Category Archives: Blog

Your blog category

ಕಾಶಿ-ಪುಣೆ ಅಮೃತ್ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ – Kannada News | PM Modi Flagged Off New Amrit Bharat Trains Connecting Uttar Pradesh And Maharashtra

ನವದೆಹಲಿ, ಏಪ್ರಿಲ್ 28: ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ನಡುವಿನ ರೈಲು ಸಂಪರ್ಕಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು 2 ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ವಾರಾಣಸಿಯಿಂದ ಪುಣೆ (ಹಡಪ್ಸರ್) ಮತ್ತು ಅಯೋಧ್ಯೆಯಿಂದ ಮುಂಬೈ (ಲೋಕಮಾನ್ಯ ತಿಲಕ್ ಟರ್ಮಿನಸ್) ರೈಲುಗಳು ಸಂಚರಿಸಲಿವೆ. ಉತ್ತರ ಪ್ರದೇಶದಲ್ಲಿ ವಾರಾಣಸಿ ಮತ್ತು ಅಯೋಧ್ಯೆ ಪ್ರಮುಖ ಆಧ್ಯಾತ್ಮಿಕ ತಾಣಗಳಾಗಿರುವುದರಿಂದ ವಾರ್ಷಿಕವಾಗಿ ಲಕ್ಷಾಂತರ ಭಕ್ತರನ್ನು ಆಕರ್ಷಿಸುವುದರಿಂದ ಮತ್ತು ಮುಂಬೈ ಮತ್ತು ಪುಣೆಯಂತಹ ಮಹಾನಗರಗಳಿಗೆ ರೈಲು ಸಂಪರ್ಕವು ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿರೀಕ್ಷೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಬಲರಾಮನದ ದಿನಗಳು’ ಸಿನಿಮಾದಲ್ಲಿ ‘ಆ ದಿನಗಳು’ ಛಾಯೆ: ಟೀಸರ್ ಹೇಗಿದೆ ನೋಡಿ.. – Kannada News | Vinod Prabhakar starrer Balaramana Dinagalu Kannada movie teaser launch

ನಟ ವಿನೋದ್ ಪ್ರಭಾಕರ್ (Vinod Prabhakar) ಅವರು ‘ಬಲರಾಮನ ದಿನಗಳು’ ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರದ ಬಗ್ಗೆ ಅವರ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಈ ಸಿನಿಮಾ ಹೇಗಿರಲಿದೆ ಎಂಬುದು ಈಗ ಟೀಸರ್ ಮೂಲಕ ಗೊತ್ತಾಗಿದೆ. ಈ ಮೊದಲು 2 ಹಾಡುಗಳ ಮೂಲಕ ಸುದ್ದಿಯಾಗಿದ್ದ ಈ ಚಿತ್ರತಂಡ ಈಗ ಟೀಸರ್ ಬಿಡುಗಡೆ ಮಾಡಿದೆ. 80ರ ದಶಕದ ಬೆಂಗಳೂರಿನ ಭೂತಕ ಲೋಕವನ್ನು ‘ಬಲರಾಮನ ದಿನಗಳು’ (Balaramana Dinagalu) ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಕೆ.ಎಂ. ಚೈತನ್ಯ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಆ್ಯಕ್ಷನ್ ಸಿನಿಮಾಗಳ ಮೂಲಕ ಹೆಸರಾದವರು ವಿನೋದ್ ಪ್ರಭಾಕರ್. ಆದರೂ ಅವರು ಒಂದೇ ಬಗೆಯ ಪಾತ್ರಕ್ಕೆ ಸೀಮಿತವಾಗಿಲ್ಲ. ‘ಬಲರಾಮನ ದಿನಗಳು’ ಸಿನಿಮಾದಲ್ಲಿ ಅವರ ಪಾತ್ರ ಬೇರೆ ರೀತಿ ಇದೆ. ಟೀಸರ್ ನೋಡಿದ ಬಳಿಕ ಅದು ಸ್ಪಷ್ಟವಾಗಿದೆ. ಸಿನಿಮಾದ ನಿರ್ಮಾಪಕಿ ಪದ್ಮಾವತಿ ಅವರೇ ಟೀಸರ್ ಬಿಡುಗಡೆ ಮಾಡಿದರು. ಸಿನಿಮಾ ನಿರ್ಮಾಣಕ್ಕೆ ಕುಟುಂಬದವರು ನೀಡಿದ ಸಹಕಾರಕ್ಕೆ ಅವರು ಧನ್ಯವಾದ ತಿಳಿಸಿದರು. ಈ ಚಿತ್ರದಲ್ಲಿ ಅವರೊಂದು ಪಾತ್ರವನ್ನೂ ಮಾಡಿದ್ದಾರೆ.

‘ಬಲರಾಮನ ದಿನಗಳು’ ಟೀಸರ್:

‘ಮಾದೇವ’ ಸಿನಿಮಾದ ಬಳಿಕ ವಿನೋದ್ ಪ್ರಭಾಕರ್ ಅವರು ‘ಬಲರಾಮನ ದಿನಗಳು’ ಚಿತ್ರದಲ್ಲಿ ನಟಿಸಿದ್ದಾರೆ. ‘ಮಾದೇವ’ ಚಿತ್ರಕ್ಕಿಂತಲೂ ದೊಡ್ಡ ಯಶಸ್ಸು ಈ ಸಿನಿಮಾಗೆ ಸಿಗಲಿದೆ ಎಂಬ ಭರವಸೆ ಅವರಿಗೆ ಇದೆ. ವಿನೋದ್ ಪ್ರಭಾಕರ್ ಜೊತೆ ಆಶಿಷ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ, ರಮೇಶ್ ಇಂದಿರಾ, ಶರತ್ ಲೋಹಿತಾಶ್ವ, ವಿನಯ್ ಗೌಡ, ರಜತ್, ಡ್ರ್ಯಾಗನ್ ಮಂಜು, ಪ್ರತಾಪ್ ನಾರಾಯಣ್, ಅಶ್ವಿನ್ ಹಾಸನ್ ಮಂತಾದ ಕಲಾವಿದರು ನಟಿಸಿದ್ದಾರೆ. ಪ್ರಿಯಾ ಆನಂದ್ ಅವರು ಈ ಚಿತ್ರಕ್ಕೆ ನಾಯಕಿ.

