Category Archives: Blog

Your blog category

ಕರುಣಾನಿಧಿಗಿಂತ ಸ್ಟಾಲಿನ್ ಅಪಾಯಕಾರಿ, ಆದರೆ ವಿಜಯ್ ಎಂಜಿಆರ್ ಗಿಂತ ಅಪಾಯಕಾರಿ: ರೊಚ್ಚಿಗೆದ್ದ ಅಭಿಮಾನಿಗಳು

ಚೆನ್ನೈ, ಮೇ.4: ತಮಿಳುನಾಡು ರಾಜಕೀಯ ಇತಿಹಾಸದ ದೊಡ್ಡ ನಾಯಕರಾದ ಕರುಣಾನಿಧಿ ಮತ್ತು ಎಂ.ಜಿ.ಆರ್ (MGR) ಅವರಿಗೆ ಹೋಲಿಸಿದರೆ ಇಂದಿನ ನಾಯಕರು ಹೆಚ್ಚು ಪ್ರಬಲವಾಗುತ್ತಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ. ಸ್ಟಾಲಿನ್ ಅವರ ರಾಜತಾಂತ್ರಿಕ ನಡೆಗಳು ಮತ್ತು ವಿಜಯ್ ಅವರ ಜನಪ್ರಿಯತೆ ಈಗ ಹೊಸ ಸಮೀಕರಣಗಳಿಗೆ ನಾಂದಿ ಹಾಡುತ್ತಿವೆ. ಕರುಣಾನಿಧಿ ಅವರಿಗಿಂತಲೂ ಸ್ಟಾಲಿನ್ ಅವರು ಹೆಚ್ಚು ವ್ಯವಸ್ಥಿತವಾಗಿ (Systematic) ಪಕ್ಷ ಮತ್ತು ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.ಎಂ.ಜಿ.ಆರ್ ನಂತರ ಅಷ್ಟೇ ಮಟ್ಟದ ಜನಬೆಂಬಲ ಹೊಂದಿರುವ ವಿಜಯ್, ರಾಜಕೀಯವಾಗಿ ಎಂ.ಜಿ.ಆರ್ ಅವರಿಗಿಂತಲೂ ದೊಡ್ಡ ಬದಲಾವಣೆ ತರಬಲ್ಲರೇ ಎಂಬ ಕುತೂಹಲ ಮೂಡಿದೆ. ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ವಿಜಯ್​​ ಬಗ್ಗೆ  ಮೀಮ್ಸ್​​ಗಳು ವೈರಲ್​ ಆಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Election Commission of India Results 2026: ಅಸ್ಸಾಂ, ಪಶ್ಚಿಮ ಬಂಗಾಳ ಸೇರಿ 5 ರಾಜ್ಯಗಳ ಫಲಿತಾಂಶ ಆನ್‌ಲೈನ್‌ನಲ್ಲಿ ನೋಡುವುದು ಹೇಗೆ? ಇಲ್ಲಿವೆ ಸಿಂಪಲ್ ಸ್ಟೆಪ್ಸ್! – Kannada News | ECI Results 2026: Check Assembly Election Results Live on eci.gov.in

ದೆಹಲಿ, ಮೇ. 4: ಭಾರತ ಚುನಾವಣಾ ಆಯೋಗದ (ECI) ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ಪ್ರಕಟ ಮಾಡಿದೆ. ಈ ಎಲ್ಲಾ ಐದು ರಾಜ್ಯಗಳಾದ ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ಮತ ಏಣಿಕೆ ಪ್ರಾರಂಭವಾಗಿದೆ. ಇದೀಗ ಫಲಿತಾಂಶವನ್ನು ಚುನಾವಣಾ ಆಯೋಗದ ಅಧಿಕೃತ ECI ವೆಬ್‌ಸೈಟ್ eci.gov.in ನಲ್ಲಿ ನೀವು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು ಎಂಬುದು ಇಲ್ಲಿದೆ.

ಚುನಾವಣಾ ಫಲಿತಾಂಶಗಳನ್ನು ಪರಿಶೀಲಿಸುವುದು ಹೇಗೆ?

ಭಾರತ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್: eci.gov.in

ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಲ್ಲಿ ಲಭ್ಯವಿರುವ ಮತದಾರರ ಸಹಾಯವಾಣಿ ಮೊಬೈಲ್ ಅಪ್ಲಿಕೇಶನ್.

ಲೈವ್‌ಬ್ಲಾಗ್‌ಗಳು ಮತ್ತು ಯೂಟ್ಯೂಬ್ ಸ್ಟ್ರೀಮ್‌ಗಳನ್ನು ನಡೆಸುವ ಇಂಡಿಯನ್ ಎಕ್ಸ್‌ಪ್ರೆಸ್ ವೆಬ್‌ಸೈಟ್.

ಎಣಿಕೆ ಪ್ರಕ್ರಿಯೆಯನ್ನು ಹೇಗೆ ನಡೆಸಲಾಗುತ್ತದೆ?

ಎಣಿಕೆ ಪ್ರಕ್ರಿಯೆಯು ಅಂಚೆ ಮತಪತ್ರಗಳೊಂದಿಗೆ ಪ್ರಾರಂಭವಾಗುತ್ತದೆ ಮತ್ತು ನಂತರ ಎಲೆಕ್ಟ್ರಾನಿಕ್ ಮತಯಂತ್ರಗಳಿಗೆ (ಇವಿಎಂ) ಹೋಗುತ್ತದೆ. ಆರಂಭಿಕ ಪ್ರವೃತ್ತಿಗಳು ಒಂದೆರಡು ಗಂಟೆಗಳಲ್ಲಿ ಹೊರಹೊಮ್ಮುವ ನಿರೀಕ್ಷೆಯಿದೆ. ಎಲ್ಲಾ ಎಣಿಕೆ ಸುತ್ತುಗಳು ಪೂರ್ಣಗೊಂಡ ನಂತರ ಅಂತಿಮ ಫಲಿತಾಂಶಗಳನ್ನು ಘೋಷಿಸಲಾಗುತ್ತದೆ.

ಭಾರತ ಚುನಾವಣಾ ಆಯೋಗದ ಫಲಿತಾಂಶದಲ್ಲಿ ವೆಬ್‌ಸೈಟ್ ಈ ಮಾಹಿತಿಗಳನ್ನು ಒದಗಿಸುತ್ತದೆ:

ಕ್ಷೇತ್ರವಾರು ಫಲಿತಾಂಶಗಳು

ಪಕ್ಷವಾರು ಪ್ರಮುಖ ಮತ್ತು ವಿಜೇತ ಅಭ್ಯರ್ಥಿಗಳು

ಗೆಲುವಿನ ಅಂತರ

ಪಕ್ಷದ ಒಟ್ಟಾರೆ ಕಾರ್ಯಕ್ಷಮತೆ

ಇದನ್ನೂ ಓದಿ: ದಳಪತಿ ವಿಜಯ್ ರಾಜಕೀಯ ಎಂಟ್ರಿ ಹಿಂದೆ ಮಾಸ್ಟರ್ ಮೈಂಡ್ ಪ್ರಶಾಂತ್ ಕಿಶೋರ್? ಹೇಗಿತ್ತು ನೋಡಿ ಚುನಾವಣೆ ಪ್ರಚಾರದ ಬ್ಲೂಪ್ರಿಂಟ್

ಫಲಿತಾಂಶಗಳು ಐದು ಪ್ರದೇಶಗಳನ್ನು ಒಳಗೊಂಡಿವೆ:

ತಮಿಳುನಾಡು

ಪಶ್ಚಿಮ ಬಂಗಾಳ

ಅಸ್ಸಾಂ

ಕೇರಳ

ಪುದುಚೇರಿ

ಪ್ರತಿಯೊಂದು ರಾಜ್ಯವು ತನ್ನದೇ ಆದ ವಿಭಾಗವನ್ನು ಹೊಂದಿದೆ, ಆದ್ದರಿಂದ ನೀವು ಅವುಗಳ ನಡುವೆ ಸುಲಭವಾಗಿ ಬದಲಾಯಿಸಬಹುದು ಮತ್ತು ಎಣಿಕೆ ಮುಂದುವರೆದಂತೆ ನವೀಕರಣಗಳನ್ನು ಟ್ರ್ಯಾಕ್ ಮಾಡಬಹುದು.

ಇಸಿಐ ವೆಬ್‌ಸೈಟ್ ಅನ್ನು ಏಕೆ ಬಳಸಬೇಕು?

ಚುನಾವಣಾ ಫಲಿತಾಂಶಗಳಿಗೆ ಅಧಿಕೃತ ಪೋರ್ಟಲ್ ಅತ್ಯಂತ ನಿಖರವಾದ ಮೂಲಗಳಲ್ಲಿ ಒಂದಾಗಿದೆ. ಸಾಮಾಜಿಕ ಮಾಧ್ಯಮ ಅಥವಾ ಅನಧಿಕೃತ ಟ್ರ್ಯಾಕರ್‌ಗಳಂತಲ್ಲದೆ, ಇಲ್ಲಿನ ಡೇಟಾ ನೇರವಾಗಿ ಎಣಿಕೆ ಕೇಂದ್ರಗಳಿಂದ ಬರುತ್ತದೆ. ಇದನ್ನು ನಿಯಮಿತವಾಗಿ ನವೀಕರಿಸಲಾಗುತ್ತದೆ, ಊಹಾಪೋಹಗಳನ್ನು ಅವಲಂಬಿಸದೆ ನೀವು ನೈಜ-ಸಮಯದ ಸಂಖ್ಯೆಗಳನ್ನು ನೋಡಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗುಟ್ಟು ರಟ್ಟಾಗುವ ಭೀತಿ: ಐಪಿಎಲ್‌ನಲ್ಲಿ ‘ಗರ್ಲ್‌ಫ್ರೆಂಡ್ ಕಲ್ಚರ್’ಗೆ ಬ್ರೇಕ್!

ಇಂಡಿಯನ್ ಪ್ರೀಮಿಯರ್ ಲೀಗ್ (IPL) ವಿಶ್ವದ ಅತ್ಯಂತ ಶ್ರೀಮಂತ ಮತ್ತು ಜನಪ್ರಿಯ ಕ್ರಿಕೆಟ್ ಲೀಗ್ ಎಂಬ ಹೆಗ್ಗಳಿಕೆ ಹೊಂದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಆಟಗಾರರ ವೈಯಕ್ತಿಕ ಜೀವನ ಮತ್ತು ತಂಡದ ಶಿಸ್ತಿನ ನಡುವಿನ ಗೆರೆ ಅಸ್ಪಷ್ಟವಾಗುತ್ತಿರುವುದು ಬಿಸಿಸಿಐ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, ಐಪಿಎಲ್‌ನಲ್ಲಿ ಹೆಚ್ಚುತ್ತಿರುವ ‘ಗರ್ಲ್‌ಫ್ರೆಂಡ್ ಕಲ್ಚರ್’ (Girlfriend Culture) ಗೆ ಕಡಿವಾಣ ಹಾಕಲು ಕ್ರಿಕೆಟ್ ಮಂಡಳಿ ಈಗ ಕಠಿಣ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ.

ಕಠಿಣ ಕ್ರಮಕ್ಕೆ ಮುಖ್ಯ ಕಾರಣಗಳೇನು?

ಐಪಿಎಲ್ ತಂಡದ ಆಂತರಿಕ ವಿಷಯಗಳು ಮತ್ತು ರಹಸ್ಯ ತಂತ್ರಗಳು ಹೊರಗಡೆ ಸೋರಿಕೆಯಾಗುತ್ತಿರುವುದು ಬಿಸಿಸಿಐನ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ವರದಿಯಾಗಿದೆ.

  • ಆಂತರಿಕ ಮಾಹಿತಿ ಸೋರಿಕೆ: ಅನೇಕ ಆಟಗಾರರ ಗೆಳತಿಯರು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿದ್ದಾರೆ. ಅವರು ಹಂಚಿಕೊಳ್ಳುವ ಫೋಟೋ ಅಥವಾ ವಿಡಿಯೋಗಳ ಮೂಲಕ ತಂಡದ ಆಂತರಿಕ ಚರ್ಚೆಗಳು ಅಥವಾ ಸೌಲಭ್ಯಗಳ ಮಾಹಿತಿ ಸಾರ್ವಜನಿಕವಾಗುವ ಅಪಾಯವಿದೆ.
  • ಬೆಟ್ಟಿಂಗ್ ಆ್ಯಪ್‌ಗಳ ಪ್ರಚಾರ: ಕೆಲವು ಆಟಗಾರರ ಆಪ್ತರು ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡುತ್ತಿರುವುದು ಬಿಸಿಸಿಐ ಗಮನಕ್ಕೆ ಬಂದಿದೆ. ಇದು ಐಪಿಎಲ್‌ನ ಘನತೆಗೆ ಧಕ್ಕೆ ತರುವ ಸಾಧ್ಯತೆ ಇದೆ ಎಂದು ಮಂಡಳಿ ಭಾವಿಸಿದೆ.
  • ಶಿಸ್ತಿನ ಕೊರತೆ: ತಂಡದ ಬಸ್‌ಗಳಲ್ಲಿ ಗೆಳತಿಯರಿಗೆ ಅವಕಾಶ ನೀಡುವುದು, ಹೋಟೆಲ್‌ಗಳಲ್ಲಿ ದೀರ್ಘಕಾಲ ವಾಸ್ತವ್ಯ ಹೂಡುವುದು ತಂಡದ ವೃತ್ತಿಪರತೆಗೆ ಅಡ್ಡಿಯಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ. ಇತ್ತೀಚೆಗೆ ಕೆಲವು ತಂಡಗಳ ಬಸ್‌ಗಳು ಆಟಗಾರರ ಗೆಳತಿಯರಿಗಾಗಿ ಕಾಯಬೇಕಾದ ಪರಿಸ್ಥಿತಿ ಬಂದಿತ್ತು ಎಂಬ ಮಾಹಿತಿ ಲೀಕ್ ಆಗಿದೆ.
  • ಇತ್ತೀಚಿನ ವಿವಾದಗಳು: ರಾಜಸ್ಥಾನ್ ರಾಯಲ್ಸ್‌ನ ರಿಯಾನ್ ಪರಾಗ್ ಡಗೌಟ್‌ನಲ್ಲಿ ವೇಪಿಂಗ್  ಮಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಮತ್ತು ಮೊಬೈಲ್ ಬಳಕೆಯಂತಹ ಘಟನೆಗಳು ಶಿಸ್ತಿನ ಕ್ರಮ ಅನಿವಾರ್ಯ ಎಂಬುದನ್ನು ಒತ್ತಿಹೇಳಿವೆ.

ಬರಲಿರುವ ಹೊಸ ನಿಯಮಗಳೇನು?

ಬಿಸಿಸಿಐ ಮೂಲಗಳ ಪ್ರಕಾರ, ಮುಂದಿನ ಸೀಸನ್‌ನಿಂದ ಈ ಕೆಳಗಿನ ಬದಲಾವಣೆಗಳನ್ನು ನಿರೀಕ್ಷಿಸಬಹುದು:

  • ಪ್ರತ್ಯೇಕ ವಾಸ್ತವ್ಯ: ಆಟಗಾರರ ಗೆಳತಿಯರಿಗೆ ತಂಡದ ಬಸ್‌ನಲ್ಲಿ ಪ್ರಯಾಣಿಸಲು ಅಥವಾ ತಂಡದ ಹೋಟೆಲ್‌ನಲ್ಲಿ ಉಳಿಯಲು ಅನುಮತಿ ಇರುವುದಿಲ್ಲ.
  • ಸೀಮಿತ ಭೇಟಿ: ಭಾರತೀಯ ರಾಷ್ಟ್ರೀಯ ತಂಡದಲ್ಲಿರುವಂತೆ, ಕುಟುಂಬದ ಸದಸ್ಯರಿಗೆ ಅಥವಾ ಆಪ್ತರಿಗೆ ಕೇವಲ 7 ರಿಂದ 14 ದಿನಗಳ ಕಾಲ ಮಾತ್ರ ವಾಸ್ತವ್ಯಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ.
  • ನಿರ್ಬಂಧಿತ ಪ್ರದೇಶಗಳು: ಡ್ರೆಸ್ಸಿಂಗ್ ರೂಮ್ ಮತ್ತು ಮೈದಾನದ ಪ್ರಮುಖ ಭಾಗಗಳಿಗೆ ಅಧಿಕೃತ ಸಿಬ್ಬಂದಿ ಹೊರತುಪಡಿಸಿ ಯಾರಿಗೂ ಪ್ರವೇಶ ಇರುವುದಿಲ್ಲ.
  • ಅನುಷ್ಠಾನದ ಸಮಯ: ಈ ಹೊಸ ನಿಯಮಗಳು ಬಹುಶಃ ಐಪಿಎಲ್ 2027 ರಿಂದ ಜಾರಿಗೆ ಬರಬಹುದು.
  • ಭವಿಷ್ಯದ ಹಿತದೃಷ್ಟಿ: ಈಗಲೇ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಭವಿಷ್ಯದಲ್ಲಿ ದೊಡ್ಡ ವಿವಾದಗಳು ಸೃಷ್ಟಿಯಾಗಬಹುದು ಎಂಬ ಆತಂಕ ಬಿಸಿಸಿಐ ಎದುರಿಗಿದೆ. ಹೀಗಾಗಿ ಐಪಿಎಲ್ 2027ರ ವೇಳೆ ಈ ನಿಯಮಗಳು ಜಾರಿಗೆ ಬರುವುದು ಬಹುತೇಕ ಖಚಿತ.

