ಕರುಣೆ ಮರೆತ ಕಲ್ಲೆದೆಯ ಪೋಷಕರು, ಕೌನ್ಸೆಲಿಂಗ್ ವೇಳೆ ಗಲಾಟೆ ಮಾಡಿ ಹೆಣ್ಣುಮಕ್ಕಳನ್ನು ಪೊಲೀಸ್ ಠಾಣೆಯಲ್ಲೇ ಬಿಟ್ಟು ಹೋದ ದಂಪತಿ – Kannada News | Telangana Couple Leaves Children at Police Station During Counselling Visit
ಕರೀಮ್ನಗರ, ಏಪ್ರಿಲ್ 29: ಹತ್ತು ವರ್ಷಗಳ ಹಿಂದೆ ಪ್ರೀತಿಸಿ ಮದುವೆ(Marriage)ಯಾಗಿದ್ದ ರವಿ ಕುಮಾರ್ ಮತ್ತು ಲಲಿತಾ ಅವರ ಬದುಕು ಈಗ ಬೀದಿಗೆ ಬಂದಿದೆ. ಅಂಗಡಿ ಮಾಲೀಕ ರವಿ ಮತ್ತು ಲಲಿತಾ ಅವರ ಹತ್ತು ವರ್ಷಗಳ ಸಂಸಾರದಲ್ಲಿ ಇತ್ತೀಚೆಗೆ ಕಲಹದ ಕಿಡಿ ಹೊತ್ತಿಕೊಂಡಿತ್ತು. ಈ ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸಲು ಪೊಲೀಸರು ನಡೆಸಿದ ಕೌನ್ಸೆಲಿಂಗ್ ಬಳಿಕ ನಡೆದ ಘಟನೆ ಇಡೀ ಪೊಲೀಸ್ ಠಾಣೆಯನ್ನೇ ಸ್ತಬ್ದಗೊಳಿಸಿತ್ತು. ಏಪ್ರಿಲ್ 28ರಂದು ಲೋವರ್ ಮನೇರ್ ಡ್ಯಾಮ್ (LMD) ಪೊಲೀಸ್ ಠಾಣೆಯಲ್ಲಿ ಕೌನ್ಸೆಲಿಂಗ್ ನಡೆಯುತ್ತಿತ್ತು. ವಾಗ್ವಾದ…