ದಿನ ಭವಿಷ್ಯ: ಇಂದು ಈ ರಾಶಿಯವರ ಕಷ್ಟಕ್ಕೆ ಅಸಹಕಾರ, ಜೀವನದ ಮೇಲೇ ಜುಗುಪ್ಸೆ… – Kannada News | Daily Horoscope for August 07, 2026: Dakshinayana Greeshma season, Ashada Masa Krishna Paksha Friday astrology

ಮೇಷ ರಾಶಿ:

ಎಲ್ಲದಕ್ಕೂ ಕುಟುಂಬದ ಸಹಕಾರವನ್ನು ಪಡೆಯುವಿರಿ. ಇಂದು ಮನೆಯಲ್ಲಿ ಏನಾದರೂ ತೊಂದರೆ ಕಾಣಿಸಿಕೊಳ್ಳಬಹುದು. ನಿಮ್ಮ ನಿರೀಕ್ಷಿತ ಗುರಿಯನ್ನು ತಲುಪಲು‌ ನೀವು ವಿಳಂಬ ಆಗಬಹುದು. ಇನ್ನೊಬ್ಬರ ತಪ್ಪನ್ನು ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿ ನೀವು ಇರಲಾರಿರಿ. ವಿಕಲ್ಪಗಳು ನಿಮ್ಮ ಮಾರ್ಗಕ್ಕೆ ಆಗಾಗ ಅಡ್ಡಿಯನ್ನು ಕೊಡುತ್ತವೆ. ಪರೀಕ್ಷೆಗಳನ್ನು ಎದುರಿಸುವುದು ನಿಮಗೆ ಸಹಜ ಕೆಲಸವಾಗಿದೆ. ಸಂಗಾತಿಯ ಜೊತೆಗಿನ ಸಂಬಂಧವನ್ನು ಗಟ್ಟಿಯಾಗಿಸುವಿರಿ.

ವೃಷಭ ರಾಶಿ :

ಎಲ್ಲ ಷರತ್ತುಗಳಿಗೂ ಸರಿಯಾದ ನಿಬಂಧನೆ ಇರಲಿ. ಪಿತ್ರಾರ್ಜಿತ ಸಂಪತ್ತಿನಿಂದ ಸುಖವು ಇರುವುದು. ಸಹೋದರ ಜೊತೆ ಕಲಹವು ಆಗಬಹುದು. ಸಾಹಸ ಮಾಡಲು ಹೋಗುವಾಗ ಎಚ್ಚರವಿರಲಿ. ‌ಮುಖಭಂಗ ಮಾಡಿಕೊಂಡು ಬರಬೇಕಾದೀತು. ಆಪ್ತರಿಂದ ಧನವನ್ನು ನಿರೀಕ್ಷಿಸಿ, ಪಡೆದುಕೊಳ್ಳುವಿರಿ. ವಿದ್ಯಾಭ್ಯಾಸವನ್ನು ನೀವು ಅನ್ಯರ ಒತ್ತಾಯಕ್ಕೆ ಮಾಡುವಿರಿ. ಅತಿಯಾದ ಮರೆವು ಉಂಟಾಗಲಿದೆ ಇಂದು. ಪರಿಚಯವಿಲ್ಲದ ಜನರಿಂದ ನೀವು ಅಂತರವನ್ನು ಕಾಯ್ದುಕೊಳ್ಳುವಿರಿ.

ಮಿಥುನ ರಾಶಿ:

ಇಂದು ನಿಮ್ಮ ಪ್ರಭಾವವು ಜನರಿಗೆ ತಾನಾಗಿಯೇ ಗೊತ್ತಾಗುತ್ತದೆ. ಕುಟುಂಬದಲ್ಲಿ ನೆಮ್ಮದಿ ಸಿಗದೆಂದು ಮತ್ತೇನನ್ನೋ ಮಾಡಲು ಹೋಗುವುದು ಬೇಡ. ಸರ್ಕಾರದಲ್ಲಿ ಆಗಬೇಕಾದ ನಿಮ್ಮ ಕೆಲಸವು ಸ್ವಲ್ಪ ವೇಗವನ್ನು ಪಡೆಯವುದು. ಅಹಂಕಾರಕ್ಕೆ ಪೆಟ್ಟಾದರೆ ಅಹಂ ಹೋಗುತ್ತದೆ.‌ ಕೇವಲ ಕಾರ ಮಾತ್ರ ಉಳಿಯುತ್ತದೆ. ಯಾರೋ ನೀಡಿದ ವಸ್ತುಗಳನ್ನು ಉಪಯೋಗಿಸುವಾಗ ಹಿಂದೇಟು ಹಾಕುವಿರಿ. ನಿಮ್ಮ ಆಪ್ತರ ಜೊತೆ ಕೆಲವು ಸಂತೋಷದ ಕ್ಷಣಗಳನ್ನು ಕಳೆಯುವಿರಿ.

ಕರ್ಕಾಟಕ ರಾಶಿ:

ನಿಮ್ಮ ಮಾತಿನಿಂದ ಇಂದು ಆಗಬೇಕಾದ ಕೆಲಸವು ಆಗುವುದು. ನವೀನ ಆಲೋಚನೆಗಳು ಮತ್ತು ಸೃಜನಶೀಲತೆಯೊಂದಿಗೆ ಮಾಡಿದ ಕೆಲಸವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಇಂದು ನೀವು ಹೆಚ್ಚು ಶೋಕಿ ಮಾಡಲು ಇಷ್ಡಪಡುವಿರಿ. ನಿಮ್ಮ ಬಂಧುಗಳು ಹಣಕಾಸಿನ ಸಹಾಯಕ್ಕಾಗಿ ನಿಮ್ಮನ್ನು ಕೇಳಿಯಾರು. ನೀವು ದೊಡ್ಡ ಅಪಾಯವನ್ನು ತೆಗೆದುಕೊಳ್ಳುವ ಶಕ್ತಿಯನ್ನು ಇಟ್ಟುಕೊಂಡಿಲ್ಲ. ದೂರದಲ್ಲಿ ಇದ್ದರಷ್ಟೇ ಚೆನ್ನ ಎಲ್ಲವೂ ಎನ್ನುವ ಅರಿವು ಬರಬಹುದು.

ಸಿಂಹ ರಾಶಿ:

ಇಂದು ನೀವು ಪಿತ್ರಾರ್ಜಿತ ಆಸ್ತಿಯ ಬಗ್ಗೆ ಆಸಕ್ತಿ ಹೊಂದುವಿರಿ.‌ ನಿಮ್ಮ ಪ್ರಭಾವ ಇಂದು ಯಾವ ಕಾರ್ಯಕ್ಕೂ ಸಹಾಯಮಾಡದು. ಅಧಿಕಾರದ ಬಲಾಬಲವನ್ನು ತಿಳಿದುಕೊಳ್ಳ ವಾಗ್ವಾದವು ಅಧಿಕಾರಿಗಳ ನಡುವೆ ನಡೆಯಬಹುದು. ಪುಸ್ತಕ ಮಾರಾಟ ಮಾಡುವವರಿಗೆ ಲಾಭ. ಸಂಬಂಧಗಳಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳಿ ನೀವು ಹಿರಿಯರ ಮಾತನ್ನು ಕೇಳಬೇಕು ಮತ್ತು ಅನುಸರಿಸುವದೂ ಮುಖ್ಯ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಗೊಂದಲ ಸೃಷ್ಟಿಯಾಗಬಹುದು.

ಕನ್ಯಾ ರಾಶಿ:

ಇಂದು ನೀವು ಅನ್ಯಸ್ಥಳದಲ್ಲಿ ಆಕಸ್ಮಿಕವಾಗಿ ವಾಸಮಾಡಬೇಕಾಗುವುದು. ಎಷ್ಟೇ ಎಚ್ಷರವಿದ್ದರೂ ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಇದೆ.‌ ನೀವು ಏಕಾಗ್ರತೆಯ ಕೊರತೆಯನ್ನು ಅನುಭವಿಸುವಿರಿ. ಕೆಲಸವು ಮಧ್ಯಂತರವಾಗಿ ಮುಂದುವರಿಯುತ್ತದೆ. ಮಹಿಳೆಯರು ನಿಮ್ಮಿಂದ ಸಹಾಯವನ್ನು ಪಡೆಯುವರು. ವಿದ್ಯಾಭ್ಯಾಸಕ್ಕೆ ಯಾವುದಾರೂ ಅಪ್ರಬುದ್ಧ ವಿವಾದಕ್ಕೆ ಸಿಲುಕಿಕೊಂಡು ಮನಸ್ತಾಪವಾಗುವುದು. ಕಠಿಣ ಪರಿಶ್ರಮಕ್ಕೆ ಸರಿಯಾಗಿ ಯಶಸ್ಸು ಸಿಗುತ್ತದೆ.

ತುಲಾ ರಾಶಿ:

ನೀವು ಹಣಕಾಸಿನ ಮುಗ್ಗಟ್ಟು ಎದುರಿಸಬೇಕಾಗುವುದು. ದೀರ್ಘಕಾಲದ ನೋವನ್ನು ಕಡಿಮೆ ಮಾಡಿಕೊಳ್ಳಲು ಇಂದು ಪ್ರಯತ್ನಿಸುವಿರಿ. ವೈದ್ಯವೃತ್ತಿಯಲ್ಲಿ ತೊಡಗಿದ್ದರೆ ನಿಮಗೆ ಕೆಟ್ಟ ವಾರ್ತೆಯು ಬರಬಹುದು. ಬೇಡವೆಂದರೂ ನಕಾರಾತ್ಮಕ ವಿಚಾರಗಳೇ ನಿಮ್ಮ ಕಿವಿಗಳಿಗೆ ಬರಲಿವೆ. ಅನಿರೀಕ್ಷಿತವಾಗಿ ಮೃಷ್ಟಾನ್ನ ಭೋಜನ ನಿಮಗೆ ಇಂದು ಸಿಗಲಿದೆ. ಭೋಗವಸ್ತುಗಳನ್ನು ಖರೀದಿಸಿ ಹಣವನ್ನು ವ್ಯರ್ಥಮಾಡಿಕೊಳ್ಳದೇ ಅದರ ಪ್ರಯೋಜನ ಪಡೆಯಿರಿ. ಪ್ರಣಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ.

ವೃಶ್ಚಿಕ ರಾಶಿ:

ಅಕಾರಣ ಹಾಗೂ ಶೀಘ್ರ ಕೋಪಿಗಳಾಗುವಿರಿ. ನಿಮ್ಮ ಗುರಿಗಳು ಬದಲಾದಷ್ಟೂ ನಿಮ್ಮ‌ ಶ್ರಮವೂ ವ್ಯರ್ಥವಾಗಬಹುದು. ಸಂಗಾತಿಯ ಜೊತೆ ಹೆಚ್ಚು ಕಾಲ ಕಳೆಯುವ ಮನಸ್ಸಿದ್ದರೂ ಆತ್ಮೀಯತೆಯು ನಿಮ್ಮ ನಿಲುವನ್ನು ಬದಲಿಸಬಹುದು. ನಿಮ್ಮನ್ನು ನಿಮ್ಮವರಿಗೆ ಪರಿಚಯ ಮಾಡಿಕೊಡುವ ಸನ್ನಿವೇಶ ಬರಬಹುದು. ಹಿರಿಯರ ಎದುರು ಮಾತನಾಡಲು ನೀವು ಹೆದರುವಿರಿ. ಆತ್ಮವಿಶ್ವಾಸವು ಇದ್ದರೂ ಅದನ್ನು ಸರಿಯಾಗಿ ಬಳಸಿಕೊಳ್ಳಲು ಆಗದು.

ಧನು ರಾಶಿ:

ಇಂದು ನಿಮ್ಮ ಸುತ್ತಲು ವಿರೋಧಿಗಳು ಹೊಂಚು ಹಾಕಿ ನಿಮ್ಮ ಅವನತಿಯನ್ನುವ ಕಾಯುತ್ತಿರಬಹುದು. ನಿಮಗೆ ಬಂದ ಕಾರ್ಯಗಳನ್ನು ನೀವೇ ಮಾಡಿ. ಮಕ್ಕಳ‌‌ ಮೇಲೆ ನಿಮಗೆ ಬೇಸರ ಉಂಟಾಗಬಹುದು. ತಾಳ್ಮೆಯನ್ನು ಕಳೆದುಕೊಳ್ಳುವ ಸ್ಥಿತಿಯು ಎದುರಾಗಬಹುದು. ವಾಹನದಿಂದ ಅಲ್ಪ ಸಂಪಾದನೆಯಾಗುವುದು. ವಾಹನದಿಂದ ಲಾಭವನ್ನು ಪಡತುವಿರಿ. ಅತಿಯಾದ ವೇಗ ಬೇಡ. ಹಣಕಾಸಿಗೆ ಸಂಬಂಧಿಸಿದ ವೃತ್ತಿಯಲ್ಲಿ ಒತ್ತಡ ಕಾಣಿಸುವುದು.

ಮಕರ ರಾಶಿ:

ನೋವಿನ ಈ ದಿನವನ್ನು ಕಳೆಯಲು ನಿಮಗೆ ಕಷ್ಟವಾಗುವುದು. ಹೊಸ ಆರ್ಥಿಕ ವ್ಯವಹಾರಗಳನ್ನು ಇಂದು ನೀವು ಮಾಡಿರಿ. ನೀವು ಇಂದು ನಂಬಿಕೆಯನ್ನು ಸುಳ್ಳು ಮಾಡುವಿರಿ. ನಿಮ್ಮ ಪ್ರಾಬಲ್ಯವೇ ಮೇಲಾದೀತು. ನೂತನ ವಸ್ತುಗಳ ಖರೀದಿಗೆ ಹಣವು ಖರ್ಚಾದೀತು. ನೀವು ಎಲ್ಲರ ಜೊತೆ ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಕಷ್ಡವಾಗಬಹುದು. ನೀವು ಇಂದು ಅನಿರೀಕ್ಷಿತವಾಗಿ ಆರ್ಥಿಕ ಲಾಭವನ್ನು ಪಡೆಯಬಹುದು.

