ಬೆಂಗಳೂರು, ಏಪ್ರಿಲ್ 30: ನಗರದಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ಬೌರಿಂಗ್ ಆಸ್ಪತ್ರೆಯ ತಡೆಗೋಡೆ ಕುಸಿದು ಏಳು ಜನರು ಮೃತಪಟ್ಟಿರುವ ದಾರುಣ ಘಟನೆ ನಡೆದಿದ್ದು, ಸುಮಾರು 15 ಜನರು ಗಾಯಗೊಂಡಿದ್ದಾರೆ. ಆಸ್ಪತ್ರೆ ಆವರಣದ ಖಾಲಿ ಜಾಗದಲ್ಲಿ ಮಣ್ಣನ್ನು ಅಗೆದು ಗೋಡೆಯ ಅಂಚಿಗೆ ಸುರಿದಿದ್ದು, ಅಲ್ಲದೆ ಗೋಡೆಯ ಸುತ್ತಲೂ ಗಿಡಗಳನ್ನು ನೆಟ್ಟಿರುವುದು ಗೋಡೆಯನ್ನು ದುರ್ಬಲಗೊಳಿಸಿತ್ತು ಎಂದು ತಿಳಿದುಬಂದಿದೆ. ಇದರ ಪರಿಣಾಮವಾಗಿ, ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದ ನೀರು ಗೋಡೆಯ ಮೇಲೆ ಒತ್ತಡ ಹೇರಿದ್ದರಿಂದ ಗೋಡೆ ಕುಸಿದಿದೆ. ಗೋಡೆಯ ಪಕ್ಕದಲ್ಲಿ ಆಶ್ರಯ ಪಡೆದಿದ್ದ ಜನರು ಮತ್ತು ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಕೆಲವು ವ್ಯಾಪಾರಿಗಳು ಈ ದುರಂತಕ್ಕೆ ಬಲಿಯಾಗಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು (ಯುಡಿಆರ್) ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
IPL 2026: ಐಪಿಎಲ್ 2026ರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ತಂಡದ ಆಟಗಾರರು ತೋಳಿಗೆ ಕಪ್ಪು ಪಟ್ಟಿ (Black Armband) ಧರಿಸಿ ಮೈದಾನಕ್ಕಿಳಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇದರ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಕಪ್ಪು ಪಟ್ಟಿ ಧರಿಸಲು ಕಾರಣವೇನು? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು.
ಕಪ್ಪು ಪಟ್ಟಿ ಧರಿಸಲು ಕಾರಣವೇನು?
ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಬೆಂಬಲ ಸಿಬ್ಬಂದಿಯೊಬ್ಬರ ಮಗಳು ಅಕಾಲಿಕವಾಗಿ ನಿಧನರಾಗಿದ್ದಾರೆ. ಈ ದುಃಖದ ಸಮಯದಲ್ಲಿ ತಮ್ಮ ಸಿಬ್ಬಂದಿಯ ಕುಟುಂಬದೊಂದಿಗೆ ನಾವಿದ್ದೇವೆ ಎಂಬ ಒಗ್ಗಟ್ಟನ್ನು ಪ್ರದರ್ಶಿಸಲು ಫ್ರಾಂಚೈಸಿಯು ಈ ನಿರ್ಧಾರ ತೆಗೆದುಕೊಂಡಿದೆ.
ತಂಡದ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಎಂಐ ಮ್ಯಾನೇಜ್‌ಮೆಂಟ್, “ನಮ್ಮ ಬೆಂಬಲ ಸಿಬ್ಬಂದಿಯ ಮಗಳ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ, ಅವರ ಕುಟುಂಬದ ಪರವಾಗಿ ಮತ್ತು ಅಗಲಿದ ಆತ್ಮದ ಸ್ಮರಣಾರ್ಥವಾಗಿ ಇಂದು ಮುಂಬೈ ಇಂಡಿಯನ್ಸ್ ಆಟಗಾರರು ಕಪ್ಪು ಪಟ್ಟಿ ಧರಿಸುತ್ತಿದ್ದಾರೆ” ಎಂದು ತಿಳಿಸಿದೆ.
ಒಗ್ಗಟ್ಟಿನ ಸಂದೇಶ:
ಮುಂಬೈ ಇಂಡಿಯನ್ಸ್ ತಂಡವು ತನ್ನ ಸಿಬ್ಬಂದಿ ಮತ್ತು ಆಟಗಾರರನ್ನು ಒಂದು ‘ದೊಡ್ಡ ಕುಟುಂಬ’ (One Family) ಎಂದು ಪರಿಗಣಿಸುತ್ತದೆ. ಮೈದಾನದಲ್ಲಿ ಎಷ್ಟೇ ಒತ್ತಡದ ಪಂದ್ಯವಿದ್ದರೂ, ಮೈದಾನದ ಹೊರಗಿನ ನೋವಿನಲ್ಲಿ ಭಾಗಿಯಾಗುವ ಮೂಲಕ ತಂಡವು ಮಾನವೀಯತೆ ಮೆರೆದಿದೆ. ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಈ ನಡೆಯನ್ನು ಶ್ಲಾಘಿಸಿದ್ದು, ಶೋಕತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಪಂದ್ಯದ ಮುಖ್ಯಾಂಶ:
ಈ ಭಾವುಕ ಕ್ಷಣಗಳ ನಡುವೆಯೂ ನಡೆದ ಪಂದ್ಯದಲ್ಲಿ ರಯಾನ್ ರಿಕೆಲ್ಟನ್ ಅವರ ಸ್ಫೋಟಕ ಶತಕದ (123*) ನೆರವಿನಿಂದ ಮುಂಬೈ ಇಂಡಿಯನ್ಸ್ 243 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಆದರೆ, ಸನ್‌ರೈಸರ್ಸ್ ಹೈದರಾಬಾದ್ ತಂಡವು ಗುರಿ ಬೆನ್ನಟ್ಟಿ ,6 ವಿಕೆಟ್ ಗಳ ಜಯ ಸಾಧಿಸಿದೆ.
ಬೆಂಗಳೂರು, ಏಪ್ರಿಲ್ 30: ತೀವ್ರ ಸೆಕೆಯಿಂದ ಬೆಂದು ಹೋಗಿದ್ದ ನಗರಕ್ಕೆ ನಿನ್ನೆ ವರುಣ ತಂಪೆರೆದಿದ್ದಾನೆ ಎಂದು ಖುಷಿ ಪಡಬೇಕೋ ಅಥವಾ ಮಳೆಯ ಅಬ್ಬರಕ್ಕೆ ಉಂಟಾಗಿರುವ ಸಾಲು ಸಾಲು ಅನಾಹುತಗಳಿಗೆ ದುಃಖ ಪಡಬೇಕೋ ಎನ್ನುವ ಸ್ಥಿತಿಯಲ್ಲಿ ಸದ್ಯ ರಾಜ್ಯ ರಾಜಧಾನಿ ಬೆಂಗಳೂರಿನ ನಿವಾಸಿಗಳಿದ್ದಾರೆ. ಗಾಳಿ ಮತ್ತು ಗುಡುಗಿನ ಸಹಿತ ಸುರಿದ ಭಾರಿ ಆಲಿಕಲ್ಲು ಮಳೆಗೆ ಸಾಲು ಸಾಲು ಅನಾಹುತಗಳೇ ನಡೆದಿದ್ದು, ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ತೀವ್ರ ಗಾಳಿಗೆ ನಗರದ ಹಲವೆಡೆ ಮರಗಳು ಧರೆಗುರುಳಿದ್ದರೆ, ಅಂಡರ್ ಪಾಸ್ ಸೇರದಂತೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿರುವ ಕಾರಣ ಸಂಚಾರ ಸಮಸ್ಯೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹೀಗಾಗಿ ಬೆಂಗಳೂರು ನಗರ ಸಂಚಾರ ಪೊಲೀಸರು ಹಂಚಿಕೊಂಡಿರುವ ಕೆಲ ಮಹತ್ವದ ಮಾಹಿತಿ ಇಲ್ಲಿದೆ.
ಅಂಡರ್‌ಪಾಸ್‌ನಲ್ಲಿ ನೀರು ನಿಂತು ಸಂಚಾರಕ್ಕೆ ಸಮಸ್ಯೆ
“ಸಂಚಾರಸಲಹೆ”
ಲೌರಿ ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಂತಿರುವುದರಿಂದ ಮಹದೇವಪುರ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
“Traffic advisory”
Due to water lagging at Lowry underpass towards Mahadevpura is having slow-moving traffic.@GBA_officepic.twitter.com/L4pfIMWqOO
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) April 30, 2026
ನಿನ್ನೆಯ ಮಳೆ ಅಬ್ಬರಕ್ಕೆ ಕೆಲ ಪ್ರದೇಶಗಳಲ್ಲಿ ತುಂಬಿದ್ದ ನೀರು ಹಾಗೆಯೇ ಇಂದು ಕೂಡ ಉಳಿದುಕೊಂಡಿದೆ. ಲೌರಿ ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಂತಿರುವುದರಿಂದ ಸುಗಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಮಹದೇವಪುರ ಕಡೆಗೆ ನಿಧಾನಗತಿಯ ಸಂಚಾರವಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಕೆ.ಆರ್.ಸರ್ಕಲ್ ಅಂಡರ್ ಪಾಸ್ ಕೂಡ ಜಲಾವೃತವಾಗಿದ್ದು, ಬ್ಯಾರಿಕೇಡ್ ಹಾಕಿ ಪೊಲೀಸರು ಅಂಡರ್ ಪಾಸ್ ಬಂದ್ ಮಾಡಿದ್ದಾರೆ.
“ಸಂಚಾರಸಲಹೆ”
ಭಾಷ್ಯಂ ವೃತ್ತದ ಬಳಿ ಮರ ಬಿದ್ದಿರುವುದರಿಂದ ಕಾವೇರಿ ಥಿಯೇಟರ್ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
“Traffic advisory”
Due toTree Fall at, Bhasyam Junction towards Cauvery Theatre junction is having slow-moving traffic.@GBA_officepic.twitter.com/Apu0rOOSQq
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) April 30, 2026
ಗಾಳಿ ಮಳೆಯ ಅಬ್ಬರಕ್ಕೆ ನಗರದ ವಿವಿಧೆಡೆ ಹಲವು ಮರಗಳು ಮತ್ತು ರೆಂಬೆಗಳು ಧರೆಗೆ ಉರುಳಿವೆ. ರಾತ್ರಿಯಿಂದಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇವುಗಳ ತೆರವು ಮಾಡಿ, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆಯಾದರೂ ಕೆಲವೆಡೆ ತೆರವು ಕಾರ್ಯ ಇನ್ನೂ ಮುಂದುವರಿದಿದೆ. ಭಾಷ್ಯಂ ವೃತ್ತದ ಬಳಿ ಮರ ಬಿದ್ದಿರುವುದರಿಂದ ಕಾವೇರಿ ಥಿಯೇಟರ್ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರ ಕಂಡುಬಂದಿದೆ. ಬಸವನಗುಡಿಯಲ್ಲಿಯೂ ಬೃಹತ್ ಮರ ಬಿದ್ದು ಅವಾಂತರ ಸೃಷ್ಟಿಯಾಗಿದೆ. ವಿದ್ಯಾಪೀಠ ಸರ್ಕಲ್-ಬಸವನಗುಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಡ್ಡಲಾಗಿ ಬೃಹತ್ ಮರ ಬಿದ್ದಿದ್ದು, ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ. ಸ್ಥಳಕ್ಕೆ ಬಾರದ ಜಿಬಿಎ ಅಧಿಕಾರಿಗಳ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆಯಲ್ಲೇ ಕೆಟ್ಟುನಿಂತ ವಾಹನ
“ಸಂಚಾರ ಸಲಹೆ”
ಬೊಮ್ಮನಹಳ್ಳಿ ಜಂಕ್ಷನ್ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ರೂಪೇನ ಅಗ್ರಹಾರ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
“Traffic advisory”
Due to a vehicle breakdown near Bommanahalli Junction towards Rupena Agrahara, is having slow-moving traffic. pic.twitter.com/9yKv3cPfSz
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) April 30, 2026
ಬೊಮ್ಮನಹಳ್ಳಿ ಜಂಕ್ಷನ್ ಬಳಿ ರಸ್ತೆಯಲ್ಲಿವೇ ವಾಹನ ಕೆಟ್ಟು ನಿಂತಿರುವುದರಿಂದ ರೂಪೇನ ಅಗ್ರಹಾರ ಕಡೆಗೆ ನಿಧಾನಗತಿಯ ಸಂಚಾರವಿರೋದಾಗಿ ಎಕ್ಸ್ ಪೋಸ್ಟ್ ಮೂಲಕ ಬೆಂಗಳೂರು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.
90ರ ದಶಕದಲ್ಲಿ ಬಾಲಿವುಡ್‌ನ ಟಾಪ್ ನಟಿಯಾಗಿ ಮೆರೆದವರು ಮಮತಾ ಕುಲಕರ್ಣಿ. ಸಲ್ಮಾನ್ ಖಾನ್, ಶಾರುಖ್ ಖಾನ್ ಅವರಂತಹ ಸ್ಟಾರ್ ನಟರ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದ ಈ ನಟಿ, ತಮ್ಮ ಸೌಂದರ್ಯ ಮತ್ತು ಧೈರ್ಯವಂತ ನಿರ್ಧಾರಗಳಿಂದಲೇ ಸುದ್ದಿಯಲ್ಲಿದ್ದರು. ಆದರೆ, ಉತ್ತುಂಗದಲ್ಲಿದ್ದಾಗಲೇ ಚಿತ್ರರಂಗದಿಂದ ಮಾಯವಾದ ಮಮತಾ, ದಶಕಗಳ ಕಾಲ ವಿದೇಶದಲ್ಲಿ ನೆಲೆಸಿದ್ದರು.
ಅಧ್ಯಾತ್ಮದ ಹಾದಿ ಮತ್ತು ಮಹಾಕುಂಭ ಮೇಳದ ಸಂಚಲನ: 2025ರಲ್ಲಿ ಭಾರತಕ್ಕೆ ಮರಳಿದ ಮಮತಾ ಕುಲಕರ್ಣಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದು ತಮ್ಮ ಬದಲಾದ ಜೀವನಶೈಲಿಯಿಂದ. ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಕಾಣಿಸಿಕೊಂಡ ಅವರು, ಅಧ್ಯಾತ್ಮದ ಹಾದಿ ಹಿಡಿದು ‘ಕಿನ್ನರ್ ಅಖಾಡ’ದ ಮಹಾಮಂಡಲೇಶ್ವರಿಯಾಗಿ ನೇಮಕಗೊಂಡರು. ತಮ್ಮ ಹಳೆಯ ಜೀವನಕ್ಕೆ ವಿದಾಯ ಹೇಳಿ ‘ಶ್ರೀ ಯಮಯಿ ಮಮತಾ ನಂದ ಗಿರಿ’ ಎಂಬ ಹೊಸ ಹೆಸರನ್ನು ಪಡೆದರು. ಆದರೆ, ಈ ಆಧ್ಯಾತ್ಮಿಕ ಪಯಣ ಸುಗಮವಾಗಿರಲಿಲ್ಲ; ಭೂಗತ ಲೋಕದೊಂದಿಗಿನ ಹಳೆಯ ಕೊಂಡಿಗಳ ಆರೋಪದ ಮೇಲೆ ಅವರನ್ನು ಅಖಾಡದಿಂದ ಉಚ್ಚಾಟಿಸಲಾಯಿತು.
ವಿವಾದಗಳ ಸುಳಿ ಮತ್ತು ಡ್ರಗ್ಸ್ ಪ್ರಕರಣ: ಮಮತಾ ಅವರ ಜೀವನ ತಿರುವು ಪಡೆದಿದ್ದು 2015ರಲ್ಲಿ. 2000 ಕೋಟಿ ರೂಪಾಯಿಗಳ ಬೃಹತ್ ಅಂತರಾಷ್ಟ್ರೀಯ ಡ್ರಗ್ಸ್ ಜಾಲದಲ್ಲಿ ಅವರ ಹೆಸರು ಕೇಳಿಬಂದಿತ್ತು. ಅವರ ಪಾಲುದಾರ ವಿಕ್ಕಿ ಗೋಸ್ವಾಮಿ ಈ ಪ್ರಕರಣದ ಕಿಂಗ್‌ಪಿನ್ ಎಂದು ಆರೋಪಿಸಲಾಗಿತ್ತು. ಆದರೆ, 2024ರಲ್ಲಿ ಬಾಂಬೆ ಹೈಕೋರ್ಟ್ ಈ ಎಲ್ಲಾ ಆರೋಪಗಳನ್ನು ವಜಾಗೊಳಿಸಿ, ಮಮತಾ ಅವರಿಗೆ ದೊಡ್ಡ ರಿಲೀಫ್ ನೀಡಿತು.
ದಾವುದ್ ಇಬ್ರಾಹಿಂ ಕುರಿತು ವಿವಾದಾತ್ಮಕ ಹೇಳಿಕೆ: ಇತ್ತೀಚಿನ ಸಂದರ್ಶನವೊಂದರಲ್ಲಿ ಮಮತಾ ಕುಲಕರ್ಣಿ ಅವರು ಭೂಗತ ಪಾತಕಿ ದಾವುದ್ ಇಬ್ರಾಹಿಂ ಕುರಿತು ನೀಡಿದ ಹೇಳಿಕೆ ಭಾರಿ ವಿವಾದ ಸೃಷ್ಟಿಸಿತ್ತು. “ದಾವುದ್ ಭಯೋತ್ಪಾದಕನಲ್ಲ” ಎಂಬರ್ಥದಲ್ಲಿ ಮಾತನಾಡಿದ ಅವರು, ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಅಥವಾ ಬಾಂಬ್ ಸ್ಫೋಟಗಳಲ್ಲಿ ಆತನ ಪಾತ್ರವಿಲ್ಲ ಎಂದು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದರು.
ಈಗ ಎಲ್ಲಿದ್ದಾರೆ? ಸದ್ಯ ಗ್ಲಾಮರ್ ಲೋಕದಿಂದ ದೂರವೇ ಉಳಿದಿರುವ ಮಮತಾ ಕುಲಕರ್ಣಿ, ಇತ್ತೀಚೆಗೆ ‘ಲಾಫ್ಟರ್ ಚೆಫ್ಸ್’ (Laughter Chefs) ಕಾರ್ಯಕ್ರಮದಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಸದ್ಯಕ್ಕೆ ಅವರ ಕೈಯಲ್ಲಿ ಯಾವುದೇ ದೊಡ್ಡ ಪ್ರಾಜೆಕ್ಟ್‌ಗಳಿಲ್ಲದಿದ್ದರೂ, ಅವರ ಜೀವನದ ಒಂದೊಂದೇ ರಹಸ್ಯಗಳು ಇಂದಿಗೂ ಕುತೂಹಲ ಮೂಡಿಸುತ್ತಿವೆ.
IPL 2026: ಐಪಿಎಲ್ 2026ರ ಸೀಸನ್ನಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (MI) ತಂಡವು ಅತ್ಯಂತ ಕಠಿಣ ಹಂತವನ್ನು ಎದುರಿಸುತ್ತಿದೆ. ಸೋಲಿನ ಸುಳಿಯಿಂದ ಹೊರಬರಲು ಮತ್ತು ಗೆಲುವಿನ ಲಯ ಕಂಡುಕೊಳ್ಳಲು ಮುಂಬೈ ಮ್ಯಾನೇಜ್‌ಮೆಂಟ್ ಈವರೆಗೆ ಒಟ್ಟು 22 ಆಟಗಾರರನ್ನು ಮೈದಾನಕ್ಕಿಳಿಸಿದೆ. ಈ ಮೂಲಕ ಪ್ರಸಕ್ತ ಸೀಸನ್ನಲ್ಲಿ ಅತಿ ಹೆಚ್ಚು ಆಟಗಾರರನ್ನು ಬಳಸಿಕೊಂಡ ತಂಡ ಎಂಬ ಅಚ್ಚರಿಯ ದಾಖಲೆಗೆ ಮುಂಬೈ ಪಾತ್ರವಾಗಿದೆ.
ಯಾವುದೇ ತಂಡ ಯಶಸ್ವಿಯಾಗಲು ಸ್ಥಿರವಾದ 'ಪ್ಲೇಯಿಂಗ್ ಇಲೆವೆನ್' ಅತ್ಯಗತ್ಯ. ಆದರೆ ಮುಂಬೈ ಈ ಬಾರಿ ಪ್ರತಿ ಪಂದ್ಯದಲ್ಲೂ ಒಂದಿಲ್ಲೊಂದು ಬದಲಾವಣೆ ಮಾಡುತ್ತಲೇ ಸಾಗಿದೆ. ಆರಂಭಿಕ ಬ್ಯಾಟರ್ಗಳಿಂದ ಹಿಡಿದು ಫಿನಿಶರ್ಗಳವರೆಗೆ ಎಲ್ಲೂ ಸ್ಥಿರತೆ ಕಾಣುತ್ತಿಲ್ಲ. ತಂಡವು ಈವರೆಗೆ ಸುಮಾರು 5 ವಿಭಿನ್ನ ಆರಂಭಿಕ ಜೋಡಿಗಳನ್ನು ಕಣಕ್ಕಿಳಿಸಿರುವುದು ತಂಡದ ಅಸ್ಥಿರತೆಗೆ ಸಾಕ್ಷಿಯಾಗಿದೆ.
ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ಅಲ್ಲಾ ಗಜನ್ಫರ್, ಮಯಾಂಕ್ ಮಾರ್ಕಾಂಡೆ ಅವರಂತಹ ಸ್ಪಿನ್ನರ್ಗಳನ್ನು ಪದೇ ಪದೇ ಅದಲು ಬದಲು ಮಾಡುತ್ತಿದೆ. ಅಲ್ಲದೆ, ಶರ್ಫೇನ್ ರದರ್ಫೋರ್ಡ್, ರಾಬಿನ್ ಮಿಂಝ್ ಮತ್ತು ಮಯಾಂಕ್ ರಾವತ್ ಅವರಂತಹ ಯುವ ಆಟಗಾರರನ್ನು ಗೆಲುವಿನ ಸೂತ್ರವಾಗಿ ಬಳಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಆದರೆ, ಈ ನಿರಂತರ ಬದಲಾವಣೆಗಳು ಆಟಗಾರರಲ್ಲಿ ಆತ್ಮವಿಶ್ವಾಸದ ಕೊರತೆಯನ್ನು ಉಂಟುಮಾಡುತ್ತಿವೆ ಎಂಬುದಕ್ಕೆ ಬ್ಯಾಕ್ ಟು ಬ್ಯಾಕ್ ಸೋಲುಗಳೇ ಸಾಕ್ಷಿ.
ಸೋಲಿಗೆ ಕಾರಣವೇನು? ತಂಡದ ಪ್ರಮುಖ ಆಟಗಾರರ ಫಾರ್ಮ್ ಕೊರತೆ ಮತ್ತು ಬೌಲಿಂಗ್ ವಿಭಾಗದಲ್ಲಿನ ದೌರ್ಬಲ್ಯ ಮುಂಬೈ ಪಾಲಿಗೆ ಮುಳುವಾಗಿದೆ. ಒಂದು ಗೆಲುವಿಗಾಗಿ ಇಷ್ಟೊಂದು ಆಟಗಾರರನ್ನು ಬದಲಿಸುತ್ತಿರುವುದು ತಂಡದ ಸಂಯೋಜನೆಯನ್ನು ಹಾಳುಮಾಡುತ್ತಿದೆ. ಇದಾಗ್ಯೂ ಹಾರ್ದಿಕ್ ಪಾಂಡ್ಯ ಪಡೆಗೆ ಗೆಲ್ಲಲು ಸಾಧ್ಯವಾಗುತ್ತಿಲ್ಲ.
