Category Archives: Blog

Your blog category

‘ಟಾಕ್ಸಿಕ್’ ಸಿನಿಮಾದ ಬೋಲ್ಡ್ ದೃಶ್ಯಕ್ಕೆ ಕಿಯಾರಾ ಕಿರಿಕ್ ಇಲ್ಲ: ವದಂತಿಗಳಿಗೆ ತೆರೆ ಎಳೆದ ನಟಿ – Kannada News | Kiara Advani denies rumours about toning down bold scenes in Yash starrer Toxic

‘ರಾಕಿಂಗ್ ಸ್ಟಾರ್’ ಯಶ್ (Yash) ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಅನೌನ್ಸ್ ಆದ ದಿನದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ. ಈಗ ಈ ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ (Kiara Advani) ಅವರು ತಮ್ಮ ಬಗ್ಗೆ ಹರಿದಾಡುತ್ತಿದ್ದ ದೊಡ್ಡ ಸುಳ್ಳು ಸುದ್ದಿಯೊಂದಕ್ಕೆ ಬ್ರೇಕ್ ಹಾಕಿದ್ದಾರೆ. ‘ಟಾಕ್ಸಿಕ್’ (Toxic) ಸಿನಿಮಾದಲ್ಲಿ ಯಶ್ ಮತ್ತು ಕಿಯಾರಾ ಅಡ್ವಾಣಿ ಅವರ ನಡುವೆ ಬೋಲ್ಡ್ ದೃಶ್ಯಗಳು ಇವೆ. ಅವುಗಳ ಬಗ್ಗೆ ಕಿಯಾರಾ ತಕರಾರು ತೆಗೆಯುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಅದು ನಿಜವಲ್ಲ ಎಂದು ಸ್ವತಃ ಕಿಯಾರಾ ಅವರು ಸ್ಪಷ್ಟಪಡಿಸಿದ್ದಾರೆ.

‘ಟಾಕ್ಸಿಕ್’ ಚಿತ್ರದಲ್ಲಿರುವ ತಮ್ಮ ಬೋಲ್ಡ್ ದೃಶ್ಯಗಳನ್ನು ಕತ್ತರಿಸುವಂತೆ ಅಥವಾ ಅವುಗಳ ತೀವ್ರತೆಯನ್ನು ಕಡಿಮೆ ಮಾಡುವಂತೆ ಕಿಯಾರಾ ಅವರು ಚಿತ್ರತಂಡಕ್ಕೆ ಕೇಳಿಕೊಂಡಿದ್ದಾರೆ ಎಂಬ ವದಂತಿಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಹರಿದಾಡುತ್ತಿದ್ದವು. ಹಲವು ಮನರಂಜನಾ ಪೋರ್ಟಲ್‌ಗಳು ಇದನ್ನು ನಿಜವೆಂಬಂತೆ ವರದಿ ಮಾಡಿದ್ದವು.

ಈ ಬಗ್ಗೆ ಮೌನ ಮುರಿದಿರುವ ಕಿಯಾರಾ ಅಡ್ವಾಣಿ ಅವರು, ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಂತಹ ವರದಿಯೊಂದರ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಅದರ ಮೇಲೆ ದೊಡ್ಡ ಅಕ್ಷರಗಳಲ್ಲಿ ‘ಸಂಪೂರ್ಣ ಅಸಂಬದ್ಧ’ ಎಂದು ಬರೆಯುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಇದರಿಂದಾಗಿ ಅಭಿಮಾನಿಗಳ ಅನುಮಾನ ಬಗೆಹರಿದಿದೆ.

ಭಾರಿ ನಿರೀಕ್ಷೆ ಮೂಡಿಸಿರುವ ಈ ಚಿತ್ರವು ಸದ್ಯ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಮೊದಲು ಮಾರ್ಚ್ 19ಕ್ಕೆ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ, ಜಾಗತಿಕ ರಾಜಕೀಯ ಉದ್ವಿಗ್ನತೆಗಳ ಕಾರಣದಿಂದ ಜೂನ್ 4ಕ್ಕೆ ಮುಂದೂಡಲ್ಪಟ್ಟಿತ್ತು. ಆದರೆ ಏಪ್ರಿಲ್ 29ರಂದು ಚಿತ್ರತಂಡ ಮತ್ತೊಂದು ಅಪ್‌ಡೇಟ್ ನೀಡಿ, ಜಾಗತಿಕವಾಗಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೇವೆ, ಆದ್ದರಿಂದ ಜೂನ್ 4ರ ಬಿಡುಗಡೆಯನ್ನೂ ಮುಂದೂಡಲಾಗಿದೆ ಎಂದು ತಿಳಿಸಿದೆ. ಸದ್ಯಕ್ಕೆ ಚಿತ್ರದ ಹೊಸ ಬಿಡುಗಡೆ ದಿನಾಂಕ ಘೋಷಣೆಯಾಗಿಲ್ಲ.

ಇದನ್ನೂ ಓದಿ: ‘ಟಾಕ್ಸಿಕ್’ ಕಥೆ ಏನು ಎಂಬುದನ್ನು ಓಪನ್ ಆಗಿ ಹೇಳಿದ ಯಶ್; ವಿಡಿಯೋ ವೈರಲ್

ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಅವರಂತಹ ದೊಡ್ಡ ತಾರಾಗಣವೇ ಇದೆ. ಟೀಸರ್ ಮೂಲಕವೇ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಮಾಡಿರುವ ಈ ಆ್ಯಕ್ಷನ್-ಥ್ರಿಲ್ಲರ್ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಕಿಯಾರಾ ಅವರ ಈ ಖಡಕ್ ಸ್ಪಷ್ಟನೆಯು ಅಭಿಮಾನಿಗಳಲ್ಲಿನ ಗೊಂದಲವನ್ನು ದೂರ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

West Bengal CM: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು; ಯಾರಾಗಲಿದ್ದಾರೆ ಮುಂದಿನ ಮುಖ್ಯಮಂತ್ರಿ? – Kannada News | BJP set to make history in West Bengal, Who will be the Next Chief Minister?

ಕೊಲ್ಕತ್ತಾ, ಮೇ 4: ಪಶ್ಚಿಮ ಬಂಗಾಳದಲ್ಲಿ (West Bengal Assembly Elections) ಮೊಟ್ಟ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈ ಐತಿಹಾಸಿಕ ಕ್ಷಣದಲ್ಲಿ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲವೂ ಮೂಡಿದೆ. ಬಿಜೆಪಿ ತನ್ನ ಪ್ರಚಾರದಲ್ಲಿ ಮಹಿಳಾ ಭದ್ರತೆಯನ್ನು ಮುಂಚೂಣಿಯಲ್ಲಿಟ್ಟುಕೊಂಡಿರುವುದರಿಂದ ಕೇಸರಿ ಪಕ್ಷವು ಮಹಿಳಾ ಮುಖ್ಯಮಂತ್ರಿಯನ್ನು ನೇಮಿಸಬಹುದು ಎಂಬ ವದಂತಿಯೂ ಹರಡಿದೆ. ದೆಹಲಿಯೊಂದರಲ್ಲೇ ಬಿಜೆಪಿಯ ಮಹಿಳಾ ಮುಖ್ಯಮಂತ್ರಿ ಇರುವುದರಿಂದ ಮಹಿಳಾ ಮೀಸಲಾತಿ ಕಾಯ್ದೆಯ ಗೊಂದಲದ ನಂತರ ಬಿಜೆಪಿ ತನ್ನ ಮಹಿಳಾ ಪರ ಇಮೇಜ್ ಅನ್ನು ಉಳಿಸಿಕೊಳ್ಳಲು ಈ ಅವಕಾಶವನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ ಬಂಗಾಳದ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮಾಜಿ ರಾಜ್ಯಾಧ್ಯಕ್ಷರ ಹೆಸರುಗಳು ಕೂಡ ಸಿಎಂ ರೇಸ್​​ನಲ್ಲಿ ಮುಂಚೂಣಿಯಲ್ಲಿವೆ.

ಯಾರಾಗಲಿದ್ದಾರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ?:

ಸುವೇಂದು ಅಧಿಕಾರಿ:

ಟಿಎಂಸಿಯ ಮಾಜಿ ನಾಯಕ ಮತ್ತು ಮಮತಾ ಬ್ಯಾನರ್ಜಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸುವೇಂದು ಅಧಿಕಾರಿ ಬಳಿಕ ಬಿಜೆಪಿ ಸೇರಿ ರಾಜ್ಯಾಧ್ಯಕ್ಷರಾಗಿದ್ದರು. 2021ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಅವರು ಟಿಎಂಸಿಯಿಂದ ಹೊರಬಂದು ಬಿಜೆಪಿ ಸೇರಿದರು. ಅವರನ್ನು ಸಿಎಂ ಸ್ಥಾನದ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಬಂಗಾಳದಲ್ಲಿ ಬಿಜೆಪಿಯ ಪ್ರಮುಖ ನಾಯಕನಾಗಿರುವ ಸುವೇಂದು ಅಧಿಕಾರಿ, 2021ರ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಯನ್ನು ಸೋಲಿಸುವ ಮೂಲಕ ಗಮನ ಸೆಳೆದಿದ್ದರು.

ಇದನ್ನೂ ಓದಿ: ಬಂಗಾಳಿ ಧೋತಿ ಧರಿಸಿ ಬಿಜೆಪಿ ಕಚೇರಿಗೆ ಭರ್ಜರಿ ಎಂಟ್ರಿ ಕೊಟ್ಟ ಪ್ರಧಾನಿ ಮೋದಿ

ಸಮಿಕ್ ಭಟ್ಟಾಚಾರ್ಯ:

ಹೊಸದಾಗಿ ನೇಮಕಗೊಂಡ ಬಂಗಾಳದ ಬಿಜೆಪಿ ಮುಖ್ಯಸ್ಥರಾದ ಸಮಿಕ್ ಭಟ್ಟಾಚಾರ್ಯ ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದವರು. ತೆರೆಮರೆಯಲ್ಲಿ ಕೆಲಸ ಮಾಡಲು ಹೆಸರುವಾಸಿಯಾದ ಭಟ್ಟಾಚಾರ್ಯ ಅವರು ವೈವಿಧ್ಯಮಯ ಸಾಮಾಜಿಕ ಗುಂಪುಗಳಲ್ಲಿ ಬಿಜೆಪಿಯ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಅಗ್ನಿಮಿತ್ರ ಪಾಲ್:

ಫ್ಯಾಷನ್ ಡಿಸೈನರ್ ಆಗಿರುವ ಅಗ್ನಿಮಿತ್ರ ಪಾಲ್, ಬಂಗಾಳದಲ್ಲಿ ಬಿಜೆಪಿಯ ಪ್ರಮುಖ ಮಹಿಳಾ ನಾಯಕಿಯರಲ್ಲಿ ಒಬ್ಬರು. ಬಿಜೆಪಿ ಮಹಿಳಾ ಮೋರ್ಚಾದ ಬಂಗಾಳ ಘಟಕದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿದ್ದ ಇವರು ರಾಜ್ಯ ಬಿಜೆಪಿ ಉಪಾಧ್ಯಕ್ಷೆಯಾಗುವ ಮೂಲಕ ಪ್ರಮುಖ ಹುದ್ದೆಯನ್ನು ಏರಿದ್ದಾರೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯಿಂದ ಪದವೀಧರೆಯಾಗಿರುವ ಪಾಲ್ ಹೆಸರು ಸಿಎಂ ಸಂಭಾವ್ಯ ಪಟ್ಟಿಯಲ್ಲಿ ಕೇಳಿಬರುತ್ತಿದೆ.

ರೂಪಾ ಗಂಗೂಲಿ:

ಬಿಆರ್ ಚೋಪ್ರಾ ಅವರ ಮಹಾಭಾರತದಲ್ಲಿ ದ್ರೌಪದಿ ಪಾತ್ರದ ಮೂಲಕ ಪ್ರಸಿದ್ಧಿ ಪಡೆದಿದ್ದ ರೂಪಾ ಗಂಗೂಲಿ, ಬಿಜೆಪಿಯ ಮತ್ತೊಬ್ಬ ಜನಪ್ರಿಯ ಮಹಿಳಾ ನಾಯಕಿ. ಅವರು ರಾಜ್ಯಸಭಾ ಸಂಸದೆಯೂ ಆಗಿದ್ದಾರೆ. ಬಂಗಾಳ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿ ಎರಡು ವರ್ಷಗಳ ಅವಧಿಯಿಂದಾಗಿ ಜನಸಾಮಾನ್ಯರ ಸಂಪರ್ಕವನ್ನು ಹೊಂದಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿ ಅರಳಿದ ಕಮಲ; ಬಿಜೆಪಿಯ ಗೆಲುವಿಗೆ ಟೊಂಕ ಕಟ್ಟಿ ನಿಂತ ಮೋದಿ-ಅಮಿತ್ ಶಾ ಜೋಡಿ

ದಿಲೀಪ್ ಘೋಷ್:

ತಮ್ಮ ಆಕ್ರಮಣಕಾರಿ ರಾಜಕೀಯ ಶೈಲಿ ಮತ್ತು ಜನಸಾಮಾನ್ಯರ ಸಂಪರ್ಕಕ್ಕೆ ಹೆಸರುವಾಸಿಯಾದ ಮಾಜಿ ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಪಶ್ಚಿಮ ಬಂಗಾಳದಲ್ಲಿ ಪಕ್ಷದ ಅಸ್ತಿತ್ವವನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಜ್ಯ ಬಿಜೆಪಿ ಮುಖ್ಯಸ್ಥರಾಗಿಲ್ಲದಿದ್ದರೂ ಇವರು ಬಂಗಾಳದ ರಾಜಕೀಯದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಉಳಿದಿದ್ದಾರೆ. ಆರ್​ಎಸ್​ಎಸ್​ ಹಿನ್ನೆಲೆಯ ದಿಲೀಪ್ ಘೋಷ್ 2014ರಲ್ಲಿ ಬಂಗಾಳ ಪ್ರಧಾನ ಕಾರ್ಯದರ್ಶಿಯಾಗಿ ಬಿಜೆಪಿ ಸೇರಿದರು.

ಶಂಕರ್ ಘೋಷ್:

ಸಿಲಿಗುರಿಯ ಬಿಜೆಪಿ ಶಾಸಕ ಶಂಕರ್ ಘೋಷ್ ಅವರು ಉತ್ತರ ಬಂಗಾಳದ ಪ್ರಮುಖ ಪ್ರಾದೇಶಿಕ ನಾಯಕ. ಅವರ ಪ್ರಭಾವ ರಾಜ್ಯವ್ಯಾಪಿಗಿಂತ ಹೆಚ್ಚು ಪ್ರಾದೇಶಿಕವಾಗಿದೆ. ಅವರ ಹೆಸರು ಕೂಡ ಸಿಎಂ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಉತ್ತರ ಬಂಗಾಳದ ನಾಯಕರಾದ ಇವರು ಸ್ಥಳೀಯ ಮಟ್ಟದಲ್ಲಿ ಸಂಘಟನಾ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

MI vs LSG: ಮೊದಲ ಸೀಸನ್​ನಲ್ಲೇ 15 ವರ್ಷಗಳ ಹಳೆಯ ದಾಖಲೆ ಮುರಿದ ಮುಂಬೈ ಬೌಲರ್ – Kannada News | Alla Ghazanfar Shatters Harbhajan Singh’s 15 Year IPL Record for MI Powerplay Wickets in 2026

ಅಲ್ಲಾ ಗಜನ್ಫರ್ , ಇಂಗ್ಲಿಸ್ ಅವರ ವಿಕೆಟ್ ಪಡೆಯುವ ಮೂಲಕ ಒಂದೇ ಆವೃತ್ತಿಯಲ್ಲಿ ಮುಂಬೈ ಪರ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಐಪಿಎಲ್ 2026 ರಲ್ಲಿ ಪವರ್‌ಪ್ಲೇನಲ್ಲಿ ಆರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅಲ್ಲಾ ಗಜನ್ಫರ್, 2011 ರಲ್ಲಿ ಹರ್ಭಜನ್ ಸಿಂಗ್ ಪವರ್‌ಪ್ಲೇನಲ್ಲಿ ಐದು ವಿಕೆಟ್‌ ಪಡೆದು ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.

Source link

ಬಂಗಾಳ ನೆಲದಲ್ಲಿ ಹೊಸ ಸೂರ್ಯೋದಯವಾಗಿದೆ: ಇದೀಗ ಬದಲಾವಣೆ ಪರ್ವ ಶುರು ಎಂದ ಮೋದಿ – Kannada News | BJPs Grand Victory in West Bengal: A new sun has risen on Bengal, says PM Modi

ನವದೆಹಲಿ, ಮೇ 04: ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ಬಿಜೆಪಿ ಜಯಭೇರಿ ಸಾಧಿಸಿದೆ. ಹೀಗಾಗಿ ಇಂದು ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ವಿಜಯೋತ್ಸವ ಕಾರ್ಯಕ್ರಮ ಮಾಡಲಾಯಿತು. ಈ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಬಂಗಾಳ ಚುನಾವಣೆ ವೇಳೆ ಅಮಾಯಕರ ಹತ್ಯೆಗಳಾಗಿವೆ. ಆದರೆ ಬಂಗಾಳದಲ್ಲಿ ಮೊದಲ ಬಾರಿಗೆ ಹಿಂಸಾಚಾರ ರಹಿತ ಚುನಾವಣೆ ನಡೆದಿದೆ. ಹಿಂಸಾಚಾರ ರಾಜಕೀಯವನ್ನು ಬೇರು ಸಹಿತ ಕಿತ್ತುಹಾಕಿದ್ದೇವೆ. ಬಂಗಾಳ ನೆಲದಲ್ಲಿ ಹೊಸ ಸೂರ್ಯೋದಯವಾಗಿದೆ. ಈಗ ಬದಲಾವಣೆ ಪರ್ವ ಶುರು, ಸೇಡು ತೀರಿಸಿಕೊಳ್ಳುವುದಲ್ಲ. ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವ ಗೆದ್ದಿದೆ ಎಂದರು. ಪಶ್ಚಿಮ ಬಂಗಾಳದ ಮಹಿಳೆಯರು ಟಿಎಂಸಿಗೆ ತಕ್ಕ ಪಾಠ ಕಲಿಸಿದ್ದಾರೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ಮೂಲಕ ಪಶ್ಚಿಮ ಬಂಗಾಳದಲ್ಲಿ ದಾಖಲೆ ಮತದಾನವಾಗಿದೆ.

ಚುನಾವಣಾ ಫಲಿತಾಂಶದ ಲೈವ್​ ಅಪ್​​ಡೇಟ್​​ಗಾಗಿ ಇಲ್ಲಿ ಕ್ಲಿಕ್ ಮಾಡಿ.

Source link

ಶಾಮನೂರ ಮನೆತನದ 3ನೇ‌ ಪೀಳಿಗೆ ವಿಧಾನಸಭೆಗೆ:ತಂದೆ ರೀತಿ ಚಿಕ್ಕ ವಯಸ್ಸಿನಲ್ಲಿಯೇ ಸಮರ್ಥ ಶಾಸಕ – Kannada News | Davanagere South By Election Result: Samarth Shamanur youngest MLA In Karnataka

ದಾವಣಗೆರೆ, (ಮೇ 04): ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ (Davanagere South Assembly By Poll Result) ಕಾಂಗ್ರೆಸ್​ ಅಭ್ಯರ್ಥಿ ಸಮರ್ಥ್ ಶಾಮನೂರು (Samarth Shamanur) ಗೆಲುವು ಸಾಧಿಸಿದ್ದಾರೆ. ತೀವ್ರ ಪೈಪೋಟಿ ನಡುವೆಯೂ ಅವರು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್​ ದಾಸಕರಿಯಪ್ಪ ಅವರ ವಿರುದ್ಧ 5,708 ಮತಗಳ ಅಂತರದಿಂದ ಜಯ ಸಾಧಿಸಿದ್ದು, ತಂದೆ ತಾಯಿ ಜೊತೆ ಪ್ರಮಾಣ ಪತ್ರವನ್ನು ಸ್ವೀಕರಿಸಿದರು. ಈ ಮೂಲಕ ಅಜ್ಜ ಶಾಮನೂರು ಶಿವಶಂಕರಪ್ಪನವರ ಗೆಲುವಿನ ಹಾದಿಯನ್ನು ಮೊಮ್ಮಗ ಸಮರ್ಥ ಮುಂದುವರಿಸಿದ್ದು, ಶಾಮನೂರು ಮನೆತನದ ಮೂರನೇ ಪೀಳಿಗೆ ವಿಧಾನಸಭೆ ಪ್ರವೇಶ ಮಾಡಿದಂತಾಗಿದೆ.

ಅಜ್ಜ ಶಾಮನೂರು ಶಿವಶಂಕರಪ್ಪ ನಿಧನದಿಂದ ದಾವಣಗೆರೆ ದಕ್ಷಿಣ ವಿಧಾಸಭೆಗೆ ನಡೆದ ಉಪಚುನಾವಣೆಯಲ್ಲಿ ಮೊಮ್ಮಗ ಸಮರ್ಥ ಶಾಮನೂರು ಗೆದ್ದು ಬೀಗಿದ್ದು, ಇದರೊಂದಿಗೆ ಶಾಮನೂರು ಮನೆತನದ ಮೂರನೇ ಪೀಳಿಗೆ ವಿಧಾನಸಭೆ ಪ್ರವೇಶ ಮಾಡಿದೆ. ಇನ್ನು ತಂದೆ ಮಲ್ಲಿಕಾರ್ಜುನ ರೀತಿ ಪುತ್ರ ಸಮರ್ಥ ಸಹ ಚಿಕ್ಕ ವಯಸ್ಸಿನಲ್ಲೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಾಲಿ ಸಚಿವರಾಗಿರುವ ಶಾಮನೂರು ಶಿವಶಂಕರಪ್ಪನವರ ಪುತ್ರ ಎಸ್​​ಎಸ್​​ ಮಲ್ಲಿಕಾರ್ಜುನ ಅವರು 28ನೇ ವಯಸ್ಸಿನಲ್ಲಿ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶ ಮಾಡಿದ್ದರು. ಅದರಂತೆ ಇದೀಗ ಪುತ್ರ ಸಮರ್ಥ ಸಹ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ತಂದೆ ರೀತಿಯಲ್ಲೇ ಚಿಕ್ಕ ವಯಸ್ಸಿನಲ್ಲೇ ಅಂದರೆ 27ನೇ ವಯಸ್ಸಿಗೆ ಗೆದ್ದು ವಿಧಾನಸಭೆಗೆ ಪ್ರವೇಶಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಇದು ನಿಜಕ್ಕೂ ಒಂದು ಕ್ರಾಂತಿ’: ಟಿವಿಕೆ ವಿಜಯ್ ಗೆಲುವಿಗೆ ಕೆವಿಎನ್ ಪ್ರೊಡಕ್ಷನ್ಸ್ ಸಂತಸ – Kannada News | KVN Productions congratulates Jana Nayagan actor Thalapathy Vijay for TVK win

Thalapathy Vijay, Venkat K. Narayana

ನಟ ದಳಪತಿ ವಿಜಯ್ (Thalapathy Vijay) ಅವರು ಈಗ ಪೂರ್ಣಾವಧಿ ರಾಜಕಾರಣಿ. ಚುನಾವಣೆಯ ಅಖಾಡಕ್ಕೆ ಇಳಿದ ಅವರಿಗೆ ಚೊಚ್ಚಲ ಪ್ರಯತ್ನದಲ್ಲೇ ಗೆಲುವು ಸಿಕ್ಕಿದೆ. ಅವರ ಈ ಗೆಲುವನ್ನು ಆಪ್ತರು ಸಂಭ್ರಮಿಸುತ್ತಿದ್ದಾರೆ. ಚುನಾವಣೆಗೂ ಮುನ್ನ ವಿಜಯ್ ಅವರ ಕೊನೇ ಸಿನಿಮಾ ‘ಜನ ನಾಯಗನ್’ (Jana Nayagan) ಬಿಡುಗಡೆಗೆ ಸಾಕಷ್ಟು ತೊಂದರೆ ಉಂಟಾಯಿತು. ಈಗ ಆ ಸಿನಿಮಾದ ನಿರ್ಮಾಣ ಸಂಸ್ಥೆಯಿಂದ ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸಲಾಗಿದೆ. ‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ಸಂಸ್ಥೆಯ ನಿರ್ಮಾಪಕ ವೆಂಕಟ್ ಕೆ. ನಾರಾಯಣ ಅವರು ಅಭಿನಂದನೆ ತಿಳಿಸಿದ್ದಾರೆ.

‘ನಮ್ಮ ಜನ ನಾಯಕನಿಗೆ ಹೃತ್ಪೂರ್ವಕ ಅಭಿನಂದನೆಗಳು’ ಎಂಬ ಕ್ಯಾಪ್ಷನ್​ನೊಂದಿಗೆ ಸಿನಿಮಾದ ಹೊಸ ಪೋಸ್ಟರ್ ಹಂಚಿಕೊಳ್ಳಲಾಗಿದೆ. ಅದರಲ್ಲಿ ದಳಪತಿ ವಿಜಯ್ ಅವರು ದೀವಟಿಗೆ ಹಿಡಿದಿರುವ ಚಿತ್ರ ಇದೆ. ‘ಪ್ರಜಾಪ್ರಭುತ್ವದ ದಾರಿದೀಪ ಹಿಡಿದವರು’ ಎಂದು ಬರೆಯಲಾಗಿದೆ. ಈ ಮೂಲಕ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಯು ದಳಪತಿ ವಿಜಯ್ ಅವರಿಗೆ ಶುಭ ಹಾರೈಸಿದೆ.

‘ಎಲ್ಲಾ ಅಡೆತಡೆಗಳನ್ನು ಮೀರಿ ಇಂದು ಹೊಸ ಇತಿಹಾಸ ಬರೆದಿರುವ ದಳಪತಿ ವಿಜಯ್ ಸರ್ ಅವರಿಗೆ ಅಭಿನಂದನೆಗಳು. ಇದು ನಿಜಕ್ಕೂ ಒಂದು ಕ್ರಾಂತಿ ಮತ್ತು ಮುಂದಿನ ಹಲವು ತಲೆಮಾರುಗಳವರೆಗೆ ಇದು ಪ್ರತಿಧ್ವನಿಸಲಿದೆ’ ಎಂದು ನಿರ್ಮಾಪಕ ವೆಂಕಟ್ ಕೆ. ನಾರಾಯಣ ಅವರ ಪರವಾಗಿ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಜನ ನಾಯಗನ್’ ಸಿನಿಮಾ ಹಲವು ತಿಂಗಳ ಹಿಂದೆಯೇ ಬಿಡುಗಡೆ ಆಗಬೇಕಿತ್ತು. ಆದರೆ ಅನೇಕ ಕಾರಣಗಳಿಂದ ಈ ಚಿತ್ರಕ್ಕೆ ಅಡ್ಡಿ ಉಂಟುಮಾಡಲಾಯಿತು. ಅದರ ಹಿಂದೆ ರಾಜಕೀಯದ ಹುನ್ನಾರ ಇದೆ ಎಂಬುದು ಹಲವರ ಆರೋಪ. ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ಸಿಗದ ಕಾರಣದಿಂದ ಸಿನಿಮಾ ಬಿಡುಗಡೆ ಆಗಲಿಲ್ಲ.

ಇದನ್ನೂ ಓದಿ: ನೀವು ಇತಿಹಾಸ ಸೃಷ್ಟಿ ಮಾಡಿದ್ರಿ: ಟಿವಿಕೆ ಗೆಲುವಿನ ಬಳಿಕ ವಿಜಯ್​ಗೆ ಸೆಲೆಬ್ರಿಟಿಗಳ ಅಭಿನಂದನೆ

ಈ ಪ್ರಕರಣ ಸುಪ್ರೀಂ ಕೋರ್ಟ್ ತನಕ ಹೋಯಿತು. ತಮ್ಮ ಚುನಾವಣಾ ಭಾಷಣದಲ್ಲಿ ದಳಪತಿ ವಿಜಯ್ ಅವರು ಆ ಬಗ್ಗೆ ಮಾತನಾಡಿದ್ದರು. ಸಿನಿಮಾ ತಡೆ ಹಿಡಿದಿರುವುದಕ್ಕೆ ತಮಗೆ ನ್ಯಾಯ ಬೇಕು ಎಂದು ಅವರು ಹೇಳಿದ್ದರು. ಚುನಾವಣೆಗೂ ಮುನ್ನ ‘ಜನ ನಾಯಗನ್’ ಸಿನಿಮಾವನ್ನು ಲೀಕ್ ಕೂಡ ಮಾಡಲಾಯಿತು. ಈ ಎಲ್ಲ ಅಡೆತಡೆಗಳನ್ನು ದಾಟಿಕೊಂಡು ವಿಜಯ್ ಅವರು ಜಯ ಸಾಧಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

MI vs LSG: 6,6,6,6,6,6,6.. 2ನೇ ವೇಗದ ಅರ್ಧಶತಕ ಬಾರಿಸಿದ ಪೂರನ್ – Kannada News | IPL 2026: Nicholas Pooran’s Explosive Fifty Smashes MI at Wankhede

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 47 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಪರ ಸ್ಫೋಟಕ ಬ್ಯಾಟರ್ ನಿಕೋಲಸ್ ಪೂರನ್ ಸಿಡಿಲಬ್ಬರದ ಅರ್ಧಶತಕ ಬಾರಿಸಿದರು. ಇಡೀ ಆವೃತ್ತಿಯಲ್ಲಿ ರನ್ ಬರ ಎದುರಿಸುತ್ತಿದ್ದ ಪೂರನ್, ಮುಂಬೈ ವಿರುದ್ಧ ಅಬ್ಬರಿಸುವ ಮೂಲಕ ಈ ಆವೃತ್ತಿಯ ಮೊದಲ ಹಾಗೂ ಲಕ್ನೋ ಪರ ಎರಡನೇ ವೇಗದ ಅರ್ಧಶತಕ ಸಿಡಿಸಿದರು.

ಈ ಪಂದ್ಯದಲ್ಲಿ ಲಕ್ನೋಗೆ ಉತ್ತಮ ಆರಂಭ ಸಿಗಲಿಲ್ಲ. ಜೋಸ್ ಇಂಗ್ಲಿಸ್ ಬೇಗನೇ ಔಟಾದರು. ಆ ಬಳಿಕ ಜೊತೆಯಾದ ಪೂರನ್ ಹಾಗೂ ಮಾರ್ಷ್​ ಮುಂಬೈ ಬೌಲರ್​ಗಳ ಬೆವರಿಳಿಸಿದರು. ಅದರಲ್ಲೂ ಮೊದಲ ಎಸೆತದಿಂದಲೇ ಹೊಡಿಬಡಿ ಆಟಕ್ಕೆ ಮುಂದಾದ ಪೂರನ್ ಬರೋಬ್ಬರಿ 7 ಸಿಕ್ಸರ್ ಸಹಿತ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹಾಗೆಯೇ ಮಾರ್ಷ್​ ಅವರೊಂದಿಗೆ ಶತಕದ ಜೊತೆಯಾಟವನ್ನು ಕಟ್ಟಿದರು. ಪೂರನ್ ಅಬ್ಬರದಿಂದಾಗಿ ಲಕ್ನೋ ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಪವರ್​ಪ್ಲೇನಲ್ಲಿ ಅತ್ಯಧಿಕ ಮೊತ್ತ ಕಲೆಹಾಕಿದ ದಾಖಲೆಯನ್ನು ಮಾಡಿತು. ಅಂತಿಮವಾಗಿ ಪೂರನ್ 21 ಎಸೆತಗಳಲ್ಲಿ 1 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 63 ರನ್ ಬಾರಿಸಿ ಔಟಾದರು.

Source link

ಎಂಜಿಆರ್​ನಿಂದ ರೊನಾಲ್ಡ್ ರೀಗನ್​ವರೆಗೆ ರಾಜಕೀಯದಲ್ಲಿ ಗೆಲುವು, ಸೋಲು ಕಂಡ ಸಿನಿಮಾ ಸೆಲಬ್ರಿಟಿಗಳು – Kannada News | Cinema stars who met with success and failures in politics in India and world

ಬೆಂಗಳೂರು, ಮೇ 4: ದಳಪತಿ ವಿಜಯ್ ಅವರ ಟಿವಿಕೆ ಪಕ್ಷವು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu assembly elections) ಜಯಭೇರಿ ಭಾರಿಸಿದ ಬಳಿಕ ಸಿನಿಮಾ ಮತ್ತು ಪೊಲಿಟಿಕ್ಸ್ ನಂಟಿನ ಕುರಿತು ಟಾಕ್ ಶುರುವಾಗಿದೆ. ರಾಜಕೀಯಕ್ಕೆ ಸಿನಿಮಾ ಒಳ್ಳೆಯ ರಹದಾರಿ ಎಂದು ಅನೇಕರು ಭಾವಿಸಿದ್ದಾರೆ. ಅದು ಅರ್ಧಸತ್ಯ ಎಂಬುದು ಅಂಕಿ ಅಂಶಗಳಿಂದ ತಿಳಿದುಬರುತ್ತದೆ. ಚಿತ್ರರಂಗದಿಂದ ಅನೇಕರು ರಾಜಕೀಯ ಪ್ರವೇಶಕ್ಕೆ ಯತ್ನಿಸಿದ್ದುಂಟು. ಅದರಲ್ಲಿ ಕೆಲವರು ಮಾತ್ರ ಯಶಸ್ಸು ಪಡೆದಿದ್ದಾರೆ. ಅನೇಕರಿಗೆ ಸೋಲಾಗಿದೆ. ಉಕ್ರೇನ್​ನ ಈಗಿನ ಅಧ್ಯಕ್ಷ ಝೆಲೆನ್ಸ್​ಕಿ ಅವರು ಕಾಮಿಡಿಯನ್ ಆಗಿ ಜನಪ್ರಿಯರಾಗಿದ್ದವರು. ಅಮೆರಿಕದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಅವರು ಸಿನಿಮಾ ತಾರೆಯಾಗಿದ್ದವರು.

ಭಾರತದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಚಿತ್ರರಂಗದ ಮೂಲಕ ರಾಜಕೀಯ ಪ್ರವೇಶಿಸುವ ಪ್ರಯತ್ನಗಳು ಬಹಳಷ್ಟು ಆಗಿವೆ. ಇತ್ತೀಚಿನ ದಿನಗಳಲ್ಲಿ ಪವನ್ ಕಲ್ಯಾಣ್, ವಿಜಯ್, ಕಮಲಹಾಸನ್, ಉಪೇಂದ್ರ ಹೆಸರು ಪ್ರಮುಖವಾಗಿ ಕೇಳಿಬರುತ್ತದೆ. ನಟಿ ರಮ್ಯಾ ಕೂಡ ಸಂಸದೆಯಾಗಿ ಮತ್ತು ಸಕ್ರಿಯ ರಾಜಕಾರಣಿಯಾಗಿ ಕೆಲಸ ಮಾಡಿದ್ದಾರೆ. ಆದರೆ, ಯಶಸ್ಸು ಸಿಕ್ಕಿದ್ದು ಕಡಿಮೆ. ರಾಜಕೀಯದಲ್ಲಿ ಯಶಸ್ಸು ಮತ್ತು ಸೋಲು ಕಂಡ ಸಿನಿಮಾ ಸೆಲಬ್ರಿಟಿಗಳ ವಿವರ ಇಂತಿದೆ:

ಇದನ್ನೂ ಓದಿ: ತಮಿಳುನಾಡು ಇತಿಹಾಸದಲ್ಲಿ ಸಿಎಂ ಆದ ಚಿತ್ರರಂಗದ ತಾರೆಯರಿವರು

ರಾಜಕೀಯದಲ್ಲಿ ಯಶಸ್ಸು ಕಂಡ ಸಿನಿಮಾ ತಾರೆಗಳು

ತಮಿಳುನಾಡು

  • ಎಂ.ಜಿ. ರಾಮಚಂದ್ರನ್ (MGR): ತಮಿಳುನಾಡಿನ ರಾಜಕೀಯ ಇತಿಹಾಸವನ್ನೇ ಬದಲಿಸಿದವರು. 1977 ರಿಂದ 1987 ರವರೆಗೆ ಸತತವಾಗಿ ಮುಖ್ಯಮಂತ್ರಿಯಾಗಿದ್ದರು.
  • ಜೆ. ಜಯಲಲಿತಾ: ಎಂಜಿಆರ್ ಅವರ ಉತ್ತರಾಧಿಕಾರಿಯಾಗಿ ಬಂದ ಇವರು ಆರು ಬಾರಿ ಮುಖ್ಯಮಂತ್ರಿಯಾಗಿ ತಮಿಳುನಾಡನ್ನು ಆಳಿದರು.
  • ಸಿ.ಎನ್. ಅಣ್ಣಾದೊರೈ: ಇವರು ನೇರವಾಗಿ ನಟರಲ್ಲದಿದ್ದರೂ, ಚಿತ್ರಕಥೆಗಾರರಾಗಿ ಸಿನಿಮಾ ಮೂಲಕವೇ ರಾಜಕೀಯ ತಳಹದಿ ನಿರ್ಮಿಸಿಕೊಂಡವರು.
  • ಕರುಣಾನಿಧಿ: ಇವರೂ ಕೂಡ ಚಿತ್ರಸಾಹಿತಿಯಾಗಿ ಕೆಲಸ ಮಾಡುತ್ತಿದ್ದವರು. ಮುಂದೆ ಸಿಎಂ ಆಗಿ ತಮಿಳುನಾಡಿನಲ್ಲಿ ಹೆಸರುವಾಸಿಯಾದರು.

ಆಂಧ್ರಪ್ರದೇಶ

  • ಎನ್.ಟಿ. ರಾಮರಾವ್ (NTR): ತೆಲುಗು ಚಿತ್ರರಂಗದ ಈ ಮಹಾನ್ ನಟ ತೆಲುಗು ದೇಶಂ ಪಾರ್ಟಿ (TDP) ಸ್ಥಾಪಿಸಿದ ಕೇವಲ 9 ತಿಂಗಳಲ್ಲೇ ಅಧಿಕಾರ ಹಿಡಿದು ಇತಿಹಾಸ ಸೃಷ್ಟಿಸಿದರು.
  • ಪವನ್ ಕಲ್ಯಾಣ್: ‘ಜನಸೇನಾ’ ಪಕ್ಷದ ಮೂಲಕ ಇಂದು ಆಂಧ್ರ ರಾಜಕಾರಣದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದ್ದಾರೆ.

ಕರ್ನಾಟಕ

  • ಅಂಬರೀಶ್: ಕೇಂದ್ರ ಸಚಿವರಾಗಿ, ರಾಜ್ಯದ ಸಚಿವರಾಗಿ ಮತ್ತು ಸಂಸದರಾಗಿ ಸುದೀರ್ಘ ಕಾಲ ರಾಜಕೀಯದಲ್ಲಿ ಯಶಸ್ವಿಯಾದವರು.
  • ಬಿ.ಸಿ. ಪಾಟೀಲ್, ಸುಮಲತಾ ಅಂಬರೀಶ್, ಉಮಾಶ್ರೀ, ರಮ್ಯಾ: ಇವರು ಕೂಡ ಶಾಸಕರಾಗಿ ಮತ್ತು ಸಚಿವರಾಗಿ ಯಶಸ್ಸು ಕಂಡಿದ್ದಾರೆ.

ರಾಜಕೀಯದಲ್ಲಿ ನಿರೀಕ್ಷಿತ ಯಶಸ್ಸು ಕಾಣದವರು

ಸಿನಿಮಾದಲ್ಲಿ ಸೂಪರ್ ಸ್ಟಾರ್ ಆಗಿದ್ದರೂ, ರಾಜಕೀಯದಲ್ಲಿ ನೆಲೆ ಕಂಡುಕೊಳ್ಳಲು ವಿಫಲರಾದವರ ಪಟ್ಟಿ ಕೂಡ ದೊಡ್ಡದಿದೆ:

  1. ಶಿವಾಜಿ ಗಣೇಶನ್: ತಮಿಳುನಾಡಿನ ಶ್ರೇಷ್ಠ ನಟರಾಗಿದ್ದರೂ, ರಾಜಕೀಯದಲ್ಲಿ ಅವರು ದೊಡ್ಡ ಯಶಸ್ಸು ಕಾಣಲಿಲ್ಲ.
  2. ವಿಜಯಕಾಂತ್: ‘ಡಿಎಂಡಿಕೆ’ ಪಕ್ಷದ ಮೂಲಕ ಈ ಕ್ಯಾಪ್ಟನ್ ಭರವಸೆ ಮೂಡಿಸಿದರೂ, ನಂತರದ ದಿನಗಳಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
  3. ಕಮಲ್ ಹಾಸನ್: ‘ಮಕ್ಕಳ್ ನೀಧಿ ಮೈಯಂ’ ಮೂಲಕ ರಾಜಕೀಯಕ್ಕೆ ಬಂದರೂ, ಚುನಾವಣೆಯಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಲಿಲ್ಲ.
  4. ಅಮಿತಾಭ್ ಬಚ್ಚನ್: 1984ರಲ್ಲಿ ಅಲಹಾಬಾದ್‌ನಿಂದ ಸಂಸದರಾಗಿ ಆಯ್ಕೆಯಾದರೂ, ಕೆಲವೇ ವರ್ಷಗಳಲ್ಲಿ ರಾಜಕೀಯಕ್ಕೆ ವಿದಾಯ ಹೇಳಿದರು.
  5. ಚಿರಂಜೀವಿ: ‘ಪ್ರಜಾರಾಜ್ಯಂ’ ಪಕ್ಷ ಸ್ಥಾಪಿಸಿ ನಂತರ ಕಾಂಗ್ರೆಸ್ ಜೊತೆ ವಿಲೀನಗೊಳಿಸಿದರು, ಆದರೆ ಎನ್‌ಟಿಆರ್ ತರಹದ ಯಶಸ್ಸು ಅವರಿಗೆ ಸಿಗಲಿಲ್ಲ.
  6. ಉಪೇಂದ್ರ: ‘ಪ್ರಜಾಕೀಯ’ ಮೂಲಕ ಹೊಸ ಉಪ್ಪಿ ಹೊಸ ಆಲೋಚನೆ ತಂದರೂ, ಮತದಾರರನ್ನು ಗೆಲ್ಲುವಲ್ಲಿ ಇನ್ನೂ ಯಶಸ್ವಿಯಾಗಿಲ್ಲ.

ಇದನ್ನೂ ಓದಿ: ಜನನಾಯಗನ್ ‘ಸೇಡು’?; ಬಿಜೆಪಿ ಕಾರಣಕ್ಕೆ ಎಐಎಡಿಎಂಕೆ ಬೇಡ ಅಂತಾರಾ ವಿಜಯ್?; ದಳಪತಿ ಮುಂದಿರುವ ಆಯ್ಕೆಗಳೇನು?

ವಿಶ್ವ ಮಟ್ಟದಲ್ಲಿ ಸಿನಿಮಾ ತಾರೆಗಳ ರಾಜಕೀಯ ಪಯಣ

ಭಾರತಕ್ಕೆ ಮಾತ್ರವಲ್ಲ, ವಿಶ್ವದಾದ್ಯಂತ ಸಿನಿಮಾ ನಟರು ರಾಜಕೀಯದಲ್ಲಿ ಮಿಂಚಿದ್ದಾರೆ:

  • ರೊನಾಲ್ಡ್ ರೇಗನ್ (ಅಮೆರಿಕಾ): ಹಾಲಿವುಡ್ ನಟರಾಗಿದ್ದ ಇವರು ಅಮೆರಿಕಾದ 40ನೇ ಅಧ್ಯಕ್ಷರಾಗಿ (1981-1989) ಆಯ್ಕೆಯಾಗಿ ವಿಶ್ವದ ಅತ್ಯಂತ ಪ್ರಭಾವಶಾಲಿ ನಾಯಕರಾದರು.
  • ಆರ್ನಾಲ್ಡ್ ಶ್ವಾರ್ಜಿನೆಗರ್: ‘ಟರ್ಮಿನೇಟರ್’ ಖ್ಯಾತಿಯ ಈ ನಟ ಕ್ಯಾಲಿಫೋರ್ನಿಯಾದ ಗವರ್ನರ್ ಆಗಿ ಎರಡು ಬಾರಿ ಆಯ್ಕೆಯಾದರು.
  • ವೊಲೊಡಿಮಿರ್ ಝೆಲೆನ್ಸ್ಕಿ (ಉಕ್ರೇನ್): ಹಾಸ್ಯ ನಟನಾಗಿದ್ದ ಇವರು ಇಂದು ಉಕ್ರೇನ್‌ನ ಅಧ್ಯಕ್ಷರಾಗಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.
  • ಕ್ಲಿಂಟ್ ಈಸ್ಟ್ ವುಡ್: ಖ್ಯಾತ ಹಾಲಿವುಡ್ ನಟ ಕಾರ್ಮೆಲ್-ಬೈ-ದಿ-ಸೀ ನಗರದ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದರು.

ತಮಿಳುನಾಡಿನಲ್ಲಿ ಈವರೆಗೆ 5 ಮಂದಿ ಮುಖ್ಯಮಂತ್ರಿಗಳು ಸಿನಿಮಾ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಅಮೆರಿಕಾದಲ್ಲಿ ಇಬ್ಬರು ಪ್ರಮುಖ ನಟರು ಉನ್ನತ ಸ್ಥಾನಕ್ಕೇರಿದ್ದಾರೆ. ಒಟ್ಟಾರೆಯಾಗಿ, ಸಿನಿಮಾದ ಜನಪ್ರಿಯತೆ ರಾಜಕೀಯಕ್ಕೆ ಬಾಗಿಲು ತೆರೆಯಬಹುದು, ಆದರೆ ಅಲ್ಲಿ ನೆಲೆ ನಿಲ್ಲಲು ಜನರೊಂದಿಗಿನ ನಿರಂತರ ಸಂಪರ್ಕ ಮತ್ತು ಆಡಳಿತ ಚಾತುರ್ಯ ಬಹಳ ಮುಖ್ಯ ಎಂಬುದು ಇತಿಹಾಸ ಸಾರುವ ಸತ್ಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದಾವಣಗೆರೆ ದಕ್ಷಿಣ ಗೆಲುವಿನ ಕ್ರೆಡಿಟ್ ಯಾರಿಗೆ? ಸಲೀಂ ಅಹ್ಮದ್ ಹೇಳಿದ್ದಿಷ್ಟು – Kannada News | MLC salim ahmed Talks about Congress Candidate Samarth Shamanur Won In Davanagere South By Poll

ದಾವಣಗೆರೆ, (ಮೇ 04): ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಸಮರ್ಥ್ ಶಾಮನೂರು ಗೆಲುವು ಸಾಧಿಸಿದ್ದಾರೆ. ತೀವ್ರ ಪೈಪೋಟಿ ನಡುವೆಯೂ ಅವರು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್​ ದಾಸಕರಿಯಪ್ಪ ಅವರ ವಿರುದ್ಧ 5,708 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಟಿಕೆಟ್ ವಿಚಾರದಲ್ಲಿ ನಡೆದ ಮುಸುಕಿನ ಗುದ್ದಾಟದಿಂದ ಕಾಂಗ್ರೆಸ್​​ ಲೀಡ್ ಕಡಿಮೆಯಾಗಿದೆ, ಯಾಕಂದ್ರೆ, ಟಿಕೆಟ್ ನೀಡದಿದ್ದಕ್ಕೆ ಅಸಮಾಧಾನಗೊಂಡಿರುವ ಮುಸ್ಲಿಮರು ಎಸ್​ಡಿಪಿಐಗೆ ಬೆಂಬಲಿಸಿದ್ದಾರೆ. ಹೀಗಾಗಿ ಕಾಂಗ್ರೆಸ್​ ಮತ ಬ್ಯಾಂಕ್​​​ ಗೆ ಡಿಮ್ಯಾಜ್ ಆಗಿದೆ. ಸಮರ್ಥ್ ಗೆಲುವು ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹ್ಮದ್ ಬಣಕ್ಕೆ ಪ್ಲಸ್ ಪಾಯಿಂಟ್ ಅದರೆ ಸಚಿವ ಜಮೀರ್‌ ಅಹ್ಮದ್ ಖಾನ್ ಅವರಿಗೆ ಇದು ಹಿನ್ನಡೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. ಇನ್ನು ಬಗ್ಗೆ ಸ್ವತಃ ಸಲೀಂ ಅಹ್ಮದ್ ಮಾತನಾಡಿದ್ದು, ಏನು ಹೇಳಿದ್ದಾರೆ ಕೇಳಿ.

ಇದನ್ನೂ ಓದಿ: ಸಮರ್ಥ್ ಶಾಮನೂರು ಜಸ್ಟ್‌ ಪಾಸ್: ಕಾಂಗ್ರೆಸ್​​ಗೆ ಶಾಕ್ ಕೊಟ್ಟ ದಾವಣಗೆರೆ ದಕ್ಷಿಣ ರಿಸಲ್ಟ್

Source link

PM Modi Speech: ಗಂಗೋತ್ರಿಯಿಂದ ಗಂಗಾಸಾಗರದವರೆಗೆ ಕಮಲ ಅರಳಿದೆ; ಬಂಗಾಳದ ಗೆಲುವು ಐತಿಹಾಸಿಕವೆಂದ ಪ್ರಧಾನಿ ಮೋದಿ  – Kannada News | PM Narendra Modi Address The Nation Post BJP Victory in West Bengal, Assam, Puducherry Assembly Election Latest News in Kannada

ನವದೆಹಲಿ, ಮೇ 4: ಮೂರು ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿಯ ಗೆಲುವನ್ನು ಸಂಭ್ರಮಿಸಲು ನವದೆಹಲಿಯ ಭಾರತೀಯ ಜನತಾ ಪಕ್ಷದ ಪ್ರಧಾನ ಕಚೇರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಅಭೂತಪೂರ್ವ ಸ್ವಾಗತ ದೊರೆಯಿತು. ಬಂಗಾಳಿ ಧೋತಿ ಧರಿಸಿ ಬಂದ ಪ್ರಧಾನಿ ಮೋದಿ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ಇಡೀ ಆವರಣದ ಸುತ್ತ “ಮೋದಿ, ಮೋದಿ!” ಎಂಬ ಘೋಷಣೆಗಳು ಪ್ರತಿಧ್ವನಿಸಿತು. ಪ್ರಧಾನಿ ಮೋದಿ “ಭಾರತ್ ಮಾತಾ ಕಿ ಜೈ” ಎಂಬ ಘೋಷಣೆಯೊಂದಿಗೆ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಇಂದು ಐತಿಹಾಸಿಕ ಮತ್ತು ಅಭೂತಪೂರ್ವ ದಿನ ಎಂದ ಅವರು ಈ ಗೆಲುವಿಗೆ ಕಾರಣರಾದ ಬಿಜೆಪಿ ಕಾರ್ಯಕರ್ತರನ್ನು ಅಭಿನಂದಿಸಿದರು.

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ಸಾಧಿಸಿದ ಕುರಿತು ಮಾತನಾಡಿದ ಪ್ರಧಾನಿ ಮೋದಿ, “ತಲೆಮಾರುಗಳಿಂದ ಅಸಂಖ್ಯಾತ ಕಾರ್ಯಕರ್ತರ ಪ್ರಯತ್ನ ಮತ್ತು ಹೋರಾಟಗಳಿಲ್ಲದೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ದಾಖಲೆಯ ಗೆಲುವು ಸಾಧ್ಯವಾಗುತ್ತಿರಲಿಲ್ಲ. ನಾನು ಅವರೆಲ್ಲರನ್ನೂ ವಂದಿಸುತ್ತೇನೆ. ಹಲವು ವರ್ಷಗಳಿಂದ ಅವರು ಎಲ್ಲಾ ರೀತಿಯ ತೊಂದರೆಗಳನ್ನು ನಿವಾರಿಸಿಕೊಂಡು, ಪಕ್ಷದ ಅಭಿವೃದ್ಧಿಗೆ ತಳಮಟ್ಟದಲ್ಲಿ ಶ್ರಮಿಸಿದ್ದಾರೆ. ಅವರು ನಮ್ಮ ಪಕ್ಷದ ಶಕ್ತಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ: PM Modi Speech Live ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ಗೆದ್ದ ಬಿಜೆಪಿ, ಮೋದಿ ಭಾಷಣದ ನೇರಪ್ರಸಾರ

“ಗಂಗಾ ಮಾತೆಯ ಜೊತೆಗೆ ಬ್ರಹ್ಮಪುತ್ರ ಕೂಡ ನಮ್ಮನ್ನು ಆಶೀರ್ವದಿಸಿದೆ. ಅಸ್ಸಾಂನ ಜನರು ಮೂರನೇ ಬಾರಿಗೆ ಬಿಜೆಪಿಯ ಮೇಲೆ ತಮ್ಮ ನಂಬಿಕೆಯನ್ನು ಇಟ್ಟಿದ್ದಾರೆ. ಇದು ಅಸ್ಸಾಂ ಇತಿಹಾಸದಲ್ಲಿ ಮಹತ್ವದ ಘಟನೆಯಾಗಿದೆ. ಅಸ್ಸಾಂ ತನ್ನ ಅಭಿವೃದ್ಧಿಯನ್ನು ಮತ್ತಷ್ಟು ವೇಗಗೊಳಿಸುತ್ತದೆ ಎಂದು ನಾನು ಭರವಸೆ ನೀಡುತ್ತೇನೆ. ಗಂಗೋತ್ರಿಯಿಂದ ಗಂಗಾಸಾಗರದವರೆಗೆ ಕಮಲ ಅರಳಿದೆ. ಗಂಗಾ ಮಾತೆಯ ದಡದಲ್ಲಿರುವ ರಾಜ್ಯಗಳಲ್ಲಿ ಈಗ ಬಿಜೆಪಿ-ಎನ್‌ಡಿಎ ಸರ್ಕಾರಗಳಿವೆ” ಎಂದು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು.

“ಪ್ರಜಾಪ್ರಭುತ್ವ ಮತ್ತು ಚುನಾವಣಾ ರಾಜಕೀಯದಲ್ಲಿ ಗೆಲುವು ಮತ್ತು ಸೋಲು ಸಹಜವಾದ ಭಾಗ. ಆದರೆ ಈ 5 ರಾಜ್ಯಗಳ ಜನರು ನಮ್ಮ ಭಾರತ ಏಕೆ ಪ್ರಜಾಪ್ರಭುತ್ವದ ತಾಯಿ ಎಂಬುದನ್ನು ಇಡೀ ಜಗತ್ತಿಗೆ ತೋರಿಸಿದ್ದಾರೆ. ಪ್ರಜಾಪ್ರಭುತ್ವ ನಮಗೆ ಕೇವಲ ಒಂದು ವ್ಯವಸ್ಥೆಯಲ್ಲ. ಅದು ನಮ್ಮ ರಕ್ತನಾಳಗಳಲ್ಲಿ ಹರಿಯುವ ಸಂಸ್ಕೃತಿ. ಹಲವು ವರ್ಷಗಳ ಪರಿಶ್ರಮ ಸಾಧನೆಯಾಗಿ ಪರಿವರ್ತನೆಗೊಂಡಾಗ ಆಗುವ ಸಂತೋಷವನ್ನು ನಾನು ಇಂದು ದೇಶಾದ್ಯಂತದ ಬಿಜೆಪಿ ಕಾರ್ಯಕರ್ತರ ಮುಖಗಳಲ್ಲಿ ನೋಡುತ್ತಿದ್ದೇನೆ” ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ: ಬಂಗಾಳಿ ಧೋತಿ ಧರಿಸಿ ಬಿಜೆಪಿ ಕಚೇರಿಗೆ ಭರ್ಜರಿ ಎಂಟ್ರಿ ಕೊಟ್ಟ ಪ್ರಧಾನಿ ಮೋದಿ

ಕೇರಳ ಮತ್ತು ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರು ಹಲವಾರು ದೌರ್ಜನ್ಯಗಳಿಗೆ ಒಳಗಾಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು. ಬಂಗಾಳದಲ್ಲಿ ಇಂದು ಬಿಜೆಪಿಯ ಯಶಸ್ಸಿಗೆ ಅಂತಹ ಎಲ್ಲಾ ಕಾರ್ಯಕರ್ತರು ಮತ್ತು ಅವರ ಕುಟುಂಬಗಳು ಕಾರಣ ಎಂದು ಅವರು ಹೇಳಿದರು. ಈ ಗೆಲುವನ್ನು ನಾನು ಬಂಗಾಳದ ಜನರಿಗೆ ಅರ್ಪಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.

“ಪುದುಚೇರಿಯ ಜನರು ನಮಗೆ ತಮ್ಮ ಆಶೀರ್ವಾದ ನೀಡಿದ್ದಾರೆ. ಕಳೆದ 5 ವರ್ಷಗಳಲ್ಲಿ ಎನ್‌ಡಿಎ ಸರ್ಕಾರ ಸಂಪೂರ್ಣ ಸಮರ್ಪಣಾಭಾವದಿಂದ ಕೆಲಸ ಮಾಡಿದೆ. ಇಂದು ಮತ್ತೊಮ್ಮೆ ಜನರು ಎನ್‌ಡಿಎ ಮೇಲೆ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ. ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಎನ್‌ಡಿಎ ಸರ್ಕಾರವು ಅವಿಶ್ರಾಂತವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ನಾನು ಪುದುಚೇರಿಯ ಯುವಕರಿಗೆ ಭರವಸೆ ನೀಡುತ್ತೇನೆ. ಇಂದು, ದೇಶಾದ್ಯಂತ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ-ಎನ್‌ಡಿಎ ಸರ್ಕಾರಗಳು ಅಧಿಕಾರದಲ್ಲಿವೆ. ನಾವು ಜನರಿಗೆ ಸೇವೆ ಸಲ್ಲಿಸಲು ಸಮರ್ಪಿತರಾಗಿದ್ದೇವೆ. ಅದಕ್ಕಾಗಿಯೇ ಜನರು ಬಿಜೆಪಿಯನ್ನು ನಂಬುತ್ತಿದ್ದಾರೆ. ಬಿಜೆಪಿ ಇರುವಲ್ಲಿ ಉತ್ತಮ ಆಡಳಿತವಿದೆ, ಬಿಜೆಪಿ ಇರುವಲ್ಲಿ ಅಭಿವೃದ್ಧಿ ಇದೆ ಎಂಬುದನ್ನು ಜನರು ಸ್ಪಷ್ಟವಾಗಿ ನೋಡುತ್ತಿದ್ದಾರೆ” ಎಂದು ಪ್ರಧಾನಿ ಮೋದಿ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:56 pm, Mon, 4 May 26

Source link