ಮೇಕೆದಾಟು – ಕಿಶಾವು: ಅಂತಾರಾಜ್ಯ ನೀರು ನಿರ್ವಹಣೆಯ ಎರಡು ಭಿನ್ನ ಮಾದರಿಗಳು – Kannada News | Mekedatu vs Kishau: Two Contrasting Models of Interstate Water Disputes in India

ಮೇಕೆದಾಟು ಬಳಿ ಕಾವೇರಿ ನದಿImage Credit source: Ashish Gupta/500Px Plus/Getty Images

ಬೆಂಗಳೂರು, ಆಗಸ್ಟ್ 6: ಭಾರತದಲ್ಲಿ ಅಂತಾರಾಜ್ಯ ನೀರು ವಿವಾದಗಳು ಕೇವಲ ನೀರಿನ ಹಂಚಿಕೆಗೆ ಸೀಮಿತವಾಗಿರದೆ, ಕುಡಿಯುವ ನೀರು, ನೀರಾವರಿ, ವಿದ್ಯುತ್ ಉತ್ಪಾದನೆ, ಪರಿಸರ ಕಾಳಜಿ ಮತ್ತು ಪ್ರಾದೇಶಿಕ ರಾಜಕೀಯ ಹಿತಾಸಕ್ತಿಗಳ ಸವಾಲನ್ನು ಒಳಗೊಂಡಿರುತ್ತವೆ. ಮಳೆ ಅಭಾವ ಹಾಗೂ ಜಲಾಶಯಗಳ ನೀರಿನ ಮಟ್ಟ ಕುಸಿತವು ರಾಜ್ಯಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇಂತಹ ಸಮಸ್ಯೆಗಳಿಗೆ ಕೇವಲ ನ್ಯಾಯಾಲಯ ಅಥವಾ ನ್ಯಾಯಮಂಡಳಿಗಳ ತೀರ್ಪುಗಳಷ್ಟೇ ಸಾಲದು; ಸಾಂಸ್ಥಿಕ ಸಹಕಾರ ಹಾಗೂ ರಾಜಕೀಯ ಒಮ್ಮತವೂ ಅತ್ಯಗತ್ಯ.

ಸಂಘರ್ಷದ ಹಾದಿಯಲ್ಲಿ ಮೇಕೆದಾಟು

ಕಾವೇರಿ ನದಿ ನೀರು ಹಂಚಿಕೆ ವಿವಾದವು ನದಿ ತೀರದ ರಾಜ್ಯಗಳ ಸ್ಪರ್ಧಾತ್ಮಕ ಅಗತ್ಯಗಳಿಗೆ ಹಿಡಿದ ಕನ್ನಡಿಯಾಗಿದೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಸಹಜವಾಗಿ ತಮ್ಮದೇ ಭಿನ್ನ ಆದ್ಯತೆಗಳನ್ನು ಹೊಂದಿವೆ:

ಕರ್ನಾಟಕ: ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ದೀರ್ಘಕಾಲೀನ ಕುಡಿಯುವ ನೀರಿನ ಅಭದ್ರತೆಯನ್ನು ನೀಗಿಸಲು ಹಾಗೂ ಜಲವಿದ್ಯುತ್ ಉತ್ಪಾದನೆಗಾಗಿ ‘ಮೇಕೆದಾಟು ಸಮತೋಲನ ಜಲಾಶಯ’ ನಿರ್ಮಾಣವನ್ನು ಕಾರ್ಯತಂತ್ರದ ಹೂಡಿಕೆ ಎಂದು ವಾದಿಸುತ್ತದೆ.

ತಮಿಳುನಾಡು: ಕಾವೇರಿ ಡೆಲ್ಟಾ ಭಾಗದ ಕುರುವೈ ಮತ್ತು ಸಾಂಬಾ ಭತ್ತದ ಬೆಳೆಗಳ ರಕ್ಷಣೆ ಹಾಗೂ ರೈತರ ಜೀವನೋಪಾಯಕ್ಕಾಗಿ ಮೇಲ್ಮಟ್ಟದ ಕರ್ನಾಟಕದಿಂದ ನಿಯಮಿತ ನೀರು ಹರಿವನ್ನು ಬಯಸುತ್ತದೆ.

ಇದನ್ನೂ ಓದಿ: ‘ಜೆನ್-ಜಿ ದೇಶವಿರೋಧಿಗಳಲ್ಲ, ಅವರ ಬಗ್ಗೆ ಅತಿಯಾದ ನಂಬಿಕೆಯಿದೆ’; ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್

ಕಾನೂನಾತ್ಮಕ ಹಾಗೂ ರಾಜಕೀಯ ಸವಾಲುಗಳು

2018ರ ಸುಪ್ರಿಂ ಕೋರ್ಟ್ ತೀರ್ಪು “ಯಾವ ರಾಜ್ಯಕ್ಕೂ ಅಂತಾರಾಜ್ಯ ನದಿಯ ಮೇಲೆ ವಿಶೇಷ ಸ್ವಾಮ್ಯವಿಲ್ಲ” ಎಂದು ಸ್ಪಷ್ಟಪಡಿಸಿ ನೀರು ಹಂಚಿಕೆ ಯಾಂತ್ರಿಕತೆಯನ್ನು ಸ್ಥಾಪಿಸಿದರೂ, ಆಡಳಿತಾತ್ಮಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳು ನಿರಂತರವಾಗಿ ಎದುರಾಗುತ್ತಿವೆ.

ಪ್ರಾದೇಶಿಕ ಭಾವನೆಗಳು ತೀವ್ರಗೊಂಡಾಗ ಸಾರ್ವಜನಿಕ ಪ್ರತಿಭಟನೆಗಳು, ಬಂದ್‌ಗಳು ಹೆಚ್ಚಾಗಿ ರಾಜಕೀಯ ಸಂವಾದಕ್ಕೆ ಅನುಕೂಲಕರ ವಾತಾವರಣ ಸಿಗುವುದಿಲ್ಲ. ಇತ್ತೀಚೆಗೆ ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳ ನಡುವೆ ಪ್ರಸ್ತಾವಿತ ಸಭೆ ಮುಂದೂಡಲ್ಪಟ್ಟಿರುವುದು ರಾಜಕೀಯ ರಾಜೀ ಮನೋಭಾವದ ಕೊರತೆಗೆ ಸಾಕ್ಷಿಯಾಗಿದೆ.

ಸಹಕಾರದ ಮಾದರಿಯಲ್ಲಿ ಕಿಶಾವು

  • ಆರು ರಾಜ್ಯಗಳು: ಉತ್ತರ ಭಾರತದ ಆರು ರಾಜ್ಯಗಳ ನಡುವಿನ ನದಿ ನೀರು ಹಂಚಿಕೆ ವಿವಾದಕ್ಕೆ ಪರಿಹಾರ ಹುಡುಕಲಾಗಿದೆ. ಅದು ಕಿಶಾವು ಮಾಡಲ್ ಎಂದೇ ಗುರುತಾಗಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ದೆಹಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನ – ಈ ಆರು ರಾಜ್ಯಗಳನ್ನೊಳಗೊಂಡ ಕಿಶಾವು ಬಹುಪಯೋಗಿ ಯೋಜನೆಯು ಅಂತಾರಾಜ್ಯ ನದಿ ವಿವಾದ ಪರಿಹಾರಕ್ಕೆ ಭಿನ್ನವಾದ ಮತ್ತು ಯಶಸ್ವಿ ಮಾದರಿಯನ್ನು ಪ್ರಸ್ತುತಪಡಿಸುತ್ತದೆ.
  • ಹಣಕಾಸು ಮತ್ತು ಜವಾಬ್ದಾರಿ ಹಂಚಿಕೆ: ಯೋಜನೆಯ ವೆಚ್ಚವು ಪ್ರಗತಿಗೆ ತಡೆಯಾಗಿದ್ದಾಗ, ಕೇಂದ್ರ ಸರ್ಕಾರದ ನೆರವು ಮತ್ತು ಪರಿಷ್ಕೃತ ವೆಚ್ಚ ಹಂಚಿಕೆ ಸೂತ್ರವು ಆರ್ಥಿಕ ಅಡೆತಡೆಗಳನ್ನು ದಾಟಲು ನೆರವಾಗಿದೆ. ಭಾಗವಹಿಸುವ ರಾಜ್ಯಗಳು ಕಠಿಣ ಆರ್ಥಿಕ ನಿಲುವುಗಳ ಬದಲಿಗೆ, ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ 2,000 ಕೋಟಿ ರೂ.ಗಳ ವಿದ್ಯುತ್ ಘಟಕದ ವೆಚ್ಚವನ್ನು ಹಂಚಿಕೊಳ್ಳಲು ಒಪ್ಪಿಕೊಂಡಿವೆ.
  • ಸಾಂಸ್ಥಿಕ ನಮ್ಯತೆ: ರಾಜಕೀಯ ನಾಯಕತ್ವ, ಆರ್ಥಿಕ ಹೊಂದಾಣಿಕೆ ಮತ್ತು ಸಾಂಸ್ಥಿಕ ಸಂವಾದಗಳು ಒಂದಾಗಿದ್ದರಿಂದ ಕಿಶಾವು ಯೋಜನೆ ಸಹಕಾರದ ಹಾದಿಯಲ್ಲಿ ಮುನ್ನಡೆಯಿತು.

ಇದನ್ನೂ ಓದಿ: ಕಾಕ್ರೋಚ್ ಜನತಾ ಪಾರ್ಟಿಯಿಂದ ‘ಕ್ಯಾ ಬೋಲ್ತಿ ಪಬ್ಲಿಕ್’ ದೇಶವ್ಯಾಪಿ ಅಭಿಯಾನ ಘೋಷಣೆ

ಮೇಕೆದಾಟು ಮತ್ತು ಕಿಶಾವು ಮಾದರಿಗಳ ವ್ಯತ್ಯಾಸಗಳಿವು…

  • ಮೇಕೆದಾಟು ಮಾದರಿ: ಮುಖಾಮುಖಿ ಸಂಘರ್ಷ & ಕಾನೂನಾತ್ಮಕ ಹೋರಾಟ ವಿಧಾನ; ಏಕಪಕ್ಷೀಯ ಹೂಡಿಕೆ ಮತ್ತು ಅಪನಂಬಿಕೆ; ರಾಜಕೀಯ ವಿಳಂಬ & ಯೋಜನೆ ತಡೆ.
  • ಕಿಶಾವು ಮಾದರಿ: ಸಹಕಾರಿ ಒಕ್ಕೂಟ ವ್ಯವಸ್ಥೆ & ಮಾತುಕತೆ; ಸಾಮೂಹಿಕ ಹೂಡಿಕೆ & ಹೊರೆ ಹಂಚಿಕೆ; ಆರ್ಥಿಕ ಹೊಂದಾಣಿಕೆ & ಯೋಜನೆ ಪ್ರಗತಿ.

ಅಂತಾರಾಜ್ಯ ನದಿ ನೀರು ವಿವಾದಗಳನ್ನು ಕೇವಲ ಎಂಜಿನಿಯರಿಂಗ್ ಪರಿಹಾರಗಳಿಂದ ಅಥವಾ ಕೋರ್ಟ್ ತೀರ್ಪುಗಳಿಂದ ಬಗೆಹರಿಸಲಾಗುವುದಿಲ್ಲ. ಯೋಜನೆಗಳನ್ನು ಪ್ರತ್ಯೇಕ ಸ್ಪರ್ಧೆಯಾಗಿ ನೋಡದೆ, ಸಾಮೂಹಿಕ ಹೂಡಿಕೆ (Collective Investment) ಎಂದು ಪರಿಗಣಿಸಿದಾಗ ಮಾತ್ರ ಬಾಳಿಕೆ ಬರುವ ಪರಿಹಾರ ಸಾಧ್ಯ. ರಾಷ್ಟ್ರೀಯ ಅಭಿವೃದ್ಧಿ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ನಡುವೆ ಸಮತೋಲನ ಸಾಧಿಸಲು ರಾಜಕೀಯ ನಂಬಿಕೆ ಹಾಗೂ ಸಹಕಾರಿ ಒಕ್ಕೂಟ ವ್ಯವಸ್ಥೆ ಅತ್ಯಗತ್ಯ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಆಭರಣದಂಗಡಿಗಳಿಗೆ ಭರ್ಜರಿ ಸುದ್ದಿ; ಜಿಎಂಎಸ್ ಸ್ಕೀಮ್​ನಲ್ಲಿ ಶೇ. 1 ಕಮಿಷನ್ ಕೊಡಲು ಸರ್ಕಾರದ ಮುಂದೆ ಪ್ರಸ್ತಾವ – Kannada News | Jewellers to get 1pc commission in revised Gold Monetization Scheme proposal by IBJA

ನವದೆಹಲಿ, ಆಗಸ್ಟ್ 6: ಭಾರತದ ಮನೆಗಳಲ್ಲಿ ಬಳಕೆಯಾಗದೆ ಕೊಳೆಯುತ್ತಿರುವ ಚಿನ್ನ ಸಾವಿರಾರು ಟನ್​ಗಳಷ್ಟಿರಬಹುದು ಎಂಬ ಅಂದಾಜು ಇದೆ. ಇವುಗಳನ್ನು ನಗದೀಕರಿಸಿದರೆ ಆರ್ಥಿಕತೆಗೆ ಸಖತ್ ಪುಷ್ಟಿ ಸಿಗುತ್ತದೆ ಎನ್ನುವುದು ಆರ್ಥಿಕಜ್ಞರ ಅನಿಸಿಕೆ. ಈ ನಿಟ್ಟಿನಲ್ಲಿ ಸರ್ಕಾರವೂ ವಿವಿಧ ಯೋಜನೆಗಳನ್ನು ಹಾಕಿದೆ. ಅದರಲ್ಲಿ ಗೋಲ್ಡ್ ಮಾನಿಟೈಸಿಂಗ್ ಸ್ಕೀಮ್ ಅಥವಾ ಜಿಎಂಎಸ್ (GMS – ಚಿನ್ನ ನಗದೀಕರಣ ಯೋಜನೆ) ಒಂದು. ಆದರೆ, ಇದು ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಹೀಗಾಗಿ, ಸರ್ಕಾರ ಈ ಯೋಜನೆಯಲ್ಲಿ ಸ್ವಲ್ಪ ಪರಿಷ್ಕರಣೆ ತರಲು ಯೋಜಿಸುತ್ತಿದ್ದು, ಕೆಲ ಬದಲಾವಣೆಗಳನ್ನು ಮಾಡಲು ಸಿದ್ಧವಿದೆ ಎಂದು ಹೇಳಲಾಗುತ್ತಿದೆ. ಈ ಪರಿಷ್ಕೃತ ಗೋಲ್ಡ್ ಮೊನೆಟೈಸೇಶನ್ ಸ್ಕೀಮ್ ಅಡಿಯಲ್ಲಿ ಭಾರತೀಯ ಆಭರಣ ವ್ಯಾಪಾರಿಗಳು (Jewellers) ಶೇಕಡಾ 1% ರಷ್ಟು ಪ್ರೋತ್ಸಾಹಧನ/ಕಮಿಷನ್ ಪಡೆಯುವ ಸಾಧ್ಯತೆಯಿದೆ. ಒಡವೆ ವ್ಯಾಪಾರಿಗಳ ಸಂಸ್ಥೆಯಾದ ಐಬಿಜೆಎ ಸರ್ಕಾರಕ್ಕೆ ಕೆಲ ಪ್ರಸ್ತಾಪಗಳನ್ನು ಸಲ್ಲಿಸಿದೆ.

ಆಭರಣ ವ್ಯಾಪಾರಿಗಳಿಗೆ ಪ್ರೋತ್ಸಾಹಧನ

ಗ್ರಾಹಕರಿಂದ ಹಳೆಯ ಚಿನ್ನವನ್ನು ಸಂಗ್ರಹಿಸಿ, ಅದನ್ನು ರಿಫೈನರ್‌ಗಳಿಗೆ (Refiners) ತಲುಪಿಸುವ ಜವಾಬ್ದಾರಿಯನ್ನು ಆಭರಣ ವ್ಯಾಪಾರಿಗಳಿಗೆ ನೀಡಲು IBJA ಶಿಫಾರಸು ಮಾಡಿದೆ. ಈ ಸೇವೆಯಾಗಿ ರಿಫೈನರ್‌ಗಳಿಂದ ಅಥವಾ ಯೋಜನೆಯಿಂದ ಆಭರಣ ವ್ಯಾಪಾರಿಗಳಿಗೆ ಒಟ್ಟು ಚಿನ್ನದ ಮೌಲ್ಯದ 0.75% ರಿಂದ 1% ರಷ್ಟು ನೇರ ಪ್ರೋತ್ಸಾಹಧನ ಸಿಗಲಿದೆ.

ಯೋಜನೆಯ ಉದ್ದೇಶ ಮತ್ತು ಬ್ಯಾಂಕ್‌ಗಳ ತೊಡಕು

ಭಾರತೀಯ ಮನೆಗಳಲ್ಲಿ ಬಳಸದೆ ಇಟ್ಟಿರುವ (Idle Gold) ಚಿನ್ನ ಸದ್ಯ ಅಂದಾಜು 30,000 ಟನ್ ಇರಬಹುದು . ಇದನ್ನು ಔಪಚಾರಿಕ ಆರ್ಥಿಕ ವ್ಯವಸ್ಥೆಗೆ ತರುವುದು ಮತ್ತು ಚಿನ್ನದ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆಗಳು ಏರಿಕೆಯ ಹಾದಿಯಲ್ಲಿರುವುದು ಯಾಕೆ? ಇಲ್ಲಿವೆ ಪ್ರಮುಖ ಕಾರಣಗಳು

2015 ರಲ್ಲೇ ಈ ಯೋಜನೆ ಪ್ರಾರಂಭವಾದರೂ, ಬ್ಯಾಂಕ್‌ಗಳಲ್ಲಿ ಸಿಬ್ಬಂದಿ ಕೊರತೆ ಮತ್ತು ಕಷ್ಟಕರ ನಿಯಮಗಳಿಂದಾಗಿ ಇದು ಯಶಸ್ವಿಯಾಗಿರಲಿಲ್ಲ. ಇಲ್ಲಿಯವರೆಗೆ ಕೇವಲ 39 ಟನ್ ಚಿನ್ನ ಮಾತ್ರ ಸಂಗ್ರಹವಾಗಿದೆ.

ಹೊಸ ಮಾದರಿಯಲ್ಲಿ, ಬ್ಯಾಂಕ್‌ಗಳು ಹಳೆಯ ಚಿನ್ನ ಸಂಗ್ರಹಣೆಯ ಜವಾಬ್ದಾರಿಯಿಂದ (Front-end) ಮುಕ್ತವಾಗಿರುತ್ತವೆ ಮತ್ತು ಜ್ಯುವೆಲರ್‌ಗಳು ನೇರವಾಗಿ ಗ್ರಾಹಕರನ್ನು ಸಂಪರ್ಕಿಸಿ ಚಿನ್ನ ಸಂಗ್ರಹಿಸಲಿದ್ದಾರೆ.

