Category Archives: Blog

Your blog category

ಬೆಂಗಳೂರಿನಲ್ಲಿ ತಲೆಯೆತ್ತಲಿದೆ ದೇಶದ ಮೊದಲ ‘ಮೆದುಳು ಮತ್ತು ಮನಸ್ಸಿನ ಮ್ಯೂಸಿಯಂ’! – Kannada News | India’s First Immersive Neuroscience Museum: NIMHANS to Launch Rs 35 Cr ‘Museum of Brain and Mind’ in Bengaluru

ಬೆಂಗಳೂರು, ಮೇ 04: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಅದ್ಭುತ ಲೋಕ ತೆರೆದುಕೊಳ್ಳಲಿದೆ. ನಗರದ ಪ್ರತಿಷ್ಠಿತ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS), ಸುಮಾರು 35 ಕೋಟಿ ರೂಪಾಯಿ ವೆಚ್ಚದಲ್ಲಿ ದೇಶದ ಮೊದಲ ನರವಿಜ್ಞಾನ ಆಧಾರಿತ ಇಮ್ಮರ್ಸಿವ್ (Immersive) ಮ್ಯೂಸಿಯಂ ಅನ್ನು ಅಭಿವೃದ್ಧಿಪಡಿಸುತ್ತಿದೆ.

‘ಮ್ಯೂಸಿಯಂ ಆಫ್ ಬ್ರೈನ್ ಅಂಡ್ ಮೈಂಡ್’ (Museum of Brain and Mind) ಎಂಬ ಹೆಸರಿನ ಈ ವಸ್ತುಸಂಗ್ರಹಾಲಯವು “ನೀವು ಹೇಗಿದ್ದೀರೋ, ಹಾಗೆ ಇರಲು ಕಾರಣವೇನು ತಿಳಿಯಿರಿ” ಎಂಬ ಸರಳ ಉದ್ದೇಶದೊಂದಿಗೆ ನಿರ್ಮಾಣವಾಗುತ್ತಿದೆ. ದೈಹಿಕ ಅಂಗವಾದ ಮೆದುಳು ಮತ್ತು ಭಾವನೆಗಳ ಕೇಂದ್ರವಾದ ಮನಸ್ಸಿನ ನಡುವಿನ ಅಂತರವನ್ನು ಹೋಗಲಾಡಿಸುವುದು ಇದರ ಮುಖ್ಯ ಗುರಿಯಾಗಿದೆ.

ಏನೆಲ್ಲಾ ಇರಲಿದೆ ಈ ಮ್ಯೂಸಿಯಂನಲ್ಲಿ?

  • ಇಮ್ಮರ್ಸಿವ್ ಅನುಭವ: ಇದು ಕೇವಲ ಪ್ರದರ್ಶನ ಕೇಂದ್ರವಲ್ಲ, ಬದಲಿಗೆ ಮೆದುಳಿನ ರಚನೆ, ನೆನಪಿನ ಶಕ್ತಿ, ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ಮತ್ತು ಮನುಷ್ಯನ ವಿಕಾಸದ ಬಗ್ಗೆ ಡಿಜಿಟಲ್ ಲೋಕದ ಮೂಲಕ ಮಾಹಿತಿ ನೀಡಲಿದೆ.
  • 50ಕ್ಕೂ ಹೆಚ್ಚು ಸಂವಾದಾತ್ಮಕ ಸ್ಥಾಪನೆಗಳು: ಇದರಲ್ಲಿ 50ಕ್ಕೂ ಹೆಚ್ಚು ಇಂಟರಾಕ್ಟಿವ್ ಇನ್‌ಸ್ಟಾಲೇಶನ್‌ಗಳಿದ್ದು, ಸೆನ್ಸಾರ್ ಆಧಾರಿತ ಇಂಟರ್ಫೇಸ್, ಆಡಿಯೋ-ವಿಸುವಲ್ ಕಥೆ ಹೇಳುವಿಕೆ ಮತ್ತು ಗೇಮಿಂಗ್ ಮೂಲಕ ವಿಜ್ಞಾನವನ್ನು ಸರಳವಾಗಿ ವಿವರಿಸಲಾಗುತ್ತದೆ.
  • ಮೆದುಳಿನ ಬೃಹತ್ ಸಂಗ್ರಹ: ಇಲ್ಲಿ ಸಂರಕ್ಷಿಸಲಾದ ಮೆದುಳುಗಳ ಸಂಗ್ರಹವಿರಲಿದ್ದು, ಇದು ಸಂಶೋಧಕರಿಗೆ ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡಲಿದೆ.
  • ಚಿಕಿತ್ಸಾ ಪದ್ಧತಿಗಳ ಪರಿಚಯ: ನರರೋಗ ಮತ್ತು ಮಾನಸಿಕ ಅಸ್ವಸ್ಥತೆಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಸಂಗೀತ ಮತ್ತು ಕಲರ್ ಥೆರಪಿಯಂತಹ (Music and Colour Therapy) ಆಧುನಿಕ ವಿಧಾನಗಳನ್ನು ಪರಿಚಯಿಸಲಾಗುತ್ತದೆ.

ಮುಖ್ಯ ಉದ್ದೇಶಗಳು

ಟ್ಯಾಗ್‌ಬಿನ್ (Tagbin) ಎಂಬ ಖಾಸಗಿ ಸಂಸ್ಥೆಯು ಇದರ ವಿನ್ಯಾಸದ ಜವಾಬ್ದಾರಿ ಹೊತ್ತಿದ್ದು, ಮಾನಸಿಕ ಆರೋಗ್ಯದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಮತ್ತು ಸಾಮಾಜಿಕ ಕಳಂಕವನ್ನು ಹೋಗಲಾಡಿಸುವುದು ಈ ಯೋಜನೆಯ ಪ್ರಮುಖ ಆಶಯವಾಗಿದೆ. ಜನರಲ್ಲಿ ಮಾನಸಿಕ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ರೋಗಿಗಳ ಬಗ್ಗೆ ಸಹಾನುಭೂತಿ ಬೆಳೆಸುವ ನಿಟ್ಟಿನಲ್ಲಿ ಇದು ಕೆಲಸ ಮಾಡಲಿದೆ. ಬೆಂಗಳೂರಿನ ನಿಮ್ಹಾನ್ಸ್ ಆವರಣದಲ್ಲಿ ಸಿದ್ಧಗೊಳ್ಳುತ್ತಿರುವ ಈ ಅತ್ಯಾಧುನಿಕ ಮ್ಯೂಸಿಯಂ ಇನ್ನೆರಡು ತಿಂಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗುವ ನಿರೀಕ್ಷೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:52 am, Mon, 4 May 26

Source link

ಶೃಂಗೇರಿ ಮರು ಮತ ಎಣಿಕೆಯಲ್ಲಿ ಗೆದ್ದ ಬೆನ್ನಲ್ಲೇ ಎಫ್​ಐಆರ್! ಬಿಜೆಪಿಯ ಜೀವರಾಜ್​ ಹೇಳಿದ್ದೇನು? – Kannada News | Sringeri MLA DN Jeevaraj Reacts to FIR After Winning Post Recount: Claims Victory for Truth and Constitution

ಚಿಕ್ಕಮಗಳೂರು, ಮೇ 4: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಅಂತಿಮವಾಗಿ ಗೆಲುವು ಸಾಧಿಸಿರುವ ಬಿಜೆಪಿ ನಾಯಕ ಡಿ.ಎನ್. ಜೀವರಾಜ್ ಅವರು ಇಂದು (ಮೇ 4) ಅಧಿಕೃತವಾಗಿ ಶಾಸಕ ಸ್ಥಾನದ ಪ್ರಮಾಣಪತ್ರ ಸ್ವೀಕರಿಸಿದ್ದಾರೆ. ಕಳೆದ ಮೂರು ವರ್ಷಗಳ ನಿರಂತರ ಕಾನೂನು ಹೋರಾಟದ ನಂತರ ಲಭಿಸಿದ ಈ ಜಯವನ್ನು ಅವರು ‘ಸತ್ಯಕ್ಕೆ ಸಿಕ್ಕ ಜಯ’ ಎಂದು ಬಣ್ಣಿಸಿದ್ದಾರೆ. ತಮ್ಮ ಗೆಲುವಿನ ಬೆನ್ನಲ್ಲೇ ದಾಖಲಾಗಿರುವ ಎಫ್‌ಐಆರ್ (FIR) ಕುರಿತು ಟಿವಿ9 ಗೆ ಪ್ರತಿಕ್ರಿಯಿಸಿದ ಜೀವರಾಜ್, ‘ಸೋತ ಮೇಲೆ ಟ್ಯಾಂಪರಿಂಗ್ ಆರೋಪ ಮಾಡುವುದು ಸರಿಯಲ್ಲ. ಈ ಹಿಂದೆ ಗೆದ್ದಾಗ ಅದು ಸಾಂವಿಧಾನಿಕ ಗೆಲುವು, ನಾವು ಗೆದ್ದರೆ ಟ್ಯಾಂಪರಿಂಗ್ ಎನ್ನುತ್ತಾರೆ. ನನ್ನ ಮೇಲೆ ಎಫ್‌ಐಆರ್ ದಾಖಲಿಸಲು ಅವಕಾಶವೇ ಇಲ್ಲದಿದ್ದರೂ ಅಕ್ರಮವಾಗಿ ಮಾಡಿದ್ದಾರೆ. ಇದನ್ನು ಪ್ರಶ್ನಿಸಿ ನಾವು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ’ ಎಂದು ಗುಡುಗಿದ್ದಾರೆ.

ಮರು ಎಣಿಕೆಯಲ್ಲಿ ಆಗಿದ್ದೇನು?

2023ರ ಚುನಾವಣೆ ನಂತರ ಮತ ಎಣಿಕೆ ವೇಳೆ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ಜೀವರಾಜ್, ಮರು ಎಣಿಕೆ ವೇಳೆ ಈ ಹಿಂದೆ ತಿರಸ್ಕೃತಗೊಂಡಿದ್ದ ಮತಗಳಲ್ಲಿ ಭಾರಿ ವ್ಯತ್ಯಯ ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಮರು ಎಣಿಕೆ ವೇಳೆ 25 ಮತಗಳಿರುವ ಬಂಡಲ್‌ಗಳು ತಿರಸ್ಕೃತವಾಗಿವೆ. ಈ ಹಿಂದೆ ಅಕ್ರಮವಾಗಿ ಮತಗಳನ್ನು ಸೇರಿಸಿ ಗೆಲ್ಲುವಂತೆ ಮಾಡಲಾಗಿತ್ತು. ನಾವು ಮೊದಲೇ ಮತಪತ್ರಗಳಿಗೆ ಭದ್ರತೆ ನೀಡಿ ಎಂದು ಕೇಳಿಕೊಂಡಿದ್ದೆವು ಎಂದು ಅವರು ಹಳೆಯ ನೆನಪುಗಳನ್ನು ಬಿಚ್ಚಿಟ್ಟರು. ಸದ್ಯ ಹೈಕೋರ್ಟ್ ಆದೇಶದಂತೆ ಅಂಚೆ ಮತಗಳ ಮರು ಎಣಿಕೆಯಲ್ಲಿ ರಾಜೇಗೌಡ ವಿರುದ್ಧ ಜೀವರಾಜ್ ಜಯ ಸಾಧಿಸಿದ್ದು, ಶೃಂಗೇರಿಯ ನೂತನ ಶಾಸಕರಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಗಲಕೋಟೆ ಉಪಚುನಾವಣೆ: ಗೆಲುವನ್ನು ತಂದೆಗೆ ಅರ್ಪಿಸಿ ಉಮೇಶ್​​ ಮೇಟಿ ಭಾವುಕ – Kannada News | Umesh Meti Secures Resounding Victory in Bagalkot By Election, Dedicates Win to Late Father

ಬಾಗಲಕೋಟೆ, ಮೇ 04: ಬಾಗಲಕೋಟೆ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಭರ್ಜರಿ ಜಯ ಸಾಧಿಸಿದ್ದಾರೆ. 21,866 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರನ್ನು ಸೋಲಿಸಿ ಉಮೇಶ್ ಮೇಟಿ ಗೆಲುವಿನ ನಗೆ ಬೀರಿದ್ದಾರೆ. ಉಮೇಶ್ ಮೇಟಿ 97,941 ಮತಗಳನ್ನು ಪಡೆದರೆ, ವೀರಣ್ಣ ಚರಂತಿಮಠ 76,075 ಮತಗಳನ್ನು ಗಳಿಸಿದ್ದಾರೆ. ಗೆಲುವಿನ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಉಮೇಶ್ ಮೇಟಿ, ತಮ್ಮ ವಿಜಯವನ್ನು ತಂದೆ ಹೆಚ್​​.ವೈ. ಮೇಟಿ ಅವರಿಗೆ ಅರ್ಪಿಸಿ ಭಾವುಕರಾದರು. ಅಲ್ಲದೆ, ಇದು ತಮ್ಮ ಗೆಲುವಲ್ಲ, ಕಾರ್ಯಕರ್ತರ ಗೆಲುವು ಎಂದು ಹೇಳಿದ್ದಾರೆ.

ಚುನಾವಣಾ ಫಲಿತಾಂಶದ ಲೈವ್​ ಅಪ್​​ಡೇಟ್​​ಗಾಗಿ ಇಲ್ಲಿ ಕ್ಲಿಕ್ ಮಾಡಿ.

Source link

‘ಬೇವಕೂಫ್ ಮತ್ ಬನಾಓ, ಲಂಚದ ರಾಣಿ’! ಬಂಗಾಳದ ರಣಕಣದಲ್ಲಿ ಮೋದಿ, ಶಾ, ದೀದಿ ನಡುವೆ ನಡೆದಿದ್ದ ವಾಕ್ಸಮರದ ಹಿನ್ನೋಟ – Kannada News | West Bengal Election Result 2026: A Look Back at PM Modi and Amit Shah’s Fiery Campaign vs Mamata Banerjee

ಬಂಗಾಳದ ರಣಕಣದಲ್ಲಿ ಮೋದಿ, ಶಾ, ದೀದಿ ನಡುವೆ ನಡೆದಿದ್ದ ವಾಕ್ಸಮರದ ಹಿನ್ನೋಟImage Credit source: tv9

ನವದೆಹಲಿ, ಮೇ 4: ಇಡೀ ದೇಶದ ಗಮನ ಸೆಳೆದಿದ್ದ ಪಶ್ಚಿಮ ಬಂಗಾಳ (West Bengal) ವಿಧಾನಸಭಾ ಚುನಾವಣೆಯ ಮಹಾ ಅಗ್ನಿಪರೀಕ್ಷೆಯ ಫಲಿತಾಂಶದ ಕ್ಷಣಗಳು (Assembly Election Result 2026) ಹತ್ತಿರ ಬಂದಿದ್ದು, ಬಿಜೆಪಿ (BJP) ಅಧಿಕಾರಕ್ಕೇರುವುದು ನಿಚ್ಚಳವಾಗಿದೆ. ಕಳೆದ ಎರಡು ತಿಂಗಳಿಂದ ಗಂಗೆಯ ಮಡಿಲಲ್ಲಿ ನಡೆದಿದ್ದು ಕೇವಲ ಚುನಾವಣೆಯಲ್ಲ, ಅದು ರಕ್ತಸಿಕ್ತ ರಾಜಕೀಯದ ಕುರುಕ್ಷೇತ್ರ. ಮಮತಾ ಬ್ಯಾನರ್ಜಿಯವರ (Mamata Banerjee) 15 ವರ್ಷಗಳ ಭದ್ರಕೋಟೆಯನ್ನು ಭೇದಿಸಲು ಪ್ರಧಾನಿ ಮೋದಿ (Narendra Modi) ಮತ್ತು ಅಮಿತ್ ಶಾ ನಡೆಸಿದ ‘ಚಾಣಕ್ಯ ತಂತ್ರ’ ಹಾಗೂ ಅದಕ್ಕೆ ದೀದಿ ನೀಡಿದ ಪ್ರತಿಪ್ರಹಾರಗಳು ಈ ಬಾರಿಯ ಚುನಾವಣೆಯನ್ನು ಇತಿಹಾಸದ ಪುಟಗಳಲ್ಲಿ ದಾಖಲಾಗುವಂತೆ ಮಾಡಿವೆ.

ವೈಯಕ್ತಿಕ ವಾಗ್ದಾಳಿ ಮತ್ತು ವ್ಯಂಗ್ಯಭರಿತ ಡೈಲಾಗ್‌ಗಳು

ಈ ಬಾರಿಯ ಪ್ರಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ‘ಬೇವಕೂಫ್ ಮತ್ ಬನಾಓ (ಮೂರ್ಖರನ್ನಾಗಿ ಮಾಡಬೇಡಿ)’ ಎಂಬ ಖಡಕ್ ಮಾತು ಭಾರಿ ಸದ್ದು ಮಾಡಿತ್ತು. ಟಿಎಂಸಿ ನಾಯಕರ ಹೇಳಿಕೆಗಳಿಗೆ ಪ್ರತಿಯಾಗಿ ಶಾ ಆಡಿದ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇನ್ನು ಪ್ರಧಾನಿ ಮೋದಿ ಅವರು ನೇರವಾಗಿಯೇ ಮಮತಾ ಬ್ಯಾನರ್ಜಿಯವರನ್ನು ‘ಲಂಚದ ರಾಣಿ’ ಎಂದು ಟೀಕಿಸುವ ಮೂಲಕ ಭ್ರಷ್ಟಾಚಾರ ಮತ್ತು ಕಮಿಷನ್ ದಂಧೆಯ ಆರೋಪಗಳನ್ನು ಜನರ ಮುಂದಿಟ್ಟಿದ್ದರು.

ಬಿಜೆಪಿ ಪ್ರಚಾರದ ಪ್ರಧಾನ ಅಸ್ತ್ರಗಳು

ಬಿಜೆಪಿ ಪ್ರಚಾರದ ಉದ್ದಕ್ಕೂ ಮಹಿಳೆಯರ ಸುರಕ್ಷತೆ ಮತ್ತು ಶಿಕ್ಷಕರ ನೇಮಕಾತಿ ಹಗರಣವನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಂಡಿತು. ‘ದೀದಿ ಆಡಳಿತದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ’ ಎಂದು ಆರೋಪಿಸಿದ ಅಮಿತ್ ಶಾ, ಬಾಂಗ್ಲಾದೇಶದ ನುಸುಳುಕೋರರಿಗೆ ಟಿಎಂಸಿ ಆಶ್ರಯ ನೀಡುತ್ತಿರುವುದು ದೇಶದ ಭದ್ರತೆಗೆ ಅಪಾಯ ಎಂದು ಎಚ್ಚರಿಸಿದರು. ಅಲ್ಲದೆ, ‘ಬಂಗಾಳದ ಮುಂದಿನ ಸಿಎಂ ಬಂಗಾಳದ ಮಣ್ಣಿನ ಮಗನೇ ಹೊರತು ದೀದಿಯ ಸೋದರ ಸಂಬಂಧಿಯಲ್ಲ’ ಎಂದು ಹೇಳುವ ಮೂಲಕ ಗುಡುಗಿದ್ದರು.

