Category Archives: Blog

Your blog category

ಫೋನ್‌ ಕಳೆದುಕೊಂಡು ಅಲೆದಾಡಿದ್ದ ವ್ಯಕ್ತಿ ಮಾಡಿದ್ದೇನು ಗೊತ್ತಾ? ಅನುಭವದ ಮಾತು ಕೇಳಿ – Kannada News | What you should do if you lose your phone, here Is Kalaburagi victim suggestions

ಕಲಬುರಗಿ, (ಮೇ 07): ಕಲಬುರಗಿ ನಗರ ಪೊಲೀಸರು ವಿಶೇಷ ಕಾರ್ಯಚರಣೆ ನಡೆಸಿ ದಾಖಲೆ ಮಟ್ಟದ ಬರೋಬ್ಬರಿ 1,44,90,000 ರೂಪಾಯಿ ಮೌಲ್ಯದ ಮೊಬೈಲ್ ಪೋನ್ ಗಳನ್ನ ಪತ್ತೆ ಹಚ್ಚಿದ್ದಾರೆ. ಕಲಬುರಗಿ ನಗರ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ 785 ಮೊಬೈಲ್ ಗಳನ್ನು ಸಿಇಐಆರ್ ಪೋರ್ಟಲ್ ಮೂಲಕ ಕೇವಲ ಎರಡು ತಿಂಗಳಲ್ಲಿ ಪತ್ತೆ ಮಾಡಿದ್ದು, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಅವರು ವಾರಸುದಾರರಿಗೆ ಮರಳಿ ಮೊಬೈಲ್ ಹಸ್ತಾಂತರಿಸಿದರು. ಇನ್ನು ವ್ಯಕ್ತಿಯೋರ್ವ ಮೊಬೈಲ್ ಸಿಕ್ಕ ಖುಷಿಯನ್ನು ಟಿವಿ9 ಜೊತೆ ಹಂಚಿಕೊಂಡಿದ್ದು, ಮೊಬೈಲ್ ಕಳೆದು ಹೋದ ಬಳಿಕ ಏನು ಮಾಡಬೇಕು? ತಾನು ಏನು ಮಾಡಿದ್ದ ಎನ್ನುವುದನ್ನು ಅನುಭವನ್ನು ಹಂಚಿಕೊಂಡಿದ್ದಾರೆ. ನಿಮ್ಮ ಮೊಬೈಲ್ ಸಹ ಕಳೆದು ಹೋದರೆ ನೀವು ಇದೆ ಟ್ರಿಕ್ ಅನುಸರಿಸಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಿಡಿಎ ಆಸ್ತಿ ಮೇಲೆ ಬ್ರೋಕರ್ ಕಣ್ಣು: ನೌಕರನೆಂದು ನಂಬಿಸಿ ಸೈಟ್ ಕಬಳಿಸಿದ್ದ ಕಿಂಗ್‌ಪಿನ್ ಬಂಧನ – Kannada News | Fake BDA Employee Arrested in Bengaluru Property Grabbing Case

ಬೆಂಗಳೂರು, ಮೇ 07: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಆಸ್ತಿಗಳನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲು ಯತ್ನಿಸುತ್ತಿದ್ದ ದೊಡ್ಡ ಜಾಲವೊಂದನ್ನು ಬಿಡಿಎ ಜಾಗೃತ ದಳ ಪತ್ತೆಹಚ್ಚಿದೆ. ಪ್ರಾಧಿಕಾರದ ನೌಕರನೆಂದು ಸುಳ್ಳು ಹೇಳಿ ಸೈಟ್ (Land Scam) ಪಡೆದಿದ್ದ ಬ್ರೋಕರ್ ನಾಗರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರೆ, ನೂರಾರು ಕೋಟಿ ರೂ ಮೌಲ್ಯದ ಜಾಗಕ್ಕೆ ಸ್ಕೆಚ್ ಹಾಕಿದ್ದ ಲಕ್ಷ್ಮೀನಾರಾಯಣ್ ಎಂಬಾತ ತಲೆಮರೆಸಿಕೊಂಡಿದ್ದಾನೆ.

ಮುಖ್ಯಾಂಶಗಳು

  • ಗ್ರೂಪ್-ಡಿ ನೌಕರನ ಸೋಗಿನಲ್ಲಿ ವಂಚನೆ
  • ಅಧಿಕಾರಿಗಳು ಶಾಮೀಲು ಶಂಕೆ
  • 160 ಕೋಟಿ ಮೌಲ್ಯದ ಭೂಮಿಗೆ ಸ್ಕೆಚ್

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಬಡಾವಣೆ ನಿರ್ಮಾಣ ಮಾಡಲಾಗಿತ್ತು. ಬಿಡಿಎನಲ್ಲಿ ಬ್ರೋಕರ್ ಆಗಿದ್ದ ನಾಗರಾಜ್​ ಎಂಬಾತ ತಾನು ಗ್ರೂಪ್ ಡಿ ನೌಕರ ಎಂದು ಹೇಳಿ ಸೈಟ್ ಮೇಲೆ ಕಣ್ಣು ಹಾಕಿದ್ದ. ಸುಳ್ಳು ದಾಖಲೆ ನೀಡಿ ಬಡಾವಣೆಯ ಸೈಟುಗಳನ್ನ ಪಡೆದಿದ್ದ ಆತ ಕೆಲ ಅಧಿಕಾರಿಗಳನ್ನು ಯಾಮಾರಿಸಿದ್ದ.

ಇದನ್ನೂ ಓದಿ: ಕೋಟ್ಯಂತರ ಮೌಲ್ಯದ ಜಮೀನು ಕಬಳಿಕೆಗೆ ಯತ್ನ: ಬದುಕಿರುವಾಗಲೇ ನಿವೃತ್ತ ಉದ್ಯೋಗಿಯ ಚಟ್ಟ ಕಟ್ಟಿದ ಭೂಗಳ್ಳರು

ಇನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಡೆಸಿದ ತನಿಖೆಯಲ್ಲಿ ಈತನ ಅಕ್ರಮ ಬಯಲಾಗಿತ್ತು. ನಾಗರಾಜ್  ಪ್ರಾಧಿಕಾರದ ನೌಕರನಲ್ಲ ಎಂಬುವುದು ಸಾಬೀತಾಗಿತ್ತು. ತನಿಖೆಯಲ್ಲಿ ನಾಗರಾಜ್ ಜೊತೆ ಬಿಡಿಎಯ ಕೆಲ ಅಧಿಕಾರಿಗಳು ಶಾಮೀಲಾಗಿರುವುದು ಕೂಡ ಪತ್ತೆಯಾಗಿತ್ತು. ನಾಗರಾಜ್ ಇದೇ ರೀತಿ 10ಕ್ಕೂ ಹೆಚ್ಚು ಕಡೆ ಸೈಟ್ ಗಳನ್ನ ಪಡೆದಿರುವುದು ಕೂಡ ಪತ್ತೆಯಾಗಿದೆ. ಈ ಹಿನ್ನಲೆ ಬಿಡಿಎ ಡಿವೈಎಸ್​ಪಿ ಹನುಮಂತರಾಯ ಶೇಷಾದ್ರಿಪುರಂ ಠಾಣೆಗೆ ದೂರು ನೀಡಿದ್ದರು. FIR ದಾಖಲಿಸಿಕೊಂಡ ಪೊಲೀಸರು ನಾಗರಾಜ್ ನನ್ನ ಬಂಧಿಸಿ ಮೂರು ದಿನ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ‌ ನಡೆಸಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿ 160 ಕೊಟಿ ರೂ ಮೌಲ್ಯದ ಜಾಗ ಮಾರಾಟಕ್ಕೆ ಸ್ಕೆಚ್

ಮತ್ತೊಂದೆಡೆ ಬಿಡಿಎ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಲು ಹೊರಟಿದ್ದ ಲಕ್ಷ್ಮೀನಾರಾಯಣ್ ಎಂಬಾತ ಎಸ್ಕೇಪ್ ಆಗಿದ್ದಾನೆ. ಕಳೆದ ವಾರ ಶೇಷಾದ್ರಿಪುರಂ ಠಾಣೆಯಲ್ಲಿ ಲಕ್ಷ್ಮೀನಾರಾಯಣ್ ಗ್ಯಾಂಗ್ ಮೇಲೆ FIR ದಾಖಲಾಗಿತ್ತು. ಬೆಂಗಳೂರು ದಕ್ಷಿಣ ಕೊತ್ತನೂರಿನ ಬಿಡಿಎ ಜಾಗಕ್ಕೆ ಲಕ್ಷ್ಮೀನಾರಾಯಣ್ ನಕಲಿ ದಾಖಲೆ ಸೃಷ್ಟಿಸಿದ್ದ. ಸುಮಾರು 160 ಕೊಟಿ ರೂ ಮೌಲ್ಯದ ಜಾಗ ಮಾರಾಟ ಮಾಡಲು ಹೊರಟಿದ್ದ.

ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ

ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಬಿಡಿಎ, ತನಿಖೆ ನಡೆಸಿ ಲಕ್ಷ್ಮೀನಾರಾಯಣ್ ಮೇಲೆ ದೂರು ನೀಡಿದ್ದರು. ಅತ್ತ ಪ್ರಕರಣ ದಾಖಲಾಗುತ್ತಿದ್ದಂತೆ ಇತ್ತ ಲಕ್ಷ್ಮೀನಾರಾಯಣ್ ಎಸ್ಕೇಪ್ ಆಗಿದ್ದಾನೆ. ಅಲ್ಲದೇ ಪೊಲೀಸ್ ತನಿಖೆ ವೇಳೆ ಈತ ಇದೇ ರೀತಿ ನೂರಾರು ಕೋಟಿ ರೂ ಬಿಡಿಎ ಜಾಗ ಕಬಳಿಸಿರುವುದು ಪತ್ತೆಯಾಗಿದೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿ ಲಕ್ಷ್ಮೀನಾರಾಯಣ್​ಗಾಗಿ ಶೇಷಾದ್ರಿಪುರಂ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: ಕಬ್ಬನ್ ಪಾರ್ಕ್‌ನಲ್ಲಿ ಮಾವು ಮೇಳಕ್ಕೆ ವಾಕರ್ಸ್ ಅಸೋಸಿಯೇಷನ್ ವಿರೋಧ: ಏಕೆ?

ಒಟ್ಟಾರೆ ಬಿಡಿಎ ಜಾಗವನ್ನ ಕಂಡಕಂಡವರು ಲೂಟಿಗೆ ಮುಂದಾಗಿದ್ದಾರೆ‌. ಬೆಂಗಳೂರಿನಾದ್ಯಂತ ಹಲವು ಕಡೆ ಇದೇ ರೀತಿಯ ದೂರುಗಳು ದಾಖಲಾಗುತ್ತಿದ್ದು, ಬಿಡಿಎ ತನಿಖೆ ಚುರುಕುಗೊಳಿಸಿದೆ‌.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕೇಂದ್ರದ ವಿರುದ್ಧ ಮತ್ತೆ ಸಿಡಿದೆದ್ದ ರಾಜ್ಯ ಸರ್ಕಾರ, ವಿಬಿ ಜಿ ರಾಮ್ ಜೀ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಲು ತೀರ್ಮಾನ – Kannada News | Karnataka cabinet decides Going Court Against Union Governmnet for Changed MGNREGA as VB G RAM G

ಬೆಂಗಳೂರು, (ಮೇ 07): ಮನ್​ರೇಗಾ (MGNREGA) ಎನ್ನುವುದನ್ನು ವಿಬಿ ಜಿ ರಾಮ್ ಜೀ (VB-G RAM G) ಎಂದು ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಕೋರ್ಟ್ ಮೊರೆ ಹೋಗಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಈ ಸಂಬಂಧ ಇಂದು (ಮೇ 07) ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಚರ್ಚಿಸಿದ್ದು, ಮನ್​ರೇಗಾ ಹೆಸರು ಬದಲಾವಣೆ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದೆ. ಈ ಬಗ್ಗೆ ಕಾನೂನು ಸಚಿವ ಎಚ್​​ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ.

  • ಮನ್​ರೇಗಾ ಹೆಸರು ಬದಲಾವಣೆ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಲು ರಾಜ್ಯ ಸರ್ಕಾರ ನಿರ್ಧಾರ
  • ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ
  • ವಿಬಿ ಜಿ ರಾಮ್ ಜೀ ಎಂದು ಬದಲಿಸಿದ್ದ ಕೇಂದ್ರ ಸರ್ಕಾರ

ಇದನ್ನೂ ಓದಿ: G-RAM-G: ಜಿ ರಾಮ್‌ ಜಿ ಕಾಯ್ದೆ- ಮತ್ತಷ್ಟು ಉದ್ಯೋಗ, ಮತ್ತಷ್ಟು ಭದ್ರತೆ

ಸಚಿವ ಸಂಪುಟ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಚ್​​ಕೆ ಪಾಟೀಲ್, ಮನ್​ರೇಗಾವನ್ನು ವಿಬಿ ಜಿ ರಾಮ್ ಜೀ ಎಂದು ಬದಲಿಸಿದ ಕೇಂದ್ರ ಸರ್ಕಾರ ನಡೆಯನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಲು ಸಂಪುಟದಲ್ಲಿ ನಿರ್ಧರಿಸಿದ್ದೇವೆ. ಈ ಬಗ್ಗೆ ಸಂಪುಟ ಸಭೆಯಲ್ಲಿ 15 ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಮನ್​ರೇಗಾ ಸ್ಥಗಿತ ಮಾಡಿದ್ದರಿಂದ ಬಡವರಿಗೆ ಅನಾನುಕೂಲವಾಗಲಿದೆ. ಹೀಗಾಗಿ ಮನ್​ರೇಗಾ ಮರು ಸ್ಥಾಪನೆಗೆ ನಾವು ಚಳವಳಿ ಮಾಡಿದ್ದೆವು. ಮೇ ತಿಂಗಳಾದರೂ ವಿಬಿ ಜಿ ರಾಮ್​​ಜೀ ನೋಟಿಫೈ ಆಗಿಲ್ಲ. ಇದುವರೆಗೆ ವಿಬಿ ಜಿ ರಾಮ್​​ಜೀ ದೇಶದಲ್ಲಿ ಇನ್ನೂ ಬಂದಿಲ್ಲ. ಮನ್​ರೇಗಾ ಬಾಕಿ ಕೆಲಸ ಮುಂದುವರಿಸಬಹುದೆಂದು ಆದೇಶಿಸಿದೆ. ಆದರೆ ಕೇಂದ್ರ ಸರ್ಕಾರ ಯಾವುದೇ ಅನುದಾನ ನೀಡಿಲ್ಲ ಎಂದು ಹೇಳಿದರು.

ಈ ಬಾರಿ ಮಳೆ ಕೊರತೆಯಿಂದ ನೀರಿನ ಸಂಕಷ್ಟ ಅಂತಿದ್ದಾರೆ. ಆದರೂ ಬಡವರ ಕೆಲಸದ ಬಗ್ಗೆ ಕೇಂದ್ರ ಚಿಂತನೆ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಿರ್ಣಯದ ಮೂಲಕ ಒತ್ತಡ ಹೇರಿದ್ದೇವೆ. ಮುಖ್ಯಮಂತ್ರಿ ಕೂಡ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದರು.

ರಾಜ್ಯ ಶಿಕ್ಷಣ ನೀತಿ ಆಯೋಗದ ಶಿಫಾರಸು ಮಂಡನೆ

ಸಂಪುಟ ಸಭೆಯಲ್ಲಿ ಆಯೋಗದ ಶಿಫಾರಸುಗಳ ಬಗ್ಗೆ ಚರ್ಚೆ ಆಗಿದ್ದು, ಆಯೋಗದ ವರದಿಯ ಅನುಷ್ಠಾನಕ್ಕೆ ಸಂಪುಟ ಉಪ ಸಮಿತಿ ರಚಿಸಲು ಸಂಪುಟದಲ್ಲಿ ನಿರ್ಧಾರವಾಗಿದೆ. ಈ ಸಂಪುಟ ಉಪ ಸಮಿತಿಯು, ಆಯೋಗದ ಶಿಫಾರಸು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ – Kannada News | Tamil Nadu DMK chief MK Stalin Asks DMK MLAs to Stay in Chennai Till May 10

ಚೆನ್ನೈ, ಮೇ 7: ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ. ಸದ್ಯಕ್ಕೆ ಚೆಂಡು ಟಿವಿಕೆ ಮುಖ್ಯಸ್ಥ ವಿಜಯ್ (Vijay) ಅವರ ಮೈದಾನದಲ್ಲಿದ್ದರೂ ಯಾರು ಬಹುಮತ ಸಾಬೀತುಪಡಿಸುತ್ತಾರೋ ಅವರಿಗೆ ಸರ್ಕಾರ ರಚಿಸುವ ಅವಕಾಶ ಸಿಗಲಿದೆ. ಹೀಗಾಗಿ, ಡಿಎಂಕೆ ಮತ್ತು ಎಐಎಡಿಎಂಕೆ ಕೂಡ ತಮ್ಮ ಪಕ್ಷದ ಶಾಸಕರ ಜೊತೆ ಸಭೆಗಳನ್ನು ನಡೆಸುತ್ತಿದ್ದಾರೆ. ಡಿಎಂಕೆ ವಿಧಾನಸಭಾ ಶಾಸಕರು ಇಂದು ಪಕ್ಷದ ನಾಯಕ ಎಂ.ಕೆ. ಸ್ಟಾಲಿನ್ (MK Stalin) ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಈ ವೇಳೆ ಮಾತನಾಡಿದ ಎಂ.ಕೆ ಸ್ಟಾಲಿನ್, “ಉತ್ತಮ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವುದು ನನ್ನ ಆಸೆ. ಆದರೆ ಕೆಲವು ನಿರ್ಧಾರಗಳನ್ನು ಪಕ್ಷದ ಹಿತದೃಷ್ಟಿಯಿಂದ ತೆಗೆದುಕೊಳ್ಳಬೇಕಾಗುತ್ತದೆ. ಯಾವುದೇ ನಿರ್ಧಾರ ತೆಗೆದುಕೊಂಡರೂ, ಸದಸ್ಯರು ಅದಕ್ಕೆ ಬದ್ಧರಾಗಿರಬೇಕು. ಸದ್ಯದಲ್ಲೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ನಮ್ಮ ಪಕ್ಷದ ಎಲ್ಲ ಶಾಸಕರು ಮೇ 10ರವರೆಗೆ ಚೆನ್ನೈನಲ್ಲಿಯೇ ಇರಬೇಕು” ಎಂದು ಆದೇಶಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಲುಬುಗಳಲ್ಲಿ ನೋವು ಕಂಡುಬರುವುದಕ್ಕೆ ಈ ವಿಟಮಿನ್ ಕೊರತೆಯೇ ಕಾರಣ? ಇದನ್ನು ತಡೆಗಟ್ಟಲು ಸಿಂಪಲ್ ಟ್ರಿಕ್ ಇಲ್ಲಿದೆ – Kannada News | Vitamin Deficiencies That Cause Bone Pain: What You Need to Know

ಇತ್ತೀಚಿನ ದಿನಗಳಲ್ಲಿ ಎಲುಬು ನೋವು ಮತ್ತು ದೇಹದ ದುರ್ಬಲತೆ ಸಮಸ್ಯೆಗಳು ಅನೇಕರಲ್ಲಿ ಹೆಚ್ಚಾಗಿ ಕಾಣಿಸುತ್ತಿವೆ. ಹಲವರು ಇದನ್ನು ಸಾಮಾನ್ಯ ದಣಿವು ಅಥವಾ ವಯಸ್ಸಿನ ಪರಿಣಾಮ ಎಂದು ನಿರ್ಲಕ್ಷಿಸುತ್ತಾರೆ. ಆದರೆ ವೈದ್ಯರ ಪ್ರಕಾರ, ದೇಹದಲ್ಲಿ ಅಗತ್ಯ ವಿಟಮಿನ್ (Vitamin Deficiencies) ಮತ್ತು ಖನಿಜಗಳ ಕೊರತೆ ಕೂಡ ಎಲುಬು ನೋವಿಗೆ ಪ್ರಮುಖ ಕಾರಣವಾಗಬಹುದು. ತಜ್ಞರ ಪ್ರಕಾರ, ವಿಶೇಷವಾಗಿ ವಿಟಮಿನ್ ಡಿ ಕೊರತೆಯು ಎಲುಬು ನೋವಿಗೆ ಪ್ರಮುಖ ಕಾರಣವಾಗಿದೆ. ವಿಟಮಿನ್ ಡಿ ದೇಹದಲ್ಲಿ ಕ್ಯಾಲ್ಸಿಯಂ ಪೋಷಣೆಗೆ ಸಹಾಯ ಮಾಡುತ್ತದೆ. ಇದು ಎಲುಬುಗಳನ್ನು ಗಟ್ಟಿಯಾಗಿಡಲು ಅಗತ್ಯವಾದ ಪೋಷಕಾಂಶವಾಗಿದೆ. ಇದರ ಕೊರತೆಯಿಂದ ಎಲುಬುಗಳಲ್ಲಿ ನೋವು (Bone Pain), ದುರ್ಬಲತೆ ಮತ್ತು ಗಟ್ಟಿತನದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾಗಾದರೆ ಈ ರೀತಿಯ ಕೊರತೆ ನೀಗಿಸಿಕೊಳ್ಳುವುದು ಹೇಗೆ, ಎಲುಬು ಗಟ್ಟಿಯಾಗಿರಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಇತರ ವಿಟಮಿನ್ ಕೊರತೆಯೂ ಸಮಸ್ಯೆಗೆ ಕಾರಣ:

ವೈದ್ಯರು ತಿಳಿಸುವಂತೆ, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ12 ಕೊರತೆಯೂ ದೇಹದ ಸ್ನಾಯುಗಳು ಮತ್ತು ಎಲುಬುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವಿಟಮಿನ್ C ಕೊರತೆಯಿಂದ ದೇಹದಲ್ಲಿ ದೌರ್ಬಲ್ಯ, ಸಂಧಿ ನೋವು ಮತ್ತು ದಣಿವು ಹೆಚ್ಚಾಗಬಹುದು. ಈ ರೀತಿಯ ಕೊರತೆ ದೀರ್ಘಕಾಲ ಮುಂದುವರಿದರೆ ಎಲುಬುಗಳು ದುರ್ಬಲವಾಗಿ, ಮುರಿತದ ಅಪಾಯವೂ ಹೆಚ್ಚಾಗುತ್ತದೆ.

ಇದನ್ನೂ ಓದಿ: ಡಾರ್ಕ್ ಸ್ಕಿನ್ ಮತ್ತು ಒಬೆಸಿಟಿ ಇರುವವರಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚಾಗಿ ಕಂಡು ಬರುವುದಕ್ಕೆ ಕಾರಣ ಏನ್ ಗೊತ್ತಾ?

ವಿಟಮಿನ್ ಕೊರತೆಯನ್ನು ಹೇಗೆ ಪೂರೈಸಬೇಕು?

ಸಾಮಾನ್ಯವಾಗಿ ವಿಟಮಿನ್ ಕೊರತೆಯನ್ನು ನಿವಾರಿಸಲು ಸಮತೋಲನಯುತ ಮತ್ತು ಪೌಷ್ಟಿಕ ಆಹಾರ ಸೇವನೆ ಬಹಳ ಮುಖ್ಯ. ಹಾಲು, ಮೊಸರು, ಹಸಿರು ತರಕಾರಿ, ಮೊಟ್ಟೆ, ಹಣ್ಣು ಮತ್ತು ಒಣಹಣ್ಣುಗಳು ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತವೆ. ಪ್ರತಿದಿನ ಕೆಲವು ಸಮಯ ಸೂರ್ಯನ ಬೆಳಕಿನಲ್ಲಿ ಇರುವುದರಿಂದ ವಿಟಮಿನ್ ಡಿ ಪಡೆದುಕೊಳ್ಳಬಹುದು. ಕೊರತೆ ಹೆಚ್ಚು ಇದ್ದರೆ ವೈದ್ಯರ ಸಲಹೆಯ ಮೇರೆಗೆ ಸಪ್ಲಿಮೆಂಟ್ಸ್ ತೆಗೆದುಕೊಳ್ಳಬಹುದು. ಜೊತೆಗೆ ನಿಯಮಿತ ಆರೋಗ್ಯ ತಪಾಸಣೆ ಕೂಡ ಅಗತ್ಯ.

ಎಲುಬು ಗಟ್ಟಿಯಾಗಿರಲು ಏನು ಮಾಡಬೇಕು?

ಸರಿಯಾದ ಆಹಾರದ ಜೊತೆಗೆ ನಿಯಮಿತ ವ್ಯಾಯಾಮವೂ ಎಲುಬುಗಳ ಆರೋಗ್ಯಕ್ಕೆ ಅಗತ್ಯವಾಗಿದೆ. ದಿನನಿತ್ಯ ನಡೆಯುವುದು, ಲಘು ವ್ಯಾಯಾಮ ಮಾಡುವುದು ಎಲುಬುಗಳನ್ನು ಗಟ್ಟಿಗೊಳಿಸಲು ಸಹಕಾರಿಯಾಗಿದೆ. ಧೂಮಪಾನ ಮತ್ತು ಹೆಚ್ಚು ಜಂಕ್ ಫುಡ್ ಸೇವನೆಯನ್ನು ತಪ್ಪಿಸುವುದು ಉತ್ತಮ. ಒಟ್ಟಾರೆ, ದೇಹದಲ್ಲಿ ಅಗತ್ಯ ವಿಟಮಿನ್‌ಗಳ ಸಮತೋಲನ ಕಾಪಾಡಿಕೊಳ್ಳುವುದರಿಂದ ಎಲುಬು ನೋವು ಮತ್ತು ದುರ್ಬಲತೆ ಸಮಸ್ಯೆಗಳನ್ನು ತಡೆಗಟ್ಟಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕ್ರಿಕೆಟಿಗ ಸೂರ್ಯ ಹಾಗೂ ದೇವಿಶಾ ದಂಪತಿಗೆ ಮುದ್ದಾದ ಹೆಣ್ಣು ಮಗು ಜನನ – Kannada News | Suryakumar yadav and devisha shetty Welcomes Baby Girl

2026 ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿರುವ ಸೂರ್ಯಕುಮಾರ್ ಯಾದವ್​ಗೆ ಈ ಸೀಸನ್​ ಅಂದುಕೊಂಡಂತೆ ನಡೆದಿಲ್ಲ. ಈ ಆವೃತ್ತಿಯಲ್ಲಿ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಸೂರ್ಯಕುಮಾರ್ ರನ್ ಬರ ಎದುರಿಸುತ್ತಿದ್ದಾರೆ. ಹೀಗಾಗಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿರುವ ಸೂರ್ಯಕುಮಾರ್​ಗೆ ವೈಯಕ್ತಿಕ ಬದುಕಿನಲ್ಲಿ ಸಿಹಿ ಸುದ್ದಿಯೊಂದು ಸಿಕ್ಕಿದೆ. ಅವರ ಮಡದಿ ದೇವಿಶಾ ಶೆಟ್ಟಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸ್ವತಃ ಈ ವಿಚಾರವನ್ನು ಸೂರ್ಯಕುಮಾರ್ ಯಾದವ್ ತಮ್ಮ ಅಧಿಕೃತ ಇನ್ಸ್​ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ.

Source link

ರಾತ್ರಿ ಸಲ್ವಾರ್ ಧರಿಸಿ ರಸ್ತೆಯಲ್ಲಿ ನಿಂತಿದ್ದ ಮಹಿಳಾ ಐಪಿಎಸ್ ಅಧಿಕಾರಿಗೆ 40 ಪುರುಷರಿಂದ ಕಿರುಕುಳ! – Kannada News | Hyderabad woman Police commissioner goes undercover faces 40 men harassment at night

ಹೈದರಾಬಾದ್, ಮೇ 7: ತೆಲಂಗಾಣದಲ್ಲಿ (Telangana) ಹೊಸದಾಗಿ ನೇಮಕವಾದ ಮಲ್ಕಾಜ್‌ಗಿರಿ ಪೊಲೀಸ್ ಆಯುಕ್ತರಾದ ಬಿ. ಸುಮತಿ ಅವರು ನಗರದಲ್ಲಿ ಮಹಿಳೆಯರ ಸುರಕ್ಷತೆಯನ್ನು ಪರಿಶೀಲಿಸಲು ತಡರಾತ್ರಿ ಅಂಡರ್​ಕವರ್ ಕಾರ್ಯಾಚರಣೆ ನಡೆಸಿದ್ದಾರೆ. ಸಾಮಾನ್ಯ ಮಹಿಳೆಯಂತೆ ರಾತ್ರಿ ಓಡಾಡುತ್ತಿದ್ದ ಅವರಿಗೆ 3 ಗಂಟೆಯಲ್ಲಿ 40 ಪುರುಷರು ಕಿರುಕುಳ ನೀಡಿದ್ದಾರೆ. ಐಪಿಎಸ್ ಅಧಿಕಾರಿ ನಡೆಸಿದ ಈ ರಹಸ್ಯ ಕಾರ್ಯಾಚರಣೆಯ ಬಳಿಕ ನಗರದಾದ್ಯಂತ ಮಹಿಳೆಯರ ಭದ್ರತೆಗೆ ಅಗತ್ಯವಾದ ಮುನ್ನೆಚ್ಚರಿಕೆಗಳನ್ನು ಹೆಚ್ಚಿಸಲು ಅವರು ಸೂಚಿಸಿದ್ದಾರೆ.

ಹೊಸದಾಗಿ ನೇಮಕಗೊಂಡ ಮಲ್ಕಾಜ್‌ಗಿರಿ ಪೊಲೀಸ್ ಆಯುಕ್ತರಾದ ಬಿ. ಸುಮತಿಗೆ ನಗರದಲ್ಲಿ ಮಹಿಳೆಯರ ಸುರಕ್ಷತೆಯನ್ನು ನಿರ್ಣಯಿಸಲು ನಡೆಸಿದ ರಹಸ್ಯ ಕಾರ್ಯಾಚರಣೆಯ ಸಂದರ್ಭದಲ್ಲಿ ಸಲ್ವಾರ್ ಕಮೀಜ್‌ನಲ್ಲಿ ಸಾಮಾನ್ಯ ಮಹಿಳೆಯಂತೆ ಹೋಗಿದ್ದಾಗ ಸುಮಾರು 40 ಪುರುಷರು ಕಿರುಕುಳ ನೀಡಿದ್ದಾರೆ. ಅವರನ್ನು ಪೊಲೀಸ್ ಠಾಣೆಗೆ ಕರೆಸಿ ಬುದ್ಧಿ ಹೇಳಲಾಗಿದೆ. ಹಾಗೇ, ಮಹಿಳೆಯರ ಜೊತೆ ಯಾವ ರೀತಿ ವರ್ತಿಸಬೇಕೆಂದು ಕೌನ್ಸಿಲಿಂಗ್ ಕೂಡ ಕೊಡಲಾಗುತ್ತಿದೆ.

ಇದನ್ನೂ ಓದಿ: ತೆಲಂಗಾಣದಲ್ಲಿ ಭೀಕರ ಕೃತ್ಯ, ಮಾಂಸದ ಅಡುಗೆ ವಿಚಾರಕ್ಕೆ ದಂಪತಿ ನಡುವೆ ವಾಗ್ವಾದ, ಪತಿಯನ್ನೇ ಕೊಂದ ಪತ್ನಿ

ತಮ್ಮ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ತಿಳಿಯಲು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಮಧ್ಯರಾತ್ರಿ ದಿಲ್ಸುಖ್‌ನಗರದ ಬಸ್ ನಿಲ್ದಾಣದಲ್ಲಿ ಒಬ್ಬಂಟಿಯಾಗಿ ನಿಂತಿದ್ದರು. ಈ 3 ಗಂಟೆಗಳ ಅವಧಿಯಲ್ಲಿ ಪುರುಷರ ಗುಂಪುಗಳು ಅವರನ್ನು ಸಂಪರ್ಕಿಸಿದವು. ಹಲವರು ಮದ್ಯ ಅಥವಾ ಡ್ರಗ್ಸ್ ಪ್ರಭಾವದಲ್ಲಿ ಮತ್ತು ಅಸಭ್ಯ ಹೇಳಿಕೆಗಳನ್ನು ನೀಡಿ ಕಿರುಕುಳ ನೀಡಿದ್ದಾರೆ. ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಸೇರಿದಂತೆ ಹೆಚ್ಚಿನ ಯುವಕರಿಗೆ ತಾವು ಹಿರಿಯ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡುತ್ತಿದ್ದೇವೆಂದು ತಿಳಿದಿರಲಿಲ್ಲ.

ಇದನ್ನೂ ಓದಿ: ಮಾನವೀಯತೆ ಅಂದ್ರೆ ಇದು: ಸುಡುವ ಬಿಸಿಲಿನಿಂದ ರಕ್ಷಿಸಲು ತನ್ನ ಅಂಗಡಿಯೊಳಗೆ ಬೀದಿ ನಾಯಿಗಳಿಗೆ ಆಶ್ರಯ ನೀಡಿದ ವ್ಯಕ್ತಿ

ಸುಮತಿ ಅವರು ಸುದ್ದಿಯಲ್ಲಿರುವುದು ಇದೇ ಮೊದಲಲ್ಲ. ಸುಮಾರು 25 ವರ್ಷಗಳ ಹಿಂದೆ ಅವರು ಮೊದಲು ಕಾಜಿಪೇಟೆ ರೈಲ್ವೆ ನಿಲ್ದಾಣದ ಬಳಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪ್ರಾರಂಭಿಸಿದಾಗ ಮಹಿಳೆಯರ ಸುರಕ್ಷತೆಯನ್ನು ತಿಳಿಯಲು ಇದೇ ರೀತಿಯಲ್ಲಿ ಮಫ್ತಿಯಲ್ಲಿ ಕಾರ್ಯಾಚರಣೆಯನ್ನು ನಡೆಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

LSG vs RCB: ಮುಂದಿನ ಸೀಸನ್​ಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದೇವೆ; ರಿಷಭ್ ಪಂತ್ – Kannada News | IPL 2026: Lucknow Super Giants Playoff Hopes Dim; Rishabh Pant’s Admission on Team’s Fate

2026 ರ ಐಪಿಎಲ್‌ನಲ್ಲಿ (IPL 2026) ಇಂದು ಲಕ್ನೋ ಸೂಪರ್‌ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (LSG vs RCB) ನಡುವೆ 50ನೇ ಲೀಗ್ ಪಂದ್ಯ ನಡೆಯುತ್ತಿದೆ. ಅಂದರೆ ಲೀಗ್ ಹಂತ ಮುಗಿಯುವತ್ತ ಸಾಗಿದ್ದು, ಯಾವ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆಯಬಹುದು. ಯಾವ ತಂಡಗಳು ಲೀಗ್ ಸುತ್ತಿನಲ್ಲೇ ತಮ್ಮ ಪಯಣವನ್ನು ಮುಗಿಸಬಹುದು ಎಂಬುದಕ್ಕೆ ಭಾಗಶಃ ಸ್ಪಷ್ಟತೆ ಸಿಕ್ಕಂತ್ತಾಗಿದೆ. ಅದರಲ್ಲೂ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ 3 ಸ್ಥಾನಗಳಲ್ಲಿರುವ ತಂಡಗಳಿಗೆ ಗೇಟ್​ಪಾಸ್ ಈಗಾಗಲೇ ಸಿಕ್ಕಿದೆ ಎನ್ನಬಹುದು. ಅಂತಹ ತಂಡಗಳಲ್ಲಿ ಲಕ್ನೋ ಕೂಡ ಒಂದು.

ಲಕ್ನೋ ಸೂಪರ್‌ಜೈಂಟ್ಸ್ ತಂಡ ಪ್ರಸ್ತುತ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಅಂದರೆ 10 ನೇ ಸ್ಥಾನದಲ್ಲಿದೆ. ಆಡಿರುವ ಒಂಬತ್ತು ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆದ್ದಿದ್ದ್ದು, ಉಳಿದ ಏಳು ಪಂದ್ಯಗಳಲ್ಲಿ ಸೋತಿದೆ. ಹೀಗಾಗಿ ಲಕ್ನೋ ತಂಡ ಮುಂದಿನ ಹಂತಕ್ಕೆ ಹೋಗುವುದು ಅನುಮಾನವಾಗಿದೆ. ನಾಯಕ ರಿಷಭ್ ಪಂತ್ ಕೂಡ ಇದನ್ನೇ ಆರ್​ಸಿಬಿ ವಿರುದ್ಧದ ಪಂದ್ಯದ ಟಾಸ್ ಸಮಯದಲ್ಲಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಮಾತ್ರವಲ್ಲದೆ ಒಂದು ಹೆಜ್ಜೆ ಮುಂದೆ ಹೋಗಿರುವ ಪಂತ್, ನಾವು ಮುಂದಿನ ಸೀಸನ್​ಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದೇವೆ ಎಂದಿದ್ದಾರೆ.

ರಿಷಭ್ ಪಂತ್ ಹೇಳಿದ್ದೇನು?

ಆರ್‌ಸಿಬಿ ವಿರುದ್ಧದ ಟಾಸ್ ಸಮಯದಲ್ಲಿ ಮಾತನಾಡಿದ ರಿಷಭ್ ಪಂತ್, ‘ನಾವು ಅತ್ಯುತ್ತಮ ಆಟಗಾರರು ಎಂದು ನಮಗೆ ತಿಳಿದಿದೆ, ಆದರೆ ಕೆಲವೊಮ್ಮೆ ವಿಷಯಗಳು ನಾವು ಅಂದುಕೊಂಡಂತೆ ನಡೆಯುವುದಿಲ್ಲ. ಇದೆಲ್ಲ ಕ್ರಿಕೆಟ್‌ನಲ್ಲಿ ಸಾಮಾನ್ಯ. ಹೀಗಾಗಿ ನಮಗೆ ವಿಷಯಗಳ ಬಗ್ಗೆ ಸ್ಪಷ್ಟತೆ ಇರಬೇಕು. ಇನ್ನು ಈ ಪಂದ್ಯದಲ್ಲಿ ನಮ್ಮ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಲವು ಬದಲಾವಣೆಗಳಾಗಿವೆ. ಇಲ್ಲಿಂದ ನಮ್ಮ ಲೋಪ ದೋಷಗಳನ್ನು ಸರಿಪಡಿಸಿಕೊಂಡು ನಾವು, ಮುಂದಿನ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತೇವೆ ಎಂದಿದ್ದಾರೆ. ಅಂದರೆ ಪಂತ್, ಈ ಆವೃತ್ತಿಯ ಲೀಗ್ ಹಂತ ಮುಗಿಯುವುದಕ್ಕೆ ಇನ್ನು 20 ಪಂದ್ಯಗಳು ಬಾಕಿ ಇರುವ ಮುನ್ನವೇ ತಂಡದ ಪ್ರಯಾಣ ಲೀಗ್ ಹಂತದಲ್ಲೇ ಮುಗಿಯುತ್ತದೆ ಎಂಬುದನ್ನು ಖಚಿತಪಡಿಸಿಕೊಂಡಂತ್ತಾಗಿದೆ.

ಈ ಆವೃತ್ತಿಯಲ್ಲಿ ಲಕ್ನೋ ಪ್ರದರ್ಶನ

ಈ ಆವೃತ್ತಿಯನ್ನು ಸೋಲಿನೊಂದಿಗೆ ಆರಂಭಿಸಿದ ಲಕ್ನೋ ಸೂಪರ್‌ಜೈಂಟ್ಸ್ ತಂಡವು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರು ವಿಕೆಟ್‌ಗಳಿಂದ ಸೋತಿತು. ಆದಾಗ್ಯೂ, ಆ ನಂತರ ನಡೆದ ಹೈದರಾಬಾದ್ ಮತ್ತು ಕೆಕೆಆರ್ ವಿರುದ್ಧದ ಸತತ ಎರಡು ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಇದರ ನಂತರ ಲಕ್ನೋ ಸೂಪರ್‌ಜೈಂಟ್ಸ್ ತಂಡವು ಗುಜರಾತ್, ಆರ್‌ಸಿಬಿ, ಪಂಜಾಬ್ ಮತ್ತು ರಾಜಸ್ಥಾನ ವಿರುದ್ಧ ಸತತ ಆರು ಪಂದ್ಯಗಳನ್ನು ಸೋತಿತು. ನೈಟ್ ರೈಡರ್ಸ್ ವಿರುದ್ಧದ ಪಂದ್ಯ ಟೈ ಆಯಿತ್ತಾದರೂ ಸೂಪರ್ ಓವರ್‌ನಲ್ಲಿ ಸೋತಿತ್ತು. ಇದಾದ ಬಳಿಕ ಲಕ್ನೋ, ಮುಂಬೈ ಇಂಡಿಯನ್ಸ್ ವಿರುದ್ಧವೂ ಸೋತಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಂಗಾಳದಲ್ಲಿ ಹಿಂಸಾಚಾರ; ಬಾಂಬ್ ದಾಳಿಯಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಗಾಯ – Kannada News | Bomb blasts in Howrahs Shibpur slums violence erupts in west Bengal

ಹೌರಾ, ಮೇ 7: ಚುನಾವಣಾ ಫಲಿತಾಂಶದ ನಂತರ ಪಶ್ಚಿಮ ಬಂಗಾಳ (West Bengal) ರಾಜ್ಯದಲ್ಲಿ ರಾಜಕೀಯ ಹಿಂಸಾಚಾರ ಹೆಚ್ಚಾಗಿದೆ. ಇಂದು ಹೌರಾದ ಶಿವಪುರದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಕಾಂತಿಯಲ್ಲಿ ಟಿಎಂಸಿ ನಾಯಕನ ಮನೆ ಮೇಲೂ ದಾಳಿ ನಡೆದಿದೆ. ಎರಡೂ ಪಕ್ಷಗಳು ಪರಸ್ಪರ ಆರೋಪ ಹೊರಿಸಿಕೊಳ್ಳುತ್ತಿವೆ. ಇಲ್ಲಿಯವರೆಗೆ, ಬಂಗಾಳದಲ್ಲಿ ಚುನಾವಣಾ ನಂತರದ ಹಿಂಸಾಚಾರದಲ್ಲಿ 5 ಜನರು ಸಾವನ್ನಪ್ಪಿದ್ದಾರೆ. ಇದು ಬಹಳ ಆತಂಕಕಾರಿ ಸಂಗತಿಯಾಗಿದೆ. ಹೀಗಾಗಿ, ಪಶ್ಚಿಮ ಬಂಗಾಳದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದೆ. ಇಂದು ರಾಜ್ಯಪಾಲರು ಬಂಗಾಳದ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ. ಈ ಅಧಿಕಾರ ಬದಲಾವಣೆಯ ನಡುವೆ ಕಳೆದ ಕೆಲವು ದಿನಗಳಿಂದ ರಾಜ್ಯದ ವಿವಿಧ ಭಾಗಗಳಿಂದ ಹಿಂಸಾಚಾರದ ವರದಿಗಳು ಬರುತ್ತಿವೆ. ಇಂದು ಮಧ್ಯಾಹ್ನ, ಹೌರಾದ ಶಿವಪುರ ಪೊಲೀಸ್ ಠಾಣೆ ಪ್ರದೇಶದ ಚೌರಬಸ್ತಿ ಪ್ರದೇಶದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಉದ್ವಿಗ್ನತೆಯನ್ನು ಉಂಟುಮಾಡಿತು. ಈ ಘಟನೆಯಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ: BJP ಶಾಸಕಿ ರತ್ನ ದೇವನಾಥ್ ಮನೆ ಬಳಿಯೇ ಬಾಂಬ್​​ ಸ್ಫೋಟ

