Jeffrey Epstein: ಸತ್ತ ನಂತರವೂ ಮರುಜೀವ ಪಡೆಯುವ ಹಂಬಲ; ಜೆಫ್ರೀ ಎಪ್​ಸ್ಟೀನ್ ಎನ್ನುವ ಅಪರಾಧಿಯ ಚಿತ್ರ ವಿಚಿತ್ರ ಕಥೆಗಳು… – Kannada News | Jeffrey Epstein baby ranch, impregnant women in the farm and other strange stories

ಕೋವಿಡ್ ವಕ್ಕರಿಸುವುದಕ್ಕೂ ಮುನ್ನವೇ ಸಾವನ್ನಪ್ಪಿದ ಜೆಫ್ರೀ ಎಪ್​ಸ್ಟೀನ್ (Jeffrey Epstein) ಎನ್ನುವ ವ್ಯಕ್ತಿಯ ಹೆಸರು ಈಗ ಜಾಗತಿಕವಾಗಿ ಸದ್ದು ಮಾಡುವುದು ಹೆಚ್ಚಾಗಿದೆ. ಎಪ್​ಸ್ಟೀನ್ ಫೈಲ್ಸ್​ಗಳು ಹೊರಗೆ ಬರುತ್ತಲೇ ಇವೆ. ಜಗತ್ತಿನ ವಿವಿಧ ನಾಯಕರು, ಸೆಲಬ್ರಿಟಿಗಳ ಹೆಸರು ಎಪ್​ಸ್ಟೀನ್ ಫೈಲ್​ಗಳಲ್ಲಿ ಕಾಣುತ್ತಿವೆ ಎನ್ನುವಂತಹ ಸುದ್ದಿಗಳು ಕೇಳಿಬರುವುದೂ ಹೆಚ್ಚಾಗಿದೆ. ಜಾಗತಿಕ ನಾಯಕರು, ಸಿನಿಮಾ ತಾರೆಯರು, ವಿಜ್ಞಾನಿಗಳು, ಉದ್ಯಮಿಗಳು ಹೀಗೆ ಬಹಳಷ್ಟು ದೊಡ್ಡ ದೊಡ್ಡವರ ಹೆಸರು ಈ ಎಪ್​ಸ್ಟೀನ್ ಫೈಲ್​ಗಳಲ್ಲಿ ಕಾಣಿಸಿವೆ.

ಜೆಫ್ರೀ ಎಪ್​ಸ್ಟೀನ್ ಲೈಂಗಿಕ ಅಪರಾಧಗಳನ್ನು ಎಸಗಿದ ಆರೋಪದ ಮೇಲೆ 2006ರಲ್ಲಿ ಬಂಧಿತನಾಗಿದ್ದ. ತನ್ನ ಫಾರ್ಮ್​ಗಳಲ್ಲಿ ಅಪ್ರಾಪ್ತೆಯರನ್ನು ಲೈಂಗಿಕವಾಗಿ ಶೋಷಿಸುತ್ತಿದ್ದನೆಂಬ ಆರೋಪಗಳು ಸಾಲು ಸಾಲಾಗಿ ಕೇಳಿಬರತೊಡಗಿದವು. ಈತನ ಮೇಲೆ ಸುದೀರ್ಘ ತನಿಖೆ ಮತ್ತು ವಿಚಾರಣೆಗಳು ನಡೆದಿವೆ. ಆದರೆ, 2019ರಲ್ಲಿ ನ್ಯೂಯಾರ್ಕ್​ನ ಜೈಲೊಂದರಲ್ಲಿ ಈತ ಸಾವನಪ್ಪಿದ್ದಾನೆ. ಬಹಳ ನಿಗೂಢವಾಗಿರುವ ಸಾವು ಅದು.

ಇದನ್ನೂ ಓದಿ: ಫ್ಲೋರಿಡಾ ಗಾಲ್ಫ್​ ಕೋರ್ಸ್​​ನಲ್ಲಿ ಟ್ರಂಪ್ ಹತ್ಯೆಗೆ ಯತ್ನಿಸಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಯಾರು ಈ ಜೆಫ್ರೀ ಎಪ್​ಸ್ಟೀನ್?

ಶ್ರೀಮಂತ ಹಾಗೂ ಉದ್ಯಮಿಯಾಗಿದ್ದ ಜೆಫ್ರೀ ಎಪ್​ಸ್ಟೀನ್, ತನ್ನನ್ನು ತಾನು ವಿಜೃಂಬಿಸಿಕೊಳ್ಳುತ್ತಿದ್ದಂತಹ ವ್ಯಕ್ತಿ. ತಾನು ಬಹಳ ದೊಡ್ಡ ಶ್ರೀಮಂತ ಎಂದು ಬಿಂಬಿಸಿಕೊಂಡು ದೊಡ್ಡದೊಡ್ಡವರನ್ನು ಆಕರ್ಷಿಸುತ್ತಿದ್ದ. ಅಮೆರಿಕದ ನ್ಯೂ ಮೆಕ್ಸಿಕೋ ರಾಜ್ಯದ ಸ್ಟಾನ್ಲೀಯಲ್ಲಿ ನೂರಾರು ಎಕರೆ ವಿಸ್ತೀರ್ಣದ ಈತನ ಫಾರ್ಮ್​ನಲ್ಲಿ ಆಗಾಗ್ಗೆ ಸಮಾವೇಶಗಳನ್ನು ನಡೆಸುತ್ತಾ, ಜಗತ್ತಿನ ದೊಡ್ಡ ರಾಜಕಾರಣಿಗಳು, ಉದ್ಯಮಿಗಳು, ಸೆಲಬ್ರಿಟಿಗಳು, ವಿಜ್ಞಾನಿಗಳನ್ನು ಕರೆಸುತ್ತಿದ್ದು. ಈ ಮೂಲಕ ಈತ ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದ.

