Category Archives: Blog

Your blog category

ಬೆಂಗಳೂರು ಸೇರಿ ರಾಜ್ಯದಲ್ಲಿ ಮಿತಿಮೀರಿದ ಬೀದಿ ನಾಯಿ ಹಾವಳಿ: ಕೇವಲ 4 ತಿಂಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಜನರಿಗೆ ನಾಯಿ ಕಡಿತ, 25 ಸಾವು – Kannada News | Dog Bite Cases in Bengaluru, Karnataka Spikes to 2 Lakh in 4 Months: 25 Deaths Reported, Health Dept on Alert

ಬೆಂಗಳೂರು, ಮೇ 6: ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ಇಡೀ ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಬೇಸಿಗೆಯ ತಾಪಮಾನ ಏರಿಕೆಯೊಂದಿಗೆ ಶ್ವಾನಗಳ ಆಕ್ರಮಣಶೀಲತೆಯೂ ಹೆಚ್ಚಾಗಿದ್ದು, ನಾಯಿ ಕಡಿತ ಪ್ರಕರಣಗಳ ಸಂಖ್ಯೆ ಆತಂಕಕಾರಿ ರೀತಿಯಲ್ಲಿ ದುಪ್ಪಟ್ಟಾಗಿದೆ. ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿರುವ ಇತ್ತೀಚಿನ ಅಂಕಿಅಂಶಗಳು ಸಾರ್ವಜನಿಕರಲ್ಲಿ ಭೀತಿ ಮೂಡಿಸುವಂತಿವೆ.

ಮುಖ್ಯಾಂಶಗಳು

  • ಏಪ್ರಿಲ್ ಒಂದೇ ತಿಂಗಳಲ್ಲಿ 50 ಸಾವಿರಕ್ಕೂ ಹೆಚ್ಚು ಪ್ರಕರಣ; 6 ಸಾವು.
  • ರಾಜ್ಯದಲ್ಲಿ ಕಳೆದ 4 ತಿಂಗಳಲ್ಲಿ 2,05,998 ನಾಯಿ ಕಡಿತ ಪ್ರಕರಣಗಳು ದಾಖಲು.
  • ನಾಯಿ ಕಡಿತದಿಂದಾಗಿ ಜನವರಿಯಿಂದ ಈವರೆಗೆ ರಾಜ್ಯದಲ್ಲಿ 25 ಜನರು ಬಲಿ.

ತಾಪಮಾನ ಏರಿಕೆಯೇ ಕಾರಣವಂತೆ!

ಸಾಮಾನ್ಯವಾಗಿ ಕ್ಯೂಟ್ ಮತ್ತು ಹ್ಯೂಮನ್ ಫ್ರೆಂಡ್ಲಿ ಎಂದೇ ಕರೆಸಿಕೊಳ್ಳುವ ನಾಯಿಗಳು ಬೇಸಿಗೆಯಲ್ಲಿ ತಾಪಮಾನ ಏರಿಕೆಯ ಕಾರಣದಿಂದ ಹೆಚ್ಚು ಆಕ್ರಮಣಕಾರಿಯಾಗುತ್ತವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಈ ವರ್ಷದ ತೀವ್ರವಾದ ಬೇಸಿಗೆಯು ನಾಯಿ ಕಡಿತ ಪ್ರಕರಣಗಳ ಸಂಖ್ಯೆಯನ್ನು ದಾಖಲೆ ಮಟ್ಟಕ್ಕೆ ಏರಿಸಿದೆ. ಈ ವರ್ಷದ ಆರಂಭದಿಂದ ಅಂದರೆ ಜನವರಿಯಿಂದ ಏಪ್ರಿಲ್ 26ರವರೆಗೆ ರಾಜ್ಯಾದ್ಯಂತ ಒಟ್ಟು 2,05,998 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ಅಷ್ಟೇ ಅಲ್ಲದೆ, ಕಳೆದ ಕೇವಲ ಒಂದು ವಾರದಲ್ಲಿ ರಾಜ್ಯದಲ್ಲಿ 11,879 ನಾಯಿ ಕಡಿತ ಪ್ರಕರಣಗಳು ವರದಿಯಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸಿದೆ.

ಆರೋಗ್ಯ ಇಲಾಖೆ ಹೈ ಅಲರ್ಟ್

ನಾಯಿ ಕಡಿತ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆಯ ಆಯುಕ್ತರಾದ ಗುರುದತ್ತ ಹೆಗಡೆ, ‘ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ನಾಯಿ ಕಡಿತಕ್ಕೆ ಅಗತ್ಯವಾದ ಆ್ಯಂಟಿ ರೇಬಿಸ್ ಲಸಿಕೆ (ARV) ಮತ್ತು ಆ್ಯಂಟಿ ಸ್ನೇಕ್ ವೆನಮ್ (ASV) ಔಷಧಿಗಳನ್ನು ಕಡ್ಡಾಯವಾಗಿ ಸಂಗ್ರಹಿಸಿಟ್ಟುಕೊಳ್ಳುವಂತೆ ಸೂಚಿಸಲಾಗಿದೆ. ಕನಿಷ್ಠ 10 ವೈಯಲ್ ಆ್ಯಂಟಿ ರೇಬಿಸ್ ಲಸಿಕೆ ದಾಸ್ತಾನು ಇರಿಸಿಕೊಳ್ಳುವುದು ಕಡ್ಡಾಯವಾಗಿದೆ’ ಎಂದು ತಿಳಿಸಿದ್ದಾರೆ.

ನಾಯಿ ಕಚ್ಚಿದರೆ ಏನು ಮಾಡಬೇಕು? ವೈದ್ಯರ ಸಲಹೆ ಏನು?

ಕೆಸಿ ಜನರಲ್ ಆಸ್ಪತ್ರೆಯ ಡೀನ್ ಡಾ. ಲಕ್ಷ್ಮಿಪತಿ ಅವರು ಮಾತನಾಡಿ, ಮನೆಯ ನಾಯಿಯೇ ಆಗಿರಲಿ ಅಥವಾ ಬೀದಿ ನಾಯಿಯೇ ಆಗಿರಲಿ, ಕಚ್ಚಿದರೆ ಅದನ್ನು ನಿರ್ಲಕ್ಷಿಸಬೇಡಿ. ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಮತ್ತು ವ್ಯಾಕ್ಸಿನೇಷನ್ ಪಡೆಯುವುದು ಅತ್ಯಗತ್ಯ. ರೇಬಿಸ್ ರೋಗವು ಮಾರಕವಾಗಿರುವುದರಿಂದ ನಿರ್ಲಕ್ಷ್ಯ ವಹಿಸುವುದು ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಒಂದೇ ತಿಂಗಳಲ್ಲಿ ಸಾವಿರಾರು ಜನರಿಗೆ ನಾಯಿ ಕಡಿತ; ಕಾಫಿನಾಡಿನಲ್ಲಿ ರಸ್ತೆಗಿಳಿಯಲೂ ಭಯಪಡುತ್ತಿರುವ ಜನರು!

ಒಟ್ಟಾರೆಯಾಗಿ, ವರ್ಷದ ಆರಂಭದ ಕೇವಲ ನಾಲ್ಕು ತಿಂಗಳಲ್ಲಿಯೇ ಲಕ್ಷಾಂತರ ಜನರು ಶ್ವಾನಗಳ ದಾಳಿಗೆ ತುತ್ತಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ಸಾರ್ವಜನಿಕರು ಈ ಬಗ್ಗೆ ಎಚ್ಚರವಹಿಸಿ, ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಈ ರಾಶಿಯವರು ಇಂದು ಹಿತಶತ್ರುಗಳಿಂದ ರಕ್ಷಿಸಿಕೊಳ್ಳುವುದು ಕಷ್ಟ – Kannada News | May 6th Daily Horoscope: Guard Against Hidden Enemies Know Your Zodiac Fate

ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸದ ಕೃಷ್ಣ ಪಕ್ಷದ ಪಂಚಮೀ ತಿಥಿಯ ಬುಧವಾರದಂದು ಆಪ್ತೆರ ಮೇಲೆ‌ ಅಸಹನೆ, ಅಪಪ್ರಚಾರ, ಸ್ಪರ್ಧೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ದೊಡ್ಡ ಗೆಲವು ಇವು ಇಂದಿನ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಭರಣೀ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ : ಸಿದ್ಧ, ಕರಣ : ಕೌಲವ, ಸೂರ್ಯೋದಯ – 06 – 01 am, ಸೂರ್ಯಾಸ್ತ – 06 – 40 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:31 – 17:06, ಯಮಗಂಡ ಕಾಲ 09:11 – 10:46, ಗುಳಿಕ ಕಾಲ 12:21 – 13:56

ಮೇಷ ರಾಶಿ :

ಸಂಗಾತಿಗೆ ಮಕ್ಕಳ ಆರೋಗ್ಯದ ವಿಷಯದಲ್ಲಿ ಗಮನವಿರಲಿ. ಪಾಲುದಾರರ ಕೈಜೋಡಿಸುವ ಮುನ್ನ ಯೋಚಿಸಿ. ಮಕ್ಕಳಿಂದ ನಿಮಗೆ ಬೆಂಬಲ ಮತ್ತು ಸಂತೋಷ ಸಿಗುತ್ತದೆ. ಮಾಡುವ ಕಾರ್ಯದ ಉದ್ದೇಶ ನಿಮಗೆ ಅರಿವಿಲ್ಲದೇ ಬದಲಾಗುವುದು. ಉತ್ತಮ‌ ಆದಾಯವನ್ನು ಉಳಿಸಿಕೊಳ್ಳಿ. ಎಷ್ಟೇ ತೊಂದರೆಯಾದರೂ ಇನ್ನೊಬ್ಬರಿಗೆ ನೋವನ್ನು ಕೊಡುವುದು ಇಷ್ಟವಾಗದು. ಕೇಳಿದವರಿಗೆ ನಿಮ್ಮ ಸಹಾಯವು ಸಿಗಲಿದೆ.

ವೃಷಭ ರಾಶಿ :

ನಿಮ್ಮ ಸಾಮರ್ಥ್ಯವನ್ನು ವ್ಯಕ್ತಪಡಿಸಲು ಸಕಾಲ. ಅಹಂಕಾರದಿಂದ ವರ್ತಿಸಿ ಮನೆಯವರಿಂದ ನಿಂದನೆ. ನೀವು ಸಾಲವಾಗಿ ನೀಡಿದ ಹಣವನ್ನು ಮರಳಿ ಪಡೆಯುವ ಮೂಲಕ ನಿಮ್ಮ ಹಣದ ಸಮಸ್ಯೆ ಬಗೆಹರಿಯುತ್ತದೆ. ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳಿ. ಸಮಾಜಮುಖಿಯಾಗಿ ನಿಮ್ಮ ಕಾರ್ಯಗಳು ಹೆಚ್ಚು ಪ್ರಬಲವಾಗಬಹುದು. ವಿವಾಹಕ್ಕೆ ಸಂಬಂಧಿಸಿದ ದೋಷಗಳನ್ನು ದೈವಜ್ಞರ ಬಳಿ ಕೇಳಿ ಸರಿಪಡಿಸಿಕೊಳ್ಳಿ.

ಮಿಥುನ ರಾಶಿ :

ಇಂದು ಅತಿಯಾದ ಪ್ರಶಂಸೆ ನಿಮ್ಮನ್ನು ಹಾಳುಮಾಡುವುದು. ಅತಿಥಿಗಳ ಆಗಮನದಿಂದ ಮನೆಯ ವಾತಾವರಣ ಆಹ್ಲಾದಕರವಾಗಿರುತ್ತದೆ. ಮೊದಲು ವಾದ ಮಾಡಿ ಅನಂತರ ಭಯಗೊಳ್ಳುವಿರಿ. ವಿರೋಧಿಗಳು ಸಕ್ರಿಯರಾಗಿರುತ್ತಾರೆ. ವಿವಾದಾತ್ಮಕ ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಯಂತ್ರಜ್ಞರು ಇಂದು ಬಹಳ ಒತ್ತಡದಿಂದ ಇರುವರು. ಸ್ವಲ್ಪ ಮಾನಸಿಕ ಆಲಸ್ಯವು ಇರುವುದು. ಗೊಂದಲವನ್ನು ಇನ್ನೊಬ್ಬರ ಬಳಿ ಹೇಳಿ.

ಕರ್ಕಾಟಕ ರಾಶಿ :

ಉದ್ಯೋಗದಲ್ಲಿ ಸ್ವಲ್ಪ ಏರಳಿತಗಳನ್ನು ಎದುರಿಸಬೇಕಾದೀತು. ಪ್ರಯತ್ನಗಳು ಇಂದು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ನೀವು ಸಾಲವಾಗಿ ನೀಡಿದ ಅಥವಾ ಸಿಲುಕಿಕೊಂಡಿದ್ದ ಹಣವನ್ನು ಮರಳಿ ಪಡೆಯಬಹುದು. ವಿವಾಹಕ್ಕೆ ಒತ್ತಡ ಅಧಿಕವಾಗಲಿದೆ. ಹೆಚ್ಚು ಒತ್ತಡ ತೆಗೆದುಕೊಂಡು ಓಡಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೊಸ ಜನ, ಹೊಸ ಸ್ಥಳ ಹಾಗೂ ಹೊಸ ವಿಚಾರದ ಕಡೆ ಗಮನವು ಬೇಕೆನಿಸುವುದು. ನಿಮ್ಮ ಯಶಸ್ಸನ್ನು ಮನೆಯವರು ಸಂಭ್ರಮಿಸಬಹುದು.

ಸಿಂಹ ರಾಶಿ :

ಅಪರಿಚಿತ ಸ್ಥಳದಲ್ಲಿ ವಾಸ ಮಾಡಿ ಭಯಪಡುವಿರಿ. ನಿಮ್ಮ ಕನಸುಗಳನ್ನು ನನಸಾಗಿಸುವ ಸಮಯ ಬಂದಿದೆ. ಕೆಲಸವನ್ನು ಸರಿಯಾಗಿ ಮಾಡುವುದು ನಿಮ್ಮನ್ನು ಯಶಸ್ವಿಯಾಗಿಸುತ್ತದೆ. ಭವಿಷ್ಯದ ಬಗ್ಗೆ ಯುವಕರ ಪ್ರಯತ್ನಗಳು ಅಫಲವಾಗುವುದು. ನೀವು ಅಂದುಕೊಂಡಿದ್ದನ್ನೇ ಮಾಡುವ ಛಾತಿ ಇರುವುದು. ಎಲ್ಲವನ್ನೂ ನಂಬಿಕೆಯ ಆಧಾರದ ಮೇಲೆ ಸ್ವೀಕರಿಸಬೇಕಿಲ್ಲ. ಸರ್ಕಾರಿ ಉದ್ಯೋಗಿಗಳಿಗೆ ನಿಮ್ಮ ಚಾತುರ್ಯದ ಕಾರಣದಿಂದ ಹೆಚ್ಚಿನ ಅಧಿಕಾರ ಪ್ರಾಪ್ತಿ

ಕನ್ಯಾ ರಾಶಿ :

ಸಂಗಾತಿಯ ಜೊತೆ ಕಾಲ ಕಳೆದು ಖುಷಿಕೊಡುವಿರಿ. ನೀವು ದೇಹಕ್ಕೆ ಪರಿಮಳ ದ್ರವ್ಯಗಳನ್ನು ಲೇಪಿಸಿಕೊಳ್ಳುವಿರಿ ಹಾಗೂ ಅನೇಕ ವಸ್ತುಗಳನ್ನು ಖರೀದಿಸುವಿರಿ. ಕೆಲಸವನ್ನು ಮಾಡುವ ಮೊದಲು, ಅದರ ಪ್ರತಿಯೊಂದು ಅಂಶದ ಬಗ್ಗೆ ಎಚ್ಚರಿಕೆಯಿಂದ ಯೋಚಿಸಿ. ಇದು ಪ್ರಗತಿಯ ಹೊಸ ಹಾದಿಗಳನ್ನು ತೆರೆಯುತ್ತದೆ. ಬಂಧುಗಳು ನಿಮ್ಮವರ ಬಗ್ಗೆ ಆಡಿಕೊಳ್ಳುವಾಗ ನಿಮಗೆ ಸಹಿಸಲಾಗದು. ನಿಮ್ಮ ಶ್ರಮದ‌ ಸಾಧನೆಯನ್ನು ಇತರರ ಜೊತೆ ಹಂಚಿಕೊಳ್ಳುವಿರಿ.

ತುಲಾ ರಾಶಿ :

ಪರರಿಗೆ ಕೊಟ್ಟ ಧನವು ನಿಮ್ಮ ಕೈ ಸೇರುವುದು. ಸರಳ ಸ್ವಭಾವವು ನಿಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಸುಧಾರಿಸುತ್ತದೆ. ಇಂದು ನೀವು ನಿಮ್ಮ ಗುರಿಯ ಮೇಲೆ ಪೂರ್ಣ ಗಮನ ಹರಿಸಿ ಮುಂದುವರಿಯುತ್ತೀರಿ ಮತ್ತು ಯಶಸ್ಸು ಸಿಗುತ್ತದೆ. ಸೂಕ್ಷ್ಮ ವಿಚಾರಗಳನ್ನು ತಾಳ್ಮೆಯಿಂದ ನಿರ್ವಹಿಸುವುದು ಒಳ್ಳೆಯದು. ಮನೆಯ ನಿರ್ಮಾಣವು ಅಪೂರ್ಣವಾಗಿ ನಿಲ್ಲುವುದು. ಜೀವನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಗಟ್ಟಿಯಾದ ತೀರ್ಮಾನವನ್ನು ಪಡೆಯುವುದು ಕಷ್ಟವಾಗುವುದು.

ವೃಶ್ಚಿಕ ರಾಶಿ :

ಪಾಲುದಾರಿಕೆಯ ವ್ಯವಹಾರಗಳಲ್ಲಿ ಸಂಯಮವಿರಲಿ. ತಪ್ಪು ಕಲ್ಪನೆ ಹೊಂದಿರುವ ಜನರಿಂದ ದೂರವಿರಿ, ದೇವರಲ್ಲಿ ಭಕ್ತಿ ಹೆಚ್ಚಾಗುವುದು. ಅವರ ತಪ್ಪು ಸಲಹೆಯು ನಿಮ್ಮ ಗುರಿಯಿಂದ ನಿಮ್ಮನ್ನು ಬೇರೆಡೆಗೆ ಸೆಳೆಯಬಹುದು. ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೊದಲು ಚಿಂತನಶೀಲವಾಗಿ ಹೆಜ್ಜೆಗಳನ್ನು ಇರಿಸಿ. ಮಾತುಗಾರರಿಗೆ ಒಳ್ಳೆಯ ಅವಕಾಶಗಳು ಸಿಗಲಿದೆ. ದಾಂಪತ್ಯದಲ್ಲಿ ಪರಸ್ಪರ ನೋವು ಹಂಚಿಕೊಂಡು ಸಮಾಧಾನವಾಗುವಿರಿ.

ಧನು ರಾಶಿ :

ಆರ್ಥಿಕ ಸ್ಥಿತಿಯಿಂದ ಸಂತಸ. ಮನಸ್ತಾಪವನ್ನು ಮುಂದುವರಿಸದೇ ಅರ್ಧಕ್ಕೆ ನಿಲ್ಲಿಸಿ. ಹೆಚ್ಚಿನ ಕೆಲಸದ ಹೊರೆ ಇರುತ್ತದೆ. ಆದರೆ ಬೆಂಬಲ ಸಿಗಲಿದೆ. ಎದುರಾಳಿಗಳ ಮೇಲೆ ಪ್ರಾಬಲ್ಯ ಸಾಧಿಸುವಿರಿ. ಮಧ್ಯಾಹ್ನದ ಸಮಯವು ಅತ್ಯುತ್ತಮವಾಗಿರುತ್ತದೆ. ಆದಾಯ ಹೆಚ್ಚಾಗಬಹುದು ಮತ್ತು ಸಾಕಷ್ಟು ಹಣ ಸಿಗಬಹುದು. ಪ್ರಯಾಣದ ಸಾಧ್ಯತೆ ಇದೆ. ನಿಮ್ಮ ಹಠದ ಸ್ವಭಾವವು ಜೊತೆಗಾರರಿಗೆ ಕಷ್ಟವಾದೀತು. ಯಾರಮೇಲೂ ಒತ್ತಡಬೇಡ.

ಮಕರ ರಾಶಿ :

ಯಾರೋ ಮಾಡಿದ ತಪ್ಪನ್ನು ನಿಮ್ಮ ಮೇಲೆ ಹಾಕಲು ಪ್ರಯತ್ನಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುವಿರಿ. ನೀವಾಡುವ ಮಾತಿನ ಮೇಲೆ ನಂಬಿಕೆ ವಾರದು. ಕೆಲವು ಸಮಯದಿಂದ ಅಡೆತಡೆಗಳನ್ನು ಎದುರಿಸುತ್ತಿದ್ದ ಕೆಲಸಗಳು ಇಂದು ಸುಲಭವಾಗಿ ಪೂರ್ಣಗೊಳ್ಳುತ್ತವೆ. ದೂರ ಪ್ರಯಾಣವನ್ನು ಮಾಡಬೇಕಾಗಬಹುದು. ಸ್ಥಿರಾಸ್ತಿಗಾಗಿ ಹೆಚ್ಚು ಓಡಾಡುವಿರಿ. ವಿದೇಶ ಪ್ರಯಾಣವು ನಿಮಗೆ ಇಷ್ಟವಿಲ್ಲದಿದ್ದರೂ ಮಾಡುವುದು ಅನಿವಾರ್ಯವಾದೀತು.

