandalwood) ಅನೇಕರು ಹೀಗೆ ವಿವಾಹವಾಗಿದ್ದಾರೆ. ಪ್ರೇಮದ ಪಾತ್ರ ಮಾಡುತ್ತ ವಿವಾಹ ಆದ ಸ್ಯಾಂಡಲ್​ವುಡ್​ ಜೋಡಿಗಳ ಪಟ್ಟಿ ಇಲ್ಲಿದೆ.

ಯಶ್​ ಹಾಗೂ ರಾಧಿಕಾ ಪಂಡಿತ್​ ಸ್ಯಾಂಡಲ್​ವುಡ್​ನ ಸಾಕಷ್ಟು ಜನಪ್ರಿಯ ಜೋಡಿ ಎಂದರೂ ತಪ್ಪಾಗಲಿಕ್ಕಿಲ್ಲ. ‘ನಂದಗೋಕುಲ’ ಧಾರಾವಾಹಿಯಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದರು. ‘ಮೊಗ್ಗಿನ ಮನಸು’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದರು ಮತ್ತು ನಂತರ ಇವರ ಮಧ್ಯೆ ಪ್ರೀತಿ ಬೆಳೆಯಿತು. ಆದರೆ, ಅದನ್ನು ಸಾರ್ವಜನಿಕವಾಗಿ ಹೇಳಿಕೊಂಡಿರಲಿಲ್ಲ. ನಂತರ ಇವರು ಮದುವೆ ಆದರು.

ಐಂದ್ರಿತಾ ರೇ ಹಾಗೂ ದಿಗಂತ್​ ಇಬ್ಬರೂ ವಿವಾಹ ಆದರು.ಇವರದ್ದು ಪ್ರೇಮ ವಿವಾಹ ಅನ್ನೋದು ಗೊತ್ತೇ ಇದೆ. ಐಂದ್ರಿತಾ ಸಂದರ್ಶನ ನೋಡಿದ್ದ ದಿಗಂತ್​, ಈ ಹುಡುಗಿ ತುಂಬಾನೇ ಕ್ಯೂಟ್​ ಆಗಿದ್ದಾರೆ ಎಂದು ಅಂದುಕೊಂಡರು. ‘ಮನಸಾರೆ’ ಸಿನಿಮಾದಲ್ಲಿ ಐಂದ್ರಿತಾ ಜೊತೆ ನಟಿಸೋ ಅವಕಾಶ ಸಿಕ್ಕಿತು. ಈ ಚಿತ್ರದ ಶೂಟ್​ ವೇಳೆ ದಿಗಂತ್ ಅವರಿಗೆ ಅನಾರೋಗ್ಯ ಆಯಿತು ಮತ್ತು ಐಂದ್ರಿತಾ ಆಗ ಇವರನ್ನು ನೋಡಿಕೊಂಡರು.

90ರ ದಶಕದಲ್ಲಿ ಅಂಬರೀಶ್​-ಸುಮಲತಾ ಪ್ರೇಮಕತೆ ಆರಂಭ ಆಯಿತು. ಇಬ್ಬರೂ ಅಂದಿನ ಕಾಲದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಪ್ ಜೋಡಿ ಎನಿಸಿಕೊಂಡರು. 1984ರಲ್ಲಿ ಕಾರ್ಯಕ್ರಮವೊಂದರಲ್ಲಿ ಮೊಟ್ಟ ಮೊದಲ ಬಾರಿಗೆ ಸುಮಲತಾ, ಅಂಬರೀಶ್​ ಅವರನ್ನು ನೋಡಿದರು. ‘ಆಹುತಿ’ ಸಿನಿಮಾದ ಸೆಟ್​ನಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಮೊದಲ ಬಾರಿಗೆ ಭೇಟಿ ಮಾಡಿದರು ನಂತರ ಪ್ರೇಮ ಆಯಿತು.

ಪ್ರಜ್ವಲ್​ ದೇವರಾಜ್​-ರಾಗಿಣಿ ಅವರದ್ದು ಕ್ಯೂಟ್ ಜೋಡಿ. ರಾಗಿಣಿ ಚಂದ್ರನ್ ಅವರನ್ನು ಪ್ರಜ್ವಲ್ ಮೊದಲು ನೋಡಿದ್ದು 9ನೇ ಕ್ಲಾಸ್ ಅಲ್ಲಿ. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಲು ಆರಂಭಿಸಿದ್ದರು. ಇವರ ಪ್ರೀತಿಗೆ ಮನೆಯಲ್ಲೂ ಒಪ್ಪಿಗೆ ಸಿಕ್ಕಿತ್ತು.ಈಗ ವಿವಾಹ ಆಗಿ ಹಾಯಾಗಿದ್ದಾರೆ.

ಡಾರ್ಲಿಂಗ್​ ಕೃಷ್ಣ ಹಾಗೂ ಮಿಲನಾ ನಾಗರಾಜ್​ ‘ಲವ್‌ ಮಾಕ್‌ಟೇಲ್‌ 2’ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. 2015ರಲ್ಲಿ ತೆರೆಕಂಡ ‘ಚಾರ್ಲಿ’ ಚಿತ್ರದಲ್ಲಿ ಇವರಿಬ್ಬರೂ ಒಟ್ಟಿಗೆ ನಟಿಸಿದ್ದರು. ‘ಚಾರ್ಲಿ’ ಚಿತ್ರದ ಶೂಟಿಂಗ್‌ ಮುಗಿಯುತ್ತಾ ಬಂದಿತ್ತು. ಈ ವೇಳೆ ಒಂದು ದಿನ ಮಿಲನಾ ಅವರನ್ನು ಕಾರಿನಲ್ಲಿ ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗಿದ್ದ ಕೃಷ್ಣ ಮದುವೆಗೆ ನೇರವಾಗಿ ಪ್ರಪೋಸ್‌ ಮಾಡಿದರು.

ಇದನ್ನೂ ಓದಿ: ಸ್ಯಾಂಡಲ್​ವುಡ್​ ನಟಿ, ಉದ್ಯಮಿ ನಂಟಿನ ಕೇಸ್​ಗೆ ಬಿಗ್​​ ಟ್ವಿಸ್ಟ್: ಮಹತ್ವದ ಸಾಕ್ಷ್ಯ ಲಭ್ಯ

ಮೇಘನಾ ರಾಜ್​- ಚಿರು ಸರ್ಜಾ: ‘ಪೈರಸಿ ಮುಕ್ತ ಕನ್ನಡ ಚಲನಚಿತ್ರ’ ಹೆಸರಿನ ಕಾರ್ಯಕ್ರಮದಲ್ಲಿ ಮೇಘನಾ ರಾಜ್​-ಚಿರಂಜೀವಿ ಸರ್ಜಾ ಭೇಟಿ ಆದರು. ನಂತರ ಮೇಘನಾಗೆ ಮೆಸೇಜ್​ ಮಾಡಿ ಚಿರು ಮಾತು ಆರಂಭಿಸಿದ್ದರು. ಅಲ್ಲಿಂದ ಇವರ ಪ್ರೇಮ ಕಥೆ ಶುರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಾರಿನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಐವರು ಆರೋಪಿಗಳ ಬಂಧನ; 2 ಲಕ್ಷ ರೂ.ಗೂ ಅಧಿಕ ಮೌಲ್ಯದ ಡ್ರಗ್ಸ್ ಸೀಜ್ – Kannada News | Hassan MDMA Drug Bust: Police Arrest 5, Seize Rs.2 Lakh Worth Narcotics

ಕಾರಿನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಐವರು ಆರೋಪಿಗಳ ಬಂಧನ

ಹಾಸನ, ಫೆಬ್ರವರಿ 14: ನಗರದಲ್ಲಿ ಎಂಡಿಎಂಎ ಮಾದಕ ವಸ್ತುಗಳ ಮಾರಾಟ ಜಾಲವನ್ನು ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚೆಕ್‌ಪೋಸ್ಟ್‌  (Hassan) ಬಳಿ ಕಾರಿನಲ್ಲಿ ಸುಮಾರು 40 ಗ್ರಾಂ ಎಂಡಿಎಂಎ ಪತ್ತೆಯಾಗಿದ್ದು, ಅದರ ಮೌಲ್ಯ ರೂ.2 ಲಕ್ಷಕ್ಕೂ ಅಧಿಕವೆಂದು ಅಂದಾಜಿಸಲಾಗಿದೆ.

ಶಿವಮೊಗ್ಗ ಮೂಲದವರು ಅರೆಸ್ಟ್

ಖಚಿತ ಮಾಹಿತಿಯ ಮೇರೆಗೆ ಹಾಸನದ ರಾಜ್‌ಕುಮಾರ್ ನಗರ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಸಂಚರಿಸುತ್ತಿದ್ದ ಎರ್ಟಿಗಾ ಕಾರನ್ನು ತಪಾಸಣೆ ನಡೆಸಿದ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಬಂಧಿತರನ್ನು ಶಿವಮೊಗ್ಗ ಮೂಲದ ಫರ್ವೀಜ್ (29), ಸುಹೇಲ್ (24), ಅಬ್ದುಲ್ ಯಾಸಿನ್ (20), ಇಬ್ರತ್ ಖಾನ್ (24) ಹಾಗೂ ಹಾಸನದ ಸೈಯದ್ ಯೂಸಫ್ (23) ಎಂದು ಗುರುತಿಸಲಾಗಿದೆ. ನಾಲ್ವರು ಶಿವಮೊಗ್ಗ ಜಿಲ್ಲೆಯವರಾಗಿದ್ದು, ಒಬ್ಬ ಹಾಸನ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ. 40 ಗ್ರಾಂ ಎಂಡಿಎಂಎ ಹಾಗೂ ಆರೋಪಿಗಳು ಬಳಸುತ್ತಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ.