ಕುಂಭ ರಾಶಿ:

ನೀವು ಉತ್ತಮ ಸ್ನೇಹಿತರ ಬಳಗವನ್ನು ಹೊಂದಿರುವಿರಿ. ವೃತ್ತಿ ಜೀವನದಲ್ಲಿ ಪರಿಚಯಗಳು ಹೆಚ್ಚಾಗುತ್ತವೆ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಆಹ್ಲಾದಕರ ವಾತಾವರಣವಿರುತ್ತದೆ. ಪರರ ಮೇಲೆ ಪಶ್ಚಾತ್ತಾಪ ಭಾವ ಬರುವುದು. ಬಹಳ ದಿನಗಳಿಂದ ನಿಂತ‌ ಕಾರ್ಯಕ್ಕೆ ಚಾಲನೆ‌ ಸಿಗಲಿದೆ. ವಿವಾಹದ ಮಾತುಕತೆ ವಿಳಂಬವಾಗಿ‌ ನಿಮಗೆ ಬೇಸರ ತರಿಸಬಹುದು. ನಿಮ್ಮ ಆದಾಯದ ಜೊತೆಗೆ ನಿಮ್ಮ ಖರ್ಚುಗಳೂ ಹೆಚ್ಚಾಗುತ್ತವೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ವೃದ್ಧಿಸಲು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ.

ಮೀನ ರಾಶಿ:

ಸಹೋದರರ ನಡುವೆ ಮನೆಯ ವಿಚಾರದಲ್ಲಿ ಭಿನ್ನಾಭಿಪ್ರಾಯ ಬರಬಹುದು. ತೀರ್ಥಯಾತ್ರೆಯಲ್ಲಿ ಅನಿರೀಕ್ಷಿತನೀವು ಇಂದು ಸಂಪನ್ಮೂಲ‌ ವ್ಯಕ್ತಿಳಾಗಿ ನೀವು ಇರುವಿರಿ. ಇಷ್ಟವಾದ ವಸ್ತುಗಳ ಖರೀದಿಯಲ್ಲಿ ಆಸಕ್ತಿ ಅಧಿಕವಾಗುವುದು. ಸಮಯಕ್ಕೆ ನೀವು ಹೆಚ್ಚು ಮಹತ್ತ್ವವನ್ನು ಕೊಡಬಹುದು. ವಿಶೇಷ ವ್ಯಕ್ತಿಯ ಬಗ್ಗೆ ಒಂಟಿ ಜನರ ಆಸಕ್ತಿ ಹೆಚ್ಚಾಗುತ್ತದೆ. ಇಂದು ನಿಮ್ಮ ಭಾವನೆಗಳನ್ನು ನಿಮ್ಮ ಪ್ರೇಮಿಗೆ ಮುಕ್ತವಾಗಿ ವ್ಯಕ್ತಪಡಿಸಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಆಶ್ಲೇಷಾ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ನವಮೀ, ನಿತ್ಯನಕ್ಷತ್ರ : ರೋಹಿಣೀ, ಯೋಗ : ವ್ಯಾಘಾತ, ಕರಣ : ವಣಿಜ, ಸೂರ್ಯೋದಯ – 06 – 07 am, ಸೂರ್ಯಾಸ್ತ – 06 – 43 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:51 – 12:25, ಯಮಗಂಡ ಕಾಲ 15:34 – 17:09, ಗುಳಿಕ ಕಾಲ 07:42 – 09:16

-ಲೋಹಿತ್ ಹೆಬ್ಬಾರ್-8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಳೆ ಕೈಮಗ್ಗದ ವಸ್ತು ಖರೀದಿಸಿ, ವಿಡಿಯೋ ಹಾಕಿ; ಸ್ವದೇಶಿ ಸಂದೇಶ ನೀಡಿದ ಪ್ರಧಾನಿ ಮೋದಿ – Kannada News | PM Modi Urges Youth To Buy handloom products share videos to support weavers in New Instagram Video

ನವದೆಹಲಿ, ಆಗಸ್ಟ್ 6: ರಾಷ್ಟ್ರೀಯ ಕೈಮಗ್ಗ ದಿನದ (ಆಗಸ್ಟ್ 7) ಮುನ್ನಾದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಶೇಷ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಅವರು ಸ್ವದೇಶಿ ಸಂದೇಶವನ್ನು ಸಾರಿದ್ದಾರೆ. ದೇಶದ ಇತಿಹಾಸ, ಸ್ವಾತಂತ್ರ್ಯ ಹೋರಾಟ ಮತ್ತು ಸ್ವದೇಶಿ ಚಳುವಳಿಯ ಅಡಿಪಾಯವನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಸಾಂಪ್ರದಾಯಿಕ ನೇಕಾರ ಸಮುದಾಯದ ಆರ್ಥಿಕ ಸಬಲೀಕರಣಕ್ಕಾಗಿ ಜನರು ನಾಳೆ ಕೈಮಗ್ಗದ ಯಾವುದಾದರೂ ಒಂದು ವಸ್ತುವನ್ನಾದರೂ ಖರೀದಿಸಲು ಮನವಿ ಮಾಡಿದರು.

ಇತಿಹಾಸದ ಒಂದು ಮಹತ್ವದ ಅಧ್ಯಾಯವನ್ನು ನೆನಪಿಸಿಕೊಳ್ಳುವ ಮೂಲಕ ಪ್ರಧಾನಿ ತಮ್ಮ ವಿಡಿಯೋ ಸಂದೇಶವನ್ನು ಪ್ರಾರಂಭಿಸಿದರು. “ಸ್ನೇಹಿತರೇ, ನಾವು ಆಗಸ್ಟ್ 7, 1905 ಅನ್ನು ಮರೆಯಬಾರದು. ಆಗಸ್ಟ್ 7, 1905ರಂದು ದೇಶದ ಸ್ವಾತಂತ್ರ್ಯಕ್ಕಾಗಿ ಸ್ವದೇಶಿ ಚಳುವಳಿ ಪ್ರಾರಂಭವಾಯಿತು. ಸ್ವಾವಲಂಬಿ ಭಾರತದ ಅಡಿಪಾಯ ಹಾಕಲಾಯಿತು. ದೇಶವಾಸಿಗಳು ಬ್ರಿಟಿಷರ ವಿರುದ್ಧ ಯುದ್ಧವನ್ನು ನಡೆಸಿದರು. ಭಾರತದ ಪ್ರತಿಯೊಬ್ಬ ವ್ಯಕ್ತಿಯು ಆ ಪಡೆಗಳನ್ನು ಸೇರಿಕೊಂಡರು” ಎಂದು ಮೋದಿ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಮಾತು

ಫ್ರೆಂಡ್​ಶಿಪ್ ಡೇ ರೀತಿಯೇ ಕೈಮಗ್ಗ ದಿನ ಆಚರಿಸಿ:

“ಕಳೆದ ವಾರವಷ್ಟೇ ನೀವೆಲ್ಲರೂ ಸ್ನೇಹಿತರ ದಿನವನ್ನು ಆಚರಿಸಿದ್ದೀರಿ. ಆಗಸ್ಟ್ 7ರಂದು ಅದೇ ಉತ್ಸಾಹದಿಂದ ಕೈಮಗ್ಗದ ದಿನವನ್ನು ಆಚರಿಸಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಕೈಮಗ್ಗ ದಿನವನ್ನು ಆಚರಿಸುವುದು ಎಂದರೆ ಮನೆಯಲ್ಲಿ ಬಟ್ಟೆ ತಯಾರಿಸುವ ಪ್ರತಿಯೊಂದು ಬಡ ಕುಟುಂಬ ಮತ್ತು ನೇಕಾರ ಕುಟುಂಬವನ್ನು ಪ್ರೋತ್ಸಾಹಿಸುವುದು. ಸಣ್ಣ ಕುಟುಂಬಗಳಿಗೆ ಸಬಲೀಕರಣ ನೀಡೋಣ. ಕೈಮಗ್ಗ ದಿನದಂದು ಹ್ಯಾಂಡ್​​ಲೂಮ್​ನ ಏನನ್ನಾದರೂ ವಸ್ತುವನ್ನು ಖರೀದಿಸಲು ಮರೆಯದಿರಿ” ಎಂದು ಮೋದಿ ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಕೈಮಗ್ಗ ದಿನವನ್ನು ಕೇವಲ ಸಾಂಕೇತಿಕ ಆಚರಣೆಯಾಗಿ ನೋಡದೆ, ಕೈಮಗ್ಗ ಉತ್ಪನ್ನಗಳನ್ನು ತಮ್ಮ ದೈನಂದಿನ ಜೀವನದ ಭಾಗವಾಗಿಸಿಕೊಳ್ಳುವಂತೆ ಪ್ರಧಾನಿ ಮೋದಿ ಜನರಿಗೆ ಮನವಿ ಮಾಡಿದರು. ಕೈಮಗ್ಗದ ಬಟ್ಟೆಗಳು ಮತ್ತು ಇತರ ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವ ಹಾಗೂ ಧರಿಸುವ ಮೂಲಕ ಈ ಕ್ಷೇತ್ರಕ್ಕೆ ಬೆಂಬಲ ನೀಡಬಹುದು ಎಂದು ಅವರು ಹೇಳಿದರು.

ಇದನ್ನೂ ಓದಿ: ಫೇಸ್​​ಬುಕ್​ನಿಂದ ಪ್ರಧಾನಿ ಮೋದಿ ವಿಡಿಯೋ ಡಿಲೀಟ್ ವಿವಾದ; ಕೊನೆಗೂ ಮೆಟಾ ಮುಖ್ಯಸ್ಥ ಮಾರ್ಕ್ ಝುಕರ್​ಬರ್ಗ್ ಕ್ಷಮೆಯಾಚನೆ

ನೇಕಾರರಿಗೆ ಬೆಂಬಲ:

ಪ್ರತಿಯೊಂದು ಕೈಮಗ್ಗ ಉತ್ಪನ್ನದ ಹಿಂದೆ ಕುಶಲಕರ್ಮಿಯ ಕಠಿಣ ಪರಿಶ್ರಮ, ಕೌಶಲ್ಯ ಮತ್ತು ಸಮರ್ಪಣಾ ಭಾವದ ಕಥೆಯಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಈ ಉತ್ಪನ್ನಗಳನ್ನು ಖರೀದಿಸುವುದರಿಂದ ದೇಶಾದ್ಯಂತ ಇರುವ ಲಕ್ಷಾಂತರ ನೇಕಾರರ ಜೀವನೋಪಾಯಕ್ಕೆ ಬಲ ಸಿಗುತ್ತದೆ ಎಂದರು. ಭಾರತದ ನೇಕಾರ ಸಮುದಾಯಗಳ ಕೊಡುಗೆಯ ಬಗ್ಗೆಯೂ ಮಾತನಾಡಿದ ಮೋದಿ, ಈ ಕುಶಲಕರ್ಮಿಗಳು ಸಾಂಪ್ರದಾಯಿಕ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ. ತಮ್ಮ ಕೌಶಲ್ಯಗಳನ್ನು ಒಂದಷ್ಟು ತಲೆಮಾರುಗಳಿಂದ ಮತ್ತೊಂದಕ್ಕೆ ಬಳುವಳಿಯಾಗಿ ನೀಡಿದ್ದಾರೆ ಎಂದು ಬಣ್ಣಿಸಿದರು.

ವಿಡಿಯೋ ಮಾಡಲು ಮೋದಿ ಕರೆ:

ರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ‘ಗೆಟ್ ರೆಡಿ ವಿತ್ ಮಿ’ (GRWM) ವಿಡಿಯೋಗಳನ್ನು ಮಾಡುವಂತೆ ಯುವಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಈ ಟ್ರೆಂಡ್ ಭಾರತದ ಶ್ರೀಮಂತ ನೇಕಾರಿಕೆ ಪರಂಪರೆಯನ್ನು ಪ್ರದರ್ಶಿಸಲು ಮತ್ತು ನೇಕಾರ ಕುಟುಂಬಗಳಿಗೆ ಬೆಂಬಲ ನೀಡಲು ನೆರವಾಗಲಿದೆ ಎಂದು ಅವರು ಹೇಳಿದ್ದಾರೆ. ಬಡ ನೇಕಾರ ಕುಟುಂಬಗಳನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಮೂಲಕ ಆತ್ಮನಿರ್ಭರ ಭಾರತವನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ. ನಾವೆಲ್ಲರೂ ಕನಿಷ್ಠ ಒಂದು ಕೈಮಗ್ಗ ಉತ್ಪನ್ನವನ್ನು ಖರೀದಿಸೋಣ, ಅದರ ಬಗ್ಗೆ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳೋಣ. ಇದರಿಂದ ನಮ್ಮ ನೇಕಾರ ಸಹೋದರ-ಸಹೋದರಿಯರ ಪ್ರತಿಭೆ ಮತ್ತು ಕೌಶಲ್ಯವು ಭಾರತ ಮತ್ತು ಪ್ರಪಂಚದಾದ್ಯಂತ ಜನರನ್ನು ತಲುಪುತ್ತದೆ” ಎಂದು ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಾಲ್ ಬಾಗ್ ಫ್ಲವರ್ ಶೋನಲ್ಲಿ ಬಿಗ್ ಬಾಸ್ ಸೆಲ್ಫಿ ಝೋನ್; ಏನಿದರ ವಿಶೇಷ? – Kannada News | Bigg Boss Kannada Season 13 selfie zone at Lalbagh Flower Show 2026 details

‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada Season 13) ಆರಂಭಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಈ ಬಾರಿ ಸಾಮಾನ್ಯ ಜನರಿಗೂ ಅವಕಾಶ ಸಿಗುತ್ತಿದೆ ಎಂಬುದು ವಿಶೇಷ. ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆಯಲು ಜನರು ಅಗ್ನಿಪರೀಕ್ಷೆ ಎದುರಿಸಬೇಕಿದೆ. ಅದು ಹೇಗಿರಲಿದೆ ಎಂಬುದನ್ನು ತಿಳಿಯುವ ಕುತೂಹಲ ಎಲ್ಲರಿಗೂ ಇದೆ. ಲಾಲ್ ಬಾಗ್ ಫ್ಲವರ್ ಶೋನಲ್ಲಿ ಕೂಡ ಬಿಗ್ ಬಾಸ್ ಪ್ರಚಾರ ಮಾಡಲಾಗುತ್ತಿದೆ. ಆಗಸ್ಟ್ 6ರಿಂದ ಶುರು ಆಗಿರುವ ಫ್ಲವರ್ ಶೋನಲ್ಲಿ ಬಿಗ್ ಬಾಸ್ ಚೇರ್ ಇರಿಸಲಾಗಿದೆ. ಅಲ್ಲಿ ಸೆಲ್ಫಿ ತೆಗೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ‘ಕಲರ್ಸ್ ಕನ್ನಡ’ ವಾಹಿನಿಗೆ ಟ್ಯಾಗ್ ಮಾಡಿದ ಅದೃಷ್ಟಶಾಲಿಗಳಿಗೆ ಒಂದು ಆಫರ್ ನೀಡಲಾಗುತ್ತದೆ. ಕೆಲವು ಚುಟುವಟಿಕೆಗಳನ್ನು ಕೂಡ ಇಲ್ಲಿ ನೀಡಲಾಗುತ್ತಿದೆ. ಆಗಸ್ಟ್ 16ರಿಂದ ಬಿಗ್ ಬಾಸ್ ಅಗ್ನಿಪರೀಕ್ಷೆ ಆರಂಭ ಆಗಲಿದೆ. ಲಾಲ್ ಬಾಗ್​ನಲ್ಲಿ ಇರುವ ಬಿಗ್​ ಬಾಸ್ ಸೆಲ್ಫಿ ಝೋನ್ ಬಗ್ಗೆ ಈ ವಿಡಿಯೋದಲ್ಲಿ ಮಾಹಿತಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs SL: ಭಾರತ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಶ್ರೀಲಂಕಾ ಇಲೆವೆನ್ ತಂಡ ಪ್ರಕಟ – Kannada News | Team India Faces Sri Lanka XI in Colombo Warm Up Before August 15 Tests

