Category Archives: Blog

Your blog category

‘ಉತ್ತರ ರಾಮಾಯಣ’ದ ಕುಶ ಈಗ 1400 ಕೋಟಿ ರೂ. ಕಂಪನಿಯ ಒಡೆಯ – Kannada News | Uttar Ramayan’s Kush: Mayuresh Kshetramade’s Journey from Child Actor to 1400 Cr CEO

1980ರ ದಶಕದಲ್ಲಿ ದೂರದರ್ಶನದಲ್ಲಿ ರಮಾನಂದ ಸಾಗರ್ ಅವರ ‘ರಾಮಾಯಣ’ ಸರಣಿ ಇಡೀ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಈ ಪೌರಾಣಿಕ ಧಾರಾವಾಹಿಯ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು, ನಿರ್ಮಾಪಕರು ಕೆಲವು ವರ್ಷಗಳ ನಂತರ ‘ಉತ್ತರ ರಾಮಾಯಣ’ವನ್ನು ಪ್ರೇಕ್ಷಕರ ಮುಂದೆ ತಂದಿದ್ದರು. ಇದರಲ್ಲಿ ರೀರಾಮ ಮತ್ತು ಸೀತಾಮಾತೆಯ ಪುತ್ರರಾದ ಲವ ಮತ್ತು ಕುಶನ ಕಥೆಯನ್ನು ತೋರಿಸಲಾಗಿತ್ತು.

1988ರಲ್ಲಿ ಪ್ರಸಾರವಾದ ಈ ‘ಉತ್ತರ ರಾಮಾಯಣ’ದಲ್ಲಿ ಲವನ ಪಾತ್ರವನ್ನು ನಟ ಸ್ವಪ್ನಿಲ್ ಜೋಶಿ ನಿರ್ವಹಿಸಿದರೆ, ಕುಶನ ಪಾತ್ರವನ್ನು ಮಯೂರೇಶ್ ಕ್ಷೇತ್ರಮಾಡೆ ಮಾಡಿದ್ದರು. ಸ್ವಪ್ನಿಲ್ ಜೋಶಿ ಇಂದು ಚಿತ್ರರಂಗದ ಖ್ಯಾತ ನಟನಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಕುಶನ ಪಾತ್ರ ಮಾಡಿದ್ದ ಮಯೂರೇಶ್ ಈಗ ಏನು ಮಾಡುತ್ತಿದ್ದಾರೆ ಗೊತ್ತಾ? ಅವರು ಇಂದು ಬರೋಬ್ಬರಿ 1400 ಕೋಟಿ ರೂಪಾಯಿಗಳ ಕಂಪನಿಯ ಮಾಲೀಕರಾಗಿದ್ದಾರೆ!

13ನೇ ವಯಸ್ಸಿನಲ್ಲೇ ನಟನೆಗೆ ವಿದಾಯ:

‘ಉತ್ತರ ರಾಮಾಯಣ’ದ ಮೂಲಕ ಭಾರಿ ಜನಪ್ರಿಯತೆ ಗಳಿಸಿದರೂ, ಮಯೂರೇಶ್ ತಮ್ಮ 13ನೇ ವಯಸ್ಸಿನಲ್ಲೇ ಅಭಿನಯಕ್ಕೆ ವಿದಾಯ ಹೇಳಿ ಸಂಪೂರ್ಣವಾಗಿ ಶಿಕ್ಷಣದ ಕಡೆಗೆ ಗಮನ ಹರಿಸಿದರು. ಐಎಂಡಿಬಿ (IMDb) ವರದಿಯ ಪ್ರಕಾರ, ಮಯೂರೇಶ್ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿ ಅಲ್ಲಿ ಫೈನಾನ್ಸ್ ಮತ್ತು ಬ್ಯುಸಿನೆಸ್ ಶಿಕ್ಷಣವನ್ನು ಪಡೆದರು. ಮಯೂರೇಶ್ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು 2003 ರಿಂದ ವಿಶ್ವ ಬ್ಯಾಂಕ್‌ನಲ್ಲಿ ಸಂಶೋಧಕರಾಗಿ ಕೆಲಸ ಮಾಡಿದರು. ಆನಂತರ ಅವರು ಕಾರ್ಪೊರೇಟ್ ಜಗತ್ತಿನಲ್ಲಿ ಸಕ್ರಿಯರಾದರು.

1400 ಕೋಟಿ ರೂಪಾಯಿ ಆದಾಯ ತಂದ ಯಶಸ್ಸು:

ಮಯೂರೇಶ್ ಅವರಿಗೆ 2016 ನೇ ವರ್ಷವು ಬಹಳ ವಿಶೇಷವಾಗಿತ್ತು. ಯಾಕೆಂದರೆ ಅದೇ ವರ್ಷ ಅವರು ‘ಕಮಿಷನ್ ಜಂಕ್ಷನ್’ (Commission Junction) ಎಂಬ ಜಾಗತಿಕ ಮಾರ್ಕೆಟಿಂಗ್ ಪ್ಲಾಟ್‌ಫಾರ್ಮ್‌ನ ಸಿಇಒ ಆಗಿ ನೇಮಕಗೊಂಡರು. ಹಲವು ವರ್ಷಗಳ ಕಠಿಣ ಪರಿಶ್ರಮದಿಂದ ಮಯೂರೇಶ್ 2022ರ ವೇಳೆಗೆ ಈ ಕಂಪನಿಯನ್ನು 1400 ಕೋಟಿ ರೂಪಾಯಿಗಳ ಆದಾಯ ಗಳಿಸುವ ಮಟ್ಟಕ್ಕೆ ಬೆಳೆಸಿದರು. ಮಯೂರೇಶ್ ಇಂದು ಒಬ್ಬ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದು, ಪ್ರಸ್ತುತ ತಮ್ಮ ಕುಟುಂಬದೊಂದಿಗೆ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ಜಪಾನಿಗೆ ಹೋದ ಆಸಕ್ತಿಕರ ಕತೆ ಗೊತ್ತೆ?

ರಮಾನಂದ ಸಾಗರ್ ಅವರ ‘ರಾಮಾಯಣ’ ಮತ್ತು ‘ಉತ್ತರ ರಾಮಾಯಣ’ ಧಾರಾವಾಹಿಗಳಿಗೆ ಅಂದಿನಿಂದ ಇಂದಿನವರೆಗೂ ಅಷ್ಟೇ ಜನಪ್ರಿಯತೆ ಇದೆ. ಲಾಕ್‌ಡೌನ್ ಸಮಯದಲ್ಲಿ ಈ ಧಾರಾವಾಹಿಗಳು ಮರುಪ್ರಸಾರವಾದಾಗಲೂ ಟಿಆರ್‌ಪಿ (TRP) ಯಲ್ಲಿ ಎಲ್ಲಾ ದಾಖಲೆಗಳನ್ನು ಮುರಿದಿದ್ದವು. ಆ ಸರಣಿಯಲ್ಲಿ ನಟಿಸಿದ ಕಲಾವಿದರನ್ನು ಇಂದಿಗೂ ಜನರು ದೇವರ ರೂಪದಲ್ಲಿ ಗೌರವಿಸುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಸಾಕ್ಷ್ಯ ವಿಚಾರಣೆ ವಿಳಂಬ ಆಗುತ್ತಿದೆ, ಜಾಮೀನು ಕೊಡಿ’; ಸುಪ್ರೀಂಕೋರ್ಟ್ ಮೊರೆ ಹೋದ ದರ್ಶನ್

ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ದರ್ಶನ್ ಅವರು ಈಗ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಈ ಮೊದಲು ದರ್ಶನ್ ಅವರಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿತ್ತು. ಕಳೆದ ವರ್ಷ ಆಗಸ್ಟ್ 14ರಂದು ಅವರು ಮತ್ತೆ ಅರೆಸ್ಟ್ ಆದರು. ಈಗ ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಡಲಾಗಿದೆ. ಈಗ ದರ್ಶನ್ ಅವರು ಜಾಮೀನು ಕೋರಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ‘ಸಾಕ್ಷ್ಯ ವಿಚಾರಣೆ ವಿಳಂಬವಾಗುತ್ತಿದೆ’ ಎಂಬ ಕಾರಣ ನೀಡಿ ಏ.14ರಂದೇ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ. ಮುಂದಿನ ವಾರ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಮಿತ್ ಶಾ ವಿಶೇಷ ಕರ್ತವ್ಯಾಧಿಕಾರಿ ಎಂದು ನಂಬಿಸಿ ವಂಚನೆ: ಸುಜಯೇಂದ್ರ ವಿರುದ್ಧ ಜಾರ್ಜ್​​ಶೀಟ್​​ ಸಲ್ಲಿಕೆ – Kannada News | Cheating Case: Chargesheet Filed Against Sujayendra for Posing as Amit Shah’s Special Duty Officer

ಬೆಂಗಳೂರು, ಏಪ್ರಿಲ್​​ 29: ಅಮಿತ್ ಶಾ ವಿಶೇಷ ಕರ್ತವ್ಯಾಧಿಕಾರಿ ಎಂದು ನಂಬಿಸಿ ಜಮ್ಮು-ಕಾಶ್ಮೀರ ಮೂಲದ ವೈದ್ಯನಿಗೆ 2.70 ಕೋಟಿ ವಂಚನೆ ಪ್ರಕರಣ ಸಂಬಂಧ ಆರೋಪಿ ಸುಜಯೇಂದ್ರ ವಿರುದ್ಧ ಪೊಲೀಸರು ಬೆಂಗಳೂರಿನ 24ನೇ ಎಸಿಜೆಎಂ ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ. ಯದುಗಿರಿ ಯತಿರಾಜ ಮಠದ ಸ್ವಾಮೀಜಿ ಆತ್ಮೀಯತೆ ಗಳಿಸಿದ್ದ ಆರೋಪಿ, ಮಠಕ್ಕೆ ಧನಸಹಾಯ ಮಾಡಿಕೊಂಡು ಹತ್ತಿರವಾಗಿದ್ದ. ಬಳಿಕ ದೇಶಾದ್ಯಂತ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಅಲ್ಲಿ ರಾಜಕಾರಣಿಗಳ ಜೊತೆಗಿನ ಫೋಟೋ ಇಟ್ಟುಕೊಂಡು ವಂಚನೆಗೆ ಇಳಿದಿದ್ದ. 2023ರಲ್ಲಿ ಏರ್​ಪೋರ್ಟ್​ ಬಳಿ ಜಮೀನು ಕೊಡಿಸುವುದಾಗಿ ವಂಚನೆ ಪ್ರಕರಣ ಸಂಬಂಧ ಆರೋಪಿ‌ ವಿರುದ್ಧ ವಿಜಯನಗರ ಠಾಣೆಯಲ್ಲಿ‌ ಎಫ್​ಐಆರ್ ದಾಖಲಾಗಿತ್ತು.

ವೈದ್ಯರಾಗಿರುವ ಡಾ.ರಾಜಾ ಲಂಗೇರ್‌ ಕೂಡ ಮಠದ ಭಕ್ತರಾಗಿದ್ದು, ಇದೇ ಮಠದಲ್ಲಿ ಅವರಿಗೆ ಆರೋಪಿ ಸುಜಯೇಂದ್ರನ ಪರಿಚಯವಾಗಿತ್ತು. ಗೃಹ ಸಚಿವ ಅಮಿತ್‌ ಶಾ ಅವರ ವಿಶೇಷ ಕರ್ತವ್ಯ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಈ ನಡುವೆ ಬೆಂಗಳೂರಿನ ಏರ್​​ಪೋರ್ಟ್​​ ಬಳಿ ಮಠಕ್ಕೆ ಸೇರಿರುವ ಜಮೀನಿದ್ದು, ಕಡಿಮೆ ಬೆಲೆಗೆ ಕೊಡಿಸುತ್ತೇನೆ ಎಂದು ನಂಬಿಸಿದ್ದ. ಅಲ್ಲದೆ ಸ್ವಾಮೀಜಿ ಕೂಡ ತನ್ನ ಮಾತಿಗೆ ಒಪ್ಪುತ್ತಾರೆ ಎಂದು ಬುರುಡೆ ಬಿಟ್ಟಿದ್ದ. ಈತನ ಮೋಸ ಅರಿಯದ ವೈದ್ಯ ಡಾ.ರಾಜಾ ಲಂಗೇರ್‌ ಒಟ್ಟು 2.70 ಕೋಟಿ ರೂಪಾಯಿಗಳನ್ನು ಆರೋಪಿಗೆ ನೀಡಿದ್ದರು. ಆದರೆ ಸುಜಯೇಂದ್ರ ಹೇಳಿದಂತೆ ಜಮೀನು ಕೊಡಿಸದಾಗ ಅನುಮಾನಗೊಂಡು ಆತನ ಬಗ್ಗೆ ವಿಚಾರಿಸಿದಾದ ನಿಜ ಬಣ್ಣ ಬಯಲಾಗಿತ್ತು.

ಇದನ್ನೂ ಓದಿ: ಬೆಂಗಳೂರಿನ ಡಯಾಗ್ನೋಸ್ಟಿಕ್ ಲ್ಯಾಬ್‌ನಲ್ಲಿ ಮಹಿಳೆಗೆ ಕಿರುಕುಳ, ಜೀವ ಬೆದರಿಕೆ

ಇದೇ ಸುಜಯೇಂದ್ರನ ವಿರುದ್ಧ ರಾಜ್ಯಪಾಲರ ನಕಲಿ ಸಹಿ ಮತ್ತು ಲೋಕಭವನದ ಅಧಿಕೃತ ಲೆಟರ್ ಹೆಡ್ ಅನ್ನು ಬಳಸಿಕೊಂಡು ವಂಚನೆ ಎಸಗಿರುವ ಆರೋಪವೂ ಕೇಳಿಬಂದಿತ್ತು. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರದೀಪ್ ಅವರು ನೀಡಿದ ದೂರಿನ ಮೇರೆಗೆ ವಿಧಾನಸೌಧ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. 2025ರಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಪತ್ರ ಬರೆದಿದ್ದ ಸುಜಯೇಂದ್ರ, ರಾಜ್ಯಪಾಲರೇ ಶಿಫಾರಸು ಮಾಡಿದ್ದಾರೆ ಎಂದು ನಂಬಿಸಿ ಒಬ್ಬ ವಿದ್ಯಾರ್ಥಿಗೆ ಸೀಟ್ ಮಂಜೂರು ಮಾಡುವಂತೆ ಸೂಚಿಸಿದ್ದ ಎಂಬ ಆರೋಪ ಕೇಳಿಬಂದಿತ್ತು. ಈತನ ಮನೆಯ ಮೇಲೆ ದಾಳಿ ನಡೆಸಿದಾಗ ಕೇಂದ್ರ ಗೃಹ ಸಚಿವಾಲಯ ಮತ್ತು ಲೋಕಭವನದ ಹೆಸರಿನ ಹಲವು ನಕಲಿ ಲೆಟರ್ ಹೆಡ್‌ಗಳು ಮತ್ತು ನಕಲಿ ಸೀಲುಗಳು ಪತ್ತೆಯಾಗಿದ್ದ ಕಾರಣ ಹಗರಣದ ವ್ಯಾಪ್ತಿ ದೊಡ್ಡದಿದೆ ಎಂಬ ಅನುಮಾನ ವ್ಯಕ್ತವಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

IPL 2026 Playoffs Race: ಪ್ಲೇಆಫ್ ರೇಸ್​ನಿಂದ ಬಹುತೇಕ ಹೊರಬಿತ್ತು ಈ 5 ತಂಡಗಳು – Kannada News | IPL 2026 Playoffs Race These 5 teams are almost out of the playoff race MI, CSK, DC, KKR and LSG

ಬೆಂಗಳೂರು (ಏ. 29): ಐಪಿಎಲ್ 2026 (IPL 2026) ಟೂರ್ನಿ ಮಹತ್ವದ ಘಟ್ಟಕ್ಕೆ ತಲುಪುತ್ತಿದೆ. ಈ ಬಾರಿ ಬಲಿಷ್ಠ ಅಂದುಕೊಂಡಿದ್ದ ಕೆಲ ತಂಡಗಳ ಪ್ರದರ್ಶನ ತೀರಾ ಕಳಪೆ ಮಟ್ಟದಲ್ಲಿದೆ. ಮುಖ್ಯವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಪ್ರಸಕ್ತ ಋತು ಉತ್ತಮವಾಗಿಲ್ಲ. ಕೋಲ್ಕತ್ತಾ ತಂಡ ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆದ್ದಿದ್ದು, ಪಾಯಿಂಟ್ ಪಟ್ಟಿಯಲ್ಲಿ ಹಿಂದುಳಿದಿದೆ. ಉಳಿದ ಆರು ಪಂದ್ಯಗಳನ್ನು ಗೆದ್ದರೆ ಮಾತ್ರ ತಂಡಕ್ಕೆ ಪ್ಲೇ ಆಫ್ ಅವಕಾಶ ಸಿಗುತ್ತದೆ. ಆದಾಗ್ಯೂ, ಫಾರ್ಮ್‌ನಲ್ಲಿರುವ ಹೈದರಾಬಾದ್ ಮತ್ತು ಬೆಂಗಳೂರು ತಂಡಗಳ ವಿರುದ್ಧದ ಮುಂದಿನ ಪಂದ್ಯಗಳು ಕೋಲ್ಕತ್ತಾಗೆ ದೊಡ್ಡ ಸವಾಲಾಗಿ ಪರಿಣಮಿಸಿವೆ.

ಲಕ್ನೋದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ರಿಷಭ್ ಪಂತ್ ನೇತೃತ್ವದ ಈ ತಂಡ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಾಗಿಲ್ಲ. ಒಂದೇ ಒಂದು ಸೋಲು ಕೂಡ ಲಕ್ನೋ ಅಧಿಕೃತವಾಗಿ ಟೂರ್ನಿಯಿಂದ ಹಿಂದೆ ಸರಿಯುವಂತೆ ಮಾಡುತ್ತದೆ.

ಸಂಕಷ್ಟದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡ

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪ್ರಸ್ತುತ ಕಠಿಣ ಸಮಯವನ್ನು ಎದುರಿಸುತ್ತಿದೆ. ಏಳು ಪಂದ್ಯಗಳಿಂದ ಕೇವಲ ಎರಡು ಗೆಲುವುಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿರುವ ಮುಂಬೈ, ಪ್ಲೇಆಫ್‌ಗೆ ಅರ್ಹತೆ ಪಡೆಯಲು ಉಳಿದ ಏಳು ಪಂದ್ಯಗಳಲ್ಲಿ ಕನಿಷ್ಠ ಆರನ್ನಾದರೂ ಗೆಲ್ಲಬೇಕಾಗಿದೆ. ಚೆನ್ನೈ ವಿರುದ್ಧ 103 ರನ್‌ಗಳ ಸೋಲಿನಿಂದ ತಂಡದ ಆತ್ಮವಿಶ್ವಾಸ ಮತ್ತಷ್ಟು ಕುಗ್ಗಿದೆ. ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್‌ನ ಪ್ರದರ್ಶನವು ವಿಚಿತ್ರವಾಗಿದೆ. ಒಂದು ಪಂದ್ಯದಲ್ಲಿ 264 ರನ್ ಗಳಿಸಿದ ಅದೇ ತಂಡ ಮುಂದಿನ ಪಂದ್ಯದಲ್ಲಿ ಕೇವಲ 75 ರನ್‌ಗಳಿಗೆ ಕುಸಿದಿರುವುದು ಆಶ್ಚರ್ಯಕರವಾಗಿದೆ. ಎಂಟು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿರುವ ಡೆಲ್ಲಿ ಇನ್ನು ಮುಂದೆ ಪ್ರತಿ ಪಂದ್ಯವನ್ನು ನಾಕೌಟ್ ಎಂದು ಪರಿಗಣಿಸಬೇಕಾಗುತ್ತದೆ.

Vaibhav Sooryavanshi: 400 ರನ್ ಗಳಿಸಿ ಆರೆಂಜ್ ಕ್ಯಾಪ್ ವಶಪಡಿಸಿಕೊಂಡ ವೈಭವ್ ಸೂರ್ಯವಂಶಿ

ಫಾರ್ಮ್​ನಲ್ಲಿಲ್ಲ ಚೆನ್ನೈ ಸೂಪರ್ ಕಿಂಗ್ಸ್

ಈ ಋತುವು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಒಂದು ಪರೀಕ್ಷೆಯಾಗಿದೆ. ಯುವ ಆಟಗಾರ ಆಯುಷ್ ಮಾತ್ರೆ ಅನುಪಸ್ಥಿತಿಯು ತಂಡದ ಸಮತೋಲನದ ಮೇಲೆ ಪರಿಣಾಮ ಬೀರಿದೆ. ಎಂಟು ಪಂದ್ಯಗಳಿಂದ ಮೂರು ಗೆಲುವುಗಳೊಂದಿಗೆ ಆರನೇ ಸ್ಥಾನದಲ್ಲಿರುವ ಚೆನ್ನೈ ಮುಂದಿನ ಪಂದ್ಯಗಳಲ್ಲಿ ಮುಂಬೈ ಮತ್ತು ಹೈದರಾಬಾದ್‌ನಂತಹ ಬಲಿಷ್ಠ ತಂಡಗಳನ್ನು ಎದುರಿಸಬೇಕಾಗುತ್ತದೆ. ತಂಡವು ಸಂಜು ಸ್ಯಾಮ್ಸನ್ ಅವರ ವೈಯಕ್ತಿಕ ಪ್ರದರ್ಶನವನ್ನು ಅವಲಂಬಿಸಿರುವುದೇ ಕಳವಳಕಾರಿಯಾಗಿದೆ. ಸಿಎಸ್​ಕೆ ಸತತ ಗೆಲುವುಗಳನ್ನು ಸಾಧಿಸದಿದ್ದರೆ, ಚಾಂಪಿಯನ್ ತಂಡವು ಲೀಗ್ ಹಂತದಲ್ಲೇ ಮನೆಗೆ ಹೋಗಬೇಕಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಿಟ್ ಸಿಗದೆ ಒದ್ದಾಡುತ್ತಿರುವ ಹೀರೋ ಜೊತೆ ಡೇಟಿಂಗ್ ಶುರು ಹಚ್ಚಿಕೊಂಡ ಪೂಜಾ ಹೆಗ್ಡೆ – Kannada News | Pooja Hegde Dating Rohan Mehra? Rumors Swirl Amidst Career Challenges

ಮಂಗಳೂರು ಮೂಲದ ಬಹುಭಾಷಾ ನಟಿ ಪೂಜಾ ಹೆಗ್ಡೆ ಅವರಿಗೆ ಇತ್ತೀಚೆಗೆ ದೊಡ್ಡ ಯಶಸ್ಸು ಸಿಗುತ್ತಿಲ್ಲ. ಅವರು ಒಪ್ಪಿಕೊಂಡ ಸಿನಿಮಾಗಳಿಂದಲೂ ಹಿಂದಕ್ಕೆ ಸರಿಯುತ್ತಿದ್ದಾರೆ. ಹೀಗಿರುವಾಗಲೇ ಅವರು ಡೇಟಿಂಗ್ ವಿಷಯಕ್ಕೆ ಸುದ್ದಿ ಆಗಿದ್ದಾರೆ. ಪೂಜಾ ಹೆಗ್ಡೆ ಅವರು ‘ಬಜಾರ್’ ಹೆಸರಿನ ಸಿನಿಮಾ ಮಾಡಿದ್ದ ರೋಹನ್ ಮೆಹ್ರಾ ಜೊತೆ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ.

ರೋಹನ್ ಮೆಹ್ರಾ ಅವರು ಹಿಂದಿ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದಿದ್ದ ವಿನೋದ್ ಮೆಹ್ರಾ ಅವರ ಮಗ. ಈ ಕಾರಣಕ್ಕೆ ವಿನೋದ್ ಅವರಿಗೆ ಚಿತ್ರರಂಗದಲ್ಲಿ ಸಿನಿಮಾ ಆಫರ್​​ಗಳು ಸಿಕ್ಕವು. 2015ರಲ್ಲಿ ಬಂದ ‘ಬಾಜಿರಾವ್ ಮಸ್ತಾನಿ’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ರೋಹನ್ ಮೆಹ್ರಾ ನಟಿಸಿದರು. ಆ ಬಳಿಕ ಕಿರುಚಿತ್ರ ಒಂದನ್ನು ಮಾಡಿದರು. 2018ರಲ್ಲಿ ‘ಬಜಾರ್’ ಹೆಸರಿನ ಸಿನಿಮಾ ಮಾಡಿದರು. ಈ ಚಿತ್ರವೂ ಮೆಚ್ಚುಗೆ ಪಡೆದಿಲ್ಲ.‘420 ಐಪಿಸಿ’, ‘ಅದ್ಭುತ್’ ಹೆಸರಿನ ಚಿತ್ರವನ್ನು ರೋಹನ್ ಮೆಹ್ರಾ ಮಾಡಿದರು. ಸದ್ಯ ಅವರ ಕೈಯಲ್ಲಿ ಯಾವುದೇ ಹೊಸ ಸಿನಿಮಾ ಇಲ್ಲ.

ಪೂಜಾ ಹೆಗ್ಡೆ ಹಾಗೂ ರೋಹನ್ ಒಟ್ಟಾಗಿ ಸಿನಿಮಾ ಮಾಡಿಲ್ಲ. ಆದರೆ, ಇಬ್ಬರ ಮಧ್ಯೆ ಪರಿಚಯ ಬೆಳೆದಿದೆ. ಇಬ್ಬರೂ ಅನೇಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಎಲ್ಲಿಯೂ ಇವರು ಡೇಟಿಂಗ್ ವಿಷಯ ರಿವೀಲ್ ಮಾಡಿಲ್ಲ. ಈಗ ಇವರು ಗುಟ್ಟಾಗಿ ಸುತ್ತಾಡುತ್ತಿರುವುದು ಸ್ಪಷ್ಟವಾಗಿದೆ.

ಈ ವಿಷಯವನ್ನು ಪೂಜಾ ಹೆಗ್ಡೆ ಆಗಲೀ, ರೋಹನ್ ಮೆಹ್ರಾ ಆಗಲಿ ಖಚಿತಪಡಿಸಿಲ್ಲ. ಆದರೆ, ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಎಂಬ ಮಾತನ್ನು ಅನೇಕರು ನೆನಪಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇಬ್ಬರೂ ವಿವಾಹ ಆಗುವ ಘೋಷಣೆ ಮಾಡಿದ್ದರೂ ಅಚ್ಚರಿ ಏನಿಲ್ಲ.

ಇದನ್ನೂ ಓದಿ: ಮುಂಬೈ ಸೋಲುತ್ತಿದ್ದಂತೆ ಮುಖ ಮುಚ್ಚಿಕೊಂಡ ಪೂಜಾ ಹೆಗ್ಡೆ

ಈ ಮೊದಲು ವರುಣ್ ಧವನ್ ಜೊತೆ ಪೂಜಾ ಹೆಗ್ಡೆ ಆಪ್ತವಾಗಿದ್ದ ವಿಷಯ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಇವರ ಮಧ್ಯೆ ಏನೋ ನಡೆಯುತ್ತಿದೆ ಎಂದು ಹೇಳಲಾಗಿತ್ತು. ಆದರೆ, ಹಾಗಾಗಿಲ್ಲ. ಈಗ ಈ ವಿಷಯವೂ ಅದೇ ರೀತಿಯೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರು: ನಾಪತ್ತೆಯಾಗಿ 3 ತಿಂಗಳಾದರೂ ಪಿಯು ವಿದ್ಯಾರ್ಥಿನಿಯರ ಸುಳಿವಿಲ್ಲ! ಸಿಐಡಿ ತನಿಖೆಗೆ ಆದೇಶ – Kannada News | Missing Bengaluru PU Students Case Handed Over to CID After 3 Months of Futile Search

ಬೆಂಗಳೂರು, ಏಪ್ರಿಲ್ 29: ಬೆಂಗಳೂರಿನಲ್ಲಿ ಇಬ್ಬರು ಪಿಯು ವಿದ್ಯಾರ್ಥಿನಿಯರಾದ ತನಿಷ್ಕಾ ಮತ್ತು ತೇಜಸ್ವಿನಿ ನಾಪತ್ತೆ ಪ್ರಕರಣದ ತನಿಖೆಯನ್ನು ಇದೀಗ ಸಿಐಡಿಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ. ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಜನವರಿ 31ರಂದು ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯರು ಮೂರು ತಿಂಗಳು ಕಳೆದರೂ ಇನ್ನೂ ಪತ್ತೆಯಾಗಿಲ್ಲ. ವಿದ್ಯಾರ್ಥಿನಿಯರು ಆಧಾರ್ ಕಾರ್ಡ್‌ನೊಂದಿಗೆ ಮನೆ ಬಿಟ್ಟು ಹೋಗಿದ್ದು, ಅವರ ಓಡಾಟದ ಸಿಸಿಟಿವಿ ದೃಶ್ಯಗಳು ಸಹ ಲಭ್ಯವಾಗಿದ್ದವು. ಆದರೂ, ಪೊಲೀಸರಿಗೆ ಈವರೆಗೆ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಪೋಷಕರು ಈ ಹಿಂದೆ ಮನವಿ ಮಾಡಿದ್ದರು. ಅಲ್ಲದೆ, ಹೈಕೋರ್ಟ್‌ನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ಕೂಡ ಸಲ್ಲಿಸಿದ್ದರು.