ಪೆನ್‌ಷನ್ ಮೊಹಲ್ಲಾ ಠಾಣೆಯ ಸಿಪಿಐ ಸ್ವಾಮಿನಾಥ್ ನೇತೃತ್ವದಲ್ಲಿ ಪಿಎಸ್‌ಐ ರವಿಶಂಕರ್ ಹಾಗೂ ಸಿಬ್ಬಂದಿ ಪ್ರಸನ್ನಕುಮಾರ್, ದಿಲೀಪ್, ಪುನೀತ್, ಲೋಕೇಶ್, ಹನುಮೇಶ್ ಸೇರಿದಂತೆ ಇತರರು ಕಾರ್ಯಾಚರಣೆ ನಡೆಸಿದ್ದು, ಪ್ರಕರಣವನ್ನು ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ ಮಂಗಳೂರು: ಮೂವರು ಡ್ರಗ್ಸ್ ಪೆಡ್ಲರ್​​ಗಳ ಖೆಡ್ಡಾಕ್ಕೆ ಕೆಡವಿದ ಪೊಲೀಸರು, 11.90 ಲಕ್ಷ ರೂ. ಮೌಲ್ಯದ MDMA ವಶ

ಚಿಕ್ಕಮಗಳೂರಿನಲ್ಲೂ 5 ಕೆ.ಜಿ ಗೂ ಹೆಚ್ಚು ಗಾಂಜಾ ವಶ

ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಗಾಂಜಾ ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿ ಮೇರೆಗೆ ರೈಲ್ವೆ ನಿಲ್ದಾಣದ ಸಮೀಪ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಸಿ 5 ಕೆ.ಜಿ 850 ಗ್ರಾಂ ಗಾಂಜಾವನ್ನು ಸೀಜ್ ಮಾಡಲಾಗಿದೆ. ವಶಪಡಿಸಿಕೊಂಡ ಮಾದಕ ವಸ್ತುವಿನ ಮೌಲ್ಯ ಸುಮಾರು ಮೂರು ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಬಂಧಿತನನ್ನು ವಿಜಯ್ ಕುಮಾರ್ ಎಂದು ಗುರುತಿಸಲಾಗಿದ್ದು, ಆತ ಬೆಂಗಳೂರಿನ ನಿವಾಸಿಯಾಗಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣ ಸಂಬಂಧ ನಗರ ಠಾಣೆಯಲ್ಲಿ ದಾಖಲಿಸಿಕೊಂಡು, ಗಾಂಜಾ ಸರಬರಾಜು ಜಾಲದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

T20 World Cup 2026: ಅಮೆರಿಕ ತಂಡಕ್ಕೆ ವಿಶ್ವ ದಾಖಲೆಯ ವಿಜಯ – Kannada News | USA Break Nepal’s T20 World Cup Record

ಟಿ20 ವಿಶ್ವಕಪ್ 2026 ರಲ್ಲಿ ಅಮೆರಿಕ ತಂಡ (ಯುಎಸ್ಎ) ಗೆಲುವಿನ ಖಾತೆ ತೆರೆದಿದೆ. ಅದು ಸಹ ವಿಶ್ವ ದಾಖಲೆಯ ವಿಜಯ ಸಾಧಿಸುವ ಮೂಲಕ ಎಂಬುದು ವಿಶೇಷ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲೆಂಡ್ಸ್‌ ತಂಡವು ಅಮೆರಿಕವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು.

Source link

ಕಾಂಗ್ರೆಸ್ ಸರ್ಕಾರಕ್ಕೆ ಸಾವಿರ ದಿನದ ಸಡಗರ: ಕುರ್ಚಿ ಕದನ ಮತ್ತಷ್ಟು ಜೋರಾಗುವ ಸುಳಿವು – Kannada News | Power Sharing Tussle Intensifies in Karnataka Congress as Siddaramaiah–DK Shivakumar Rift Buzz Grows

ಡಿಸಿಎಂ ಡಿಕೆ ಶಿವಕುಮಾರ್, ಸಿದ್ದರಾಮಯ್ಯ

ಬೆಂಗಳೂರು, ಫೆಬ್ರವರಿ 14: ಕಾಂಗ್ರೆಸ್​​ನಲ್ಲಿ (Congress) ಅಧಿಕಾರ ಹಂಚಿಕೆ ಕಿತ್ತಾಟದ ಕಿಡಿ ದಿನೇದಿನೆ ಹೆಚ್ಚುತ್ತಿದೆ. ಸಿಎಂ ಸಿದ್ದರಾಮಯ್ಯ ‘ನಾ ಕೊಡೆ’ ಅಂದರೆ, ಡಿಸಿಎಂ ಡಿಕೆ ಶಿವಕುಮಾರ್ ‘ನಾ ಬಿಡೆ’ ಎಂದು ಪಟ್ಟು ಹಿಡಿದಿದ್ದಾರೆ. ಅದರಲ್ಲೂ ದೆಹಲಿಯಲ್ಲಿ ವರಿಷ್ಠರ ಭೇಟಿ ಮಾಡಿ ಬಂದ ಬಳಿಕ ಡಿಕೆಶಿ ವರಸೆಯೇ ಬದಲಾಗಿದೆ. ಬೆಂಗಳೂರಲ್ಲಿ ಶನಿವಾರ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ ನಡೆಯಿತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ವೇದಿಕೆ ಮೇಲೆ ಕೂತಿದ್ದರು. ಸಾಮಾನ್ಯವಾಗಿ ಅಕ್ಕಪಕ್ಕ ಕುಳಿತಿದ್ದಾಗ ಮಾತನಾಡುವುದು ಸಹಜ. ಆದರೆ, ಸಿಎಂ ಹಾಗೂ ಡಿಸಿಎಂ ತುಂಬಾ ಹೊತ್ತು ಮಾತನಾಡಲೇ ಇಲ್ಲ. ಕನಿಷ್ಠಪಕ್ಷ ಪರಸ್ಪರ ಮುಖ ನೋಡುವ ಸಾಹಸಕ್ಕೂ ಕೈ ಹಾಕ್ಲಿಲ್ಲ!

ತುಂಬಾ ಹೊತ್ತಿನ ಬಳಿಕ ಇಬ್ಬರೂ ನದಿ ಮೂಲ ನಿರ್ವಹಣೆ ಪುಸ್ತಕದ ಬಗ್ಗೆ ಅನಿವಾರ್ಯವಾಗಿ ಮಾತನಾಡಿದರು. ಒಟ್ಟಾರೆಯಾಗಿ ಈ ಬೆಳವಣಿಗೆ ‘ಕೈ’ ಒಡಕಿಗೆ ಕನ್ನಡಿ ಹಿಡಿದಿದೆ. ಇದನ್ನು ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದು, ದೆಹಲಿಯಿಂದ ರಾಜಕೀಯ ಗನ್ ಹಿಡಿದುಕೊಂಡು ಬಂದಿದ್ದಾರೆ ಎಂದು ಕುಟುಕಿದ್ದಾರೆ.

ವಿಪಕ್ಷಗಳ ಟೀಕೆ, ಪಕ್ಷದೊಳಗೆ ಏನೇ ತಂತ್ರಗಳು ನಡೆದರೂ, ಮೌನಯುದ್ಧ ನಡೆದರೂ ಡಿಕೆ ಶಿವಕುಮಾರ್​​ಗೆ ಮಾತ್ರ ಹೈಕಮಾಂಡ್ ಮೇಲೆ ವಿಶ್ವಾಸ ಹೆಚ್ಚಾದಂತೆ ಕಾಣಿಸುತ್ತಿದೆ. ದೆಹಲಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುವಾಗ, ‘ಏನು ಹೇಳಬೇಕೋ ಅದನ್ನು ವರಿಷ್ಠರಿಗೆ ಹೇಳಿದ್ದೇನೆ’ ಎಂದು ಹೇಳಿದ್ದರು. ಅವರ ಮಾತಿನಲ್ಲಿ ವಿಶ್ವಾಸದ ಬಲ ಮತ್ತಷ್ಟು ಹೆಚ್ಚಾದ್ದಂತೆ ಕಾಣಿಸಿತ್ತು.

ಗುರುವಾರ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮುಂದೆ ಹಕ್ಕು ಮಂಡಿಸಿ ವಾಪಸ್ ಆಗಿರುವ ಡಿಕೆಶಿ, ನಂತರ ಕಾಲವೇ ಉತ್ತರಿಸುತ್ತದೆ ಎಂದಿದ್ದರು. ಇದರೊಂದಿಗೆ, ಫೆಬ್ರವರಿ 17ರ ನಂತರ ಗೇಮ್ ಪ್ಲ್ಯಾನ್ ಚೇಂಜ್ ಆಗಲಿದೆಯೇ ಎಂಬ ಚರ್ಚೆ ಗರಿಗೆದರಿದೆ.

