CWG 2026: ಒಂದೇ ಸ್ಪರ್ಧೆಯಲ್ಲಿ ಭಾರತಕ್ಕೆ 2 ಪದಕ! – Kannada News | Glasgow 2026: India Bags 3 Track & Field Medals in a Single Day!

ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಗೇಮ್ಸ್‌ನ 6ನೇ ದಿನದಂದು ಭಾರತೀಯ ಕ್ರೀಡಾಪಟುಗಳು ಒಟ್ಟು ಮೂರು ಪದಕಗಳನ್ನು ಗೆದ್ದಿದ್ದಾರೆ. ಈ ಮೂರು ಪದಕಗಳು ಟ್ರ್ಯಾಕ್ ಅಂಡ್ ಫೀಲ್ಡ್ (ಅಥ್ಲೆಟಿಕ್ಸ್ ಮತ್ತು ಪ್ಯಾರಾ ಅಥ್ಲೆಟಿಕ್ಸ್) ವಿಭಾಗದಲ್ಲೇ ಬಂದಿರುವುದು ವಿಶೇಷ. ಪ್ಯಾರಾ ಟ್ರ್ಯಾಕ್‌ನಲ್ಲಿ ದಿಲೀಪ್ ಮಹಾದು ಗಾವಿತ್ ಚಿನ್ನ ಗೆದ್ದರೆ, ಮೊಹಮ್ಮದ್ ಬಾಸಿಲ್‌ಗೆ ಬೆಳ್ಳಿ ಪದಕಕ್ಕೆ ಕೊರೊಳೊಡ್ಡಿದ್ದಾರೆ. ಇನ್ನು ಲಾಂಗ್ ಜಂಪ್‌ನಲ್ಲಿ ಮುರಳಿ ಶ್ರೀಶಂಕರ್ ಬೆಳ್ಳಿ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಗಾವಿತ್‌ಗೆ ಚಿನ್ನ, ಬಾಸಿಲ್‌ಗೆ ಬೆಳ್ಳಿ:

ಪುರುಷರ 100 ಮೀಟರ್ (T47 ವಿಭಾಗ) ಓಟದ ಸ್ಪರ್ಧೆಯಲ್ಲಿ. ಭಾರತದ ಹೆಮ್ಮೆಯ ಪ್ಯಾರಾ ಅಥ್ಲೀಟ್ ದಿಲೀಪ್ ಮಹಾದು ಗಾವಿತ್ ಕೇವಲ 10.71 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು. ಇದು ಕೇವಲ ಚಿನ್ನದ ಪದಕವಲ್ಲ, ಬದಲಿಗೆ ಹೊಸ ಕಾಮನ್‌ವೆಲ್ತ್ ಗೇಮ್ಸ್ ದಾಖಲೆಯಾಗಿದೆ!

ಏಕೆಂದರೆ ಕಾಮನ್‌ವೆಲ್ತ್ ಗೇಮ್ಸ್ ಇತಿಹಾಸದಲ್ಲೇ ಈ ನಿರ್ದಿಷ್ಟ ವಿಭಾಗದಲ್ಲಿ ಇದುವರೆಗೆ ಯಾವುದೇ ಕ್ರೀಡಾಪಟು 10.71 ಸೆಕೆಂಡುಗಳಷ್ಟು ವೇಗವಾಗಿ ಓಡಿ ಗುರಿ ತಲುಪಿಲ್ಲ.

ಇದೇ ರೇಸ್‌ನಲ್ಲಿ ಭಾರತದ ಮತ್ತೊಬ್ಬ ಪ್ರತಿಭಾವಂತ ಓಟಗಾರ ಮೊಹಮ್ಮದ್ ಬಾಸಿಲ್ ಎಂ 10.83 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿಯ ಪದಕವನ್ನು ತನ್ನದಾಗಿಸಿಕೊಂಡರು.

ಲಾಂಗ್ ಜಂಪ್‌ನಲ್ಲಿ ಮುರಳಿ ಮಿಂಚಿಂಗ್:

ಭಾರತದ ಸ್ಟಾರ್ ಅಥ್ಲೀಟ್ ಮುರಳಿ ಶ್ರೀಶಂಕರ್ ಪುರುಷರ ಲಾಂಗ್ ಜಂಪ್ ಫೈನಲ್‌ನಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದರು. ಅತ್ಯಂತ ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಸ್ಪರ್ಧೆಯಲ್ಲಿ ಶ್ರೀಶಂಕರ್ 8.09 ಮೀಟರ್ ದೂರ ಜಿಗಿಯುವ ಮೂಲಕ ಜಂಟಿಯಾಗಿ ಬೆಳ್ಳಿಯ ಪದಕಕ್ಕೆ ಮುತ್ತಿಕ್ಕಿದರು. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಬಂದ ನಂತರ ಶ್ರೀಶಂಕರ್ ನೀಡಿದ ಈ ಪ್ರದರ್ಶನ ಅವರ ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ರಾಜೀವ್ ಕುಮಾರ್… ಟೀಮ್ ಇಂಡಿಯಾ ಹಿಂದಿದ್ದ ಕಾಣದ ‘ಕೈ’