ಗ್ರಾಹಕರು ಮತ್ತು ಆಭರಣ ವ್ಯಾಪಾರಿಗಳಿಗೆ ಆಗುವ ಪ್ರಯೋಜನ

  • ಆಭರಣ ವ್ಯಾಪಾರಿಗಳಿಗೆ: ಕಮಿಷನ್ ಸಿಗುವುದರಿಂದ ವ್ಯಾಪಾರಿಗಳು ಈ ಗೋಲ್ಡ್ ಮಾನಿಟೈಸೇಶನ್ ಯೋಜನೆಯನ್ನು ಸಕ್ರಿಯವಾಗಿ ಪ್ರಚಾರ ಮಾಡಲಿದ್ದಾರೆ. ಜೊತೆಗೆ ಮಳಿಗೆಗಳಿಗೆ ಗ್ರಾಹಕರ ಭೇಟಿ (Footfall) ಹೆಚ್ಚಾಗಲಿದೆ.
  • ಗ್ರಾಹಕರಿಗೆ: ಹತ್ತಿರದ ವಿಶ್ವಾಸಾರ್ಹ ಜ್ಯುವೆಲರಿ ಶಾಪ್‌ಗಳ ಮೂಲಕವೇ ತಮ್ಮ ಬಳಿ ಇರುವ ಉಚಿತ ಚಿನ್ನವನ್ನು ಡೆಪಾಸಿಟ್ ಮಾಡಿ ಬಡ್ಡಿ ಗಳಿಸಲು ಸುಲಭವಾದ ಮಾರ್ಗ ಸಿಗಲಿದೆ.

ಇದನ್ನೂ ಓದಿ: ಹಳೆಯ ಪಿಎಫ್ ಖಾತೆಗಳನ್ನು ಪಡೆಯಲು ಈ ತಿಂಗಳಲ್ಲೇ ಬರಲಿದೆ E-PRAAPTI ಪೋರ್ಟಲ್

ಏನಿದು ಗೋಲ್ಡ್ ಮಾನಿಟೈಸೇಶನ್ ಸ್ಕೀಮ್?

ಚಿನ್ನ ನಗದೀಕರಣ ಯೋಜನೆ ಅಥವಾ ಗೋಲ್ಡ್ ಮಾನಿಟೈಸೇಶನ್ ಸ್ಕೀಮ್​ನಲ್ಲಿ ಜನರು ತಮ್ಮಲ್ಲಿರುವ ಚಿನ್ನವನ್ನು ಡೆಪಾಸಿಟ್ ಮಾಡಬಹುದು. ಚಿನ್ನದ ಗುಣಮಟ್ಟ ಮತ್ತು ತೂಕದ ಪ್ರಕಾರ ಅದರ ಮೌಲ್ಯಮಾಪನ ಮಾಡಲಾಗುತ್ತದೆ. ಈ ಚಿನ್ನವನ್ನು ಕರಗಿಸಿ ಪರಿಶುದ್ಧ ಚಿನ್ನವಾಗಿ ಪರಿವರ್ತಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಸ್ಕೀಮ್ ಮೆಚ್ಯೂರಿಟಿ ಆದ ಬಳಿಕ ಜನರು ಶುದ್ಧ ಚಿನ್ನವನ್ನು ಪಡೆಯಬಹುದು, ಅಥವಾ ಮಾರುಕಟ್ಟೆ ಬೆಲೆಯಲ್ಲಿ ಕ್ಯಾಷ್ ಪಡೆಯಬಹುದು. ಅದರ ಜೊತೆಗೆ, ಸ್ಕೀಮ್ ಅವಧಿಯಲ್ಲಿ ಬಡ್ಡಿ ಆದಾಯವೂ ಜನರಿಗೆ ಸಿಗುತ್ತಿರುತ್ತದೆ.

ಸರ್ಕಾರಕ್ಕೆ ಮತ್ತು ಆರ್ಥಿಕತೆಗೆ ಈ ಸ್ಕೀಮ್​ನಿಂದ ಪ್ರಯೋಜನಗಳುಂಟು. ಜನರ ಬಳಿ ನಿರುಪಯುಕ್ತವಾದ ಚಿನ್ನವು ಮಾರುಕಟ್ಟೆಗೆ ಬಂದರೆ, ಚಿನ್ನದ ಆಮದನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಸರ್ಕಾರಕ್ಕೆ ಆಮದು ವೆಚ್ಚ ತಪ್ಪುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IND vs SL: ಅಭ್ಯಾಸ ಪಂದ್ಯಕ್ಕೂ ಮುನ್ನ ಕೈಗೆ ಗಾಯ ಮಾಡಿಕೊಂಡ ಶುಭ್​ಮನ್ ಗಿಲ್ – Kannada News | Shubman Gill Injury Scare: India vs Sri Lanka Practice Match in Doubt

ಆದಾಗ್ಯೂ, ಬ್ಯಾಟಿಂಗ್ ಅಭ್ಯಾಸದ ನಂತರ, ನಾಯಕ ಗಿಲ್ ಇತರ ಆಟಗಾರರೊಂದಿಗೆ ಸ್ಲಿಪ್ ಕ್ಯಾಚಿಂಗ್ ಅಭ್ಯಾಸ ಮಾಡುತ್ತಿದ್ದಾಗ, ಚೆಂಡು ಅವರ ಗಾಯಗೊಂಡ ಹೆಬ್ಬೆರಳಿಗೆ ತಗುಲಿದೆ. ಇದರಿಂದಾಗಿ ಗಿಲ್ ತೀವ್ರ ನೋವಿನಿಂದ ಬಳಲುತ್ತಿರುವುದು ಕಂಡುಬಂದಿತು. ಕೂಡಲೇ ವೈದ್ಯಕೀಯ ಸಿಬ್ಬಂದಿ ಮತ್ತೊಮ್ಮೆ ಗಿಲ್ ಅವರನ್ನು ಪರೀಕ್ಷಿಸಿತು. ಇದಾದ ಬಳಿಕ ಗಿಲ್ ಮುಂದಿನ ಅಭ್ಯಾಸದಲ್ಲಿ ಭಾಗವಹಿಸದೆ ವಿಶ್ರಾಂತಿಗೆ ತೆರಳಿದರು ಎಂದು ವರದಿಯಾಗಿದೆ(PC-PTI).

Source link

899.35 ಕೋಟಿ ವಂಚನೆ ಕೇಸ್​: ದೀಪಕ್ ಕೇಬಲ್ ಕಂಪನಿಯ 150 ಕೋಟಿ ರೂ ಮೌಲ್ಯದ ಆಸ್ತಿ ಜಪ್ತಿ – Kannada News | Deepak Cable Bank Fraud: ED Attaches Properties Worth 150 Crore

ಬೆಂಗಳೂರು, ಆಗಸ್ಟ್​​ 06: ಎಸ್​ಬಿಐ ಬ್ಯಾಂಕ್ ಒಕ್ಕೂಟಕ್ಕೆ ವಂಚನೆ, ಸಾಲದ ಹಣದ ದುರುಪಯೋಗ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಕ್ ಕೇಬಲ್ (ಇಂಡಿಯಾ) ಲಿಮಿಟೆಡ್ (Deepak Cables (India) Limited) ವ್ಯವಸ್ಥಾಪಕ ನಿರ್ದೇಶಕ ಕೆ. ವೆಂಕಟೇಶ್ವರ ರಾವ್, ನಿರ್ದೇಶಕಿ ಸತ್ಯವತಿ ಬಾಲ್​​ ಹಾಗೂ ಅವರ ಸಹವರ್ತಿ ಸಂಸ್ಥೆಗಳಿಗೆ ಸೇರಿದ ಮಾರುಕಟ್ಟೆ ಮೌಲ್ಯದ ಸುಮಾರು 150 ಕೋಟಿಗೂ ಹೆಚ್ಚು ಸ್ಥಿರಾಸ್ತಿನ್ನು ಬೆಂಗಳೂರು ವಲಯದ ಇಡಿ (ED) ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002ರ ಅಡಿಯಲ್ಲಿ ಜಪ್ತಿ ಮಾಡಿದ್ದಾರೆ.

150 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಅಕ್ರಮ ಹಣದ ಬಹುಪಾಲು ಭಾಗವನ್ನು ಬೇರೆಡೆಗೆ ವರ್ಗಾಯಿಸಲಾಗಿದ್ದು, ನೇರವಾಗಿ ಪತ್ತೆ ಹಚ್ಚಲು ಸಾಧ್ಯವಾಗದ ಕಾರಣ, ಮುಟ್ಟುಗೋಲು ಪ್ರಕ್ರಿಯೆಗೆ ಯಾವುದೇ ಅಡಚಣೆಯಾಗದಂತೆ ತಡೆಯಲು ಸಮಾನ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿದ್ದು, ಪ್ರಕರಣದ ತನಿಖೆ ಪ್ರಗತಿಯಲ್ಲಿದೆ.

