Headlines

ಪ್ರೀತಿಸಿ ಮದುವೆಯಾದ ಎಂಜಿನಿಯರ್ ದಾರುಣ ಅಂತ್ಯ: ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ? – Kannada News | Bengaluru Software Engineer’s Tragic End: Dowry Harassment Alleged in Death Case

ಬೆಂಗಳೂರು, ಏಪ್ರಿಲ್​​ 23: ಪತಿ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಸಾಫ್ಟ್‌ವೇರ್ ಎಂಜಿನಿಯರ್ ಮಹಿಳೆಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಆರೋಪ ಬೆಂಗಳೂರಲ್ಲಿ (Bengaluru) ಕೇಳಿಬಂದಿದೆ. ಭುವನೇಶ್ವರಿ (29) ಮೃತ ವಿವಾಹಿತೆಯಾಗಿದ್ದು, ತಾಯಿ ಮತ್ತು 18 ತಿಂಗಳ ಮಗುವಿನೊಂದಿಗೆ ಅವರು ವಾಸವಿದ್ದರು ಎನ್ನಲಾಗಿದೆ. ನಿರಂತರವಾಗಿ ಕರೆ ಮಾಡಿದರೂ ಭುವನೇಶ್ವರಿ ಸಂಪರ್ಕಕ್ಕೆ ಸಿಗದ ಕಾರಣ ಸ್ನೇಹಿತೆ ಅನುಮಾನಗೊಂಡು ವಿಷಯವನ್ನು ಅವರ ತಾಯಿಗೆ ತಿಳಿಸಿದ್ದಾರೆ. ಬಳಿಕ ತಾಯಿ ಹಾಗೂ ನೆರೆಹೊರೆಯವರು ಪರಿಶೀಲಿಸಿದಾಗ ಭುವನೇಶ್ವರಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಸೋಮವಾರವೇ ನಡೆದಿರುವ ಘಟನೆ ತಡವಾಗಿ…

Read More

ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ಸಾರಿಗೆ ನೌಕರರ ದರ್ಪ: ವಿಡಿಯೋ ನೋಡಿ – Kannada News | Gadag Bus Staff Allegedly Assault Student: Protest Erupts at Puttaraj Gavai Bus Stand

ಗದಗ, ಏಪ್ರಿಲ್​​ 23: ಬಸ್ ನಿಲ್ಲಿಸಿ ಅಂದಿದಕ್ಕೆ ವಿದ್ಯಾರ್ಥಿಗಳ‌ ಮೇಲೆ ಸಾರಿಗೆ ನೌಕರರಿಂದ ದರ್ಪ‌‌ ಮೆರೆದ ಘಟನೆಯೊಂದು ಗದಗ ನಗರದ ಪುಟ್ಟರಾಜ್ ಗವಾಯಿಗಳ ಬಸ್ ನಿಲ್ದಾಣದಲ್ಲಿ ನಡೆದಿದೆ. ಸಾರಿಗೆ ನೌಕರರು ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ವಿದ್ಯಾರ್ಥಿಗಳು ಬಸ್ ಹತ್ತಲು ಕೈ ತೋರಿಸಿದರೂ ಚಾಲಕ ಬಸ್ ನಿಲ್ಲಿಸಿಲ್ಲ. ಇದನ್ನು ಪ್ರಶ್ನಿಸಲು ಹೋದ ವಿದ್ಯಾರ್ಥಿಗಳು ಮತ್ತು ಸಾರಿಗೆ ನೌಕರರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ನೌಕರರು…

Read More

ಏಪ್ರಿಲ್‌ನಲ್ಲಿ ಭಾರತದ ಖಾಸಗಿ ವಲಯ ಭರ್ಜರಿ ಏರಿಕೆ: ಉತ್ಪಾದನಾ, ಸೇವಾ ವಲಯಗಳ PMI ವರದಿಯಲ್ಲಿ ಗಮನಾರ್ಹ ಸಂಗತಿಗಳು – Kannada News | India’s Private Sector Booms in April: PMI Surges on Manufacturing & Services Growth

