ಮಹಿಳೆಯೊಂದಿಗೆ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಿ ಟಿ ರವಿ ಅಪ್ತನ ಮೇಲೆ ಹಲ್ಲೆ – Kannada News | A Gang assaults On BJP MLC CT Ravi Close Aide Anand for Stay With Woman In homestay at Chikkamagaluru

ಚಿಕ್ಕಮಗಳೂರು, (ಜನವರಿ 28): ವಿಧವೆ ಮಹಿಳೆ ಜೊತೆ ಖಾಸಗಿ ಹೋಂ ಸ್ಟೇನಲ್ಲಿ ತಂಗಿದ್ದನೆಂದು ಆರೋಪಿಸಿ ಮಾಜಿ ಸಚಿವ ಸಿ.ಟಿ. ರವಿ ಅವರ ಆಪ್ತ ಹಾಗೂ ಚಿಕ್ಕಮಗಳೂರು  ನಗರಾಭಿವೃದ್ಧಿ ಪ್ರಾಧಿಕಾರದ (ಸಿಡಿಎ) ಮಾಜಿ ಅಧ್ಯಕ್ಷ ಆನಂದ್ ಮೇಲೆ ಹತ್ತಾರು ಯುವಕರ ತಂಡವೊಂದು ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರಿನಲ್ಲಿ (Chikkamagaluru) ನಡೆದಿದೆ. ಆನಂದ್ ಮಹಿಳೆಯೊಬ್ಬರ ಜತೆ ಹೋಂಸ್ಟೇನಲ್ಲಿದ್ದಾರೆಂದು ವಿಷಯ ತಿಳಿಯುತ್ತಿದ್ದಂತೆಯೇ ಗಂಪೊಂದು ಏಕಾಏಕಿ ದಾಳಿ ಮಾಡಿದ್ದು, ಈ ವೇಳೆ ಆನಂದ್ ಮಹಿಳೆ ಜತೆ ಇರುವುದು ಕಂಡುಬಂದಿದೆ. ಆಗ ಆನಂದ ಮೇಲೆ ಹಲ್ಲೆ ನಡೆಸಿದ್ದಾರೆ.​

ಚಿಕ್ಕಮಗಳೂರು ತಾಲೂಕಿನ ಮತ್ತಾವರ ಗ್ರಾಮದ ಮಹಿಳೆಯೊಬ್ಬರ ಜೊತೆ ಸಿಡಿಎ ಮಾಜಿ ಅಧ್ಯಕ್ಷ ಆನಂದ್ ಖಾಸಗಿ ಹೋಂ ಸ್ಟೇನಲ್ಲಿ ತಂಗಿದ್ದಾರೆ ಎಂಬ ಮಾಹಿತಿ ಗ್ರಾಮಸ್ಥರಿಗೆ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆ ವಾಸವಿದ್ದ ಮತ್ತಾವರ ಗ್ರಾಮದ ಹತ್ತಾರು ಜನರು ಚಿಕ್ಕಮಗಳೂರು-ಕಡೂರು ಮಾರ್ಗದಲ್ಲಿರುವ ಖಾಸಗಿ ಹೋಂ ಸ್ಟೇ ಮೇಲೆ ಏಕಾಏಕಿ ದಾಳಿ ಮಾಡಿ ಪ್ರತಿಯೊಂದು ಕೊಠಡಿಗಳನ್ನು ಪರಿಶೀಲಿಸಿದ್ದಾರೆ.ಆಗ ಮಹಿಳೆಯ ಜೊತೆ ಸಿಕ್ಕಿಬಿದ್ದ ಆನಂದ್ ಮೇಲೆ ಹಲ್ಲೆ ನಡೆಸಿದ್ದು, ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಇದನ್ನೂ ಓದಿ: ಮಾಜಿ ಸಂಸದರೊಬ್ಬರದ್ದು ಎನ್ನಲಾದ ಆಡಿಯೋ ವೈರಲ್​​: ರಾಜಕೀಯ ರಹಸ್ಯಗಳು ಬಯಲು

ಈ ಬಗ್ಗೆ ಯಾರು ದೂರು ನೀಡಿಲ್ಲ. ಹೀಗಾಗಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದ್ರೆ, ಹಲ್ಲೆ ನಡೆಸಿರುವ ವಿಡಿಯೋ ಮಾತ್ರ ಸಾಮಾಜಿಕ ಜಲಾತಾಣಗಳಲ್ಲಿ ಹರಿದಾಡುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪತಿ, ಸಹೋದರ ಮಾವ ಆತ್ಮಹತ್ಯೆ: ಮದ್ವೆಯಾಗಿ 45 ದಿನಕ್ಕೆ ಬೇರೊಬ್ಬನೊಂದಿಗೆ ಓಡಿಹೋಗಿದ್ದ ಮಹಿಳೆ ಅರೆಸ್ಟ್ – Kannada News | Davanagere: Husband and Uncle Suicide case; Wife Arrest

ದಾವಣಗೆರೆ, ಜನವರಿ 28: ಪತ್ನಿ ಬೇರೊಬ್ಬನ ಜೊತೆ‌ ಪರಾರಿ ಹಿನ್ನೆಲೆ ಪತಿ ಮತ್ತು ಸಹೋದರ ಮಾವ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರೇಮಿ ಶಿವಕುಮಾರ ಹಾಗೂ ಸರಸ್ವತಿ ವಿರುದ್ಧ ಎಫ್​ಐಆರ್​​ ದಾಖಲಾಗಿದೆ. ಆರೋಪಿ ಪತ್ನಿ ಸರಸ್ವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಿವಕುಮಾರಗಾಗಿ ಶೋಧ ನಡೆದಿದೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್​​ಪಿ ಉಮಾ ಪ್ರಶಾಂತ್​, ಪ್ರೀತಿಸಿದ ಯುವಕನೊಂದಿಗೆ ಓಡಿ ಹೋಗಿದ್ದ ಸರಸ್ವತಿ ಮದುವೆಗೂ ಮೊದಲೇ ಆರೋಪಿ ಶಿವಕುಮಾರನನ್ನ ಪ್ರೀತಿಸುತ್ತಿದ್ದಳು. ಜನವರಿ 23ರಂದು ಗುಮ್ಮನೂರ ಗ್ರಾಮದಿಂದ ತನ್ನ ಪ್ರಿಯತಮನ ಜೊತೆಗೆ ಹೋಗಿದ್ದಳು. ಇದೇ ಕಾರಣಕ್ಕೆ ಬೇಸತ್ತು ಆಕೆಯ ಪತಿ ಮತ್ತು ಸಹೋದರ ಮಾವ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಶರಣಾದ ಇಬ್ಬರು ಪರಿಶಿಷ್ಟ ಪಂಗಡಕ್ಕೆ ಸೇರಿದ್ದರಿಂದ ಅಟ್ರಾಸಿಟಿ ಕೇಸ್ ಕೂಡ ಆರೋಪಿ ಶಿವಕುಮಾರ ವಿರುದ್ಧ ದಾಖಲಾಗಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಮಾಜಿ ಸಂಸದರೊಬ್ಬರದ್ದು ಎನ್ನಲಾದ ಆಡಿಯೋ ವೈರಲ್​​: ರಾಜಕೀಯ ರಹಸ್ಯಗಳು ಬಯಲು – Kannada News | Mandya: Audio purportedly of former MP L.R. Shivaramegowda speaking goes viral

ಮಂಡ್ಯ, ಜನವರಿ 28: ಮಾಜಿ ಸಂಸದ ಎಲ್​​ಆರ್​ ಶಿವರಾಮೇಗೌಡರದ್ದು (LR ShivarameGowda) ಎನ್ನಲಾದ ಆಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಜೆಡಿಎಸ್ (jds) ಕಾರ್ಯಕರ್ತನೊಂದಿಗೆ ಫೋನ್‌ನಲ್ಲಿ ಮಾತನಾಡುವ ವೇಳೆ ಮಾತಿನ ಭರದಲ್ಲಿ ಹಲವು ರಾಜಕೀಯ ರಹಸ್ಯಗಳನ್ನು ಬಿಚ್ಚಿಟ್ಟು, ಕೆಲ ರಾಜಕೀಯ ನಾಯಕರಿಗೆ ಏಕವಚನದಲ್ಲಿ ವಾಗ್ದಾಳಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ಮತ್ತೊಮ್ಮೆ ನಾಲಗೆ ಹರಿಬಿಟ್ಟ ಎಲ್​​.ಆರ್​ ಶಿವರಾಮೇಗೌಡ

ಮಾಜಿ ಸಂಸದ ಎಲ್​​.ಆರ್​ ಶಿವರಾಮೇಗೌಡ ಮತ್ತೊಮ್ಮೆ ನಾಲಗೆ ಹರಿಬಿಟ್ಟಿದ್ದಾರೆ. ಅವರು ಮಾತಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಮಾತಿನ ಭರದಲ್ಲಿ ಹಲವು ರಾಜಕೀಯ ರಹಸ್ಯ ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲದೆ, ಕೇಂದ್ರ ಸಚಿವ ಹೆಚ್​​​​​ಡಿ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಅಂಬರೀಶ್ ಬಗ್ಗೆ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಪೆನ್​ಡ್ರೈವ್​ ಕೇಸ್: ಶಿವರಾಮೇಗೌಡ, ದೇವರಾಜೇಗೌಡ, ಡಿಕೆಶಿ ​ಸೀಕ್ರೆಟ್ ಆಡಿಯೋ​ ವೈರಲ್

ಕೇಂದ್ರ ಸಚಿವ ಹೆಚ್​​ಡಿ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ಮಾಡಿರುವ ಶಿವರಾಮೇಗೌಡ, ಲೋಕಸಭೆ ಉಪಚುನಾವಣೆಗೆ ಟಿಕೆಟ್ ನೀಡಿ ನನ್ನಿಂದ 36 ಕೋಟಿ ರೂ. ಹಣ ಖರ್ಚು ಮಾಡಿಸಿದರು. ಬಳಿಕ ನನಗೆ ಟಿಕೆಟ್ ನೀಡದೇ ಮೋಸ ಮಾಡಿದರು ಎಂದು ಆರೋಪಿಸಿದ್ದಾರೆ.

ಅದೇ ರೀತಿ ಜೆಡಿಎಸ್‌ನಲ್ಲಿದ್ದ ಒಕ್ಕಲಿಗ ನಾಯಕರನ್ನು ಬೆಳೆಯಲು ಬಿಡಲಿಲ್ಲ ಎಂಬ ಆರೋಪ ಕೂಡ ಅವರು ಮಾಡಿದ್ದಾರೆ. ಸ್ವಪಕ್ಷದ ಸಚಿವ ಚಲುವರಾಯಸ್ವಾಮಿ ವಿರುದ್ಧ ಹಾಗೂ ಮಾಜಿ ಸಂಸದ ದಿವಂಗತ ಮಾದೇಗೌಡ ವಿರುದ್ಧವೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಶಾಸಕ ಸುರೇಶ್ ಗೌಡ ವಿರುದ್ಧವೂ ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿದ್ದಾರೆ. ಅಲ್ಲದೆ, ಅಂಬರೀಶ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದಿದ್ದು ನಾನು. ಬಳಿಕ ಅವರು ಪಕ್ಷವನ್ನು ತೊಳೆದುಬಿಟ್ಟು ಹೊರಟುಹೋದರು ಎಂದಿದ್ದಾರೆ.

ಇದನ್ನೂ ಓದಿ: ಎಲ್​ಆರ್ ಶಿವರಾಮೇಗೌಡ ಆಡಿಯೋ ವೈರಲ್ ವಿಚಾರಕ್ಕೆ ಹೆಚ್​ಡಿ ಕುಮಾರಸ್ವಾಮಿ ಗರಂ; ಪಕ್ಷದಿಂದ ಹೊರಹಾಕಲು ಸೂಚನೆ

ಈ ಹಿಂದೆ ಕೂಡ ದಿವಂಗತ ಮಾದೇಗೌಡ ವಿರುದ್ಧ ಮಾತನಾಡಿದ್ದ ಆಡಿಯೋ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಎಲ್​ಆರ್​ ಶಿವರಾಮೇಗೌಡ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಅವರದ್ದೆ ಎನ್ನಲಾದ ಆಡಿಯೋ ವೈರಲ್ ಆಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಭಾರತಕ್ಕೆ ಬರುತ್ತಿದೆ ಬಾಂಗ್ಲಾದೇಶ ತಂಡ – Kannada News | Bangladesh Approves Shooting Team Visit to India After T20 World Cup Boycott

ಇತ್ತೀಚೆಗೆ, 2026 ರ ಟಿ20 ವಿಶ್ವಕಪ್‌ಗೆ (T20 World Cup) ಸಂಬಂಧಿಸಿದಂತೆ ಭಾರತ ಮತ್ತು ಬಾಂಗ್ಲಾದೇಶ ನಡುವೆ ದೊಡ್ಡ ವಿವಾದ ಭುಗಿಲೆದ್ದಿತು. ವೇಗಿ ಮುಸ್ತಫಿಜುರ್ ರೆಹಮಾನ್ ಅವರನ್ನು ಐಪಿಎಲ್​ನಿಂದ ಹೊರಹಾಕಿದ್ದಕ್ಕೆ ಕೆರಳಿದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತನ್ನ ತಂಡವನ್ನು ಭಾರತಕ್ಕೆ ಕಳುಹಿಸಲು ನಿರಾಕರಿಸಿತು. ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ, ಬಾಂಗ್ಲಾದೇಶ ಸರ್ಕಾರವು ತನ್ನ ತಂಡದ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂದು ವಿನಂತಿಸಿತ್ತು, ಆದರೆ ಐಸಿಸಿ ಆ ವಿನಂತಿಯನ್ನು ತಿರಸ್ಕರಿಸಿತು. ಇದರಿಂದ ಮತ್ತಷ್ಟು ಕೆರಳಿದ್ದ ಬಾಂಗ್ಲಾ ಸರ್ಕಾರ ತನ್ನ ತಂಡವನ್ನು ಭಾರತಕ್ಕೆ ಕಳುಹಿಸಲು ಒಪ್ಪದೆ ಟೂರ್ನಿಯಿಂದ ಹಿಂದೆ ಸರಿಯಿತು. ಆದರೆ ಅದೇ ಬಾಂಗ್ಲಾದೇಶ ಸರ್ಕಾರ ಇದೀಗ ತನ್ನ ತಂಡವನ್ನು ಭಾರತಕ್ಕೆ ಕಳುಹಿಸಲು ಅನುಮತಿ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಭಾರತಕ್ಕೆ ಬರಲಿದೆ ಬಾಂಗ್ಲಾದೇಶ ತಂಡ

ವಾಸ್ತವವಾಗಿ ಫೆಬ್ರವರಿ 2 ರಿಂದ 14 ರವರೆಗೆ ನಡೆಯಲಿರುವ ಏಷ್ಯನ್ ರೈಫಲ್ ಮತ್ತು ಪಿಸ್ತೂಲ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಬಾಂಗ್ಲಾದೇಶ ಸರ್ಕಾರ ತನ್ನ ರಾಷ್ಟ್ರೀಯ ಶೂಟಿಂಗ್ ತಂಡದ ಭಾರತ ಪ್ರವಾಸಕ್ಕೆ ಅನುಮೋದನೆ ನೀಡಿದೆ. ಯುವಜನ ಮತ್ತು ಕ್ರೀಡಾ ಸಚಿವಾಲಯವು ಬುಧವಾರ ಅಧಿಕೃತ ಸರ್ಕಾರಿ ಆದೇಶ ಹೊರಡಿಸಿ, ತಂಡಕ್ಕೆ ಭಾಗವಹಿಸಲು ಅನುಮತಿ ನೀಡಿದೆ. ಶೂಟಿಂಗ್ ಚಾಂಪಿಯನ್‌ಶಿಪ್ ಸುರಕ್ಷಿತ ಸ್ಥಳವಾದ ಇಂದೋರ್‌ನಲ್ಲಿ ನಡೆಯುವುದರಿಂದ, ಶೂಟಿಂಗ್ ಚಾಂಪಿಯನ್‌ಶಿಪ್‌ಗೆ ಭದ್ರತಾ ಅಪಾಯ ಕಡಿಮೆ ಇರುವುದರಿಂದ ತನ್ನ ತಂಡವನ್ನು ಭಾರತಕ್ಕೆ ಕಳುಹಿಸುತ್ತಿರುವುದಾಗಿ ಬಾಂಗ್ಲಾದೇಶ ಸರ್ಕಾರ ಹೇಳದೆ.

ಈ ಬಗ್ಗೆ ಮಾತನಾಡಿದ ಯುವಜನ ಮತ್ತು ಕ್ರೀಡಾ ಕಾರ್ಯದರ್ಶಿ ಮುಹಮ್ಮದ್ ಮಹಬೂಬ್-ಉಲ್-ಆಲಂ, ‘ಶೂಟಿಂಗ್ ತಂಡದ ಭಾರತ ಪ್ರವಾಸವನ್ನು ಅನುಮೋದಿಸುವ ಮೊದಲು ಎಲ್ಲಾ ಅಂಶಗಳನ್ನು ಪರಿಗಣಿಸಲಾಗಿದೆ. ಬಾಂಗ್ಲಾದೇಶ ಶೂಟಿಂಗ್ ತಂಡದಲ್ಲಿ ಏಕೈಕ ಶೂಟರ್ ಮತ್ತು ಏಕೈಕ ತರಬೇತುದಾರರಿದ್ದಾರೆ. ಹೀಗಾಗಿ ಇವರಿಬ್ಬರಿಗೆ ಭದ್ರತೆ ಒದಗಿಸಲು ಸಮಸ್ಯೆ ಇಲ್ಲ. ಇದಲ್ಲದೆ, ಯಾವುದೇ ಭದ್ರತಾ ಸಮಸ್ಯೆಗಳಿಲ್ಲ ಎಂದು ಸಂಘಟಕರು ನಮಗೆ ಭರವಸೆ ನೀಡಿದ್ದಾರೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ನಂತರ, ಸರ್ಕಾರವು ಶೂಟಿಂಗ್ ತಂಡದ ಪ್ರಯಾಣವನ್ನು ಅನುಮೋದಿಸಿದೆ’ ಎಂದಿದ್ದಾರೆ.

T20 World Cup 2026: ಟಿ20 ವಿಶ್ವಕಪ್​ಗೆ ಕೊನೆಗೂ ಅರ್ಹತೆ ಪಡೆದ ಬಾಂಗ್ಲಾದೇಶ

ಶೂಟರ್​ಗೆ ವೀಸಾ ಅಗತ್ಯವಿಲ್ಲ

ಫೆಬ್ರವರಿ 5 ರಂದು ನಡೆಯಲಿರುವ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶವನ್ನು ಪ್ರಮುಖ ಶೂಟರ್ ರಬಿಯುಲ್ ಇಸ್ಲಾಂ ಪ್ರತಿನಿಧಿಸಲಿದ್ದಾರೆ. ಅವರೊಂದಿಗೆ ರಾಷ್ಟ್ರೀಯ ಕೋಚ್ ಶರ್ಮಿನ್ ಅಖ್ತರ್ ಕೂಡ ಇರುತ್ತಾರೆ. ಬಾಂಗ್ಲಾದೇಶ ನೌಕಾಪಡೆಯ ಕ್ರೀಡಾಪಟು ರಬಿಯುಲ್ ವಿಶೇಷ ಪಾಸ್‌ಪೋರ್ಟ್ ಹೊಂದಿದ್ದು, ಅದು ಅವರಿಗೆ ಏಳು ದಿನಗಳ ಕಾಲ ವೀಸಾ ಇಲ್ಲದೆ ಭಾರತದಲ್ಲಿ ಉಳಿಯಲು ಅನುವು ಮಾಡಿಕೊಡುತ್ತದೆ. ಆದಾಗ್ಯೂ, ಕೋಚ್ ಶರ್ಮಿನ್ ಭಾರತೀಯ ವೀಸಾ ಪಡೆಯಬೇಕಾಗುತ್ತದೆ. ಇವರಿಬ್ಬರು ಜನವರಿ 31 ರಂದು ನವದೆಹಲಿಗೆ ಬಂದಿಳಿಯಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಕಿವೀಸ್ ವಿರುದ್ಧ ಟಾಸ್ ಗೆದ್ದ ಟೀಂ ಇಂಡಿಯಾದಲ್ಲಿ 1 ಬದಲಾವಣೆ – Kannada News | IND vs NZ 4th T20: Surya wins toss, India bowls first; Arshdeep in for injured Kishan

ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯ ವಿಶಾಖಪಟ್ಟಣದಲ್ಲಿ ನಡೆಯುತ್ತಿದೆ. ಎರಡೂ ತಂಡಗಳು ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಟೀಂ ಇಂಡಿಯಾ ಪ್ರಸ್ತುತ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದ್ದು ಈಗಾಗಲೇ ಸರಣಿಯನ್ನು ವಶಪಡಿಸಿಕೊಂಡಿದೆ. ಇತ್ತ ಸರಣಿ ಸೋತಿರುವ ನ್ಯೂಜಿಲೆಂಡ್ ಉಳಿದೆರಡು ಪಂದ್ಯಗಳನ್ನು ಗೆದ್ದು ಸೋಲಿನ ಅಂತರವನ್ನು ಕಡಿಮೆ ಮಾಡಲು ಯತ್ನಿಸಲಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ನ್ಯೂಜಿಲೆಂಡ್ ಎಂದಿನಂತೆ ಮೊದಲು ಬ್ಯಾಟಿಂಗ್‌ ಮಾಡಲಿದೆ.

ಟಾಸ್ ಗೆದ್ದ ಟೀಂ ಇಂಡಿಯಾ

ವಿಶಾಖಪಟ್ಟಣದಲ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್‌ ಮಾಡುವ ತಂಡಕ್ಕೆ ಇಬ್ಬನಿಯ ನೆರವು ಸಿಗುವುದರಿಂದ ಮೊದಲು ಬೌಲಿಂಗ್ ಮಾಡುತ್ತಿರುವುದಾಗಿ ಸೂರ್ಯ ಹೇಳಿದರು. ಟಾಸ್ ಬಳಿಕ ಎರಡೂ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಟೀಂ ಇಂಡಿಯಾದಲ್ಲಿ 1 ಬದಲಾವಣೆ ಮಾಡಲಾಗಿದೆ. ಸ್ಟಾರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್​ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಅವರನ್ನು ಈ ಪಂದ್ಯದಿಂದ ಹೊರಗಿಡಲಾಗಿದೆ. ಅವರ ಬದಲಿಗೆ ಬೌಲರ್ ಅರ್ಷದೀಪ್​ ಸಿಂಗ್​ಗೆ ಆಡುವ ಅವಕಾಶ ನೀಡಲಾಗಿದೆ. ಇತ್ತ ನ್ಯೂಜಿಲೆಂಡ್ ತಂಡದಲ್ಲೂ 1 ಬದಲಾವಣೆ ಮಾಡಲಾಗಿದೆ.

ಉಭಯ ತಂಡಗಳು

ನ್ಯೂಜಿಲೆಂಡ್ ತಂಡ: ಡೆವೊನ್ ಕಾನ್ವೇ, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಡ್ಯಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಜಕಾರಿ ಫೌಲ್ಕ್ಸ್, ಮ್ಯಾಟ್ ಹೆನ್ರಿ, ಇಶ್ ಸೋಧಿ, ಜಾಕೋಬ್ ಡಫಿ.

ಭಾರತ ತಂಡ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಹರ್ಷಿತ್ ರಾಣಾ, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:40 pm, Wed, 28 January 26

Source link

ಪತನವಾಗುವ ಮುನ್ನ ಪಲ್ಟಿಯಾಗಿ ಬಿತ್ತು ವಿಮಾನ; ಅಜಿತ್ ಪವಾರ್ ಕೊನೆಯ ಕ್ಷಣಗಳ ಹೊಸ ವಿಡಿಯೋ ವೈರಲ್ – Kannada News | New CCTV Video Shows DCM Ajit Pawar Plane Tilting Before Crash

ಪುಣೆ, ಜನವರಿ 28: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಮತ್ತು ಇತರ ನಾಲ್ವರು ಪ್ರಯಾಣಿಸುತ್ತಿದ್ದ ವಿಮಾನ ಇಂದು ಬೆಳಿಗ್ಗೆ ಬಾರಾಮತಿ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗುವ ಮೊದಲು ಎಡಕ್ಕೆ ವಾಲುತ್ತಾ ಪಲ್ಟಿಯಾಗುವುದನ್ನು ತೋರಿಸುವ ಹೊಸ ಸಿಸಿಟಿವಿ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಿಮಾನವು ವೇಗವಾಗಿ ಕೆಳಗೆ ಇಳಿಯುತ್ತಾ ಎಡಕ್ಕೆ ಉರುಳುತ್ತಿರುವುದನ್ನು ನೋಡಬಹುದು. ಈ ರೀತಿ ಪಲ್ಟಿಯಾಗುವುದು ತಾಂತ್ರಿಕ ದೋಷದ ಪರಿಣಾಮವಾಗಿರಬಹುದು ಅಥವಾ ಪೈಲಟ್‌ಗಳು ವಿಮಾನದಲ್ಲಿನ ಕೆಲವು ರೀತಿಯ ಒತ್ತಡಗಳನ್ನು ಸರಿದೂಗಿಸಲು ಪ್ರಯತ್ನಿಸುತ್ತಿರಬಹುದು ಎಂದು ತಜ್ಞರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪತ್ನಿ ಹೆರಿಗೆಗೆಂದು ತವರು ಮನೆಗೆ ಹೋಗಿದ್ದಾಗ ಹಳೇ ಪ್ರೇಯಿಸಿ ಜತೆ ಪತಿ ಆತ್ಮಹತ್ಯೆ – Kannada News | A Married Man Commits Suicide By Jumping into malaprabha river With Old Lover at Belagavi

ಬೆಳಗಾವಿ, (ಜನವರಿ 28): ಪತ್ನಿ ಹೆರಿಗೆಗೆಂದು ತವರು ಮನೆಗೆ ಹೋಗಿದ್ದಾಗ ಪತಿ ತನ್ನ ಹಳೇ ಪ್ರೇಯಸಿ ಜೊತೆ ನದಿಗೆ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೆಳಗಾವಿ (Belagavi) ಜಿಲ್ಲೆ ರಾಮದುರ್ಗ ತಾಲೂಕಿನ ಮಲ್ಲಾಪುರ ಬಳಿ ನಡೆದಿದೆ. ಮಲ್ಲಾಪುರದ ಜಗದೀಶ್ ಕವಳೇಕರ(27), ಗಂಗಮ್ಮ(26) ಆತ್ಮಹತ್ಯೆ ಆತ್ಮಹತ್ಯೆಗೆ ಶರಣಾದ ಜೋಡಿ. ಮೊದಲಿನಿಂದಲೂ ಜಗದೀಶ್ ಹಾಗೂ ಗಂಗಮ್ಮ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ, ಜಗದೀಶ್​​ ಬೇರೆ ಯುವತಿ ಜೊತೆ ಮದುವೆಯಾಗಿದ್ದು, ಸದ್ಯ ಪತ್ನಿ ಗರ್ಭಿಣಿ. ಹೀಗಾಗಿ ಆಕೆ ತವರು ಮನೆಗೆ ಹೋಗಿದ್ದಾಗ ಇತ್ತ ಪ್ರೇಯಿಸಿಯೊಂದಿಗೆ ನದಿಗೆ ಹಾರಿ ಸಾವಿನ ಮನೆ ಸೇರಿದ್ದಾನೆ. ಸ್ವತಃ ಹೆಂಡ್ತಿಯೇ ಜಗದೀಶ್ ಹಾಗೂ ಗಂಗಮ್ಮಳ ಮದ್ವೆ ಮಾಡುವುದಾಗಿ ಹೇಳಿದ್ದಳು ಎಂದು ತಿಳಿದುಬಂದಿದೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದ ಹೊರ ವಲಯದಲ್ಲಿ ಇರುವ ಮಲಪ್ರಭಾ ನದಿಯಲ್ಲಿ ಇಂದು (ಜನವರಿ 28) ಮಲಪ್ರಭಾ ನದಿಯಲ್ಲಿ ತಬ್ಬಿಕೊಂಡ ರೀತಿಯಲ್ಲಿ ಎರಡು ಶವಗಳು ತೆಲಿ ಬಂದಿದ್ದು, ಇದನ್ನು ನೋಡಿ ಸ್ಥಳೀಯರರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಶವಗಳನ್ನು ನದಿ ದಡಕ್ಕೆ ತಂದು ನೋಡಿದಾಗ ಜಗದೀಶ್ ಹಾಗೂ ಗಂಗಮ್ಮ ಎನ್ನುವುದು ಗೊತ್ತಾಗಿದೆ. ಮದುವೆಯಾಗಿದ್ದವ ಪತ್ನಿ ಬಿಟ್ಟು ಪ್ರೇಯಸಿ ಜೊತೆಗೆ ಸಾವಿನ ಮನೆ ಸೇರಿದ್ದಾನೆ. ಇನ್ನೊಂದೆಡೆ ಗಂಗಮ್ಮಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ಮದುವೆಯಾಗಿ ಮೂರು ವರ್ಷವಾದರೂ ಮಕ್ಕಳಾಗಿಲ್ಲವೆಂದು ಪತ್ನಿ ಕಿರಿಕ್; ಕತ್ತು ಹಿಸುಕಿ ಕೊಲೆ ಮಾಡಿದ ಪತಿ

ಸಾವಿನಲ್ಲೂ ಒಂದಾಗಿರಬೇಕೆಂದು ಬಟ್ಟೆ ಕಟ್ಟಿಕೊಂಡಿದ್ದ ಜೋಡಿ

ಜಗದೀಶ್ ಕಳವೇಕರ್ (27)  ಇದೇ ಗ್ರಾಮದ ಗಂಗಮ್ಮಳನ್ನು ಬೈಕ್ ಮೇಲೆ ಕರೆದುಕೊಂಡು ಮಲ್ಲಾಪುರ- ಗೋಣಗನುರು ಬ್ರಿಡ್ಜ್ ಬಳಿ ಹೋಗಿದ್ದಾರೆ. ಬಳಿಕ ಇಷ್ಟು ದಿನ ದೂರವಾಗಿದ್ವಿ. ಈಗ ಸಾವಿನಲ್ಲೂ ಒಂದಾಗಿರೋಣ ಎಂದು ಇಬ್ಬರು ಸೊಂಟಕ್ಕೆ ಬಟ್ಟೆಕಟ್ಟಿಕೊಂಡು ಬಳಿಕ ಮಲಪ್ರಭಾ ನದಿಗೆ ಹಾರಿದ್ದಾರೆ. ಇಂದು (ಜನವರಿ 28) ಪರಸ್ಪರ ತಬ್ಬಿಕೊಂಡ ಸ್ಥಿತಿಯಲ್ಲಿಯೇ ಮೃತದೇಹಗಳು ಪತ್ತೆಯಾಗಿವೆ. ಮೃತ ಜಗದೀಶ್ ಗೆ ಈಗಾಗಲೇ ಮದುವೆಯಾಗಿದ್ದು, ಎರಡೂವರೆ ತಿಂಗಳ ಹಿಂದೆ ಪತ್ನಿ ಹೆರಿಗೆಗೆ ಎಂದು ತವರು ಮನೆಗೆ ಹೋಗಿದ್ದಳು. ಈ ವೇಳೆ ಜಗದೀಶ್ ಈ ರೀತಿ ಮಾಡಿಕೊಂಡಿದ್ದಾನೆ.

ಇಬ್ಬರಿಗೂ ಮದ್ವೆ ಮಾಡುವುದಾಗಿ ಹೇಳಿದ್ದ ಪತ್ನಿ

ಪತ್ನಿ ಹೆರಿಗೆಗೆಂದು ತವರಿಗೆ ಹೋಗುತ್ತಿದ್ದಂತೆಯೇ ಜಗದಿಶ್, ತನ್ನ ಪ್ರೇಯಸಿ ಗಂಗಮ್ಮಳನ್ನು ಕರೆದುಕೊಂಡು ಬಂದು 2 ತಿಂಗಳಿಂದ ಮನೆಯಲ್ಲಿಟ್ಟುಕೊಂಡಿದ್ದ. ಈ ವಿಚಾರವಾಗಿ ಕುಟುಂಬದಲ್ಲಿ ಸಾಕಷ್ಟು ಕಲಹ ಉಂಟಾಗಿತ್ತು. ಪತ್ನಿ ಕೂಡ ಈ ವಿಚಾರ ಗೊತ್ತಾಗಿ ಗಂಡನೊಟ್ಟಿಗೆ ಜಗಳ ಕೂಡ ಮಾಡಿದ್ದಳು. ಆದ್ರೆ, ಜಗದೀಶ್ ಮಾತ್ರ ಗಂಗಮ್ಮಳನ್ನ ಬಿಟ್ಟುಲ್ಲ. ಕೊನೆಗೆ ಗಂಡ ಆಕೆಯನ್ನ ಬಿಡುವುದಿಲ್ಲ ಎಂದು ಗೊತ್ತಾಗಿ ಪತ್ನಿ ಕೂಡ ಹೆರಿಗೆಯಾದ ಬಳಿಕ ಇಬ್ಬರಿಗೂ ಮದುವೆ ಮಾಡುತ್ತೇನೆ ಎನ್ನುವ ಮಟ್ಟಿಗೂ ಹೇಳಿದ್ದಳು. ಆದ್ರೆ, ಊರಲ್ಲಿದ್ದ ಕುಟುಂಬಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಮನೆನೊಂದು ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ.

ಘಟನೆಯಿಂದ ಬೆಚ್ಚಿ ಬಿದ್ದಿರುವ ಗ್ರಾಮಸ್ಥರು ಇಬ್ಬರು ಪ್ರೀತಿ ಮಾಡ್ತಿದ್ರೇ ಮದುವೆಯಾಕಾಬೇಕಿತ್ತು. ಎರಡು ತಿಂಗಳಿಂದ ಇಬ್ಬರು ಒಟ್ಟಿಗೆ ಇದ್ರೂ ಈಗ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದು ಏಕೆ ಎನ್ನುವುದು ಸ್ಥಳೀಯರ ಮಾತು. ಸದ್ಯ ಈ ಬಗ್ಗೆ ರಾಮದುರ್ಗ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತ್ಮಹತ್ಯೆಗೆ ಕಾರಣವೇನು ಎನ್ನುವುದನ್ನು ತನಿಖೆ ನಡೆಸಿದ್ದಾರೆ.

ಒಟ್ಟಿನಲ್ಲಿ ಪ್ರೀತಿ ಪ್ರೇಮ ಅಂತ ಹುಡ್ಗಿ ದುರಂತ ಅಂತ್ಯ ಕಂಡಿದ್ದರೆ, ಅತ್ತ ತಂದೆಯಾಗಬೇಕಿದ್ದವ  ಮಸಣ ಸೇರಿದ್ದು ದುರ್ದೈವದ ಸಂಗತಿ

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಭಾರತದ ವಿರುದ್ಧ ವೇಗದ ಅರ್ಧಶತಕ ಬಾರಿಸಿದ ಟಿಮ್ ಸೀಫರ್ಟ್ – Kannada News | Visakhapatnam T20: Seifert’s Record Fifty and Conway Partnership Power NZ to 215 vs India

2022 ರ ಟಿ20 ವಿಶ್ವಕಪ್ ಸೆಮಿಫೈನಲ್ ನಂತರ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಭಾರತದ ವಿರುದ್ಧ 100 ರನ್‌ಗಳ ಆರಂಭಿಕ ಪಾಲುದಾರಿಕೆ ಇದಾಗಿದೆ. ಇದಲ್ಲದೆ, ಟಿ20ಕ್ರಿಕೆಟ್​ನಲ್ಲಿ ಭಾರತದ ವಿರುದ್ಧ ಕಿವೀಸ್​ನ ಆರಂಭಿಕ ಜೋಡಿ 100 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡು ಒಂಬತ್ತು ವರ್ಷಗಳಾಗಿತ್ತು. ಇದಕ್ಕೂ ಮೊದಲು, ಮಾರ್ಟಿನ್ ಗುಪ್ಟಿಲ್ ಮತ್ತು ಕಾಲಿನ್ ಮನ್ರೋ 2017 ರ ರಾಜ್‌ಕೋಟ್ ಪಂದ್ಯದಲ್ಲಿ 105 ರನ್‌ಗಳ ಜೊತೆಯಾಟ ನಡೆಸಿದ್ದರು.

Source link

ಮೈಸೂರಿನಲ್ಲಿ ಡ್ರಗ್ಸ್ ಲ್ಯಾಬ್​ ಶಂಕೆ? ಎನ್​ಸಿಬಿ ದಿಢೀರ್​ ದಾಳಿ – Kannada News | Mysuru: NCB Conducts Sudden Raid on Suspected Drug Lab

ಮೈಸೂರು, (ಜನವರಿ 28): ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಡ್ರಗ್ಸ್ ಲ್ಯಾಬ್ (Drugs Lab)
ಇರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರಾಷ್ಟ್ರಿಯ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (NCB Raid) ಹಾಗೂ ಮೈಸೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಫಿನಾಯಿಲ್ ತಯಾರಿಕಾ ಘಟಕದ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಯಾವುದೇ ಮಾದಕ ದ್ರವ್ಯ ಸಿಕ್ಕಿಲ್ಲ. ಸದ್ಯ ಎನ್​ಸಿಬಿ ಅಧಿಕಾರಿಗಳು ಲ್ಯಾಬ್ ವಶಕ್ಕೆ ಪಡೆದುಕೊಂಡಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಎನ್​ಸಿಬಿ ಅಧಿಕಾರಿಗಳ ತಂಡ ಮಾದಕ ದ್ರವ್ಯ ಜಾಲ ಪತ್ತೆಹಚ್ಚಿದ್ದರು. ಆ ವೇಳೆ ಬಂಧಿತರ ಮಾಹಿತಿ ಮೇರೆಗೆ ಇಂದು ಮೈಸೂರಿನಲ್ಲಿ ದಾಳಿ ಮಾಡಲಾಗಿದೆ. ಫಿನಾಯಿಲ್ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗಿದ್ದು, ಡಿಟರ್ಜೆಂಟ್, ಸೋಡಾ, ಉಪ್ಪು ಸೇರಿದಂತೆ ಕಚ್ಚಾವಸ್ತುಗಳು ಪತ್ತೆ ಆಗಿವೆ. ಆದರೆ, ಯಾವುದೇ ಮಾದಕ ದ್ರವ್ಯ ಸಿಕ್ಕಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ವಕೀಲ ಭರತ್​​​ ಹೇಳಿದ್ದಿಷ್ಟು 

ಎನ್​ಸಿಬಿ ಅಧಿಕಾರಿಗಳ ತಂಡ ದಾಳಿ ಮಾಡಿದ ಕಟ್ಟಡದ ಮಾಲೀಕ ಬೋರೇಗೌಡರ ಪರ ವಕೀಲ ಭರತ್ ಹೇಳಿಕೆ ನೀಡಿದ್ದು, ಇದು ಬೋರೇಗೌಡರಿಗೆ ಸೇರಿದ್ದ ಬಿಲ್ಡಿಂಗ್. ಕಳೆದ ಒಂದು ವರ್ಷದ ಹಿಂದೆ ಈ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದಾರೆ. ಬ್ರೋಕರ್ ಒಬ್ಬರಿಂದ ಗಣಪತ್ ಲಾಲ್​ ಎನ್ನುವವರಿಗೆ ಬಾಡಿಗೆಗೆ ಕೊಟ್ಟಿದ್ದಾರೆ. ಇನ್ನು ವರ್ಕ್ ಶುರು ಮಾಡಿರಲಿಲ್ಲ. ಒಂದಷ್ಟು ಮಿಷನ್ ಯೂನಿಟ್​ಗಳನ್ನು ಹಾಕಿರುವುದಾಗಿ ಮಾಹಿತಿ ಇದೆ. ಗುಜರಾತ್​​ನಲ್ಲಿ ಓರ್ವನನ್ನು ವಶಕ್ಕೆ ಪಡೆಯಲಾಗಿದೆ. ಆತ ಕೊಟ್ಟ ಮಾಹಿತಿ ಮೇರೆಗೆ ದೆಹಲಿ ಪೊಲೀಸರು ದಾಳಿ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಎಂಡಿಎಂಎ ತಯಾರಿಕಾ ಘಟಕ ಪತ್ತೆ

ಇನ್ನು ಇತ್ತೀಚೆಗೆ ಅಂದರೆ 2025ರ ಜುಲೈನಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಡ್ರಗ್ಸ್ ತಯಾರಿಕಾ ಘಟಕ ಪತ್ತೆಯಾಗಿತ್ತು. ಮಹಾರಾಷ್ಟ್ರ ಪೊಲೀಸರು ಕಾರ್ಯಾಚರಣೆ ನಡೆಸಿ ಮೈಸೂರಿನ ಹೊರವಲಯದ ರಿಂಗ್ ರಸ್ತೆ ಬಳಿ ಎಸ್.ಎಸ್ ನಗರದಲ್ಲಿ ಎಂಡಿಎಂಎ ತಯಾರಿಕಾ ಘಟಕ ಪತ್ತೆ ಮಾಡಿದ್ದರು. ಈ ದಾಳಿ ವೇಳೆ 100 ಕೋಟಿಗೂ ಅಧಿಕ ಮೌಲ್ಯದ ಸುಮಾರು‌ 50 ಕೆ.ಜಿ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು.

ಇದನ್ನೂ ಓದಿ: ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ ಪತ್ತೆ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್

ಮಹಾರಾಷ್ಟ್ರದಲ್ಲಿ ಸೆರೆಯಾಗಿದ್ದ ಡ್ರಗ್ ಪೆಡ್ಲರ್‌ ಮೈಸೂರಿನಲ್ಲಿನ ತಯಾರಿಕಾ ಘಟಕದ ಬಗ್ಗೆ ಬಾಯಿ ಬಿಟ್ಟಿದ್ದ. ಖಚಿತ ಮಾಹಿತಿ ಮೇರೆಗೆ ಮಹಾರಾಷ್ಟ್ರ ಪೊಲೀಸರು ಕಾರ್ಯಾಚರಣೆ ನಡೆಸಿ ದಾಳಿ ಮಾಡಿದ್ದರು. ಈ ವೇಳೆ ಮೈಸೂರು ಪೊಲೀಸರು ಮಹಾರಾಷ್ಟ್ರ ಪೊಲೀಸರಿಗೆ ಸಾಥ್ ನೀಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 6:56 pm, Wed, 28 January 26

Source link

ಅಲ್ಲು ಅರ್ಜುನ್, ದೀಪಿಕಾ ಸಿನಿಮಾ ಬಗ್ಗೆ ಅಟ್ಲಿ ಕೊಟ್ಟರು ಅಪ್​​ಡೇಟ್ – Kannada News | Atlee talks about Allu Arjun and Deepika Padukone movie