ಹೈಕಮಾಂಡ್ ಮಧ್ಯಪ್ರವೇಶ ಮಾಡುತ್ತೆ ಎಂಬುದು ಡಿಕೆಶಿ ಹಾಗೂ ಬಣದ ವಿಶ್ವಾಸ. ಆದರೆ ಬಜೆಟ್‌ ದಿನಾಂಕ ಘೋಷಿಸಿ, ಲೆಕ್ಕಪತ್ರ ಮಂಡಿಸಲು ಸಜ್ಜಾಗಿರುವ ಸಿಎಂ ಮುಂದಿನ ಒಂದು ತಿಂಗಳು ಬ್ಯುಸಿ ಎಂಬ ಸಂದೇಶ ರವಾನಿಸಿದ್ದಾರೆ. ಈ ನಡುವೆ ಫೆಬ್ರವರಿ 17ರ ಬಳಿಕ ಇಬ್ಬರಿಗೂ ಹೈಕಮಾಂಡ್ ಬುಲಾವ್ ನೀಡುತ್ತದೆ ಎನ್ನಲಾಗಿದೆ.

ಎಐಸಿಸಿ ಮೂಲಗಳು ಕೊಟ್ಟ ಮಾಹಿತಿ ಪ್ರಕಾರ, ಸಚಿವರು, ನಾಯಕರನ್ನು ವರಿಷ್ಠರು ವಿಶ್ವಾಸಕ್ಕೆ ಪಡೆಯಲು ಮುಂದಾಗಿದ್ದಾರೆ. ಅಧಿಕಾರ ಹಂಚಿಕೆ ವಿಚಾರವಾಗಿ ಸಿಎಂ, ಡಿಸಿಎಂ ಜತೆ ಪ್ರತ್ಯೇಕವಾಗಿ ಮಾತನಾಡುವ ಸಾಧ್ಯತೆ ಇದೆ.

ಸರ್ಕಾರಕ್ಕೆ ಅಜ್ಜಯ್ಯನ ಶಕ್ತಿ, ಮುಂದೇನೋ ಗೊತ್ತಿಲ್ಲ ಎಂದ ಡಿಕೆಶಿ

ಕಾಂಗ್ರೆಸ್​​ನ ಒಟ್ಟಾರೆ ಬೆಳವಣಿಗೆಗಳ ಮಧ್ಯೆ, ಪ್ರಾರ್ಥನೆ ಮೇಲೆ ನಂಬಿಕೆ ಇಟ್ಟಿರುವ ಡಿಕೆ ಶಿವಕುಮಾರ್, ನೊಣವಿನಕೆರೆ ಅಜ್ಯಯ್ಯನ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಜಾತ್ರಾ ಮಹೋತ್ಸವದ ಧರ್ಮಸಭೆಯಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, ಅಜ್ಜಯ್ಯನ ಶಕ್ತಿ ಇಲ್ಲದೇ ಇದ್ದರೆ ಈ ಸರ್ಕಾರ ಇಷ್ಟು ಶಕ್ತಿಯುತವಾಗಿ ಇರುತ್ತಿರಲಿಲ್ಲ. ಮುಂದೆ ಏನಾಗುತ್ತದೆ ಎಂಬುದನ್ನು ನಾನು ಚರ್ಚೆ ಮಾಡುವುದಿಲ್ಲ ಎಂದು ಟ್ವಿಸ್ಟ್ ಕೊಟ್ಟಿದ್ದಾರೆ.

ಇದನ್ನೂ ಓದಿ: ದೆಹಲಿಗೆ ಬಂದಿದ್ದೇ ರಾಜಕೀಯ ಮಾಡಲು, ಎಲ್ಲ ಮಾತಾಡದೆ ಸುಮ್ನೆ ಹೋಗ್ತೀನಾ? ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಸ್ಫೋಟಕ ಮಾತು

ಈ ಬೆಳವಣಿಗೆ ಡಿಕೆಶಿ ಆಪ್ತರ ವಿಶ್ವಾಸ ಹೆಚ್ಚಿಸಿದ್ರೆ, ಸಿಎಂ ಆಪ್ತರು ತ್ಯಾಗದ ಪ್ರಶ್ನೆಯೇ ಇಲ್ಲ ಎನ್ನುತ್ತಿದ್ದಾರೆ. ಈ ನಡುವೆ ಸರ್ಕಾರ ಸಾವಿರ ದಿನದ ಸಂಭ್ರಮದಲ್ಲಿದೆ. ಇಂದು ಹಾವೇರಿಯಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಪಟ್ಟದಾಟದ ನಡುವೆ, ಸಾವಿರ ದಿನದ ಸಂಭ್ರಮ ನಡೆಯುತ್ತಿದೆ. ಇಂದಿನ ಕಾರ್ಯಕ್ರಮದತ್ತ ಎಲ್ಲರ ಚಿತ್ತ ನೆಟ್ಟಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs PAK: ಮಳೆಯಿಂದ ಪಂದ್ಯ ರದ್ದಾದ್ರೆ ಯಾರಿಗೆ ಲಾಭ? – Kannada News | T20 World Cup 2026: What happens if IND vs PAK washes out?

ಭಾರತ ಮತ್ತು ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯಕ್ಕೆ ಕಾರ್ಮೋಡ ಕವಿದಿದೆ. ಫೆಬ್ರವರಿ 15 ರಂದು ಕೊಲಂಬೋದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಡೊ-ಪಾಕ್ ನಡುವಿನ ಟಿ20 ವಿಶ್ವಕಪ್ 2026 ರ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಹೀಗಾಗಿ ಮ್ಯಾಚ್ ನಡೆಯುವುದು ಕೂಡ ಅನುಮಾನ ಎನ್ನಲಾಗುತ್ತಿದೆ.

ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯದ ಸಮಯದಲ್ಲಿ ಸುಮಾರು ಶೇ. 50 ರಿಂದ ಶೇ. 70 ರಷ್ಟು ಮಳೆಯಾಗುವ ಮುನ್ಸೂಚನೆ ಇದೆ. ಲೈವ್ ಮಿಂಟ್ (LiveMint) ವರದಿಯ ಪ್ರಕಾರ, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇರುವುದರಿಂದ ಭಾರಿ ಮಳೆಯಾಗಬಹುದು.

ಸ್ಥಳೀಯ ಕಾಲಮಾನ ರಾತ್ರಿ 7:00 ಗಂಟೆಗೆ ಪಂದ್ಯ ಆರಂಭವಾಗಬೇಕಿದೆ. ಸಂಜೆಯ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇರುವುದರಿಂದ ಟಾಸ್ ವಿಳಂಬವಾಗಬಹುದು. ಅತ್ತ ಕೊಲಂಬೊದ ಆರ್​. ಪ್ರೇಮದಾಸ ಮೈದಾನದಲ್ಲಿ ಆಧುನಿಕ ಡ್ರೈನೇಜ್ ಸಿಸ್ಟಂ ಇಲ್ಲದೇ ಇರುವುದರಿಂದ, ಮೈದಾನದಲ್ಲಿ ನೀರು ತುಂಬಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಸಂಜೆ ವೇಳೆ ಭಾರೀ ಮಳೆಯಾದರೆ ಪಂದ್ಯವನ್ನು ಆಯೋಜಿಸುವುದು ಕಷ್ಟಕರ.

ಮೀಸಲು ದಿನವಿದೆಯೇ?

ಟಿ20 ವಿಶ್ವಕಪ್​ನ ಲೀಗ್ ಹಂತದ ಪಂದ್ಯಗಳಿಗೆ ಯಾವುದೇ ಮೀಸಲು ದಿನವಿಲ್ಲ. ಫೆಬ್ರವರಿ 15 ರಂದೇ ಭಾರತ ಮತ್ತು ಪಾಕಿಸ್ತಾನ್ ಕಣಕ್ಕಿಳಿಯಬೇಕು. ಅದು ಅಸಾಧ್ಯವಾದರೆ ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ.

ಒಂದು ವೇಳೆ ಪಂದ್ಯ ರದ್ದಾದರೆ ಏನಾಗುತ್ತದೆ?

ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ, ಐಸಿಸಿ (ICC) ನಿಯಮದಂತೆ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕವನ್ನು ಹಂಚಲಾಗುತ್ತದೆ.

ಪ್ರಸ್ತುತ ಅಂಕಪಟ್ಟಿಯಲ್ಲಿ ಈ ಎರಡೂ ತಂಡಗಳು ಉತ್ತಮ ಸ್ಥಾನದಲ್ಲಿದ್ದು, ಅಂಕ ಹಂಚಿಕೆಯಾದರೂ ಸೂಪರ್ 8 ಹಂತಕ್ಕೇರಲು ಹೆಚ್ಚಿನ ತೊಂದರೆಯಾಗುವುದಿಲ್ಲ.

ಮಳೆ ಬಂದರೆ ಯಾರಿಗೆ ಲಾಭ?

