ನವದೆಹಲಿ, ಆಗಸ್ಟ್ 5: ಕರ್ನಾಟಕದ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಡಿಎಂಕೆ ಪಕ್ಷವು ರಾಜ್ಯಸಭೆಯಲ್ಲಿ ನಿಲುವಳಿ ಸೂಚನೆಯನ್ನು ಸಲ್ಲಿಸಿದೆ. ಡಿಎಂಕೆ ಸಂಸದ ತಿರುಚಿ ಶಿವ, ನಿಯಮ 267ರ ಅಡಿಯಲ್ಲಿ ಈ ವಿಚಾರವಾಗಿ ತುರ್ತು ಚರ್ಚೆಗೆ ಪಟ್ಟು ಹಿಡಿದಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ಡಿಎಂಕೆ, ಮೇಕೆದಾಟು ಯೋಜನೆ ತಡೆಯಲು ಮಧ್ಯಸ್ಥಿಕೆ ಮಂಡಳಿ ರಚಿಸುವಂತೆ ಆಗ್ರಹಿಸಿದೆ.
ತಮಿಳುನಾಡು ಹಲವು ಬಾರಿ ಮೇಕೆದಾಟು ಯೋಜನೆಗೆ ಅಡ್ಡಿಪಡಿಸುತ್ತಲೇ ಬಂದಿದೆ. ಈ ಹಿಂದೆ ಸುಪ್ರೀಂ ಕೋರ್ಟ್, ಮೇಕೆದಾಟು ವಿಚಾರವನ್ನು ಕೇಂದ್ರ ಜಲ ಆಯೋಗ ತೀರ್ಮಾನ ಮಾಡುತ್ತದೆ ಎಂದು ಸ್ಪಷ್ಟಪಡಿಸಿತ್ತು. ಕೇಂದ್ರ ಜಲಶಕ್ತಿ ಆಯೋಗ ಕೂಡ ಬೇರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ ಎಂದು ಈಗಾಗಲೇ ಕರ್ನಾಟಕಕ್ಕೆ ಹೇಳಿದೆ. ಮೇಲಿನ ರಾಜ್ಯಗಳು ಅಣೆಕಟ್ಟನ್ನು ನಿರ್ಮಿಸಬಹುದು ಮತ್ತು ತಮಿಳುನಾಡಿಗೆ ಬರಬೇಕಾದ ನೀರಿನ ಪಾಲನ್ನು ಬಿಟ್ಟರೆ ಸಾಕು ಎಂದು ಸ್ಪಷ್ಟಪಡಿಸಿದೆ. ಈ ಸ್ಪಷ್ಟೀಕರಣದ ನಂತರವೂ ಡಿಎಂಕೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದೀಗ ರಾಜ್ಯಸಭೆಯಲ್ಲಿ ನಿಲುವಳಿ ಸೂಚನೆಯ ಮೂಲಕ ಚರ್ಚೆಗೆ ಒತ್ತಾಯಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
