Category Archives: Blog

Your blog category

ಸ್ಕ್ರೀನ್ ಟೈಮ್ ಹೆಚ್ಚಾದಂತೆ ಮೈಗ್ರೇನ್ ಸಮಸ್ಯೆ ಬರುತ್ತಾ? ತಡೆಗಟ್ಟಲು ಏನು ಮಾಡಬಹುದು – Kannada News | Is Screen Time Increasing Migraine? Causes, Symptoms, and Fixes

ಇತ್ತೀಚಿನ ಡಿಜಿಟಲ್ ಯುಗದಲ್ಲಿ ಮೊಬೈಲ್, ಲ್ಯಾಪ್‌ಟಾಪ್ ಮತ್ತು ಟಿವಿ ಬಳಕೆ ಹೆಚ್ಚುತ್ತಿರುವುದರಿಂದ ಸ್ಕ್ರೀನ್ ಟೈಮ್ ಕೂಡ ಗಣನೀಯವಾಗಿ ಏರಿಕೆಯಾಗಿದೆ. ಇದರ ಪರಿಣಾಮವಾಗಿ ಕಣ್ಣು ಮತ್ತು ಮೆದುಳಿನ ಮೇಲೆ ಒತ್ತಡ ಹೆಚ್ಚಾಗಿ, ತಲೆನೋವು ಹಾಗೂ ಮೈಗ್ರೇನ್ (Migraine) ಸಮಸ್ಯೆಗಳು ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಮಕ್ಕಳಿಂದ ದೊಡ್ಡವರ ವರೆಗೆ ಎಲ್ಲರೂ ಕೂಡ ಈ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಕೆಲವರು ಟೈಮ್ ಪಾಸ್ ಮಾಡಲು ಬಳಕೆ ಮಾಡುತ್ತಿದ್ದರೆ ಇನ್ನು ಕೆಲವರು ಕೆಲಸಕ್ಕಾಗಿ ಉಪಯೋಗ ಮಾಡುತ್ತಿದ್ದಾರೆ. ಕಾರಣ ಯಾವುದೇ ಇರಲಿ ಸ್ಕ್ರೀನ್ ಟೈಮ್ ಹೆಚ್ಚುತ್ತಿದ್ದು ಇದು ಮುಂದೆ ಮೈಗ್ರೇನ್ ಸಮಸ್ಯೆ ಹೆಚ್ಚಿಸಬಹುದಾಗಿದೆ. ಹಾಗಾದರೆ ಸ್ಕ್ರೀನ್ ಟೈಮ್ ಮತ್ತು ಮೈಗ್ರೇನ್ ನಡುವೆ ಸಂಬಂಧವಿದೆಯೇ, ಯಾರು ಹೆಚ್ಚು ಅಪಾಯದಲ್ಲಿದ್ದಾರೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸ್ಕ್ರೀನ್ ಟೈಮ್ ಮತ್ತು ಮೈಗ್ರೇನ್ ನಡುವಿನ ಸಂಬಂಧ:

ತಜ್ಞರ ಪ್ರಕಾರ, ಹೆಚ್ಚು ಸಮಯ ಸ್ಕ್ರೀನ್ ಮುಂದೆ ಕಳೆದರೆ ಕಣ್ಣುಗಳಿಗೆ ನಿರಂತರ ಒತ್ತಡ ಬೀಳುತ್ತದೆ. ವಿಶೇಷವಾಗಿ ಸ್ಕ್ರೀನ್‌ನಿಂದ ಹೊರಬರುವ ಬ್ಲೂ ಲೈಟ್ ಕಣ್ಣುಗಳನ್ನು ಬೇಗನೆ ಆಯಾಸವಾಗುವಂತೆ ಮಾಡುತ್ತದೆ. ಇದರಿಂದ ಮೆದುಳಿಗೂ ಒತ್ತಡ ಹೆಚ್ಚಾಗಿ ಮೈಗ್ರೇನ್ ಟ್ರಿಗರ್ ಆಗುವ ಸಾಧ್ಯತೆ ಇದೆ. ಕೆಲವರಿಗೆ ಮೈಗ್ರೇನ್ ಆರಂಭಕ್ಕೂ ಮುನ್ನ ಕಣ್ಣಲ್ಲಿ ಮಿನುಗುವ ಬೆಳಕು, ತಲೆ ಭಾರವಾಗಿರುವ ಅನುಭವ ಹಾಗೂ ಬೆಳಕಿಗೆ ಕಣ್ಣು ಬಿಡಲು ಸಾಧ್ಯವಾಗದಿರಬಹುದು.

ಇದನ್ನೂ ಓದಿ: ಮೈಗ್ರೇನ್ ಇದ್ಯಾ? ಹಾಗಿದ್ರೆ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ

ಯಾರು ಹೆಚ್ಚು ಅಪಾಯದಲ್ಲಿದ್ದಾರೆ?

ದಿನಪೂರ್ತಿ ಕಂಪ್ಯೂಟರ್ ಅಥವಾ ಮೊಬೈಲ್ ಬಳಕೆ ಮಾಡುವವರು ಮೈಗ್ರೇನ್ ಸಮಸ್ಯೆಗೆ ಹೆಚ್ಚು ಒಳಗಾಗುವ ಸಾಧ್ಯತೆ ಇದೆ. ಈಗಿನ ಕಾಲದಲ್ಲಿ ಮಕ್ಕಳು ಮತ್ತು ಯುವಕರಲ್ಲಿ ಈ ಸಮಸ್ಯೆ ಹೆಚ್ಚುತ್ತಿರುವುದು ಗಮನಾರ್ಹ. ಈಗಾಗಲೇ ಮೈಗ್ರೇನ್ ಇರುವವರಿಗೆ ಹೆಚ್ಚು ಸ್ಕ್ರೀನ್ ಬಳಕೆ ಸಮಸ್ಯೆಯನ್ನು ಮತ್ತಷ್ಟು ತೀವ್ರಗೊಳಿಸಬಹುದು. ಜೊತೆಗೆ ಸ್ಕ್ರೀನ್‌ನ್ನು ಹೆಚ್ಚು ಸಮಯ ನೋಡಿದರೆ ಕಣ್ಣಿನ ಒಣತನ, ಉರಿ, ದಣಿವು ಮತ್ತು ನಿದ್ರೆ ಕೊರತೆ ಉಂಟಾಗಬಹುದು. ಈ ಎಲ್ಲಾ ಕಾರಣಗಳು ಸೇರಿ ತಲೆನೋವು ಮತ್ತು ಮೈಗ್ರೇನ್ ಸಮಸ್ಯೆಯನ್ನು ಹೆಚ್ಚಿಸಬಹುದು.

ಹೇಗೆ ತಡೆಗಟ್ಟಬೇಕು?

ತಜ್ಞರು ಸೂಚಿಸುವಂತೆ, ಸ್ಕ್ರೀನ್ ಬಳಕೆಯನ್ನು ನಿಯಂತ್ರಿಸುವುದು ಅತ್ಯಂತ ಮುಖ್ಯ. ಪ್ರತಿ 20-30 ನಿಮಿಷಕ್ಕೊಮ್ಮೆ ವಿರಾಮ ತೆಗೆದುಕೊಳ್ಳಬೇಕು. ಕಣ್ಣುಗಳಿಗೆ ವಿಶ್ರಾಂತಿ ನೀಡಲು ದೂರದ ವಸ್ತುಗಳನ್ನು ನೋಡಬೇಕು. ಸ್ಕ್ರೀನ್ ಬ್ರೈಟ್ನೆಸ್ ಸರಿಯಾಗಿರಬೇಕು ಮತ್ತು ಕತ್ತಲಲ್ಲಿ ಮೊಬೈಲ್ ಬಳಸುವುದನ್ನು ತಪ್ಪಿಸಬೇಕು. ಸರಿಯಾದ ನಿದ್ರೆ, ಸಮತೋಲನ ಆಹಾರ ಮತ್ತು ನಿಯಮಿತ ವ್ಯಾಯಾಮವು ಮೈಗ್ರೇನ್ ನಿಯಂತ್ರಣಕ್ಕೆ ಸಹಕಾರಿ. ದೇಹದ ಸೂಚನೆಗಳನ್ನು ನಿರ್ಲಕ್ಷಿಸದೆ ಸಮಯಕ್ಕೆ ಸರಿಯಾಗಿ ವೈದ್ಯರ ಸಲಹೆ ಪಡೆಯುವುದು ಅಗತ್ಯ. ತಜ್ಞರ ಪ್ರಕಾರ, ಸ್ಕ್ರೀನ್ ಬಳಕೆಯನ್ನು ಸಮತೋಲನದಲ್ಲಿಡುವುದರಿಂದ ಮೈಗ್ರೇನ್ ಅಪಾಯವನ್ನು ಕಡಿಮೆ ಮಾಡಬಹುದು ಮತ್ತು ಒಟ್ಟು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

DC vs RCB IPL 2026 Live Score: ಆರ್​​ಸಿಬಿ- ಡೆಲ್ಲಿ ನಡುವೆ 2ನೇ ಮುಖಾಮುಖಿ – Kannada News | Delhi Capitals vs Royal Challengers Bengaluru IPL 2026 Live Cricket Score DC vs RCB Match on 27th April latest news in Kannada

ಐಪಿಎಲ್ 2026ರ 39 ನೇ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯುತ್ತಿದೆ. ಉಭಯ ತಂಡಗಳ ನಡುವಿನ ಎರಡನೇ ಮುಖಾಮುಖಿ ಇದಾಗಿದೆ. ಈ ಮೊದಲು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲ ಮುಖಾಮುಖಿಯಲ್ಲಿ ಆತಿಥೇಯ ಆರ್​​ಸಿಬಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿತ್ತು. ಹೀಗಾಗಿ ಎರಡನೇ ಮುಖಾಮುಖಿ ಆರ್​​ಸಿಬಿಗೆ ಸೇಡಿನ ಸಮರವಾಗಿದೆ. ಇದಕ್ಕೆ ಪೂರಕವಾಗಿ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿರುವ ಆರ್​​ಸಿಬಿ, ಪಂಜಾಬ್ ಕಿಂಗ್ಸ್ ವಿರುದ್ಧ ಸೋತಿರುವ ಡೆಲ್ಲಿ ತಂಡವನ್ನು ಮಣಿಸಲು ಸಜ್ಜಾಗಿದೆ.

Source link

ಅಕಾಲಿಕ ಮಳೆಗೆ ಬೆದರಿದ ಭದ್ರಾವತಿ: ವರುಣನ ಅಬ್ಬರಕ್ಕೆ ರೈತರ ಬದುಕು ಮೂರಾಬಟ್ಟೆ – Kannada News | Bhadravathi Unseasonal Rains Wreak Havoc: Shivamogga Farmers Face Massive Crop and Property Loss

ಶಿವಮೊಗ್ಗ ಜಿಲ್ಲೆಯಲ್ಲಿ ನಿನ್ನೆ ಸುರಿದ ಗಾಳಿ ಮಳೆ ಅವಾಂತರಗಳನ್ನೇ ಸೃಷ್ಟಿ ಮಾಡಿದೆ. ಭದ್ರಾವತಿ ತಾಲೂಕಿನಲ್ಲಿ ಸುರಿದ ಮಳೆಯು ಜನರ ಮತ್ತು ರೈತರ ಬದುಕು ಮೂರಾಬಟ್ಟೆ ಮಾಡಿದೆ. ತಾಲೂಕಿನ ಹೊಳೆಹೊನ್ನೂರು ಹೋಬಳಿ ಕೈಮರ,ನಾಗಸಮುದ್ರ, ಸನ್ಯಾಸಿಕೋಡಿಮಗ್ಗಿ, ಲಕ್ಷ್ಮಿಪುರ, ಮೈದೊಳಲು, ಮುಂಗೋಟೆ ಹೀಗೆ ಹತ್ತಾರು ಹಳ್ಳಿಯ ಜನರು ಗಾಳಿ ಮಳೆ ಮಾಡಿರುವ ಹಾನಿಯಿಂದ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.

Source link

ವಾಷಿಂಗ್ ಮೆಷಿನ್ ಶಾಕ್‌ಗೆ ಮಹಿಳೆ ಬಲಿ; ಆಕಸ್ಮಿಕವೋ ಅಥವಾ ಕೊಲೆಯೋ? ಮಗಳ ಸಾವಿನ ಹಿಂದೆ ಅಳಿಯನ ಕೈವಾಡವಿದೆ ಎಂದು ಪೋಷಕರ ಆರೋಪ! – Kannada News | Gowdahalli Electrocution: Family alleges husband’s role in Sujata’s mysterious death

ವಾಷಿಂಗ್ ಮೆಷಿನ್ ಶಾಕ್‌ಗೆ ಸುಜಾತ ಬಲಿ

ಬೆಂಗಳೂರು, ಏ.27: ರಾಜ್ಯ ರಾಜಧಾನಿಯಲ್ಲಿ ಒಂದು ವಿಚಿತ್ರ ಘಟನೆಯೊಂದು ನಡೆದಿದೆ. ಇದು ಕೊಲೆಯೋ ಅಥವಾ ಆಕಸ್ಮಿಕವೋ ಎಂಬ ಅನುಮಾನಗಳು ಉಂಟಾಗಿದೆ. ಇದೀಗ ಈ ಸಾವಿನ ಸುತ್ತ ಹಲವು ಊಹಪೋಹಗಳು ಉಂಟಾಗಿದೆ. ವಾಷಿಂಗ್ ಮೆಷಿನ್ ಬಳಸುವಾಗ ವಿದ್ಯುತ್ ಸ್ಪರ್ಶಿಸಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗೌಡಹಳ್ಳಿಯಲ್ಲಿ ನಡೆದಿದೆ. ಆದರೆ, ಮಗಳ ಸಾವಿನ ಹಿಂದೆ ಅಳಿಯನ ಕೈವಾಡವಿದೆ ಎಂದು ಪೋಷಕರು ಗಂಭೀರ ಶಂಕೆ ವ್ಯಕ್ತಪಡಿಸಿದ್ದಾರೆ.

ಮೃತ ಮಹಿಳೆಯನ್ನು ಸುಜಾತ (30) ಎಂದು ಗುರುತಿಸಲಾಗಿದೆ. ತುಮಕೂರಿನ ಹೆಗ್ಗೆರೆ ನಿವಾಸಿಗಳಾದ ಪಾಂಡುರಂಗಯ್ಯ ಮತ್ತು ಭಾಗ್ಯಮ್ಮ ದಂಪತಿಯ ನಾಲ್ಕನೇ ಮಗಳಾದ ಸುಜಾತ, 10 ವರ್ಷಗಳ ಹಿಂದೆ ರಿಯಲ್ ಎಸ್ಟೇಟ್ ಉದ್ಯಮಿ ಚೇತನ್ ಎಂಬುವವರನ್ನು ವಿವಾಹವಾಗಿದ್ದರು. ಇಂದು ಬೆಳಗ್ಗೆ 7:30ರ ಸುಮಾರಿಗೆ ವಾಷಿಂಗ್ ಮೆಷಿನ್ ಹಾಕಲು ಹೋದಾಗ ಕರೆಂಟ್ ಶಾಕ್ ತಗುಲಿ ಸುಜಾತ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ರಾಜಸ್ಥಾನದಲ್ಲಿ ಗಲಾಟೆ, ಬೆಂಗಳೂರಲ್ಲಿ ಬೆದರಿಕೆ: ಪಾರ್ಕ್​​ನಲ್ಲೇ ವ್ಯಕ್ತಿ ಆತ್ಮಹತ್ಯೆ ಕೇಸ್​​ಗೆ ಸ್ಫೋಟಕ ಟ್ವಿಸ್ಟ್​​

ಪೋಷಕರ ಅನುಮಾನಕ್ಕೆ ಕಾರಣವೇನು?

ಸುಜಾತ ಅವರ ಸಾವು ಕೇವಲ ಆಕಸ್ಮಿಕವಲ್ಲ, ಇದರ ಹಿಂದೆ ಅವರ ಪತಿ ಚೇತನ್ ಸಂಚು ಇರಬಹುದು ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಅದಕ್ಕೆ ಕೆಲವೊಂದು ಕಾರಣಗಳನ್ನು ನೀಡಿದ್ದಾರೆ. ಮೊದಲಾಗಿ ಮದುವೆಯಾದಾಗಿನಿಂದಲೂ ದಂಪತಿಗಳ ನಡುವೆ ಜಗಳ ನಡೆಯುತ್ತಿತ್ತು. ಗಂಡನ ಕಿರುಕುಳ ತಾಳಲಾರದೆ ಸುಜಾತ ಒಂದು ತಿಂಗಳ ಹಿಂದೆ ತವರು ಮನೆಗೆ ಹೋಗಿದ್ದರು ಎಂದು ಹೇಳಲಾಗಿದೆ. ಚೇತನ್ ಮತ್ತು ಆತನ ತಾಯಿ ಸುಜಾತಳ ಮನವೊಲಿಸಿ ಕೇವಲ ಒಂದು ವಾರದ ಹಿಂದಷ್ಟೇ ಗೌಡಹಳ್ಳಿಗೆ ಕರೆಕೊಂಡು ಬಂದಿದ್ದರು. ಮನೆಗೆ ಬಂದ ಎಂಟೇ ದಿನದಲ್ಲಿ ಸುಜಾತ ಶವವಾಗಿರುವುದು ಪೋಷಕರಲ್ಲಿ ಭಾರಿ ಅನುಮಾನ ಮೂಡಿಸಿದೆ ಎಂದು ಆರೋಪಿಸಿದ್ದಾರೆ.

ಘಟನೆ ನಡೆದ ತಕ್ಷಣ ಸುಜಾತ ಅವರನ್ನು ವಿಪಿ ಮಾಗ್ನಸ್ ಆಸ್ಪತ್ರೆಗೆ ದಾಖಲಿಸಿದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ. ಸದ್ಯ ಮೃತದೇಹವನ್ನು ಹೆಚ್ಚಿನ ತನಿಖೆ ಮತ್ತು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಇದು ಆಕಸ್ಮಿಕವೋ ಅಥವಾ ವ್ಯವಸ್ಥಿತ ಕೊಲೆಯೋ ಎಂಬುದು ತಿಳಿದುಬರಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾತ್ರಿ ಕಲ್ಲಂಗಡಿ ಹಣ್ಣು ತಿಂದವರು ಬೆಳಗ್ಗೆ ಹೆಣವಾದರು; ಮುಂಬೈನಲ್ಲಿ ಇಡೀ ಕುಟುಂಬದ ದುರಂತ ಅಂತ್ಯ – Kannada News | Mumbai Family 4 members Died After Eating Biryani and Watermelon at Night

ಮುಂಬೈ, ಏಪ್ರಿಲ್ 27: ಅದು ಗಂಡ, ಹೆಂಡತಿ, ಇಬ್ಬರು ಹೆಣ್ಣುಮಕ್ಕಳ ಕುಟುಂಬ. ಶನಿವಾರ ರಾತ್ರಿ ವೀಕೆಂಡ್ ನೆಪದಲ್ಲಿ ಅವರು ತಮ್ಮ ಸ್ನೇಹಿತರಿಗೆ ಮನೆಯಲ್ಲೇ ಡಿನ್ನರ್ ಪಾರ್ಟಿ ಏರ್ಪಡಿಸಿದ್ದರು. ಅದಕ್ಕಾಗಿ ಬಿರಿಯಾನಿ ಮಾಡಿಸಿದ್ದರು. ರಾತ್ರಿ ಬಂದ ಅತಿಥಿಗಳು ಊಟ ಮಾಡಿ ಮನೆಗೆ ತೆರಳಿದ್ದರು. ಊಟ ಜಾಸ್ತಿಯಾಗಿದ್ದರಿಂದ ಅಪ್ಪ-ಅಮ್ಮ-ಮಕ್ಕಳು ರಾತ್ರಿ ಕಲ್ಲಂಗಡಿ ಹಣ್ಣು (Watermelon) ಕಟ್ ಮಾಡಿ ತಿಂದು ಮಲಗಿದ್ದರು. ಆದರೆ, ಅದಾದ ಸ್ವಲ್ಪ ಹೊತ್ತಿನಲ್ಲೇ ನಾಲ್ವರಿಗೂ ವಾಂತಿ, ಭೇದಿ ಶುರುವಾಗಿತ್ತು. ಬೆಳಗಿನ ಜಾವವಾಗುವಷ್ಟರಲ್ಲಿ ಎದ್ದು ನಿಲ್ಲಲೂ ಆಗದಂತಹ ಸುಸ್ತು ಅವರನ್ನು ಆವರಿಸಿತ್ತು.

ಹೀಗಾಗಿ, ತಮ್ಮ ಸ್ನೇಹಿತರಿಗೆ ಫೋನ್ ಮಾಡಿದ ಅವರು ಅವರ ಜೊತೆ ಆಸ್ಪತ್ರೆಗೆ ತೆರಳಿದ್ದರು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರೆಲ್ಲರೂ ಮೃತಪಟ್ಟಿದ್ದಾರೆ. ಮುಂಬೈನಲ್ಲಿ ನಡೆದ ಈ ಘಟನೆ ಆತಂಕ ಮೂಡಿಸಿದೆ. ಫುಡ್ ಪಾಯಿಸನಿಂಗ್​ನಿಂದ ಇಡೀ ಕುಟುಂಬ ಸಾವನ್ನಪ್ಪಿದೆ ಎನ್ನಲಾಗುತ್ತಿದೆ. ಆದರೆ, ಅವರ ಆಹಾರದಲ್ಲಿ ವಿಷ ಸೇರಿದ್ದಾದರೂ ಹೇಗೆ? ಏಕೆಂದರೆ ಅವರು ತಿಂದ ಬಿರಿಯಾನಿಯನ್ನೇ ತಿಂದಿರುವ ಗೆಳೆಯರು ಆರೋಗ್ಯವಾಗಿದ್ದಾರೆ. ಹಾಗಾದರೆ, ಕಲ್ಲಂಗಡಿ ಹಣ್ಣಿನಿಂದ ವಿಷ ಅವರ ದೇಹ ಸೇರಿತಾ ಎಂಬ ಅನುಮಾನಗಳು ಮೂಡಿವೆ. ಇವೆಲ್ಲದಕ್ಕೂ ಮರಣೋತ್ತರ ಪರೀಕ್ಷೆಯಲ್ಲಿ ಉತ್ತರ ಸಿಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಶಿಮ್ಲಾದ ದೇವಸ್ಥಾನದಲ್ಲಿ ಮಹಿಳೆಗೆ ಗುಂಡು ಹಾರಿಸಿ ಕೊಲೆ; ಇಬ್ಬರ ಬಂಧನ

