Headlines

ಒಂದು ತಿಂಗಳಲ್ಲಿ ಫೋನ್​ಪೇನಲ್ಲಿ 1,000 ಕೋಟಿ ಟ್ರಾನ್ಸಾಕ್ಷನ್ಸ್; ಈ ಮೈಲಿಗಲ್ಲು ಮುಟ್ಟಿದ ಮೊದಲ ಯುಪಿಐ ಆ್ಯಪ್ – Kannada News | NPCI data for 2026 March, Phone pe sees 10 billion transactions, with Gpay close second, here are details

ನವದೆಹಲಿ, ಏಪ್ರಿಲ್ 23: ಭಾರತದ ಅತಿದೊಡ್ಡ ಯುಪಿಐ ಆ್ಯಪ್ ಎನಿಸಿರುವ ಫೋನ್​ಪೇ (PhonePe) ಮಾರ್ಚ್ ತಿಂಗಳಲ್ಲಿ ಹೊಸ ದಾಖಲೆ ಬರೆದಿದೆ. 2026ರ ಮಾರ್ಚ್​ನಲ್ಲಿ ಫೋನ್​ಪೇ ಪ್ಲಾಟ್​ಫಾರ್ಮ್​ನಲ್ಲಿ 10 ಬಿಲಿಯನ್​ಗೂ ಹೆಚ್ಚು ಟ್ರಾನ್ಸಾಕ್ಷನ್​ಗಳು ಆಗಿವೆ. ಅಂದರೆ, ಒಂದು ತಿಂಗಳಲ್ಲಿ 1,000 ಕೋಟಿಗೂ ಹೆಚ್ಚು ಹಣ ವಹಿವಾಟುಗಳು ಫೋನ್ ಪೇನಿಂದ ಆಗಿವೆ. ಈ ಮೈಲಿಗಲ್ಲು ಮುಟ್ಟಿದ ಮೊದಲ ಯುಪಿಐ ಆ್ಯಪ್ ಎನ್ನುವ ದಾಖಲೆ ಫೋನ್​ಪೇನದ್ದು. ಯುಪಿಐ ಮಾರುಕಟ್ಟೆಯಲ್ಲಿ ಫೋನ್​ಪೇ ಮತ್ತು ಗೂಗಲ್ ಪೇ ಪಾರಮ್ಯ ಯುಪಿಐ ಪೇಮೆಂಟ್ ವಿಚಾರದಲ್ಲಿ ಫೋನ್…

Read More

ಕೋಲಾರ: SSLC ಪರೀಕ್ಷೆ ಪಾಸ್​ ಆದ ಖುಷಿಯಲ್ಲಿ ಈಜಲು ಹೋದ ವಿದ್ಯಾರ್ಥಿ ನೀರುಪಾಲು – Kannada News | SSLC Result Joy Turns Tragic: Kolar Student Drowns While Swimming

ನೀರುಪಾಲಾದ ಕಿರಣ್​​Image Credit source: Tv9 Kannada ಕೋಲಾರ, ಏಪ್ರಿಲ್​​ 23: ಈಜಲು ಹೋಗಿ ನೀರುಪಾಲಾಗುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಲೇ ಇದ್ದು, ತಲಕಾಡು ಬಳಿ ಮೊನ್ನೆ ಮೊನ್ನೆಯಷ್ಟೇ ವಿದ್ಯಾರ್ಥಿನಿಯರು ನೀರುಪಾಲಾದ ಘಟನೆ ಮಾಸುವ ಮುನ್ನವೇ ಇತ್ತ ಕೋಲಾರದಲ್ಲಿಯೂ SSLC ಪರೀಕ್ಷೆ ಪಾಸ್​ ಆದ ಖುಷಿಯಲ್ಲಿದ್ದ ಬಾಲಕನೋರ್ವ ಈಜಲು ಹೋಗಿ ಜಲಸಮಾಧಿಯಾಗಿರುವ ಘಟನೆ ನಡೆದಿದೆ. ಕಿರಣ್(15) ಮೃತ ಬಾಲಕನಾಗಿದ್ದು, ಎಸ್​​ಎಸ್​​ಎಲ್​​ಸಿ ಫಲಿತಾಂಶ ಬಂದ ಬಳಿಕ ಸ್ನೇಹಿತರ ಜೊತೆ ಈತ ಈಜಲು ತೆರಳಿದ್ದ ವೇಳೆ ಬಾವಿಯ ನೀರಲ್ಲಿ ಮುಳುಗಿ ಅವಘಡ…

Read More

ವಾಟ್ಸಾಪ್​ನಲ್ಲಿ ಪ್ರೀಪೇಡ್ ಮೊಬೈಲ್ ರೀಚಾರ್ಜ್; ಬಂದಿದೆ ಹೊಸ ಫೀಚರ್

ಬೆಂಗಳೂರು, ಏಪ್ರಿಲ್ 23: ನಂಬರ್ ಒನ್ ಮೆಸೇಜಿಂಗ್ ಆ್ಯಪ್ ಆದ ವಾಟ್ಸಾಪ್​ನಲ್ಲಿ ರೀಚಾರ್ಜ್ ಸರ್ವಿಸ್ ಅನ್ನು ಪರಿಚಯಿಸಲಾಗುತ್ತಿದೆ. ಭಾರತದಲ್ಲಿ ವಾಟ್ಸಾಪ್ ಬಳಕೆದಾರರಿಗೆ ಪ್ರೀಪೇಡ್ ಮೊಬೈಲ್ ರೀಚಾರ್ಜ್ ಸೇವೆ ಲಭ್ಯ ಇರಲಿದೆ. ಆಂಡ್ರಾಯ್ಡ್ ಮತ್ತು ಆ್ಯಪಲ್ ಮೊಬೈಲ್​ಗಳಲ್ಲಿ ಎರಡರಲ್ಲೂ ಇದು ಸಿಗಲಿದೆ. ಆದರೆ, ಹಂತ ಹಂತವಾಗಿ ಇದು ಜಾರಿಯಾಗುತ್ತದೆ. ಮುಂಬರುವ ಕೆಲ ವಾರಗಳಲ್ಲಿ ಎಲ್ಲಾ ವಾಟ್ಸಾಪ್ ಬಳಕೆದಾರರಿಗೂ ಈ ಸೇವೆ ಸಿಗುತ್ತದೆ. ಮೊಬೈಲ್ ರೀಚಾರ್ಜ್ ಸೇವೆ ನೀಡಲು ವಾಟ್ಸಾಪ್​ಗೆ ಪೇಯು (PayU) ನೆರವು ನೀಡುತ್ತಿದೆ. ವಾಟ್ಸಾಪ್ ಬಳಕೆದಾರರು ತಮ್ಮದೇ…

Read More

ವಂಚನೆ, ಬೆದರಿಕೆ ಆರೋಪ: ಪ್ರತಿಕ್ರಿಯೆ ನೀಡಿದ ಗಾಯಕಿ ಮಂಗ್ಲಿ – Kannada News | Singer Mangli reaction about allegation made against her

ಮಂಗ್ಲಿ (Mangli), ದಕ್ಷಿಣ ಭಾರತದ ಜನಪ್ರಿಯ ಗಾಯಕಿ. ತೀರಾ ಹಿಂದುಳಿದ ಸಮುದಾಯದಿಂದ ಬಂದು, ತನ್ನ ಜನಪದ ಗಾಯಕ ಕಲೆಯಿಂದ ಒಂದೊಂದೆ ಮೆಟ್ಟಿಲು ಹತ್ತಿ ಇಂದು ದಕ್ಷಿಣ ಭಾರತದ ಬೇಡಿಕೆಯ ಗಾಯಕರಿಯರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಕನ್ನಡದ ‘ರಾಬರ್ಟ್’ ಸಿನಿಮಾದ ತೆಲುಗು ಡಬ್​​ನಲ್ಲಿ ಮಂಗ್ಲಿ ಹಾಡಿದ ಹಾಡು ಭಾರಿ ದೊಡ್ಡ ಹಿಟ್ ಆಗಿತ್ತು. ಕರ್ನಾಟಕದಲ್ಲಿ ಹಲವು ಲೈವ್ ಶೋಗಳನ್ನು ಸಹ ಮಂಗ್ಲಿ ನೀಡಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರಕ್ಕೂ ಅವರು ಬಂದಿದ್ದರು. ಆದರೆ ಇದೀಗ ಮಂಗ್ಲಿ ಹೆಸರು ವಿವಾದದಲ್ಲಿ ಸಿಲುಕಿಕೊಂಡಿದ್ದು, ಅವರ…

Read More

SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್ – Kannada News | Karnataka SSLC Board Blunder: Visually Impaired Student Fails Due to Result Error

ಕಾರವಾರ, ಏಪ್ರಿಲ್​ 23: ಇತ್ತೀಚೆಗೆ ಪಿಯುಸಿ ಫಲಿತಾಂಶ ಪ್ರಕಟಣೆ ವೇಳೆ 600 ಅಂಕಗಳ ಪರೀಕ್ಷೆಗೆ 683 ಅಂಕಗಳನ್ನು ನೀಡಿದ ಬೋರ್ಡ್​ನ ಎಡವಟ್ಟು ಬೆಳಕಿಗೆ ಬಂದಿತ್ತು. ಇದೀಗ ಇಂತಹದೊಂದು ಎಡವಟ್ಟು ಇದೀಗ ಎಸ್​​ಎಸ್​ಎಲ್​ಸಿ ಪರೀಕ್ಷೆಯಲ್ಲೂ ನಡೆದಿದ್ದು, ಪ್ರತಿಭಾವಂತ ಅಂಧ ವಿದ್ಯಾರ್ಥಿನಿಯನ್ನ ಫೇಲ್​ ಮಾಡಲಾಗಿದೆ. ಶಿರಸಿಯ ಇಂದಿರಾ ನಗರದ ಯೂನಿಯನ್ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ ಲೀಸಾ ಖಾನಮ್, ಎಲ್ಲಾ ಪರೀಕ್ಷೆಗೆ ಹಾಜರಾಗಿದ್ದರು ಸಮಾಜ-ವಿಜ್ಞಾನ ವಿಷಯದ ಪರೀಕ್ಷೆಗೆ ಗೈರು ಎಂದು ನಮೋದಿಸಲಾಗಿದೆ. ಕನ್ನಡ -100, ಇಂಗ್ಲಿಷ್​​ -92, ಅರ್ಥಶಾಸ್ತ್ರ-98 , ಪೊಲಿಟಿಕಲ್…

Read More

500 ರೂ. ಬೆಟ್ಟಿಂಗ್ ಕೇಸ್: ಗೃಹ ಸಚಿವ ಪರಮೇಶ್ವರ್​​​ಗೆ ಬಿಗ್ ರಿಲೀಫ್! – Kannada News | Karnataka High Court Stays On 500 Betting Case Against Home Minister G Parameshwar

ಬೆಂಗಳೂರು, (ಏಪ್ರಿಲ್ 23): ಗೃಹ ಸಚಿವ ಪರಮೇಶ್ವರ್ (G Parameshwar)  ವಿರುದ್ಧದ 500 ರೂಪಾಯಿ ಬೆಟ್ಟಿಂಗ್ ಪ್ರಕರಣಕ್ಕೆ (Rs 500 Betting Case) ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ತಮಾಷೆಗಾಗಿ ಮಾತನಾಡಿದರೂ ಕೇಸ್ ಹಾಕಬಹುದೇ? ಉದ್ದೇಶಪೂರ್ವಕವಾಗಿ ಇಂತಹ ಹೇಳಿಕೆ ನೀಡಿದಂತೆ ಕಾಣುತ್ತಿಲ್ಲ. ತನಿಖೆಗೆ ಆದೇಶಿಸುವ ಮುನ್ನ ಪೊಲೀಸರಿಂದ ವಿವರಣೆ ಪಡೆಯಬೇಕಿತ್ತು ಎಂದು ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದೆ. ಅಲ್ಲದೇ ಪ್ರಕರಣಕ್ಕೆ ತಡೆ ನೀಡಿ ವಿಚಾರಣೆಯನ್ನು ಮುಂದೂಡಿದೆ. ಇದರಿಂದ ಗೃಹ ಸಚಿವ ಪರಮೇಶ್ವರ್…

Read More

29ನೇ ವಯಸ್ಸಿಗೆ ಖ್ಯಾತ ನಟಿ ಅನುಮಾನಾಸ್ಪದ ಸಾವು; ಕೊನೇ ಕ್ಷಣದಲ್ಲಿ ನಡೆದಿದ್ದು ಏನು? – Kannada News | Haryanvi Actor Dancer Divyanka Sirohi passes away at 29 in Ghaziabad

ಹರಿಯಾಣದ ಜನಪ್ರಿಯ ನಟಿ ಮತ್ತು ಡ್ಯಾನ್ಸರ್ ದಿವ್ಯಾಂಕಾ ಸಿರೋಹಿ (Divyanka Sirohi) ಅವರು ಮಂಗಳವಾರ (ಏಪ್ರಿಲ್ 21) ಗಾಜಿಯಾಬಾದ್‌ನ ರಾಜನಗರ ಎಕ್ಸ್‌ಟೆನ್ಶನ್‌ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 29 ವರ್ಷ ವಯಸ್ಸಾಗಿತ್ತು. ಚಿಕ್ಕ ವಯಸ್ಸಿನಲ್ಲಿ ಅವರ ಸಾವು ಸಂಭವಿಸಿರುವುದು ಚಿತ್ರರಂಗ ಮತ್ತು ಅಭಿಮಾನಿಗಳಲ್ಲಿ ತೀವ್ರ ಆಘಾತ ಮೂಡಿಸಿದೆ. ದಿವ್ಯಾಂಕಾ ಅವರ ಸಾವಿನ (Divyanka Sirohi Death) ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಸಾವಿನ ಬಗ್ಗೆ ಅನುಮಾನ ಮೂಡಿದೆ. ಬುಧವಾರ (ಏಪ್ರಿಲ್ 22) ಬೆಳಿಗ್ಗೆ ಗಾಜಿಯಾಬಾದ್‌ನಲ್ಲಿ ಅವರ ಅಂತ್ಯಕ್ರಿಯೆ…

Read More

Home Names: ನಿಮ್ಮ ಕನಸಿನ ಮನೆಗೆ ‘ರಾಜಮನೆತನದ’ ಕಳೆ ನೀಡಬೇಕೇ? ಇಲ್ಲಿದೆ ಅದ್ಭುತ ಸಂಸ್ಕೃತ ಹೆಸರುಗಳು! – Kannada News | 10 Vastu Approved Sanskrit Home Names for Positive Energy and Prosperity

ಮನೆ ಕೇವಲ ಇಟ್ಟಿಗೆಗಳ ಕಟ್ಟಡವಲ್ಲ ಹಿರಿಯರು ಹೇಳುವಂತೆ, ಇಟ್ಟಿಗೆ ಮತ್ತು ಕಲ್ಲುಗಳು ಕೇವಲ ಒಂದು ಭೌತಿಕ ರಚನೆಯನ್ನು ನಿರ್ಮಿಸುತ್ತವೆ. ಆದರೆ ಆ ರಚನೆಯನ್ನು ‘ಮನೆ’ಯನ್ನಾಗಿ ಪರಿವರ್ತಿಸುವುದು ಅಲ್ಲಿ ವಾಸಿಸುವ ಜನರು, ಅವರ ಕನಸುಗಳು ಮತ್ತು ಅಲ್ಲಿನ ಶಕ್ತಿ. ಪ್ರತಿಯೊಬ್ಬರಿಗೂ ತಮ್ಮ ಜೀವನದ ಸಾಧನೆಯ ಸಂಕೇತವಾಗಿ ಒಂದು ಸುಂದರ ಮನೆ ಇರಬೇಕೆಂಬ ಆಸೆಯಿರುತ್ತದೆ. ಮಗುವಿಗೆ ಹೆಸರಿಡುವುದು ಹೇಗೆ ಅದರ ಗುರುತನ್ನು ನಿರ್ಧರಿಸುತ್ತದೆಯೋ, ಹಾಗೆಯೇ ನಿಮ್ಮ ಮನೆಗೆ ನೀವು ಇಡುವ ಹೆಸರು ಅಲ್ಲಿನ ಸಕಾರಾತ್ಮಕ ಶಕ್ತಿ (Positive Vibrations) ಮತ್ತು…