 

 

Source link

ತಮಿಳುನಾಡು ಚುನಾವಣೆಯಲ್ಲಿ ಪಿಎಂ ಮೋದಿಯ ಧುರಂಧರ್ ದಳಪತಿ ವಿಜಯ್? ಶುರುವಾಗಿದೆ ಚರ್ಚೆ – Kannada News | Tamil Nadu Election Results: TVK Leads! Is PM Modi Behind Actor Vijay’s Rise

ತಮಿಳುನಾಡು ಚುನಾವಣಾ ಫಲಿತಾಂಶ ಹೊರ ಬಂದಿದೆ. ಟಿವಿಕೆ ಮುನ್ನಡೆ ಸಾಧಿಸುವ ಮೂಲಕ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷವನ್ನು ಹಿಂದಿಕ್ಕಿದೆ. ಹೀಗಿರುವಾಗಲೇ ಸೋಶಿಯಲ್ ಮೀಡಿಯಾದಲ್ಲಿ ಒಂದು ದೊಡ್ಡ ಚರ್ಚೆ ಶುರುವಾಗಿದೆ. ‘ತಮಿಳುನಾಡಿನಲ್ಲಿ ದಳಪತಿ ವಿಜಯ್ ಕಣಕ್ಕಿಳಿಸಿದ್ದು ಪ್ರಧಾನಿ ನರೇಂದ್ರ ಮೋದಿಯೇ? ವಿಜಯ್ ಅವರು ಮೋದಿಯ ಧುರಂಧರ್’ ಎಂದೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

‘ಧುರಂಧರ್’ ಸಿನಿಮಾದಲ್ಲಿ ಜಸ್ಕಿರತ್ ಸಿಂಗ್ ಅವರು ಹಮ್ಜಾ ಅಲಿ ಮಜಾರಿ ಎಂಬ ಹೆಸರಿನಲ್ಲಿ ಪಾಕಿಸ್ತಾನಕ್ಕೆ ತೆರಳಿ ಅಲ್ಲಿನ ಉಗ್ರ ಜಾಲವನ್ನು ನಾಶ ಮಾಡುತ್ತಾರೆ. ಅವರನ್ನು ಭಾರತದ ‘ಧುರಂಧರ್’ ಎಂದು ಕರೆಯಲಾಗುತ್ತದೆ. ಅದೇ ರೀತಿ, ತಮಿಳುನಾಡಿನ ದ್ರಾವಿಡ ಪಕ್ಷಗಳ ಭದ್ರಕೋಟೆಯನ್ನು ಭೇದಿಸಲು ವಿಜಯ್ ಅವರನ್ನು ಕಣಕ್ಕಿಳಿಸಿದ್ದು ಮೋದಿಯೇ ಎಂಬ ಮಾತುಗಳು ಕೇಳಿಬರುತ್ತಿವೆ.

ಅದು 2014ರ ಸಮಯ. ಆ ವರ್ಷ ಏಪ್ರಿಲ್ 16ರಂದು ಕೊಯಮತ್ತೂರಿನಲ್ಲಿ ನಟ ವಿಜಯ್ ಅವರು ಅಂದಿನ ಗುಜರಾತ್ ಮುಖ್ಯಮಂತ್ರಿ ಮತ್ತು ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಈ ಫೋಟೋವನ್ನು ಮೋದಿ ಹಂಚಿಕೊಂಡಿದ್ದರು. ಈ ಭೇಟಿ ರಾಜಕೀಯೇತರ ಎಂದು ವಿವರಿಸಲಾಗಿತ್ತು. ಇಬ್ಬರೂ ಪರಸ್ಪರ ಲೋಕಾರೂಢ ವಿಷಯಗಳ ಬಗ್ಗೆ ಮಾತನಾಡಿದ್ದರು ಎನ್ನಲಾಗಿದೆ. ಆ ಸಮಯದಲ್ಲಿ ತಮಿಳುನಾಡಿನಲ್ಲಿ ರಜನಿಕಾಂತ್ ಅವರನ್ನೂ ಭೇಟಿ ಮಾಡಿದ್ದ ಮೋದಿ ಅವರು, ರಾಜ್ಯದ ಪ್ರಭಾವಿ ತಾರೆಗಳ ಮೂಲಕ ಮತದಾರರನ್ನು ತಲುಪುವ ಪ್ರಯತ್ನ ಮಾಡಿದ್ದರು. ಆ ಸಮಯದಲ್ಲಿ ಈ ಭೇಟಿ ದೊಡ್ಡ ಸಂಚಲನ ಮೂಡಿಸಿತ್ತಾದರೂ, ವಿಜಯ್ ಅವರು ಆಗ ಯಾವುದೇ ರಾಜಕೀಯ ಪಕ್ಷ ಸೇರದೆ ದೂರ ಉಳಿದಿದ್ದರು. ಅಂದು ಮೋದಿ ಹಂಚಿಕೊಂಡಿದ್ದ ಫೋಟೋವನ್ನು ರೀಟ್ವೀಟ್ ಮಾಡಲಾಗುತ್ತಿದೆ.

ಇದನ್ನೂ ಓದಿ: ‘ಧುರಂಧರ್’ ನಿರ್ದೇಶಕನ ಮೇಲೆ ಕತೆ ಕದ್ದ ಆರೋಪ: ಕರ್ನಾಟಕ ಹೈಕೋರ್ಟ್ ಹೇಳಿದ್ದೇನು?

‘ಸಾಮಾನ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ಭೇಟಿ ಮಾಡಲು ಬರುವ ಅತಿಥಿಗಳನ್ನು ಎದುರುಬದುರಿನ ಆಸನಗಳಲ್ಲಿ ಕೂರಿಸುತ್ತಾರೆ. ಆದರೆ 2014ರಲ್ಲಿ ನಟ ವಿಜಯ್ ಅವರನ್ನು ಭೇಟಿ ಮಾಡಿದಾಗ, ಅವರನ್ನು ತಮ್ಮ ಪಕ್ಕದಲ್ಲೇ ಕೂರಿಸಿಕೊಂಡಿದ್ದರು. ಆಗ ಅರ್ಥವಾಗುತ್ತಿರಲಿಲ್ಲ, ಈಗ ಅರ್ಥವಾಗುತ್ತಿದೆ’ ಎಂದು ಕೆಲವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಾಗಲಕೋಟೆ ಬೈ ಎಲೆಕ್ಷನ್​​: ಮೊದಲ ಚುನಾವಣೆಯಲ್ಲೇ ಗೆದ್ದು ಬೀಗಿದ ಕಾಂಗ್ರೆಸ್​​ನ ಉಮೇಶ್ ಮೇಟಿ – Kannada News | Bagalkot By poll: Congress’ Umesh Meti Wins Against BJP’s Veeranna Charantimath

ಗೆದ್ದು ಬೀಗಿದ ಕಾಂಗ್ರೆಸ್​​ನ ಉಮೇಶ್ ಮೇಟಿ

ಬಾಗಲಕೋಟೆ, ಮೇ 04: ಹೆಚ್​​.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಬಾಗಲಕೋಟೆ (Bagalakot) ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್​​ ಅಭ್ಯರ್ಥಿ ಉಮೇಶ್ ಮೇಟಿ ಗೆಲುವಿನ ನಗೆ ಬೀರಿದ್ದಾರೆ. ಆ ಮೂಲಕ ಕ್ಷೇತ್ರವನ್ನು ಮರಳಿ ಕಾಂಗ್ರೆಸ್​ ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಬಿಜೆಪಿ ಅಭ್ಯರ್ಥಿಯಾಗಿದ್ದ ವೀರಣ್ಣ ಚರಂತಿಮಠ ಪೈಪೋಟಿ ನೀಡಿದ್ದರಾದರೂ ಅಂತಿಮವಾಗಿ ಸೋಲುಂಡಿದ್ದಾರೆ. ಹೆಚ್​​.ವೈ. ಮೇಟಿ ನಿಧನದ ಹಿನ್ನೆಲೆ ಅವರ ಕುಟುಂಬಕ್ಕೇ ಟಿಕೆಟ್​​ ನೀಡಲು ನಿರ್ಧರಿಸಿದ್ದ ಕಾಂಗ್ರೆಸ್,​​ ಮೇಟಿ ಪುತ್ರ ಉಮೇಶ್​​​​ರನ್ನು ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಉಮೇಶ್​​ ಮೇಟಿ ಅಂತಿಮವಾಗಿ ಗೆದ್ದು ಬೀಗಿದ್ದಾರೆ.

‘ತಂದೆ ಆತ್ಮಕ್ಕೆ ಶಾಂತಿ ಸಿಕ್ಕಿದೆ’

ಬಾಗಲಕೋಟೆ ಉಪಚುನಾವಣೆಯಲ್ಲಿ ಉಮೇಶ್ ಮೇಟಿ ಜಯಭೇರಿ ಸಂಬಂಧ ಅವರ ಸಹೋದರ ಮಲ್ಲಿಕಾರ್ಜುನ ಮೇಟಿ ಟಿವಿ9 ಜೊತೆ ಸಂತಸ ಹಂಚಿಕೊಂಡಿದ್ದಾರೆ. ಇದೊಂದು ಭಾವುಕ ಕ್ಷಣವಾಗಿದ್ದು, ಈ ಗೆಲುವಿನಿಂದ ನಮ್ಮ ತಂದೆ ಆತ್ಮಕ್ಕೆ ಶಾಂತಿ ಸಿಕ್ಕ ಹಾಗಾಗಿದೆ. ನಮ್ಮ ತಂದೆ ಕೈ ಹಿಡಿದಿದ್ದ ಜನರು ಈಗ ನಮ್ಮ ಸಹೋದರನ ಕೈಯನ್ನೂ ಹಿಡಿದಿದ್ದಾರೆ. ಸಿಎಂ, ಸಚಿವರು ಮತ್ತು ಮತದಾರರಿಗೆ ಧನ್ಯವಾದ ಹೇಳೋದಾಗಿ ಅವರು ತಿಳಿಸಿದ್ದಾರೆ.

(ಮಾಹಿತಿ ಅಪ್ಡೇಟ್​​ ಆಗುತ್ತಿದೆ)

Published On – 12:17 pm, Mon, 4 May 26

Source link

Tamil Nadu: ದಳಪತಿ ಕಿಂಗ್ ಮೇಕರ್ ಅಲ್ಲ, ಕಿಂಗ್; ತಮಿಳುನಾಡಿಗೆ ವಿಜಯ್ ಮುಂದಿನ ಸಿಎಂ? – Kannada News | Thalapathi Vijay set to become next TN Chief Minister as TVK gets big win in Tamil Nadu elections

ಚೆನ್ನೈ, ಮೇ 4: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu assembly elections) ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ನಿರೀಕ್ಷೆ ಮೀರಿದ ಅಚ್ಚರಿ ಗೆಲುವು ದಾಖಲಿಸಿದೆ. 234 ವಿಧಾನಸಭಾ ಕ್ಷೇತ್ರಗಳ ಪೈಕಿ ವಿಜಯ್ ಅವರ TVK ಪಕ್ಷವು ಅಚ್ಚರಿಯ ರೀತಿಯಲ್ಲಿ ಮುನ್ನಡೆ ಸಾಧಿಸಿದೆ. ಪ್ರಸ್ತುತ ಟ್ರೆಂಡ್‌ಗಳ ಪ್ರಕಾರ, ವಿಜಯ್ ಅವರ ಪಕ್ಷವು ಬಹುಮತಕ್ಕೆ ಬೇಕಾದ 118 ಸ್ಥಾನಗಳ ಗಡಿ ದಾಟುತ್ತಿದೆ. ಇದು ತಮಿಳುನಾಡು ರಾಜಕಾರಣದಲ್ಲಿ ಹೊಸ ಯುಗದ ಆರಂಭ ಎಂದೇ ವಿಶ್ಲೇಷಿಸಲಾಗುತ್ತಿದೆ. ಆಡಳಿತಾರೂಢ ಡಿಎಂಕೆ ಪಕ್ಷ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಎಐಎಡಿಎಂಕೆ ನೇತೃತ್ವದ ಎನ್​ಡಿಎ ಮೈತ್ರಿಕೂಟ ಎರಡನೇ ಸ್ಥಾನ ಪಡೆಯುತ್ತಿದೆ. ಕಾಲಿವುಡ್​ನ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರು ಮುಖ್ಯಮಂತ್ರಿ ಆಗುವ ಸಾಧ್ಯತೆ ದಟ್ಟವಾಗಿದೆ.

ತಾವೇ ಸ್ಪರ್ಧಿಸಿದ್ದ ಎರಡು ಕ್ಷೇತ್ರಗಳಾದ ಪೆರಂಬೂರು ಮತ್ತು ತಿರುಚ್ಚಿ ಈಸ್ಟ್ ಎರಡರಲ್ಲೂ ವಿಜಯ್ ಭಾರಿ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಮೈತ್ರಿಕೂಟವು ತೀವ್ರ ಹಿನ್ನಡೆ ಅನುಭವಿಸಿದ್ದು, ಅನಿರೀಕ್ಷಿತವಾಗಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಮೈತ್ರಿಕೂಟವು ಸದ್ಯಕ್ಕೆ ಎರಡನೇ ಅತಿದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ಡಿಎಂಕೆ ಸರ್ಕಾರದ ಸುಮಾರು 31 ಸಚಿವರು ತಮ್ಮ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸುತ್ತಿರುವುದು ಆಡಳಿತ ವಿರೋಧಿ ಅಲೆಯ ತೀವ್ರತೆಯನ್ನು ತೋರಿಸುತ್ತಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಅಧಿಕಾರ ಸ್ಥಾಪನೆಯತ್ತ ಬಿಜೆಪಿ; ನಿಚ್ಚಳ ಬಹುಮತ ಬಹುತೇಕ ನಿಶ್ಚಿತ

ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶ (ಮಧ್ಯಾಹ್ನ 12ರ ಟ್ರೆಂಡ್)

ಒಟ್ಟು ಸ್ಥಾನಗಳು: 234

ಬಹುಮತಕ್ಕೆ ಬೇಕಾಗಿರುವುದು: 118

  • ತಮಿಳಗ ವೆಟ್ರಿ ಕಳಗಂ (ಟಿವಿಕೆ): 112
  • ಎಐಎಡಿಎಂಕೆ ಮೈತ್ರಿಕೂಟ: 68
  • ಡಿಎಂಕೆ ಮೈತ್ರಿಕೂಟ: 56

ಕಿಂಗ್ ಮೇಕರ್ ಅಲ್ಲ, ನೇರ ಕಿಂಗ್!

ಚುನಾವಣಾ ಪೂರ್ವದಲ್ಲಿ ವಿಜಯ್ ಅವರ ಪಕ್ಷವು ಕೇವಲ ‘ಕಿಂಗ್ ಮೇಕರ್’ ಆಗಬಹುದು ಎಂದು ಊಹಿಸಲಾಗಿತ್ತು. ಆದರೆ, ಈಗಿನ ಟ್ರೆಂಡ್‌ಗಳು ವಿಜಯ್ ಅವರೇ ನೇರವಾಗಿ ಮುಖ್ಯಮಂತ್ರಿ ಪೀಠ ಅಲಂಕರಿಸುವುದನ್ನು ಖಚಿತಪಡಿಸುತ್ತಿವೆ. ವಿಜಯ್ ಅವರ ಅಪಾರ ಅಭಿಮಾನಿ ಬಳಗ ಮತ್ತು ಯುವ ಮತದಾರರು ಬದಲಾವಣೆಯನ್ನು ಬಯಸಿ ದೊಡ್ಡ ಮಟ್ಟದಲ್ಲಿ ಮತ ಚಲಾಯಿಸಿದ್ದಾರೆ. ಡಿಎಂಕೆ ಮತ್ತು ಎಐಎಡಿಎಂಕೆ ಎರಡನ್ನೂ ‘ಭ್ರಷ್ಟ ಶಕ್ತಿಗಳು’ ಎಂದು ಕರೆದಿದ್ದ ವಿಜಯ್ ಅವರ ಮಾತುಗಳು ಜನಸಾಮಾನ್ಯರಿಗೆ ತಲುಪಿದೆ. ಯಾವುದೇ ದೊಡ್ಡ ಮೈತ್ರಿಕೂಟದ ಜೊತೆ ಸೇರದೆ ಒಂಟಿಯಾಗಿ ಸ್ಪರ್ಧಿಸುವ ವಿಜಯ್ ಅವರ ನಿರ್ಧಾರಕ್ಕೆ ಮತದಾರರು ಜೈ ಎಂದಿದ್ದಾರೆ.

ತಮಿಳುನಾಡಿನ ರಾಜಕೀಯ ಚಿತ್ರಣ ಬದಲಾವಣೆ

ಎಂ.ಜಿ.ಆರ್ ಮತ್ತು ಜಯಲಲಿತಾ ಅವರ ನಂತರ ಸಿನಿಮಾ ರಂಗದಿಂದ ಬಂದು ಇಷ್ಟು ದೊಡ್ಡ ಮಟ್ಟದ ಯಶಸ್ಸು ಕಂಡ ನಟ ಎಂಬ ಹೆಗ್ಗಳಿಕೆಗೆ ವಿಜಯ್ ಪಾತ್ರರಾಗಿದ್ದಾರೆ. ಹಿರಿಯ ಸ್ಟಾರ್ ಹಾಗೂ ಜನಪ್ರಿಯ ನಟನೆನಿಸಿದ ಕಮಲಹಾಸನ್ ಅವರು ಕೆಲವಾರು ವರ್ಷಗಳಿಂದ ರಾಜಕೀಯ ಮಾಡುತ್ತಿದ್ದಾರಾದರೂ ಅವರಿಗೆ ಸಿಕ್ಕ ಯಶಸ್ಸು ಸೀಮಿತ. ಕ್ಯಾಪ್ಟನ್ ವಿಜಯಕಾಂತ್ ಅವರಿಗೂ ಸಿಕ್ಕ ಯಶಸ್ಸು ಅಷ್ಟಕಷ್ಟೇ. ಸೂಪರ್ ಸ್ಟಾರ್ ರಜನೀಕಾಂತ್ ಅವರೂ ರಾಜಕೀಯಕ್ಕೆ ಅಡಿ ಇಡುವ ಆಲೋಚನೆಯಲ್ಲಿ ಇದ್ದರಾದರೂ ಅದು ಸಾಧ್ಯವಾಗಲಿಲ್ಲ. ಹೀಗಾಗಿ, ದಳಪತಿ ವಿಜಯ್ ಅವರ ಆರಂಭದ ಹೆಜ್ಜೆಯಲ್ಲೇ ಸಿಕ್ಕ ಯಶಸ್ಸು ಸೋಜಿಗ.

ಇದನ್ನೂ ಓದಿ: ತ್ರಿಷಾ ಹುಟ್ಟುಹಬ್ಬದಂದೇ ವಿಜಯ್‌ಗೆ ರಾಜಕೀಯ ಪಟ್ಟ? ತಮಿಳುನಾಡಿನಲ್ಲಿ ‘ಟಿವಿಕೆ’ ಅಬ್ಬರ

ತಮಿಳುನಾಡಿನಲ್ಲಿ ಮುಂದಿನ ಐದು ವರ್ಷ ವಿಜಯ್ ಅವರ ಹವಾ ಜೋರಾಗಿರಲಿದೆ. ಡಿಎಂಕೆ ಕಚೇರಿಯಲ್ಲಿ ಹಾಕಲಾಗಿದ್ದ ವಿಜಯೋತ್ಸವದ ಟೆಂಟ್‌ಗಳನ್ನು ಕಾರ್ಯಕರ್ತರು ಹಿನ್ನಡೆಯ ಆತಂಕದಿಂದ ತೆರವುಗೊಳಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಸಂಜೆ ವೇಳೆಗೆ ಅಂತಿಮ ಫಲಿತಾಂಶ ಹೊರಬೀಳಲಿದ್ದು, ‘ದಳಪತಿ’ ತಮಿಳುನಾಡಿನ ಹೊಸ ‘ಸಿಎಂ’ ಆಗಿ ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ನಿಶ್ಚಿತವಾಗಿದೆ.

ಟಿವಿಕೆ ಪಕ್ಷ ಸ್ವಂತವಾಗಿ 118 ಸ್ಥಾನಗಳನ್ನು ಮುಟ್ಟಿದರೆ ವಿಜಯ್ ಸಿಎಂ ಆಗುವುದರಲ್ಲಿ ಅನುಮಾನ ಇಲ್ಲ. ಬಹುಮತ ಕೊರತೆ ಬಂದರೂ ಎಐಎಡಿಎಂಕೆ ಬೆಂಬಲದೊಂದಿಗೆ ಅವರು ಸರ್ಕಾರ ರಚನೆ ಮಾಡಿ ಸಿಎಂ ಆಗುವ ಸಾಧ್ಯತೆ ಇದ್ದೇ ಇದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Amazon Summer Sale: ಅಮೆಜಾನ್​ನಲ್ಲಿ ಶುರುವಾಗುತ್ತಿದೆ ಸಮ್ಮರ್ ಸೇಲ್: ಫ್ಲಿಪ್​ಕಾರ್ಟ್​ನಲ್ಲಿ ಸಾಸಾ ಲೇಲೆ ಸೇಲ್ – Kannada News | Amazon Summer Sale 2026 and Flipkart Sasa Lele Sale 2026 Dates and Offer announced

ಬೆಂಗಳೂರು (ಮೇ. 04): ಅಮೆಜಾನ್ (Amazon) ತನ್ನ ಗ್ರೇಟ್ ಸಮ್ಮರ್ ಸೇಲ್ ದಿನಾಂಕವನ್ನು ಪ್ರಕಟಿಸಿದೆ. ಮುಂಬರುವ ಸೇಲ್​ನಲ್ಲಿ ಸ್ಮಾರ್ಟ್‌ಫೋನ್‌ಗಳು, ಟಿವಿಗಳು, ರೆಫ್ರಿಜರೇಟರ್‌ಗಳು, ಹವಾನಿಯಂತ್ರಣಗಳು, ಟ್ಯಾಬ್ಲೆಟ್‌ಗಳು ಮತ್ತು ಹೆಚ್ಚಿನವುಗಳ ಮೇಲೆ ಗಮನಾರ್ಹ ರಿಯಾಯಿತಿಗಳು ಇರಲಿವೆ. ಕಂಪನಿಯು ವಿವಿಧ ಬ್ರಾಂಡ್‌ಗಳ ಫೋನ್‌ಗಳ ಮೇಲೆ ಬ್ಯಾಂಕ್ ಕೊಡುಗೆಗಳು ಮತ್ತು ಡೀಲ್‌ಗಳನ್ನು ಬಹಿರಂಗಪಡಿಸಿದೆ. ಎಲೆಕ್ಟ್ರಾನಿಕ್ಸ್ ಜೊತೆಗೆ, ಗ್ರಾಹಕರು ಫ್ಯಾಷನ್ ಮತ್ತು ಇತರ ಉತ್ಪನ್ನಗಳ ಮೇಲೆ ಗಮನಾರ್ಹ ರಿಯಾಯಿತಿಗಳನ್ನು ಪಡೆಯುತ್ತಾರೆ.

ಅಮೆಜಾನ್‌ನಲ್ಲಿ ಈ ಮಾರಾಟವು ಮೇ 8 ರಂದು ಪ್ರಾರಂಭವಾಗಲಿದೆ. ಪ್ರೈಮ್ ಸದಸ್ಯರಿಗೆ ಆರಂಭಿಕ ಪ್ರವೇಶ ದೊರೆಯಲಿದೆ. ಬ್ಯಾಂಕ್ ಕೊಡುಗೆಗಳ ಜೊತೆಗೆ, ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, ಹವಾನಿಯಂತ್ರಣಗಳು, ರೆಫ್ರಿಜರೇಟರ್‌ಗಳು ಮತ್ತು ಹೆಚ್ಚಿನವುಗಳ ಖರೀದಿಗಳ ಮೇಲೆ ಯಾವುದೇ ವೆಚ್ಚವಿಲ್ಲದ ಇಎಂಐ ಆಯ್ಕೆಗಳು ಮತ್ತು ವಿನಿಮಯ ಕೊಡುಗೆಗಳು ಸಹ ಲಭ್ಯವಿದೆ. ಪ್ರೈಮ್ ಸದಸ್ಯರು ಆರಂಭಿಕ ಪ್ರವೇಶ, ವಿಶೇಷ ರಿಯಾಯಿತಿಗಳು, ಕ್ಯಾಶ್‌ಬ್ಯಾಕ್ ಮತ್ತು ಇತರ ಪ್ರಯೋಜನಗಳನ್ನು ಸಹ ಪಡೆಯುತ್ತಾರೆ.

HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ ಸುಲಭ EMI ಲಭ್ಯವಿರುತ್ತದೆ ಎಂದು ಇ-ಕಾಮರ್ಸ್ ಕಂಪನಿ ಘೋಷಿಸಿದೆ. ಗ್ರಾಹಕರು 10% ವರೆಗೆ ತ್ವರಿತ ರಿಯಾಯಿತಿಯ ಪ್ರಯೋಜನವನ್ನು ಪಡೆಯುತ್ತಾರೆ. ಯಾವುದೇ ವೆಚ್ಚವಿಲ್ಲದ EMI ಸಹ ಲಭ್ಯವಿದೆ, ಇದು ನಿಮಗೆ ದಿನಕ್ಕೆ ₹9 ಕ್ಕಿಂತ ಕಡಿಮೆ ಬೆಲೆಯಲ್ಲಿ ಉತ್ಪನ್ನಗಳನ್ನು ಖರೀದಿಸಲು ಅನುವು ಮಾಡಿಕೊಡುತ್ತದೆ. ಪ್ರೈಮ್ ಬಳಕೆದಾರರು 200,000 ಕ್ಕೂ ಹೆಚ್ಚು ಉತ್ಪನ್ನಗಳ ಮೇಲೆ ಹೆಚ್ಚುವರಿ 3% ರಿಯಾಯಿತಿಯನ್ನು ಸಹ ಪಡೆಯುತ್ತಾರೆ.

Digital Arrest: 2-3 ಗಂಟೆಗಳಲ್ಲಿ ಸಿಮ್ ಕಾರ್ಡ್ ಬ್ಲಾಕ್, ಡಿಜಿಟಲ್ ಅರೆಸ್ಟ್ ತಡೆಯಲು ಸಂಪೂರ್ಣ ಸಿದ್ಧತೆ, ವಾಟ್ಸ್ಆ್ಯಪ್​ನಿಂದಲೂ ಕ್ರಮ

ಹೆಚ್ಚುವರಿಯಾಗಿ, ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕಾರ್ಡ್ ಬಳಸಿ ಉತ್ಪನ್ನಗಳನ್ನು ಖರೀದಿಸುವುದರಿಂದ 5% ವರೆಗೆ ಅನಿಯಮಿತ ಕ್ಯಾಶ್‌ಬ್ಯಾಕ್ ಸಿಗುತ್ತದೆ. ಕೆಲವು ಉತ್ಪನ್ನಗಳಿಗೆ ₹1,250 ರಿಂದ ₹2,500 ವರೆಗಿನ ಹೆಚ್ಚುವರಿ ಪ್ರಯೋಜನಗಳು ಲಭ್ಯವಿರುತ್ತವೆ. ನಿರ್ದಿಷ್ಟವಾಗಿ ಸ್ಮಾರ್ಟ್‌ಫೋನ್‌ಗಳು ಮತ್ತು ಗೃಹೋಪಯೋಗಿ ವಸ್ತುಗಳು ಗಮನಾರ್ಹ ರಿಯಾಯಿತಿಗಳನ್ನು ನೀಡುತ್ತವೆ. ಕಂಪನಿಯು ಹಲವಾರು ಪರಿಚಯಾತ್ಮಕ ಡೀಲ್‌ಗಳನ್ನು ಸಹ ಪ್ರಕಟಿಸಲು ಪ್ರಾರಂಭಿಸಿದೆ.

ಸ್ಮಾರ್ಟ್‌ಫೋನ್‌ಗಳ ಮೇಲಿನ ಕೊಡುಗೆಗಳು

ಅಮೆಜಾನ್ ಮಾರಾಟದ ಸಮಯದಲ್ಲಿ ಐಫೋನ್ 16 ₹60,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ. ಪ್ರಸ್ತುತ, ಫೋನ್ ₹69,900 ಗೆ ಪಟ್ಟಿ ಮಾಡಲಾಗಿದೆ. ಕಂಪನಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 25 ಅಲ್ಟ್ರಾ ಗಾಗಿ ಡೀಲ್‌ಗಳನ್ನು ಬಹಿರಂಗಪಡಿಸಿದೆ. ಸ್ಯಾಮ್‌ಸಂಗ್‌ನ ಈ ಪ್ರಮುಖ ಫೋನ್ ಅನ್ನು ಇದುವರೆಗಿನ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು. ಇದು ₹94,999 ರಿಂದ ಪ್ರಾರಂಭವಾಗುವ ಬೆಲೆಯಲ್ಲಿ ಲಭ್ಯವಿದೆ. ಐಕ್ಯೂ 15R ₹43,999 ಆರಂಭಿಕ ಬೆಲೆಗೆ ಖರೀದಿಗೆ ಲಭ್ಯವಿದೆ. iQOO ನಿಂದ ಈ ಗೇಮಿಂಗ್ ಫೋನ್ ₹53,999 ಬೆಲೆಗೆ ಬಿಡುಗಡೆಯಾಯಿತು.

ಫ್ಲಿಪ್‌ಕಾರ್ಟ್ ಸಾಸಾ ಲೇಲೆ ಸೇಲ್:

ಮತ್ತೊಂದೆಡೆ ಫ್ಲಿಪ್‌ಕಾರ್ಟ್ ಹೊಸ ಸಾಸಾ ಲೆಲೆ ಸೇಲ್ 2026 ಅನ್ನು ಅಧಿಕೃತವಾಗಿ ಘೋಷಿಸಿದೆ. ಈ ಸೇಲ್ ಮೇ 9 ರಂದು ಪ್ರಾರಂಭವಾಗಲಿದ್ದು, ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿಗಳು, ಹವಾನಿಯಂತ್ರಣಗಳು ಮತ್ತು ಅನೇಕ ಗೃಹೋಪಯೋಗಿ ಉಪಕರಣಗಳ ಮೇಲೆ ಉತ್ತಮ ರಿಯಾಯಿತಿಗಳನ್ನು ನೀಡುತ್ತದೆ. ಮಾರಾಟಕ್ಕೂ ಮುನ್ನ ಫ್ಲಿಪ್‌ಕಾರ್ಟ್ ಈಗಾಗಲೇ ಹಲವಾರು ಉತ್ಪನ್ನಗಳನ್ನು ಟೀಸರ್ ಮಾಡಲು ಪ್ರಾರಂಭಿಸಿದೆ. ಬ್ಯಾಂಕ್ ಕೊಡುಗೆಗಳು, ವಿನಿಮಯ ಬೋನಸ್‌ಗಳು, ಯಾವುದೇ ವೆಚ್ಚವಿಲ್ಲದ ಇಎಂಐಗಳು ಮತ್ತು ಸೀಮಿತ-ಅವಧಿಯ ಫ್ಲ್ಯಾಶ್ ಡೀಲ್‌ಗಳು ಸಹ ಲಭ್ಯವಿರುತ್ತವೆ. ಹೊಸ ಬೇಸಿಗೆ ಖರೀದಿಗಳನ್ನು ಯೋಜಿಸುವ ಗ್ರಾಹಕರಿಗೆ ಇದು ಉತ್ತಮ ಅವಕಾಶವಾಗಬಹುದು. ಐಫೋನ್ 17 ಅನ್ನು ₹71,900 ಗೆ ಮತ್ತು ಗೂಗಲ್ ಪಿಕ್ಸೆಲ್ 10 ಅನ್ನು ₹60,000 ವರೆಗೆ ಖರೀದಿಸಬಹುದು. ಕಂಪನಿಯು ತನ್ನ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಟೀಸರ್ ಬ್ಯಾನರ್‌ಗಳು ಮತ್ತು ಪೂರ್ವವೀಕ್ಷಣೆ ಪಟ್ಟಿಗಳನ್ನು ಬಿಡುಗಡೆ ಮಾಡಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೈರತಿ ಬಸವರಾಜ್​ಗೆ ಮತ್ತೊಂದು ಸಂಕಷ್ಟ! ಆಪ್ ನಾಯಕಿಯ ಕಾರನ್ನೇ ಧ್ವಂಸಗೊಳಿಸಿದ ಆರೋಪ – Kannada News | Byrathi Basavaraj in Trouble Again: AAP Leader Accuses BJP MLA’s Supporters of Vandalism and Threats

ಬೈರತಿ ಬಸವರಾಜ್​ಗೆ ಮತ್ತೊಂದು ಸಂಕಷ್ಟ!

ಬೆಂಗಳೂರು, ಮೇ 04:  ಬಿಕ್ಲು ಶಿವು ಕೊಲೆ ಪ್ರಕರಣದ ತನಿಖೆ ಎದುರಿಸುತ್ತಿರುವ ಕೆ.ಆರ್. ಪುರಂ ಬಿಜೆಪಿ ಶಾಸಕ ಬೈರತಿ ಬಸವರಾಜ್‌ (Byrathi Basavaraj) ಅವರಿಗೆ ಈಗ ಮತ್ತೊಂದು ಹೊಸ ಸಂಕಷ್ಟ ಎದುರಾಗಿದೆ. ಈ ಹಿಂದೆ ಅವರು ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಜೈಲು ರುಚಿ ನೋಡಿದ ಬಳಿಕ ಇದೀಗ ಅವರ ಬೆಂಬಲಿಗರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಆಪ್ ನಾಯಕಿ ದೂರು ದಾಖಲಿಸಿದ್ದಾರೆ.

ನನಗೆ ಬೆದರಿಕೆ ಹಾಕಿದ್ದಾರೆ: ಆಪ್ ನಾಯಕಿ

ಬಿಕ್ಲು ಶಿವ ಕೊಲೆ ಕೇಸ್​ನಲ್ಲಿ ಆರೋಪಿಯಾಗಿರುವ ಬೈರತಿ ಬಸವರಾಜ್ ನ್ಯಾಯಾಂಗ ಬಂಧನದಿಂದ ಜಾಮೀನಿನಲ್ಲಿ ಹೊರಬಂತ ನಂತರ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಸವರಾಜ್ ಬೆಂಬಲಿಗರು ತನ್ನ ಮನೆ ಮುಂದೆ ನಿಲ್ಲಿಸಿದ್ದ ಕಾರನ್ನು ಧ್ವಂಸಗೊಳಿಸಿದ್ದಲ್ಲದೆ, ತನಗೆ ಬೆದರಿಕೆ ಹಾಕಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ (AAP) ವಿಜ್ಞಾನ ನಗರ ವಾರ್ಡ್ ಅಧ್ಯಕ್ಷೆ ಸತ್ಯವಾಣಿ ದೂರಿದ್ದಾರೆ.

ಕಳೆದ ತಿಂಗಳು ಕೂಡ ಶಾಸಕರು ತನ್ನ ಚಾರಿತ್ರ್ಯಕ್ಕೆ ಧಕ್ಕೆ ತರುವಂತಹ ಸುಮಾರು 50 ಬೃಹತ್ ಫ್ಲೆಕ್ಸ್ ಬ್ಯಾನರ್‌ಗಳನ್ನು ವಾರ್ಡ್‌ನಾದ್ಯಂತ ಹಾಕಿಸಿದ್ದರು ಎಂದು ಕಿಡಿಕಾರಿದ ಆಪ್ ನಾಯಕಿ, ಆರಂಭದಲ್ಲಿ ಈ ಬಗ್ಗೆ ದೂರು ನೀಡಲು ಹೋದಾಗ ಎಚ್‌ಎಎಲ್ ಪೊಲೀಸರು ಶಾಸಕರ ಒತ್ತಡಕ್ಕೆ ಮಣಿದು ದೂರು ಸ್ವೀಕರಿಸಲು ನಿರಾಕರಿಸಿದ್ದರು, ನಂತರ ಲೋಕಾಯುಕ್ತರ ಮೊರೆ ಹೋದ ಮೇಲೆ ಪ್ರಕರಣ ದಾಖಲಾಗಿತ್ತು ಎಂದು ದೂರಿದ್ದಾರೆ.

ನನಗೆ ಏನಾದರು ಆದರೆ ಅವರೇ ಹೊಣೆ ಎಂದ ನಾಯಕಿ

ಮುಂಬರುವ ಜಿಬಿಎ (GBA) ಚುನಾವಣೆಗಳಿಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿರುವ ಕಾರಣಕ್ಕಾಗಿಯೇ ತನ್ನ ಮೇಲೆ ಇಂತಹ ಹಲ್ಲೆ ನಡೆಯುತ್ತಿದೆ ಮತ್ತು ನನಗೆ ಬೆದರಿಕೆಗಳು ಬರುತ್ತಿವೆ ಎಂದು ಸತ್ಯವಾಣಿ ಆರೋಪಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಕೆರೆ ಒತ್ತುವರಿ ವಿರುದ್ಧ ಹೋರಾಟ ನಡೆಸುತ್ತಿರುವ ತನಗೆ ಏನಾದರೂ ತೊಂದರೆಯಾದರೆ ಅದಕ್ಕೆ ನೇರವಾಗಿ ಶಾಸಕ ಬೈರತಿ ಬಸವರಾಜ್ ಅವರೇ ಹೊಣೆ ಎಂದು ಅವರು ಎಚ್ಚರಿಸಿದ್ದಾರೆ. ಪೊಲೀಸರು ಶಾಸಕರ ಪ್ರಭಾವಕ್ಕೆ ಒಳಗಾಗಿ ಕೆಲಸ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಮತ್ತು ಈ ಘಟನೆಯು ಕೆ.ಆರ್. ಪುರಂನಲ್ಲಿ ಮಹಿಳೆಯರು ಎಷ್ಟು ಅಸುರಕ್ಷಿತರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ ಬಿಕ್ಲು ಶಿವ ಕೊಲೆ ಕೇಸ್​​: ಶಾಸಕ ಬೈರತಿ ಬಸವರಾಜ್​​ ಫೆ.21ರವರೆಗೆ ಸಿಐಡಿ ಕಸ್ಟಡಿಗೆ

ಬಿಕ್ಲು ಶಿವ ಕೇಸ್​ನಲ್ಲಿ ಏನಾಗಿತ್ತು?

2025ರ ಜುಲೈ 15ರಂದು ಬೆಂಗಳೂರಿನ ಭಾರತಿನಗರದಲ್ಲಿ ರೌಡಿ ಶೀಟರ್ ಬಿಕ್ಲು ಶಿವು ಅಲಿಯಾಸ್ ಶಿವಕುಮಾರ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಕಿತ್ತಗನೂರಿನ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಈ ಕೊಲೆ ಪ್ರಕರಣದಲ್ಲಿ ಬೈರತಿ ಬಸವರಾಜ್‌ ಅವರನ್ನು 5ನೇ ಆರೋಪಿಯನ್ನಾಗಿ (A5) ಸೇರಿಸಲಾಗಿತ್ತು. ಅವರು ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.

ನಿರೀಕ್ಷಣಾ ಜಾಮೀನು ವಜಾಗೊಂಡ ಬಳಿಕ, 2026ರ ಫೆಬ್ರವರಿಯಲ್ಲಿ ಸಿಐಡಿ ಪೊಲೀಸರು ಇವರನ್ನು ಬಂಧಿಸಿದ್ದರು. ಸುಮಾರು 28 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಇವರಿಗೆ 2026ರ ಮಾರ್ಚ್ 12ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು. ಇದೆಲ್ಲದರ ಬಳಿಕ ಮತ್ತೊಮ್ಮೆ ಆಪ್ ನಾಯಕಿ ಮೇಲೆ ಹಲ್ಲೆ ಮತ್ತು ಬೆದರಿಕೆ ಕೇಸ್​ನಲ್ಲಿ ಅವರ ಹೆಸರು ಕೇಳಿಬಂದಿರುವುದು ಶಾಸಕನಿಗೆ ಸಂಕಷ್ಟ ತಂದೊಡ್ಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Party Wise Election Results 2026 Winners LIVE: ಪಂಚ ರಾಜ್ಯ ಚುನಾವಣಾ ಫಲಿತಾಂಶ; ಎಲ್ಲಿ ಹೇಗಿದೆ ಸ್ಥಿತಿ? ಇಲ್ಲಿದೆ ವಿವರ – Kannada News | All Party Alliance Wise Assembly Election Results 2026 and Winners LIVE Updates in Kannada BJP Congress TMC West Bengal Kerala Puducherry Tamil Nadu Assam

ಪಂಚ ರಾಜ್ಯ ಚುನಾವಣಾ ಫಲಿತಾಂಶImage Credit source: tv9

ನವದೆಹಲಿ, ಮೇ 4: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ (Assembly Election Results 2026) ಪ್ರಕಟವಾಗುತ್ತಿದ್ದು, ಹಲವು ವರ್ಷಗಳ ಸತತ ಪರಿಶ್ರಮದ ನಂತರ ಕೊನೆಗೂ ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಗದ್ದುಗೆ ಏರುವ ಹಾದಿಯಲ್ಲಿ ಬಿಜೆಪಿ ನಾಗಾಲೋಟ ಮುಂದುವರೆಸಿದೆ. ಅಸ್ಸಾಂ ಮತ್ತು ಪುದುಚೇರಿಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದ ಮುನ್ನಡೆ ಕಾಯ್ದುಕೊಂಡಿದೆ. ಕೇರಳದಲ್ಲಿ ಎಲ್‌ಡಿಎಫ್ ಮಣಿಸಿ ಮತ್ತೆ ಯುಡಿಎಫ್ ಅಧಿಕಾರಕ್ಕೆ ಏರಲು ಕ್ಷಣಗಣನೆ ಆರಂಭಿಸಿದೆ. ತಮಿಳುನಾಡಿನಲ್ಲಿ ನಟ ದಳಪತಿ ವಿಜಯ ನೇತೃತ್ವದ ಟಿವಿಕೆ ಅಧಿಕಾರ ಹಿಡಿಯುವುದು ಬಹುತೇಕ ನಿಚ್ಚಳವಾಗಿದೆ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಸ್ಥಿತಿಗತಿ ಇಲ್ಲಿದೆ.

ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ

294 ಕ್ಷೇತ್ರಗಳಿರುವ ಪಶ್ಚಿಮ ಬಂಗಾಳದಲ್ಲಿ 293 ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದ್ದು, ಬಹುಮತಕ್ಕೆ 148 ಸ್ಥಾನಗಳ ಅಗತ್ಯವಿದೆ. ಮಧ್ಯಾಹ್ನ 11.45 ರ ಹೊತ್ತಿಗೆ ಬಿಜೆಪಿ 179 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆಡಳಿತಾರೂಢ ಟಿಎಂಸಿ 109 ಕ್ಷೇತ್ರಗಳಲ್ಲಷ್ಟೇ ಮುನ್ನಡೆಯಲ್ಲಿದೆ. ಕಾಂಗ್ರೆಸ್ 2 ಹಾಗೂ ಪಕ್ಷೇತರರು 5 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ನಡುವಿನ ನಿಕಟ ಸ್ಪರ್ಧೆಯ ನಡುವೆಯೂ, ಕಾಂಗ್ರೆಸ್ ಪಕ್ಷವು ಮುನ್ನಡೆಯ ವಿಷಯದಲ್ಲಿ ತನ್ನ ಖಾತೆ ತೆರೆದಿದೆ. 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಅಸ್ಸಾಂ ಚುನಾವಣೆ ಫಲಿತಾಂಶ

126 ಕ್ಷೇತ್ರಗಳಿರುವ ಅಸ್ಸಾಂನಲ್ಲಿ ಬಹುಮತಕ್ಕೆ 64 ಸ್ಥಾನಗಳ ಅಗತ್ಯವಿದೆ. ಮಧ್ಯಾಹ್ನ 11.45 ರ ಹೊತ್ತಿಗೆ ಬಿಜೆಪಿ 101 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 23 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಎಐಯುಡಿಎಫ್ 2 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಪುದುಚೇರಿ ಚುನಾವಣೆ ಫಲಿತಾಂಶ

30 ಕ್ಷೇತ್ರಗಳಿರುವ ಪುದುಚೇರಿಯಲ್ಲಿ ಬಹುಮತಕ್ಕೆ 16 ಸ್ಥಾನಗಳ ಅಗತ್ಯವಿದೆ. ಮಧ್ಯಾಹ್ನ 11.45 ರ ಹೊತ್ತಿಗೆ ಬಿಜೆಪಿ 20 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 7 ಹಾಗೂ ಇತರರು 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಕೇರಳ ಚುನಾವಣೆ ಫಲಿತಾಂಶ

140 ಕ್ಷೇತ್ರಗಳಿರುವ ಕೇರಳದಲ್ಲಿ ಬಹುಮತಕ್ಕೆ 71 ಸ್ಥಾನಗಳ ಅಗತ್ಯವಿದೆ. ಮಧ್ಯಾಹ್ನ 11.45 ರ ಹೊತ್ತಿಗೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ 96 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಆಡಳಿತಾರೂಢ ಎಲ್​​ಡಿಎಫ್ 42 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಬಿಜೆಪಿ 2 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.

ಕೇರಳದಲ್ಲಿ ಎಲ್​ಡಿಎಫ್ ಅಧಿಕಾರ ಕಳೆದುಕೊಳ್ಳುವ ಹಾದಿಯಲ್ಲಿದ್ದು, ಅಂತಿಮವಾಗಿ ಸೋಲೊಪ್ಪಿಕೊಂಡಲ್ಲಿ ಭಾರತದಿಂದ ಕಮ್ಯೂನಿಸ್ಟ್ ಪಕ್ಷದ ಆಡಳಿತ ಸಂಪೂರ್ಣ ನಿರ್ಮೂಲನೆಯಾದಂತಾಗಲಿದೆ.

ತಮಿಳುನಾಡು ಚುನಾವಣೆ ಫಲಿತಾಂಶ

234 ಕ್ಷೇತ್ರಗಳಿರುವ ತಮಿಳುನಾಡಿನಲ್ಲಿ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದೆ. ಮಧ್ಯಾಹ್ನ 11.45 ರ ಹೊತ್ತಿಗೆ ದಳಪತಿ ವಿಜಯ್ ನೇತೃತ್ವದ ಟಿವಿಕೆ 108 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದು ಸರಳ ಬಹುಮತದತ್ತ ಸಾಗುತ್ತಿದೆ. ಡಿಎಂಕೆ 53, ಎಐಎಡಿಎಂಕೆ 73 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ.

ಚುನಾವಣಾ ಫಲಿತಾಂಶದ ಲೈವ್​ ಅಪ್​​ಡೇಟ್​​ಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮದುವೆ ಮನೆಯಲ್ಲೂ ಚುನಾವಣಾ ಫಲಿತಾಂಶದ ಕುತೂಹಲ: ಟಿವಿ9 ಕನ್ನಡ ವೀಕ್ಷಿಸಿದ ಅತಿಥಿಗಳು – Kannada News | By Election Fever: Davangere Wedding Hall Turns Into Result Viewing Centre

ದಾವಣಗೆರೆ, ಮೇ 04: ನಗರದಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಆಗಮಿಸಿದ್ದ ಅತಿಥಿಗಳು ಟಿವಿ9 ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮತ ಎಣಿಕೆಯ ನೇರಪ್ರಸಾರದ ವೀಕ್ಷಣೆಯಲ್ಲಿ ನಿರತರಾಗಿದ್ದರು. ದಾವಣಗೆರೆ ದಕ್ಷಿಣ, ಬಾಗಲಕೋಟೆ ಹಾಗೂ ಪಂಚರಾಜ್ಯಗಳ ಚುನಾವಣೆ ಫಲಿತಾಂಶಗಳನ್ನು ಜನರು ವಿಶೇಷ ಆಸಕ್ತಿಯಿಂದ ವೀಕ್ಷಿಸುತ್ತಿರೋ ದೃಶ್ಯ ಕಂಡುಬಂತು. ಮದುವೆ ಮನೆಯ ಆವರಣದಲ್ಲಿ ಟಿವಿ ಅಳವಡಿಸಲಾಗಿದ್ದು, ಸಾಮಾಜಿಕ ಕಾರ್ಯಕ್ರಮದ ನಡುವೆಯೂ ಚುನಾವಣಾ ಫಲಿತಾಂಶಗಳಿಗೆ ನೀಡಿದ ಗಮನ ರಾಜಕೀಯ ಪ್ರಜ್ಞೆಗೆ ಸಾಕ್ಷಿ ಎಂಬಂತಿತ್ತು.

ಚುನಾವಣಾ ಫಲಿತಾಂಶದ ಲೈವ್​ ಅಪ್​​ಡೇಟ್​​ಗಾಗಿ ಇಲ್ಲಿ ಕ್ಲಿಕ್ ಮಾಡಿ.

Source link