ನವದೆಹಲಿ, ಜುಲೈ 1: ನಿನ್ನೆ ಭರ್ಜರಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ (Gold Price) ಇವತ್ತು ಸ್ವಲ್ಪ ಹೆಚ್ಚಳಗೊಂಡಿದೆ. ಬೆಳ್ಳಿ ಬೆಲೆಯೂ ನಿನ್ನೆ ಐದು ರೂ ಕಡಿಮೆಗೊಂಡಿದ್ದು, ಇವತ್ತು ಅಷ್ಟೇ ಮೊತ್ತ ಹೆಚ್ಚಿದೆ. ಬಂಗಾರದ ದರ ಬುಧವಾರ ಗ್ರಾಮ್ಗೆ 60 ರೂನಷ್ಟು ಏರಿದೆ. ಇದರೊಂದಿಗೆ ಆಭರಣ ಚಿನ್ನದ ಬೆಲೆ 12,900 ರೂ ಗಡಿ ದಾಟಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಇಂದು ಈ ಹಳದಿ ಲೋಹದ ದರ ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,29,050 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,40,780 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,29,050 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 24,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜುಲೈ 1ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,078 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,905 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,559 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,078 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,905 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 12,905 ರೂ
- ಚೆನ್ನೈ: 13,100 ರೂ
- ಮುಂಬೈ: 12,905 ರೂ
- ದೆಹಲಿ: 12,920 ರೂ
- ಕೋಲ್ಕತಾ: 12,905 ರೂ
- ಕೇರಳ: 12,905 ರೂ
- ಅಹ್ಮದಾಬಾದ್: 12,910 ರೂ
- ಜೈಪುರ್: 12,920 ರೂ
- ಲಕ್ನೋ: 12,920 ರೂ
- ಭುವನೇಶ್ವರ್: 12,905 ರೂ
ಇದನ್ನೂ ಓದಿ: ನಯಾರದಲ್ಲಿ ಪೆಟ್ರೋಲ್, ಡೀಸಲ್ ಬೆಲೆ ಭರ್ಜರಿ ಇಳಿಕೆ; ವಿಮಾನ ಇಂಧನವೂ ಅಗ್ಗ
ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಮಲೇಷ್ಯಾ: 537 ರಿಂಗಿಟ್ (12,422 ರುಪಾಯಿ)
- ದುಬೈ: 485.25 ಡಿರಾಮ್ (12,515 ರುಪಾಯಿ)
- ಅಮೆರಿಕ: 133 ಡಾಲರ್ (12,600 ರುಪಾಯಿ)
- ಸಿಂಗಾಪುರ: 176.10 ಸಿಂಗಾಪುರ್ ಡಾಲರ್ (12,874 ರುಪಾಯಿ)
- ಕತಾರ್: 488 ಕತಾರಿ ರಿಯಾಲ್ (12,684 ರೂ)
- ಸೌದಿ ಅರೇಬಿಯಾ: 502 ಸೌದಿ ರಿಯಾಲ್ (12,658 ರುಪಾಯಿ)
- ಓಮನ್: 51.80 ಒಮಾನಿ ರಿಯಾಲ್ (12,746 ರುಪಾಯಿ)
- ಕುವೇತ್: 40.78 ಕುವೇತಿ ದಿನಾರ್ (12,547 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 240 ರೂ
- ಚೆನ್ನೈ: 245 ರೂ
- ಮುಂಬೈ: 240 ರೂ
- ದೆಹಲಿ: 240 ರೂ
- ಕೋಲ್ಕತಾ: 240 ರೂ
- ಕೇರಳ: 245 ರೂ
- ಅಹ್ಮದಾಬಾದ್: 240 ರೂ
- ಜೈಪುರ್: 240 ರೂ
- ಲಕ್ನೋ: 240 ರೂ
- ಭುವನೇಶ್ವರ್: 245 ರೂ
- ಪುಣೆ: 240
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
