ಪ್ರೀತಿಸಿ ಮದುವೆಯಾದ ಎಂಜಿನಿಯರ್ ದಾರುಣ ಅಂತ್ಯ: ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ? – Kannada News | Bengaluru Software Engineer’s Tragic End: Dowry Harassment Alleged in Death Case

ಬೆಂಗಳೂರು, ಏಪ್ರಿಲ್​​ 23: ಪತಿ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಸಾಫ್ಟ್‌ವೇರ್ ಎಂಜಿನಿಯರ್ ಮಹಿಳೆಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಆರೋಪ ಬೆಂಗಳೂರಲ್ಲಿ (Bengaluru) ಕೇಳಿಬಂದಿದೆ. ಭುವನೇಶ್ವರಿ (29) ಮೃತ ವಿವಾಹಿತೆಯಾಗಿದ್ದು, ತಾಯಿ ಮತ್ತು 18 ತಿಂಗಳ ಮಗುವಿನೊಂದಿಗೆ ಅವರು ವಾಸವಿದ್ದರು ಎನ್ನಲಾಗಿದೆ. ನಿರಂತರವಾಗಿ ಕರೆ ಮಾಡಿದರೂ ಭುವನೇಶ್ವರಿ ಸಂಪರ್ಕಕ್ಕೆ ಸಿಗದ ಕಾರಣ ಸ್ನೇಹಿತೆ ಅನುಮಾನಗೊಂಡು ವಿಷಯವನ್ನು ಅವರ ತಾಯಿಗೆ ತಿಳಿಸಿದ್ದಾರೆ. ಬಳಿಕ ತಾಯಿ ಹಾಗೂ ನೆರೆಹೊರೆಯವರು ಪರಿಶೀಲಿಸಿದಾಗ ಭುವನೇಶ್ವರಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಸೋಮವಾರವೇ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಬಗ್ಗೆ ಭುವನೇಶ್ವರಿ ತಂದೆ ತಮಿಳುನಾಡಿನ ತಿರುವಾರೂರಿನ ನಿವಾಸಿ ಟಿ. ಅಂಬಳಗನ್ ಅವರು ಪೊಲೀಸರಿಗೆ ದೂರು ನೀಡಿದ್ದು, ಮೃತ ಮಹಿಳೆಯ ಪತಿ ಹರೀಶ್ ಕುಮಾರ್, ಅತ್ತೆ ಮತ್ತು ಮಾವನ ಮಗನ ವಿರುದ್ಧ ಆರೋಪ ಮಾಡಿದ್ದಾರೆ. ಅಲ್ಲದೆ ಕಳೆದ ಏಳು ತಿಂಗಳಿನಿಂದ ಮಗಳು ಭುವನೇಶ್ವರಿ ಜೊತೆಗೆ ಆಕೆಯ ಪತಿ ಹರಿಶ್​​ ಕುಮಾರ್​​ ವಾಸಿಸುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಭುವನೇಶ್ವರಿ ಮತ್ತು ಹರೀಶ್ ವಿವಾಹಕ್ಕೂ ಮೊದಲು ಪ್ರೀತಿಸುತ್ತಿದ್ದು, ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ 2022ರ ನವೆಂಬರ್ 20ರಂದು ಇವರಿಬ್ಬರ ವಿವಾಹ ನಡೆದಿತ್ತು. ಸುಮಾರು 25 ಲಕ್ಷ ಹಣವನ್ನು ಮದುವೆಗೆ ಖರ್ಚು ಮಾಡಲಾಗಿತ್ತು. ಆದರೆ ಮದುವೆ ಬಳಿಕ ಪತಿ ಮನೆಯಲ್ಲಿ ಭುವನೆಶ್ವರಿ ಮಾನಸಿಕ ಹಾಗೂ ದೈಹಿಕ ಕಿರುಕುಳಕ್ಕೆ ಒಳಗಾಗಿ ಮನೋವ್ಯಾಧಿಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಉದ್ಯಮಿ ಜತೆ ಡೇಟಿಂಗ್, ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್ ಆರೋಪ; ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ವಿರುದ್ಧ ದೂರು

2025ರ ಅಕ್ಟೋಬರ್​​ನಲ್ಲಿ ತವರು ಸೇರಿದ್ದ ಭುವನೇಶ್ವರಿಯನ್ನು ಆ ಬಳಿಕ ಪತಿ ಹರೀಶ್​​ ಸಂಪರ್ಕಿಸಿರಲಿಲ್ಲ. ಬದಲಾಗಿ ವಿಚ್ಛೇದನಕ್ಕೆ ಒತ್ತಡ ಹಾಕಿದ್ದಲ್ಲದೆ, ಜೀವ ಬೆದರಿಕೆಯನ್ನೂ ಹಾಕಿದ್ದ. ನಂತರ ಭುವನೇಶ್ವರಿ ಜೆ.ಪಿ. ನಗರದ ಫ್ಲಾಟ್‌ನಲ್ಲಿ ವಾಸಿಸಲು ಆರಂಭಿಸಿದ್ದರು. ಮಗುವಿಗೆ ಅನಾರೋಗ್ಯ ಉಂಟಾದಾಗಲೂ ನೋಡಲು ಬಂದಿರಲಿಲ್ಲ. ಅಲ್ಲದೆ, 2026ರ ಏಪ್ರಿಲ್ 8ರಂದು ಹರೀಶ್ ತಂದೆ ನಿಧನರಾದಾಗ ಭುವನೇಶ್ವರಿ ಮತ್ತು ಅವರ ಕುಟುಂಬ ಅಂತ್ಯಕ್ರಿಯೆಗೆ ಹಾಜರಾಗಲು ಹೋದಾಗಲೂ ಆರೋಪಿಗಳು ಅವರನ್ನು ತಡೆದಿದ್ದರು. ಮದುವೆಯ ಸಮಯದಲ್ಲಿ ಚಿನ್ನಾಭರಣ ಮತ್ತು ಹಣವನ್ನು ವರದಕ್ಷಿಣೆಯಾಗಿ ನೀಡಿದರೂ ಹರೀಶ್, ಅವರ ತಾಯಿ ಹಾಗೂ ಸಹೋದರರು ತಿಂಗಳಿಗೆ 20,000ರಿಂದ 30,000 ಹಣವನ್ನು ಸಂಬಳದಿಂದ ನೀಡಲು ಮತ್ತು ಪೋಷಕರಿಂದ ದುಡ್ಡು ತರುವಂತೆ ಭುವನೇಶ್ವರಿ ಅವರನ್ನು ಒತ್ತಾಯಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ಸಾರಿಗೆ ನೌಕರರ ದರ್ಪ: ವಿಡಿಯೋ ನೋಡಿ – Kannada News | Gadag Bus Staff Allegedly Assault Student: Protest Erupts at Puttaraj Gavai Bus Stand

ಗದಗ, ಏಪ್ರಿಲ್​​ 23: ಬಸ್ ನಿಲ್ಲಿಸಿ ಅಂದಿದಕ್ಕೆ ವಿದ್ಯಾರ್ಥಿಗಳ‌ ಮೇಲೆ ಸಾರಿಗೆ ನೌಕರರಿಂದ ದರ್ಪ‌‌ ಮೆರೆದ ಘಟನೆಯೊಂದು ಗದಗ ನಗರದ ಪುಟ್ಟರಾಜ್ ಗವಾಯಿಗಳ ಬಸ್ ನಿಲ್ದಾಣದಲ್ಲಿ ನಡೆದಿದೆ. ಸಾರಿಗೆ ನೌಕರರು ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ವಿದ್ಯಾರ್ಥಿಗಳು ಬಸ್ ಹತ್ತಲು ಕೈ ತೋರಿಸಿದರೂ ಚಾಲಕ ಬಸ್ ನಿಲ್ಲಿಸಿಲ್ಲ. ಇದನ್ನು ಪ್ರಶ್ನಿಸಲು ಹೋದ ವಿದ್ಯಾರ್ಥಿಗಳು ಮತ್ತು ಸಾರಿಗೆ ನೌಕರರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ನೌಕರರು ಹಲ್ಲೆ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲ್ಲೆ ಮಾಡಿದ ನೌಕರನ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ. ಸ್ಥಳಕ್ಕೆ ದೌಡಾಯಿಸಿದ ಶಹರ ಪೊಲೀಸ್ ಠಾಣೆ ಪೊಲೀಸರು ವಿದ್ಯಾರ್ಥಿಗಳ ಮನವೊಲಿಸಲು ಹರಸಹಾಸ ಪಟ್ಟರು. ಬಸ್ ಸಂಚಾರ ಸ್ಥಗಿತ ಹಿನ್ನೆಲೆ ಪ್ರಯಾಣಿಕರು ಪರದಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಏಪ್ರಿಲ್‌ನಲ್ಲಿ ಭಾರತದ ಖಾಸಗಿ ವಲಯ ಭರ್ಜರಿ ಏರಿಕೆ: ಉತ್ಪಾದನಾ, ಸೇವಾ ವಲಯಗಳ PMI ವರದಿಯಲ್ಲಿ ಗಮನಾರ್ಹ ಸಂಗತಿಗಳು – Kannada News | India’s Private Sector Booms in April: PMI Surges on Manufacturing & Services Growth

ಫ್ಯಾಕ್ಟರಿ ಸಾಂದರ್ಭಿಕ ಚಿತ್ರImage Credit source: AI/Mediaforge/TV9

ನವದೆಹಲಿ, ಏಪ್ರಿಲ್ 23: ಭಾರತದ ಖಾಸಗಿ ವಲಯವು ಏಪ್ರಿಲ್ ತಿಂಗಳಿನಲ್ಲಿ ಭರ್ಜರಿ ಬೆಳವಣಿಗೆಯನ್ನು ಸಾಧಿಸಿದೆ. ವಿಶೇಷವಾಗಿ ಉತ್ಪಾದನಾ ವಲಯದಲ್ಲಿ (Manufacturing sector) ಕಂಡುಬಂದ ಚೇತರಿಕೆಯು ಈ ಪ್ರಗತಿಗೆ ಮುಖ್ಯ ಕಾರಣ ಎಂದು ‘ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್’ (PMI) ವರದಿ ತಿಳಿಸಿದೆ. ಸರ್ವಿಸ್ ಸೆಕ್ಟರ್ ಕೂಡ ಏಪ್ರಿಲ್​ನಲ್ಲಿ ಚುರುಕುಗೊಂಡಿದೆ. ಹಿಂದಿನ ತಿಂಗಳಾದ ಮಾರ್ಚ್​ನಲ್ಲಿ ಇವೆರಡೂ ಕೂಡ ಮಂದ ಬೆಳವಣಿಗೆ ಕಂಡಿದ್ದವು.

ಎಸ್ ಅಂಡ್ ಪಿ ಗ್ಲೋಬಲ್​ನಿಂದ ಕಲೆಹಾಲಾದ ಎಚ್​ಎಸ್​ಬಿಸಿ ಫ್ಯಾಶ್ ಇಂಡಿಯಾ ಕಾಂಪೊಸಿಟ್ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ ಮಾರ್ಚ್​ನಲ್ಲಿ 57 ಇದ್ದದ್ದು ಏಪ್ರಿಲ್​ನಲ್ಲಿ 58.3ಕ್ಕೆ ಏರಿದೆ. ಐದು ವರ್ಷಗಳಂದ ಪಿಎಂಐ ಇಂಡೆಕ್ಸ್ ಸಕಾರಾತ್ಮಕವಾದ 50ರ ಮಟ್ಟಕ್ಕಿಂತ ಹೆಚ್ಚು ಇರುವುದು ಗಮನಾರ್ಹ.

ಏಪ್ರಿಲ್ ತಿಂಗಳ ಪ್ರಗತಿಯ ಮುಖ್ಯಾಂಶಗಳು

ಭಾರತದ ಉತ್ಪಾದನಾ ಮತ್ತು ಸೇವಾ ವಲಯಗಳ ಸಂಯೋಜಿತ (Composite) PMI ಸೂಚ್ಯಂಕವು ಏಪ್ರಿಲ್‌ನಲ್ಲಿ ಸುಮಾರು 14 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿದೆ.

ಫ್ಯಾಕ್ಟರಿಗಳಲ್ಲಿ ಉತ್ಪಾದನೆಯು ವೇಗವಾಗಿ ಹೆಚ್ಚಾಗುತ್ತಿದ್ದು, ಹೊಸ ಆರ್ಡರ್‌ಗಳು (New Orders) ಜಾಗತಿಕ ಮತ್ತು ದೇಶೀಯ ಮಾರುಕಟ್ಟೆಗಳಿಂದ ದೊಡ್ಡ ಪ್ರಮಾಣದಲ್ಲಿ ಬರುತ್ತಿವೆ.

ಉತ್ಪಾದನಾ ಬೇಡಿಕೆ ಹೆಚ್ಚಾದಂತೆ, ಖಾಸಗಿ ವಲಯದ ಕಂಪನಿಗಳು ಹೆಚ್ಚಿನ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿವೆ. ಇದು ಕಳೆದ ಕೆಲವು ತಿಂಗಳುಗಳಿಗೆ ಹೋಲಿಸಿದರೆ ಉತ್ತಮ ಪ್ರಗತಿಯಾಗಿದೆ.

ಇದನ್ನೂ ಓದಿ: ವಾಟ್ಸಾಪ್​ನಲ್ಲಿ ಪ್ರೀಪೇಡ್ ಮೊಬೈಲ್ ರೀಚಾರ್ಜ್; ಬಂದಿದೆ ಹೊಸ ಫೀಚರ್

ಪ್ರಮುಖ ಕಾರಣಗಳು

  • ಬಲವಾದ ಬೇಡಿಕೆ: ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆ ಹೆಚ್ಚಾಗಿರುವುದು ಉತ್ಪಾದನೆಗೆ ವೇಗ ನೀಡಿದೆ.
  • ರಫ್ತು ಏರಿಕೆ: ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದ್ದು, ರಫ್ತು ವಹಿವಾಟು ವಿಸ್ತರಣೆಯಾಗಿದೆ.
  • ಕಡಿಮೆ ಹಣದುಬ್ಬರ: ಕಚ್ಚಾ ವಸ್ತುಗಳ ಬೆಲೆ ಏರಿಕೆ ಸ್ವಲ್ಪ ಮಟ್ಟಿಗೆ ನಿಯಂತ್ರಣದಲ್ಲಿರುವುದು ಕಂಪನಿಗಳಿಗೆ ಲಾಭದಾಯಕವಾಗಿದೆ.

ಈ ವರದಿಯ ಪ್ರಕಾರ, ಭಾರತದ ಆರ್ಥಿಕತೆಯು ಮುಂಬರುವ ತಿಂಗಳುಗಳಲ್ಲಿಯೂ ಇದೇ ವೇಗದಲ್ಲಿ ಮುಂದುವರಿಯುವ ಸಾಧ್ಯತೆಯಿದೆ. ವ್ಯಾಪಾರ ವಿಶ್ವಾಸಾರ್ಹತೆ (Business Confidence) ಹೆಚ್ಚಾಗಿದ್ದು, ಕಂಪನಿಗಳು ಹೊಸ ಹೂಡಿಕೆಗಳಿಗೆ ಉತ್ಸಾಹ ತೋರುತ್ತಿವೆ. ಇದು ದೇಶದ ಒಟ್ಟಾರೆ ಜಿಡಿಪಿ (GDP) ಬೆಳವಣಿಗೆಗೆ ಪೂರಕವಾಗಲಿದೆ.

ಇದನ್ನೂ ಓದಿ: ಒಂದು ತಿಂಗಳಲ್ಲಿ ಫೋನ್​ಪೇನಲ್ಲಿ 1,000 ಕೋಟಿ ಟ್ರಾನ್ಸಾಕ್ಷನ್ಸ್; ಈ ಮೈಲಿಗಲ್ಲು ಮುಟ್ಟಿದ ಮೊದಲ ಯುಪಿಐ ಆ್ಯಪ್

ಗಮನಿಸಿ: PMI ಸೂಚ್ಯಂಕವು 50ಕ್ಕಿಂತ ಹೆಚ್ಚಿದ್ದರೆ ಅದನ್ನು ‘ಆರ್ಥಿಕ ವಿಸ್ತರಣೆ’ ಎಂದು ಪರಿಗಣಿಸಲಾಗುತ್ತದೆ. ಏಪ್ರಿಲ್‌ನಲ್ಲಿ ಈ ಸಂಖ್ಯೆಯು 60ರ ಗಡಿ ದಾಟಿರುವುದು ಭಾರತದ ಆರ್ಥಿಕತೆಯ ಬಲವನ್ನು ತೋರಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

RCB vs GT: ಏ.24ರ ಸಂಜೆ ನಡೆಯುವ IPL ಪಂದ್ಯದಲ್ಲಿ ಗೆಲ್ಲೋದ್ಯಾರು? ಜ್ಯೋತಿಷ್ಯ ಹೇಳೋದೇನು? – Kannada News | Astrology Predicts Royal Challengers Bengaluru Will Beat Gujarat Titans in the April 24 IPL 2026 Match

ಅತ್ಯಂತ ಕುತೂಹಲದ ಸಂಗತಿಗಳನ್ನು ಜ್ಯೋತಿಷ್ಯದ ಮೂಲಕ ಪಡೆಯಬಹುದು. ಸದ್ಯ ವಿಶ್ವದಾದ್ಯಂತ ರೋಚಕತೆಯನ್ನು ಸೃಷ್ಟಿಸಿರುವುದು IPL. ಏಪ್ರಿಲ್ 24ರ ಸಂಜೆ ನಡೆಯಲಿರುವ ರಾಯಲ್​​ ಚಾಲೆಂಜರ್ಸ್​​ ಬೆಂಗಳೂರು ಮತ್ತು ಗುಜರಾತ್​​ ಟೈಟಾನ್ಸ್​​ ನಡುವಿನ ಪಂದ್ಯವು ಅತ್ಯಂತ ರೋಚಕ ಮತ್ತು ಸಂಘರ್ಷಮಯವಾಗಿರಲಿದೆ. ಅಂದು ಯಾವ ತಂಡ ಜಯಗಳಿಸಲಿದೆ ಎಂದು ಆರಂಭದ ಗ್ರಹಗತಿಗಳ ಆಧಾರದ ಮೇಲೆ ಹೇಳಬಹುದಾಗಿದೆ.

ತ್ರಿಗ್ರಹಗಳ ಯುತಿ

ತುಲಾ ರಾಶಿಯಿಂದ ​ಆರನೇ ಮನೆಯಲ್ಲಿ ಕುಜ, ಬುಧ ಮತ್ತು ಶನಿ ಒಂದೇ ಮನೆಯಲ್ಲಿದ್ದಾರೆ. ಆರನೇ ಮನೆಯು ಜ್ಯೋತಿಷ್ಯದಲ್ಲಿ ಶತ್ರು ಮತ್ತು ಸ್ಪರ್ಧೆಯ ಸ್ಥಾನ. ​ಇಲ್ಲಿ ಕುಜ ಇರುವುದು ಆಟಗಾರರಲ್ಲಿ ತೀವ್ರವಾದ ಗೆಲುವಿನ ಹಪಾಹಪಿಯನ್ನು ನೀಡುತ್ತದೆ. ಬೌಲರ್‌ಗಳು ಮತ್ತು ಬ್ಯಾಟರ್‌ಗಳ ನಡುವೆ ತೀವ್ರ ಘರ್ಷಣೆ ನಡೆಯಲಿದೆ. ಶನಿ ಮತ್ತು ಕುಜನ ಯುತಿಯು ಪಂದ್ಯವನ್ನು ಕೊನೆಯ ಓವರ್‌ವರೆಗೂ ಎಳೆದುಕೊಂಡು ಹೋಗುವಂತೆ ಮಾಡುತ್ತದೆ. ಸ್ಕೋರ್ 175-190ರ ಆಸುಪಾಸಿನಲ್ಲಿರಬಹುದು.

​ಶುಕ್ರ ಮತ್ತು ಗುರುವಿನಿಂದ ಭಾಗ್ಯ

ಎಂಟನೇ ಮನೆಯಾದ ವೃಷಭದಲ್ಲಿ ಲಗ್ನಾಧಿಪತಿ ಶುಕ್ರ ಮತ್ತು ಧನಕಾರಕ ಗುರು ಯುತಿಯಾಗಿದ್ದಾರೆ. ಶುಕ್ರನು ಸ್ವಕ್ಷೇತ್ರದಲ್ಲಿದ್ದು ಗುರುವಿನೊಂದಿಗೆ ಇರುವುದು ತಂಡಕ್ಕೆ ಅನಿರೀಕ್ಷಿತ ತಿರುವುಗಳನ್ನು ನೀಡುತ್ತದೆ. ಪಂದ್ಯವು ಕೈತಪ್ಪಿ ಹೋಯಿತು ಎನ್ನುವಾಗಲೇ ಒಬ್ಬ ಪ್ರಮುಖ ಆಟಗಾರ ಪಂದ್ಯದ ದಿಕ್ಕನ್ನು ಬದಲಿಸಿ ಆರ್‌ಸಿಬಿ ಪರವಾಗಿ ಜಯ ತಂದುಕೊಡಲಿದ್ದಾನೆ.

​ದಶಮ ಚಂದ್ರನ ಬಲ

ಕುಂಡಲಿಯ ಹತ್ತನೇ ಮನೆಯಲ್ಲಿ ಚಂದ್ರನು ಸ್ವಕ್ಷೇತ್ರದಲ್ಲಿದ್ದಾನೆ. ಇದು ಅತ್ಯಂತ ಶುಭ ಸಂಕೇತ. ಹತ್ತನೇ ಮನೆಯು ಯಶಸ್ಸು ಮತ್ತು ಕೀರ್ತಿಯ ಸ್ಥಾನ. ಚಂದ್ರನು ಇಲ್ಲಿ ಬಲಿಷ್ಠನಾಗಿರುವುದು ಆರ್‌ಸಿಬಿ ತಂಡದ ನಾಯಕತ್ವ ಮತ್ತು ನಿರ್ಧಾರಗಳು ಮೈದಾನದಲ್ಲಿ ಫಲ ನೀಡಲಿವೆ ಎಂಬುದನ್ನು ಖಚಿತಪಡಿಸುತ್ತದೆ.

ಜಯ ಯಾರಿಗೆ?

ಮೇಷದಲ್ಲಿರುವ ರವಿ ಮತ್ತು ಹತ್ತನೇ ಮನೆಯಲ್ಲಿರುವ ಚಂದ್ರನು ತಂಡಕ್ಕೆ ರಾಜಕೀಯ ಮತ್ತು ಮೈದಾನದ ಬಲ ನೀಡುತ್ತಾರೆ. ಮೀನದಲ್ಲಿರುವ ಶನಿ-ಕುಜರ ಯುತಿಯು ಎದುರಾಳಿಗಳಿಗೆ ಕಠಿಣ ಸವಾಲು ನೀಡಲಿದೆ. ಆಟ ಆರಂಭದ ಸಮಯದ ಪ್ರಕಾರ ಲಗ್ನಾಧಿಪತಿ ಶುಕ್ರ ಮತ್ತು ಗುರುಗಳ ಸಮ್ಮಿಲನ ಹಾಗೂ ದಶಮದಲ್ಲಿರುವ ಚಂದ್ರನ ಬಲದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಜಯಗಳಿಸುವ ಸಾಧ್ಯತೆ ಹೆಚ್ಚಿದೆ. ಅಂತಿಮ ಕ್ಷಣದವರೆಗೂ ಕುತೂಹಲ ಉಳಿಯುವ ಈ ಪಂದ್ಯದಲ್ಲಿ ಆರ್‌ಸಿಬಿ ವಿಜಯದ ನಗೆ ಬೀರಲಿದೆ.


​-ಲೋಹಿತ ಹೆಬ್ಬಾರ್

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:18 pm, Thu, 23 April 26

Source link

ಸಾಲಿನಲ್ಲಿ ನಿಲ್ಲದೇ ಮುಂದೆ ಹೋಗಿ ಮತದಾನ ಮಾಡಿದ ಕಮಲ್ ಹಾಸನ್; ವಿಡಿಯೋ ನೋಡಿ ಜನರ ಟೀಕೆ – Kannada News | Kamal Haasan Shruti Haasan criticized for skipping voting queue in Tamil Nadu Election

ತಮಿಳುನಾಡು ವಿಧಾನಸಭಾ ಚುನಾವಣೆ (Tamil Nadu Election) ಇಂದು (ಏಪ್ರಿಲ್ 23) ನಡೆದಿದೆ. ಜನಸಾಮಾನ್ಯರ ಜೊತೆ ಅನೇಕ ಸೆಲೆಬ್ರಿಟಿಗಳು ಕೂಡ ಬಂದು ಮತ ಚಲಾಯಿಸಿದ್ದಾರೆ. ಮತದಾನ ಮಾಡಲು ಬಂದಿದ್ದ ನಟ ಕಮಲ್ ಹಾಸನ್ (Kamal Haasan) ಮತ್ತು ಅವರ ಪುತ್ರಿ ಶ್ರುತಿ ಹಾಸನ್ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ಸರತಿಯ ಸಾಲನ್ನು ಮೀರಿ ನೇರವಾಗಿ ಒಳಗೆ ಹೋಗಿ ಮತ ಚಲಾಯಿಸಿದ್ದೇ ಈ ಟೀಕೆಗೆ ಕಾರಣ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಖಾರವಾಗಿ ಕಮೆಂಟ್ ಮಾಡುತ್ತಿದ್ದಾರೆ.

ಕಮಲ್ ಹಾಸನ್ ಮತ್ತು ಶ್ರುತಿ ಹಾಸನ್ ಅವರು ಮತದಾನ ಮಾಡಲು ಒಟ್ಟಿಗೆ ಬಂದರು. ಚೆನ್ನೈನ ಆಳ್ವಾರ್‌ಪೇಟೆ ಶಾಲೆಯ ಮತಗಟ್ಟೆಗೆ ಬಂದ ಅವರು ಸಾಲಿನಲ್ಲಿ ನಿಲ್ಲದೆ ನೇರವಾಗಿ ಹೋಗಿದ್ದನ್ನು ನೆಟ್ಟಿಗರು ಖಂಡಿಸುತ್ತಿದ್ದಾರೆ. ಎಎನ್​ಐ ಸುದ್ದಿ ಸಂಸ್ಥೆ ಪೋಸ್ಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿದ ಜನರು ಗರಂ ಆಗಿದ್ದಾರೆ.

ಅಸಲಿಗೆ, ಕಮಲ್ ಹಾಸನ್ ಮತ್ತು ಶ್ರುತಿ ಹಾಸನ್ ಅವರು ಮತಗಟ್ಟೆಯ ಸಾಲಿನಲ್ಲಿ ನಿಂತಿದ್ದರು. ಆದರೆ, ಅಲ್ಲಿ ನೆರೆದಿದ್ದ ಕ್ಯಾಮೆರಾಗಳು ಮತ್ತು ಮಾಧ್ಯಮದವರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬುದನ್ನು ಅಲ್ಲಿದ್ದ ಭದ್ರತಾ ಸಿಬ್ಬಂದಿ ಅಥವಾ ಅವರ ತಂಡದವರು ತಿಳಿಸಿದ್ದಾರೆ. ಕೂಡಲೇ ಪೊಲೀಸರು ಕಮಲ್ ಮತ್ತು ಶ್ರುತಿ ಅವರಿಗೆ ನೇರವಾಗಿ ಒಳಗೆ ಹೋಗಲು ಸೂಚಿಸಿದ್ದಾರೆ.

ಈ ವೇಳೆ ಶ್ರುತಿ ಹಾಸನ್ ಮತ್ತು ಕಮಲ್ ಹಾಸನ್ ಅವರು ತಮ್ಮ ಮುಂದೆ ನಿಂತಿದ್ದ ವ್ಯಕ್ತಿಯಲ್ಲಿ ಕ್ಷಮೆ ಕೇಳಿ, ನಂತರವೇ ನೇರವಾಗಿ ಮತದಾನದ ಕೊಠಡಿಯೊಳಗೆ ತೆರಳಿದ್ದಾರೆ. ಆದರೂ ಟೀಕೆ ತಪ್ಪಿಲ್ಲ. ಕಮಲ್ ಹಾಸನ್ ಅವರು ಸಮಾಜವಾದ, ಸಮಾನತೆ ಮತ್ತು ಆದರ್ಶಗಳ ಬಗ್ಗೆ ನೀಡುವ ಭಾಷಣಗಳನ್ನು ನೆನಪಿಸಿರುವ ನೆಟ್ಟಿಗರು, ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

‘ಬಡತನ, ಸಮಾಜವಾದ ಮತ್ತು ಆದರ್ಶಗಳ ಬಗ್ಗೆ ಭಾಷಣ ಬಿಗಿಯುವ ನಟ ಕಮಲ್ ಹಾಸನ್, ಅತ್ಯಂತ ಐಷಾರಾಮಿ ಕಾರಿನಲ್ಲಿ ಬಂದು ಸಾಮಾನ್ಯ ಜನರ ಸಾಲನ್ನು ಮುರಿದು ಮತದಾನ ಮಾಡಿದ್ದಾರೆ. ಅವರಿಗೆ ಎರಡು ನಿಮಿಷ ಸಾಲಿನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲವೇ’ ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದಾರೆ. ‘ಉದ್ದನೆಯ ಸಾಲುಗಳು ಕೇವಲ ಬಡವರಿಗೆ ಮಾತ್ರ ಎಂಬಂತಿದೆ ಇವರ ವರ್ತನೆ’ ಎಂದು ಮತ್ತೊಬ್ಬರು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಚುನಾವಣೆಯಲ್ಲಿ ಮತ ಹಾಕಿದ ಸೆಲೆಬ್ರಿಟಿಸ್; ಇಲ್ಲಿವೆ ಫೋಟೋಸ್

ಈ ಮಧ್ಯೆ ಕೆಲವರು ಕಮಲ್ ಹಾಸನ್ ಅವರ ಪರವಾಗಿ ಬ್ಯಾಟ್ ಬೀಸಿದ್ದಾರೆ. ‘ದೊಡ್ಡ ನಟರು ಸಾಲಿನಲ್ಲಿ ನಿಂತರೆ ಅವರನ್ನು ನೋಡಲು ಜನ ಮುಗಿಬೀಳುತ್ತಾರೆ. ಇದರಿಂದ ಮತದಾನಕ್ಕೆ ಮತ್ತಷ್ಟು ವಿಳಂಬವಾಗುತ್ತದೆ ಮತ್ತು ಭದ್ರತಾ ಸಮಸ್ಯೆಗಳು ಉಂಟಾಗುತ್ತವೆ. ಜನಜಂಗುಳಿಯನ್ನು ನಿಯಂತ್ರಿಸಲು ಪೊಲೀಸರೇ ಅವರಿಗೆ ಮುಂದೆ ಹೋಗಲು ಅನುಮತಿ ನೀಡಿದ್ದಾರೆ’ ಎಂದು ಫ್ಯಾನ್ಸ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ಆಯುಷ್ ಮ್ಹಾತ್ರೆ ಬದಲಿಗೆ ಸಿಎಸ್​​ಕೆ ತಂಡ ಸೇರಿಕೊಂಡ ಯುವ ವೇಗಿ

Source link

Animation Career Guide: ಉತ್ತಮ ಗಳಿಕೆಯ ಅನಿಮೇಷನ್ ಲೋಕದಲ್ಲಿ ವೃತ್ತಿಜೀವನ ಶುರು ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ – Kannada News | Animation Career Guide: Lucrative Jobs, Courses and Future Scope

ಅನಿಮೇಷನ್ ಲೋಕದಲ್ಲಿ ವೃತ್ತಿಜೀವನImage Credit source: Pinterest

ಇಂದಿನ ಡಿಜಿಟಲ್ ಯುಗದಲ್ಲಿ ಸಾಂಪ್ರದಾಯಿಕ ವೃತ್ತಿಗಳ ಆಚೆಗೆ ಅನೇಕ ಹೊಸ ಆಯ್ಕೆಗಳು ವೇಗವಾಗಿ ಬೆಳೆಯುತ್ತಿವೆ. ಅವುಗಳಲ್ಲಿ ಅನಿಮೇಷನ್ ಕ್ಷೇತ್ರವು ಅತ್ಯಂತ ಪ್ರಮುಖ ಮತ್ತು ಲಾಭದಾಯಕ ವೃತ್ತಿಯಾಗಿ ಹೊರಹೊಮ್ಮಿದೆ. ಚಲನಚಿತ್ರಗಳು, ವೆಬ್ ಸರಣಿಗಳು, ಗೇಮಿಂಗ್ ಮತ್ತು ಸೋಶಿಯಲ್ ಮೀಡಿಯಾ ಕಂಟೆಂಟ್‌ಗಳ ಜನಪ್ರಿಯತೆ ಹೆಚ್ಚಾದಂತೆ ಈ ಕ್ಷೇತ್ರಕ್ಕೆ ಬೇಡಿಕೆ ಕುದುರಿದೆ. ನೀವು ಚಿತ್ರಕಲೆ, ವಿನ್ಯಾಸ ಮತ್ತು ಹೊಸತನ್ನು ಸೃಷ್ಟಿಸುವ ಹಂಬಲ ಹೊಂದಿದ್ದರೆ, ಅನಿಮೇಷನ್ ನಿಮಗೆ ಬಣ್ಣದ ಭವಿಷ್ಯವನ್ನು ನೀಡಬಲ್ಲದು.

ಅನಿಮೇಷನ್ ಎಂದರೆ ನಿಖರವಾಗಿ ಏನು?

ಸರಳವಾಗಿ ಹೇಳುವುದಾದರೆ, ಸ್ಥಿರವಾಗಿರುವ ಚಿತ್ರಗಳು ಅಥವಾ ಗ್ರಾಫಿಕ್ಸ್‌ಗಳಿಗೆ ಚಲನೆಯನ್ನು ನೀಡಿ ಅವು ಜೀವಂತವಾಗಿರುವಂತೆ ಮಾಡುವ ತಂತ್ರವೇ ಅನಿಮೇಷನ್. ಇದು ಕೇವಲ ಕಾರ್ಟೂನ್ ಬಿಡಿಸುವುದಕ್ಕೆ ಸೀಮಿತವಾಗಿಲ್ಲ; ಇದರಲ್ಲಿ 2D ಅನಿಮೇಷನ್, 3D ಅನಿಮೇಷನ್, VFX (ದೃಶ್ಯ ಪರಿಣಾಮಗಳು) ಮತ್ತು ಮೋಷನ್ ಗ್ರಾಫಿಕ್ಸ್ ಎಂಬ ವಿವಿಧ ವಿಭಾಗಗಳಿವೆ. ಇಂದಿನ ಬ್ಲಾಕ್‌ಬಸ್ಟರ್ ಸಿನಿಮಾಗಳಿಂದ ಹಿಡಿದು ಮೊಬೈಲ್ ಗೇಮ್‌ಗಳವರೆಗೆ ಪ್ರತಿಯೊಂದರಲ್ಲೂ ಅನಿಮೇಷನ್ ತಂತ್ರಜ್ಞರ ಕೈಚಳಕ ಅಡಗಿರುತ್ತದೆ.

ಅಗತ್ಯವಿರುವ ಶೈಕ್ಷಣಿಕ ಅರ್ಹತೆ ಮತ್ತು ಕೋರ್ಸ್‌ಗಳು:

ನಿಮ್ಮ ಆಸಕ್ತಿ ಮತ್ತು ಸಮಯಕ್ಕೆ ಅನುಗುಣವಾಗಿ ವಿವಿಧ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು:

  • ಡಿಪ್ಲೊಮಾ ಕೋರ್ಸ್‌ಗಳು: ಇವು ಸಾಮಾನ್ಯವಾಗಿ 6 ತಿಂಗಳಿಂದ 1 ವರ್ಷದ ಅವಧಿಯದ್ದಾಗಿರುತ್ತವೆ.
  • ಪ್ರಮಾಣಪತ್ರ (Certificate) ಕೋರ್ಸ್‌ಗಳು: ಕೇವಲ 3 ರಿಂದ 6 ತಿಂಗಳಲ್ಲಿ ಬೇಸಿಕ್ ಕಲಿಯಲು ಇವು ಸಹಕಾರಿ.
  • ವಿಶೇಷ ಕೋರ್ಸ್‌ಗಳು: 3D ಅನಿಮೇಷನ್, ಗೇಮ್ ಡಿಸೈನಿಂಗ್ ಅಥವಾ VFX ನಂತಹ ಉನ್ನತ ಮಟ್ಟದ ಕೌಶಲ್ಯಗಳನ್ನು ಕಲಿಯಲು ದೀರ್ಘಾವಧಿಯ ಪದವಿ ಕೋರ್ಸ್‌ಗಳೂ ಲಭ್ಯವಿವೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಅನಿಮೇಷನ್ ತಜ್ಞರಿಗೆ ಬೇಡಿಕೆ ಎಲ್ಲಿದೆ?

ಕೇವಲ ಚಲನಚಿತ್ರ ಮತ್ತು ಟಿವಿ ಉದ್ಯಮವಲ್ಲದೆ, ಇಂದು ಅನೇಕ ಕ್ಷೇತ್ರಗಳಲ್ಲಿ ಅನಿಮೇಷನ್ ಅನಿವಾರ್ಯವಾಗಿದೆ. ಗೇಮಿಂಗ್ ಕಂಪನಿಗಳು ಸಾಹಸಮಯ ಆಟಗಳನ್ನು ಸೃಷ್ಟಿಸಲು ಅನಿಮೇಟರ್‌ಗಳನ್ನು ಹುಡುಕುತ್ತಿವೆ. ಜಾಹೀರಾತು ಏಜೆನ್ಸಿಗಳು ಗ್ರಾಹಕರನ್ನು ಆಕರ್ಷಿಸಲು ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಅನಿಮೇಷನ್ ಬಳಸುತ್ತಿವೆ. ಇದಲ್ಲದೆ, ಯೂಟ್ಯೂಬ್ ಮತ್ತು ಎಜುಕೇಶನ್ ಅಪ್ಲಿಕೇಶನ್‌ಗಳಲ್ಲೂ (Ed-Tech) ಅನಿಮೇಷನ್ ತಜ್ಞರಿಗೆ ಅಪಾರ ಬೇಡಿಕೆಯಿದೆ.

ಆರ್ಥಿಕ ಗಳಿಕೆ ಮತ್ತು ಭವಿಷ್ಯ:

ಈ ಕ್ಷೇತ್ರದಲ್ಲಿ ಆರಂಭಿಕ ಹಂತದಲ್ಲಿ ಕೆಲಸಕ್ಕೆ ಸೇರಿದರೆ ತಿಂಗಳಿಗೆ ಸುಮಾರು 15,000 ರಿಂದ 30,000ರೂ. ವರೆಗೆ ಸಂಬಳ ನಿರೀಕ್ಷಿಸಬಹುದು. ಕೆಲಸದಲ್ಲಿ ಅನುಭವ ಮತ್ತು ಸೃಜನಶೀಲತೆ ಹೆಚ್ಚಾದಂತೆ, ಮಾಸಿಕ ಗಳಿಕೆಯು 50,000 ರಿಂದ 1 ಲಕ್ಷಕ್ಕೂ ಹೆಚ್ಚು ತಲುಪಬಹುದು. ಇದಲ್ಲದೆ, ನೀವು ಸ್ವತಂತ್ರವಾಗಿ (Freelancing) ಕೆಲಸ ಮಾಡುವ ಮೂಲಕ ವಿಶ್ವಾದ್ಯಂತ ಇರುವ ಗ್ರಾಹಕರಿಗೆ ಸೇವೆ ಸಲ್ಲಿಸಿ ದೊಡ್ಡ ಮಟ್ಟದ ಆದಾಯ ಗಳಿಸಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈಗಾಗಲೇ ಅನುಭವಿಸಿದ್ದೇನೆ: ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ – Kannada News | HD Kumaraswamy dismisses rumours of Minister Zameer Ahmed Khan joining JDS

ಹಾಸನ, (ಏಪ್ರಿಲ್ 23): ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್ (Davanagere South By Election) ಟಿಕೆಟ್ ವಿಚಾರವಾಗಿ ಕಾಂಗ್ರೆಸ್​​ನಲ್ಲಿ (Congress) ಶುರುವಾದ ಅಸಮಾಧಾನ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ತಮ್ಮ ಸಮುದಾಯಕ್ಕೆ ಟಿಕೆಟ್ ನೀಡಿಲ್ಲವೆಂದು ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಹಾಗೂ ನಸೀರ್ ಅಹಮ್ಮದ್ ಹಾಗೂ ಸಚಿವ ಜಮಿರ್ ಅಹ್ಮದ್ ಖಾನ್ ಅಸಮಾಧಾನಗೊಂಡಿದ್ದು, ಪ್ರಚಾರವೇ ಮಾಡಿರಲಿಲ್ಲ. ಇದರಿಂದ ಅಬ್ದುಲ್ ಜಬ್ಬಾರ್ ಅವರನ್ನ ಪಕ್ಷದಿಂದ ಅಮಾನತು ಮಾಡಿದರೆ, ನಸೀರ್ ಅಹದ್ಮದ್ ಅವರನ್ನ ಸಿಎಂ ರಾಜಕೀಯ ಕಾರ್ಯದರ್ಶಿಯಿಂದ ವಜಾ ಮಾಡಲಾಗಿದ್ದು, ಇದೀಗ ಜಮೀರ್ ವಿರುದ್ಧವೂ ಕ್ರಮಕ್ಕೆ ಚಿಂತನೆಗಳು ನಡೆದಿವೆ. ಈ ಸಂಬಂಧ ಜಮಿರ್ ಅಹ್ಮದ್ ಖಾನ್ ಕಾಂಗ್ರೆಸ್ ತೊರೆದು ವಾಪಸ್ ಜೆಡಿಎಸ್​​ನತ್ತ ಮುಖ ಮಾಡುತ್ತಾರೆ ಎನ್ನುವ ಚರ್ಚೆಗಳು ಜೋರಾಗಿವೆ. ಆದ್ರೆ, ಇದನ್ನು ಸ್ವತಃ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್​​ಡಿ ಕುಮಾರಸ್ವಾಮಿ, ಅಲ್ಲಗಳೆದಿದಿದ್ದಾರೆ.

ಈ ಬಗ್ಗೆ ಮತ್ತೊಮ್ಮೆ ಹಾಸನದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಅಧಿಕಾರಕ್ಕಾಗಿ ಅಂತಹ ಜನರನ್ನು ಸೇರಿಸಿಕೊಳ್ಳುವ ಅವಶ್ಯಕತೆ ಇಲ್ಲ. ಯಾವುದೇ ಕಾರಣಕ್ಕೂ ಆ ವಿಷಯವನ್ನು ನನ್ನ ಮುಂದೆ ಹೇಳಬೇಡಿ. ಅವರನ್ನು ಸೇರಿಸಿಕೊಳ್ಳುವ ಅವಶ್ಯಕತೆ ಇಲ್ಲ, ಈಗಾಗಲೇ ಅನುಭವಿಸಿದ್ದೇನೆ. ರಾಜಕೀಯದಲ್ಲಿ ಶಕ್ತಿ ಬರುತ್ತೆ ಎಂದು ಹೇಳಿ ಈ ಕೆಲಸಕ್ಕೆ ಕೈಹಾಕಲ್ಲ. ಬೆಂದ ಮನೆಯಲ್ಲಿ ಗಳ ಹಿರಿಯುವ ಕೆಲಸಕ್ಕೆ ಕೈ ಹಾಕಲ್ಲ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಝಲ್ಮುರಿ ತಿಂದಿದ್ದು ನಾನು, ಖಾರವಾಗಿದ್ದು ಟಿಎಂಸಿಗೆ: ಬಂಗಾಳದಲ್ಲಿ ಪ್ರಧಾನಿ ಮೋದಿ ಲೇವಡಿ – Kannada News | I ate jhalmuri TMC felt the heat PM Modi jab at Mamata Banerjee in West Bengal

ನವದೆಹಲಿ, ಏಪ್ರಿಲ್ 23: “ಬಂಗಾಳದಲ್ಲಿ ನಾನು ಝಲ್ಮುರಿ ಸವಿದ ವಿಷಯವು ಇಲ್ಲಿನ ಕೆಲವು ಜನರನ್ನು ನಡುಗಿಸಿತು ಎಂದು ನಾನು ಕೇಳಿದೆ. ತಮಾಷೆಯೆಂದರೆ ಝಲ್ಮುರಿ ತಿಂದಿದ್ದು ನಾನೇ ಆದರೂ ಅದರ ಖಾರ ಅನುಭವಿಸಿದ್ದು ತೃಣಮೂಲ ಕಾಂಗ್ರೆಸ್. ಮೇ 4ರಂದು ಫಲಿತಾಂಶಗಳು ಘೋಷಣೆಯಾದ ನಂತರ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ವಿಜಯವನ್ನು ಆಚರಿಸುತ್ತದೆ. ಆ ಸಮಯದಲ್ಲಿ ಸಿಹಿತಿಂಡಿಗಳು ಮತ್ತು ಝಲ್ಮುರಿ ಎರಡನ್ನೂ ವಿತರಿಸಲಾಗುತ್ತದೆ” ಎಂದು ಪ್ರಧಾನಿ ಮೋದಿ (PM Narendra Modi) ಹೇಳಿದ್ದಾರೆ.

“ಇಂದು ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ. ನಾನು ಎಲ್ಲಾ ಮತದಾರರನ್ನು ಅಭಿನಂದಿಸುತ್ತೇನೆ. ಎಲ್ಲರೂ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಬೇಕು. ಈ ಬಾರಿ ಇಲ್ಲಿಯವರೆಗೆ ಹಿಂಸಾಚಾರ ಕಡಿಮೆಯಾಗಿದೆ. ನಾನು ಭಾರತದ ಚುನಾವಣಾ ಆಯೋಗವನ್ನು ಅಭಿನಂದಿಸುತ್ತೇನೆ” ಎಂದು ಏಪ್ರಿಲ್ 29ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಕೃಷ್ಣನಗರದಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಬಂಗಾಳ ಚುನಾವಣಾ ಕಣದಲ್ಲಿ ಮೋದಿ ‘ಝಲ್​ಮುರಿ’ ಸವಿ; ಝಾರ್​ಗ್ರಾಮ್​ನಲ್ಲಿ ಜನಸಾಮಾನ್ಯರಂತೆ ಮಿಂಚಿದ ಪ್ರಧಾನಿ

“ಮತದಾನ ನಡೆಯುತ್ತಿರುವ ರೀತಿ ಮತ್ತು ಮತದಾರರು ಮತ ಚಲಾಯಿಸುತ್ತಿರುವ ಉತ್ಸಾಹವನ್ನು ನೋಡಿದರೆ ಈ ಬಾರಿ ಎಲ್ಲಾ ದಾಖಲೆಗಳು ಮುರಿಯುತ್ತವೆ ಎಂದು ತೋರುತ್ತದೆ. ಮತದಾನ ಪ್ರಕ್ರಿಯೆಯನ್ನು ಶಾಂತಿಯುತವಾಗಿಸಲು ರಾಜ್ಯ ಸರ್ಕಾರಿ ನೌಕರರು ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರನ್ನೂ ನಾನು ಅಭಿನಂದಿಸುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಯವರ ‘ಝಲ್ಮುರಿ’ ವಿಡಿಯೋ ವೈರಲ್: ಇನ್ಸ್​ಟಾಗ್ರಾಮ್‌ನಲ್ಲಿ 100 ಮಿಲಿಯನ್ ವೀಕ್ಷಣೆ

ಪ್ರಧಾನಿ ಮೋದಿ ಝಲ್ಮುರಿಯನ್ನು ತಿನ್ನುತ್ತಾ ಎಂಜಾಯ್ ಮಾಡುತ್ತಿರುವ ದೃಶ್ಯಗಳು ವೈರಲ್ ಆದ ಕೂಡಲೇ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದನ್ನು ಚುನಾವಣಾ ಗಿಮಿಕ್ ಮತ್ತು ನಾಟಕ ಎಂದು ಕರೆದಿದ್ದರು. ಇದನ್ನು ಮೊದಲೇ ಸ್ಕ್ರಿಪ್ಟ್ ಮಾಡಲಾಗಿತ್ತು ಎಂದು ಅವರು ಟೀಕಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿಂತೆಯೆಲ್ಲಾ ಬಿಟ್ಟು ಸಂತೋಷದಿಂದ ಜೀವನ ನಡೆಸಲು ಈ ಸಿಂಪಲ್‌ ಸಲಹೆ ಪಾಲಿಸಿದರೆ ಸಾಕು – Kannada News | Just follow this simple advice to live a happy life without worrying