ಈ ಮೂರು ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಭಾರತವು 8ನೇ ಸ್ಥಾನವನ್ನು ಕಾಯ್ದುಕೊಂಡಿದೆ. ಈವರೆಗೆ ಒಟ್ಟು 15 ಪದಕಗಳನ್ನು (3 ಚಿನ್ನ, 9 ಬೆಳ್ಳಿ, 3 ಕಂಚು) ಗೆದ್ದಿರುವ ಭಾರತ ಮುಂಬರುವ ಪಂದ್ಯಗಳಲ್ಲಿ ಮತ್ತಷ್ಟು ಮೆಡಲ್​ಗಳನ್ನು ಗೆಲ್ಲುವ ನಿರೀಕ್ಷೆ ಇದೆ.

ಭಾರತದ ಪರ ಪದಕ ಗೆದ್ದವರ ಪಟ್ಟಿ:

ಕ್ರೀಡಾಪಟು  ಕ್ರೀಡೆ ಮತ್ತು ವಿಭಾಗ ಪದಕದ ಪ್ರಕಾರ
ಮಿರಾಬಾಯಿ ಚಾನು ವೇಟ್‌ಲಿಫ್ಟಿಂಗ್ (ಮಹಿಳೆಯರ 48 ಕೆಜಿ) 🥇 ಚಿನ್ನ
ಶರ್ಮಿಳಾ ಧಂಕರ್ ಪ್ಯಾರಾ ಅಥ್ಲೆಟಿಕ್ಸ್ (ಮಹಿಳೆಯರ ಶಾಟ್‌ಪುಟ್ F57) 🥇 ಚಿನ್ನ
ದಿಲೀಪ್ ಮಹಾದು ಗಾವಿತ್ ಪ್ಯಾರಾ ಅಥ್ಲೆಟಿಕ್ಸ್ (ಪುರುಷರ 100 ಮೀ T47) 🥇 ಚಿನ್ನ
ಮುರಳಿ ಶ್ರೀಶಂಕರ್ ಅಥ್ಲೆಟಿಕ್ಸ್ (ಪುರುಷರ ಲಾಂಗ್ ಜಂಪ್) 🥈 ಬೆಳ್ಳಿ
ಗುಲ್ವೀರ್ ಸಿಂಗ್ ಅಥ್ಲೆಟಿಕ್ಸ್ (ಪುರುಷರ 10,000 ಮೀ ಓಟ) 🥈 ಬೆಳ್ಳಿ
ಮೊಹಮ್ಮದ್ ಬಾಸಿಲ್ ಪ್ಯಾರಾ ಅಥ್ಲೆಟಿಕ್ಸ್ (ಪುರುಷರ 100 ಮೀ T47) 🥈 ಬೆಳ್ಳಿ
ಸಂಕೇತ್ ಸರ್ಗರ್ ವೇಟ್‌ಲಿಫ್ಟಿಂಗ್ (ಪುರುಷರ 55 ಕೆಜಿ) 🥈 ಬೆಳ್ಳಿ
ಬಿಂದ್ಯಾರಾಣಿ ದೇವಿ ವೇಟ್‌ಲಿಫ್ಟಿಂಗ್ (ಮಹಿಳೆಯರ 55 ಕೆಜಿ) 🥈 ಬೆಳ್ಳಿ
ಸುಶೀಲಾ ದೇವಿ ಲಿಕ್ಮಾಬಾಮ್ ಜೂಡೋ (ಮಹಿಳೆಯರ 48 ಕೆಜಿ) 🥈 ಬೆಳ್ಳಿ
ವಿಕಾಸ್ ಠಾಕೂರ್ ವೇಟ್‌ಲಿಫ್ಟಿಂಗ್ (ಪುರುಷರ 96 ಕೆಜಿ) 🥈 ಬೆಳ್ಳಿ
ತುಲಿಕಾ ಮಾನ್ ಜೂಡೋ (ಮಹಿಳೆಯರ +78 ಕೆಜಿ) 🥈 ಬೆಳ್ಳಿ
ಅಂಶು ಮಲಿಕ್ ಕುಸ್ತಿ (ಮಹಿಳೆಯರ 57 ಕೆಜಿ ಫ್ರೀಸ್ಟೈಲ್) 🥈 ಬೆಳ್ಳಿ
ಗುರುರಾಜ ಪೂಜಾರಿ ವೇಟ್‌ಲಿಫ್ಟಿಂಗ್ (ಪುರುಷರ 61 ಕೆಜಿ) 🥉 ಕಂಚು
ವಿಜಯ್ ಕುಮಾರ್ ಯಾದವ್ ಜೂಡೋ (ಪುರುಷರ 60 ಕೆಜಿ) 🥉 ಕಂಚು
ಹರ್ಜಿಂದರ್ ಕೌರ್ ವೇಟ್‌ಲಿಫ್ಟಿಂಗ್ (ಮಹಿಳೆಯರ 71 ಕೆಜಿ) 🥉 ಕಂಚು

Published On – 7:35 am, Thu, 30 July 26

Source link

Leave a Reply

Your email address will not be published. Required fields are marked *