ಹಲವು ತಿಕ್ಕಲುತನಗಳಿದ್ದ ಜೆಫ್ರೀ ಎಪ್​ಸ್ಟೀನ್

ಜೆಫ್ರೀ ಎಪ್​ಸ್ಟೀನ್​ಗೆ ತನ್ನ ಸಂತಾನಗಳ ಸಮೂಹವನ್ನೇ ಬೆಳೆಸುವ ಉಮೇದು ಇತ್ತು. ಅದಕ್ಕಾಗಿ 33,000 ಚದರಡಿಯ ಒಂದು ಬ್ರೀಡಿಂಗ್ ಹೌಸ್ ಕಟ್ಟಿದ್ದ. ಝಾರೋ ರಾಂಚ್ (Zorro Ranch) ಎಂದು ಇದನ್ನು ಕರೆಯಲಾಗುತ್ತಿತ್ತು. ಈತನದ್ದೇ ಸ್ಪರ್ಮ್ ಬ್ಯಾಂಕ್ ಇತ್ತು. ಈತನ ವೀರ್ಯ ಬಳಸಿ ಗರ್ಭಧಾರಣೆ ಆಗಲು ಮಹಿಳೆಯರನ್ನು ಕರೆಸುತ್ತಿದ್ದನೆನ್ನಲಾಗಿದೆ. ಈತನ ವೀರ್ಯದಿಂದ ಗರ್ಭಧಾರಣೆಯಾದ ಮಹಿಳೆಯರು ಈ ರಾಂಚ್​ನಲ್ಲಿ ಒಂದು ಸಮಯದಲ್ಲಿ 20 ಇರಬೇಕು ಎಂಬುದು ಈತನ ಅಪ್ಪಣೆ. ಪ್ರಭಾಸ್ ಅಭಿನಯದ ಕಲ್ಕಿ ಸಿನಿಮಾದಲ್ಲಿ ವಿಲನ್ ಕಮಲ್ ಹಾಸನ್ ಪಾತ್ರವನ್ನು ಎಪ್​ಸ್ಟೀನ್​ಗೆ ಹೋಲಿಸಲಿದರೆ ತೀರಾ ಅತಿಶಯೋಕ್ತಿ ಎನಿಸದೇ ಇರಬಹುದು. ಉಚ್ಚ ಮಟ್ಟದ ಮನುಷ್ಯರ ಸಂತತಿ ಬೆಳೆಸುವ ಗುರಿಯಲ್ಲಿ ತನ್ನ ಸಂತಾನ ಹೆಚ್ಚಿಸುವುದು ಈತನ ಕಲ್ಪನೆಯಾಗಿತ್ತು.

ಇದನ್ನೂ ಓದಿ: ಭಾರತದ ಜೊತೆ ವ್ಯಾಪಾರ ಒಪ್ಪಂದ ಘೋಷಿಸಿದ ಅಮೆರಿಕ; ಸುಂಕವನ್ನು ಶೇ. 18ಕ್ಕೆ ಇಳಿಸಿದ ಟ್ರಂಪ್

ತಾನು ಸತ್ತ ನಂತರ ದೇಹವನ್ನು ಫ್ರೀಜ್ ಮಾಡಬೇಕು. ಮುಂದೆ ದೇಹವನ್ನು ಜೀವಂತಗೊಳಿಸುವ ತಂತ್ರಜ್ಞಾನ ಬಂದರೆ ತಾನು ಮರಳಿ ಜೀವ ಪಡೆಯಲು ಸಾಧ್ಯ ಎಂಬುದು ಈತನ ಅನಿಸಿಕೆಯಾಗಿತ್ತು.

ಬಡ ದೇಶಗಳಲ್ಲಿ ಹಸಿವು ಕಡಿಮೆ ಮಾಡುವ ಮತ್ತು ಆರೋಗ್ಯ ವೃದ್ಧಿಸುವ ಯೋಜನೆಗಳನ್ನು ಈತ ವಿರೋಧಿಸುತ್ತಿದ್ದ. ಕಾರಣ? ಹಸಿವು ನಿವಾರಿಸಿದರೆ ಆ ದೇಶಗಳಲ್ಲಿ ಜನಸಂಖ್ಯೆ ಹೆಚ್ಚುತ್ತದೆ. ಅಸಮರ್ಥ ಮನುಷ್ಯರ ಸಂತತಿ ಹೆಚ್ಚುತ್ತದೆ ಎನ್ನುವ ತಿಕ್ಕಲುತನದ ವಿಚಾರಗಳು ಈತನದ್ದಾಗಿತ್ತು ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *