ರವಿ ಕಿಶನ್ ಡೈರೆಕ್ಷನ್: “ಮಹಾರಾಜ್ ಜಿ, ಸ್ವಲ್ಪ ಈ ಕಡೆ ನೋಡಿ ಸಿಂಹದ ಮುಖ ಮತ್ತು ನೀವು ಮಾತ್ರ ಫ್ರೇಮ್‌ನಲ್ಲಿ ಇರಲಿ” – Kannada News | CM Yogi Adityanath’s Hilarious Photo Moment: Ravi Kishan’s Film Direction Goes Viral

ಲಕ್ನೋ, ಏ.24 : ರಾಜಕೀಯದ ಗಂಭೀರ ಚರ್ಚೆಗಳ ನಡುವೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಗೋರಖ್‌ಪುರ ಸಂಸದ ಹಾಗೂ ನಟ ರವಿ ಕಿಶನ್ ಅವರ ಅಪರೂಪದ ಮೋಜಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ, ಹಳೆಯ ಟೈರ್‌ಗಳಿಂದ ನಿರ್ಮಿಸಲಾದ ಬೃಹತ್ ಸಿಂಹದ ಪ್ರತಿಮೆಯ ಮುಂದೆ ಸಿಎಂ ಯೋಗಿ ಆದಿತ್ಯನಾಥ್ ಅವರು ಫೋಟೋಗೆ ಪೋಸ್ ನೀಡುತ್ತಿದ್ದರು. ಈ ವೇಳೆ ಪಕ್ಕದಲ್ಲೇ ಇದ್ದ ಖ್ಯಾತ ನಟ ರವಿ ಕಿಶನ್ ಅವರಲ್ಲಿದ್ದ ‘ಸಿನಿಮಾ ಕಲಾವಿದ’ ಹೊರಬಂದಿದ್ದಾನೆ. ತಮ್ಮದೇ ಶೈಲಿಯಲ್ಲಿ ಸಿಎಂ ಅವರಿಗೆ ಫೋಟೋಗೆ ಹೇಗೆ ಪೋಸ್ ನೀಡಬೇಕು ಎಂದು ನಿರ್ದೇಶನ (Direction) ನೀಡಲು ಆರಂಭಿಸಿದರು. “ಮಹಾರಾಜ್ ಜಿ, ಸ್ವಲ್ಪ ಈ ಕಡೆ ನೋಡಿ… ಲೋ ಆಂಗಲ್ (Low Angle)… ಕೇವಲ ಸಿಂಹದ ಮುಖ ಮತ್ತು ನೀವು ಮಾತ್ರ ಫ್ರೇಮ್‌ನಲ್ಲಿ ಇರಲಿ” ಎಂದು ರವಿ ಕಿಶನ್ ಉತ್ಸಾಹದಿಂದ ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ರವಿ ಕಿಶನ್ ಅವರ ಈ ಸಿನಿಮಾ ಸ್ಟೈಲ್ ಡೈರೆಕ್ಷನ್ ಕಂಡು ಸಿಎಂ ಯೋಗಿ ಆದಿತ್ಯನಾಥ್ ಅವರು ಕೂಡ ಮುಗುಳ್ನಕ್ಕಿದ್ದಾರೆ. ಅಲ್ಲಿದ್ದ ಇತರ ಅಧಿಕಾರಿಗಳು ಮತ್ತು ಸಾರ್ವಜನಿಕರು “ರವಿ ಕಿಶನ್ ಅವರು ಶೂಟಿಂಗ್ ಮೋಡ್‌ಗೆ ಬಂದಿದ್ದಾರೆ” ಎಂದು ತಮಾಷೆ ಮಾಡುತ್ತಿರುವುದು ಕೇಳಿಬಂದಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಸಮಂತಾ ಸೆಟ್​​​ನಲ್ಲಿ ಹೇಗಿರ್ತಾರೆ? ವಿವರಿಸಿದ ದಿಗಂತ್

ಕನ್ನಡದ ಹೀರೋ ದಿಗಂತ್ ಅವರು ‘ರುದ್ರ ಕಾಲ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತ ನಡೆದಿದೆ. ಈ ಸಿನಿಮಾ ವೇಳೆ ಮಾತನಾಡುವಾಗ ತೆಲುಗಿನ ‘ಮಾ ಇಂಟಿ ಬಂಗಾರಂ’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರ ಹೇಗಿದೆ ಎಂಬುದನ್ನು ರಿವೀಲ್ ಮಾಡಿದ್ದಾರೆ. ಸಮಂತಾ ಪತಿ ಪಾತ್ರದಲ್ಲಿ ದಿಗಂತ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಸಮಂತಾ ಜೊತೆ ಕೆಲಸ ಮಾಡುವ ಅನುಭವ ವಿವರಿಸಿರೋ ಅವರು, ‘ಸಮಂತಾ ಸೂಪರ್ ಕೂಲ್’ ಎಂದಿದ್ದಾರೆ. ಈ ಚಿತ್ರದ ಬಗ್ಗೆ ಅವರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

KSRTC ಬಸ್​ ಅಡ್ಡಗಟ್ಟಿ ಕುಡುಕರ ಕಿರಿಕ್​​: ಸೆಲ್ಫಿ ತೆಗೆದು ಆಟೋ ಚಾಲಕರ ಹುಚ್ಚಾಟ – Kannada News | Drunk Auto Drivers Block KSRTC Bus, Create Ruckus Taking Selfies in Chikkamagaluru

ಚಿಕ್ಕಮಗಳೂರು, ಏಪ್ರಿಲ್​​ 24: ಕುಡಿದ ಅಮಲಿನಲ್ಲಿ KSRTC ಬಸ್​ ಅಡ್ಡಗಟ್ಟಿ ಆಟೋ ಚಾಲಕರು ಕಿರಿಕ್ ನಡೆಸಿರುವ ಘಟನೆ ಚಿಕ್ಕಮಗಳೂರು ನಗರದ ಕೆ‌ಎಂ ರಸ್ತೆಯಲ್ಲಿ ನಡೆದಿದೆ. ಕಡೂರಿನಿಂದ ಚಿಕ್ಕಮಗಳೂರು KSRTC ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಬಸ್​​ಗೆ ರಸ್ತೆ ಮಧ್ಯೆ ಆಟೋ ಅಡ್ಡಹಾಕಿ ಪುಂಡಾಟ ಮೆರೆಯಲಾಗಿದೆ. ಬಸ್ ಚಾಲಕ ಮನವಿ ಮಾಡಿದ್ರೂ ಜಾಗ ಬಿಡದೆ, ಬಸ್​​ಗೆ ಅಡ್ಡಲಾಗಿ ಆಟೋ ನಿಲ್ಲಿಸಿ ಮೂವರು ಯುವಕರು ಕಿರಿಕ್ ಮಾಡಿದ್ದಾರೆ. ಆಟೋ ನಿಲ್ಲಿಸಿ ಸೆಲ್ಫಿ ತೆಗೆಯುತ್ತಿರುವ ಯುವಕರ ವಿಡಿಯೋ ವೈರಲ್​ ಆಗಿದ್ದು, ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ವಿದ್ಯಾರ್ಥಿ ಭವನ’ ಮತ್ತು ಡಾ ರಾಜ್ಕುಮಾರ್: ನೆನಪಿನ ಬುತ್ತಿ ತೆರೆದಿಟ್ಟ ಮಾಲೀಕರು – Kannada News | Famous Vidyarthi Bhavan hotel owner talks about Dr Rajkumar and his connection with hotel

ಡಾ ರಾಜ್​ಕುಮಾರ್ (Dr Rajkumar) ಅವರ ಪುಣ್ಯ ಜಯಂತಿ ಇಂದು. ರಾಜ್ಯದ ಹಲವಾರು ಕಡೆ ಡಾ ರಾಜ್​ಕುಮಾರ್ ಅವರ ಜಯಂತಿಯನ್ನು ಆಚರಿಸಲಾಗುತ್ತಿದೆ. ರಾಜ್ಯದ ಯಾವ ಮೂಲೆಗೆ ಹೋದರೂ ರಾಜ್​ಕುಮಾರ್ ಅವರ ಚಿತ್ರ, ಪ್ರತಿಮೆಗಳು ಇಂದಿಗೂ ಹೆಜ್ಜೆಗೊಂದರಂತೆ ಕಾಣುತ್ತವೆ. ವಿಶೇಷವೆಂದರೆ ರಾಜ್ಯದ ಯಾವುದೇ ಜನಪ್ರಿಯ ಹೋಟೆಲ್​​ಗಳಿಗೆ ಹೋದರೂ ಅಲ್ಲಿ ರಾಜ್​ಕುಮಾರ್ ಅವರ ಫೋಟೊ ಒಂದು ಇದ್ದೇ ಇರುತ್ತದೆ. ಅಭಿಮಾನಿಗಳಿಗೆ ಗೊತ್ತಿರುವಂತೆ ರಾಜ್​ಕುಮಾರ್ ಅವರು ಮಹಾನ್ ಭೋಜನಪ್ರಿಯರು. ಬೆಂಗಳೂರಿನ ಪ್ರಖ್ಯಾತ ಹೋಟೆಲ್ ವಿದ್ಯಾರ್ಥಿ ಭವನಕ್ಕೂ ರಾಜ್​ಕುಮಾರ್ ಅವರೊಟ್ಟಿಗೆ ನಂಟಿದೆ. ಆ ನಂಟನ್ನು ವಿದ್ಯಾರ್ಥಿ ಭವನದ ಮಾಲೀಕರಾದ ಎಸ್ ರಾಮಕೃಷ್ಣ ಅಡಿಗ ಅವರು ರಾಜ್​ಕುಮಾರ್ ಹಾಗೂ ವಿದ್ಯಾರ್ಥಿ ಭವನದ ನಂಟಿನ ಬಗ್ಗೆ ಮಾತನಾಡಿದ್ದಾರೆ.

1962 ರಲ್ಲಿ ರಾಮಕೃಷ್ಣ ಅಡಿಗ ಅವರು ಬೆಂಗಳೂರಿಗೆ ಬರುವ ಮುಂಚೆಯೇ ಅವರು ಅಣ್ಣಾವ್ರ ಅಭಿಮಾನಿಯಂತೆ. 1970ರಲ್ಲಿ ವಿದ್ಯಾರ್ಥಿ ಭವನ ಹೋಟೆಲ್ ಜವಾಬ್ದಾರಿ ವಹಿಸಿಕೊಂಡ ಬಳಿಕ ಅಣ್ಣಾವ್ರು ಹೋಟೆಲಿನಿಂದ ತಮ್ಮ ಮನೆಗೆ ದೋಸೆ ಇತ್ಯಾದಿ ತಿನಿಸುಗಳನ್ನು ಪಾರ್ಸೆಲ್ ತರಿಸಿಕೊಳ್ಳುತ್ತಿದ್ದರಂತೆ. ಖುದ್ದು ರಾಮಕೃಷ್ಣ ಅಡಿಗರೇ ಅದನ್ನು ಕೊಂಡೊಯ್ಯುತ್ತಿದ್ದರಂತೆ. ಕೆಲ ವರ್ಷಗಳ ಬಳಿಕ ರಜನೀಕಾಂತ್ ಅವರು ಒಮ್ಮೆ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ, ಬಳಿಕ ರಾಜ್​ಕುಮಾರ್ ಮನೆಗೆ ಹೋದರಂತೆ. ಆಗ, ವಿದ್ಯಾರ್ಥಿ ಭವನದ ಬಗ್ಗೆ ಪ್ರಸ್ತಾಪಿಸಿ, ನೀವು ಅಲ್ಲಿಗೇ ಹೋಗಿ (ಹೋಟೆಲ್​ಗೆ) ದೋಸೆ ತಿನ್ನಬೇಕು ಎಂದರಂತೆ. ಅದರಂತೆ ಪಾರ್ವತಮ್ಮನವರು ಹೋಟೆಲ್​​ಗೆ ಕರೆ ಮಾಡಿ ಬರುವುದಾಗಿ ಹೇಳಿದರಂತೆ. ಆದರೆ ಅನಿವಾರ್ಯ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲವಂತೆ. ಆದರೆ ಆಗಾಗ್ಗೆ ಹೋಟೆಲ್​​ನಿಂದ ಮನೆಗೆ ಖಾದ್ಯಗಳನ್ನು ತರಿಸಿಕೊಂಡು ಸವಿಯುತ್ತಿದ್ದರಂತೆ ಅಣ್ಣಾವ್ರು.

ವೀರಪ್ಪನ್, ಅಣ್ಣಾವ್ರನ್ನು ಅಪಹರಿಸಿ, ಮರಳಿ ಬಂದ ಬಳಿಕ ಕೆಲವೇ ದಿನಗಳಲ್ಲಿ ಮನೆಗೆ ಪಾರ್ಸೆಲ್ ತರಿಸಿಕೊಂಡಿದ್ದರಂತೆ. ಆಗೆಲ್ಲ ಮಾಲೀಕ ಎಸ್ ರಾಮಕೃಷ್ಣ ಅಡಿಗ ಅವರೇ ಹೋಗಿ ಖಾದ್ಯಗಳನ್ನು ಕೊಟ್ಟು ಬರುತ್ತಿದ್ದರಂತೆ. ಆಗೆಲ್ಲ ಸಾಕಷ್ಟು ಹೊತ್ತು ಮಾತನಾಡುತ್ತಾ ಕೂರುತ್ತಿದ್ದ ಅಣ್ಣಾವ್ರು, ಕಾಡಿನ ಅನುಭವಗಳನ್ನು ಹೇಳುತ್ತಿದ್ದರಂತೆ. ತಮಾಷೆ ಮಾಡುತ್ತಿದ್ದರು, ಹಾಡುಗಳನ್ನು ಸಹ ಹಾಡುತ್ತಿದ್ದರು. ನಾನು ಹೊರಡುವಾಗ ಗೇಟಿನ ವರೆಗೆ ಬಂದು ವಿದಾಯ ಹೇಳುತ್ತಿದ್ದರು. ಅವರಿಗೆ ಕಾಲು ನೋವಿತ್ತು, ಬೇಡ ಎಂದರೂ ಕೇಳದೆ ಹೊರಗೆ ಬರುತ್ತಿದ್ದರು, ಅವರು ನಿಜಕ್ಕೂ ಬಂಗಾರದ ಮನುಷ್ಯನೇ ಆಗಿದ್ದರು’ ಎಂದು ನೆನಪು ಮಾಡಿಕೊಂಡಿದ್ದರು.

ಇದನ್ನೂ ಓದಿ:ಡಾ. ರಾಜ್​ಕುಮಾರ್ 20ನೇ ವರ್ಷದ ಪುಣ್ಯಸ್ಮರಣೆ: ಅಭಿಮಾನಿಗಳಿಗೆ ಅನ್ನದಾನ

ಕೊನೆಗೂ ಒಮ್ಮೆ ಅವರು ವಿದ್ಯಾರ್ಥಿ ಭವನಕ್ಕೆ ಬಂದರು. ತಮ್ಮ ಮೊಮ್ಮಕ್ಕಳನ್ನೆಲ್ಲ ಅವರು ಕರೆದುಕೊಂಡು ಬಂದಿದ್ದರು. 10:30 ಸುಮಾರಿಗೆ ಅವರು ಹೋಟೆಲ್​​ಗೆ ಬಂದರು. ಅವರು ಬರುವಷ್ಟರಲ್ಲೇ ಜನಸಾಗರ ಹೊರಗೆ ನೆರೆದಿತ್ತು. ಹೋಟೆಲ್​​ನಿಂದ ಹೊರಗೆ ಹೋಗುವಾಗಲಂತೂ ಸಾವಿರಾರು ಜನ ಸೇರಿಬಿಟ್ಟರು. ಜನ ಅವರ ಮೇಲೆ ಹೂವಿನ ಮಳೆ ಸುರಿಸಲು ಆರಂಭಿಸಿದರು. ಅದು ನಾನು ಮರೆಯಲಾರದ ಅನುಭವ. ಅಂದು ಅವರು ನಮ್ಮ ಅತಿಥಿಗಳ ಡೈರಿಯಲ್ಲಿ ಬರೆದಿರುವುದನ್ನು ನಾವು ಜತನದಿಂದ ಕಾಪಾಡಿಕೊಂಡಿದ್ದೇವೆ. ಅದು ನಮ್ಮ ಅಮೂಲ್ಯ ಆಸ್ತಿಗಳಲ್ಲಿ ಒಂದು. ಅವರಂಥಹಾ ವ್ಯಕ್ತಿ ಇನ್ನೆಂದೂ ಹುಟ್ಟುವುದಿಲ್ಲವೇನೋ, ಅವರಿಗೆ ಅವರೇ ಸಾಟಿ, ಅವರು ನಿಜವಾಗಿಯೂ ಬಂಗಾರದ ಮನುಷ್ಯ ಎಂದು ಗದ್ಗದಿತರಾಗಿದ್ದಾರೆ ರಾಮಕೃಷ್ಣ ಅಡಿಗ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಂಗಾಯಣದ ಅಂಗಳದಲ್ಲಿ ಹಸಿರು ಕ್ರಾಂತಿ: ಮಣ್ಣಿನೊಂದಿಗೆ ಬೆರೆತು ಪರಿಸರ ಪಾಠ ಕಲಿತ ಚಿಣ್ಣರು! – Kannada News | Mysuru Rangayana Chinnara Mela: Student Nilay Nandan Shares Heartwarming Experience of Kai Thota Program

ರಂಗಾಯಣದ ‘ಚಿಣ್ಣರ ಮೇಳ’ದಲ್ಲಿ ‘ಕೈತೋಟ’ ಕಾರ್ಯಕ್ರಮImage Credit source: tv9

ಮೈಸೂರು, ಏಪ್ರಿಲ್ 24: ಸಾಂಸ್ಕೃತಿಕ ನಗರಿ ಮೈಸೂರಿನ (Mysuru) ಕಿರೀಟಪ್ರಾಯವಾದ ರಂಗಾಯಣದ ಅಂಗಳದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ‘ಚಿಣ್ಣರ ಮೇಳ’ ಸಂಭ್ರಮದಿಂದ ಜರುಗುತ್ತಿದೆ. ಆದರೆ, ಈ ಬಾರಿಯ ಮೇಳ ಕೇವಲ ರಂಗಭೂಮಿ, ನಾಟಕ ಮತ್ತು ನೃತ್ಯಕ್ಕೆ ಸೀಮಿತವಾಗದೆ, ಮಕ್ಕಳಿಗೆ ಬದುಕಿನ ಪಾಠವನ್ನು ಕಲಿಸುವ ಮೂಲಕ ಹೊಸ ಆಯಾಮ ಪಡೆದುಕೊಂಡಿದೆ. ವಿಶೇಷವಾಗಿ ‘ಕೈತೋಟ’ ಕಾರ್ಯಕ್ರಮದ ಮೂಲಕ ಮಕ್ಕಳು ಮಣ್ಣಿನ ಒಡನಾಟ ಬೆಳೆಸಿಕೊಂಡಿರುವುದು ವಿಶೇಷವಾಗಿ ಮೂಡಿಬಂದಿದೆ.

ಮಕ್ಕಳ ಮನದಲ್ಲಿ ಹಸಿರು ಬೀಜ

ರಂಗಾಯಣದಲ್ಲಿ ಮಕ್ಕಳಿಗೆ ಕೇವಲ ಪುಸ್ತಕದ ಬದನೆಕಾಯಿಯಂತೆ ಪರಿಸರದ ಬಗ್ಗೆ ಪಾಠ ಮಾಡದೆ, ಅವರನ್ನು ನೇರವಾಗಿ ಮಣ್ಣಿನ ಜೊತೆ ಬೆರೆಸುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಗಿದೆ. ಇದು ಮಕ್ಕಳಿಗೆ ಕೇವಲ ಆಟ ಮತ್ತು ಮನರಂಜನೆ ಮಾತ್ರವಲ್ಲದೆ, ಭವಿಷ್ಯದ ಭೂಮಿಯನ್ನು ರಕ್ಷಿಸುವ ಬೀಜಗಳನ್ನು ಬಿತ್ತುವ ಮಹತ್ವದ ಕಾರ್ಯವಾಗಿದೆ ಎಂದು ಜೇನುಮನೆ ತಂಡ-5ರ ವಿದ್ಯಾರ್ಥಿ ನಿಲಯ್ ನಂದನ್ ತನ್ನ ಅನುಭವವನ್ನು ಹಂಚಿಕೊಂಡಿದ್ದಾನೆ.

ಕೈ ಕೆಸರಾದರೆ ಬಾಯಿ ಮೊಸರು – ಪ್ರಾಯೋಗಿಕ ಪಾಠ

‘ರಂಗಾಯಣದ ಆವರಣದಲ್ಲಿ ಚಿಣ್ಣರು ಬರಿಗೈಯಲ್ಲಿ ಮಣ್ಣು ಅಗೆದು, ಗಿಡಗಳನ್ನು ನೆಟ್ಟು, ಅದಕ್ಕೆ ನೀರೆರೆಯುವ ಮೂಲಕ ಪ್ರಕೃತಿಯ ಜೊತೆ ಒಂದು ಅವಿನಾಭಾವ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ. ಬೀಜ ಬಿತ್ತನೆಯಿಂದ ಹಿಡಿದು ಗಿಡದ ಆರೈಕೆಯವರೆಗೆ ನಮಗೆ ಸಂಪೂರ್ಣ ಮಾಹಿತಿ ನೀಡಲಾಯಿತು’ ಎಂದು ನಿಲಯ್ ನಂದನ್ ವಿವರಿಸಿದ್ದಾನೆ. ‘ಹಸಿರೇ ಉಸಿರು’ ಎಂಬ ಮಾತನ್ನು ಮಕ್ಕಳು ಕೃತಿಯಲ್ಲಿ ಮಾಡಿ ತೋರಿಸಿದ್ದು ನಮಗೂ ಖುಷಿ ಕೊಟ್ಟಿದೆ ಎಂದು ಅವನು ಅಭಿಪ್ರಾಯಪಟ್ಟಿದ್ದಾನೆ. ಪ್ರತಿ ಗಿಡವೂ ನಮ್ಮ ಉಸಿರಿನ ಸಹಚರ ಎಂಬ ಅರಿವು ಈ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಮೂಡಿದೆ.

ಜವಾಬ್ದಾರಿಯುತ ನಾಗರಿಕರತ್ತ ಹೆಜ್ಜೆ

ಮಕ್ಕಳಲ್ಲಿ ಕಂಡ ಸಂತೋಷ, ಕೈಗಳಲ್ಲಿ ಕಂಡ ಶ್ರಮ ಮತ್ತು ಮನದಲ್ಲಿ ಮೂಡಿದ ಜಾಗೃತಿ ‘All These Together Painted A Beautiful Picture Of Hope’. ಇಂತಹ ಅನುಭವಗಳು ಮಕ್ಕಳನ್ನು ಕೇವಲ ವಿದ್ಯಾರ್ಥಿಗಳನ್ನಾಗಿಸದೆ, ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸಂಘಟಕರಿಗೆ ಮೆಚ್ಚುಗೆ

ಇಂತಹ ಒಂದು ದೂರದೃಷ್ಟಿಯ ಕಾರ್ಯಕ್ರಮವನ್ನು ರೂಪಿಸಿದ ರಂಗಾಯಣದ ನಿರ್ದೇಶಕರಾದ ಸತೀಶ್ ಅವರ ನಾಯಕತ್ವ ಸ್ತುತ್ಯಾರ್ಹ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಜೇನುಮನೆ ತಂಡದ ಮೆಂಟರ್ ಕೌಶಿಕ್ ಅವರ ಕಾರ್ಯವೈಖರಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಕೈತೋಟ ಕಾರ್ಯಕ್ರಮವು ಕೇವಲ ಒಂದು ಚಟುವಟಿಕೆಯಾಗದೆ ಪರಿಸರ ಪ್ರೇಮದ ಸುಂದರ ಆರಂಭವಾಗಿತ್ತು. ರಂಗಾಯಣದ ಈ ಪರಿಸರ ಪೂರಕ ಹೆಜ್ಜೆ ಇಡೀ ಸಮಾಜಕ್ಕೆ ಮಾದರಿಯಾಗಲಿ ಎಂಬ ಆಶಯ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯ ಕಾಂಗ್ರೆಸ್​​ನಲ್ಲಿ ಮಹತ್ವದ ಬೆಳವಣಿಗೆ: ಕುತೂಹಲ ಮೂಡಿಸಿದ ಅತ್ಯಾಪ್ತರ ಜೊತೆಗಿನ ಸಿಎಂ ಸಭೆ – Kannada News | CM Siddaramaiah pressured by key allies amid Karnataka Congress political crisis

ಬೆಂಗಳೂರು, ಏಪ್ರಿಲ್​​ 24: ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದ್ದು, ಕಾಂಗ್ರೆಸ್​​ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರೇ ಟಾರ್ಗೆಟ್​​ ಆಗುತ್ತಿರುವ ಆರೋಪ ಕೇಳಿಬಂದಿದೆ. ಈ ನಡುವೆ ಸಿಎಂ ಹಾಗೂ ಅತ್ಯಾಪ್ತ ಸಚಿವರಿಂದ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯ ಖಾಸಗಿ ಕಟ್ಟಡದಲ್ಲಿ ಪ್ರತ್ಯೇಕ ಸಭೆ ನಡೆದಿರೋದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಸಚಿವರಾದ ಭೈರತಿ ಸುರೇಶ್, ಡಾ.ಜಿ.ಪರಮೇಶ್ವರ್, ಮಹದೇವಪ್ಪ, ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್, ದಿನೇಶ್ ಗುಂಡೂರಾವ್ ಭಾಗಿಯಾಗಿದ್ದರು.

ಸಭೆಯಲ್ಲಿ ಚರ್ಚೆಯಾಗಿದ್ದೇನು?

ಆಪ್ತರೇ ಟಾರ್ಗೆಟ್​​ ಆಗುತ್ತಿದ್ದರೂ ಸಿಎಂ ಮೌನವಾಗಿರು ವಿಚಾರದ ಬಗ್ಗೆ ಸಭೆಯಲ್ಲಿ ಸುದೀರ್ಘ ಸಮಾಲೋಚನೆ ನಡೆದಿದೆ. ಇದು ಹೀಗೆ ಮುಂದುವರಿದರೆ ಪಕ್ಷದ ಹಿರಿಯ ನಾಯಕರ ಅಸ್ತಿತ್ವಕ್ಕೂ ಕುತ್ತು ಬರಬಹುದು. ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಸರಿಯಲ್ಲ. ಇದರಿಂದ 2028ರ ಚುನಾವಣೆ ವೇಳೆ ಪಕ್ಷದ ಮೇಲೆ ಮುನಿಸಿಕೊಂಡು ಸಮುದಾಯಗಳು ದೂರ ಸರಿಯುತ್ತವೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಹಿರಿಯ ನಾಯಕರ ಅನುಭವಗಳಿಗೆ ವಿರುದ್ಧವಾಗಿ ಪಕ್ಷದಲ್ಲಿ ಕೆಲವರು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಈ ನಡುವೆ ಸಿದ್ದರಾಮಯ್ಯ ಮೌನದಿಂದ ಕಾಂಗ್ರೆಸ್​ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ. ಹೀಗಾಗಿ ತಾವು ತಕ್ಷಣ ಮಧ್ಯಪ್ರವೇಶ ಮಾಡಬೇಕೆಂದು ಸಿದ್ದರಾಮಯ್ಯನವರ ಮೇಲೆ ಸಭೆಯಲ್ಲಿ ಒತ್ತಡ ಹೇರಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಸೈಲೆಂಟ್​​ ಆಗಲು ಮಾಟ ಮಂತ್ರ ಕಾರಣವಾ?; ಕಾಂಗ್ರೆಸ್​​ನಲ್ಲಿಯೇ ಹೀಗೊಂದು ಹೊಸ ಚರ್ಚೆ

ಸಿಎಂ ಮತ್ತು ಆಪ್ತರ ಸಭೆ ಬಗ್ಗೆ ಡಿಕೆಶಿ ಹೇಳಿದ್ದೇನು?

ಈ ನಡುವೆ ದೆಹಲಿಗೆ ಭೇಟಿ ನೀಡಿರುವ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಾಜ್ಯ ರಾಜಕಾರಣದ ಇತ್ತೀಚಿನ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ್ದಾರೆ. ಸಿಎಂ ಆಪ್ತ ಸಚಿವರು ನಡೆಸಿದ ಸಭೆಯ ಬಗ್ಗೆ ತನಗೆ ಮಾಹಿತಿ ಇಲ್ಲ. ಯಾರು ಆಪ್ತರು, ಯಾರು ಆಪ್ತರಲ್ಲ ಎಂಬುದು ತಮಗೆ ತಿಳಿದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಅಗತ್ಯವಿದೆ. ಹೀಗಾಗಿ ಮೇ 20ರೊಳಗೆ ಏನಾದರೂ ಅನಿರೀಕ್ಷಿತ ಬೆಳವಣಿಗೆಗಳು ನಡೆಯಬಹುದು ಎಂದು ಡಿ.ಕೆ.ಶಿವಕುಮಾರ್ ಸೂಚ್ಯವಾಗಿ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೇಸಿಗೆ ರಜೆಯಲ್ಲಿ ಮಕ್ಕಳ ಮೇಲೆ ನಿಗಾ ಇರಲಿ! ಜೋಕಾಲಿಯಲ್ಲಿ ಆಟವಾಡುತ್ತಿದ್ದ ವೇಳೆ ಕುಣಿಕೆ ಬಿಗಿದು ಬಾಲಕಿ ಸಾವು – Kannada News | Shivamogga Child Death: 9 Year Old Dies in Tragic Swing Accident in summer holidays

ಶಿವಮೊಗ್ಗ, ಏಪ್ರಿಲ್ 24: ಜೋಕಾಲಿಯಲ್ಲಿ ಆಟವಾಡುತ್ತಿದ್ದ ವೇಳೆ ಕುಣಿಕೆ ಬಿಗಿದು 9 ವರ್ಷದ ಬಾಲಕಿ ಸಾವನ್ನಪ್ಪಿರುವ ದುರ್ಘಟನೆ ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿ ಸಂಭವಿಸಿದೆ. ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ಬಾಲಕಿಯನ್ನು ಶಿವಮೊಗ್ಗ (Shivamogga) ನಗರದ ವಿದ್ಯಾನಗರ ನಿವಾಸಿ ಪ್ರಣಮ್ಯ ಎಂದು ಗುರುತಿಸಲಾಗಿದೆ. ಘಟನೆಯಿಂದ ಕುಟುಂಬದಲ್ಲಿ ಶೋಕ ಮಡುಗಟ್ಟಿದ್ದು, ಪಾಲಕರ ಆಕ್ರಂದನ ಮನಕಲಕುವಂತಿದೆ.

ಕೋಣೆ ಬಾಗಿಲು ಹಾಕಿಕೊಂಡು ಜೋಕಾಲಿ ಆಡುತ್ತಿದ್ದ ಬಾಲಕಿ

ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಒಂದು ವಾರದ ಹಿಂದೆ ಪ್ರಣಮ್ಯ ತನ್ನ ಚಿಕ್ಕಮ್ಮನ ಮನೆ ಲಕ್ಕಿನಕೊಪ್ಪಕ್ಕೆ ತೆರಳಿದ್ದಳು. ಏಪ್ರಿಲ್ 20ರಂದು ಚಿಕ್ಕಮ್ಮನ ಮಕ್ಕಳು ಕೀಟಲೆ ಕೊಡುತ್ತಿದ್ದ ಕಾರಣ ಪ್ರಣಮ್ಯ ಒಬ್ಬಳೇ ಕೋಣೆಯಲ್ಲಿ ಬಾಗಿಲು ಹಾಕಿಕೊಂಡು ಪಂಚೆ ಬಳಸಿ ಜೋಕಾಲಿ ಮಾಡಿಕೊಂಡು ಆಟವಾಡುತ್ತಿದ್ದಳು. ಈ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಆಟವಾಡುವ ಸಂದರ್ಭದಲ್ಲಿ ಪಂಚೆಯ ಕುಣಿಕೆ ಕುತ್ತಿಗೆಗೆ ಬಿಗಿದುಕೊಂಡ ಪರಿಣಾಮ ಉಸಿರಾಟಕ್ಕೆ ಅಡಚಣೆ ಉಂಟಾಗಿ ಪ್ರಣಮ್ಯ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿದೆ. ಕುಟುಂಬದವರು ಬಾಗಿಲು ತೆರೆಯುವಷ್ಟರಲ್ಲಿ ಬಾಲಕಿ ಪ್ರಾಣ ಕಳೆದುಕೊಂಡಿದ್ದಳು.

ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆಯ ಸುತ್ತಮುತ್ತಿನ ಪರಿಸ್ಥಿತಿಗಳನ್ನು ಪರಿಶೀಲಿಸುತ್ತಿದ್ದಾರೆ. ಮಕ್ಕಳ ಸುರಕ್ಷತೆ ಕುರಿತು ಹೆಚ್ಚಿನ ಜಾಗೃತಿ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ ಮೈಸೂರಿನಲ್ಲಿ ವಿದ್ಯುತ್ ಅವಘಡದಲ್ಲಿ ನವವಿವಾಹಿತ ಸೇರಿದಂತೆ ಇಬ್ಬರ ಸಾವು!

ಇತ್ತೀಚೆಗಷ್ಟೇ ನಡೆದ ಘಟನೆ

ಬಕೆಟ್ ನೀರಿನಲ್ಲಿ ಮುಳುಗಿ 11 ತಿಂಗಳ ಮಗುವೊಂದು ಮೃತಪಟ್ಟಿದ್ದ ಘಟನೆ ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ನಡೆದಿತ್ತು. ಈ ವೇಳೆ ಮಗುವಿನ ಸಾವಿಗೆ ನಾನೇ ಕಾರಣ ಎಂಬ ಅಪರಾಧ ಪ್ರಜ್ಞೆಯಿಂದ ಮನನೊಂದ ತಾಯಿಯೂ ಆತ್ಮಹತ್ಯೆಗೆ ಶರಣಾಗಿದ್ದರು. ಮನೆಯಿಂದಲೇ ಕೆಲಸ ಮಾಡುತ್ತಿದ್ದ ಪ್ರತಿಭಾ, ಸಂಜೆ ಟೆರೇಸ್ ಮೇಲೆ ಒಣಗಲು ಹಾಕಿದ್ದ ಬಟ್ಟೆಗಳನ್ನು ತರಲು ಹೋಗಿದ್ದರು. ಇದೇ ವೇಳೆ ಮಗು ಆಟವಾಡುತ್ತಾ ಬಚ್ಚಲು ಮನೆಗೆ ಹೋಗಿದೆ. ಅಲ್ಲಿ ನೀರಿನಿಂದ ತುಂಬಿದ್ದ ಬಕೆಟ್‌ನಲ್ಲಿ ಮುಳುಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ. ಇದನ್ನು ನೋಡಿದ್ದ ತಾಯಿಯೂ ಆಘಾತದಿಂದ ಆತ್ಮಹತ್ಯೆಗೆ ಶರಣಾಗಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rates: ಚಿನ್ನದ ಬೆಲೆ ಸತತ 4ನೇ ದಿನ ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 24th April 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಏಪ್ರಿಲ್ 24: ಚಿನ್ನದ ಬೆಲೆಯ ಸತತ ಇಳಿಕೆ ಮುಂದುವರಿದಿದೆ. ಕಳೆದ ನಾಲ್ಕೈದು ದಿನಗಳಿಂದ ಬೆಲೆಯಲ್ಲಿ ಅಲ್ಪ ಕುಸಿತಗಳಾಗುತ್ತಿವೆ. ಇವತ್ತು ಅದರ ಬೆಲೆ (Gold Rates) ಗ್ರಾಮ್​ಗೆ 55 ರೂ ತಗ್ಗಿದೆ. ವಿದೇಶಗಳಲ್ಲಿ ಹಲವೆಡೆ ಅಲ್ಪ ಏರಿಳಿತ ಮುಂದುವರಿದಿದೆ. ಬೆಳ್ಳಿ ಬೆಲೆ ಬೆಂಗಳೂರಿನಲ್ಲಿ ಯಥಾಸ್ಥಿತಿಯಲ್ಲಿದ್ದರೆ, ಚೆನ್ನೈ ಮೊದಲಾದ ಕೆಲವೆಡೆ ಗ್ರಾಮ್​ಗೆ 5 ರೂ ಕಡಿಮೆಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,40,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,52,950 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,40,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 24ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,295 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,020 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,471 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,295 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,020 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,020 ರೂ
  • ಚೆನ್ನೈ: 14,100 ರೂ
  • ಮುಂಬೈ: 14,020 ರೂ
  • ದೆಹಲಿ: 14,035 ರೂ
  • ಕೋಲ್ಕತಾ: 14,020 ರೂ
  • ಕೇರಳ: 14,020 ರೂ
  • ಅಹ್ಮದಾಬಾದ್: 14,025 ರೂ
  • ಜೈಪುರ್: 14,035 ರೂ
  • ಲಕ್ನೋ: 14,035 ರೂ
  • ಭುವನೇಶ್ವರ್: 14,020 ರೂ

ಇದನ್ನೂ ಓದಿ: ಭಾರತದ ಆರ್ಥಿಕ ಪ್ರಗತಿಗೆ ತೊಡಕಾಗಿರುವ ಅಂಶಗಳೇನು? ಬರ್ನ್​ಸ್ಟೈನ್ ಸಲಹೆ ನೀಡಿರುವ ಪರಿಹಾರಗಳೇನು?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 579 ರಿಂಗಿಟ್ (13,738 ರುಪಾಯಿ)
  • ದುಬೈ: 530.50 ಡಿರಾಮ್ (13,616 ರುಪಾಯಿ)
  • ಅಮೆರಿಕ: 147.50 ಡಾಲರ್ (13,907 ರುಪಾಯಿ)
  • ಸಿಂಗಾಪುರ: 189 ಸಿಂಗಾಪುರ್ ಡಾಲರ್ (13,934 ರುಪಾಯಿ)
  • ಕತಾರ್: 530 ಕತಾರಿ ರಿಯಾಲ್ (13,707 ರೂ)
  • ಸೌದಿ ಅರೇಬಿಯಾ: 544 ಸೌದಿ ರಿಯಾಲ್ (13,674 ರುಪಾಯಿ)
  • ಓಮನ್: 56.30 ಒಮಾನಿ ರಿಯಾಲ್ (13,786 ರುಪಾಯಿ)
  • ಕುವೇತ್: 43.60 ಕುವೇತಿ ದಿನಾರ್ (13,406 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 260 ರೂ
  • ಚೆನ್ನೈ: 265 ರೂ
  • ಮುಂಬೈ: 260 ರೂ
  • ದೆಹಲಿ: 260 ರೂ
  • ಕೋಲ್ಕತಾ: 260 ರೂ
  • ಕೇರಳ: 265 ರೂ
  • ಅಹ್ಮದಾಬಾದ್: 260 ರೂ
  • ಜೈಪುರ್: 260 ರೂ
  • ಲಕ್ನೋ: 260 ರೂ
  • ಭುವನೇಶ್ವರ್: 265 ರೂ
  • ಪುಣೆ: 260

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹೊಟ್ಟೆ ನೋವೆಂದ ಬಾಲಕಿ, ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸ್ವಲ್ಪ ಹೊತ್ತಲ್ಲೇ ಹೆರಿಗೆ,ಆಕೆ ಗರ್ಭಿಣಿ ಎಂದು ಆಗ್ಲೇ ಗೊತ್ತಾಗಿದ್ದು – Kannada News | Punjab Case: Teen Gives Birth After Stomach Pain, Alleges Assault

ಅಮೃತಸರ, ಏಪ್ರಿಲ್ 24: ಜಲಂಧರ್​ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿಗೆ ಕಾಣಿಸಿಕೊಂಡಿರುವುದು ಹೆರಿಗೆ ನೋವು, ಆಕೆ ಗರ್ಭಿಣಿ(Pregnant) ಎಂದು ಆಗಲೇ ಗೊತ್ತಾಗಿದ್ದು. ಆಕೆ ಹೆಣ್ಣುಮಗುವಿಗೆ ಜನ್ಮ ಕೊಟ್ಟಿದ್ದಾಳೆ.  ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಅಮೃತಸರ ಮೂಲದ ಯುವಕನ ವಿರುದ್ಧ ಪೋಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಪಂಜಾಬ್‌ನ ಜಲಂಧರ್ ಜಿಲ್ಲೆಯಲ್ಲಿ ಅತ್ಯಂತ ಕಳವಳಕಾರಿ ಘಟನೆಯೊಂದು ವರದಿಯಾಗಿದೆ. ಸಾಮಾನ್ಯ ಹೊಟ್ಟೆನೋವು ಎಂದು ಚಿಕಿತ್ಸೆಗೆ ಬಂದಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ಗರ್ಭಿಣಿ ಎಂಬ ವಿಷಯ ತಿಳಿದು ಕುಟುಂಬಸ್ಥರು ದಿಗಿಲುಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಾದ ಕೆಲವೇ ಹೊತ್ತಿನಲ್ಲಿ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ.

ಸಂತ್ರಸ್ತೆಯ ಚಿಕ್ಕಮ್ಮ ನೀಡಿರುವ ದೂರಿನ ಪ್ರಕಾರ, ಬಾಲಕಿಗೆ ಸುಮಾರು ಒಂದೂವರೆ ತಿಂಗಳಿನಿಂದ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿತ್ತು. ಇದಕ್ಕಾಗಿ ಮೊದಲು ಜಲಂಧರ್‌ನ ನೂರ್ಮಹಲ್‌ನಲ್ಲಿರುವ ಖಾಸಗಿ ವೈದ್ಯರ ಬಳಿ ತಪಾಸಣೆ ನಡೆಸಿ ಔಷಧಿ ಪಡೆಯಲಾಗಿತ್ತು. ಆದರೆ, ಏಪ್ರಿಲ್ 19 ರಂದು ನೋವು ತೀವ್ರಗೊಂಡಾಗ ಬಾಲಕಿಯನ್ನು ಫಿಲ್ಲೌರ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಮತ್ತಷ್ಟು ಓದಿ: ಐಆರ್​ಎಸ್ ಅಧಿಕಾರಿ ಮಗಳ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ, ಆರೋಪಿಯ ಕ್ರೌರ್ಯ, ಉಸಿರಿರುವವರೆಗೂ ಹೋರಾಡಿದ್ದ ಯುವತಿ

ಬಾಲಕಿಯನ್ನು ಪರೀಕ್ಷಿಸಿದ ಫಿಲ್ಲೌರ್‌ನ ವೈದ್ಯರು ಪರಿಸ್ಥಿತಿ ಗಂಭೀರವಾಗಿರುವುದನ್ನು ಕಂಡು ಬೇರೆ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ. ಅಲ್ಲಿ ನಡೆಸಿದ ಹೆಚ್ಚಿನ ತಪಾಸಣೆಯಲ್ಲಿ ಬಾಲಕಿ ಗರ್ಭಿಣಿಯಾಗಿರುವುದು ದೃಢಪಟ್ಟಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಸುದ್ದಿಯಿಂದ ಆಘಾತಕ್ಕೊಳಗಾದ ಚಿಕ್ಕಮ್ಮ ಬಾಲಕಿಯನ್ನು ವಿಚಾರಿಸಿದಾಗ, ಅಮೃತಸರದ ಯುವಕನೊಬ್ಬ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಕಣ್ಣೀರಿಟ್ಟಿದ್ದಾಳೆ.

ಘಟನೆಯ ಗಾಂಭೀರ್ಯವನ್ನು ಪರಿಗಣಿಸಿದ ಜಲಂಧರ್ ಗ್ರಾಮೀಣ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಏಪ್ರಿಲ್ 20 ರಂದು ಆರೋಪಿ ಬಾಲಕನ ವಿರುದ್ಧ ಪೋಕ್ಸೊ (POCSO) ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಎಫ್​ಐಆರ್ ದಾಖಲಿಸಲಿಸಿದ್ದಾರೆ.

ಘಟನೆ ನಡೆದ ಸ್ಥಳದ ವ್ಯಾಪ್ತಿಯನ್ನು ಲೆಕ್ಕಿಸದೆ ಯಾವುದೇ ಪೊಲೀಸ್ ಠಾಣೆಯಲ್ಲಿ ದಾಖಲಿಸಬಹುದಾದ ಝೀರೊ ಎಫ್‌ಐಆರ್ ಇದಾಗಿದೆ. ಬಳಿಕ ಇದನ್ನು ಘಟನೆ ನಡೆದ ವ್ಯಾಪ್ತಿಯ ಸಂಬಂಧಪಟ್ಟ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುತ್ತದೆ.

ಸದ್ಯ ಪೊಲೀಸರು ಆರೋಪಿ ಯುವಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬಾಲಕಿಯ ವಯಸ್ಸು ಮತ್ತು ಆಕೆಯ ಆರೋಗ್ಯದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವೈದ್ಯಕೀಯ ವರದಿಗಳನ್ನು ಸಂಗ್ರಹಿಸಲಾಗುತ್ತಿದೆ. ಅತ್ಯಾಚಾರದಂತಹ ಘಟನೆಗಳು ಅಪ್ರಾಪ್ತರ ಮೇಲೆ ನಡೆಯುತ್ತಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Amavasya: ಅಮಾವಾಸ್ಯೆ ಅಶುಭವೇ ? ಈ ದಿನದ ಹಿಂದಿನ ಆಧ್ಯಾತ್ಮಿಕ ಮಹತ್ವ ಇಲ್ಲಿ ತಿಳಿಯಿರಿ – Kannada News | Amavasya: Sacred Day for Ancestors, Not Inauspicious; Spiritual Significance and Pitru

ಹಿಂದೂ ಕ್ಯಾಲೆಂಡರ್‌ನಲ್ಲಿ ಪ್ರತಿ ತಿಂಗಳು ಬರುವ ‘ಅಮಾವಾಸ್ಯೆ‘ಯನ್ನು ಸಮಾಜದಲ್ಲಿ ಸಾಮಾನ್ಯವಾಗಿ “ಅಶುಭ” ಎಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಅನೇಕರು ಈ ದಿನದಂದು ಹೊಸ ಯೋಜನೆಗಳನ್ನು ಪ್ರಾರಂಭಿಸಲು ಅಥವಾ ಶುಭ ಕಾರ್ಯಗಳನ್ನು ಮಾಡಲು ಹಿಂಜರಿಯುತ್ತಾರೆ. ಆದರೆ, ಈ ದಿನದ ಹಿಂದಿನ ವಾಸ್ತವ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಗಮನಿಸಿದರೆ, ಇದು ಕೇವಲ ಕತ್ತಲೆಯ ದಿನವಲ್ಲ, ಬದಲಾಗಿ ನಮ್ಮ ಮೂಲ ಬೇರುಗಳಾದ ಪೂರ್ವಜರನ್ನು ನೆನೆಯುವ ಮತ್ತು ಕೃತಜ್ಞತೆ ಸಲ್ಲಿಸುವ ಪವಿತ್ರ ದಿನವಾಗಿದೆ ಎಂಬುದು ಅರಿವಾಗುತ್ತದೆ.

