ಭಾರತ ಹಾಗೂ ಜಿಂಬಾಬ್ವೆ (India vs Zimbabwe) ಎರಡೂ ತಂಡಗಳು ಟಿ20 ವಿಶ್ವಕಪ್ನ (T20 World Cup) ಗುಂಪು ಹಂತದಲ್ಲಿ ಅಜೇಯರಾಗಿ ಉಳಿದು ಸೂಪರ್ 8 ಸುತ್ತಿಗೆ ಅರ್ಹತೆ ಪಡೆದಿದ್ದವು. ಆದರೆ ಈ ಎರಡೂ ತಂಡಗಳು ಸೂಪರ್ 8 ಸುತ್ತಿನಲ್ಲಿ ಗೆಲುವಿನ ಆರಂಭವನ್ನು ಪಡೆಯುವಲ್ಲಿ ವಿಫಲವಾಗಿವೆ. ಆದ್ದರಿಂದ ಈಗ ಎರಡೂ ತಂಡಗಳಿಗೆ ಪರಸ್ಪರ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈ ಪಂದ್ಯ ಚೆನ್ನೈನಲ್ಲಿ ನಡೆಯುತ್ತಿರುವುದರಿಂದ ಟೀಂ ಇಂಡಿಯಾಗೆ ತವರಿನ ಲಾಭ ಸಿಗಬಹುದು. ಆದಾಗ್ಯೂ ಟೀಂ ಇಂಡಿಯಾ ಈ ಪಂದ್ಯದಲ್ಲಿ ಮೈಮರೆತರೆ ಸೋಲು ಕಟ್ಟಿಟ್ಟ ಬುತ್ತಿ. ಏಕೆಂದರೆ, ಗುಂಪು ಹಂತದಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳಿಗೆ ಜಿಂಬಾಬ್ವೆ ಆಘಾತ ನೀಡಿದೆ. ಆದ್ದರಿಂದ, ಜಿಂಬಾಬ್ವೆಗೆ ಹೋಲಿಸಿದರೆ, ಈ ಪಂದ್ಯದಲ್ಲಿ ಭಾರತ ಹೆಚ್ಚಿನ ಒತ್ತಡದೊಂದಿಗೆ ಕಣಕ್ಕಿಳಿಯಲಿದೆ.
ಚೆನ್ನೈ ಹವಾಮಾನ ಹೇಗಿರಲಿದೆ?
ಎರಡೂ ತಂಡಗಳ ನಡುವಿನ ಪಂದ್ಯವು ಫೆಬ್ರವರಿ 26 ರ ಗುರುವಾರ ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಸೆಮಿಫೈನಲ್ ರೇಸ್‌ನಲ್ಲಿ ಉಳಿಯಬೇಕಾದರೆ ಎರಡೂ ತಂಡಗಳು ಗೆಲ್ಲುವುದು ಕಡ್ಡಾಯವಾಗಿದೆ. ಆದ್ದರಿಂದ, ಎರಡೂ ತಂಡಗಳು ಗೆಲ್ಲುವ ಇರಾದೆಯೊಂದಿಗೆ ಕಣಕ್ಕಿಳಿಯಲಿವೆ. ಆದರೆ ಈ ಪಂದ್ಯ ಮಳೆಯಿಂದಾಗಿ ರದ್ದಾದರೆ ಏನಾಗಲಿದೆ?. ಇದಕ್ಕೆ ಉತ್ತರ, ಮಳೆ ಅಥವಾ ಇನ್ನಾವುದೇ ಕಾರಣದಿಂದಾಗಿ ಈ ಪಂದ್ಯ ನಡೆಯದಿದ್ದರೆ, ಟೀಂ ಇಂಡಿಯಾ ಬಹುತೇಕ ಟೂರ್ನಿಯಿಂದ ಹೊರಬೀಳಲಿದೆ.
ಪಂದ್ಯ ರದ್ದಾದರೆ, ಎರಡೂ ತಂಡಗಳು ತಲಾ 1 ಅಂಕಗಳನ್ನು ಪಡೆಯುತ್ತವೆ. ಅಲ್ಲದೆ, ಭಾರತ ಮತ್ತು ಜಿಂಬಾಬ್ವೆ ಎರಡೂ ತಂಡಗಳು ಸೂಪರ್ 8 ಸುತ್ತಿನಲ್ಲಿ ತಮ್ಮ ಮೊದಲ ಪಂದ್ಯವನ್ನು ದೊಡ್ಡ ಅಂತರದಿಂದ ಸೋತಿವೆ. ಆದ್ದರಿಂದ, ಸೆಮಿಫೈನಲ್ ತಲುಪಲು ಎರಡೂ ತಂಡಗಳು ಉಳಿದ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆಲ್ಲಬೇಕು. ಮಳೆ ಅದಕ್ಕೆ ಅಡ್ಡಿಪಡಿಸಿದರೆ, ಬ್ಯಾಕಪ್ ಖಚಿತ. ಹವಾಮಾನ ಮುನ್ಸೂಚಕ ಅಕ್ಯೂವೆದರ್ ಪ್ರಕಾರ, ಗುರುವಾರ ಚೆನ್ನೈನಲ್ಲಿ ಮಳೆಯಾಗುವ ಸಾಧ್ಯತೆಗಳಿಲ್ಲ. ಹೀಗಾಗಿ ಅಭಿಮಾನಿಗಳು ಯಾವುದೇ ಆತಂಕವಿಲ್ಲದೆ ಪೂರ್ಣ ಪಂದ್ಯವನ್ನು ವೀಕ್ಷಿಸಬಹುದು.
IND vs ZIM: ಭಾರತ- ಜಿಂಬಾಬ್ವೆ ನಡುವಿನ ನಿರ್ಣಾಯಕ ಪಂದ್ಯ ಎಲ್ಲಿ, ಯಾವಾಗ, ಎಷ್ಟು ಗಂಟೆಗೆ ಆರಂಭ?
ಸ್ಪಿನ್ನರ್‌ಗಳ ಸವಾಲು
ಚೆನ್ನೈ ಪಿಚ್‌ನಲ್ಲಿ ಆರಂಭದಲ್ಲಿ ಬ್ಯಾಟಿಂಗ್ ಮಾಡುವುದು ಸುಲಭ. ಆದರೆ ಬ್ಯಾಟ್ಸ್‌ಮನ್‌ಗಳು ಸ್ಪಿನ್ನರ್‌ಗಳನ್ನು ಹೇಗೆ ನಿಭಾಯಿಸುತ್ತಾರೆ? ಎಂಬುದರ ಮೇಲೆ ಟಾರ್ಗೆಟ್ ನಿರ್ಧಾರವಾಗುತ್ತದೆ. 2026 ರ ಟಿ20 ವಿಶ್ವಕಪ್‌ನಲ್ಲಿ ಇಲ್ಲಿ ಇಲ್ಲಿಯವರೆಗೆ ಆರು ಪಂದ್ಯಗಳು ನಡೆದಿದ್ದು, ಬ್ಯಾಟ್ಸ್‌ಮನ್‌ಗಳು ಸ್ಪಷ್ಟವಾಗಿ ಪ್ರಾಬಲ್ಯ ಸಾಧಿಸಿದ್ದಾರೆ, ಸ್ಪಿನ್ನರ್‌ಗಳು ಮತ್ತು ವೇಗದ ಬೌಲರ್‌ಗಳು ವಿಕೆಟ್ ಪಡೆಯುವುದು ಕಷ್ಟಕರವಾಗಿದೆ. ಟಿ 20 ವಿಶ್ವಕಪ್‌ನಲ್ಲಿ ಇಲ್ಲಿ ಮೊದಲು ಬ್ಯಾಟಿಂಗ್ ಮಾಡುವವರ ಸರಾಸರಿ ಸ್ಕೋರ್ 180 ರಿಂದ 200 ರನ್‌ಗಳವರೆಗೆ ಇದೆ. ಆದ್ದರಿಂದ, ಮೊದಲು ಬ್ಯಾಟಿಂಗ್ ಮಾಡುವ ತಂಡವು 200 ಕ್ಕಿಂತ ಹೆಚ್ಚು ಸ್ಕೋರ್‌ಗೆ ಗುರಿಯಿಡಬೇಕು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
