ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಬ್ಯಾಟಿಂಗ್ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದಿದ್ದರೂ, ಬೌಲಿಂಗ್ನಲ್ಲಿ ತಂಡಕ್ಕೆ ನೆರವಾಗಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ 3 ವಿಕೆಟ್ಗಳನ್ನು ಕಬಳಿಸಿದ್ದ ಜಡೇಜಾ ಎರಡನೇ ಇನ್ನಿಂಗ್ಸ್ನಲ್ಲಿಯೂ ಶಿಸ್ತುಬದ್ಧ ದಾಳಿ ನಡೆಸುತ್ತಿದ್ದಾರೆ. ಆದಾಗ್ಯೂ ಜಡೇಜಾ ಮಾಡಿದ ಅದೊಂದು ತಪ್ಪು ವಿಕೆಟ್ ಕೈತಪ್ಪುವಂತೆ ಮಾಡಿತು(PC-PTI).
ಶ್ರೀಲಂಕಾದ ಎರಡನೇ ಇನ್ನಿಂಗ್ಸ್ನ 16ನೇ ಓವರ್ ಬೌಲ್ ಮಾಡಿದ ರವೀಂದ್ರ ಜಡೇಜಾ ಓವರ್ನ ಕೊನೆಯ ಎಸೆತದಲ್ಲಿ ವಿಕೆಟ್ ಸಿಗುವ ಅವಕಾಶ ಸೃಷ್ಟಿಸಿದರು. ಜಡೇಜಾ ಬೌಲಿಂಗ್ನಲ್ಲಿ ಲಂಕಾ ನಾಯಕ ಧನಂಜಯ ಡಿ ಸಿಲ್ವಾ ನೀಡಿದ ಕ್ಯಾಚ್ ಅನ್ನು ಕೆಎಲ್ ರಾಹುಲ್ ತೆಗೆದುಕೊಂಡರು. ಆದರೆ ಜಡೇಜಾ ಬೌಲ್ ಮಾಡಿದ ಆ ಚೆಂಡು ನೋ ಬಾಲ್ ಎಂದು ಮೂರನೇ ಅಂಪೈರ್ ಘೋಷಿಸುವ ಮೂಲಕ ಟೀಂ ಇಂಡಿಯಾದ ಸಂಭ್ರಮಕ್ಕೆ ತಣ್ಣೀರೆರೆಚಿದರು(PC-PTI).
ಇದರಿಂದಾಗಿ ತಂಡಕ್ಕೆ ಸಿಗಬೇಕಿದ್ದ ವಿಕೆಟ್ ಕೈತಪ್ಪಿತು. ಯಾವುದೇ ಬೌಲರ್ ಆಗಿರಲಿ ಪಂದ್ಯದಲ್ಲಿ ನೋ ಬಾಲ್ ಎಸೆಯುವುದನ್ನು ಅಕ್ಷಮ್ಯ ಎನ್ನಲಾಗುತ್ತದೆ. ಆದಾಗ್ಯೂ ಜಡೇಜಾ ಟೆಸ್ಟ್ ಕ್ರಿಕೆಟ್ನಲ್ಲಿ ನೋ ಬಾಲ್ ಎಸೆಯುವಂತಹ ದೊಡ್ಡ ಅಪರಾಧವನ್ನು ಪದೇ ಪದೇ ಮಾಡುತ್ತಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲೂ ಜಡೇಜಾ ಆಗಾಗ್ಗೆ ನೋ ಬಾಲ್ ಎಸೆಯುವ ಕಯಾಲಿಯನ್ನು ಮುಂದವರೆಸಿದ್ದಾರೆ(PC-PTI).
ಇಂದಿನ ಪಂದ್ಯದಲ್ಲಿ ಮಾತ್ರವಲ್ಲ ಅಂಕಿಅಂಶಗಳನ್ನು ನೋಡಿದರೆ, ರವೀಂದ್ರ ಜಡೇಜಾ ಸ್ಪಿನ್ನರ್ಗಳಲ್ಲಿ ಅತಿ ಹೆಚ್ಚು ಟೆಸ್ಟ್ ನೋ-ಬಾಲ್ಗಳನ್ನು ಎಸೆದ ಬೇಡದ ದಾಖಲೆಯನ್ನು ಹೊಂದಿದ್ದಾರೆ. ಜಡೇಜಾ ಇದುವರೆಗೆ 84 ನೋ-ಬಾಲ್ಗಳನ್ನು ಎಸೆಯುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ(PC-PTI).
ಪಾಕಿಸ್ತಾನದ ನೌಮನ್ ಅಲಿ 40 ನೋ-ಬಾಲ್ಗಳನ್ನು ಎಸೆಯುವ ಮೂಲಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಜಡೇಜಾ ಮತ್ತು ನೌಮನ್ ನಡುವಿನ ಅಂತರ ದೊಡ್ಡದಿದೆ. ಹೀಗಾಗಿ, ಜಡೇಜಾ ತಮ್ಮ ವೃತ್ತಿಜೀವನ ಮುಗಿಯುವ ಹಂತಕ್ಕೆ ಬಂದರೂ ತನ್ನ ಹಳೆಯ ತಪ್ಪನ್ನು ಸರಿಪಡಿಸಿಕೊಳ್ಳದೆ ಇರುವುದು ತಂಡಕ್ಕೆ ದೊಡ್ಡ ತಲೆನೋವಾಗಿದೆ(PC-PTI).