ಈ ಘಟನೆ ಮುಂಬೈನ ಪೈಧುನಿ ಪ್ರದೇಶದಲ್ಲಿ ನಡೆದಿದ್ದು, 40 ವರ್ಷದ ಅಬ್ದುಲ್ಲಾ ದೋಕಾಡಿಯಾ, ಅವರ ಪತ್ನಿ ನಸ್ರೀನ್ ದೋಕಾಡಿಯಾ (35), ಮತ್ತು ಅವರ ಇಬ್ಬರು ಹೆಣ್ಣುಮಕ್ಕಳಾದ ಆಯೇಷಾ (16) ಮತ್ತು ಜೈನಾಬ್ (13) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಅವರು ಏಪ್ರಿಲ್ 25ರಂದು ಗೆಳೆಯರು ಮತ್ತು ಸಂಬಂಧಿಕರನ್ನು ಮನೆಗೆ ಕರೆಸಿ ಒಟ್ಟಿಗೆ ಊಟ ಮಾಡಿದ್ದರು. ರಾತ್ರಿ 10.30ರ ಸುಮಾರಿಗೆ ಅತಿಥಿಗಳು ಹೊರಟುಹೋದರು. ನಂತರ ರಾತ್ರಿ ಸುಮಾರು 1 ಗಂಟೆಯ ಹೊತ್ತಿಗೆ ಅವರು ಕಲ್ಲಂಗಡಿ ತಿಂದರು. ಬೆಳಗಿನ ಜಾವ 5-6 ಗಂಟೆಯ ಸುಮಾರಿಗೆ ಅವರು ವಾಂತಿ ಮತ್ತು ಹೊಟ್ಟೆ ನೋವಿನಿಂದ ನರಳಲಾರಂಭಿಸಿದರು.

ಏಪ್ರಿಲ್ 26 ರಂದು ಮುಂಜಾನೆ ಸುಮಾರು 5:30ರಿಂದ 6ರವರೆಗೆ ನಾಲ್ವರೂ ವಾಂತಿ ಮತ್ತು ಹೊಟ್ಟೆ ನೋವು ಸೇರಿದಂತೆ ತೀವ್ರ ಲಕ್ಷಣಗಳನ್ನು ಅನುಭವಿಸಲು ಪ್ರಾರಂಭಿಸಿದರು. ಅವರಿಗೆ ಆರಂಭದಲ್ಲಿ ಕುಟುಂಬದ ವೈದ್ಯರು ಚಿಕಿತ್ಸೆ ನೀಡಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜೆಜೆ ಆಸ್ಪತ್ರೆಗೆ ಕಳುಹಿಸಲಾಯಿತು.

ಇದನ್ನೂ ಓದಿ: ಸೆಖೆ ತಡೆಯಲಾಗದೆ ಎಸಿ ಕೊಡಿಸಿ ಎಂದ ಪತ್ನಿಗೆ ನೋ ಎಂದ ಗಂಡ; ಆಮೇಲಾಗಿದ್ದು ದುರಂತ!

ಕಿರಿಯ ಮಗಳು ನಿನ್ನೆ ಬೆಳಿಗ್ಗೆ ಸುಮಾರು 10:15ಕ್ಕೆ ಸಾವನ್ನಪ್ಪಿದಳು. ಆಕೆಯ ಅಪ್ಪ ರಾತ್ರಿ 10.30ರ ಸುಮಾರಿಗೆ ನಿಧನರಾದರು. ಚಿಕಿತ್ಸೆಯ ಸಮಯದಲ್ಲಿ ಪತ್ನಿ ಮತ್ತು ಹಿರಿಯ ಮಗಳು ಸಹ ನಿಧನರಾದರು. ಈ ಘಟನೆಯ ಬಗ್ಗೆ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನಿಖರವಾದ ಕಾರಣವನ್ನು ನಿರ್ಧರಿಸಲು ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಆಹಾರ ಮತ್ತು ಜೈವಿಕ ಮಾದರಿಗಳನ್ನು ಸಂಗ್ರಹಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೇಕಿಂಗ್ ಮೂಲಕ ಗಮನ ಸೆಳೆದ ‘ಮಾರಿಗೆ ದಾರಿ’ ಸಿನಿಮಾ; ಟೀಸರ್ ಹೇಗಿದೆ ನೋಡಿ.. – Kannada News | Agastya starrer Maarige Daari movie Teaser released produced by Radha Films

ಸಿಕ್ಕಾಪಟ್ಟೆ ಮಾಸ್ ಕಥಾಹಂದರ ಇರುವ ‘ಮಾರಿಗೆ ದಾರಿ’ (Maarige Daari) ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈಗ ಈ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಮೇಕಿಂಗ್ ಮೂಲಕ ಈ ಟೀಸರ್ ಗಮನ ಸೆಳೆಯುತ್ತಿದೆ. ಒಂದೂವರೆ ನಿಮಿಷದ ಈ ಟೀಸರ್​​ನಲ್ಲಿ ಇಡೀ ಸಿನಿಮಾದ ಝಲಕ್ ಕಾಣಿಸಿದೆ. ಸಿನಿಮಾ (Cinema) ಹೇಗಿರಬಹುದು ಎಂಬುದರ ಸುಳಿವು ಸಿಕ್ಕಿದೆ. ಈ ಚಿತ್ರದಲ್ಲಿ ಅಗಸ್ತ್ಯ (Agastya) ಅವರು ಹೀರೋ ಆಗಿ ನಟಿಸಿದ್ದಾರೆ. ಅಲ್ಲದೇ ಚಿತ್ರದ ಹಲವು ವಿಭಾಗಗಳಲ್ಲಿ ಅವರು ಕೆಲಸ ಮಾಡಿದ್ದಾರೆ.

