ಚಿಕ್ಕಮಗಳೂರು, ಏಪ್ರಿಲ್ 24: ಕುಡಿದ ಅಮಲಿನಲ್ಲಿ KSRTC ಬಸ್ ಅಡ್ಡಗಟ್ಟಿ ಆಟೋ ಚಾಲಕರು ಕಿರಿಕ್ ನಡೆಸಿರುವ ಘಟನೆ ಚಿಕ್ಕಮಗಳೂರು ನಗರದ ಕೆಎಂ ರಸ್ತೆಯಲ್ಲಿ ನಡೆದಿದೆ. ಕಡೂರಿನಿಂದ ಚಿಕ್ಕಮಗಳೂರು KSRTC ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಬಸ್ಗೆ ರಸ್ತೆ ಮಧ್ಯೆ ಆಟೋ ಅಡ್ಡಹಾಕಿ ಪುಂಡಾಟ ಮೆರೆಯಲಾಗಿದೆ. ಬಸ್ ಚಾಲಕ ಮನವಿ ಮಾಡಿದ್ರೂ ಜಾಗ ಬಿಡದೆ, ಬಸ್ಗೆ ಅಡ್ಡಲಾಗಿ ಆಟೋ ನಿಲ್ಲಿಸಿ ಮೂವರು ಯುವಕರು ಕಿರಿಕ್ ಮಾಡಿದ್ದಾರೆ. ಆಟೋ ನಿಲ್ಲಿಸಿ ಸೆಲ್ಫಿ ತೆಗೆಯುತ್ತಿರುವ ಯುವಕರ ವಿಡಿಯೋ ವೈರಲ್ ಆಗಿದ್ದು, ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