ಇದನ್ನೂ ಓದಿ: ಹೂಡಿಕೆಯನ್ನು ಪ್ರತಿಷ್ಠೆಯಾಗಿ ಈ ತಿಂಗಳಲ್ಲಿ ಕಾಣುವುದು ಬೇಡ

ಕುಂಭ ರಾಶಿ :

ಆರೋಗ್ಯದಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಾಸವಾಗಬಹುದು. ಹಸ್ತಕ್ಷೇಪ ಮಾಡಬೇಡಿ ಮತ್ತು ಪರಿಸ್ಥಿತಿಯನ್ನು ಸುಧಾರಿಸಲು ತಪ್ಪು ಕೆಲಸಗಳನ್ನು ಮಾಡಬೇಡಿ. ನಿಮ್ಮ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸುವುದನ್ನು ಮುಂದುವರಿಸಿ. ಸರ್ಕಾರಿ ಕಛೇರಿಯ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತವೆ. ಮನೆಯಲ್ಲಿ ನಡೆಯುವ ಶುಭ ಕಾರ್ಯಗಳಿಗೆ ಮಕ್ಕಳ ಸಹಕಾರವಿರುವುದು. ಸರ್ಕಾರದ ಕಡೆಯಿಂದ ಆಗಬೇಕಾದ ನಿಮ್ಮ ಕೆಲಸವು ಬೇಗನೆ ಮುಕ್ತಾಯ.

ಮೀನ ರಾಶಿ :

ಇಂದು ವ್ಯಾವಹಾರಿಕ ನಷ್ಟವು ನಿಮ್ಮ ಗಮನಕ್ಕೆ ಬಾರದೇ ಇರುವುದು. ಬೇಜವಾಬ್ದಾರಿಯ ಉತ್ತರವನ್ನು ಕೊಡುವುದು ಬೇಡ. ಆಲೋಚಿಸದೇ ಯಾವುದೇ ಸಾಹಸದ ಕಾರ್ಯದಲ್ಲಿ ತೊಡಗುವುದು ಬೇಡ. ಸಮಯವನ್ನು ವ್ಯರ್ಥ ಮಾಡದೆ ನಿಮ್ಮ ಗುರಿಯ ಕಡೆ ಮುಖ ಮಾಡಲಿದ್ದೀರಿ. ತಂದೆಯಿಂದ ಬೆಂಬಲ ಸಿಗಲಿದೆ. ಉದ್ಯೋಗಸ್ಥ ಮಹಿಳೆಯರು ವರ್ಗಾವಣೆಗೆ ಪ್ರಯತ್ನಿಸುವಿರಿ. ಆಪ್ತರ ಜೊತೆಗಿನ ಮಾತುಕತೆಯು ನಿಮಗೆ ಆಹ್ಲಾದವನ್ನು ಉಂಟುಮಾಡುವುದು.

-ಲೋಹಿತ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:05 am, Wed, 6 May 26

Source link

ಬೆಂಗಳೂರಿನಲ್ಲಿ ಇಂದು ಸಂಜೆ ಭಾರೀ ಮಳೆ: ಬಿಸಿಯಲ್ಲಿ ಬೆಂದು ಹೋಗಿದ್ದ ಮಂಗಳೂರಿಗೆ ವರುಣನ ಸಿಂಚನ – Kannada News | Bengaluru Rain Today: Coastal Thunderstorms and Karnataka Heatwave Forecast

ಬೆಂಗಳೂರು, ಮೇ.6: ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಇಂದು ಮೋಡಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಉತ್ತರ ಕರ್ನಾಟಕದ ಕಡೆ ಕೂಡ ಮಳೆಯಾಗಲಿದೆ. ಬೆಂಗಳೂರಿನಲ್ಲಿ ನೆನ್ನೆ ರಾತ್ರಿಯಿಂದ ಮಳೆಯಾಗಿದೆ, ಬೆಳಿಗ್ಗೆ ತುಂಬಾ ತಂಪಿನ ವಾತಾವರಣ ಇತ್ತು. ಇದೀಗ ಇಂದು ಕೂಡ ಮಳೆಯಾಗುವ ಸಾಧ್ಯತೆ ಇದೆ. ಬಿಸಿಯಲ್ಲಿ ಬೆಂದು ಹೋಗಿದ್ದ ಬೆಂದಕಾಳೂರಿಗೆ ಇದೀಗ ತಂಪು ಗಾಳಿ ಬಿಸಿದೆ. ಇನ್ನು ಕರಾವಳಿಯಲ್ಲೂ ಕೂಡ ಇಂದು ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಬೆಂಗಳೂರು ಮತ್ತು ಸುತ್ತಮುತ್ತ ನಗರದಲ್ಲಿ ಗರಿಷ್ಠ ತಾಪಮಾನ 34°C ಮತ್ತು ಕನಿಷ್ಠ ತಾಪಮಾನ 22°C ಇರಲಿದ್ದು, ಸಂಜೆಯ ವೇಳೆಗೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಮಂಗಳೂರು, ಉಡುಪಿ ಮತ್ತು ಕಾರವಾರ ಭಾಗಗಳಲ್ಲಿ ಉಷ್ಣಾಂಶ ಮತ್ತು ಆರ್ದ್ರತೆ ಹೆಚ್ಚಿರಲಿದ್ದು, ಅಲ್ಲಲ್ಲಿ ಹಗುರ ಮಳೆಯಾಗಬಹುದು. ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದ್ದು, ತಾಪಮಾನವು 38°C ದಾಟುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಸಂಜೆ ಅಥವಾ ರಾತ್ರಿಯ ವೇಳೆಗೆ ಸಾಧಾರಣ ಮಳೆ ಬೆಂಗಳೂರಿನಲ್ಲಿ ಭಾರೀ ಮಳೆ

ಉತ್ತರ ಕರ್ನಾಟಕದ ಕಡೆ ಕೂಡ ಮಳೆಯಾಗಲಿದೆ

ಕರಾವಳಿಯಲ್ಲೂ ಕೂಡ ಇಂದು ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ

ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.

ಇದನ್ನೂ ಓದಿ: ನಾಳೆಯಿಂದ ಮಂಗಳೂರಿನ ಜನ ಕೂಲ್​ ಕೂಲ್: ದಕ್ಷಿಣ ಕನ್ನಡ ಮತ್ತು ಉಡುಪಿಯ ಈ ಭಾಗಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ಮೈಸೂರು, ಕೊಡಗು ಮತ್ತು ಚಿಕ್ಕಮಗಳೂರು ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಿರಲಿದ್ದು, ಕಾಫಿ ಬೆಳೆಗಾರರಿಗೆ ಇದು ಆಶಾದಾಯಕವಾಗಿದೆ. ಇನ್ನು ಮುಂದಿನ 3 ದಿನಗಳ ಕಾಲ ರಾಜ್ಯದ ಹಲವು ಕಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಕಾರಣಕ್ಕೆ ಎಲ್ಲೋ ಅಲರ್ಟ್​​​ ಘೋಷಣೆಯನ್ನು ಮಾಡಲಾಗಿದೆ. ಮಲೆನಾಡು ಭಾಗದ ಈ ಜಿಲ್ಲೆಗಳಲ್ಲಿ ಹವಾಮಾನ ಆಹ್ಲಾದಕರವಾಗಿದ್ದು, ಮಳೆಯ ಪ್ರಮಾಣ ಹೆಚ್ಚಿರಲಿದೆ. ಇಲ್ಲಿ ಗರಿಷ್ಠ ತಾಪಮಾನವು 30°C ಇಂದ 32°C ವರೆಗೆ ದಾಖಲಾಗಬಹುದು. ಕಾಫಿ ಬೆಳೆಗಾರರಿಗೆ ಪೂರಕವಾದ ತಂಪಾದ ಗಾಳಿ ಮತ್ತು ಸಾಧಾರಣ ಮಳೆ ನಿರೀಕ್ಷಿಸಲಾಗಿದೆ.

ದಕ್ಷಿಣ ಒಳನಾಡಿನ ಹಾಸನ ಜಿಲ್ಲೆಯಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದ ಈ ಭಾಗಗಳಲ್ಲಿ ಬಿಸಿಲ ಬೇಗೆ ತೀವ್ರವಾಗಿರಲಿದೆ. ರಾಯಚೂರಿನಲ್ಲಿ ಒಣಹವೆ ಮುಂದುವರಿಯಲಿದ್ದು, ತಾಪಮಾನವು 38°C ಗಿಂತಲೂ ಹೆಚ್ಚಿರಲಿದೆ. ಹುಬ್ಬಳ್ಳಿಯಲ್ಲೂ ತಾಪಮಾನ ಏರಿಕೆಯಾಗಲಿದ್ದು, ಸೆಖೆ ಹೆಚ್ಚಿರಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಈ ರಾಶಿಯವರು ಇಂದು ಹಿತಶತ್ರುಗಳಿಂದ ರಕ್ಷಿಸಿಕೊಳ್ಳುವುದು ಕಷ್ಟ – Kannada News | May 6th Daily Horoscope: Guard Against Hidden Enemies Know Your Zodiac Fate

ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸದ ಕೃಷ್ಣ ಪಕ್ಷದ ಪಂಚಮೀ ತಿಥಿಯ ಬುಧವಾರದಂದು ಆಪ್ತೆರ ಮೇಲೆ‌ ಅಸಹನೆ, ಅಪಪ್ರಚಾರ, ಸ್ಪರ್ಧೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ದೊಡ್ಡ ಗೆಲವು ಇವು ಇಂದಿನ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಭರಣೀ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ : ಸಿದ್ಧ, ಕರಣ : ಕೌಲವ, ಸೂರ್ಯೋದಯ – 06 – 01 am, ಸೂರ್ಯಾಸ್ತ – 06 – 40 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:31 – 17:06, ಯಮಗಂಡ ಕಾಲ 09:11 – 10:46, ಗುಳಿಕ ಕಾಲ 12:21 – 13:56

ಮೇಷ ರಾಶಿ :

ಸಂಗಾತಿಗೆ ಮಕ್ಕಳ ಆರೋಗ್ಯದ ವಿಷಯದಲ್ಲಿ ಗಮನವಿರಲಿ. ಪಾಲುದಾರರ ಕೈಜೋಡಿಸುವ ಮುನ್ನ ಯೋಚಿಸಿ. ಮಕ್ಕಳಿಂದ ನಿಮಗೆ ಬೆಂಬಲ ಮತ್ತು ಸಂತೋಷ ಸಿಗುತ್ತದೆ. ಮಾಡುವ ಕಾರ್ಯದ ಉದ್ದೇಶ ನಿಮಗೆ ಅರಿವಿಲ್ಲದೇ ಬದಲಾಗುವುದು. ಉತ್ತಮ‌ ಆದಾಯವನ್ನು ಉಳಿಸಿಕೊಳ್ಳಿ. ಎಷ್ಟೇ ತೊಂದರೆಯಾದರೂ ಇನ್ನೊಬ್ಬರಿಗೆ ನೋವನ್ನು ಕೊಡುವುದು ಇಷ್ಟವಾಗದು. ಕೇಳಿದವರಿಗೆ ನಿಮ್ಮ ಸಹಾಯವು ಸಿಗಲಿದೆ.

ವೃಷಭ ರಾಶಿ :

ನಿಮ್ಮ ಸಾಮರ್ಥ್ಯವನ್ನು ವ್ಯಕ್ತಪಡಿಸಲು ಸಕಾಲ. ಅಹಂಕಾರದಿಂದ ವರ್ತಿಸಿ ಮನೆಯವರಿಂದ ನಿಂದನೆ. ನೀವು ಸಾಲವಾಗಿ ನೀಡಿದ ಹಣವನ್ನು ಮರಳಿ ಪಡೆಯುವ ಮೂಲಕ ನಿಮ್ಮ ಹಣದ ಸಮಸ್ಯೆ ಬಗೆಹರಿಯುತ್ತದೆ. ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳಿ. ಸಮಾಜಮುಖಿಯಾಗಿ ನಿಮ್ಮ ಕಾರ್ಯಗಳು ಹೆಚ್ಚು ಪ್ರಬಲವಾಗಬಹುದು. ವಿವಾಹಕ್ಕೆ ಸಂಬಂಧಿಸಿದ ದೋಷಗಳನ್ನು ದೈವಜ್ಞರ ಬಳಿ ಕೇಳಿ ಸರಿಪಡಿಸಿಕೊಳ್ಳಿ.

ಮಿಥುನ ರಾಶಿ :

ಇಂದು ಅತಿಯಾದ ಪ್ರಶಂಸೆ ನಿಮ್ಮನ್ನು ಹಾಳುಮಾಡುವುದು. ಅತಿಥಿಗಳ ಆಗಮನದಿಂದ ಮನೆಯ ವಾತಾವರಣ ಆಹ್ಲಾದಕರವಾಗಿರುತ್ತದೆ. ಮೊದಲು ವಾದ ಮಾಡಿ ಅನಂತರ ಭಯಗೊಳ್ಳುವಿರಿ. ವಿರೋಧಿಗಳು ಸಕ್ರಿಯರಾಗಿರುತ್ತಾರೆ. ವಿವಾದಾತ್ಮಕ ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಯಂತ್ರಜ್ಞರು ಇಂದು ಬಹಳ ಒತ್ತಡದಿಂದ ಇರುವರು. ಸ್ವಲ್ಪ ಮಾನಸಿಕ ಆಲಸ್ಯವು ಇರುವುದು. ಗೊಂದಲವನ್ನು ಇನ್ನೊಬ್ಬರ ಬಳಿ ಹೇಳಿ.

ಕರ್ಕಾಟಕ ರಾಶಿ :

ಉದ್ಯೋಗದಲ್ಲಿ ಸ್ವಲ್ಪ ಏರಳಿತಗಳನ್ನು ಎದುರಿಸಬೇಕಾದೀತು. ಪ್ರಯತ್ನಗಳು ಇಂದು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ನೀವು ಸಾಲವಾಗಿ ನೀಡಿದ ಅಥವಾ ಸಿಲುಕಿಕೊಂಡಿದ್ದ ಹಣವನ್ನು ಮರಳಿ ಪಡೆಯಬಹುದು. ವಿವಾಹಕ್ಕೆ ಒತ್ತಡ ಅಧಿಕವಾಗಲಿದೆ. ಹೆಚ್ಚು ಒತ್ತಡ ತೆಗೆದುಕೊಂಡು ಓಡಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೊಸ ಜನ, ಹೊಸ ಸ್ಥಳ ಹಾಗೂ ಹೊಸ ವಿಚಾರದ ಕಡೆ ಗಮನವು ಬೇಕೆನಿಸುವುದು. ನಿಮ್ಮ ಯಶಸ್ಸನ್ನು ಮನೆಯವರು ಸಂಭ್ರಮಿಸಬಹುದು.

ಸಿಂಹ ರಾಶಿ :

ಅಪರಿಚಿತ ಸ್ಥಳದಲ್ಲಿ ವಾಸ ಮಾಡಿ ಭಯಪಡುವಿರಿ. ನಿಮ್ಮ ಕನಸುಗಳನ್ನು ನನಸಾಗಿಸುವ ಸಮಯ ಬಂದಿದೆ. ಕೆಲಸವನ್ನು ಸರಿಯಾಗಿ ಮಾಡುವುದು ನಿಮ್ಮನ್ನು ಯಶಸ್ವಿಯಾಗಿಸುತ್ತದೆ. ಭವಿಷ್ಯದ ಬಗ್ಗೆ ಯುವಕರ ಪ್ರಯತ್ನಗಳು ಅಫಲವಾಗುವುದು. ನೀವು ಅಂದುಕೊಂಡಿದ್ದನ್ನೇ ಮಾಡುವ ಛಾತಿ ಇರುವುದು. ಎಲ್ಲವನ್ನೂ ನಂಬಿಕೆಯ ಆಧಾರದ ಮೇಲೆ ಸ್ವೀಕರಿಸಬೇಕಿಲ್ಲ. ಸರ್ಕಾರಿ ಉದ್ಯೋಗಿಗಳಿಗೆ ನಿಮ್ಮ ಚಾತುರ್ಯದ ಕಾರಣದಿಂದ ಹೆಚ್ಚಿನ ಅಧಿಕಾರ ಪ್ರಾಪ್ತಿ

ಕನ್ಯಾ ರಾಶಿ :

ಸಂಗಾತಿಯ ಜೊತೆ ಕಾಲ ಕಳೆದು ಖುಷಿಕೊಡುವಿರಿ. ನೀವು ದೇಹಕ್ಕೆ ಪರಿಮಳ ದ್ರವ್ಯಗಳನ್ನು ಲೇಪಿಸಿಕೊಳ್ಳುವಿರಿ ಹಾಗೂ ಅನೇಕ ವಸ್ತುಗಳನ್ನು ಖರೀದಿಸುವಿರಿ. ಕೆಲಸವನ್ನು ಮಾಡುವ ಮೊದಲು, ಅದರ ಪ್ರತಿಯೊಂದು ಅಂಶದ ಬಗ್ಗೆ ಎಚ್ಚರಿಕೆಯಿಂದ ಯೋಚಿಸಿ. ಇದು ಪ್ರಗತಿಯ ಹೊಸ ಹಾದಿಗಳನ್ನು ತೆರೆಯುತ್ತದೆ. ಬಂಧುಗಳು ನಿಮ್ಮವರ ಬಗ್ಗೆ ಆಡಿಕೊಳ್ಳುವಾಗ ನಿಮಗೆ ಸಹಿಸಲಾಗದು. ನಿಮ್ಮ ಶ್ರಮದ‌ ಸಾಧನೆಯನ್ನು ಇತರರ ಜೊತೆ ಹಂಚಿಕೊಳ್ಳುವಿರಿ.

ತುಲಾ ರಾಶಿ :

ಪರರಿಗೆ ಕೊಟ್ಟ ಧನವು ನಿಮ್ಮ ಕೈ ಸೇರುವುದು. ಸರಳ ಸ್ವಭಾವವು ನಿಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಸುಧಾರಿಸುತ್ತದೆ. ಇಂದು ನೀವು ನಿಮ್ಮ ಗುರಿಯ ಮೇಲೆ ಪೂರ್ಣ ಗಮನ ಹರಿಸಿ ಮುಂದುವರಿಯುತ್ತೀರಿ ಮತ್ತು ಯಶಸ್ಸು ಸಿಗುತ್ತದೆ. ಸೂಕ್ಷ್ಮ ವಿಚಾರಗಳನ್ನು ತಾಳ್ಮೆಯಿಂದ ನಿರ್ವಹಿಸುವುದು ಒಳ್ಳೆಯದು. ಮನೆಯ ನಿರ್ಮಾಣವು ಅಪೂರ್ಣವಾಗಿ ನಿಲ್ಲುವುದು. ಜೀವನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಗಟ್ಟಿಯಾದ ತೀರ್ಮಾನವನ್ನು ಪಡೆಯುವುದು ಕಷ್ಟವಾಗುವುದು.

ವೃಶ್ಚಿಕ ರಾಶಿ :

ಪಾಲುದಾರಿಕೆಯ ವ್ಯವಹಾರಗಳಲ್ಲಿ ಸಂಯಮವಿರಲಿ. ತಪ್ಪು ಕಲ್ಪನೆ ಹೊಂದಿರುವ ಜನರಿಂದ ದೂರವಿರಿ, ದೇವರಲ್ಲಿ ಭಕ್ತಿ ಹೆಚ್ಚಾಗುವುದು. ಅವರ ತಪ್ಪು ಸಲಹೆಯು ನಿಮ್ಮ ಗುರಿಯಿಂದ ನಿಮ್ಮನ್ನು ಬೇರೆಡೆಗೆ ಸೆಳೆಯಬಹುದು. ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೊದಲು ಚಿಂತನಶೀಲವಾಗಿ ಹೆಜ್ಜೆಗಳನ್ನು ಇರಿಸಿ. ಮಾತುಗಾರರಿಗೆ ಒಳ್ಳೆಯ ಅವಕಾಶಗಳು ಸಿಗಲಿದೆ. ದಾಂಪತ್ಯದಲ್ಲಿ ಪರಸ್ಪರ ನೋವು ಹಂಚಿಕೊಂಡು ಸಮಾಧಾನವಾಗುವಿರಿ.

ಧನು ರಾಶಿ :

ಆರ್ಥಿಕ ಸ್ಥಿತಿಯಿಂದ ಸಂತಸ. ಮನಸ್ತಾಪವನ್ನು ಮುಂದುವರಿಸದೇ ಅರ್ಧಕ್ಕೆ ನಿಲ್ಲಿಸಿ. ಹೆಚ್ಚಿನ ಕೆಲಸದ ಹೊರೆ ಇರುತ್ತದೆ. ಆದರೆ ಬೆಂಬಲ ಸಿಗಲಿದೆ. ಎದುರಾಳಿಗಳ ಮೇಲೆ ಪ್ರಾಬಲ್ಯ ಸಾಧಿಸುವಿರಿ. ಮಧ್ಯಾಹ್ನದ ಸಮಯವು ಅತ್ಯುತ್ತಮವಾಗಿರುತ್ತದೆ. ಆದಾಯ ಹೆಚ್ಚಾಗಬಹುದು ಮತ್ತು ಸಾಕಷ್ಟು ಹಣ ಸಿಗಬಹುದು. ಪ್ರಯಾಣದ ಸಾಧ್ಯತೆ ಇದೆ. ನಿಮ್ಮ ಹಠದ ಸ್ವಭಾವವು ಜೊತೆಗಾರರಿಗೆ ಕಷ್ಟವಾದೀತು. ಯಾರಮೇಲೂ ಒತ್ತಡಬೇಡ.

ಮಕರ ರಾಶಿ :

ಯಾರೋ ಮಾಡಿದ ತಪ್ಪನ್ನು ನಿಮ್ಮ ಮೇಲೆ ಹಾಕಲು ಪ್ರಯತ್ನಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುವಿರಿ. ನೀವಾಡುವ ಮಾತಿನ ಮೇಲೆ ನಂಬಿಕೆ ವಾರದು. ಕೆಲವು ಸಮಯದಿಂದ ಅಡೆತಡೆಗಳನ್ನು ಎದುರಿಸುತ್ತಿದ್ದ ಕೆಲಸಗಳು ಇಂದು ಸುಲಭವಾಗಿ ಪೂರ್ಣಗೊಳ್ಳುತ್ತವೆ. ದೂರ ಪ್ರಯಾಣವನ್ನು ಮಾಡಬೇಕಾಗಬಹುದು. ಸ್ಥಿರಾಸ್ತಿಗಾಗಿ ಹೆಚ್ಚು ಓಡಾಡುವಿರಿ. ವಿದೇಶ ಪ್ರಯಾಣವು ನಿಮಗೆ ಇಷ್ಟವಿಲ್ಲದಿದ್ದರೂ ಮಾಡುವುದು ಅನಿವಾರ್ಯವಾದೀತು.

ಇದನ್ನೂ ಓದಿ: ಹೂಡಿಕೆಯನ್ನು ಪ್ರತಿಷ್ಠೆಯಾಗಿ ಈ ತಿಂಗಳಲ್ಲಿ ಕಾಣುವುದು ಬೇಡ

ಕುಂಭ ರಾಶಿ :

ಆರೋಗ್ಯದಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಾಸವಾಗಬಹುದು. ಹಸ್ತಕ್ಷೇಪ ಮಾಡಬೇಡಿ ಮತ್ತು ಪರಿಸ್ಥಿತಿಯನ್ನು ಸುಧಾರಿಸಲು ತಪ್ಪು ಕೆಲಸಗಳನ್ನು ಮಾಡಬೇಡಿ. ನಿಮ್ಮ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸುವುದನ್ನು ಮುಂದುವರಿಸಿ. ಸರ್ಕಾರಿ ಕಛೇರಿಯ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತವೆ. ಮನೆಯಲ್ಲಿ ನಡೆಯುವ ಶುಭ ಕಾರ್ಯಗಳಿಗೆ ಮಕ್ಕಳ ಸಹಕಾರವಿರುವುದು. ಸರ್ಕಾರದ ಕಡೆಯಿಂದ ಆಗಬೇಕಾದ ನಿಮ್ಮ ಕೆಲಸವು ಬೇಗನೆ ಮುಕ್ತಾಯ.

ಮೀನ ರಾಶಿ :

ಇಂದು ವ್ಯಾವಹಾರಿಕ ನಷ್ಟವು ನಿಮ್ಮ ಗಮನಕ್ಕೆ ಬಾರದೇ ಇರುವುದು. ಬೇಜವಾಬ್ದಾರಿಯ ಉತ್ತರವನ್ನು ಕೊಡುವುದು ಬೇಡ. ಆಲೋಚಿಸದೇ ಯಾವುದೇ ಸಾಹಸದ ಕಾರ್ಯದಲ್ಲಿ ತೊಡಗುವುದು ಬೇಡ. ಸಮಯವನ್ನು ವ್ಯರ್ಥ ಮಾಡದೆ ನಿಮ್ಮ ಗುರಿಯ ಕಡೆ ಮುಖ ಮಾಡಲಿದ್ದೀರಿ. ತಂದೆಯಿಂದ ಬೆಂಬಲ ಸಿಗಲಿದೆ. ಉದ್ಯೋಗಸ್ಥ ಮಹಿಳೆಯರು ವರ್ಗಾವಣೆಗೆ ಪ್ರಯತ್ನಿಸುವಿರಿ. ಆಪ್ತರ ಜೊತೆಗಿನ ಮಾತುಕತೆಯು ನಿಮಗೆ ಆಹ್ಲಾದವನ್ನು ಉಂಟುಮಾಡುವುದು.

-ಲೋಹಿತ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಜು ಸಿಡಿಲಬ್ಬರ: ಸಿಎಸ್​ಕೆ ತಂಡಕ್ಕೆ ಭರ್ಜರಿ ಜಯ – Kannada News | IPL 2026: Delhi Capitals vs Chennai Super Kings Highlights

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 48ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆ್ಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಡಿಸಿ ಪಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.

ಆರಂಭಿಕರಾದ ಕೆಎಲ್ ರಾಹುಲ್ (12) ಹಾಗೂ ಪಾತುಮ್ ನಿಸ್ಸಂಕಾ (19) 36 ರನ್​ಗಳಿಸುವಷ್ಟರಲ್ಲಿ ವಿಕೆಟ್ ಒಪ್ಪಿಸಿದ್ದರು. ಆ ಬಳಿಕ ಬಂದ ನಿತೀಶ್ ರಾಣಾ ಕಲೆಹಾಕಿದ್ದು ಕೇವಲ 15 ರನ್​ಗಳು ಮಾತ್ರ. ಇನ್ನು ಕರುಣ್ ನಾಯರ್ 13 ರನ್​ಗಳಿಸಿ ಔಟಾದರೆ, ನಾಯಕ ಅಕ್ಷರ್ ಪಟೇಲ್ 2 ರನ್​ಗಳಿಸಿ ನಿರ್ಗಮಿಸಿದರು.

ಈ ಹಂತದಲ್ಲಿ ಜೊತೆಗೂಡಿದ ಟ್ರಿಸ್ಟನ್ ಸ್ಟಬ್ಸ್ (38) ಹಾಗೂ ಸಮೀರ್ ರಿಝ್ವಿ (40) ತಂಡಕ್ಕೆ ಆಸರೆಯಾಗಿ ನಿಂತರು. ಪರಿಣಾಮ ಡೆಲ್ಲಿ ಕ್ಯಾಫಿಟಲ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 155 ರನ್​​ ಗಳಿಸಲು ಸಾಧ್ಯವಾಯಿತು.

ಸಂಜು ಸ್ಯಾಮ್ಸನ್ ಸಿಡಿಲಬ್ಬರ:

ಈ ಸುಲಭ ಗುರಿ ಬೆನ್ನತ್ತಿದ ಸಿಎಸ್​ಕೆ ತಂಡ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ರುತುರಾಜ್ ಗಾಯಕ್ವಾಡ್ 6 ರನ್​ಗಳಿಸಿ ಔಟಾದರೆ, ಆ ಬಳಿಕ ಬಂದ ಉರ್ವಿಲ್ ಪಟೇಲ್ 17 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಆದರೆ ಮತ್ತೊಂದೆಡೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಸಂಜು ಸ್ಯಾಮ್ಸನ್ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಹೆಗಲೇರಿಸಿಕೊಂಡರು. ಅದರಂತೆ ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್​ಗೆ ಒತ್ತು ನೀಡಿದ ಸಂಜು ಪವರ್​ಪ್ಲೇ ಮುಗಿಯುತ್ತಿದ್ದಂತೆ ಸಿಡಿಲಬ್ಬರ ಶುರು ಮಾಡಿದರು. ಪರಿಣಾಮ ಸಂಜು ಸ್ಯಾಮ್ಸನ್ ಬ್ಯಾಟ್​ನಿಂದ 32 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು.

ಹಾಫ್ ಸೆಂಚುರಿ ಬಳಿಕ ಕೂಡ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಸಂಜು ಸ್ಯಾಮ್ಸನ್ ಯುವ ದಾಂಡಿಗ ಕಾರ್ತಿಕ್ ಶರ್ಮಾ ಜೊತೆಗೂಡಿ ಶತಕದ ಜೊತೆಯಾಟವಾಡಿದರು.

ಅಂತಿಮವಾಗಿ ಸಂಜು ಸ್ಯಾಮ್ಸನ್ 52 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್ ಹಾಗೂ 7 ಫೋರ್​ಗಳೊಂದಿಗೆ ಅಜೇಯ 87 ರನ್​ ಬಾರಿಸಿದರು. ಮತ್ತೊಂದೆಡೆ ಕಾರ್ತಿಕ್ ಶರ್ಮಾ 41 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು 17.3 ಓವರ್​​ಗಳಲ್ಲಿ 159 ರನ್​ ಬಾರಿಸಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸಿಎಸ್​ಕೆ ತಂಡವು 10 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ.

ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಕೆಎಲ್ ರಾಹುಲ್, ಪಾತುಮ್ ನಿಸ್ಸಾಂಕ, ಕರುಣ್ ನಾಯರ್, ಟ್ರಿಸ್ಟನ್ ಸ್ಟಬ್ಸ್, ನಿತೀಶ್ ರಾಣಾ, ಅಕ್ಷರ್ ಪಟೇಲ್ (ನಾಯಕ), ಅಶುತೋಷ್ ಶರ್ಮಾ, ಲುಂಗಿ ಎನ್‌ಗಿಡಿ, ಮಿಚೆಲ್ ಸ್ಟಾರ್ಕ್, ಕುಲದೀಪ್ ಯಾದವ್, ಟಿ ನಟರಾಜನ್.

ಇದನ್ನೂ ಓದಿ: 30 ಎಸೆತಗಳಲ್ಲಿ 95 ರನ್: ರಿಷಭ್ ಪಂತ್‌ ರುದ್ರತಾಂಡವ ಬಿಚ್ಚಿಟ್ಟ ಕೋಚ್!

ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ಸಂಜು ಸ್ಯಾಮ್ಸನ್, ರುತುರಾಜ್ ಗಾಯಕ್ವಾಡ್ (ನಾಯಕ), ಉರ್ವಿಲ್ ಪಟೇಲ್, ಕಾರ್ತಿಕ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಜೇಮಿ ಓವರ್ಟನ್, ಅಕೇಲ್ ಹೊಸೈನ್, ನೂರ್ ಅಹ್ಮದ್, ಅನ್ಶುಲ್ ಕಂಬೋಜ್, ಮುಖೇಶ್ ಚೌಧರಿ, ಗುರ್ಜಪ್ನೀತ್ ಸಿಂಗ್.

Source link

ಜಾತಿ ನಿಂದನೆ ಕೇಸ್: ಕರ್ನಾಟಕ ಬಿಜೆಪಿ ಎಂಎಲ್​​​​ಎಗೆ ಅರೆಸ್ಟ್ ವಾರೆಂಟ್, ಏನಿದು ಪ್ರಕರಣ? – Kannada News | Bengaluru Special Court Arrest Warrants Issued Against harihar BJP MLA BP Harish In Alleged caste abuse Case

ಬೆಂಗಳೂರು, (ಮೇ 05):  ಜಾತಿನಿಂದನೆ ಮಾಡಿದ್ದಾರೆ ಎಂಬ ಆರೋಪದಡಿ ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ (BJP MLA BP Harish) ವಿರುದ್ಧ ಹರಿಹರ ಟೌನ್ ಠಾಣೆ  ಪ್ರಕರಣ ದಾಖಲಾಗಿದ್ದು, ಇದೀಗ ಈ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರೀಶ್​ಗೆ ಕೋರ್ಟ್ ಬಂಧನದ ವಾರಂಟ್ (Arrest Warrant)  ಜಾರಿ ಮಾಡಿದೆ. ಜಾತಿ ನಿಂದನೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಜಡ್ಜ್ ಸಂತೋಷ್ ಗಜಾನನ ಭಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದು, ಮೇ 7ರಂದು ಕೋರ್ಟ್​ಗೆ ಹಾಜರುಪಡಿಸುವಂತೆ ನಿರ್ದೇಶನ ನೀಡಿದ್ದಾರೆ. ಹೀಗಾಗಿ ಶಾಸಕ ಹರೀಶ್ ಗೆ ಬಂಧನ ಭೀತಿ ಎದುರಾಗಿದೆ.

  • ಜಾತಿ ನಿಂದನೆ ಪ್ರಕರಣದಲ್ಲಿ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ.ಹರೀಶ್​ಗೆ ಬಂಧನ ವಾರಂಟ್.
  • ವಿಚಾರಣೆಗೆ ಹಾಜರಾಗದಿದ್ದಕ್ಕೆ ಹರೀಶ್ ಬಂಧನಕ್ಕೆ ವಿಶೇಷ ಕೋರ್ಟ್​ನಿಂದ ವಾರಂಟ್.
  • ಮೇ 7ರಂದು ಕೋರ್ಟ್​ಗೆ ಹಾಜರುಪಡಿಸುವಂತೆ ಹರಿಹರ ಠಾಣಾಧಿಕಾರಿಗೆ ಕೋರ್ಟ್ ನಿರ್ದೇಶನ.
  • 2023 ವಿಧಾನ ಸಭೆಯ ಚುನಾವಣಾ ಫಲಿತಾಂಶದ ಮರುದಿನ ದಲಿತ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು.

2023ರ ವಿಧಾನಸಭಾ ಚುನಾವಣೆ ಫಲಿತಾಂಶದ ಮರುದಿನ ದಲಿತ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪ ಮೇಲೆ ಹರಿಹರ ಕ್ಷೇತ್ರದ BSP ಮುಖಂಡ ಹನುನಂತಪ್ಪ ಎನ್ನುವರು ದೂರು ನೀಡಿದ್ದರು. ಈ ದೂರಿನ ಅನ್ವಯ ಹರಿಹರ ಟೌನ್ ಠಾಣೆಯಲ್ಲಿ ಜಾತಿನಿಂದನೆ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಬಿಜೆಪಿ ಶಾಸಕ ಬಿಪಿ ಹರೀಶ್ ವಿರುದ್ಧ ಜಾತಿನಿಂದನೆ ಆರೋಪ: ಎಫ್​ಐಆರ್​ ದಾಖಲು

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹರೀಶ್, ವಿಚಾರಣೆಗೆ ಗೈರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶೇಷ ಜನಪ್ರತಿನಿಧಿಗಳು ನ್ಯಾಯಾಲಯದ ನ್ಯಾಯಮೂರ್ತಿ ಸಂತೋಷ ಗಜಾನನ ಭಟ್ ಅವರು ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದು, ನಾಡಿದ್ದು ಅಂದರೆ ಮೇ 07ರಂದು ಕೋರ್ಟ್ ಗೆ ಹಾಜರು ಪಡಿಸುವಂತೆ ಹರಿಹರ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.  ಕೋರ್ಟ್ ಆದೇಶ ಬರುತ್ತಿದ್ದಂತೆ ಹರಿಹರ ಪೊಲೀಸರು ಸಹ ಆ್ಯಕ್ಟಿವ್ ಆಗಿದ್ದು, ಶಾಸಕ ಬಿ.ಪಿ.ಹರೀಶ್​ಗೆ ಬಂಧನ ಭೀತಿ ಶುರುವಾಗಿದೆ.

ಏನಿದು ಘಟನೆ?

2023 ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಹಿನ್ನೆಲೆಯಲ್ಲಿ ದಲಿತ ಸಮುದಾಯದ ಕೆಲ ಮುಖಂಡರು ಬಿ.ಪಿ. ಹರೀಶ್‌ಗೆ ಅಭಿನಂದನೆ ಸಲ್ಲಿಸಲು ಬಂದಿದ್ದರು. ಈ ವೇಳೆ ಬಿಜೆಪಿ ಸರಕಾರ ಮೀಸಲು ಹೆಚ್ಚಿಸಿದ್ದರೂ ದಲಿತರು ನಮಗೆ ಮತ ಹಾಕಿಲ್ಲ. ‘ಅಪ್ಪನಿಗೆ ಹುಟ್ಟಿದ ಮಾದಿಗರು ಮಾತ್ರ ಬಿಜೆಪಿಗೆ ಮತ ಹಾಕಿದ್ದಾರೆ’ ಎಂದು ಹೇಳಿಕೆ ನೀಡಿದ್ದರು. ಇದರ ವಿಡಿಯೋ ವೈರಲ್‌ ಆಗಿತ್ತು. ಈ ಸಂಬಂಧ ಬಿ. ಹನುಮಂತಪ್ಪ ಮತ್ತಿತರರು ಹರಿಹರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಗೆಲುವಿಗೆ ಮೋದಿಗೆ ಟ್ರಂಪ್ ಅಭಿನಂದನೆ – Kannada News | Donald Trump congratulates PM Modi over BJP Historic win in West Bengal elections

ನವದೆಹಲಿ, ಮೇ 5: ಪಶ್ಚಿಮ ಬಂಗಾಳ (West Bengal Election Results) ರಾಜ್ಯದಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ. ಇದನ್ನು “ಐತಿಹಾಸಿಕ” ಮತ್ತು “ನಿರ್ಣಾಯಕ” ಫಲಿತಾಂಶ ಎಂದು ಕರೆದಿದ್ದಾರೆ. ಭಾರತವು ಅವರನ್ನು ನಾಯಕನನ್ನಾಗಿ ಪಡೆದಿರುವುದು ಅವರ ಅದೃಷ್ಟ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಳೆದ ತಿಂಗಳಷ್ಟೇ ತಮ್ಮ ಫೋನ್ ಕರೆಯಲ್ಲಿ, ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರಧಾನಿ ಮೋದಿಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಅವರನ್ನು ತನ್ನ ನಾಯಕನನ್ನಾಗಿ ಪಡೆದಿರುವುದು ಭಾರತದ ಅದೃಷ್ಟ ಎಂದು ಹೇಳಿದ್ದರು. ಇಂದು ಐತಿಹಾಸಿಕ ಮತ್ತು ನಿರ್ಣಾಯಕ ಚುನಾವಣಾ ಗೆಲುವಿಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದಾರೆ.

ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ಮಮತಾ ಬ್ಯಾನರ್ಜಿ ರಾಜೀನಾಮೆ ಕೊಡದಿದ್ದರೆ ಪಶ್ಚಿಮ ಬಂಗಾಳದಲ್ಲಿ ಏನಾಗುತ್ತದೆ?

ರಾಜಕೀಯವಾಗಿ ಬಹಳ ಕಾಲದಿಂದ ತೃಣಮೂಲ ಕಾಂಗ್ರೆಸ್ ಪ್ರಾಬಲ್ಯ ಹೊಂದಿದ್ದ ಪಶ್ಚಿಮ ಬಂಗಾಳದ ಮೇಲೆ ಬಿಜೆಪಿ ಮೊದಲ ಬಾರಿಗೆ ಹಿಡಿತ ಸಾಧಿಸಿದೆ. ಈ ಫಲಿತಾಂಶವು ಬ್ಯಾನರ್ಜಿಯವರ 15 ವರ್ಷಗಳ ಅಧಿಕಾರದ ಹಿಡಿತವನ್ನು ಕೊನೆಗೊಳಿಸಿದೆ. ನರೇಂದ್ರ ಮೋದಿಗೆ ಇದು ಒಂದು ಪ್ರಮುಖ ರಾಜಕೀಯ ಲಾಭವೆಂದು ಪರಿಗಣಿಸಲಾಗುತ್ತಿದೆ.

ಸೋಮವಾರ ಪ್ರಕಟವಾದ ವಿಧಾನಸಭಾ ಚುನಾವಣೆಯ ಫಲಿತಾಂಶಗಳಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆದ್ದಿದೆ. ಕಳೆದ 15 ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ 80 ಸ್ಥಾನಗಳನ್ನು ಗೆದ್ದಿದೆ. ಪಶ್ಚಿಮ ಬಂಗಾಳದಲ್ಲಿ ತನ್ನ ಮೊದಲ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬಿಜೆಪಿ ಸಿದ್ಧತೆಗಳನ್ನು ನಡೆಸುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕುಜನ ಸಂಯೋಗ ಮತ್ತು ಸಂಚಾರದಿಂದ ಆಗಲಿದೆ ಈ ಎಲ್ಲ ಬದಲಾವಣೆ.. – Kannada News | Kuja Conjunction and Dasha: Major Astrological Changes, Effects and Solutions

ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳನು ಅಗ್ನಿತತ್ವದ ಗ್ರಹನಾಗಿದ್ದಾನೆ. ಆದರೆ ಮೀನವು ಜಲತತ್ವದ ರಾಶಿ‌ ಬೆಂಕಿ ಮತ್ತು ನೀರು ಒಂದೇ ಕಡೆ ಇದ್ದಾಗ ಏನಾಗಬಹುದು. ಇದೇ ವ್ಯಕ್ತಿಯ ಜೀವನದಲ್ಲಿ ಅತೀವವಾದ ಆಂತರಿಕ ಶಕ್ತಿ ಮತ್ತು ಭಾವನಾತ್ಮಕ ವೇಗವನ್ನು ಸೂಚಿಸುತ್ತದೆ.

​ಸ್ವ-ದ್ರೆಕ್ಕಾಣ ಮತ್ತು ತ್ರಿಂಶಾಂಶದಲ್ಲಿ ಮಂಗಳನು ತನ್ನದೇ ದ್ರೆಕ್ಕಾಣ ಮತ್ತು ತ್ರಿಂಶಾಂಶದಲ್ಲಿ ಇರುವುದು ಆತನಿಗೆ ಸ್ವಕ್ಷೇತ್ರದ ಬಲವನ್ನು ನೀಡುತ್ತದೆ. ಇದು ವ್ಯಕ್ತಿಗೆ ಅದ್ಭುತವಾದ ಧೈರ್ಯ, ತಾಂತ್ರಿಕ ಜ್ಞಾನ ಮತ್ತು ಎಂತಹ ಕಠಿಣ ಸವಾಲನ್ನೂ ಎದುರಿಸುವ ಛಲವನ್ನು ನೀಡುತ್ತದೆ.

​ರವಿ ಸ್ಥಾನ :

ಸೂರ್ಯನ ಹೋರೆಯಲ್ಲಿ ಮಂಗಳನಿರುವುದು ಆಡಳಿತಾತ್ಮಕ ಶಕ್ತಿ ಮತ್ತು ನಾಯಕತ್ವದ ಗುಣಗಳನ್ನು ಹೆಚ್ಚಿಸುತ್ತದೆ. ​ಶನಿ ನವಾಂಶ ಮತ್ತು ದ್ವಾದಶಾಂಶದಲ್ಲಿ ಮಂಗಳನ ಮೇಲೆ ಶನಿಯ ಪ್ರಭಾವವಿದೆ. ಇದು ಅಗ್ನಿ-ಮಾರುತ ಯೋಗದಂತೆ ಕೆಲಸ ಮಾಡುತ್ತದೆ. ಮಂಗಳನ ವೇಗಕ್ಕೆ ಶನಿಯು ಶಿಸ್ತು ಮತ್ತು ನಿಧಾನಗತಿಯನ್ನು ನೀಡುತ್ತಾನೆ. ಇದರಿಂದ ಕೆಲಸಗಳು ತಡವಾದರೂ, ಅವುಗಳಲ್ಲಿ ಸ್ಥಿರತೆ ಇರುತ್ತದೆ.

ಕುಜ ದಶೆಯ ಫಲ :

​ಈ ದಶೆ ನಡೆಯುತ್ತಿರುವವರಿಗೆ ಜೀವನದಲ್ಲಿ ಈ ಕೆಳಗಿನ ಬದಲಾವಣೆಗಳು ಕಂಡುಬರುತ್ತವೆ. ​ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಕ್ಷೇತ್ರ, ರಕ್ಷಣೆ, ಭೂಮಿ ವ್ಯವಹಾರ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ ಇರುವವರಿಗೆ ಈ ಕಾಲವು ಅತ್ಯಂತ ಶುಭದಾಯಕ. ಶನಿಯ ಪ್ರಭಾವ ಇರುವುದರಿಂದ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತದೆ. ​ಆರ್ಥಿಕ ಸ್ಥಿತಿಯಲ್ಲಿ ಹಠಾತ್ ಧನಲಾಭಕ್ಕಿಂತ ಹೆಚ್ಚಾಗಿ, ವ್ಯವಸ್ಥಿತವಾದ ಹೂಡಿಕೆಯಿಂದ ಲಾಭವಾಗಲಿದೆ. ಆಸ್ತಿ ಖರೀದಿ ಅಥವಾ ಮನೆ ಕಟ್ಟುವ ಯೋಗ ಬಲವಾಗಿದೆ. ಮನಸ್ಸು ಸ್ವಲ್ಪ ಚಂಚಲವಾಗಬಹುದು. ಆಧ್ಯಾತ್ಮಿಕತೆಯ ಕಡೆಗೆ ಒಲವು ಹೆಚ್ಚುತ್ತದೆ.

ಇದನ್ನೂ ಓದಿ: ಗ್ರಹಗಳ ನಾಯಕ ಸೂರ್ಯ…. ಅವನ ಅನುಗ್ರಹದಿಂದ ಆಗಲಿದೆ ಯಾವೆಲ್ಲ ಕಾರ್ಯ..

​ರಾಶಿಗಳ ಶುಭ ಮತ್ತು ಅಶುಭ ಫಲ :

ಅತ್ಯಂತ ಶುಭ ಕಟಕ, ವೃಶ್ಚಿಕ, ಮೀನ ಈ ರಾಶಿಗಳಿಗೆ ಮಂಗಳನು ಯೋಗಕಾರಕ. ಭಾಗ್ಯೋದಯ, ಶತ್ರು ಜಯ ಮತ್ತು ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಮಧ್ಯಮ ಮೇಷ, ಸಿಂಹ, ಧನು ಸಾಹಸ ಪ್ರವೃತ್ತಿ ಹೆಚ್ಚುತ್ತದೆ. ಆದರೆ ಕೋಪದ ಮೇಲೆ ನಿಯಂತ್ರಣವಿರಲಿ. ಹಣಕಾಸಿನ ಹರಿವು ಉತ್ತಮವಾಗಿರುತ್ತದೆ. ಎಚ್ಚರಿಕೆ ಅಗತ್ಯ ಮಿಥುನ, ಕನ್ಯಾ, ಕುಂಭ ಮಾನಸಿಕ ಒತ್ತಡ, ವೃತ್ತಿಯಲ್ಲಿ ಅಡೆತಡೆಗಳು ಅಥವಾ ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬರಬಹುದು. ತಾಳ್ಮೆ ಇರಲಿ.

​ಮಂಗಳ ಮತ್ತು ಶನಿಯ ಮಿಶ್ರ ಪ್ರಭಾವವಿರುವುದರಿಂದ, ಈ ದಶೆಯನ್ನು ಸುಗಮಗೊಳಿಸಲು ಮಂಗಳವಾರದಂದು ಆಂಜನೇಯ ಸ್ವಾಮಿಯ ಆರಾಧನೆ ಮಾಡುವುದು ಅತ್ಯುತ್ತಮ. ಇದು ಮಂಗಳನ ಉಗ್ರತೆಯನ್ನು ಕಡಿಮೆ ಮಾಡಿ, ಶನಿಯ ಶಿಸ್ತನ್ನು ನೀಡುತ್ತದೆ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:22 pm, Tue, 5 May 26

Source link

ಸಚಿವ ಜಮೀರ್ ಮನೆಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ್ಯಾರು? ಸ್ಫೋಟಕ ಅಂಶ ಬಯಲಿಗೆ – Kannada News | Two Held For Theft Of Gold Jewellery Worth Rs 1.13 Cr At Minister Zameer Ahmed Khan Home in Bengaluru

ಬೆಂಗಳೂರು, (ಮೇ 05): ಉಂಡು ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan) ಅವರಿಗೆ ದ್ರೋಹಬಗೆದಿರುವ ಘಟನೆ ನಡೆದಿದೆ. ಹೌದು…ಸಚಿವ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿ ವರ್ಷಗಳಿಂದ ಗುಟ್ಟಾಗಿ ನಡೆದಿದ್ದ ಕಳ್ಳತನದ ಅಸಲಿಯತ್ತು ಹೊರಬಿದ್ದಿದೆ. ಕೋಟ್ಯಾಂತರ ರೂಪಾಯಿ ಮೌಲ್ಯದ ಅಂದರೆ 1.13 ಮೌಲ್ಯದಷ್ಟು ಚಿನ್ನವನ್ನು ಕದ್ದು ನೌಟಂಕಿ ಆಟವಾಡುತ್ತಿದ್ದವರನ್ನು ಶಿವಾಜಿನಗರ ಪೊಲೀಸರು ಬಂಧಿಸಿವಲ್ಲಿ ಯಶಸ್ವಿಯಾಗಿದ್ದಾರೆ. ಕಳ್ಳತನ ಮಾಡಿದ್ದು ಬೇರೆ ಯಾರೂ ಅಲ್ಲ. ಸಚಿವರ ತಾಯಿಯ ಸಂಬಂಧಿಕರು. ಸಂಬಂಧಿ ಸೈಯದ್ ಅಮೀರ್ ಬಂಧಿತ ಆರೋಪಿಗಳಾಗಿದ್ದು, ಇವರಿಂದ 1 ಕೆಜಿಗೂ ಹೆಚ್ಚು ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ಸಚಿವ ಜಮೀರ್ ಅಹಮ್ಮದ್ ಖಾನ್ ನಿವಾಸದಲ್ಲಿ ಚಿನ್ನಾಭರಣ ಕದ್ದಿದ್ದ ಇಬ್ಬರ ಬಂಧನ.
  • ಬೆಂಗಳೂರಿನ ಶಿವಾಜಿನಗರ ಠಾಣೆ ಪೊಲೀಸರಿಂದ ಇಬ್ಬರ ಬಂಧನ.
  • ಸೈಯದ್ ಅಮೀರ್, ಅಮಿರ್ ಅಹ್ಮದ್ ಬಂಧಿತ ಆರೋಪಿಗಳು.
  • ಟ್ರಾವೆಲ್ಸ್ ಬ್ಯುಸಿನೆಸ್​ನಲ್ಲಿ ಲಾಸ್ ಆಗಿದ್ದಕ್ಕೆ ಕಳ್ಳತನ

ಸಚಿವರ ತಾಯಿ ಸಂಬಂಧಿಯಿಂದಲೇ ಕೃತ್ಯ

ಸಚಿವ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿ ವರ್ಷಗಳಿಂದ ಗುಟ್ಟಾಗಿ ನಡೆದಿದ್ದ ಕಳ್ಳತನದ ಅಸಲಿಯತ್ತು ಹೊರಬಿದ್ದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಯದ್ ಅಮೀನ್ ಮತ್ತು ಆತನ ಸ್ನೇಹಿತ ಅಮಿರ್ ಅಹ್ಮದ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.​ಬಂಧಿತ ಸೈಯದ್ ಅಮೀನ್, ಸಚಿವ ಜಮೀರ್ ತಾಯಿಯ ಹತ್ತಿರದ ಸಂಬಂಧಿ. ಈ ನಂಟಿನಿಂದಾಗಿ ಸಚಿವರ ಮನೆಗೆ ಈತನಿಗೆ ಮುಕ್ತ ಪ್ರವೇಶವಿತ್ತು. ಪ್ರತಿದಿನ ಮನೆಗೆ ಬಂದು ಒಳ್ಳೆಯವನಂತೆ ನಟಿಸುತ್ತಿದ್ದ ಅಮೀನ್, ಯಾರೂ ಇಲ್ಲದ ಸಮಯ ನೋಡಿ ಕಳೆದ 2025 ರಿಂದಲೂ ಹಂತ ಹಂತವಾಗಿ ಚಿನ್ನಾಭರಣಗಳನ್ನು ಕಳ್ಳತನ ಮಾಡುತ್ತಿದ್ದ. ಮನೆಯಲ್ಲಿ ಮದುವೆ ಸಮಾರಂಭಗಳು ಇದ್ದಾಗ ಆಭರಣಗಳನ್ನು ಎಗರಿಸುವುದು ಈತನ ಚಾಳಿಯಾಗಿತ್ತು.

ಇದನ್ನೂ ನೋಡಿ: ಸಚಿವ ಜಮೀರ್ ಮನೆಯಲ್ಲಿ 1.13 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕದ್ದಿದ್ದ ಇಬ್ಬರ ಬಂಧನ

​ಬಂಧಿತ ಸೈಯದ್ ಅಮೀನ್, ಸಚಿವ ಜಮೀರ್ ತಾಯಿಯ ಹತ್ತಿರದ ಸಂಬಂಧಿ. ಈ ನಂಟಿನಿಂದಾಗಿ ಸಚಿವರ ಮನೆಗೆ ಈತನಿಗೆ ಮುಕ್ತ ಪ್ರವೇಶವಿತ್ತು. ಪ್ರತಿದಿನ ಮನೆಗೆ ಬಂದು ಒಳ್ಳೆಯವನಂತೆ ನಟಿಸುತ್ತಿದ್ದ ಅಮೀನ್, ಯಾರೂ ಇಲ್ಲದ ಸಮಯ ನೋಡಿ ಕಳೆದ 2025 ರಿಂದಲೂ ಹಂತ ಹಂತವಾಗಿ ಚಿನ್ನಾಭರಣಗಳನ್ನು ಕಳ್ಳತನ ಮಾಡುತ್ತಿದ್ದ. ಮನೆಯಲ್ಲಿ ಮದುವೆ ಸಮಾರಂಭಗಳು ಇದ್ದಾಗ ಆಭರಣಗಳನ್ನು ಎಗರಿಸುತ್ತಿದ್ದ. ಅದರಂತೆ ಸ್ನೇಹಿತ ಅಮೀರ್ ಅಹಮದ್ ಸಹಾಯ ಪಡೆದು ಸುಮಾರು 1 ಕೋಟಿ 13 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದ. ಬಳಿಕ ಆಭರಣಗಳನ್ನು ಅಡವಿಟ್ಟು ಹಣ ಸಹ ಪಡೆದುಕೊಂಡಿದ್ರು. ಅಷ್ಟೇ ಅಲ್ಲದೆ, ಆ ಹಣವನ್ನು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆ ಮಾಡಿ ದೊಡ್ಡ ಲಾಭ ಗಳಿಸುವ ಕನಸು ಕಂಡಿದ್ದರು.

ಕಳ್ಳತನಕ್ಕೆ ಕಾರಣವೇನು?

ಆರೋಪಿಗಳು ಟ್ರಾವೆಲ್ ಬ್ಯುಸಿನೆಸ್ ನಡೆಸುತ್ತಿದ್ದರು. ಆದರೆ ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಇವರ ವ್ಯವಹಾರ ತೀವ್ರ ನಷ್ಟಕ್ಕೆ ಸಿಲುಕಿತ್ತು. ಕಳೆದುಕೊಂಡ ಹಣವನ್ನು ಮರಳಿ ಪಡೆಯಲು ಮತ್ತು ಸಾಲ ತೀರಿಸಲು ಇವರು ಹಣದ ಹಪಹಪಿಯಲ್ಲಿದ್ದರು. ಎಲ್ಲಿಯೂ ಫೈನಾನ್ಸ್ ಅಥವಾ ಸಾಲ ಸಿಗದಿದ್ದಾಗ, ಅಂತಿಮವಾಗಿ ತಮ್ಮದೇ ಸಂಬಂಧಿಯಾದ ಸಚಿವರ ಮನೆಯ ಮೇಲೆ ಕಣ್ಣು ಹಾಕಿದ್ದರು. ಕಳೆದೊಂದು ವರ್ಷದಿಂದ ಹಂತ ಹಂತವಾಗ ಮನೆಯಲ್ಲಿದ್ದ ಜಮೀರ್ ತಾಯಿ ಚಿನ್ನವನ್ನು ಕಳ್ಳತನ ಮಾಡಿದ್ದು, ಬಳಿಕ ಚಿನ್ನಾಭರಣಗಳನ್ನು ಅಡವಿಟ್ಟು ಆ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿ ಲಾಭ ಗಳಿಸುವ ದುರಾಲೋಚನೆ ಇವರದ್ದಾಗಿತ್ತು.

ಕಳ್ಳರು ಸಿಕ್ಕಿಬಿದ್ದಿದ್ಹೇಗೆ?

ಕಳ್ಳತನ ನಡೆದ ಮೇಲೆ ಆರೋಪಿ ಅಮೀನ್ ನಡವಳಿಕೆ ಬದಲಾಗಿದ್ದು ಪೊಲೀಸರಿಗೆ ಕ್ಲ್ಯೂ ನೀಡಿತ್ತು. ಆಗಾಗ ಜಮೀರ್ ಮನೆ ಬರುತ್ತಿದ್ದವನು ಕಳ್ಳತನವಾದ ನಂತರ ಬರುವುದನ್ನೇ ನಿಲ್ಲಿಸಿದ್ದ. ಸಚಿವರ ತಾಯಿ ಫೋನ್ ಮಾಡಿದರೂ ಸ್ವೀಕರಿಸದೆ ತಪ್ಪಿಸಿಕೊಳ್ಳುತ್ತಿದ್ದ.​ಯಾವಾಗ ಇವನ ಮೊಬೈಲ್ ಸ್ವಿಚ್ ಆಫ್ ಆಯ್ತೋ, ಆಗ ಪೊಲೀಸರಿಗೆ ಇವನೇ ಆರೋಪಿ ಎಂಬುದು ಗೊತ್ತಾಗಿತ್ತು. ಸದ್ಯ ಕಾರ್ಯಾಚರಣೆ ನಡೆಸಿ ಇಬ್ಬರು ಖದೀಮರ ಹೆಡೆಮುರಿ ಕಟ್ಟಿರುವ ಪೊಲೀಸರ ವಿಚಾರಣೆ ವೇಳೆ ಈತ ತನ್ನ ಪಾಪದ ಪುರಾಣವನ್ನು ಬಿಚ್ಚಿಟ್ಟಿದ್ದಾನೆ. ಸದ್ಯ ಬಂಧಿತರಿಂದ ಒಟ್ಟು 759 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ನಂಬಿಕಸ್ಥನೇ ದ್ರೋಹ ಬಗೆದ ಈ ಘಟನೆ ಸಚಿವ ಜಮೀರ್ ಅಹಮದ್ ಖಾನ್ ಕುಟುಂಬವನ್ನೇ ದಂಗಾಗಿಸಿದೆ. ಸದ್ಯ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಕಂಬಿ ಎಣಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಈ ಜನರನ್ನು ಅವಮಾನಿಸುವ ತಪ್ಪನ್ನು ಎಂದಿಗೂ ಮಾಡಬೇಡಿ – Kannada News | Chanakya Niti: Chanakya says one should never insult these people

ಚಾಣಕ್ಯ ನೀತಿಯ (Chanakya Niti) ಪ್ರಕಾರ, ನಮ್ಮ ನಡವಳಿಕೆಯು ನಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಹೌದು ಚಾಣಕ್ಯನ ಪ್ರಕಾರ, ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಕಠಿಣ ಪರಿಶ್ರಮ ಮಾತ್ರವಲ್ಲ, ಉತ್ತಮ ನಡವಳಿಕೆಯೂ ಮುಖ್ಯ. ನಮ್ಮ ನಡವಳಿಕೆ ಉತ್ತಮ ರೀತಿಯಲ್ಲಿ ಇದ್ದಾಗ ಮಾತ್ರ ಯಶಸ್ಸನ್ನು ಗಳಿಸಲು, ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕಲು ಸಾಧ್ಯ. ಅದೇ ರೀತಿ ಅಹಂಕಾರ ಭಾವವನ್ನು ಬೆಳೆಸಿಕೊಂಡು ಈ ಕೆಲವು ಜನರನ್ನು ಅವಮಾನಿಸುವುದರಿಂದ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಬಹುದು ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ. ಹಾಗಿದ್ರೆ ಜೀವನದಲ್ಲಿ ಯಾವೆಲ್ಲಾ ಜನರನ್ನು ತಪ್ಪಿಯೂ ಅವಮಾನಿಸಬಾರದು ಎಂಬುದನ್ನು ನೋಡೋಣ ಬನ್ನಿ.

ಈ ಜನರನ್ನು ಅವಮಾನಿಸುವ ತಪ್ಪನ್ನು ಎಂದಿಗೂ ಮಾಡಬೇಡಿ:

ಗುರುಗಳನ್ನು ಅವಮಾನಿಸಬೇಡಿ: ಗುರುವಿಲ್ಲದೆ ಜ್ಞಾನವನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ, ಗುರುವನ್ನು ಅಗೌರವಿಸಬಾರದು. ಗುರುವಿನ ಆದೇಶಗಳನ್ನು ಪಾಲಿಸದಿರುವುದು, ಅವರನ್ನು ಅವಮಾನಿಸುವುದು ಜೀವನದಲ್ಲಿ ಅನೇಕ ತೊಂದರೆಗಳಿಗೆ ಕಾರಣವಾಗಬಹುದು ಮತ್ತು ಜನರನ್ನು ಗೇಲಿ ಮಾಡುವುದರಿಂದ ಅಥವಾ ಅವರನ್ನು ಕೀಳಾಗಿ ನೋಡುವುದರಿಂದ ಜೀವನದಲ್ಲಿ ಬೆಳೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯ ಹೇಳುತ್ತಾರೆ.

ಪೋಷಕರು: ನಾವು ನಮ್ಮ ಹೆತ್ತವರನ್ನು ಎಂದಿಗೂ ಅವಮಾನಿಸಬಾರದು. ಆಚಾರ್ಯ ಚಾಣಕ್ಯರ ಪ್ರಕಾರ ತಂದೆ ತಾಯಿಯನ್ನು ಅವಮಾನಿಸುವುದು, ವೃದ್ಧಾಪ್ಯದಲ್ಲಿ ಅವರನ್ನು ನಿರ್ಲಕ್ಷಿಸುವುದು ಪಾಪ. ನಮ್ಮ ಹೆತ್ತವರ ಪ್ರೀತಿ ಮತ್ತು ತ್ಯಾಗಗಳನ್ನು ನಾವು ಗುರುತಿಸದಿದ್ದರೆ, ಅವರಿಗೆ ಗೌರವವನ್ನು ನೀಡದಿದ್ದರೆ ಜೀವನದಲ್ಲಿ ಯಾವುದೇ ಅರ್ಥವಿಲ್ಲ ಎನ್ನುತ್ತಾರೆ ಚಾಣಕ್ಯ.

ಒಳ್ಳೆಯ ಜನರು: ಸದಾಚಾರ ಮತ್ತು ಪ್ರಾಮಾಣಿಕತೆಯ ಮಾರ್ಗವನ್ನು ಅನುಸರಿಸುವ ಜನರನ್ನು ಗೌರವಿಸುವುದು ಬಹಳ ಮುಖ್ಯ. ಅಂತಹ ಒಳ್ಳೆಯ ಜನರನ್ನು ಗೌರವಿಸುವುದರಿಂದ ಮನಸ್ಸಿನ ಶಾಂತಿ ಬರುತ್ತದೆ ಮತ್ತು ಮನೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ ಎನ್ನುತ್ತಾರೆ ಚಾಣಕ್ಯ.

ಇದನ್ನೂ ಓದಿ: ಸದಾ ಇತರರ ಮಾತನ್ನು ಕೇಳುವುದರಿಂದ ಜೀವನದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತವೆ ಗೊತ್ತಾ?

ಜ್ಞಾನವನ್ನು ಹೊಂದಿರುವ ಜನರನ್ನು ಅವಮಾನಿಸಬಾರದು: ಚಾಣಕ್ಯರ ಪ್ರಕಾರ, ಅನುಭವ ಮತ್ತು ಆಳವಾದ ಜ್ಞಾನದ ಸಂಪತ್ತನ್ನು ಹೊಂದಿರುವ ಜನರ ಸಹವಾಸವು ಅಮೂಲ್ಯವಾದುದು. ಇಂತಹ ವ್ಯಕ್ತಿಗಳನ್ನು ಅವಮಾನಿಸುವುದು ಬೌದ್ಧಿಕ ಬಡತನದ ಸಂಕೇತ, ಇದರಿಂದಾಗಿ ಒಬ್ಬ ವ್ಯಕ್ತಿ ಉತ್ತಮ ಜ್ಞಾನ ಪಡೆಯಲು ಸಾಧ್ಯವಿಲ್ಲ. ಅದು ಅವನ ಅವನತಿಗೆ ಕಾರಣವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link