ಬೆಂಗಳೂರು, ಜುಲೈ 19: ಮಾಜಿ ಪ್ರಧಾನ ಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಶನಿವಾರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಅವರು ತಮ್ಮ ಪತಿ ದೇವೇಗೌಡ ಅವರೊಂದಿಗೆ ಕಳೆದ ಕೊನೆ ಕ್ಷಣಗಳ ವೀಡಿಯೋ ಇಲ್ಲಿದೆ. ಜೀವನದ ಕೊನೆ ಕ್ಷಣಗಳನ್ನು ಪತಿಯೊಂದಿಗೆ ಕಳೆದ ಚೆನ್ನಮ್ಮ, ಸಾವಿಗೂ ಮುನ್ನ ಗೌಡರ ಆಶೀರ್ವಾದವನ್ನು ಪಡೆದಿದ್ದಾರೆ. 72 ವರ್ಷಗಳ ಕಾಲ ಬೆನ್ನೆಲುಬಾಗಿದ್ದ ಪತ್ನಿಯನ್ನು ಕಳೆದುಕೊಂಡು ಹೆಚ್ಡಿಡಿ ಇದೀಗ ದುಃಖದಲ್ಲಿ ಮುಳುಗಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