‘ಮಾರಿಗೆ ದಾರಿ’ ಟೀಸರ್ ನೋಡಿದ ಬಳಿಕ ಪ್ರೇಕ್ಷಕರಿಗೆ ಈ ಸಿನಿಮಾ ಮೇಲೆ ಭರವಸೆ ಮೂಡಿದೆ. ಈ ಟೀಸರ್​ನಲ್ಲಿ ಆ್ಯಕ್ಷನ್ ಅಬ್ಬರ ಇದೆ. ಮಾಸ್ ಸಿನಿಮಾ ಬಯಸುವ ಪ್ರೇಕ್ಷಕರು ಈ ಚಿತ್ರಕ್ಕಾಗಿ ಕಾಯುವಂತಾಗಿದೆ. ಹಾಗಂತ ಕಥೆಯ ಬಗ್ಗೆ ಹೆಚ್ಚು ಸುಳಿವು ಬಿಟ್ಟು ಕೊಟ್ಟಿಲ್ಲ. ಆ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಲಾಗಿದೆ.

Maarige Daari Movie Team

ಟೀಸರ್ ನೋಡಿದವರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿರುವುದು ‘ಮಾರಿಗೆ ದಾರಿ’ ಚಿತ್ರತಂಡಕ್ಕೆ ಸಂತಸ ತಂದಿದೆ. ಹೀರೋ ಅಗಸ್ತ್ಯ ಅವರು ಈ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿರುವುದು ಮಾತ್ರವಲ್ಲದೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ‘ರಾಧ ಫಿಲ್ಮ್ಸ್’ ಬ್ಯಾನರ್ ಮೂಲಕ ರಾಧ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಚೇತನ್‌ ಚಂದ್ರ ಮತ್ತು ಸತೀಶ್ ಕೃಷ್ಣ ಶೆಟ್ಟಿ ಸಹ-ನಿರ್ಮಾಪಕರಾಗಿದ್ದಾರೆ.

‘ಮಾರಿಗೆ ದಾರಿ’  ಸಿನಿಮಾದ ಟೀಸರ್:

ಸುದ್ದಿಗೋಷ್ಠಿಯಲ್ಲಿ ಅಗಸ್ತ್ಯ ಅವರು ಮಾತನಾಡಿ ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ‘ಈ ಸಿನಿಮಾ ತುಂಬಾ ರಾ ಆದಂತಹ ಅಂಶಗಳನ್ನು ಒಳಗೊಂಡಿದೆ. ಇಷ್ಟು ಮಾತ್ರ ಹೇಳಬಹುದು. ಟೀಸರ್ ನೋಡಿದವರು ಚೆನ್ನಾಗಿ ಮೂಡಿಬಂದಿದೆ, ಯಾವಾಗ ಬಿಡುಗಡೆ ಅಂತ ಕೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮಾಹಿತಿ ನೀಡುತ್ತೇವೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ‘ಕೆಡಿ’ ಸಿನಿಮಾದಲ್ಲಿ ಸುದೀಪ್ ಪಾತ್ರವೇನು? ಕಿಚ್ಚನ ಸುದ್ದಿಗೋಷ್ಠಿ ವಿಡಿಯೋ ನೋಡಿ..

‘ಮಾರಿಗೆ ದಾರಿ’ ಸಿನಿಮಾದಲ್ಲಿ ‘ಲಕ್ಷೀ ನಿವಾಸ’ ಧಾರಾವಾಹಿ ಖ್ಯಾತಿಯ ನಟಿ ಮಹಾಲಕ್ಷೀ ಅವರು ನಾಯಕಿಯಾಗಿ ನಟಿಸಿದ್ದಾರೆ. ಕಾಕ್ರೋಚ್ ಸುಧಿ, ಬಲರಾಜವಾಡಿ, ಬೆನಕ ನಂಜಪ್ಪ, ಪ್ರದೀಪ್‌ ಪೂಜಾರಿ, ವರ್ಧನ್, ಅನಂತ ಕುಮಾರ್, ತಾರಕ ರಾಮ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ರಿಯೋ ಆಂಟೋನಿ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಜಗದೀಶ್ ಗೌಡ ಅವರ ಛಾಯಾಗ್ರಹಣ ಮತ್ತು ಸಂಕಲನ ಈ ಚಿತ್ರಕ್ಕಿದೆ. ಸೈಕ್ ಸೂರಿ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಳೆದ 18 ವರ್ಷದಲ್ಲಿ ಹರಿಹರ ಪಂಚಮಸಾಲಿ ಪೀಠದಲ್ಲಿ ಸಂಗ್ರಹವಾದ ದೇಣಿಗೆ ಎಷ್ಟು ಗೊತ್ತಾ? – Kannada News | Harihara Panchamasali Peetha Crisis: 27.61 Crore Collected in Donations Over the Last 18 Years

ದಾವಣಗೆರೆ, ಏಪ್ರಿಲ್​​ 27: ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿಯಿರುವ ಪಂಚಮಸಾಲಿ ಪೀಠದಲ್ಲಿ ಟ್ರಸ್ಟ್​ನ ಧರ್ಮದರ್ಶಿ ಬಿ.ಸಿ.ಉಮಾಪತಿ 2008ರಿಂದ 2026ರವರೆಗಿನ ಲೆಕ್ಕವನ್ನು ಮಂಡಿಸಿದರು.  ಸರ್ಕಾರ ಮತ್ತು ಭಕ್ತಾದಿಗಳಿಂದ ಕಳೆದ 18 ವರ್ಷಗಳಲ್ಲಿ ಒಟ್ಟು 27 ಕೋಟಿ 61 ಲಕ್ಷ 57 ಸಾವಿರದ 518 ರೂ ಸಂಗ್ರಹವಾಗಿದೆ ಎಂದು ಅವರು ಮಾಹಿತಿ ನೀಡಿದರು. ಪಂಚಮಸಾಲಿ ಟ್ರಸ್ಟ್ ಚಾರಿಟೇಬಲ್ ಟ್ರಸ್ಟ್ ಆಗಿದ್ದು, ಪ್ರತಿ ವರ್ಷ ಸರ್ಕಾರಕ್ಕೆ ಮತ್ತು ಮಾಸಿಕವಾಗಿ ಟ್ರಸ್ಟ್ ಸಭೆಗಳಲ್ಲಿ ಲೆಕ್ಕ ನೀಡಲಾಗುತ್ತದೆ. ಪಂಚಮಸಾಲಿ ಚಾರಿಟಬಲ್ ಟ್ರಸ್ಟ್, ಸಾರ್ವಜನಿಕರಿಗೆ ಲೆಕ್ಕ ಕೊಡುವಂತಿಲ್ಲ, ಆದರೆ ನಾವು ಈಗಾಗಲೇ ಲೆಕ್ಕಾ ಕೊಟ್ಟಿದ್ದೇವೆ. ಶ್ರೀಗಳು ಮಾಡಿದ ತಪ್ಪು ಮುಚ್ಚಿಕೊಳ್ಳಲು ಲೆಕ್ಕ ಕೊಡಿ ಚಳವಳಿ ಆರಂಭಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಪಂಚಮಸಾಲಿ ಪೀಠದ ಲೆಕ್ಕಪತ್ರ ಮಂಡನೆ ವೇಳೆ ಗಲಾಟೆ: ಭಕ್ತರ ನಡುವೆಯೇ ಫೈಟ್​​!

ದಾವಣಗೆರೆ, ಏಪ್ರಿಲ್​​ 27: ಜಿಲ್ಲೆಯ ಹರಿಹರದಲ್ಲಿರುವ ಪಂಚಮಸಾಲಿ ಪೀಠದಲ್ಲಿ ಟ್ರಸ್ಟ್‌ನ ಆಡಳಿತಕ್ಕೆ ಸಂಬಂಧಿಸಿದಂತೆ ಭಿನ್ನಮತ ಭುಗಿಲೆದ್ದಿದೆ.  ಸ್ವಾಮೀಜಿ ಹಾಗೂ ಟ್ರಸ್ಟ್‌ನ ಬೆಂಬಲಿಗರ ಮಧ್ಯೆ ತೀವ್ರ ಜಟಾಪಟಿ ನಡೆದಿದೆ. ಟ್ರಸ್ಟ್​​ನ ಪ್ರಧಾನ ಧರ್ಮಧರ್ಶಿ ಬಿ.ಸಿ. ಉಮಾಪತಿ ಲೆಕ್ಕ ಮಂಡನೆ ಸಂದರ್ಭ ಸ್ವಾಮೀಜಿ ಬೆಂಬಲಿಗರಿಗೆ ಟ್ರಸ್ಟಿನ ಬೆಂಬಲಿಗರು ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ವೇಳೆ ಸ್ವಾಮೀಜಿ ಬೆಂಬಲಿಗರು ಟ್ರಸ್ಟ್​​​ನ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಲೆಕ್ಕ ಕೇಳೋರು ಇಷ್ಟು ದಿನ ಎಲ್ಲಿ ಹೋಗಿದ್ರಿ ಎಂದು ಟ್ರಸ್ಟ್​​ನ ಬೆಂಬಲಿಗ ಕೇಳಿದ್ದಕ್ಕೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಈ ವೇಳೆ ಮಧ್ಯೆ ಪ್ರವೇಶ ಮಾಡಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಶಿಮ್ಲಾದ ದೇವಸ್ಥಾನದಲ್ಲಿ ಮಹಿಳೆಗೆ ಗುಂಡು ಹಾರಿಸಿ ಕೊಲೆ; ಇಬ್ಬರ ಬಂಧನ – Kannada News | 2 people arrested after woman shot dead during temple ceremony in Shimla himachal pradesh

ಶಿಮ್ಲಾ, ಏಪ್ರಿಲ್ 27: ಹಿಮಾಚಲ ಪ್ರದೇಶದ ಶಿಮ್ಲಾ (Shimla) ಜಿಲ್ಲೆಯ ಹಳ್ಳಿಯೊಂದರಲ್ಲಿ ಧಾರ್ಮಿಕ ಸಮಾರಂಭದಲ್ಲಿ ದೇವಸ್ಥಾನದಲ್ಲಿ ಮಹಿಳೆಯೊಬ್ಬರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಳನ್ನು ಶಿಮ್ಲಾದ ರೋಹ್ರುವಿನ ಆಂಧ್ರ ಗ್ರಾಮದ ನಿವಾಸಿ 26 ವರ್ಷ ರಿತಿಕಾ ಎಂದು ಗುರುತಿಸಲಾಗಿದೆ. ಕುಲ್ಗಾಂವ್ ಗ್ರಾಮದಲ್ಲಿ ಸ್ಥಳೀಯ ದೇವತೆಯ ಹೊಸದಾಗಿ ನಿರ್ಮಿಸಲಾದ ದೇವಾಲಯದ ಪ್ರತಿಷ್ಠಾಪನಾ ಸಮಾರಂಭದ ಸಂದರ್ಭದಲ್ಲಿ ಭಾನುವಾರ ಈ ಘಟನೆ ಸಂಭವಿಸಿದೆ.

ದೇವಸ್ಥಾನದಲ್ಲಿ ಎಲ್ಲರೂ ನೃತ್ಯ ಮಾಡುತ್ತಿದ್ದಾಗ, ಆರೋಪಿ ಗುಂಡು ಹಾರಿಸಿದ್ದಾನೆ. ಆ ಗುಂಡು ರಿತಿಕಾಗೆ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಾದ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ ಪೊಲೀಸರು ಆ ಸ್ಥಳಕ್ಕೆ ತೆರಳಿ ಮೃತದೇಹವನ್ನು ವಶಪಡಿಸಿಕೊಂಡರು.

ಇದನ್ನೂ ಓದಿ: ಸೆಖೆ ತಡೆಯಲಾಗದೆ ಎಸಿ ಕೊಡಿಸಿ ಎಂದ ಪತ್ನಿಗೆ ನೋ ಎಂದ ಗಂಡ; ಆಮೇಲಾಗಿದ್ದು ದುರಂತ!

ಆ ಸ್ಥಳದಿಂದ ಸಾಕ್ಷಿಗಳನ್ನು ಸಂಗ್ರಹಿಸಲಾಗಿದ್ದು, ಘಟನೆಯಲ್ಲಿ ಬಳಸಲಾದ ಗನ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ. ತೀವ್ರ ಹುಡುಕಾಟದ ನಂತರ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಜತ್ ಸೋಹ್ತಾ (28) ಮತ್ತು ಅಮಿತ್ ಅಲಿಯಾಸ್ ರೋಹಿತ್ ಭಾಪ್ತಾ (32) ಎಂಬ ಇಬ್ಬರು ವ್ಯಕ್ತಿಗಳನ್ನು ಗುಂಡಿನ ದಾಳಿಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 103 (1) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಒಂದು ಫೋಟೋಗೆ 100 ರೂ. ಕೇಳಿದ ವೈಭವ್; ವಿಡಿಯೋ ವೈರಲ್ – Kannada News | Vaibhav Suryavanshi’s Viral Selfie: Fans Offer ₹200 When He Asks ₹100! IPL Star’s Humor

ತನ್ನ ಅಬ್ಬರದ ಬ್ಯಾಟಿಂಗ್‌ ಮೂಲಕ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿರುವ ವೈಭವ್ ಸೂರ್ಯವಂಶಿಗೆ ಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವೈಭವ್ ಸಾರ್ವಜನಿಕವಾಗಿ ಕಾಣಿಸಿಕೊಂಡರೆ, ಅವರೊಂದಿಗೆ ಸೆಲ್ಫಿಗಾಗಿ ಮುಗಿಬೀಳುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅಂತಹದ್ದೇ ಒಂದು ಸೆಲ್ಫಿ ಕಥೆಯ ವಿಡಿಯೋ ವೊಂದು ವೈರಲ್ ಆಗಿದೆ. ಇದರಲ್ಲಿ ವೈಭವ್, ಅಭಿಮಾನಿಗಳ ಬಳಿ ಒಂದು ಫೋಟೋಗೆ 100 ರೂ.ಗಳ ಶುಲ್ಕ ವಿಧಿಸಿದ್ದಾರೆ. ಇತ್ತ ಅಭಿಮಾನಿಗಳು ಕೂಡ ವೈಭವ್​ಗೆ 100 ರೂ. ಬದಲು 200 ರೂ. ನೀಡಲು ಮುಂದಾಗಿದ್ದಾರೆ. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಾಸ್ತವವಾಗಿ ನಡೆದಿರುವುದೆನೆಂದರೆ, ಪ್ರಸ್ತುತ ವೈಭವ್ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದಾರೆ. ಪಂದ್ಯಕ್ಕಾಗಿ ತಂಡದೊಂದಿಗೆ ವಿಮಾನಕ್ಕಾಗಿ ವೈಭವ್ ವಿಮಾನ ನಿಲ್ದಾಣದಲ್ಲಿ ಕಾಯುತ್ತ ಕುಳಿತಿದ್ದಾರೆ. ಇದೇ ವೇಳೆ ಇಬ್ಬರು ಪುಟಾಣಿ ಅಭಿಮಾನಿಗಳು ವೈಭವ್ ಬಳಿ ಬಂದು ಒಂದು ಫೋಟೋಗಾಗಿ ಮನವಿ ಮಾಡಿದ್ದಾರೆ. ಇತ್ತ ವೈಭವ್, ಮಕ್ಕಳ ಜೊತೆಗೆ ತಮಾಷೆ ಮಾಡಲು ಮುಂದಾಗಿದ್ದು, ನಾನು ಒಂದು ಫೋಟೋಗೆ 100 ರೂ. ತೆಗೆದುಕೊಳ್ಳುತ್ತೇನೆ. ನೀವು 100 ರೂ. ಕೊಟ್ಟರೆ ಫೋಟೋಗೆ ಪೋಸ್ ನೀಡುತ್ತೇನೆ ಎಂದಿದ್ದಾರೆ.

ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಆ ಪುಟ್ಟ ಅಭಿಮಾನಿಗಳು, ವೈಭವ್ 100 ರೂ. ಕೇಳಿದರೆ, ಅವರು ಸರ್ 200 ರೂ. ಇದೆ ತೆಗೆದುಕೊಳ್ಳಿ ಎಂದು ವೈಭವ್​ಗೆ ಹಣ ನೀಡಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ವೈಭವ್ ಜೋರಾಗಿ ನಕ್ಕು, ಆ ಪುಟ್ಟ ಅಭಿಮಾನಿಗಳ ಬಳಿ ಯಾವುದೇ ಹಣವನ್ನು ತೆಗೆದುಕೊಳ್ಳದೆ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link