ಆಗಸ್ಟ್ 15 ರಿಂದ ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನ ಭಾರತ ತಂಡ ಮೂರು ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದೆ. ಈ ಅಭ್ಯಾಸ ಪಂದ್ಯ ಆಗಸ್ಟ್ 7 ರಿಂದ ಅಂದರೆ ನಾಳೆಯಿಂದ ಕೊಲಂಬೊದ NCC ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, ಈ ಪಂದ್ಯದಲ್ಲಿ ಟೀಂ ಇಂಡಿಯಾ, ಶ್ರೀಲಂಕಾ ಇಲೆವೆನ್ ತಂಡವನ್ನು ಎದುರಿಸಲಿದೆ. ಇದೀಗ ಅಭ್ಯಾಸ ಪಂದ್ಯಕ್ಕೆ ಶ್ರೀಲಂಕಾ ಇಲೆವೆನ್ ತಂಡವನ್ನು ಪ್ರಕಟಿಸಲಾಗಿದೆ.

ಶ್ರೀಲಂಕಾ ಇಲೆವೆನ್ ತಂಡ ಪ್ರಕಟ

ಶ್ರೀಲಂಕಾ ಕ್ರಿಕೆಟ್ ಇಲೆವೆನ್ ತಂಡದ ನಾಯಕತ್ವವನ್ನು 25 ವರ್ಷದ ಸೋನಲ್ ದಿನುಷಾ ಅವರಿಗೆ ವಹಿಸಲಾಗಿದೆ. ಕಳೆದ ಜೂನ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ತವರು ಟೆಸ್ಟ್ ಸರಣಿಯಲ್ಲಿ ದಿನುಷಾ ಶ್ರೀಲಂಕಾ ಪರ ಪಾದಾರ್ಪಣೆ ಮಾಡಿದ್ದರು. ಮೂರು ಟೆಸ್ಟ್‌ಗಳಲ್ಲಿ 46.50 ರ ಸರಾಸರಿಯಲ್ಲಿ ರನ್ ಗಳಿಸಿದ ದಿನುಷಾ ಬೌಲಿಂಗ್​ನಲ್ಲೂ ಆರು ವಿಕೆಟ್‌ಗಳನ್ನು ಕಬಳಿಸಿದ್ದರು.

ಹಾಗೆಯೇ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಶ್ರೀಲಂಕಾ ತಂಡದ ಭಾಗವಾಗಿದ್ದ ನಿಶಾನ್ ಮದುಷ್ಕ ಕೂಡ ಅಭ್ಯಾಸ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ. ನಿಶಾನ್ ಮದುಷ್ಕ ತಮ್ಮ ಮೂರು ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಎಂಟು ಏಕದಿನ ಮತ್ತು 12 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇವರ ಜೊತೆಗೆ ವೇಗದ ಬೌಲರ್‌ಗಳಾದ ಲಹಿರು ಕುಮಾರ್, ವಿಶ್ವ ಫೆರ್ನಾಂಡೊ ಮತ್ತು ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ರಮೇಶ್ ಮೆಂಡಿಸ್ ಕೂಡ ಶ್ರೀಲಂಕಾ ಕ್ರಿಕೆಟ್ ಇಲೆವೆನ್ ತಂಡದ ಭಾಗವಾಗಿದ್ದಾರೆ.

IND vs SL: ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರೆ ಟೀಂ ಇಂಡಿಯಾಕ್ಕಾಗುವ ಲಾಭವೇನು?

ಉಭಯ ತಂಡಗಳು

ಶ್ರೀಲಂಕಾ ಕ್ರಿಕೆಟ್ ಇಲೆವೆನ್ ತಂಡ: ನಿಶಾನ್ ಮದುಷ್ಕ, ರವಿಂದು ರಶಾಂತ, ಪಸಿಂದು ಸೂರಿಯಬಂಡಾರ, ಪವನ್ ರತ್ನಾಯಕೆ, ಅಹಾನ್ ವಿಕ್ರಮಸಿಂಘೆ, ಸೋನಾಲ್ ದಿನುಶಾ (ನಾಯಕ), ಅಂಜಲ ಬಂಡಾರ (ವಿಕೆಟ್ ಕೀಪರ್), ನಿಪುನ್ ದನಂಜಯ, ಲಹಿರು ಕುಮಾರ, ವಿಶ್ವ ಫೆರ್ನಾಂಡೋ, ಅಸಂಕ ಮನೋಜ್, ಇಸಿತಾ ವಿಜೆಸುಂದರ, ರಮೇಶ್ ಮೆಂಡಿಸ್, ಕೇಸರ ನುವಂತ, ದಿಲುಂ ಸುದೀರ.

ಭಾರತ ಟೆಸ್ಟ್ ತಂಡ: ಶುಭ್‌ಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ರಿಷಭ್ ಪಂತ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಸರಂಶ್ ಜೈನ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಆಖಿಬ್ ನಬಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಪ್ರತಿಪಕ್ಷಗಳ ಮನವಿ ಪರಿಗಣಿಸಲು ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ – Kannada News | Rajya Sabha Chairman asks Government to consider the Oppositions demand that the Home Minister amit shah appear in the House

ನವದೆಹಲಿ, ಆಗಸ್ಟ್ 6: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ರಾಜ್ಯಸಭೆಗೆ ಆಗಮಿಸಬೇಕೆಂದು ಒತ್ತಾಯಿಸಿ ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ, ರಾಜ್ಯಸಭಾ ಸಭಾಪತಿ ಹಾಗೂ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಅಮಿತ್ ಶಾ ಅವರ ಉಪಸ್ಥಿತಿಗಾಗಿ ಪ್ರತಿಪಕ್ಷಗಳು ಮಾಡುತ್ತಿರುವ ಮನವಿಯನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಇಂದು ಸಲಹೆ ನೀಡಿದ್ದಾರೆ. ರಾಜ್ಯಸಭಾ ಸದನದಲ್ಲಿ ಪ್ರತಿಪಕ್ಷಗಳ ಸದಸ್ಯರು ‘ಅಮಿತ್ ಶಾ, ಸದನ್ ಮೇ ಆವೋ’ (ಅಮಿತ್ ಶಾ, ಸದನಕ್ಕೆ ಬನ್ನಿ) ಎಂದು ಘೋಷಣೆಗಳನ್ನು ಕೂಗುತ್ತಿದ್ದಾಗ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರನ್ನು ಉದ್ದೇಶಿಸಿ ಮಾತನಾಡಿದ ಸಭಾಪತಿಗಳು, “ಗೃಹ ಸಚಿವರು ಸದನಕ್ಕೆ ಬರಬೇಕೆಂಬ ಮನವಿಯನ್ನು ಪರಿಗಣಿಸುವಂತೆ ನಾನು ನಿಮಗೆ ವಿನಂತಿಸುತ್ತೇನೆ. ಸಂಸದೀಯ ವ್ಯವಹಾರಗಳ ಸಚಿವರಾಗಿ, ನೀವು ವಿರೋಧ ಪಕ್ಷಗಳ ಭಾವನೆಗಳನ್ನು ಗೃಹ ಸಚಿವರಿಗೆ ತಲುಪಿಸಬೇಕು” ಎಂದು ಹೇಳಿದರು.

ದೇಶದ ಪ್ರಸ್ತುತ ಪ್ರಮುಖ ವಿಷಯಗಳು ಮತ್ತು ಕಾನೂನು-ಸುವ್ಯವಸ್ಥೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವರು ರಾಜ್ಯಸಭೆಯಲ್ಲಿ ಉಪಸ್ಥಿತರಿದ್ದು ಉತ್ತರ ನೀಡಬೇಕು ಎಂದು ವಿಪಕ್ಷ ನಾಯಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಪ್ರತಿಪಕ್ಷಗಳ ನಿಯೋಗದ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿವೃತ್ತ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗೆ ಗುಡ್​ನ್ಯೂಸ್: ಬರಲಿದೆ ‘ಸಂಧ್ಯಾ ಕಿರಣ’ ಉಚಿತ ಆರೋಗ್ಯ ಸೇವೆ – Kannada News | Retired Government Employees to Benefit from Sandhya Kirana Free Health Service

ಮಂಗಳೂರು, ಆಗಸ್ಟ್​​ 06: ರಾಜ್ಯ ಸರ್ಕಾರಿ ನೌಕರರು ನಿವೃತ್ತಿಯಾದ ಬಳಿಕ 60 ರಿಂದ 70 ವರ್ಷದವರೆಗೆ ಅವರ ಮತ್ತು ಅವರ ಕುಟುಂಬಸ್ಥರ ಆರೋಗ್ಯ ರಕ್ಷಣೆಗಾಗಿ ‘ಸಂಧ್ಯಾ ಕಿರಣ’ ಎಂಬ ಸ್ವಯಂ-ಧನಸಹಾಯ ಯೋಜನೆಯನ್ನು ರೂಪಿಸಲಾಗಿದ್ದು, ಈ ಯೋಜನೆಯಡಿ ನಿವೃತ್ತ ನೌಕರರು ತಮ್ಮ ಮಾಸಿಕ ಪಿಂಚಣಿಯ ಶೇ. 1.25 ರಷ್ಟು ಮೊತ್ತವನ್ನು ಹಾಗೂ ಒಂದು ವೇಳೆ ನೌಕರ ಮೃತಪಟ್ಟರೆ ಅವರ ಕುಟುಂಬದವರು ಶೇ. 0.75 ರಷ್ಟು ಮೊತ್ತವನ್ನು ಪಾವತಿಸಿ ಉಚಿತ ಆರೋಗ್ಯ ಸೇವೆ ಪಡೆಯಬಹುದು. ಇದರೊಂದಿಗೆ, ಕೇಂದ್ರ ಸರ್ಕಾರದ ‘ವಯೋ ವಂದನಾ’ ಯೋಜನೆಯಡಿ 70 ವರ್ಷ ಮೇಲ್ಪಟ್ಟ ಎಪಿಎಲ್ ಕಾರ್ಡ್‌ದಾರರಿಗೂ ಉಚಿತ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಸಿದ್ಧವಿದ್ದು, ಕೇಂದ್ರದಿಂದ ಅನುದಾನ ಹಾಗೂ ಮಾರ್ಗದರ್ಶನದಲ್ಲಿ ಸ್ಪಷ್ಟತೆ ಕೋರಿ ಶೀಘ್ರವೇ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿಯಾಗಿ ರೂಪರೇಷೆ ಸಿದ್ಧಪಡಿಸಲಾಗುವುದು ಎಂದು ಸಚಿವ ಯು.ಟಿ. ಖಾದರ್ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

IND vs SA: ಆಫ್ರಿಕಾ ನೆಲದಲ್ಲಿ ಟೆಸ್ಟ್, ಏಕದಿನ ಸರಣಿ ಜೊತೆಗೆ ಟಿ20 ಸರಣಿಯನ್ನು ಆಡಲಿದೆ ಭಾರತ – Kannada News | IND W vs SA W: Revised Tour Schedule for December, Including New T20 Series

ಈ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಭಾರತ ಮಹಿಳಾ ತಂಡ ಬಹು ಮಾದರಿಯ ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು (India Women vs South Africa Women) ಕೈಗೊಳ್ಳಲಿದೆ. ಈ ಮೊದಲೇ ಈ ಪ್ರವಾಸದ ವೇಳಾಪಟ್ಟಿ ಬಹಿರಂಗವಾಗಿತ್ತು. ಇದೀಗ ಈ ಪ್ರವಾಸದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ. ವಾಸ್ತವವಾಗಿ ಈ ಮೊದಲು ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಏಕೈಕ ಟೆಸ್ಟ್ ಪಂದ್ಯವನ್ನು ನಡೆಸಲು ತೀರ್ಮಾನಿಸಲಾಗಿತ್ತು. ಆದರೀಗ ಏಕದಿನ ಹಾಗೂ ಟೆಸ್ಟ್ ಸರಣಿಯ ಜೊತೆಗೆ ಮೂರು ಪಂದ್ಯಗಳ ಟಿ20 ಸರಣಿಯನ್ನು ನಡೆಸಲು ತೀರ್ಮಾನಿಸಲಾಗಿದೆ.

ಕ್ರಿಕೆಟ್ ದಕ್ಷಿಣ ಆಫ್ರಿಕಾ ಇದೀಗ ಹೊಸ ಮತ್ತು ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪ್ರವಾಸದಲ್ಲಿ ಟಿ20 ಸರಣಿ ನಡೆಸುವುದಕ್ಕೂ ಕಾರಣವಿದ್ದು, ಮುಂದಿನ ವರ್ಷ ಫೆಬ್ರವರಿಯಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಉದ್ಘಾಟನಾ ಮಹಿಳಾ ಚಾಂಪಿಯನ್ಸ್ ಟ್ರೋಫಿಯ ತಯಾರಿಯ ದೃಷ್ಟಿಯಿಂದ ಎರಡು ತಂಡಗಳಿಗೆ ಇದು ಈ ಸರಣಿ ಸಹಾಯಕವಾಗಲಿದೆ.

ಟೆಸ್ಟ್ ಪಂದ್ಯದೊಂದಿಗೆ ಪ್ರವಾಸ ಆರಂಭ

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸವು ಮೂಲತಃ ಡಿಸೆಂಬರ್ 9 ರಂದು ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಆರಂಭವಾಗಬೇಕಿತ್ತು. ಇದರ ನಂತರ ಡಿಸೆಂಬರ್ 20 ರಂದು ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ಟೆಸ್ಟ್ ಪಂದ್ಯ ನಡೆಯಬೇಕಿತ್ತು. ಆದಾಗ್ಯೂ, ಹೊಸ ವೇಳಾಪಟ್ಟಿಯ ಪ್ರಕಾರ, ಪ್ರವಾಸವು ಈಗ ಡಿಸೆಂಬರ್ 9 ರಂದು ಅದೇ ಸ್ಥಳದಲ್ಲಿ ಟೆಸ್ಟ್ ಪಂದ್ಯದೊಂದಿಗೆ ಆರಂಭವಾಗಲಿದೆ. ಇದರ ನಂತರ, ಎರಡೂ ತಂಡಗಳು ಸೀಮಿತ ಓವರ್‌ಗಳ ಸರಣಿಯಲ್ಲಿ ಮುಖಾಮುಖಿಯಾಗಲಿವೆ.

ಏಕದಿನ ಮತ್ತು ಟಿ20 ಸರಣಿ ವೇಳಾಪಟ್ಟಿ

ಭಾರತ ಮತ್ತು ದಕ್ಷಿಣ ಆಫ್ರಿಕಾದ ಮಹಿಳಾ ತಂಡಗಳ ನಡುವಿನ ಸೀಮಿತ ಓವರ್‌ಗಳ ಪಂದ್ಯಗಳು ಏಕದಿನ ಸರಣಿಯೊಂದಿಗೆ ಪ್ರಾರಂಭವಾಗಲಿವೆ. ಈ ಪಂದ್ಯಗಳು ಪಾರ್ಲ್, ಕೇಪ್ ಟೌನ್ ಮತ್ತು ಬ್ಲೂಮ್‌ಫಾಂಟೈನ್‌ನಲ್ಲಿ ನಡೆಯಲಿವೆ. ಏಕದಿನ ಸರಣಿಯ ಮುಕ್ತಾಯದ ನಂತರ, ಎರಡೂ ತಂಡಗಳು ಟಿ20 ಸರಣಿಯಲ್ಲಿ ಆಡಲಿವೆ. ಮೊದಲ ಏಕದಿನ ಪಂದ್ಯ ಡಿಸೆಂಬರ್ 16 ರಂದು, ಎರಡನೇ ಪಂದ್ಯ ಡಿಸೆಂಬರ್ 19 ರಂದು ಮತ್ತು ಅಂತಿಮ ಏಕದಿನ ಪಂದ್ಯ ಡಿಸೆಂಬರ್ 22 ರಂದು ನಡೆಯಲಿದೆ. ಟಿ20 ಸರಣಿಯ ಮೊದಲ ಪಂದ್ಯ ಡಿಸೆಂಬರ್ 26 ರಂದು ಬೆನೋನಿಯಲ್ಲಿ ನಡೆಯಲಿದೆ, ಉಳಿದ ಎರಡು ಟಿ20 ಪಂದ್ಯಗಳು ಡಿಸೆಂಬರ್ 29 ಮತ್ತು 30 ರಂದು ಸತತ ಎರಡು ದಿನಗಳಲ್ಲಿ ಪೊಚೆಫ್‌ಸ್ಟ್ರೂಮ್‌ನಲ್ಲಿ ನಡೆಯಲಿವೆ.

ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ವೇಳಾಪಟ್ಟಿ

  • ಏಕೈಕ ಟೆಸ್ಟ್: ಡಿಸೆಂಬರ್ 9-12, ಗ್ಕೆಬರಾಹಾ

ಏಕದಿನ ಸರಣಿ

  • ಮೊದಲ ಏಕದಿನ ಪಂದ್ಯ: ಡಿಸೆಂಬರ್ 16, ಪಾರ್ಲ್
  • ಎರಡನೇ ಏಕದಿನ ಪಂದ್ಯ: ಡಿಸೆಂಬರ್ 19, ಕೇಪ್ ಟೌನ್
  • ಮೂರನೇ ಏಕದಿನ ಪಂದ್ಯ: ಡಿಸೆಂಬರ್ 22, ಬ್ಲೂಮ್‌ಫಾಂಟೈನ್

ಟಿ20 ಸರಣಿ

  • ಮೊದಲ ಟಿ20: ಡಿಸೆಂಬರ್ 26, ಬೆನೋನಿ
  • ಎರಡನೇ ಟಿ20: ಡಿಸೆಂಬರ್ 29, ಪೊಚೆಫ್‌ಸ್ಟ್ರೂಮ್
  • ಮೂರನೇ ಟಿ20: ಡಿಸೆಂಬರ್ 30, ಪೊಚೆಫ್‌ಸ್ಟ್ರೂಮ್

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೀಸಲಾತಿ ವ್ಯವಸ್ಥೆ ಬಗ್ಗೆ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು? – Kannada News | Reservation will continue but those uplifted should give up quota benefits RSS chief Mohan Bhagwat says

ಮುಂಬೈ, ಆಗಸ್ಟ್ 6: ಮುಂಬೈನಲ್ಲಿ ಜೆನ್​-ಜಿ ಮತ್ತು ಜೆನ್ ಆಲ್ಫಾ ವಿದ್ಯಾರ್ಥಿಗಳೊಂದಿಗಿನ ಸಂವಾದದ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಮೀಸಲಾತಿ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. “ಸಾಮಾಜಿಕ ತಾರತಮ್ಯ ಇರುವವರೆಗೆ ಮೀಸಲಾತಿ ಮುಂದುವರಿಯುತ್ತದೆ. ಇದರಲ್ಲಿ ಯಾವುದೇ ರಾಜಕೀಯ ಇರಬಾರದು. ಇದು ಸಮಾಜದಲ್ಲಿ ತಾರತಮ್ಯವನ್ನು ಸೃಷ್ಟಿಸುತ್ತದೆ, ಇದು ಏಕತೆಯನ್ನು ತರುವುದಿಲ್ಲ. ಮೀಸಲಾತಿ ಮುಂದುವರಿಯಲಿದೆ. ಆದರೆ, ಅದರ ಸೌಲಭ್ಯ ಪಡೆದು ಅಭಿವೃದ್ಧಿ ಹೊಂದಿದವರು ಸ್ವಯಂಪ್ರೇರಿತರಾಗಿ ಬೇರೆಯವರಿಗೆ ಬಿಟ್ಟುಕೊಡಬೇಕು” ಎಂದು ಹೇಳಿದ್ದಾರೆ.

ಮೀಸಲಾತಿಯ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬಂದು ಯಶಸ್ಸು ಕಂಡಿರುವ ಕುಟುಂಬಗಳು ದೊಡ್ಡ ಮನಸ್ಸು ಮಾಡಿ ಆ ಸೌಲಭ್ಯವನ್ನು ತ್ಯಾಗ ಮಾಡಬೇಕು. ಇದರಿಂದ ಅದೇ ಸಮುದಾಯದ ಇತರ ಹಿಂದುಳಿದ ಹಾಗೂ ವಂಚಿತ ಜನರಿಗೆ ಮೀಸಲಾತಿಯ ಲಾಭ ದೊರೆಯಲು ಸಹಾಯವಾಗುತ್ತದೆ. ಮೀಸಲಾತಿಯ ಲಾಭ ಪಡೆದವರೇ ಸ್ವಯಂಪ್ರೇರಿತರಾಗಿ ಸೌಲಭ್ಯ ಬಿಟ್ಟುಕೊಡಬೇಕೆಂಬ ಇಂತಹ ಸದ್ಭಾವನೆ ಮತ್ತು ಆಲೋಚನೆಗಳು ಈಗ ಮೀಸಲಾತಿ ಪಡೆಯುತ್ತಿರುವ ಸಮುದಾಯಗಳ ಒಳಗಿನಿಂದಲೇ ಹೊರಹೊಮ್ಮುತ್ತಿರುವುದು ಶ್ಲಾಘನೀಯ ಎಂದು ಅವರು ಉಲ್ಲೇಖಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs SL: ಲಂಕಾ ತಂಡದಲ್ಲೂ ಗಾಯಾಳು; ಮೊದಲ ಪಂದ್ಯಕ್ಕೆ ಸ್ಟಾರ್ ಬ್ಯಾಟರ್ ಅಲಭ್ಯ

Source link

ರಜನಿಕಾಂತ್ ಸಿನಿಮಾಗೆ ನಟಿ ಶ್ರೀಲೀಲಾ ನಾಯಕಿ? ಸತತ ಸೋಲಿನ ಬಳಿಕವೂ ಬಿಗ್ ಆಫರ್ – Kannada News | Actress Sreeleela likely to star alongside Superstar Rajinikanth in Dharman

ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಕನ್ನಡದ ನಟಿ ಶ್ರೀಲೀಲಾ (Sreeleela) ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಕೊಂಚ ಹಿನ್ನಡೆ ಅನುಭವಿಸುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರೂ ನಿರೀಕ್ಷಿತ ಗೆಲುವು ಸಿಗದೆ ನಿರಾಸೆಯಲ್ಲಿದ್ದ ಅಭಿಮಾನಿಗಳಿಗೆ ಈಗೊಂದು ಸಿಹಿ ಸುದ್ದಿ ಸಿಕ್ಕಿದೆ. ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅವರ ಮುಂಬರುವ ಬಹುನಿರೀಕ್ಷಿತ ಸಿನಿಮಾದಲ್ಲಿ ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಕಾಲಿವುಡ್ ಅಂಗಳದಲ್ಲಿ ಈ ಸುದ್ದಿ ಹರಿದಾಡುತ್ತಿದೆ.

ರಜನಿಕಾಂತ್ ಅವರ 173ನೇ ಸಿನಿಮಾವಾಗಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ‘ಧರ್ಮನ್’ ಎಂದು ಹೆಸರಿಡಲಾಗಿದ್ದು, ಅಶ್ವತ್ ಮಾರಿಮುತ್ತು ನಿರ್ದೇಶನ ಮಾಡುತ್ತಿದ್ದಾರೆ. ಕಮಲ್ ಹಾಸನ್ ಅವರ ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್’ ಸಂಸ್ಥೆಯು ಈ ಅದ್ಧೂರಿ ಚಿತ್ರವನ್ನು ನಿರ್ಮಿಸುತ್ತಿದೆ. ಈ ಪ್ರತಿಷ್ಠಿತ ಪ್ರಾಜೆಕ್ಟ್‌ನಲ್ಲಿ ಶ್ರೀಲೀಲಾ ಭಾಗವಾದರೆ, ಅವರ ವೃತ್ತಿಜೀವನಕ್ಕೆ ದೊಡ್ಡ ಮೈಲಿಗಲ್ಲಾಗಲಿದೆ.

ಗೆಲುವಿನ ನಿರೀಕ್ಷೆಯಲ್ಲಿ ಶ್ರೀಲೀಲಾ:

ಇತ್ತೀಚೆಗೆ ತಮಿಳಿನಲ್ಲಿ ‘ಪರಾಶಕ್ತಿ’ ಹಾಗೂ ತೆಲುಗಿನಲ್ಲಿ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸಿದ್ದರು. ಭಾರೀ ನಿರೀಕ್ಷೆ ಮೂಡಿಸಿದ್ದ ಈ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಲು ವಿಫಲವಾದವು. ಸದ್ಯ ತೆಲುಗು ಚಿತ್ರರಂಗದಲ್ಲಿಯೂ ಯಶಸ್ಸಿಗಾಗಿ ಕಾಯುತ್ತಿರುವ ಶ್ರೀಲೀಲಾಗೆ, ರಜನಿಕಾಂತ್ ಅವರ ಸಿನಿಮಾದ ಅವಕಾಶ ಹೊಸ ಆಶಾಕಿರಣ ಮೂಡಿಸಿದೆ.

ಬಾಲಿವುಡ್​ಗೆ ಶ್ರೀಲೀಲಾ ಎಂಟ್ರಿ:

ಶೀಘ್ರದಲ್ಲೇ ಬಾಲಿವುಡ್‌ಗೂ ಪಾದಾರ್ಪಣೆ ಮಾಡಲು ಶ್ರೀಲೀಲಾ ಸಜ್ಜಾಗಿದ್ದಾರೆ. ಕಾರ್ತಿಕ್ ಆರ್ಯನ್ ಜೊತೆ ಅವರು ನಟಿಸಿದ ಸಿನಿಮಾ ಈಗ ನಿರ್ಮಾಣ ಹಂತದಲ್ಲಿದೆ. ರಜನಿಕಾಂತ್ ಅಭಿನಯದ ಬಿಗ್ ಪ್ರಾಜೆಕ್ಟ್ ಯಶಸ್ವಿಯಾದರೆ ಹಿಂದಿ ಚಿತ್ರರಂಗದಲ್ಲೂ ಶ್ರೀಲೀಲಾ ಅವರಿಗೆ ಉತ್ತಮ ಮಾರುಕಟ್ಟೆ ಕಂಡುಕೊಳ್ಳಲು ಸಹಾಯವಾಗಲಿದೆ. ಈ ಕುರಿತು ‘ಧರ್ಮನ್’ ಚಿತ್ರತಂಡದಿಂದ ಅಧಿಕೃತ ಘೋಷಣೆ ಹೊರಬೀಳುವುದು ಒಂದೇ ಬಾಕಿಯಿದೆ.

ಇದನ್ನೂ ಓದಿ: ತಮನ್ನಾ, ಸಮಂತಾ, ಶ್ರೀಲೀಲಾ ಬಳಿಕ ಈಗ ಕಿರ್ತಿ ಸುರೇಶ್

ಶ್ರೀಲೀಲಾ, ರಜನಿಕಾಂತ್ ವಯಸ್ಸು:

ಅಂದಹಾಗೆ, ಈ ಸುದ್ದಿ ಇನ್ನೂ ಖಚಿತ ಆಗಿಲ್ಲ. ಹಾಗಿದ್ದರೂ ಕೂಡ ರಜನಿಕಾಂತ್ ಮತ್ತು ಶ್ರೀಲೀಲಾ ನಡುವಿನ ವಯಸ್ಸಿನ ಅಂತರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಶ್ರೀಲೀಲಾ ಅವರಿಗೆ ಈಗ 25 ವರ್ಷ ವಯಸ್ಸು. ರಜನಿಕಾಂತ್ ಅವರಿಗೆ 75 ವರ್ಷ ವಯಸ್ಸು. ಹಾಗಾಗಿ ಈ ಸಿನಿಮಾದಲ್ಲಿ ಅವರಿಬ್ಬರ ಪಾತ್ರ ಹೇಗಿರಲಿದೆ ಎಂಬ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version