ಫೆಬ್ರವರಿ 15 ರಂದು ಮಳೆ ಬಂದು ಪಂದ್ಯ ರದ್ದಾದರೆ ಪಾಕಿಸ್ತಾನ್ ತಂಡಕ್ಕೆ ಲಾಭವಾಗಲಿದೆ. ಏಕೆಂದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುವ ಫೇವರೇಟ್. ಅದರಲ್ಲೂ ಪಾಕಿಸ್ತಾನ್ ತಂಡವು ಕಳೆದ 5 ಮುಖಾಮುಖಿಯಲ್ಲಿ ಟೀಮ್ ಇಂಡಿಯಾ ವಿರುದ್ಧ ಹೀನಾಯವಾಗಿ ಸೋತಿದೆ.

ಅಷ್ಟೇ ಅಲ್ಲದೆ ಕಳೆದ ವರ್ಷ ನಡೆದ ಏಷ್ಯಾಕಪ್​ನಲ್ಲೂ ಭಾರತ ತಂಡವು ಪಾಕಿಸ್ತಾನ್ ತಂಡವನ್ನು 3 ಬಾರಿ ಸೋಲಿಸಿ ಮೇಲುಗೈ ಸಾಧಿಸಿದೆ. ಹೀಗಾಗಿ ಟಿ20 ವಿಶ್ವಕಪ್​ನಲ್ಲೂ ಭಾರತ ತಂಡವೇ ಗೆಲ್ಲುವ ಫೇವರೇಟ್ ತಂಡವಾಗಿ ಗುರುತಿಸಿಕೊಂಡಿದೆ.

ಇದನ್ನೂ ಓದಿ: ಟಿ20 ಕ್ರಿಕೆಟ್​ನಲ್ಲಿ ಹಿಂದೆಂದೂ ಕಂಡರಿಯದ ವಿಶ್ವ ದಾಖಲೆ ಬರೆದ ‘ಮೊಸ್ಕಾ’ ಬ್ರದರ್ಸ್

ಅತ್ತ ಮಳೆ ಬಂದು ಪಂದ್ಯ ರದ್ದಾದರೆ ಪಾಕಿಸ್ತಾನ್ ತಂಡವು ಸೋಲಿನಿಂದ ತಪ್ಪಿಸಿಕೊಳ್ಳಲಿದೆ. ಅಲ್ಲದೆ 2 ಅಂಕಗಳಲ್ಲಿ ಒಂದು ಅಂಕವನ್ನು ಪಡೆದುಕೊಳ್ಳಲಿದ್ದಾರೆ. ಹೀಗಾಗಿ ಟಿ20 ವಿಶ್ವಕಪ್​ನ 28ನೇ ಪಂದ್ಯವು ರದ್ದಾದರೆ ಪಾಕಿಸ್ತಾನ್ ತಂಡಕ್ಕೆ ಹೆಚ್ಚಿನ ಲಾಭವಾಗಲಿದೆ ಎನ್ನಬಹುದು.

ಭಾರತ ಮತ್ತು ಪಾಕಿಸ್ತಾನ್ ನಡುವಣ ಕಳೆದ 5 ಪಂದ್ಯಗಳ ಫಲಿತಾಂಶ:

  • ಸೆಪ್ಟೆಂಬರ್ 28, 2025 T20 ಏಷ್ಯಾ ಕಪ್ (ಫೈನಲ್)- ಭಾರತಕ್ಕೆ 5 ವಿಕೆಟ್‌ಗಳ ಜಯ
  • ಸೆಪ್ಟೆಂಬರ್ 21, 2025 T20 ಏಷ್ಯಾ ಕಪ್ (ಸೂಪರ್ 4)- ಭಾರತಕ್ಕೆ 6 ವಿಕೆಟ್‌ಗಳ ಜಯ
  • ಸೆಪ್ಟೆಂಬರ್ 14, 2025 T20 ಏಷ್ಯಾ ಕಪ್ (ಗ್ರೂಪ್ ಹಂತ)- ಭಾರತಕ್ಕೆ 7 ವಿಕೆಟ್‌ಗಳ ಜಯ
  • ಫೆಬ್ರವರಿ 23, 2025 ODI ಚಾಂಪಿಯನ್ಸ್ ಟ್ರೋಫಿ- ಭಾರತಕ್ಕೆ 6 ವಿಕೆಟ್‌ಗಳ ಜಯ
  • ಜೂನ್ 09, 2024 T20 T20 ವಿಶ್ವಕಪ್- ಭಾರತಕ್ಕೆ 6 ರನ್‌ಗಳ ಜಯ.