‘ಆ ದಿನಗಳು’ ಖ್ಯಾತಿಯ ಕೆ.ಎಂ. ಚೈತನ್ಯ ಅವರು ‘ಬಲರಾಮನ ದಿನಗಳು’ ಚಿತ್ರಕ್ಕೆ ನಿರ್ದೇಶನ ಮಾಡಿರುವುದರಿಂದ ಟೀಸರ್​ನಲ್ಲಿ ಆ ಫ್ಲೇವರ್ ಕಾಣಿಸಿದೆ. ತಮ್ಮೊಂದಿಗೆ ಕೈ ಜೋಡಿಸಿದ ಸಹಾಯಕ ನಿರ್ದೇಶಕರ ತಂಡವನ್ನು ಅವರು ವೇದಿಕೆಗೆ ಕರೆದು ಪರಿಚಯ ಮಾಡಿಸಿದರು. ಹಾಡುಗಳನ್ನು ಬರೆದ ಕವಿರಾಜ್, ನಾಗಾರ್ಜುನ ಶರ್ಮ, ಪ್ರಮೋದ್ ಮರವಂತೆ ಕೂಡ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: ವಿನೋದ್ ಪ್ರಭಾಕರ್ ನಟನೆಯ ‘ಬಲರಾಮನ ದಿನಗಳು’ಗೆ ಗೃಹ ಸಚಿವರ ಶುಭಾಶಯ

‘18 ವರ್ಷಗಳ ಹಿಂದೆ ‘ಆ ದಿನಗಳು’ ಸಿನಿಮಾ ಮಾಡಿದ್ದೆ. ಆ ಚಿತ್ರದ ರೀತಿಯೇ ಈ ಸಿನಿಮಾ ಮೂಡಿಬರಬೇಕು ಎಂಬ ಆಶಯ ನಿರ್ಮಾಪಕರಿಗೆ ಇತ್ತು. ಆಶಿಷ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ ಈ ಸಿನಿಮಾದಲ್ಲಿ ಇರಲೇಬೇಕು ಅಂತ ಒತ್ತಾಯಿಸಿದ್ದೇ ನಿರ್ಮಾಪಕರು. ಅವರಿಂದಾಗಿ ಈ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ’ ಎಂದು ಕೆ.ಎಂ. ಚೈತನ್ಯ ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹನಿಮೂನ್ ವೇಳೆ ಗಂಡ ರಾಜ ರಘುವಂಶಿಯನ್ನು ಕೊಂದಿದ್ದ ಸೋನಮ್ ರಘುವಂಶಿಗೆ ಸಿಕ್ಕೇ ಬಿಟ್ಟಿತು ಜಾಮೀನು – Kannada News | Raja Raghuvanshi murder accused Sonam Raghuvanshi gets Bail Meghalaya honeymoon case

ಮೇಘಾಲಯ, ಏಪ್ರಿಲ್ 28: ಶಿಲ್ಲಾಂಗ್‌ನ ನ್ಯಾಯಾಲಯವು ಇಂದು ರಾಜ ರಘುವಂಶಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸೋನಮ್ ರಘುವಂಶಿಗೆ (Sonam Raghuvanshi) ಜಾಮೀನು ನೀಡಿದೆ. ಇಂದೋರ್ ಮೂಲದ ಉದ್ಯಮಿ ರಾಜ ರಘುವಂಶಿ ಅವರನ್ನು ಮೇ 2025ರಲ್ಲಿ ಅವರ ಪತ್ನಿ ಸೋನಮ್ ಹಾಗೂ ಇತರೆ ಮೂವರು ಕೊಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಜಾಮೀನು ನೀಡುವಾಗ ಸೋನಮ್ ರಘುವಂಶಿ ಶಿಲ್ಲಾಂಗ್‌ನಿಂದ ಹೊರಹೋಗಬಾರದು. ಅವರ ಹಾಜರಾತಿಯನ್ನು ಗುರುತಿಸಲು ಪ್ರತಿದಿನ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ಸಹಿ ಹಾಕಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಇಂದೋರ್ ಉದ್ಯಮಿ ರಾಜ ರಘುವಂಶಿ ಅವರ ಕೊಲೆಯನ್ನು ಪ್ಲಾನ್ ಮಾಡಿ, ಆತನನ್ನು ಕೊಂದಿದ್ದಕ್ಕಾಗಿ ಸೋನಮ್ ಹಾಗೂ ಆಕೆಯ ಪ್ರೇಮಿ ರಾಜ್ ಕುಶ್ವಾಹ ಮತ್ತು ಇತರ ಮೂವರನ್ನು ಬಂಧಿಸಲಾಗಿದೆ. ಮೇ 20ರಂದು ದಂಪತಿ ತಮ್ಮ ಹನಿಮೂನ್‌ಗಾಗಿ ಗುವಾಹಟಿ ಮತ್ತು ಶಿಲ್ಲಾಂಗ್‌ಗೆ ಹೋಗಿದ್ದರು. ಆದರೆ ಮೇ 23ರಂದು ಅವರಿಬ್ಬರೂ ಕಾಣೆಯಾಗಿದ್ದರು. ಸುಮಾರು 10 ದಿನಗಳ ಹುಡುಕಾಟದ ನಂತರ, ಜೂನ್ 2ರಂದು ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಸೊಹ್ರಾದಲ್ಲಿನ ಆಳವಾದ ಕಂದಕದಲ್ಲಿ ರಾಜ ರಘುವಂಶಿಯ ಶವ ಪತ್ತೆಯಾಗಿತ್ತು. ನಂತರ ಸೋನಮ್ ಘಾಜಿಪುರದಲ್ಲಿ ಪತ್ತೆಯಾಗಿದ್ದರು. ಇದು ದರೋಡೆಕೋರರ ಕೆಲಸ ಎಂದು ಆಕೆ ಪೊಲೀಸರನ್ನು ನಂಬಿಸಲು ಪ್ರಯತ್ನ ಮಾಡಿದ್ದರು. ಅದಕ್ಕೆ ತಕ್ಕಂತೆ ಪ್ಲಾನ್ ಮಾಡಲಾಗಿತ್ತು. ಆದರೆ, ಪೊಲೀಸರ ತನಿಖೆ ವೇಳೆ ಸೋನಮ್​ಳ ಸಂಚು ಬಯಲಾಗಿತ್ತು.