ಮುಂಬೈ ಇಂಡಿಯನ್ಸ್ ತಂಡಕ್ಕೆ ಈಗ ಬೇಕಿರುವುದು ಕೇವಲ ಆಟಗಾರರ ಬದಲಾವಣೆಯಲ್ಲ, ಬದಲಾಗಿ ಮೈದಾನದಲ್ಲಿ ತೋರುವ ಕೆಚ್ಚೆದೆಯ ಪ್ರದರ್ಶನ. ಉಳಿದ ಪಂದ್ಯಗಳಲ್ಲಾದರೂ ಮುಂಬೈ ಒಂದು ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿದು ಅಭಿಮಾನಿಗಳಿಗೆ ಹಳೆಯ ಸಂಭ್ರಮವನ್ನು ಮರಳಿ ನೀಡುತ್ತದೆಯೇ ಎಂದು ಕಾದು ನೋಡಬೇಕಿದೆ.
ಐಪಿಎಲ್ 2026 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ ಆಟಗಾರರು: ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮ, ದಾನಿಶ್ ಮಲೇವಾರ್, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ವಿಲ್ ಜಾಕ್ಸ್, ಶಾರ್ದೂಲ್ ಠಾಕೂರ್, ಕಾರ್ಬಿನ್ ಬಾಷ್, ರಾಜ್ ಅಂಗದ್ ಬಾವಾ, ಮಯಾಂಕ್ ರಾವತ್, ಕ್ರಿಶ್ ಭಗತ್, ಮಿಚೆಲ್ ಸ್ಯಾಂಟ್ನರ್, ಕ್ವಿಂಟನ್ ಡಿ ಕಾಕ್, ರಿಯಾನ್ ರಿಕೆಲ್ಟನ್, ರಾಬಿನ್ ಮಿಂಜ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ದೀಪಕ್ ಚಹಾರ್, ಮಯಾಂಕ್ ಮಾರ್ಕಾಂಡೆ, ಅಲ್ಲಾ ಗಜನ್ಫರ್, ಅಶ್ವಿನಿ ಕುಮಾರ್.
‘ಅಮೃತಧಾರೆ’ ಧಾರಾವಾಹಿಯಲ್ಲಿ (Amruthadhaare) ಈಗ ದೊಡ್ಡ ಟ್ವಿಸ್ಟ್ ಒಂದು ಎದುರಾಗಿದೆ ಎಂದರೂ ತಪ್ಪಾಗಲಾರದು. ಈ ಧಾರಾವಾಹಿಯಲ್ಲಿ ಜಯದೇವ್ ಬೀದಿಗೆ ಬರುವುದು ಬಹುತೇಕ ಖಚಿತವಾಗಿದೆ. ಈ ಧಾರಾವಾಹಿಯಲ್ಲಿ ವಿಲನ್ ಆಗಿ ಮೆರೆಯುತ್ತಿದ್ದ ಆತನಿಗೆ ಸ್ವತಃ ಪತ್ನಿಯಿಂದಲೇ ಮೋಸ ಆಗಿದೆ. ಕುಟುಂಬದ ಎಲ್ಲರಿಗೂ ಮೋಸ ಮಾಡಿದ ಆತನಿಗೆ ಈಗ ಶಾಕ್ ಎದುರಾಗಿದೆ. ಶೀಘ್ರವೇ ಧಾರಾವಾಹಿ ಪೂರ್ಣಗೊಳ್ಳಬಹುದು ಎಂಬ ಅನುಮಾನ ಬಂದಿದೆ.
‘ಅಮೃತಧಾರೆ’ ಧಾರಾವಾಹಿಯಲ್ಲಿ ಒಂದು ದೊಡ್ಡ ಟ್ವಿಸ್ಟ್ ಎದುರಾಗಿತ್ತು. ಜಯದೇವ್ ತಾನು ಹೂಡಿಕೆ ಮಾಡಿದ್ದ. ಆದರೆ, ಈ ಹಣ ಈಗ ಇಲ್ಲದಂತೆ ಆಗಿದೆ. ಇದರಿಂದ ಕಂಪನಿ ಮಾರಿ ವಿದೇಶಕ್ಕೆ ತೆರಳುವ ಪ್ಲ್ಯಾನ್ ಮಾಡಿದ್ದ. ಆದರೆ, ಈ ಪ್ಲ್ಯಾನ್ ಕೈಕೊಟ್ಟಿದೆ. ಹಣ ಹಾಗೂ ಚಿನ್ನವನ್ನು ತೆಗೆದುಕೊಂಡು ಜಯದೇವ್ ಪತ್ನಿ ದಿಯಾ ಓಡಿ ಹೋಗಿದ್ದಾಳೆ. ಜೊತೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ಸೋರಿಕೆ ಮಾಡಿದ್ದಾರೆ. ಇದರಿಂದ ಅಧಿಕಾರಿಗಳು ಮನೆ ಬಾಗಿಲಿಗೆ ಬಂದಿದ್ದಾರೆ.
ಸದ್ಯದ ಬೆಳವಣಿಗೆ ಜಯದೇವ್ಗೆ ಶಾಕ್ ಕೊಟ್ಟಿದೆ. ಶಾರ್ಟ್ ಕಟ್ನಲ್ಲಿ ತೆರಳಿ ಹಣ ಮಾಡಬೇಕು ಎಂದು ಆತ ಪ್ಲ್ಯಾನ್ ಮಾಡಿದ್ದ. ಆದರೆ, ಈ ಪ್ಲ್ಯಾನ್ ಉಲ್ಟಾ ಆಗಿದೆ. ಇದರಿಂದ ಮುಂದೇನು ಎನ್ನುವ ಪ್ರಶ್ನೆ ಆತನಿಗೆ ಮೂಡಿದೆ. ಈ ಸಂದರ್ಭದಲ್ಲಿ ಆತನ ಅಣ್ಣ ಗೌತಮ್ ಸಹಾಯಕ್ಕೆ ಬರುತ್ತಾನಾ ಎನ್ನುವ ಪ್ರಶ್ನೆ ಮೂಡಿದೆ.
ಈಗಾಗಲೇ ಗೌತಮ್ಗೆ ಜಯದೇವ್ ಯಾವ ರೀತಿಯ ವ್ಯಕ್ತಿ ಎಂಬುದು ಗೊತ್ತಾಗಿದೆ. ಈ ಸಂದರ್ಭದಲ್ಲಿ ಅವನು ಈತನ ಬೆಂಬಲಕ್ಕೆ ನಿಲ್ಲೋದು ಅನುಮಾನವೇ. ಈ ವಿಷಯದಲ್ಲಿ ಯಾವ ರೀತಿಯ ಬೆಳವಣಿಗೆ ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಬಾಂಗ್ಲಾದೇಶ,ಏಪ್ರಿಲ್ 30: ವ್ಯಕ್ತಿಯೊಬ್ಬರು ಚಲಿಸುತ್ತಿರುವ ರೈಲು-ಪ್ಲಾಟ್‌ಫಾರ್ಮ್ ಮಧ್ಯೆ ಬಿದ್ದ ತಮ್ಮ ಮಗುವನ್ನು ರಕ್ಷಿಸಿ ಹೀರೋ ಎನಿಸಿಕೊಂಡಿದ್ದಾರೆ. ಬಾಂಗ್ಲಾದೇಶದ ಕಿಶೋರ್‌ಗಂಜ್‌ನ ಭೈರಬ್ ರೈಲು ನಿಲ್ದಾಣದಲ್ಲಿ ಏಪ್ರಿಲ್ 28 ರಂದು ಮಧ್ಯಾಹ್ನ 3.30 ರ ಸುಮಾರಿಗೆ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಢಾಕಾಗೆ ಹೋಗುವ ಟೈಟಾಸ್ ಕಮ್ಯೂಟರ್ ರೈಲು ನಿಲ್ದಾಣದಿಂದ ಚಲಿಸಲು ಪ್ರಾರಂಭಿಸಿದಾಗ, ಇಳಿಯಲು ಆತುರಪಟ್ಟ ತಂದೆಯ ಕೈಯಿಂದ ಒಂದು ವರ್ಷದ ಮಗು ಜಾರಿ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಕಿರಿದಾದ ಅಂತರಕ್ಕೆ ಬಿದ್ದಿತ್ತು.
ಕ್ಷಣಾರ್ಧವೂ ವಿಳಂಬ ಮಾಡದ ತಂದೆ, ತನ್ನ ಮಗುವನ್ನು ರಕ್ಷಿಸಲು ಚಲಿಸುವ ರೈಲಿನ ಕೆಳಗೆ ಹಾರಿದರು. ಮಗುವನ್ನು ಗಟ್ಟಿಯಾಗಿ ಅಪ್ಪಿಕೊಂಡ ಅವರು ಪ್ಲಾಟ್‌ಫಾರ್ಮ್‌ನ ಗೋಡೆಗೆ ಒರಗಿ ಮಲಗಿದರು. ಚಲಿಸುವ ರೈಲಿನ ಬೋಗಿಗಳು ಅವರ ಮೇಲೆಯೇ ಹಾದುಹೋದರೂ, ತಂದೆಯ ಸಮಯಪ್ರಜ್ಞೆಯಿಂದ ಇಬ್ಬರೂ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದರು. ರೈಲು ಸಂಪೂರ್ಣವಾಗಿ ಹಾದುಹೋದ ನಂತರ, ಅಲ್ಲಿದ್ದ ಜನರು ಮತ್ತು ಮಗುವಿನ ತಾಯಿ ಹಳಿಗಳ ಮೇಲೆ ಇಳಿದು ಮಗುವನ್ನು ಸುರಕ್ಷಿತವಾಗಿ ಮೇಲೆತ್ತಿಕೊಂಡರು. ಮಗು ಗಾಯಗಳಿಲ್ಲದೆ ಪಾರಾಗಿದ್ದು, ಈ ಎದೆನಡುಗಿಸುವ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಬೆಂಗಳೂರು, ಏಪ್ರಿಲ್ 30: ಬೆಂಗಳೂರು ನಗರದಲ್ಲಿ ಭಾರಿ ಗಾಳಿ ಮಳೆಯ ಪರಿಣಾಮ ವ್ಯಾಪಕ ಅವಾಂತರಗಳು ಸೃಷ್ಟಿಯಾಗಿವೆ. ನಗರದಾದ್ಯಂತ 50ಕ್ಕೂ ಹೆಚ್ಚು ಬೃಹದಾಕಾರದ ಮರಗಳು ಧರೆಗುರುಳಿವೆ. ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯ ಪ್ರವೇಶ ದ್ವಾರದ ಬಳಿ ಮರ ಬಿದ್ದು, ಮೂರು ಆಟೋಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಅದೃಷ್ಟವಶಾತ್, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದೇ ರೀತಿ, ಬಸವನಗುಡಿಯ ವಿದ್ಯಾಪೀಠ ಸರ್ಕಲ್ ಬಳಿಯೂ ಬೃಹತ್ ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ. ವಿದ್ಯುತ್ ತಂತಿಗಳಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಮರಗಳನ್ನು ತೆರವುಗೊಳಿಸಲು ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾತ್ರಿ ಮರಗಳು ಬಿದ್ದಿದ್ದರೂ ಬೆಳಗ್ಗೆವರೆಗೂ ತೆರವು ಕಾರ್ಯಾಚರಣೆ ವಿಳಂಬವಾಗಿದೆ ಎಂದು ಆರೋಪಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು (ಏ. 30): ಐಪಿಎಲ್ 2026 ರಲ್ಲಿ ಮುಂಬೈ ಇಂಡಿಯನ್ಸ್ ಸ್ಥಿತಿ ತುಂಬಾ ಕೆಟ್ಟದಾಗಿದೆ. ಬುಧವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ 243 ರನ್‌ಗಳ ಬೃಹತ್ ಸ್ಕೋರ್ ಅನ್ನೂ ರಕ್ಷಿಸುವಲ್ಲಿ ಮುಂಬೈ ಇಂಡಿಯನ್ಸ್ ವಿಫಲವಾಯಿತು. ಈ ಸೋಲಿನಿಂದ ಎಂಐ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ತೀವ್ರ ನಿರಾಶೆಗೊಂಡಂತೆ ಕಂಡುಬಂದರು. ಸೋಲಿನ ನಂತರ ಹಾರ್ದಿಕ್ ತಮ್ಮ ಹೇಳಿಕೆಯಲ್ಲಿ, ಸೋಲಿಗೆ ಕಾರಣಗಳು ಮತ್ತು ತಂಡದ ಸ್ಥಿತಿಯ ಬಗ್ಗೆ ಬಹಿರಂಗವಾಗಿ ಮಾತನಾಡಿದರು. ಮುಂಬೈ 243 ರನ್‌ಗಳ ಬೆಟ್ಟದಂತಹ ಸ್ಕೋರ್ ಗಳಿಸಿದರೂ ಸನ್‌ರೈಸರ್ಸ್ 8 ಎಸೆತಗಳು ಬಾಕಿ ಇರುವಾಗಲೇ ಈ ಗುರಿಯನ್ನು ಸಾಧಿಸಿತು. ಇದು ಐಪಿಎಲ್ ಇತಿಹಾಸದಲ್ಲಿ ನಾಲ್ಕನೇ ಅತಿದೊಡ್ಡ ರನ್-ಚೇಸ್ ಆಗಿದೆ.
ಹೈದರಾಬಾದ್ ವಿರುದ್ಧದ ಸೋಲಿಗೆ ಹಾರ್ದಿಕ್ ಹೇಳಿದ್ದೇನು?
ಪಂದ್ಯದಲ್ಲಿ ಇಬ್ಬನಿ ಪ್ರಮುಖ ಪಾತ್ರ ವಹಿಸಲಿಲ್ಲ ಎಂದು ಹಾರ್ದಿಕ್ ಪಾಂಡ್ಯ ಸ್ಪಷ್ಟಪಡಿಸಿದರು. ಸೋಲಿಗೆ ಕೆಟ್ಟ ಚೆಂಡುಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಅವರು ದೂಷಿಸಿದರು. ಇದನ್ನು ಕೇಳಿ ಅಭಿಮಾನಿಗಳು ಶಾಕ್ ಆದರು. “ಇಬ್ಬನಿ ಪ್ರಮುಖ ಪಾತ್ರ ವಹಿಸಿದೆ ಎಂದು ನಾನು ಭಾವಿಸುವುದಿಲ್ಲ. ಅವರು (ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್) ಕೆಲವು ಉತ್ತಮ ಹೊಡೆತಗಳನ್ನು ಆಡಿದರು ಮತ್ತು ನಾವು ಕೆಲವು ಕೆಟ್ಟ ಚೆಂಡುಗಳನ್ನು ಬೌಲ್ ಮಾಡಿದ್ದೇವೆ. ಅವರು ಉತ್ತಮ ಆರಂಭ ಪಡೆದರು. ನಾವು ಪುನರಾಗಮನ ಮಾಡಲು ಪ್ರಯತ್ನಿಸಿದೆವು, ಆದರೆ ಅದು ಸಾಧ್ಯವಾಗಲಿಲ್ಲ” ಎಂದು ಹಾರ್ದಿಕ್ ಹೇಳಿದರು.
ಬೌಲಿಂಗ್‌ನಲ್ಲಿ ಇನ್ನೂ ವಿಶ್ವಾಸವಿದೆ
ಇಷ್ಟು ಹೆಚ್ಚಿನ ಮೊತ್ತವನ್ನು ರಕ್ಷಿಸುವಲ್ಲಿ ವಿಫಲವಾದರೂ, ಹಾರ್ದಿಕ್ ತಮ್ಮ ಬೌಲರ್‌ಗಳನ್ನು ಸಮರ್ಥಿಸಿಕೊಂಡರು. ಸೋಲಿಗೆ ಬೌಲರ್ಗನ್ನು ಮಾತ್ರ ದೂಷಿಸುವುದಿಲ್ಲ ಮತ್ತು ಅವರ ಮೇಲೆ ಒತ್ತಡ ಹೇರುವುದಿಲ್ಲ ಎಂದು ಹೇಳಿದರು. ಹಾರ್ದಿಕ್ ಪ್ರಕಾರ, “ನಾನು ನನ್ನ ಬೌಲರ್‌ಗಳನ್ನು ದೂಷಿಸುವುದಿಲ್ಲ. 244 ಸ್ಕೋರ್ ಅನ್ನು ರಕ್ಷಿಸಬಹುದೆಂದು ನನಗೆ ವಿಶ್ವಾಸವಿತ್ತು, ಆದರೆ ಇಂದು ನಮ್ಮ ಎಕ್ಸಿಕ್ಯೂಷನ್ ಪರಿಪೂರ್ಣವಾಗಿರಲಿಲ್ಲ. ಒಂದು ಘಟಕವಾಗಿ, ಮುಂಬೈ ಇಂಡಿಯನ್ಸ್‌ಗೆ ಹೆಸರುವಾಸಿಯಾದದ್ದನ್ನು ನಾವು ಸಾಧಿಸಲಿಲ್ಲ.” ಎಂದರು.
ಪಂದ್ಯದಲ್ಲಿ ಟ್ರಾವಿಸ್ ಹೆಡ್ ಕ್ಯಾಚ್ ಕೈಬಿಟ್ಟಿದ್ದು ಅಥವಾ ವಿಫಲವಾದ ಮನವಿ ಮುಂಬೈಗೆ ದುಬಾರಿಯಾಗಿ ಪರಿಣಮಿಸಿತು. ಅವಕಾಶಗಳನ್ನು ಬಳಸಿಕೊಳ್ಳುವಾಗ ವೇಗ ಬದಲಾಗುತ್ತದೆ, ಆದರೆ ಹಾಗೆ ಮಾಡದಿದ್ದರೆ ನೋವುಂಟಾಗುತ್ತದೆ ಎಂದು ಹಾರ್ದಿಕ್ ಹೇಳಿದರು. ಈ ಋತುವಿನಲ್ಲಿ ಅದೃಷ್ಟ ಮತ್ತು ಅವಕಾಶ ತನ್ನ ಕಡೆ ಇರಲಿಲ್ಲ ಎಂದು ಅವರು ಒಪ್ಪಿಕೊಂಡರು.