ಇದೀಗ, ಈ ಪ್ರಕರಣದ ಸಂಪೂರ್ಣ ವರದಿಯನ್ನು ವಿದ್ಯಾರಣ್ಯಪುರ ಠಾಣಾ ಪೊಲೀಸರು ಸಿಐಡಿಗೆ ಹಸ್ತಾಂತರಿಸಿದ್ದಾರೆ. ಸಿಐಡಿ ತಂಡವು ನಾಪತ್ತೆಯಾಗಿರುವ ತನಿಷ್ಕ ಮತ್ತು ತೇಜಸ್ವಿನಿ ಪತ್ತೆ ಕಾರ್ಯವನ್ನು ಮುಂದುವರಿಸಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರೀತಿಯ ವಿಷಯಕ್ಕೆ ಕುರುಬ ಸಮಾಜದವರಿಂದಲೇ ಕುರುಬ ಕುಟುಂಬಕ್ಕೆ ಬಹಿಷ್ಕಾರ! ಮನೆಯ ಮೇಲೆ ಕಲ್ಲು ತೂರಾಟ – Kannada News | Social Boycott in Belagavi: Family Ostracized and Attacked Over Inter Caste Love Affair

ಕುರುಬ ಸಮಾಜದವರಿಂದಲೇ ಕುರುಬ ಸಮಾಜದ ಕುಟುಂಬಕ್ಕೆ ಬಹಿಷ್ಕಾರ!

ಬೆಳಗಾವಿ, ಏಪ್ರಿಲ್ 29: ಆಧುನಿಕ ಕಾಲದಲ್ಲೂ ಸಾಮಾಜಿಕ ಬಹಿಷ್ಕಾರದಂತಹ (Social Boycott) ಅನಿಷ್ಟ ಪದ್ಧತಿಗಳು ಜೀವಂತವಾಗಿವೆ ಎನ್ನುವುದಕ್ಕೆ ಬೆಳಗಾವಿ ತಾಲೂಕಿನ ಕೊಂಡಸಕೊಪ್ಪ ಗ್ರಾಮದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಪ್ರೀತಿಯ ವಿಚಾರವನ್ನಿಟ್ಟುಕೊಂಡು ಕುರುಬ ಸಮಾಜದವರಿಂದಲೇ ಕುರುಬ ಸಮಾಜದ ಕುಟುಂಬವೊಂದಕ್ಕೆ ಬಹಿಷ್ಕಾರ ಹಾಕಲಾಗಿದೆ.

ಬಹಿಷ್ಕೃತರೊಂದಿಗೆ ಮಾತನಾಡಿದರೆ 5 ಸಾವಿರ ದಂಡ!

ಸಾಂಬ್ರೆಕರ್ ಕುಟುಂಬದ ಯುವತಿಯೊಬ್ಬಳು ಎಸ್ಟಿ (ST) ಸಮಾಜದ ಯುವಕನನ್ನು ಪ್ರೀತಿಸಿದ್ದಾಳೆ ಎಂಬ ಕಾರಣಕ್ಕೆ ಕುರುಬ ಸಮಾಜದ ಮುಖಂಡರು ಈ ಕುಟುಂಬದ ಮೇಲೆ ಕೆಂಗಣ್ಣು ಬೀರಿದ್ದಾರೆ ಎನ್ನಲಾಗಿದೆ. ಸಮಾಜದ ಕಟ್ಟಪ್ಪಣೆ ಮೀರಿ ನಡೆದಿದ್ದೀರಿ ಎಂದು ಆರೋಪಿಸಿರುವ ಪಂಚರು, ಈ ಕುಟುಂಬದ ಜೊತೆ ಸಮಾಜದ ಯಾರೂ ಮಾತನಾಡಬಾರದು ಎಂದು ಫರ್ಮಾನು ಹೊರಡಿಸಿದ್ದಾರೆ. ಒಂದು ವೇಳೆ ಯಾರಾದರೂ ಮಾತನಾಡಿದರೆ ಅವರಿಗೆ 5,000 ರೂಪಾಯಿ ದಂಡ ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಕುಟುಂಬಸ್ಥರ ಕಣ್ಣೀರು

ಈ ಬಹಿಷ್ಕಾರದ ಬೆನ್ನಲ್ಲೇ ಮದುವೆ, ಹಬ್ಬ ಹಾಗೂ ಇನ್ನಿತರ ಶುಭ ಕಾರ್ಯಗಳಿಗೆ ಆಹ್ವಾನವಿಲ್ಲದೆ ಸಾಂಬ್ರೆಕರ್ ಕುಟುಂಬ ಒಂಟಿಯಾಗಿದೆ. ಗ್ರಾಮದ ಇತರ ಸಮಾಜದವರೊಂದಿಗೆ ಮಾತನಾಡುವ ಅವಕಾಶವಿದ್ದರೂ, ಸ್ವಜಾತಿಯವರೇ ದೂರ ಇಟ್ಟಿರುವುದು ಕುಟುಂಬವನ್ನು ಕಂಗಾಲಾಗಿಸಿದೆ. ನಮಗೂ ಗೌರವದಿಂದ ಬದುಕಲು ಅವಕಾಶ ಕೊಡಿ ಎಂದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.

ಇದನ್ನೂ ಓದಿ ಮೈಸೂರಿನಲ್ಲಿ ಸಾಮಾಜಿಕ ಬಹಿಷ್ಕಾರ: ವಿದ್ಯುತ್ ಕಂಬ ಮುಟ್ಟಿದ್ದಕ್ಕೆ ಎಲೆಕ್ಟ್ರಿಷಿಯನ್ ಮೇಲೆ ಹಲ್ಲೆಗೆ ಮುಂದಾದ ಗ್ರಾಮಸ್ಥರು

ಪೊಲೀಸರ ನಿರ್ಲಕ್ಷ್ಯದ ಆರೋಪ

ಈ ಸಂಬಂಧ ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ದೂರು ನೀಡಿ 15 ದಿನಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತರು ಆಕ್ರೋಶ ಹೊರಹಾಕಿದ್ದಾರೆ. ಇದೇ ನಡುವೆ, ತಡರಾತ್ರಿ ದುಷ್ಕರ್ಮಿಗಳು ಸಾಂಬ್ರೆಕರ್ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಕಾಟಾಚಾರಕ್ಕೆ ಪರಿಶೀಲಿಸಿ ವಾಪಸ್ ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜೀವ ಭಯದಲ್ಲಿ ದಿನ ದೂಡುತ್ತಿರುವ ನಮಗೆ ರಕ್ಷಣೆ ನೀಡಿ ಎಂದು ಸಾಂಬ್ರೆಕರ್ ಕುಟುಂಬ ನ್ಯಾಯಕ್ಕಾಗಿ ಅಂಗಲಾಚುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:32 am, Wed, 29 April 26

Source link

Sarvartha Siddhi Yoga: ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಮೋದಿ ವಿಶೇಷ ಪೂಜೆ; ಸರ್ವಾರ್ಥ ಸಿದ್ಧಿ ಯೋಗದ ಮಹತ್ವವೇನು ಗೊತ್ತಾ? – Kannada News | What is Sarvartha Siddhi Yoga and Why Its Auspicious to Perform on Trayodashi Tithi

ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಪ್ರಧಾನಿ ಮೋದಿImage Credit source: Twitter

ಪ್ರಧಾನಿ ನರೇಂದ್ರ ಮೋದಿ  ಕಾಶಿಗೆ ಭೇಟಿ ನೀಡಿ ವಿಶ್ವನಾಥನ ಆಶೀರ್ವಾದ ಪಡೆದಿದ್ದಾರೆ. ಇಂದು (ಏಪ್ರಿಲ್ 29)  ರೂಪುಗೊಂಡ ಸರ್ವಾರ್ಥ ಸಿದ್ಧಿ ಯೋಗ ಮತ್ತು ತ್ರಯೋದಶಿ ತಿಥಿಯ ಅತ್ಯಂತ ಶುಭ ಸಂದರ್ಭದಲ್ಲಿ ಅವರು ವಿಶ್ವನಾಥನಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿದ್ದಾರೆ. ಈ ದಿನದ ಜ್ಯೋತಿಷ್ಯ ಶಾಸ್ತ್ರದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಸುಮಾರು 30 ನಿಮಿಷಗಳ ಕಾಲ ಶಾಸ್ತ್ರೋಕ್ತವಾಗಿ ಶೋಡಶೋಪಚಾರ ವಿಧಾನದ ಮೂಲಕ ಪ್ರಧಾನಿಯವರು ಪ್ರಾರ್ಥನೆ ಸಲ್ಲಿಸಿದ್ದಾರೆ.

ಜ್ಯೋತಿಷ್ಯ ಶಾಸ್ತ್ರ ಹೇಳುವುದೇನು?

ಹಿಂದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸರ್ವಾರ್ಥ ಸಿದ್ಧಿ ಯೋಗವು ಅತ್ಯಂತ ಶಕ್ತಿಶಾಲಿ ಮತ್ತು ಶುಭದಾಯಕ ಸಮಯವೆಂದು ಪರಿಗಣಿಸಲ್ಪಟ್ಟಿದೆ. ‘ಸರ್ವಾರ್ಥ’ ಎಂದರೆ ಎಲ್ಲಾ ಉದ್ದೇಶಗಳು ಹಾಗೂ ‘ಸಿದ್ಧಿ’ ಎಂದರೆ ಯಶಸ್ಸು ಎಂದರ್ಥ. ಈ ಯೋಗದಲ್ಲಿ ಕೈಗೊಳ್ಳುವ ಯಾವುದೇ ಕೆಲಸವು ಪೂರ್ಣ ಫಲ ನೀಡುತ್ತದೆ ಎಂಬ ನಂಬಿಕೆಯಿದೆ. ವಾರದ ದಿನ ಮತ್ತು ನಕ್ಷತ್ರಗಳ ವಿಶೇಷ ಸಮನ್ವಯದಿಂದ ಉಂಟಾಗುವ ಈ ಯೋಗವು, ಹೊಸ ವ್ಯವಹಾರ ಆರಂಭಿಸಲು, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಥವಾ ದೈವಿಕ ಕಾರ್ಯಗಳನ್ನು ನಡೆಸಲು ಅತ್ಯಂತ ಪ್ರಶಸ್ತವಾದ ಕಾಲವಾಗಿದೆ. ಇದು ಗ್ರಹಗತಿಗಳ ವಿಶೇಷ ಸ್ಥಾನದಿಂದಾಗಿ ಕೆಲವೇ ಗಂಟೆಗಳ ಕಾಲ ಮಾತ್ರ ಲಭ್ಯವಿರುತ್ತದೆ.

ತ್ರಯೋದಶಿ ತಿಥಿ ಮತ್ತೊಂದು ವಿಶೇಷ:

ಈ ದಿನದ ಮತ್ತೊಂದು ವಿಶೇಷವೆಂದರೆ ತ್ರಯೋದಶಿ ತಿಥಿ. ಶಿವನ ಆರಾಧನೆಗೆ ಈ ತಿಥಿಯು ಅತ್ಯಂತ ಪ್ರಿಯವಾದುದು. ತ್ರಯೋದಶಿಯಂದು ಶಿವನನ್ನು ಸ್ಮರಿಸುವುದರಿಂದ ಜೀವನದಲ್ಲಿ ಸುಖ, ಸಮೃದ್ಧಿ ಮತ್ತು ಶಾಂತಿ ಲಭಿಸುತ್ತದೆ ಎಂಬುದು ಭಕ್ತರ ದೃಢ ವಿಶ್ವಾಸ. ಅದರಲ್ಲೂ ಸರ್ವಾರ್ಥ ಸಿದ್ಧಿ ಯೋಗದೊಂದಿಗೆ ಈ ತಿಥಿಯು ಸಂಗಮವಾಗಿರುವುದು ಈ ದಿನದ ಆಧ್ಯಾತ್ಮಿಕ ಶಕ್ತಿಯನ್ನು ಇಮ್ಮಡಿಗೊಳಿಸಿದೆ. ಈ ಪುಣ್ಯಕಾಲದಂದೇ ಪ್ರಧಾನಿಯವರು ಕಾಶಿಯಲ್ಲಿ ಪೂಜೆ ಸಲ್ಲಿಸಿರುವುದು ವಿಶೇಷ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಮೋದಿ ನೆರವೇರಿಸಿದ ಶೋಡಶೋಪಚಾರ ಪೂಜೆ:

ಪ್ರಧಾನಿ ಮೋದಿ ಅವರು ನೆರವೇರಿಸಿದ ಶೋಡಶೋಪಚಾರ ಪೂಜೆಯು 16 ಹಂತದ ವೈವಿಧ್ಯಮಯ ಸೇವೆಗಳನ್ನು ಒಳಗೊಂಡ ಸಾಂಪ್ರದಾಯಿಕ ವಿಧಾನವಾಗಿದೆ. ಈ ಪೂಜೆಯು ದೇವರನ್ನು ಆಹ್ವಾನಿಸಿ ಆಸನ ನೀಡುವುದರೊಂದಿಗೆ ಪ್ರಾರಂಭವಾಗಿ, ನಂತರ ಮುಖ್ಯ ಅಭಿಷೇಕದತ್ತ ಸಾಗುತ್ತದೆ. ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಪಂಚಾಮೃತದೊಂದಿಗೆ ಶಿವಲಿಂಗಕ್ಕೆ ಅಭಿಷೇಕ ಮಾಡಿ, ಕೊನೆಯದಾಗಿ ಶುದ್ಧ ನೀರಿನಿಂದಲೂ ಅಭಿಷೇಕ ಮಾಡಿಸಲಾಗುತ್ತದೆ. ಬಳಿಕ ವಸ್ತ್ರ, ಯಜ್ಞೋಪವೀತ ಮತ್ತು ಶ್ರೀಗಂಧವನ್ನು ಅರ್ಪಿಸಿ, ಶಿವನಿಗೆ ಅತ್ಯಂತ ಪ್ರಿಯವಾದ ಬಿಲ್ವಪತ್ರೆ ಹಾಗೂ ಪುಷ್ಪಗಳಿಂದ ಅರ್ಚನೆ ಮಾಡಲಾಗುತ್ತದೆ. ಅಂತಿಮವಾಗಿ ನೈವೇದ್ಯ, ತಾಂಬೂಲ ಅರ್ಪಿಸಿ, ಮಂತ್ರಘೋಷಗಳೊಂದಿಗೆ ಮಂಗಳಾರತಿ ಮಾಡುವ ಮೂಲಕ ಪೂಜಾ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ಮುಕ್ತಾಯಗೊಳಿಸಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರುಣೆ ಮರೆತ ಕಲ್ಲೆದೆಯ ಪೋಷಕರು, ಕೌನ್ಸೆಲಿಂಗ್ ವೇಳೆ ಗಲಾಟೆ ಮಾಡಿ ಹೆಣ್ಣುಮಕ್ಕಳನ್ನು ಪೊಲೀಸ್ ಠಾಣೆಯಲ್ಲೇ ಬಿಟ್ಟು ಹೋದ ದಂಪತಿ – Kannada News | Telangana Couple Leaves Children at Police Station During Counselling Visit

ಕರೀಮ್​ನಗರ, ಏಪ್ರಿಲ್ 29: ಹತ್ತು ವರ್ಷಗಳ ಹಿಂದೆ ಪ್ರೀತಿಸಿ ಮದುವೆ(Marriage)ಯಾಗಿದ್ದ ರವಿ ಕುಮಾರ್ ಮತ್ತು ಲಲಿತಾ ಅವರ ಬದುಕು ಈಗ ಬೀದಿಗೆ ಬಂದಿದೆ. ಅಂಗಡಿ ಮಾಲೀಕ ರವಿ ಮತ್ತು  ಲಲಿತಾ ಅವರ ಹತ್ತು ವರ್ಷಗಳ ಸಂಸಾರದಲ್ಲಿ ಇತ್ತೀಚೆಗೆ ಕಲಹದ ಕಿಡಿ ಹೊತ್ತಿಕೊಂಡಿತ್ತು. ಈ ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸಲು ಪೊಲೀಸರು ನಡೆಸಿದ ಕೌನ್ಸೆಲಿಂಗ್ ಬಳಿಕ ನಡೆದ ಘಟನೆ ಇಡೀ ಪೊಲೀಸ್ ಠಾಣೆಯನ್ನೇ ಸ್ತಬ್ದಗೊಳಿಸಿತ್ತು.

ಏಪ್ರಿಲ್ 28ರಂದು ಲೋವರ್ ಮನೇರ್ ಡ್ಯಾಮ್ (LMD) ಪೊಲೀಸ್ ಠಾಣೆಯಲ್ಲಿ ಕೌನ್ಸೆಲಿಂಗ್ ನಡೆಯುತ್ತಿತ್ತು. ವಾಗ್ವಾದ ತಾರಕಕ್ಕೇರಿದಾಗ ಪತ್ನಿ ಲಲಿತಾ ಅವರು ಮಾಡಿದ ಕೃತ್ಯ ಕಂಡು ಪೊಲೀಸರೇ ದಂಗಾದರು. ತಾನು ಧರಿಸಿದ್ದ ಮಂಗಳಸೂತ್ರ ಮತ್ತು ಕಾಲುಂಗುರವನ್ನು ಕಳಚಿ ಪೊಲೀಸರ ಮೇಜಿನ ಮೇಲಿಟ್ಟ ಲಲಿತಾ, ನನಗೆ ಈ ಸಂಸಾರವೂ ಬೇಡ, ಈ ಮಕ್ಕಳೂ ಬೇಡ ಎಂದು ಹೇಳಿ ಠಾಣೆಯಿಂದ ಹೊರನಡೆದರು.

ಪತ್ನಿ ಹೊರಹೋದ ಬೆನ್ನಲ್ಲೇ ಪತಿ ರವಿ ಕುಮಾರ್ ಕೂಡ ತನ್ನಿಬ್ಬರು ಹೆಣ್ಣುಮಕ್ಕಳನ್ನು ಅಲ್ಲೇ ಬಿಟ್ಟು ಠಾಣೆಯಿಂದ ಹೊರಬಂದರು. ತಾಯಿ ಹೋದರೆ ತಂದೆಯಾದರೂ ಮಕ್ಕಳನ್ನು ಕರೆದುಕೊಂಡು ಹೋಗಬಹುದು ಎಂಬ ಪೊಲೀಸರ ನಿರೀಕ್ಷೆ ಹುಸಿಯಾಯಿತು. ಅಹಂಕಾರದ ಹೋರಾಟದಲ್ಲಿ ಹೆತ್ತವರು ತಮ್ಮ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮರೆತಿದ್ದರು.

ಹೆತ್ತವರು ಕಣ್ಣೆದುರೇ ಹೊರಹೋಗುವುದನ್ನು ಕಂಡ ಇಬ್ಬರು ಮಕ್ಕಳು ಭಯಭೀತರಾಗಿ ಬಿಕ್ಕಿ ಬಿಕ್ಕಿ ಅಳತೊಡಗಿದರು. ಸಬ್-ಇನ್ಸ್‌ಪೆಕ್ಟರ್ ಅನ್ವರ್ ಮತ್ತು ಇತರ ಸಿಬ್ಬಂದಿ ಕೂಡಲೇ ಬಂದು ಮಕ್ಕಳ ಕಣ್ಣೀರು ಒರೆಸಿ, ಊಟ ಕೊಟ್ಟು ಸಮಾಧಾನ ಮಾಡಿದರು. ಪೋಷಕರಿಗೆ ಹಲವು ಬಾರಿ ಫೋನ್ ಮಾಡಿದರೂ ಅವರು ಸ್ಪಂದಿಸಲಿಲ್ಲ.

ಮತ್ತಷ್ಟು ಓದಿ: ಉರಿಯುವ ಚಿತೆಗಳ ನಡುವೆ ಸಪ್ತಪದಿ, ಸ್ಮಶಾನದಲ್ಲೊಂದು ಮದುವೆ

ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು, ಮಕ್ಕಳ ತಂದೆಯ ಕಡೆಯ ಅಜ್ಜಿಯನ್ನು ಸಂಪರ್ಕಿಸಿದರು. ಕೂಡಲೇ ಠಾಣೆಗೆ ಓಡೋಡಿ ಬಂದ ಅಜ್ಜಿ, ತಂದೆ-ತಾಯಿಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮೊಮ್ಮಕ್ಕಳನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು. ಸದ್ಯಕ್ಕೆ ಯಾವುದೇ ಕಾನೂನು ಕೇಸು ದಾಖಲಾಗಿಲ್ಲವಾದರೂ, ಪೊಲೀಸರು ಮತ್ತು ಸಮುದಾಯದ ಹಿರಿಯರು ದಂಪತಿಯ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.