ಪ್ರಕರಣ ಹಿನ್ನೆಲೆ 

ಅಕ್ರಮಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿಬಿಐ ಎಫ್‌ಐಆರ್ ದಾಖಲಿಸಿತ್ತು. ಆ ಆಧಾರದ ಮೇಲೆ ಇ.ಡಿ ತನಿಖೆ ಆರಂಭಿಸಿತ್ತು. ಕ್ರಿಮಿನಲ್ ಸಂಚು, ವಂಚನೆ, ನಕಲಿ ದಾಖಲೆಗಳ ಸೃಷ್ಟಿ ಹಾಗೂ ದುರ್ವರ್ತನೆಯ ಮೂಲಕ ಬ್ಯಾಂಕ್ ಒಕ್ಕೂಟಕ್ಕೆ ಭಾರೀ ಪ್ರಮಾಣದ ನಷ್ಟ ಉಂಟುಮಾಡಿರುವ ಆರೋಪವಿದೆ.

ಇದನ್ನೂ ಓದಿ: ಬೆಂಗಳೂರು: ಎಸ್​​ಬಿಐ ಬ್ಯಾಂಕ್ ಒಕ್ಕೂಟಕ್ಕೆ ಕೋಟ್ಯಂತರ ರೂ ವಂಚನೆ; ದೀಪಕ್ ಕೇಬಲ್ಸ್ ಲಿಮಿಟೆಡ್ ನಿರ್ದೇಶಕ ಅರೆಸ್ಟ್​

ದೀಪಕ್ ಕೇಬಲ್ ಕಂಪನಿ ಮತ್ತು ಅದರ ಪ್ರವರ್ತಕರು ಆರ್ಥಿಕ ವರದಿಗಳನ್ನು ತಿರಿಚಿರುವುದು, ಹೆಚ್ಚಿನ ಸ್ಟಾಕ್ ವರದಿಗಳು ಹಾಗೂ ಸುಳ್ಳು ಸಾಲಗಾರರ ವರದಿಗಳನ್ನು ಸಲ್ಲಿಸಿ ಬ್ಯಾಂಕ್ ಒಕ್ಕೂಟಗಳಿಂದ ವಿವಿಧ ಸಾಲ ಸೌಲಭ್ಯಗಳನ್ನು ಅಕ್ರಮವಾಗಿ ಪಡೆದುಕೊಂಡಿರುವುದು ತನಿಖೆಯಲ್ಲಿ ಈಗಾಗಲೇ ಬಯಲಾಗಿದೆ. ಯಾವುದೇ ಸರಕುಗಳ ನಿಜವಾದ ವ್ಯವಹಾರ ನಡೆಯದಿದ್ದರೂ, ಕೇವಲ ನಕಲಿ ಖರೀದಿ ಮತ್ತು ಮಾರಾಟದ ದಾಖಲೆಗಳನ್ನು ಸೃಷ್ಟಿಸಿ ಸಾಲದ ಹಣವನ್ನು ತಮ್ಮದೇ ಸಹವರ್ತಿ ಸಂಸ್ಥೆಗಳಾದ ಮೆಸರ್ಸ್ ಸೂರ್ಯ ಟ್ರಾನ್ಸ್‌ಮಿಷನ್ ಲಿಮಿಟೆಡ್, ಮೆಸರ್ಸ್ ಆಧುನಿಕ್ ಪವರ್ ಟ್ರಾನ್ಸ್‌ಮಿಷನ್ ಲಿಮಿಟೆಡ್, ಮೆಸರ್ಸ್ ದಾಂಡೇಲಿ ಫೆರೊ ಪ್ರೈವೇಟ್ ಲಿಮಿಟೆಡ್, ಮೆಸರ್ಸ್ ಶರಾವತಿ ಕಂಡಕ್ಟರ್ಸ್ ಪ್ರೈವೇಟ್ ಲಿಮಿಟೆಡ್, ಮೆಸರ್ಸ್ ವೆಂಕಟೇಶ್ವರ ಇಂಡಸ್ಟ್ರೀಸ್, ಮೆಸರ್ಸ್ ಮಾರುತಿ ಇಂಜಿನಿಯರಿಂಗ್ ವರ್ಕ್ಸ್, ಮೆಸರ್ಸ್ ಯುನಿವರ್ಸಲ್ ಟ್ರಾನ್ಸ್‌ಮಿಷನ್ ಲೈನ್ ಪ್ರಾಡಕ್ಟ್ಸ್, ಮೆಸರ್ಸ್ ಕೆಜಿಎನ್ ಎಲೆಕ್ಟ್ರಿಕಲ್ಸ್ ಹಾಗೂ ಇತರ ಸಂಸ್ಥೆಗಳ ಮೂಲಕ ಅಕ್ರಮವಾಗಿ ವರ್ಗಾಯಿಸಿರುವುದು ಸಾಬೀತಾಗಿದೆ.

ಇದನ್ನೂ ಓದಿ: ಬೆಂಗಳೂರಿನ ದೀಪಕ್ ಕೇಬಲ್ಸ್ ಲಿಮಿಟೆಡ್ ಮೇಲೆ ಇಡಿ ದಾಳಿ: ನಗದು, ಚಿನ್ನಾಭರಣ ಸೇರಿದಂತೆ 18 ಕೋಟಿ ರೂ ಫ್ರೀಜ್

ಸಾಲವಾಗಿ ಪಡೆದ ಹಣವನ್ನು ಉದ್ದೇಶಿತ ಕಾರ್ಯಗಳಿಗೆ ಬಳಸದೆ, ಖಾಸಗಿ ಈಕ್ವಿಟಿ ಹೂಡಿಕೆದಾರರಿಂದ ಈಕ್ವಿಟಿ ಶೇರ್‌ಗಳನ್ನು ಮರುಖರೀದಿಸಲು ಹಾಗೂ ಇತರ ಆಸ್ತಿಗಳನ್ನು ಖರೀದಿಸಲು ತಮ್ಮ ಸಹವರ್ತಿ ಸಂಸ್ಥೆಗಳ ಮೂಲಕ ದುರುಪಯೋಗಪಡಿಸಿಕೊಳ್ಳಲಾಗಿದೆ.

ಕೆ. ವೆಂಕಟೇಶ್ವರ ರಾವ್​  ಬಂಧನ

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಪಿಎಂಎಲ್‌ಎ ಕಾಯ್ದೆಯ ಸೆಕ್ಷನ್ 17ರ ಅಡಿಯಲ್ಲಿ ಆರೋಪಿಗಳು ಹಾಗೂ ಸಹವರ್ತಿಗಳಿಗೆ ಸೇರಿದ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿ, ಪ್ರಮುಖ ದಾಖಲೆಗಳು, ಡಿಜಿಟಲ್ ಸಾಧನಗಳು ಹಾಗೂ ರೆಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದರು. ಇನ್ನು ಇತ್ತೀಚೆಗೆ ಅಂದರೆ ಜೂನ್ 02ರಂದು ಕೆ. ವೆಂಕಟೇಶ್ವರ ರಾವ್​ರನ್ನ ಇ.ಡಿ ಅಧಿಕಾರಿಗಳು ಬಂಧಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಕ್ತ ಹೆಪ್ಪುಗಟ್ಟಲು ವಿಟಮಿನ್ ಕೆ ಏಕೆ ಮುಖ್ಯ? ಈ ಆಹಾರಗಳನ್ನು ಮಿಸ್ ಮಾಡ್ದೆ ತಿನ್ನಿ – Kannada News | Vitamin K Benefits: Foods, Deficiency Symptoms and Expert Tips

ದೇಹ ಆರೋಗ್ಯವಾಗಿರಲು ವಿಟಮಿನ್ ಎ, ಸಿ, ಡಿ ಮಾತ್ರವಲ್ಲ, ವಿಟಮಿನ್ ಕೆ ಕೂಡ ಅತ್ಯಗತ್ಯ. ರಕ್ತ ಹೆಪ್ಪುಗಟ್ಟುವಿಕೆ (Blood Clotting), ಎಲುಬುಗಳ ಬಲ, ಹೃದಯದ ಆರೋಗ್ಯ ಸೇರಿದಂತೆ ದೇಹದ ಹಲವು ಪ್ರಮುಖ ಕಾರ್ಯಗಳಲ್ಲಿ ವಿಟಮಿನ್ ಕೆ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಕೊರತೆಯಾದರೆ ಸಣ್ಣ ಗಾಯವಾದರೂ ರಕ್ತಸ್ರಾವ ಹೆಚ್ಚು ಸಮಯ ಮುಂದುವರಿಯಬಹುದು. ಅಲ್ಲದೆ ದೇಹದಲ್ಲಿ ಸುಲಭವಾಗಿ ನೀಲಿ ಕಲೆಗಳು ಮೂಡುವುದು, ಎಲುಬುಗಳು ದುರ್ಬಲವಾಗುವುದು ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಬಹುದು. ಹಾಗಾದರೆ ವಿಟಮಿನ್ ಕೆ ಯಾಕೆ ಮುಖ್ಯ, ಯಾವ ಆಹಾರಗಳಲ್ಲಿ ಹೆಚ್ಚು ಸಿಗುತ್ತದೆ ಮತ್ತು ಕೊರತೆಯ ಲಕ್ಷಣಗಳೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ವಿಟಮಿನ್ ಕೆ ದೇಹಕ್ಕೆ ಏಕೆ ಅಗತ್ಯ?

ಅಮೆರಿಕದ ಯುನೈಟೆಡ್ ಸ್ಟೇಟ್ಸ್ ದೇಶದ ನ್ಯಾಷನಲ್ ಇನ್‌ಸ್ಟಿಟ್ಯೂಟ್ಸ್ ಆಫ್ ಹೆಲ್ತ್ (NIH) – Office of Dietary Supplements ಪ್ರಕಾರ, ವಿಟಮಿನ್ ಕೆ ರಕ್ತ ಹೆಪ್ಪುಗಟ್ಟುವಿಕೆಗೆ ಅಗತ್ಯವಾದ ಪ್ರಮುಖ ಪೋಷಕಾಂಶವಾಗಿದೆ.

ದೇಹದಲ್ಲಿ ವಿಟಮಿನ್ ಕೆ ಸಮರ್ಪಕವಾಗಿದ್ದರೆ:

  • ಗಾಯವಾದಾಗ ರಕ್ತಸ್ರಾವವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
  • ಎಲುಬುಗಳನ್ನು ಬಲವಾಗಿರಿಸುತ್ತದೆ.
  • ಕ್ಯಾಲ್ಸಿಯಂ ಅನ್ನು ಸರಿಯಾಗಿ ಬಳಸಿಕೊಳ್ಳಲು ದೇಹಕ್ಕೆ ನೆರವಾಗುತ್ತದೆ.
  • ಮೂಳೆ ಸಾಂದ್ರತೆಯನ್ನು (Bone Density) ಕಾಪಾಡಲು ಸಹಕಾರಿ.
  • ಕೆಲವು ಅಧ್ಯಯನಗಳ ಪ್ರಕಾರ ಹೃದಯ ಮತ್ತು ರಕ್ತನಾಳಗಳ ಆರೋಗ್ಯಕ್ಕೂ ನೆರವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಪ್ರೋಟೀನ್ ಕೊರತೆಯಿಂದ ಕೂದಲು ಉದುರುತ್ತದೆಯೇ? ತಜ್ಞರು ನೀಡಿದ ವಿವರಣೆ ಇಲ್ಲಿದೆ

ವಿಟಮಿನ್ ಕೆ ಸಮೃದ್ಧ ಆಹಾರಗಳು

  • ಪಾಲಕ್ (Spinach)
  • ಕೇಲ್ (Kale)
  • ಬ್ರೋಕೋಲಿ
  • ಎಲೆಕೋಸು
  • ಸಾಸಿವೆ ಸೊಪ್ಪು
  • ಇತರ ಹಸಿರು ಎಲೆ ತರಕಾರಿಗಳು
  • ಸೋಯಾಬೀನ್ ಎಣ್ಣೆ
  • ಕ್ಯಾನೋಲಾ ಎಣ್ಣೆ
  • ಮೊಟ್ಟೆ
  • ಮಾಂಸ
  • ಕೆಲವು ಡೈರಿ ಉತ್ಪನ್ನಗಳು

ವಿಟಮಿನ್ ಕೆ ಕೊರತೆಯ ಲಕ್ಷಣಗಳು

  • ಗಾಯವಾದ ನಂತರ ರಕ್ತಸ್ರಾವ ಹೆಚ್ಚು ಸಮಯ ಮುಂದುವರಿಯುವುದು
  • ದೇಹದಲ್ಲಿ ಸುಲಭವಾಗಿ ನೀಲಿ ಕಲೆಗಳು (Bruising) ಮೂಡುವುದು
  • ಮೂಗಿನಿಂದ ಆಗಾಗ ರಕ್ತ ಬರುವುದು
  • ಹಲ್ಲಿನ ಮಾಂಸದಿಂದ ರಕ್ತಸ್ರಾವ
  • ಎಲುಬುಗಳು ದುರ್ಬಲವಾಗುವುದು
  • ಮೂಳೆ ಮುರಿತದ ಅಪಾಯ ಹೆಚ್ಚಾಗುವುದು
    ಈ ಲಕ್ಷಣಗಳು ಬೇರೆ ಆರೋಗ್ಯ ಸಮಸ್ಯೆಗಳ ಕಾರಣದಿಂದಲೂ ಕಾಣಿಸಬಹುದು. ಆದ್ದರಿಂದ ವೈದ್ಯರ ಸಲಹೆ ಪಡೆಯುವುದು ಮುಖ್ಯ.

ವಿಟಮಿನ್ ಕೆ ಸಪ್ಲಿಮೆಂಟ್ ಅಗತ್ಯವೇ?

ಬಹುತೇಕ ಆರೋಗ್ಯವಂತ ವ್ಯಕ್ತಿಗಳಿಗೆ ಸಮತೋಲನ ಆಹಾರದಿಂದಲೇ ಸಾಕಷ್ಟು ವಿಟಮಿನ್ ಕೆ ದೊರೆಯುತ್ತದೆ. ಆದರೆ, ಕೆಲವು ಜೀರ್ಣಾಂಗ ಸಮಸ್ಯೆಗಳು, ಪೋಷಕಾಂಶ ಹೀರಿಕೊಳ್ಳುವ ಸಮಸ್ಯೆಗಳು, ಕೆಲವು ಔಷಧಿಗಳ ಬಳಕೆ ಇಂತಹ ಸಂದರ್ಭಗಳಲ್ಲಿ ವೈದ್ಯರು ಮಾತ್ರ ವಿಟಮಿನ್ ಕೆ ಸಪ್ಲಿಮೆಂಟ್‌ಗಳನ್ನು ಸೂಚಿಸಬಹುದು. ಮುಖ್ಯವಾಗಿ ರಕ್ತವನ್ನು ತೆಳುವಾಗಿಸುವ (Blood Thinners) ಔಷಧಿಗಳನ್ನು ಸೇವಿಸುವವರು ವೈದ್ಯರ ಸಲಹೆಯಿಲ್ಲದೆ ವಿಟಮಿನ್ ಕೆ ಸಪ್ಲಿಮೆಂಟ್ ಸೇವಿಸಬಾರದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊದಲ ಸಭೆಯಲ್ಲೇ ಅಧಿಕಾರಿಗಳ ಬೆವರಿಳಿಸಿದ ನೂತನ ಸಚಿವ ಕಾಶಪ್ಪನವರ್: ಕಚೇರಿಗಳಿಗೆ ತಡವಾಗಿ ಬರುವವರಿಗೆ ವಾರ್ನ್ – Kannada News | Minister Vijayanand Kashappanavar angry on officials in his first meeting: Warning for those arriving late to offices

ವಿಜಯಾನಂದ ಕಾಶಪ್ಪನವರ್Image Credit source: tv9 kannada

ಬಾಗಲಕೋಟೆ, ಆಗಸ್ಟ್​​ 06: ಬಾಗಲಕೋಟೆ (bagalkot) ಜಿಲ್ಲೆಯ ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಸಭೆಯಲ್ಲೇ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೀವ್ರ ತರಾಟೆಗೆ ತೆಗೆದುಕೊಂಡರು. ಕುಡಿಯುವ ನೀರಿನ ವಿಚಾರವಾಗಿ ಸಭೆಯಲ್ಲಿ ಅಧಿಕಾರಿಗಳ ಬೆವರಿಳಿಸಿದರು. ಅಷ್ಟೇ ಅಲ್ಲದೆ ಕಚೇರಿಗಳಿಗೆ ತಡವಾಗಿ ಬರುವ ಅಧಿಕಾರಗಳಿಗೂ ಖಡಕ್​​ ಎಚ್ಚರಿಕೆ ನೀಡಿದ್ದಾರೆ.

ಅಧಿಕಾರಿಗಳನ್ನ ತೀವ್ರ ತರಾಟೆ ತೆಗೆದುಕೊಂಡ ವಿಜಯಾನಂದ ಕಾಶಪ್ಪನವರ್

ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಸಚಿವ ವಿಜಯಾನಂದ ಕಾಶಪ್ಪನವರ್ ಅಧ್ಯಕ್ಷತೆಯಲ್ಲಿ ಬರ ಪರಿಸ್ಥಿತಿ ಕುರಿತು ಸಭೆ ನಡೆಯಿತು. ಈ ವೇಳೆ ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ಮತ್ತು ಕಾಮಗಾರಿಗಳ ವಿಳಂಬದ ಬಗ್ಗೆ ಸಚಿವರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇಳಕಲ್ ನಗರಸಭೆ ಕಮಿಷನರ್ ಶ್ರೀನಿವಾಸ ಜಾಧವ್ ಹಾಗೂ ಅಮೀನಗಢ ಪಟ್ಟಣ ಪಂಚಾಯಿತಿ ಅಧಿಕಾರಿ ವಿದ್ಯಾ ಅವರಿಗೆ ಎಚ್ಚರಿಕೆ ನೀಡಿದ ಸಚಿವರು, ‘ನೀವು ಕೆಲಸ ಮಾಡುವುದು ಇಳಕಲ್ ಮತ್ತು ಅಮೀನಗಢದಲ್ಲಿ, ಆದರೆ ವಾಸವಿರುವುದು ಬಾಗಲಕೋಟೆಯಲ್ಲಿ. ಮಧ್ಯಾಹ್ನದ ಮೇಲೆ ಕಚೇರಿಗೆ ಬಂದರೆ ಸಾರ್ವಜನಿಕರ ಕೆಲಸಗಳು ಹೇಗೆ ಆಗಬೇಕು?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Minister Vijayanand Kashappanavar Oath: ಪಂಚಪೀಠಾಧೀಶ್ವರ ಹೆಸರಲ್ಲಿ ಕಾಶಪ್ಪನವರ್ ಪ್ರಮಾಣವಚನ

ಇದೇ ವೇಳೆ, ಸಾರ್ವಜನಿಕರಿಗೆ ಸಿಗದ ಹಾಗೂ ಸರಿಯಾಗಿ ಸ್ಪಂದಿಸದ ಪಿಡಿಒಗಳ ವಿರುದ್ಧವೂ ಗರಂ ಆದ ಸಚಿವ ‘ಇನ್ಮೇಲೆ ಇದೆಲ್ಲ ನಡೆಯುವುದಿಲ್ಲ. ಸಾರ್ವಜನಿಕರಿಗೆ ಲಭ್ಯವಿರುವಂತೆ ಸೂಚನೆ ನೀಡುವಂತೆ’ ಜಿಲ್ಲಾ ಪಂಚಾಯತ ಸಿಇಒಗೆ ನಿರ್ದೇಶನ ನೀಡಿದರು.

