KSMC Recruitment 2026: ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್‌ನಲ್ಲಿ ಉದ್ಯೋಗವಕಾಶ; ಲಿಖಿತ ಪರೀಕ್ಷೆಯಿಲ್ಲದೇ ನೇರ ನೇಮಕಾತಿ! – Kannada News | KSMC Recruitment 2026: Walk in Interview for 50 Posts in Karnataka

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್‌

ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಉದ್ಯಮವಾದ ‘ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್’ (KSMC) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಬಂಪರ್ ಅವಕಾಶ ನೀಡಿದೆ. ಕರ್ನಾಟಕದಾದ್ಯಂತ ಇರುವ ತನ್ನ ವಿವಿಧ ಗಣಿಗಳು ಮತ್ತು ಘಟಕಗಳಲ್ಲಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಉದ್ಯೋಗ ಆಕಾಂಕ್ಷಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ, ಬದಲಿಗೆ ನೇರ ಸಂದರ್ಶನದ (Walk-in Interview) ಮೂಲಕವೇ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

11 ತಿಂಗಳ ಗುತ್ತಿಗೆ ಆಧಾರದ ನೇಮಕಾತಿ ಮತ್ತು ಸಂಬಳ:

ಈ ನೇಮಕಾತಿಯು ಸಂಪೂರ್ಣವಾಗಿ 11 ತಿಂಗಳ ತಾತ್ಕಾಲಿಕ ಗುತ್ತಿಗೆ ಆಧಾರದ ನಡೆಯಲಿದೆ. ಒಟ್ಟು 50 ವಿವಿಧ ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ರೂ. 18,350 ರಿಂದ ಹಿಡಿದು ಗರಿಷ್ಠ ರೂ. 50,000 ವರೆಗೆ ಆಕರ್ಷಕ ಗೌರವಧನ (ಸಂಭಾವನೆ) ನೀಡಲಾಗುತ್ತದೆ.

ಜುಲೈ 29 ರಿಂದ ನೇರ ಸಂದರ್ಶನ ಆರಂಭ:

ವಿವಿಧ ಹುದ್ದೆಗಳಿಗೆ ಅನುಗುಣವಾಗಿ 2026ರ ಜುಲೈ 29 ರಿಂದ ಜುಲೈ 31ರ ವರೆಗೆ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ. ಎಲ್ಲಾ ದಿನಗಳ ಸಂದರ್ಶನಗಳು ನಿಖರವಾಗಿ ಬೆಳಿಗ್ಗೆ 10:30 ಗಂಟೆಗೆ ಪ್ರಾರಂಭವಾಗಲಿವೆ.

ಇದನ್ನೂ ಓದಿ: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಉದ್ಯೋಗವಕಾಶ; 253 ಪಿಎಸ್‌ಐ ಹುದ್ದೆಗೆ ನೇರ ನೇಮಕಾತಿ!

ಸಂದರ್ಶನಕ್ಕೆ ಹಾಜರಾಗುವುದು ಹೇಗೆ? ಮತ್ತು ಬೇಕಾಗುವ ದಾಖಲೆಗಳು:

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕ ಹಾಗೂ ಸಮಯಕ್ಕೆ ಸರಿಯಾಗಿ ಸಂದರ್ಶನಕ್ಕೆ ಹಾಜರಾಗಬೇಕು. ಅಭ್ಯರ್ಥಿಗಳು KSMC ಅಧಿಕೃತ ವೆಬ್‌ಸೈಟ್‌ನಿಂದ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು, ಅದನ್ನು ಸಂಪೂರ್ಣವಾಗಿ ಭರ್ತಿ ಮಾಡಿ ತರಬೇಕಿರುತ್ತದೆ. ಸಂದರ್ಶನದ ವೇಳೆ ತಮ್ಮ ಎಲ್ಲಾ ಸಂಬಂಧಿತ ಮೂಲ ಶೈಕ್ಷಣಿಕ ದಾಖಲೆಗಳು (Original Documents) ಹಾಗೂ ಅವುಗಳ ನಕಲು ಪ್ರತಿಗಳನ್ನು (Xerox Copies) ತರುವುದು ಕಡ್ಡಾಯವಾಗಿದೆ.

ಸಂದರ್ಶನ ನಡೆಯುವ ಸ್ಥಳ ಮತ್ತು ಅಧಿಕೃತ ವೆಬ್‌ಸೈಟ್ ಮಾಹಿತಿ:

ನೇರ ಸಂದರ್ಶನವು ಬೆಂಗಳೂರಿನ ಶಾಂತಿನಗರದಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ.

  • ವಿಳಾಸ: ಪ್ರಧಾನ ಕಚೇರಿ, ಟಿ.ಟಿ.ಎಂ.ಸಿ. ‘ಎ’ ಬ್ಲಾಕ್, 5ನೇ ಮಹಡಿ, ಬಿ.ಎಂ.ಟಿ.ಸಿ. ಬಿಲ್ಡಂಗ್, ಕೆ.ಹೆಚ್. ರಸ್ತೆ, ಶಾಂತಿನಗರ, ಬೆಂಗಳೂರು – 560 027.
  • ಅಭ್ಯರ್ಥಿಗಳಿಗೆ ಅಗತ್ಯವಿರುವ ಶೈಕ್ಷಣಿಕ ವಿದ್ಯಾರ್ಹತೆ, ನಿಖರ ವಯೋಮಿತಿ, ಕೆಲಸದ ಅನುಭವ ಹಾಗೂ ಅಧಿಕೃತ ಅರ್ಜಿ ನಮೂನೆಯನ್ನು ಪಡೆಯಲು ಇಲಾಖೆಯ ಅಧಿಕೃತ ವೆಬ್‌ಸೈಟ್ ಆದ ksmc.karnataka.gov.in ಗೆ ಭೇಟಿ ನೀಡಿ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

Leave a Reply

Your email address will not be published. Required fields are marked *