ಬೆಂಗಳೂರಿನ ಮನೆಯೊಂದರಲ್ಲಿ ದಂಪತಿ ಶವ ಪತ್ತೆ: ಗಂಡ-ಹೆಂಡ್ತಿ ಸಾವಿನ ರಹಸ್ಯ ನಿಗೂಢ – Kannada News | Couple Dead Body Found In gangenahalli Home at Bengaluru
ಬೆಂಗಳೂರು, (ಏಪ್ರಿಲ್ 22): ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಆರ್.ಟಿ.ನಗರದ ಗಂಗೇನಹಳ್ಳಿಯ ಮನೆಯೊಂದರಲ್ಲಿ ದಂಪತಿ (Couple) ಶವ ಪತ್ತೆಯಾಗಿದೆ. 10 ವರ್ಷಗಳ ಹಿಂದೆ ವಿವಾಹವಾಗಿದ್ದ ಸುಮಿತ್ರಾ ಹಾಗೂ ಡೇವಿಡ್ ಇದೀಗ ಏಕಾಏಕಿ ಸಾವನ್ನಪ್ಪಿದ್ದಾರೆ. ಆದ್ರೆ, ಇಬ್ಬರ ಸಾವಿಗೆ ನಿಖರ ಕಾರಣ ತಿಳಿದುಬಂದಿದ್ದಲ್ಲ. ಇನ್ನು ಸ್ಥಳಕ್ಕೆ ಆರ್ಟಿ ನಗರ ಪೊಲೀಸರು ಮತ್ತು ಸೊಕೊ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದು, ಕೌಟುಂಬಿಕ ಕಲಹದಿಂದ ಬೇಸತ್ತು ಡೇವಿಡ್, ಸುಮಿತ್ರಾಳನ್ನ ಉಸಿರುಗಟ್ಟಿಸಿ ಕೊಂದು ಬಳಿಕ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ….