ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಮರಗಳ ಮಾರಣಹೋಮ: 10ಕ್ಕೂ ಹೆಚ್ಚು ವೃಕ್ಷಗಳಿಗೆ ಕೊಡಲಿಯೇಟು – Kannada News | Udupi DC Office Cuts Down 10+ Trees After Staff Electrocution Death; Environmentalists Slam District Admin
ಉಡುಪಿ, ಏಪ್ರಿಲ್ 29: ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿಯೇ ಹತ್ತಕ್ಕೂ ಹೆಚ್ಚು ಮರಗಳ ಮಾರಣಹೋಮ ನಡೆದಿದೆ. ಏ.24ರಂದು ಮಾವಿನ ಕಾಯಿ ಕೀಳುವಾಗ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಮೃತಪಟ್ಟಿದ್ದರು. ಮರದ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿದ ಕಾರಣ ಪ್ರಾಣ ಬಿಟ್ಟಿದ್ದರು. ಆದರೆ ಇದೀಗ ನೆಗಡಿ ಆಯ್ತು ಎಂದು ಉಡುಪಿ ಜಿಲ್ಲಾಡಳಿತ ಮೂಗನ್ನೇ ಕತ್ತರಿಸಿಕೊಂಡಿದೆ. ವಿದ್ಯುತ್ ತಂತಿಯನ್ನು ಬೇರೆಡೆಗೆ ಶಿಫ್ಟ್ ಮಾಡುವಂತೆ ವಿವಿಧ ಸಂಘಟನೆಗಳು ಒತ್ತಾಯಿಸಿದ್ದವು. ಅದರಂತೆ ತಂತಿ ವರ್ಗಾವಣೆ ಬದಲು ಹಲವು ವರ್ಷಗಳಿಂದ ಹಣ್ಣು ನೀಡುತ್ತಿದ್ದ…