ಮದುವೆ ಎನ್ನುವಂತಹದ್ದು ಜೀವನದ ಪ್ರಮುಖ ಘಟ್ಟ ಮಾತ್ರವಲ್ಲ ಜೀವನದ ಬಹುದೊಡ್ಡ ತಿರುವು ಕೂಡ ಹೌದು. ಆದ್ದರಿಂದ ಸರಿಯಾದ ಜೀವನ ಸಂಗಾತಿಯನ್ನು (Life Partner) ಆಯ್ಕೆ ಮಾಡುವುದು ತುಂಬಾನೇ ಮುಖ್ಯವಾಗಿದೆ. ಜೀವನ ಪಯಣದಲ್ಲಿ ನಿಮ್ಮ ಜೊತೆಗಿರುವ ಸಂಗಾತಿ ಸದ್ಗುಣಶೀಲರಾಗಿದ್ದರೆ, ಆ ಮನೆ ಸ್ವರ್ಗವಾಗುತ್ತದೆ. ಅದೇ ಕೆಲವು ನಕಾರಾತ್ಮಕ ಗುಣಗಳನ್ನು ಹೊಂದಿರುವ ಯಾರಾದರೂ ನಿಮ್ಮ ಜೀವನದಲ್ಲಿ ಪ್ರವೇಶಿಸಿದರೆ, ನಿಮಗೆ ಮನಸ್ಸಿನ ಶಾಂತಿ ಇರುವುದಿಲ್ಲ ಎಂದು ಚಾಣಕ್ಯ ಎಚ್ಚರಿಸಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ಪುರುಷನೂ ಮದುವೆಯಾಗುವ ಮುನ್ನ ಈ ಕೆಲವು ವಿಷಯಗಳತ್ತ ಗಮನ ಹರಿಸಬೇಕು, ಅದರಲ್ಲೂ ಈ ಕೆಲವು ಗುಣಗಳಿರುವ ಹೆಣ್ಣನ್ನು ಮದುವೆಯಾಗಲೇಬಾರದು ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ. ಹಾಗಿದ್ರೆ ಪುರುಷರು ಎಂತಹ ಹೆಣ್ಣನ್ನು ಮದುವೆಯಾಗಬಾರದು ಎಂಬುದನ್ನು ನೋಡೋಣ ಬನ್ನಿ,
ಪುರುಷರು ಇಂತಹ ಹೆಣ್ಣನ್ನು ಮದುವೆಯಾಗಬಾರದಂತೆ:
ಸೌಂದರ್ಯದ ಹೆಮ್ಮೆ ಪಡುವ ಹೆಣ್ಣು: ಚಾಣಕ್ಯನ ಪ್ರಕಾರ, ಒಬ್ಬ ಹುಡುಗಿ ತನ್ನ ಬಾಹ್ಯ ಸೌಂದರ್ಯದ ಬಗ್ಗೆ ಅತಿಯಾಗಿ ಹೆಮ್ಮೆಪಡುತ್ತಿದ್ದರೆ ಅಂತಹ ಹೆಣ್ಣನ್ನು ಮದುವೆಯಾಗಬಾರದಂತೆ. ಆಕೆ ತನ್ನ ಸ್ವಾರ್ಥದ ಬಗ್ಗೆ ಮಾತ್ರ ಯೋಚಿಸುತ್ತಾಳೆ. ಅವಳು ಇತತರನ್ನು ಖುಷಿಯಾಗಿ ನೋಡಿಕೊಳ್ಳಲು ಸಾಧ್ಯವೇ ಇಲ್ಲ.
ಇತರರ ಬಗ್ಗೆ ಕೆಟ್ಟ ಮಾತುಗಳನ್ನಾಡುವ ಮಹಿಳೆ: ಯಾವಾಗಲೂ ಇತರರ ಬಗ್ಗೆ ಕೆಟ್ಟದಾಗಿ ಮಾತನಾಡುವ ಅಥವಾ ಇತರರ ಬಗ್ಗೆ ಕೆಟ್ಟ ಆಲೋಚನೆಗಳನ್ನು ಹೊಂದಿರುವ , ಚಾಡಿ ಹೇಳುವ ಮಹಿಳೆಯರಿಂದ ದೂರವಿರಬೇಕು. ಅಂತಹ ಮಹಿಳೆಯರು ಕುಟುಂಬದಲ್ಲಿ ಅಶಾಂತಿಯನ್ನು ಉಂಟುಮಾಡುತ್ತಾರೆ. ಹಾಗಾಗಿ ಅಂತಹ ಹೆಣ್ಣಿನಿಂದ ದೂರವಿದ್ದಷ್ಟು ಒಳ್ಳೆಯದು.
ಭೌತಿಕ ಸೌಕರ್ಯಗಳ ಬಗ್ಗೆ ಯೋಚಿಸುವುದು: ಮನೆ, ಕಾರು, ಆಭರಣ, ಹಣ ಅಂತೆಲ್ಲಾ ಭೌತಿಕ ಸೌಕರ್ಯಗಳಿಗೆ ಆದ್ಯತೆ ನೀಡುವ ಹುಡುಗಿಯರು ಅಥವಾ ಹೆಂಡತಿಯರು ತಮ್ಮ ಗಂಡನ ಭಾವನೆಗಳಿಗೆ ಎಂದಿಗೂ ಬೆಲೆ ಕೊಡಲಾರರು. ಇಂತಹ ಸ್ವಾರ್ಥಿ ಹೆಣ್ಣನ್ನು ಮದುವೆಯಾದರೆ ಜೀವನಪರ್ಯಂತ ನರಕಯಾತನೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ ಆಚಾರ್ಯ ಚಾಣಕ್ಯ.
ಯಾವಾಗಲೂ ಇತರರನ್ನು ಅವಮಾನಿಸುವುದು: ಆಚಾರ್ಯ ಚಾಣಕ್ಯರ ಪ್ರಕಾರ, ಇತರರನ್ನು ನಿರಂತರವಾಗಿ ಅವಮಾನಿಸುವ ಮಹಿಳೆಯನ್ನು ಎಂದಿಗೂ ಮದುವೆಯಾಗಬಾರದು. ಅಂತಹ ಹುಡುಗಿಯರು ಎಂದಿಗೂ ತಮ್ಮ ಕುಟುಂಬಕ್ಕೆ ಗೌರವವನ್ನು ನೀಡಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: ಅತಿಯಾದ ನಿರೀಕ್ಷೆ ಒಳ್ಳೆಯದಲ್ಲ ಅನ್ನೋದು ಇದೇ ಕಾರಣಕ್ಕೆ ನೋಡಿ
ಸುಳ್ಳಿನ ಹಾದಿಯಲ್ಲಿ ನಡೆಯುವ ಹೆಣ್ಣು: ಚಾಣಕ್ಯನ ಪ್ರಕಾರ, ನಿರಂತರವಾಗಿ ಸುಳ್ಳು ಹೇಳುವ ಮತ್ತು ಕೆಟ್ಟ ಮಾರ್ಗವನ್ನು ಅನುಸರಿಸುವ ಅಭ್ಯಾಸ ಹೊಂದಿರುವ ಹೆಣ್ಣನ್ನು ಮದುವೆಯಾಗಬಾರದು. ಆಕೆ ಗಂಡನಿಗೆ ಮಾತ್ರವಲ್ಲ ಕುಟುಂಬಕ್ಕೂ ಹಾನಿಕಾರಕ ಎಂದಿದ್ದಾರೆ ಚಾಣಕ್ಯ. ಅಲ್ಲದೆ ಅಂತಹ ಹೆಣ್ಣು ಸಂಬಂಧದಲ್ಲಿ ಪ್ರಾಮಾಣಿಕಳಾಗಿ ಇರಲೂ ಸಾಧ್ಯವಿಲ್ಲ.
ಅಹಂಕಾರ ಮನೋಭಾವ: ಇತರರಿಗಿಂತ ತಾವು ಶ್ರೇಷ್ಠರೆಂದು ಭಾವಿಸುವ, ಅಹಂಕಾರ ಭಾವವನ್ನು ಹೊಂದುರುವ ಹೆಣ್ಣನ್ನು ಮದುವೆಯಾಗಬಾರದು. ಏಕೆಂದರೆ ಆಕೆ ಸಂಬಂಧಗಳಿಗೆ ಗೌರವಿಸಲು ಸಾಧ್ಯವಿಲ್ಲ. ಇದು ಮನೆಯಲ್ಲಿ ಘರ್ಷಣೆಗಳಿಗೆ ಕಾರಣವಾಗಬಹುದು. ಹಾಗಾಗಿ ಇಂತಹ ಹೆಣ್ಣಿನಿಂದ ದೂರವಿರುವುದು ಉತ್ತಮ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