ವಾಂಖೆಡೆಯಲ್ಲಿ ನಡೆದ ಪಂದ್ಯದ ವೇಳೆ ಎದುರಾಳಿ ತಂಡಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದ ಬಗ್ಗೆ ಹಾರ್ದಿಕ್ ತಮ್ಮ ನೋವನ್ನು ವ್ಯಕ್ತಪಡಿಸಿದರು. “ವಿರೋಧಿ ತಂಡ ಬಂದಾಗ ಅಭಿಮಾನಿಗಳು ಅವರ ಹೆಸರು ಜಪಿಸಿದಾಗ ಕೆಲವೊಮ್ಮೆ ದುಃಖವಾಗುತ್ತದೆ. ನಮ್ಮ ಅಭಿಮಾನಿಗಳು ತುಂಬಾ ನಿಷ್ಠಾವಂತರು, ಆದರೆ ನಾವು ಅವರನ್ನು ಮನರಂಜಿಸಬೇಕು ಮತ್ತು ಅವರ ವಿಶ್ವಾಸವನ್ನು ಮರಳಿ ಗಳಿಸಬೇಕು” ಎಂದು ಹೇಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಸಿನಿಮಾಗಳಲ್ಲಿ ಬೋಲ್ಡ್ ದೃಶ್ಯಗಳನ್ನು ಮಾಡಲು ಎಲ್ಲ ನಾಯಕಿಯರೂ ಒಪ್ಪಿವುದಿಲ್ಲ. ಕೆಲವರು ಒಪ್ಪಿದರೂ ಆ ಬಗ್ಗೆ ಕೇಳಿ ಬರುವ ಪ್ರಶ್ನೆಗಳಿಗೆ ಉತ್ತರಿಸಲು ರೆಡಿ ಇರುವುದಿಲ್ಲ. ಈಗ ಹಾಗೆಯೇ ಆಗಿದೆ. ‘ಎಪಿಕ್’ ಹೆಸರಿನ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಹಾಗೂ ವೈಷ್ಣವಿ ಚೈತನ್ಯ ನಟಿಸಿದ್ದಾರೆ.
‘ಬೇಬಿ’ ಹೆಸರಿನ ಸಿನಿಮಾ 2023ರಲ್ಲಿ ಬಂದು ಸೂಪರ್ ಹಿಟ್ ಆಯಿತು. 10 ಕೋಟಿ ರೂಪಾಯಿಯಲ್ಲಿ ಸಿದ್ಧವಾದ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಬರೋಬ್ಬರಿ 80 ಕೋಟಿ ರೂಪಾಯಿ ಗಳಿಕೆ ಮಾಡಿತು. ಈ ಸಿನಿಮಾದಲ್ಲಿ ಆನಂದ್ ಹಾಗೂ ವೈಷ್ಣವಿ ಒಟ್ಟಾಗಿ ನಟಿಸಿದ್ದಾರೆ. ಈ ಸಿನಿಮಾ ಬಳಿಕ ಆನಂದ್ ಹಾಗೂ ವೈಷ್ಣವಿ ‘ಎಪಿಕ್: ದಿ ಸೆಮಿಸ್ಟರ್’ ಚಿತ್ರಕ್ಕಾಗಿ ಒಂದಾಗಿದ್ದಾರೆ. ಈ ಸಿನಿಮಾದ ಟೀಸರ್ ಗಮನ ಸೆಳೆದಿದೆ.
ವಿಜಯ್ ದೇವರಕೊಂಡ ಅವರು ‘ಅರ್ಜುನ್ ರೆಡ್ಡಿ’ ಸಿನಿಮಾದಲ್ಲಿ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡರು. ಆ ಬಳಿಕ ಅವರ ಇಮೇಜ್ ಸಂಪೂರ್ಣವಾಗಿ ಬದಲಾಯಿತು. ಈ ಸಿನಿಮಾ ಅವರ ವೃತ್ತಿ ಜೀವನಕ್ಕೆ ಮೈಲೇಜ್ ನೀಡಿತು. ಅದೇ ರೀತಿ ಆನಂದ್ ಕೂಡ ಪ್ರಯತ್ನಿಸುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ. ‘ಎಪಿಕ್’ ಚಿತ್ರದಲ್ಲಿ ಬೋಲ್ಡ್ ದೃಶ್ಯಗಳಿವೆ.
What the hell is that question ?
A actress enta feel avutunaru ani
Assalu waste villani invite cheyakandipic.twitter.com/xQgxdxQTp1
‘ಬೇಬಿ’ ಸಿನಿಮಾದಲ್ಲಿ ಒಂದು ಸ್ಯಾಡ್ ಎಂಡಿಂಗ್ ಲವ್ ಸ್ಟೋರಿ ಇತ್ತು. ‘ಎಪಿಕ್’ ಚಿತ್ರದಲ್ಲಿ ಕೇವಲ ಬೋಲ್ಡ್ ದೃಶ್ಯಗಳ ಮೇಲೆ ಗಮನ ಹರಿಸಲಾಗಿದೆಯೇ ಎಂಬ ಪ್ರಶ್ನೆ ಇದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವೈಷ್ಣವಿಗೆ ಪ್ರಶ್ನೆ ಎದುರಾಗಿದೆ. ‘ಬೇಬಿ’ ಸಿನಿಮಾ ಬಳಿಕ ಈ ರೀತಿಯ ಇಮೇಜ್ ಚೇಂಜ್ ಬೇಕಿತ್ತು ಅಲ್ಲವೇ ಎಂದು ಕೇಳಲಾಗಿದೆ. ಆದರೆ, ಇದಕ್ಕೆ ಉತ್ತರಿಸಲು ನಟಿ ಹಿಂದೇಟು ಹಾಕಿದ್ದಾರೆ. ಅವರ ಬದಲು ನಿರ್ದೇಶಕರು ಉತ್ತರ ನೀಡಿದರು. ಒಂದು ಸರಳ ಪ್ರಶ್ನೆಗೆ ಇಷ್ಟು ಸಿಟ್ಟಾದರೆ ಹೇಗೆ ಎಂಬುದು ಅನೇಕರ ಕುತೂಹಲಕ್ಕೆ ಕಾರಣ ಆಗಿದೆ.