Category Archives: Blog

Your blog category

ಸುಳ್ಳು ಆರೋಪ ಮಾಡುವುದೇ ಕಾಂಗ್ರೆಸ್‌ ಕೆಲಸ; ಪ್ರಿಯಾಂಕ್ ಖರ್ಗೆ ಪತ್ರಕ್ಕೆ ವಿಎಚ್‌ಪಿ ಅಧ್ಯಕ್ಷ ಅಲೋಕ್ ಕುಮಾರ್ ತಿರುಗೇಟು – Kannada News | VHP International President Alok Kumar hits back to Priyank Kharge open letter on RSS

ನವದೆಹಲಿ, ಜೂನ್ 16: ಕರ್ನಾಟಕ ಸರ್ಕಾರದ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸಂಸ್ಥೆಯನ್ನು ಗುರಿಯಾಗಿಸಿಕೊಂಡು ಬರೆದಿದ್ದ ಬಹಿರಂಗ ಪತ್ರಕ್ಕೆ ವಿಶ್ವ ಹಿಂದೂ ಪರಿಷತ್ (VHP) ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಅವರು ನವದೆಹಲಿಯಲ್ಲಿ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಆರ್‌ಎಸ್‌ಎಸ್‌ನ ನೋಂದಣಿ ಮತ್ತು ಆದಾಯದ ಮೂಲಗಳ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಎತ್ತಿದ್ದ ಪ್ರಶ್ನೆಗಳಿಗೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನಾಯಕ ಅಲೋಕ್ ಕುಮಾರ್ ಉತ್ತರಿಸಿದ್ದಾರೆ. “ದೇಶದ ಎಲ್ಲಾ ಸಂಸ್ಥೆಗಳೂ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದು ಹೇಳುವ ಕಾನೂನು ಎಲ್ಲಿದೆ ಎಂಬುದನ್ನು ಮೊದಲು ಖರ್ಗೆ ಉಲ್ಲೇಖಿಸಲಿ” ಎಂದು ಸವಾಲು ಹಾಕಿರುವ ಅವರು, ಸಂಘದ ‘ಗುರುದಕ್ಷಿಣೆ’ ನಿಧಿಗೆ ಆದಾಯ ತೆರಿಗೆಯಿಂದ ವಿನಾಯಿತಿ ಇದೆ ಎಂದು ಹೈಕೋರ್ಟ್ ನೀಡಿರುವ ಹಳೆಯ ತೀರ್ಪುಗಳನ್ನು ನೆನಪಿಸಿದ್ದಾರೆ. ಅಲ್ಲದೆ, ಇಂತಹ ಟೀಕೆಗಳ ಮೂಲಕ ಆರ್‌ಎಸ್‌ಎಸ್ ವರ್ಚಸ್ಸಿಗೆ ಮಸಿ ಬಳಿಯಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್‌ಎಸ್‌ಎಸ್ ಸಂಸ್ಥೆಯ ಆರ್ಥಿಕ ಪಾರದರ್ಶಕತೆ ಮತ್ತು ನಿಧಿ ಸಂಗ್ರಹಣೆಯ ಬಗ್ಗೆ ಮಾತನಾಡಿರುವ ಅಲೋಕ್ ಕುಮಾರ್, ಸಂಘದ ಕಾರ್ಯವೈಖರಿಯನ್ನು ಸ್ಪಷ್ಟಪಡಿಸಿದ್ದಾರೆ. ಆರ್‌ಎಸ್‌ಎಸ್ ವಿಶ್ವಾದ್ಯಂತ ಯಾವುದೇ ಬಾಹ್ಯ ಸಂಸ್ಥೆಗಳಿಂದ, ವಿದೇಶಗಳಿಂದ ಅಥವಾ ಸಾರ್ವಜನಿಕರಿಂದ ದೇಣಿಗೆಯ ರೂಪದಲ್ಲಿ ಹಣವನ್ನು ಸ್ವೀಕರಿಸುವುದಿಲ್ಲ. ಸಂಘದ ಒಳಗೆ ವರ್ಷಕ್ಕೊಮ್ಮೆ ‘ಗುರುದಕ್ಷಿಣೆ’ ಕಾರ್ಯಕ್ರಮ ನಡೆಯುತ್ತದೆ. ಸಂಘದ ಸ್ವಯಂಸೇವಕರು ಮಾತ್ರ ತಮ್ಮ ಶಕ್ತ್ಯಾನುಸಾರ ನೀಡುವ ಕಾಣಿಕೆಯಿಂದಲೇ ಸಂಘದ ಎಲ್ಲಾ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತವೆ ಎಂದಿದ್ದಾರೆ.

ಇದನ್ನೂ ಓದಿ: ಆರ್​ಎಸ್​ಎಸ್​ ಸರಸಂಘ ಚಾಲಕ ಮೋಹನ್ ಭಾಗವತ್ ಇದ್ದ ರೈಲಿನ ಮೇಲೆ ಕಲ್ಲು ತೂರಾಟ

ಆದಾಯ ತೆರಿಗೆ ಇಲಾಖೆಯು 1967-68 ಮತ್ತು 1975-76ರಲ್ಲಿ ಆರ್‌ಎಸ್‌ಎಸ್ ತನ್ನ ಆದಾಯದ ಮೇಲೆ ತೆರಿಗೆ ಪಾವತಿಸಬೇಕು ಎಂದು ಮೌಲ್ಯಮಾಪನ ಅಧಿಕಾರಿಯ ಮೂಲಕ ಆದೇಶಗಳನ್ನು ಹೊರಡಿಸಿತ್ತು. ಆದರೆ, ಈ ಎರಡೂ ಪ್ರಕರಣಗಳಲ್ಲಿ ಪರಸ್ಪರ ನಂಬಿಕೆಯ ಕಾನೂನುಗಳ ಅಡಿಯಲ್ಲಿ ಗುರು ದಕ್ಷಿಣೆಯಿಂದ ಬರುವ ಆದಾಯಕ್ಕೆ ಆದಾಯ ತೆರಿಗೆ ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ ಎಂದು ಹೇಳಿದ್ದಾರೆ.

ಪ್ರತಿಯೊಂದು ಸಂಸ್ಥೆಯೂ ಕಡ್ಡಾಯವಾಗಿ ಸರ್ಕಾರದ ಅಡಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ಎನ್ನುವ ಯಾವುದೇ ಕಡ್ಡಾಯ ಕಾನೂನು ಭಾರತದಲ್ಲಿ ಇಲ್ಲ. ಪ್ರಿಯಾಂಕ್ ಖರ್ಗೆಗೆ ಅಂತಹ ಕಾನೂನು ಗೊತ್ತಿದ್ದರೆ ಅದನ್ನು ಬಹಿರಂಗಪಡಿಸಲಿ ಎಂದು ಅವರು ಸವಾಲು ಹಾಕಿದ್ದಾರೆ. ಆರ್‌ಎಸ್‌ಎಸ್ ಆದಾಯ ತೆರಿಗೆ ಪಾವತಿಸುತ್ತಿಲ್ಲ ಎಂಬ ಕಾಂಗ್ರೆಸ್ ನಾಯಕರ ನಿರಂತರ ಆರೋಪಗಳಿಗೆ ವಿಎಚ್​ಪಿ ನಾಯಕ ಅಲೋಕ್ ಕುಮಾರ್ ಐತಿಹಾಸಿಕ ಮತ್ತು ಕಾನೂನಾತ್ಮಕ ದಾಖಲೆಗಳನ್ನು ನೆನಪಿಸಿದ್ದಾರೆ.

ಈ ಹಿಂದೆ 1967-68 ಮತ್ತು 1975-76ರ ಅವಧಿಯಲ್ಲಿ ಆದಾಯ ತೆರಿಗೆ ಇಲಾಖೆಯ ಮೌಲ್ಯಮಾಪನ ಅಧಿಕಾರಿಗಳು ಆರ್‌ಎಸ್‌ಎಸ್ ತನ್ನ ಆದಾಯಕ್ಕೆ ತೆರಿಗೆ ಪಾವತಿಸಬೇಕು ಎಂದು ಆದೇಶ ಹೊರಡಿಸಿದ್ದರು. ಆದರೆ, ಈ ಎರಡೂ ಪ್ರಕರಣಗಳ ವಿರುದ್ಧ ಕಾನೂನು ಹೋರಾಟ ನಡೆದಾಗ ಮಾನ್ಯ ಉಚ್ಚ ನ್ಯಾಯಾಲಯವು ಮಹತ್ವದ ತೀರ್ಪು ನೀಡಿತ್ತು. “ಪರಸ್ಪರ ನಂಬಿಕೆಯ ಕಾನೂನುಗಳ” ಅಡಿಯಲ್ಲಿ ಆರ್‌ಎಸ್‌ಎಸ್ ಸ್ವಯಂಸೇವಕರು ನೀಡುವ ‘ಗುರು ದಕ್ಷಿಣೆ’ ಹಣಕ್ಕೆ ಯಾವುದೇ ಆದಾಯ ತೆರಿಗೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಹೀಗಾಗಿ, ಸಂಘದ ಆದಾಯ ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಆರ್‌ಎಸ್‌ಎಸ್​ನವರು ಹಿಂದುಗಳಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ

ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ನೆನಪಿಸುತ್ತಾ ತೀವ್ರ ವಾಗ್ದಾಳಿ ನಡೆಸಿದ ಅಲೋಕ್ ಕುಮಾರ್, “1948ರಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಹತ್ಯೆಯಾದಾಗಿನಿಂದಲೂ ಕಾಂಗ್ರೆಸ್ ಪಕ್ಷವು ಆರ್‌ಎಸ್‌ಎಸ್ ವಿರುದ್ಧ ಇಂತಹದ್ದೇ ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಮಾಡುತ್ತಾ ಬಂದಿದೆ. ಪ್ರಿಯಾಂಕ್ ಖರ್ಗೆ ಅವರು ಕೇವಲ ರಾಜಕೀಯ ಲಾಭಕ್ಕಾಗಿ ಹಾಗೂ ಸದ್ದು ಮಾಡುವುದಕ್ಕಾಗಿಯೇ ಇಂತಹ ಹಗುರವಾದ ವಾಗ್ದಾಳಿಗಳ ಮೂಲಕ ಸಂಘದ ಗೌರವಕ್ಕೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ. ಆದರೆ, ಇಂತಹ ಸುಳ್ಳುಗಳು ಸಂಘದ ಸತ್ಕಾರ್ಯಗಳ ಮುಂದೆ ಎಂದಿಗೂ ಗೆಲ್ಲಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ವಿಜಯ್​ರ ಭೇಟಿಯಾದ ವಿಶಾಲ್, ಹೂಗುಚ್ಛ, ಶಾಲು ಬದಲಿಗೆ ಕೊಟ್ಟಿದ್ದೇನು?

ತಮಿಳುನಾಡಿನ ಮುಖ್ಯಮಂತ್ರಿಯಾಗಿ ನಟ ವಿಜಯ್ (Vijay) ಅಧಿಕಾರ ಸ್ವೀಕರಿಸಿದ ನಂತರ, ತಮಿಳು ಚಿತ್ರರಂಗದ ಹಲವು ನಟರು, ತಂತ್ರಜ್ಞರು ಅವರನ್ನು ಭೇಟಿಯಾಗಿ ಅಭಿನಂದಿಸುತ್ತಿದ್ದಾರೆ. ಇತ್ತೀಚೆಗಷ್ಟೆ ನಟ ವಿಶಾಲ್ ಕೂಡ ಸಿಎಂ ವಿಜಯ್ ಅವರನ್ನು ಭೇಟಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಭೇಟಿಯ ಸಂದರ್ಭದಲ್ಲಿ ವಿಶಾಲ್ ಅವರು ವಿಜಯ್ ಅವರಿಗೆ ಹೂಗುಚ್ಛ ಅಥವಾ ಇನ್ಯಾವುದೇ ಉಡುಗೊರೆ ನೀಡಿಲ್ಲ, ಬದಲಿಗೆ ಒಂದೊಳ್ಳೆ ಕಾರ್ಯವನ್ನು ವಿಜಯ್ ಹೆಸರಿನಲ್ಲಿ ಮಾಡಿದ್ದಾರೆ.

ಸಿಎಂ ಜೊತೆಗಿನ ಭೇಟಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೊಸ್ಟ್ ಹಂಚಿಕೊಂಡಿರುವ ವಿಜಯ್, ‘ನನ್ನ ಆತ್ಮೀಯ ‘ಡಾರ್ಲಿಂಗ್’ ಸಿಎಂ ವಿಜಯ್, ಲಯೋಲಾ ಕಾಲೇಜಿನಲ್ಲಿ ನಮಗೆ ಪರಿಚಯವಾದಾಗಿನಿಂದ ನಾನು ನಿಮ್ಮನ್ನು ‘ಡಾರ್ಲಿಂಗ್’ ಎಂದೇ ಕರೆಯುತ್ತಿದ್ದೇನೆ, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಒಬ್ಬ ಸಾಮಾನ್ಯ ನಟನಾಗಿ ನಿಮ್ಮ ಪಯಣ ಪ್ರಾರಂಭವಾಯಿತು, ಹಲವು ಅಡೆತಡೆಗಳು ಮತ್ತು ಟೀಕೆಗಳನ್ನು ಮೆಟ್ಟಿ ನಿಂತು, ನಿಮ್ಮ ಮೌನ ಮತ್ತು ಯಶಸ್ಸಿನ ಮೂಲಕ ಅವೆಲ್ಲವನ್ನೂ ದೂರ ತಳ್ಳಿದ್ದೀರಿ. ಒಬ್ಬ ಸೂಪರ್‌ಸ್ಟಾರ್‌ ಆಗಿ ಉನ್ನತ ಶಿಖರವನ್ನು ಏರಿದ ನೀವು, ಇಂದು ತಮಿಳುನಾಡಿನ ಗೌರವಾನ್ವಿತ ಮುಖ್ಯಮಂತ್ರಿಯಾಗಿದ್ದೀರಿ’ ಎಂದಿದ್ದಾರೆ.

‘ಇಂದು ನಿಮ್ಮ ಹುದ್ದೆ ಬದಲಾಗಿದೆ, ಆದರೆ ನೀವು ಬದಲಾಗಿಲ್ಲ. ನಿಮ್ಮನ್ನು ಭೇಟಿಯಾದದ್ದು ನನಗೆ ತುಂಬಾ ಸಂತೋಷವನ್ನು ನೀಡಿತು, ಅದೇ ಹಿಂದಿನ ಅನ್ಯೋನ್ಯತೆಯನ್ನು ಮತ್ತೆ ಅನುಭವಿಸಿದೆ. ನಮ್ಮ ರಾಜ್ಯದ ಮುಖ್ಯಮಂತ್ರಿಯನ್ನು ‘ಡಾರ್ಲಿಂಗ್’ ಎಂದು ಕರೆಯುವುದು ನನಗೆ ತುಂಬಾ ವಿಶೇಷ ಎನಿಸುತ್ತದೆ. ಈ ಮಧುರ ಕ್ಷಣಗಳು ನನ್ನ ಜೀವನದಲ್ಲಿ ಸದಾ ಉಳಿಯುತ್ತವೆ’ ಎಂದು ವಿಶಾಲ್ ತಿಳಿಸಿದ್ದಾರೆ.

ಇದನ್ನೂ ಓದಿ:ತಮಿಳುನಾಡು ಸಿಎಂ ವಿಜಯ್ ಬೆನ್ನಲ್ಲೇ ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ ಅನಂತ್ ಅಂಬಾನಿ ಭೇಟಿ

‘ನಿಮಗಾಗಿ ಕೊಡಲಿಚ್ಛಿಸಿದ್ದ ಹೂಗುಚ್ಛ ಮತ್ತು ಶಾಲಿನ ಬದಲಾಗಿ, ಆ ಹಣವನ್ನು ನಿಮ್ಮ ಹೆಸರಿನಲ್ಲಿ ತಮಿಳುನಾಡಿನ ಮೂವರು ಅರ್ಹ ಬಡ ಬಾಲಕಿಯರ ವಿದ್ಯಾಭ್ಯಾಸಕ್ಕಾಗಿ ಬಳಸಿದ್ದೇನೆ. ಆ ಮಕ್ಕಳಿಗಾಗಿ ನೀವು ಪಡುತ್ತಿರುವ ಶ್ರಮವನ್ನು ನೋಡಿ ಅವರು ಖಂಡಿತವಾಗಿಯೂ ಹೆಮ್ಮೆಪಡುತ್ತಾರೆ ಮತ್ತು ನಿಮ್ಮನ್ನು ಎಂದಿಗೂ ನೆನಪಿಟ್ಟುಕೊಳ್ಳುತ್ತಾರೆ. ನನ್ನ ಹೃತ್ಪೂರ್ವಕ ಧನ್ಯವಾದಗಳು’ ಎಂದು ವಿಶಾಲ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ವಿಶಾಲ್ ಅವರು ವಿಜಯ್ ಅವರ ಹೆಸರಿನಲ್ಲಿ ಮಾಡಿರುವ ಕಾರ್ಯವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಆದರೆ ಇದೇ ವೇಳೆ, ವಿಜಯ್ ಅವರನ್ನು ‘ಡಾರ್ಲಿಂಗ್’ ಎಂದು ಕರೆದಿರುವ ಬಗ್ಗೆ ಸಾಕಷ್ಟು ಟೀಕೆಯನ್ನು ಸಹ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇಸ್ರೇಲ್ ಕೈಲಾಗದಿದ್ದರೆ ಸಿರಿಯಾ ನಿಭಾಯಿಸಲಿ; ಹೆಜ್ಬುಲ್ಲಾ ನಿಗ್ರಹಕ್ಕೆ ಟ್ರಂಪ್ ಐಡಿಯಾ – Kannada News | Let Syria handle Hezbollah if Israel can’t avoid mass killings; Donald Trump suggests

ವಾಷಿಂಗ್ಟನ್, ಜೂನ್ 16: ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ತಮ್ಮ ತೀವ್ರ ಅಸಮಾಧಾನವನ್ನು ಹೊರಹಾಕಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ಅಲ್ಲಿ ಹೆಜ್ಬುಲ್ಲಾ ವಿರುದ್ಧ ಹೋರಾಡುವಲ್ಲಿ ಇಸ್ರೇಲ್‌ಗಿಂತ ಸಿರಿಯಾ ದೇಶವೇ ಉತ್ತಮ ಕೆಲಸ ಮಾಡಬಲ್ಲದು ಎಂದು ಪ್ರತಿಪಾದಿಸಿದ್ದಾರೆ. ಫ್ರಾನ್ಸ್‌ನಲ್ಲಿ ನಡೆದ ಜಿ7 (G7) ಶೃಂಗಸಭೆಯ ಸಂದರ್ಭದಲ್ಲಿ ಕತಾರ್‌ನ ಎಮಿರ್ ಅವರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಟ್ರಂಪ್, ಇರಾನ್ ಬೆಂಬಲಿತ ಸಶಸ್ತ್ರ ಸಂಘಟನೆಯ ವಿರುದ್ಧ ಬೆಂಜಮಿನ್ ನೆತನ್ಯಾಹು ಅವರ ಮಿಲಿಟರಿ ಕಾರ್ಯಾಚರಣೆಯು ಇರಾನ್ ಜೊತೆಗಿನ ಶಾಂತಿ ಮಾತುಕತೆಗಳನ್ನು ಬಹುತೇಕ ಹಳಿ ತಪ್ಪಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಧ್ಯಪ್ರಾಚ್ಯದ ಪ್ರಸ್ತುತ ಪರಿಸ್ಥಿತಿಯ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯಲ್ಲಿ ಸಾರ್ವಜನಿಕ ಸಾವುನೋವುಗಳು ಹೆಚ್ಚುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. “ಇಸ್ರೇಲ್ ತನ್ನ ಗಡಿಯಲ್ಲಿ ಸುರಕ್ಷತೆಯನ್ನು ಬಯಸುವುದು ಸರಯಾಗಿದೆ. ಆದರೆ, ಹೆಜ್ಬುಲ್ಲಾವನ್ನು ಮುಗಿಸುವ ಪ್ರಕ್ರಿಯೆಯಲ್ಲಿ ಅಮಾಯಕ ಜನರ ಹತ್ಯೆಗಳನ್ನು ತಪ್ಪಿಸಲು ಇಸ್ರೇಲ್‌ಗೆ ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಇಸ್ರೇಲ್ ಇದನ್ನು ನಿಯಂತ್ರಿಸಲು ವಿಫಲವಾದರೆ, ಹೆಜ್ಬುಲ್ಲಾವನ್ನು ಸಿರಿಯಾ ದೇಶವೇ ಹ್ಯಾಂಡಲ್ ಮಾಡಲು ಬಿಡುವುದು ಉತ್ತಮ. ಸಿರಿಯಾ ಮತ್ತು ಲೆಬನಾನ್ ನೆರೆಹೊರೆಯ ರಾಷ್ಟ್ರಗಳಾಗಿದ್ದು, ತಮ್ಮದೇ ಆದ ರೀತಿಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಲ್ಲವು.” ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಾಳೆಯೇ ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ; ತಕ್ಷಣವೇ ಹಾರ್ಮುಜ್ ತೆರೆಯಲಾಗುವುದು ಎಂದ ಟ್ರಂಪ್

ಟ್ರಂಪ್ ಅವರ ಈ ನಿಲುವು ಸದ್ಯ ಅಮೆರಿಕ ಹೊಂದಿರುವ ವಿದೇಶಾಂಗ ನೀತಿಗಿಂತ ಸಂಪೂರ್ಣ ಭಿನ್ನವಾಗಿದೆ. ಸಿರಿಯಾದ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಸರ್ಕಾರ, ಇರಾನ್ ಮತ್ತು ಹೆಜ್ಬುಲ್ಲಾ ಮೂರೂ ಒಟ್ಟಾಗಿ ಕೆಲಸ ಮಾಡುತ್ತವೆ. ಇಸ್ರೇಲ್ ವಿರುದ್ಧದ ಹೋರಾಟದಲ್ಲಿ ಹೆಜ್ಬುಲ್ಲಾಗೆ ಇರಾನ್‌ನಿಂದ ಬರುವ ಶಸ್ತ್ರಾಸ್ತ್ರಗಳು ಸಿರಿಯಾ ಮೂಲಕವೇ ಸರಬರಾಜಾಗುತ್ತವೆ. ಹೀಗಿರುವಾಗ, “ಸಿರಿಯಾ ದೇಶವೇ ಹೆಜ್ಬುಲ್ಲಾವನ್ನು ನಿಭಾಯಿಸಲಿ” ಎಂದು ಟ್ರಂಪ್ ಹೇಳಿರುವುದು ಚರ್ಚೆಗೆ ಕಾರಣವಾಗಿದೆ.

ಅಮೆರಿಕವು ಮಧ್ಯಪ್ರಾಚ್ಯದ ಯುದ್ಧಗಳಲ್ಲಿ ನಿರಂತರವಾಗಿ ಹಣ ಮತ್ತು ಶಸ್ತ್ರಾಸ್ತ್ರಗಳನ್ನು ವ್ಯಯಿಸುವುದನ್ನು ನಿಲ್ಲಿಸಬೇಕು ಎಂಬುದು ಟ್ರಂಪ್ ಅವರ ‘ಅಮೆರಿಕಾ ಫಸ್ಟ್’ ನೀತಿಯಾಗಿದೆ. ಪ್ರಾದೇಶಿಕ ಬಿಕ್ಕಟ್ಟುಗಳನ್ನು ಅಲ್ಲಿನ ಸ್ಥಳೀಯ ರಾಷ್ಟ್ರಗಳೇ ಬಗೆಹರಿಸಿಕೊಳ್ಳಲಿ, ಇದರಲ್ಲಿ ಅಮೆರಿಕ ನೇರವಾಗಿ ಭಾಗಿಯಾಗಬಾರದು ಎಂಬ ಸಂದೇಶವನ್ನು ಅವರು ನೀಡುತ್ತಿದ್ದಾರೆ. ಇಸ್ರೇಲ್‌ನ ಆಪ್ತ ಮಿತ್ರ ರಾಷ್ಟ್ರವಾಗಿದ್ದರೂ, ಯುದ್ಧದಿಂದಾಗಿ ಜಾಗತಿಕವಾಗಿ ಇಸ್ರೇಲ್ ಅನುಭವಿಸುತ್ತಿರುವ ಮಾನವೀಯ ಬಿಕ್ಕಟ್ಟಿನ ಅಪಕೀರ್ತಿಯಿಂದ ದೂರವಿರಲು ಟ್ರಂಪ್ ಬಯಸುತ್ತಿದ್ದಾರೆ.

ಇದನ್ನೂ ಓದಿ: ಜಿ7 ಶೃಂಗಸಭೆ: ಫ್ರಾನ್ಸ್‌ಗೆ ಪ್ರಧಾನಿ ಮೋದಿ ಭೇಟಿ, ಇಂದು ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ಮಹತ್ವದ ಮಾತುಕತೆ

ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದದ ಚೌಕಟ್ಟು ಸಿದ್ಧವಾದ ಮರುದಿನವೇ ಈ ಹೇಳಿಕೆ ಬಂದಿದ್ದು, ಇದು ಇಸ್ರೇಲ್‌ಗೆ ನೀಡಿದ ನೇರ ಪೆಟ್ಟಾಗಿದೆ. ಈ ಶಾಂತಿ ಒಪ್ಪಂದವು ಲೆಬನಾನ್‌ನಲ್ಲಿನ ಮಿಲಿಟರಿ ಕಾರ್ಯಾಚರಣೆಗಳ ಅಂತ್ಯವನ್ನೂ ಒಳಗೊಂಡಿದೆ ಎಂದು ಇರಾನ್ ಮತ್ತು ಪಾಕಿಸ್ತಾನ ಪ್ರತಿಪಾದಿಸುತ್ತಿವೆ. ಇದು ಇಸ್ರೇಲ್‌ನ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಎಂಬಿಎ ಕಾಲಘಟ್ಟ ಮುಗಿಯಿತು, ಈಗ ಬೇಕಿರೋದು ಟ್ರೇಡ್ ಸ್ಕಿಲ್ಸ್: ಮುಖ್ಯ ಆರ್ಥಿಕ ಸಲಹೆಗಾರ ಅನಂತ ನಾಗೇಶ್ವರನ್ ಸಲಹೆ – Kannada News | No MBA, future jobs will be of trade skills, says Chief Economic Advisor V Anantha Nageswaran

ವಿ. ಅನಂತ ನಾಗೇಶ್ವರನ್Image Credit source: PTI

ನವದೆಹಲಿ, ಜೂನ್ 16: ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾದ (CEA) ವಿ. ಅನಂತ ನಾಗೇಶ್ವರನ್ ಅವರು ದೇಶದ ಪ್ರಸ್ತುತ ಶಿಕ್ಷಣ ವ್ಯವಸ್ಥೆ ಮತ್ತು ಉದ್ಯೋಗ ಮಾರುಕಟ್ಟೆಯ ಕುರಿತು ಅತ್ಯಂತ ಕಟು ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ. “ಕೇವಲ ದೊಡ್ಡ ಪದವಿಗಳನ್ನು (Degrees) ಪಡೆಯುವುದರಿಂದ ಉದ್ಯೋಗ ಸಿಗುವುದಿಲ್ಲ. ಇಂದಿನ ಮಾರುಕಟ್ಟೆಗೆ ಬೇಕಿರುವುದು ಉದ್ಯೋಗದ ಕೌಶಲ್ಯಗಳು (Employability). ಯುವಜನರು ಕೇವಲ ಸರ್ಟಿಫಿಕೇಟ್‌ಗಳ ಹಿಂದೆ ಓಡುವ ಬದಲು ಪ್ರಾಯೋಗಿಕ ಕೌಶಲ್ಯ ಮತ್ತು ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು” ಎಂದು ಅವರು ಕರೆ ನೀಡಿದ್ದಾರೆ. ಎಎನ್​ಐ ಪಾಡ್​ಕ್ಯಾಸ್ಟ್​ನಲ್ಲಿ ಮಾತನಾಡುತ್ತಿದ್ದ ಅವರು, ಇಂದಿನ ವಿದ್ಯಾರ್ಥಿಗಳು ಪದವಿ ಮುಗಿಸಿ ಎಂಬಿಎ, ಯುಪಿಎಸ್​ಸಿ ಇತ್ಯಾದಿಯತ್ತ ಓಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪದವಿ ಮತ್ತು ಉದ್ಯೋಗದ ನಡುವಿನ ಅಂತರ

ಅನಂತ ನಾಗೇಶ್ವರನ್ ಅವರ ಪ್ರಕಾರ, ಭಾರತದಲ್ಲಿ ಪ್ರತಿವರ್ಷ ಲಕ್ಷಾಂತರ ಯುವಕರು ಪದವಿ ಮುಗಿಸಿ ಹೊರಬರುತ್ತಿದ್ದರೂ, ಕಂಪನಿಗಳಿಗೆ ಬೇಕಾದ ಕೌಶಲ್ಯಗಳು ಅವರಲ್ಲಿ ಇರುತ್ತಿಲ್ಲವಂತೆ (The Skill Gap). ಬರೀ ಶೈಕ್ಷಣಿಕ ಅಂಕಗಳು ಅಥವಾ ಪದವಿ ಪತ್ರಗಳು ಯುವಕರಿಗೆ ಕೆಲಸ ಗಿಟ್ಟಿಸಿಕೊಡಲಾರವು. ಉದ್ಯಮ ರಂಗಕ್ಕೆ ನೇರವಾಗಿ ಕೆಲಸಕ್ಕೆ ಬಳಸಿಕೊಳ್ಳಬಹುದಾದ (Trade Skills) ಹಾಗೂ ತಾಂತ್ರಿಕ ಜ್ಞಾನವಿರುವ ಉದ್ಯೋಗಿಗಳ ಅಗತ್ಯವಿದೆ. ಶಿಕ್ಷಣ ಸಂಸ್ಥೆಗಳು ಕೇವಲ ಥಿಯರಿ ಹೇಳಿಕೊಡದೆ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಬೇಕು ಎಂಬುದು ಅವರ ಸಲಹೆ.

ಇದನ್ನೂ ಓದಿ: ಭಾರತದಲ್ಲಿ ರಾತ್ರೋರಾತ್ರಿ ಮಣ್ಣುಪಾಲಾಯ್ತು 17 ವರ್ಷಗಳ ಶ್ರಮ: ಟರ್ಕಿ ಕಂಪನಿಯ ಅಳಲಿಗೆ ಏನು ಕಾರಣ? ತಪ್ಪು ಯಾರದು?

ದೈಹಿಕ ಮತ್ತು ಮಾನಸಿಕ ಆರೋಗ್ಯವೇ ಅಡಿಪಾಯ

ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಯುವ ಪೀಳಿಗೆಯ ಆರೋಗ್ಯ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಿಇಎ ಒತ್ತಿ ಹೇಳಿದ್ದಾರೆ. “ಒಬ್ಬ ವ್ಯಕ್ತಿಯ ಉತ್ಪಾದಕತೆ (Productivity) ಆತನ ಆರೋಗ್ಯದ ಮೇಲೆಯೇ ನಿರ್ಧರಿತವಾಗುತ್ತದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರುವ ಯುವ ಶಕ್ತಿಯಿಂದ ಮಾತ್ರ ದೇಶದ ಆರ್ಥಿಕತೆಗೆ ಕೊಡುಗೆ ನೀಡಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೆಚ್ಚುತ್ತಿರುವ ಜೀವನಶೈಲಿ ಕಾಯಿಲೆಗಳು ಮತ್ತು ಮಾನಸಿಕ ಒತ್ತಡಗಳು ಅವರ ವೃತ್ತಿಜೀವನದ ಬೆಳವಣಿಗೆಗೆ ಅಡ್ಡಿಯಾಗುತ್ತಿವೆ” ಎಂದಿದ್ದಾರೆ.

ಕರಕುಶಲ ಮತ್ತು ವೃತ್ತಿಪರ ಕೌಶಲ್ಯಗಳಿಗೆ ಆದ್ಯತೆ

ಕೇವಲ ಸಾಫ್ಟ್‌ವೇರ್ ಅಥವಾ ಕಾರ್ಪೊರೇಟ್ ಕೆಲಸಗಳಷ್ಟೇ ಅಲ್ಲದೆ, ವಿಭಿನ್ನ ವೃತ್ತಿಪರ ಕೌಶಲ್ಯಗಳನ್ನು (Vocational and Trade Skills) ಕಲಿಯುವುದಕ್ಕೆ ಯುವಕರು ಆದ್ಯತೆ ನೀಡಬೇಕು. ಕೊಳಾಯಿ ಕೆಲಸ (Plumbing), ಎಲೆಕ್ಟ್ರಿಷಿಯನ್, ಕಾರ್ಪೆಂಟಿಂಗ್, ಹೊಸ ಉತ್ಪಾದನಾ ತಂತ್ರಜ್ಞಾನಗಳು (Advanced Manufacturing) ಸೇರಿದಂತೆ ಪ್ರಾಯೋಗಿಕ ಕೆಲಸಗಳಿಗೆ ಜಾಗತಿಕವಾಗಿ ಭಾರಿ ಬೇಡಿಕೆ ಸೃಷ್ಟಿಯಾಗುತ್ತಿದೆ. ಇಂತಹ ಕ್ಷೇತ್ರಗಳಲ್ಲಿ ನೈಪುಣ್ಯತೆ ಸಾಧಿಸಿದರೆ ಉದ್ಯೋಗದ ಕೊರತೆ ಎದುರಾಗುವುದಿಲ್ಲ ಎಂದು ಭಾರತದ ಮುಖ್ಯ ಆರ್ಥಿಕ ಸಲಹೆಗಾರರಾದ ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಕೆಲವೇ ಎಐ ಮಾಡಲ್​ಗಳು ಇಡೀ ಉದ್ಯಮವನ್ನೇ ನುಂಗಿ ನೀರು ಕುಡಿಯಲು ಬಿಡಬಾರದು: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ

ಯುವಜನರಿಗೆ ಸಿಇಎ ಸಂದೇಶ

ಭಾರತವು ಸದ್ಯ ಜನಸಂಖ್ಯಾ ಬಲ (Demographic Dividend) ಹೊಂದಿರುವ ದೇಶವಾಗಿದೆ. ಇದರ ಪೂರ್ಣ ಲಾಭವನ್ನು ಭಾರತ ಪಡೆದುಕೊಳ್ಳಬೇಕಾದರೆ ಯುವಜನರು ತಮ್ಮ ಯೋಚನಾ ಲಹರಿಯನ್ನು ಬದಲಾಯಿಸಿಕೊಳ್ಳಬೇಕು. ಸರ್ಕಾರದ ನೀತಿಗಳು ಕೌಶಲ್ಯ ಅಭಿವೃದ್ಧಿಗೆ ಪೂರಕವಾಗಿದ್ದರೂ, ಸ್ವತಃ ವಿದ್ಯಾರ್ಥಿಗಳು ಮತ್ತು ಪೋಷಕರು ಕೇವಲ ‘ಪದವಿಗಳ ವ್ಯಾಮೋಹ’ದಿಂದ ಹೊರಬಂದು, ನೈಜ ಮಾರುಕಟ್ಟೆಯ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ವಿ ಅನಂತ ನಾಗೇಶ್ವರನ್ ಎಚ್ಚರಿಸಿದ್ದಾರೆ. ನೈಜ ಮಾರುಕಟ್ಟೆ ಕೌಶಲ್ಯಗಳೆಂದರೆ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮೊಬೈಲ್ ಅತಿಯಾಗಿ ಬಳಸಿದ್ರೆ ಮಣಿಕಟ್ಟು ನೋವು ಬರುತ್ತಾ? ಹಾಗಿದ್ರೆ ನೀವು ಈ ಸಿಂಡ್ರೋಮ್ ಬಗ್ಗೆ ತಿಳಿಯಲೇಬೇಕು – Kannada News | How Excessive Screen Time Is Damaging Your Wrist Health

ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಹಾಗೂ ಗೇಮಿಂಗ್ ಸಾಧನಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಇವುಗಳ ಅತಿಯಾದ ಬಳಕೆ ಮಣಿಕಟ್ಟಿನ (Wrist) ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು ಮತ್ತು ಮೊಬೈಲ್‌ ಹೆಚ್ಚು ಬಳಸುವವರಲ್ಲಿ ‘ಕಾರ್ಪಲ್ ಟನಲ್ ಸಿಂಡ್ರೋಮ್’ (CTS) ಸಮಸ್ಯೆ ಹೆಚ್ಚುತ್ತಿದೆ. ಹೆಸರು ಕೇಳಿದಾಗ ವಿಚಿತ್ರ ಎನಿಸಬಹುದು ಆದರೆ ಇದರ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಹಾಗಾದರೆ ಕಾರ್ಪಲ್ ಟನಲ್ ಸಿಂಡ್ರೋಮ್ ಎಂದರೇನು, ಲಕ್ಷಣಗಳು ಹೇಗಿರುತ್ತವೆ ಮತ್ತು ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕಾರ್ಪಲ್ ಟನಲ್ ಸಿಂಡ್ರೋಮ್ ಎಂದರೇನು?

ನಮ್ಮ ಮಣಿಕಟ್ಟಿನೊಳಗೆ ‘ಕಾರ್ಪಲ್ ಟನಲ್’ ಎಂಬ ಸಣ್ಣ ದಾರಿ ಇರುತ್ತದೆ. ಇದರ ಮೂಲಕ ‘ಮೀಡಿಯನ್ ನರ್ವ್’ ಎಂಬ ಪ್ರಮುಖ ನರ ಸಾಗುತ್ತದೆ. ಗಂಟೆಗಳ ಕಾಲ ಟೈಪಿಂಗ್ ಮಾಡುವುದು, ಫೋನ್ ಸ್ಕ್ರೋಲ್ ಮಾಡುವುದು ಅಥವಾ ಗೇಮಿಂಗ್ ನಲ್ಲಿ ಮುಳುಗಿರುವುದರಿಂದ ಮಣಿಕಟ್ಟಿನ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಇದರಿಂದ ನರ ಒತ್ತಡಕ್ಕೆ ಒಳಗಾಗಿ ಕಾರ್ಪಲ್ ಟನಲ್ ಸಿಂಡ್ರೋಮ್ (CTS) ಉಂಟಾಗುತ್ತದೆ. ಇದು ಮಣಿಕಟ್ಟು, ಕೈ ಮತ್ತು ಬೆರಳುಗಳಲ್ಲಿ ನೋವು, ಮರಗಟ್ಟುವಿಕೆ ಮತ್ತು ಜುಮ್ಮೆನಿಸುವಿಕೆಯನ್ನು ಉಂಟುಮಾಡುತ್ತದೆ.

ಮುಖ್ಯ ಲಕ್ಷಣಗಳು:

  • ಬೆರಳುಗಳಲ್ಲಿ ಸುಡುವ ಭಾವನೆ
  • ಮಣಿಕಟ್ಟಿನಲ್ಲಿ ನಿರಂತರ ನೋವು ಕಾಣಿಸಿಕೊಳ್ಳುವುದು
  • ವಸ್ತುಗಳನ್ನು ಗಟ್ಟಿಯಾಗಿ ಹಿಡಿಯಲು ಕಷ್ಟವಾಗುವುದು
  • ಕೈ ಬಲ ಕುಂಠಿತವಾಗುವುದು
  • ವಿಶೇಷವಾಗಿ ರಾತ್ರಿ ಸಮಯದಲ್ಲಿ ನೋವು ಹೆಚ್ಚಾಗುವುದು

ಈ ಲಕ್ಷಣಗಳನ್ನು ನಿರ್ಲಕ್ಷಿಸಿದರೆ ನರಗಳಿಗೆ ಶಾಶ್ವತ ಹಾನಿಯಾಗುವ ಅಪಾಯವಿದೆ. ಮಧುಮೇಹ, ಥೈರಾಯ್ಡ್ ಸಮಸ್ಯೆ ಅಥವಾ ಅತಿಯಾದ ತೂಕ ಇರುವವರಲ್ಲಿ ಈ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಊಟ ಮಾಡುವಾಗ ಫೋನ್ ಬಳಸುವ ಅಭ್ಯಾಸ ನಿಮಗಿದ್ಯಾ? ಇದರಿಂದ ಕರುಳಿನ ಆರೋಗ್ಯ ಹಾಳಾಗುತ್ತೆ ಹುಷಾರ್!

ಸಮಸ್ಯೆ ತಡೆಯಲು ಏನು ಮಾಡಬೇಕು?

ಪ್ರತಿ 45 ರಿಂದ 60 ನಿಮಿಷಕ್ಕೊಮ್ಮೆ ಕೆಲಸದಿಂದ ಸಣ್ಣ ವಿರಾಮ ತೆಗೆದುಕೊಳ್ಳಬೇಕು. ಟೈಪಿಂಗ್ ಮಾಡುವಾಗ ಮಣಿಕಟ್ಟನ್ನು ಸಹಜ ಸ್ಥಿತಿಯಲ್ಲಿ ಇರಿಸಬೇಕು. ಎರ್ಗೋನಾಮಿಕ್ ಕೀಬೋರ್ಡ್ ಮತ್ತು ಮೌಸ್ ಬಳಸುವುದು ಉತ್ತಮ. ಮಣಿಕಟ್ಟು ಹಾಗೂ ಬೆರಳಿನ ಸ್ಟ್ರೆಚಿಂಗ್ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡಬೇಕು. ಸಾಧ್ಯವಾದಷ್ಟು ವಾಯ್ಸ್ ಟೈಪಿಂಗ್ ಬಳಸುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಮಣಿಕಟ್ಟು ನೋವು ಅಥವಾ ಬೆರಳುಗಳಲ್ಲಿ ಜುಮ್ ಎನಿಸುವ ಸಮಸ್ಯೆ ಮುಂದುವರಿದರೆ ಅದನ್ನು ಸಾಮಾನ್ಯ ದಣಿವು ಎಂದು ನಿರ್ಲಕ್ಷ್ಯ ಮಾಡಬೇಡಿ. ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಸದ ರಾಶಿಯಲ್ಲಿ 59 ಜೀವಂತ ಗುಂಡುಗಳು ಪತ್ತೆ:ಪೊಲೀಸರೇ ಶಾಕ್, ಬೆಚ್ಚಿಬಿದ್ದ ಜನ – Kannada News | 59 Live Bullets Found In Garbage At Belagavi, Police investigation underway

ಬೆಳಗಾವಿ, (ಜೂನ್ 16): ಬೆಳಗಾವಿ (Belagavi) ನಗರದ ಉದ್ಯಮಬಾಗ ಕೈಗಾರಿಕಾ ಪ್ರದೇಶದಲ್ಲಿ ಬರೋಬ್ಬರಿ 59 ಜೀವಂತ ಗುಂಡುಗಳು (Live Bullets) ಪತ್ತೆಯಾಗಿವೆ. ಪೌರ ಕಾರ್ಮಿಕರು ಕಸ ವಿಂಗಡಣೆ ಮಾಡುವ ವೇಳೆಯಲ್ಲಿ ಗುಂಡುಗಳು ಪತ್ತೆಯಾಗಿದ್ದು, ಜನ ಬೆಚ್ಚಿಬಿದ್ದಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಬೆಳಗಾವಿಯ ಉದ್ಯಮಭಾಗ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದಾಗ ಗುಂಡುಗಳನ್ನು ಕಂಡು ಶಾಕ್ ಆಗಿದ್ದಾರೆ.ಇಷ್ಟು ಗುಂಡುಗಳು ಎಲ್ಲಿಂದ ಬಂದವು ಎಂದು ಒಂದು ಕ್ಷಣ ಪೊಲೀಸರಿಗೂ ಟೆನ್ಷನ್ ಆಗಿದೆ. ಸದ್ಯ ಗುಂಡುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ದಕ್ಷಿಣಕ್ಕೆ ಕಾಲಿಟ್ಟ ಬಾಲಿವುಡ್​​ನ ದೊಡ್ಡ ನಿರ್ಮಾಣ ಸಂಸ್ಥೆ – Kannada News | Dharma Productions entered south movie industry

ದಶಕಗಳಿಂದಲೂ ಹಿಂದಿ ಸಿನಿಮಾ (Cinema) ನಿರ್ಮಾಣದಲ್ಲಿ ತೊಡಗಿಕೊಂಡಿರುವ ದೊಡ್ಡ ನಿರ್ಮಾಣ ಸಂಸ್ಥೆ ಇದೇ ಮೊದಲ ಬಾರಿಗೆ ದಕ್ಷಿಣದ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ಕರಣ್ ಜೋಹರ್ ಅವರ ತಂದೆ ಸ್ಥಾಪಿಸಿದ್ದ ಧರ್ಮಾ ಪ್ರೊಡಕ್ಷನ್ಸ್ ಬಾಲಿವುಡ್​ನ ಬಲು ದೊಡ್ಡ ನಿರ್ಮಾಣ ಸಂಸ್ಥೆ, ನೂರಾರು ಹಿಂದಿ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಈ ನಿರ್ಮಾಣ ಸಂಸ್ಥೆ ಇದೇ ಮೊದಲ ಬಾರಿಗೆ ದಕ್ಷಿಣದ ಸಿನಿಮಾ ಮೇಲೆ ನೇರವಾಗಿ ಬಂಡವಾಳ ತೊಡಗಿಸಿದೆ. ಕಳೆದ ಕೆಲ ವರ್ಷಗಳಿಂದ ದಕ್ಷಿಣದ ಸಿನಿಮಾಗಳನ್ನು ಉತ್ತರ ಭಾರತದಲ್ಲಿ ವಿತರಣೆ ಮಾತ್ರ ಮಾಡುತ್ತಿದ್ದ ಧರ್ಮಾ, ಈಗ ನೇರವಾಗಿ ಚಿತ್ರ ನಿರ್ಮಾಣಕ್ಕೆ ಇಳಿದಿದೆ.

ಧರ್ಮ ಪ್ರೊಡಕ್ಷನ್ಸ್ ಇದೀಗ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದೆ. ಪೃಥ್ವಿರಾಜ್ ಸುಕುಮಾರನ್ ಮತ್ತು ಮಂಜು ವಾರಿಯರ್ ನಟಿಸುತ್ತಿರುವ ‘ಒಡಿಯನ್ – ದಿ ಏಜ್ ಆಫ್ ಇಲ್ಯೂಷನ್’ ಹೆಸರಿನ ಹಾರರ್ ಸಿನಿಮಾಕ್ಕೆ ಧರ್ಮಾ ಪ್ರೊಡಕ್ಷನ್ ಬಂಡವಾಳ ಹೂಡುತ್ತಿದೆ. 19ನೇ ಶತಮಾನದ ಜನಪದ ಹಾರರ್ ಥ್ರಿಲ್ಲರ್ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಬಾಲಿವುಡ್‌ನ ಅತ್ಯಂತ ಪ್ರಭಾವಶಾಲಿ ಬ್ಯಾನರ್‌ಗಳಲ್ಲಿ ಒಂದಾದ ಧರ್ಮ ಪ್ರೊಡಕ್ಷನ್ಸ್ ಮತ್ತು ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಪೃಥ್ವಿರಾಜ್ ಪ್ರೊಡಕ್ಷನ್ಸ್ ನಡುವಿನ ಈ ಸಹಯೋಗ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

‘ಭೂತಕಾಲಂ’ ಮತ್ತು ‘ಬ್ರಮಯುಗಂ’ನಂತಹ ಸೂಪರ್ ಹಿಟ್ ಮತ್ತು ವಿಮರ್ಶಕರಿಂದಲೂ ಸಾಕಷ್ಟು ಮೆಚ್ಚುಗೆ ಪಡೆದ ಹಾರರ್ ಚಿತ್ರಗಳನ್ನು ನಿರ್ದೇಶಿಸಿರುವ ರಾಹುಲ್ ಸದಾಶಿವನ್ ‘ಒಡಿಯನ್’ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಚಿತ್ರದ ಪೋಸ್ಟರ್ ಬಹಳ ನಿಗೂಢವಾಗಿದ್ದು, ಪುರಾತನ ಕನ್ನಡಿಯೊಂದರ ಒಳಗೆ ಅಸ್ಥಿಪಂಜರದಂತಹ ಆಕೃತಿ ಕಾಣುವ ದೃಶ್ಯ ಪೋಸ್ಟರ್​​ನಲ್ಲಿದೆ. ಈ ಚಿತ್ರವು ಮಾಟ-ಮಂತ್ರ, ರೂಪ ಬದಲಿಸುವ ಶಕ್ತಿ ಮತ್ತು ಪ್ರಾಚೀನ ಜಾನಪದ ಕಥೆಗಳನ್ನು ಆಧರಿಸಿದೆ.

ಇದನ್ನೂ ಓದಿ:ಚಿತ್ರರಂಗಕ್ಕೆ ಮರಳುತ್ತಿದ್ದಾರೆ ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್

ಕೇರಳದ ಸುಪ್ರಸಿದ್ಧ ‘ಒಡಿಯನ್’ ಜನಪದ ಕಥೆಗಳನ್ನು ಆಧರಿಸಿದ ಈ ಚಿತ್ರವು, ಕತ್ತಲಲ್ಲಿ ಪ್ರಾಣಿಗಳಾಗಿ ರೂಪಾಂತರಗೊಳ್ಳುವ ಮತ್ತು ಮಾಟ-ಮಂತ್ರಗಳನ್ನು ಬಲ್ಲವರೆಂದು ನಂಬಲಾದ ಭಯಾನಕ ವ್ಯಕ್ತಿಗಳ ಕಥೆಯನ್ನು ಹೇಳಲಿದೆ. ತನ್ನ ವಿಶಿಷ್ಟ ಶೈಲಿಯ ನಿರೂಪಣೆಗೆ ಹೆಸರಾದ ರಾಹುಲ್ ಸದಾಶಿವನ್, ಈ ದಂತಕಥೆಯನ್ನು ಹಾರರ್ ಮೂಲಕ ಮತ್ತಷ್ಟು ರೋಚಕವಾಗಿ ತೆರೆಮೇಲೆ ತರಲು ಸಿದ್ಧರಾಗಿದ್ದಾರೆ.

ಕರಣ್ ಜೋಹರ್, ಅದಾರ್ ಪೂನಾವಾಲಾ, ಅಪೂರ್ವ ಮೆಹ್ತಾ ಮತ್ತು ಸುಪ್ರಿಯಾ ಮೆನನ್ ಅವರುಗಳು ಧರ್ಮಾ ಪ್ರೊಡಕ್ಷನ್ಸ್ ಮೂಲಕ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಭಾರಿ ಬಜೆಟ್​​ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಈ ಚಿತ್ರವು ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪುಸ್ತಕ ತೆರೆದ ತಕ್ಷಣವೇ ನಿದ್ದೆ ಬರೋದೇಕೆ? ಅಧ್ಯಯನದ ವೇಳೆ ಬರುವ ಈ ಸೋಮಾರಿತನದ ಹಿಂದಿನ ಕಾರಣವೇನು? – Kannada News | Why do we feel sleepy when sit down to studying

ಅದೇನೋ  ಗೊತ್ತಿಲ್ಲ ನಿದ್ದೆ (Sleep) ಮಾಡ್ಬೇಕು ಅಂತ ಮಲಗಿದ್ರೆ ನಿದ್ದೆಯೇ  ಬರೋದಿಲ್ಲ, ಅದೇ  ಪುಸ್ತಕ ತೆರೆದು ಓದಲು ಕುಳಿತ ತಕ್ಷಣ ಹೆಚ್ಚಿನವರಿಗೆ ಆಕಳಿಕೆ, ನಿದ್ದೆ ಬಂದು ಬಿಡುತ್ತದೆ. ಅದರಲ್ಲೂ ಈ ಪರೀಕ್ಷೆ ಸಮಯದಲ್ಲಿ ಚೆನ್ನಾಗಿ ಓದಬೇಕು ಎಂದುಕೊಳ್ಳುವ ವಿದ್ಯಾರ್ಥಿಗಳು ಪುಸ್ತಕ ತೆರೆಯುತ್ತಿದ್ದಂತೆಯೇ ನಿದ್ರೆಗೆ ಜಾರಿ ಬಿಡುತ್ತಾರೆ. ಅಧ್ಯಯನದ ಸಮಯದಲ್ಲಿ ನಿದ್ದೆ ಬಂದಂತಹ ಅನುಭವ ನಿಮಗೂ ಆಗಿರುತ್ತಲ್ವಾ, ಅಷ್ಟಕ್ಕೂ ಓದುವ ವೇಳೆ ನಿದ್ದೆ ಬರೋದೇಕೆ, ಸೋಮಾರಿತನ ಆವರಿಸೋದೇಕೆ, ಅದರ ಹಿಂದಿನ ಕಾರಣವೇನು ಎಂಬುದನ್ನು ತಿಳಿದುಕೊಳ್ಳಿ.

ಓದುವಾಗ ನಿದ್ದೆ ಬರಲು ಕಾರಣವೇನು?

ಅಧ್ಯಯನ ಮಾಡುವಾಗ ನಮ್ಮ ಕಣ್ಣುಗಳು ನಿರಂತರವಾಗಿ ಒಂದೇ ಸ್ಥಳದಲ್ಲಿ ಕೇಂದ್ರೀಕೃತವಾಗಿರುತ್ತವೆ, ಇದು ಕಣ್ಣಿನ ಸ್ನಾಯುಗಳ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತದೆ ಮತ್ತು ಆಯಾಸಕ್ಕೆ ಕಾರಣವಾಗುತ್ತದೆ. ಇದಲ್ಲದೆ, ಮೆದುಳು ನಿರಂತರವಾಗಿ ಹೊಸ ಮಾಹಿತಿಯನ್ನು ಪ್ರಕ್ರಿಯೆಗೊಳಿಸಲು ಮತ್ತು ಸಂಗ್ರಹಿಸಲು ಪ್ರಯತ್ನಿಸುತ್ತಿರುತ್ತದೆ, ಇದು ಆಯಾಸಕ್ಕೆ ಕಾರಣವಾಗುತ್ತದೆ. ಆದ್ದರಿಂದ, ಓದಲು ಶುರು ಮಾಡಿದ ಸ್ವಲ್ಪ ಸಮಯದ ನಂತರ, ನಮಗೆ ನಿದ್ರೆ ಬರಲು ಪ್ರಾರಂಭಿಸುತ್ತದೆ ಮತ್ತು ಓದಿನ ಕಡೆ ಗಮನಹರಿಸಲು ಸಾಧ್ಯವಾಗುವುದಿಲ್ಲ.

ಅಧ್ಯಯನ ಮಾಡುವಾಗ ಕಣ್ಣುಗಳು ನಿರಂತರವಾಗಿ ಒಂದು ಹಂತದ ಮೇಲೆ ಕೇಂದ್ರೀಕರಿಸುತ್ತವೆ. ಇದು ಕಣ್ಣಿನ ಸ್ನಾಯುಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ ಮತ್ತು ಆಯಾಸಕ್ಕೆ ಕಾರಣವಾಗುತ್ತದೆ. ಕಣ್ಣುಗಳು ದಣಿದಾಗ, ಮೆದುಳಿಗೆ ವಿಶ್ರಾಂತಿಯೂ ಬೇಕಾಗುತ್ತದೆ. ಇದು ಅಧ್ಯಯನ ಮಾಡುವಾಗ ನಿದ್ರೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅಲ್ಲದೆ, ಅಧ್ಯಯನ ಮಾಡುವಾಗ, ಮೆದುಳು ಹೊಸ ಮಾಹಿತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ನೆನಪಿಟ್ಟುಕೊಳ್ಳಲು ಕೆಲಸ ಮಾಡುತ್ತದೆ. ಈ ಪ್ರಕ್ರಿಯೆಯು ಶಕ್ತಿಯನ್ನು ಬಳಸುತ್ತದೆ. ದೀರ್ಘಕಾಲದವರೆಗೆ ನಿರಂತರ ಅಧ್ಯಯನವು ಮೆದುಳನ್ನು ಆಯಾಸಗೊಳಿಸುತ್ತದೆ ಮತ್ತು ದೇಹವು ನಿದ್ರೆಗೆ ಸಂಕೇತ ನೀಡಲು ಪ್ರಾರಂಭಿಸುತ್ತದೆ. ಅಧ್ಯಯನ ಮಾಡಲು ಪ್ರಾರಂಭಿಸಿದಾಗ, ಮೆದುಳು ಹೆಚ್ಚು ಯೋಚಿಸಬೇಕು ಮತ್ತು ಗಮನಹರಿಸಬೇಕು. ಇದು ಮೆದುಳಿನ ಮೇಲಿನ ಒತ್ತಡವು ಇನ್ನಷ್ಟು ಹೆಚ್ಚಾಗುತ್ತದೆ.

ಅಂತಹ ಪರಿಸ್ಥಿತಿಯಲ್ಲಿ, ಮೆದುಳು ದೇಹಕ್ಕೆ ವಿಶ್ರಾಂತಿ ನೀಡುವಂತೆ ಸಂಕೇತ ನೀಡುತ್ತದೆ. ಕೆಲವೊಮ್ಮೆ ಈ ಸಂಕೇತವು ನಿದ್ರೆಯ ರೂಪದಲ್ಲಿ ಪ್ರಕಟವಾಗುತ್ತದೆ, ಇದರಿಂದಾಗಿ  ಅಧ್ಯಯನ ಮಾಡುವಾಗ ಇದ್ದಕ್ಕಿದ್ದಂತೆ ನಿದ್ರೆಗೆ ಜಾರುವುದು. ಅದರಲ್ಲೂ ಶಾಂತ ವಾತಾವರಣದಲ್ಲಿ ಅಧ್ಯಯನ ಮಾಡುವುದರಿಂದ ದೇಹಕ್ಕೆ ವಿಶ್ರಾಂತಿ ಪಡೆಯಲು ಅವಕಾಶ ಸಿಗುತ್ತದೆ. ಇದರಿಂದ ನಿದ್ರೆ ಬೇಗನೆ ಬರುತ್ತದೆ.

ಇದನ್ನೂ ಓದಿ: ವಿಶ್ವದ ಅತ್ಯಂತ ಬಡ ರಾಷ್ಟ್ರ ಯಾವುದು ಗೊತ್ತಾ? ದೇಶದ ಸ್ಥಿತಿಯನ್ನು ತಿಳಿದರೆ ನೀವು ಆಘಾತಕ್ಕೊಳಗಾಗುತ್ತೀರಿ

ವಿಶ್ರಾಂತಿ ಭಂಗಿ ಮತ್ತು ನಿದ್ರೆಯ ನಡುವಿನ ಸಂಬಂಧ:

ಅಧ್ಯಯನ ಮಾಡುವಾಗ ನಾವು ನಿದ್ರಿಸಲು ಒಂದು ಮುಖ್ಯ ಕಾರಣವೆಂದರೆ ನಮ್ಮ ದೇಹದ ವಿಶ್ರಾಂತಿ ಸ್ಥಿತಿ. ನಾವು ಅಧ್ಯಯನ ಮಾಡುವಾಗ, ನಮ್ಮ ದೇಹದ ಹೆಚ್ಚಿನ ಭಾಗವು ವಿಶ್ರಾಂತಿಯಲ್ಲಿರುತ್ತದೆ, ನಮ್ಮ ಕಣ್ಣುಗಳು ಮತ್ತು ಮೆದುಳು ಮಾತ್ರ ಸಕ್ರಿಯವಾಗಿರುತ್ತದೆ. ಈ ಸ್ಥಿತಿಯಲ್ಲಿ, ನಮ್ಮ ದೇಹವು ವಿಶ್ರಾಂತಿ ಪಡೆಯಲು ಸಂಕೇತಗಳನ್ನು ಕಳುಹಿಸುತ್ತದೆ, ಇದರಿಂದಾಗಿ ನಮ್ಮ ಸ್ನಾಯುಗಳು ವಿಶ್ರಾಂತಿ ಪಡೆಯುತ್ತವೆ ಮತ್ತು ನಾವು ನಿದ್ರಿಸಲು ಪ್ರಾರಂಭಿಸುತ್ತೇವೆ. ನಮ್ಮ ದೇಹವು ವಿಶ್ರಾಂತಿ ಪಡೆದಾಗ, ಅವು ಸ್ವಾಭಾವಿಕವಾಗಿ ನಿದ್ರೆಗೆ ಜಾರಿಕೊಳ್ಳುತ್ತವೆ.

ಅಧ್ಯಯನ ಮಾಡುವಾಗ ನಿದ್ರೆ ಬಾರದಂತೆ ಮಾಡಲು ಏನು ಮಾಡಬೇಕು?

ಉತ್ತಮ ಬೆಳಕಿನಲ್ಲಿ ಅಧ್ಯಯನ ಮಾಡಿ: ಮಂದ ಬೆಳಕಿನಲ್ಲಿ ಅಧ್ಯಯನ ಮಾಡುವುದರಿಂದ ಕಣ್ಣಿನ ಒತ್ತಡ ಹೆಚ್ಚಾಗುತ್ತದೆ ಮತ್ತು ನಿದ್ರಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ, ಯಾವಾಗಲೂ ಸಾಕಷ್ಟು ಬೆಳಕಿರುವ ಸ್ಥಳದಲ್ಲಿ ಅಧ್ಯಯನ ಮಾಡಿ.

ತೆರೆದ ಸ್ಥಳದಲ್ಲಿ ಅಧ್ಯಯನ ಮಾಡಿ: ಸಾಕಷ್ಟು ತಾಜಾ ಗಾಳಿ ಮತ್ತು ಸಾಕಷ್ಟು ಬೆಳಕು ಇರುವ ಸ್ಥಳವನ್ನು ಆರಿಸಿ. ಇದು ನಿಮ್ಮ ಮನಸ್ಸು ಮತ್ತು ದೇಹ ಎರಡನ್ನೂ ಉಲ್ಲಾಸಗೊಳಿಸುತ್ತದೆ.

ವಿರಾಮ ತೆಗೆದುಕೊಳ್ಳಿ: ಗಂಟೆಗಟ್ಟಲೆ ಸತತವಾಗಿ ಅಧ್ಯಯನ ಮಾಡುವುದರಿಂದ ಆಯಾಸ ಉಂಟಾಗುತ್ತದೆ ಮತ್ತು ನಿದ್ರೆ ಬರುತ್ತದೆ. ಆದ್ದರಿಂದ, ಪ್ರತಿ 30-45 ನಿಮಿಷಗಳಿಗೊಮ್ಮೆ ಕೆಲವು ನಿಮಿಷಗಳ ವಿರಾಮ ತೆಗೆದುಕೊಳ್ಳಿ.

ಆರೋಗ್ಯಕರ ಆಹಾರ: ಅಧ್ಯಯನದ ಸಂದರ್ಭದಲ್ಲಿ ಭಾರವಾದ ಆಹಾರ ಸೇವನೆಯನ್ನು ತಪ್ಪಿಸಿ. ಸಮತೋಲಿತ ಆಹಾರವನ್ನು ಸೇವಿಸಿ. ಇದು ನಿಮ್ಮ ಮನಸ್ಸು ಮತ್ತು ದೇಹವು ಆರೋಗ್ಯವಾಗಿರುತ್ತದೆ ಮತ್ತು ನೀವು ನಿಮ್ಮ ಅಧ್ಯಯನದ ಮೇಲೆ ಹೆಚ್ಚು ಗಮನಹರಿಸಲು ಸಾಧ್ಯವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಮ್ಮು ಕಾಶ್ಮೀರದ ಎಲ್​ಒಸಿ ಬಳಿ ಆಕಸ್ಮಿಕ ಗ್ರೆನೇಡ್ ಸ್ಫೋಟ; ನಾಲ್ವರು ಭಾರತೀಯ ಯೋಧರಿಗೆ ಗಾಯ – Kannada News | 4 Soldiers Injured In Blast Near LoC in Jammu and Kashmir Rajouri

ಶ್ರೀನಗರ, ಜೂನ್ 16: ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ (LoC) ಮುಂಚೂಣಿ ಪ್ರದೇಶದಲ್ಲಿ ಆಕಸ್ಮಿಕವಾಗಿ ಗ್ರೆನೇಡ್ ಸ್ಫೋಟಗೊಂಡು ಭಾರತೀಯ ಸೇನೆಯ ನಾಲ್ವರು ಸೈನಿಕರು ಗಾಯಗೊಂಡಿರುವ ಘಟನೆ ನಡೆದಿದೆ. ರಕ್ಷಣಾ ಇಲಾಖೆಯ ಪ್ರಕಟಣೆಯ ಪ್ರಕಾರ, ಯೋಧರು ಗಡಿ ಭಾಗದಲ್ಲಿ ನಿಯಮಿತ ಗಸ್ತು ಕಾರ್ಯದಲ್ಲಿ ತೊಡಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನ ಗಡಿ ಭಾಗದಲ್ಲಿ ಯೋಧರ ತಂಡವೊಂದು ಕರ್ತವ್ಯದಲ್ಲಿದ್ದಾಗ, ಅವರ ಬಳಿಯಿದ್ದ ಗ್ರೆನೇಡ್‌ವೊಂದು ಆಕಸ್ಮಿಕವಾಗಿ ಸ್ಫೋಟಗೊಂಡಿದೆ. ಈ ಸ್ಫೋಟದ ತೀವ್ರತೆಗೆ ಸ್ಥಳದಲ್ಲಿದ್ದ ನಾಲ್ವರು ಸೈನಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಓರ್ವ ಉನ್ನತ ಶ್ರೇಣಿಯ ಅಧಿಕಾರಿ ಅಂದರೆ ಜೂನಿಯರ್ ಕಮಿಷನ್ಡ್ ಆಫೀಸರ್ (JCO) ಕೂಡ ಸೇರಿದ್ದಾರೆ.

ಇದನ್ನೂ ಓದಿ: ವೀರ ಯೋಧರಿಗೆ ರಾಷ್ಟ್ರಪತಿಯಿಂದ ಕೀರ್ತಿ ಚಕ್ರ, ವೀರ ಚಕ್ರ, ಶೌರ್ಯ ಚಕ್ರ ಪ್ರಶಸ್ತಿ ಪ್ರದಾನ

ಸ್ಫೋಟದ ಸದ್ದು ಕೇಳಿಸುತ್ತಿದ್ದಂತೆ ಹತ್ತಿರದ ಪೋಸ್ಟ್‌ಗಳಲ್ಲಿದ್ದ ಇತರೆ ಸೈನಿಕರು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಾಳು ಸೈನಿಕರಿಗೆ ಮೊದಲು ಸ್ಥಳೀಯ ಸೇನಾ ವೈದ್ಯಕೀಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಇದಾದ ನಂತರ ಗಾಯಗಳ ತೀವ್ರತೆಯನ್ನು ಪರಿಗಣಿಸಿ, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಾಯುಪಡೆಯ ವಿಶೇಷ ಹೆಲಿಕಾಪ್ಟರ್ ಮೂಲಕ ಉಧಂಪುರದಲ್ಲಿರುವ ಸೇನೆಯ ಪ್ರಮುಖ ಕಮಾಂಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ನಾಲ್ಕೂ ಜನ ಯೋಧರು ವೈದ್ಯರ ನಿಗಾದಲ್ಲಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸೇನಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಗಡಿ ನಿಯಂತ್ರಣ ರೇಖೆಯಂತಹ ಸೂಕ್ಷ್ಮ ಪ್ರದೇಶದಲ್ಲಿ ಗ್ರೆನೇಡ್ ಸ್ಫೋಟಗೊಂಡಿರುವುದರಿಂದ ಸೇನೆಯು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಇದು ತಾಂತ್ರಿಕ ದೋಷದಿಂದ ಸಂಭವಿಸಿದೆಯೇ ಅಥವಾ ಗ್ರೆನೇಡ್ ನಿರ್ವಹಣೆಯ ವೇಳೆ ಆದ ಆಕಸ್ಮಿಕ ತಪ್ಪೇ ಎಂಬುದನ್ನು ಪತ್ತೆಹಚ್ಚಲು ಉನ್ನತ ಮಟ್ಟದ ಆಂತರಿಕ ತನಿಖೆಗೆ ಆದೇಶಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಗಡಿ ಭಾಗದಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದ್ದು, ಈ ಘಟನೆಯ ನಂತರ ಮುಂಚೂಣಿ ಪೋಸ್ಟ್‌ಗಳಲ್ಲಿ ಮತ್ತಷ್ಟು ಜಾಗರೂಕತೆ ವಹಿಸಲು ಸೂಚಿಸಲಾಗಿದೆ.

ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರ: ಉಗ್ರ ವಿರೋಧಿ ಕಾರ್ಯಾಚರಣೆ ವೇಳೆ ಕಂದಕಕ್ಕೆ ಬಿದ್ದು ಯೋಧ ಹುತಾತ್ಮ

ಕಳೆದ 10 ದಿನಗಳಲ್ಲಿ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ನಡೆದಿರುವ ಮೂರನೇ ಸ್ಫೋಟದ ಘಟನೆ ಇದಾಗಿದೆ. ಈ ಮೂರೂ ಘಟನೆಗಳಲ್ಲಿ ಒಟ್ಟು ಇಬ್ಬರು ಯೋಧರು ಹುತಾತ್ಮರಾಗಿದ್ದು, ಆರು ಸೈನಿಕರು ಗಾಯಗೊಂಡಿದ್ದಾರೆ. ಒಂದೆಡೆ ಗಡಿ ಭಾಗದಲ್ಲಿ ಆಕಸ್ಮಿಕ ಸ್ಫೋಟಗಳು ಆತಂಕ ಸೃಷ್ಟಿಸುತ್ತಿದ್ದರೆ, ಮತ್ತೊಂದೆಡೆ ರಾಜೌರಿ ಜಿಲ್ಲೆಯಲ್ಲಿ ಅಡಗಿರುವ ಉಗ್ರರ ಗುಂಪನ್ನು ಪತ್ತೆಹಚ್ಚಲು ಭಾರತೀಯ ಸೇನೆಯು ಕಳೆದ 3 ವಾರಗಳಿಂದ ಬೃಹತ್ ಕಾರ್ಯಾಚರಣೆಯನ್ನು ನಡೆಸುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

80ನೇ ವಯಸ್ಸಿನಲ್ಲಿ 161 ಕಿ.ಮೀ ಪ್ರಯಾಣ ಮಾಡಿ ವೈಭವ್​ನನ್ನು ಭೇಟಿಯಾದ ದಿಗ್ಗಜ ಕ್ರಿಕೆಟಿಗ – Kannada News | 15 Year Old Vaibhav Sooryavanshi’s Viral Moment with Sri Lankan Legend Anura Tennekoon

ಭಾರತ ಎ ತಂಡ ತ್ರಿಕೋನ ಏಕದಿನ ಸರಣಿಗಾಗಿ ಶ್ರೀಲಂಕಾ ಪ್ರವಾಸ ಮಾಡಿದೆ. ಈ ಪ್ರವಾಸಕ್ಕೆ ಭಾರತ ಎ (India A) ತಂಡದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) ಅವರನ್ನು ಸಹ ಆಯ್ಕೆ ಮಾಡಲಾಗಿದೆ. ಇದುವರೆಗೆ ಈ ಪ್ರವಾಸದಲ್ಲಿ ವೈಭವ್ ಅವರ ಬ್ಯಾಟಿಂಗ್‌ ಹೆಚ್ಚು ಪರಿಣಾಮಕಾರಿಯಾಗಿರದಿದ್ದರೂ ಅವರ ಆಟವನ್ನು ನೋಡಲು ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳ ಬಳಗ ಹೆಚ್ಚಾಗಿದೆ. ವೈಭವ್​ಗೆ ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ಈ ಅಭಿಮಾನಿಗಳ ಬಳಗದಲ್ಲಿ ಮಾಜಿ ಕ್ರಿಕೆಟಿಗರು, ದಿಗ್ಗಜ ಕ್ರಿಕೆಟಿಗರು ಸೇರಿದ್ದಾರೆ. ಅದರಂತೆ ಶ್ರೀಲಂಕಾದ ಮಾಜಿ ದಿಗ್ಜಜ ನಾಯಕ ಅನುರ ತೆನ್ನೆಕುನ್, ವೈಭವ್ ಸೂರ್ಯವಂಶಿಯನ್ನು ಭೇಟಿಯಾಗಲು ಕ್ರೀಡಾಂಗಣಕ್ಕೆ ಬಂದಿದ್ದು, ಇವರಿಬ್ಬರ ಸಮಾಗಮದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಲಂಕಾದ ದಿಗ್ಗಜ ಕ್ರಿಕೆಟಿಗನನ್ನು ಭೇಟಿಯಾದ ವೈಭವ್

ವಾಸ್ತವವಾಗಿ ಜೂನ್ 15 ರಂದು ಡಂಬುಲ್ಲಾದಲ್ಲಿ ಭಾರತ ಎ ಹಾಗೂ ಶ್ರೀಲಂಕಾ ಎ ತಂಡಗಳ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಭಾರತ ಸೋತಿತು. ಇದೇ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ, ಶ್ರೀಲಂಕಾ ಎ ತಂಡದ ಆಟಗಾರರ ಜೊತೆಗೆ ಮೈದಾನದಲ್ಲಿ ಜಗಳ ಮಾಡಿಕೊಂಡ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಜೊತೆಗೆ ಇನ್ನೊಂದು ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆ ವಿಡಿಯೋದಲ್ಲಿ ವೈಭವ್ ಸೂರ್ಯವಂಶಿ, ಶ್ರೀಲಂಕಾ ಏಕದಿನ ಕ್ರಿಕೆಟ್ ತಂಡದ ಮೊದಲ ನಾಯಕ ಅನುರ ತೆನ್ನೆಕುನ್ ಅವರನ್ನು ಭೇಟಿಯಾಗಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಅವರ ಕಾಲು ಮುಟ್ಟಿ ಆರ್ಶೀವಾದ ಪಡೆದಿರುವುದನ್ನು ಕಾಣಬಹುದಾಗಿದೆ.

ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, 80 ವರ್ಷ ವಯಸ್ಸಿನ ಅನುರ ತೆನ್ನೆಕುನ್ ಅವರು ವೈಭವ್ ಸೂರ್ಯವಂಶಿಯನ್ನು ಭೇಟಿಯಾಗಲು ಕೊಲಂಬೊದಿಂದ ಡಂಬುಲ್ಲಾಗೆ 161 ಕಿಲೋಮೀಟರ್ ಪ್ರಯಾಣಿಸಿದ್ದಾರೆ ಎಂಬುದು. ಪಂದ್ಯದ ನಂತರ ವೈಭವ್ ಡ್ರೆಸ್ಸಿಂಗ್ ಕೋಣೆಯಿಂದ ಹೊರಬಂದು, ಅನುರ ತೆನ್ನೆಕುನ್ ಅವರನ್ನು ಭೇಟಿ ಮಾಡಿದ್ದಾರೆ. ಅನುರ ಅವರೊಂದಿಗೆ ಕೆಲ ಸಮಯ ಮಾತನಾಡಿದ ವೈಭವ್, ಆ ಬಳಿಕ ಅವರ ಪಾದಗಳನ್ನು ಮುಟ್ಟಿ ಆರ್ಶೀವಾದ ಪಡೆದಿದ್ದಾರೆ.

ನಾನು ತುಂಬಾ ಪ್ರಭಾವಿತನಾಗಿದ್ದೆ

ಇದೇ ವೇಳೆ ವೈಭವ್​ಗೆ ಕಿವಿ ಮಾತು ಹೇಳಿದ ಅನುರ ತೆನ್ನೆಕೂನ್, ನಿನ್ನ ಆಟದ ಮೇಲೆ ಗಮನಹರಿಸು ಮತ್ತು ಹೊರಗಿನ ಅಂಶಗಳನ್ನು ನಿರ್ಲಕ್ಷಿಸು. ದುರದೃಷ್ಟವಶಾತ್, ಇಂದಿನ ಪಂದ್ಯದಲ್ಲಿ ನೀವು ನಿಮ್ಮ ಲಯವನ್ನು ಕಂಡುಕೊಳ್ಳಲಾಗಲಿಲ್ಲ. ಆದರೆ ಇದು ಆಟದ ಭಾಗವಾಗಿದ್ದು, ಪ್ರತಿದಿನ ಲಯದಲ್ಲಿರಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನು ಕೇಳಿದ ವೈಭವ್ ಸೂರ್ಯವಂಶಿ ಮೌನವಾಗಿ ತಲೆಯಾಡಿಸಿದ್ದಾರೆ. ಆ ಬಳಿಕ ಮಾತನಾಡಿರುವ ಅನುರ, ‘ಐಪಿಎಲ್‌ನಲ್ಲಿ ವೈಭವ್ ಅವರ ಬ್ಯಾಟಿಂಗ್‌ ನೋಡಿ ನಾನು ತುಂಬಾ ಪ್ರಭಾವಿತನಾಗಿದ್ದೆ. ಅವರು ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸುವ ರೀತಿ ನಿಜಕ್ಕೂ ಅದ್ಭುತವಾಗಿದೆ. ಅವರು ಇದೇ ರೀತಿ ಆಡುವುದನ್ನು ಮುಂದುವರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ.

ವೈಭವ್ ಮಾತ್ರ ಅಲ್ಲ, ನಮ್ ಹುಡುಗ್ರು ಆಡ್ತಾರೆ; ಯೂನಿವರ್ಸಲ್ ಬೇಬಿ ಬಾಸ್ ಬಗ್ಗೆ ದ್ರಾವಿಡ್ ಮಾತು

ಪಂದ್ಯ ಹೀಗಿತ್ತು

ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ.. ಜೂನ್ 15 ರಂದು ಶ್ರೀಲಂಕಾ ಎ ವಿರುದ್ಧ ನಡೆದ ಈ ಪಂದ್ಯದಲ್ಲಿ, ವೈಭವ್ ಸೂರ್ಯವಂಶಿ 14 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಮೂರು ಬೌಂಡರಿಗಳೊಂದಿಗೆ 21 ರನ್ ಗಳಿಸಿ ಔಟಾದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ 265 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಶ್ರೀಲಂಕಾ ಎ ಕೂಡ 50 ಓವರ್‌ಗಳಲ್ಲಿ 265 ರನ್ ಗಳಿಸಿತು. ಹೀಗಾಗಿ ಪಂದ್ಯ ಟೈನಲ್ಲಿ ಕೊನೆಗೊಂಡ ನಂತರ, ಸೂಪರ್ ಓವರ್ ಆಡಲಾಯಿತು, ಅದರಲ್ಲಿ ಭಾರತ ಎ ತಂಡ ಸೋತಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:48 pm, Tue, 16 June 26

Source link