Source link

ಅಲ್ಲು ಅರ್ಜುನ್ ಕುಟುಂಬದಲ್ಲಿ ಹಳದಿ ಶಾಸ್ತ್ರ; ಫೋಟೋ ವೈರಲ್ – Kannada News | Allu Sirish Wedding: Haldi Ceremony and Pre Wedding Festivities Go Viral! Date Confirmed

ಅಲ್ಲು (Allu Sirish) ಕುಟುಂಬದಲ್ಲಿ ವಿವಾಹದ ಸಂಭ್ರಮ ಶುರುವಾಗಿದೆ. ಅಲ್ಲು ಅರವಿಂದ್ ಅವರ ಕಿರಿಯ ಪುತ್ರ ಅಲ್ಲು ಸಿರೀಶ್ ಅವರ ವಿವಾಹಪೂರ್ವ ಸಂಭ್ರಮಗಳು ಅದ್ದೂರಿಯಾಗಿ ಆರಂಭವಾಗಿವೆ. ಅಲ್ಲು ಸಿರೀಶ್ ಮತ್ತು ನಯನಿಕಾ ಈಗಾಗಲೇ ತಮ್ಮ ಸ್ನೇಹಿತರಿಗಾಗಿ ದುಬೈನಲ್ಲಿ ಅದ್ದೂರಿಯಾಗಿ ಪೂರ್ವ ವಿವಾಹಪೂರ್ವ ಪಾರ್ಟಿ ನೀಡಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದವು. ಅಲ್ಲು ಸಿರೀಶ್ ಮನೆಯಲ್ಲಿ ಅದ್ಧೂರಿಯಾಗಿ ಅರಿಶಿನ ಶಾಸ್ತ್ರ ನಡೆದಿದೆ.ಈ ವಿಡಿಯೋ ವೈರಲ್ ಆಗಿದೆ.

ಅಲ್ಲು ಹಾಗೂ ಮೆಗಾ ಕುಟುಂಬ ಸದಸ್ಯರು ಒಂದೇ ಕಡೆ ಅರಿಶಿನ ಶಾಸ್ತ್ರವನ್ನು ಮಾಡಿದರು. ಮೆಗಾಸ್ಟಾರ್ ಚಿರಂಜೀವಿ ಅವರ ಪತ್ನಿ ಸುರೇಖಾ, ಅವರ ಮಗಳು ಸುಷ್ಮಿತಾ, ಸೊಸೆ ಉಪಾಸನಾ, ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಲೆಜಿನೋವಾ ಮತ್ತು ಇತರ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಆಪ್ತರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಅಲ್ಲು ಸಿರೀಶ್ ಸ್ವತಃ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ, ಈ ವೀಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಅನೇಕ ಚಲನಚಿತ್ರ ಸೆಲೆಬ್ರಿಟಿಗಳು, ಅಭಿಮಾನಿಗಳು ಮತ್ತು ನೆಟ್ಟಿಗರು ಅಲ್ಲು ಸಿರೀಶ್ ಅವರನ್ನು ಮೊದಲೇ ಅಭಿನಂದಿಸುತ್ತಿದ್ದಾರೆ ಮತ್ತು ಹಾರೈಸುತ್ತಿದ್ದಾರೆ.

ಅಲ್ಲು ಸಿರೀಶ್ ಅವರ ಹಲ್ದಿ ಸಮಾರಂಭದಲ್ಲಿ ಉಪಾಸನಾ ವಿಶೇಷ ಆಕರ್ಷಣೆಯಾಗಿದ್ದರು. ಜನವರಿ 31 ರಂದು ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ . ಗುರುವಾರ (ಫೆಬ್ರವರಿ 12) ಅವರು ತಮ್ಮ ಅವಳಿ ಮಕ್ಕಳಿಗೆ ನಾಮಕರಣವನ್ನೂ ಮಾಡಿದರು. ಮಗಳಿಗೆ ಅನ್ವೀರಾ ದೇವಿ ಕೊನಿಡೇಲಾ ಮತ್ತು ಮಗನಿಗೆ ಶಿವರಾಮ್ ಕೊನಿಡೇಲಾ ಎಂದು ಹೆಸರಿಸಲಾಯಿತು. ಹೆರಿಗೆಯ ನಂತರ ಉಪಾಸನಾ ಮೊದಲ ಬಾರಿಗೆ ಸಮಾರಂಭದಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ: ಕೊರಿಯಾಕ್ಕೆ ಹೋಗಿ ಶಾಕ್ ಆದ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್

ಅಲ್ಲು ಸಿರೀಶ್ ಅವರ ಮದುವೆ ಮಾರ್ಚ್ 6 ರಂದು ನಡೆಯಲಿದೆ ಎಂದು ಹೇಳಲಾಗುತ್ತದೆ. ಸ್ಥಳದ ವಿವರಗಳು ಇನ್ನೂ ತಿಳಿದುಬಂದಿಲ್ಲ. ಈ ಅದ್ದೂರಿ ವಿವಾಹದಲ್ಲಿ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಮತ್ತು ರಾಜಕೀಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ. ಅಲ್ಲು ಸಿರೀಶ್ ಅವರ ವಿವಾಹ ಸಮಾರಂಭದ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link