ಫ್ಯಾಕ್ಟರಿ ಸಾಂದರ್ಭಿಕ ಚಿತ್ರImage Credit source: AI/Mediaforge/TV9 ನವದೆಹಲಿ, ಏಪ್ರಿಲ್ 23: ಭಾರತದ ಖಾಸಗಿ ವಲಯವು ಏಪ್ರಿಲ್ ತಿಂಗಳಿನಲ್ಲಿ ಭರ್ಜರಿ ಬೆಳವಣಿಗೆಯನ್ನು ಸಾಧಿಸಿದೆ. ವಿಶೇಷವಾಗಿ ಉತ್ಪಾದನಾ ವಲಯದಲ್ಲಿ (Manufacturing sector) ಕಂಡುಬಂದ ಚೇತರಿಕೆಯು ಈ ಪ್ರಗತಿಗೆ ಮುಖ್ಯ ಕಾರಣ ಎಂದು ‘ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್’ (PMI) ವರದಿ ತಿಳಿಸಿದೆ. ಸರ್ವಿಸ್ ಸೆಕ್ಟರ್ ಕೂಡ ಏಪ್ರಿಲ್​ನಲ್ಲಿ ಚುರುಕುಗೊಂಡಿದೆ. ಹಿಂದಿನ ತಿಂಗಳಾದ ಮಾರ್ಚ್​ನಲ್ಲಿ ಇವೆರಡೂ ಕೂಡ ಮಂದ ಬೆಳವಣಿಗೆ ಕಂಡಿದ್ದವು. ಎಸ್ ಅಂಡ್ ಪಿ ಗ್ಲೋಬಲ್​ನಿಂದ ಕಲೆಹಾಲಾದ ಎಚ್​ಎಸ್​ಬಿಸಿ ಫ್ಯಾಶ್…

Read More

RCB vs GT: ಏ.24ರ ಸಂಜೆ ನಡೆಯುವ IPL ಪಂದ್ಯದಲ್ಲಿ ಗೆಲ್ಲೋದ್ಯಾರು? ಜ್ಯೋತಿಷ್ಯ ಹೇಳೋದೇನು? – Kannada News | Astrology Predicts Royal Challengers Bengaluru Will Beat Gujarat Titans in the April 24 IPL 2026 Match

ಅತ್ಯಂತ ಕುತೂಹಲದ ಸಂಗತಿಗಳನ್ನು ಜ್ಯೋತಿಷ್ಯದ ಮೂಲಕ ಪಡೆಯಬಹುದು. ಸದ್ಯ ವಿಶ್ವದಾದ್ಯಂತ ರೋಚಕತೆಯನ್ನು ಸೃಷ್ಟಿಸಿರುವುದು IPL. ಏಪ್ರಿಲ್ 24ರ ಸಂಜೆ ನಡೆಯಲಿರುವ ರಾಯಲ್​​ ಚಾಲೆಂಜರ್ಸ್​​ ಬೆಂಗಳೂರು ಮತ್ತು ಗುಜರಾತ್​​ ಟೈಟಾನ್ಸ್​​ ನಡುವಿನ ಪಂದ್ಯವು ಅತ್ಯಂತ ರೋಚಕ ಮತ್ತು ಸಂಘರ್ಷಮಯವಾಗಿರಲಿದೆ. ಅಂದು ಯಾವ ತಂಡ ಜಯಗಳಿಸಲಿದೆ ಎಂದು ಆರಂಭದ ಗ್ರಹಗತಿಗಳ ಆಧಾರದ ಮೇಲೆ ಹೇಳಬಹುದಾಗಿದೆ. ತ್ರಿಗ್ರಹಗಳ ಯುತಿ ತುಲಾ ರಾಶಿಯಿಂದ ​ಆರನೇ ಮನೆಯಲ್ಲಿ ಕುಜ, ಬುಧ ಮತ್ತು ಶನಿ ಒಂದೇ ಮನೆಯಲ್ಲಿದ್ದಾರೆ. ಆರನೇ ಮನೆಯು ಜ್ಯೋತಿಷ್ಯದಲ್ಲಿ ಶತ್ರು ಮತ್ತು ಸ್ಪರ್ಧೆಯ…

Read More

ಸಾಲಿನಲ್ಲಿ ನಿಲ್ಲದೇ ಮುಂದೆ ಹೋಗಿ ಮತದಾನ ಮಾಡಿದ ಕಮಲ್ ಹಾಸನ್; ವಿಡಿಯೋ ನೋಡಿ ಜನರ ಟೀಕೆ – Kannada News | Kamal Haasan Shruti Haasan criticized for skipping voting queue in Tamil Nadu Election

ತಮಿಳುನಾಡು ವಿಧಾನಸಭಾ ಚುನಾವಣೆ (Tamil Nadu Election) ಇಂದು (ಏಪ್ರಿಲ್ 23) ನಡೆದಿದೆ. ಜನಸಾಮಾನ್ಯರ ಜೊತೆ ಅನೇಕ ಸೆಲೆಬ್ರಿಟಿಗಳು ಕೂಡ ಬಂದು ಮತ ಚಲಾಯಿಸಿದ್ದಾರೆ. ಮತದಾನ ಮಾಡಲು ಬಂದಿದ್ದ ನಟ ಕಮಲ್ ಹಾಸನ್ (Kamal Haasan) ಮತ್ತು ಅವರ ಪುತ್ರಿ ಶ್ರುತಿ ಹಾಸನ್ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ಸರತಿಯ ಸಾಲನ್ನು ಮೀರಿ ನೇರವಾಗಿ ಒಳಗೆ ಹೋಗಿ ಮತ ಚಲಾಯಿಸಿದ್ದೇ ಈ ಟೀಕೆಗೆ ಕಾರಣ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಖಾರವಾಗಿ ಕಮೆಂಟ್ ಮಾಡುತ್ತಿದ್ದಾರೆ. ಕಮಲ್ ಹಾಸನ್…

Read More

IPL 2026: ಆಯುಷ್ ಮ್ಹಾತ್ರೆ ಬದಲಿಗೆ ಸಿಎಸ್​​ಕೆ ತಂಡ ಸೇರಿಕೊಂಡ ಯುವ ವೇಗಿ

2026 ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತದ ಮೇಲೆ ಆಘಾತ ಎದುರಾಗುತ್ತಿದೆ. ಅದರಲ್ಲೂ ತಂಡದ ಯುವ ಬ್ಯಾಟ್ಸ್‌ಮನ್ ಆಯುಷ್ ಮ್ಹಾತ್ರೆ ಗಾಯದಿಂದಾಗಿ ಇಡೀ ಸೀಸನ್​ನಿಂದ ಹೊರಬಿದ್ದಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಇದರ ನಡುವೆ ಸಿಎಸ್​​ಕೆ ಫ್ರಾಂಚೈಸಿ ಆಯುಷ್ ಮ್ಹಾತ್ರೆ ಬದಲಿಯಾಗಿ ಮತ್ತೊಬ್ಬ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡಿದೆ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಆಯುಷ್ ಮ್ಹಾತ್ರೆ ಮಂಡಿರಜ್ಜು ಸೆಳೆತಕ್ಕೆ ಒಳಗಾದರು. ಪರಿಣಾಮವಾಗಿ, ಅವರು ಐಪಿಎಲ್​ನಿಂದ ಹೊರಗುಳಿಯಬೇಕಾಗಿದೆ. ಇದೀಗ ಅವರ ಬದಲಿ ಆಟಗಾರನನ್ನು ಸಿಎಸ್​ಕೆ ಘೋಷಿಸಿದೆ….