ಆರ್​ಟಿಓ ಅಧಿಕಾರಿಗಳ ವಿರುದ್ಧ ಗರಂ 

ಸಭೆಗೆ ಆರ್​ಟಿಓ ಅಧಿಕಾರಿಗಳು ಗೈರಾಗಿದ್ದಕ್ಕೆ ತೀವ್ರ ಆಕ್ರೋಶಗೊಂಡ ಸಚಿವ, ‘ಆರ್​ಟಿಓ ಅಧಿಕಾರಿಗಳಿಗೆ ಸರ್ಕಾರಕ್ಕೂ ಸಂಬಂಧವೇ ಇಲ್ಲವೇ? ಸಭೆಗೆ ಬಾರದೆ ಜನಪ್ರತಿನಿಧಿಗಳಿಗೆ ಗೌರವ ನೀಡುವುದಿಲ್ಲವೇ?’ ಎಂದು ಪ್ರಶ್ನಿಸಿದರು. ‘ಮುಂದಿನ ಸಭೆಯಲ್ಲಿ ಎಲ್ಲಾ ಅಧಿಕಾರಿಗಳು ಇರಬೇಕು. ಸಾರ್ವಜನಿಕ ದೂರು ಬಂದರೆ ಸಹಿಸುವುದಿಲ್ಲ. ಮುಂದೆ ನೀವು ಪರಿಣಾಮ ಎದುರಿಸಬೇಕಾಗುತ್ತದೆ’ ಎಂದರು.

ಇದನ್ನೂ ಓದಿ: ಸಚಿವ ಸ್ಥಾನ ಹಂಚಿಕೆಯಲ್ಲಿ ಪೇಮೆಂಟ್ ಸೀಟ್ ಆರೋಪ; ಕೈ ನಾಯಕರ ಆಡಿಯೋ ವೈರಲ್!

ಇದೇ ವೇಳೆ ಶಾಸಕ ಉಮೇಶ ಮೇಟಿ ಮಾತನಾಡಿ, ‘ಕೆಲವು ಅಧಿಕಾರಿಗಳಿಗೆ ಫೋನ್ ಮಾಡಿದರೆ ನಾನ್ಯಾರು ಎಂದು ಉದ್ಧಟತನ ತೋರುತ್ತಾರೆ’ ಎಂದು ಸಚಿವರ ಗಮನಕ್ಕೆ ತಂದರು. ‘ಎಲ್ಲಾ ಕ್ಷೇತ್ರದ ಎಂಎಲ್​ಎ,‌ ಎಂಎಲ್​ಸಿಗಳಿಗೆ ಭೇಟಿಯಾಗಿ ಮೊದಲು ಪರಿಚಯ ಮಾಡಿಕೊಂಡ ನಿಮ್ಮ ನಂಬರ್ ಕೊಟ್ಟು ಬನ್ನಿ’ ಎಂದು ಸಚಿವ ವಿಜಯಾನಂದ ಕಾಶಪ್ಪನವರ್​​ ಹೇಳಿದ್ದಾರೆ.

ನೂತನ ಸಚಿವ ಕಾಶಪ್ಪನವರ್ ಹೇಳಿದ್ದಿಷ್ಟು

ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನಾನು ಎಲ್ಲರನ್ನೂ ವಿಶ್ವಾಸದಿಂದ ಕರೆದುಕೊಂಡು ಹೋಗುವೆ. ಮುಧೋಳ ಕ್ಷೇತ್ರದಲ್ಲಿ ಬರ ಪರಿಸ್ಥಿತಿ ವೀಕ್ಷಣೆಗೆ ತೆರಳಿದ್ದೆ. ಈ ವೇಳೆ ಆರ್​.ಬಿ.ತಿಮ್ಮಾಪುರ ಅವರನ್ನ ಭೇಟಿಯಾಗಿದ್ದೇನೆ. ಆಡಿಯೋ ವೈರಲ್ ಆದ ವಿಚಾರದ ಕುರಿತು ಮಾತನಾಡಿಲ್ಲ. ನಂಜಯ್ಯನಮಠ ಅವರು ದೂರು ಕೊಡಲಿ, ತನಿಖೆಯಾಗಲಿ. ನಾನು ಕೂಡ ಬಾಗಲಕೋಟೆ ಎಸ್​​ಪಿಯವರಿಗೆ ಹೇಳ್ತೇನೆ. ಸತ್ಯಾಸತ್ಯತೆ ಬಗ್ಗೆ ತನಿಖೆಯಾಗಲಿ’ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಅನಾವರಣ ಆಗಲಿದೆ ಬೆಂಗಳೂರಿನ ಮೆಜೆಸ್ಟಿಕ್ ಲೋಕ – Kannada News | Vinay Rajkumar talks about City Lights movie and Majestic Bengaluru

ದುನಿಯಾ ವಿಜಯ್ ಅವರ ಪುತ್ರಿ ಮೋನಿಷಾ ಹಾಗೂ ನಟ ವಿನಯ್ ರಾಜ್​ಕುಮಾರ್ (Vinay Rajkumar) ಅವರು ‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಚಿತ್ರಕ್ಕೆ ದುನಿಯಾ ವಿಜಯ್ ನಿರ್ದೇಶನ ಮಾಡಿದ್ದಾರೆ. ‘ಈ ಸಿನಿಮಾದಿಂದ ನಾನು ಸಾಕಷ್ಟು ವಿಷಯ ಕಲಿತೆ. ಬೆಂಗಳೂರಿಗೆ ಬೇರೆ ಬೇರೆ ಊರುಗಳಿಂದ ಪ್ರತಿ ದಿನ ಸಾವಿರಾರು ಜನರು ಬರುತ್ತಾರೆ. ನನ್ನ ಪಾತ್ರ ಕೂಡ ಈ ಸಿನಿಮಾದಲ್ಲಿ ಹಾಗೆಯೇ ಇದೆ. ಪ್ರೇಕ್ಷಕರಿಗೆ ನನ್ನ ಪಾತ್ರ ಕನೆಕ್ಟ್ ಆಗುತ್ತದೆ. ಮೆಜೆಸ್ಟಿಕ್​ನಲ್ಲಿ ಜನರಿಗೆ ಹಲವು ರೀತಿಯ ಅನುಭವ ಆಗುತ್ತದೆ. ಮೆಜೆಸ್ಟಿಕ್ ಎಂದರೆ ಏನು ಎಂಬುದು ಗೊತ್ತೇ ಇಲ್ಲದ ಜನರಿಗೂ ಕೂಡ ಈ ಸಿನಿಮಾ ಒಂದು ರೀತಿ ಅನುಭವ ನೀಡುತ್ತದೆ’ ಎಂದು ವಿನಯ್ ರಾಜ್​ಕುಮಾರ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಂದನ್ ನಿಲೇಕಣಿ ಪ್ರಕಾರ ಎಐ ಪರಿಣಾಮದಲ್ಲಿ ಕೆಲಸಗಳು ಎಲ್ಲಿ ಹೆಚ್ಚು ನಷ್ಟ, ಎಲ್ಲಿ ಹೆಚ್ಚು ಸೃಷ್ಟಿ? – Kannada News | Nandan Nilekani tells where will be the most job disruptions by AI

ನವದೆಹಲಿ, ಆಗಸ್ಟ್ 6: ಎಐನಿಂದ ಯಾವ್ಯಾವ ಕೆಲಸಗಳು ಹೋಗುತ್ತವೆ ಎನ್ನುವ ಚರ್ಚೆ ಕಳೆದ ಒಂದೆರಡು ವರ್ಷದಿಂದ ಕೇಳಿಬರುತ್ತಲೇ ಇದೆ. ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರು ಈ ವಿಚಾರದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಮತ್ತು ಆಟೋಮೇಷನ್‌ನಿಂದಾಗಿ ಉದ್ಯೋಗ ಮಾರುಕಟ್ಟೆಯಲ್ಲಿ ಉಂಟಾಗುವ ಬದಲಾವಣೆಗಳ ಕುರಿತು ಅವರು ಮಾತನಾಡಿದ್ದಾರೆ. ಅವರ ಪ್ರಕಾರ, ದೊಡ್ಡ ಸಂಸ್ಥೆಗಳು ನಿರ್ದಿಷ್ಟ ಮತ್ತು ಪುನರಾವರ್ತಿತ ಪ್ರಕ್ರಿಯೆಗಳನ್ನು (Routine & Standardised Tasks) ಹೆಚ್ಚು ಹೊಂದಿರುವ ಕಾರಣ, ಅವುಗಳ ಮೇಲೆಯೇ AI ಮತ್ತು ಆಟೋಮೇಷನ್‌ನ ಪ್ರಭಾವ ಹೆಚ್ಚು ಬೀಳಲಿದೆ.

ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ವೆಚ್ಚವನ್ನು ತಗ್ಗಿಸಲು ದೊಡ್ಡ ಕಂಪನಿಗಳು AI ಅನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳುವುದರಿಂದ, ಭವಿಷ್ಯದಲ್ಲಿ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಉದ್ಯೋಗಗಳ ಸೃಷ್ಟಿ ನಿಧಾನವಾಗಿ, ಉದ್ಯೋಗ ನಷ್ಟ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ನಿಲೇಕಣಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಆಭರಣದಂಗಡಿಗಳಿಗೆ ಭರ್ಜರಿ ಸುದ್ದಿ; ಜಿಎಂಎಸ್ ಸ್ಕೀಮ್​ನಲ್ಲಿ ಶೇ. 1 ಕಮಿಷನ್ ಕೊಡಲು ಸರ್ಕಾರದ ಮುಂದೆ ಪ್ರಸ್ತಾವ

ಸಣ್ಣ ಉದ್ಯಮಗಳು ಭವಿಷ್ಯದ ಉದ್ಯೋಗ ಎಂಜಿನ್

ದೊಡ್ಡ ಕಂಪನಿಗಳ ಬದಲಿಗೆ, ಭಾರತದ ಭವಿಷ್ಯದ ಉದ್ಯೋಗ ವೃದ್ಧಿಯು ಕೋಟ್ಯಂತರ ಸಣ್ಣ ವ್ಯಾಪಾರಗಳು ಮತ್ತು ಉದ್ಯಮಿಗಳಿಂದ (Small Businesses & Entrepreneurs) ಆಗಲಿದೆ. ಸಣ್ಣ ಸಂಸ್ಥೆಗಳ ಕಾರ್ಯವಿಧಾನಗಳು ಮತ್ತು ವಿಭಿನ್ನ ಕಾರ್ಯಗಳು ಹೆಚ್ಚು ವೈವಿಧ್ಯಮಯವಾಗಿರುವುದರಿಂದ, ಅವುಗಳು AI ನಿಂದ ಸಂಪೂರ್ಣವಾಗಿ ಬಾಧಿತಗೊಳ್ಳುವುದಿಲ್ಲ ಮತ್ತು ಹೊಸ ಉದ್ಯೋಗಗಳನ್ನು ಸೃಷ್ಟಿಸುವುದನ್ನು ಮುಂದುವರಿಸುತ್ತವೆ ಎಂದು ಹೇಳುತ್ತಾರೆ ಇನ್ಫೋಸಿಸ್ ಸಹ-ಸಂಸ್ಥಾಪಕ.

ಸ್ಟಾರ್ಟ್‌ಅಪ್‌ಗಳ ಬೆಳವಣಿಗೆ

ಭಾರತದಲ್ಲಿ ಸ್ಟಾರ್ಟ್‌ಅಪ್‌ಗಳ ಸಂಖ್ಯೆಯು ಸದ್ಯವಿರುವ ಸುಮಾರು 1.5 ಲಕ್ಷದಿಂದ ಬೆಳೆದು, 2035ರ ವೇಳೆಗೆ ಸುಮಾರು 10 ಲಕ್ಷಕ್ಕೆ ತಲುಪುವ ನಿರೀಕ್ಷೆಯಿದೆ. ಇದು ದೇಶಾದ್ಯಂತ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಆಸ್ತಿ ವರ್ಗಾವಣೆ ವೇಳೆ ಸಕ್ಸಶನ್ ಸರ್ಟಿಫಿಕೇಟ್ ಮಾಡಿಸಬೇಕಾ, ಪ್ರೊಬೇಟ್ ಮಾಡಿಸಬೇಕಾ? ಇವೆರಡರ ಪಾತ್ರವೇನು? ಇಲ್ಲಿದೆ ವಿವರ

ಡಿಜಿಟಲ್ ಮೂಲಭೂತ ಸೌಕರ್ಯ ಮತ್ತು ಸುಲಭ ವ್ಯಾಪಾರ

ಸಣ್ಣ ಉದ್ಯಮಗಳಿಗೆ ಆರ್ಥಿಕ ನೆರವು, ಮಾರುಕಟ್ಟೆ ಪ್ರವೇಶ ಮತ್ತು ಡಿಜಿಟಲ್ ಸೇವೆಗಳನ್ನು ಸುಲಭಗೊಳಿಸಲು ಆರ್ಬಿಐನ ‘ಅಕೌಂಟ್ ಅಗ್ರಿಗೇಟರ್’ ಮತ್ತು ‘ONDC’ ನಂತಹ ಡಿಜಿಟಲ್ ಪಬ್ಲಿಕ್ ಇನ್‌ಫ್ರಾಸ್ಟ್ರಕ್ಚರ್ (DPI) ಪ್ರಮುಖ ಪಾತ್ರ ವಹಿಸಲಿವೆ. ಉದ್ಯಮಿಗಳು ವ್ಯಾಪಾರ ಆರಂಭಿಸಲು ಮತ್ತು ಬೆಳೆಸಲು ಇರುವ ನಿಯಮಗಳನ್ನು ಸರಳಗೊಳಿಸುವುದು (Deregulation) ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಹಿಳಾ ಏಷ್ಯಾಕಪ್ ವೇಳಾಪಟ್ಟಿ ಪ್ರಕಟ; ಈ ದಿನದಂದು ಭಾರತ- ಪಾಕ್ ಫೈಟ್ – Kannada News | 2026 Women’s T20 Asia Cup Schedule Released: India Pak Clash Sep 5 in Dubai

2026 ರ ಮಹಿಳಾ ಟಿ20 ಏಷ್ಯಾಕಪ್ (2026 Women’s T20 Asia Cup) ವೇಳಾಪಟ್ಟಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಇಂದು ಪ್ರಕಟಿಸಿದೆ. ಅದರಂತೆ 10ನೇ ಆವೃತ್ತಿಯ ಈ ಪಂದ್ಯಾವಳಿ 2026 ರ ಆಗಸ್ಟ್ 28 ರಿಂದ ಪ್ರಾರಂಭವಾಗಲಿದೆ. ಟೂರ್ನಮೆಂಟ್‌ನ ಎಲ್ಲಾ ಪಂದ್ಯಗಳು ಯುಎಇಯ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಒಟ್ಟು 8 ತಂಡಗಳು ಟೂರ್ನಮೆಂಟ್‌ನಲ್ಲಿ ಭಾಗವಹಿಸಲಿದ್ದು, ಈ 8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎಂದಿನಂತೆ ಎ ಗುಂಪಿನಲ್ಲಿ ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾದ ಭಾರತ ಮತ್ತು ಪಾಕಿಸ್ತಾನದ ಜೊತೆಗೆ ಥೈಲ್ಯಾಂಡ್ ಮತ್ತು ಹಾಂಗ್ ಕಾಂಗ್ ತಂಡಗಳು ಸೇರಿವೆ. ಬಿ ಗುಂಪಿನಲ್ಲಿ ಹಾಲಿ ಚಾಂಪಿಯನ್ ಶ್ರೀಲಂಕಾ, ಬಾಂಗ್ಲಾದೇಶ, ಯುಎಇ ಮತ್ತು ಇಂಡೋನೇಷ್ಯಾ ತಂಡಗಳು ಸೇರಿವೆ.

ಈ ದಿನದಂದು ಭಾರತ- ಪಾಕ್ ಫೈಟ್

ಪ್ರತಿ ಗುಂಪಿನಲ್ಲಿರುವ ತಂಡಗಳು ಪರಸ್ಪರ ಒಂದೊಂದು ಪಂದ್ಯವನ್ನು ಆಡಲಿವೆ. ಇದರರ್ಥ ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳು ಗುಂಪು ಹಂತದಲ್ಲೇ ಮುಖಾಮುಖಿಯಾಗಲಿವೆ. ಈ ಎರಡೂ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯ ಸೆಪ್ಟೆಂಬರ್ 5, 2026 ರಂದು ನಡೆಯಲಿದೆ. ಈ ಪಂದ್ಯ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದ್ದು, ಟಾಸ್ ಸಂಜೆ 7.30 ಕ್ಕೆ ನಡೆಯಲಿದೆ.

ಮಹಿಳಾ ಟಿ20 ಏಷ್ಯಾಕಪ್ ವೇಳಾಪಟ್ಟಿ

  • 28 ಆಗಸ್ಟ್ 2026: ಥೈಲ್ಯಾಂಡ್ vs ಹಾಂಗ್ ಕಾಂಗ್
  • 29 ಆಗಸ್ಟ್ 2026: ಶ್ರೀಲಂಕಾ vs ಯುಎಇ
  • 30 ಆಗಸ್ಟ್ 2026: ಭಾರತ vs ಥೈಲ್ಯಾಂಡ್,
  • 31 ಆಗಸ್ಟ್ 2026: ಬಾಂಗ್ಲಾದೇಶ vs ಇಂಡೋನೇಷ್ಯಾ
  • 1 ಸೆಪ್ಟೆಂಬರ್ 2026: ಪಾಕಿಸ್ತಾನ vs ಥೈಲ್ಯಾಂಡ್
  • 2 ಸೆಪ್ಟೆಂಬರ್ 2026: ಶ್ರೀಲಂಕಾ vs ಇಂಡೋನೇಷ್ಯಾ
  • 3 ಸೆಪ್ಟೆಂಬರ್ 2026: ಭಾರತ vs ಹಾಂಗ್ ಕಾಂಗ್
  • 4 ಸೆಪ್ಟೆಂಬರ್ 2026: ಯುಎಇ vs ಇಂಡೋನೇಷ್ಯಾ
  • 5 ಸೆಪ್ಟೆಂಬರ್ 2026: ಪಾಕಿಸ್ತಾನ vs ಭಾರತ
  • 6 ಸೆಪ್ಟೆಂಬರ್ 2026: ಶ್ರೀಲಂಕಾ vs ಬಾಂಗ್ಲಾದೇಶ
  • 7 ಸೆಪ್ಟೆಂಬರ್ 2026: ಪಾಕಿಸ್ತಾನ vs ಹಾಂಗ್ ಕಾಂಗ್
  • 8 ಸೆಪ್ಟೆಂಬರ್ 2026: ಬಾಂಗ್ಲಾದೇಶ vs ಯುಎಇ

ಸೆಮಿಫೈನಲ್‌ನ ಮೊದಲ ಪಂದ್ಯ ಸೆಪ್ಟೆಂಬರ್ 10 ರಂದು ನಡೆಯಲಿದ್ದು, ಎರಡನೇ ಸೆಮಿಫೈನಲ್ ಪಂದ್ಯ ಸೆಪ್ಟೆಂಬರ್ 11 ರಂದು ನಡೆಯಲಿದೆ. ಅಂತಿಮವಾಗಿ ಫೈನಲ್ ಪಂದ್ಯ ಸೆಪ್ಟೆಂಬರ್ 13 ರಂದು ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Lizard Repellent Plants: ಕೆಮಿಕಲ್‌ ಸ್ಪ್ರೇ ಬೇಕಿಲ್ಲ, ಈ ಗಿಡಗಳ ಸಹಾಯದಿಂದ ಹಲ್ಲಿಗಳ ಕಾಟದಿಂದ ಮುಕ್ತಿ ಪಡೆಯಬಹುದು – Kannada News | Plant these plants at home to get rid of lizards

ಮಳೆಗಾಲ ಆರಂಭವಾಗಿದೆ. ಈ ಸಮಯದಲ್ಲಿ ಹಾವು, ಸೊಳ್ಳೆ, ಕೀಟಗಳ ಹಾವಳಿ ಹೆಚ್ಚಿರುವಂತೆ ಹಲ್ಲಿಗಳ (lizards) ಕಾಟವೂ ಹೆಚ್ಚಿರುತ್ತವೆ. ಹೌದು ವಿಶೇಷವಾಗಿ ಬೇಸಿಗೆ ಮತ್ತು ಮಳೆಗಾಲದ ಸಮಯದಲ್ಲಿ ಮನೆಯ ಗೋಡೆಯ ಅಲ್ಲಲ್ಲಿ ಹಲ್ಲಿಗಳು ಕಾಣಿಸಿಕೊಳ್ಳುತ್ತವೆ. ಕೆಲವರು ಈ ಹಲ್ಲಿಗಳನ್ನು ಕಂಡರೆ ಭಯ ಪಟ್ಟರೆ, ಇನ್ನೂ ಕೆಲವರು ಈ ಜೀವಿ ಆಹಾರಕ್ಕೆ ಬಿದ್ದರೆ ಏನು ಮಾಡೋದು ಎಂಬ ಭಯದಲ್ಲಿರುತ್ತಾರೆ. ಅದಕ್ಕಾಗಿ ಕೆಮಿಕಲ್‌ ಉತ್ಪನ್ನಗಳನ್ನು ಬಳಸಿ ಹಲ್ಲಿಗಳನ್ನು ಸಾಯಿಸುತ್ತಾರೆ. ಈ ಕೆಮಿಕಲ್‌ ಉತ್ಪನ್ನಗಳನ್ನು ಬಳಸುವ ಮತ್ತು ಹಲ್ಲಿಗಳನ್ನು ಸಾಯಿಸುವ ಬದಲು ಯಾವುದೇ ಹಾನಿಯಾಗದಂತೆ ಈ ಕೆಲವೊಂದು ಗಿಡಗಳ ಸಹಾಯದಿಂದ ಹಲ್ಲಿಗಳ ಕಾಟದಿಂದ ಸುಲಭವಾಗಿ ಮುಕ್ತಿ ಪಡೆಯಬಹುದು. ಹಲ್ಲಿಗಳು ಮನೆಯೊಳಗೆ ಬರದಂತೆ ತಡೆಯಲು ಸಹಕಾರಿಯಾದ ಆ ಗಿಡಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಲ್ಲಿಗಳ ಕಾಟದಿಂದ ಮುಕ್ತಿ ಪಡೆಯಲು ಸಹಕಾರಿ ಈ ಗಿಡಗಳು:

ಲ್ಯಾವೆಂಡರ್:

ಲ್ಯಾವೆಂಡರ್ ಸಸ್ಯವು ಮನೆಯ ಅಂದವನ್ನು ಹೆಚ್ಚಿಸುವುದರ ಜೊತೆಗೆ ಹಲ್ಲಿಗಳನ್ನು ಓಡಿಸಲು ಸಹ ಸಹಕಾರಿಯಾಗಿದೆ. ಇದರ ಬಲವಾದ ವಾಸನೆಯನ್ನು ಕೀಟಗಳು ಮತ್ತು ಹಲ್ಲಿಗಳು ಇಷ್ಟಪಡುವುದಿಲ್ಲ. ಆದ್ದರಿಂದ ಈ ಗಿಡವನ್ನು ನೀವು ಮನೆಯಲ್ಲಿ ನೆಡಬಹುದು.

ಚೆಂಡು ಹೂವಿನ ಗಿಡ:

ಚೆಂಡು ಹೂವಿನ ಗಿಡವನ್ನು ನೆಡುವುದರಿಂದ ಮನೆಯ ಸೌಂದರ್ಯ ಹೆಚ್ಚುವುದಲ್ಲದೆ ಸೊಳ್ಳೆ, ಕೀಟ, ಹಾವು, ಹಲ್ಲಿ ಮನೆಯೊಳಗೆ ಪ್ರವೇಶಿಸುವುದನ್ನು ತಡೆಯುತ್ತದೆ. ಹೌದು ಅವುಗಳ ಬಲವಾದ ಪರಿಮಳವು ಹಲ್ಲಿಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ಆದ್ದರಿಂದ ನೀವು ಈ ಗಿಡಗಳನ್ನು ಮುಖ್ಯ ಬಾಗಿಲು ಅಥವಾ ಕಿಟಕಿಗಳ ಬಳಿ ಪಾಟ್‌ನಲ್ಲಿ ಇಡಬಹುದು.

ರೋಸ್ಮರಿ ಗಿಡ:

ರೋಸ್ಮರಿ ಎಲೆಗಳಿಂದ ಹೊರಹೊಮ್ಮುವ ಬಲವಾದ ಸುವಾಸನೆಯನ್ನು ಕೀಟ, ಸೊಳ್ಳೆ, ಹಲ್ಲಿಗಳು ಇಷ್ಟಪಡುವುದಿಲ್ಲ. ಹಾಗಾಗಿ ಈ ಗಿಡಗಳನ್ನು ಮನೆಯಲ್ಲಿ ಇಡುವ ಮೂಲಕ ಯಾವುದೇ ರಾಸಾಯನಿಕ ಉತ್ಪನ್ನಗಳನ್ನು ಬಳಸದೆ ಹಲ್ಲಿಗಳನ್ನು ಮನೆಯಿಂದ ದೂರವಿಡಬಹುದು.  ಅಲ್ಲದೆ ಈ ಸಸ್ಯವು ಮನೆಯ ಸೌಂದರ್ಯವನ್ನು ಹೆಚ್ಚಿಸಲು ಸಹ ಸಹಕಾರಿ.

ಇದನ್ನೂ ಓದಿ: ಸಕಾರಾತ್ಮಕತೆಯನ್ನು ಹರಡುವ ಗಿಡಗಳನ್ನು ಪ್ರತಿ ಮನೆಯಲ್ಲೂ ನೆಡಬೇಕು

ಪುದೀನ ಮತ್ತು ತುಳಸಿ:

ಪುದೀನದ ಪರಿಮಳ ಮತ್ತು ತುಳಸಿಯ ನೈಸರ್ಗಿಕ ಸುವಾಸನೆಯು ಮನೆಯೊಳಗೆ ಹಲ್ಲಿ ಮತ್ತು ಅನೇಕ ಬಗೆಯ ಕೀಟಗಳು ಮನೆಯೊಳಗೆ ಪ್ರವೇಶಿಸದಂತೆ ತಡೆಯುತ್ತದೆ. ಅಲ್ಲದೆ ನೀವು ಲೆಮನ್‌ ಗ್ರಾಸ್‌ ಗಿಡವನ್ನು ಸಹ ನೆಡಬಹುದು. ಇವೆಲ್ಲವೂ ಬಲವಾದ ವಾಸನೆಯನ್ನು ಹೊಂದಿದ್ದು, ಇವು ಹಲ್ಲಿ, ಕೀಟಗಳು ಮನೆಯೊಳಗೆ ಪ್ರವೇಶಿಸುವುದನ್ನು ತಡೆಯುತ್ತವೆ.

ಸ್ವಚ್ಛತೆಯ ಬಗ್ಗೆಯೂ ಗಮನ ಹರಿಸಿ:

ಮೇಲಿನ ಕೆಲವೊಂದು ಗಿಡಗಳನ್ನು ನೆಡುವುದರ ಜೊತೆಗೆ ಹಲ್ಲಿಗಳ ಕಾಟದಿಂದ ಮುಕ್ತಿ ಪಡೆಯಲು ಮನೆಯ ಸ್ವಚ್ಛತೆಯ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕು. ಮನೆಯ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಿ. ಕಸ ಸಂಗ್ರಹವಾಗಲು ಬಿಡಬೇಡಿ, ಆಹಾರ ಪದಾರ್ಥಗಳನ್ನು ತೆರೆದಿಡಬೇಡಿ ಮತ್ತು ಗೋಡೆಗಳಲ್ಲಿನ ಬಿರುಕುಗಳನ್ನು ಮುಚ್ಚಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version