ದಶಕದ ಪ್ರೇಮ ವಿವಾಹವು ಇಂದು ದ್ವೇಷವಾಗಿ ಮಾರ್ಪಟ್ಟಿದೆ. ಆದರೆ, ಪೋಷಕರ ಜಗಳದಲ್ಲಿ ತಮ್ಮದೇನೂ ತಪ್ಪಿಲ್ಲದಿದ್ದರೂ ಠಾಣೆಯಲ್ಲಿ ಅನಾಥರಂತೆ ನಿಂತಿದ್ದ ಆ ಇಬ್ಬರು ಹೆಣ್ಣುಮಕ್ಕಳ ಭವಿಷ್ಯದ ಬಗ್ಗೆ ಈಗ ಎಲ್ಲರೂ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Vaibhav Sooryavanshi: 400 ರನ್ ಗಳಿಸಿ ಆರೆಂಜ್ ಕ್ಯಾಪ್ ವಶಪಡಿಸಿಕೊಂಡ ವೈಭವ್ ಸೂರ್ಯವಂಶಿ – Kannada News | Vaibhav Sooryavanshi scores 400 runs to win Orange Cap in IPL 2026 Check purple cap list

ಬೆಂಗಳೂರು (ಏ. 29): ಐಪಿಎಲ್ 2026 ರ 40 ನೇ ಪಂದ್ಯದ ನಂತರ, ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮತ್ತೊಮ್ಮೆ ದೊಡ್ಡ ಬದಲಾವಣೆಯಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ (Vaibhav Sooryavamshi) ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಅಗ್ರಸ್ಥಾನ ತಲುಪಿದ್ದಾರೆ. ಈ ಎಡಗೈ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಮತ್ತು ಅಭಿಷೇಕ್ ಶರ್ಮಾ ಅವರನ್ನು ಹಿಂದಿಕ್ಕುವ ಮೂಲಕ ನಂಬರ್ ಒನ್ ಸ್ಥಾನಕ್ಕೇರಿದ್ದಾರೆ. ವೈಭವ್ ಸೂರ್ಯವಂಶಿ 9 ಪಂದ್ಯಗಳಲ್ಲಿ 400 ರನ್ ಗಳಿಸಿದ್ದು ಅವರ ಸರಾಸರಿ 44.44. ಈ ಆಟಗಾರನ ಸ್ಟ್ರೈಕ್ ರೇಟ್ 238.09 ಮತ್ತು ಅವರು ಇಲ್ಲಿಯವರೆಗೆ ಒಂದು ಶತಕ ಮತ್ತು ಎರಡು ಅರ್ಧಶತಕಗಳನ್ನು ಗಳಿಸಿದ್ದಾರೆ. ವೈಭವ್ ಸೂರ್ಯವಂಶಿ ಈ ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು (37) ಬಾರಿಸಿದ ಆಟಗಾರ ಕೂಡ ಆಗಿದ್ದಾರೆ.

ಇಷ್ಟೇ ಅಲ್ಲದೆ ವೈಭವ್ ಈಗ ಒಂದೇ ಐಪಿಎಲ್ ಸೀಸನ್‌ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 400 ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರು ಈ ಸಾಧನೆ ಮಾಡುವ ಮೂಲಕ ಆಂಡ್ರೆ ರಸೆಲ್ ಅವರ ದಾಖಲೆಯನ್ನೂ ಮುರಿದಿದ್ದಾರೆ. ಈ ಮೂಲಕ ವೈಭವ್ ಈ ಋತುವಿನಲ್ಲಿ ರನ್ ಮೆಷಿನ್ ಆಗಿ ಹೊರಹೊಮ್ಮಿದ್ದಾರೆ.

ಐಪಿಎಲ್‌ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 400 ರನ್ ಗಳಿಸಿದ ಆಟಗಾರರು

  • 167 – ವೈಭವ್ ಸೂರ್ಯವಂಶಿ (2026)
  • 188 – ಆಂಡ್ರೆ ರಸೆಲ್ (2019)
  • 195 – ಅಭಿಷೇಕ್ ಶರ್ಮಾ (2024)
  • 197 – ನಿಕೋಲಸ್ ಪೂರನ್ (2025)
  • 200 – ಗ್ಲೆನ್ ಮ್ಯಾಕ್ಸ್‌ವೆಲ್ (2014)

Priyansh Arya: ಪಂಜಾಬ್ ಕಿಂಗ್ಸ್-ರಾಜಸ್ಥಾನ್ ಪಂದ್ಯದ ನಡುವೆ ಹರಿಯಿತು ನೆತ್ತರು: ಇದಕ್ಕೆ ಕಾರಣ ಪ್ರಿಯಾಂಶ್ ಆರ್ಯ

ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಯಾರೆಲ್ಲ ಇದ್ದಾರೆ?

ಅಭಿಷೇಕ್ ಶರ್ಮಾ ಎಂಟು ಪಂದ್ಯಗಳಲ್ಲಿ 380 ರನ್ ಗಳಿಸಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕೆಎಲ್ ರಾಹುಲ್ ಎಂಟು ಪಂದ್ಯಗಳಲ್ಲಿ 358 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಎಂಟು ಪಂದ್ಯಗಳಲ್ಲಿ 351 ರನ್ ಗಳಿಸಿದ್ದಾರೆ. ಹೆನ್ರಿಕ್ ಕ್ಲಾಸೆನ್ 349 ರನ್ ಗಳಿಸಿ ಐದನೇ ಸ್ಥಾನದಲ್ಲಿದ್ದಾರೆ. ಪ್ರಭ್ಸಿಮ್ರಾನ್ ಸಿಂಗ್, ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಕೂಡ ಆರೆಂಜ್ ಕ್ಯಾಪ್ ರೇಸ್‌ನಲ್ಲಿದ್ದಾರೆ.

ಪರ್ಪಲ್ ಕ್ಯಾಪ್ ನಲ್ಲಿ ಭುವನೇಶ್ವರ್ ಕುಮಾರ್​ಗೆ ಅಗ್ರಸ್ಥಾನ

ಆರ್‌ಸಿಬಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಐಪಿಎಲ್ 2026 ರಲ್ಲಿ ಪ್ರಮುಖ ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಎಂಟು ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು ಪ್ರತಿ ಓವರ್‌ಗೆ ಕೇವಲ 7.6 ರನ್‌ಗಳ ಎಕಾನಮಿ ದರವನ್ನು ಹೊಂದಿದ್ದಾರೆ. ಅವರು ಪ್ರಸ್ತುತ ಪರ್ಪಲ್ ಕ್ಯಾಪ್ ಹೊಂದಿದ್ದಾರೆ. ರಾಜಸ್ಥಾನ್ ರಾಯಲ್ಸ್ ವೇಗದ ಬೌಲರ್ ಜೋಫ್ರಾ ಆರ್ಚರ್ ಕೂಡ 14 ವಿಕೆಟ್‌ಗಳನ್ನು ಹೊಂದಿದ್ದಾರೆ, ಇವರು ಒಂಬತ್ತು ಪಂದ್ಯಗಳನ್ನು ಆಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವೇಗದ ಬೌಲರ್ ಅನ್ಶುಲ್ ಕಾಂಬೋಜ್ ಕೂಡ 14 ವಿಕೆಟ್‌ಗಳನ್ನು ಹೊಂದಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವೇಗದ ಬೌಲರ್ ಎಹ್ಸಾನ್ ಮಾಲಿಂಗ ಕೂಡ 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link