ಪೂರ್ವಜರ ಸ್ಮರಣೆಗೆ ಮೀಸಲಾದ ಪವಿತ್ರ ದಿನ:

ಧಾರ್ಮಿಕ ಶಾಸ್ತ್ರಗಳ ಪ್ರಕಾರ, ಅಮಾವಾಸ್ಯೆಯು ಪಿತೃ ದೇವತೆಗಳನ್ನು ಸ್ಮರಿಸಲು ಮತ್ತು ಅವರಿಗೆ ತರ್ಪಣಗಳನ್ನು ಅರ್ಪಿಸಲು ಅತ್ಯಂತ ಸೂಕ್ತವಾದ ದಿನವಾಗಿದೆ. ಪ್ರತಿ ತಿಂಗಳು ಬರುವ ಈ ತಿಥಿಯು ನಮ್ಮ ಅಸ್ತಿತ್ವಕ್ಕೆ ಕಾರಣರಾದ ಪೂರ್ವಜರಿಗೆ ಕೃತಜ್ಞತೆ ಸಲ್ಲಿಸುವ ಅವಕಾಶವನ್ನು ಒದಗಿಸುತ್ತದೆ. ವಿಶೇಷವಾಗಿ ಭಾದ್ರಪದ ಮಾಸದಲ್ಲಿ ಬರುವ ‘ಮಹಾಲಯ ಅಮಾವಾಸ್ಯೆ’ಯು ಅತ್ಯಂತ ಮಹತ್ವದ್ದು. ಆ ದಿನದಂದು ಭಕ್ತಿಯಿಂದ ಸಲ್ಲಿಸುವ ಶ್ರಾದ್ಧ ಮತ್ತು ತರ್ಪಣಗಳು ಪಿತೃಗಳ ಆತ್ಮಕ್ಕೆ ಶಾಂತಿ ನೀಡುತ್ತವೆ ಮತ್ತು ನಮಗೆ ವಿಶೇಷ ಫಲವನ್ನು ನೀಡುತ್ತವೆ ಎಂದು ನಂಬಲಾಗಿದೆ.

ಪಿತೃ ದೇವತೆಗಳ ಆಶೀರ್ವಾದದ ಮಹತ್ವ:

ಪುರಾಣಗಳ ಪ್ರಕಾರ, ಪಿತೃ ದೇವತೆಗಳು ನಮ್ಮ ಜೀವನದ ಬೆಳವಣಿಗೆಗೆ ಅಗತ್ಯವಾದ ಶಕ್ತಿ ಮತ್ತು ಪ್ರಜ್ಞೆಯನ್ನು ನೀಡುವ ದೈವಿಕ ಶಕ್ತಿಗಳು. ಅವರ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇದ್ದರೆ ಮಾತ್ರ ಜೀವನದಲ್ಲಿ ಶಾಂತಿ, ನೆಮ್ಮದಿ ಮತ್ತು ಸಂತೋಷ ನೆಲೆಸುತ್ತದೆ. ಹೀಗಾಗಿ, ಅವರಿಗೆ ಗೌರವಪೂರ್ವಕವಾಗಿ ಶ್ರಾದ್ಧಾದಿ ಕಾರ್ಯಗಳನ್ನು ಮಾಡುವುದು ಕೇವಲ ಸಂಪ್ರದಾಯವಲ್ಲ, ಅದು ನಮ್ಮ ಧರ್ಮನಿಷ್ಠ ಕರ್ತವ್ಯವಾಗಿದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಪುರಾಣಗಳಲ್ಲಿ ಅಮಾವಾಸ್ಯೆಯ ಹಿನ್ನೆಲೆ:

ಪಿತೃ ದೇವತೆಗಳಿಗೂ ಅಮಾವಾಸ್ಯೆಗೂ ಇರುವ ಸಂಬಂಧವನ್ನು ಮತ್ಸ್ಯ ಪುರಾಣದಂತಹ ಗ್ರಂಥಗಳಲ್ಲಿ ವಿವರವಾಗಿ ಹೇಳಲಾಗಿದೆ. ಪಿತೃಗಳನ್ನು ಸೃಷ್ಟಿಯ ಜೀವಿಗಳಿಗೆ ಶಕ್ತಿಯನ್ನು ನೀಡುವ ಏಳು ಅಂಶಗಳೆಂದು ವರ್ಣಿಸಲಾಗಿದೆ. ಒಂದು ದಂತಕಥೆಯ ಪ್ರಕಾರ, ಅಮಾವಾಸ್ಯೆಯ ಹೆಸರಿನ ಹಿಂದೆ ಸ್ವಾರಸ್ಯಕರವಾದ ಕಥೆಯಿದೆ. ಪೂರ್ವಜರು ಧರ್ಮಕ್ಕೆ ನೀಡಿದ ಆದ್ಯತೆಯಿಂದಾಗಿ, ಧರ್ಮದ ಹಾದಿ ತಪ್ಪಿದವರಿಗೆ ಶಾಪ ನೀಡುವ ಪ್ರಕ್ರಿಯೆಯಲ್ಲಿ ಈ ದಿನದ ನಾಮಕರಣದ ಹಿನ್ನೆಲೆ ಬೆಸೆದುಕೊಂಡಿದೆ. ‘ಮಾವಾಸ್ಯ’ ಎಂದರೆ ತಾಯಿಗೆ ಪ್ರಿಯವಾದವಳು; ಆದರೆ ಆ ಗುಣವಿಲ್ಲದ ಕಾರಣಕ್ಕೆ ಅದು ‘ಅಮಾವಾಸ್ಯ’ ಎಂದು ಕರೆಯಲ್ಪಟ್ಟಿತು ಎಂಬ ಪ್ರತೀತಿಯಿದೆ.

ಆಚರಣೆಗಳ ಕ್ರಮ ಮತ್ತು ಮಹತ್ವ:

ಅಮಾವಾಸ್ಯೆಯಂದು ಮಧ್ಯಾಹ್ನದ ಸಮಯದಲ್ಲಿ ಶ್ರಾದ್ಧ ವಿಧಿಗಳನ್ನು ಅಥವಾ ತರ್ಪಣಗಳನ್ನು ಅರ್ಪಿಸುವುದು ಅತ್ಯಂತ ಶುಭಪ್ರದ. ಒಂದು ವೇಳೆ ಎಲ್ಲಾ ವಿಧಿ-ವಿಧಾನಗಳನ್ನು ಪಾಲಿಸಲು ಅಸಾಧ್ಯವಾದರೂ, ಬಡವರಿಗೆ ಅಥವಾ ಬ್ರಾಹ್ಮಣರಿಗೆ ಅನ್ನದಾನ ಮಾಡುವುದರಿಂದಲೂ ಪಿತೃಗಳ ತೃಪ್ತಿ ಲಭಿಸುತ್ತದೆ ಮತ್ತು ಆ ಮೂಲಕ ಪುಣ್ಯ ಫಲವನ್ನು ಪಡೆಯಬಹುದು ಎಂದು ಶಾಸ್ತ್ರಗಳು ತಿಳಿಸುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:43 am, Fri, 24 April 26

Source link

Exit mobile version