ಇಂದು ಮಧ್ಯಾಹ್ನ 2.30ರ ಸುಮಾರಿಗೆ ಘಟನೆ ನಡೆದಾಗ ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆಯನ್ನು ಸುತ್ತುವರೆದು ಪ್ರತಿಭಟನೆ ನಡೆಸಿದರು. ಸ್ಥಳೀಯ ತೃಣಮೂಲ ನಾಯಕ ಶಮೀಮ್ ಅಹ್ಮದ್ ನೇತೃತ್ವದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇಟ್ಟಿಗೆಗಳು, ಕಲ್ಲುಗಳನ್ನು ಎಸೆಯಲಾಯಿತು ಮತ್ತು ಬಾಂಬ್‌ಗಳನ್ನು ಸಹ ಎಸೆಯಲಾಯಿತು.

ಈ ಪರಿಸ್ಥಿತಿಯನ್ನು ನಿಯಂತ್ರಿಸಲು, ಸ್ಥಳದಲ್ಲಿ ಭಾರೀ ಪೊಲೀಸ್ ಪಡೆ ಮತ್ತು ಕೇಂದ್ರ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಈ ಘಟನೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಶಿವಪುರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಿದರು. ಈ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಚುನಾವಣೆಯ ನಂತರ ಪ್ರದೇಶದಲ್ಲಿ ಭಯ ಹುಟ್ಟಿಸಲು ಶಿವಪುರ ಭಯೋತ್ಪಾದಕ ಅರೂಪ್ ರಾಯ್‌ನ ಆಪ್ತ ಸಹಚರ ಶಮೀಮ್ ಅಹ್ಮದ್ ಅಲಿಯಾಸ್ ಬಾರ್ ಈ ದಾಳಿಯನ್ನು ಆಯೋಜಿಸಿದ್ದಾನೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ: ಮುಖ್ಯಮಂತ್ರಿ ರೇಸ್​ನಲ್ಲಿರುವ ಸುವೇಂದು ಅಧಿಕಾರಿ ಆಪ್ತ ಸಹಾಯಕನ ಹತ್ಯೆ

ಕಾಂತಿಯಲ್ಲಿ ತೃಣಮೂಲ ಕಾಂಗ್ರೆಸ್ ನಾಯಕನ ಮನೆಯನ್ನು ಗುರಿಯಾಗಿಸಿಕೊಂಡು ಬಾಂಬ್ ಸ್ಫೋಟ ನಡೆದಿದೆ. ಬುಧವಾರ ರಾತ್ರಿ ಕಾಂತಿ ಬ್ಲಾಕ್ ಯುವ ಟಿಎಂಸಿ ಅಧ್ಯಕ್ಷ ಉಸ್ಮಾನ್ ಘನಿ ಅವರ ಮನೆಯನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸಲಾಗಿದೆ. ಪುರಂದಪುರ ಹಟ್ಟಾಲ ಪ್ರದೇಶದಲ್ಲಿರುವ ಅವರ ಮನೆಯಲ್ಲಿ ರಾತ್ರಿ ಅವರು ಇದ್ದಾಗ ಬಾಂಬ್ ಸ್ಫೋಟಗೊಂಡಿದೆ. ಈ ಘಟನೆಯು ಆ ಪ್ರದೇಶದಲ್ಲಿ ವ್ಯಾಪಕ ಗಲಭೆಗೆ ಕಾರಣವಾಗಿದೆ. ದೂರು ದಾಖಲಾದ ತಕ್ಷಣ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಘಟನೆಗೆ ಯಾವುದೇ ರಾಜಕೀಯ ಸಂಬಂಧವಿದೆಯೇ ಎಂದು ನಿರ್ಧರಿಸಲು ತನಿಖೆ ನಡೆಯುತ್ತಿದೆ. ರಾಜ್ಯದಲ್ಲಿ ಚುನಾವಣೆಯ ನಂತರದ ರಾಜಕೀಯ ಹಿಂಸಾಚಾರದಲ್ಲಿ 5 ಜನರು ಸಾವನ್ನಪ್ಪಿದ್ದಾರೆ. ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ಬುಧವಾರ ರಾತ್ರಿ ಗುಂಡಿಕ್ಕಿ ಕೊಲ್ಲಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TV9 Kannada News Live: ದೀದಿ ಸರ್ಕಾರ ವಜಾ; ಕರ್ನಾಟಕದಲ್ಲಿ ದಾಖಲೆ ಮದ್ಯ ಮಾರಾಟ – Kannada News | TV9 Kannada News Live: Mamata Banerjee Government Dismissed in West Bengal; Karnataka Sees Record Liquor Sales

ಮಮತಾ ಬ್ಯಾನರ್ಜಿ, ಮದ್ಯImage Credit source: tv9 kannada

ಬೆಂಗಳೂರು, ಮೇ 07: ಪಶ್ಚಿಮ ಬಂಗಾಳದ (West Bengal) ರಾಜಕೀಯ ವಿದ್ಯಮಾನಗಳಲ್ಲಿ ಭಾರಿ ಸಂಚಲನ ಮೂಡಿದ್ದು, ರಾಜ್ಯಪಾಲ ಆರ್.ಎನ್. ರವಿ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರ ಮತ್ತು ಸಚಿವ ಸಂಪುಟವನ್ನು ವಜಾಗೊಳಿಸಿದ್ದಾರೆ. ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಹಿನ್ನಡೆ ಅನುಭವಿಸಿದ್ದರೂ, ಮಮತಾ ಬ್ಯಾನರ್ಜಿ ತಾವು ಸೋತಿಲ್ಲ ಮತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಚುನಾವಣೆಯಲ್ಲಿ ಬಿಜೆಪಿ 100ಕ್ಕೂ ಹೆಚ್ಚು ಕ್ಷೇತ್ರಗಳನ್ನು ಕದ್ದಿದ್ದಾರೆಂದು ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಹೀಗಾಗಿ ಅವರು ಅಧಿಕಾರ ಬಿಟ್ಟುಕೊಡಲು ನಿರಾಕರಿಸಿದ್ದರಿಂದ, ರಾಜ್ಯಪಾಲರು ಸಂವಿಧಾನದ ಅಧಿಕಾರ ಬಳಸಿ ಸರ್ಕಾರವನ್ನೇ ವಿಸರ್ಜಿಸಿದ್ದಾರೆ. ಇದರಿಂದಾಗಿ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ.

ಮುಖ್ಯಾಂಶಗಳು

  • ಪಶ್ಚಿಮ ಬಂಗಾಳ ಸರ್ಕಾರ ವಿಸರ್ಜಿಸಿದ ರಾಜ್ಯಪಾಲ: ಮಮತಾ ಬ್ಯಾನರ್ಜಿ ಸರ್ಕಾರ ವಜಾ
  • ಏಕನಾಥ್ ಶಿಂಧೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್: ತಪ್ಪಿದ ಅನಾಹುತ
  • ಎಲ್‌ಪಿಜಿ ದರ ಏರಿಕೆ ಬೆನ್ನಲ್ಲೇ ಮೀಟರ್ ದರ ಹೆಚ್ಚಳಕ್ಕೆ ಮುಂದಾದ ಆಟೋ ಚಾಲಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್: ತಪ್ಪಿದ ಅನಾಹುತ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಹವಾಮಾನ ವೈಪರೀತ್ಯ ಉಂಟಾದ ಹಿನ್ನೆಲೆ ತುರ್ತು ಲ್ಯಾಂಡಿಂಗ್ ಮಾಡಿರುವಂತಹ ಘಟನೆ ನಡೆದಿದೆ. ಏಕನಾಥ್ ಶಿಂಧೆ ಅವರು ಮುಂಬೈನಿಂದ ತಮ್ಮ ತವರು ಜಿಲ್ಲೆಯಾದ ಸತಾರಾಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸುತ್ತಿದ್ದರು. ಈ ವೇಳೆ ಏಕಾಏಕಿ ಭಾರಿ ಗಾಳಿ ಮತ್ತು ಗುಡುಗು ಸಹಿತ ಮಳೆ ಆರಂಭವಾಗಿದೆ. ಇದರಿಂದಾಗಿ ಏಕನಾಥ್ ಶಿಂಧೆ ಅವರ ವಿಮಾನ ಪಯಣಕ್ಕೆ ಅಡ್ಡಿ ಉಂಟಾಗಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಸಂಪುಟವನ್ನು ವಿಸರ್ಜಿಸಿದ ರಾಜ್ಯಪಾಲ; ಮಮತಾ ಬ್ಯಾನರ್ಜಿ ಈಗ ಮಾಜಿ ಸಿಎಂ

ಪೈಲಟ್ ತಕ್ಷಣವೇ ಎಚ್ಚೆತ್ತುಕೊಂಡು ಹೆಲಿಕಾಪ್ಟರ್ ಅನ್ನು ಸುರಕ್ಷಿತವಾಗಿ ವಾಪಸ್ ಮುಂಬೈಗೆ ತಿರುಗಿಸಿ, ಜುಹು ಏರೋಡ್ರೋಮ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ. ಪ್ರತಿಕೂಲ ಹವಾಮಾನದಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ಪೈಲಟ್‌ನ ಸಮಯಪ್ರಜ್ಞೆಯಿಂದ ತಪ್ಪಿದೆ. ಘಟನೆ ಬಳಿಕ ಶಿಂಧೆ ಅವರು ರಸ್ತೆ ಮಾರ್ಗದ ಮೂಲಕ ತಮ್ಮ ಪ್ರಯಾಣ ಬೆಳೆಸಿದರು.

ಬೆಂಗಳೂರು ಆಟೋ ಪ್ರಯಾಣಿಕರಿಗೆ ಶಾಕ್: ಮೀಟರ್​ ದರ ಹೆಚ್ಚಳಕ್ಕೆ ಚಾಲಕ ಸಂಘಟನೆಗಳ ಮನವಿ

ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಮತ್ತೆ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ. ಆಟೋ ಎಲ್‌ಪಿಜಿ ದರ ಸತತ ಏರಿಕೆ ಬೆನ್ನಲ್ಲೇ ಆಟೋ ಚಾಲಕ ಸಂಘಟನೆಗಳು, ಆಟೋ ಮೀಟರ್ ದರ ಏರಿಕೆ ಮಾಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿವೆ. ಸದ್ಯ ಬೆಂಗಳೂರಿನಲ್ಲಿ ಆಟೋ ಕನಿಷ್ಠ ದರ 2 ಕಿ.ಮೀಗೆ 30 ರೂಪಾಯಿ ಇದೆ. ಇದನ್ನು 50 ರೂಪಾಯಿಗೆ ಹೆಚ್ಚಿಸಬೇಕು ಎಂಬುದು ಚಾಲಕರ ಪ್ರಮುಖ ಬೇಡಿಕೆಯಾಗಿದೆ.

ಇದನ್ನೂ ಓದಿ: ಕಬ್ಬನ್ ಪಾರ್ಕ್‌ನಲ್ಲಿ ಮಾವು ಮೇಳಕ್ಕೆ ವಾಕರ್ಸ್ ಅಸೋಸಿಯೇಷನ್ ವಿರೋಧ: ಏಕೆ?

ಇತ್ತೀಚಿನ ದಿನಗಳಲ್ಲಿ ಆಟೋ ಎಲ್‌ಪಿಜಿ ಬೆಲೆಯು ಪ್ರತಿ ಲೀಟರ್‌ಗೆ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದಾಗಿ ದೈನಂದಿನ ಜೀವನ ನಡೆಸುವುದು ಕಷ್ಟವಾಗುತ್ತಿದೆ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಈಗಾಗಲೇ ಆಟೋ ಚಾಲಕರ ಸಂಘಟನೆಗಳು ಸಾರಿಗೆ ಸಚಿವರಿಗೂ ಮನವಿ ಸಲ್ಲಿಸಲು ಸಿದ್ಧತೆ ನಡೆಸಿವೆ.

ಕರ್ನಾಟಕದಲ್ಲಿ ದಾಖಲೆ ಮದ್ಯ ಮಾರಾಟ: 3,688 ಕೋಟಿ ರೂ ಆದಾಯ

ಕರ್ನಾಟಕದ ಅಬಕಾರಿ ಇಲಾಖೆಯ ಇತಿಹಾಸದಲ್ಲಿ ಏಪ್ರಿಲ್ ತಿಂಗಳು ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಕಳೆದ ತಿಂಗಳು ನಡೆದ ಭರ್ಜರಿ ಮದ್ಯ ಮಾರಾಟದಿಂದ ರಾಜ್ಯ ಸರ್ಕಾರಕ್ಕೆ ಬರೋಬ್ಬರಿ 3,688 ಕೋಟಿ ರೂ ಆದಾಯ ಹರಿದುಬಂದಿದೆ. ಇದು ಕಳೆದ 13 ವರ್ಷಗಳ ಇತಿಹಾಸದಲ್ಲೇ ಒಂದೇ ತಿಂಗಳಲ್ಲಿ ಸಂಗ್ರಹವಾದ ಗರಿಷ್ಠ ಆದಾಯವಾಗಿದೆ. ಅಬಕಾರಿ ಇಲಾಖೆಯ ಅಂಕಿಅಂಶಗಳ ಪ್ರಕಾರ, ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಇಷ್ಟೊಂದು ಬೃಹತ್ ಪ್ರಮಾಣದ ವಹಿವಾಟು ಒಂದೇ ತಿಂಗಳಲ್ಲಿ ನಡೆದಿರುವುದು ಇದೇ ಮೊದಲು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link