Read More

41 ನಿಮಿಷದಲ್ಲಿ ಅತ್ಯಾಚಾರ, ಕೊಲೆ, ದರೋಡೆ; ಐಆರ್​ಎಸ್​ ಅಧಿಕಾರಿ ಮನೆಯಲ್ಲಿ ನಡೆದಿದ್ದೇನು? ಆರೋಪಿ ಸಿಕ್ಕಿದ್ದು ಹೇಗೆ? – Kannada News | Rape and murder in 40 minutes Delhi IRS Officer Daughter killed by former Employee Rahul how he Caught

ನವದೆಹಲಿ, ಏಪ್ರಿಲ್ 23: ಬುಧವಾರ ಬೆಳಗ್ಗೆ 6.40ಕ್ಕೆ ದೆಹಲಿಯ ಐಷಾರಾಮಿ ಪ್ರದೇಶವಾದ ಕೈಲಾಶ್ ಹಿಲ್ಸ್​ನಲ್ಲಿರುವ ಐಆರ್​ಎಸ್​ ಅಧಿಕಾರಿಯೊಬ್ಬರ (IRS Officer) ಮನೆಯೊಳಗೆ ಭೀಕರ ಘಟನೆ ನಡೆದಿತ್ತು. ಬೆಳಗ್ಗೆ 6.30ಕ್ಕೆ ಐಆರ್​ಎಸ್​ ಅಧಿಕಾರಿ ತನ್ನ ಹೆಂಡತಿಯ ಜೊತೆ ವಾಕಿಂಗ್​​ಗೆ ಹೋದಕೂಡಲೆ ಅದೇ ಮನೆಯ ಮಾಜಿ ಕೆಲಸಗಾರ ರಾಹುಲ್ ಆ ಮನೆಯೊಳಗೆ ನುಗ್ಗಿದ್ದ. ತನ್ನನ್ನು ಕೆಲಸದಿಂದ ತೆಗೆದುಹಾಕಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಸಂಚು ಮಾಡಿದ್ದ ಆತನಿಗೆ ಆ ಮನೆಯ ಹೊರಗೆ ಕೆಲಸಗಾರರಿಗಾಗಿ ಎಲ್ಲಿ ಕೀ ಇಟ್ಟಿರುತ್ತಾರೆ ಎಂಬುದು ಗೊತ್ತಿತ್ತು. ಆ ಮನೆಯಲ್ಲಿ…

Read More

ಮೈಸೂರಲ್ಲೊಂದು ಮನಕಲಕುವ ಘಟನೆ: ಇರುವೆ ಕಚ್ಚಿ ಐಸಿಯುವಿನಲ್ಲಿದ್ದ ಹಸುಳೆ ಸಾವು? – Kannada News | Cheluvamba Hospital: Mysuru Infant Dies in ICU, Parents Allege Ant Bites and Negligence

ಮೈಸೂರು, ಏಪ್ರಿಲ್​​ 23: ವೈದ್ಯರ ನಿರ್ಲಕ್ಷ್ಯಕ್ಕೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ಡಿಸ್ಚಾರ್ಜ್​​ ಆಗಿದ್ದ ರೋಗಿಯೋರ್ವ ನರಳಿ ನರಳಿ ಪ್ರಾಣಬಿಟ್ಟಿರುವ ಆರೋಪ ನಿನ್ನೆಯಷ್ಟೇ ಕೇಳಿಬಂದಿತ್ತು. ಅದು ಮಾಸುವ ಮುನ್ನವೇ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನವಜಾತ ಶಿಶುವೊಂದು ಇರುವೆ ಕಚ್ಚಿ ಮೃತಪಟ್ಟಿರುವ ಬಗ್ಗೆ ಮೈಸೂರಿನಲ್ಲಿ (Mysuru) ದೂರು ಕೇಳಿಬಂದಿದೆ. ಚೆಲುವಾಂಬ ಆಸ್ಪತ್ರೆವಿರುದ್ಧ ಮೃತ ಮಗುವಿನ ಪೋಷಕರು ದೂರಿದ್ದು, ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ ಹಸುಳೆಯ ಸಾವಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 15ರಂದು ಅವಧಿ ಪೂರ್ವ ಗಂಡು…

Read More