ಇದನ್ನೂ ಓದಿ: 10 ವರ್ಷಗಳ ಪ್ರೀತಿ, ಹತ್ತಾರು ಬಾರಿ ದೈಹಿಕ ಸಂಬಂಧ: ಈಗ ಮದುವೆ ಮಾತು ಬಂದಾಗ ಯುವಕನಿಂದ ಕೊಲೆ ಬೆದರಿಕೆ

ಸೋನಮ್ ಮತ್ತು ಇತರ ನಾಲ್ವರು ಆರೋಪಿಗಳಾದ ಸೋನಮ್​ಳ ಪ್ರೇಮಿ ರಾಜ್ ಕುಶ್ವಾಹ ಮತ್ತು ಸಹಚರರಾದ ಆಕಾಶ್ ರಜಪೂತ್, ವಿಶಾಲ್ ಸಿಂಗ್ ಚೌಹಾಣ್ ಮತ್ತು ಆನಂದ್ ಕುರ್ಮಿ ​​ಅವರನ್ನು ಬಂಧಿಸಲಾಗಿದ್ದು, ಈಗ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ರಾಜ್ ಕುಶ್ವಾಹ ಜೊತೆಗಿನ ಪ್ರೇಮ ಸಂಬಂಧ ಇಷ್ಟವಿಲ್ಲದ ಸೋನಮ್​ಳ ಕುಟುಂಬಸ್ಥರು ಆಕೆಯನ್ನು ರಾಜ ರಘುವಂಶಿಯೊಂದಿಗೆ ಮದುವೆ ಮಾಡಿದ್ದರು. ಹೀಗಾಗಿ, ಸೋನಮ್ ತನ್ನ ಗಂಡನನ್ನು ಕೊಲೆ ಮಾಡಲು ಪ್ರೇಮಿಯೊಂದಿಗೆ ಸಂಚು ಮಾಡಿದ್ದರು.

ಇದನ್ನೂ ಓದಿ: ಹೆಂಡತಿಯನ್ನು ಕೊಚ್ಚಿ ಕೊಲೆಗೈದು ಮಗುವಿನೊಂದಿಗೆ ಬಾವಿಗೆ ಹಾರಿದ ಗಂಡ; ಸ್ಥಳೀಯರಿಂದ ಮಗುವಿನ ರಕ್ಷಣೆ, ಲಕ್ಷ್ಮೀಪುತ್ರ ಸಾವು!

2025ರ ಈ ಪ್ರಕರಣದ ಟೈಮ್​​ಲೈನ್:

ಮೇ 11: ರಾಜ ರಘುವಂಶಿ ಇಂದೋರ್‌ನಲ್ಲಿ ಸೋನಮ್ ಅವರನ್ನು ವಿವಾಹವಾದರು.

ಮೇ 20: ದಂಪತಿ ತಮ್ಮ ಹನಿಮೂನ್‌ಗಾಗಿ ಶಿಲ್ಲಾಂಗ್ ತಲುಪಿದರು ಮತ್ತು ನಂತರ ಸೊಹ್ರಾಗೆ ತೆರಳಿದರು.

ಮೇ 23: ದಂಪತಿ ನೊಂಗ್ರಿಯಾಟ್ ಹೋಮ್ ಸ್ಟೇಯಿಂದ ಹೊರಬಂದರು. ಅಲ್ಲೇ ರಾಜ ಸಿಸಿಟಿವಿಯಲ್ಲಿ ಕೊನೆಯದಾಗಿ ಜೀವಂತವಾಗಿ ಕಾಣಿಸಿಕೊಂಡಿದ್ದು. ವೀ ಸಾವ್ಡಾಂಗ್ ಜಲಪಾತದ ಬಳಿ ಕೊಲೆ ಅವರನ್ನು ಕೊಲೆ ಮಾಡಲಾಗಿತ್ತು.

ಮೇ 26: ದಂಪತಿ ಕಾಣೆಯಾಗಿದ್ದಾರೆ ಎಂದು ವರದಿಯಾಗಿತ್ತು. ಅವರಿಗಾಗಿ ಶೋಧ ಕಾರ್ಯಾಚರಣೆ ಪ್ರಾರಂಭವಾಯಿತು.

ಮೇ 31: ಗೋಲ್ಡನ್ ಪೈನ್ಸ್ ಧಾಬಾ ಬಳಿ ಅವರು ತೆಗೆದುಕೊಂಡ ಹೋಗಿದ್ದ ಸ್ಕೂಟರ್ ಪತ್ತೆಯಾಗಿತ್ತು.

ಜೂನ್ 2: ಅರ್ಲಿಯಾಂಗ್ ರಿಯಾತ್ ಕುನೊಂಗ್ರಿಮ್‌ನಲ್ಲಿರುವ ಕಣಿವೆಯಲ್ಲಿ ರಾಜ ಅವರ ಛಿದ್ರಗೊಂಡ ಮೃತದೇಹ ಪತ್ತೆಯಾಗಿತ್ತು.

ಜೂನ್ 8-11: ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಸೋನಮ್, ರಾಜ್ ಕುಶ್ವಾಹ ಮತ್ತು ಮೂವರು ಹಲ್ಲೆಕೋರರನ್ನು ಎಸ್‌ಐಟಿ ಬಂಧಿಸಿತು.

ಜೂನ್ 22-25: ಸಾಕ್ಷ್ಯ ನಾಶಕ್ಕಾಗಿ ಮಧ್ಯಪ್ರದೇಶದಲ್ಲಿ ಜೇಮ್ಸ್, ತೋಮರ್ ಮತ್ತು ಅಹಿರ್ವಾರ್ ಅವರನ್ನು ಬಂಧಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸುಲ್ತಾನಗಂಜ್ ಪುರಸಭೆಯಲ್ಲಿ ಗುಂಡಿನ ದಾಳಿ; ಇಒ ಸಾವು, ಅಧ್ಯಕ್ಷರ ಸ್ಥಿತಿ ಗಂಭೀರ – Kannada News | Bihar Officer died Chairman injured after firing inside the Sultanganj Nagar Parishad office in Bhagalpur

ಭಾಗಲ್ಪುರ, ಏಪ್ರಿಲ್ 28: ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿರುವ ಸುಲ್ತಾನಗಂಜ್ ಪುರಸಭೆ ಕಚೇರಿಯಲ್ಲಿ ಇಂದು ಹಗಲು ಹೊತ್ತಿನಲ್ಲಿಯೇ ಮನಬಂದಂತೆ ಗುಂಡು ಹಾರಿಸಿದ ಘಟನೆ ನಡೆದಿದೆ. ಈ ದಾಳಿಯಲ್ಲಿ ಪುರಸಭೆ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಭೂಷಣ್ ಕುಮಾರ್ ಸಾವನ್ನಪ್ಪಿದ್ದು, ಅಧ್ಯಕ್ಷ ರಾಜ್‌ಕುಮಾರ್ ಗುಡ್ಡು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಇಡೀ ಪ್ರದೇಶದಲ್ಲಿ ಆತಂಕ ಉಂಟುಮಾಡಿತು. ಬುಲೆಟ್ ಬೈಕ್​ಗಳಲ್ಲಿ ಬಂದ ಐವರು ದಾಳಿಕೋರರು ಯಾವುದೇ ಮುನ್ಸೂಚನೆ ನೀಡದೆ ಗುಂಡು (firing) ಹಾರಿಸಿದರು. ಸಿಇಒ ಮತ್ತು ಅಧ್ಯಕ್ಷರ ಮೇಲೆ ಗುಂಡು ಹಾರಿಸಲಾಯಿತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಪ್ರಕರಣದ ತನಿಖೆಗಾಗಿ ಹಲವಾರು ತಂಡಗಳನ್ನು ರಚಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಸೇರಿ 8 ಜಿಲ್ಲೆಗಳಲ್ಲಿ ಮುಂದಿನ 3 ದಿನ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ! – Kannada News | Karnataka Weather Update: IMD Issues Yellow Alert for South Interior Districts; Heavy Rain Forecasted for April 30 and May 1

ಬೆಂಗಳೂರು, ಏ.28: ರಾಜ್ಯದ ಅನೇಕ ಕಡೆ ಇಂದು (ಏ.28) ಹಲವು ಕಡೆ ಮಳೆಯಾಗಿದೆ. ಕೆಲವೊಂದು ಕಡೆ ಆಲಿಕಲ್ಲು ಮಳೆಯಾಗಿದೆ. ಇನ್ನು ಕೆಲವು ಭಾಗದಲ್ಲಿ ಬಿಸಿಲಿನ ಬಿಸಿ ಇತ್ತು. ಇದೀಗ ಈ ಬಿಸಿಲಿನ ಬಿಸಿಲಿನ ಬೇಗೆಯಿಂದ ಮುಕ್ತಿ ಸಿಗುವ ಮುನ್ಸೂಚನೆ ಸಿಕ್ಕಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ವರದಿಯ ಪ್ರಕಾರ, ಏಪ್ರಿಲ್ ಅಂತ್ಯ ಹಾಗೂ ಮೇ ತಿಂಗಳ ಆರಂಭದಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಏಪ್ರಿಲ್ 30 ಮತ್ತು ಮೇ 1 ರಂದು ಮಳೆ ಅಬ್ಬರ ಹೆಚ್ಚಿರಲಿದೆ. ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಸುಮಾರು 64.5mm ನಿಂದ 115.5mm ವರೆಗೆ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಹವಾಮಾನ ಇಲಾಖೆಯು ಈ ಭಾಗಗಳಿಗೆ #ಎಲ್ಲೋಅಲರ್ಟ್ (Yellow Alert) ನೀಡಿದೆ.

ಯಾವ ಜಿಲ್ಲೆಗಳಿಗೆ ಮಳೆ ಸಾಧ್ಯತೆ?

ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಮತ್ತು ರಾಮನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಏಪ್ರಿಲ್ 29 ರಂದು ಕೆಲವು ಕಡೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಏಪ್ರಿಲ್ 29 ರವರೆಗೆ ಬಿಸಿಲಿನ ತಾಪ ಹೆಚ್ಚಿದ್ದರೂ, ಏಪ್ರಿಲ್ 30 ರಿಂದ ಮಳೆಯ ಕಾರಣ ತಾಪಮಾನದಲ್ಲಿ ಗಣನೀಯ ಇಳಿಕೆಯಾಗಲಿದೆ. ಮೇ 1 ರ ವೇಳೆಗೆ ವಾತಾವರಣ ಸಾಕಷ್ಟು ತಂಪಾಗಲಿದೆ. ಮಳೆಯ ಮುನ್ಸೂಚನೆ ಇರುವುದರಿಂದ ಗಾಳಿಯಲ್ಲಿ ತೇವಾಂಶ ಹೆಚ್ಚಿರಲಿದೆ. ಇದರಿಂದ ಮಳೆಗೆ ಮುನ್ನ ಸೆಖೆ ಮತ್ತು ಮಳೆಯ ನಂತರ ತಂಪು ಅನುಭವವಾಗಲಿದೆ. ಗುಡುಗು ಸಹಿತ ಮಳೆಯಾಗುವ ಸಂದರ್ಭದಲ್ಲಿ ಗಾಳಿಯ ವೇಗ ಹೆಚ್ಚಿರಲಿದ್ದು, ಗಂಟೆಗೆ 30 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಇದು ರಾಷ್ಟ್ರೀಯ ಹೆದ್ದಾರಿಯೋ ಅಥವಾ ಕೆಸರು ಗದ್ದೆಯೋ? ಶಿರಸಿ-ಹಾವೇರಿ ರಸ್ತೆಯಲ್ಲಿ ನರಕಯಾತನೆ

ಇನ್ನು ಈ ವೇಳೆ ಸಾರ್ವಜನಿಕರಿಗೆ ಕೆಲವೊಂದು ಎಚ್ಚರಿಕೆ ಕ್ರಮಗಳನ್ನು ವಹಿಸಿಕೊಳ್ಳುವಂತೆ ಸಲಹೆಯನ್ನು ನೀಡಲಾಗಿದೆ. ಗುಡುಗು-ಮಿಂಚಿನ ಸಮಯದಲ್ಲಿ ಟಿವಿ, ಫ್ರಿಡ್ಜ್ ಅಂತಹ ವಿದ್ಯುತ್ ಉಪಕರಣಗಳ ಪ್ಲಗ್ ತೆಗೆಯಿರಿ. ಏಪ್ರಿಲ್ 30 ಮತ್ತು ಮೇ 1 ರಂದು ಭಾರಿ ಮಳೆಯಿಂದಾಗಿ ನಗರ ಪ್ರದೇಶಗಳಲ್ಲಿ (ವಿಶೇಷವಾಗಿ ಬೆಂಗಳೂರಿನಲ್ಲಿ) ರಸ್ತೆಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಇದೆ, ಸಂಚಾರದ ವೇಳೆ ಜಾಗರೂಕರಾಗಿರಿ. ರೈತರು ಕೊಯ್ಲು ಮಾಡಿದ ಬೆಳೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಟ್ಟುಕೊಳ್ಳಲು ಇದು ಸೂಕ್ತ ಸಮಯ ಎಂದು ಹೇಳಿದ್ದಾರೆ.

ಬೆಂಗಳೂರು ನಗರದ ಹಲವೆಡೆ ಮಳೆ

ಪೀಣ್ಯ, ರಾಜಗೋಪಾಲನಗರ, ಮಾಗಡಿ ರಸ್ತೆಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಬಿರು ಬಿಸಿಲಿನಿಂದ ಬಳಲಿದ್ದ ಬೆಂಗಳೂರು ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಪೀಣ್ಯಾ, ರಾಜಗೋಪಾಲನಗರ, ಮಾಗಡಿ ರೋಡ್ ಬಳಿ ಆಲಿಕಲ್ಲು ಸಹಿತ ಮಳೆಯಾಗಿದೆ.

ಬೆಂಗಳೂರು ಗ್ರಾಮಾಂತರ: ಸಿಡಿಲು ಬಡಿದು ಲಕ್ಷಾಂತರ ಮೌಲ್ಯದ ಹಸು ಸಾವು

ಸಿಡಿಲಿನ ಆರ್ಭಟಕ್ಕೆ ಮೂಕಪ್ರಾಣಿಗಳು ಬಲಿಯಾಗುತ್ತಿವೆ. ಸೋಂಪುರ ಹೋಬಳಿಯ ಮರಳಕುಂಟೆ ಗ್ರಾಮದಲ್ಲಿ ಮರಕ್ಕೆ ಕಟ್ಟಿದ್ದ ಹಸುವಿನ ಮೇಲೆ ಸಿಡಿಲು ಬಡಿದು, ಸ್ಥಳದಲ್ಲೇ ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದೆ. ಮರಳಕುಂಟೆ ಗ್ರಾಮದ ನಿವಾಸಿ, ರೈತ ವೀರಣ್ಣ ಅವರಿಗೆ ಸೇರಿದ ಹಸು ಇದಾಗಿದೆ. ವೀರಣ್ಣ ಅವರು ಎಂದಿನಂತೆ ತಮ್ಮ ಮನೆಯ ಮುಂದಿನ ಹಲಸಿನ ಮರದ ಕೆಳಗೆ ಹಸುವನ್ನು ಕಟ್ಟಿದ್ದರು. ಈ ವೇಳೆ ನಗರದಾದ್ಯಂತ ಗುಡುಗು ಸಹಿತ ಭಾರಿ ಮಳೆ ಸುರಿಯುತ್ತಿತ್ತು. ತೀವ್ರವಾಗಿ ಸಂಭವಿಸಿದ ಸಿಡಿಲಿನ ಹೊಡೆತಕ್ಕೆ ಹಲಸಿನ ಮರದ ಕೆಳಗೆ ಆಶ್ರಯ ಪಡೆದಿದ್ದ ಹಸು ಬಲಿಯಾಗಿದೆ. ಮೃತಪಟ್ಟ ಹಸುವಿನ ಮೌಲ್ಯ ಸುಮಾರು 80 ಸಾವಿರದಿಂದ 1 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ತನ್ನ ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಹಸುವನ್ನು ಕಳೆದುಕೊಂಡ ರೈತ ವೀರಣ್ಣ ಇದೀಗ ಆತಂಕ ಮತ್ತು ಆಘಾತಕ್ಕೆ ಒಳಗಾಗಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಮರಳಕುಂಟೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಹಸುವನ್ನು ಪಶುವೈದ್ಯರು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ವರದಿ ಬಂದ ನಂತರ ರೈತರಿಗೆ ಸರ್ಕಾರದಿಂದ ಸಿಗಬೇಕಾದ ಪರಿಹಾರದ ಬಗ್ಗೆ ಮಾಹಿತಿ ಲಭ್ಯವಾಗಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನ ಹೇಗಿತ್ತು ನೋಡಿ

ಬೆಂಗಳೂರು, ಏಪ್ರಿಲ್​​ 28: ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಬೆಂಗಳೂರಿನಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಜಿ ಕಚೇರಿ ಮೈದಾನದಲ್ಲಿ ಮಾಕ್​ಡ್ರಿಲ್ ನಡೆಸಲಾಗಿದೆ. ಅಣಕು ಪ್ರದರ್ಶನದಲ್ಲಿ ಅಗ್ನಿಶಾಮಕ ದಳ, ಗೃಹರಕ್ಷಕ ದಳ, ಸಿವಿಲ್ ಡಿಫೆನ್ಸ್​​ ಭಾಗಿಯಾಗಿದ್ದವು. ತುರ್ತು ಸಂದರ್ಭ ಅಥವಾ ಏರ್​ಸ್ಟ್ರೈಕ್ ಆದಾಗ ಪರಿಸ್ಥಿತಿ ಎದುರಿಸಲು ಯಾವ ರೀತಿ ಸನ್ನದ್ಧರಾಗಬೇಕೆಂದು ಮಾಹಿತಿ ನೀಡಲಾಯಿತು. ಏರ್​ಸ್ಟ್ರೈಕ್ ಸಂದರ್ಭದಲ್ಲಿ ಸೈರನ್ ಮೊಳಗಿದ ತಕ್ಷಣ ಮತ್ತು ರೆಡ್​ಅಲರ್ಟ್ ಸೈರನ್ ಮೊಳಗಿದ ಕೂಡಲೇ ಸುರಕ್ಷಿತ ಜಾಗಕ್ಕೆ ಜನರನ್ನು ಹೇಗೆ ಸ್ಥಳಾಂತರ ಮಾಡಬೇಕೆಂದು ತಿಳಿಸಿಕೊಡಲಾಯಿತು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Important Days In May 2026: ಮೇ ತಿಂಗಳ ಪ್ರಮುಖ ರಾಷ್ಟ್ರೀಯ-ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ – Kannada News | Important Days In May 2026: What are the important national and international days celebrated in the month of May

ಧಾರ್ಮಿಕ ಹಬ್ಬ, ಹರಿದಿನಗಳನ್ನು ಆಚರಿಸುವಂತೆ ಪ್ರತಿ ತಿಂಗಳು ಸಹ ಒಂದಷ್ಟು ಪ್ರಮುಖ ರಾಷ್ಟ್ರೀಯ ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಒಂದೊಂದು ಉದ್ದೇಶ, ಧ್ಯೇಯವಾಕ್ಯಗಳನ್ನು ಇಟ್ಟುಕೊಂಡು ಜನ ಜಾಗೃತಿಯನ್ನು ಮೂಡಿಸುವ ಸಲುವಾಗಿ ಈ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಇನ್ನೇನೂ ವರ್ಷದ 5 ನೇ ತಿಂಗಳಾದ ಮೇ (May) ಆರಂಭವಾಗುತ್ತಿದ್ದು, ಈ ತಿಂಗಳಲ್ಲಿ ಯಾವೆಲ್ಲಾ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ ಎಂಬುದನ್ನು ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ಮೇ ತಿಂಗಳಲ್ಲಿನ ರಾಷ್ಟ್ರೀಯ ಅಂತಾರಾಷ್ಟ್ರೀಯ ಕಾರ್ಯಕ್ರಮಗಳು:

  • ಮೇ 1 – ಕಾರ್ಮಿಕರ ದಿನ
  • ಮೇ 1 – ಬುದ್ಧ ಪೂರ್ಣಿಮೆ
  • ಮೇ 3 – ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ
  • ಮೇ 3 – ವಿಶ್ವ ನಗು ದಿನ
  • ಮೇ 4 – ಅಂತರರಾಷ್ಟ್ರೀಯ ಅಗ್ನಿಶಾಮಕ ದಳದವರ ದಿನ
  • ಮೇ 5 – ವಿಶ್ವ ಆಸ್ತಮಾ ದಿನ
  • ಮೇ 7 – ವಿಶ್ವ ಅಥ್ಲೆಟಿಕ್ಸ್ ದಿನ
  • ಮೇ 8 – ವಿಶ್ವ ರೆಡ್ ಕ್ರಾಸ್ ದಿನ
  • ಮೇ 8 – ವಿಶ್ವ ಥಲಸ್ಸೆಮಿಯಾ ದಿನ
  • ಮೇ 10 – ತಾಯಂದಿರ ದಿನ
  • ಮೇ 11 – ರಾಷ್ಟ್ರೀಯ ತಂತ್ರಜ್ಞಾನ ದಿನ
  • ಮೇ 12 – ಅಂತರರಾಷ್ಟ್ರೀಯ ದಾದಿಯರ ದಿನ
  • ಮೇ 15 – ಅಂತರರಾಷ್ಟ್ರೀಯ ಕುಟುಂಬಗಳ ದಿನ
  • ಮೇ 17 – ವಿಶ್ವ ಅಧಿಕ ರಕ್ತದೊತ್ತಡ ದಿನ
  • ಮೇ 17 – ವಿಶ್ವ ದೂರಸಂಪರ್ಕ ದಿನ
  • ಮೇ 17 – ಸಶಸ್ತ್ರ ಪಡೆಗಳ ದಿನ
  • ಮೇ 18 – ವಿಶ್ವ ಏಡ್ಸ್ ಲಸಿಕೆ ದಿನ
  • ಮೇ 18 – ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನ
  • ಮೇ 21 – ಅಂತರರಾಷ್ಟ್ರೀಯ ಚಹಾ ದಿನ
  • ಮೇ 21 – ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ
  • ಮೇ 22 – ಅಂತರರಾಷ್ಟ್ರೀಯ ಜೈವಿಕ ವೈವಿಧ್ಯತೆ ದಿನ
  • ಮೇ 24 – ರಾಷ್ಟ್ರೀಯ ಸಹೋದರರ ದಿನ
  • ಮೇ 26 – ರಾಷ್ಟ್ರೀಯ ಸ್ಮಾರಕ ದಿನ
  • ಮೇ 28 – ಮುಟ್ಟಿನ ನೈರ್ಮಲ್ಯ ದಿನ
  • ಮೇ 31 – ವಿಶ್ವ ತಂಬಾಕು ರಹಿತ ದಿನ

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಚೇತನ್ ನಿಜವಾಗಿಯೂ ಒಬ್ಬ ಅರೆಹುಚ್ಚ’: ಸಾರಾ ಗೋವಿಂದು ಖಡಕ್ ಪ್ರತಿಕ್ರಿಯೆ – Kannada News | Chetan Ahimsa is not mentally stable says Sa Ra Govind in Dr Rajkumar Samadhi row

ನಟ ಚೇತನ್ ಅಹಿಂಸಾ ಅವರು ಡಾ. ರಾಜ್​ಕುಮಾರ್ ಸಮಾಧಿ (Dr Rajkumar Samadhi) ಜಾಗಕ್ಕೆ ಸಂಬಂಧಿಸಿದಂತೆ ನೀಡಿದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣ ಆಗಿದೆ. ಸಮಾಧಿಗೆ ಎರಡೂವರೆ ಎಕರೆ ಜಾಗ ನೀಡಿದ್ದು ಸರಿಯಲ್ಲ ಎಂದು ಅನೇಕರು ವಿರೋಧಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ‘ಚೇತನ್ ಕ್ಷಮೆ ಕೇಳಿದ ಬಳಿಕ ಮತ್ತೆ ಮಾತು ಬದಲಿಸಿದ್ದಾನೆ. ನಿಜವಾಗಿಯೂ ಅವನು ಒಬ್ಬ ಅರೆಹುಚ್ಚ. ಅವನಿಗೆ ಯೋಚನಾ ಶಕ್ತಿ ಇಲ್ಲ. ಅಂಥವರನ್ನು ನಮ್ಮ ಜೊತೆ ಇಟ್ಟುಕೊಂಡರೆ ನಮಗೂ ಕೆಟ್ಟ ಹೆಸರು ಬರುತ್ತದೆ. ಅವನು ಯಾವುದೇ ಸಿನಿಮಾದಲ್ಲಿ ನಟಿಸಿದರೂ ಅದನ್ನು ಬಹಿಷ್ಕರಿಸಬೇಕು ಅಂತ ಜನರು ತೀರ್ಮಾನ ಮಾಡಿದ್ದಾರೆ’ ಎಂದು ಸಾರಾ ಗೋವಿಂದು (Sa Ra Govind) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೇಸಿಗೆಯಲ್ಲಿ ಮಕ್ಕಳು ಡಿಹೈಡ್ರೇಟ್ ಆಗುವುದನ್ನು ತಡೆಯಲು ಡಾ. ಹರೀಶ್ ನೀಡಿರುವ ಸಲಹೆ ತಪ್ಪದೆ ಪಾಲಿಸಿ – Kannada News | Keep Kids Hydrated in Hot Weather: Expert Advice by Dr. Harish

Keep Kids Hydrated in Hot Weather: Expert Advice by Dr. Harish

ಮಕ್ಕಳು ಹೊರಾಂಗಣದಲ್ಲಿ ಆಟವಾಡುವಾಗ ಸಹಜವಾಗಿಯೇ ಹೆಚ್ಚು ಬೆವರುತ್ತಾರೆ, ಇದರಿಂದ ದೇಹ ಬೇಗ ಡಿಹೈಡ್ರೇಟ್ ಆಗುತ್ತದೆ. ಸರಿಯಾದ ಪ್ರಮಾಣದಲ್ಲಿ ನೀರು ಮತ್ತು ಅನ್ಯ ದ್ರವ್ಯಗಳ ಸೇವನೆಯಿಂದ ನಷ್ಟವಾದ ದ್ರವಗಳನ್ನು ಸಮರ್ಪಕವಾಗಿ ಮರುಪೂರಣಗೊಳಿಸದಿದ್ದರೆ ಮಕ್ಕಳಲ್ಲಿ ನಿರ್ಜಲೀಕರಣ (Dehydration) ಉಂಟಾಗುವ ಸಾಧ್ಯತೆ ಇರುತ್ತದೆ. ಇದರ ಪರಿಣಾಮವಾಗಿ ಬಾಯಿ ಒಣಗುವುದು, ಮೂತ್ರ ಪ್ರಮಾಣ ಕಡಿಮೆಯಾಗುವುದು, ದೌರ್ಬಲ್ಯ, ಕಿರಿಕಿರಿ ಮುಂತಾದ ಲಕ್ಷಣಗಳು ಕಾಣಿಸಬಹುದು. ವಿಶೇಷವಾಗಿ ಶಿಶು ಮತ್ತು ಚಿಕ್ಕ ಮಕ್ಕಳಿಗೆ ಬಾಯಾರಿಕೆಯಾಗುವುದನ್ನು ಸರಿಯಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲ, ಆದ್ದರಿಂದ ಡಿಹೈಡ್ರೇಷನ್ ಬೇಗ ಉಂಟಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಈ ವಿಷಯವಾಗಿ ಪೋಷಕರು ಹೆಚ್ಚಿನ ಗಮನ ಹರಿಸುವುದು ಮುಖ್ಯವಾಗುತ್ತದೆ. ಅದಕ್ಕಾಗಿಯೇ ಯೆಲಹಂಕ ಮಣಿಪಾಲ್ ಆಸ್ಪತ್ರೆಯ ಲೀಡ್ ಕನ್ಸಲ್ಟೆಂಟ್ – ಪೀಡಿಯಾಟ್ರಿಕ್ಸ್ ಮತ್ತು ಪೀಡಿಯಾಟ್ರಿಕ್ ನಿಯೋನೇಟಲ್ ಇಂಟೆನ್ಸಿವಿಸ್ಟ್ ಡಾ. ಹರೀಶ್ ಕುಮಾರ್ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ.

ಪೋಷಕರಿಗಾಗಿ ಸರಳ ಸಲಹೆ;

  • ಡಾ. ಹರೀಶ್ ಕುಮಾರ್ ಹೇಳುವ ಪ್ರಕಾರ ಮೊದಲು, ಮಕ್ಕಳಿಗೆ ನೀರು ಯಾವಾಗಲೂ ಸುಲಭವಾಗಿ ದೊರೆಯುವಂತೆ ನೋಡಿಕೊಳ್ಳಬೇಕು. ಶಾಲೆಯ ಬ್ಯಾಗ್, ಆಟದ ಸ್ಥಳ ಮತ್ತು ಹಾಸಿಗೆಯ ಬಳಿಯಲ್ಲಿ ನೀರಿನ ಬಾಟಲ್ ಇಡಿ. ಬಣ್ಣಬಣ್ಣದ ಬಾಟಲ್‌ಗಳು ಅಥವಾ ಸ್ಟ್ರಾ ಬಳಸಿ ಮಕ್ಕಳಿಗೆ ನೀರು ಕುಡಿಯುವ ಆಸಕ್ತಿ ಹೆಚ್ಚಿಸಿ. ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಾಟಲ್‌ಗಳನ್ನು ಬಳಕೆ ಮಾಡುವುದನ್ನು ತಪ್ಪಿಸಿ.
  • ಬರಿ ದಾಹವಾದಾಗ ಮಾತ್ರವಲ್ಲ, ಪ್ರತಿ 30– 60 ನಿಮಿಷಗಳಿಗೊಮ್ಮೆ ನೀರು ಕುಡಿಯಲು ಮಕ್ಕಳನ್ನು ಉತ್ತೇಜಿಸಿ. ಜೊತೆಗೆ, ಕಲ್ಲಂಗಡಿ, ಕರಬೂಜ, ಕಿತ್ತಳೆ, ಸೌತೆಕಾಯಿ, ಟೊಮೇಟೊ ಮುಂತಾದ ನೀರಿನಾಂಶ ಹೆಚ್ಚು ಇರುವ ಹಣ್ಣು, ತರಕಾರಿಗಳನ್ನು ಆಹಾರದಲ್ಲಿ ಸೇರಿಸುವುದನ್ನು ಮರೆಯಬೇಡಿ.
  • ದೇಹ ಹೈಡ್ರೇಟ್ ಆಗಿರಲು ಎಳನೀರು, ಮಜ್ಜಿಗೆ, ಲಿಂಬು ನೀರು (ಸ್ವಲ್ಪ ಉಪ್ಪಿನೊಂದಿಗೆ) ಮುಂತಾದ ದ್ರವಗಳ ಸೇವನೆಯ ರೂಢಿಮಾಡಿಸಿ. ಸಕ್ಕರೆಪೂರಿತ ಅಥವಾ ಪ್ಯಾಕೇಜ್ ಪಾನೀಯಗಳು, ಸೋಡಾ ಮುಂತಾದವುಗಳ ಸೇವನೆಯನ್ನು ಆದಷ್ಟು ತಪ್ಪಿಸಿ.
  • ತೀವ್ರವಾದ ಬಿಸಿಲಿನ ಸಮಯವಾದ ಮಧ್ಯಾಹ್ನ 11 ರಿಂದ 4 ಗಂಟೆಯ ವರೆಗೆ ಮಕ್ಕಳು ಹೊರಾಂಗಣ ಚಟುವಟಿಕೆಯಲ್ಲಿ ತೊಡಗದಂತೆ ನೋಡಿಕೊಳ್ಳಿ. ಈ ಸಮಯದಲ್ಲಿ ಮಕ್ಕಳು ಆದಷ್ಟು ಮನೆಯ ಒಳಗಡೆ ಅಥವಾ ನೆರಳಿನ ಸ್ಥಳಗಳಲ್ಲಿ ಇರುವುದು ಒಳ್ಳೆಯದು.
  • ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ವಾತಾವರಣಕ್ಕೆ ಸೂಕ್ತವಾದ ಬಟ್ಟೆಗಳನ್ನು ಬಳಸಿ, ಉದಾಹರಣೆಗೆ ಸಡಿಲವಾದ, ಹಗುರವಾದ, ಮತ್ತು ಗಾಳಿಯಾಡುವ ಹತ್ತಿ (ಕಾಟನ್) ಬಟ್ಟೆಗಳನ್ನು ಬಳಸಿ.
  • ಮಕ್ಕಳಲ್ಲಿ ಡಿಹೈಡ್ರೇಷನ್ ಲಕ್ಷಣಗಳಾದ ಒಣ ತುಟಿ, ಕಡಿಮೆ ಮೂತ್ರ, ತಲೆಸುತ್ತು ಅಥವಾ ದೌರ್ಬಲ್ಯ ಕಂಡುಬಂದರೆ ತಕ್ಷಣ ದ್ರವರೂಪದ ಆಹಾರಗಳ ಸೇವನೆಯನ್ನು ಹೆಚ್ಚಿಸಿ, ತಂಪಾದ ಸ್ಥಳದಲ್ಲಿ ವಿಶ್ರಾಂತಿ ಕೊಡಿಸಿ. ಶಿಶು ಮತ್ತು ಚಿಕ್ಕ ಮಕ್ಕಳಿಗೆ ವಿಶೇಷ ಕಾಳಜಿ ಅಗತ್ಯ. ತಾಯಿ ಹಾಲು ಅಥವಾ ಫಾರ್ಮುಲಾ ಆಹಾರವನ್ನು ನಿಯಮಿತವಾಗಿ ನೀಡುತ್ತಿರಿ.

ಈ ಸರಳ ಕ್ರಮಗಳಿಂದ ಬೇಸಿಗೆಯಲ್ಲೂ ಮಕ್ಕಳ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಾಲಾ ಕಾರ್ಯಕ್ರಮಗಳಲ್ಲಿ ಅಶ್ಲೀಲ ಹಾಡುಗಳಿಗೆ ಕೋಕ್​​: ಇವಿಷ್ಟೇ ಸಾಂಗ್​​ಗಳಿಗೆ ಮಾತ್ರ ಇನ್ಮುಂದೆ ಅವಕಾಶ – Kannada News | Karnataka Schools Ban Obscene Songs: New Guidelines for Cultural Events

ಬೆಂಗಳೂರು, ಏಪ್ರಿಲ್​​ 28: ಶಾಲಾ ವಾರ್ಷಿಕೋತ್ಸವ ಸೇರಿದಂತೆ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಸಭ್ಯ ಹಾಡುಗಳಿಗೆ ಮಕ್ಕಳು ನೃತ್ಯ ಮಾಡುವುದನ್ನು ಶಾಲಾ ಶಿಕ್ಷಣ ಇಲಾಖೆ ನಿಷೇಧಿಸಿದೆ. ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಹೊರಡಿಸಿರುವ ಸುತ್ತೋಲೆಯಲ್ಲಿ, ರಾಜ್ಯದ ಎಲ್ಲಾ ಶಾಲೆಗಳು (ಖಾಸಗಿ ಶಾಲೆಗಳೂ ಸೇರಿ) ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ. ಅಸಭ್ಯ ಹಾಡುಗಳಿಗೆ ಮಕ್ಕಳಿಂದ ನೃತ್ಯ ಮಾಡಿಸಿದರೆ, ಸಂಬಂಧಿತ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಾಲೆ ನಿರ್ವಹಣೆ ಮಾಡುವವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿದೆ.

ಯಾವೆಲ್ಲ ಹಾಡುಗಳಿಗೆ ಅವಕಾಶ?

ದೇಶಭಕ್ತಿ, ಪ್ರೇರಣಾದಾಯಕ ಹಾಗೂ ಸಕಾರಾತ್ಮಕ ಸಂದೇಶ ಹೊಂದಿರುವ ಹಾಡುಗಳನ್ನು ಮಕ್ಕಳ ನೃತ್ಯಕ್ಕೆ ಬಳಸಿಕೊಳ್ಳಬೇಕು. ಕನ್ನಡ ಮತ್ತು ಸಂಸ್ಕೃತಿ, ಮೌಲ್ಯಗಳನ್ನು ಉತ್ತೇಜಿಸುವ ಗೀತೆಗಳಿಗೆ ಆದ್ಯತೆ ನೀಡಬೇಕು. ಹಾಡುಗಳ ಆಯ್ಕೆ ಪ್ರಕ್ರಿಯೆಯಲ್ಲಿ ಮುಖ್ಯ ಶಿಕ್ಷಕರು ಸ್ವತಃ ಮುತುವರ್ಜಿವಹಿಸಬೇಕೆಂದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಮಕ್ಕಳಿಗೆ ಅನರ್ಹವಾಗಿರುವ ಅಶ್ಲೀಲ ಪದಗಳಿರುವ ಹಾಡುಗಳಿಗೆ ನೃತ್ಯ ಮಾಡುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದು ಮಕ್ಕಳ ತಪ್ಪಲ್ಲ, ಶಿಕ್ಷಕರು ಹಾಡಿನ ವಿಷಯವನ್ನು ಪರಿಶೀಲಿಸಿ ನಂತರವೇ ಅನುಮತಿ ನೀಡಬೇಕು ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಸಿಇಟಿ ವೇಳೆ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿದ ಪ್ರಕರಣ; ಕೃಪಾನಿಧಿ ಕಾಲೇಜಿಗೆ ಬಿಗ್​​ ಶಾಕ್​

ಬೆಂಗಳೂರಿನ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ ಈ ಸುತ್ತೋಲೆ ಹೊರಡಿಸಲಾಗಿದೆ. ಮದ್ಯಪಾನ, ಧೂಮಪಾನ ಇತ್ಯಾದಿ ವಿಷಯಗಳನ್ನು ಒಳಗೊಂಡ ಹಾಡುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದಲ್ಲದೆ, ವೇಷಭೂಷಣ ಆಯ್ಕೆಯಲ್ಲೂ ಶಿಕ್ಷಕರು ಗಮನಹರಿಸಬೇಕು. ವಿದ್ಯಾರ್ಥಿಗಳು ಶಿಸ್ತಿನ ಉಡುಪಿನಲ್ಲಿ ಕಾಣಿಸಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಕೆಲವು ಖಾಸಗಿ ಶಾಲೆಗಳು ಈಗಾಗಲೇ ಈ ನಿಯಮವನ್ನು ಅನುಸರಿಸಿ, ವಾರ್ಷಿಕೋತ್ಸವಗಳಲ್ಲಿ ಚಿತ್ರಗೀತೆಗಳನ್ನು ಬಳಸುವುದನ್ನು ತಪ್ಪಿಸುತ್ತಿವೆ. ಪ್ರತಿ ವರ್ಷ ವಿಭಿನ್ನ ಥೀಮ್‌ಗಳನ್ನು ಆಯ್ಕೆ ಮಾಡುತ್ತೇವೆ. ಚಿಕ್ಕ ಮಕ್ಕಳಿಗೆ ಹೂವು, ಪ್ರಾಣಿ, ಸಂಗೀತದಂತಹ ವಿಷಯಗಳ ಗೀತೆ ಬಳಸುತ್ತೇವೆ. ಹೈಸ್ಕೂಲ್ ವಿದ್ಯಾರ್ಥಿಗಳು ದೇಶಭಕ್ತಿ, ಇತಿಹಾಸ ಮತ್ತು ಜನಪದ ಗೀತೆಗಳಿಗೆ ನೃತ್ಯ ಮಾಡುತ್ತಿದ್ದಾರೆ ಎಂದು ನಗರದ ಖಾಸಗಿ ಶಾಲೆಯ ಪ್ರಾಂಶುಪಾಲರೊಬ್ಬರು ತಿಳಿಸಿರೋದಾಗಿ ಡೆಕ್ಕನ್​​ ಹೆರಾಲ್ಡ್​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link