Category Archives: Blog

Your blog category

ಈ 3 ಟೆಸ್ಟ್‌ ಮಾಡಿಸಿ ನಿಮ್ಮ ಹೃದಯ ಆರೋಗ್ಯವಾಗಿದೆಯೋ, ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ – Kannada News | Best Heart Health Tests To Detect Heart Problems Early

Best Heart Health Tests To Detect Heart Problems EarlyImage Credit source: Getty Images

ಇಂದಿನ ವೇಗದ ಜೀವನಶೈಲಿ, ಅಸ್ವಸ್ಥ ಆಹಾರ ಪದ್ಧತಿ, ಒತ್ತಡ ಮತ್ತು ವ್ಯಾಯಾಮದ ಕೊರತೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿವೆ. ಹಿಂದೆ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಈ ಹೃದಯ ಸಮಸ್ಯೆಗಳು ಈಗ ಯುವಕರಲ್ಲೂ ಸಾಮಾನ್ಯವಾಗುತ್ತಿವೆ. ಹಾಗಾಗಿ ನಮ್ಮ ಹೃದಯದ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಲು ಮತ್ತು ಹೃದಯಾಘಾತದಂತಹ (Heart Attack) ಅಪಾಯವನ್ನು ಮುಂಚಿತವಾಗಿ ತಿಳಿದುಕೊಳ್ಳಲು ಕೆಲವು ಪ್ರಮುಖ ಪರೀಕ್ಷೆಗಳು ಬಹಳ ಸಹಾಯಕವಾಗಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಆ ಟೆಸ್ಟ್‌ಗಳು ಯಾವುದು, ಯಾವ ಸಮಯಕ್ಕೆ ಮಾಡಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೃದಯ ಸಂಬಂಧಿ ಕಾಯಿಲೆಗೆ ಮುಖ್ಯ ಕಾರಣವೇನು?

ಸಾಮಾನ್ಯವಾಗಿ ಹೃದಯ ಸಂಬಂಧಿ ಕಾಯಿಲೆಗಳು ಕಂಡುಬರುವುದಕ್ಕೆ ಪ್ರಮುಖ ಕಾರಣ ಧಮನಿಗಳಲ್ಲಿ ಕೊಬ್ಬು ಜಮೆಯಾಗುವುದು. ಇದನ್ನು ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ಸ್ ಎಂದು ಕರೆಯಲಾಗುತ್ತದೆ. ಈ ಕೊಬ್ಬು ಧಮನಿಗಳಲ್ಲಿ ನಿಧಾನವಾಗಿ ಸೇರಿ ರಕ್ತಪ್ರವಾಹವನ್ನು ತಡೆದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.

ಲಿಪಿಡ್ ಪ್ರೊಫೈಲ್ ಟೆಸ್ಟ್

ಇದು ಸಾಮಾನ್ಯ ರಕ್ತ ಪರೀಕ್ಷೆಯಾಗಿದ್ದು, ದೇಹದಲ್ಲಿರುವ ಒಟ್ಟು ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್ಸ್, ಕೆಟ್ಟ ಕೊಬ್ಬು ( LDL ) ಮತ್ತು ಒಳ್ಳೆಯ ಕೊಬ್ಬು (HDL) ಮಟ್ಟವನ್ನು ತಿಳಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟ ಹೆಚ್ಚು ಇದ್ದರೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ. ನಿಯಮಿತವಾಗಿ ಈ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಅಪಾಯವನ್ನು ಮುಂಚಿತವಾಗಿ ಪತ್ತೆಹಚ್ಚಬಹುದು.

ಸಿಟಿ ಕೊರೊನರಿ ಆಂಜಿಯೋಗ್ರಫಿ

ಈ ಪರೀಕ್ಷೆಯ ಮೂಲಕ ಹೃದಯದ ಧಮನಿಗಳಲ್ಲಿ ಎಷ್ಟು ಪ್ರಮಾಣದಲ್ಲಿ ಬ್ಲಾಕೇಜ್ ಇದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಇದರಲ್ಲಿ ಶಸ್ತ್ರಚಿಕಿತ್ಸೆ ಅಥವಾ ದೊಡ್ಡ ನೋವು ಇರುವುದಿಲ್ಲ. ಕೆಲವೇ ನಿಮಿಷಗಳಲ್ಲಿ ವರದಿ ಸಿಗುತ್ತದೆ. ಹೃದಯದ ಸ್ಥಿತಿಯನ್ನು ನಿಖರವಾಗಿ ಅರ್ಥಮಾಡಿಕೊಳ್ಳಲು ಇದು ಅತ್ಯಂತ ವಿಶ್ವಾಸಾರ್ಹ ಪರೀಕ್ಷೆ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಪದೇಪದೇ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಹೃದಯದ ಆರೋಗ್ಯ ಸರಿಯಾಗಿದ್ಯಾ ಪರೀಕ್ಷೆ ಮಾಡಿಸಿಕೊಳ್ಳಿ

ಇಕೋಕಾರ್ಡಿಯೋಗ್ರಫಿ

ಈ ಪರೀಕ್ಷೆ ಹೃದಯದ ರಚನೆ ಮತ್ತು ಅದರ ಪಂಪಿಂಗ್ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ. ಹೃದಯದ ವಾಲ್ವ್‌ಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ, ಹೃದಯ ದುರ್ಬಲವಾಗಿದೆಯೇ ಎಂಬುದನ್ನು ಇದರಿಂದ ತಿಳಿಯಬಹುದು. ಕೆಲವೊಮ್ಮೆ ಬ್ಲಾಕೇಜ್ ಇಲ್ಲದಿದ್ದರೂ ಹೃದಯ ದುರ್ಬಲವಾಗಿರಬಹುದು. ಅಂತಹ ಸಮಸ್ಯೆಗಳನ್ನು ಪತ್ತೆಹಚ್ಚಲು ಇಕೋ ಟೆಸ್ಟ್ ಉಪಯುಕ್ತ.

ಯಾವಾಗ ಪರೀಕ್ಷೆ ಮಾಡಿಸಿಕೊಳ್ಳಬೇಕು?

ಕುಟುಂಬದಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಇತಿಹಾಸ ಇದ್ದರೆ, ಹೈ ಬಿಪಿ, ಮಧುಮೇಹ, ಧೂಮಪಾನ ಅಥವಾ ಅಧಿಕ ತೂಕ ಇದ್ದರೆ ನಿಯಮಿತ ಹೃದಯ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ. ಆರಂಭದಲ್ಲೇ ಸಮಸ್ಯೆ ಪತ್ತೆಯಾದರೆ ಜೀವನಶೈಲಿ ಬದಲಾವಣೆ ಮತ್ತು ಸರಿಯಾದ ಚಿಕಿತ್ಸೆಯಿಂದ ದೊಡ್ಡ ಅಪಾಯವನ್ನು ತಪ್ಪಿಸಬಹುದು. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಮತ್ತು ಸಮಯಕ್ಕೆ ಸರಿಯಾದ ಪರೀಕ್ಷೆಗಳು ನಿಮ್ಮ ಹೃದಯವನ್ನು ದೀರ್ಘಕಾಲ ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಶ್ಲಾಘಿಸಿದ ವಿದೇಶಿ ಮಹಿಳೆ – Kannada News | Foreign woman praises digital payment system,

ನಾವಿಂದು ಡಿಜಿಟಲ್ ಯುಗದಲ್ಲಿದ್ದೇವೆ.  ಹೀಗಾಗಿ ನಗದು ವ್ಯವಹಾರ ಮಾಡುವುದಕ್ಕಿಂತ ಡಿಜಿಟಲ್ ಪಾವತಿಗಳೇ (online transaction) ಹೆಚ್ಚಾಗಿದೆ. ಸಣ್ಣ ಪುಟ್ಟ ಅಂಗಡಿಗಳಿಂದ ಹಿಡಿದು ದೊಡ್ಡ ದೊಡ್ಡ ಅಂಗಡಿಗಳಲ್ಲಿಯೂ ಸ್ಕ್ಯಾನರ್ ಗಳೇ ತುಂಬಿ ಹೋಗಿವೆ. ಇದೀಗ ವಿದೇಶಿ ಮಹಿಳೆಯೊಬ್ಬರು ಭಾರತದಲ್ಲಿ ಪ್ರಯಾಣದ ಸಮಯದಲ್ಲಿ ನಗದು ಹಣವನ್ನು ಅವಲಂಬಿಸದೆ ಎಷ್ಟು ಸುಲಭವಾಗಿ ಪಾವತಿಗಳನ್ನು ಮಾಡಬಹುದೆಂದು ಅಚ್ಚರಿ ಪಟ್ಟುಕೊಂಡಿದ್ದಾರೆ. ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಶ್ಲಾಘಿಸಿದ್ದಾರೆ. ಡಿಜಿಟಲ್ ಪಾವತಿ ಮಾಡುವ ಕುರಿತಾದ ತನ್ನ ಅನುಭವದ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜೂಲಿಜಾ (voye.travels) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಭಾರತದ ಪಾವತಿ ವ್ಯವಸ್ಥೆಯು ಉಳಿದ ದೇಶಗಳಿಗೆ ಹೋಲಿಸಿದರೆ ವರ್ಷಗಳಷ್ಟು ಮುಂದಿದೆ ಎಂದು ಕ್ಲಿಪ್‌ನಲ್ಲಿ ಬರೆಯಲಾಗಿದೆ. ಈ ವೀಡಿಯೊದ ಶೀರ್ಷಿಕೆಯಲ್ಲಿ ಭಾರತದಲ್ಲಿ ನನಗೆ ತುಂಬಾ ಆಶ್ಚರ್ಯ ತಂದ ವಿಷಯವೆಂದರೆ ನನಗೆ ನಿಜವಾಗಿಯೂ ಎಷ್ಟು ಕಡಿಮೆ ನಗದು ಬೇಕಿತ್ತು. ನಾನು ಹೋದಲ್ಲೆಲ್ಲಾ, ಅದು ಸಣ್ಣ ಚಾಯ್ ಸ್ಟ್ಯಾಂಡ್ ಆಗಿರಲಿ, ಸ್ಥಳೀಯ ರೆಸ್ಟೋರೆಂಟ್ ಆಗಿರಲಿ ಅಥವಾ ರಸ್ತೆಯ ಪಕ್ಕದಲ್ಲಿರುವ  ಅಂಗಡಿಯಾಗಿರಲಿ, ಜನರು ಕೇವಲ ಕ್ಯೂ ಆರ್ ಕೋಡ್ ಅನ್ನು ತೋರಿಸುತ್ತಿದ್ದರು ಎಂದು ಬರೆದುಕೊಂಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಭಾರತದ ತ್ವರಿತ ಪಾವತಿ ವ್ಯವಸ್ಥೆಯಾದ ಯುಪಿಐ ಇದಕ್ಕೆ ಕಾರಣ. ಅತ್ಯಂತ ಅನುಕೂಲಕರ ಪಾವತಿ ವ್ಯವಸ್ಥೆಗಳಲ್ಲಿ ಒಂದಾಗಿದೆ. ಬ್ಯಾಂಕ್ ವಿವರಗಳನ್ನು ಟೈಪ್ ಮಾಡುವ ಬದಲು, ಜನರು ಕೇವಲ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುತ್ತಾರೆ, ಹಣವನ್ನು ಸೆಕೆಂಡುಗಳಲ್ಲಿ ವರ್ಗಾಯಿಸಲಾಗುತ್ತದೆ. ಇದು ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಪ್ರಯಾಣ ಮಾಡುವಾಗ ನಾನು ನೋಡಿದ ಅತ್ಯಂತ ಅನುಕೂಲಕರ ಪಾವತಿ ವ್ಯವಸ್ಥೆಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.

ವಿದೇಶಿ ಪ್ರಯಾಣಿಕರಾಗಿ, ಯುಪಿಐ ಯಾವಾಗಲೂ ಎಲ್ಲರೂ ಬಳಸಲು ಸಾಧ್ಯವಾಗುವುದಿಲ್ಲ. ಇದು ನಿಮ್ಮ ಬ್ಯಾಂಕ್, ಕಾರ್ಡ್ ಒದಗಿಸುವವರು ಮತ್ತು ನಿಮಗೆ ಯಾವ ಸೇವೆಗಳು ಲಭ್ಯವಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಫೋನ್‌ಪೇ, ಗೂಗಲ್ ಪೇ, ಪೇಟಿಎಂ ಮತ್ತು ಭೀಮ್‌ನಂತಹ ಅಪ್ಲಿಕೇಶನ್‌ಗಳು ಕೆಲವೊಮ್ಮೆ ಭಾರತದಲ್ಲಿ ಸಂದರ್ಶಕರಿಗೆ ಡಿಜಿಟಲ್ ಪಾವತಿಗಳನ್ನು ಮಾಡಲು ಸಹಾಯ ಮಾಡುತ್ತದೆ. ವಿಶೇಷವಾಗಿ ಸಣ್ಣ ಪಟ್ಟಣಗಳು, ದೂರದ ಪ್ರದೇಶಗಳು ಅಥವಾ ಕಳಪೆ ಇಂಟರ್ನೆಟ್ ಸಂಪರ್ಕವಿರುವ ಸ್ಥಳಗಳಿಗೆ ಭೇಟಿ ನೀಡುವಾಗ ಪ್ರಯಾಣಿಕರು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಜತೆಗೆ ಕೈಯಲ್ಲಿ ಸ್ವಲ್ಪ ಹಣವನ್ನು ಇಟ್ಟುಕೊಳ್ಳುವುದು ಒಳ್ಳೆಯದು ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಆಟೋ ಬಾಡಿಗೆ 150ರೂ., ಖಾತೆಗೆ ಬಂದಿದ್ದು 15 ಸಾವಿರ; ಪ್ರಯಾಣಿಕನ ಹಣವನ್ನು ಮರಳಿಸಿ ಮಾದರಿಯಾದ ಚಾಲಕ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬ ಬಳಕೆದಾರ, ಯುಪಿಐ ನಿಜವಾಗಿಯೂ ಭಾರತದ ಅತಿದೊಡ್ಡ ಡಿಜಿಟಲ್ ಸಾಧನೆಗಳಲ್ಲಿ ಒಂದಾಗಿದೆ ಎಂದಿದ್ದಾರೆ. ಇನ್ನೊಬ್ಬರು, ಕ್ಯೂಆರ್ ಪಾವತಿಗಳು ಬಹುತೇಕ ಕಾರ್ಯನಿರ್ವಹಿಸುವುದರಿಂದ ನಾನು ಈಗ ಹಣವನ್ನು ಕೊಂಡೊಯ್ಯುವುದಿಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇದು ಭಾರತವು ಅನೇಕ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಉತ್ತಮವಾಗಿರುವ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದಲ್ಲಿ ರಾತ್ರೋರಾತ್ರಿ ಮಣ್ಣುಪಾಲಾಯ್ತು 17 ವರ್ಷಗಳ ಶ್ರಮ: ಟರ್ಕಿ ಕಂಪನಿಯ ಅಳಲಿಗೆ ಏನು ಕಾರಣ? ತಪ್ಪು ಯಾರದು? – Kannada News | Turkey’s Celebi Aviation chairperson Celebioglu speaks of losing business in India after Operation Sindoor

ಬೆಂಗಳೂರು ಏರ್​ಪೋರ್ಟ್ ಚಿತ್ರImage Credit source: PTI

ನವದೆಹಲಿ, ಜೂನ್ 16: ಭಾರತದ ವಿಮಾನಯಾನ ವಲಯದಲ್ಲಿ ಅತ್ಯಂತ ಪ್ರಮುಖ ಗ್ರೌಂಡ್ ಹ್ಯಾಂಡ್ಲಿಂಗ್ (ವಿಮಾನ ನಿಲ್ದಾಣದಲ್ಲಿನ ಸೇವೆಗಳು) ಕಂಪನಿಯಾಗಿದ್ದ ಟರ್ಕಿ ಮೂಲದ ‘ಚೆಲೆಬಿ ಏವಿಯೇಷನ್’ (Çelebi Aviation) ಸಂಸ್ಥೆಯ ಸುರಕ್ಷತಾ ಕ್ಲಿಯರೆನ್ಸ್ ಅನ್ನು ಕೇಂದ್ರ ಸರ್ಕಾರವು ರದ್ದುಗೊಳಿಸಿ ವರ್ಷದ ಮೇಲಾಯಿತು. ಇದೀಗ ಸಂಸ್ಥೆಯ ಮುಖ್ಯಸ್ಥೆ ಕಾನನ್ ಚೆಲೆಬಿಯೋಗ್ಲು (Canan Celebioglu) ಅವರು ಮಾತನಾಡಿದ್ದಾರೆ. ಹಲವು ವರ್ಷಗಳಿಂದ ಶ್ರಮ ಪಟ್ಟು ಕಟ್ಟಿದ್ದ ಬ್ಯುಸಿನೆಸ್ ರಾತ್ರೋರಾತ್ರಿ ನಿಂತುಹೋದಂತಾಯಿತು ಎಂದು ಅವರು ಹೇಳಿದ್ದಾರೆ. ಆಪರೇಷನ್ ಸಿಂದೂರ್ (Operation Sindoor) ವೇಳೆ ಪಾಕಿಸ್ತಾನಕ್ಕೆ ಟರ್ಕಿ ದೇಶದಿಂದ ಡ್ರೋನ್ ಸರಬರಾಜು ಆದ ಹಿನ್ನೆಲೆಯಲ್ಲಿ ಭಾರತವು ಈ ಟರ್ಕಿ ಕಂಪನಿಯ ಸೇವೆಯನ್ನು ನಿಲ್ಲಿಸುವ ನಿರ್ಧಾರ ತೆಗೆದುಕೊಂಡಿತ್ತು. ಸರ್ಕಾರದ ಈ ಕ್ರಮವನ್ನು ಸೋಷಿಯಲ್ ಮೀಡಿಯಾದಲ್ಲಿ ಬಹಳ ಜನರು ಸ್ವಾಗತಿಸಿದ್ದಾರೆ.

ಉದ್ಯಮದ ದೈತ್ಯ ಸಂಸ್ಥೆಗೆ ಭದ್ರತೆಯ ಪೆಟ್ಟು

ಚೆಲೆಬಿಯೋಗ್ಲು (Çelebioğlu) ನೇತೃತ್ವದ ಚೆಲೆಬಿ ಏವಿಯೇಷನ್, ಭಾರತದ ನಾಗರಿಕ ವಿಮಾನಯಾನ ವಲಯದಲ್ಲಿ ಅತ್ಯಂತ ದೊಡ್ಡ ಖಾಸಗಿ ಗ್ರೌಂಡ್ ಹ್ಯಾಂಡ್ಲರ್ ಆಗಿ ಬೆಳೆದಿತ್ತು. ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ 9 ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಗ್ರೌಂಡ್ ಆಪರೇಷನ್ಸ್​ನಲ್ಲಿ ಈ ಕಂಪನಿಯೇ ಮುಂಚೂಣಿಯಲ್ಲಿತ್ತು. ಸುಮಾರು 400 ರಿಂದ 500 ಮಿಲಿಯನ್ ಡಾಲರ್ ಮೌಲ್ಯದ ವಹಿವಾಟು ನಡೆಸುವ ಬ್ಯುಸಿನೆಸ್ ಮಟ್ಟಕ್ಕೆ ಬೆಳೆದಿತ್ತು. ಭಾರತದಲ್ಲಿ 10,000ಕ್ಕೂ ಅಧಿಕ ಮಂದಿಗೆ ಉದ್ಯೊಗಗಳನ್ನು ಕೊಟ್ಟಿತ್ತು.

ಇದನ್ನೂ ಓದಿ: ಕೆಲವೇ ಎಐ ಮಾಡಲ್​ಗಳು ಇಡೀ ಉದ್ಯಮವನ್ನೇ ನುಂಗಿ ನೀರು ಕುಡಿಯಲು ಬಿಡಬಾರದು: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ

ಆದರೆ, ಪಾಕಿಸ್ತಾನಕ್ಕೆ ಟರ್ಕಿ ದೇಶವು ಅತ್ಯಾಧುನಿಕ ಡ್ರೋನ್‌ಗಳನ್ನು ಪೂರೈಸುತ್ತಿದ್ದ ಹಿನ್ನೆಲೆಯಲ್ಲಿ ಮತ್ತು ಭಾರತದ ಭದ್ರತೆಗೆ ಇದರಿಂದ ಧಕ್ಕೆ ಬರಬಹುದು ಎಂಬ ಗುಪ್ತಚರ ವರದಿಗಳ ಆಧಾರದ ಮೇಲೆ ಕೇಂದ್ರ ಸರ್ಕಾರ ಈ ಸಂಸ್ಥೆಯ ಪರವಾನಗಿಯನ್ನು ದಿಢೀರ್ ರದ್ದುಗೊಳಿಸಿತ್ತು. ಇದರ ಬೆನ್ನಲ್ಲೇ ವಿಮಾನ ನಿಲ್ದಾಣಗಳಲ್ಲಿದ್ದ ಕಂಪನಿಯ ಉಪಕರಣಗಳನ್ನು ಜಪ್ತಿ ಮಾಡಲಾಗಿತ್ತು. ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳನ್ನು ಇತರ ಪ್ರತಿಸ್ಪರ್ಧಿ ಕಂಪನಿಗಳಿಗೆ ವರ್ಗಾಯಿಸಲಾಯಿತು.

ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮತ್ತು ತೀರ್ಪು

ಕೇಂದ್ರ ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಚೆಲೆಬಿಯೋಗ್ಲು ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ 2025ರ ಜುಲೈನಲ್ಲಿ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು ಕಂಪನಿಯ ಅರ್ಜಿಯನ್ನು ವಜಾಗೊಳಿಸಿತು.

ತನಿಖಾ ಸಂಸ್ಥೆಗಳು ಮುಚ್ಚಿದ ಲಕೋಟೆಯಲ್ಲಿ (Sealed Cover) ಸಲ್ಲಿಸಿದ ರಹಸ್ಯ ಸಾಕ್ಷ್ಯಗಳನ್ನು ಪರಿಶೀಲಿಸಿದ ನ್ಯಾಯಾಧೀಶರು, “ಯಾವುದೇ ಆಡಳಿತಾತ್ಮಕ ನಿಯಮಾವಳಿಗಳು ಅಥವಾ ಪ್ರಕ್ರಿಯೆಗಳಿಗಿಂತ ದೇಶದ ಆಂತರಿಕ ಭದ್ರತೆ ಮತ್ತು ಸಾರ್ವಭೌಮತ್ವವೇ ಮೊದಲ ಆದ್ಯತೆಯಾಗಿದೆ” ಎಂದು ಸ್ಪಷ್ಟಪಡಿಸಿ ಸರ್ಕಾರದ ಕ್ರಮವನ್ನು ಎತ್ತಿಹಿಡಿದರು.

ಇದನ್ನೂ ಓದಿ: ಬೆಂಗಳೂರಿನ ಸರ್ವಂ ಎಐ ಈಗ ಯುನಿಕಾರ್ನ್ ಕಂಪನಿಗಳ ಸಾಲಿನಲ್ಲಿ; ಹೂಡಿಕೆ ಮಾಡಿದ ಎಚ್​ಸಿಎಲ್​ಗೂ ಷೇರುಪೇಟೆಯಲ್ಲಿ ಸುಗ್ಗಿ

ರಾಜಕೀಯ ನಂಟಿನ ನಿರಾಕರಣೆ ಮತ್ತು ಸಾರ್ವಜನಿಕ ಪ್ರತಿಕ್ರಿಯೆ

ಚೆಲೆಬಿ ಸಂಸ್ಥೆಯ ಬಹುಪಾಲು ಷೇರುಗಳು ಜಾಗತಿಕ ಹೂಡಿಕೆ ನಿಧಿಗಳ (Global Funds) ಅಧೀನದಲ್ಲಿದ್ದು, ತಮಗೆ ಯಾವುದೇ ರೀತಿಯ ರಾಜಕೀಯ ನಂಟು ಅಥವಾ ವಿದೇಶಿ ಸರ್ಕಾರದ ಪ್ರೇರೇಪಿತ ಉದ್ದೇಶಗಳಿಲ್ಲ ಎಂದು ಕಂಪನಿ ವಾದಿಸಿತ್ತು. ಈ ಬೆಳವಣಿಗೆಗಳಾಗಿ ಒಂದು ವರ್ಷದ ನಂತರ ಚೆಲೆಬಿ ಏವಿಯೇಶನ್​ನ ಮುಖ್ಯಸ್ಥೆ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಬ್ಲೂಮ್​ಬರ್ಗ್ ನ್ಯೂಸ್ ಏಜೆನ್ಸಿಗೆ ನೀಡಿದ ಸಂದರ್ಶನದಲ್ಲಿ ಅವರು, ‘ನಾವು ಭಾರತವನ್ನು ಇಷ್ಟಪಟ್ಟಿದ್ದೆ. ಹೀಗಾಗಿ, ಅದು ಬಹಳ ಆಘಾತಕಾರಿ ಎನಿಸಿತ್ತು’ ಎಂದಿದ್ದಾರೆ.

ಎಕ್ಸ್​ನಲ್ಲಿ ಬಂದ ಕೆಲ ಟ್ವೀಟ್​ಗಳು

ಸರ್ಕಾರದ ಕ್ರಮಕ್ಕೆ ನೆಟ್ಟಿಗರಿಂದ ಬೆಂಬಲ

ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ನೆಟ್ಟಿಗರು ಸರ್ಕಾರದ ಈ ಕಠಿಣ ನಿಲುವಿಗೆ ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಾಶ್ಮೀರ ವಿಷಯದಲ್ಲಿ ಟರ್ಕಿ ದೇಶವು ಸತತವಾಗಿ ಪಾಕಿಸ್ತಾನಕ್ಕೆ ನೀಡುತ್ತಿರುವ ರಾಜತಾಂತ್ರಿಕ ಮತ್ತು ಮಿಲಿಟರಿ ಬೆಂಬಲವನ್ನು ಉಲ್ಲೇಖಿಸಿರುವ ಸಾರ್ವಜನಿಕರು, ಸೂಕ್ಷ್ಮವಾಗಿರುವ ವಿಮಾನ ನಿಲ್ದಾಣಗಳ ಭದ್ರತೆಯನ್ನು ಇಂತಹ ಸಂಸ್ಥೆಗಳಿಗೆ ವಹಿಸುವುದು ಅಪಾಯಕಾರಿ ಎಂದು ಸರ್ಕಾರದ ಕ್ರಮವನ್ನು ಶ್ಲಾಘಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಿಲ್ ಕಟ್ಟಲೂ ಹಣ ಇಲ್ವೇ: ಕತ್ತಲಲ್ಲಿ ಮುಳುಗಿದ ಬೆಳಗಾವಿ ತಹಶೀಲ್ದಾರ್ ಕಚೇರಿ – Kannada News | Belagavi tahasildar office Power Cuts over unpaid electric bill fast Three Months

ಬೆಳಗಾವಿ, (ಜೂನ್ 16): ಸರ್ಕಾರದ ನಿಯಮಗಳನ್ನು ಜನರಿಗೆ ತಿಳಿಸುವ ಹಾಗೂ ಜನರಿಗೆ ಸರ್ಕಾರಿ ಆದೇಶಗಳನ್ನು ಪಾಲಿಸುವಂತೆ ಸೂಚಿಸುವ ತಹಶಿಲ್ದಾರ್ ಕಚೇರಿಯೇ ಈಗ ನಿಯಮ ಉಲ್ಲಂಘಿಸಿ ಕತ್ತಲಲ್ಲಿ ಕೂರುವಂತಾಗಿದೆ. ಹೌದು….ಸಾವಿರಾರೂ ರೂಪಾಯಿ ಬಾಕಿ ಬಿಲ್ ಪಾವತಿಸದ ಕಾರಣ ಬೆಳಗಾವಿ (Belagavi) ತಹಶಿಲ್ದಾರ್ ಕಚೇರಿಯ ವಿದ್ಯುತ್ ಸಂಪರ್ಕವನ್ನು (Power Cut) ಕಡಿತಗೊಳಿಸಲಾಗಿದೆ. ಬೆಳಗಾವಿ ತಹಶಿಲ್ದಾರ್ ಕಚೇರಿಯು ಕಳೆದ ಮೂರು ತಿಂಗಳ ಒಟ್ಟು  58,936 ರೂಪಾಯಿ ವಿದ್ಯುತ್ ಬಿಲ್ ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜು ಕಂಪನಿಯು ಕರೆಂಟ್ ಕಟ್ ಮಾಡಿದೆ. ಇದರಿಂದಾಗಿ ಕಚೇರಿಯು ಕತ್ತಲಲ್ಲಿ ಮುಳುಗಿದ್ದು, ಸಾರ್ವಜನಿಕರು, ವಿಶೇಷವಾಗಿ ಹಿರಿಯ ನಾಗರಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಬಾಸ್’ ಸಿನಿಮಾಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್, ವಿಜಯಲಕ್ಷ್ಮಿ – Kannada News | Darshan Vijayalakshmi move High Court against Boss movie release ft Tanush Shivnna V Lava

ವಿ. ಲವ ನಿರ್ದೇಶನದ ‘ಬಾಸ್’ ಸಿನಿಮಾ (Boss Movie) ಈಗಾಗಲೇ ಸಾಕಷ್ಟು ಸುದ್ದಿ ಆಗಿದೆ. ತನಿಷ್ ಶಿವಣ್ಣ ನಟನೆಯ ಈ ಚಿತ್ರದ ಟೀಸರ್ ಬಿಡುಗಡೆ ಆದ ದಿನದಿಂದಲೂ ವಿವಾದ ಶುರು ಆಗಿದೆ. ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ ಎಂಬುದನ್ನು ಟೀಸರ್​ನಲ್ಲಿ ಉಲ್ಲೇಖಿಸಲಾಗಿತ್ತು. ಟೀಸರ್ ನೋಡಿದರೆ ನಟ ದರ್ಶನ್ (Darshan) ಕೇಸ್ ರೀತಿಯೇ ಈ ಸಿನಿಮಾದ ಕಥೆ ಇದೆ ಎಂಬ ಅನುಮಾನ ಮೂಡುತ್ತದೆ. ಆ ಕಾರಣದಿಂದ ದರ್ಶನ್ ಹಾಗೂ ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ಅವರು ‘ಬಾಸ್’ ಸಿನಿಮಾದ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ಮೊದಲು ಸೆಷನ್ಸ್ ಕೋರ್ಟ್​​ನಲ್ಲಿ ವಿಜಯಲಕ್ಷ್ಮಿ ದರ್ಶನ್ ಅವರು ‘ಬಾಸ್’ ಸಿನಿಮಾಗೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಅಲ್ಲಿ ಅವರ ಅರ್ಜಿ ವಜಾಗೊಂಡಿತು. ಅದರಿಂದ ಚಿತ್ರತಂಡಕ್ಕೆ ಬಲ ಸಿಕ್ಕಂತೆ ಆಗಿತ್ತು. ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡದವರು ಆ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಈಗ ‘ಬಾಸ್’ ಚಿತ್ರತಂಡಕ್ಕೆ ಮತ್ತೆ ವಿಘ್ನ ಎದುರಾಗುವ ಸಾಧ್ಯತೆ ಇದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಜೂನ್ 19ರಂದು ‘ಬಾಸ್’ ಸಿನಿಮಾ ಬಿಡುಗಡೆ ಆಗಬೇಕು. ಈಗಾಗಲೇ ಚಿತ್ರತಂಡದವರು ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಜೂನ್ 19ರಂದು ಸಿನಿಮಾ ರಿಲೀಸ್ ಎಂದು ಮಾಧ್ಯಮಗಳಲ್ಲಿ ಜಾಹೀರಾತು ಕೂಡ ನೀಡಲಾಗಿದೆ. ಆದರೆ ಚಿತ್ರದ ಬಿಡುಗಡೆಗೆ ಕೆಲವೇ ದಿನ ಬಾಕಿ ಇರುವಾಗ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರು ಹೈಕೋರ್ಟ್​ ಮೊರೆ ಹೋಗಿದ್ದಾರೆ.

‘ಬಾಸ್’ ಸಿನಿಮಾದ ಟೀಸರ್:

‘ಬಾಸ್’ ಸಿನಿಮಾದ ಬಿಡುಗಡೆಗೆ ತಡೆ ನೀಡಬೇಕು ಎಂದು ಹೈಕೋರ್ಟ್​ಗೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿದೆ. ಅದರ ವಿಚಾರಣೆ ಜೂನ್ 17ರಂದು ನಡೆಯಲಿದೆ. ನ್ಯಾಯಾಲಯ ನೀಡುವ ತೀರ್ಪಿನ ಆಧಾರದ ಮೇಲೆ ಸಿನಿಮಾದ ಭವಿಷ್ಯ ನಿರ್ಧಾರ ಆಗಲಿದೆ. ಇದು ದರ್ಶನ್ ಜೀವನದ ಕಥೆ ಅಲ್ಲ ಎಂದು ‘ಬಾಸ್’ ಚಿತ್ರತಂಡ ಹೇಳುತ್ತಲೇ ಬಂದಿದೆ. ಆದರೆ ಟೀಸರ್​ನಲ್ಲಿ ಹೋಲಿಕೆಗಳು ಕಾಣಿಸುತ್ತಿವೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್: ಪ್ರತಿ ದಿನ ವಿಚಾರಣೆಗೆ ಕೋರ್ಟ್ ಸೂಚನೆ; ದರ್ಶನ್ ಪರ ವಕೀಲರ ಮನವಿ ತಿರಸ್ಕಾರ

ಸೆನ್ಸಾರ್ ಮಂಡಳಿಯಿಂದ ಈ ಸಿನಿಮಾಗೆ ಪ್ರಮಾಣಪತ್ರ ಸಿಕ್ಕಿದೆ. ಯು/ಎ ಪ್ರಮಾಣಪತ್ರವನ್ನು ನೀಡಲಾಗಿದೆ. ‘ಬಾಸ್’ ಸಿನಿಮಾದ ಬಿಡುಗಡೆಗೆ ಈ ಮೊದಲು ಸೆಷನ್ಸ್ ಕೋರ್ಟ್ ನೀಡಿದ್ದ ಅನುಮತಿಯನ್ನು ಈಗ ಹೈಕೋರ್ಟ್ ಎತ್ತಿ ಹಿಡಿಯುತ್ತಾ ಅಥವಾ ಚಿತ್ರಕ್ಕೆ ತಡೆ ನೀಡುತ್ತಾ ಎಂಬುದನ್ನು ತಿಳಿಯಲು ಸಿನಿಪ್ರಿಯರು ಮತ್ತು ದರ್ಶನ್ ಅವರ ಅಭಿಮಾನಿಗಳು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಗನ ಸಿನಿಮಾಕ್ಕೆ ಕರೆತರಲು ಸಜ್ಜಾದ ಧನುಶ್, ಅವರದ್ದೇ ನಿರ್ದೇಶನ – Kannada News | Dhanush planning to direct movie for his son Yatra

ಧನುಶ್ (Dhanush) ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು, ಈಗಲೂ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳು ಮಾತ್ರವಲ್ಲದೇ ಹಿಂದಿ, ತೆಲುಗು ಹಾಲಿವುಡ್ ಸಿನಿಮಾಗಳಲ್ಲಿಯೂ ಸಹ ಧನುಶ್ ಅವರು ನಟಿಸಿದ್ದಾರೆ. ಧನುಶ್ ಕೇವಲ ನಟರು ಮಾತ್ರವಲ್ಲ ಅವರು ನಿರ್ದೇಶಕರೂ ಸಹ ಹೌದು. ಈ ವರೆಗೆ ನಾಲ್ಕು ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದಾರೆ. ಧನುಷ್ ಅವರು 2024 ರಲ್ಲಿ ಪತ್ನಿ ಐಶ್ವರ್ಯ ರಜನೀಕಾಂತ್ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇದೀಗ ಧನುಶ್ ಅವರು ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಕರೆತರಲು ಸಜ್ಜಾಗಿದ್ದು, ಮಕ್ಕಳ ಮೊದಲ ಸಿನಿಮಾವನ್ನು ಖುದ್ದು ಅವರೇ ನಿರ್ದೇಶನ ಮಾಡಲಿದ್ದಾರೆ.

ಧನುಶ್ ಅವರ ಮೊದಲ ಪುತ್ರ ಯಾತ್ರಾ ಇದೀಗ ಚಿತ್ರರಂಗಕ್ಕೆ ಬರಲು ಸಜ್ಜಾಗಿದ್ದಾರೆ. ಅವರಿಗೆ ಇನ್ನೂ 20 ವರ್ಷ ವಯಸ್ಸು. ಧನುಶ್ ಈ ಹಿಂದೆ, ತಮ್ಮ ಮಕ್ಕಳು ಸಿನಿಮಾಕ್ಕೆ ಬರಲು ಇನ್ನೂ ಸಮಯವಿದೆ ಎಂದಿದ್ದರು. ಆದರೆ ಈಗ ಖುದ್ದು ಅವರೇ ತಮ್ಮ ಮಗನಿಗಾಗಿ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದಾರೆ. ಧನುಶ್ ನಿರ್ದೇಶನ ಮಾಡಲಿರುವ ಮುಂದಿನ ಸಿನಿಮಾನಲ್ಲಿ ಯಾತ್ರಾ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಜಿವಿ ಪ್ರಕಾಶ್ ಈ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗುವ ಸಾಧ್ಯತೆಯಿದೆ.

ಧನುಶ್ ಅವರ ಈ ಸಿನಿಮಾ ಶಾಲೆ-ಕಾಲೇಜಿನ ಕತೆಯನ್ನು ಹೊಂದಿರಲಿದ್ದು, ಜೊತೆಗೆ ಕ್ರೀಡಾ ವಿಷಯವನ್ನೂ ಸಹ ಒಳಗೊಂಡಿರಲಿದೆಯಂತೆ. ಹಾಗಾಗಿ ಮಗನನ್ನೇ ಸಿನಿಮಾಕ್ಕೆ ನಾಯಕನನ್ನಾಗಿ ಧನುಶ್ ಆಯ್ಕೆ ಮಾಡಿಕೊಂಡಿದ್ದಾರೆ. ಅಂದಹಾಗೆ ಧನುಷ್ ಇತ್ತೀಚೆಗೆ ತಮ್ಮ ಸೋದರಳಿಯ ಪವಿಶ್ ಅವರನ್ನು ‘ನಿಲವುಕ್ಕು ಎನ್ಮೆಲ್ ಎನ್ನದಿ ಕೋಪಂ’ ಚಿತ್ರದ ಮೂಲಕ ಪರಿಚಯಿಸಿದ್ದಾರೆ. ಈಗ ಮಗನನ್ನೂ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.

ಇದನ್ನೂ ಓದಿ:ಮತ್ತೆ ಮುನ್ನೆಲೆಗೆ ಬಂತು ಮೃಣಾಲ್-ಧನುಶ್ ಡೇಟಿಂಗ್ ಸುದ್ದಿ: ಕಾರಣವೇನು?

ಧನುಶ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿಯಲ್ಲಿ ಐತಿಹಾಸಿಕ ಕತೆಯುಳ್ಳ ಸಿನಿಮಾನಲ್ಲಿ ನಟಿಸಲು ಒಪ್ಪಿಗೆ ನೀಡಿದ್ದಾರೆ. ಸದ್ಯಕ್ಕೆ ತಮ್ಮ 55ನೇ ಸಿನಿಮಾನಲ್ಲಿ ಧನುಶ್ ನಟಿಸುತ್ತಿದ್ದು, ಅದೇ ಸಿನಿಮಾನಲ್ಲಿ ಧನುಶ್ ಜೊತೆಗೆ ಮಮ್ಮುಟಿ ಸಹ ನಟಿಸುತ್ತಿದ್ದಾರೆ. ಇದರ ಬಳಿಕ ತೆಲುಗಿನ ಸಿನಿಮಾ ಒಂದರಲ್ಲಿ ಧನುಶ್ ನಟಿಸಲಿದ್ದಾರೆ ಎನ್ನಲಾಗಿದೆ. ಬಳಿಕ ಅವರ ಸಹೋದರ ಸೆಲ್ವರಾಘವನ್ ನಿರ್ದೇಶನದ ‘ಆಯರತ್ತಿಲ್ ಒರುವನ್ 2’ ಸಿನಿಮಾನಲ್ಲಿಯೂ ನಟಿಸಲಿದ್ದಾರೆ. ಇದೆಲ್ಲದರ ನಡುವೆ ತಮ್ಮ ಮಗನಿಗಾಗಿ ಸಿನಿಮಾ ಸಹ ನಿರ್ದೇಶನ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಧರ್ಮಸ್ಥಳ ಬುರುಡೆ ಪ್ರಕರಣದ SIT ತಂಡ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ – Kannada News | Dharmasthala Mass Burial Case SIT SP’s Car overturns Near Charmadi Ghat at Mangaluru

ಮಂಗಳೂರು,(ಜೂನ್,16): ಧರ್ಮಸ್ಥಳದ ಬುರುಡೆ ಪ್ರಕರಣದ (Dharmasthala Mass Burial Case )ತನಿಖೆ ನಡೆಸುತ್ತಿದ್ದ ಎಸ್ ಐಟಿ ಪೊಲೀಸ್ ವರಿಷ್ಠಾಧಿಕಾರಿ ಸೈಮನ್ ಪ್ರಯಾಣಿಸುತ್ತಿದ್ದ ಕಾರು ಪಲ್ಟಿಯಾಗಿದೆ. ದಕ್ಷಿಣ ಕನ್ನಡ ( ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ (Charmadi Ghat) ರಸ್ತೆಯ ತಿರುವಿನಲ್ಲಿ ಈ ಘಟನೆ ನಡೆದಿದೆ. ದೇಶಾದ್ಯಂತ ಭಾರೀ ಸಂಚಲನ ಮೂಡಿಸಿರುವ ಧರ್ಮಸ್ಥಳದ ಬುರುಡೆ ಪ್ರಕರಣದ ತನಿಖೆಯನ್ನು ಎಸ್‌ಐಟಿ ಎಸ್ ಪಿ ಸೈಮನ್ ಅವರು ನಡೆಸುತ್ತಿದ್ದು, ಇದೇ ಪ್ರಕರಣ ಸಂಬಂಧ ಚರ್ಚಿಸಲು ಚಿಕ್ಕಮಗಳೂರು ಎಸ್ಪಿ ಹಾಗೂ ಎಸ್ ಐಟಿ ತನಿಖಾಧಿಖಾರಿಯಾಗಿರುವ ಜೀತೇಂದ್ರ ಕುಮಾರ್ ದಯಾಮ ಅವರನ್ನ ಭೇಟಿಯಾಗಿ ತೆರಳುತ್ತಿದ್ದರು. ಈ ವೇಳೆ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಎಸ್ ಐಟಿ ಎಸ್.ಪಿ ಸೈಮನ್ ಇನ್ಸ್‌ಪೆಕ್ಟರ್ ಕುಸುಮಾಧರ್ , ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಹಾಗೂ ವಾಹನದ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು,  ಅದೃಷ್ಟವಾಶತ್ ಸದ್ಯ ಅಪಾಯದಿಂದ ಪಾರಾಗಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ನಿಯತ್ತಿಲ್ಲದವರು ಪಕ್ಷ ಬಿಟ್ಟು ಹೋಗಬಹುದು; ‘ಆಪರೇಷನ್ ಟೈಗರ್’ ಬೆನ್ನಲ್ಲೇ ಸಂಸದರಿಗೆ ಉದ್ಧವ್ ಠಾಕ್ರೆ ಎಚ್ಚರಿಕೆ – Kannada News | Those Who Want To Leave Can free to Go; Uddhav Thackeray’s big statement To Shiv Sena MPs Amid Operation Tiger row

ಮುಂಬೈ, ಜೂನ್ 16: ಮಹಾರಾಷ್ಟ್ರದಲ್ಲಿ ಶಿವಸೇನೆ (UBT) ಸಂಸದರ ಪಕ್ಷಾಂತರದ ಕುರಿತು ಹರಡುತ್ತಿರುವ ವದಂತಿಗಳಿಗೆ ಸ್ವತಃ ಉದ್ಧವ್ ಠಾಕ್ರೆ (Uddhav Thackeray) ಅವರೇ ಅಂತಿಮ ತೆರೆ ಎಳೆಯಲು ಮುಂದಾಗಿದ್ದಾರೆ. ಶಿಂಧೆ ಬಣವು ತಮ್ಮ ಸಂಸದರನ್ನು ಸೆಳೆಯಲು ನಡೆಸುತ್ತಿದೆ ಎನ್ನಲಾದ ‘ಆಪರೇಷನ್ ಟೈಗರ್’ ಚರ್ಚೆಗಳ ಮಧ್ಯೆ, ಉದ್ಧವ್ ಠಾಕ್ರೆ ತಮ್ಮ ಸಂಸದರು ಮತ್ತು ಹಿರಿಯ ನಾಯಕರ ತುರ್ತು ಸಭೆ ನಡೆಸಿ ಗಟ್ಟಿಯಾದ ನಿಲುವು ಪ್ರಕಟಿಸಿದ್ದಾರೆ. ವಿರೋಧ ಪಕ್ಷಗಳ ಆಮಿಷ ಅಥವಾ ಒತ್ತಡಕ್ಕೆ ಮಣಿಯುವವರಿಗೆ ಶಿವಸೇನೆಯಲ್ಲಿ ಜಾಗವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಮ್ಮ ಅಧಿಕೃತ ನಿವಾಸ ‘ಮಾತೋಶ್ರೀ’ಯಲ್ಲಿ ನಡೆದ ಪಕ್ಷದ ಸಂಸದರು ಮತ್ತು ಪದಾಧಿಕಾರಿಗಳ ಹೈ-ವೋಲ್ಟೇಜ್ ಸಭೆಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಶಕ್ತಿಯೇ ತಮಗೆ ಮುಖ್ಯ ಎಂದರು. “ಶಿವಸೇನೆ ಎಂದಿಗೂ ದ್ರೋಹಿಗಳಿಗೆ ಮಣಿದಿಲ್ಲ, ಮುಂದೆಯೂ ಮಣಿಯುವುದಿಲ್ಲ. ನಮ್ಮ ಪಕ್ಷದ ಚಿಹ್ನೆ ಮತ್ತು ಹೆಸರನ್ನು ಕದ್ದವರು ಈಗ ನಮ್ಮ ಸಂಸದರನ್ನು ಕದಿಯಲು ‘ಆಪರೇಷನ್ ಟೈಗರ್’ ಎಂಬ ನಾಟಕವಾಡುತ್ತಿದ್ದಾರೆ. ನಾನು ಯಾರನ್ನೂ ಕಟ್ಟಿ ಹಾಕುವುದಿಲ್ಲ. ಯಾರಿಗೆ ಪಕ್ಷ ಬಿಟ್ಟು ಹೋಗಬೇಕೋ, ಅವರು ಧೈರ್ಯವಾಗಿ ಹೋಗಬಹುದು. ನಾವು ಯಾರನ್ನೂ ಹಿಡಿದಿಟ್ಟುಕೊಂಡಿಲ್ಲ. ಆದರೆ ನೆನಪಿರಲಿ, ಹೋದವರಿಗೆ ಮಹಾರಾಷ್ಟ್ರದ ಜನತೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ನಿಜವಾದ ಹುಲಿಗಳು ನನ್ನೊಂದಿಗಿವೆ” ಎಂದು ಉದ್ಧವ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಆಪರೇಷನ್ ಟೈಗರ್ ಅಂತಿಮ ಹಂತಕ್ಕೆ; ಶಿಂಧೆ ಬಣ ಸೇರಲಿದ್ದಾರಾ ಉದ್ಧವ್ ಠಾಕ್ರೆ ಬಣದ 7 ಸಂಸದರು?

ಈ ಹಿಂದೆ ನಡೆದ ಸಭೆಗೆ ಒಟ್ಟು 9 ಸಂಸದರಲ್ಲಿ 5 ಸಂಸದರು ಖುದ್ದಾಗಿ ಹಾಜರಾಗದೆ ವೀಡಿಯೊ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದು ಪಕ್ಷಾಂತರದ ಅನುಮಾನ ಹೆಚ್ಚಿಸಿತ್ತು. ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದ್ದು, ಉದ್ಧವ್ ಬಣದ ಪ್ರಮುಖ ನಾಯಕರು ವದಂತಿಗಳನ್ನು ತಳ್ಳಿಹಾಕಿದ್ದಾರೆ. “ನಮ್ಮ ಎಲ್ಲಾ 9 ಲೋಕಸಭಾ ಸಂಸದರು ಉದ್ಧವ್ ಠಾಕ್ರೆ ಅವರ ನಾಯಕತ್ವಕ್ಕೆ ಸಂಪೂರ್ಣ ಬದ್ಧರಾಗಿದ್ದಾರೆ. ಕೆಲವರು ತಮ್ಮ ಕ್ಷೇತ್ರಗಳ ಅನಿವಾರ್ಯ ಕೆಲಸಗಳ ಕಾರಣದಿಂದಾಗಿ ವೀಡಿಯೊ ಮೂಲಕ ಸಭೆಗೆ ಬಂದಿದ್ದರೇ ಹೊರತು, ಯಾರೂ ಪಕ್ಷ ಬಿಡುತ್ತಿಲ್ಲ. ‘ಆಪರೇಷನ್ ಟೈಗರ್’ ಎನ್ನುವುದು ಮಾಧ್ಯಮಗಳು ಮತ್ತು ಶಿಂಧೆ ಬಣ ಸೃಷ್ಟಿಸಿರುವ ಸುಳ್ಳು ಸುದ್ದಿ,” ಎಂದು ಸಂಜಯ್ ರಾವತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಉದ್ಧವ್ ಠಾಕ್ರೆಯವರ ಶಿವಸೇನೆಯಲ್ಲಿ ಬಿರುಕು; ಪ್ರತ್ಯೇಕ ಗುಂಪು ರಚಿಸುತ್ತಾರಾ ಯುಟಿಬಿ ಸಂಸದರು?

