ವಾರದ ಪ್ರೇಮ – ಪ್ರೀತಿ ಭವಿಷ್ಯImage Credit source: Getty Images
ಆಗಸ್ಟ್ 16ರಿಂದ 22ರವರೆಗೆ ಪ್ರೇಮ ಕಾರಕನಾದ ಶುಕ್ರನು ಕನ್ಯಾ ರಾಶಿಯಲ್ಲಿ ನೀಚಸ್ಥಿತಿಯಲ್ಲಿದ್ದರೆ, ಗುರು ಕರ್ಕಾಟಕದಲ್ಲಿ ಉಚ್ಚಸ್ಥಿತಿಯಲ್ಲಿದ್ದಾನೆ. ಸಿಂಹ ರಾಶಿಯಲ್ಲಿ ಸೂರ್ಯ-ಬುಧ-ಕೇತುಗಳ ಸಂಯೋಜನೆ ಹಾಗೂ ಮೀನದಲ್ಲಿ ಶನಿಯ ವಕ್ರಸ್ಥಿತಿ ಇದೆ. ಈ ಗ್ರಹಗಳ ಸಂಚಾರದಿಂದ ಪ್ರೇಮ ಹೀಗಿರಲಿದೆ.
ಮೇಷ ರಾಶಿ:
ವಾರದ ಆರಂಭದಲ್ಲಿ ಸಂಗಾತಿಯೊಂದಿಗೆ ಸಣ್ಣಪುಟ್ಟ ಅಭಿಪ್ರಾಯ ಭೇದಗಳು ಬರಬಹುದು. ನಿಮ್ಮ ಕೋಪ ಹಾಗೂ ಆತುರದ ಮಾತುಗಳನ್ನು ನಿಯಂತ್ರಿಸುವುದು ಸೂಕ್ತ. ವಾರದ ದ್ವಿತೀಯಾರ್ಧದಲ್ಲಿ ಪರಸ್ಪರ ಅರ್ಥೈಸಿಕೊಳ್ಳುವಿಕೆ ಹೆಚ್ಚಿ, ಪ್ರೀತಿ ಗಟ್ಟಿಯಾಗುತ್ತದೆ.
ವೃಷಭ ರಾಶಿ:
ನಿಮ್ಮ ರಾಶ್ಯಾಧಿಪತಿ ಶುಕ್ರ ನೀಚಸ್ಥಾನದಲ್ಲಿ ಇರುವುದರಿಂದ ಭಾವನೆಗಳನ್ನು ಸರಿಯಾಗಿ ವ್ಯಕ್ತಪಡಿಸಲು ಕಷ್ಟವಾಗಬಹುದು. ಸಂಗಾತಿಯ ಮೇಲೆ ಅನಗತ್ಯ ಅನುಮಾನ ಪಡುವುದನ್ನು ಬಿಟ್ಟು ಮುಕ್ತ ಸಂಭಾಷಣೆಗೆ ಒತ್ತು ನೀಡುವುದು ಸಂಬಂಧವನ್ನು ಸರಿಪಡಿಸುತ್ತದೆ.
ಮಿಥುನ ರಾಶಿ:
ನಿಮ್ಮ ರಾಶಿಯಲ್ಲಿ ಮಂಗಳನ ಸಂಚಾರವಿರುವುದರಿಂದ ಪ್ರೇಮ ಜೀವನದಲ್ಲಿ ಸಣ್ಣ ಕಿರಿಕಿರಿಗಳು ಉಂಟಾಗಬಹುದು. ನಾಲಿಗೆಯ ಮೇಲೆ ನಿಗ್ರಹವಿರಲಿ. ಅನಗತ್ಯ ವಾದ-ವಿವಾದಗಳನ್ನು ಬದಿಗಿಟ್ಟರೆ ವಾರಾಂತ್ಯದಲ್ಲಿ ಮಧುರ ಕ್ಷಣಗಳನ್ನು ಕಳೆಯಬಹುದು.
ಕರ್ಕಾಟಕ ರಾಶಿ :
ನಿಮ್ಮ ರಾಶಿಯಲ್ಲಿ ಉಚ್ಚ ಗುರುವಿನ ಉಪಸ್ಥಿತಿ ಇರುವುದರಿಂದ ಪ್ರೇಮ ವಿಚಾರಗಳಲ್ಲಿ ಸಂತೋಷ ಮತ್ತು ಉತ್ಸಾಹ ಇರಲಿದೆ. ಸಂಗಾತಿಯಿಂದ ಪೂರ್ಣ ಬೆಂಬಲ ಸಿಗಲಿದೆ. ಅವಿವಾಹಿತರಿಗೆ ಹೊಸ ಪ್ರೇಮ ಪ್ರಸ್ತಾಪಗಳು ಒದಗಿಬರುವ ಉತ್ತಮ ಸಮಯವಿದು.
ಸಿಂಹ ರಾಶಿ:
ನಿಮ್ಮ ರಾಶಿಯಲ್ಲಿ ಸೂರ್ಯ, ಬುಧ ಹಾಗೂ ಕೇತುಗಳಿರುವುದರಿಂದ ಅಹಂಕಾರದ ಭಾವನೆ ಸಂಬಂಧಕ್ಕೆ ಧಕ್ಕೆ ತರಬಹುದು. ಸಂಗಾತಿಯ ಸಣ್ಣ ತಪ್ಪುಗಳನ್ನು ಕ್ಷಮಿಸಿ ಮುನ್ನಡೆದರೆ ದಾಂಪತ್ಯ ಮತ್ತು ಪ್ರೇಮ ಜೀವನ ಸುಖಮಯವಾಗಿರುತ್ತದೆ.
ಕನ್ಯಾ ರಾಶಿ:
ಪ್ರೇಮ ಕಾರಕ ಶುಕ್ರನು ನಿಮ್ಮ ರಾಶಿಯಲ್ಲೇ ನೀಚನಾಗಿರುವುದರಿಂದ ಅತಿಯಾದ ವಿಮರ್ಶಾತ್ಮಕ ಮನೋಭಾವ ನಿಮ್ಮ ನಡುವೆ ಅಂತರ ತರಬಹುದು. ಸಂಗಾತಿಯ ಭಾವನೆಗಳಿಗೆ ಗೌರವ ನೀಡುವುದು ಮತ್ತು ಅವರ ಪ್ರಯತ್ನಗಳನ್ನು ಗುರುತಿಸುವುದು ಈ ವಾರ ಅತ್ಯಗತ್ಯ.
ತುಲಾ ರಾಶಿ:
ರಾಶ್ಯಾಧಿಪತಿ ಶುಕ್ರನ ಸ್ಥಿತಿಯಿಂದಾಗಿ ಪ್ರೇಮ ಸಂಬಂಧಗಳಲ್ಲಿ ಸ್ವಲ್ಪ ಏರಿಳಿತಗಳು ಕಂಡುಬರಬಹುದು. ಹಳೆಯ ವಿಚಾರಗಳನ್ನು ತೆಗೆದು ಜಗಳವಾಡುವುದನ್ನು ತಡೆಯಿರಿ. ವಾರಾಂತ್ಯದಲ್ಲಿ ಒಟ್ಟಿಗೆ ಸಮಯ ಕಳೆಯುವುದರಿಂದ ಮನಸ್ತಾಪಗಳು ನಿವಾರಣೆಯಾಗಲಿವೆ.
ವೃಶ್ಚಿಕ ರಾಶಿ:
ಗುರುವಿನ ಶುಭ ದೃಷ್ಟಿಯಿಂದಾಗಿ ಪ್ರೇಮ ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಸಂಗಾತಿಯೊಂದಿಗೆ ಅರ್ಥಪೂರ್ಣ ಸಮಯ ಕಳೆಯುವಿರಿ. ಪರಸ್ಪರ ನಂಬಿಕೆ ಹೆಚ್ಚಲಿದ್ದು, ಒಟ್ಟಾಗಿ ಹೊಸ ಯೋಜನೆಗಳನ್ನು ರೂಪಿಸುವಿರಿ.
ಧನು ರಾಶಿ:
ಚಂದ್ರನ ಶುಭ ಸ್ಥಿತಿಯು ಮನಸ್ಸಿಗೆ ನೆಮ್ಮದಿ ನೀಡಲಿದೆ. ಪ್ರೇಮಿಗಳು ಪರಸ್ಪರ ಉತ್ತಮ ತಿಳಿವಳಿಕೆಯನ್ನು ಹೊಂದುವರು. ದಾಂಪತ್ಯದಲ್ಲಿ ಆತ್ಮೀಯತೆ ಹಾಗೂ ಅನ್ಯೋನ್ಯತೆ ವೃದ್ಧಿಯಾಗಲಿದ್ದು, ಸಣ್ಣ ಪ್ರವಾಸದ ಸಾಧ್ಯತೆಯಿದೆ.
ಇದನ್ನೂ ಓದಿ: ಬುಧ ಸಂಚಾರ ಫಲ: ಈ ರಾಶಿಯವರಿಗೆ ಒಲಿಯಲಿದೆ ದಿಢೀರ್ ಧನಯೋಗ ಹಾಗೂ ವೃತ್ತಿ ಪ್ರಗತಿ
ಮಕರ ರಾಶಿ:
ಸಂಬಂಧಗಳಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆ ಬಹಳ ಮುಖ್ಯ. ಉದ್ಯೋಗ ಅಥವಾ ಕೆಲಸದ ಒತ್ತಡವನ್ನು ಪ್ರೇಮ ಜೀವನದ ಮೇಲೆ ಪ್ರಭಾವ ಬೀರಲು ಬಿಡಬೇಡಿ. ಸಂಗಾತಿಗೆ ಕನಿಷ್ಠ ಸಮಯ ಕೊಡುವುದು ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.
ಕುಂಭ ರಾಶಿ:
ರಾಹು ಹಾಗೂ ಶನಿಯ ಪ್ರಭಾವದಿಂದ ಮನಸ್ಸಿನಲ್ಲಿ ಗೊಂದಲಗಳು ಉಂಟಾಗಬಹುದು. ಸಂಗಾತಿಯೊಂದಿಗೆ ಮಾತನಾಡುವಾಗ ತಾಳ್ಮೆಯಿಂದಿರಿ. ಭಾವನಾತ್ಮಕವಾಗಿ ನಿರ್ಧಾರ ತೆಗೆದುಕೊಳ್ಳುವ ಬದಲು ವಾಸ್ತವಕ್ಕೆ ಹತ್ತಿರವಾಗಿ ಚಿಂತಿಸಿ.
ಮೀನ ರಾಶಿ:
ನಿಮ್ಮ ರಾಶಿಯಲ್ಲಿ ಲಗ್ನ ಮತ್ತು ವಕ್ರ ಶನಿ ಇರುವುದರಿಂದ ಭಾವನಾತ್ಮಕವಾಗಿ ಸ್ವಲ್ಪ ಸೂಕ್ಷ್ಮವಾಗಿರುತ್ತೀರಿ. ಕೌಟುಂಬಿಕ ಬೆಂಬಲ ಸಿಗಲಿದ್ದು, ಪ್ರೇಮಿಗಳು ತಮ್ಮ ಸಂಬಂಧವನ್ನು ಮದುವೆಯ ಹಂತಕ್ಕೆ ಕೊಂಡೊಯ್ಯಲು ಇದು ಸೂಕ್ತ ಸಮಯ.
– ಲೋಹಿತ್ ಹೆಬ್ಬಾರ್
ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
