Category Archives: Blog

Your blog category

ವಾರಾಣಸಿಯಲ್ಲಿ ತಮಗಾಗಿ ಕಾದಿದ್ದ ಮಕ್ಕಳಿಗೆ ಮುದ್ದುಗರೆದ ಮೋದಿ ತಾತ – Kannada News | PM Modi interacted with children during his Varanasi visit

ವಾರಾಣಸಿ, ಏಪ್ರಿಲ್ 29: ಉತ್ತರ ಪ್ರದೇಶದ ವಾರಾಣಸಿ ಭೇಟಿಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಚಿಕ್ಕ ಮಕ್ಕಳೊಂದಿಗೆ ಕೆಲಕಾಲ ಸಮಯ ಕಳೆದರು. ಪ್ರಧಾನಿ ಮೋದಿಗಾಗಿ ಅಪ್ಪ-ಅಮ್ಮನ ಜೊತೆ ಸಾಕಷ್ಟು ಹೊತ್ತಿನಿಂದ ಕಾಯುತ್ತಿದ್ದ ಮಕ್ಕಳು ಮೋದಿಯನ್ನು ಕಂಡ ಕೂಡಲೆ ಕೈ ಬೀಸತೊಡಗಿದರು. ಇದನ್ನು ನೋಡಿದ ಮೋದಿ ಆ ಮಕ್ಕಳನ್ನು ತನ್ನತ್ತ ಕರೆದು ಮಾತನಾಡಿಸಿದ್ದಾರೆ. ಈ ಹೃದಯಸ್ಪರ್ಶಿ ದೃಶ್ಯಗಳು ವೈರಲ್ ಆಗಿವೆ. ಕಾಶಿ ವಿಶ್ವನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಪ್ರಧಾನಿ ಮೋದಿ ಅವರು ಹೊರಡುವ ಹೊತ್ತಿಗೆ ಈ ಹೃದಯಸ್ಪರ್ಶಿ ಕ್ಷಣ ಅನಾವರಣಗೊಂಡಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊಪ್ಪಳ: 21 ಸಾವಿರ ರೂ. ಲಂಚ ಪಡೆಯುವಾಗ ಲೋಕಯುಕ್ತ ಕೈಗೆ ಸಿಕ್ಕಿಬಿದ್ದ ಎಸ್‌ಡಿಎ ರಂಜಿತ್ – Kannada News | Lokayukta Raid Koppal: RTO Clerk Ranjith Caught Taking Bribe for Showroom License

ಕೊಪ್ಪಳ, ಏ.29: ರಾಜ್ಯದ ಹಲವು ಕಡೆ ಲೋಕಯುಕ್ತ ದಾಳಿಗಳು ನಡೆಯುತ್ತಿದೆ. ಭಷ್ಟ ಅಧಿಕಾರಿಗಳ ಹೆಡೆಮುರಿ ಕಟ್ಟುತ್ತಿದ್ದಾರೆ. ಇದೀಗ ಕೊಪ್ಪಳದ ಪ್ರಾದೇಶಿಕ ಸಾರಿಗೆ ಕಚೇರಿಯ (RTO) ದ್ವಿತೀಯ ದರ್ಜೆ ಸಹಾಯಕ (SDA) ರಂಜಿತ್ ಎಂಬುವವರು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಶೋರೂಮ್ ಟ್ರೇಡ್ ಲೈಸೆನ್ಸ್ ನೀಡಲು ಹಣಕ್ಕೆ ಬೇಡಿಕೆಯಿಟ್ಟಿದ್ದ ಈ ಸಿಬ್ಬಂದಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ. ದೂರುದಾರರಾದ ನಯೀಮ್ ಎಂಬುವವರು ಕುಷ್ಟಗಿ, ಕಾರಟಗಿ ಹಾಗೂ ಹುಲಿಗಿಯಲ್ಲಿ ಹೊಸ ಶೋರೂಮ್‌ಗಳನ್ನು ತೆರೆಯಲು ಪರವಾನಿಗೆ (Trade License) ಕೋರಿ ಮೂರು ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ಈ ಪರವಾನಿಗೆ ನೀಡಲು ಎಸ್‌ಡಿಎ ರಂಜಿತ್ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ನಯೀಮ್ ಅವರು ನೀಡಿದ ದೂರಿನನ್ವಯ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದರು. ರಂಜಿತ್ ಅವರು 21 ಸಾವಿರ ರೂಪಾಯಿ ಲಂಚದ ಹಣವನ್ನು ವಿನಯ್ ಎಂಬಾತನ ಕೈಗೆ ನೀಡುವಂತೆ ಸೂಚಿಸಿದಾಗ, ರಾಯಚೂರು ಲೋಕಾಯುಕ್ತ ಡಿವೈಎಸ್‌ಪಿ ಲೋಕೇಶ್ ನೇತೃತ್ವದ ತಂಡ ದಾಳಿ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದೆ. ಸದ್ಯ ಆರೋಪಿ ರಂಜಿತ್‌ನನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತರ ಈ ಕ್ರಮ ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೇ 4ರಂದು ಬಿಜೆಪಿ ಹ್ಯಾಟ್ರಿಕ್ ಸಾಧಿಸಲಿದೆ; ಹರ್ದೋಯ್‌ನಲ್ಲಿ ಪ್ರಧಾನಿ ಮೋದಿ ಘೋಷಣೆ – Kannada News | BJP to make historic hat trick of victories PM Modi in Hardoi West Bengal Elections

ಹರ್ದೋಯ್, ಏಪ್ರಿಲ್ 29: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಉತ್ತರ ಪ್ರದೇಶದ ಹರ್ದೋಯ್‌ನಲ್ಲಿ ಗಂಗಾ ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಿದರು. ಈ ವೇಳೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮೀರತ್ ಮತ್ತು ಪ್ರಯಾಗ್‌ರಾಜ್ ನಡುವಿನ ಎಕ್ಸ್‌ಪ್ರೆಸ್‌ವೇ ಗಂಗಾ ಮಾತೆಯ ಆಶೀರ್ವಾದವಾಗಿದ್ದು, ಜನರು ಎರಡೂ ನಗರಗಳ ನಡುವೆ ಸುಲಭವಾಗಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಈ ಹೆದ್ದಾರಿ ಉತ್ತರ ಪ್ರದೇಶದ ಜೀವನಾಡಿ ಎಂದು ಬಣ್ಣಿಸಿದರು.