ಸಂಸತ್ತಿನ ಮುಂಗಾರು ಅಧಿವೇಶನ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವುದರಿಂದ, ಪಕ್ಷದಲ್ಲಿ ಯಾರಿಗೆ ನಿಷ್ಠೆ ಇಲ್ಲವೋ ಅವರು ಈಗಲೇ ಹೊರನಡೆದರೆ ಚುನಾವಣಾ ತಂತ್ರ ರೂಪಿಸಲು ಸುಲಭವಾಗುತ್ತದೆ ಎಂಬುದು ಉದ್ಧವ್ ಠಾಕ್ರೆ ಲೆಕ್ಕಾಚಾರ. ಪಕ್ಷವನ್ನು ತೊರೆದು ಹೋಗುವವರನ್ನು ಸಾರ್ವಜನಿಕವಾಗಿ ಮತ್ತೊಮ್ಮೆ ‘ದ್ರೋಹಿಗಳು’ ಎಂದು ಬಿಂಬಿಸಿ, ಮರಾಠಿ ಮತದಾರರಲ್ಲಿ ತಮಗಾಗಿ ಸಹಾನುಭೂತಿಯ ಅಲೆ ಸೃಷ್ಟಿಸಲು ಉದ್ಧವ್ ಈ ರೀತಿಯ ಆಯ್ಕೆ ನೀಡಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಜ್ಜಿಯ ಪಾರ್ಥಿವ ಶರೀರ ಕಂಡು ಕಣ್ಣೀರಿಟ್ಟ ವಿಜಯ್ ರಾಘವೇಂದ್ರ ಮಗ ಶೌರ್ಯ – Kannada News | Vijay Raghavendra son Shourya pays last respect to grandmother Jayamma

ಕನ್ನಡ ಚಿತ್ರರಂಗದ ಜನಪ್ರಿಯ ನಟರಾದ ವಿಜಯ್ ರಾಘವೇಂದ್ರ ಹಾಗೂ ಶ್ರೀಮುರಳಿ ಅವರ ತಾಯಿ, ಹಿರಿಯ ನಿರ್ಮಾಪಕ ಎಸ್.ಎ. ಚಿನ್ನೇಗೌಡ ಅವರ ಪತ್ನಿ ಜಯಮ್ಮ (Jayamma) ಇಂದು (ಜೂನ್ 16) ಬೆಂಗಳೂರಿನಲ್ಲಿ ನಿಧನರಾದರು. ಕುಟುಂಬದ ಸದಸ್ಯರು ಮತ್ತು ಅನೇಕ ಸೆಲೆಬ್ರಿಟಿಗಳು ಬಂದು ಅಂತಿಮ ದರ್ಶನ ಪಡೆದಿದ್ದಾರೆ. ವಿಜಯ್ ರಾಘವೇಂದ್ರ ಪುತ್ರ ಶೌರ್ಯ ಅವರು ಅಜ್ಜಿಯ ಪಾರ್ಥಿವ ಶರೀರದ ಮುಂದೆ ಭಾವುಕವಾಗಿ ನಿಂತರು. ಕಳೆದ ಕೆಲವು ದಿನಗಳಿಂದ ಜಯಮ್ಮ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಅವರ ಅಗಲಿಕೆಗೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಈಡಿಗ ಸಂಪ್ರದಾಯದಂತೆ ಜಯಮ್ಮ ಅವರ ಅಂತ್ಯಕ್ರಿಯೆ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ: ಕಾಂಗ್ರೆಸ್ ಶಾಸಕರು ರೆಸಾರ್ಟ್​​ಗೆ ಶಿಫ್ಟ್ – Kannada News | Resort Politics returns In Karnataka Over Assembly Council Elections, Congress MLAs Shift

ಬೆಂಗಳೂರು, (ಜೂನ್ 16)​​: ಚುನಾವಣೆ ನಡೆದ ಸಂದರ್ಭಗಳಲ್ಲಿ ಯಾವುದೇ ಒಂದು ಪಕ್ಷಕ್ಕೆ ಬಹುಮತ ಬರದೇ ಹೋದಾಗ ಅಥವಾ ದಿಢೀರ್​ ರಾಜಕೀಯ ಅರಾಜಕತೆ ಉಂಟಾದಾಗ ವಿವಿಧ ಪಕ್ಷಗಳು ಸರ್ಕಾರ ರಚನೆ ಮಾಡಲು ಮುಂದಾಗಿ ಶಾಸಕರನ್ನು ಸೆಳೆಯಲು ಮುಂದಾಗುವುದು ಸಾಮಾನ್ಯ​. ಈ ವೇಳೆ ತಮ್ಮ ಪಕ್ಷದ ಸದಸ್ಯರನ್ನ ಸೇಫ್​ ಆಗಿ ಉಳಿಸಿಕೊಳ್ಳುವ ಉದ್ದೇಶದಿಂದ ವಿವಿಧ ಪಕ್ಷಗಳು ರೆಸಾರ್ಟ್​ ರಾಜಕೀಯದ (Resort Politics) ಮೊರೆ ಹೋಗುತ್ತವೆ. ಇದಕ್ಕೆ ಪೂರಕವೆಂಬಂತೆ ಈ ಹಿಂದೆ ಕರ್ನಾಟಕದಲ್ಲಿ (karnataka) ರೆಸಾರ್ಟ್ ರಾಜಕಾರಣ ನಡೆದಿತ್ತು. ಇದೀಗ ಮತ್ತೆ ರೆಸಾರ್ಟ್​ ಆರಂಭವಾಗಿದೆ. ಹೌದು….ವಿಧಾನ ಪರಿಷತ್ ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ಆತಂಕ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಮತಗಳ ರಕ್ಷಣೆಗಾಗಿ ರೆಸಾರ್ಟ್ ಮೊರೆಹೋಗಿದೆ.

ಕಾಂಗ್ರೆಸ್ ತನ್ನ ಎಲ್ಲಾ ಶಾಸಕರಿಗಾಗಿ ಬಿಡದಿಯ ವಂಡರ್ ಲಾ ರೆಸಾರ್ಟ್ ನಲ್ಲಿ 140 ರೂಮ್ ಬುಕ್ ಆಗಿದ್ದು,
ಎರಡು ದಿನ ಅಂದರೆ ಇಂದು ಜೂನ್ 16) ಮತ್ತು ನಾಳೆ (ಜೂನ್ 17) ರೆಸಾರ್ಟ್​​ನಲ್ಲಿ ತಂಗಲಿದ್ದಾರೆ. ಬಳಿಕ ಜೂನ್ 18ರಂದು ಬೆಳಗ್ಗೆ ನೇರವಾಗಿ ರೆಸಾರ್ಟ್​​​​ನಿಂದಲೇ ವಿಧಾನಸೌಧಕ್ಕೆ ಆಗಮಿಸಿ ಮತದಾನ ಮಾಡಲಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link