ಟಿಎಂಸಿ ವಿರುದ್ಧ ಬಿಜೆಪಿ ಮಾಡಿದ ಆರೋಪಗಳೇನೇನು?

  • ಬಂಗಾಳದಲ್ಲಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣ
  • ದೀದಿ ಆಡಳಿತದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಪ್ರಚಾರ
  • ಶಿಕ್ಷಕರ ನೇಮಕಾತಿ ಹಗರಣ ಮತ್ತು ಕಮಿಷನ್ ದಂಧೆಯ ಆರೋಪ
  • ಸಿಎಂ ಮಮತಾ ಬ್ಯಾನರ್ಜಿ ಅವರನ್ನು ‘ಲಂಚದ ರಾಣಿ’ ಎಂದು ಟೀಕಿಸಿದ್ದ ಪ್ರಧಾನಿ ಮೋದಿ
  • ಬಾಂಗ್ಲಾದೇಶದ ನುಸುಳುಕೋರರಿಗೆ ಆಶ್ರಯ ನೀಡ್ತಿದ್ದಾರೆಂದು ಅಮಿತ್ ಶಾ ಆರೋಪ

2026ನೇ ವರ್ಷವು ಟಿಎಂಸಿಗೆ ‘ಬೈ-ಬೈ’ ಹೇಳುವ ವರ್ಷವಾಗಲಿದೆ ಎಂದು ಸಿನಿಮಾ ಶೈಲಿಯಲ್ಲಿ ಗುಡುಗಿದ್ದ ಅಮಿತ್ ಶಾ.

ದೀದಿಯ ಪ್ರತಿಪ್ರಹಾರ

ಮೋದಿಯವರ ಆರೋಪಗಳಿಗೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, ‘ಸಿಬಿಐ, ಇಡಿ ಮತ್ತು ಚುನಾವಣಾ ಆಯೋಗ ಬಿಜೆಪಿಯ ಜೇಬಿನಲ್ಲಿವೆ’ ಎಂದು ಕಿಡಿಕಾರಿದ್ದರು. 91 ಲಕ್ಷ ಮತದಾರರ ಹೆಸರನ್ನು ಕೈಬಿಟ್ಟಿರುವುದು ಮತ್ತು ಕೇಂದ್ರ ಸರ್ಕಾರ ಅನುದಾನ ತಡೆಹಿಡಿದಿರುವುದನ್ನು ಪ್ರಮುಖ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡಿದ್ದರು.

ಮೋದಿ ಮೇಲೆ ದೀದಿ ಪ್ರಹಾರ ಹೇಗಿತ್ತು?

  • ಚುನಾವಣೆ ಗೆಲ್ಲಲು ಮೋದಿ ತನಿಖಾ ಸಂಸ್ಥೆಗಳನ್ನು ಬಳಸಿದ್ದಾರೆ ಎಂಬ ಆರೋಪ
  • ಸಿಬಿಐ, ಇಡಿ, ಚುನಾವಣಾ ಆಯೋಗ ಬಿಜೆಪಿ ಜೇಬಿನಲ್ಲಿವೆ ಎಂದು ಮಮತಾ ಕಿಡಿ
  • SIR ನಂತಹ ಕ್ರಮಗಳನ್ನ ಸುಪ್ರೀಂಕೋರ್ಟ್​​ನಲ್ಲಿ ಪ್ರಶ್ನಿಸಿ ವಾದ ಮಂಡನೆ
  • 91 ಲಕ್ಷ ಮತದಾರರ ಹೆಸರನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿದ್ದ ಮಮತಾ
  • ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳಕ್ಕೆ ಅನುದಾನ ತಡೆ ಹಿಡಿದಿದೆ ಎಂದು ಆರೋಪ

ಇದನ್ನೂ ಓದಿ: ಪಂಚ ರಾಜ್ಯ ಚುನಾವಣಾ ಫಲಿತಾಂಶ; ಎಲ್ಲಿ ಹೇಗಿದೆ ಸ್ಥಿತಿ? ಇಲ್ಲಿದೆ ವಿವರ

ಒಟ್ಟಾರೆಯಾಗಿ, ಶೇ 93ರಷ್ಟು ದಾಖಲೆ ಮತದಾನ ಕಂಡಿರುವ ಬಂಗಾಳದಲ್ಲಿ ಈ ಮಾತಿನ ಯುದ್ಧ ಬಿಜೆಪಿಗೆ ವರವಾಗಿ ಪರಿಣಮಿಸಿರುವುದು ಈಗ ಸಾಬೀತಾದಂತಾಗಿದೆ.

ಚುನಾವಣಾ ಫಲಿತಾಂಶದ ಲೈವ್​ ಅಪ್​​ಡೇಟ್​​ಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಚಿತ್ರರಂಗಕ್ಕೆ ವಿಜಯ್ ಗುಡ್​​ಬೈ? ‘ಜನ ನಾಯಗನ್’ ಚಿತ್ರಕ್ಕೆ ಹೆಚ್ಚಿತು ಮೈಲೇಜ್ – Kannada News | Thalapathy Vijay’s Political Rise: CM Aspirations and Impact on Tamil Nadu Cinema

ತಮಿಳುನಾಡು ಚಿತ್ರರಂಗದ ಇತಿಹಾಸವನ್ನು ಒಮ್ಮೆ ತೆಗೆದು ನೋಡಿದರೆ ಇಂದಿನ ನಟ ದಳಪತಿ ವಿಜಯ್ ಅವರ ಗೆಲುವು ಹೆಚ್ಚು ಅಚ್ಚರಿ ತರುವುದಿಲ್ಲ. ಈಗಾಗಲೇ ಅನೇಕ ಚಿತ್ರರಂಗದ ಗಣ್ಯರು ಅಲ್ಲಿನ ರಾಜಕೀಯದಲ್ಲಿ ಯಶಸ್ಸು ಕಂಡಿದ್ದಾರೆ. ಆದರೆ, ಇಲ್ಲಿ ಅಚ್ಚರಿ ತರುತ್ತಿರುವುದು ಎಕ್ಸಿಟ್ ಪೋಲ್ ಲೆಕ್ಕಾಚಾರವನ್ನು ವಿಜಯ್ ಸಂಪೂರ್ಣವಾಗಿ ಉಲ್ಟಾ ಮಾಡಿದ್ದು. ದಳಪತಿ ವಿಜಯ್ ಅವರ ಹಾದಿ ಇತರರಿಗಿಂತ ಭಿನ್ನ ಮತ್ತು ಸವಾಲುಗಳಿಂದ ಕೂಡಿತ್ತು. ಇಂದು ಅವರು ಮುಖ್ಯಮಂತ್ರಿ ಗದ್ದುಗೆಯ ಸನಿಹದಲ್ಲಿ ನಿಂತಿದ್ದಾರೆ. ಅವರ ರಾಜಕೀಯ ಯಶಸ್ಸಿನಿಂದ ಚಿತ್ರರಂಗಕ್ಕೆ ಗುಡ್​​ಬೈ ಹೇಳೋದು ಬಹುತೇಕ ಖಚಿತ ಎಂಬಂತಾಗಿದೆ.

ವಿಜಯ್ ಅವರ ಸಿನಿಮಾಗಳು ಕಳೆದ ದಶಕದಿಂದ ಕೇವಲ ಮನರಂಜನೆಗೆ ಸೀಮಿತವಾಗಿಲ್ಲ. ಅವರ ಚಿತ್ರಗಳಲ್ಲಿನ ರಾಜಕೀಯ ವಿಡಂಬನೆ ಮತ್ತು ಸಮಾಜದ ಅಂಕುಡೊಂಕುಗಳ ಬಗೆಗಿನ ಧ್ವನಿ ಆಡಳಿತಾರೂಢ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು. ವಿಶೇಷವಾಗಿ ‘ಜನ ನಾಯಗನ್’ ಸೆನ್ಸಾರ್ ಮಂಡಳಿಯ ಅಡೆತಡೆಗಳನ್ನು ಎದುರಿಸಬೇಕಾಯಿತು. ಚಿತ್ರಕ್ಕೆ ಅನುಮತಿ ನೀಡಲು ವಿಳಂಬ ಮಾಡುವುದು, ವಿವಾದ ಸೃಷ್ಟಿಸುವುದು ವಿಜಯ್ ಅವರನ್ನು ರಾಜಕೀಯವಾಗಿ ಹತ್ತಿಕ್ಕುವ ಪ್ರಯತ್ನದಂತೆ ಕಂಡಿತ್ತು.

ಈ ಅಡೆತಡೆಗಳೇ ವಿಜಯ್ ಅವರಿಗೆ ಮೈಲೇಜ್ ನೀಡಿತು. ಅವರು ‘ಸಂತ್ರಸ್ತ’ನ ರೀತಿ ಕಾಣಿಸಿದರು. ಇದು ಅವರ ಅಭಿಮಾನಿಗಳಲ್ಲಿ ರಾಜಕೀಯ ಆಕ್ರೋಶದ ಕಿಚ್ಚು ಹಚ್ಚಿದವು. ಇಂದು ಅವರು ರಾಜಕೀಯ ಮುನ್ನಡೆ ಸಾಧಿಸುತ್ತಿದ್ದಂತೆ, ‘ಜನ ನಾಯಗನ್’ ನಿರ್ಮಾಪಕರಲ್ಲಿ ಮಂದಹಾಸ ಮೂಡಿದೆ. ಒಂದೊಮ್ಮೆ ಅವರು ಸಿಎಂ ಆದಲ್ಲಿ, ‘ಜನ ನಾಯಗನ್’ ಚಿತ್ರಕ್ಕೆ ಬೃಹತ್ ಮೈಲೇಜ್ ಸಿಗುವುದು ಪಕ್ಕಾ ಆಗಿದೆ. ಲೀಕ್ ಆದ ಹೊರತಾಗಿಯೂ ‘ಜನ ನಾಯಗನ್’ ಗೆಲ್ಲೋದು ಪಕ್ಕಾ ಆಗಿದೆ.

ಇದನ್ನೂ ಓದಿ: ತಮಿಳುನಾಡು ಚುನಾವಣೆಯಲ್ಲಿ ಪಿಎಂ ಮೋದಿಯ ಧುರಂಧರ್ ದಳಪತಿ ವಿಜಯ್? ಶುರುವಾಗಿದೆ ಚರ್ಚೆ

ವಿಜಯ್ ಅವರ ಈ ಯಶಸ್ಸಿನ ನಡುವೆ ಅಭಿಮಾನಿಗಳಿಗೆ ಕಾಡುತ್ತಿರುವ ಒಂದು ದೊಡ್ಡ ಆತಂಕವೆಂದರೆ ಚಿತ್ರರಂಗಕ್ಕೆ ಅವರು ಹೇಳಲಿರುವ ‘ಗುಡ್ ಬೈ’. ವಿಜಯ್ ಸಿಎಂ ಆಗಿದ್ದೇ ಹೌದಾದಲ್ಲಿ ಸಂಪೂರ್ಣವಾಗಿ ಅವರು ರಾಜಕೀಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ರೀತಿ ಸಿನಿಮಾದಿಂದ ದೂರ ಸರಿಯುವುದು ಕೇವಲ ವೈಯಕ್ತಿಕ ನಿರ್ಧಾರವಲ್ಲ, ಅದು ಜನರ ಮೇಲಿರುವ ಜವಾಬ್ದಾರಿಯ ಸಂಕೇತ ಎಂದು ಅವರು ಭಾವಿಸುತ್ತಾರೆ.
ನಟನೆಯಲ್ಲಿ ಉತ್ತುಂಗದಲ್ಲಿರುವಾಗ ವಿಜಯ್ ಚಿತ್ರರಂಗ ಬಿಡುವುದು ಕಾಲಿವುಡ್‌ಗೆ ದೊಡ್ಡ ನಷ್ಟವಾದರೂ, ತಮಿಳುನಾಡು ರಾಜಕೀಯಕ್ಕೆ ಓರ್ವ ಹೊಸ ಭರವಸೆಯ ನಾಯಕ ಸಿಕ್ಕಂತಾಗಿದೆ. ಅವರ ಕೊನೆಯ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸಾರ್ವಕಾಲಿಕ ದಾಖಲೆ ಬರೆಯುವ ಎಲ್ಲಾ ಲಕ್ಷಣ ಗೋಚರವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 1:19 pm, Mon, 4 May 26