ಇದೇ ವೇಳೆ ಪಶ್ಚಿಮ ಬಂಗಾಳ ಚುನಾವಣೆಯ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡಿದರು. ಎರಡನೇ ಹಂತದಲ್ಲಿಯೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಲು ಬರುತ್ತಿದ್ದಾರೆ. ಹಿಂದಿನ ಚುನಾವಣೆಗಳಿಗಿಂತ ಭಿನ್ನವಾಗಿ ಭಯದ ವಾತಾವರಣವಿಲ್ಲದೆ ಮತದಾನವನ್ನು ನಡೆಸಲಾಗುತ್ತಿದೆ. ಇದು ಪ್ರಜಾಪ್ರಭುತ್ವವನ್ನು ಬಲಪಡಿಸುವ ಸಂಕೇತವೆಂದು ಕರೆದ ಅವರು, ಮತದಾನ ಪ್ರಕ್ರಿಯೆಯಲ್ಲಿ ಬಂಗಾಳದ ಜನರು ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ಶ್ಲಾಘಿಸಿದರು.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿಗೆ ಟಿಎಂಸಿಗೆ ಬೆಂಬಲಿಗರಿಂದ ಮುತ್ತಿಗೆ; ಮತಗಟ್ಟೆ ಬಳಿ ಲಾಠಿ ಚಾರ್ಜ್

“ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದೆ. ಮೊದಲ ಹಂತದಂತೆಯೇ ಜನರು ತಮ್ಮ ಮತಗಳನ್ನು ಚಲಾಯಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ದೀರ್ಘ ಸರತಿ ಸಾಲುಗಳ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಬಂಗಾಳದಲ್ಲಿ ಮತದಾನವು ಭಯವಿಲ್ಲದ ವಾತಾವರಣದಲ್ಲಿ ನಡೆಯುತ್ತಿದೆ” ಎಂದು ಪ್ರಧಾನಿ ಉತ್ತರ ಪ್ರದೇಶದಲ್ಲಿ ಗಂಗಾ ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಿದ ನಂತರ ಸಭೆಯನ್ನುದ್ದೇಶಿಸಿ ಹೇಳಿದ್ದಾರೆ.

ಇದನ್ನೂ ಓದಿ: ಮೊದಲ ಹಂತದ ಚುನಾವಣೆ ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ

ಬಿಹಾರ ವಿಧಾನಸಭಾ ಚುನಾವಣೆ ಮತ್ತು ಗುಜರಾತ್ ನಾಗರಿಕ ಚುನಾವಣೆಗಳಲ್ಲಿ ಬಿಜೆಪಿಯ ಅದ್ಭುತ ವಿಜಯವನ್ನು ಅವರು ಶ್ಲಾಘಿಸಿದರು. ಬಿಜೆಪಿ ಈ ಬಾರಿ 5 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳನ್ನು ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಲಿದೆ ಎಂದು ಹೇಳಿದರು. “ಈ 5 ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿ ಐತಿಹಾಸಿಕ ಹ್ಯಾಟ್ರಿಕ್ ವಿಜಯಗಳನ್ನು ಸಾಧಿಸಲಿದೆ ಎಂದು ನನಗೆ ವಿಶ್ವಾಸವಿದೆ. ಮೇ 4ರ ಫಲಿತಾಂಶಗಳು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಬಲಪಡಿಸುತ್ತವೆ. ಅವು ದೇಶದ ಅಭಿವೃದ್ಧಿಯ ವೇಗಕ್ಕೆ ಹೊಸ ಶಕ್ತಿಯನ್ನು ತುಂಬುತ್ತವೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕುವೆಂಪು ವಿವಿಯಲ್ಲಿ ತಾರಕ್ಕೇರಿದ್ದ ವಿದ್ಯಾರ್ಥಿಗಳ ಪ್ರತಿಭಟನೆ: ಕುಲಪತಿ, ಕುಲಸಚಿವರನ್ನ ವಜಾಗೊಳಿಸುವಂತೆ ಪಟ್ಟು – Kannada News | Shivamogga: Kuvempu University Students Protest, Demand Dismissal of Chancellor and Registrar

ಶಿವಮೊಗ್ಗ, ಏಪ್ರಿಲ್​ 29: ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಶುಲ್ಕ ಹೆಚ್ಚಳ, ಫಲಿತಾಂಶ ಗೊಂದಲಗಳು ಮತ್ತು ಮೂಲಭೂತ ಸೌಕರ್ಯಗಳ ಕೊರತೆಯನ್ನು ವಿರೋಧಿಸಿ ಎನ್ಎಸ್ ಯುಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಕುಲಪತಿ, ಕುಲಸಚಿವ ಮತ್ತು ಮೌಲ್ಯಮಾಪನ ರಿಜಿಸ್ಟ್ರಾರ್‌ಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ತಾಂತ್ರಿಕ ಸಮಸ್ಯೆಗಳ ನೆಪದಲ್ಲಿ ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಅನುಸರಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಹಿಂದೆ ಪಾಸ್ ಆಗಿದ್ದ ಫಲಿತಾಂಶಗಳು ಈಗ ಮಾಸ್ ಕಾರ್ಡ್‌ಗಳಲ್ಲಿ ಫೇಲ್ ಎಂದು ಬಂದಿರುವುದನ್ನು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ. ಪರಿಕ್ಷಾ ಶುಲ್ಕ, ಕ್ರೀಡಾ ಶುಲ್ಕ ಮತ್ತು ಘಟಿಕೋತ್ಸವ ಶುಲ್ಕಗಳ ಅಸಮರ್ಪಕ ಹೆಚ್ಚಳದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು, ಕುಲಪತಿ, ಕುಲಸಚಿವ ಮತ್ತು ರಿಜಿಸ್ಟ್ರಾರ್​​ರನ್ನು ವಜಾ ಮಾಡಿ ದಕ್ಷ ಅಧಿಕಾರಿಗಳನ್ನು ನೇಮಿಸುವಂತೆ ಆಗ್ರಹಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ದಂಪತಿ: ಬೇಬಿ ಬಂಪ್ ಫೋಟೊಶೂಟ್

Source link

ತಂದೆ ಬಗ್ಗೆ ಹೆಚ್​​ಡಿಕೆ ಹೇಳಿಕೆಯಿಂದ ನೋವಾಗಿದೆ ಎಂದ ಸಚಿವ ಡಿ. ಸುಧಾಕರ್​​ ಪುತ್ರನಿಗೆ JDS ಕೌಂಟರ್​​ – Kannada News | JDS Questions Congress Over D. Sudhakar Health Secrecy, Hits Back at Minister’s Son

ಹೆಚ್​​ಡಿಕೆ ಹೇಳಿಕೆಯಿಂದ ನೋವಾಗಿದೆ ಎಂದ ಸುಧಾಕರ್​​ ಪುತ್ರಗೆ JDS ಕೌಂಟರ್​​

ಬೆಂಗಳೂರು, ಏಪ್ರಿಲ್​​ 29: ಸಚಿವ ಡಿ.ಸುಧಾಕರ್​ ಅವರ ಪರಿಸ್ಥಿತಿ ಗಂಭೀರವಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಈ ನಡುವೆ ಅವರ ಆರೋಗ್ಯದ ಬಗ್ಗೆ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಆಡಿದ್ದ ಮಾತುಗಳೀಗ ರಾಜಕೀಯ ಸ್ವರೂಪ ಪಡೆದುಕೊಂಡಿವೆ. ಆ ವ್ಯಕ್ತಿ ಎಷ್ಟು ನೋವು ಅನುಭವಿಸುತ್ತಿದ್ದಾನೆ. ಯಾವ ಕಾರಣಕ್ಕೆ ಕೆಲವು ವಿಷಯಗಳನ್ನು ಮುಚ್ಚಿಟ್ಟಿದ್ದಾರೆ. ಹೆಬ್ಬೆಟ್ಟು ಒತ್ತಿಸಿಕೊಳ್ಳಲು ಮುಚ್ಚಿಡಲಾಗಿದೆಯೇ? ಎಂದು ಹೆಚ್​ಡಿಕೆ ಪ್ರಶ್ನಿಸಿದ್ದರು. ಅವರ ಈ ಹೇಳಿಕೆಗೆ ಸಚಿವ ಡಿ.ಸುಧಾಕರ್ ಪುತ್ರ ಅಸಮಾಧಾನ ವ್ಯಕ್ತಪಡಿಸಿ, ಆ ಸಂಬಂಧ ವಿಡಿಯೋವೊಂದನ್ನು ಹರಿಬಿಟ್ಟಿದ್ದರು. ಈ ಬೆನ್ನಲ್ಲೇ ಎಕ್ಸ್​​ ಪೋಸ್ಟ್​​ ಮಾಡಿರುವ ಜೆಡಿಎಸ್​​, ಸಚಿವರ ಪುತ್ರನಿಗೆ ಕೌಂಟರ್​​ ಕೊಟ್ಟಿದೆ.

ಸಚಿವರ ಪುತ್ರನ ವಿಡಿಯೋದಲ್ಲೇನಿತ್ತು?

ಕುಮಾರಸ್ವಾಮಿ ಅವರು ನೀಡಿರುವ ಹೆಬ್ಬೆಟ್ಟು ಹೇಳಿಕೆಯ ಬಗ್ಗೆ ನೋವಾಗಿದೆ. ನನ್ನ ತಂದೆ ಅನಾರೋಗ್ಯ ವಿಚಾರವನ್ನು ರಾಜಕೀಯಕ್ಕೆ ಬಳಸಲಾಗಿದೆ. ತಂದೆ ಸಚಿವ ಡಿ.ಸುಧಾಕರ್ ಈಗ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್​ಸಿಟಿ ಬಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಆದಷ್ಟು ಬೇಗ ಗುಣಮುಖರಾಗಿ ಬರುವ ಬಗ್ಗೆ ನಮಗೆ ನಂಬಿಕೆಯಿದೆ. ಸಿಎಂ, ಡಿಸಿಎಂ, ಸಚಿವರು ಆಸ್ಪತ್ರೆಗೆ ಬಂದು ಧೈರ್ಯ ತುಂಬಿದ್ದಾರೆ ಎಂದು ಹೇಳಿರುವ ವಿಡಿಯೋವನ್ನು ಸಚಿವರ ಪುತ್ರ ಸುಹಾಸ್ ಬಿಡುಗಡೆ ಮಾಡಿದ್ದರು.

ಇದನ್ನೂ ಓದಿ: ಆಸ್ಪತ್ರೆಯಿಂದಲೇ ಸಚಿವ ಡಿ ಸುಧಾಕರ್ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸಿದ್ದರಾಮಯ್ಯ

ಜೆಡಿಎಸ್​​ ಕೌಂಟರ್​​ ಏನು?

ಸಚಿವ ಡಿ. ಸುಧಾಕರ್‌ ಅವರ ಪುತ್ರ ತಮ್ಮ ತಂದೆಯ ಆರೋಗ್ಯದ ಬಗ್ಗೆ ರಾಜ್ಯದ ಜನರ ಎದುರು ಹೇಳಲು ಯಾರೋ ಬರೆದುಕೊಟ್ಟ ಸ್ಕ್ರಿಪ್ಟ್​​ ಓದುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗುತ್ತಿದೆ. 10ಕ್ಕೂ ಹೆಚ್ಚು ಬಾರಿ ಎಡಿಟ್‌ ಮಾಡಿರುವ ಆ ವಿಡಿಯೋ ನೋಡಿದರೆ, ಯಾರದೋ ಒತ್ತಡಕ್ಕೆ ಮಣಿದು ರಾಜಕೀಯವಾಗಿ ಈ ರೀತಿ ಬಲವಂತದ ಹೇಳಿಕೆ ಕೊಡಿಸಲಾಗಿದೆ. ಇದರ ಹಿಂದಿರುವ ಆ ಮಹಾನಾಯಕ ಯಾರು? ಎಂದು ಎಕ್ಸ್​​ ಪೋಸ್ಟ್​​ ಮೂಲಕ ಜೆಡಿಎಸ್​​ ಪ್ರಶ್ನಿಸಿದೆ.

ಸಿಎಂ ಸಿದ್ದರಾಮಯ್ಯ ಭೇಟಿಗೂ ಮುನ್ನ ಸಚಿವರು ವೆಂಟಿಲೇಟರ್‌ನಿಂದ ಉಸಿರಾಟ ಮಾಡ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಹೆಲ್ತ್‌ ಬುಲೆಟಿನ್‌ ಬಿಡುಗಡೆ ಮಾಡಿದ್ದರು. ಸಚಿವರಾದ ಡಿ. ಸುಧಾಕರ್‌ ಅವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ, ಅವರಿಗೆ ಪ್ರಜ್ಞೆ ಬಂದಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಆದರೆ ಸಿಎಂ ಭೇಟಿಯ ಮರುದಿನ ಡಿಸಿಎಂ ಡಿ.ಕೆ. ಶಿವಕುಮಾರ್​​ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತೆಗೆದಿರುವ ಚಿತ್ರದಲ್ಲಿ ಯಾವುದೇ ವೆಂಟಿಲೇಟರ್‌ ಕಾಣಿಸುತ್ತಿಲ್ಲ. ಹಾಗಾದರೆ, ಒಂದೇ ದಿನದಲ್ಲಿ ವೆಂಟಿಲೇಟರ್‌ ಕಣ್ಮರೆಯಾಯಿತೆ? ಸಚಿವರು ಲೈಫ್ ಸಪೋರ್ಟ್ ಇಲ್ಲದೆ ಉಸಿರಾಟ ಮಾಡುತ್ತಿದ್ದಾರೆಯೇ, ಅವರ ಆರೋಗ್ಯ ಸಮಸ್ಯೆಗಳು ನಿವಾರಣೆ ಆಯಿತೇ? ಸಚಿವರ ಆರೋಗ್ಯದ ವಿಷಯದಲ್ಲಿ ಕಾಂಗ್ರೆಸ್​​ ನೇತೃತ್ವದ ಸರ್ಕಾರ ಯಾಕಿಷ್ಟು ರಹಸ್ಯ ಮಾಡುತ್ತಿದೆ? ಅವರ ಆರೋಗ್ಯದ ಚೇತರಿಕೆ ಬಗ್ಗೆ ಆಸ್ಪತ್ರೆಯವರೂ ಯಾಕೆ ಹೆಲ್ತ್ ಬುಲೆಟಿನ್ ಹೊರಡಿಸುತ್ತಿಲ್ಲ? ಇದು ರಾಜ್ಯದ ಜನರನ್ನು ಕಾಡುತ್ತಿರುವ ಆತಂಕದ ಪ್ರಶ್ನೆ. ಇದನಷ್ಟೇ ಕೇಂದ್ರ ಸಚಿವರಾದ ಹೆಚ್​​.ಡಿ. ಕುಮಾರಸ್ವಾಮಿ ಅವರು ಪ್ರಶ್ನಿಸಿರೋದು ಎಂದು ಜೆಡಿಎಸ್​​ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

IPL 2026: ಐಪಿಎಲ್ ಮಧ್ಯದಲ್ಲಿ ಮುಂಬೈ ಆಲ್‌ರೌಂಡರ್​ನ ಟ್ರಯಲ್​ಗೆ ಕರೆದ ಸಿಎಸ್​ಕೆ – Kannada News | IPL 2026: CSK’s Injury Woes and Ayush Vartak Trial Amid Playoff Push Challenges

2026 ರ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಪ್ರದರ್ಶನ ಅಷ್ಟೇನೂ ಹೇಳಿಕೊಳ್ಳುವಂತಿಲ್ಲ. ಇದುವರೆಗೆ ಆಡಿರುವ ಪಂದ್ಯಗಳಲ್ಲಿ ಸಿಎಸ್​​ಕೆ ಗೆದ್ದಿರುವುದಕ್ಕಿಂತ ಸೋತಿರುವುದೇ ಹೆಚ್ಚು. ತಂಡವು ಇಲ್ಲಿಯವರೆಗೆ ಆಡಿರುವ ಎಂಟು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಸೋತಿದ್ದು, ಪ್ಲೇಆಫ್ ತಲುಪುವ ಸಾಧ್ಯತೆಗಳು ಮಸುಕಾಗುತ್ತಿವೆ. ಇದರ ನಡುವೆ ತಂಡದ ಆಟಗಾರರ ಗಾಯದ ಸಮಸ್ಯೆ ಸಿಎಸ್​ಕೆ ನುಂಗಲಾರದ ತುತ್ತಾಗಿದೆ. ಕೆಲವು ಸ್ಟಾರ್ ಆಟಗಾರರು ಗಾಯದಿಂದಾಗಿ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇನ್ನು ಕೆಲವು ಆಟಗಾರರು ಗಾಯದಿಂದ ಚೇತರಿಸಿಕೊಳ್ಳುವ ಹಂತದಲ್ಲಿದ್ದಾರೆ. ಇದರಲ್ಲಿ ಎಂಎಸ್ ಧೋನಿ ಕೂಡ ಒಬ್ಬರು. ಇದೆಲ್ಲ ಸಂಕಷ್ಟಗಳ ನಡುವೆ ಸಿಎಸ್​ಕೆ ಬದಲಿ ಆಟಗಾರನಿಗಾಗಿ ಹುಡುಕಾಟ ಶುರು ಮಾಡಿದೆ.

ಸಂಕಷ್ಟದಲ್ಲಿ ಸಿಎಸ್‌ಕೆ ತಂಡ

ಮೇಲೆ ಹೇಳಿದಂತೆ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಎಂಎಸ್ ಧೋನಿ ಗಾಯದ ಕಾರಣದಿಂದಾಗಿ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಡೆವಾಲ್ಡ್ ಬ್ರೆವಿಸ್ ಸೈಡ್ ಸ್ಟ್ರೈನ್‌ನಿಂದ ಚೇತರಿಸಿಕೊಂಡಿದ್ದಾರೆಯಾದರೂ, ನಾಥನ್ ಎಲಿಸ್ ಮಂಡಿರಜ್ಜು ಗಾಯದಿಂದ ಇಡೀ ಐಪಿಎಲ್​ನಿಂದಲೇ ಹೊರಗುಳಿದಿದ್ದಾರೆ. ಸ್ಪೆನ್ಸರ್ ಜಾನ್ಸನ್ ಕೂಡ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಏತನ್ಮಧ್ಯೆ, ಆಯುಷ್ ಮ್ಹಾತ್ರೆ ಮತ್ತು ಖಲೀಲ್ ಅಹ್ಮದ್ ಕೂಡ ಗಾಯದಿಂದಾಗಿ ಇಡೀ ಸೀಸನ್​ನಿಂದ ಹೊರಬಿದ್ದಿದ್ದಾರೆ. ಹೀಗಾಗಿ ಆಯುಷ್ ಮ್ಹಾತ್ರೆ ಬದಲಿಗೆ ಆಕಾಶ್ ಮಧ್ವಾಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇದೀಗ ಖಲೀಲ್ ಅಹ್ಮದ್ ಬದಲಿಗೆ ಬೇರೊಬ್ಬ ಆಟಗಾರನ ಹುಡುಕಾಟ ಶುರುವಾಗಿದೆ.

ಹೊಸ ಆಟಗಾರನ ಹುಡುಕಾಟ ಆರಂಭ

ಖಲೀಲ್ ಅಹ್ಮದ್ ಬದಲಿಗೆ ಸಿಎಸ್​ಕೆ ಫ್ರಾಂಚೈಸಿ, 21 ವರ್ಷದ ಮುಂಬೈ ಆಲ್‌ರೌಂಡರ್ ಆಯುಷ್ ವರ್ತಕ್ ಅವರನ್ನು ಐಪಿಎಲ್ ಮಧ್ಯದಲ್ಲಿ ಟ್ರಯಲ್​ಗೆ ಆಹ್ವಾನಿಸಿದೆ. ವರದಿಗಳ ಪ್ರಕಾರ, ವರ್ತಕ್ ಶೀಘ್ರದಲ್ಲೇ ಚೆನ್ನೈಗೆ ಆಗಮಿಸಲಿದ್ದು, ಟ್ರಯಲ್​ನಲ್ಲಿ ಭಾಗವಹಿಸಲಿದ್ದಾರೆ. ಆಡಳಿತ ಮಂಡಳಿ ಹಾಗೂ ಕೋಚಿಂಗ್ ವಿಭಾಗಕ್ಕೆ ಆಯುಷ್ ವರ್ತಕ್ ಅವರ ಆಟ ಇಷ್ಟವಾದರೆ ಅವರನ್ನು ಕೂಡಲೇ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ.

ಆಯುಷ್ ವರ್ತಕ್ ಯಾರು?

ವಾಸ್ತವವಾಗಿ ಆಯುಷ್ ವರ್ತಕ್ ದೇಶಿ ಪಂದ್ಯಾವಳಿಯಲ್ಲಿ ಮುಂಬೈ ಮತ್ತು ಪಾರ್ಸಿ ಜಿಮ್ಖಾನಾ ಪರ ಆಡುತ್ತಾರೆ. ಬಲಗೈ ಮಧ್ಯಮ ವೇಗದ ಬೌಲರ್ ಆಗಿರುವ ಆಯುಷ್ ವರ್ತಕ್ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆಯುಷ್ ವರ್ತಕ್ ದೊಡ್ಡ ಹೊಡೆತಗಳನ್ನು ಹೊಡೆಯುವುದಕ್ಕೆ ಹೆಸರು ವಾಸಿಯಾಗಿದ್ದಾರೆ. ನವಿ ಮುಂಬೈ ಟಿ20 ಲೀಗ್‌ನಲ್ಲಿ ವರ್ತಕ್ ಅದ್ಭುತ ಪ್ರದರ್ಶನ ನೀಡಿದ್ದು, 191 ಸ್ಟ್ರೈಕ್ ರೇಟ್‌ನಲ್ಲಿ 264 ರನ್ ಗಳಿಸಿ ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ನಾರ್ತ್ ಮುಂಬೈ ಪ್ಯಾಂಥರ್ಸ್ ಮತ್ತು ಮುಂಬೈ ಅಂಡರ್-19 ತಂಡಕ್ಕೂ ಆಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರದಿಂದ ಗುಡ್​​​ ನ್ಯೂಸ್​​: ವೇತನ ಹಿಂಬಾಕಿ ಪಾವತಿಗೆ 450 ಕೋಟಿ ರೂ. ಬಿಡುಗಡೆ! – Kannada News | Transport Employees Get Rs.450 Cr Arrears: Karnataka Govt’s First Phase Payment

ಬೆಂಗಳೂರು, ಏ.29: ಹಲವು ದಿನಗಳಿಂದ ಸಾರಿಗೆ ನೌಕರರು ಹಾಗೂ ಸರ್ಕಾರದ ನಡುವೆ ಹಲವು ಬೇಡಿಕೆಗಳ ಕುರಿತು ಭಾರೀ ಗೊಂದಲಗಳು ಉಂಟಾಗಿದೆ. ಇದಕ್ಕಾಗಿ ಪ್ರತಿಭಟನೆಗಳನ್ನು ಕೂಡ ನಡೆಸಿದರು. ಆದರೆ ಇದೀಗ ಸಾರಿಗೆ ನೌಕರರಿಗೆ ಬಿಗ್​​​​​ ಗುಡ್​​ ನ್ಯೂಸ್​ ನೀಡಿದೆ. ದೀರ್ಘಕಾಲದ ಕಾಯುವಿಕೆಯ ನಂತರ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಬಾಕಿ ಇರುವ ವೇತನ ಹಿಂಬಾಕಿಯನ್ನು (Arrears) ಪಾವತಿಸಲು ಮೊದಲ ಹಂತದಲ್ಲಿ 450 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಸಾರಿಗೆ ಸಂಸ್ಥೆಯ ನೌಕರರಿಗೆ ಕಳೆದ 26 ತಿಂಗಳ ವೇತನ ಹಿಂಬಾಕಿಯಾಗಿ ಒಟ್ಟು 1,271.92 ಕೋಟಿ ರೂ. ಬಿಡುಗಡೆ ಮಾಡಬೇಕಿತ್ತು. ಆದರೆ, ಪ್ರಸ್ತುತ ಹಣಕಾಸಿನ ಲಭ್ಯತೆಯ ಆಧಾರದ ಮೇಲೆ ಮೊದಲ ಹಂತವಾಗಿ ಸರ್ಕಾರ ₹450 ಕೋಟಿಯನ್ನು ಬಿಡುಗಡೆ ಮಾಡಿದೆ.

ನಿಗಮವಾರು ಹಣ ಹಂಚಿಕೆ ಹೇಗೆ?

KSRTC (ಕೆಎಸ್‌ಆರ್‌ಟಿಸಿ): 143.85 ಕೋಟಿ ರೂ.

BMTC (ಬಿಎಂಟಿಸಿ): 137.24 ಕೋಟಿ ರೂ.

NWKRTC (ವಾಯುವ್ಯ ಕರ್ನಾಟಕ ಸಾರಿಗೆ): 87.00 ಕೋಟಿ ರೂ.

KKRTC (ಕಲ್ಯಾಣ ಕರ್ನಾಟಕ ಸಾರಿಗೆ): 81.91 ಕೋಟಿ ರೂ.

ಇದನ್ನೂ ಓದಿ: ಬಿಎಂಟಿಸಿ, ಮೆಟ್ರೋದಲ್ಲಿ ಸಂಚಾರ ಮಾಡಲು ಒಂದೇ ಸ್ಮಾರ್ಟ್ ಕಾರ್ಡ್ ಸಾಕು! ಶೀಘ್ರದಲ್ಲೇ ಹೊಸ ವ್ಯವಸ್ಥೆ

ಈ ಅನುದಾನವು ಸಾರಿಗೆ ನೌಕರರ ಆರ್ಥಿಕ ಸಂಕಷ್ಟವನ್ನು ಸ್ವಲ್ಪಮಟ್ಟಿಗೆ ನೀಗಿಸಲಿದ್ದು, ಬಾಕಿ ಇರುವ ಉಳಿದ ಮೊತ್ತವನ್ನು ಮುಂದಿನ ಹಂತಗಳಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ಮೊದಲ ಹಂತದ ಬಿಡುಗಡೆಯನ್ನು ಸ್ವಾಗತಿಸಿದರೂ, ಬಾಕಿ ಇರುವ ಸುಮಾರು 821.92 ಕೋಟಿ ರೂ. ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ನೌಕರರ ಒಕ್ಕೂಟಗಳು ಒತ್ತಾಯಿಸುತ್ತಿವೆ. ಸರ್ಕಾರವು ಸಮಯ ಮಿತಿಯೊಳಗೆ ಪೂರ್ಣ ಹಣ ಬಿಡುಗಡೆ ಮಾಡದಿದ್ದರೆ ಮತ್ತೆ ಪ್ರತಿಭಟನೆ ಮಾಡಲಾಗುವುದು ಎಂಬ ಮಾತುಗಳು ಕೇಳಿ ಬಂದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:06 pm, Wed, 29 April 26

Source link

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿಗೆ ಟಿಎಂಸಿಗೆ ಬೆಂಬಲಿಗರಿಂದ ಮುತ್ತಿಗೆ; ಮತಗಟ್ಟೆ ಬಳಿ ಲಾಠಿ ಚಾರ್ಜ್ – Kannada News | West Bengal Elections TMC Supporters surrounded BJP Leader Suvendu Adhikari Near polling Booth

ಕೊಲ್ಕತ್ತಾ, ಏಪ್ರಿಲ್ 29: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ (West Bengal Elections) ಎರಡನೇ ಹಂತದ ಮತದಾನವು ಪ್ರಸ್ತುತ 7 ಜಿಲ್ಲೆಗಳಲ್ಲಿರುವ 142 ಕ್ಷೇತ್ರಗಳಲ್ಲಿ ನಡೆಯುತ್ತಿದ್ದು, ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಇದರ ನಡುವೆ ಮತ್ತೊಮ್ಮೆ ಟಿಎಂಸಿ ಮತ್ತು ಬಿಜೆಪಿ ನಡುವೆ ಜಗಳ ನಡೆದಿದ್ದು, ಗಲಾಟೆ ನಿಲ್ಲಿಸಲು ಪೊಲೀಸರು ಲಾಠಿಚಾರ್ಜ್ ಮಾಡಬೇಕಾಯಿತು. ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಭವಾನಿಪುರ ಮತಗಟ್ಟೆಯನ್ನು ಪರಿಶೀಲಿಸಲು ಬಂದಾಗ ಟಿಎಂಸಿ ಬೆಂಬಲಿಗರು ಅವರನ್ನು ಘೇರಾವ್ ಮಾಡಿ “ಜೈ ಬಂಗಾಳ” ಎಂದು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು.

ದಕ್ಷಿಣ ಕೋಲ್ಕತ್ತಾದ ಮತಗಟ್ಟೆಯಿಂದ ಜನಸಮೂಹವನ್ನು ಚದುರಿಸಲು ಸಿಆರ್‌ಪಿಎಫ್ ಮತ್ತು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಬಂಗಾಳದ ಕೆಲವು ಪ್ರದೇಶಗಳಲ್ಲಿ ಕೆಲವು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ ಎಂದು ಚುನಾವಣಾ ಸಮಿತಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2021ರ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿದ ನಂತರ ಭವಾನಿಪುರವು ಸುವೇಂದು ಅಧಿಕಾರಿ ಅವರಿಗೆ ಪ್ರತಿಷ್ಠೆಯ ಹೋರಾಟವಾಗಿ ಮಾರ್ಪಟ್ಟಿದೆ.

ಇದನ್ನೂ ಓದಿ: West Bengal Election 2026: 142 ಕ್ಷೇತ್ರಗಳು, 1448 ಅಭ್ಯರ್ಥಿಗಳು, 3.21 ಕೋಟಿ ಮತದಾರರು, ಪಶ್ಚಿಮ ಬಂಗಾಳದಲ್ಲಿ ಇಂದು ಎರಡನೇ ಹಂತದ ಮತದಾನ

ಮತದಾನದ ಮಧ್ಯೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿದಾಗ ಕೊಲ್ಕತ್ತಾದ ಒಂದು ಬೂತ್‌ನಲ್ಲಿ ಉದ್ವಿಗ್ನ ಕ್ಷಣ ತೆರೆದುಕೊಂಡಿತು. ಟಿಎಂಸಿ ಬೆಂಬಲಿಗರ ಗುಂಪು ಅವರನ್ನು ಸುತ್ತುವರೆದ ನಂತರ ಪರಿಸ್ಥಿತಿ ಸ್ವಲ್ಪ ಸಮಯದವರೆಗೆ ಉಲ್ಬಣಗೊಂಡಿತು. ಬೂತ್ ಭೇಟಿಯ ಸಮಯದಲ್ಲಿ ಟಿಎಂಸಿ ಬೆಂಬಲಿಗರು ಸುವೇಂದು ಅಧಿಕಾರಿಯನ್ನು ಸುತ್ತುವರೆದರು. ರಾಜ್ಯದ ವಿರೋಧ ಪಕ್ಷದ ನಾಯಕ ಮತ್ತು ಭಬಾನಿಪುರ ಮತ್ತು ನಂದಿಗ್ರಾಮದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಅವರು ವ್ಯವಸ್ಥೆಗಳನ್ನು ಪರಿಶೀಲಿಸಲು ಮತಗಟ್ಟೆಗೆ ಬಂದರು. ಅವರ ಭೇಟಿಯ ಸಮಯದಲ್ಲಿ, ಟಿಎಂಸಿ ಬೆಂಬಲಿಗರು ಒಟ್ಟುಗೂಡಿದರು ಮತ್ತು “ಜೈ ಬಂಗಾಳ” ಘೋಷಣೆಗಳನ್ನು ಕೂಗಿದರು.

ಇದನ್ನೂ ಓದಿ: ಬಂಗಾಳದಲ್ಲಿ ವಿವಾದ ಸೃಷ್ಟಿಸಿದ ಎನ್‌ಕೌಂಟರ್ ಸ್ಪೆಷಲಿಸ್ಟ್ ಅಜಯ್ ಶರ್ಮಾ ಯಾರು?

ಜನಸಮೂಹ ಶೀಘ್ರದಲ್ಲೇ ಅವರನ್ನು ಸುತ್ತುವರೆದ ಹಿನ್ನೆಲೆಯಲ್ಲಿ ಮತಗಟ್ಟೆಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು. ಸ್ಥಳೀಯ ಪೊಲೀಸರೊಂದಿಗೆ ಸಿಆರ್‌ಪಿಎಫ್ ಸಿಬ್ಬಂದಿ ಕೂಡ ಪರಿಸ್ಥಿತಿಯನ್ನು ನಿರ್ವಹಿಸಲು ಮಧ್ಯಪ್ರವೇಶಿಸಿದರು. ಗುಂಪನ್ನು ಚದುರಿಸಲು ಮತ್ತು ಪ್ರದೇಶವನ್ನು ತೆರವುಗೊಳಿಸಲು ಲಘು ಲಾಠಿ ಪ್ರಹಾರ ನಡೆಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ರಾಜ್ಯ ಸರ್ಕಾರದ ‘ಶಿಕ್ಷಣ ಗ್ಯಾರಂಟಿ’ ಅಸ್ತ್ರ! – Kannada News | Karnataka government’s Education Guarantee to attract children to government schools and colleges affter SSLC, PUC Results

ಶಿಕ್ಷಣ ಗ್ಯಾರಂಟಿImage Credit source: x.com/siddaramaiah

ಬೆಂಗಳೂರು, ಏಪ್ರಿಲ್​ 29: 2025–26ನೇ ಶೈಕ್ಷಣಿಕ ಸಾಲಿನ ಎಸ್​​​ಎಸ್​​​ಎಲ್​​ಸಿ (SSLC) ಮತ್ತು ದ್ವಿತೀಯ ಪಿಯುಸಿ (2nd PUC) ಪರೀಕ್ಷೆ ಫಲಿತಾಂಶ ಇತ್ತೀಚೆಗೆ ಬಿಡುಗಡೆಗೊಂಡಿದೆ. ಈ ಬೆನ್ನಲ್ಲೇ ವಿದ್ಯಾರ್ಥಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಖಾಸಗಿ ಶಾಲಾ-ಕಾಲೇಜುಗಳು ನಾನಾ ಕಸರತ್ತು ನಡೆಸುತ್ತಿವೆ. ವಿಶೇಷವೆಂದರೆ, ಕಾಂಗ್ರೆಸ್​ ಸರ್ಕಾರ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳಕ್ಕಾಗಿ ಜಾಹೀರಾತು ನೀಡುವ ಮೂಲಕ ಗಮನಸೆಳೆದಿದೆ. ಆ ಮೂಲಕ ರಾಜ್ಯದಲ್ಲಿ ಉತ್ತಮಗುಣಮಟ್ಟದ ಶಿಕ್ಷಣ ಒದಗಿಸುವ ‘ಗ್ಯಾರಂಟಿ’ ನೀಡಿದೆ.

ಎಸ್​​ಎಸ್​​ಎಲ್​ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಇತ್ತೀಚೆಗಷ್ಟೆ ಎರಡು ಪರೀಕ್ಷೆಯ ಫಲಿತಾಂಶ ಬಿಡುಗಡೆಗೊಂಡಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ತೇರ್ಗಡೆಯಲ್ಲಿ ದಾಖಲೆಯ ರಿಸಲ್ಟ್​ ಬಂದಿದೆ. ಪ್ರಸಕ್ತ ವರ್ಷದಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಕೂಡ ಉತ್ತಮ ರಿಸಲ್ಟ್​ ದಾಖಲಾಗಿದೆ. ಎಸ್​​ಎಸ್​​ಎಲ್​ಸಿಯಲ್ಲಿ ಶೇ 94. 10 ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ 86.48ರಷ್ಟು ಫಲಿತಾಂಶ ಬಂದಿದೆ.

ಇದನ್ನೂ ಓದಿ: CBSE 10 Second Board Exam: CBSE 10ನೇ ತರಗತಿ ಎರಡನೇ ಬಾರಿಯ ಬೋರ್ಡ್ ಪರೀಕ್ಷಾ ವೇಳಾಪಟ್ಟಿ ಪ್ರಕಟ; ಮೇ 15ರಿಂದ ಪರೀಕ್ಷೆ ಆರಂಭ

ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಎಸ್​​ಎಸ್​​ಎಲ್​ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಾಖಲೆಯ ರಿಸಲ್ಟ್ ಬೆನ್ನಲ್ಲೇ ರಾಜ್ಯ ಸರ್ಕಾರ ಇದೀಗ ಮತ್ತಷ್ಟು ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲಾ-ಕಾಲೇಜುಗಳತ್ತ ಸೆಳೆಯಲು ಜಾಹಿರಾತು ನೀಡುವ ಮೂಲಕ ಗಮನಸೆಳೆದಿದೆ. ಆ ಮೂಲಕ ರಾಜ್ಯದಲ್ಲಿ ಉತ್ತಮಗುಣಮಟ್ಟ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ‘ಶಿಕ್ಷಣ ಗ್ಯಾರಂಟಿ’ ನೀಡುವ ಭರವಸೆ ನೀಡಿದೆ.

8 ಶಿಕ್ಷಣ ಗ್ಯಾರಂಟಿಗಳು

  • ಗ್ಯಾರಂಟಿ 1: ಶಿಕ್ಷಕರ ಕೊರತೆಗೆ ಮುಕ್ತಿ;  5ನೇ ತರಗತಿಯವರೆಗೆ ಪ್ರತಿ ತರಗತಿಗೆ ಒಬ್ಬರು ಶಿಕ್ಷಕರು ಹಾಗೂ 6ನೇ ತರಗತಿಯಿಂದ ಪ್ರತಿ ವಿಷಯಕ್ಕೂ ಪ್ರತ್ಯೇಕ ವಿಷಯವಾರು ಶಿಕ್ಷಕರ ನೇಮಕಾತಿ.
  • ಗ್ಯಾರಂಟಿ 2: ಪೋಷಕರ ಆಶಯದಂತೆ ಬೋಧನಾ ಮಾಧ್ಯಮ; ಕನ್ನಡದ ಜೊತೆಗೆ ಎಲ್ಲಾ ಶಾಲೆಗಳಲ್ಲೂ ಇಂಗ್ಲಿಷ್ ಮಾಧ್ಯಮ ಲಭ್ಯ. ಇಂಗ್ಲಿಷ್‌ನಲ್ಲಿ ಬೋಧಿಸಲು ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುವುದು.
  • ಗ್ಯಾರಂಟಿ 3: ಉಚಿತ ಸಾರಿಗೆ ಸೌಲಭ್ಯ; ಕರ್ನಾಟಕ ಪಬ್ಲಿಕ್ ಶಾಲೆ (KPS) ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು.
  • ಗ್ಯಾರಂಟಿ 4: ಡಿಜಿಟಲ್ ಶಿಕ್ಷಣ; 1ನೇ ತರಗತಿಯಿಂದ ಕಂಪ್ಯೂಟರ್ ಶಿಕ್ಷಣ ಹಾಗೂ 3ನೇ ತರಗತಿಯಿಂದ ಕೃತಕ ಬುದ್ಧಿಮತ್ತೆ (AI) ಕಲಿಕೆ, ಮುಂದಿನ 3 ವರ್ಷಗಳಲ್ಲಿ ಎಲ್ಲಾ ಕೆ.ಪಿ.ಎಸ್ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಕರ ನೇಮಕ ಮಾಡಲಾಗುವುದು.
  • ಗ್ಯಾರಂಟಿ 5: ಕಲೆ ಮತ್ತು ದೈಹಿಕ ಶಿಕ್ಷಣ; ಸಂಗೀತ, ಕಲೆ ಮತ್ತು ದೈಹಿಕ ಶಿಕ್ಷಣಕ್ಕಾಗಿ ಶಿಕ್ಷಕರ ನೇಮಕ, ಈ ವರ್ಷದಿಂದಲೇ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು.
  • ಗ್ಯಾರಂಟಿ 6: ಶೈಕ್ಷಣಿಕೇತರ ಕೆಲಸಗಳಿಂದ ಮುಕ್ತಿ; ಶೈಕ್ಷಣಿಕೇತರ ಕೆಲಸಗಳ ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಲಾಗುವುದು. ಇದರೊಂದಿಗೆ ಶಿಕ್ಷಕರು ಕೇವಲ ಬೋಧನೆಯ ಮೇಲೆ ಮಾತ್ರ ಗಮನಹರಿಸಲು ಅವಕಾಶ.
  • ಗ್ಯಾರಂಟಿ 7: ಕಲಿಕೆಯ ಗುಣಮಟ್ಟದ ಮೇಲ್ವಿಚಾರಣೆ; ಪ್ರತಿ ಮಗುವಿನ ಪ್ರಗತಿಗಾಗಿ ‘ಪಾಠ ಆಧಾರಿತ ಮೌಲ್ಯಮಾಪನ’ (Lesson Based Assessment) ವ್ಯವಸ್ಥೆ, ಪ್ರತಿ ಎರಡು ತಿಂಗಳಿಗೊಮ್ಮೆ ಪೋಷಕರು ಮತ್ತು ಶಿಕ್ಷಕರ ಕಡ್ಡಾಯ ಸಭೆ ಮಾಡುವುದು.
  • ಗ್ಯಾರಂಟಿ 8: ಕೌಶಲ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ; 6ನೇ ತರಗತಿಯಿಂದಲೇ ಕೌಶಲ ಶಿಕ್ಷಣ ಪ್ರಾರಂಭಿಸಲಾಗುವುದು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ವಿಶೇಷ ತರಬೇತಿ ಸೌಲಭ್ಯ ಒದಗಿಸಲಾಗುವುದು. ಹೀಗೆ 8 ಶಿಕ್ಷಣ ಗ್ಯಾರಂಟಿಗಳನ್ನು ರಾಜ್ಯ ಸರ್ಕಾರ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link