ಹಣವಿದ್ದರೆ ಸಂತೋಷದಿಂದ ಜೀವನ (happy life) ಸಾಗಿಸಬಹುದು ಎಂದು ಹಲವರು ಭಾವಿಸುತ್ತಾರೆ. ಆದರೆ ವಾಸ್ತವ ಏನೆಂದರೆ ಹಣವೊಂದರಿಂದಲೇ ಸಂತೋಷದಿಂದಿರಲು ಸಾಧ್ಯವಿಲ್ಲ, ಹಣದಿಂದ ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ. ಬದಲಿಗೆ ನಮ್ಮಲ್ಲೇ ನಾವು ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಸಂತೋಷವನ್ನು ಕಂಡುಕೊಳ್ಳಬಹುದು. ಇಂದಿನ ಈ ಬ್ಯುಸಿ ಜೀವನದಲ್ಲಿ ಹೆಚ್ಚಿನವರು ಚಿಂತೆಯಲ್ಲಿಯೇ ಸಮಯ ಕಳೆಯುತ್ತಿದ್ದಾರೆ. ಈ ಚಿಂತೆಯಿಂದ ನೆಮ್ಮದಿ ಹಾಳಾಗುವುದಂತೂ ಖಂಡಿತ. ಹಾಗಾಗಿ ಈ ಕೆಲವೊಂದು ಸರಳ ಸೂತ್ರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಂತೋಷದ ಜೀವನವನ್ನು ನಡೆಸಿ.

ಸಂತೋಷವಾಗಿರಲು ಏನು ಮಾಡಬೇಕು?

ಅನುಪಯುಕ್ತ ವಾದಗಳಿಂದ ದೂರವಿರಲು ಕಲಿಯಿರಿ: ಸಂತೋಷವಾಗಿರಲು, ಅರ್ಥಹೀನ ವಾದಗಳಿಂದ ದೂರವಿರಿ. ಈ ಅರ್ಥಹೀನ ವಾದಗಳು  ಸಮಯ ವ್ಯರ್ಥ ಮಾಡುತ್ತದೆ ಮತ್ತು ಮಾನಸಿಕ ಶಾಂತಿಯನ್ನು ಹಾಳು ಮಾಡುತ್ತದೆ. ವಾದಿಸುವ ಬದಲು ಯಾವಾಗಲೂ ಅರ್ಥಪೂರ್ಣ ಚರ್ಚೆಗಳಿಗೆ ಆದ್ಯತೆ ನೀಡಿ. ಈ ರೀತಿಯ ಮನೋಭಾವ ಸಂತೋಷದಿಂದ ಜೀವನ ನಡೆಸಲು ಸಹಕಾರಿ.

ನೀವು ಹೇಗಿದ್ದೀರೋ ಹಾಗೆಯೇ ಇರಿ:  ಇತರರನ್ನು ಮೆಚ್ಚಿಸಲು ಬದುಕುವ ಅವಶ್ಯಕತೆಯಿಲ್ಲ. ಇತರರನ್ನು ಮೆಚ್ಚಿಸುವ ಭರದಲ್ಲಿ ನೀವು ಅನವಶ್ಯಕವಾಗಿ ಒತ್ತಡವನ್ನು ನಿಮ್ಮ ಮೈ ಮೇಲೆ ಎಳೆದುಕೊಳ್ಳುತ್ತೀರಿ. ಹಾಗಾಗಿ ಯಾರನ್ನು ಮೆಚ್ಚಿಸುವ ಸಲುವಾಗಿ ಜೀವನ ನಡೆಸಬೇಡಿ, ನಿಮಗಾಗಿ ಜೀವಿಸಿ. ಇದರಿಂದ ಖಂಡಿತವಾಗಿಯೂ ನೀವು ಸಂತೋಷದಿಂದ ಜೀವನ ನಡೆಸಲು ಸಾಧ್ಯ.

ಜನರ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟುಬಿಡಿ: ಇತರರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ನಿಲ್ಲಿಸಿ. ನಾವು ಈ ಕೆಲಸ ಮಾಡಿದರೆ ಯಾರು ಏನೆನ್ನುತ್ತಾರೋ, ಜನ ನನ್ನ ಬಗ್ಗೆ ಏನು ತಿಳಿದುಕೊಳ್ಳುತ್ತಾರೋ ಎಂದು ತಲೆ ಕೆಡಿಸುತ್ತಾ ಕುಳಿತರೆ ನೀವು ಚಿಂತೆಯಲ್ಲೇ ಇರುತ್ತಾರೆಯೇ ವಿನಃ ಸಂತೋಷದಿಂದ ಜೀವನ ನಡೆಸಲು ಸಾಧ್ಯವಿಲ್ಲ. ಖುಷಿಯಾಗಿರಬೇಕೆಂದರೆ ನೀವು ನೀವಾಗಿರಿ, ಇತರರು ಏನೆನ್ನುತ್ತಾರೆ ಎಂಬ ಬಗ್ಗೆ ಚಿಂತಿಸುವುದನ್ನು ಬಿಡಿ.

ಇದನ್ನೂ ಓದಿ: ಸುಡು ಬಿಸಿಲಿಗೆ ಬಸವಳಿದ ಮೂಕ ಜೀವಿಗಳಿಗೆ ರೀತಿ ನಿಮ್ಮ ಕೈಲಾದಷ್ಟು ಸಹಾಯ ಮಾಡಿ

ಸಕಾರಾತ್ಮಕವಾಗಿ ಯೋಚಿಸಿ: ನಕಾರಾತ್ಮಕ ಆಲೋಚನೆಗಳು ನಮ್ಮ ಶಾಂತಿ ಮತ್ತು ನೆಮ್ಮದಿಯನ್ನು ಹಾಳು ಮಾಡುತ್ತದೆ. ಹಾಗಾಗಿ ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸಿ, ಮುಖ್ಯವಾಗಿ ಇತರರ ಬಗ್ಗೆ ತಲೆ ಕೆಡಿಸುವುದನ್ನು ನಿಲ್ಲಿಸಿ, ನಿಮ್ಮ ಬಗ್ಗೆ ಮಾತ್ರ ಯೋಚಿಸಿ, ಈ ಸ್ವ ಪ್ರೀತಿ ಮತ್ತು ಸಕಾರಾತ್ಮಕ ಆಲೋಚನೆ ನಿಮಗೆ ಸಂತೋಷವನ್ನು ನೀಡುತ್ತದೆ.  ಒಟ್ಟಾರೆಯಾಗಿ ಜನರ ಅಭಿಪ್ರಾಯಗಳ ಮೇಲೆ ಸಮಯ ವ್ಯರ್ಥ ಮಾಡುವ ಬದಲು, ನಿಮ್ಮ ಇಚ್ಛೆಯಂತೆ ನಿಮ್ಮ ಜೀವನವನ್ನು ಸಂತೋಷದಿಂದ ಬದುಕಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version