Source link

ಕೈಯಲ್ಲಿ ಡಮರು, ತ್ರಿಶೂಲ ಹಿಡಿದ ಮೋದಿ! ಅಸ್ಸಾಂನಲ್ಲಿ ಬಿಜೆಪಿಯ ಭರ್ಜರಿ ಮುನ್ನಡೆಗೆ ಎಐ ವೀಡಿಯೋ ಹಂಚಿಕೊಂಡು ಸಂಭ್ರಮ – Kannada News | Assam Election Results 2026: BJP Led NDA Set for Historic Hat trick; PM Modi’s AI Video Goes Viral

ಬೆಂಗಳೂರು, ಮೇ 04: ಅಸ್ಸಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರುವತ್ತ ದಾಪುಗಾಲು ಹಾಕಿದೆ. ಒಟ್ಟು 126 ಕ್ಷೇತ್ರಗಳಿರುವ ಅಸ್ಸಾಂನಲ್ಲಿ ಬಹುಮತಕ್ಕೆ 64 ಸ್ಥಾನಗಳ ಅಗತ್ಯವಿದ್ದು, ಮಧ್ಯಾಹ್ನ 11.45ರ ಸುಮಾರಿಗೆ ಬಿಜೆಪಿ ಬರೊಬ್ಬರಿ 101 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ವಿರೋಧ ಪಕ್ಷಗಳನ್ನು ಧೂಳೀಪಟ ಮಾಡಿದೆ.

ಈ ಅಭೂತಪೂರ್ವ ಹ್ಯಾಟ್ರಿಕ್ ಗೆಲುವಿನ ಮುನ್ಸೂಚನೆಯಿಂದ ಅಸ್ಸಾಂ ಬಿಜೆಪಿ ಘಟಕವು ಸಖತ್ ಖುಷಿಯಲ್ಲಿದೆ. ಈ ಸಂಭ್ರಮವನ್ನು ವ್ಯಕ್ತಪಡಿಸಲು ಅಸ್ಸಾಂ ಬಿಜೆಪಿ ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ ವಿಶೇಷ ಎಐ (AI) ವೀಡಿಯೋವೊಂದನ್ನು ಹಂಚಿಕೊಂಡಿದೆ. ಈ ವೀಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಶಿಗೆ ಹೋಗಿದ್ದ ಸಂದರ್ಭದಲ್ಲಿ ಒಂದು ಕೈಯಲ್ಲಿ ಡಮರು ಮತ್ತು ಮತ್ತೊಂದು ಕೈಯಲ್ಲಿ ತ್ರಿಶೂಲ ಹಿಡಿದಿದ್ದ ವೀಡಿಯೋವನ್ನು ಎಐ ಮೂಲಕ ಎಡಿಟ್ ಮಾಡಿ ಹಚಿಕೊಂಡಿದ್ದಾರೆ. ಸದ್ಯ ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಚುನಾವಣಾ ಫಲಿತಾಂಶದ ಲೈವ್​ ಅಪ್​​ಡೇಟ್​​ಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

RCB ತಂಡಕ್ಕೆ ಬಿಗ್ ಶಾಕ್: ಇಂಗ್ಲೆಂಡ್​ಗೆ ತೆರಳಿದ ಫಿಲ್ ಸಾಲ್ಟ್!

Source link

ಕೇರಳದಲ್ಲಿ ಯುಡಿಎಫ್​​ ಕಮಾಲ್​: ಅಧಿಕಾರದಲ್ಲಿದ್ದ ಒಂದೇ ಒಂದು ರಾಜ್ಯವನ್ನೂ ಕಳೆದುಕೊಂಡ ಕಮ್ಯುನಿಷ್ಟರು – Kannada News | Kerala Election: UDF Dominates, Communist Rule Ends in India as LDF Faces Historic Defeat

ಪಿಣರಾಯಿ ವಿಜಯನ್​​Image Credit source: navbharattimes

ತಿರುವನಂತಪುರಂ, ಮೇ 04: 140 ಸದಸ್ಯರ ಬಲವನ್ನು ಹೊಂದಿರುವ ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್) ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಇದನ್ನು ಕಳೆದ ಎರಡು ದಶಕಗಳಲ್ಲಿನ ಅತ್ಯುತ್ತಮ ಪ್ರದರ್ಶನ ಎಂದೇ ಪರಿಗಣಿಸಲಾಗಿದೆ. ಆ ಮೂಲಕ ದೇಶದಲ್ಲಿ ಈವರೆಗೆ ಆಡಳಿತದಲ್ಲಿದ್ದ ಏಕೈಕ ಕಮ್ಯುನಿಷ್ಟ್​​ ಸರ್ಕಾರವೂ ಅಧಿಕಾರ ಕಳೆದುಕೊಳ್ಳುವ ಎಲ್ಲ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

2001ರ ವಿಧಾನಸಭಾ ಚುನಾವಣೆಯ ನಂತರದ ಯುಡಿಎಫ್​​ನ ಅತ್ಯುತ್ತಮ ಫಲಿತಾಂಶ ಇದಾಗಲಿದೆ. ಅಂದು ಯುಡಿಎಫ್ 99 ಸ್ಥಾನಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಇದೀಗ ಸಿಪಿಐ(ಎಂ) ನೇತೃತ್ವದ ಆಡಳಿತದಲ್ಲಿರುವ ಎಲ್‌ಡಿಎಫ್ (ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್) ಹಲವಾರು ಪ್ರಮುಖ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸುತ್ತಿದ್ದು, ಭಾರೀ ಸೋಲಿನತ್ತ ಸಾಗಿರೋದನ್ನು ಅಂಕಿ ಅಂಶಗಳು ಹೇಳುತ್ತಿವೆ. ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ನೇತೃತ್ವದಲ್ಲಿ ನಡೆದ ಪ್ರಚಾರದಲ್ಲಿ ಕಾಂಗ್ರೆಸ್ 100 ಸ್ಥಾನಗಳ ಗುರಿ ಹೊಂದಿದ್ದು, 10 ವರ್ಷಗಳ ನಂತರ ಮತ್ತೆ ಅಧಿಕಾರಕ್ಕೆ ಬರುವ ದಿಸೆಯಲ್ಲಿ ಕೆಲಸ ಮಾಡಿತ್ತು. ಅದೀಗ ಫಲಕೊಟ್ಟಿರೋದು ಸ್ಪಷ್ಟವಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಯುಡಿಎಫ್ ಉತ್ತಮ ಸಾಧನೆ ಮಾಡಿದ್ದು, ಎಲ್‌ಡಿಎಫ್‌ನ ಪರಂಪರೆಯ ಬಲಿಷ್ಠ ಕ್ಷೇತ್ರಗಳಲ್ಲೂ ಉತ್ತಮ ಮತಗಳನ್ನು ಪಡೆದಿದೆ ಎನ್ನುವುದು ಗಮನಾರ್ಹ.

ಇದನ್ನೂ ಓದಿ: ಅಸ್ಸಾಂ, ಪಶ್ಚಿಮ ಬಂಗಾಳ ಸೇರಿ 5 ರಾಜ್ಯಗಳ ಫಲಿತಾಂಶ ಆನ್‌ಲೈನ್‌ನಲ್ಲಿ ನೋಡುವುದು ಹೇಗೆ? ಇಲ್ಲಿವೆ ಸಿಂಪಲ್ ಸ್ಟೆಪ್ಸ್!

ಕೇರಳ ಚುನಾವಣಾ ಇತಿಹಾಸ

  • 2006: ಎಲ್‌ಡಿಎಫ್ – 98, ಯುಡಿಎಫ್ – 42
  • 2011: ಯುಡಿಎಫ್ – 72, ಎಲ್‌ಡಿಎಫ್ – 68
  • 2016: ಎಲ್‌ಡಿಎಫ್ – 91, ಯುಡಿಎಫ್ – 47
  • 2021: ಎಲ್‌ಡಿಎಫ್ – 99, ಯುಡಿಎಫ್ – 41

2016ರಲ್ಲಿ ಗೆದ್ದು ಬೀಗಿದ್ದ ಎಲ್‌ಡಿಎಫ್​​ 2021ರಲ್ಲಿಯೂ ಸತತ ಎರಡನೇ ಬಾರಿ ಅಧಿಕಾರಕ್ಕೇರಿದ್ದು, ಕೇರಳದ ಪರಂಪರೆಯ ಪರ್ಯಾಯ ಆಡಳಿತ ಪದ್ಧತಿಯನ್ನು ಮುರಿದಿತ್ತು. ಆದರೆ ಈ ಬಾರಿ ಯುಡಿಎಫ್ ಭರ್ಜರಿ ಜಯದತ್ತ ದಾಪುಗಾಲಿಟ್ಟಿದ್ದು, ಆಡಳಿತಾರೂಢ ಎಲ್​​ಡಿಎಫ್​​ಗೆ ಭರ್ಜರಿ ಶಾಕ್​​ ಕೊಟ್ಟಿದೆ. ಭಾರಿ ಪ್ರಯತ್ನದ ನಡುವೆಯೂ ದೇಶದವನ್ನು ಆಳುತ್ತಿರುವ ಎನ್​​ಡಿಎ ಕೇರಳದಲ್ಲಿ ಎರಡಂಕಿ ದಾಟಲೂ ಹರಸಾಹಸ ಪಟ್ಟಿರೋದು ಸ್ಪಷ್ಟವಾಗಿದೆ.

ಚುನಾವಣಾ ಫಲಿತಾಂಶದ ಲೈವ್​ ಅಪ್​​ಡೇಟ್​​ಗಾಗಿ ಇಲ್ಲಿ ಕ್ಲಿಕ್ ಮಾಡಿ.

Published On – 1:01 pm, Mon, 4 May 26

Source link

Personality Test: ‘R’ ಅಕ್ಷರದಿಂದ ಹೆಸರು ಪ್ರಾರಂಭವಾಗುವವರ ಸ್ವಭಾವ ಹೇಗಿರುತ್ತೆ ಗೊತ್ತಾ? – Kannada News | R Name Numerology: Uncover Personality, Finance and Love Life Traits

‘R’ ಅಕ್ಷರದಿಂದ ಹೆಸರು ಪ್ರಾರಂಭImage Credit source: Pinterest

ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಹೆಸರಿನ ಮೊದಲ ಅಕ್ಷರವು ನಿಮ್ಮ ಜೀವನದ ದಿಕ್ಕನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ‘R’ ಅಕ್ಷರದಿಂದ ಹೆಸರು ಪ್ರಾರಂಭವಾಗುವ ವ್ಯಕ್ತಿಗಳ ಗುಣಸ್ವಭಾವ, ಆರ್ಥಿಕ ಸ್ಥಿತಿ ಮತ್ತು ವೈವಾಹಿಕ ಜೀವನ ಹೇಗಿರುತ್ತದೆ ಎಂಬುದರ ಕುರಿತು ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

ಬುದ್ಧಿವಂತಿಕೆ ಮತ್ತು ಸಂಯಮದ ವ್ಯಕ್ತಿತ್ವ:

ಸಂಖ್ಯಾಶಾಸ್ತ್ರದ ಪ್ರಕಾರ, ‘R’ ಅಕ್ಷರದಿಂದ ಹೆಸರು ಆರಂಭವಾಗುವ ವ್ಯಕ್ತಿಗಳು ಅತೀವ ಬುದ್ಧಿವಂತರು. ಇವರಲ್ಲಿ ಒಂದು ವಿಶಿಷ್ಟವಾದ ದ್ವಂದ್ವ ಗುಣವಿರುತ್ತದೆ. ಅಂದರೆ ಕೆಲವೊಮ್ಮೆ ಅತ್ಯಂತ ಶಾಂತರಾಗಿದ್ದರೆ, ಮತ್ತೆ ಕೆಲವೊಮ್ಮೆ ಅನಿರೀಕ್ಷಿತವಾಗಿ ವರ್ತಿಸುತ್ತಾರೆ. ಈ ಸ್ವಭಾವವೇ ಅವರಿಗೆ ಆಗಾಗ ಸಮಸ್ಯೆಗಳನ್ನು ತಂದೊಡ್ಡಬಹುದು. ಇವರು ಎಲ್ಲರೊಂದಿಗೆ ಸುಲಭವಾಗಿ ಬೆರೆಯುವ ಗುಣ ಹೊಂದಿದ್ದರೂ, ಕೆಲವೊಮ್ಮೆ ಅತಿಯಾದ ಮುಕ್ತವಾಗಿ ಮಾತನಾಡುವ ಪ್ರವೃತ್ತಿಯಿಂದ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ.

ಆರ್ಥಿಕ ಪರಿಸ್ಥಿತಿ ಮತ್ತು ಹೂಡಿಕೆ:

ಇವರ ಆರ್ಥಿಕ ಜೀವನದ ಬಗ್ಗೆ ಹೇಳುವುದಾದರೆ, ಇವರು ಹಣ ಗಳಿಸುವಲ್ಲಿ ಬಹಳ ಚತುರರು. ಅತೀವ ಪರಿಶ್ರಮದಿಂದ ಕೈತುಂಬಾ ಸಂಪಾದಿಸುತ್ತಾರೆ. ಆದರೆ, ಬಂದ ಹಣವನ್ನು ಉಳಿಸುವ ವಿಷಯದಲ್ಲಿ ಇವರು ತುಸು ಹಿಂದೆ. ಅನಗತ್ಯ ಖರ್ಚು ಅಥವಾ ಯೋಜಿತವಲ್ಲದ ಹೂಡಿಕೆಯಿಂದಾಗಿ ಅನಿರೀಕ್ಷಿತ ಆರ್ಥಿಕ ನಷ್ಟ ಅನುಭವಿಸುವ ಸಂಭವವಿರುತ್ತದೆ. ಆದ್ದರಿಂದ, ಯಾವುದೇ ದೊಡ್ಡ ಮಟ್ಟದ ಹೂಡಿಕೆ ಮಾಡುವ ಮುನ್ನ ಎರಡು ಬಾರಿ ಯೋಚಿಸುವುದು ಇವರಿಗೆ ಬಹಳ ಮುಖ್ಯ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ವೈವಾಹಿಕ ಜೀವನ ಮತ್ತು ಮಾತುಗಾರಿಕೆ:

ಇವರ ವೈವಾಹಿಕ ಜೀವನ ಸಾಮಾನ್ಯವಾಗಿ ಸುಖಮಯವಾಗಿರುತ್ತದೆ. ಆದರೆ ಮನಸ್ಸಿನಲ್ಲಿರುವುದನ್ನು ಮುಚ್ಚುಮರೆ ಇಲ್ಲದೆ ನೇರವಾಗಿ ಹೇಳುವ ಇವರ ಗುಣವು ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಬಹುದು. ‘R’ ಅಕ್ಷರದವರ ದೊಡ್ಡ ಶಕ್ತಿಯೆಂದರೆ ಅವರ ‘ಮಾತುಗಾರಿಕೆ’. ತಮ್ಮ ವಾಗ್ಚತುರ್ಯದಿಂದಲೇ ಇವರು ವೃತ್ತಿಜೀವನದಲ್ಲಿ ಉನ್ನತ ಸ್ಥಾನಕ್ಕೇರುತ್ತಾರೆ.

ಅದೃಷ್ಟದ ಸಾಥ್:

ಒಟ್ಟಾರೆಯಾಗಿ ಹೇಳುವುದಾದರೆ, ‘R’ ಅಕ್ಷರದವರು ಜೀವನದಲ್ಲಿ ಅದೃಷ್ಟವಂತರು. ಎಷ್ಟೇ ಕಠಿಣ ಸಮಸ್ಯೆ ಎದುರಾದರೂ ಇವರ ಅದೃಷ್ಟವು ಇವರನ್ನು ಪಾರು ಮಾಡುತ್ತದೆ. ವೃತ್ತಿ ಮತ್ತು ಸಂಸಾರ ಎರಡರಲ್ಲೂ ಸಮತೋಲನ ಸಾಧಿಸುವ ಶಕ್ತಿ ಇವರಿಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರುಣಾನಿಧಿಗಿಂತ ಸ್ಟಾಲಿನ್ ಅಪಾಯಕಾರಿ, ಆದರೆ ವಿಜಯ್ ಎಂಜಿಆರ್ ಗಿಂತ ಅಪಾಯಕಾರಿ: ರೊಚ್ಚಿಗೆದ್ದ ಅಭಿಮಾನಿಗಳು

ಚೆನ್ನೈ, ಮೇ.4: ತಮಿಳುನಾಡು ರಾಜಕೀಯ ಇತಿಹಾಸದ ದೊಡ್ಡ ನಾಯಕರಾದ ಕರುಣಾನಿಧಿ ಮತ್ತು ಎಂ.ಜಿ.ಆರ್ (MGR) ಅವರಿಗೆ ಹೋಲಿಸಿದರೆ ಇಂದಿನ ನಾಯಕರು ಹೆಚ್ಚು ಪ್ರಬಲವಾಗುತ್ತಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ. ಸ್ಟಾಲಿನ್ ಅವರ ರಾಜತಾಂತ್ರಿಕ ನಡೆಗಳು ಮತ್ತು ವಿಜಯ್ ಅವರ ಜನಪ್ರಿಯತೆ ಈಗ ಹೊಸ ಸಮೀಕರಣಗಳಿಗೆ ನಾಂದಿ ಹಾಡುತ್ತಿವೆ. ಕರುಣಾನಿಧಿ ಅವರಿಗಿಂತಲೂ ಸ್ಟಾಲಿನ್ ಅವರು ಹೆಚ್ಚು ವ್ಯವಸ್ಥಿತವಾಗಿ (Systematic) ಪಕ್ಷ ಮತ್ತು ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.ಎಂ.ಜಿ.ಆರ್ ನಂತರ ಅಷ್ಟೇ ಮಟ್ಟದ ಜನಬೆಂಬಲ ಹೊಂದಿರುವ ವಿಜಯ್, ರಾಜಕೀಯವಾಗಿ ಎಂ.ಜಿ.ಆರ್ ಅವರಿಗಿಂತಲೂ ದೊಡ್ಡ ಬದಲಾವಣೆ ತರಬಲ್ಲರೇ ಎಂಬ ಕುತೂಹಲ ಮೂಡಿದೆ. ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ವಿಜಯ್​​ ಬಗ್ಗೆ  ಮೀಮ್ಸ್​​ಗಳು ವೈರಲ್​ ಆಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link