‘ಪುಷ್ಪ’ ಮತ್ತು ‘ಪುಷ್ಪ 2’ (Pushpa 2) ಸಿನಿಮಾಗಳ ಮೂಲಕ ಭಾರಿ ದೊಡ್ಡ ಹಿಟ್ ಸಿನಿಮಾ ನೀಡಿದ ಅಲ್ಲು ಅರ್ಜುನ್ (Allu Arjun), ಮುಂದಿನ ಸಿನಿಮಾ ಆಗಿ ಅಟ್ಲಿಯ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು ಸ್ವತಃ ಅಲ್ಲು ಅಭಿಮಾನಿಗಳಿಗೇ ಗೊಂದಲ ಮೂಡಿಸಿತ್ತು. ಅಟ್ಲಿ ಕೆಲವಾರು ಹಿಟ್ ಸಿನಿಮಾ ನೀಡಿದ್ದಾರಾದರೂ ಅಟ್ಲಿ ಸ್ವಂತ ಸಿನಿಮಾ ಮಾಡುವುದಿಲ್ಲ ಬದಲಿಗೆ ನಕಲು ಮಾಡಿ ಸಿನಿಮಾ ಮಾಡುವ ನಿರ್ದೇಶಕ ಎಂಬ ಕೆಟ್ಟ ಹೆಸರಿದೆ. ಅದೂ ಅಲ್ಲದೆ, ಅಟ್ಲಿಯ ಈ ಬಾರಿ ಅಲ್ಲು ಅರ್ಜುನ್​​ಗಾಗಿ ಸೈ-ಫೈ ಸಿನಿಮಾ ಮಾಡುತ್ತಿದ್ದಾರೆ. ಇದೀಗ ಅಟ್ಲಿ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

ಪಿಕಲ್​​ಬಾಲ್​​​ ಟೂರ್ನಿಯಲ್ಲಿ ಬೆಂಗಳೂರು ತಂಡವನ್ನು ಖರೀದಿ ಮಾಡಿರುವ ಅಟ್ಲಿ, ತಮ್ಮ ತಂಡದ ಇವೆಂಟ್​​ಗೆಂದು ಬಂದಾಗ ಸಿನಿಮಾ ಬಗ್ಗೆಯೂ ಮಾತನಾಡಿದ್ದಾರೆ. ‘ಅಲ್ಲು ಅರ್ಜುನ್ ಅವರ ಹೊಸ ಸಿನಿಮಾಕ್ಕಾಗಿ ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದೇನೆ. ಈ ರೀತಿಯ ಸಿನಿಮಾ ನನಗೂ ಹೊಸತು, ಅಲ್ಲು ಅರ್ಜುನ್ ಅವರಿಗೂ ಹೊಸತು. ಹಾಗಾಗಿ ಇಬ್ಬರೂ ಸಹ ಪ್ರತಿ ದಿನ ಸೆಟ್​​ನಲ್ಲಿ ಹೊಸ-ಹೊಸ ವಿಷಯಗಳನ್ನು ಕಲಿಯುತ್ತಾ ಇದ್ದೇವೆ’ ಎಂದಿದ್ದಾರೆ ಅಟ್ಲಿ.

‘ಎಲ್ಲರೂ ಸಹ ಸಿನಿಮಾದ ಅಪ್​​ಡೇಟ್ ಕೊಡಿ ಎಂದು ಕೇಳುತ್ತಿದ್ದಾರೆ. ಅಸಲಿಗೆ ಸಿನಿಮಾದ ಅಪ್​​ಡೇಟ್ ನೀಡಲು ನಾನು ಬಹಳ ಉತ್ಸುಕನಾಗಿದ್ದೇನೆ. ಪ್ರೇಕ್ಷಕರಿಗಾಗಿ ವಿಶೇಷ ಸರ್ಪ್ರೈಸ್ ಒಂದನ್ನು ರೆಡಿ ಮಾಡುತ್ತಿದ್ದೇವೆ. ಅದನ್ನು ಜನರ ಮುಂದೆ ತರಲು ಬಹಳ ಕುತೂಹಲದಿಂದ ಎದುರು ನೋಡುತ್ತಿದ್ದೇನೆ. ಶೀಘ್ರವೇ ಅದನ್ನು ಜನರ ಮುಂದೆ ತರುತ್ತೇವೆ’ ಎಂದಿದ್ದಾರೆ ಅಟ್ಲಿ.

ಇದನ್ನೂ ಓದಿ: ‘ತುಂಬಾ ಚೆನ್ನಾಗಿ ಮಾಡಿದಿರಾ’ ಟ್ವೀಟ್​​ನಲ್ಲಿ ಕನ್ನಡ ಬಳಸಿದ ಅಲ್ಲು ಅರ್ಜುನ್, ಕಾರಣ?

ಇನ್ನು ನಟಿ ದೀಪಿಕಾ ಪಡುಕೋಣೆ ಬಗ್ಗೆ ಮಾತನಾಡಿರುವ ಅಟ್ಲಿ, ‘ದೀಪಿಕಾ ಪಡುಕೋಣೆ ನನ್ನ ಲಕ್ಕಿ ಚಾರ್ಮ್. ಇದು ಎರಡನೇ ಬಾರಿ ಅವರೊಟ್ಟಿಗೆ ನಾನು ಕೆಲಸ ಮಾಡುತ್ತಿದ್ದೇನೆ. ಅವರೊಟ್ಟಿಗೆ ಕೆಲಸ ಮಾಡುವುದು ಒಂದು ವಿಶೇಷ ಅನುಭವ. ತಾಯ್ತನದ ಬಳಿಕ ಅವರು ನಟಿಸುತ್ತಿರುವ ಮೊದಲ ಸಿನಿಮಾ ನಮ್ಮದು’ ಎಂದಿದ್ದಾರೆ ಅಟ್ಲಿ.

ಅಟ್ಲಿ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್ ಸಿನಿಮಾ ಹಾಲಿವುಡ್​ನ ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ ಮಾದರಿಯ ಸಿನಿಮಾ ಆಗಿರಲಿದೆ. ಕೆಲವು ಬಲು ಜನಪ್ರಿಯ, ಯಶಸ್ವಿ ಹಾಲಿವುಡ್ ಸ್ಟುಡಿಯೋಗಳೊಟ್ಟಿಗೆ ಸೇರಿಕೊಂಡು ಅಟ್ಲಿ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಸಿನಿಮಾನಲ್ಲಿ ಚಿತ್ರ, ವಿಚಿತ್ರ ಜೀವಿಗಳು, ಅನಿಮೇಟೆಡ್ ವಿಲನ್, ಅತ್ಯಾಧುನಿಕ ವಾಹನಗಳು, ಆಯುಧಗಳು ಇರಲಿವೆ. ಸಿನಿಮಾದ ಕತೆ ಸಹ ಭೂಮಿಯ ಮೇಲಲ್ಲದೆ ಬೇರೆ ಯಾವುದೋ ಲೋಕದಲ್ಲಿ ನಡೆಯುತ್ತದೆಯಂತೆ. ಸಿನಿಮಾ ಮುಂದಿನ ವರ್ಷ ಬಿಡುಗಡೆ ಆಗಲಿದೆ. ಈ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಸಹ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version