Read More

Animation Career Guide: ಉತ್ತಮ ಗಳಿಕೆಯ ಅನಿಮೇಷನ್ ಲೋಕದಲ್ಲಿ ವೃತ್ತಿಜೀವನ ಶುರು ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ – Kannada News | Animation Career Guide: Lucrative Jobs, Courses and Future Scope

ಅನಿಮೇಷನ್ ಲೋಕದಲ್ಲಿ ವೃತ್ತಿಜೀವನImage Credit source: Pinterest ಇಂದಿನ ಡಿಜಿಟಲ್ ಯುಗದಲ್ಲಿ ಸಾಂಪ್ರದಾಯಿಕ ವೃತ್ತಿಗಳ ಆಚೆಗೆ ಅನೇಕ ಹೊಸ ಆಯ್ಕೆಗಳು ವೇಗವಾಗಿ ಬೆಳೆಯುತ್ತಿವೆ. ಅವುಗಳಲ್ಲಿ ಅನಿಮೇಷನ್ ಕ್ಷೇತ್ರವು ಅತ್ಯಂತ ಪ್ರಮುಖ ಮತ್ತು ಲಾಭದಾಯಕ ವೃತ್ತಿಯಾಗಿ ಹೊರಹೊಮ್ಮಿದೆ. ಚಲನಚಿತ್ರಗಳು, ವೆಬ್ ಸರಣಿಗಳು, ಗೇಮಿಂಗ್ ಮತ್ತು ಸೋಶಿಯಲ್ ಮೀಡಿಯಾ ಕಂಟೆಂಟ್‌ಗಳ ಜನಪ್ರಿಯತೆ ಹೆಚ್ಚಾದಂತೆ ಈ ಕ್ಷೇತ್ರಕ್ಕೆ ಬೇಡಿಕೆ ಕುದುರಿದೆ. ನೀವು ಚಿತ್ರಕಲೆ, ವಿನ್ಯಾಸ ಮತ್ತು ಹೊಸತನ್ನು ಸೃಷ್ಟಿಸುವ ಹಂಬಲ ಹೊಂದಿದ್ದರೆ, ಅನಿಮೇಷನ್ ನಿಮಗೆ ಬಣ್ಣದ ಭವಿಷ್ಯವನ್ನು ನೀಡಬಲ್ಲದು. ಅನಿಮೇಷನ್ ಎಂದರೆ…

Read More

ಈಗಾಗಲೇ ಅನುಭವಿಸಿದ್ದೇನೆ: ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ – Kannada News | HD Kumaraswamy dismisses rumours of Minister Zameer Ahmed Khan joining JDS

ಹಾಸನ, (ಏಪ್ರಿಲ್ 23): ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್ (Davanagere South By Election) ಟಿಕೆಟ್ ವಿಚಾರವಾಗಿ ಕಾಂಗ್ರೆಸ್​​ನಲ್ಲಿ (Congress) ಶುರುವಾದ ಅಸಮಾಧಾನ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ತಮ್ಮ ಸಮುದಾಯಕ್ಕೆ ಟಿಕೆಟ್ ನೀಡಿಲ್ಲವೆಂದು ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಹಾಗೂ ನಸೀರ್ ಅಹಮ್ಮದ್ ಹಾಗೂ ಸಚಿವ ಜಮಿರ್ ಅಹ್ಮದ್ ಖಾನ್ ಅಸಮಾಧಾನಗೊಂಡಿದ್ದು, ಪ್ರಚಾರವೇ ಮಾಡಿರಲಿಲ್ಲ. ಇದರಿಂದ ಅಬ್ದುಲ್ ಜಬ್ಬಾರ್ ಅವರನ್ನ ಪಕ್ಷದಿಂದ ಅಮಾನತು ಮಾಡಿದರೆ, ನಸೀರ್ ಅಹದ್ಮದ್ ಅವರನ್ನ ಸಿಎಂ ರಾಜಕೀಯ ಕಾರ್ಯದರ್ಶಿಯಿಂದ ವಜಾ ಮಾಡಲಾಗಿದ್ದು,…

Read More

ಝಲ್ಮುರಿ ತಿಂದಿದ್ದು ನಾನು, ಖಾರವಾಗಿದ್ದು ಟಿಎಂಸಿಗೆ: ಬಂಗಾಳದಲ್ಲಿ ಪ್ರಧಾನಿ ಮೋದಿ ಲೇವಡಿ – Kannada News | I ate jhalmuri TMC felt the heat PM Modi jab at Mamata Banerjee in West Bengal

ನವದೆಹಲಿ, ಏಪ್ರಿಲ್ 23: “ಬಂಗಾಳದಲ್ಲಿ ನಾನು ಝಲ್ಮುರಿ ಸವಿದ ವಿಷಯವು ಇಲ್ಲಿನ ಕೆಲವು ಜನರನ್ನು ನಡುಗಿಸಿತು ಎಂದು ನಾನು ಕೇಳಿದೆ. ತಮಾಷೆಯೆಂದರೆ ಝಲ್ಮುರಿ ತಿಂದಿದ್ದು ನಾನೇ ಆದರೂ ಅದರ ಖಾರ ಅನುಭವಿಸಿದ್ದು ತೃಣಮೂಲ ಕಾಂಗ್ರೆಸ್. ಮೇ 4ರಂದು ಫಲಿತಾಂಶಗಳು ಘೋಷಣೆಯಾದ ನಂತರ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ವಿಜಯವನ್ನು ಆಚರಿಸುತ್ತದೆ. ಆ ಸಮಯದಲ್ಲಿ ಸಿಹಿತಿಂಡಿಗಳು ಮತ್ತು ಝಲ್ಮುರಿ ಎರಡನ್ನೂ ವಿತರಿಸಲಾಗುತ್ತದೆ” ಎಂದು ಪ್ರಧಾನಿ ಮೋದಿ (PM Narendra Modi) ಹೇಳಿದ್ದಾರೆ. “ಇಂದು ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ…

Read More

ಚಿಂತೆಯೆಲ್ಲಾ ಬಿಟ್ಟು ಸಂತೋಷದಿಂದ ಜೀವನ ನಡೆಸಲು ಈ ಸಿಂಪಲ್‌ ಸಲಹೆ ಪಾಲಿಸಿದರೆ ಸಾಕು – Kannada News | Just follow this simple advice to live a happy life without worrying

ಹಣವಿದ್ದರೆ ಸಂತೋಷದಿಂದ ಜೀವನ (happy life) ಸಾಗಿಸಬಹುದು ಎಂದು ಹಲವರು ಭಾವಿಸುತ್ತಾರೆ. ಆದರೆ ವಾಸ್ತವ ಏನೆಂದರೆ ಹಣವೊಂದರಿಂದಲೇ ಸಂತೋಷದಿಂದಿರಲು ಸಾಧ್ಯವಿಲ್ಲ, ಹಣದಿಂದ ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ. ಬದಲಿಗೆ ನಮ್ಮಲ್ಲೇ ನಾವು ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಸಂತೋಷವನ್ನು ಕಂಡುಕೊಳ್ಳಬಹುದು. ಇಂದಿನ ಈ ಬ್ಯುಸಿ ಜೀವನದಲ್ಲಿ ಹೆಚ್ಚಿನವರು ಚಿಂತೆಯಲ್ಲಿಯೇ ಸಮಯ ಕಳೆಯುತ್ತಿದ್ದಾರೆ. ಈ ಚಿಂತೆಯಿಂದ ನೆಮ್ಮದಿ ಹಾಳಾಗುವುದಂತೂ ಖಂಡಿತ. ಹಾಗಾಗಿ ಈ ಕೆಲವೊಂದು ಸರಳ ಸೂತ್ರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಂತೋಷದ ಜೀವನವನ್ನು ನಡೆಸಿ. ಸಂತೋಷವಾಗಿರಲು ಏನು ಮಾಡಬೇಕು?…

Read More