Chanakya Niti: ಪ್ರತಿಯೊಬ್ಬ ಪುರುಷನು ಈ ವಿಚಾರಗಳನ್ನು ತನ್ನ ಹೆಂಡತಿಯಿಂದ ಮರೆಮಾಡಲೇಬೇಕು ಎನ್ನುತ್ತಾರೆ ಚಾಣಕ್ಯ – Kannada News | Chanakya Niti: A husband should never share these things with his wife

ದಾಂಪತ್ಯ ಜೀವನ (Married life) ನೂರ್ಕಾಲ ಸುಖಕರವಾಗಿರಬೇಕೆಂದರೆ, ಸಮತೋಷದಿಂದ ಕೂಡಿರಬೇಕೆಂದರೆ ಗಂಡ ಹೆಂಡತಿಯ ನಡುವೆ ಪ್ರೀತಿ, ನಂಬಿಕೆ, ವಿಶ್ವಾಸ ಇವೆಲ್ಲವೂ ಇರಬೇಕು. ಮುಖ್ಯವಾಗಿ ದಂಪತಿಗಳ ನಡುವೆ ಯಾವುದೇ ರೀತಿಯ ಮುಚ್ಚುಮರೆ ಇರಲೇಬಾರದು, ಯಾವುದೇ ವಿಚಾರಗಳನ್ನು ಮುಚ್ಚುಮರೆ ಮಾಡಿದರೆ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಆದರೆ ಆಚಾರ್ಯ ಚಾಣಕ್ಯರ ಪ್ರಕಾರ ದಾಂಪತ್ಯ ಜೀವನದ ಒಳಿತಿಗಾಗಿ ಗಂಡನಾದವನು ಹೆಂಡತಿಯಿಂದ ಈ ಒಂದಷ್ಟು ವಿಚಾರಗಳನ್ನು ಮರೆ ಮಾಡಲೇಬೇಕು ಎಂದು ಹೇಳಿದ್ದಾರೆ. ಚಾಣಕ್ಯರ ಪ್ರಕಾರ, ಮಹಿಳೆಯರು ಸ್ವಭಾವತಃ ಚಂಚಲ ಮತ್ತು ಭಾವನಾತ್ಮಕವಾಗಿರುತ್ತಾರೆ, ಕೆಲವೊಮ್ಮೆ ಇವರು ತಿಳಿಯದೇ ತಮ್ಮ ಗಂಡಂದಿರ ಸೀಕ್ರೆಟ್‌ ವಿಚಾರಗಳನ್ನು ಬೇರೆಯವರ ಬಳಿ ಹೇಳಿ ಬಿಡುತ್ತಾರೆ, ಇದಲ್ಲದೆ ಗಂಡನ ಕೆಲವೊಂದು ವಿಚಾರಕ್ಕೆ ಕೋಪ ಮಾಡಿಕೊಳ್ಳುತ್ತಾರೆ. ಹಾಗಾಗಿ ಈ ಕೆಲವೊಂದು ಸಂಗತಿಗಳನ್ನು ಗಂಡ ತನ್ನ ಹೆಂಡತಿಯ ಮುಂದೆ ಬಹಿರಂಗಪಡಿಸಬಾರದು.

ಗಂಡಸರು ತಮ್ಮ ಹೆಂಡತಿಯ ಬಳಿ ಈ ವಿಚಾರಗಳನ್ನು ಹಂಚಿಕೊಳ್ಳಬಾರದು:

ದೌರ್ಬಲ್ಯಗಳನ್ನು ಎಂದಿಗೂ ಹಂಚಿಕೊಳ್ಳಬಾರದು: ಚಾಣಕ್ಯ ನೀತಿಯ ಪ್ರಕಾರ, ಪುರುಷನು ತನ್ನ ದೊಡ್ಡ ಭಯ ಅಥವಾ ದೌರ್ಬಲ್ಯವನ್ನು ತನ್ನ ಸಂಗಾತಿಯೊಂದಿಗೆ ಎಂದಿಗೂ ಹಂಚಿಕೊಳ್ಳಬಾರದು. ನೀವು ನಿಮ್ಮ ಹೆಂಡತಿಗೆ ಎಷ್ಟೇ ಹತ್ತಿರದಲ್ಲಿದ್ದರೂ ಸಹ ನಿಮ್ಮ ದೌರ್ಬಲ್ಯಗಳನ್ನು ಯಾವಾಗಲೂ ನಿಮ್ಮೊಳಗೆ ಇಟ್ಟುಕೊಳ್ಳಿ. ಆಚಾರ್ಯ ಚಾಣಕ್ಯರ ಪ್ರಕಾರ, ಭವಿಷ್ಯದಲ್ಲಿ ನಿಮ್ಮಿಬ್ಬರ ನಡುವೆ ದೊಡ್ಡ ವಾದ ಅಥವಾ ಜಗಳ ನಡೆದರೆ, ನಿಮ್ಮ ಹೆಂಡತಿ ನಿಮ್ಮ ಎಲ್ಲಾ ದೌರ್ಬಲ್ಯಗಳನ್ನು ಕೋಪದಲ್ಲಿ ನಿಮ್ಮ ವಿರುದ್ಧ ಬಳಸಬಹುದು. ಇದು ನಿಮ್ಮ ಸ್ವಾಭಿಮಾನಕ್ಕೆ ಹಾನಿ ಮಾಡಬಹುದು. ಇದರಿಂದಾಗಿ ಸಂಬಂಧದಲ್ಲಿ ದೊಡ್ಡ ಬಿರುಕು ಮೂಡುವ ಸಾಧ್ಯತೆ ಇರುತ್ತದೆ.

ಗಳಿಕೆಗಳು ಮತ್ತು ಉಳಿತಾಯದ ರಹಸ್ಯ: ಚಾಣಕ್ಯ ನೀತಿಯ ಪ್ರಕಾರ, ಪುರುಷನು ತನ್ನ ಒಟ್ಟು ಆದಾಯ ಮತ್ತು ನಿಖರವಾದ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಎಂದಿಗೂ ತನ್ನ ಹೆಂಡತಿಯೊಂದಿಗೆ ಹಂಚಿಕೊಳ್ಳಬಾರದು. ಹೀಗೆ ಒಟ್ಟು ಗಳಿಕೆ ಮತ್ತು ಉಳಿತಾಯದ ಬಗ್ಗೆ ಹೆಂಡತಿಯ ಬಳಿ ಹೇಳಿಕೊಳ್ಳುವುದರಿಂದ ಇದು ಕೆಲವೊಮ್ಮೆ ವ್ಯರ್ಥ ಖರ್ಚಿಗೆ ಕಾರಣವಾಗಬಹುದು. ಅಲ್ಲದೆ ಹೆಂಡತಿ ಈ ರಹಸ್ಯಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದರಿಂದ ಗಂಡನ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ಸೀಕ್ರೆಟ್‌ಗಳನ್ನು ಬಿಟ್ಟುಕೊಡಬಾರದು. ಮತ್ತು ಈ ರಹಸ್ಯ ಉಳಿತಾಗಳನ್ನು ಪ್ರಮುಖ ಅಗತ್ಯಗಳಿಗೆ ಮಾತ್ರ ಬಳಕೆ ಮಾಡಬೇಕು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.

ಇದನ್ನೂ ಓದಿ: ಹೆಂಡತಿಯಾದವಳು ಗಂಡನ ಮುಂದೆ ಎಂದಿಗೂ ಕೆಲಸಗಳನ್ನು ಮಾಡಬಾರದು ಎನ್ನುತ್ತಾರೆ ಚಾಣಕ್ಯ

ಅವಮಾನ ಅಥವಾ ವೈಫಲ್ಯಗಳ ಬಗ್ಗೆಯೂ ಹೇಳಬಾರದು: ಜೀವನದಲ್ಲಿ ನೀವು ಕೆಲಸದಲ್ಲಿ, ವ್ಯವಹಾರದಲ್ಲಿ ವೈಫಲ್ಯಗಳು ಸಂಭವಿಸಿದರೆ  ಅಥವಾ ಸ್ನೇಹಿತರಿಂದು, ಕುಟುಂಬಸ್ಥರಿಂದ ಅವಮಾನಕ್ಕೊಳಗಾಗಿದ್ದರೆ, ಈ ವಿಷಯಗಳನ್ನು ಸಂಗಾತಿಯೊಂದಿಗೆ ಹೇಳಿಕೊಳ್ಳಬಾರದು. ಏಕೆಂದರೆ ಇದರಿಂದ ಹೆಂಡತಿ ಒತ್ತಡಕ್ಕೊಳಗಾಗಬಹುದು ಇಲ್ಲದಿದ್ದರೆ ಕೋಪಗೊಂಡು ಆಕೆ ನಿಮ್ಮನ್ನು ವೈಫಲ್ಯದ ಕಾರಣಕ್ಕೆ ಅವಮಾನವನ್ನೂ ಮಾಡಬಹುದು. ಹಾಗಾಗಿ ಈ ವಿಚಾರವನ್ನು ಮರೆ ಮಾಡಿದರೆಯೇ ಒಳ್ಳೆಯದು.

ದಾನ ಕಾರ್ಯಗಳ ಬಗ್ಗೆ ಹೇಳಬಾರದು: .  ಬಲಗೈಯಿಂದ ಮಾಡಿದ ದಾನ ಎಡಗೈಗೂ ತಿಳಿಯಬಾರದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ನೀವು ಸ್ನೇಹಿತ, ಸಂಬಂಧಿಕರು ಅಥವಾ ಅಗತ್ಯವಿರುವ ಯಾರಿಗಾದರೂ ಹಣದ ಸಹಾಯ ಮಾಡಿದರೆ, ನಿಮ್ಮ ಹೆಂಡತಿಗೂ ಸಹ ಅದರ ಬಗ್ಗೆ ತಿಳಿಸಬಾರದು. ನೀವು ನಿಮ್ಮ ಸಂಗಾತಿಗೆ ಇದರ ಬಗ್ಗೆ ಹೇಳಿದರೆ, ಅವರು ನಿಮ್ಮ ನಿರ್ಧಾರವನ್ನು ಪ್ರಶ್ನಿಸಬಹುದು, ಅದು ನಿಮ್ಮ ಮಾನಸಿಕ ಶಾಂತಿಯನ್ನು ಹಾಳುಮಾಡಬಹುದು, ಇದು ಇಬ್ಬರ ನಡುವೆ ಮನಸ್ತಾಪಕ್ಕೂ ಕಾರಣವಾಗಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *